2nd Puc History Hosa Dharmagala Udaya Chapter Notes Question Answer Guide Extract Mcq Pdf Download in Kannada Medium Karnataka State Syllabus 2025, ದ್ವಿತೀಯ ಪಿಯುಸಿ ಇತಿಹಾಸ ಹೊಸ ಧರ್ಮಗಳ ಉದಯ ನೋಟ್ಸ್ ಪ್ರಶ್ನೋತ್ತರ hosa dharmagala udaya question answer 2nd Puc History Chapter 4.2 Question Answer in Kannada 2nd Puc History 4.2 Lesson Question Answer ಹೊಸ ಧರ್ಮಗಳ ಉದಯ Notes.ಹೊಸ ಧರ್ಮಗಳ ಉದಯಕ್ಕೆ ಕಾರಣಗಳು

I. ಈ ಕೆಳಗಿನ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಆರಿಸಿ ಬರೆಯಿರಿ.
1.ಸಿದ್ಧಾರ್ಥ ಜ್ಞಾನೋದಯವನ್ನು ಪಡೆದ ಸ್ಥಳ
ಎ) ಲುಂಬಿನಿ
ಬಿ) ಗಯಾ
ಸಿ) ಜೃಂಬಿಕಾ
ಡಿ) ಕುಶಿನಗರ
2. ಬೌದ್ಧ ಧರ್ಮದ ಸ್ಥಾಪಕ
ಎ) ಮಹಾವೀರ
ಬಿ) ಗೌತಮ ಬುದ್ದ
ಸಿ) ವೃಷಭನಾಥ
ಡಿ) ಪಾರ್ಶ್ವನಾಥ
3. ಪಾಶ್ವನಾಥ ಎಷ್ಟನೇ ತೀರ್ಥಂಕರರಾಗಿದ್ದರು
ಎ) 24
ಬಿ) 23
ಸಿ) 22
ಡಿ) 21
4. ವರ್ಧಮಾನ ಮಹಾವೀರ ಜೈನಧರ್ಮದ ಎಷ್ಟನೇ ತೀರ್ಥಂಕರ
ಎ) 24
ಬಿ) 23
ಸಿ) 22
ಡಿ) 21
5. ಬೌದ್ದ ಧರ್ಮದಲ್ಲಿ ಇರುವ ಪಂಥಗಳು
ಎ) 4
ಬಿ) 3
ಸಿ) 2
ಡಿ) 5
6. ಮಹಾವೀರ ನಿರ್ವಾಣ ಹೊಂದಿದ್ದು
ಎ) ಸಾ.ಶ.ಪೂ. 527
ಬಿ) ಸಾ.ಶ.ಪೂ. 526
ಸಿ) ಸಾ.ಶ.ಪೂ. 525
ಡಿ) ಸಾ.ಶ.ಪೂ. 524
7. ಸಹಸ್ರ ಕಂಬಗಳ ಬಸದಿ ಇರುವ ಸ್ಥಳ
ಎ) ಧರ್ಮಸ್ಥಳ
ಬಿ) ಶ್ರವಣಬೆಳಗೊಳ
ಸಿ) ಮೂಡಬಿದಿರೆ
ಡಿ) ಉಳ್ಳಾಲ
8.ಪಾರ್ಶ್ವನಾಥನು ತನ್ನ ಎಷ್ಟನೇ ವಯಸ್ಸಿನಲ್ಲಿ ಜ್ಞಾನೋದಯ ಪಡೆದನು.
ಎ) 25
ಬಿ) 30
ಸಿ) 32
ಡಿ) 31
II ಬಿಟ್ಟಸ್ಥಳವನ್ನು ಭರ್ತಿಮಾಡಿ.
1. ಜೈನಧರ್ಮ ಸ್ಥಾಪಕ ವೃಷಭನಾಥ
2. ಜೈನಧರ್ಮದ 23ನೇ ತೀರ್ಥಂಕರ ಪಾರ್ಶ್ವನಾಥ.
3. ಜೈನ ಧರ್ಮದ 24 ನೇ ತೀರ್ಥಂಕರ ವರ್ಧಮಾನ ಮಹಾವೀರ.
4. ‘ಬುದ್ಧ’ ಪದದ ಅರ್ಥ ಜ್ಞಾನವನ್ನು ಪಡೆದವನು
5. ವರ್ಧಮಾನ ನಿರ್ವಾಣ ಹೊಂದಿದ ಸ್ಥಳ ದಕ್ಷಿಣಬಿಹಾರದ ರಾಜಗೃಹ ಸಮೀಪದ ಪಾವಾದಲ್ಲಿ
6. ಬೌದ್ಧಧರ್ಮ ಸ್ಥಾಪಕ ಗೌತಮಬುದ್ಧ
7. ಬುದ್ಧ ಜನಿಸಿದ ಸ್ಥಳ ಲುಂಬಿನಿವನ
8. ಸಿದ್ಧಾರ್ಥನು ಜ್ಞಾನೋದಯ ಹೊಂದಿದ ಸ್ಥಳ ಗಯಾ
9. ಬುದ್ಧನ ಮೊದಲ ಹೆಸರು ಸಿದ್ಧಾರ್ಥ
10. ಬುದ್ಧ ನಿರ್ವಾಣ ಹೊಂದಿದ ಸ್ಥಳ ಉತ್ತರಪ್ರದೇಶದ ಕುಶಿನಗರ
11. ಬುದ್ಧ ತನ್ನ ಮೊದಲ ಪ್ರವಚನ ನೀಡಿದ ಸ್ಥಳ ಸಾರನಾಥದ ಜಿಂಕೆವನ
12. ವರ್ಧಮಾನ ಜ್ಞಾನೋದಯ ಪಡೆದ ಸ್ಥಳ ಬಿಹಾರದ ಜೃಂಬಿಕಾಗ್ರಾಮ
13. ವರ್ಧಮಾನ ಜನಿಸಿದ ಸ್ಥಳ ವೈಶಾಲಿ ಸಮೀಪದ ಕುಂದಗ್ರಾಮ
III.ಹೊಂದಿಸಿ ಬರೆಯಿರಿ.
ಕ್ರಮ ಸಂಖ್ಯೆ | ಅ | ಆ | ಉತ್ತರಗಳು |
---|---|---|---|
1 | 24ನೇ ತೀರ್ಥಂಕರ | ಬೌದ್ಧಧರ್ಮದ ಪಂಥಗಳು | ವರ್ಧಮಾನ ಮಹಾವೀರ |
2 | 23ನೇ ತೀರ್ಥಂಕರ | ಜೈನಧರ್ಮದ ಪಂಥಗಳು | ಪಾರ್ಶ್ವನಾಥ |
3 | ಮೊದಲನೇ ತೀರ್ಥಂಕರ | ಮಹಾವೀರನ ತಂದೆ-ತಾಯಿಗಳು | ವೃಷಭನಾಥ |
4 | ಜೈನಧರ್ಮ ಸ್ಥಾಪಕ | ಗೌತಮಬುದ್ಧನ ತಂದೆ-ತಾಯಿಗಳು | ವೃಷಭನಾಥ (ಮೊದಲನೇ ತೀರ್ಥಂಕರ) |
5 | ಬೌದ್ದ ಧರ್ಮ ಸ್ಥಾಪಕ | ಜ್ಞಾನವನ್ನು ಪಡೆದವನು | ಗೌತಮ ಬುದ್ದ |
6 | ಬುದ್ದನ ಮೊದಲ ಹೆಸರು | ಲುಂಬಿನಿವನ | ಸಿದ್ದಾರ್ಥ |
7 | ಬುದ್ದ ಪದದ ಅರ್ಥ | ವೈಶಾಲಿ ಸಮೀಪದ ಕುಂದಗ್ರಾಮ | ಜ್ಞಾನವನ್ನು ಪಡೆದವನು |
8 | ವರ್ಧಮಾನ ಜನ್ಮಸ್ಥಳ | ಗೌತಮ ಬುದ್ದ | ವೈಶಾಲಿ ಸಮೀಪದ ಕುಂದಗ್ರಾಮ |
9 | ಬುದ್ದನ ಜನ್ಮಸ್ಥಳ | ವೃಷಭನಾಥ | ಲುಂಬಿನಿವನ |
10 | ಉತ್ತರ ಪ್ರದೇಶದ ಕುಶೀನಗರ | ಬುದ್ದ ಮೊದಲ ಪ್ರವಚನ ನೀಡಿದ ಸ್ಥಳ | ಬುದ್ದ ನಿರ್ವಾಣ ಹೊಂದಿದ ಸ್ಥಳ |
11 | ದಕ್ಷಿಣ ಬಿಹಾರದ ರಾಜಗೃಹ ಸಮೀಪದ ಪಾವಾ | ಗಯಾ | ವರ್ಧಮಾನ ನಿರ್ವಾಣ ಸ್ಥಳ |
12 | ಬುದ್ದ ಜ್ಞಾನೋದಯ ಪಡೆದ ಸ್ಥಳ | ವರ್ಧಮಾನ ನಿರ್ವಾಣ ಸ್ಥಳ | ಗಯಾ |
13 | ಸಾರನಾಥದ ಜಿಂಕೆವನ | ಪಾರ್ಶ್ವ ನಾಥ | ಬುದ್ದ ಮೊದಲ ಪ್ರವಚನ ನೀಡಿದ ಸ್ಥಳ |
14 | ಸಿದ್ದಾರ್ಥ,ತ್ರಿಕಲಾ ದೇವಿ | ವರ್ಧಮಾನ ಮಹಾವೀರ | ಮಹಾವೀರನ ತಂದೆ-ತಾಯಿಗಳು |
15 | ಶುದ್ಧೋದನ ಮತ್ತು ಮಾಯಾದೇವಿ | ಬುದ್ದ ನಿರ್ವಾಣ ಹೊಂದಿದ ಸ್ಥಳ | ಗೌತಮಬುದ್ಧನ ತಂದೆ-ತಾಯಿಗಳು |
16 | ಹೀನಾಯಾನ, ಮಾಹಾಯಾನ | ಸಿದ್ದಾರ್ಥ | ಬೌದ್ಧಧರ್ಮದ ಪಂಥಗಳು |
17 | ಶ್ವೇತಾಂಬರ, ದಿಗಂಬರ | ವೃಷಭನಾಥ (ಮೊದಲನೇ ತೀರ್ಥಂಕರ) | ಜೈನಧರ್ಮದ ಪಂಥಗಳು |
IV. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ:
1. ಬೌದ್ಧಧರ್ಮದ ಎರಡು ಪಂಥಗಳು ಯಾವುವು?
ಹೀನಾಯಾನ ಮತ್ತು ಮಹಾಯಾನ
2. ಜೈನಧರ್ಮದ ಎರಡು ಪಂಥಗಳು ಯಾವುದು?
ಶ್ವೇತಾಂಬರ ಮತ್ತು ದಿಗಂಬರ
3.ಬೌದ್ಧ ಧರ್ಮವನ್ನು ಸ್ಥಾಪಿಸಿದವರು ಯಾರು?
ಗೌತಮ ಬುದ್ಧ
4. ಸಿದ್ದಾರ್ಥನು ಯಾವ ಸ್ಥಳದಲ್ಲಿ ಜ್ಞಾನೋದಯವನ್ನು ಹೊಂದಿದನು?
ಸಿದ್ದಾರ್ಥನು ‘ಗಯಾ’ದಲ್ಲಿ ಜ್ಞಾನೋದಯವನ್ನು ಹೊಂದಿದನು.
5. ಜೈನ ಧರ್ಮವನ್ನು ಯಾರು ಸ್ಥಾಪಿಸಿದರು?
ಮೊದಲ ತೀರ್ಥಂಕರನಾದ ವೃಷಭನಾಥ.
6. 23ನೇ ತೀರ್ಥಂಕರರು ಯಾರಾಗಿದ್ದರು?
23ನೇ ತೀರ್ಥಂಕರರು ಪಾರ್ಶ್ವನಾಥ.
7. ಬುದ್ಧ ಎಲ್ಲಿ ನಿರ್ವಾಣ ಹೊಂದಿದನು?
ಉತ್ತರ ಪ್ರದೇಶದ ಕುಶಿನಗರದಲ್ಲಿ ನಿರ್ವಾಣ ಹೊಂದಿದನು.
8. ಬುದ್ಧ ಎಲ್ಲಿ ಜನಿಸಿದನು?
ಬುದ್ಧ ಲುಂಬಿನಿವನದಲ್ಲಿ ಜನಿಸಿದನು.
9. ವರ್ಧಮಾನನು ಎಲ್ಲಿ ಜ್ಞಾನೋದಯವನ್ನು ಪಡೆದನು?
ಬಿಹಾರದ ಜೃಂಬಿಕಾ ಗ್ರಾಮದಲ್ಲಿ.
10. ವರ್ಧಮಾನ ಎಲ್ಲಿ ನಿರ್ವಾಣ ಹೊಂದಿದನು?
ದಕ್ಷಿಣ ಬಿಹಾರದ ರಾಜಗೃಹ ಸಮೀಪದ ಪಾವಾದಲ್ಲಿ.
11. ವರ್ಧಮಾನ ಎಲ್ಲಿ ಜನಿಸಿದರು?
ವೈಶಾಲಿ ಸಮೀಪದ ಕುಂದಗ್ರಾಮದಲ್ಲಿ
12. ಸಿದ್ಧಾರ್ಥನು ಜ್ಞಾನೋದಯ ಪಡೆದ ಸ್ಥಳ ಯಾವುದು?
ಗಯಾ
13. ‘ಬುದ್ಧ’ ಪದದ ಅರ್ಥವೇನು?
ಜ್ಞಾನವನ್ನು ಪಡೆದವನು ಎಂದರ್ಥ.
14. ಬುದ್ದನ ಮೊದಲ ಹೆಸರೇನು?
ಬುದ್ಧನ ಮೊದಲ ಹೆಸರು ಸಿದ್ಧಾರ್ಥ.
15. ಗೌತಮಬುದ್ಧನ ತಂದೆ-ತಾಯಿಗಳ ಹೆಸರೇನು?
ತಂದೆ- ಶುದ್ಧೋಧನ, ತಾಯಿ- ಮಾಯಾದೇವಿ
16. ಮಹಾವೀರನ ತಂದೆ-ತಾಯಿಗಳ ಹೆಸರೇನು?
ತಂದೆ- ಸಿದ್ದಾರ್ಥ, ತಾಯಿ ತ್ರಿಶಾಲದೇವಿ
17.ಬುದ್ದ ತನ್ನ ಮೊದಲ ಪ್ರವಚನವನ್ನು ಎಲ್ಲಿ ನೀಡಿದನು?
ಬುದ್ಧ ತನ್ನ ಮೊದಲ ಪ್ರವಚನವನ್ನು ಸಾರನಾಥದ ಜಿಂಕೆವನದಲ್ಲಿ ನೀಡಿದನು.
18. ಬೌದ್ಧಧರ್ಮದ ಸ್ಥಾಪಕ ಯಾರು?
ಗೌತಮಬುದ್ಧ
V. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ 2 ಪದ ಅಥವ 2 ವಾಕ್ಯದಲ್ಲಿ ಉತ್ತರಿಸಿ:
1. ವರ್ಧಮಾನನ ತಂದೆ ತಾಯಿ ಯಾರು?
ತಂದೆ ಸಿದ್ದಾರ್ಥ, ತಾಯಿ ತ್ರಿಶಲಾದೇವಿ.
2. ವರ್ಧಮಾನನ ತ್ರಿರತ್ನಗಳಲ್ಲಿ ಯಾವುದಾದರೂ ಎರಡನ್ನು ತಿಳಿಸಿ.
ಸಮ್ಯಕ್ ಜ್ಞಾನ, ಸಮ್ಯಕ್ ನಂಬಿಕೆ.
3. ಜೈನ ಸಭೆಗಳು ಎಲ್ಲಿ ಜರುಗಿದವು?
ಮೊದಲ ಸಭೆ ಪಾಟಲೀಪುತ್ರದಲ್ಲಿ, ಎರಡನೇ ಸಭೆ ವಲ್ಲಭಿಯಲ್ಲಿ.
4.ಜೈನ ಧರ್ಮದ ಪಂಗಡಗಳು ಯಾವುವು?
ಜೈನ ಧರ್ಮದ ಪಂಗಡಗಳು ಶ್ವೇತಾಂಬರರು, ದಿಗಂಬರರು.
5.ಬುದ್ದನ ತಂದೆತಾಯಿ ಯಾರು?
ಶುದ್ಧೋದನ ಮತ್ತು ಮಾಯಾದೇವಿ.
6. ಬುದ್ಧಬೋಧಿಸಿದ ಆರ್ಯ ಸತ್ಯಗಳಲ್ಲಿ ಯಾವುದಾದರೂ ಎರಡನ್ನು ತಿಳಿಸಿ.
- ಪ್ರಾಪಂಚಿಕ ಜೀವನವು ದುಃಖಮಯವಾಗಿದೆ.
- ಆಸೆಯೇ ದುಃಖಕ್ಕೆ ಮೂಲ ಕಾರಣ.
7. ಬೌದ್ಧ ಧರ್ಮಕ್ಕೆ ರಾಜಾಶ್ರಯ ನೀಡಿದ ಯಾರಾದರೂ ಇಬ್ಬರು ಅರಸರನ್ನು ಹೆಸರಿಸಿ,
ಬೌದ್ಧ ಧರ್ಮಕ್ಕೆ ರಾಜಾಶ್ರಯ ನೀಡಿದ ಅರಸರೆಂದರೆ ಅಶೋಕ, ಕಾನಿಷ್ಕ.
8. ತ್ರಿಪಿಟಕಗಳಲ್ಲಿ ಯಾವುದಾದರೂ ಎರಡನ್ನು ತಿಳಿಸಿ.
ವಿನಯ ಪಿಟಕ, ಸುತ್ತ ಪಿಟಕ,
9. ಬೌದ್ಧ ಧರ್ಮದ ಪಂಥಗಳನ್ನು ಹೆಸರಿಸಿ.
ಬೌದ್ಧ ಧರ್ಮದ ಪಂಥಗಳೆಂದರೆ ಹೀನಯಾನ ಮತ್ತು ಮಹಾಯಾನ.
VI ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ 15-20 ವಾಕ್ಯಗಳಲ್ಲಿ ಉತ್ತರಿಸಿ.
1.ಹೊಸ ಧರ್ಮಗಳ ಉದಯಕ್ಕೆ ಕಾರಣವಾದ ಅಂಶಗಳಾವುವು?
- ವೈದಿಕ ಧರ್ಮದಲ್ಲಿನ ಗೊಂದಲಗಳು: ಪುರೋಹಿತರ ಪ್ರಭಾವದಿಂದಾಗಿ ಬಹಳಷ್ಟು ಕಠೋರತೆಗಳು ಧರ್ಮದೊಳಗೆ ನುಸುಳಿ ಜನರು ಬೇಸರಗೊಂಡರು.
- ಪುರೋಹಿತ ವರ್ಗದ ಪರಮಾಧಿಕಾರಿ: ಎಲ್ಲರಿಗಿಂತ ತಾವೇ ಶ್ರೇಷ್ಠ ಎಂದು ತಿಳಿದು ಇತರ ಜಾತಿಗಳ ಮೇಲೆ ಪರಮಾಧಿಕಾರ ಸ್ಥಾಪಿಸಿದರು.
- ಪ್ರಾಣಿಬಲಿ : ಸಾಮಾನ್ಯ ಜನರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಣಿಬಲಿ, ಶಾಸ್ತ್ರಗಳ ವಿಧಿಗಳು ಒಂದು ಭಾಗವಾಗಿತ್ತು ಮತ್ತು ಇವುಗಳ ಆಚರಣೆ ದುಬಾರಿಯಾಗಿತ್ತು.
- ಮಂತ್ರಗಳ ಪಠಣ : ಸಂಸ್ಕೃತದಲ್ಲಿದ್ದ ವೈದಿಕ ಸಾಹಿತ್ಯಜನಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ ಇದರಿಂದ ಮಂತ್ರ ಪಠಣೆಯಲ್ಲಿ ನಂಬಿಕೆಯನ್ನು ಕಳೆದುಕೊಂಡರು.
- ಜಾತಿಪದ್ಧತಿ : ಬ್ರಾಹ್ಮಣರು ಉನ್ನತ ಸ್ಥಾನವನ್ನು ಹೊಂದಿದ್ದರು, ಇತರೇ ವರ್ಗದವರು ಮತ್ತು ಶೂದ್ರರು ಹೇಳಿಕೊಳ್ಳಲಾಗದ ಸಂಕಷ್ಟಗಳಿಗೆ ಗುರಿಯಾದರು.
- ಮಹಾನ್ ವ್ಯಕ್ತಿಗಳ ಜನನ : ಇದೇ ಸಮಯದಲ್ಲಿ ಮಹಾವೀರ ಮತ್ತು ಬುದ್ಧ ನಂತಹ ಮಹಾನ್ ವ್ಯಕ್ತಿಗಳ ಜನನವಾಗಿ ಅವರು ಸರಳವಾಗಿ ಭಾಷೆ ಮತ್ತು ತತ್ವಗಳನ್ನೊಳಗೊಂಡ ಧರ್ಮಗಳನ್ನು ಬೋಧಿಸಿದರು. ಇವೆಲ್ಲವೂ ಹೊಸಮತಗಳ ಉದಯಕ್ಕೆ ಕಾರಣವಾದವು.
2. ಮಹಾವೀರನ ಜೀವನ ಮತ್ತು ಬೋಧನೆಗಳನ್ನು ಕುರಿತು ಚರ್ಚಿಸಿ.
- ವರ್ಧಮಾನ ಮಹಾವೀರನು ವೈಶಾಲಿ ಸಮೀಪದ ಕುಂದಗ್ರಾಮದಲ್ಲಿ ಸಾ.ಶ.ಪೂ. 599ರಲ್ಲಿ ಜನಿಸಿದರು.
- ರಾಜ ಸಿದ್ದಾರ್ಥ ಮತ್ತು ತ್ರಿಶಲಾದೇವಿ ಈತನ ತಂದೆತಾಯಿಗಳು.
- 18ನೇ ವಯಸ್ಸಿನಲ್ಲಿ ರಾಜಕುಮಾರಿ ಯಶೋಧಳನ್ನು ವಿವಾಹವಾದನು. ಅವನಿಗೆ ಅನೊಜ್ಜ ಅಥವಾ ಪ್ರಿಯದರ್ಶಿನಿ ಎಂಬ ಮಗಳಿದ್ದಳು.
- ತನ್ನ ತಂದೆತಾಯಿಗಳ ಆಕಸ್ಮಿಕ ಮರಣದಿಂದಾಗಿ ವರ್ಧಮಾನನು ಉಡುಪನ್ನು ಸೇರಿದಂತೆ ಪ್ರಾಪಂಚಿಕ ಸುಖಭೋಗಗಳನ್ನು ತ್ಯಜಿಸಿ ಸತ್ಯವನ್ನು ಅರಸುತ್ತಾ ಸನ್ಯಾಸಿಯಾಗಿ ಸಂಚರಿಸಿ 13 ವರ್ಷಗಳ ಕಾಲ ಸ್ವದೇಹ ದಂಡನೆ ಮತ್ತು ಆಳವಾದ ಧ್ಯಾನ ಮಾಡುತ್ತಾ ಜೀವನ ನಡೆಸಿದನು.
- ವೈಶಾಖದ ಹತ್ತನೇ ದಿನ ಬಿಹಾರದ ಜೃಂಬಿಕಾ ಗ್ರಾಮದಲ್ಲಿ ಈತನಿಗೆ ಜ್ಞಾನೋದಯವಾಯಿತು. ವರ್ಧಮಾನ ಮಹಾವೀರನೆಂದು ಕರೆಯಲ್ಪಟ್ಟನು.
- ಸುಮಾರು 30 ವರ್ಷಗಳ ಕಾಲ ಕೋಸಲ, ಮಗದ, ವಿದೇಹ ಮತ್ತು ಅಂಗಗಳಲ್ಲಿ ಜೈನಧರ್ಮದ ತತ್ವಗಳನ್ನು ಭೋದಿಸುತ್ತಾ ಪ್ರವಾಸ ಕೈಗೊಂಡನು.
- ತನ್ನ 72ನೇ ವಯಸ್ಸಿನಲ್ಲಿ ಪಾವಾ ಎಂಬಲ್ಲಿ ಮರಣ ಹೊಂದಿದನು.
ಭೋದನೆಗಳು:
- ಪಂಚಶೀಲ ತತ್ವಗಳು: ಸತ್ಯ, ಅಹಿಂಸೆ, ಆಸ್ತೇಯ [ಕಳ್ಳತನ ಮಾಡದಿರುವುದು] ಅಪರಿಗ್ರಹ [ಅವಶ್ಯಕತೆಗಿಂತ ಹೆಚ್ಚಿನ ಸಂಪತ್ತನ್ನು ಹೊಂದದಿರುವುದು] ಬ್ರಹ್ಮಚರ್ಯ [ಪಾವಿತ್ರ್ಯತೆ]
- ತ್ರಿರತ್ನಗಳು: ಸಮ್ಯಕ್ ಜ್ಞಾನ, ಸಮ್ಯಕ್ ನಂಬಿಕೆ, ಸಮ್ಯಕ್ ನಡತೆ.
- ಮಹಾವೀರನಿಗೆ ದೇವರ ಅಸ್ತಿತ್ವದಲ್ಲಿ ನಂಬಿಕೆ ಇರಲಿಲ್ಲ. ಆತ್ಮದ ಅಸ್ತಿತ್ವದಲ್ಲಿ ನಂಬಿಕೆ ಇತ್ತು.
- ಜಾತಿಪದ್ಧತಿ ಮತ್ತು ಪ್ರಾಣೀಬಲಿಗಳನ್ನು ಖಂಡಿಸಿದನು. ಅಹಿಂಸೆಗೆ ಹೆಚ್ಚು ಒತ್ತು ಕೊಟ್ಟನು.
- ಮೋಕ್ಷ ಸಾಧನೆಗಾಗಿ ಸನ್ಯಾಸತ್ವ ಮತ್ತು ಕಠಿಣ ತಪಸ್ಸನ್ನು ಪ್ರತಿಪಾದಿಸಿದನು.
VII. ಈ ಕೆಳಗಿನ ಪ್ರಶ್ನೆಗೆ 30-40 ವಾಕ್ಯಗಳಲ್ಲಿ ಉತ್ತರಿಸಿ.
- ಬುದ್ಧನ ಜೀವನ ಮತ್ತು ಬೋಧನೆಗಳನ್ನು ಚಿತ್ರಿಸಿ.
- ಗೌತಮ ಬುದ್ಧನು ಸಾ.ಶ.ಪೂ. 583ರಲ್ಲಿ ಲುಂಬಿನಿವನದಲ್ಲಿ ಜನಿಸಿದನು.
- ಈತನ ಮೊದಲ ಹೆಸರು ಸಿದ್ದಾರ್ಥ. ರಾಜ ಶುದ್ದೋದನ ಮತ್ತು ಮಾಯಾದೇವಿ ಇವನ ತಂದೆತಾಯಿಗಳು.
- ಸಿದ್ದಾರ್ಥ ಏಳುದಿನಗಳ ಮಗುವಾಗಿದ್ದಾಗಲೇ ತನ್ನ ತಾಯಿ ಮಾಯಾದೇವಿ ಮರಣಹೊಂದಲಾಗಿ ಅನ ಚಿಕ್ಕಮ್ಮ ಮಹಾಪ್ರಜಾಪತಿ ಗೌತಮಿ ಅವನನ್ನು ಪೋಷಿಸಿದಳು.
- ಸುಖ ಭೋಗಗಳೊಡನೆ ಬೆಳೆದ ಸಿದ್ದಾರ್ಥನಿಗೆ 16ನೇ ವಯಸ್ಸಿಗೆ ಯಶೋಧರಾಳೊಂದಿಗೆ ವಿವಾಹ ಮಾಡಲಾಯಿತು. ಇವರಿಗೆ ರಾಹುಲ ಎಂಬ ಗಂಡು ಮಗ ಜನಿಸಿದನು.
- ಒಂದು ಸಂಜೆ ಸಿದ್ದಾರ್ಥನು ಅರಮನೆಯಿಂದ ಆಚೆ ಹೋದಾಗ ಒಬ್ಬ ವೃದ್ಧ, ಒಬ್ಬ ರೋಗಿ, ಒಂದು ಶವಯಾತ್ರೆ, ಮತ್ತು ಒಬ್ಬ ಸನ್ಯಾಸಿಯನ್ನು ಕಂಡನು ಮೊದಲ ಮೂರು ದೃಶ್ಯಗಳಲ್ಲಿ ನೋವನ್ನು ಕಂಡರೆ ನಾಲ್ಕನೇ ದೃಶ್ಯದಲ್ಲಿ ಸಂತೋಷವನ್ನು ಕಂಡನು.
- ದುಃಖಕ್ಕೆ ಮೂಲ ಕಾರಣ ಕಂಡುಹಿಡಿಯಲು ಹೆಂಡತಿ ಮಕ್ಕಳು, ತಂದೆ ತಾಯಿಯರನ್ನು ಬಿಟ್ಟು ‘ಮಹಾಪರಿತ್ಯಾಗಿ’ ಯಾದನು.
- ಅಲೆಮಾರಿ ಸನ್ಯಾಸಿ ಜೀವನ ನಡೆಸಿ, ಆಸೆಯಿಂದ ದೂರವಿದ್ದು ತಪಸ್ಸನ್ನು ಆಚರಿಸಿದನು. ಗಯಾದ ಆಲದ ಮರವೊಂದರ ಕೆಳಗೆ ಜ್ಞಾನೋದಯವನ್ನು ಪಡೆದನು. ಬುದ್ಧನೆಂದರೆ ಜ್ಞಾನ ಪಡೆದವನು ಎಂದರ್ಥ. ಬುದ್ಧನನ್ನು ‘ತಥಾಗತ’ನೆಂದು ಕರೆಯಲಾಗಿದೆ.
- ಬನಾರಸ್ ಸಮೀಪದ ಸಾರನಾಥದ ಜಿಂಕೆವನದಲ್ಲಿ ತನ್ನ ಪ್ರಥಮ ಪ್ರವಚನ ನೀಡಿದನು ಇದನ್ನು ‘ಧರ್ಮಚಕ್ರ ಪ್ರವರ್ತನ’ ಎಂದು ಕರೆಯಲಾಗಿದೆ.
- ನಲವತ್ತೈದು ವರ್ಷಗಳ ಕಾಲ ಗೌತಮಬುದ್ಧ ತನ್ನ ಸಿದ್ದಾಂತ ಬೋಧಿಸುತ್ತ ಸಂಚರಿಸಿದನು. ಆತನ ವ್ಯಕ್ತಿತ್ವ ಮತ್ತು ಸರಳತೆ ಜನರನ್ನು ಬೌದ್ಧ ಧರ್ಮದತ್ತ ಸೆಳೆಯಿತು.
- ತನ್ನ 80ನೇ ವಯಸ್ಸಿನಲ್ಲಿ ಉತ್ತರ ಪ್ರದೇಶದ ಕುಶೀ ನಗರದಲ್ಲಿ ‘ಏಷ್ಯಾದ ಬೆಳಕು’ ಗೌತಮ ಬುದ್ದ ಮರಣ ಹೊಂದಿದನು.
ಬುದ್ಧನ ಭೋದನೆಗಳು:
ಬುದ್ದನು ತನ್ನ ಅನುಯಾಯಿಗಳಿಗೆ ನಾಲ್ಕು ಮೂಲತತ್ವಗಳಾದ ಸತ್ಯ, ಅಹಿಂಸೆ [ನೋವು ಮಾಡದಿರುವುದು, ಆಸ್ತೇಯ [ಕಳ್ಳತನ ಮಾಡದಿರುವುದು] ಮತ್ತು ಬ್ರಹ್ಮಚರ್ಯ [ಪಾವಿತ್ರ್ಯತೆ] ಬೋಧಿಸಿದನು.
ನಾಲ್ಕು ಆರ್ಯ ಸತ್ಯಗಳನ್ನು ಬೋಧಿಸಿದನು.
- ಪ್ರಾಪಂಚಿಕ ಜೀವನವು ದುಃಖಮಯವಾಗಿದೆ.
- ಆಸೆಯೇ ದುಃಖಕ್ಕೆ ಮೂಲ ಕಾರಣ.
- ಆಸೆಯನ್ನು ನಿಗ್ರಹಿಸುವುದರಿಂದ ಪುನರ್‌ಜನ್ಮವನ್ನು ಕೊನೆಗಾಣಿಸಿಸಬಹುದು.
- ಆಸೆಯನ್ನು ಕೊನೆಗಾಣಿಸಲು ಅಷ್ಟಾಂಗ ಮಾರ್ಗಗಳನ್ನು ಅನುಸರಿಸಬೇಕು.
ಅಷ್ಟಾಂಗ ಮಾರ್ಗಗಳೆಂದರೆ.
- ಒಳ್ಳೆಯ ನಂಬಿಕೆ 2. ಒಳ್ಳೆಯ ಆಲೋಚನೆ 3. ಒಳ್ಳೆಯ ಮಾತು 4. ಒಳ್ಳೆಯ ನಡತೆ 5. ಒಳ್ಳೆಯ ಪ್ರಯತ್ನ 6. ಒಳ್ಳೆಯ ಧ್ಯಾನ 7. ಒಳ್ಳೆಯ ಜೀವನೋಪಾಯ 8. ಒಳ್ಳೆಯ ಮನಸ್ಥಿತಿ.
ಬುದ್ಧನು ನಡತೆಗೆ ಮಹತ್ವ ಕೊಟ್ಟನೇ ವಿನಃ ಧರ್ಮಾಚರಣೆಗೆ ಮತ್ತು ಬಲಿಗಳಿಗಲ್ಲ. ಅವನು ಜಾತಿಪದ್ಧತಿಯನ್ನು ವಿರೋಧಿಸಿ, ಸಮಾನತೆಯನ್ನು ಪ್ರತಿಪಾದಿಸಿದನು.
ಹೆಚ್ಚುವರಿ ಪ್ರಶ್ನೆಗಳು:
1.ಪಾರ್ಶ್ವನಾಥನು ತನ್ನ ಎಷ್ಟನೇ ವಯಸ್ಸಿನಲ್ಲಿ ಜ್ಞಾನೋದಯವನ್ನು ಕಂಡುಕೊಂಡನು?
30ನೇ ವಯಸ್ಸಿನಲ್ಲಿ.
2. ಅಪರಿಗ್ರಹ ಎಂದರೇನು?
ಅವಶ್ಯಕತೆಗಿಂತ ಹೆಚ್ಚಿನ ಸಂಪತ್ತನ್ನು ಹೊಂದದಿರುವುದು.
3. ಭಾರತದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಶೋಷಣೆಯ ವಿರುದ್ಧ ಮೊಟ್ಟಮೊದಲು ಪ್ರತಿಭಟನೆಗಳನ್ನು ಕಂಡಿದ್ದು ಯಾವಾಗ?
ಸಾ.ಶ.ಪೂ. 6ನೇ ಶತಮಾನದಲ್ಲಿ,
4.’ಜಿನ’ ಎಂದರೆ ಯಾರು?
ಇಂದ್ರೀಯಗಳನ್ನು ನಿಗ್ರಹಿಸಿದವನೇ ಜಿನ.
5. ಮಹಾವೀರ ಮತ್ತು ಬುದ್ಧ ಒಬ್ಬರನ್ನೊಬ್ಬರು ಭೇಟಿಯಾಗಿದ್ದರೇ?
ಇಲ್ಲ
6. ಪಾರ್ಶ್ವನಾಥನ ಅನುಯಾಯಿಗಳಾದ ಬಿಳಿಯ ವಸ್ತ್ರಧಾರಿಗಳನ್ನು ಏನೆಂದು ಕರೆಯಲಾಗುವುದು?
ಶ್ವೇತಾಂಬರರು.
7. ಮಹಾವೀರನು ಯಾವಾಗ ನಿರ್ವಾಣ ಹೊಂದಿದನು?
ಸಾ.ಶ.ಪೂ. 527ರಲ್ಲಿ
ನೆನಪಿನಲ್ಲಿಡಬೇಕಾದ ಅಂಶಗಳು:
- ಜೈನಧರ್ಮದ 24ನೇ ತೀರ್ಥಂಕರ ವರ್ಧಮಾನ ಮಹಾವೀರ.
- ಬೌದ್ಧ ಮತದ ಸ್ಥಾಪಕ ಗೌತಮ ಬುದ್ಧ.
- ಬುದ್ಧನ ಹಿಂದಿನ ಹೆಸರು ಸಿದ್ಧಾರ್ಥ.
- ಸಿದ್ದಾರ್ಥನು ‘ಗಯಾ’ ಎಂಬಲ್ಲಿ ಜ್ಞಾನೋದಯವನ್ನು ಪಡೆದನು.
- ಜೈನಧರ್ಮದ ಮೊದಲ ಸಭೆ ಪಾಟಲೀಪುತ್ರದಲ್ಲಿ ನಡೆಯಿತು.
- ಬೌದ್ಧಧರ್ಮದ ಎರಡು ಪಂಥಗಳು ಹೀನಯಾನ ಮತ್ತು ಮಹಾಯಾನ.
- ಜೈನಧರ್ಮದ ಎರಡು ಪಂಥಗಳು ಶ್ವೇತಾಂಬರರು ಮತ್ತು ದಿಗಂಬರರು.