ದ್ವಿತೀಯ ಪಿ.ಯು.ಸಿ ರಾಜ್ಯಶಾಸ್ತ್ರ ಅಧ್ಯಾಯ-3 ಭಾರತದಲ್ಲಿ ಆಡಳಿತ ಯಂತ್ರ ನೋಟ್ಸ್|2nd Puc Political Science Chapter 3 Bharathadalli Adalitha Yantra Political Science Notes

ದ್ವಿತೀಯ ಪಿ.ಯು.ಸಿ ರಾಜ್ಯಶಾಸ್ತ್ರ ಅಧ್ಯಾಯ-3 ಭಾರತದಲ್ಲಿ ಆಡಳಿತ ಯಂತ್ರ ನೋಟ್ಸ್ ಪ್ರಶ್ನೋತ್ತರಗಳು, 2nd Puc Political Science Chapter 3 Bharathadalli Adalitha Yantra Political Science Notes Question Answer Guide Extract Mcq Pdf Download in Kannada Medium Karnataka State Sylalbus, bharathadalli adalitha yantra political science notes ದ್ವಿತೀಯ ಪಿಯುಸಿ ರಾಜ್ಯಶಾಸ್ತ್ರ ನೋಟ್ಸ್ pdf 2nd puc political science question answer in kannada ರಾಜ್ಯಶಾಸ್ತ್ರ 2nd puc political science notes in kannada pdf political science notes in kannada pdf download 12 puc political science notes in kannada bharatadalli adalita yantra in kannada notes political science bharatadalli adalita yantra in kannada notes political science bharathada lli adalitha yantra political science notes Questin Answer guide Extract mcq Pdf download in kannnada medium Karnataka State Syllabus student 2nd Puc Political Science notes in Kannada karnataka State Syllabus

2nd Puc Political Science Chapter 3 Notes

I ಒಂದು ಅಂಕದ ಪ್ರಶ್ನೆಗಳು

1. ಆಡಳಿತ ಎಂದರೇನು?

ಸರಕಾರ ನಡೆಸುವುದು ಮತ್ತು ಜನರನ್ನು ನೋಡಿಕೊಳ್ಳುವುದೇ ಆಡಳಿತ.

2. ಆಡಳಿತದ ಮೂಲಪದಗಳು ಯಾವುವು?

ಲ್ಯಾಟೀನ್ ಭಾಷೆಯ ‘Ad’ ಮತ್ತು ‘Ministiare ಎಂಬ ಪದಗಳು Administration – ಆಡಳಿತದ ಮೂಲ ಪದಗಳು

3. ಕೇಂದ್ರಾಡಳಿತ ಮುಖ್ಯಸ್ಥ ಯಾರು?

ರಾಷ್ಟ್ರಪತಿಗಳು ಕೇಂದ್ರಾಡಳಿತ ಮುಖ್ಯಸ್ಥರು.

4. ರಾಜ್ಯಾಡಳಿತ ಮುಖ್ಯಸ್ಥ ಯಾರು?

ರಾಜ್ಯಾಡಳಿತ ಮುಖ್ಯಸ್ಥರು ರಾಜ್ಯಪಾಲರು.

5. ಜಿಲ್ಲಾಡಳಿತ ಮುಖ್ಯಸ್ಥ ಯಾರು?

ಜಿಲ್ಲಾಧಿಕಾರಿಗಳು ಜಿಲ್ಲಾಡಳಿತದ ಮುಖ್ಯಸ್ಥರು.

6. CAT ವಿಸ್ತರಿಸಿ.

ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ

7. KAT ವಿಸ್ತರಿಸಿ.

ಕರ್ನಾಟಕ ಆಡಳಿತ ನ್ಯಾಯಮಂಡಳಿ.

8. UPSC ವಿಸ್ತರಿಸಿ.

‘ಕೇಂದ್ರೀಯ ಲೋಕಸೇವಾ ಆಯೋಗ Union

ಸಾರ್ವಜನಿಕ ಸೇವಾ ಆಯೋಗ.

9. KPSC ವಿಸ್ತರಿಸಿ.

ಕರ್ನಾಟಕ ಲೋಕಸೇವಾ ಆಯೋಗ – Karnataka

ಸಾರ್ವಜನಿಕ ಸೇವಾ ಆಯೋಗ.

10. JPSC ವಿಸ್ತರಿಸಿ.

ಜಂಟಿ ಲೋಕಸೇವ ಆಯೋಗ.

11. IAS ವಿಸ್ತರಿಸಿ.

ಭಾರತೀಯ ಆಡಳಿತ ಸೇವೆಗಳು

12. IPS ವಿಸ್ತರಿಸಿ.

ಕರ್ನಾಟಕ ಆಡಳಿತ ಸೇವೆಗಳು Services. Indian Police

13. ಕೆಎಎಸ್ ವಿಸ್ತರಿಸಿ.

ಕರ್ನಾಟಕ ಆಡಳಿತ ಸೇವೆಗಳು Administrative Services. Karnataka

14. ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರನ್ನು ಯಾರು ನೇಮಿಸುತ್ತಾರೆ?

ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ.

15. ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರನ್ನು ಯಾರು ನೇಮಿಸುತ್ತಾರೆ?

ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರನ್ನು ಕರ್ನಾಟಕದ ರಾಜ್ಯಪಾಲರು ನೇಮಿಸುತ್ತಾರೆ.

16. ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರ ನಿವೃತ್ತಿ ವಯಸ್ಸೆಷ್ಟು?

ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರ ನಿವೃತ್ತಿ ವಯಸ್ಸು 65 ವರ್ಷಗಳು.”

17. ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷರ ನಿವೃತ್ತಿ ವಯಸ್ಸೆಷ್ಟು?

ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷರ ನಿವೃತ್ತಿ ವಯಸ್ಸು 62 ವರ್ಷಗಳು.

19. ಕರ್ನಾಟಕದ ರಾಜ್ಯ ಲೋಕಸೇವಾ ಆಯೋಗದ ಸದಸ್ಯರ ಅಧಿಕಾರಾವಧಿ ಎಷ್ಟು?

ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರು 6 ವರ್ಷಗಳವರೆಗೆ ಅಥವಾ ಅವರಿಗೆ 62 ವರ್ಷ ವಯೋಮಿತಿಯವರೆಗೆ ಅಥವಾ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೇಮಕಗೊಳ್ಳುತ್ತಾರೆ.

II. ಎರಡು ಅಂಕದ ಪ್ರಶ್ನೆಗಳು

1.ಆಡಳಿತ ಸೇವೆ ಎಂದರೇನು?

ಆಡಳಿತ ಸೇವೆಯು ಒಂದು ಶಾಶ್ವತ ಕಾರ್ಯಾಂಗವಾಗಿದೆ. ಇದು ರಾಷ್ಟ್ರದ ಪ್ರಮುಖ, ಪ್ರಧಾನಿ ಮತ್ತು ಮಂತ್ರಿಮಂಡಲವನ್ನು ಅಪಾರ ಸಂಖ್ಯೆಯ ಅಧೀನಾಧಿಕಾರಿಗಳು ಉನ್ನತಾಧಿಕಾರಿಗಳು, ಆಡಳಿತಾತ್ಮಕ ಅಧಿಕಾರಿಗಳನ್ನು ಒಳಗೊಂಡಿದೆ.

2. ಆಡಳಿತ ಸೇವೆಯ ವರ್ಗೀಕರಣ ಮಾಡಿ?

ಭಾರತದಲ್ಲಿ ಆಡಳಿತ ಸೇವೆಯನ್ನು ಈ ರೀತಿ ವರ್ಗೀಕರಿಸಲಾಗಿದೆ.

ಅಖಿಲ ಭಾರತ ಸೇವೆಗಳು

1) ಭಾರತದ ಆಡಳಿತ ಸೇವೆಗಳು (Indian Adminis-trative Services – IAS)

2) ಭಾರತದ ಆರಕ್ಷಕ ಸೇವೆಗಳು (Indian Police Services – IPS)

3) ಭಾರತದ ಅರಣ್ಯ ಸೇವೆಗಳು (Indian Forest Service – IFS)

ಕೇಂದ್ರದ ಸೇವೆಗಳು

1) ಭಾರತದ ಪಾಶ್ಯತ್ಯ ಸೇವೆಗಳು (Indian Foreign Service)

2) ಭಾರತದ ವರಮಾನ ಸೇವೆ (ಭಾರತೀಯ ರೈಲ್ವೆ ಸೇವೆ)

3) ಭಾರತದ ಸೇವೆ (ಭಾರತೀಯ ರೈಲ್ವೆ ಸೇವೆ)

ರಾಜ್ಯದ ಸೇವೆಗಳು

1) ಕರ್ನಾಟಕ ಆಡಳಿತ ಸೇವೆ KAS ಇತ್ಯಾದಿ.

3. ಕೇಂದ್ರ ಸೇವೆಗೆ ಎರಡು ಉದಾಹರಣೆ ನೀಡಿ.

ಭಾರತೀಯ ವಿದೇಶಿ ಪರಿಶೋಧನಾ ಮತ್ತು ಲೆಕ್ಕಸೇವೆಗಳು.

ಭಾರತೀಯ ಕಂದಾಯ ಸೇವೆಗಳು.

ಇವು ಕೇಂದ್ರ ಸೇವೆಗೆ ಎರಡು ಉದಾಹರಣೆ.

4. ನಾಗರೀಕ ಸೇವೆಯ ಎರಡು ಲಕ್ಷಣಗಳನ್ನು ತಿಳಿಸಿ.

ನಾಗರೀಕ ಸೇವೆಯ ಎರಡು ಲಕ್ಷಣಗಳು

ವೃತ್ತಿನಿರತ ವರ್ಗವಾಗಿದೆ.

ನಾಗರೀಕ ಸೇವೆಯು ಅಧಿಕಾರ ಶ್ರೇಣಿ ಪದ್ಧತಿಯನ್ನು ಹೊಂದಿದೆ.

5. ಆಡಳಿತ ಸೇವೆಯ ತಾಟಸ್ಥ್ಯ ಎಂದರೇನು?

ಆಡಳಿತ ಸೇವಾ ಸಿಬ್ಬಂದಿಯು ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಪೂರ್ವಾ ಗ್ರಹ ಪೀಡೆಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುವುದಕ್ಕೆ ಆಡಳಿತ ಸೇವೆಯ ತಾಟಸ್ಥ ಎಂದು ಕರೆಯಲಾಗುತ್ತದೆ. ಯಾವುದೇ ಪಕ್ಷ ಅಧಿಕಾರದಲ್ಲಿರಲಿ ಅದನ್ನು ಪರಿಗಣಿಸದೇ ಆಡಳಿತ ಸೇವಾ ಸಿಬ್ಬಂದಿಯು ಒಂದೇ ರೀತಿಯ ನಿಷ್ಠೆ, ಪ್ರಾಮಾಣಿಕತೆ, ದಕ್ಷತೆ ಹಾಗೂ ಉತ್ಸಾಹದಿಂದ ಸೇವೆ ಸಲ್ಲಿಸಬೇಕು.

6. ಕೇಂದ್ರ ಲೋಕಸೇವಾ ಆಯೋಗದ ಎರಡು ಕಾರ್ಯಗಳನ್ನು ತಿಳಿಸಿ.

ಕೇಂದ್ರ ಮತ್ತು ಅಖಿಲ ಭಾರತ ಸೇವೆಗಳಿಗೆ ನೇಮಕ ಮಾಡಲು ಪರೀಕ್ಷೆಗಳನ್ನು ನಡೆಸುವುದು.

ಎರಡು ಅಥವಾ ಹೆಚ್ಚಿನ ರಾಜ್ಯಗಳಿಗೆ ಬೇಡಿಕೆಯ ಮೇಲೆ, ವಿಶೇಷವಾಗಿ ವಿದ್ಯಾರ್ಹತೆಯನ್ನು ಆಧರಿಸಿ ಯಾವುದೇ ಸೇವೆಗಳಿಗೆ ಅಗತ್ಯವಿರುವಷ್ಟು ಜಂಟಿ ನೇಮಕಾತಿಯನ್ನು ಮಾಡುವುದು ಕೇಂದ್ರ ಲೋಕಸೇವಾ ಆಯೋಗದ ಕಾರ್ಯಗಳಾಗಿವೆ.

7. ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಮೂರು ಕಾರ್ಯಗಳನ್ನು ತಿಳಿಸಿ.

ಕರ್ನಾಟಕ ರಾಜ್ಯ ಲೋಕಸೇವಾ ಆಯೋಗವು ಕೆಳಕಂಡ ಮೂರು ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ.

ರಾಜ್ಯಸೇವೆಗಳಿಗೆ ಅಭ್ಯರ್ಥಿಗಳನ್ನೇ ನೇಮಕ ಮಾಡಲು

1. ಸರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತದೆ.

2. ನಾಗರೀಕ ಸಿಬಂದಿಗಳನು. ಒಂದು ಸೇವೆಯಿಂದ ಮತ್ತೊಂದು ನಾವೆಗೆ ಒಬ್ಬ ಮತ್ತು ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ತಿಳುವಳಿಕೆ

8. ಅಧಿಕಾರ ಶ್ರೇಣಿ ಪದ್ಧತಿ ಎಂದರೇನು?

ನಾಗರೀಕ ಸೇವಾ ವರ್ಗದಲ್ಲಿ ಅಧಿಕಾರಿಗಳು ವಿವಿಧ ಶ್ರೇಣಿಗಳಾಗಿ ವಿಂಗಡಿಸಿ ಒಂದು ನಿಯಮದಡಿ ತರುವುದಾಗಿದೆ. ಏಕೆಂದರೆ ಪ್ರತಿಯೊಬ್ಬ ನಾಗರೀಕ ಸಿಬ್ಬಂದಿಯು ಅವನ ನಂತರದ ಉನ್ನತ ಅಧಿಕಾರಿಯ ಆದೇಶಗಳನ್ನು ಪಾಲಿಸಬೇಕಾಗುತ್ತದೆ. ಮೇಲಧಿಕಾರಿಯು ಕೆಳಗಿನ ಅಧಿಕಾರಿಯ ಅಧಿಕಾರ ನಿರ್ವಹಣೆಯನ್ನು ಗಮನಿಸುತ್ತಾನೆ. ಪ್ರಾಧಿಕಾರವು ಮೇಲ್ ಸ್ತರದಿಂದ ನಡೆಯುತ್ತಿದ್ದು ಆಡಳಿತವನ್ನು ಸ್ಥಿರತೆಗೆ ತರುವಲ್ಲಿ ಸಹಾಯ ಮಾಡುತ್ತದೆ.

9. ಮುಖ್ಯ ಕಾರ್ಯದರ್ಶಿಯ ಎರಡು ಕಾರ್ಯಗಳನ್ನು ತಿಳಿಸಿ

ಮುಖ್ಯ ಕಾರ್ಯದರ್ಶಿಯು ಮುಖ್ಯಮಂತ್ರಿಗೆ ಸಲಹೆಗಾರರಾಗಿರುತ್ತಾರೆ.

ಇವರು ಸಂಪೂರ್ಣ ಸಚಿವಾಲಯದ ಸಾಮಾನ್ಯ ಮೇಲ್ವಿಚಾರಣೆಗೆ ಮತ್ತು ನಿಯಂತ್ರಣವನ್ನು ಹೊಂದಿರುತ್ತಾರೆ. ಇವು ಮುಖ್ಯ ಕಾರ್ಯದರ್ಶಿಯ ಎರಡು ಪ್ರಮುಖ ಕಾರ್ಯಗಳಾಗಿವೆ.

10. ಹರ್ಮನ್ ಫೈನರ್ ರವರ ವ್ಯಾಖ್ಯೆಯನ್ನು ತಿಳಿಸಿ.

ಹರ್ಮನ್ ಫೈನರ್ : ವೇತನ ಸ್ವೀಕರಿಸುವ ತರಬೇತಿ

ಹಾಗೂ ನೈಪುಣ್ಯತೆಯನ್ನು ಹೊಂದಿದ ಶಾಶ್ವತ ಮತ್ತು ವೃತ್ತಿಪರ ಅಧಿಕಾರಗಳ ಸಮೂಹವೇ ನಾಗರೀಕ ಸೇವಾವರ್ಗ.

11. ಕೇಂದ್ರ ಲೋಕಸೇವಾ ಆಯೋಗದ ಸದಸ್ಯರನ್ನು ಹೇಗೆ ಪದಚ್ಯುತಿಗೊಳಿಸಲಾಗುತ್ತದೆ?

ಕೇಂದ್ರ ಲೋಕಸೇವಾ ಆಯೋಗದ ಸದಸ್ಯರನ್ನು ಅವರ ದುರ್ನಡತೆಯ ಆಧಾರದ ಮೇಲೆ ಸರ್ವೋಚ್ಚ ನ್ಯಾಯಾಲಯದ ವಿಚಾರಣೆ ಮುಗಿದ ನಂತರ ರಾಷ್ಟ್ರಪತಿಗಳ ಆದೇಶದ ಮೇಲೆ ಮಾತ್ರ ಅವರನು ಸದಸತ್ವದಿಂದ ಸದಸ್ಯರನ್ನೇ ವಜಾಗೊಳಿಸಲು ಅಧಿಕಾರವನ್ನು ಹೊಂದಿರುತ್ತಾರೆ.

12. ಜಿಲ್ಲಾಧಿಕಾರಿಯ ಕಾರ್ಯಗಳನ್ನು ತಿಳಿಸಿ.

ಸಂಬಂಧಪಟ್ಟ ಕಾರ್ಯಗಳನ್ನು ನಿರ್ವಹಿಸುತ್ತಾರೆ.

ಮತದಾನಕೆ ಮತ್ತು ಪೌರ ಆಡಳಿತಕ್ಕೆ ಸಂಬಂಧಪಟ್ಟ ಕಾರ್ಯಗಳನ್ನು ನಿರ್ವ ಹೆಸುತ್ತಾರೆ.

13. ಆಡಳಿತ ಸೇವೆಯ ಅನಾಮಕತ್ವ ಎಂದರೇನು?

ನಾಗರೀಕ ಸಿಬ್ಬಂದಿಗಳು ತೆರೆಯ ಮರೆಯ ಕೆಲಸ ಮಾಡುವಂತಿರಬೇಕು. ಮತ್ತು ಸಚಿವರಿಗೆ ಕೆಲಸ ಮಾಡಿದರೂ ಅನಾಮಕತ್ವ ಸಿಬ್ಬಂದಿಯಾಗಿ ಉಳಿಯಲೇಬೇಕಾಗುತ್ತದೆ.

ಒಳ್ಳೆಯ ಕೆಲಸಕ್ಕಾಗಿ ಪ್ರಶಂಸೆ ಅಥವಾ ಏನಾದರೂ ಅಸಂಭವಗಳು ನಡೆದರೆ ಅದು ಸಚಿವರಿಗೆ ಅನ್ವಯ ವಾಗುತ್ತಿದೆಯೇ ವಿನಃ ನಾಗರೀಕ ಸಿಬ್ಬಂದಿಗಳಿಗಲ್ಲ.

14. ಸರ್ಕಾರದ ಮೂರು ಇಲಾಖೆಗಳನ್ನು ತಿಳಿಸಿ?

ಮಾನವ ಅಭಿವೃದ್ಧಿ ಇಲಾಖೆ, ರೈಲ್ವೆ ಇಲಾಖೆ. ಹಣಕಾಸು ಇಲಾಖೆ ಇವು ಸರ್ಕಾರದ ಮೂರು ಇಲಾಖೆಗಳು.

15. ಸಚಿವಾಲಯದ ಎರಡು ಜವಾಬ್ದಾರಿಗಳನ್ನು ತಿಳಿಸಿ?

ಮಸೂದೆಗಳನ್ನು ಹಾಗು ಕಾನೂನುಗಳನ್ನು ರೂಪಿಸಲು ಮಂತ್ರಿಗಳಿಗೆ ಸಹಾಯ ಮಾಡುತ್ತದೆ.

ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ರೂಪಿಸಲು ಸಂಬಂಧಪಟ್ಟ ಮಂತ್ರಿಗೆ ಸಹಾಯ ಮಾಡುತ್ತದೆ.

15. ಇಲಾಖೆ ಎಂದರೇನು?

ಇದು ಸಚಿವಾಲಯದ ಪ್ರಾಥಮಿಕ ಘಟಕವಾಗಿದೆ. ಒಂದು ಸಚಿವಾಲಯವು ಹಲವಾರು ಇಲಾಖೆಗಳನ್ನು ಹೊಂದಿರಬಹುದು. ಪ್ರತಿಯೊಂದು ಇಲಾಖೆಯು ಒಬ್ಬ ಕಾರ್ಯದರ್ಶಿಯನ್ನು ಹೊಂದಿರುತ್ತದೆ. ಮಂತ್ರಿಯು ಇಲಾಖೆಯ ರಾಜಕೀಯ ಮುಖ್ಯಸ್ಥನಾದರೆ, ಕಾರ್ಯದರ್ಶಿಯು ಆಡಳಿತಾತ್ಮಕ ಮುಖ್ಯಸ್ಥನಾಗಿರುತ್ತಾನೆ.

17. ಭಾಗ ಎಂದರೇನು?

ಸಚಿವಾಲಯದ ಕಾರ್ಯಭಾರವನ್ನು ಆಧರಿಸಿ ಒಂದು ಅಥವಾ ಅದಕ್ಕಿಂತಲೂ ಹೆಚ್ಚಿನ ಭಾಗಗಳನ್ನಾಗಿ ಮಾಡಲಾಗುವುದು; ಒಬ್ಬ ಕಾರ್ಯದರ್ಶಿ ಅಥವಾ ಜಂಟಿ ಕಾರ್ಯದರ್ಶಿಯು ಆ ಭಾಗದ ಪ್ರಭಾವವನ್ನು ಹೊಂದಿರುತ್ತಾನೆ. ಕಾರ್ಯದರ್ಶಿಯವರ ಸಂಪೂರ್ಣ ಜವಾಬ್ದಾರಿಯ ಮೇಲೆ ಅವನಿಗೆ ಸ್ವತಂತ್ರ ಜವಾಬ್ದಾರಿಯನ್ನು ನೀಡಲಾಗುವುದು.

18. ಅಖಿಲ ಭಾರತ ಸೇವೆ ಎಂದರೇನು?

ಅಖಿಲ ಭಾರತ ಸೇವೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡಕ್ಕೂ ಸೇರಿದ ಸೇವೆಗಳಾಗಿವೆ. ಅಖಿಲ ಭಾರತ ಸೇವೆಯಲ್ಲಿರುವವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರಲ್ಲಿಯೂ ಸೇವೆ ಸಲ್ಲಿಸುತ್ತಾರೆ. IAS, IPS, IFS ಸೇವೆಗಳು ಅಖಿಲ ಭಾರತ ಸೇವೆಗಳೆಂದು ಕರೆಯಲಾಗಿದೆ. ಈ ಅಧಿಕಾರಿಗಳನ್ನು ಕೇಂದ್ರ ಸೇವೆ ಮತ್ತು ರಾಜ್ಯ ಸೇವೆಗೆ ವರ್ಗಾವಣೆ ಮಾಡಬಹುದು.

19. ಜಿಲ್ಲಾಡಳಿತ ಎಂದರೇನು?

ಜಿಲ್ಲಾಡಳಿತವು ರಾಜ್ಯದ ಪ್ರಾಥಮಿಕ ಆಡಳಿತಾತ್ಮಕ ಘಟಕವಾಗಿದೆ. ಇದು ಜಿಲ್ಲೆಯೊಳಗಿನ ಸಾರ್ವಜನಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತದೆ. ಸರ್ಕಾರದ ನೀತಿಗಳನ್ನು ಹಾಗೂ ಕಾರ್ಯಕ್ರಮಗಳನ್ನು ಜಿಲ್ಲಾಡಳಿತದ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ಆದ್ದರಿಂದ ನಾಗರೀಕರು ಈ ಹಂತದಲ್ಲಿ ಆಡಳಿತದೊಂದಿಗೆ ನೇರ ಸಂಪರ್ಕವನ್ನು ಹೊಂದಿರುತ್ತಾರೆ.

20. ಕೇಂದ್ರ ಲೋಕಸೇವಾ ಸದಸ್ಯರಾಗಲು ಇರಬೇಕಾದ ಅರ್ಹತೆಗಳೇನು?

ಆಯೋಗದ ಅರ್ಧದಷ್ಟು ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಕನಿಷ್ಟ 10 ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕು.

ಸದಸ್ಯರು, ಅವರ ನಿವೃತ್ತಿಯ ನಂತರ ಪುನರ್ ನೇಮಕಾತಿಗೆ ಅರ್ಹನಿರುವುದಿಲ್ಲ.

ಕೇಂದ್ರ ಲೋಕ ಸೇವಾ ಆಯೋಗದ ಸದಸ್ಯನೊಬ್ಬನನ್ನು ಕೇಂದ್ರ ಲೋಕಸೇವಾ ಅಥವಾ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷನಾಗಿ ನೇಮಕ ಮಾಡಿಕೊಳ್ಳಬಹುದು.

III. ಐದು ಅಂಕದ ಪ್ರಶ್ನೆಗಳು

1. ಆಡಳಿತ ಪಾತ್ರವನ್ನು ವಿವರಿಸಿ.

ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆಡಳಿತವಿಲ್ಲದೇ ಪ್ರಜಾಪ್ರಭುತ್ವವನ್ನು ಊಹಿಸುವುದು ಅಸಾಧ್ಯ. ಆಡಳಿತದ ಪಾತ್ರದ ಮಹತ್ವವು ಈ ವ್ಯಾಖ್ಯೆಗಳಿಂದ ತಿಳಿಯಬಹುದು.

ಚಾರ್ಲ್ ಎ. ಬಿಯಾರ್ಡ್ : ಆಡಳಿತವು ಆಧುನಿಕ ನಾಗರೀಕತೆಯ ವಿಜ್ಞಾನವಾಗಿದೆ.

ಜೆರಾಲ್ಡ್ ಗೆಯ್ದನ್ : ಸಾರ್ವಜನಿಕ ಆಡಳಿತದ ಕಾರ್ಯ ಮತ್ತು ಪಾತ್ರವನ್ನು ಸಮಕಾಲೀನ ಸಮಾಜಕ್ಕೆ ಅನ್ವಯಿಸುವಂತೆ ಕೆಳಕಂಡಂತೆ ಪಟ್ಟಿ ಮಾಡಿರುತ್ತಾನೆ.

  1. ರಾಜಕೀಯ ಸಂರಕ್ಷಣೆ
  2. ಸ್ಥಿರತೆ ಮತ್ತು ವ್ಯವಸ್ಥೆಯ ಕ್ರಮಬದ್ದ ನಿರ್ವಹಣೆ.
  3. ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳ ಸಾಂಸ್ಥಿಕರಣ.
  4. ಬೃಹತ್ ಪ್ರಮಾಣದ ವಾಣಿಜ್ಯ ವಿದ್ಯಮಾನಗಳ ಬೆಳವಣಿಗೆ.

2. ಜಿಲ್ಲಾಡಳಿತ ಎಂದರೇನು?

ಜಿಲ್ಲಾಡಳಿತವು ರಾಜ್ಯದ ಪ್ರಾಥಮಿಕ ಆಡಳಿತಾತ್ಮಕ ಘಟಕವಾಗಿದೆ. ಇದು ಜಿಲ್ಲೆಯೊಳಗಿನ ಸಾರ್ವಜನಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತದೆ. ಸರ್ಕಾರದ ನೀತಿಗಳನ್ನು ಹಾಗೂ ಕಾರ್ಯಕ್ರಮಗಳನ್ನು ಜಿಲ್ಲಾಡಳಿತದ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ಆದ್ದರಿಂದ ನಾಗರೀಕರು ಈ ಹಂತದಲ್ಲಿ ಆಡಳಿತದೊಂದಿಗೆ ನೇರ ಸಂಪರ್ಕವನ್ನು ಹೊಂದಿರುತ್ತಾರೆ.

3. ಕೇಂದ್ರ ಲೋಕಸೇವಾ ಸದಸ್ಯರಾಗಲು ಇರಬೇಕಾದ ಅರ್ಹತೆಗಳೇನು?

ಆಯೋಗದ ಅರ್ಧದಷ್ಟು ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಕನಿಷ್ಟ 10 ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕು.

ಸದಸ್ಯರು, ಅವರ ನಿವೃತ್ತಿಯ ನಂತರ ಪುನರ್ ನೇಮಕಾತಿಗೆ ಅರ್ಹನಿರುವುದಿಲ್ಲ.

ಕೇಂದ್ರ ಲೋಕ ಸೇವಾ ಆಯೋಗದ ಸದಸ್ಯನೊಬ್ಬನನ್ನು ಕೇಂದ್ರ ಲೋಕಸೇವಾ ಅಥವಾ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷನಾಗಿ ನೇಮಕ ಮಾಡಿಕೊಳ್ಳಬಹುದು.

III. ಐದು ಅಂಕದ ಪ್ರಶ್ನೆಗಳು

1.ಆಡಳಿತ ಪಾತ್ರವನ್ನು ವಿವರಿಸಿ.

ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆಡಳಿತವಿಲ್ಲದೇ ಪ್ರಜಾಪ್ರಭುತ್ವವನ್ನು ಊಹಿಸುವುದು ಅಸಾಧ್ಯ. ಆಡಳಿತದ ಪಾತ್ರದ ಮಹತ್ವವು ಈ ವ್ಯಾಖ್ಯೆಗಳಿಂದ ತಿಳಿಯಬಹುದು.

ಚಾರ್ಲ್ ಎ. ಬಿಯಾರ್ಡ್ : ಆಡಳಿತವು ಆಧುನಿಕ ನಾಗರೀಕತೆಯ ವಿಜ್ಞಾನವಾಗಿದೆ.

ಜೆರಾಲ್ಡ್ ಗೆಯ್ದನ್ : ಸಾರ್ವಜನಿಕ ಆಡಳಿತದ ಕಾರ್ಯ ಮತ್ತು ಪಾತ್ರವನ್ನು ಸಮಕಾಲೀನ ಸಮಾಜಕ್ಕೆ ಅನ್ವಯಿಸುವಂತೆ ಕೆಳಕಂಡಂತೆ ಪಟ್ಟಿ ಮಾಡಿರುತ್ತಾನೆ.

  1. ರಾಜಕೀಯ ಸಂರಕ್ಷಣೆ
  2. ಸ್ಥಿರತೆ ಮತ್ತು ವ್ಯವಸ್ಥೆಯ ಕ್ರಮಬದ್ದ ನಿರ್ವಹಣೆ.
  3. ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳ ಸಾಂಸ್ಥಿಕರಣ.
  4. ಬೃಹತ್ ಪ್ರಮಾಣದ ವಾಣಿಜ್ಯ ವಿದ್ಯಮಾನಗಳ ಬೆಳವಣಿಗೆ.5.
  5. ಆರ್ಥಿಕ ಬೆಳವಣಿಗೆಗಳನ್ನು ನೈಜಗೊಳಿಸುವುದು.
  6. ದುರ್ಬಲ ವರ್ಗದವರ ಸಾಮಾಜಿಕ ರಕ್ಷಣೆ.
  7. ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವುದು.
  8. ಸಾರ್ವಜನಿಕ ನೀತಿಗಳು ಹಾಗೂ ರಾಜಕೀಯ ನೀತಿಗಳ ಮೇಲೆ ಪ್ರಭಾವ.

ರಾಜ್ಯದಿಂದ ರೂಪಿಸಲ್ಪಟ್ಟ ಕಾನೂನು, ನೀತಿಗಳು ಹಾಗೂ ಕಾರ್ಯಕ್ರಮಗಳನ್ನು ಆಡಳಿತವು ಅನುಷ್ಠಾನಗೊಳಿಸುತ್ತದೆ. ಆಡಳಿತವು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಪ್ರಮುಖ ಸಾಧನವಾಗಿದೆ. ಸಾರ್ವಜನಿಕ ಆಡಳಿತವು ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದರ ಮೂಲಕ ಒಂದು ರಾಷ್ಟ್ರಕ್ಕೆ ಸಾಮಾಜಿಕ ಭದ್ರತೆಯನ್ನು ನೀಡುತ್ತದೆ. ಸಾರ್ವಜನಿಕ ಆಡಳಿತವು ಶಿಕ್ಷಣ, ಆರೋಗ್ಯ, ಸಾರಿಗೆ, ಮತ್ತು ಸಂಪರ್ಕ ಮುಂತಾದ ಕ್ಷೇತ್ರಗಳಲ್ಲಿ ಜನರಿಗೆ ಸೇವೆ ಸಲ್ಲಿಸುತ್ತದೆ. ಸಾರ್ವಜನಿಕ ಆಡಳಿತವು ಒಂದು ರಾಷ್ಟ್ರದ ಸರ್ವಾಂಗೀಣ ಬೆಳವಣಿಗೆಗೆ ಅವಶ್ಯಕವಾದ ನೀತಿ ಹಾಗೂ ಕಾರ್ಯಕ್ರಮಗಳನ್ನು ರೂಪಿಸುತ್ತದೆ.

2. ನಾಗರೀಕ ಸೇವಾ ವರ್ಗಗಳ ಲಕ್ಷಣಗಳನ್ನು ಚರ್ಚಿಸಿ.

ನಾಗರೀಕ ಸೇವಾ ವರ್ಗದ ಪ್ರಮುಖ ಲಕ್ಷಣಗಳು ಈ ಕೆಳಗಿನಂತಿವೆ.

ವೃತ್ತಿಪರ ಸಂಸ್ಥೆ:

ನಾಗರೀಕ ಸೇವೆಯೂ ಕೌಶಲ್ಯತೆಯುಳ್ಳ ಖಾಯಂ ಆದ ಮತ್ತು ಸಂಭಾವನೆ ಪಡೆಯುವ ಅಧಿಕಾರಿಗಳ ವೃತ್ತಿ ನಿರತ ಸಮೂಹದಿಂದ ಕೂಡಿದೆ. ಇದೊಂದು ಪೂರ್ಣ ಸಮಯದ ಮತ್ತು ನಿರಂತರ ಸೇವೆಯಾಗಿದೆ. ಆಡಳಿತ ಸೇವಾ ವರ್ಗದ ಸದಸ್ಯರು ತಮ್ಮ ವೃತ್ತಿಯನ್ನು ನಿರ್ವಹಿಸಲು ಅಗತ್ಯವಾದ ತರಬೇತಿ ಮತ್ತು ನೈಪುಣ್ಯತೆಯನ್ನು ಪಡೆದಿರುತ್ತಾರೆ. ಆದ್ದರಿಂದ ವೇತನ ಸ್ವೀಕರಿಸುವ, ತರಬೇತಿ ಹಾಗೂ ನೈಪುಣ್ಯತೆಯನ್ನು ಹೊಂದಿದ ವೃತ್ತಿನಿರತವರ್ಗವೇ ಆಡಳಿತ ಸೇವಾ ವರ್ಗವಾಗಿದೆ.

ಅಧಿಕಾರ ಶ್ರೇಣಿ ಪದ್ಧತಿ |Hierarchy] :

ಆಡಳಿತ ಸೇವಾವರ್ಗವನ್ನು ವಿವಿಧ ಶ್ರೇಣಿಗಳನ್ನಾಗಿ ವಿಭಜಿಸಲಾಗಿರುತ್ತದೆ. ಉನ್ನತಾಧಿಕಾರಿಯು ಆಜ್ಞೆಗಳನ್ನು ನೀಡಿದರೆ, ಅಧೀನ ಅಧಿಕಾರಿಗಳು ಆಜ್ಞೆಗಳನ್ನು ಸ್ವೀಕರಿಸಿ ಕಾರ್ಯಗತಗೊಳಿಸುತ್ತಾರೆ. ಇಲ್ಲಿ ಆದೇಶಗಳು ಮೇಲಿನಿಂದ ಕೆಳಕ್ಕೆ ಪ್ರವಹಿಸುತ್ತವೆ ಎಲ್ಲಾ ಕಾರ್ಯಗಳು ಸೂಕ್ತ ನಿರ್ಧರಿತ ಮಾರ್ಗದ ಮೂಲಕ ನಡೆಯುತ್ತದೆ. ಕೆಳಗಿನ ಅಧಿಕಾರಿಯ ಅಧಿಕಾರವನ್ನು ಮೇಲಧಿಕಾರಿಯು ಗಮನಿಸುತ್ತಾನೆ.3.

ರಾಜಕೀಯ ತಟಸ್ಥತೆ

ನಾಗರೀಕ ಸಿಬ್ಬಂದಿ ಯಾವುದೇ ರಾಜಕೀಯ ಚಟುವಟಿಕೆಗಳಿಂದ ದೂರವಿರಬೇಕು ಮತ್ತು ಅಧಿಕಾರದಲ್ಲಿದ್ದ ರಾಜಕೀಯ ಪಕ್ಷಗಳು ಬದಲಾಗುವಂತಹ ಸಂದರ್ಭದಲ್ಲಿಯೂ ಸಹ ತನ್ನ ಕರ್ತವ್ಯಕ್ಕೆ ಯಾವುದೇ ಧಕ್ಕೆಯಾಗದಂತೆ ನಿರ್ವಹಿಸಬೇಕು.

ನಿಷ್ಪಕ್ಷಪಾತ

ನಾಗರೀಕ ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುವಾಗ ಯಾವುದೇ ಗುಂಪು ಅಥವಾ ಸಮಾಜದ ಯಾವುದೇ ವರ್ಗಕ್ಕೆ ವಿಶೇಷ ಪ್ರಾತಿನಿಧ್ಯ ಅಥವಾ ಕಾಳಜಿಯನ್ನು ಅಭಿವ್ಯಕ್ತಗೊಳಿಸದೇ ನಿಷ್ಪಕ್ಷಪಾತವಾಗಿ ಕಾನೂನನ್ನು ಪಾಲಿಸಬೇಕಾಗುತ್ತದೆ.

ಅನಾಮಧೇಯತೆ:

ನಾಗರೀಕ ಸಿಬ್ಬಂದಿಗಳು ತೆರೆಯ ಮರೆಯಲ್ಲಿ ಕೆಲಸ ಮಾಡುವಂತಿರಬೇಕು. ಮತ್ತು ಅವರು ಸಚಿವರಿಗೆ ಕೆಲಸ ಮಾಡಿದರೂ ಸಹ ಅನಾಮಕತ್ವ ಸಿಬ್ಬಂದಿಯಾಗಿ ಉಳಿಯಬೇಕಾಗುತ್ತದೆ. ಒಳ್ಳೆಯ ಕೆಲಸಕ್ಕಾಗಿ ಪ್ರಶಂಸೆ ಅಥವಾ ಏನಾದರೂ ಅಸಂಭವಗಳು ನಡೆದರೂ ಅದು ಸಚಿವರಿಗೆ ಅನ್ವಯವಾಗುತ್ತದೆಯೇ ವಿನಃ ನಾಗರೀಕ ಸಿಬ್ಬಂದಿಗಳಿಗಲ್ಲ.

ಸೇವಾ ಧ್ಯೇಯವಾಕ್ಯ

ಸಮಾಜ ಸೇವೆ ನಾಗರೀಕ ಸೇವಾ ವರ್ಗದ ಆದ್ಯ ಕರ್ತವ್ಯವಾಗಿದೆ. ಇವರು ಜನತೆಯ ಕಲ್ಯಾಣಕ್ಕೆ ಸೇವೆ ಸಲ್ಲಿಸಬೇಕು. ಇವರು ಸಾರ್ವಜನಿಕರಿಗಾಗಿ ಸೇವೆ ಮಾಡುವ ಮನಸ್ಸು ಮತ್ತು ಹಂಬಲವನ್ನು ಹೊಂದಿರಬೇಕೇ ವಿನಃ ಯಾವುದೇ ಪ್ರಾಧಿಕಾರಕ್ಕಲ್ಲ.

ಖಾಯಂ [ಶಾಶ್ವತ-Permanent) :

ನಾಗರೀಕ ಸಿಬ್ಬಂದಿಗಳನ್ನು ಖಾಯಂ ಕಾರ್ಯಾಂಗವೆಂದು ಕರೆಯಲಾಗಿದೆ. ಅವರು ತಾವು ನೇಮಕವಾದಾಗಿನಿಂದ ನಿವೃತ್ತಿ ಹೊಂದುವ ವಯೋಮಾನದವರೆಗೂ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಕೇಂದ್ರ ಸರ್ಕಾರ ಮತ್ತು ಕರ್ನಾಟಕ ರಾಜ್ಯದಲ್ಲಿಯೂ ಸಹ ನಿವೃತ್ತಿಯ ವಯಸ್ಸು 60 ವರ್ಷಗಳು ಆದರೂ ಸಹ ನಿಯಮ ರೀತ್ಯ ಶಿಸ್ತಿನ ಕ್ರಮವನ್ನು ಜಾರಿಗೊಳಿಸುತ್ತದೆಯಾದರೂ ಸೇವೆಗೆ ಬದ್ಧತೆಯಿದೆ. ಸೇವೆಯಿಂದ ವಜಾ ಮಾಡುವಂತಹ ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.

ಕಾನೂನಿನ ನ್ಯಾಯವ್ಯಾಪ್ತಿ:

ಪ್ರತಿಯೊಂದು ಹುದ್ದೆಯ ಕಾರ್ಯ, ಸ್ಥಾನ. ಮಾನ. ಅಧಿಕಾರ, ವ್ಯಾಪ್ತಿಯು ಕಾನೂನಿನಿಂದ ನಿರ್ಧರಿಸಲ್ಪಟ್ಟಿರುತ್ತದೆ. . ಆದ್ದರಿಂದ ಪ್ರತಿಯೊಬ್ಬ ಉದ್ಯೋಗಿಯು ಕಾನೂನಿನ ಚೌಕಟ್ಟಿನಲ್ಲಿಯೇ ತನ್ನ ಕಾರ್ಯ ನಿರ್ವಹಿಸಬೇಕಾಗುತ್ತದೆ.

ಸಾರ್ವಜನಿಕ ಹೊಣೆಗಾರಿಕೆ (Public Account-ability]:

ನಾಗರೀಕ ಸೇವಾ ವರ್ಗವು ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಸಾರ್ವಜನಿಕರಿಗೆ ಹೊಣೆಯಾಗಿರುತ್ತದೆ. ನಾಗರೀಕ ಸೇವಾವರ್ಗದ ಕಾರ್ಯಗಳನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುತ್ತದೆ. ನಾಗರೀಕ ಸೇವಾವರ್ಗವು ಬೇಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿದರೆ ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ಟೀಕೆಗೆ ಗುರಿಯಾಗಬೇಕಾಗುತ್ತದೆ.

ವಿಶೇಷ ತರಬೇತಿ Special Training :

ಅಭ್ಯರ್ಥಿಗಳು ಅತ್ಯುನ್ನತ ಶ್ರೇಣಿಯ ನಾಗರೀಕ ಸೇವೆಗಳಿಗೆ ಆಯ್ಕೆ ಆದರೆ ಆಡಳಿತದಲ್ಲಿ ವಿಶೇಷ ಕೌಶಲ್ಯವನ್ನು ಪಡೆದುಕೊಳ್ಳಲು ಅವರನ್ನು ಸೇವಾವಧಿಯಲ್ಲಿ ತರಬೇತಿಗೆ ನಿಯೋಜಿಸಲಾಗುತ್ತದೆ.

3. ಅಖಿಲ ಭಾರತ ಸೇವೆ ಬಗ್ಗೆ ಟಿಪ್ಪಣಿ ಬರೆಯಿರಿ.

ಅಖಿಲ ಭಾರತ ಸೇವೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡಕ್ಕೂ ಸಾಮಾನ್ಯ ಸೇವೆಗಳಾಗಿವೆ. ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಯ್ದುಕೊಳ್ಳಲು ಮತ್ತು ಕೇಂದ್ರ-ರಾಜ್ಯಗಳ ನಡುವೆ ಉತ್ತಮ ಸಂಬಂಧವನ್ನು ಮೂಡಿಸಲು ಅಖಿಲ ಭಾರತ ಸೇವೆಗಳು ಅಗತ್ಯವೆಂದು ಸಂವಿಧಾನ ರಚನಾ ಸಭೆಯಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ರವರು ಒತ್ತಾಯಿಸಿದರು. ಸಂವಿಧಾನದ ಭಾಗ 14 ರ ಪರಿಚ್ಛೇದ 312 ರಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಖಿಲ ಭಾರತದ ಸೇವೆಗಳಿಗೆ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಇವು ಆಡಳಿತದ ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ರಾಷ್ಟ್ರಾದ್ಯಂತ ಸಾಮಾನ್ಯ ಆಡಳಿತವನ್ನು ಸ್ಥಾಪಿಸಿ ರಾಷ್ಟ್ರದ ಏಕತೆ ಮತ್ತು ಅಖಂಡತೆಯನ್ನು ಕಾಪಾಡಿಕೊಂಡು ಬರುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಅಖಿಲ ಭಾರತ ಸೇವೆಗಳ ಅಧಿಕಾರಿಗಳು ಕೇಂದ್ರ ಸರ್ಕಾರದಿಂದ ನೇಮಿಸಲ್ಪಟ್ಟ ಕೇಂದ್ರ ಸರ್ಕಾರದ . ಯತಣಕ್ಕೆ ಒಳಪಟ್ಟಿದ್ದರೂ ರಾಜ್ಯ ಸರ್ಕಾರಗಳಲ್ಲಿ ಸೇವೆ ಸಲ್ಲಿಸುವಾಗ ಆಯಾ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಲು ಶ್ರಮಿಸುತ್ತಾರೆ. ಈ ಕೇಂದ್ರ ಹಾಗೂ ರಾಜ್ಯಗಳಲ್ಲಿ ಸೇವೆ ಸಲ್ಲಿಸುವ ಅಖಿಲ ಭಾರತ ಸೇವೆಗಳನ್ನು ಸ್ಥಾಪಿಸುವ ಅಧಿಕಾರ ಕೇಂದ್ರ ಸಂಸತ್ತಿಗಿದೆ. ರಾಜ್ಯ ಸಭೆಯು ರಾಷ್ಟ್ರೀಯ ಹಿತದೃಷ್ಟಿಯಿಂದ ಒಂದು ನಿರ್ಣಯವನ್ನು ಮಂಡಿಸಿ ಅದಕ್ಕೆ 2/3 ರಷ್ಟು ಬಹುಮತದ ಮೂಲಕ ಲೋಕಸಭೆಯ ಒಪ್ಪಿಗೆ ಪಡೆದು ಹೊಸ ಅಖಿಲ ಭಾರತ ಸೇವೆಗಳನ್ನು ಸ್ಥಾಪಿಸಬಹುದು. ಅದಕ್ಕೆ ರಾಜ್ಯಗಳ ಒಪ್ಪಿಗೆಯನ್ನು ಪಡೆದುಕೊಳ್ಳಬೇಕು.

ಉದಾ : 1967 ರಲ್ಲಿ ಭಾರತ ಅರಣ್ಯ ಸೇವೆಯನ್ನು [IFS] ಸ್ಥಾಪಿಸಲಾಯಿತು. ಇದಕ್ಕೂ ಮೊದಲೇ ಮುಖ್ಯವಾದ ಭಾರತೀಯ ಆಡಳಿತ ಸೇವೆ [IAS] ಮತ್ತು ಭಾರತೀಯ ಪೋಲಿಸ್ ಸೇವೆ [IPS] ಗಳು ಪ್ರಾರಂಭಗೊಂಡಿವೆ.

ಈ ಸಿಬ್ಬಂದಿ ವರ್ಗದವರ ಸೇವೆಗಳನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರಗಳೆರಡು ಉಪಯೋಗಿಸಿಕೊಳ್ಳಬಹು -ದು. ಈ ಅಧಿಕಾರಗಳನ್ನು ಕೇಂದ್ರ ಸೇವೆ ಮತ್ತು ರಾಜ್ಯ ಸೇವೆಗೆ ವರ್ಗಾವಣೆ ಮಾಡಬಹುದು. ಸಂವಿಧಾನದ ಸದಾಶಯವನ್ನು ಕಾರ್ಯಗತಗೊಳಿಸುವಲ್ಲಿ ಅಖಿಲ ಭಾರತ ಸೇವೆಗಳ ಪಾತ್ರ ಮಹತ್ವದ್ದಾಗಿರುತ್ತದೆ.

4. ಕೇಂದ್ರ ಸೇವೆ ಬಗ್ಗೆ ಟಿಪ್ಪಣಿ ಬರೆಯಿರಿ.

ಕೇಂದ್ರ ಸೇವೆಗಳ ಸದಸ್ಯರ ಸೇವೆಯು ಕೇಂದ್ರ ಸರಕಾರಕ್ಕೆ ಮಾತ್ರ ಮೀಸಲಾಗಿರುತ್ತದೆ. ಕೇಂದ್ರ ಪಟ್ಟಿಯಲ್ಲಿರುವ ವಿಷಯಗಳ ಬಗ್ಗೆ ಸೇವೆ ಸಲ್ಲಿಸಲು ಕೇಂದ್ರ ಸೇವೆಗಳನ್ನು ಸೃಷ್ಟಿಸಲಾಗಿದೆ. ಕೇಂದ್ರೀಯ ಸೇವೆಯು ಪ್ರತ್ಯೇಕ ಸಿಬ್ಬಂದಿ ವರ್ಗದವರಿಂದ ನಿರ್ವಹಣೆ ಮಾಡಲಾಗುತ್ತದೆ. ಸಂವಿಧಾನದ 312 ನೇ ಪರಿಚ್ಛೇದವು ಕೇಂದ್ರೀಯ ಆಡಳಿತಾತ್ಮಕ ಇಲಾಖೆಗಳಲ್ಲಿ ಇಂತಹ ಸೇವೆಗಳನ್ನು ಸೃಷ್ಟಿಸಲು ಪಾರ್ಲಿಮೆಂಟಿಗೆ ಅಧಿಕಾರವನ್ನು ನೀಡಿದೆ. ಇಂತಹ ಸೇವೆಗಳನ್ನು ಕೇಂದ್ರೀಯ ಸೇವೆಗಳೆನ್ನುವರು.

ಕೇಂದ್ರ ಸೇವೆಗಳ ಬಹುತೇಕ ಸಿಬ್ಬಂದಿಯನ್ನು ಸಂಬಂಧಪಟ್ಟ ಕೇಂದ್ರ ಸರ್ಕಾರದ ಮಂತ್ರಾಲಯಗಳು ನಿಯಂತ್ರಿಸುತ್ತವೆ. ಕೆಲವು ಕೇಂದ್ರ ಸೇವೆಗಳು ಸಿಬ್ಬಂದಿ ಸಚಿವಾಲಯದ ನಿಯಂತ್ರಣ ವ್ಯಾಪ್ತಿಗೆ ಒಳಪಡುತ್ತದೆ. ಸಿಬ್ಬಂದಿ ಸಚಿವಾಲಯವು ಕೇಂದ್ರ ಸೇವೆಗಳಿಗೆ ಸಂಬಂಧಿಸಿದ ಸಾಮಾನ್ಯ ನೀತಿಗಳನ್ನು ನಿರ್ಧರಿಸುತ್ತದೆ. ಕೇಂದ್ರ ಸೇವೆಗಳನ್ನು ದರ್ಜೆಗಳಾಗಿ 1. II. III, IV ವರ್ಗೀಕರಿಸಲಾಗಿದೆ.

ಕೇಂದ್ರ ಲೋಕಸೇವಾ ಆಯೋಗವು ಇವುಗಳಿಗೆ ಆಯ್ಕೆ ನಡೆಸುತ್ತದೆ ಕೇಂದ್ರದ ಪ್ರಮುಖ ಸೇವೆಗಳು ಈ ಕೆಳಗಿನಂತಿವೆ.

ಭಾರತೀಯ ವಿದೇಶಿ ಪರಿಶೋಧನಾ ಮತ್ತು ಲೆಕ್ಕ ಸೇವೆಗಳು [IAAS]

ಭಾರತ ವಿದೇಶಾಂಗ ಸೇವೆ

ಭಾರತೀಯ ಕಂದಾಯ ಸೇವೆಗಳು [IRS]

ಭಾರತೀಯ ರೈಲ್ವೆ ಸೇವೆಗಳು [IRYS]

ಭಾರತೀಯ ರಕ್ಷಣಾ ಸೇವೆಗಳು. [IDS]

ಭಾರತೀಯ ಮಾಹಿತಿ ಸೇವೆಗಳು. [IIS]

ಭಾರತೀಯ ಅಂಚೆ ಸೇವೆಗಳು. [IPS]

ಭಾರತೀಯ ಇಂಜಿನಿಯರಿಂಗ್ ಸೇವೆಗಳು. [CES]

ಭಾರತೀಯ ಆರ್ಥಿಕ ಸೇವೆಗಳು ಇತ್ಯಾದಿ. [IES]

ಇವರ ವೇತನ ಪಿಂಚಣಿ ಹಾಗೂ ಇತರೆ ಭತ್ಯಗಳನ್ನು ಕೇಂದ್ರ ಸರ್ಕಾರ ನೀಡುತ್ತದೆ. ಕೇಂದ್ರ ಸರಕಾರವು ಈ ಸಿಬ್ಬಂದಿಯನ್ನು ನಿಯಂತ್ರಿಸುತ್ತದೆ.

5. ರಾಜ್ಯ ಸೇವೆ ಬಗ್ಗೆ ಟಿಪ್ಪಣಿ ಬರೆಯಿರಿ.

ಭಾರತವು ಒಂದು ಸಂಯುಕ್ತ ವ್ಯವಸ್ಥೆಯನ್ನು ಹೊಂದಿರುವುದರಿಂದ ಸಂವಿಧಾನಬದ್ದವಾಗಿ ಅಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ವಿಭಜನೆಯಾಗಿದೆ. ಈ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ಸೇವಾ ವರ್ಗವನ್ನು ಹೊಂದಲು ಅವಕಾಶವಿದೆ, ಅಂತೆಯೇ ಸಂವಿಧಾನದ 309 ನೇ ವಿಧಿಯೂ ರಾಜ್ಯ ಸೇವೆಗಳನ್ನು ಹೊಂದಲು ರಾಜ್ಯಗಳಿಗೆ ಅವಕಾಶ ಕಲ್ಪಿಸಿದೆ. ರಾಜ್ಯಪಟ್ಟಿಯಲ್ಲಿ ಹಲವಾರು ವಿಷಯಗಳಾಗಿ ನಮೂದಿಸಲಾಗಿದೆ; ಅವುಗಳೆಂದರೆ ಕಂದಾಯ, ಪೋಲಿಸ್, ಮಾರಾಟ ತೆರಿಗೆ, ಭೂಕಂದಾಯ, ಅರಣ್ಯಗಳು ಮುಂತಾದ ವಿಷಯಗಳಿಗೆ ಸಂಬಂಧಿಸಿದ ಸೇವೆಗಳನ್ನು ಆಯಾ ರಾಜ್ಯಗಳು ನೇಮಿಸಿಕೊಂಡ ಸಿಬ್ಬಂದಿಗಳು ನಿರ್ವಹಿಸುತ್ತಾರೆ ರಾಜ್ಯ ಸೇವೆಗೆ ನೇಮಕ ಮಾಡಿಕೊಂಡಿರುವ ರೀತಿ ಮತ್ತು ವಿಧಾನಗಳು, ಸೇವಾ ನಿಬಂಧನೆಗಳು, ವೇತನ ಮತ್ತು ಭತ್ಯೆಗಳು ಏಕರೀತಿಯಲ್ಲಿರದೇ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತಾ ಹೋಗುತ್ತದೆ.

ರಾಜ್ಯ ಸರ್ಕಾರಗಳು, ಕೇಂದ್ರ ಮಾದರಿಯಲ್ಲಿ ಆಡಳಿತ ಸೇವೆಯು ಜಾರಿಗೊಳಿಸುವ ಜವಾಬ್ದಾರಿ ಮತ್ತು ಆಸಕ್ತಿಯನ್ನು ತೆಗೆದುಕೊಂಡಿವೆ. ಅದಕ್ಕಾಗಿ ಸಮರ್ಥ ಅಧಿಕಾರಿಗಳ ಅವಶ್ಯಕತೆಯಿದೆ. ರಾಜ್ಯ ಸೇವೆಗಳಲ್ಲಿರುವವರು ರಾಜ್ಯ ಸರ್ಕಾರದ ನೇರ ಆಡಳಿತದ ನಿಯಂತ್ರಣಕ್ಕೆ ಒಳಪಡುತ್ತಾರೆ.

ಕೇಂದ್ರ ಲೋಕಸೇವಾ ಆಯೋಗವು ಇವುಗಳಿಗೆ ಆಯ್ಕೆ ನಡೆಸುತ್ತದೆ ಕೇಂದ್ರದ ಪ್ರಮುಖ ಸೇವೆಗಳು ಈ ಕೆಳಗಿನಂತಿವೆ.

  1. ಭಾರತ ವಿದೇಶಾಂಗ ಸೇವೆ [IFS)
  2. ಭಾರತೀಯ ವಿದೇಶಿ ಪರಿಶೋಧನಾ ಮತ್ತು ಲೆಕ್ಕ ដក [IAAS]
  3. ಭಾರತೀಯ ಕಂದಾಯ ಸೇವೆಗಳು [IRS]
  4. ಭಾರತೀಯ ರೈಲ್ವೆ ಸೇವೆಗಳು [IRYS]
  5. ಭಾರತೀಯ ರಕ್ಷಣಾ ಸೇವೆಗಳು. [IDS]
  6. ಭಾರತೀಯ ಮಾಹಿತಿ ಸೇವೆಗಳು. [IIS]
  7. ಭಾರತೀಯ ಅಂಚೆ ಸೇವೆಗಳು. [IPS]
  8. ಭಾರತೀಯ ಇಂಜಿನಿಯರಿಂಗ್ ಸೇವೆಗಳು. [CES]
  9. ಭಾರತೀಯ ಆರ್ಥಿಕ ಸೇವೆಗಳು ಇತ್ಯಾದಿ. [IES]

ಇವರ ವೇತನ ಪಿಂಚಣಿ ಹಾಗೂ ಇತರೆ ಭತ್ಯಗಳನ್ನು ಕೇಂದ್ರ ಸರ್ಕಾರ ನೀಡುತ್ತದೆ. ಕೇಂದ್ರ ಸರಕಾರವು ಈ ಸಿಬ್ಬಂದಿಯನ್ನು ನಿಯಂತ್ರಿಸುತ್ತದೆ.

5. ರಾಜ್ಯ ಸೇವೆ ಬಗ್ಗೆ ಟಿಪ್ಪಣಿ ಬರೆಯಿರಿ.

ಭಾರತವು ಒಂದು ಸಂಯುಕ್ತ ವ್ಯವಸ್ಥೆಯನ್ನು ಹೊಂದಿರುವುದರಿಂದ ಸಂವಿಧಾನಬದ್ದವಾಗಿ ಅಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ವಿಭಜನೆಯಾಗಿದೆ. ಈ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ಸೇವಾ ವರ್ಗವನ್ನು ಹೊಂದಲು ಅವಕಾಶವಿದೆ, ಅಂತೆಯೇ ಸಂವಿಧಾನದ 309 ನೇ ವಿಧಿಯೂ ರಾಜ್ಯ ಸೇವೆಗಳನ್ನು ಹೊಂದಲು ರಾಜ್ಯಗಳಿಗೆ ಅವಕಾಶ ಕಲ್ಪಿಸಿದೆ. ರಾಜ್ಯಪಟ್ಟಿಯಲ್ಲಿ ಹಲವಾರು ವಿಷಯಗಳಾಗಿ ನಮೂದಿಸಲಾಗಿದೆ; ಅವುಗಳೆಂದರೆ ಕಂದಾಯ, ಪೋಲಿಸ್, ಮಾರಾಟ ತೆರಿಗೆ, ಭೂಕಂದಾಯ, ಅರಣ್ಯಗಳು ಮುಂತಾದ ವಿಷಯಗಳಿಗೆ ಸಂಬಂಧಿಸಿದ ಸೇವೆಗಳನ್ನು ಆಯಾ ರಾಜ್ಯಗಳು ನೇಮಿಸಿಕೊಂಡ ಸಿಬ್ಬಂದಿಗಳು ನಿರ್ವಹಿಸುತ್ತಾರೆ ರಾಜ್ಯ ಸೇವೆಗೆ ನೇಮಕ ಮಾಡಿಕೊಂಡಿರುವ ರೀತಿ ಮತ್ತು ವಿಧಾನಗಳು, ಸೇವಾ ನಿಬಂಧನೆಗಳು, ವೇತನ ಮತ್ತು ಭತ್ಯೆಗಳು ಏಕರೀತಿಯಲ್ಲಿರದೇ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತಾ ಹೋಗುತ್ತದೆ.

ರಾಜ್ಯ ಸರ್ಕಾರಗಳು, ಕೇಂದ್ರ ಮಾದರಿಯಲ್ಲಿ ಆಡಳಿತ ಸೇವೆಯು ಜಾರಿಗೊಳಿಸುವ ಜವಾಬ್ದಾರಿ ಮತ್ತು ಆಸಕ್ತಿಯನ್ನು ತೆಗೆದುಕೊಂಡಿವೆ. ಅದಕ್ಕಾಗಿ ಸಮರ್ಥ ಅಧಿಕಾರಿಗಳ ಅವಶ್ಯಕತೆಯಿದೆ. ರಾಜ್ಯ ಸೇವೆಗಳಲ್ಲಿರುವವರು ರಾಜ್ಯ ಸರ್ಕಾರದ ನೇರ ಆಡಳಿತದ ನಿಯಂತ್ರಣಕ್ಕೆ ಒಳಪಡುತ್ತಾರೆ.

ರಾಜ್ಯದ ಸೇವೆಗಳನ್ನು ದರ್ಜೆ 1, ದರ್ಜೆ II, ದರ್ಜೆ III, ದರ್ಜೆ IV ಗಳೆಂದು ವರ್ಗೀಕರಿಸಲಾಗಿದೆ. ದರ್ಜೆ I. ದರ್ಜೆ II. ಸೇವೆಯಲ್ಲಿರುವ ಸದಸ್ಯರು ಪತ್ರಾಂಕಿತ ಅಧಿಕಾರಿಗಳಾಗಿರುತ್ತಾರೆ. ದರ್ಜೆ III ಲಿಖಿತ ಸಿಬ್ಬಂದಿ ಮತ್ತು ದರ್ಜೆ IV ರಲ್ಲಿ ಕಾವಲುಗಾರರು. ಸೇವಕರು ಇತ್ಯಾದಿಗಳನ್ನು ಒಳಗೊಂಡಿದೆ.

ಕರ್ನಾಟಕದಲ್ಲಿರುವ ರಾಜ್ಯ ಸೇವೆಗಳು ಈ ಕೆಳಗಿನಂತಿವೆ.

  1. ಕರ್ನಾಟಕ ಆಡಳಿತ ಸೇವೆಗಳು [KAS]
  2. ಕರ್ನಾಟಕ ರಾಜ್ಯ ಆರಕ್ಷಕ ಸೇವೆಗಳು (KPS]
  3. ಕರ್ನಾಟಕ ಅರಣ್ಯ ಸೇವೆಗಳು [KFS)
  4. ಕರ್ನಾಟಕ ಇಂಜಿನಿಯರಿಂಗ್ ಸೇವೆಗಳು.
  5. ಕರ್ನಾಟಕ ಶಿಕ್ಷಣ ಸೇವೆಗಳು [KES]
  6. ಕರ್ನಾಟಕ ಸಹಕಾರಿ ಸೇವೆಗಳು. [KCS]
  7. ಕರ್ನಾಟಕ ಪರಿಶೋಧನಾ ಸೇವೆಗಳು
  8. ಕರ್ನಾಟಕ ಅಧಿಕಾರಿ ಸೇವೆಗಳು
  9. ಕರ್ನಾಟಕ ಮಾರಾಟ ತೆರಿಗೆ ಸೇವೆಗಳು. [KCTS]
  10. ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ಸೇವೆಗಳು ಇನ್ನೂ ಇತರೇ ಸೇವೆಗಳು.
  11. ಕೇಂದ್ರ ಸರ್ಕಾರದ ಸಂಪುಟ ಕಾರ್ಯದರ್ಶಿಯ ಪಾತ್ರವನ್ನು ವಿವರಿಸಿ.

ಪ್ರಧಾನಮಂತ್ರಿಯವರ ನಾಯಕತ್ವವು ರಾಜಕೀಯ ಹಂತದಲ್ಲಿ ಸಂಪುಟ ಸಚಿವಾಲಯದಲ್ಲಿ ಕಾರ್ಯನಿರ್ವಹಿಸಿದರೆ, ಆಡಳಿತದ ಹಂತದಲ್ಲಿ ಸಂಪುಟ ಕಾರ್ಯದರ್ಶಿ ಕರ್ತವ್ಯ ನಿರ್ವಹಿಸುತ್ತಾರೆ.

ಸಂಪುಟ ಕಾರ್ಯದರ್ಶಿಯವರು ರಾಷ್ಟ್ರದ ಆಡಳಿತದಲ್ಲಿ ಪ್ರಮುಖವಾದ ಪಾತ್ರ ನಿರ್ವಹಿಸುತ್ತಾರೆ. ಇವರ ಪ್ರಮುಖವಾದ ಕಾರ್ಯವೆಂದರೆ ಸಚಿವ ಸಂಪುಟದಲ್ಲಿರುವ ಮಂತ್ರಿಗಳಿಗೆ ಸಹಾಯವನ್ನು ಒದಗಿಸಿಕೊಡುವುದಾಗಿದೆ. ಆತನು ಪ್ರಾಥಮಿಕ ಸಂಪುಟ ದರ್ಜೆಯ ಸಚಿವರೊಂದಿಗೆ ಸಂಪರ್ಕವನ್ನು ಹೊಂದಿರಬೇಕು. ಇದರ ಜೊತೆಗೆ ವಿವಿಧ ಇಲಾಖೆಗಳ ಮತ್ತು ಸಚಿವಾಲಯದ ಕಾರ್ಯದರ್ಶಿಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿರಬೇಕು.

ಸಂಪುಟ ಕಾರ್ಯದರ್ಶಿಯು ನಾಗರೀಕ ಸೇವೆಯು ಮುಖ್ಯಸ್ಥನಾಗಿದ್ದು, ಆಡಳಿತ ಸಿಬ್ಬಂದಿಗಳ ಕಾರ್ಯಕ್ಷಮತೆಯು ಉನ್ನತ ಮಟ್ಟದಲ್ಲಿರುವುದನ್ನು ಖಾತರಿ ಪಡಿಸಿಕೊಳ್ಳಬೇಕು. ಈತನು, ರಾಜಕಾರಣಿಗಳು ಮತ್ತು ನಾಗರೀಕ ಸಿಬ್ಬಂದಿಗಳ ನಡುವೆ ಸೇತುವೆಯಂತೆ ಕೆಲಸ ಮಾಡಿದ ಮಾಡಬೇಕು ಹಾಗೂ ಇವರಿಬ್ಬರ ನಡುವಣ ಉಂಟಾಗಬಹುದಾದ ವಿವಾದಗಳನ್ನು ಬಗೆಹರಿಸುವ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ.

ಸಂಪುಟ ಕಾರ್ಯದರ್ಶಿಯು ಸಂಪುಟ ಮತ್ತು ಸಂಪುಟದ ಸಮಿತಿಗಳ ಎಲ್ಲಾ ಸಭೆಗಳಲ್ಲಿಯೂ ಭಾಗವಹಿಸಬೇಕು. ಸಂಪುಟ ಸಭೆಗಳಲ್ಲಿ ಸಭಾ ನಡಾವಳಿಗಳನ್ನು ತೀರ್ಮಾನಗಳನ್ನು ದಾಖಲಿಸಿಕೊಳ್ಳಬೇಕು. ಸಂಪುಟ ಕಾರ್ಯದರ್ಶಿಯು ಸರ್ಕಾರದ ರಹಸ್ಯವನ್ನು ಕಾಪಾಡಬೇಕಾಗುತ್ತದೆ. ಸಚಿವ ಸಂಪುಟದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು ಸರಿಯಾಗಿ ಜಾರಿಗೊಂಡಿದೆಯೇ ಎಂಬುದನ್ನು ಇವರು ಖಾತರಿಪಡಿಸಿಕೊಳ್ಳಬೇಕು.

ಸಂಪುಟ ಕಾರ್ಯದರ್ಶಿಯು ಪ್ರಧಾನಮಂತ್ರಿಯ ಕಣ್ಣು ಮತ್ತು ಕಿವಿಗಳಂತೆ ಕಾರ್ಯ ನಿರ್ವಹಿಸಬೇಕು. ಜೊತೆಗೆ ಕೇಂದ್ರ ಸರಕಾರದ ಅಧಿಕಾರಿಗಳೊಂದಿಗೆ ಯಾವಾಗಲೂ ಸಂಪರ್ಕವನ್ನಿಟ್ಟುಕೊಂಡಿರಬೇಕು. ಯಾವಾಗ ಪ್ರಧಾನ ಮಂತ್ರಿಗಳು ರಾಜೀನಾಮೆ ನೀಡುತ್ತಾರೊ ಆಗ ಎಲ್ಲಾ ನಾಗರೀಕ ಸಿಬ್ಬಂದಿಗಳಂತೆಯೇ ಇವರೂ ಸಹ ಆಡಳಿತದ ಸ್ಥಿರತೆ ಮತ್ತು ನಿರಂತರ ಕಾರ್ಯ ನಿರ್ವಹಣೆಗೆ ಅವಕಾಶ ಒದಗಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಂಪುಟ ಕಾರ್ಯದರ್ಶಿಯ ಸೇವೆಗೆ ಬೆಲೆಕಟ್ಟಲಾಗದು. ಇವರು ರಾಷ್ಟ್ರಪತಿಗಳು, ಉಸ್ತುವಾರಿ ಪ್ರಧಾನ ಮಂತ್ರಿಗಳ ಜೊತೆಗೆ ಅವರ ಸಚಿವ ಸಂಪುಟಕ್ಕೆ ತಿಳುವಳಿಕೆ ನೀಡಬೇಕಾಗುತ್ತದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ ಸಂಪುಟ ಕಾರ್ಯದರ್ಶಿಯು ದೇಶದ ಹಿರಿಯ ನಾಗರೀಕ ಸಿಬ್ಬಂದಿಯಾಗಿರುತ್ತಾನೆ ಇವರ ಅಧಿಕಾರಯುತ ಕಾರ್ಯವು ನಾಗರೀಕ ಸಿಬ್ಬಂದಿಗಳಲ್ಲಿಯೇ ಪ್ರಥಮ ಸ್ಥಾನ ಒದಗಿಸಿಕೊಟ್ಟಿದೆ.

7. ಕೇಂದ್ರ ಸಚಿವಾಲಯದ ಬಗ್ಗೆ ಟಿಪ್ಪಣಿ ಬರೆಯಿರಿ.

ಕೇಂದ್ರ ಸಚಿವಾಲಯವು ಕೇಂದ್ರ ಸರಕಾರದ ಮಂತ್ರಾಲಯ ಮತ್ತು ಇಲಾಖೆಗಳನ್ನು ಒಳಗೊಂಡಿದೆ. ಆಡಳಿತದ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವನ್ನು ವಿವಿಧ ಮಂತ್ರಾಲಗಳು ಮತ್ತು ಇಲಾಖೆಗಳನ್ನಾಗಿ ವಿಭಜಿಸಲಾಗಿದೆ. ಮಂತ್ರಾಲಯ ಮತ್ತು ಇಲಾಖೆಗಳ ಸಮೂಹವೆ ಕೇಂದ್ರ ಸಚಿವಾಲಯ.

ವಿವಿಧ ಖಾತೆಗಳ ರಾಜಕೀಯ ಮುಖ್ಯಸ್ಥರಾಗಿರುವ ಮಂತ್ರಿಗಳಿಗೆ ತಮ್ಮ ಕಾರ್ಯ ಮತ್ತು ಜವಾಬ್ದಾರಿಯನ್ನು ನಿರ್ವಹಿಸಲು ಸಹಾಯ ಮಾಡುವುದು ಸಚಿವಾಲಯದ ಮುಖ್ಯ ಜವಾಬ್ದಾರಿಯಾಗಿದೆ. ಸಚಿವಾಲಯ ಎಂಬ ಪದವು ಕಾರ್ಯದರ್ಶಿಯವರ ಕಛೇರಿ ಎಂಬ ಅರ್ಥವನ್ನು ನೀಡುತ್ತದೆ. ಕಾರ್ಯದರ್ಶಿಯು ಮಂತ್ರಿಯ ಮುಖ್ಯ ಸಲಹೆಗಾರನಾಗಿರುತ್ತಾನೆ. ಕಾರ್ಯದರ್ಶಿಯು ತನ್ನದೇ ಆದ ಕಛೇರಿ ಹಾಗೂ ಸಿಬ್ಬಂದಿಯನ್ನು ಹೊಂದಿರುತ್ತಾನೆ. ವಿವಿಧ ಮಂತ್ರಿಗಳ ನೇತೃತ್ವ ಖಾತೆಗಳು ತಮ್ಮದೇ ಆದ . ಕಾರ್ಯದರ್ಶಿಗಳನ್ನು ಹೊಂದಿರುತ್ತವೆ. ಈ ಎಲ್ಲಾ ಕಾರ್ಯದರ್ಶಿಗಳ ಕಛೇರಿಗಳನ್ನು ಒಟ್ಟಿಗೆ ಸೇರಿಸಿ ಸಚಿವಾಲಯ ಎಂದು ಕರೆಯಲಾಗುತ್ತದೆ. ಮಂತ್ರಿಗಳು, ಇಲಾಖೆಗಳ ರಾಜಕೀಯ ಮುಖ್ಯಸ್ಥರಾಗಿಯೂ ಕಾರ್ಯದರ್ಶಿಗಳು ಆಡಳಿತಾತ್ಮಕ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸುತ್ತಾರೆ.

1. ಆಡಳಿತಾತ್ಮಕ ಅನುಕೂಲತೆಯ ದೃಷ್ಟಿಯಿಂದ ಮಂತ್ರಾಲಯವನ್ನು ಕೆಳಗಿನಂತೆ ವಿಭಾಗಿಸಲಾಗುತ್ತದೆ.

1. ಭಾಗ

ವಿಭಾಗ

ಇಲಾಖೆಯು ಸಚಿವಾಲಯದ ಪ್ರಾಥಮಿಕ ಘಟಕವಾಗಿದೆ. ಪ್ರತಿ ಇಲಾಖೆಯು ಒಬ್ಬ ಕಾರ್ಯದರ್ಶಿಯನ್ನು ಹೊಂದಿರುತ್ತದೆ.

2. ಭಾಗ:

ಸಚಿವಾಲಯದ ಕಾರ್ಯದ ಹೊರೆಯನ್ನು ಆಧರಿಸಿ ಒಂದು ಅಥವಾ ಅದಕ್ಕಿಂತಲೂ ಹೆಚ್ಚಿನ ಭಾಗಗಳನ್ನಾಗಿ ಮಾಡಲಾಗವುದು. ಹೆಚ್ಚುವರಿ ಕಾರ್ಯದರ್ಶಿಯ ಜಂಟಿ ಕಾರ್ಯದರ್ಶಿಯು ಭಾಗದ ಮೇಲೆ ಪ್ರಭಾವವನ್ನು ಹೊಂದಿರುತ್ತದೆ.

3. ವಿಭಾಗ:

ಸಚಿವಾಲಯದ ಕೆಲಸ ಕಾರ್ಯಗಳನ್ನು ಸಮಗ್ರವಾಗಿ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸುವ ಸಲುವಾಗಿ ಸಚಿವಾಲಯದ ಭಾಗಗಳನ್ನು ವಿಭಾಗಗಳಾಗಿ ವಿಂಗಡಿಸಲಾಗಿದೆ. ಉಪಕಾರ್ಯದರ್ಶಿಗಳು ಇದರ ಮುಖ್ಯಸ್ಥರಾಗಿರುತ್ತಾರೆ.

ವಿಭಾಗಗಳನ್ನು ಶಾಖೆಗಳನ್ನಾಗಿ ವಿಭಜಿಸಲಾಗಿದೆ

ಒಂದು ಶಾಖೆಯು ಎರಡು ಉಪ ಶಾಖೆಗಳನ್ನು

ಒಳಗೊಂಡಿರುತ್ತದೆ. ಅಧೀನ ಕಾರ್ಯದರ್ಶಿಗಳ [ಬ್ರಾಂಚ್ಆಫೀಸರ್] ಇದರ ಮುಖ್ಯಸ್ಥರಾಗಿರುತ್ತಾರೆ.

ಶಾಖಾ ವಿಭಾಗವು ಸಹಾಯಕರು ಮೇಲ್ದರ್ಜೆಯ ಮತ್ತು ಕೆಳದರ್ಜೆಯ ಲಿಪಿಕ ನೌಕರರನ್ನು ಒಳಗೊಂಡಿರುತ್ತದೆ.

  1. ಕಾರ್ಯದರ್ಶಿ
  2. ಹೆಚ್ಚುವರಿ ಕಾರ್ಯಗಳು
  3. ಜಂಟಿ ಕಾರ್ಯದರ್ಶಿ
  4. ನಿರ್ದೇಶಕ
  5. ಉಪ ಕಾರ್ಯದರ್ಶಿ
  6. ಅಧೀನ ಕಾರ್ಯದರ್ಶಿ
  7. ರಾಜ್ಯಾಡಳಿತದ ಸ್ವರೂಪವನ್ನು ಬರೆಯಿರಿ.

ಪ್ರತಿಯೊಂದು ರಾಜ್ಯವು ತನ್ನದೇ ಆದ ಸಚಿವಾಲಯವನ್ನು ಹೊಂದಿದೆ. ಇದು ರಾಜ್ಯದ ಆಡಳಿತವು ರಾಜ್ಯಪಾಲರು, ಮುಖ್ಯಮಂತ್ರಿ, ಸಚಿವ ಸಂಪುಟ ಮತ್ತು ಸಚಿವಾಲಯದ ಕಛೇರಿಗಳನ್ನೊಳಗೊಂಡಿದೆ. ಆಡಳಿತದ ಅನುಕೂಲಕ್ಕಾಗಿ ರಾಜ್ಯ ಸರ್ಕಾರದ ಆಡಳಿತ ಸ್ವರೂಪವನ್ನು ಹಲವಾರು ಇಲಾಖೆಗಳಾಗಿ ವಿಂಗಡಿಸಲಾಗಿದೆ.

ರಾಜ್ಯದಲ್ಲಿ ಅಸ್ಥಿತ್ವದಲ್ಲಿರುವ ವಿವಿಧ ಮಂತ್ರಾಲಯ ಹಾಗೂ ಇಲಾಖೆಗಳ ಸಮೂಹವೇ ರಾಜ್ಯ ಸಚಿವಾಲಯ. ಮಂತ್ರಿಗಳು ಸಮೂಹವೇ ರಾಜ್ಯ ಸಚಿವಾಲಯ, ಮಂತ್ರಿಗಳು ಇಲಾಖೆಗಳ ರಾಜಕೀಯ ಮುಖ್ಯಸ್ಥರಾಗಿಯೂ, ಕಾರ್ಯ ದರ್ಶಿಗಳು ಆಡಳಿತಾತ್ಮಕ ಮುಖ್ಯಸ್ಥರಾಗಿಯೂ, ಕಾರ್ಯದರ್ಶಿಯು ಒಂದು ಅಥವಾ ಎರಡು ಇಲಾಖೆಗಳ ಮುಖ್ಯಸ್ಥನಾಗಿರುತ್ತಾನೆ. ಮುಖ್ಯ ಕಾರ್ಯದರ್ಶಿಯು ಸಮಸ್ತ ಸಚಿವಾಲಯದ ಮುಖ್ಯಸ್ಥನಾಗಿರುತ್ತಾನೆ. ಕಾರ್ಯದರ್ಶಿಯು ಇಡೀ ರಾಜ್ಯ ಸರ್ಕಾರಕ್ಕೆ ಕಾರ್ಯದರ್ಶಿಯಾಗಿರುತ್ತಾನೆಯೇ ಯೊರತು ವೈಯಕ್ತಿಕವಾಗಿ ಯಾವುದೇ ಒಬ್ಬ ಮಂತ್ರಿಗೆ ಅಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.

ಸಚಿವಾಲಯವು ರಾಜ್ಯದ ರಾಜಧಾನಿಯಲ್ಲಿ ನೆಲೆಗೊಂಡಿದ್ದು ಸಚಿವರುಗಳ ಕಾರ್ಯಾಲಯ, ಕಾರ್ಯದರ್ಶಿಗಳು, ಇಲಾಖೆಗಳು ಮತ್ತು ವಿಭಾಗಗಳನ್ನು ಒಳಗೊಂಡಿರುತ್ತದೆ. ಸಚಿವಾಲಯವು ಸರ್ಕಾರದ ಅತ್ಯುನ್ನತ ಕಛೇರಿಯಾಗಿದೆ. ಆಡಳಿತದಲ್ಲಿನ ಉದ್ದೇಶ ನಿರಂತರತೆ ಮತ್ತು ಸ್ಥಿರತೆ ಬಗ್ಗೆ ಸಚಿವಾಲಯವು ಖಾತರಿಪಡಿಸುತ್ತದೆ. ಸರ್ಕಾರದ ಚಟುವಟಿಕೆಗಳ ಕಾರ್ಯವಿಧಾನ ಮತ್ತು ತತ್ವಗಳನ್ನು ರೂಪಿಸುವ ಮುಖ್ಯ ಪ್ರಾಧಿಕಾರವಾಗಿದೆ. ರಾಜ್ಯ ಸರ್ಕಾರದ ಮೂರು ಅತ್ಯಗತ್ಯ ಅಂಶಗಳೆಂದರೆ ಸಚಿವರು, ಕಾರ್ಯದರ್ಶಿ ಮತ್ತು ಇಲಾಖಾ ಮುಖ್ಯಸ್ಥರಾಗಿರುತ್ತಾರೆ. ಸಚಿವರ ಅತಿ ಪ್ರಮುಖ ಕಾರ್ಯವೆಂದರೆ ನೀತಿಯ ಆಧಾರದ ಮೇಲೆ ತೀರ್ಮಾನ ಕೈಗೊಳ್ಳುತ್ತಾರೆ. ಕಾರ್ಯದರ್ಶಿಯು ಪೂರಕ ಮಾಹಿತಿಗಳನ್ನು ಒದಗಿಸಿಕೊಡುವುದರ ಜೊತೆಗೆ ಜಾರಿಗೊಳಿಸುವ ವಿಧಾನವನ್ನು ಸೂಚಿಸಿದರೆ, ಇಲಾಖಾ ಮುಖ್ಯಸ್ಥರು ನೀತಿ ನಿರ್ಧಾರಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಾರೆ. ಈ ಕೆಳಕಂಡ ವಿಚಾರಗಳಲ್ಲಿ ಸಚಿವಾಲಯವು ಸಚಿವರಿಗೆ ಸಹಕರಿಸುವ ಪ್ರಾಥಮಿಕ ಜವಾಬ್ದಾರಿಯನ್ನು ಹೊಂದಿದೆ.

  1. ಕಾಲದಿಂದ ಕಾಲಕ್ಕೆ ಶಾಸನಗಳನ್ನು ರಚಿಸುವಿಕೆ ಮತ್ತು ಮಾರ್ಪಾಡಿಸುವಿಕೆ.
  2. ಯೋಜನೆಗಳು ಮತ್ತು ಆಯ ವ್ಯಯ ರಚನೆ.
  3. . ಕೇಂದ್ರ ಮತ್ತು ಇತರ ರಾಜ್ಯಗಳ ಸಮನ್ವಯತೆ.
  4. ಸಂಘಟನಾ ಬಲ ವೃದ್ಧಿಸುವಿಕೆ.
  5. ವಿಧಾನ ಸಭೆಯ ಪ್ರಶ್ನೆಗಳಿಗೆ ಉತ್ತರಿಸುವುದು.

ಸಚಿವಾಲಯವನ್ನು ಅಸಂಖ್ಯಾತ ಆಡಳಿತ ಇಲಾಖೆಗಳಾಗಿ ವಿಂಗಡಿಸಲಾಗಿದೆ. ಕಾರ್ಯದರ್ಶಿ, ಉಪಕಾರ್ಯದರ್ಶಿ ಮತ್ತು ಅಧೀನ ಕಾರ್ಯದರ್ಶಿಗಳನ್ನು ಒಳಗೊಂಡಿದೆ. ಇವರ ಜೊತೆಗೆ ವಿಶೇಷ, ಅಪರ ಮತ್ತು ಜಂಟಿ ಕಾರ್ಯದರ್ಶಿಗಳೂ ಸಹ ಸಚಿವಾಲಯದ ಕೆಲವು ಇಲಾಖೆಗಳಲ್ಲಿರುತ್ತಾರೆ. ಮುಖ್ಯ ಕಾರ್ಯದರ್ಶಿಯನ್ನು ಹೊರತುಪಡಿಸಿ ಸಚಿವಾಲಯದ ಅಧಿಕಾರಿಗಳು ನಿರ್ದಿಷ್ಟ ಅವಧಿಗೆ ನೇಮಕವಾಗುತ್ತಾರೆ.

9. ಮುಖ್ಯಕಾರ್ಯದರ್ಶಿಯ ಕರ್ತವ್ಯದ ಬಗ್ಗೆ ಟಿಪ್ಪಣಿ ಬರೆಯಿರಿ.

ಪ್ರತಿ ರಾಜ್ಯ ಸರ್ಕಾರದಲ್ಲಿಯೂ ಮುಖ್ಯ ಕಾರ್ಯದರ್ಶಿಯು ಸಚಿವಾಲಯದ ಮುಖ್ಯಸ್ಥನಾಗಿರುತ್ತಾನೆ. ಈತನು ಆಡಳಿತಾತ್ಮಕ ವ್ಯವಸ್ಥೆಯ ಜವಾಬ್ದಾರಿಯನ್ನು ಹೊಂದಿರುತ್ತವೆ. ಸಚಿವಾಲಯದ ಎಲ್ಲಾ ಇಲಾಖೆಗಳು ಈತನ ಅಧಿಕಾರ ವ್ಯಾಪ್ತಿಗೆ ಬರುತ್ತವೆ.

ಮುಖ್ಯ ಕಾರ್ಯದರ್ಶಿಯು ಈ ಕೆಳಗಿನ ಕಾರ್ಯಗಳನ್ನು ನಿರ್ವಹಿಸುತ್ತಾನೆ.

ಮುಖ್ಯಮಂತ್ರಿಗೆ ಸಲಹೆಯನ್ನು ನೀಡುವುದು :

ಮುಖ್ಯ ಕಾರ್ಯದರ್ಶಿಯು ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗೆ ಸಲಹೆ ನೀಡುತ್ತಾರೆ. ಉನ್ನತ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯು ಮುಖ್ಯ ಕಾರ್ಯದರ್ಶಿಯೊಂದಿಗೆ ಸಮಾಲೋಚನೆ ಮಾಡುತ್ತಾರೆ.

ಸಚಿವ ಸಂಪುಟದ ಕಾರ್ಯದರ್ಶಿ :

ಮುಖ್ಯ ಕಾರ್ಯದರ್ಶಿಯು ರಾಜ್ಯ ಸಚಿವ ಸಂಪುಟದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಾನೆ. ಇವರು ಸಚಿವ ಸಂಪುಟದ ಸಭೆಗಳ ಕಾರ್ಯ ಕಲಾಪಗಳ ಪಟ್ಟಿ ಸಿದ್ದ ಪಡಿಸುವುದಲ್ಲದೇ ಸಚಿವ ಸಂಪುಟದ ನಿರ್ಧಾರಗಳನ್ನು ದಾಖಲಿಸುತ್ತಾರೆ.

ನಾಗರೀಕ ಸೇವಾವರ್ಗದ ಮುಖ್ಯಸ್ಥ :

ಇವರು ರಾಜ್ಯ ನಾಗರೀಕ ಸೇವಾವರ್ಗದ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸುತ್ತಾರೆ. ಇವರು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ನೇಮಕಾತಿ, ವರ್ಗಾವಣೆ, ಬಡ್ತಿ ಮುಂತಾದ ವಿಷಯಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ.

ಮುಖ್ಯ ಸಮನ್ವಯಕಾರ :

ಇವರು ರಾಜ್ಯಾಡಳಿತದ ಮುಖ್ಯ ಸಮನ್ವಯ ಕಾರರಾಗಿದ್ದಾರೆ. ಇವರು ಅಂತರ್ ಇಲಾಖೆಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಇಲಾಖಾ ಕಾರ್ಯದರ್ಶಿಗಳಿಗೆ ಸಲಹೆ ನೀಡುತ್ತಾರೆ. ಇವರು ಇಲಾಖಾ ವಿವಾದಗಳನ್ನು ಇತ್ಯರ್ಥಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ಕೆಲವು ಇಲಾಖೆಗಳ ಮುಖ್ಯಸ್ಥರು :

ಇವರು ಬಹುತೇಕ ರಾಜ್ಯಗಳಲ್ಲಿ ಸಾಮಾನ್ಯ ಆಡಳಿತ ಇಲಾಖೆ, ಸಿಬ್ಬಂದಿ ಇಲಾಖೆ, ಯೋಜನಾ ಇಲಾಖೆ, ಆಡಳಿತ ಸುಧಾರಣಾ ಇಲಾಖೆ ಇವುಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಾರೆ.

ಬಿಕ್ಕಟ್ಟು ನಿವಾರಕ :

ಪ್ರವಾಹ, ಭೂಕಂಪ, ಕೋಮು ಗಲಭೆ, ಬರ ಮುಂತಾದ ನೈಸರ್ಗಿಕ ಬಿಕ್ಕಟ್ಟುಗಳನ್ನು ನಿವಾರಿಸುವಲ್ಲಿ ಮುಖ್ಯ ಕಾರ್ಯದರ್ಶಿಯ ಪಾತ್ರವು ನಿರ್ಣಾಯಕವಾದುದು. ಇಂತಹ ಸಂದರ್ಭಗಳಲ್ಲಿ ಮುಖ್ಯ ಕಾರ್ಯದರ್ಶಿಯು ಪರಿಹಾರ ಕಾರ್ಯಗಳಲ್ಲಿ ತೊಡಗಿರುವ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡುತ್ತಾರೆ.

ಇತರ ಕಾರ್ಯಗಳು:

ಮೇಲಿನ ಪ್ರಮುಖ ಕಾರ್ಯಗಳಲ್ಲದೆ ಈ ಕೆಳಗಿನ ಇತರ ಕಾರ್ಯಗಳನ್ನು ಮುಖ್ಯ ಕಾರ್ಯದರ್ಶಿಯು ನಿರ್ವಹಿಸುತ್ತಾರೆ.

ಇತರೆ ಕಾರ್ಯದರ್ಶಿಗಳ ವ್ಯಾಪ್ತಿಗೆ ಒಳಪಡದಿರುವ ವಿಷಯಗಳನ್ನು ನಿಭಾಯಿಸುವುದು.

ಮಂತ್ರಿ ಮಂಡಳಿಗಳ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುವುದು.

ರಾಜ್ಯ ಸಚಿವಾಲಯದ ಕಾರ್ಯ ನಿರ್ವಹಣೆಯ ಮೇಲ್ವಿಚಾರಣೆ ನಡೆಸುವುದು.

ತನ್ನ ರಾಜ್ಯ ಸರ್ಕಾರ ಇತರೆ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರಗಳೊಡನೆ ಸಂಪರ್ಕವನ್ನು ಕಾಯ್ದುಕೊಳ್ಳುವುದು.

ಮುಖ್ಯ ಕಾರ್ಯದರ್ಶಿಗಳ ಸಭೆಗೆ ಹಾಜರಾಗುವುದು.

ನಿರ್ವಹಿಸುವುದು. ರಾಜ್ಯ ಸರ್ಕಾರದ ವಕ್ತಾರನಾಗಿ ಕಾರ್ಯ

ರಾಜ್ಯಪಾಲರ ಆಳ್ವಿಕೆಯ ಸಂದರ್ಭದಲ್ಲಿ ರಾಜ್ಯಪಾಲರಿಗೆ ಸಲಹೆ ನೀಡುವುದು.

ರಾಷ್ಟ್ರೀಯ ಅಭಿವೃದ್ದಿ ಮಂಡಳಿಯ ಸಭೆಗಳಿಗೆ ಹಾಜರಾಗುವುದು.

ರಾಜ್ಯ ಸರ್ಕಾರದ ಪ್ರಧಾನ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುವುದು.

1. ಜಿಲ್ಲಾಧಿಕಾರಿಯ ಐದು ಕಾರ್ಯಗಳನ್ನು ತಿಳಿಸಿ.

  1. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ದಂಡಾಧಿಕಾರ:

ಜಿಲ್ಲಾಧಿಕಾರಿಗಳು ಜಿಲ್ಲೆಯ ದಂಡಾಧಿಕಾರಿಗಳಾಗಿದ್ದು, ಜಿಲ್ಲೆಯಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸುವುದರ ಜೊತೆಗೆ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಾರೆ.

  1. ಕಂದಾಯ ಕಾರ್ಯಗಳು:

ಇದರಲ್ಲಿ ಭೂ ದಾಖಲೆಗಳ ನಿರ್ವಹಣೆ, ಭೂ ಕಂದಾಯದ ನಿರ್ಧಾರ ಮತ್ತು ಸಂಗ್ರಹಣೆ, ಇನ್ನಿತರ ಸಾರ್ವಜನಿಕ ಬಾಕಿ, ವಸೂಲಾತಿ ಮತ್ತು ವ್ಯಾಜ್ಯಗಳು ಸೇರಿವೆ. ಈ ಕಾರ್ಯಗಳಿಗೆ ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರ್‌ರವರು ಸಂಪೂರ್ಣ ಮೇಲ್ವಿಚಾರಕರಾಗಿ ಜಿಲ್ಲಾಧಿಕಾರಿಗಳ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಾರೆ.

  1. ಅಭಿವೃದ್ಧಿ ಕಾರ್ಯಗಳು:

ಇದು ಸಾರ್ವಜನಿಕ ಆರೋಗ್ಯ, ಶಿಕ್ಷಣ ಸಮಾಜ ಕಲ್ಯಾಣ [ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ] ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಮತ್ತು ಸಮಾಜದ ದುರ್ಬಲ ವರ್ಗದವರ ರಕ್ಷಣೆಗಳು ಸೇರಿವೆ.

  1. ನಿಯಂತ್ರಣ ಕಾರ್ಯಗಳು:

ಇದು ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಅವಶ್ಯಕ ವಸ್ತುಗಳ ಹಂಚಿಕೆ ಮತ್ತು ನಿಯಂತ್ರಣಗಳನ್ನು ಒಳಗೊಂಡಿದೆ. ಇದರ ಜೊತೆಗೆ ಅಬಕಾರಿ, ಸ್ಟಾಂಪ್ ಮತ್ತು ನೋಂದಣಿಗಳ ನಿಯಂತ್ರಣವೂ ಸೇರಿದೆ.

  1. ಮತದಾನದ ಕಾರ್ಯಗಳು:

ಜಿಲ್ಲಾಧಿಕಾರಿಯು ಜಿಲ್ಲೆಯ ಚುನಾವಣಾಧಿಕಾರಿಯಾಗಿ -ರುತ್ತಾರೆ ಮತ್ತು ಅವರು ಲೋಕಸಭಾ, ರಾಜ್ಯಸಭಾ, ರಾಜ್ಯದ ವಿಧಾನಸಭಾ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಉಸ್ತುವಾರಿಯನ್ನು ಹೊಂದಿರುತ್ತಾರೆ.

ಇತರೆ ಕಾರ್ಯಗಳು:

  1. ಪುರಸಭಾ [ಪೌರ ಆಡಳಿತ]
  2. ವಿಪತ್ತು ನಿರ್ವಹಣೆ
  3. ಸಾರ್ವಜನಿಕ ಕುಂದುಕೊರತೆಗಳು
  4. ಭೂ ಸ್ವಾಧೀನ
  5. ಗಣತಿ
  6. ಕೇಂದ್ರ ಲೋಕಸೇವಾ ಆಯೋಗದ ರಚನೆ ಬಗ್ಗೆ ಬರೆಯಿರಿ.

ಭಾರತ ಸಂವಿಧಾನದ 315 ನೇ ವಿಧಿಯನ್ವಯ ಕೇಂದ್ರ ಲೋಕಸೇವಾ ಆಯೋಗವನ್ನು ಸ್ಥಾಪಿಸಿದೆ. ಈ ವಿಧಿಯ ಪ್ರಕಾರ ಕೇಂದ್ರಕ್ಕೆ ಸಂಬಂಧಿಸಿದಂತೆ ಲೋಕಸೇವಾ ಆಯೋಗ ಮತ್ತು ಪ್ರತಿ ರಾಜ್ಯಗಳಿಗೂ ಸಹ ಒಂದೊಂದು ಲೋಕಸೇವಾ ಆಯೋಗಗಳನ್ನು ಸ್ಥಾಪಿಸಲಾಗಿದೆ.

ಸದಸ್ಯತ್ವ:

ಪ್ರಸ್ತುತ ಕೇಂದ್ರ ಲೋಕಸೇವಾ ಆಯೋಗವು ಒಬ್ಬ ‘ಅಧ್ಯಕ್ಷ ಮತ್ತು 10 ಮಂದಿ ಸದಸ್ಯರಿಂದ ಕೂಡಿದೆ. ಈ ಆಯೋಗದ ಅಧ್ಯಕ್ಷ ಮತ್ತು ಸದಸ್ಯರು ರಾಷ್ಟ್ರಪತಿಯಿಂದ ನೇಮಕಗೊಂಡಿರುತ್ತಾರೆ. ಆಯೋಗದ ಒಟ್ಟು ಸದಸ್ಯರಲ್ಲಿ ಕನಿಷ್ಟ ಪಕ್ಷ 10 ವರ್ಷಗಳ ಆಡಳಿತಾತ್ಮಕ ಸೇವಾನುಭವವನ್ನು ಹೊಂದಿರಬೇಕು. ಇನ್ನುಳಿದ ಅರ್ಧದಷ್ಟು ಸದಸ್ಯರ ವಿದ್ಯಾರ್ಹತೆಯ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ.

ಅಧಿಕಾರಾವಧಿ:

ಆಯೋಗದ ಸದಸ್ಯನು ಅವನು ವರದಿ ಮಾಡಿಕೊಳ್ಳುವ ದಿನದಿಂದ 6 ವರ್ಷಗಳವರೆಗೆ ಅಥವಾ ಅವನಿಗೆ 65 ವರ್ಷ ವಯೋಮಿತಿವರೆಗೆ ಅಥವಾ ಇವೆರಡರಲ್ಲಿ ಯಾವುದು

12. ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಬಗ್ಗೆ బరియిరి.

ಕರ್ನಾಟಕ ಲೋಕಸೇವಾ ಆಯೋಗವು ಸ್ಥಾಪನೆಗೊಂಡು ಕಾಲದಿಂದ ಕಾಲಕ್ಕೆ ರಾಜ್ಯದ ರಾಜ್ಯಪಾಲರು ನಿರ್ಧರಿಸಲ್ಪಟ್ಟು ಅಧ್ಯಕ್ಷ ಮತ್ತು ಇತರೆ ಸದಸ್ಯರನ್ನು ಹೊಂದಿದೆ.

ನೇಮಕಾತಿ:

ಕರ್ನಾಟಕದ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರುಗಳ ಕರ್ನಾಟಕ ರಾಜ್ಯದ ರಾಜ್ಯಪಾಲರಿಂದ ನೇಮಕಗೊಳ್ಳುತ್ತಾರೆ. ರಾಜ್ಯ ಸಚಿವ ಸಂಪುಟ ಸಲ್ಲಿಸಿದ ಪ್ರತಿಭಾವಂತರ ಶಿಫಾರಸ್ಸಿನ ಪಟ್ಟಿಯಿಂದ ಸದಸ್ಯರನ್ನು ಆಯ್ಕೆ ಮಾಡಬೇಕಾಗುತ್ತೆ.

ಅಧಿಕಾರಾವಧಿ:

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು 6 ವರ್ಷಗಳ ಅವಧಿಗೆ ಅಥವಾ ಅವರಿಗೆ 62 ವರ್ಷ ವಯೋಮಿತಿಯವರೆಗೆ ಅಥವಾ ಇವರೆಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೇಮಕಗೊಳ್ಳುತ್ತಾರೆ. ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯನಾಗಿ ನಿವೃತ್ತಿ ಹೊಂದಿದ ಮೇಲೆ ಕರ್ನಾಟಕ ಲೋಕಸೇವಾ ಆಯೋಗದ ಕಛೇರಿಯಲ್ಲಿ ಪುನ‌ರ್ ನೇಮಕಕ್ಕೆ ಅರ್ಹರಲ್ಲ.

ಸಂವಿಧಾನದ 319 ನೇ ವಿಧಿಯು ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷನು ತನ್ನ ನಿವೃತ್ತಿಯ ನಂತರ ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಅಥವಾ ಯಾವುದೇ ಇತರ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷನಾಗಿ ನೇಮಕವಾಗಿರಲು ಅರ್ಹತೆ ಹೊಂದಿರುತ್ತಾನೆ.

ವೇತನ:

ರಾಜ್ಯ ಆಯೋಗದ ಅಧ್ಯಕ್ಷ ಮತ್ತು ಇತರೆ ಸದಸ್ಯರುಗಳ ವೇತನ ಮತ್ತು ಭತ್ಯೆಗಳು ರಾಜ್ಯ ಶಾಸನ ಸಭೆಯಿಂದ ಕಾಲದಿಂದ ಕಾಲಕ್ಕೆ ನಿರ್ಧರಿಸಲ್ಪಡುತ್ತದೆ.

ವಜಾಗೊಳಿಸುವಿಕೆ:

ರಾಜ್ಯ ಆಯೋಗದ ಅಧ್ಯಕ್ಷರು ಮತ್ತು ಇತರೆ ಸದಸ್ಯರುಗಳನ್ನು ವಜಾಗೊಳಿಸುವಿಕೆಗೆ ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ವಜಾಗೊಳಿಸುವಿಕೆಗೆ ಇರುವ ವಿಧಾನವನ್ನು ಅನುಸರಿಸಲಾಗುತ್ತದೆ.

1. ಕಾರ್ಯಗಳು:

ರಾಜ್ಯ ಸೇವೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತದೆ.

ನಾಗರೀಕ ಸಿಬ್ಬಂದಿಗಳನ್ನು ಒಂದು ಸೇವೆಯಿಂದ ಮತ್ತೊಂದು ಸೇವೆಗೆ ಬಡ್ತಿ ಮತ್ತು ವರ್ಗಾಣೆಗಾಗಿ ನೇಮಕಾತಿ ನಿಯಮಗಳನ್ನು ರಚಿಸುತ್ತದೆ.

ರಾಜ್ಯದಲ್ಲಿನ ನಾಗರೀಕ ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ತಿಳುವಳಿಕೆ ನೀಡುತ್ತದೆ.

ತನ್ನ ಕರ್ತವ್ಯದ ಬಗ್ಗೆ ರಾಜ್ಯದ ರಾಜ್ಯಪಾಲರಿಗೆ ವಾರ್ಷಿಕ ವರದಿಯನ್ನು ನೀಡುತ್ತದೆ.

IV. ಹತ್ತು ಅಂಕದ ಪ್ರಶ್ನೆಗಳು :

1. ಭಾರತದ ನಾಗರೀಕ ಸೇವಾ ವರ್ಗದ ಅರ್ಥ ಮತ್ತು ಲಕ್ಷಣಗಳನ್ನು ತಿಳಿಸಿ.

ನಾಗರೀಕ ಸೇವೆ ಎಂದರೆ, ನಾಗರೀಕ ವರ್ಗವೆಂದರೆ, ವಿವಿಧ ಇಲಾಖೆಯ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಾಮಾನ್ಯ ಸಿಬ್ಬಂದಿ ವರ್ಗವಾಗಿರುತ್ತದೆ.

ಲಕ್ಷಣಗಳು:

1.ವೃತ್ತಿ ನಿರತ ವರ್ಗ :

ನಾಗರೀಕ ಸೇವೆಯೂ ಕೌಶಲ್ಯತೆಯುಳ್ಳ ಖಾಯಂ ಆದ ಮತ್ತು ಸಂಭಾವನೆ ಪಡೆಯುವ ಅಧಿಕಾರಿಗಳ ವೃತ್ತಿ ನಿರತ ಸಮೂಹದಿಂದ ಕೂಡಿದೆ. ಇದೊಂದು ಪೂರ್ಣ ಸಮಯದ ಮತ್ತು ನಿರಂತರ ಸೇವೆಯಾಗಿದೆ.

2. ಅಧಿಕಾರ ಶ್ರೇಣಿ ಪದ್ದತಿ:

ನಾಗರೀಕ ಸೇವಾ ವರ್ಗದಲ್ಲಿ ಅಧಿಕಾರಿಗಳನ್ನು ವಿವಿಧ ಶ್ರೇಣಿಗಳಾಗಿ ವಿಂಗಡಿಸಿ ಒಂದು ನಿಯಮದಡಿ ತರುವುದಾಗಿದೆ.

3. ರಾಜಕೀಯ ತಾಟಸ್ಥ್ಯ :

ನಾಗರೀಕ ಸಿಬ್ಬಂದಿ ಯಾವುದೇ ರಾಜಕೀಯ ಚಟುವಟಿಕೆಗಳಿಂದ ದೂರವಿರಬೇಕು ಮತ್ತು ಅಧಿಕಾರದಲ್ಲಿದ್ದ ರಾಜಕೀಯ ಪಕ್ಷಗಳು ಬದಲಾಗುವಂತಹ ಸಂದರ್ಭದಲ್ಲಿಯೂ ಸಹ ತನ್ನ ಕರ್ತವ್ಯಕ್ಕೆ ಯಾವುದೇ ಧಕ್ಕೆಯಾಗದಂತೆ ನಿರ್ವಹಿಸಬೇಕು.

4. ಅನಾಮಕತ್ವ :

ನಾಗರೀಕ ಸಿಬ್ಬಂದಿಗಳು ತೆರೆಯ ಮರೆಯಲ್ಲಿ ಕೆಲಸ ಮಾಡುವಂತಿರಬೇಕು. ಮತ್ತು ಅವರು ಸಚಿವರಿಗೆ ಕೆಲಸ ಮಾಡಿದರೂ ಸಹ ಅನಾಮಕತ್ವ ಸಿಬ್ಬಂದಿಯಾಗಿ ಉಳಿಯಬೇಕಾಗುತ್ತದೆ. ಒಳ್ಳೆಯ ಕೆಲಸಕ್ಕಾಗಿ ಪ್ರಶಂಸೆ ಅಥವಾ ಏನಾದರೂ ಅಸಂಭವಗಳು ನಡೆದರೂ ಅದು ಸಚಿವರಿಗೆ ಅನ್ವಯವಾಗುತ್ತದೆಯೇ ವಿನಃ ನಾಗರೀಕ ಸಿಬ್ಬಂದಿಗಳಿಗಲ್ಲ.

1. ಮೊದಲು ಬರುತ್ತದೆಯೋ ಅಲ್ಲಿಯವರೆಗೆ ಅಧಿಕಾರದಲ್ಲಿರುತ್ತಾನೆ.

2. ಆಯೋಗದ ಅಧ್ಯಕ್ಷ ಅಥವಾ ಒಬ್ಬ ಸದಸ್ಯನು ಅವನು ನಿವೃತ್ತಿಯ ನಂತರ ಪುನರ್ ನೇಮಕಾತಿಗೆ ಅರ್ಹನಿರುವುದಿಲ್ಲ.

3. ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರೂ ಸಹ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಹುದ್ದೆಗಳ ಮರುನೇಮಕಾತಿಗೆ ಅರ್ಹರಿರುವುದಿಲ್ಲ.

4. ಆದರೂ ಕೇಂದ್ರ ಲೋಕಸೇವಾ ಆಯೋಗದ ಸದಸ್ಯನೊಬ್ಬನನ್ನು ಕೇಂದ್ರ ಲೋಕಸೇವಾ ಅಥವಾ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷನಾಗಿ ನೇಮಕ ಮಾಡಿಕೊಳ್ಳಬಹುದು.

ವೇತನ ಮತ್ತು ಸೇವಾಸ್ಥಿತಿಗಳು:

ಆಯೋಗದ ಅಧ್ಯಕ್ಷ ಮತ್ತು ಸದಸ್ಯರುಗಳಿಗೆ ಸರ್ಕಾರದ ಅತ್ಯುನ್ನತ ದರ್ಜೆಯ ಅಧಿಕಾರಿಗಳಿಗೆ ಹೋಲಿಸಿದಾಗ ಹೆಚ್ಚಿನ ವೇತನವನ್ನು ನೀಡಲಾಗುತ್ತಿದೆ. ಅವರ ಸೇವಾಸ್ಥಿತಿಗಳು ಸಹ ರಾಷ್ಟ್ರಪತಿಗಳಿಂದ ನಿರ್ಧರಿಸಲ್ಪಡುತ್ತದೆ.

ವಜಾಗೊಳಿಸುವಿಕೆ:

ಕೆಲವು ಲೋಕಸೇವಾ ಆಯೋಗದ ಸದಸ್ಯರನ್ನು ಅವರ ದುರ್ನಡತೆಯ ಆಧಾರದ ಮೇಲೆ ಸರ್ವೋಚ್ಚ ನ್ಯಾಯಾಲಯದ ವಿಚಾರಣೆ ಮುಗಿದ ನಂತರ ರಾಷ್ಟ್ರಪತಿಗಳ ಆದೇಶದ ಮೇಲೆ ಮಾತ್ರ ಅವರನ್ನು ಸದಸ್ಯತ್ವದಿಂದ ವಜಾಗೊಳಿಸಬಹುದು.

ಕಾರ್ಯಗಳು:

ಭಾರತ ಸಂವಿಧಾನದ 320 ನೇ ವಿಧಿಯ ಕೇಂದ್ರ ಲೋಕಸೇವಾ ಆಯೋಗದ ಕಾರ್ಯಗಳನು ನಿರೂಪಿಸಿದರೆ, 321 ನೇ ವಿಧಿಯು ಕಾರ್ಯಗಳನ್ನು ತಿಳಿಸುತ್ತದೆ.

ಕೇಂದ್ರ ಮತ್ತು ಅಖಿಲ ಭಾರತದ ಸೇವೆಗಳಿಗೆ ನೇಮಕ ಮಾಡಲು ಪರೀಕ್ಷೆಗಳನ್ನು ನಡೆಸುವುದು.

ಎರಡು ಅಥವಾ ಹೆಚ್ಚಿನ ರಾಜ್ಯಗಳಿಗೆ ಬೇಡಿಕೆಯ ಮೇಲೆ, ವಿಶೇಷವಾಗಿ ವಿದ್ಯಾರ್ಹತೆಯನ್ನು ಆಧರಿಸಿ ಯಾವುದೇ ಸೇವೆಗಳಿಗೆ ಅಗತ್ಯವಿರುವಷ್ಟು ಜಂಟಿ ನೇಮಕಾತಿಯನ್ನು ಮಾಡುವುದು.

ಸಂಸತ್ತಿನ ಕಾಯಿದೆಯಲ್ಲಿ ಒದಗಿಸಿರುವ ಹೆಚ್ಚುವರಿ ಕಾರ್ಯಗಳು ಕೈಗೊಳ್ಳುವುದು.

ತಮ್ಮ ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದ ವಾರ್ಷಿಕ ವರದಿಯನ್ನು ರಾಷ್ಟ್ರಪತಿಗೆ ಸಲ್ಲಿಸುವುದು.

ನಿಷ್ಪಕ್ಷಪಾತತೆ :

ನಾಗರೀಕ ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುವಾಗ ಯಾವುದೇ ಗುಂಪು ಅಥವಾ ಸಮಾಜದ ಯಾವುದೇ ವರ್ಗಕ್ಕೆ ವಿಶೇಷ ಪ್ರಾತಿನಿಧ್ಯ ಅಥವಾ ಕಾಳಜಿಯನ್ನು ಅಭಿವ್ಯಕ್ತಗೊಳಿಸದೇ ನಿಷ್ಪಕ್ಷಪಾತವಾಗಿ ಕಾನೂನನ್ನು ಪಾಲಿಸಬೇಕಾಗುತ್ತದೆ.

ಸೇವಾ ಮನೋಭಾವ :

ಅವರು ಸಮಾಜ ಕಲ್ಯಾಣಕ್ಕೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಸಾರ್ವಜನಿಕರಿಗಾಗಿ ಸೇವೆ ಮಾಡುವ ಮನಸ್ಸು ಮತ್ತು ಹಂಬಲವನ್ನು ಹೊಂದಿರಬೇಕೇ ವಿನಃ ಯಾವುದೇ ಪ್ರಾಧಿಕಾರಕ್ಕಲ್ಲ.

ಖಾಯಂ [ಶಾಶ್ವತ]

ನಾಗರೀಕ ಸಿಬ್ಬಂದಿಗಳನ್ನು ಖಾಯಂ ಕಾರ್ಯಾಂಗವೆಂದು ಕರೆಯಲಾಗಿದೆ. ಅವರು ತಾವು ನೇಮಕವಾದಾಗಿನಿಂದ ನಿವೃತ್ತಿ ಹೊಂದುವ ವಯೋಮಾನದವರೆಗೂ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಕೇಂದ್ರ ಸರ್ಕಾರ ಮತ್ತು ಕರ್ನಾಟಕ ರಾಜ್ಯದಲ್ಲಿಯೂ ಸಹ ನಿವೃತ್ತಿಯ ವಯಸ್ಸು 60 ವರ್ಷಗಳು ಆದರೂ ಸಹ ನಿಯಮ ರೀತ್ಯ ಶಿಸ್ತಿನ ಕ್ರಮವನ್ನು ಜಾರಿಗೊಳಿಸುತ್ತದೆಯಾದರೂ ಸೇವೆಗೆ ಭದ್ರತೆಯಿದೆ. ಸೇವೆಯಿಂದ ವಜಾ ಮಾಡುವಂತಹ ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.

ಕಾನೂನು ಮಿತಿ :

ಪ್ರತಿಯೊಬ್ಬ ನಾಗರೀಕ ಸಿಬ್ಬಂದಿಯೂ ನಿರ್ದಿಷ್ಟ ಕಾನೂನಿನ ಮಿತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಆತನೇನಾದರೂ ಮಿತಿ ಮೀರಿದರೆ ಸಿಬ್ಬಂದಿಯ ವಿರುದ್ದ ಶಿಸ್ತು ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.

ವಿಶೇಷ ತರಬೇತಿ :

ಅಭ್ಯರ್ಥಿಗಳು ಅತ್ಯುನ್ನತ ಶ್ರೇಣಿಯ ನಾಗರೀಕ ಸೇವೆಗಳಿಗೆ ಆಯ್ಕೆ ಆದರೆ ಆಡಳಿತದಲ್ಲಿ ವಿಶೇಷ ಕೌಶಲ್ಯವನ್ನು ಪಡೆದುಕೊಳ್ಳಲು ಅವರನ್ನು ಸೇವಾವಧಿಯಲ್ಲಿ ತರಬೇತಿಗೆ ನಿಯೋಜಿಸಲಾಗುತ್ತದೆ. ಹೊಸದಾಗಿ ಆಯ್ಕೆಯಾದ ಐ ಎ ಎಸ್ ಅಧಿಕಾರಿಗಳಿಗೆ ತರಬೇತಿ ನೀಡಲು ಮನ್ಸೂರಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿ ಸ್ಥಾಪನೆಗೊಂಡಿದೆ. ಅದರಂತೆ ಹೊಸದಾಗಿ ಆಯ್ಕೆಯಾದ ಐಪಿಎಸ್ ಅಧಿಕಾರಿಗಳಿಗೆ ತರಬೇತಿ ನೀಡಲು ಸರ್ದಾರ್ ವಲ್ಲಬ್‌ಬಾಯಿ

ಪಟೇಲ್ ಪೋಲಿಸ್ ಅಕಾಡೆಮಿಯು ಹೈದರಾಬಾದಿನಲ್ಲಿ ಸ್ಥಾಪನೆಯಾಗಿದೆ. ಕೇಂದ್ರ ಆಡಳಿತದ ಬಗ್ಗೆ ಚರ್ಚಿಸಿ.

ಕೇಂದ್ರ ಸರ್ಕಾರದ ಆಡಳಿತವು ರಾಷ್ಟ್ರಪತಿ, ಪ್ರಧಾನಮಂತ್ರಿ ಸಚಿವ ಸಂಪುಟದ ಸದಸ್ಯರು ಮತ್ತು ಈ ಕಛೇರಿಗಳಿಗಿರುವ ಕಾರ್ಯದರ್ಶಿಗಳನ್ನು ಒಳಗೊಂಡಿದೆ.

ಕೇಂದ್ರ ಸಚಿವಾಲಯ:

ಕೇಂದ್ರ ಸಚಿವಾಲಯವು ಕೇಂದ್ರ ಸರಕಾರದ ಮಂತ್ರಾಲಯ ಹಾಗೂ ಇಲಾಖೆಗಳನ್ನು ಒಳಗೊಂಡಿದೆ. ಆಡಳಿತದ ಅನುಕೂಲಕ್ಕಾಗಿ ಕೇಂದ್ರ ಸರಕಾರವನ್ನು ವಿವಿಧ ಮಂತ್ರಾಲಯಗಳು ಮತ್ತು ಇಲಾಖೆಗಳನ್ನಾಗಿ ವಿಭಜಿಸಲಾಗಿದೆ. ಮಂತ್ರಾಲಯ ಹಾಗೂ ಇಲಾಖೆಗಳ ಸಮೂಹವೇ ಕೇಂದ್ರ ಸಚಿವಾಲಯ. ವಿವಿಧ ಖಾತೆಗಳ ರಾಜಕೀಯ ಮುಖ್ಯಸ್ಥರಾಗಿರುವ ಮಂತ್ರಿಗಳಿಗೆ ತಮ್ಮ ಕಾರ್ಯ ಮತ್ತು ಜವಾಬ್ದಾರಿಯನ್ನು ನಿರ್ವಹಿಸಲು ಸಹಾಯ ಮಾಡುವುದು ಸಚಿವಾಲಯದ ಮುಖ್ಯ ಜವಾಬ್ದಾರಿಯಾಗಿದೆ. ಸಚಿವಾಲಯ ಎಂಬ ಪದವು ಕಾರ್ಯದರ್ಶಿಯವರ ಕಛೇರಿ ಎಂಬ ಅರ್ಥವನ್ನು ನೀಡುತ್ತದೆ. ಕಾರ್ಯದರ್ಶಿಯು ಮಂತ್ರಿಯು ಮುಖ್ಯ ಸಲಹೆಗಾರನಾಗಿರುತ್ತಾನೆ. ಕಾರ್ಯದರ್ಶಿಯು ತನ್ನದೇ ಆದ ಕಛೇರಿ ಹಾಗೂ ಸಿಬ್ಬಂದಿಯನ್ನು ಹೊಂದಿರುತ್ತಾನೆ. ವಿವಿಧ ಮಂತ್ರಿಗಳ ನೇತೃತ್ವದ ಖಾತೆಗಳು ತಮ್ಮದೇ ಆದ ಕಾರ್ಯದರ್ಶಿಗಳನ್ನು ಹೊಂದಿರುತ್ತದೆ. ಈ ಎಲ್ಲಾ ಕಾರ್ಯದರ್ಶಿಗಳ ಕಛೇರಿಗಳನ್ನು ಒಟ್ಟಿಗೆ ಸೇರಿಸಿ ‘ಸಚಿವಾಲಯ’ ಎಂದು ಕರೆಯಲಾಗುತ್ತದೆ. ಮಂತ್ರಿಗಳು ಇಲಾಖೆಗಳ ರಾಜಕೀಯ ಮುಖ್ಯಸ್ಥರಾಗಿಯೂ ಕಾರ್ಯದರ್ಶಿಗಳು ಆಡಳಿತಾತ್ಮಕ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸುತ್ತಾರೆ.

ರಚನೆ:

ಪ್ರತಿಯೊಬ್ಬ ಸಂಪುಟ ದರ್ಜೆಯ ಸಚಿವನು ಒಂದು ಖಾತೆಯ ಆಡಳಿತ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಆ ಮಂತ್ರಿಯು ದೊಡ್ಡ ಖಾತೆಯನ್ನು ಹೊಂದಿದ್ದರೆ ರಾಜ್ಯ ಮಂತ್ರಿ ಮತ್ತು ಉಪ ಮಂತ್ರಿಗಳು ಅವರಿಗೆ ನೆರವಾಗುತ್ತಾರೆ. ಮಂತ್ರಿಯು ಖಾತೆಯ ರಾಜಕೀಯ ಮುಖ್ಯಸ್ಥನಾಗಿರುತ್ತಾನೆ ಒಂದೊಂದು ಖಾತೆಯು ಒಂದೊಂದು ಇಲಾಖೆಯನ್ನು ಹೊಂದಿರುತ್ತದೆ. ದೊಡ್ಡ ಖಾತೆಗಳು ಒಂದಕ್ಕಿಂತ ಹೆಚ್ಚು ಇಲಾಖೆಗಳನ್ನು

ಮೊದಲು ಬರುತ್ತದೆಯೋ ಅಲ್ಲಿಯವರೆಗೆ ಅಧಿಕಾರದಲ್ಲಿರುತ್ತಾನೆ.

ಆಯೋಗದ ಅಧ್ಯಕ್ಷ ಅಥವಾ ಒಬ್ಬ ಸದಸ್ಯನು ಅವನು ನಿವೃತ್ತಿಯ ನಂತರ ಪುನರ್ ನೇಮಕಾತಿಗೆ ಅರ್ಹನಿರುವುದಿಲ್ಲ.

ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರೂ ಸಹ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಹುದ್ದೆಗಳ ಮರುನೇಮಕಾತಿಗೆ ಅರ್ಹರಿರುವುದಿಲ್ಲ.

ಆದರೂ ಕೇಂದ್ರ ಲೋಕಸೇವಾ ಆಯೋಗದ ಸದಸ್ಯನೊಬ್ಬನನ್ನು ಕೇಂದ್ರ ಲೋಕಸೇವಾ ಅಥವಾ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷನಾಗಿ ನೇಮಕ ಮಾಡಿಕೊಳ್ಳಬಹುದು.

ವೇತನ ಮತ್ತು ಸೇವಾಸ್ಥಿತಿಗಳು:

ಆಯೋಗದ ಅಧ್ಯಕ್ಷ ಮತ್ತು ಸದಸ್ಯರುಗಳಿಗೆ ಸರ್ಕಾರದ ಅತ್ಯುನ್ನತ ದರ್ಜೆಯ ಅಧಿಕಾರಿಗಳಿಗೆ ಹೋಲಿಸಿದಾಗ ಹೆಚ್ಚಿನ ವೇತನವನ್ನು ನೀಡಲಾಗುತ್ತಿದೆ. ಅವರ ಸೇವಾಸ್ಥಿತಿಗಳು ಸಹ ರಾಷ್ಟ್ರಪತಿಗಳಿಂದ ನಿರ್ಧರಿಸಲ್ಪಡುತ್ತದೆ.

ವಜಾಗೊಳಿಸುವಿಕೆ:

ಕೆಲವು ಲೋಕಸೇವಾ ಆಯೋಗದ ಸದಸ್ಯರನ್ನು ಅವರ ದುರ್ನಡತೆಯ ಆಧಾರದ ಮೇಲೆ ಸರ್ವೋಚ್ಚ ನ್ಯಾಯಾಲಯದ ವಿಚಾರಣೆ ಮುಗಿದ ನಂತರ ರಾಷ್ಟ್ರಪತಿಗಳ ಆದೇಶದ ಮೇಲೆ ಮಾತ್ರ ಅವರನ್ನು ಸದಸ್ಯತ್ವದಿಂದ ವಜಾಗೊಳಿಸಬಹುದು.

ಕಾರ್ಯಗಳು:

ಭಾರತ ಸಂವಿಧಾನದ 320 ನೇ ವಿಧಿಯ ಕೇಂದ್ರ ಲೋಕಸೇವಾ ಆಯೋಗದ ಕಾರ್ಯಗಳನು ನಿರೂಪಿಸಿದರೆ, 321 ನೇ ವಿಧಿಯು ಕಾರ್ಯಗಳನ್ನು ತಿಳಿಸುತ್ತದೆ.

ಕೇಂದ್ರ ಮತ್ತು ಅಖಿಲ ಭಾರತದ ಸೇವೆಗಳಿಗೆ ನೇಮಕ ಮಾಡಲು ಪರೀಕ್ಷೆಗಳನ್ನು ನಡೆಸುವುದು.

ಎರಡು ಅಥವಾ ಹೆಚ್ಚಿನ ರಾಜ್ಯಗಳಿಗೆ ಬೇಡಿಕೆಯ ಮೇಲೆ, ವಿಶೇಷವಾಗಿ ವಿದ್ಯಾರ್ಹತೆಯನ್ನು ಆಧರಿಸಿ ಯಾವುದೇ ಸೇವೆಗಳಿಗೆ ಅಗತ್ಯವಿರುವಷ್ಟು ಜಂಟಿ ನೇಮಕಾತಿಯನ್ನು ಮಾಡುವುದು.

ಸಂಸತ್ತಿನ ಕಾಯಿದೆಯಲ್ಲಿ ಒದಗಿಸಿರುವ ಹೆಚ್ಚುವರಿ ಕಾರ್ಯಗಳು ಕೈಗೊಳ್ಳುವುದು.

ತಮ್ಮ ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದ ವಾರ್ಷಿಕ ವರದಿಯನ್ನು ರಾಷ್ಟ್ರಪತಿಗೆ ಸಲ್ಲಿಸುವುದು.

ನಿಷ್ಪಕ್ಷಪಾತತೆ :

ನಾಗರೀಕ ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುವಾಗ ಯಾವುದೇ ಗುಂಪು ಅಥವಾ ಸಮಾಜದ ಯಾವುದೇ ವರ್ಗಕ್ಕೆ ವಿಶೇಷ ಪ್ರಾತಿನಿಧ್ಯ ಅಥವಾ ಕಾಳಜಿಯನ್ನು ಅಭಿವ್ಯಕ್ತಗೊಳಿಸದೇ ನಿಷ್ಪಕ್ಷಪಾತವಾಗಿ ಕಾನೂನನ್ನು ಪಾಲಿಸಬೇಕಾಗುತ್ತದೆ.

ಸೇವಾ ಮನೋಭಾವ :

ಅವರು ಸಮಾಜ ಕಲ್ಯಾಣಕ್ಕೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಸಾರ್ವಜನಿಕರಿಗಾಗಿ ಸೇವೆ ಮಾಡುವ ಮನಸ್ಸು ಮತ್ತು ಹಂಬಲವನ್ನು ಹೊಂದಿರಬೇಕೇ ವಿನಃ ಯಾವುದೇ ಪ್ರಾಧಿಕಾರಕ್ಕಲ್ಲ.

ಖಾಯಂ [ಶಾಶ್ವತ]

ನಾಗರೀಕ ಸಿಬ್ಬಂದಿಗಳನ್ನು ಖಾಯಂ ಕಾರ್ಯಾಂಗವೆಂದು ಕರೆಯಲಾಗಿದೆ. ಅವರು ತಾವು ನೇಮಕವಾದಾಗಿನಿಂದ ನಿವೃತ್ತಿ ಹೊಂದುವ ವಯೋಮಾನದವರೆಗೂ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಕೇಂದ್ರ ಸರ್ಕಾರ ಮತ್ತು ಕರ್ನಾಟಕ ರಾಜ್ಯದಲ್ಲಿಯೂ ಸಹ ನಿವೃತ್ತಿಯ ವಯಸ್ಸು 60 ವರ್ಷಗಳು ಆದರೂ ಸಹ ನಿಯಮ ರೀತ್ಯ ಶಿಸ್ತಿನ ಕ್ರಮವನ್ನು ಜಾರಿಗೊಳಿಸುತ್ತದೆಯಾದರೂ ಸೇವೆಗೆ ಭದ್ರತೆಯಿದೆ. ಸೇವೆಯಿಂದ ವಜಾ ಮಾಡುವಂತಹ ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.

ಕಾನೂನು ಮಿತಿ :

ಪ್ರತಿಯೊಬ್ಬ ನಾಗರೀಕ ಸಿಬ್ಬಂದಿಯೂ ನಿರ್ದಿಷ್ಟ ಕಾನೂನಿನ ಮಿತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಆತನೇನಾದರೂ ಮಿತಿ ಮೀರಿದರೆ ಸಿಬ್ಬಂದಿಯ ವಿರುದ್ದ ಶಿಸ್ತು ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.

ವಿಶೇಷ ತರಬೇತಿ :

ಅಭ್ಯರ್ಥಿಗಳು ಅತ್ಯುನ್ನತ ಶ್ರೇಣಿಯ ನಾಗರೀಕ ಸೇವೆಗಳಿಗೆ ಆಯ್ಕೆ ಆದರೆ ಆಡಳಿತದಲ್ಲಿ ವಿಶೇಷ ಕೌಶಲ್ಯವನ್ನು ಪಡೆದುಕೊಳ್ಳಲು ಅವರನ್ನು ಸೇವಾವಧಿಯಲ್ಲಿ ತರಬೇತಿಗೆ ನಿಯೋಜಿಸಲಾಗುತ್ತದೆ. ಹೊಸದಾಗಿ ಆಯ್ಕೆಯಾದ ಐ ಎ ಎಸ್ ಅಧಿಕಾರಿಗಳಿಗೆ ತರಬೇತಿ ನೀಡಲು ಮನ್ಸೂರಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿ ಸ್ಥಾಪನೆಗೊಂಡಿದೆ. ಅದರಂತೆ ಹೊಸದಾಗಿ ಆಯ್ಕೆಯಾದ ಐಪಿಎಸ್ ಅಧಿಕಾರಿಗಳಿಗೆ ತರಬೇತಿ ನೀಡಲು ಸರ್ದಾರ್ ವಲ್ಲಬ್‌ಬಾಯಿ ಪಟೇಲ್ ಪೋಲಿಸ್ ಅಕಾಡೆಮಿಯು ಹೈದರಾಬಾದಿನಲ್ಲಿ ಸ್ಥಾಪನೆಯಾಗಿದೆ.

ಕೇಂದ್ರ ಆಡಳಿತದ ಬಗ್ಗೆ ಚರ್ಚಿಸಿ.

ಕೇಂದ್ರ ಸರ್ಕಾರದ ಆಡಳಿತವು ರಾಷ್ಟ್ರಪತಿ, ಪ್ರಧಾನಮಂತ್ರಿ ಸಚಿವ ಸಂಪುಟದ ಸದಸ್ಯರು ಮತ್ತು ಈ ಕಛೇರಿಗಳಿಗಿರುವ ಕಾರ್ಯದರ್ಶಿಗಳನ್ನು ಒಳಗೊಂಡಿದೆ.

ಕೇಂದ್ರ ಸಚಿವಾಲಯವು ಕೇಂದ್ರ ಸರಕಾರದ ಮಂತ್ರಾಲಯ ಹಾಗೂ ಇಲಾಖೆಗಳನ್ನು ಒಳಗೊಂಡಿದೆ. ಆಡಳಿತದ ಅನುಕೂಲಕ್ಕಾಗಿ ಕೇಂದ್ರ ಸರಕಾರವನ್ನು ವಿವಿಧ ಮಂತ್ರಾಲಯಗಳು ಮತ್ತು ಇಲಾಖೆಗಳನ್ನಾಗಿ ವಿಭಜಿಸಲಾಗಿದೆ. ಮಂತ್ರಾಲಯ ಹಾಗೂ ಇಲಾಖೆಗಳ ಸಮೂಹವೇ ಕೇಂದ್ರ ಸಚಿವಾಲಯ. ವಿವಿಧ ಖಾತೆಗಳ ರಾಜಕೀಯ ಮುಖ್ಯಸ್ಥರಾಗಿರುವ ಮಂತ್ರಿಗಳಿಗೆ ತಮ್ಮ ಕಾರ್ಯ ಮತ್ತು ಜವಾಬ್ದಾರಿಯನ್ನು ನಿರ್ವಹಿಸಲು ಸಹಾಯ ಮಾಡುವುದು ಸಚಿವಾಲಯದ ಮುಖ್ಯ ಜವಾಬ್ದಾರಿಯಾಗಿದೆ.

ಸಚಿವಾಲಯ ಎಂಬ ಪದವು ಕಾರ್ಯದರ್ಶಿಯವರ ಕಛೇರಿ ಎಂಬ ಅರ್ಥವನ್ನು ನೀಡುತ್ತದೆ. ಕಾರ್ಯದರ್ಶಿಯು ಮಂತ್ರಿಯು ಮುಖ್ಯ ಸಲಹೆಗಾರನಾಗಿರುತ್ತಾನೆ. ಕಾರ್ಯದರ್ಶಿಯು ತನ್ನದೇ ಆದ ಕಛೇರಿ ಹಾಗೂ ಸಿಬ್ಬಂದಿಯನ್ನು ಹೊಂದಿರುತ್ತಾನೆ. ವಿವಿಧ ಮಂತ್ರಿಗಳ ನೇತೃತ್ವದ ಖಾತೆಗಳು ತಮ್ಮದೇ ಆದ ಕಾರ್ಯದರ್ಶಿಗಳನ್ನು ಹೊಂದಿರುತ್ತದೆ. ಈ ಎಲ್ಲಾ ಕಾರ್ಯದರ್ಶಿಗಳ ಕಛೇರಿಗಳನ್ನು ಒಟ್ಟಿಗೆ ಸೇರಿಸಿ ‘ಸಚಿವಾಲಯ’ ಎಂದು ಕರೆಯಲಾಗುತ್ತದೆ. ಮಂತ್ರಿಗಳು ಇಲಾಖೆಗಳ ರಾಜಕೀಯ ಮುಖ್ಯಸ್ಥರಾಗಿಯೂ ಕಾರ್ಯದರ್ಶಿಗಳು ಆಡಳಿತಾತ್ಮಕ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸುತ್ತಾರೆ.

ರಚನೆ:

ಪ್ರತಿಯೊಬ್ಬ ಸಂಪುಟ ದರ್ಜೆಯ ಸಚಿವನು ಒಂದು ಖಾತೆಯ ಆಡಳಿತ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಆ ಮಂತ್ರಿಯು ದೊಡ್ಡ ಖಾತೆಯನ್ನು ಹೊಂದಿದ್ದರೆ ರಾಜ್ಯ ಮಂತ್ರಿ ಮತ್ತು ಉಪ ಮಂತ್ರಿಗಳು ಅವರಿಗೆ ನೆರವಾಗುತ್ತಾರೆ. ಮಂತ್ರಿಯು ಖಾತೆಯ ರಾಜಕೀಯ ಮುಖ್ಯಸ್ಥನಾಗಿರುತ್ತಾನೆ ಒಂದೊಂದು ಖಾತೆಯು ಒಂದೊಂದು ಇಲಾಖೆಯನ್ನು ಹೊಂದಿರುತ್ತದೆ. ದೊಡ್ಡ ಖಾತೆಗಳು ಒಂದಕ್ಕಿಂತ ಹೆಚ್ಚು ಇಲಾಖೆಗಳನ್ನು ಹೊಂದಿರಬಹುದು.

ಇಲಾಖೆಯು ಒಂದು ಆಡಳಿತಾತ್ಮಕ ಘಟಕವಾಗಿದೆ. ಇದು ಒಬ್ಬ ಕಾರ್ಯದರ್ಶಿಯ ನೇತೃತ್ವದಲ್ಲಿ ಕೆಲವು ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸುತ್ತದೆ. ಒಂದಕ್ಕಿಂತ ಹೆಚ್ಚು ಇಲಾಖೆಗಳನ್ನು ಹೊಂದಿರುವ ಖಾತೆಯು ಒಬ್ಬನಿಗಿಂತ ಹೆಚ್ಚು ಕಾರ್ಯದರ್ಶಿಗಳನ್ನು ಹೊಂದಿರುತ್ತದೆ. ಅಂತಹ ಸಂದರ್ಭದಲ್ಲಿ ಒಬ್ಬ ಕಾರ್ಯದರ್ಶಿಯನ್ನು ಪ್ರಧಾನ ಕಾರ್ಯದರ್ಶಿ ಎಂದು ಪರಿಗಣಿಸಲಾಗುತ್ತದೆ. ಮಂತ್ರಿಯು ಒಂದು ಖಾತೆಯ ರಾಜಕೀಯ ಮುಖ್ಯಸ್ಥನಾಗಿದ್ದರೆ, ಕಾರ್ಯದರ್ಶಿಯು ಆಡಳಿತಾತ್ಮಕ ಮುಖ್ಯಸ್ಥನಾಗಿರುತ್ತಾನೆ. ಆಡಳಿತಾತ್ಮಕ ಅನುಕೂಲತೆಯ ದೃಷ್ಟಿಯಿಂದ ಪ್ರತಿಯೊಂದು ಮಂತ್ರಾಲಯವನ್ನು ಈ ಕೆಳಗಿನಂತೆ ಅನೇಕ ವಿಭಾಗಗಳು ಹಾಗೂ ಉಪ ವಿಭಾಗಗಳಾಗಿ ವಿಂಗಡಿಸಲಾಗಿದೆ.

ಇಲಾಖೆ:

ಇಲಾಖೆಯು ಮಂತ್ರಾಲಯದ ಪ್ರಾಥಮಿಕ ಘಟಕ. ಒಂದು ಮಂತ್ರಾಲಯವು ಹಲವಾರು ಇಲಾಖೆಗಳನ್ನು ಹೊಂದಬಹುದು. ಪ್ರತಿಯೊಂದು ಇಲಾಖೆಯು ಒಬ್ಬ ಕಾರ್ಯದರ್ಶಿಯನ್ನು ಹೊಂದಿರುತ್ತದೆ. ಮಂತ್ರಿಯು ಇಲಾಖೆಯ ರಾಜಕೀಯ ಮುಖ್ಯಸ್ಥನಾದರೆ ಕಾರ್ಯದರ್ಶಿಯು ಆಡಳಿತಾತ್ಮಕ ಮುಖ್ಯಸ್ಥನಾಗಿರುತ್ತಾನೆ.

ಭಾಗ:

ಸಚಿವಾಲಯದ ಕಾರ್ಯಭಾರವನ್ನು ಆಧರಿಸಿ ಒಂದು ಅಥವಾ ಅದಕ್ಕಿಂತಲೂ ಹೆಚ್ಚಿನ ಭಾಗಗಳನ್ನಾಗಿ ಮಾಡಲಾಗುವುದು. ಒಬ್ಬ ಕಾರ್ಯದರ್ಶಿ ಅಥವಾ ಜಂಟಿ ಕಾರ್ಯದರ್ಶಿಯು ಆ ಭಾಗದ ಪ್ರಭಾವವನ್ನು ಹೊಂದಿರುತ್ತಾನೆ. ಕಾರ್ಯದರ್ಶಿಯವರ ಸಂಪೂರ್ಣ ಜವಾಬ್ದಾರಿಯ ಮೇಲೆ ಆತನಿಗೆ ಸ್ವತಂತ್ರ ಜವಾಬ್ದಾರಿಯನ್ನು ನೀಡಲಾಗುವುದು. ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸುವ ಸಲುವಾಗಿ ಸಚಿವಾಲಯದ ಭಾಗಗಳನ್ನು ವಿಭಾಗಗಳನ್ನಾಗಿ ವಿಂಗಡಿಸಲಾಗುತ್ತದೆ. ವಿಭಾಗವೊಂದು ಸಾಮಾನ್ಯವಾಗಿ ಎರಡು ಶಾಖೆಗಳನ್ನು ಒಳಗೊಂಡಿದ್ದು, ಸಾಮಾನ್ಯವಾಗಿ ಸಚಿವಾಲಯದ ಕೆಲಸ ಕಾರ್ಯಗಳನ್ನು ಸಮಗ್ರ ಉಪಕಾರ್ಯದರ್ಶಿಯು ಹೊಂದಿರುತ್ತಾನೆ.

ಶಾಖೆ:

ಶಾಖೆಯೊಂದು ಸಾಮಾನ್ಯವಾಗಿ ಎರಡು ಉಪ ಶಾಖೆಗಳನ್ನು ಒಳಗೊಂಡಿದ್ದು ಅಧೀನ ಕಾರ್ಯದರ್ಶಿಗಳ ಜವಾಬ್ದಾರಿಯಿರುತ್ತದೆ. ಅವರನ್ನು ಶಾಖೆಯ ಅಧಿಕಾರಿಗಳೆಂತಲೂ ಕರೆಯಲಾಗುವುದು.

ಶಾಖಾ ವಿಭಾಗ:

ಶಾಖಾ ವಿಭಾಗಕ್ಕೆ ಶಾಖಾಧಿಕಾರಿಯವರು ಮುಖ್ಯಸ್ಥರಾಗಿರುತ್ತಾರೆ. ಒಂದು ಶಾಖಾಭಾಗವು ಸಹಾಯಕರು, ಮೇಲ್ದರ್ಜೆಯ ಮತ್ತು ಕೆಳದರ್ಜೆಯ ಲಿಪಿಕ ನೌಕರರನ್ನು ಒಳಗೊಂಡಿದೆ. ಸಹಾಯಕರು ಟಿಪ್ಪಣಿ ಮತ್ತು ವರದಿಗಳ ಮೂಲಕ ಕಾರ್ಯ ನಿರ್ವಹಿಸುತ್ತಾರೆ.

ಸಂಪುಟ ಕಾರ್ಯದರ್ಶಿ

ಪ್ರಧಾನ ಮಂತ್ರಿಯವರ ನಾಯಕತ್ವವು ರಾಜಕೀಯ ಹಂತದಲ್ಲಿ ಸಂಪುಟ ಸಚಿವಾಲಯ ಕಾರ್ಯ ನಿರ್ವಹಿಸಿದರೆ, ಆಡಳಿತ ಹಂತದಲ್ಲಿ ಸಂಪುಟ ಕಾರ್ಯದರ್ಶಿಯು ಕರ್ತವ್ಯ ನಿರ್ವಹಿಸುತ್ತಾರೆ. ಸಂಪುಟ ಕಾರ್ಯದರ್ಶಿಯು ಭಾರತ ಆಡಳಿತ ಸೇವೆಯಲ್ಲಿರುವ ಹಿರಿಯ ಶ್ರೇಣಿಯಲ್ಲಿನ ಅಧಿಕಾರಗಳ ವೇತನವನ್ನು ಪಡೆಯುತ್ತಾರೆ.

ಇದರ ಜೊತೆಗೆ ವಿವಿಧ ಇಲಾಖೆಗಳ ಮತ್ತು ಸಚಿವಾಲಯದ ಕಾರ್ಯದರ್ಶಿಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿರಬೇಕು.

ಸಂಪುಟ ಕಾರ್ಯದರ್ಶಿಯೊಂದಿಗೆ ಹೆಚ್ಚುವರಿ ಕಾರ್ಯದರ್ಶಿಯು ಇರುತ್ತಾನೆ. ಈತ ಸಂಪುಟ ಕಾರ್ಯದರ್ಶಿಯ ಕಾರ್ಯದ ಸ್ವಲ್ಪ ಭಾಗವನ್ನು ನಿರ್ವಹಿಸುವ ಮೂಲಕ ಹೆಚ್ಚುವರಿ ಕಾರ್ಯದರ್ಶಿಯು ಸಂಪುಟ ಕಾರ್ಯದರ್ಶಿಗೆ ಸಹಾಯಕನಾಗುತ್ತಾನೆ. ಈತನೊಂದಿಗೆ ಉಪಕಾರ್ಯದರ್ಶಿ, ಅಧೀನ ಕಾರ್ಯದರ್ಶಿ, ಶಾಖಾಧಿಕಾರಿಗಳು ತಮ್ಮ ತಮ್ಮ ಕಾರ್ಯದ ಮೂಲಕ ಕೇಂದ್ರದ ಆಡಳಿತವನ್ನು ಮುನ್ನೆಡೆಸುತ್ತಿದ್ದಾರೆ.

3. ಅಖಿಲ ಭಾರತ, ಕೇಂದ್ರ ಮತ್ತು ರಾಜ್ಯ ಸೇವೆಗಳ ಬಗ್ಗೆ ವಿವರಿಸಿ.

ಅಖಿಲ ಭಾರತ ಸೇವೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡಕ್ಕೂ ಸಾಮಾನ್ಯ ಸೇವೆಗಳಾಗಿವೆ. ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಯ್ದುಕೊಳ್ಳಲು ಮತ್ತು ಕೇಂದ್ರ-ರಾಜ್ಯಗಳ ನಡುವೆ ಉತ್ತಮ ಸಂಬಂಧವನ್ನು ಮೂಡಿಸಲು ಅಖಿಲ ಭಾರತ ಸೇವೆಗಳು ಅಗತ್ಯವೆಂದು ಸಂವಿಧಾನ ರಚನಾ ಸಭೆಯಲ್ಲಿ ಡಾ॥ ಬಿ.ಆರ್. ಅಂಬೇಡ್ಕರ್ ರವರು ಒತ್ತಾಯಿಸಿದರು. ಸಂವಿಧಾನದ ಭಾಗ 14 ರ ಪರಿಚ್ಛೇದ 312 ರಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಖಿಲ ಭಾರತದ ಸೇವೆಗಳಿಗೆ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಇವು ಆಡಳಿತದ ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ರಾಷ್ಟ್ರಾದ್ಯಂತ ಸಾಮಾನ್ಯ ಆಡಳಿತವನ್ನು ಸ್ಥಾಪಿಸಿ ರಾಷ್ಟ್ರದ ಏಕತೆ ಮತ್ತು ಅಖಂಡತೆಯನ್ನು ಕಾಪಾಡಿಕೊಂಡು ಬರುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಅಖಿಲ ಭಾರತ ಸೇವೆಗಳ ಅಧಿಕಾರಿಗಳು ಕೇಂದ್ರ ಸರ್ಕಾರದಿಂದ ನೇಮಿಸಲ್ಪಟ್ಟ ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿದ್ದರೂ ರಾಜ್ಯ ಸರ್ಕಾರಗಳಲ್ಲಿ ಸೇವೆ ಸಲ್ಲಿಸುವಾಗ ಆಯಾ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಲು ಶ್ರಮಿಸುತ್ತಾರೆ. ಈ ಕೇಂದ್ರ ಹಾಗೂ ರಾಜ್ಯಗಳಲ್ಲಿ ಸೇವೆ ಸಲ್ಲಿಸುವ ಅಖಿಲ ಭಾರತ ಸೇವೆಗಳನ್ನು ಸ್ಥಾಪಿಸುವ ಅಧಿಕಾರ ಕೇಂದ್ರ ಸಂಸತ್ತಿಗಿದೆ. ರಾಜ್ಯ ಸಭೆಯು ರಾಷ್ಟ್ರೀಯ ಹಿತದೃಷ್ಟಿಯಿಂದ ಒಂದು ನಿರ್ಣಯವನ್ನು ಮಂಡಿಸಿ ಅದಕ್ಕೆ 2/3 ರಷ್ಟು ಬಹುಮತದ ಮೂಲಕ ಲೋಕಸಭೆಯ ಒಪ್ಪಿಗೆ ಪಡೆದು ಹೊಸ ಅಖಿಲ ಭಾರತ ಸೇವೆಗಳನ್ನು ಸ್ಥಾಪಿಸಬಹುದು. ಅದಕ್ಕೆ ರಾಜ್ಯಗಳ ಒಪ್ಪಿಗೆಯನ್ನು ಪಡೆದುಕೊಳ್ಳಬೇಕು.

ಉದಾ: 1967 ರಲ್ಲಿ ಭಾರತ ಅರಣ್ಯ ಸೇವೆಯನ್ನು [IFS] ಸ್ಥಾಪಿಸಲಾಯಿತು.

ಇದಕ್ಕೂ ಮೊದಲೇ ಮುಖ್ಯವಾದ ಭಾರತೀಯ ಆಡಳಿತ ಸೇವೆ [IAS] ಮತ್ತು

ಭಾರತೀಯ ಪೋಲಿಸ್ ಸೇವೆ [IPS] ಗಳು ಪ್ರಾರಂಭಗೊಂಡಿವೆ.

ಈ ಸಿಬ್ಬಂದಿ ವರ್ಗದವರ ಸೇವೆಗಳನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರಗಳೆರಡು ಉಪಯೋಗಿಸಿಕೊಳ್ಳಬಹು -ದು. ಈ ಅಧಿಕಾರಗಳನ್ನು ಕೇಂದ್ರ ಸೇವೆ ಮತ್ತು ರಾಜ್ಯ ಸೇವೆಗೆ ವರ್ಗಾವಣೆ ಮಾಡಬಹುದು. ಸಂವಿಧಾನದ ಸದಾಶಯವನ್ನು ಕಾರ್ಯಗತಗೊಳಿಸುವಲ್ಲಿ ಅಖಿಲ ಭಾರತ ಸೇವೆಗಳ ಪಾತ್ರ ಮಹತ್ವದ್ದಾಗಿರುತ್ತದೆ.

ಕೇಂದ್ರ ಸೇವೆಗಳ ಸದಸ್ಯರ ಸೇವೆಯು ಕೇಂದ್ರ ಸರಕಾರಕ್ಕೆ ಮಾತ್ರ ಮೀಸಲಾಗಿರುತ್ತದೆ. ಕೇಂದ್ರ ಪಟ್ಟಿಯಲ್ಲಿರುವ ವಿಷಯಗಳ ಬಗ್ಗೆ ಸೇವೆ ಸಲ್ಲಿಸಲು ಕೇಂದ್ರ ಸೇವೆಗಳನ್ನು ಸೃಷ್ಟಿಸಲಾಗಿದೆ. ಕೇಂದ್ರೀಯ ಸೇವೆಯು ಪ್ರತ್ಯೇಕ ಸಿಬ್ಬಂದಿ ವರ್ಗದವರಿಂದ ನಿರ್ವಹಣೆ ಮಾಡಲಾಗುತ್ತದೆ. ಸಂವಿಧಾನದ 312 ನೇ ಪರಿಚ್ಛೇದವು ಕೇಂದ್ರೀಯ ಆಡಳಿತಾತ್ಮಕ ಇಲಾಖೆಗಳಲ್ಲಿ ಇಂತಹ ಸೇವೆಗಳನ್ನು ಸೃಷ್ಟಿಸಲು ಪಾರ್ಲಿಮೆಂಟಿಗೆ ಅಧಿಕಾರವನ್ನು ನೀಡಿದೆ. ಇಂತಹ ಸೇವೆಗಳನ್ನು ಕೇಂದ್ರೀಯ ಸೇವೆಗಳೆನ್ನುವರು.

ಕೇಂದ್ರ ಸೇವೆಗಳ ಬಹುತೇಕ ಸಿಬ್ಬಂದಿಯನ್ನು ಸಂಬಂಧಪಟ್ಟ ಕೇಂದ್ರ ಸರ್ಕಾರದ ಮಂತ್ರಾಲಯಗಳು ನಿಯಂತ್ರಿಸುತ್ತವೆ. ಕೆಲವು ಕೇಂದ್ರ ಸೇವೆಗಳು ಸಿಬ್ಬಂದಿ ಸಚಿವಾಲಯದ ನಿಯಂತ್ರಣ ವ್ಯಾಪ್ತಿಗೆ ಒಳಪಡುತ್ತದೆ. ಸಿಬ್ಬಂದಿ ಸಚಿವಾಲಯವು ಕೇಂದ್ರ ಸೇವೆಗಳಿಗೆ ಸಂಬಂಧಿಸಿದ ಸಾಮಾನ್ಯ ನೀತಿಗಳನ್ನು ನಿರ್ಧರಿಸುತ್ತದೆ. ಕೇಂದ್ರ ಸೇವೆಗಳನ್ನು ದರ್ಜೆಗಳಾಗಿ I. II. III, IV ವರ್ಗೀಕರಿಸಲಾಗಿದೆ.

ಕೇಂದ್ರ ಲೋಕಸೇವಾ ಆಯೋಗವು ಇವುಗಳಿಗೆ ಆಯ್ಕೆ ನಡೆಸುತ್ತದೆ. ಕೇಂದ್ರದ ಪ್ರಮುಖ ಸೇವೆಗಳು ಈ ಕೆಳಗಿನಂತಿವೆ.

  1. ಭಾರತ ವಿದೇಶಾಂಗ ಸೇವೆ [IFS]
  2. ಭಾರತೀಯ ವಿದೇಶಿ ಪರಿಶೋಧನಾ ಮತ್ತು ಲೆಕ್ಕ ಸೇವೆಗಳು [IAAS]
  3. ಭಾರತೀಯ ಕಂದಾಯ ಸೇವೆಗಳು [IRS]
  4. ಭಾರತೀಯ ರೈಲ್ವೆ ಸೇವೆಗಳು [IRYS]
  5. ಭಾರತೀಯ ರಕ್ಷಣಾ ಸೇವೆಗಳು. [IDS]
  6. ಭಾರತೀಯ ಮಾಹಿತಿ ಸೇವೆಗಳು. [IIS]
  7. ಭಾರತೀಯ ಅಂಚೆ ಸೇವೆಗಳು. [IPS]
  8. ಭಾರತೀಯ ಇಂಜಿನಿಯರಿಂಗ್ ಸೇವೆಗಳು. [CES]
  9. ಭಾರತೀಯ ಆರ್ಥಿಕ ಸೇವೆಗಳು ಇತ್ಯಾದಿ. [IES]

ಇವರ ವೇತನ ಪಿಂಚಣಿ ಹಾಗೂ ಇತರೆ ಭತ್ಯಗಳನ್ನು ಕೇಂದ್ರ ಸರ್ಕಾರ ನೀಡುತ್ತದೆ. ಕೇಂದ್ರ ಸರಕಾರವು ಈ ಸಿಬ್ಬಂದಿಯನ್ನು ನಿಯಂತ್ರಿಸುತ್ತದೆ. ಭಾರತವು ಒಂದು ಸಂಯುಕ್ತ ವ್ಯವಸ್ಥೆಯನ್ನು ಹೊಂದಿರುವುದರಿಂದ ಸಂವಿಧಾನಬದ್ದವಾಗಿ ಅಧಿಕಾರಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ವಿಭಜನೆಯಾಗಿದೆ. ಈ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ಸೇವಾ ವರ್ಗವನ್ನು ಹೊಂದಲು ಅವಕಾಶವಿದೆ, ಅಂತೆಯೇ ಸಂವಿಧಾನದ 309 ನೇ ವಿಧಿಯೂ ರಾಜ್ಯ ಸೇವೆಗಳನ್ನು ಹೊಂದಲು ರಾಜ್ಯಗಳಿಗೆ ಅವಕಾಶ ಕಲ್ಪಿಸಿದೆ.

ರಾಜ್ಯಪಟ್ಟಿಯಲ್ಲಿ ಹಲವಾರು ವಿಷಯಗಳಾಗಿ ನಮೂದಿಸಲಾಗಿದೆ. ಅವುಗಳೆಂದರೆ ಕಂದಾಯ, ಪೋಲಿಸ್, ಮಾರಾಟ ತೆರಿಗೆ, ಭೂಕಂದಾಯ, ಅರಣ್ಯಗಳು ಮುಂತಾದ ವಿಷಯಗಳಿಗೆ ಸಂಬಂಧಿಸಿದ ಸೇವೆಗಳನ್ನು ಆಯಾ ರಾಜ್ಯಗಳು ನೇಮಿಸಿಕೊಂಡ ಸಿಬ್ಬಂದಿಗಳು ನಿರ್ವಹಿಸುತ್ತಾರೆ ರಾಜ್ಯ ಸೇವೆಗೆ ನೇಮಕ ಮಾಡಿಕೊಂಡಿರುವ ರೀತಿ ಮತ್ತು ವಿಧಾನಗಳು, ಸೇವಾ ನಿಬಂಧನೆಗಳು, ವೇತನ ಮತ್ತು ಭತ್ಯೆಗಳು ಏಕರೀತಿಯಲ್ಲಿರದೇ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತಾ ಹೋಗುತ್ತದೆ.

ರಾಜ್ಯ ಸರ್ಕಾರಗಳು, ಕೇಂದ್ರ ಮಾದರಿಯಲ್ಲಿ ಆಡಳಿತ ಸೇವೆಯನ್ನು ಜಾರಿಗೊಳಿಸುವ ಜವಾಬ್ದಾರಿ ಮತ್ತು ಆಸಕ್ತಿಯನು ತೆಗೆದುಕೊಂಡಿವೆ. ಅದಕ್ಕಾಗಿ ಸಮರ್ಥ ಅಧಿಕಾರಿಗಳ ಅವಶ್ಯಕತೆಯಿದೆ. ರಾಜ್ಯ ಸೇವೆಗಳಲ್ಲಿರುವ ರಾಜ್ಯ ಸರ್ಕಾರದ ನೇರ ಆಡಳಿತದ ನಿಯಂತ್ರಣಕ್ಕೆ ಒಳಪಡುತ್ತಾರೆ.

ರಾಜ್ಯದ ಸೇವೆಗಳನ್ನು ದರ್ಜೆ I, ದರ್ಜೆ II, ದರ್ಜೆ III, ದರ್ಜೆ IVಗಳಂದು ವರ್ಗೀಕರಿಸಲಾಗಿದೆ. ದರ್ಜೆ I, ದರ್ಜೆ II, ಸೇವೆಯಲ್ಲಿರುವ ಸದಸ್ಯರು ಪತ್ರಾಂಕಿತ ಅಧಿಕಾರಿಗಳಾಗಿರುತ್ತಾರೆ. ದರ್ಜೆ III ಲಿಖಿತ ಸಿಬ್ಬಂದಿ ಮತ್ತು ದರ್ಜೆ IV ರಲ್ಲಿ ಕಾವಲುಗಾರರು, ಸೇವಕರು ಇತ್ಯಾದಿಗಳನ್ನು ಒಳಗೊಂಡಿದೆ.

ಕರ್ನಾಟಕದಲ್ಲಿರುವ ರಾಜ್ಯ ಸೇವೆಗಳು ಈ ಕೆಳಗಿನಂತಿವೆ

  1. ಕರ್ನಾಟಕ ಆಡಳಿತ ಸೇವೆಗಳು [KAS]
  2. ಕರ್ನಾಟಕ ರಾಜ್ಯ ಆರಕ್ಷಕ ಸೇವೆಗಳು [KPS
  3. ಕರ್ನಾಟಕ ಅರಣ್ಯ ಸೇವೆಗಳು [KFS]
  4. ಕರ್ನಾಟಕ ಇಂಜಿನಿಯರಿಂಗ್ ಸೇವೆಗಳು.
  5. ಕರ್ನಾಟಕ ಶಿಕ್ಷಣ ಸೇವೆಗಳು [KES]
  6. ಕರ್ನಾಟಕ ಸಹಕಾರಿ ಸೇವೆಗಳು. [KCS]
  7. ಕರ್ನಾಟಕ ಪರಿಶೋಧನಾ ಸೇವೆಗಳು
  8. ಕರ್ನಾಟಕ ಅಧಿಕಾರಿ ಸೇವೆಗಳು
  9. ಕರ್ನಾಟಕ ಮಾರಾಟ ತೆರಿಗೆ ಸೇವೆಗಳು. [KCTS]
  10. ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ಸೇವೆಗಳು ಇನ್ನೂ ಇತರೇ ಸೇವೆಗಳು. ‘

4. ರಾಜ್ಯಾಡಳಿತದ ಬಗ್ಗೆ ಚರ್ಚಿಸಿ.

ಭಾರತದ ಪ್ರತಿಯೊಂದು ರಾಜ್ಯದ ಆಡಳಿತವು ರಾಜ್ಯಪಾಲರು, ಮುಖ್ಯಮಂತ್ರಿ, ಸಚಿವ ಸಂಪುಟ ಮತ್ತು ಸಚಿವಾಲಯದ ಕಛೇರಿಗಳನ್ನೊಳಗೊಂಡಿದೆ.

ರಾಜ್ಯ ಸಚಿವಾಲಯ :

ಪ್ರತಿಯೊಂದು ರಾಜ್ಯವು ತನ್ನದೇ ಆದ ಸಚಿವಾಲಯವನ್ನು ಹೊಂದಿದೆ. ಆಡಳಿತದ ಅನುಕೂಲಕ್ಕಾಗಿ ವಿವಿಧ ಮಂತ್ರಾಲಯಗಳು ಹಾಗೂ ಇಲಾಖೆಗಳನ್ನು ರಚಿಸಲಾಗಿದೆ. ಈ ಮಂತ್ರಾಲಯಗಳು 4 ಇಲಾಖೆಗಳನ್ನು ಒಟ್ಟುಗೂಡಿಸಿ ರಾಜ್ಯ ಸಚಿವಾಲಯದ ಎಂದು ಕರೆಯಲಾಗುತ್ತದೆ. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ವಿವಿಧ ಮಂತ್ರಾಲಯ ಹಾಗೂ ಇಲಾಖೆಗಳ ಸಮೂಹವೇ ಸಚಿವಾಲಯ. ಮಂತ್ರಿಗಳು, ಇಲಾಖೆಗಳ ರಾಜಕೀಯ ಮುಖ್ಯಸ್ಥರಾಗಿಯೂ, ಕಾರ್ಯದರ್ಶಿಗಳು ಆಡಳಿತಾತ್ಮಕ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸುತ್ತಾರೆ. ಮುಖ್ಯ ಕಾರ್ಯದರ್ಶಿಯು ಸಮಸ್ತ ಸಚಿವಾಲಯದ ಮುಖ್ಯಸ್ಥನಾಗಿರುತ್ತಾನೆ.

ಸಚಿವಾಲಯವು ರಾಜ್ಯದ ರಾಜಧಾನಿಯಲ್ಲಿ ಸಚಿವರಗಳ ಕಾರ್ಯಾಲಯ, ಕಾರ್ಯದರ್ಶಿಗಳು, ಇಲಾಖೆಗಳು ಮತ್ತು ವಿಭಾಗಗಳನ್ನು ಒಳಗೊಂಡಿರುತ್ತದೆ. ಸಚಿವಾಲಯವು ಸರಕಾರದ ಅತ್ಯುನ್ನತ ಕಛೇರಿಯಾಗಿದೆ. ಆಡಳಿತದಲ್ಲಿನ “ಉದ್ದೇಶ, ನಿರಂತರತೆ ಮತ್ತು ಸ್ಥಿರತೆ” ಬಗ್ಗೆ ಸಚಿವಾಲಯವು ಖಾತರಿ ಪಡಿಸುತ್ತದೆ. ಸರಕಾರದ ಚಟುವಟಿಕೆಗಳ ಕಾರ್ಯ ವಿಧಾನ ಮತ್ತು ತತ್ವಗಳನ್ನು ರೂಪಿಸುವ ಪ್ರಾಧಿಕಾರವಾಗಿದೆ.

ರಾಜ್ಯ ಸರಕಾರದ ಮೂರು ಅತ್ಯಗತ್ಯ ಅಂಶಗಳೆಂದರೆ ಸಚಿವರು, ಕಾರ್ಯದರ್ಶಿ ಮತ್ತು ಇಲಾಖಾ ಮುಖ್ಯಸ್ಥರು. ಸಚಿವರ ಅತೀ ಪ್ರಮುಖ ಕಾರ್ಯವೆಂದರೆ ನೀತಿಯ ಆಧಾರದ ಮೇಲೆ ತೀರ್ಮಾನ ಕೈಗೊಳ್ಳುತ್ತಾರೆ. ಕಾರ್ಯದರ್ಶಿಯು ಪೂರಕ ಮಾಹಿತಿಗಳನ್ನು ಒದಗಿಸಿಕೊಡುವುದರ ಜೊತೆಗೆ ಜಾರಿಗೊಳಿಸುವ ವಿಧಾನವನ್ನು ಸೂಚಿಸಿದರೆ ಇಲಾಖಾ ಮುಖ್ಯಸ್ಥರು ನೀತಿ ನಿರ್ಧಾರಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಾರೆ.

ಸಚಿವಾಲಯವು ಸಚಿವರಿಗೆ ಅನೇಕ ವಿಷಯಗಳಲ್ಲಿ ಸಹಕರಿಸುತ್ತದೆ. ಸಚಿವಾಲಯವು ಶಾಸನಗಳನ್ನು ರಚಿಸಲು ಮತ್ತು ಮಾರ್ಪಡಿಸಲು ಸಚಿವರಿಗೆ ಸಹಕರಿಸುತ್ತದೆ. ಯೋಜನೆಗಳು ಮತ್ತು ಆಯವ್ಯಯವನ್ನು ರಚಿಸುತ್ತದೆ. ಕೇಂದ್ರ ಮತ್ತು ರಾಜ್ಯಗಳ ಸಮನ್ವಯತೆಯವೇ ಸಾಧಿಸುತ್ತದೆ. ಸಂಘಟನಾ ಬಲ ವೃದ್ಧಿಸುತ್ತದೆ ವಿಧಾನ ಸಭೆಯ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಸಹಕಾರಿಯಾಗಿದೆ. ಸಚಿವಾಲಯವನ್ನು ಅಸಂಖ್ಯಾಥ ಆಡಳಿತ ಇಲಾಖೆಗಳಾಗಿ ವಿಂಗಡಿಸಲಾಗಿದೆ. ಕಾರ್ಯದರ್ಶಿ, ಉಪಕಾರ್ಯದರ್ಶಿ ಮತ್ತು ಅಧೀನ ಕಾರ್ಯದರ್ಶಿಗಳನ್ನು ಒಳಗೊಂಡಿದೆ ಇವರ ಜೊತೆಗೆ ವಿಶೇಷ ಅಪರ ಮತ್ತು ಜಂಟಿ ಕಾರ್ಯದರ್ಶಿಗಳು ಸಹ ಸಚಿವಾಲಯದ ಕೆಲವು ಇಲಾಖೆಗಳಲ್ಲಿ ಇರುತ್ತಾರೆ. ಮುಖ್ಯ ಕಾರ್ಯದರ್ಶಿಯನ್ನು ಹೊರತುಪಡಿಸಿ ಸಚಿವಾಲಯದ ಅಧಿಕಾರಿಗಳು ನಿರ್ದಿಷ್ಟ ಅವಧಿಗೆ ನೇಮಕವಾಗಿರುತ್ತಾರೆ.

ಸಚಿವಾಲಯದಲ್ಲಿರುವ ಇಲಾಖೆಗಳ ಸಂಖ್ಯೆಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವ್ಯತ್ಯಾಸಲಾಗುತ್ತವೆ. ಬಹುತೇಕ ರಾಜ್ಯಗಳಲ್ಲಿ ಸಾಮಾನ್ಯವಾಗಿರುವ ಇಲಾಖೆಗಳು ಯಾವುವೆಂದರೆ : ಸಿಬ್ಬಂದಿ ಮತ್ತು ಆಡಳಿತಾತ್ಮಕ ಸುಧಾರಣ ಇಲಾಖೆ, ಗೃಹ ಮತ್ತು ಸಾರಿಗೆ ಹಣಕಾಸು ಮತ್ತು ಹ ಶಿಕ್ಷಣ ಕಂದಾಯ ಮತ್ತು ಅಭಕಾರಿ, ಲೋಕೋಪಯೋಗಿ ಇಲಾಖೆ ಮುಂತಾದವುಗಳು.

ಮುಖ್ಯ ಕಾರ್ಯದರ್ಶಿ :

ಪ್ರತಿ ರಾಜ್ಯ ಸರಕಾರದಲ್ಲಿಯೂ ಮುಖ್ಯ ಕಾರ್ಯದರ್ಶಿಯೂ ಸಚಿವಾಲಯದ ಮುಖ್ಯಸ್ಥನಾಗಿರುತ್ತಾನೆ. ಇವನು ಆಡಳಿತಾತ್ಮಕ ವ್ಯವಸ್ಥೆಯ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಸಚಿವಾಲಯದ ಎಲ್ಲಾ ಇಲಾಖೆಗಳು ಇವನ ಅಧಿಕಾರ ವ್ಯಾಪ್ತಿಗೆ ಬರುತ್ತದೆ. ಇವರ ಅನುಭವ ಮತ್ತು ಧೃಢತೆಯ ಕಾರಣರಿದ ಆಡಳಿತಾತ್ಮಕ ಸಮಸ್ಯೆಗಳನ್ನು ಮತ್ತು ವಿವಾದಗಳನ್ನು ಬಗೆಹರಿಸುವ ಸಾಮರ್ಥ್ಯನ ಹೊಂದಿರುವುದಲ್ಲದೇ ಇತರೇ ಅಧಿಕಾರಿಗಳಿಗೆ ಸಾಮಾನ್ಯ ಮಾರ್ಗದರ್ಶನವನ್ನು ನೀಡುವುದರ ಮೂಲಕ ರಾಜ್ಯದ ಆಡಳಿತಾತ್ಮಕ ವ್ಯವಸ್ಥೆಗೆ ನಾಯಕತ್ವವನ್ನು ನೀಡುತ್ತಾರೆ. ಇವರು ತನ್ನ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಹಾಗೂ ಇತರೇ ರಾಜ್ಯ ಸರಕಾರಗಳ ನಡುವೆ ಸಹಕಾರ ಸಮನ್ವಯತೆ ಉಂಟು ಮಾಡುತ್ತಾರೆ. \

ಮುಖ್ಯ ಕಾರ್ಯದರ್ಶಿಯು ಈ ಕೆಳಕಂಡ ಕಾರ್ಯಗಳನ್ನು ನಿರ್ವಹಿಸುತ್ತಾರೆ.

1) ಮುಖ್ಯ ಕಾರ್ಯದರ್ಶಿಯು ಮುಖ್ಯ ಮಂತ್ರಿಗೆ ಸಲಹೆಗಾರರಾಗಿರುತ್ತಾರೆ.

2) ಇವರು ಸಂಪೂರ್ಣ ಸಚಿವಲಾಯದ ಸಾಮಾನ್ಯ ಮೇಲ್ವಿಚಾರಣೆ ಮತ್ತು ನಿಯಂತ್ರಣವನ್ನು ಹೊಂದಿರುತ್ತಾರೆ.

3) ಇತರೇ ಕಾರ್ಯದರ್ಶಿಗಳು ನಿರ್ವಹಿಸದ ಜವಾಬ್ದಾರಿ ಕಾರ್ಯಗಳನ್ನು ಗಮನಿಸುತ್ತಾರೆ.

4) ಎಲ್ಲಾ ಕಾರ್ಯದರ್ಶಿಗಳ ಮುಖ್ಯಸ್ಥನಾಗಿದ್ದು ಅಪಾರ ಸಂಖ್ಯೆಯ ಸಮಿತಿಗಳು ಮತ್ತು ಇತರೇ ಸಮಿತಿಗಳ ಸದಸ್ಯರಾಗಿರುತ್ತಾರೆ.

5) ರಾಜ್ಯದ ಸದಸ್ಯತ್ವ ಪಡೆದಿರುವ ವಲಯ ಕೌನ್ಸಿಲ್‌ಗಳ ಮೂಲಕ ಕ್ರಮಾಣಿಕೆಯ ಆಧಾರದ ಮೇಲೆ ಇವರು ಕಾರ್ಯದರ್ಶಿಯಾಗಿರುತ್ತಾರೆ.

6) ಸಚಿವರುಗಳಿಗೆ ಒದಗಿಸಿರುವ ಸಿಬ್ಬಂಧಿಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುತ್ತಾರೆ.

ಇವರು ರಾಜ್ಯ ಸರಕಾರದ ಮತ್ತು ಕೇಂದ್ರ ಹಾಗೂ ಇತರೇ ರಾಜ್ಯ ಸರಕಾರಗಳ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾರೆ.

8) ಭಾರತ ಸರಕಾರದಿಂದ ಎಲ್ಲಾ ಪ್ರಮುಖವಾದ ಮತ್ತು ರಹಸ್ಯವಾದ ಮಾಹಿತಿಗಳನ್ನು ಇವರು ಪಡೆದುಕೊಂಡು ಅವುಗಳನ್ನು ಮುಖ್ಯ ಮಂತ್ರಿಗೆ ತಲುಪಿಸುತ್ತಾರೆ.

ಮುಖ್ಯ ಕಾರ್ಯದರ್ಶಿಯು ರಾಜ್ಯ ಆಡಳಿತ ಯಂತ್ರದ ಮುಖ್ಯಸ್ಥನಾಗಿದ್ದು ಸಂಪುಟದ ಸಚಿವರಿಗೆ ಸಲಹೆಗಾರನಾಗಿ ಮತ್ತು ನಾಗರೀಕ ಸೇವೆಯ ಮುಖ್ಯಸ್ಥನಾಗಿದ್ದುಕೊಂಡು ಮಾರ್ಗದರ್ಶನ ನೀಡುವುದರ ಜೊತೆಗೆ ರಾಜ್ಯದ ಆಡಳಿತದಲ್ಲಿ ಮತ್ತು ವಿವಾದಗಳನ್ನು ಬಗೆಹರಿಸುವ ಸಾಮರ್ಥ್ಯನ ಹೊಂದಿರುವುದಲ್ಲದೇ ಇತರೇ ಅಧಿಕಾರಿಗಳಿಗೆ ಸಾಮಾನ್ಯ ಮಾರ್ಗದರ್ಶನವನ್ನು ನೀಡುವುದರ ಮೂಲಕ ರಾಜ್ಯದ ಆಡಳಿತಾತ್ಮಕ ವ್ಯವಸ್ಥೆಗೆ ನಾಯಕತ್ವವನ್ನು ನೀಡುತ್ತಾರೆ. ಇವರು ತನ್ನ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಹಾಗೂ ಇತರೇ ರಾಜ್ಯ ಸರಕಾರಗಳ ನಡುವೆ ಸಹಕಾರ ಸಮನ್ವಯತೆ ಉಂಟು ಮಾಡುತ್ತಾರೆ.

5. ಜಿಲ್ಲಾಧಿಕಾರಿಯ ಕಾರ್ಯಗಳು ಯಾವುವು?

ಜಿಲ್ಲಾಧಿಕಾರಿಯು ಜಿಲ್ಲೆಯ ಮುಖ್ಯಸ್ಥರಾಗಿರುತ್ತಾರೆ. ಜಿಲ್ಲೆಯ ಆಡಳಿತವೆಲ್ಲವೂ ರಾಜ್ಯ ಸರ್ಕಾರದ ಪ್ರತಿನಿಧಿಯಾದ ಜಿಲ್ಲಾಧಿಕಾರಿಯ ಜವಾಬ್ದಾರಿಯಾಗಿದೆ. ಜಿಲ್ಲಾಧಿಕಾರಿಯ ಕಾರ್ಯಗಳು ಈ ಕೆಳಗಿನಂತಿವೆ.

ಕಾನೂನು ಮತ್ತು ಸುವ್ಯವಸ್ಥೆ ಹಾಗೂ ದಂಡಾಧಿಕಾರ:

ಜಿಲ್ಲಾಧಿಕಾರಿಗಳು ಜಿಲ್ಲೆಯ ದಂಡಾಧಿಕಾರಿ ಗಳಾಗಿರುತ್ತಾರೆ. ಜಿಲ್ಲೆಯಲ್ಲಿನ ಕಾನೂನು ಮತ್ತು ಶಾಂತಿ ಪರಿಪಾಲನೆಯು ಜಿಲ್ಲಾ ದಂಡಾಧಿಕಾರಿಯಾದ ಜಿಲ್ಲಾಧಿಕಾರಿಯ ಅಂತಿಮ ಜವಾಬ್ದಾರಿಯಾಗಿದೆ. ಜಿಲ್ಲಾಧಿಕಾರಿಯು ಜಿಲ್ಲಾ ಪೋಲಿಸ್ ಆಡಳಿತದ ಮುಖ್ಯಸ್ಥರಾದ ಪೋಲಿಸ್ ವರಿಷ್ಟಾಧಿಕಾರಿಯ ನೆರವಿನಿಂದ ಈ ಕಾರ್ಯವನ್ನು ನಿರ್ವಹಿಸುತ್ತಾರೆ. ಇವರು ಪೆರೋಲ್ ಮೇಲೆ ಖೈದಿಗಳನ್ನು ಬಿಡುಗಡೆ ಮಾಡುವ, ಬಂಧೀಖಾನೆಗಳನ್ನು ಪರಿವೀಕ್ಷಿಸುವ ಅಧಿಕಾರವನ್ನು ಹೊಂದಿದ್ದಾರೆ. ಸಾರ್ವಜನಿಕ ಶಾಂತಿಗೆ ಭಂಗ ಉಂಟಾದಾಗ ಅಪರಾಧ ದಂಡ ಸಂಹಿತೆಯ ಪ್ರಕಾರ 144 ನೇ ಸೆಕ್ಷನ್ ಜಾರಿ ಮಾಡುವ ಅಧಿಕಾರವನ್ನು ಹೊಂದಿದ್ದಾರೆ.

ಕಂದಾಯ ಕಾರ್ಯಗಳು:

ಜಿಲ್ಲಾಧಿಕಾರಿಯು ಜಿಲ್ಲಾ ಕಂದಾಯ ಆಡಳಿತದ ಮುಖ್ಯಸ್ಥನಾಗಿದ್ದಾನೆ. ಈತ ಸಹಾಯಕ ಆಯುಕ್ತ, ತಹಶೀಲ್ದಾರ, ಕಂದಾಯ ಪರಿವೀಕ್ಷಕ, ಗ್ರಾಮ ಲೆಕ್ಕಿಗ ಮುಂತಾದ ಅಧಿಕಾರಿಗಳ ಸಹಾಯದಿಂದ ಕಂದಾಯ ಆಡಳಿತಕ್ಕೆ ಸಂಬಂಧಿಸಿದ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತಾನೆ. ಭೂ ಕಂದಾಯ ವಸೂಲಿ, ಬೆಳೆ ಸಾಲಗಳನ್ನು ನೀಡುವುದು ಮತ್ತು ವಸೂಲು ಮಾಡುವುದು ಕಂದಾಯಕ್ಕೆ ಸಂಬಂಧಿಸಿದ ವಿವಾದಗಳನ್ನು ತೀರ್ಮಾನಿಸುವುದು. ಸರಕಾರಿ ಭೂಮಿಗಳನ್ನು ನೋಡಿಕೊಳ್ಳುವುದು, ಖಜಾನೆ ಮತ್ತು ಉಪಖಜಾನೆಗಳ ಮೇಲ್ವಿಚಾರಣೆ, ಭೂ ಸುಧಾರಣೆಯನ್ನು ಜಾರಿಗೊಳಿಸುವುದು, ಸಾರ್ವಜನಿಕರ ಹಿತಾಸಕ್ತಿಯ ಉದ್ದೇಶಗಳಿಗೆ ಭೂಮಿಯನ್ನು ವಶಪಡಿಸಿಕೊಳ್ಳುವುದು ಮುಂತಾದ ಕಂದಾಯ ಆಡಳಿತಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಜಿಲ್ಲಾಧಿಕಾರಿ

ಅಭಿವೃದ್ಧಿ ಕಾರ್ಯಗಳು:

ಸ್ವಾತಂತ್ರ್ಯದ ನಂತರದ ದಿನಗಳಲ್ಲಿ ಜಿಲ್ಲೆಯ ಅಭಿವೃದ್ಧಿ ಆಡಳಿತದಲ್ಲಿ ಜಿಲ್ಲಾಧಿಕಾರಿಯು ಪ್ರಮುಖ ಪಾತ್ರ ವಹಿಸುತ್ತಿದ್ದಾನೆ. ತಮಿಳುನಾಡು, ರಾಜಸ್ಥಾನ, ಮುಂತಾದ ರಾಜ್ಯಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಟಾನದಲ್ಲಿ ತೊಡಗಿರುವ ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳು ಜಿಲ್ಲಾಧಿಕಾರಿಯ ಮೇಲ್ವಿಚಾರಣೆ ಮಾರ್ಗದರ್ಶನ ಹಾಗೂ ನಾಯಕತ್ವದಲ್ಲಿ ಕಾರ್ಯನಿರ್ವಹಿಸುತ್ತಾರೆ. ಅನೇಕ ರಾಜ್ಯಗಳಲ್ಲಿ ಜಿಲ್ಲಾಧಿಕಾರಿಯನ್ನು “ಜಿಲ್ಲಾ ಅಭಿವೃದ್ಧಿ ಅಧಿಕಾರಿ”ಎಂತಲೂ ಕರೆಯಲಾಗುತ್ತದೆ. ಗುಜರಾತ್, ಮಹಾರಾಷ್ಟ್ರ, ಕರ್ನಾಟಕದ ರಾಜ್ಯಗಳಲ್ಲಿ ಅಭಿವೃದ್ದಿ ಆಡಳಿತದ ನಿರ್ವಹಣೆಯ ಜವಾಬ್ದಾರಿಯನ್ನು ಜಿಲ್ಲಾ ಪರಿಷತ್ತುಗಳಿಗೆ ನೀಡಲಾಗಿದೆ. ಜಿಲ್ಲಾಧಿಕಾರಿಯು ಜಿಲ್ಲಾ ಗ್ರಾಮೀಣ ಅಭಿವೃದ್ಧಿ ನಿಯೋಗಿಯ ಪದನಿತ್ತ ಅಧ್ಯಕ್ಷರೂ ಹೌದು. DRDA ಗ್ರಾಮೀಣ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಅನುಷ್ಠಾನಗೊಳಿಸುವ ಹಾಗೂ ಮೌಲ್ಯಮಾಪನ ಮಾಡುವ ನಿಯೋಗವಾಗಿದೆ. ಅಲ್ಲದೇ ಇದು ಸಾರ್ವಜನಿಕ, ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ ಮುಂತಾದ ಸಮಾಜದ ದುರ್ಬಲ ವರ್ಗದವರ ರಕ್ಷಣೆಗಳು ಸೇರಿವೆ.

ನಿಯಂತ್ರಣ ಕಾರ್ಯಗಳು:

ಇದು ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಅವಶ್ಯಕ ವಸ್ತುಗಳ ಹಂಚಿಕೆ ಮತ್ತು ನಿಯಂತ್ರಣಗಳನ್ನು ಒಳಗೊಂಡಿದೆ, ಇದರ ಜೊತೆಗೆ ಅಬಕಾರಿ, ಸ್ಟಾಂಪ್ ಮತ್ತು ನೋಂದಣಿಗಳ ನಿಯಂತ್ರಣವೂ ಸೇರಿದೆ.

ಮತದಾನದ ಕಾರ್ಯಗಳು:

ಜಿಲ್ಲಾಧಿಕಾರಿಯು ಜಿಲ್ಲೆಯ ಚುನಾವಣಾಧಿಕಾರಿಯಾಗಿ -ರುತ್ತಾರೆ ಮತ್ತು ಅವರು ಲೋಕಸಭಾ, ರಾಜ್ಯಸಭಾ, ರಾಜ್ಯದ ವಿಧಾನಸಭಾ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಉಸ್ತುವಾರಿಯನ್ನು ಹೊಂದಿರುತ್ತಾರೆ.

ಪುರಸಭಾ ಆಡಳಿತ:

ಸಾಮಾನ್ಯವಾಗಿ ಜಿಲ್ಲಾಧಿಕಾರಿಯು ನಗರದ ಸ್ಥಳೀಯ ಸಂಸ್ಥೆಗಳ ಮೇಲ್ವಿಚಾರಣೆ ಹಾಗೂ ಅದು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ? ಎಂಬುದರ ಬಗ್ಗೆ ಜವಾಬ್ದಾರಿಯನ್ನು ಹೊಂದಿರುತ್ತಾರೆ. ನಗರ ಪ್ರದೇಶದ ಕಡು ಬಡವರಿಗಾಗಿ ವಿವಿಧ ಇಲಾಖೆಗಳು ಹಾಕಿಕೊಳ್ಳುವ ಬಡತನದ ನಿವಾರಣಾ ಕಾರ್ಯಗಳ ಜಾರಿಯು – ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನಡೆಯುತ್ತದೆ.

ವಿಪತ್ತು ನಿರ್ವಹಣೆ :

ಪ್ರವಾಹ, ಬರಗಾಲ, ಬೆಂಕಿಯ ಅಪಘಾತಗಳು, ಭೂಕಂಪಗಳು, ಮತ್ತು ಇತರೆ ಪ್ರಕೃತಿ ವಿಕೋಪಗಳು ಸಂಭವಿಸಿದ ಸಂದರ್ಭಗಳಲ್ಲಿ ಸಂಪೂರ್ಣ ಜಿಲ್ಲಾಡಳಿತವು ತೊಂದರೆಗೆ ಒಳಗಾದ ಜನತೆಗೆ ಸ್ಪಂದಿಸುವ ಕಾರ್ಯದಲ್ಲಿ ನಿರತವಾಗಿರುತ್ತದೆ ಮತ್ತು ವಿವಿಧ ಇಲಾಖೆಗಳ ಕಾರ್ಯ ಚಟುವಟಿಕೆಗಳಲ್ಲಿ ಸಮನ್ವಯ ತರುವ ಕೆಲಸವನ್ನು ಮಾಡುತ್ತದೆ.

ಸಾರ್ವಜನಿಕ ಕುಂದು ಕೊರತೆಗಳು :

ಜಿಲ್ಲಾಧಿಕಾರಿಯು ಜಿಲ್ಲಾ ಸಾರ್ವಜನಿಕ ಕುಂದು ಕೊರತೆಗಳ ಅಧಿಕಾರಿಯಾಗಿದ್ದು, ಅದರ ಪರಿಣಾಮವಾಗಿ ಜಿಲ್ಲೆಯ ಎಲ್ಲಾ ಇಲಾಖೆಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೋ ಎಂಬುದರ ಬಗ್ಗೆ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತಾರೆ.

ಭೂ ಸ್ವಾಧೀನ :

ಸಾರ್ವಜನಿಕ ಉದ್ದೇಶ ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಅಧಿಕಾರ ಜಿಲ್ಲಾಧಿಕಾರಿಗಳಿಗಿದೆ. ಕಾಲಕಾಲಕ್ಕೆ ಮಾಡುವ ರಾಷ್ಟ್ರೀಯ ಮಟ್ಟದ ಗಣತಿ ಕಾರ್ಯವು ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನಡೆಯುತ್ತದೆ.

ಇತರೆ ಕಾರ್ಯದರ್ಶಿಗಳ ವ್ಯಾಪ್ತಿಗೆ ಒಳಪಡದಿರುವ ವಿಷಯಗಳನ್ನು ನಿಭಾಯಿಸುವುದು.

ವಲಯ ಮಂಡಳಿಗಳ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುವುದು.

ರಾಜ್ಯ ಸಚಿವಾಲಯದ ಕಾರ್ಯ ನಿರ್ವಹಣೆಯ ಮೇಲ್ವಿಚಾರಣೆ ನಡೆಸುವುದು.

ತನ್ನ ರಾಜ್ಯ ಸರ್ಕಾರ, ಇತರೆ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರಗಳೊಡನೆ ಸಂಪರ್ಕವನ್ನು ಕಾಯ್ದುಕೊಳ್ಳುವುದು.

ಮುಖ್ಯ ಕಾರ್ಯದರ್ಶಿಗಳ ಸಭೆಗಳಿಗೆ ಹಾಜರಾಗುವುದು.

ರಾಜ್ಯ ಸರ್ಕಾರದ ವಕ್ತಾರನಾಗಿ ಕಾರ್ಯ ನಿರ್ವಹಿಸುವುದು.

ರಾಜ್ಯಪಾಲರ ಆಳ್ವಿಕೆಯ ಸಂದರ್ಭದಲ್ಲಿ ರಾಜ್ಯಪಾಲರಿಗೆ ಸಲಹೆ ನೀಡುವುದು.

ರಾಷ್ಟ್ರೀಯ ಅಭಿವೃದ್ಧಿ ಮಂಡಳಿಗಳ ಸಭೆಗಳಿಗೆ ಹಾಜರಾಗುವುದು.

ರಾಜ್ಯ ಸರಕಾರದ ಪ್ರಧಾನ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುವುದು.

ಮೇಲಿನವುಗಳೆಲ್ಲವೂ ಜಿಲ್ಲಾಧಿಕಾರಿಯ ಪ್ರಮುಖ ಕಾರ್ಯಗಳಾಗಿವೆ.

6. ಕೇಂದ್ರ ಲೋಕಸೇವಾ ಆಯೋಗದ ರಚನೆ, ಅಧಿಕಾರ ಮತ್ತು ಕಾರ್ಯಗಳನ್ನು ವಿವರಿಸಿ.

ಕೇಂದ್ರ ಲೋಕಸೇವಾ ಆಯೋಗವು ಅಖಿಲ ಭಾರತ ಸೇವೆ ಹಾಗೂ ಕೇಂದ್ರ ಸೇವೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡುವ ಸಂಸ್ಥೆಯಾಗಿದೆ.

ಸಂವಿಧಾನದ 315 ನೇ ವಿಧಿಯನ್ವಯ ಈ ಆಯೋಗವನ್ನು ಸೃಷ್ಟಿಸಲಾಗಿದೆ. ಕೇಂದ್ರ ಲೋಕಸೇವಾ ಆಯೋಗವು ರಾಜ್ಯ ಸರ್ಕಾರಗಳ ವಿನಂತಿಯ ಮೇರೆಗೆ ನೇಮಕಾತಿಗೆ ಸಂಬಂಧಿಸಿದ ರಾಜ್ಯಸರ್ಕಾರಗಳ ಅಗತ್ಯಗಳನ್ನು ಪೂರೈಸುವ ಅಧಿಕಾರವನ್ನು ಹೊಂದಿರುತ್ತದೆ.

ರಚನೆ :

ಸಂವಿಧಾನದ 315 ನೇ ವಿಧಿಯು ಕೇಂದ್ರ ಲೋಕಸೇವಾ ಆಯೋಗದ ರಚನೆಗೆ ಅವಕಾಶ ನೀಡಿದೆ. ಇದರ ರಚನೆ ಈ ಕೆಳಗಿನಂತಿದೆ.

ಸದಸ್ಯತ್ವ :

ಪ್ರಸ್ತುತ ಕೇಂದ್ರ ಲೋಕಸೇವಾ ಆಯೋಗವು ಒಬ್ಬ ಅಧ್ಯಕ್ಷ ಮತ್ತು 10 ಮಂದಿ ಸದಸ್ಯರಿಂದ ಕೂಡಿದೆ. ಈ ಆಯೋಗದ ಅಧ್ಯಕ್ಷ ಮತ್ತು ಸದಸ್ಯರು ರಾಷ್ಟ್ರಪತಿಯಿಂದ ನೇಮಕಗೊಂಡಿರುತ್ತಾರೆ. ಆಯೋಗದ ಒಟ್ಟು ಸದಸ್ಯರಲ್ಲಿ ಕನಿಷ್ಟ ಪಕ್ಷ 10 ವರ್ಷಗಳ ಆಡಳಿತಾತ್ಮಕ ಸೇವಾನುಭವವನ್ನು ಹೊಂದಿರಬೇಕು. ಇನ್ನುಳಿದ ಅರ್ಧದಷ್ಟು ಸದಸ್ಯರ ವಿದ್ಯಾರ್ಹತೆಯ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ.

ಅಧಿಕಾರಾವಧಿ:

ಕೇಂದ್ರ ಲೋಕಸೇವಾ ಆಯೋಗದ ಸದಸ್ಯರು 6 ವರ್ಷಗಳ ಕಾಲ ಅಥವಾ 65 ವರ್ಷಗಳು ತುಂಬುವವರೆಗೆ ಅಧಿಕಾರದಲ್ಲಿರುತ್ತಾರೆ. ರಾಷ್ಟ್ರಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸುವ ಮೂಲಕ ಅವಧಿಗೆ ಮುನ್ನವೇ ಅಧಿಕಾರದಿಂದ ನಿರ್ಗಮಿಸಬಹುದು.

ವೇತನ ಮತ್ತು ಸೇವಾಸ್ಥಿತಿಗಳು :

ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರ ಮತ್ತು ಸದಸ್ಯರ ವೇತನವನ್ನು ಕಾಲಕಾಲಕ್ಕೆ ಸಂಸತ್ತು ನಿರ್ಧರಿಸುತ್ತದೆ. ಇನತನ ಪಿಂಚಣಿ ಹಾಗೂ ಇತರೆ ಭತ್ಯೆಗಳನ್ನು ಭಾರತದ ಸಂಚಿತ ನಿಧಿಯಿಂದ ನೀಡಲಾಗುತ್ತಿದೆ.

ವಜಾಗೊಳಿಸುವಿಕೆ :

ಆಯೋಗದ ಅಧ್ಯಕ್ಷ ಮತ್ತು ಸದಸ್ಯರು ದಿವಾಳಿಯಾಗಿದ್ದಾರೆಂದು ತೀರ್ಮಾನಿಸಲ್ಪಟ್ಟರೆ ಅಥವಾ ತಮ್ಮ ಅಧಿಕಾರದ ಅವಧಿಯಲ್ಲಿ ವೇತನ ಪಡೆಯುವ ಬೇರೆ ಹುದ್ದೆಯಲ್ಲಿದ್ದರೆ ಅಥವಾ ಸೇವೆಯಲ್ಲಿ ಮುಂದುವರಿಯಲು ಅಸಮರ್ಥರು ಎಂದು ಅಭಿಪ್ರಾಯಪಟ್ಟರೆ ರಾಷ್ಟ್ರಪತಿಗಳು ಇವರನ್ನು ಪದಚ್ಯುತಿಗೊಳಿಸಬಹುದು.

ಅಧ್ಯಕ್ಷರು ಹಾಗೂ ಸದಸ್ಯರನ್ನು ಅನುಚಿತ ವರ್ತನೆಯ ಆಧಾರದ ಮೇಲೆಯೂ ರಾಷ್ಟ್ರಾಧ್ಯಕ್ಷರು ಪದಚ್ಯುತಿ ಗೊಳಿಸಬಹುದು. ಆದರೆ ಈ ಸಂಬಂಧ ಸರ್ವೋಚ್ಚ ನ್ಯಾಯಾಲಯವು ವಿಚಾರಣೆಯನ್ನು ನಡೆಸಿ ಶಿಫಾರಸ್ಸು ಮಾಡಬೇಕು.

ಕೇಂದ್ರ ಲೋಕಸೇವಾ ಆಯೋಗದ ಕಾರ್ಯಗಳು :

ಭಾರತ ಸಂವಿಧಾನದ 320 ನೇ ವಿಧಿಯ ಕೇಂದ್ರ ಲೋಕಸೇವಾ ಆಯೋಗದ ಕಾರ್ಯಗಳನ್ನು ನಿರೂಪಿಸುತ್ತದೆ.

  1. ಕೇಂದ್ರ ಲೋಕಸೇವಾ ಆಯೋಗವು ಭಾರತ ಸೇವೆಗಳು, ಕೇಂದ್ರ ಸೇವೆಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅವಶ್ಯಕವಾದ ಸೇವೆಗಳಿಗೆ ನೇಮಕ ಮಾಡಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತದೆ.
  2. ರಾಜ್ಯಪಾಲರ ವಿನಂತಿಯ ಮೇರೆಗೆ ರಾಷ್ಟ್ರಾಧ್ಯಕ್ಷರ ಅನುಮೋದನೆಯೊಂದಿಗೆ ರಾಜ್ಯ ಸೇವೆಗಳಿಗೆ ಸಂಬಂಧಿಸಿದ ಕೆಲವು ಅಥವಾ ಎಲ್ಲಾ ಕಾರ್ಯಗಳನ್ನು ಕೇಂದ್ರ ಲೋಕಸೇವಾ ಆಯೋಗವು ನಿರ್ವಹಿಸ ಬಹುದು.
  3. ಆಯೋಗವು ನೇಮಕಾತಿ ವಿಧಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುತ್ತದೆ.
  4. ಆಯೋಗವು ಬಡ್ತಿ ನೀಡಲು ಅನುಸರಿಸಬೇಕಾದ ತತ್ವಗಳ ಬಗೆಗೆ ಕೇಂದ್ರ ಸರಕಾರಕ್ಕೆ ಸಲಹೆ ನೀಡುತ್ತದೆ.
  5. ಆಯೋಗವು ಒಂದು ಸೇವೆಯಿಂದ ಇನ್ನೊಂದು ಸೇವೆಗೆ ವರ್ಗಾವಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರಕ್ಕೆ ಸಲಹೆ ನೀಡುತ್ತದೆ.
  6. ಆಯೋಗವು ಶಿಸ್ತು ಕ್ರಮಕ್ಕೆ ಸಂಬಂಧಿಸಿದ ಸಲಹೆಯನ್ನು ಕೇಂದ್ರ ಸರಕಾರಕ್ಕೆ ನೀಡುತ್ತದೆ.
  7. ಆಯೋಗವು ಸೇವಾವಧಿಯನ್ನು ವಿಸ್ತರಿಸುವುದಕ್ಕೆ ಹಾಗೂ ಕೆಲವು ನಿವೃತ್ತ ಅಧಿಕಾರಿಗಳ ಮರು ನೇಮಕಾತಿಗೆ ಸಂಬಂಧಿಸಿದ ಸಲಹೆಗಳನ್ನು ನೀಡುತ್ತದೆ.
  8. ತನ್ನ ಕಾರ್ಯಕ್ಕೆ ಸಂಬಂಧಿಸಿದ ವಾರ್ಷಿಕ ವರದಿಯನ್ನು ರಾಷ್ಟ್ರಾಧ್ಯಕ್ಷರಿಗೆ ಸಲ್ಲಿಸುತ್ತದೆ.
  9. ಆಯೋಗವು ರಾಷ್ಟ್ರಾಧ್ಯಕ್ಷತೆ ಇಚ್ಚಸಿದ್ದಲ್ಲಿ ನಾಗರೀಕ ಸೇವಾ ವರ್ಗಕ್ಕೆ ಸಂಬಂಧಿಸಿದ ಯಾವುದೇ ಸಲಹೆಯನ್ನು ನೀಡುತ್ತದೆ.
  10. ಕರ್ನಾಟಕ ಲೋಕಸೇವಾ ಆಯೋಗದ ರಚನೆ, ಅಧಿಕಾರ ಮತ್ತು ಕಾರ್ಯಗಳನ್ನು ವಿವರಿಸಿ.

ಭಾರತ ಸಂವಿಧಾನವು ಪ್ರತಿ ರಾಜ್ಯ ಅಥವಾ ಎರಡು ಅಥವಾ ಅದಕ್ಕಿಂತಲೂ ಹೆಚ್ಚಿನ ರಾಜ್ಯಗಳು ಜಂಟಿಯಾಗಿ ಲೋಕಸೇವಾ ಆಯೋಗಗಳನ್ನು ಸ್ಥಾಪಿಸುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಅದರಂತೆಯೇ ಕರ್ನಾಟಕ ಲೋಕಸೇವಾ ಆಯೋಗವು ಸ್ಥಾಪನೆಗೊಂಡು ಕಾಲದಿಂದ ಕಾಲಕ್ಕೆ ರಾಜ್ಯದ ರಾಜ್ಯಪಾಲರು ನಿರ್ಧರಿಸಲ್ಪಟ್ಟ ಅಧ್ಯಕ್ಷ ಮತ್ತು ಇತರೆ ಸದಸ್ಯರನ್ನು ಹೊಂದಿದೆ. ಆಯೋಗಕ್ಕೆ ನೇಮಕಗೊಂಡ ಸದಸ್ಯರಲ್ಲಿ ಕನಿಷ್ಟ ಅರ್ಧದಷ್ಟು ಸದಸ್ಯರು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಾಗಿರುತ್ತಾರೆ.

ಸಂವಿಧಾನದ 315 ನೇ ವಿಧಿಯು ಪ್ರತಿಯೊಂದು ರಾಜ್ಯಕ್ಕೆ ತನ್ನದೇ ಆದ ಲೋಕಸೇವಾ ಆಯೋಗವನ್ನು ಹೊಂದಲು ಅವಕಾಶ ನೀಡಿದೆ. ಕರ್ನಾಟಕ ರಾಜ್ಯದ ಲೋಕಸೇವಾ ಆಯೋಗವನ್ನು ಕರ್ನಾಟಕ ಲೋಕಸೇವಾ ក [KPSC] ০ ಹೆಸರಿನಿಂದ ಕರೆಯಲಾಗುತ್ತದೆ. ಇದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿದೆ. ಇದು ಕರ್ನಾಟಕ ಆಡಳಿತ ಸೇವೆ, ಕರ್ನಾಟಕದ ಅಧಿಕಾರಿ ಸೇವೆ, ಕರ್ನಾಟಕದ ವಾಣಿಜ್ಯ ತೆರಿಗೆ ಸೇವೆ, ಕರ್ನಾಟಕ ಶಿಕ್ಷಣ ಸೇವೆ, ಕರ್ನಾಟಕದ ಪೋಲಿಸ್ ಸೇವೆ ಮುಂತಾದವುಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ.

Leave a Comment