ದ್ವಿತೀಯ ಪಿಯುಸಿ ಕನ್ನಡ ಹಿಂದಿನ ಪ್ರಶ್ನೆಪತ್ರಿಕೆ 2016 | 2nd Puc Kannada Previous Question Paper 2016

ದ್ವಿತೀಯ ಪಿಯುಸಿ ಕನ್ನಡ ಹಿಂದಿನ ಪ್ರಶ್ನೆಪತ್ರಿಕೆ 2016, 2nd Puc Kannada Previous Question Paper 2016 2nd Puc Question Papers Karnataka, 2nd Puc Previous Question Paper 2016 pdf Kannada, 2nd Puc Supplementary Exam Papers, 2nd Puc Previous Year Question Papers, 2nd Puc Model Question Paper pdf, 2nd Puc All Subject Question Paper ದ್ವಿತೀಯ ಪಿಯುಸಿ ಕನ್ನಡ ಮಾದರಿ ಪ್ರಶ್ನೆ ಪತ್ರಿಕೆಗಳು 2nd Puc ಮಾದರಿ ಪ್ರಶ್ನೆ ಪತ್ರಿಕೆಗಳು model question paper 2016 2nd puc with answers

2nd Puc Kannada Previous Question Paper 2016

ಮಾರ್ಚ್‌ 2016

ಅವಧಿ: 3-15 ಗಂಟೆ ಗರಿಷ್ಠ ಅಂಕಗಳು: 100

ಅ – ವಿಭಾಗ

I. ಈ ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ಒಂದೊಂದು ಪೂರ್ಣ ವಾಕ್ಯದಲ್ಲಿ ಉತ್ತರಿಸಿ:

10 x 1 = 10

೧. ಪರಿಮಳವನ್ನು ಯಾವುದರಿಂದ ಅರಿಯಬಹುದು?

೨. ದುರ್ಗಂಧ ಬಿಡದಿರುವುದು ಯಾವುದು?

೩. ಮುದುಕಿಯು ಯಾವ ದೇವರಿಗೆ ಹರಕೆ ಹೊತ್ತಳು?

೪. ಕವಯಿತ್ರಿ ಯಾವುದಕ್ಕೆ ಧಿಕ್ಕಾರವಿರಲಿ ಎನ್ನುತ್ತಾರೆ?

೫. ಕೆಂಪು ಪಟ್ಟಿಗೆ ಸೇರಿದ ಪ್ರಾಣಿ ಯಾವುದು?

೬. ಧಣಿಗಳ ದಾಂಪತ್ಯಕ್ಕೆ ಯಾವುದು ಮೂಕ ಸಾಕ್ಷಿಯಾಗಿತ್ತು?

೭. ‘ಕನ್ನಡವು ಕಸ್ತೂರಿಯಲ್ಲವೆ’ ಎಂದವರಾರು?

೮. ಕೃಷ್ಣೇಗೌಡರ ಆನೆ ಮೊದಲು ಯಾವ ಮಠದಲ್ಲಿತ್ತು?

೯. ನಿರೂಪಕರ ಇಕಾಲಜಿಸ್ಟ್ ಗೆಳೆಯ ಯಾರು?

೧೦. ನಾಗರಾಜ ಕೋವಿ ಹಿಡಿದು ಎಲ್ಲಿ ಕುಳಿತಿದ್ದ?

ಆ – ವಿಭಾಗ

II. ಅ) ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:

4 x 2 = 8

೧೧. ದ್ರೌಪದಿ ತಾನು ಘೋರತರ ವಿಷ ಕುಡಿಯುವುದಾಗಿ ಏಕೆ ಹೇಳುತ್ತಾಳೆ?

೧೨. ಯಾರಿಂದ ಯಾವುದನ್ನು ಹೇಗೆ ಕಲಿಯಬೇಕೆಂದು ಸೋಮನಾಥನು ಹೇಳಿದ್ದಾನೆ?

೧೩. ಹಿತ್ತಾಳೆಗಿಂತ ಬಲುಹೀನ ಯಾವುದು?

೧೪. ಕ್ರಿಸ್ಮಸ್ ಮನೆಗೆ ಏನನ್ನು ಹೊತ್ತು ತಂದಿದೆ?

೧೫. ಎಣ್ಣೆಯಲ್ಲಿ ನೆನೆದು ಉರಿವ ಬತ್ತಿಯನ್ನು ಯಾವ ಯಾವುದಕ್ಕೆ ಹೋಲಿಸಲಾಗಿದೆ?

ಆ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:

3 x 2 = 6

೧೬. ಸಿದ್ಲಿಂಗಿ ಏಕೆ ರಾದ್ಧಾಂತ ಮಾಡಿದಳು?

೧೭. ಮಾರ್ಷನ್ನು ಕಂಡು ಆದಿವಾಸಿಗಳು ಹೇಗೆ ಪ್ರತಿಕ್ರಿಯಿಸಿದರು?

೧೮. ಕಮಲ ಮೇಡಂ ವೈದ್ಯರ ಯಾವ ಸಲಹೆಗಳನ್ನು ರೂಢಿಸಿಕೊಂಡರು?

೧೯. ಮನೋರಮೆ ಮುದ್ದಣನನ್ನು ಹೇಗೆ ಉಪಚರಿಸಿದಳು?

ಇ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:

3 x 2 = 6

೨೦. ಸೊರಗಿದ್ದ ಆನೆಯನ್ನು ಕೃಷ್ಣೇಗೌಡ ಹೇಗೆ ಸಾಕಿದ?

೨೧. ಫಾರೆಸ್ಟ್ ಡಿಪಾರ್ಟ್‌ ಮೆಂಟಿನವರ ನಂಬರ್ ಒನ್ ಎನಿಮಿಗಳು ಯಾರು ಯಾರು?

೨೨. ನಾಯಿ ಕಚ್ಚಿದ್ದೆಲ್ಲಿ ಎಂದಾಗ ಜಬ್ಬಾರ್ ಇರುಸುಮುರುಸಿನಿಂದ ಏನು ಹೇಳಿದ?

೨೩. ಆನೆಯನ್ನು ಹದ್ದುಬಸ್ತಿನಲ್ಲಿಡುವುದರ ಬಗ್ಗೆ ವೇಲಾಯುಧನ ಅಪ್ಪ ಏನು ತಿಳಿಸಿದ್ದ?

ಇ – ವಿಭಾಗ

III. ಅ) ಯಾವುದಾದರೂ ಎರಡು ವಾಕ್ಯಗಳನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 2 x 3 = 6

೨೪. ರಘುತನೂಜನಾಯುಃ ಪ್ರಾಣಂಬರೆಗಂ ಬಾರದಿರು.

೨೫. ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂತೆ.

೨೬. ಮುಳುಗಿರಲಿ ಮುಪ್ಪು ಚಿಂತನದಿ.

ಆ) ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 1 x 3 = 3

೨೭. ಆಪರೇಷನ್ ಆಗಬೇಕು, ಪರವಾಗಿಲ್ಲವಾ?

೨೮. ಇದೇ ಲೋಟವಲ್ಲವೇ…. ತನ್ನ ಬೆವರಿನ ಬೆಲೆ ಕಳೆದದ್ದು.

ಇ) ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 1 x 3 = 3

೨೯. ಆನೆಗೂ ಮಾನ ಮರ್ಯಾದೆ ಇರುತ್ತೆ ತಿಳುಕೊ.

೩೦. ಈ ಕಂಬದೊಳ್ಗೆ ಏನೋ ಸೇರ್‌ಕೊಂಡಿದೆ.

ಈ – ವಿಭಾಗ


IV. ಅ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿಸಿ̤

3 x 4 = 12

೩೧. ರಾವಣನು ಬಹುರೂಪಿಣಿ ವಿದ್ಯೆಯನ್ನು ಒಲಿಸಿಕೊಂಡ ಸಂದರ್ಭವನ್ನು ವಿವರವಾಗಿ ಬರೆಯಿರಿ.

೩೨. ವೀರ, ಮಂತ್ರಿ, ರಾಜ ಮತ್ತು ಯೋಗಿಗಳಿಗೆ ಇರಬೇಕಾದ ಅರ್ಹತೆಗಳೇನು?

೩೩. ‘ಮುಂಬೈ ಜಾತಕ’ದಲ್ಲಿ ಮಕ್ಕಳ ಬಾಲ್ಯದ ಚಿತ್ರಣ ಹೇಗೆ ನಿರೂಪಿತವಾಗಿದೆ?

೩೪. ‘ಒಂದು ಹೂ ಹೆಚ್ಚಿಗೆ ಇಡುತೀನಿ’ ಕವಿತೆಯಲ್ಲಿ ವೃದ್ಧರ ತವಕ – ತಲ್ಲಣಗಳನ್ನು ಕವಯತ್ರಿ ಹೇಗೆ ಚಿತ್ರಿಸಿದ್ದಾರೆ?

ಆ) ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ:

2 x 4 = 8

೩೫. ಪೋಷಕರು ಖಾಸಗಿ ಶಾಲೆಗಳ ಕಡೆ ಹೊರಳಲು ಲೇಖಕರು ಯಾವ ಕಾರಣಗಳನ್ನು ಉದಾಹರಿಸುತ್ತಾರೆ?

೩೬. ರಾಷ್ಟ್ರಪತಿಯಾಗಿ ಆಯ್ಕೆಯಾದಾಗ ಚೆನ್ನೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಲಾಂ ಹೇಳಿದ್ದೇನು? ವಿವರಿಸಿ

೩೭. ಹಳ್ಳಿಯ ಚಹಾದಂಗಡಿಯನ್ನು ಪರಿಚಯಿಸಿ.

ಇ) ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ:

2 x 4 = 8

೩೮. ದುರ್ಗಪ್ಪ ನಿರೂಪಕರ ಬಳಿಗೆ ಬಂದ ಸಂದರ್ಭವನ್ನು ವಿವರಿಸಿ,

೩೯. ಕಾಡಾನೆಗಳ ಹಾವಳಿ ನಿರೂಪಕರ ಅನುಭವಕ್ಕೆ ಬಂದುದು ಹೇಗೆ?

೪೦. ಪೋಸ್ಟ್ಮನ್ ಜಬ್ಬಾರನ ಬವಣೆಗಳನ್ನು ನಿರೂಪಕರು ಹೇಗೆ ವಿವರಿಸಿದ್ದಾರೆ?

ಉ – ವಿಭಾಗ

V. ಯಾವುದಾದರೂ ಒಂದು ಪದ್ಯದ ಭಾವಾರ್ಥವನ್ನು ಬರೆಯಿರಿ: 1 x 5 = 5

೪೧. ಒಲೆಹತ್ತಿ ಉರಿದಡೆ ನಿಲಬಹುದಲ್ಲದೆ

ಧರೆಹತ್ತಿ ಉರಿದಡೆ ನಿಲಲುಬಾರದು.

ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ,

ನಾರಿ ತನ್ನ ಮನೆಯಲ್ಲಿ ಕಳುವಡೆ,

ತಾಯ ಮೊಲೆವಾಲು ನಂಜಾಗಿ ಕೊಲುವಡೆ,

ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ!

೪೨. ಇನ್ನು ಹುಟ್ಟಿದೆಯಿರಲಿ ನಾರಿಯ

ರೆನ್ನವೊಲು ಭಂಗಿತರು ಭೂವನದೊ

ಳಿನ್ನು ಜನಿಸಲುಬೇಡ ಗಂಡರು ಭೀಮಸನ್ನಿಭರು

ಎನ್ನವೋಲು ಪಾಂಡವರವೊಲು ಸಂ

ಪನ್ನ ದುಃಖಗಳಾರು ನವೆದರು

ಮುನ್ನಿನವರೊಳಗೆಂದು ಬ್ರೌಪದಿ ಹಿರಿದು ಹಲುಬಿದಳು.

VI. ಅ) ಕೆಳಗಿನ ಪ್ರಶ್ನೆಗಳಲ್ಲಿ ಯಾವುದಾದರೂ ಅರಕ್ಕೆ ಸೂಚನೆಗೆ ಅನುಗುಣವಾಗಿ ಉತ್ತರಿಸಿರಿ: 6 x 2 = 12

೪೩. ಈ ಪದಗಳಿಗೆ ಅರ್ಥವನ್ನು ಬರೆಯಿರಿ: ತಮ್ಮ ಪಂಕ.

೪೪. ಈ ಪದಗಳಿಗೆ ನಾನಾರ್ಥಗಳನ್ನು ಬರೆಯಿರಿ: ಕಳೆ, ದೊರೆ.

೪೫. ಈ ಪದಗಳಿಗೆ ತದ್ಭವ ರೂಪ ಬರೆಯಿರಿ: ವೀರ, ಕಸ್ತೂರಿ.

೪೬. ಈ ಪದಗಳಲ್ಲಿನ ಗುಣವಾಚಕಗಳನ್ನು ಬರೆಯಿರಿ: ಕಲಿಭೀಮ, ಹಿತವಚನ.

೪೭. ಈ ಕೆಳಗಿನ ಕ್ರಿಯಾಪದಗಳ ಧಾತು’ ಗುರುತಿಸಿ: ಓದುವನು, ಹೋದರು.

೪೮. ಇವುಗಳನ್ನು ನಿಷೇಧ ರೂಪದಲ್ಲಿ ಬರೆಯಿರಿ: ಹಾಡುವನು, ಬರುವುದು.

೪೯. ಇವುಗಳ ವಿಭಕ್ತಿಯ ಹೆಸರನ್ನು ಬರೆಯಿರಿ: ಗುರುವಿಗೆ, ಲಾವಾರಸದಲ್ಲಿ,

ಆ) ಯಾವುದಾದರೂ ಒಂದನ್ನು ಕುರಿತು ಪ್ರಬಂಧವನ್ನು ಬರೆಯಿರಿ: 1 x 5 = 5

೫೦. ಮೂಢನಂಬಿಕೆಗಳು.

೫೧. ರಕ್ತದಾನ ಮತ್ತು ನೇತ್ರದಾನಗಳ ಮಹತ್ವ.

ಇ) ಯಾವುದಾದರೂ ಒಂದನ್ನು ಕುರಿತು ಪತ್ರ ಬರೆಯಿರಿ: 1 × 4 = 4

೫೨. ಪರೀಕ್ಷಾ ಸಿದ್ಧತೆ ಕುರಿತು ನಿಮ್ಮ ಗೆಳೆಯ/ಗೆಳತಿಗೆ ಪತ್ರ ಬರೆಯಿರಿ.

೫೩. ಅಂಕಪಟ್ಟಿ ಮತ್ತು ವರ್ಗಾವಣೆ ಪತ್ರ ನೀಡುವಂತೆ ಕೋರಿ ಪ್ರಾಂಶುಪಾಲರಿಗೆ ಪತ್ರ ಬರೆಯಿರಿ.

ಈ) ಈ ಕೆಳಗಿನ ಗಾದೆಗಳಲ್ಲಿ ಒಂದನ್ನು ವಿಸ್ತರಿಸಿ ಬರೆಯಿರಿ: 1 x 4 = 4

೫೪. ದೇಶ ಸುತ್ತಬೇಕು, ಕೋಶ ಓದಬೇಕು.

೫೫. ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ.

***************************************

ಜುಲೈ 2016

ಅವಧಿ: 3 – 15 ಗಂಟೆ ಗರಿಷ್ಠ ಅಂಕಗಳು: 100

I. ಈ ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ಒಂದೊಂದು ಪೂರ್ಣ ವಾಕ್ಯದಲ್ಲಿ ಉತ್ತರಿಸಿ:

10 x 1 = 10

೧. ಉರಿಲಿಂಗಪೆದ್ದಿಯ ವಚನಗಳ ಅಂಕಿತ ಯಾವುದು?

೨. ಜಾಲಿಯ ಮರದಂತಿರುವವರು ಯಾರು?

೩. ಕವಿಯ ಪ್ರಕಾರ ತಿಂಗಳಿಗೆ ಒಂದು ಸಲವೂ ದೀಪ ಹಚ್ಚದ ಸ್ಥಳ ಯಾವುದು?

೪. ಮುದುಕ ಇರುವುದು ಎಲ್ಲಿ?

೫. ಧಣಿಗಳ ಮನೆಯ ಪಕ್ಕದಲ್ಲಿ ಹರಿಯುತ್ತಿದ್ದ ಹೊಳೆಯ ಹೆಸರೇನು?

೬. ‘ವಿಂಗ್ಸ್ ಆಫ್ ಫೈರ್’ ಎನ್ನುವ ಕೃತಿ ಯಾರ ಆತ್ಮಚರಿತ್ರೆಯಾಗಿದೆ?

೭. ಲೇಖಕರು ಹೇಳುವ ಹಳ್ಳಿಯ ಹೊಟೇಲಿನ ಹೆಸರು ಬರೆಯಿರಿ.

೮. ನಿರೂಪಕರಿಗೆ ಯಾವ ಕೆಲಸ ಖಾಯಂ ಆಗಿತ್ತು?

೯. ನಿರೂಪಕರು ಯಾವ ವಿಷಯ ಪ್ರಸ್ತಾಪಿಸಲು ಮೀಟಿಂಗಿಗೆ ಹೋಗಿದ್ದರು?

೧೦. ಆನೆಶಾಸ್ತ್ರದವನು ಏನೆಂದು ಭವಿಷ್ಯ ನುಡಿದಿದ್ದನು?

ಆ – ವಿಭಾಗ

II. ಅ) ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:

4 x 2 = 8

೧೧. ಪುರಂದರದಾಸರ ಅಭಿಮತದಂತೆ ಯಾರಿಗೆ ತತ್ತ್ವಜ್ಞಾನ ಹೇಳಿ ಪ್ರಯೋಜನವಿಲ್ಲ?

೧೨. ಹಡೆದ ತಂದೆ-ತಾಯಿಯರ ಮಹತ್ತ್ವ ತಿಳಿಸಿರಿ.

೧೩. ಕ್ರಿಸ್ಮಸ್ ಹಬ್ಬವು ಮನೆಗೆ ಏನನ್ನು ಹೊತ್ತು ತಂದಿದೆ?

೧೪. ಮುದುಕಿ ಯಾರಲ್ಲಿ ಏನೆಂದು ಪ್ರಾರ್ಥಿಸುವಳು?

೧೫. ಉರಿವ ಬತ್ತಿಯನ್ನು ಕವಿ ಯಾವ ಯಾವುದಕ್ಕೆ ಹೋಲಿಸಿದ್ದಾರೆ?

ಆ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:

3 x 2 = 6

೧೬. ಬ್ರಿಟಿಷರು ಬರುವ ಮೊದಲು ವಾಲ್ ಪರೈ ಹೇಗಿತ್ತು?

೧೭. ಮೂಲೆಮನೆ ಮುದ್ದೇಗೌಡರು ಪಕ್ಷದ ವಿಚಾರವಾಗಿ ಹೊಂದಿದ್ದ ನಿಲುವು ಯಾವುದು?

೧೮. ಧಣಿಯ ಬಡಿತದಿಂದ ಗುಡ್ಡ ಬಂಧಮುಕ್ತನಾದುದು ಹೇಗೆ?

೧೯. ವೀರೇಂದ್ರ ಸಿಂಪಿಯವರ ಪ್ರಕಾರ ಈ ದೇಶದಲ್ಲಿ ಭಾವೈಕ್ಯತೆ ಎಲ್ಲಿದೆ? ಅದು ಹೇಗೆ?

ಇ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:

3 x 2 = 6

೨೦. ಮಠದವರಿಗೆ ಆನೆಗಿಂತ ವೇಲಾಯುಧನನ್ನು ಸಾಕಲು ತ್ರಾಸಾದುದೇಕೆ?

೨೧. ಕಾಡಾನೆಗಳ ಹಾವಳಿಗೆ ಪ್ರಕಾಶ್ ನೀಡಿದ ಕಾರಣಗಳೇನು?

೨೨. ಡ್ರೈವರ್‌ನ ತಲೆ ಜಜ್ಜಿ ಹೋದದ್ದು ಹೇಗೆ? ಅದಕ್ಕೆ ಆನೆ ಕಾರಣವೇ?

೨೩. ಆನೆಯನ್ನು ಹದ್ದುಬಸ್ತಿನಲ್ಲಿಡುವುದರ ಬಗ್ಗೆ ವೇಲಾಯುಧನ ಅಪ್ಪ ಏನು ತಿಳಿಸಿದ್ದ?

ಇ – ವಿಭಾಗ

III. ಅ) ಯಾವುದಾದರೂ ಎರಡು ವಾಕ್ಯಗಳನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 2 x 3 = 6

೨೪. ಧರೆ ಹತ್ತಿ ಉರಿದಡೆ ನಿಲಲುಬಾರದು.

೨೫. ಇನ್ನು ಹುಟ್ಟಿದೆಯಿರಲಿ ನಾರಿಯರೆನ್ನವೊಲು ಭಂಗಿತರು.

೨೬. ಮರಣ ಬಂದೀತು ಕ್ಷಣವು ಉರುಳಿ.

ಆ) ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 1 x 3 = 3

೨೭. ಮಿ. ಪ್ರೆಸಿಡೆಂಟ್ ನಿಮ್ಮ ಯಶಸ್ಸಿನ ಗುಟ್ಟೇನು?

೨೮. ಪದ್ಯ ವಧ್ಯಂ: ಗದ್ಯಂ ಹೃದ್ಯಂ.

ಇ) ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 1 x 3 = 3

೨೯. ಹೊರಗಡೆಯಿಂದ ಇಲ್ಲಿಗೆ ಎಕ್ಸ್ ಪೋರ್ಟ್ ಆದವು.

೩೦. ಆನೆ ಬೇಲಿ ದಾಟಿ ಹೋಯ್ತು ಸಾರ್.

ಈ – ವಿಭಾಗ

IV. ಅ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ:

3 x 4 = 12̳

೩೧. ರಾವಣನ ಮನಃಪರಿವರ್ತನೆಯ ಸಂದರ್ಭವನ್ನು ನಾಗಚಂದ್ರ ಕವಿ ಹೇಗೆ ಚಿತ್ರಿಸಿದ್ದಾನೆ? ವಿವರಿಸಿರಿ.

೩೨. ತನಗೊದಗಿದ ಸಂಕಟವನ್ನು ಹೇಳಿಕೊಳ್ಳುವ ದ್ರೌಪದಿಯ ಸ್ವಗತದ ನುಡಿಗಳಾವುವು?

೩೩. ಪುಲಿಗೆರೆ ಸೋಮನಾಥ ಕವಿಯ ಪ್ರಕಾರ ಜ್ಞಾನವನ್ನು ಹೊಂದುವ ಮಾರ್ಗ ಯಾವುದು? ವಿವರಿಸಿರಿ.

೩೪. ಮಗು ಕಲಿತದ್ದನ್ನು ಮತ್ತು ವಿದ್ಯಾಭ್ಯಾಸ ಮಾಡುವ ವಿವರಗಳನ್ನು ವಿಶ್ಲೇಷಿಸಿರಿ.

ಆ) ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ: 2 x 4 = 8̳

೩೫. ಬಸಲಿಂಗ ಕೊನೆಯಲ್ಲಿ ತೆಗೆದುಕೊಂಡ ನಿರ್ಧಾರ ಯಾವುದು? ಅದಕ್ಕೆ ಕಾರಣಗಳೇನು?

೩೬. ಅಂತಾರಾಷ್ಟ್ರೀಯ ವಿದ್ಯಮಾನಗಳಿಂದಾಗಿ ವಾಲ್‌ ಪರೈಗೆ ಒದಗಿದ ಸಮಸ್ಯೆಗಳೇನು?

೩೭. ಪೋಷಕರು ಖಾಸಗಿ ಶಾಲೆಗಳ ಕಡೆಗೆ ಒಲವು ತೋರಲು ́ಹಾಮಾನಾʼ ರವರು ಕೊಡುವ ಕಾರಣಗಳನ್ನು ವಿವರಿಸಿರಿ.

ಇ) ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ: 2 x 4 = 8

೩೮. ಅರಣ್ಯ ಇಲಾಖೆಯ ಶತ್ರುಗಳ ಕಾರ್ಯಭಾರವನ್ನು ನಾಗರಾಜ ವಿವರಿಸಿದ್ದು ಹೇಗೆ?

೩೯. ಡ್ರೈವರ್ ಅಬ್ಬಾಸ್ ಮತ್ತು ಕ್ಲೀನರ್ ಕೃಷ್ಣರ ಸಾವಿನಲ್ಲಿ ಆನೆ ಅವರಾಧಿಯ? ಚರ್ಚಿಸಿರಿ.

೪೦. ತನ್ನ ಆನೆಯ ಬಗೆಗೆ ಕೃಷ್ಣೇಗೌಡರಲ್ಲಿ ಬೇಸರ ಮೂಡಲು ಕಾರಣಗಳೇನು ?

ಉ – ವಿಭಾಗ

V. ಯಾವುದಾದರೂ ಒಂದು ಪದ್ಯದ ಭಾವಾರ್ಥವನ್ನು ಬರೆಯಿರಿ: 1 x 5 = 5

೪೧. ಸಮಧಿಕರಾರ್ ಜಗತ್ತ್ರಯದೊಳನ್ನೆನಗೆನ್ನೊಳದಿರ್ಚುವನ್ನರಾರ್

ಸಮರದೊಳೆಂದು ತನ್ನ ಭುಜದಂಡಮನೀಕ್ಷಿಸಿ ಜಾನಕೀಮುಖಾ

ಬ್ಜಮನವಲೋಕಿಸಲ್ ಕರಮೆ ಕಾತರನಾಗಿ ವಿಯಚ್ಚಿರಾಧಿಪಂ

ಪ್ರಮದವನಕ್ಕೆ ಬಂದನರಲಂಬುಗಳಿಲ್ಲದ ಕಾಮನೆಂಬಿನಂ

೪೨. ದನಗಳಿಗೆ ಮೇವಿಲ್ಲ:

ಜನಗಳಿಗೆ ನೀರಿಲ್ಲ

ಗಂಜಿಗೂ ಗತಿಯಿಲ್ಲ

ನನ್ನವರು

ಸತ್ತ ದನಗಳ

ಕಿತ್ತು ತಿನ್ನುವುದನ್ನು

ಕಣ್ಣಾರೆ ಕಾಣುತ್ತ

ಕತಕತನೆ ಕುದಿವ

ಅಗ್ನಿಪರ್ವತವಾಗಿದ್ದೇನೆ.

ಭಾಷಾಭ್ಯಾಸ

VI. ಅ) ಕೆಳಗಿನ ಪ್ರಶ್ನೆಗಳಲ್ಲಿ ಯಾವುದಾದರೂ ಆರಕ್ಕೆ ಸೂಚನೆಗೆ ಅನುಗುಣವಾಗಿ ಉತ್ತರಿಸಿರಿ: 6 x 2 = 12

೪೩. ಈ ಪದಗಳಿಗೆ ಸಮಾನಾರ್ಥಗಳನ್ನು ಬರೆಯಿರಿ: ಕಣ್ಣು, ಸುತ.

೪೪. ಈ ಪದಗಳಿಗೆ ನಾನಾರ್ಥಗಳನ್ನು ಬರೆಯಿರಿ: ಕರ, ಮುನಿ.

೪೫. ಈ ಪದಗಳಿಗೆ ತದ್ಭವ ರೂಪ ಬರೆಯಿರಿ: ಆಕಾಶ, ಸಂಸ್ಕೃತ,

೪೬. ಈ ಪದಗಳಲ್ಲಿನ ಗುಣವಾಚಕಗಳನ್ನು ಗುರುತಿಸಿ ಬೆಳ್ಳಿಲೋಟ, ಎಳೆಮಗು

೪೭. ಈ ಕೆಳಗಿನ ಕ್ರಿಯಾಪದಗಳ ʼಧಾತುʼ ಗುರುತಿಸಿ: ಕೇಳುವರು, ತಿಂದನು.

೪೮. ಈ ಕೆಳಗಿನ ಕ್ರಿಯಾಪದಗಳ ಕಾಲವನ್ನು ಸೂಚಿಸಿರಿ ಹೋದರು. ಕುಣಿಯುತ್ತಿತ್ತು

೪೯. ಇವುಗಳ ನಿಷೇಧ ರೂಪ ಬರೆಯರಿ: ಬಂದನು, ನೋಡುವನು.

ಅ) ಯಾವುದಾದರೂ ಒಂದನ್ನು ಕುರಿತು ಪ್ರಬಂಧವನ್ನು ಬರೆಯಿರಿ: 1 x 5 = 5

೫೦. ತ್ಯಾಜ್ಯ ವಸ್ತುಗಳ ನಿರ್ವಹಣೆ

೫೧. ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ.

ಇ) ಯಾವುದಾದರೂ ಒಂದನ್ನು ಕುರಿತು ಪತ್ರ ಬರೆಯಿರಿ: 1 × 4 = 4

೫೨. ಗ್ರಂಥಾಲಯವನ್ನು ಆರಂಭಿಸಲು ಕೋರಿ ಮುಖ್ಯ ಗ್ರಂಥಪಾಲಕರಿಗೆ ಪತ್ರ ಬರೆಯಿರಿ.

೫೩. ನಿಮ್ಮ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಮತ್ತು ಕ್ರೀಡಾಕೂಟದ ಚಟುವಟಿಕೆಗಳನ್ನು ವಿವರಿಸಿ ನಿಮ್ಮ ಗೆಳೆಯ/ಗೆಳತಿಗೆ ಪತ್ರ ಬರೆಯಿರಿ.

ಈ) ಈ ಕೆಳಗಿನ ಗಾದೆಗಳಲ್ಲಿ ಒಂದನ್ನು ವಿಸ್ತರಿಸಿ ಬರೆಯಿರಿ: 1 × 4 = 4

೫೪. ಕೂತು ಉಂಡರೆ ಕುಡಿಕೆ ಹೊನ್ನು ಸಾಲದು.

೫೫. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು.

*********************************

Leave a Comment