2nd Puc History 5.2 Moghalaru Chapter Notes | ದ್ವಿತೀಯ ಪಿಯುಸಿ ಇತಿಹಾಸ 5.2 ಮೊಘಲರು ಪಾಠದ ನೋಟ್ಸ್‌

2nd Puc History 5.2 Moghalaru Chapter Notes Question Answer Guide Extract Mcq Pdf Download in Kannada Medium Karnataka State Syllabus 2025 Moghalaru notes ತೀಯ ಪಿಯುಸಿ ಇತಿಹಾಸ 5.2 ಮೊಘಲರು ಪಾಠದ ನೋಟ್ಸ್‌ ಪ್ರಶ್ನೋತ್ತರಗಳು ಕನ್ನಡ ಮಾಧ್ಯಮ ಮೊಘಲ್ ಸಾಮ್ರಾಜ್ಯ pdf Second PUC History notes pdf in kannada chapter 5.2 Question Answer moghalaru in kannada History of moghalaru in kannada

Moghalaru

1. ಗೊಂಡ್ವಾನ ರಾಜ್ಯದ ರಾಣಿ

ಎ) ಮಾಯಾವತಿ

ಬಿ) ಶೀಲವತಿ

ಡಿ) ಪಾರ್ವತಿ

2. ‘ಅಕ್ಬರ್ ನಾಮಾ’ ಗ್ರಂಥ ಬರೆದವರು

ಎ) ಅಬ್ದುಲ್‌ರಜಾಕ್

ಬಿ) ಅಲ್ಬೆರೂನಿ

ಡಿ) ಅಮೀರ್‌ಖುಸ್ರು

3. ಮೊಘಲ್ ಸಂತತಿಯ ಸ್ಥಾಪಕ

ಎ) ಹುಮಾಯೂನ್

ಬಿ) ಅಲ್ಲಾವುದ್ದೀನ್

ಸಿ) ಕುತುಬ್‌ದ್ದೀನ್

4. ಮೊದಲ ಪಾಣಿಪತ್ ಕದನ ನಡೆದ ವರ್ಷ

ಎ) ಸಾ.ಶ. 1524

ಬಿ) ಸಾ.ಶ. 1523

ಡಿ) ಸಾ.ಶ. 1527

5. ‘ದೀನ್-ಇಲಾಹಿ’ ಎಂಬ ಧರ್ಮದ ಸ್ಥಾಪಕ

ಎ) ಬಾಬರ್

ಬಿ) ಹುಮಾಯೂನ್

ಡಿ) ಅಬ್ದುಲ್

6. ತಾಜ್‌ ಮಹಲ್ ಇರುವ ಸ್ಥಳ

ಎ) ದೆಹಲಿ

ಬಿ) ಪೊನ್ನ

ಸಿ) ಕಲ್ಕತ್ತಾ

ಡಿ) ಆಗ್ರಾ

1.ಅಕ್ಬರ್ ಸ್ಥಾಪಿಸಿದ ಹೊಸ ಧರ್ಮ ದೀನ್-ಇಲಾಹಿ

2. ಮೊದಲನೆ ಪಾಣಿಪತ್ ಕದನ ನಡೆದ ವರ್ಷ ಸಾ.ಶ. 1526

2. ಮೊಘಲ್ ಸಂತತಿಯ ಸ್ಥಾಪಕ ಬಾಬರ್

3. ತಾಜ್‌ಮಹಲ್‌ನ ಪ್ರಧಾನ ‘ಶಿಲ್ಪಿ’ ಉಸ್ತಾದ್ ಇಸಾ

4. ಅಕ್ಷರನ ಪ್ರಸಿದ್ಧ ಕಂದಾಯಮಂತ್ರಿ ರಾಜಾ ತೋದರ ಮಲ್ಲ

5. ‘ಹುಮಾಯುನ್ ನಾಮಾ’ ಎಂಬ ಗ್ರಂಥ ಬರೆದವರು ಗುಲ್ಬದನ್ ಬೇಗಂ

6. ‘ಅಕ್ಬರ್ ನಾಮಾ’ ಗ್ರಂಥದ ಕರ್ತೃ ಅಬ್ದುಲ್ ಫಜಲ್

7. ತಾಜ್‌ಮಹಲ್ ಕಟ್ಟಿಸಿದವನು ಷಹಜಹಾನ್

8. ತಾಜ್‌ಮಹಲ್ ಇರುವ ಸ್ಥಳ ಆಗ್ರಾ

9. ‘ಹಲ್ದಿಘಾಟ್’ ಕದನ ಜರುಗಿದ್ದು 1576

10. ಅಕ್ಬರ್‌ನ ಆಸ್ಥಾನದಲ್ಲಿದ್ದ ಪ್ರಸಿದ್ಧ ಸಂಗೀತಗಾರ ತಾನ್‌ಸೇನ್

11. 2ನೇ ಪಾಣಿಪತ್ ಕದನ ಹೇಮು ಮತ್ತು ಅಕ್ಬರ್ ನಡುವೆ ನಡೆಯಿತು.

12. ಮೊಘಲರ ಶ್ರೇಷ್ಠ ದೊರೆ ಅಕ್ಬರ್

13. ಐನಿಅಕ್ಬರಿ ಗ್ರಂಥದ ಕರ್ತೃ ಅಬ್ದುಲ್ ಫಜಲ್

14. ‘ಹುಮಾಯುನ್ ನಾಮಾ’ ಗ್ರಂಥ ಬರೆದವರು ಗುಲ್ಬದನ್ ಬೇಗಂ

15. ಅಕ್ಬ ರನ ಜನನ ಸ್ಥಳ ಅಮರ ಕೋಟೆ

ಕ್ರಮ ಸಂಖ್ಯೆಉತ್ತರಗಳು
1ದೀನ್-ಇಲಾಹಿಗುಲ್ಬದನ್ ಬೇಗಂಹೊಸಧರ್ಮ
2ಅಕ್ಬರ್ಮೊಘಲ್ ಸಂತತಿ ಸ್ಥಾಪಕಮೊಘಲರ ಶ್ರೇಷ್ಠ ದೊರೆ
3ಗೊಂಡ್ವಾನ1526ದುರ್ಗಾವತಿ
4ಬಾಬರ್1576ಮೊಘಲ್ ಸಂತತಿ ಸ್ಥಾಪಕ
5ಅಬ್ದುಲ್‌ ಫಜಲ್ತಾಜ್‌ಮಹಲ್ಐನ್-ಎ-ಅಕ್ಬರಿ
6ರಾಜಾತೋದರ ಮಲ್ಲಹೊಸಧರ್ಮ ಅಕ್ಬರನ ಕಂದಾಯ
71ನೇ ಪಾಣಿಪತ್‌ ಕದನದುರ್ಗಾವತಿ1526
8ಹಳ್ದಿಘಾಟ್‌ ಕದನಮೊಘಲರ ಶ್ರೇಷ್ಠ ದೊರೆ1576
9ಹುಮಾಯೂನ್‌ ನಾಮಾಅಕ್ಬರನ ಕಂದಾಯಗುಲ್ಬದನ್ ಬೇಗಂ
10ಆಗ್ರಾಐನ್-ಎ-ಅಕ್ಬರಿತಾಜ್‌ಮಹಲ್

IV. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ:

1. ಮೊದಲ ಪಾಣಿಪತ್ ಕದನ ಯಾವಾಗ ನಡೆಯಿತು?

ಸಾ.ಶ. 1526 ರಲ್ಲಿ

2. ಮೊಘಲ್ ಸಂತತಿಯ ಸ್ಥಾಪಕ ಯಾರು?

ಬಾಬರ್

3. ಗೊಂಡ್ವಾನ ರಾಜ್ಯದ ರಾಣಿ ಯಾರು?

ದುರ್ಗಾವತಿ.

4. ‘ಹಳ್ದಿಘಾಟ್’ಕದನ ಯಾವಾಗ ನಡೆಯಿತು?

ಸಾ.ಶ. 1576ರಲ್ಲಿ

5. ಅಕ್ಬರ್ ಜಾರಿಗೊಳಿಸಿದ ಹೊಸ ಧರ್ಮ ಯಾವುದು?

ದಿನ್-ಇ-ಇಲಾಹಿ

7. ಅಕ್ಬರನ ಪ್ರಸಿದ್ದ ಕಂದಾಯ ಮಂತ್ರಿ ಯಾರು?

ರಾಜಾತೋದರ ಮಲ್ಲ

8. ‘ಹುಮಾಯೂನ್ ನಾಮಾ’ ಎಂಬ ಗ್ರಂಥ ಬರೆದವರು ಯಾರು?

ಗುಲ್ಬದನ್ ಬೇಗಂ

9.’ಅಕ್ಬರ್ ನಾಮಾ’ ಎಂಬ ಗ್ರಂಥ ಬರೆದವರು ಯಾರು?

ಅಬ್ದುಲ್ ಫಜಲ್

10. ‘ಐನ್-ಇ-ಅಕ್ಬರಿ’ ಎಂಬ ಗ್ರಂಥ ಬರೆದವರು ಯಾರು?

ಅಬ್ದುಲ್ ಫಜಲ್.

11. ಅಕ್ಬರನ ಆಸ್ಥಾನದಲ್ಲಿದ್ದ ಪ್ರಸಿದ್ಧ ಸಂಗೀತಗಾರ ಯಾರು?

ತಾನ್‌ಸೇನ್.

12. ತಾಜ್‌ಮಹಲ್‌ನ ಪ್ರಧಾನ ಶಿಲ್ಪಿ ಯಾರು?

ಉಸ್ತಾದ್ ಇಸಾ.

13. ತಾಜ್‌ಮಹಲ್ ಕಟ್ಟಿಸಿದವರು ಯಾರು?

ಷಹಜಹಾನ್

14. ತಾಜ್‌ಮಹಲ್ ಎಲ್ಲಿದೆ?

ಆಗ್ರಾ

15. ಅಕ್ಬರ್ ಎಲ್ಲಿ ಜನಿಸಿದನು?

ಅಮರಕೋಟೆ (ಸಾ.ಶ. 1542)

16. 2ನೇ ಪಾಣಿಪತ್ ಕದನ ಯಾರ ನಡುವೆ ನಡೆಯಿತು?”

ಹೇಮು ಮತ್ತು ಅಕ್ಬರ್

1. 2ನೇ ಪಾಣಿಪತ್ ಕದನವು ಯಾರ ನಡುವೆ ನಡೆಯಿತು?

ಹೇಮು [ರಾಜಾವಿಕ್ರಮಾದಿತ್ಯ] ಮತ್ತು ಅಕ್ಬರ್ ನಡುವೆ ನಡೆಯಿತು.

2. ಅಕ್ಬರ್ ಎಲ್ಲಿ ಮತ್ತು ಯಾವಾಗ ಜನಿಸಿದನು?

ಅಮರಕೋಟೆಯಲ್ಲಿ ಸಾ.ಶ. 1542ರಲ್ಲಿ ಜನಿಸಿದರು.

3. ಅಕ್ಬರನ ಕಾಲದ ಪ್ರಸಿದ್ದ ಯಾರಾದರೂ ಇಬ್ಬರು ಇತಿಹಾಸಕಾರರನ್ನು ಹೆಸರಿಸಿ.

ಅಬ್ದುಲ್ ಫಜಲ್, ಬದೌನಿ.

4. ಅಕ್ಬರನ ರಾಜಧಾನಿಗಳಾವುವು?

ದೆಹಲಿ, ಫತೇಪುರ.

5. ತೋದರ ಮಲ್ಲನು ವರ್ಗೀಕರಿಸಿದ ಯಾವುದಾದರೂ ಎರಡು ಬಗೆಯ ಭೂಮಿಯ ವಿಧಗಳನ್ನು ಹೆಸರಿಸಿ.

  • ಪೋಲಜ್ [ಸತತ ಉಳುಮೆಯಲ್ಲಿರುವ ಭೂಮಿ]
  • ಬಂಜಾರ್ [5 ವರ್ಷಗಳಿಗಿಂತ ಹೆಚ್ಚುಕಾಲ ಉಳುಮೆ ಮಾಡದ ಭೂಮಿ]

6. ಅಬ್ದುಲ್ ಫಜಲ್‌ನ ಎರಡು ಕೃತಿಗಳನ್ನು ಹೆಸರಿಸಿ.

‘ಐನಿಅಕ್ಬರಿ’, ‘ಅಕ್ಬರ್ ನಾಮಾ’.

7. ತಾಜ್‌ಮಹಲ್ ಕಟ್ಟಿಸಿದವರು ಯಾರು? ಅದು ಎಲ್ಲಿದೆ?

ತಾಜ್‌ಮಹಲ್ ಕಟ್ಟಿಸಿದವರು ಷಹಜಹಾನ್, ಅದು ಆಗ್ರಾದಲ್ಲಿದೆ.

8. ಮೊಘಲರ ಕಾಲದ ಯಾರಾದರೂ ಇಬ್ಬರು ಪ್ರಸಿದ್ದ ಸಂಗೀತಕಾರರನ್ನು ಹೆಸರಿಸಿ.

ತಾನ್‌ಸೇನ್, ಸೂರ್‌ದಾಸ್.

9. ದೆಹಲಿಯಲ್ಲಿನ ಯಾವುದಾದರೂ ಎರಡು ಪ್ರಸಿದ್ದ ಮೊಘಲ್ ಸ್ಮಾರಕಗಳನ್ನು ತಿಳಿಸಿ.

ದಿವಾನ್-ಇ-ಆಂ, ಕೆಂಪುಕೋಟೆ.

1.ಅಕ್ಬರನ ಧಾರ್ಮಿಕ ಮತ್ತು ರಜಪೂತ ನೀತಿಯನ್ನು ವಿವರಿಸಿ.

ರಜಪೂತ ನೀತಿ: ಧೈರ್ಯ ಮತ್ತು ರಾಜನಿಷ್ಠೆಯುಳ್ಳ ರಜಪೂತರು ಮೊಘಲರು ಶತ್ರುಗಳಾಗಿದ್ದರೂ ಸಹ ಅಕ್ಬರನು ಅವರ ಮಹತ್ವವನ್ನರಿತು ಅವರೊಡನೆ ಸ್ನೇಹ ಸಂಬಂಧ, ವೈವಾಹಿಕ ಸಂಬಂಧವನ್ನು ಏರ್ಪಡಿಸಿಕೊಂಡನು.

  • ಅವರನ್ನು ಮನ್‌ಸಬ್ದಾರರನ್ನಾಗಿ ನೇಮಿಸಿದನು.
  • ಜೈಪುರದ ಬಿಹಾರಿಮಲ್‌ನ ಮಗಳಾದ ಜೋದಾ ಬಾಯಿಯನ್ನು ವಿವಾಹವಾದನು.
  • ರಜಪೂತ ಅರಸರು ಆಂತರಿಕ ಸ್ವಾಯತ್ತತೆಯನ್ನು ಉಳಿಸಿಕೊಳ್ಳಲು ಅನುಮತಿ ನೀಡಿದನು.
  • ‘ಜಜಿಯಾ’ ರದ್ದುಪಡಿಸಿದನು.

ಧಾರ್ಮಿಕ ನೀತಿ : ಪರಮತ ಸಹಿಷ್ಣುವಾಗಿದ್ದು ಅವರವರ ಧರ್ಮದ ಆಚರಣೆಗೆ ಮುಕ್ತ ಅವಕಾಶ ಮಾಡಿಕೊಟ್ಟು ಹಿಂದೂ ಹಬ್ಬಗಳಲ್ಲಿ ಅವನೂ ಪಾಲ್ಗೊಳ್ಳುತ್ತಿದ್ದನು.

  • ಬಾಲ್ಯವಿವಾಹ, ಸತಿಪದ್ಧತಿಯನ್ನು ರದ್ದುಪಡಿಸಿದನು.
  • ದಿನ್-ಇ-ಇಲಾಹಿ ಎಂಬ ಹೊಸಧರ್ಮವನ್ನು ಸ್ಥಾಪಿಸಿದನು.
  • ಸಾ.ಶ. 1582ರಲ್ಲಿ ಫತೇಪುರ ಸಿಕ್ರಿಯಲ್ಲಿ ‘ಇಬಾದತ್ ಖಾನಾ’ ವನ್ನು ನಿರ್ಮಿಸಿದನು. ಹಿಂದೂ, ಬೌದ್ಧ, ಜೈನ, ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳ ಧಾರ್ಮಿಕ ನಾಯಕರು ಇಲ್ಲಿ ಸಭೆ ಸೇರುತ್ತಿದ್ದರು.

2. ಅಕ್ಬರ್ ನ ಆಡಳಿತವನ್ನು ಸಂಕ್ಷಿಪ್ತವಾಗಿ ಬರೆಯಿರಿ.
ಅಕ್ಬರನ ಅಧೀನದಲ್ಲಿ ಮೊಘಲರ ಆಡಳಿತ. ಕೇಂದ್ರೀಕೃತವಾಗಿತ್ತು. ಅವನು ಇಸ್ಲಾಂ ತತ್ವಗಳಿಗೆ ಅನುಸಾರವಾಗಿ ಆಡಳಿತವನ್ನು ನಡೆಸುತ್ತಿದ್ದನು. ವಕೀಲ್ (ಮುಖ್ಯಮಂತ್ರಿ), ದಿವಾನ್-ಇ-ಆಲಾ (ಅರ್ಥಮಂತ್ರಿ), ಮೀರ್‌ಭಕ್ಷಿ (ವೇತನ ಬಡವಾಡೆ ಅಧಿಕಾರಿ), ಸದರ್ ಉಸ್-ಸದರ್ (ದಾನದತ್ತಿಯ ಉಸ್ತುವಾರಿ). ಖಾನ್-ಇ-ಸಮಾನ್ (ಗೃಹಮಂತ್ರಿ) ದಿವಾನ್ (ಕಂದಾಯ ಮಂತ್ರಿ), ಖಾಜಿ [ಮುಖ್ಯ ನ್ಯಾಯಾಧೀಶ] ಎಂಬ ಮಂತ್ರಿಗಳಿದ್ದು ಅಕ್ಬರನಿಗೆ ಆಡಳಿತದಲ್ಲಿ ಸಲಹೆ ಮತ್ತು ಸಹಕಾರವನ್ನು ನೀಡುತ್ತಿದ್ದರು.

  • ಅಕ್ಬರನ ಸಾಮ್ರಾಜ್ಯವು 16 ಪ್ರಾಂತ್ಯಗಳನ್ನು [ಸುಭಾ] ಒಳಗೊಂಡಿತ್ತು. ಪ್ರತಿಯೊಂದು ಪ್ರಾಂತ್ಯಕ್ಕೂ ಸುಭಾದಾ‌ರ್ ಎಂಬ ರಾಜ್ಯಪಾಲನಿದ್ದನು.
  • ಸುಭಾಗಳನ್ನು ಸರ್ಕಾರ್ [ಜಿಲ್ಲೆ]ಗಳಾಗಿ ವಿಂಗಡಿಸಲಾಗಿತ್ತು. ನಗರಾಡಳಿತದ ಉಸ್ತುವಾರಿಯು ಕೊತ್ವಾಲರದಾಗಿತ್ತು.
  • ಗ್ರಾಮವು ಆಡಳಿತದ ಕೊನೆಯ ಘಟಕವಾಗಿತ್ತು.
  • ಮನ್‌ಸಬ್ದಾರಿ ಪದ್ಧತಿ: ಮೀರ್‌ಭಕ್ಷಿಯ ನೆರವಿನಿಂದ ಈ ಪದ್ಧತಿಯನ್ನು ರೂಪಿಸಲಾಯಿತು. ಮನ್ ಸಬ್ಬಾರರು ಸೈನಿಕರ ಗುಂಪುಗಳ ನಾಯಕರಾಗಿದ್ದರು. ಈ ಪದ್ದತಿಯಲ್ಲಿ ಚಾಟ್ [ಸೈನಿಕರ ಸಂಖ್ಯೆ], ಸರ್ವಾ [ಕುದುರೆಯ ಸವಾರರ ಸಂಖ್ಯೆ] ಎಂಬ ಎರಡು ವಿಭಾಗವಿತ್ತು.
  • ತೋದರ ಮಲ್ಲ ಎಂಬುವವನು ಉತ್ತಮವಾದ ಕಂದಾಯ ಪದ್ದತಿಯನ್ನು ರೂಢಿಸಿದ್ದು ಇದು ಭೂಮಿಯ ಫಲವತ್ತೆಯನ್ನು ಅನುಸರಿಸಿತು.
  • ತೋದರ ಮಲ್ಲನ ಬಂದೋಬಸ್ತ್ ಎಂಬ ಪದ್ಧತಿಯ ಮೂಲಕ ರೈತರಿಗೆ ಸಾಲ ಸೌಲಭ್ಯ ದೊರೆಯುತ್ತಿತ್ತು.

3. ಸಾಹಿತ್ಯ ಹಾಗೂ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಮೊಘಲರ ಕೊಡುಗೆಗಳನ್ನು ವಿವರಿಸಿ.

ಇವರ ಕಾಲದಲ್ಲಿ ಟರ್ಕಿಶ್, ಪರ್ಷಿಯನ್, ಸಂಸ್ಕೃತ ಮತ್ತು ಹಿಂದಿ ಸಾಹಿತ್ಯಗಳು ಏಳಿಗೆ ಹೊಂದಿದ್ದವು.

  • ಬಾಬರನು ಬಾಬರ್‌ನಾಮಾ ಬರೆದನು. ರಾಮಾಯಣ, ಮಹಾಭಾರತ, ಅಥರ್ವಣವೇದ, ಪಂಚತಂತ್ರ ಮುಂತಾದವುಗಳನ್ನು ಸಂಸ್ಕೃತದಿಂದ ಪರ್ಷಿಯನ್‌ಗೆ ತರ್ಜುಮೆ ಮಾಡಲಾಯಿತು. ಷಹಜಹಾನನ ಮಗದಾರ ಉಪನಿಷತ್‌ಗಳನ್ನು ಪರ್ಶಿಯನ್ ಭಾಷೆಗೆ ತರ್ಜುಮೆ ಮಾಡಿದನು. ಅಬ್ದುಲ್ ಫಜಲ್: ಐನ್-ಇ-ಅಕ್ಬರಿ ಮತ್ತು ಅಕ್ಬರನಾಮಾ, ಗುಲ್ಬದನ್ ಬೇಗಂ: ಹುಮಾಯೂನ್ ನಾಮಾ, ಮಲಿಕ್ ಮಹಮದ್ ಜೈಸಿಯು ಪದ್ಮಾವತಿ, ಮುಂತಾದವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ.
  • ಕಲೆ ಮತ್ತು ವಾಸ್ತುಶಿಲ್ಪ: ಇವರು ಕಲೆ ಮತ್ತು ವಾಸ್ತುಶಿಲ್ಪದ ಆರಾಧಕರಾಗಿದ್ದು, ಗುಮ್ಮಟಗಳು, ಎತ್ತರವಾದ ಸ್ತಂಭಗಳು, ಹೆಬ್ಬಾಗಿಲುಗಳು, ಕಮಾನುಗಳು, ಅರಮನೆಗಳು, ಕೋಟೆಗಳನ್ನು ಸುಂದರವಾಗಿ ನಿರ್ಮಿಸಿದ್ದಾರೆ. ಕಾಬೂಲ್‌ಬಾಗ್, ಜುಮ್ಮಾಮಸೀದಿ, ಬುಲಂದ್‌ದರ್ವಾಜ, ಪಂಚಮಹಲ್, ಬಾದ್ ಷಾಹಿ ಮಸೀದಿ, ತಾಜ್‌ಮಹಲ್, ಮೋತಿ ಮಸೀದಿ, ಜುಮ್ಮಾ ಮಸೀದಿ, ದಿವಾನ್-ಇ-ಆಂ, ಕೆಂಪುಕೋಟೆ, ಮಯೂರು ಸಿಂಹಾಸನ, ಇವುಗಳಲ್ಲಿ ಮುಖ್ಯವಾದವು.

1.ಅಕ್ಬರನ ಸಾಧನೆಗಳನ್ನು ವಿವರಿಸಿ.

ಜಲಾಲ್-ಉದ್-ದೀನ್ ಮಹಮದ್ ಅಕ್ಬರನು ಹುಮಾಯೂನ್ ಮತ್ತು ಹಮೀದಾಬಾನು ಬೇಗಂ ರ ಮಗ. ಹುಮಾಯೂನನು ತನ್ನ ರಾಜ್ಯವನ್ನು ಕಳೆದುಕೊಂಡು ಅಲೆಮಾರಿಯಾಗಿ ಸಂಚರಿಸುತ್ತಿದ್ದಾಗ ‘ರಾಣಾ’ನ ರಕ್ಷಣೆಯಲ್ಲಿ ಅಮರಕೋಟೆ ಎಂಬಲ್ಲಿ ಸಾ.ಶ.1542ರಲ್ಲಿ ಜನಿಸಿದನು. ತಂದೆಯ ಮರಣದಿಂದಾಗಿ 14ನೇ ವಯಸ್ಸಿನಲ್ಲಿಯೇ ಅಧಿಕಾರಕ್ಕೆ ಬರಬೇಕಾಯಿತು. ರಾಜಪ್ರತಿನಿಧಿಯಾಗಿದ್ದನು. ಬೈರಾಂಖಾನನು

ಅಕ್ಬರನ ಸೈನಿಕ ಸಾಧನೆಗಳು

  • 2ನೇ ಪಾಣಿಪತ್ ಕದನ : ಬಂಗಾಳದ ಆದಿಲ್ ಷಾನ ಪ್ರಧಾನಮಂತ್ರಿಯಾದ ಹೇಮು ಮೊಘಲ್ ರಾಜ್ಯಪಾಲ ತರ್ದಿ ಬೇಗ್‌ನಿಂದ ದೆಹಲಿ ಮತ್ತು ಆಗ್ರಾವನ್ನು ವಶಪಡಿಸಿಕೊಂಡನು. ಇದರಿಂದಾಗಿ ಬೈರಾಂಖಾನನ ನೆರವಿನೊಂದಿಗೆ ಈ ಕದನ ನಡೆಯಿತು. ಹೇಮುಜಯ ಸಾಧಿಸಬೇಕಾದ ಸಮಯದಲ್ಲಿ ಆತನ ಕಣ್ಣಿಗೆ ಬಾಣವೊಂದು ತಗುಲಿ ಬೈರಾಂಖಾನ್ನಿಂದ ಕೊಲೆಯಾದನು. ಅಕ್ಬರ್ ದೆಹಲಿ ಮತ್ತು ಆಗ್ರಾವನ್ನು ವಶಪಡಿಸಿಕೊಂಡನು.
  • ಗೊಂಡ್ವಾನದಲ್ಲಿ ರಾಣಿ ದುರ್ಗಾವತಿಯು ತನ್ನ ಮಗ ವೀರ ನಾರಾಯಣನ ರಾಜ ಪ್ರತಿನಿಧಿಯಾಗಿ ಆಳುತ್ತಿದ್ದಾಗ ಅಕ್ಬರನ ಮಂತ್ರಿ ಅಸಫ್‌ಖಾನ್ ಅವಳೊಂದಿಗೆ ಯುದ್ಧ ಮಾಡಿ ಸಾಯಿಸಿ, ಗೊಂಡ್ವಾನವನ್ನು ವಶಪಡಿಸಿಕೊಂಡನು.
  • ಗುಜರಾತಿನ ರಾಜ ಮುಜಾಫರ್‌ ಷಾನನ್ನು ಸೋಲಿಸಿ ಗುಜರಾತ್ ವಶಪಡಿಸಿಕೊಂಡನು.
  • ಬಂಗಾಳದ ರಾಜ್ಯಪಾಲ ದಾವುದ್‌ಖಾನ್‌ನನ್ನು ಸೋಲಿಸಿ ಬಂಗಾಳ ಮತ್ತು ಒರಿಸ್ಸಾಗಳನ್ನು ವಶಪಡಿಸಿಕೊಂಡನು.
  • ಅಕ್ಬರನ ಮಲ ಸಹೋದರಿ ಹಕೀಮ್ ಮಿರ್ಜಾನ ಸಾವಿನ ನಂತರ ಕಾಬೂಲ್ ಮತ್ತು ಕಾಶ್ಮೀರಗಳನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು.
  • ರಜಪೂತ ನೀತಿ : ಧೈರ್ಯ ಮತ್ತು ರಾಜನಿಷ್ಟೆಯುಳ್ಳ ರಜಪೂತರು ಮೊಘಲರ ಶತ್ರುಗಳಾಗಿದ್ದರೂ ಸಹ ಅಕ್ಬರನು ಅವರ ಮಹತ್ವವನ್ನರಿತು ಅವರೊಡನೆ ಸ್ನೇಹ ಸಂಬಂಧ, ವೈವಾಹಿಕ ಸಂಬಂಧವನ್ನು ಏರ್ಪಡಿಸಿಕೊಂಡನು.
  • ಅವರನ್ನು ಮನ್‌ಸಬ್ಬಾರರನ್ನಾಗಿ ನೇಮಿಸಿದನು.
  • ಜೈಪುರದ ಬಿಹಾರಿಮಲ್‌ನ ಮಗಳಾದ ಜೋದಾ ಬಾಯಿಯನ್ನು ವಿವಾಹವಾದನು.
  • ರಜಪೂತ ಅರಸರು ಆಂತರಿಕ ಸ್ವಾಯತ್ತತೆಯನ್ನು ಉಳಿಸಿಕೊಳ್ಳಲು ಅನುಮತಿ ನೀಡಿದನು.
  • ‘ಜಜಿಯಾ’ ರದ್ದುಪಡಿಸಿದನು.
  • ಧಾರ್ಮಿಕ ನೀತಿ : ಪರಮತ ಸಹಿಷ್ಣುತವಾಗಿದ್ದು ಅವರವರ ಧರ್ಮದ ಆಚರಣೆಗೆ ಮುಕ್ತ ಅವಕಾಶ ಮಾಡಿಕೊಟ್ಟು ಹಿಂದೂ ಹಬ್ಬಗಳಲ್ಲಿ ಅವನೂ ಪಾಲ್ಗೊಳ್ಳುತ್ತಿದ್ದನು.
  • ಬಾಲ್ಯವಿವಾಹ, ಸತಿಪದ್ಧತಿಯನ್ನು ರದ್ದುಪಡಿಸಿದನು.
  • ದಿನ್‌-ಇ-ಇಲಾಹಿ ಎಂಬ ಹೊಸಧರ್ಮವನ್ನು ಸ್ಥಾಪಿಸಿದನು.
  • ಸಾ.ಶ. 1582ರಲ್ಲಿ ಫತೇಪುರ ಸಿಕ್ರಿಯಲ್ಲಿ ‘ಇಬಾದತ್ ಖಾನಾ’ವನ್ನು ನಿರ್ಮಿಸಿದನು. ಹಿಂದೂ, ಬೌದ್ಧ, ಜೈನ, ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳ ಧಾರ್ಮಿಕ ನಾಯಕರು ಇಲ್ಲಿ ಸಭೆ ಸೇರುತ್ತಿದ್ದರು.
  • ಅಕ್ಬರನ ಅಧೀನದಲ್ಲಿ ಮೊಘಲರ ಆಡಳಿತ ಕೇಂದ್ರೀಕೃತವಾಗಿತ್ತು. ಅವನು ಇಸ್ಲಾಂ ತತ್ವಗಳಿಗೆ ಅನುಸಾರವಾಗಿ ಆಡಳಿವನ್ನು ನಡೆಸುತ್ತಿದ್ದನು. ವಕೀಲ್ (ಮುಖ್ಯಮಂತ್ರಿ), ದಿವಾನ್-ಇ-ಆಲಾ (ಅರ್ಥಮಂತ್ರಿ), ಮೀರ್‌ಭಕ್ಷಿ (ವೇತನ ಬಟವಾಡೆ ಅಧಿಕಾರಿ), ಸದರ್ ಉಸ್-ಸದರ್(ದಾನದತ್ತಿಯ ಉಸ್ತುವಾರಿ), ಖಾನ್-ಇ-ಸಮಾನ್ (ಗೃಹಮಂತ್ರಿ) ದಿವಾನ್ (ಕಂದಾಯ ಮಂತ್ರಿ), ಖಾಜಿ [ಮುಖ್ಯನ್ಯಾಯಾಧೀಶ] ಎಂಬ ಮಂತ್ರಿಗಳಿದ್ದು ಅಕ್ಬರನಿಗೆ ಆಡಳಿತದಲ್ಲಿ ಸಲಹೆ ಮತ್ತು ಸಹಕಾರವನ್ನು ನೀಡುತ್ತಿದ್ದರು.
  • ಅಕ್ಬರನ ಸಾಮ್ರಾಜ್ಯವು 16 ಪ್ರಾಂತ್ಯಗಳನ್ನು [ಸಭಾ] ಒಳಗೊಂಡಿತ್ತು. ಪ್ರತಿಯೊಂದು ಪ್ರಾಂತ್ಯಕ್ಕೂ ಸುಭಾಧಾರ್ ಎಂಬ ರಾಜ್ಯಪಾಲನಿದ್ದನು.
  • ಸುಭಾಗಳನ್ನು ಸರ್ಕಾರ್ [ಜಿಲ್ಲೆ]ಗಳಾಗಿ, ಸರ್ಕಾರ್‌ಗಳನ್ನು ಪರ್ಗಣ [ತಾಲ್ಲೂಕ್ಕು]ಗಳಾಗಿ ವಿಂಗಡಿಸಲಾಗಿತ್ತು, ನಗರಾಡಳಿತದ ಉಸ್ತುವಾರಿಯು ಕೊತ್ವಾಲರದಾಗಿತ್ತು.
  • ಗ್ರಾಮವು ಆಡಳಿತದ ಕೊನೆಯ ಘಟಕವಾಗಿತ್ತು.
  • ಮನ್‌ಸಬ್ದಾರಿ ಪದ್ಧತಿ: ಮೀರ್‌ಭಕ್ತಿಯ ನೆರವಿನಿಂದ ಈ ಪದ್ಧತಿಯನ್ನು ರೂಪಿಸಲಾಯಿತು. ಮಾನ್ ಸಬ್ದಾರರು ಸೈನಿಕರ ಗುಂಪುಗಳ ನಾಯಕರಾಗಿದ್ದರು. ಈ ಪದ್ಧತಿಯಲ್ಲಿ ಚಾಟ್ [ಸೈನಿಕರ ಸಂಖ್ಯೆ]. ಸರ್ವಾ [ಕುದುರೆಯ ಸವಾರರ ಸಂಖ್ಯೆ] ಎಂಬ ಎರಡು ವಿಭಾಗವಿತ್ತು.
  • ತೋದರ ಮಲ್ಲ ಎಂಬುವವನು ಉತ್ತಮವಾದ
  • ಕಂದಾಯ ಪದ್ಧತಿಯನ್ನು ರೂಢಿಸಿದ್ದು. ಇದು ಭೂಮಿಯ ಫಲವತ್ತತೆಯನ್ನು ಅನುಸರಿಸಿತ್ತು.
  • ತೋದರ ಮಲ್ಲನ ಬಂದೋಬಸ್ತ್ ಎಂಬ ಪದ್ದತಿಯ ಮೂಲಕ ರೈತರಿಗೆ ಸಾಲ ಸೌಲಭ್ಯ ದೊರೆಯುತ್ತಿತ್ತು.

1.ಹುಮಾಯೂನನು ಯಾರಿಂದ ಅಧಿಕಾರವನ್ನು ಕಳೆದುಕೊಂಡನು?

ಷೇರ್ ಷಹ ಸೂರ್

2. ಅಕ್ಬರನ ಬಾಲ್ಯದಲ್ಲಿ ರಾಜಪ್ರತಿನಿಧಿಯಾಗಿದ್ದವರು ಯಾರು?

ಭೈರಾಂಖಾನ್

3.ಭಾರತಕ್ಕೆ ಪಿರಂಗಿ ದಳದ ಪರಿಚಯವನ್ನು ಮಾಡಿಸಿದವರಾರು?

ಬಾಬರ್

4. ಹೇಮುವಿನ ಹತ್ಯೆಯ ನಂತರಅಕ್ಬರ್ ಯಾವ ಯಾವ ಪ್ರದೇಶಗಳನ್ನು ವಶಪಡಿಸಿಕೊಂಡನು?

ದೆಹಲಿ ಮತ್ತು ಆಗ್ರಾ

5. ಬಂಗಾಳದ ಮಹ್ಮದ್ ಆದಿಲ್ ಷಾನ ಪ್ರಧಾನಮಂತ್ರಿ ಯಾರು?

ಹೇಮು (ರಾಜಾವಿಕ್ರಮಾದಿತ್ಯ)

6. ಗೊಂಡ್ವಾನದ ರಾಣಿ ಯಾರು?

ರಾಣಿ ದುರ್ಗಾವತಿ

7. ಅಕ್ಬರ್ ಎಲ್ಲಿ ಜನಿಸಿದನು?

ಅಮರ ಕೋಟೆಯಲ್ಲಿ

8. ಮೊಘಲರ ಆಕ್ರಮಣದ ವಿರುದ್ಧ ವೀರಾವೇಶದಿಂದ ಹೋರಾಡಿದ ಅಹಮದ್‌ನಗರದ ರಾಣಿ ಯಾರು?

ಚಾಂದ್‌ ಬೀಬಿ

9. ಅಕ್ಬರನ ಹೆಂಡತಿಯಾದ ಜೋದಾಬಾಯಿ ಯಾರ ಮಗಳು?

ಅಂಬರ್‌ (ಜೈಪುರ)ದ ಬಿಹಾರಿಮಲ್‌ನ ಮಗಳು.

  • ಮೊಘಲ್ ವಂಶದ ಸ್ಥಾಪಕ ಬಾಬರ್.
  • 1926ರಲ್ಲಿ ಅಧಿಕಾರಕ್ಕೆ ಬಂದನು.
  • ಅಕ್ಬರ್ ಮೊಘಲರಲ್ಲಿಯೇ ಶ್ರೇಷ್ಟ ಸುಲ್ತಾನ.
  • ಅಕ್ಬರ್ ‘ದೀನ್-ಇಲಾಹಿ’ ಎಂಬ ಹೊಸ ಧರ್ಮವನ್ನು ಸ್ಥಾಪಿಸಿದನು.
  • ಅಬ್ದುಲ್ ಫಜಲ್‌ನು ‘ಐನಿ ಅಕ್ಬರಿ’ ಎಂಬ ಗ್ರಂಥವನ್ನು ರಚಿಸಿದನು.
  • ಷಹಜಹಾನನು ಆಗ್ರಾದಲ್ಲಿ ತಾಜ್ ಮಹಲ್ ಕಟ್ಟಿಸಿದನು.

Leave a Comment