2nd Puc History Prachina Yuga Chapter Notes | ದ್ವಿತೀಯ ಪಿಯುಸಿ ಇತಿಹಾಸ ಪ್ರಾಚೀನ ಯುಗ (4.1 ವೈದಿಕ ಸಂಸ್ಕೃತಿ) ಪಾಠದ ನೋಟ್ಸ್

ದ್ವಿತೀಯ ಪಿ.ಯು.ಸಿ ಅಧ್ಯಾಯ-4 ಪ್ರಾಚೀನ ಯುಗ ( ವೈದಿಕ ಸಂಸ್ಕೃತಿ) ಇತಿಹಾಸ ನೋಟ್ಸ್‌, 2nd Puc History Prachina Yuga Chapter Notes Question Answer Guide Extract Mcq Pdf Download In Kannada Medium Karnataka State Syllabus 2025 Kseeb Solution For Class 12 History Chapter 4 Notes 2nd puc history 4th lesson notes in kannada ಪ್ರಾಚೀನ ಯುಗ notes prachina yuga history in kannada notes 2nd puc history notes kannada 2nd puc education notes kannada medium pdf download ವೈದಿಕ ಸಂಸ್ಕೃತಿ ನೋಟ್ಸ್ 2nd puc history vaidik sanskriti notes.

prachin yuga

1. ಆರ್ಯರು ಭಾರತಕ್ಕೆ ಎಲ್ಲಿಂದ ಬಂದರೆಂದು ಹೇಳಿದವರು

ಎ) ಆಗ್ನೇಯ

ಬಿ) ನೈರುತ್ಯ

ಸಿ) ಈಶಾನ್ಯ

2. ಆರ್ಯರು ಟಿಬೆಟ್ ಮೂಲದವರೆಂದು ಹೇಳಿದವರು

ಎ) ಮ್ಯಾಕ್ಸಡೊನಾಲ್ಡ್

ಬಿ) ಬ್ಯಾನರ್ಜಿ

ಸಿ) ಬಾಲಗಂಗಾಧರ ತಿಲಕ್

3. ಮ್ಯಾಕ್ ಡೊನಾಲ್ಡ್‌ರವರ ಪ್ರಕಾರ ಆರ್ಯರ ಮೂಲಸ್ಥಳ

ಎ) ವಾಯುವ್ಯ ಏಷ್ಯಾ

ಸಿ) ನೈರುತ್ಯ ಏಷ್ಯಾ

ಡಿ) ಈಶಾನ್ಯ ಏಷ್ಯಾ

4. ‘ನಿಷ್ಕ’ ಎಂದರೇ

ಎ) ಬೆಳ್ಳಿಯ ಒಂದು ತುಂಡು

ಬಿ) ಹವಳದ ಒಂದು ತುಂಡು

ಡಿ) ವಜ್ರದ ಒಂದು ತುಂಡು

5. ಪ್ರಥಮ ವೇದ

ಎ) ಸಾಮವೇದ

ಸಿ) ಯರ್ಜುವೇದ

ಡಿ) ಅಥರ್ವಣವೇದ

6. ವೇದ ಎಂದರೆ

ಎ) ಸಂಪತ್ತು

ಬಿ) ಭೂಮಿ

ಡಿ) ಬ್ರಹ್ಮ

7. ಮಗುವನ್ನು ಶಾಲೆಗೆ ಕಳುಹಿಸಲು ಮಾಡುತ್ತಿದ್ದ ಪದ್ಧತಿ

ಎ) ಚೌಲ

ಬಿ) ನಾಮಕರಣ

ಸಿ) ಲಗ್ನ

8. ಆರ್ಯರ ಮುಖ್ಯ ಕಸುಬು

ಎ) ವ್ಯಾಪಾರ

ಬಿ) ಲೇವಾದೇವಿ

ಡಿ) ಪಶುಪಾಲನೆ

9. ಉಳುವ ಭೂಮಿಯನ್ನು ಆರ್ಯರು ಏನೆಂದು ಕರೆಯುತ್ತಿದ್ದರು.

ಬಿ) ಹೊಲ

ಸಿ) ಹೆಕ್ಟೇರ್‌

ಡಿ) ಭೂಮಾತೆ

10.’ಆರ್ಯ’ ಪದದ ಅರ್ಥ

ಎ) ಮೂಲಕ

ಬಿ) ಆಳು

ಸಿ) ಸೇವಕ

1.ವೇದ ಎಂದರೇ ಜ್ಞಾನ

2. ಕ್ಷೇತ್ರ ಎಂದರೇ ಉಳುವ ಭೂಮಿ

3. ಆರ್ಯರ ಮುಖ್ಯ ಕಸುಬು ಕೃಷಿ

4. ಆರ್ಯರು ಜಾನುವಾರು ಅನ್ನು ಸಂಪತ್ತೆಂದು ಪರಿಗಣಿಸಿದ್ದರು.

5. ‘ಆರ್ಯ’ ಪದದ ಅರ್ಥ ಕುಲೀನ ಅಥವಾ ಒಡೆಯ ಅಥವಾ ಕೃಷಿ ಅವಲಂಬಿತ ವ್ಯಕ್ತಿ

6. ಮಗುವನ್ನು ಶಾಲೆಗೆ ಕಳುಹಿಸಲು ಮಾಡುತ್ತಿದ್ದ ಮುಖ್ಯ ಸಮಾರಂಭ ಉಪನಯನ

7. ಪ್ರಥಮ ವೇದ ಋಗ್ವೇದ

8. ವೇದಗಳು 4

9.ಶಬ್ದದಿಂದ ‘ವೇದ’ ಎನ್ನುವ ಶಬ್ದ ಪಡೆಯಲಾಗಿದೆ ವಿದ್

10. ಕುಟುಂಬದ ಯಜಮಾನವೆಂದು ವೇದಗಳ ಕಾಲದಲ್ಲಿ ಕುಟುಂಬದ ಹಿರಿಯ ಪುರುಷ ಸದಸ್ಯನನ್ನು ಪರಿಗಣಿಸಲಾಗುತ್ತಿತ್ತು.

ಕ್ರಮ ಸಂಖ್ಯೆಉತ್ತರಗಳು
1ವೇದರಾಜಕೀಯ ಸಂಸ್ಥೆಗಳುಜ್ಞಾನ
2ಕೃಷಿಶಾಲೆಗೆ ಮಗುವನ್ನು ಕಳುಹಿಸಲು ಮಾಡುವ ಸಮಾರಂಭಮುಖ್ಯ ಕಸುಬು
3ಉಪನಯನಟಿಬೇಟ್‌ ಮೂಲ (ಆರ್ಯರ ಮೂಲ)ಶಾಲೆಗೆ ಮಗುವನ್ನು ಕಳುಹಿಸಲು ಮಾಡುವ ಸಮಾರಂಭ
4ಆರ್ಯಮಹಿಳಾ ವಿದ್ವಾಂಸರು ಕುಲೀನ ಅಥವಾ ಒಡೆಯ
5ವೇದಗಳುಒಂದು ಚಿನ್ನದ ತುಂಡು4
6ಋಗ್ವೇದಜ್ಞಾನಪ್ರಥಮ ವೇದ
7ಕ್ಷೇತ್ರಮುಖ್ಯ ಕಸುಬುಉಳುಮೆ ಭೂಮಿ
8ಮೈತ್ರೇಯಿ, ಗಾರ್ಗಿ4ಮಹಿಳಾ ವಿದ್ವಾಂಸರು
9ನಿಷ್ಕಪ್ರಥಮ ವೇದಒಂದು ಚಿನ್ನದ ತುಂಡು
10ಬಾಲಗಂಗಾಧರ್‌ ತಿಲಕ್ಕುಲೀನ ಅಥವಾ ಒಡೆಯಟಿಬೇಟ್‌ ಮೂಲ (ಆರ್ಯರ ಮೂಲ)
11ಮ್ಯಾಕ್‌ ಡೊನಾಲ್ಡ್ಉಳುಮೆ ಭೂಮಿಆಗ್ನೇಯ ಏಷ್ಯಾ (ಆರ್ಯರ ಮೂಲ)
12ಸಭಾ ಮತ್ತು ಸಮಿತಿಆಗ್ನೇಯ ಏಷ್ಯಾ (ಆರ್ಯರ ಮೂಲ)ರಾಜಕೀಯ ಸಂಸ್ಥೆಗಳು

1.’ಆರ್ಯ’ ಪದದ ಅರ್ಥವೇನು?

ಕುಲೀನ ಅಥವಾ ಒಡೆಯ ಅಥವಾ ಕೃಷಿ ಅವಲಂಬಿತ ವ್ಯಕ್ತಿ.

2. ಯಾವ ಶಬ್ದದಿಂದ ‘ವೇದ’ ಎನ್ನುವ ಶಬ್ದವನ್ನು ಪಡೆಯಲಾಗಿದೆ?

ಸಂಸ್ಕೃತ ಮೂಲದ ‘ವಿದ್’ (ಜ್ಞಾನ) ಎಂಬುದರಿಂದ ಪಡೆಯಲಾಗಿದೆ.

3.’ವೇದ’ ಎಂದರೇನು?

ವೇದ ಎಂದರೆ ‘ಜ್ಞಾನ’.

4.ಪ್ರಥಮ ವೇದವನ್ನು ಹೆಸರಿಸಿ.

ಪ್ರಥಮ ವೇದ ಋಗೈದ.

5. ವೇದಗಳ ಕಾಲದಲ್ಲಿ ಕುಟುಂಬದ ಯಜಮಾನ ಯಾರಾಗಿದ್ದರು?

ಕುಟುಂಬದ ಹಿರಿಯ ಪುರುಷ ಸದಸ್ಯ.

6. ವೇದಗಳು ಯಾವುವು?

ಋಶ್ವೇದ, ಯರ್ಜುವೇದ, ಸಾಮವೇದ, ಅಥರ್‌ವರ್ಣ ವೇದ

7.’ಕ್ಷೇತ್ರ’ ಎಂದರೇನು?

ಉಳುಮೆ ಭೂಮಿಯನ್ನು ‘ಕ್ಷೇತ್ರ’ ಎನ್ನುವರು.

8. ಆರ್ಯರ ಪ್ರಮುಖ ಕಸುಬು ಏನಾಗಿತ್ತು?

ಆರ್ಯರ ಪ್ರಮುಖ ಕಸುವು ‘ಕೃಷಿ’.

9. ಆರ್ಯರು ಯಾವುದನ್ನು ಸಂಪತ್ತೆಂದು ಪರಿಗಣಿಸಿದ್ದರು?

ಜಾನುವಾರುಗಳನ್ನು ಸಂಪತ್ತೆಂದು ಪರಿಗಣಿಸಿದ್ದರು.

10. ಯಾವುದಾದರೂ ಇಬ್ಬರು ಮಹಿಳಾ ವಿದ್ವಾಂಸರ (ಆರ್ಯರಕಾಲ) ಹೆಸರೇನು?

ಗಾರ್ಗಿ, ಮೈತ್ರೇಯಿ

11. ಮಗುವನ್ನು ಶಾಲೆಗೆ ಕಳುಹಿಸಲು ಮಾಡುತ್ತಿದ್ದ ಸಮಾರಂಭ ಯಾವುದು?

ಉಪನಯನ

12. ಆರ್ಯರ ಬುಡಕಟ್ಟುಗಳನ್ನು ಏನೆಂದು ಕರೆಯುತ್ತಿದ್ದರು?

ಜನ

13. ಬುಡಕಟ್ಟಿನ ಮುಖ್ಯಸ್ಥನನ್ನು ಆರ್ಯರು ಏನೆಂದು ಕರೆಯುತ್ತಿದ್ದರು?

ರಾಜನ್

14. ‘ನಿಷ್ಕ’ ಎಂದರೇನು?

ಒಂದು ಚಿನ್ನದ ತುಂಡು

15. ಮ್ಯಾಕ್‌ಡೊನಾಲ್ಡ್ ಪ್ರಕಾರ ಆರ್ಯರ ಮೂಲ ಸ್ಥಳ ಯಾವುದು?

ಆಗ್ನೆಯ ಏಷ್ಯಾ

16. ಆರ್ಯರು ಟಿಬೆಟ್ ಮೂಲದವರೆಂದು ಹೇಳಿದವರಾರು?

ಬಾಲಗಂಗಾಧ‌ರ್ ತಿಲಕ್

17. ಆರ್ಯರ ವ್ಯಾಪಾರ ಪದ್ಧತಿಯು ಯಾವುದರ ಮೂಲಕ ನಡೆಯುತ್ತಿತ್ತು?

ವಸ್ತುವಿನಿಮಯ

18. ಆರ್ಯರು ಎಂದರೆ ಯಾರು? ಮತ್ತು ಅವರ ಮೂಲಸ್ಥಳ ಯಾವುದು?

ಆರ್ಯರು ಕ್ಯಾಸ್ಪಿಯನ್ ಸಮುದ್ರ ಪ್ರದೇಶದ ಹಳ್ಳಿಗಾಡಿನ ದನಗಾಹಿಗಳು.

19. ಪುರುಷಾರ್ಥಗಳು ಯಾವುವು?

ಧರ್ಮ, ಅರ್ಥ, ಕಾಮ, ಮೋಕ್ಷ

1. ಯಾವುದಾದರೂ ಎರಡು ವೇದಗಳನ್ನು ಹೆಸರಿಸಿ.

ಋಗ್ವೇದ, ಯಜುರ್ವೇದ.

2. ವೈದಿಕ ನಾಗರೀಕತೆಯಲ್ಲಿ ರಾಜನಿಗೆ ಯಾವ ಎರಡು ರಾಜಕೀಯ ಸಂಸ್ಥೆಗಳು ಸಹಾಯ ಮಾಡುತ್ತಿದ್ದವು?

ಸಭಾ ಮತ್ತು ಸಮಿತಿ.

3. ಯಾವುದಾದರೂ ಎರಡು ವರ್ಗಗಳನ್ನು ಹೆಸರಿಸಿ.

ಬ್ರಾಹ್ಮಣ ಮತ್ತು ಕ್ಷತ್ರಿಯ.

4. ಆರ್ಯರ ಯಾವುದಾದರೂ ಎರಡು ಆಶ್ರಮಗಳನ್ನು ಹೆಸರಿಸಿ.

ಬ್ರಹ್ಮಚರ್ಯ (ಶಿಕ್ಷಣದ ಅವಧಿ), ಗೃಹಸ್ಥ (ವೈವಾಹಿಕ ಜೀವನ).

5. ವೈದಿಕ ಜನರ ಯಾವುದಾದರೂ ಎರಡು ಮನರಂಜನೆಗಳನ್ನು ಹೆಸರಿಸಿ.

ಜೂಜಾಡುವುದು, ರಥ ಓಡಿಸುವುದು.

6. ವೈದಿಕ ಕಾಲದ ಯಾರಾದರೂ ಇಬ್ಬರು ಮಹಿಳಾ ವಿದ್ವಾಂಸವನ್ನು ಹೆಸರಿಸಿ.

ಗಾರ್ಗಿ, ಮೈತ್ರೇಯಿ.

1.ಆರ್ಯರ ರಾಜಕೀಯ ಸ್ಥಿತಿಯ ಬಗ್ಗೆ ವಿವರಣೆ ನೀಡಿ.

  • ಆರ್ಯರ ಬುಡಕಟ್ಟುಗಳನ್ನು ‘ಜನ’ಗಳು ಎನ್ನುತ್ತಿದ್ದರು. ಬುಡಕಟ್ಟಿನ ಮುಖ್ಯಸ್ಥರನ್ನು ‘ರಾಜನ್’ ಎಂದು ಕರೆಯುತ್ತಿದ್ದರು.
  • ಜಾನುವಾರುಗಳು ಮತ್ತು ಪ್ರದೇಶಗಳಿಗಾಗಿ ಬುಡಕಟ್ಟುಗಳು ಪರಸ್ಪರ ಸಂಘರ್ಷದಲ್ಲಿ ತೊಡಗುತ್ತಿದ್ದವು.
  • ಪುರೋಹಿತ, ಸಂಗ್ರಹಪತಿ, ಸೇನಾಪತಿ, ವಿಸ್ಪತಿಗಳು ಮತ್ತು ಗ್ರಾಮಣಿಗಳು ಅರಸನಿಗೆ ಆಡಳಿತದಲ್ಲಿ ಸಹಾಯಕರಾಗಿದ್ದರು. ಗ್ರಾಮಣಿ ಗ್ರಾಮದ ಮುಖ್ಯಸ್ಥ. ವಿಸ್ಪತಿಯ ಕೆಲವು ಗ್ರಾಮಗಳ ಗುಂಪಿನ ಉಸ್ತುವಾರಿ ಹೊಂದಿದ್ದನು.
  • ರಾಜನ ಪ್ರಾಥಮಿಕ ಕರ್ತವ್ಯವು ಬುಡಟಕ್ಷನ್ನು ರಕ್ಷಣೆ ಮಾಡುವುದಾಗಿತ್ತು. ಇದಕ್ಕಾಗಿ ಅವನು ಜನರಿಂದ ಕಾಣಿಕೆಗಳನ್ನು ಪಡೆಯುತ್ತಿದ್ದನು.
  • ‘ಜನ’ಗಳು ಪ್ರಬಲ ರಾಜ್ಯಗಳಾಗಿ ಪರಿವರ್ತನೆಗೊಂಡವು. ರಾಜ್ಯಗಳನ್ನು ಪ್ರಾಂತ್ಯಗಳನ್ನಾಗಿ ವಿಂಗಡಣೆಯಾಯಿತು.
  • ರಾಜಪ್ರಭುತ್ವವು ವಂಶಪಾರಂಪರವಾಯಿತು.
  • ಸೈನ್ಯವು ಕಾಲ್ಗಳ, ಗಜದಳ ಮತ್ತು ಅಶ್ವದಳಗಳನ್ನೊಳ ಗೊಂಡಿತ್ತು.
  • ಬಿಲ್ಲುಬಾಣಗಳು, ಖಡ್ಗಗಳು, ಭರ್ಜಿಗಳು, ಗದೆಗಳು, ಕೊಡಲಿಗಳು ಮುಂತಾದ ಯುದ್ಧೋಪಕರಣಗಳನ್ನು ಉಪಯೋಗಿಸುತ್ತಿದ್ದರು. ಜಯಗಳಿಸುವುದಕ್ಕಾಗಿ ಮೋಸದ ಮಾರ್ಗವನ್ನು ಅನುಸರಿಸುತ್ತಿದ್ದರು.
  1. ಆರ್ಯರ ಸಾಮಾಜಿಕ ಸ್ಥಿತಿಯನ್ನು ವಿವರಿಸಿ.

ಅವಿಭಕ್ತ ಕುಟುಂಬ ವ್ಯವಸ್ಥೆಯಿದ್ದು, ಪಿತೃಪ್ರಧಾನವಾಗಿತ್ತು. ಕುಟುಂಬದ ಪುರುಷ ಸದಸ್ಯ ಮುಖ್ಯಸ್ಥನಾಗಿದ್ದನು. ಇವನನ್ನು ಕುಲಪತಿ ಅಥವಾ ಗೃಹಪತಿ ಎಂದು ಕರೆಯಲಾಗಿತ್ತು.

  • ಏಕಪತ್ನಿತ್ವ ರೂಢಿಯಲ್ಲಿತ್ತು, ಬಹುಪತ್ನಿತ್ವ ರಾಜವಂಶಕ್ಕೆ ಸೀಮಿತವಾಗಿತ್ತು.
  • ಮಹಿಳೆಯರಿಗೆ ಉನ್ನತ ಸ್ಥಾನವಿದ್ದು, ವಿಧವಾ ಪುನರ್ ವಿವಾಹ ಅಸ್ತಿತ್ವದಲ್ಲಿತ್ತು.
  • ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಹಾಗೂ ಶೂದ್ರ ಎಂಬ ವರ್ಗಗಳಿದ್ದು ವೃತ್ತಿಗಳನ್ನು ಬದಲಾಯಿಸುವುದರೊಂದಿಗೆ ಜನರು ವರ್ಗಗಳನ್ನು ಬದಲಾಯಿಸಬಹುದಾಗಿತ್ತು.
  • ಉನ್ನರ ವೈದಿಕ ಕಾಲದಲ್ಲಿ ಬಹುಪತ್ನಿತ್ವ ಮತ್ತು ಬಹುಪತಿತ್ವ ಅಸ್ತಿತ್ವಕ್ಕೆ ಬಂದವು. ಮಹಿಳೆಯರ ಸ್ಥಾನ ಕ್ಷೀಣಿಸಿತು.
  • ಗೋಧಿ, ಅಕ್ಕಿ, ಬಾರ್ಲಿ, ತರಕಾರಿ, ಹಣ್ಣುಗಳು, ಹಾಲು ಮತ್ತು ಹೈನು ಜನರ ಆಹಾರ ಪದಾರ್ಥಗಳಾಗಿದ್ದವು. ಮೀನು ಮತ್ತು ಮಾಂಸಗಳನ್ನು ಉಪಯೋಗಿಸುತ್ತಿದ್ದರು.
  • ಧಾರ್ಮಿಕ ಮತ್ತು ಹಬ್ಬದ ಸಂದರ್ಭದಲ್ಲಿ ‘ಸೋಮ’ ಮತ್ತು ಸುರವೆಂಬ ಮಾದಕ ಪೇಯಗಳನ್ನು ಸೇವಿಸುತ್ತಿದ್ದರು.
  • ಸ್ತ್ರೀ ಪುರುಷರಿಬ್ಬರೂ ಆಭರಣಪ್ರಿಯರಾಗಿದ್ದರು.
  • ಜೂಜಾಡುವುದು, ರಥ ಓಡಿಸುವ ಸ್ಪರ್ಧೆ, ಕುದುರೆ ಓಡಿಸುವ ಸ್ಪರ್ಧೆ, ಸಂಗೀತ, ನೃತ್ಯ ಮುಂತಾದವುಗಳು ಅವರ ವಿವಿಧ ರೀತಿಯ ಮನರಂಜನೆಗಳಾಗಿದ್ದವು. ನಗಾರಿ, ದುಂದುಂಬಿ, ವೀಣೆ ಮತ್ತು ಕೊಳಲು ಆ ಕಾಲದ ಪ್ರಮುಖ ಸಂಗೀತ ವಾದ್ಯಗಳಾಗಿದ್ದವು.

3. ಆರ್ಯರ ಧಾರ್ಮಿಕ ಸ್ಥಿತಿಯನ್ನು ವಿವರಿಸಿ.

  • ವೈದಿಕ ಧರ್ಮವು ಸನಾತನಧರ್ಮ, ಹಿಂಧೂ ಧರ್ಮ ಮತ್ತು ಬ್ರಾಹ್ಮಣ ಧರ್ಮ ಎಂದೂ ಸಹ ಹೆಸರಾಗಿದೆ. ಇಂದಿಗೂ ಆಚರಣೆಯಲ್ಲಿದೆ.
  • ಪೂರ್ವ ವೇದ ಕಾಲದ ಆರ್ಯರು ಪ್ರಕೃತಿಯನ್ನು ಆರಾಧಿಸುತ್ತಿದ್ದರು. ಅವರುಗಳಿಗೆ ದೇವರಲ್ಲಿ ನಂಬಿಕೆಯಿತ್ತು. ಇಂದ್ರ, ವರುಣ, ಅಗ್ನಿ, ವಾಯು ಸೂರ್ಯ, ಪೃಥ್ವಿ, ಸೋಮ ಮುಂತಾದ ದೇವತೆಗಳನ್ನು ಪೂಜಿಸುತ್ತಿದ್ದರು.
  • ಮೂರ್ತಿ ಪೂಜೆ ಇರಲಿಲ್ಲ. ಪೂಜಾ ವಿಧಾನ ಸರಳವಾಗಿತ್ತು. ಅವರು ಶ್ಲೋಕಗಳನ್ನು ರಚಿಸಿ ದೇವತೆಗಳನ್ನು ಆರಾಧಿಸುತ್ತಿದ್ದರು.
  • ಉತ್ತರ ವೇದಕಾಲದಲ್ಲಿ ಧರ್ಮಾಚರಣೆ ಸಂಕೀರ್ಣ ಮತ್ತು ಕಠಿಣವಾಯಿತು. ದೇವತೆಗಳ ಸಂಖ್ಯೆ ಬಹುಪಟ್ಟು ಹೆಚ್ಚಿತು ಮತ್ತು ದೇವತೆಗಳಿಗೆ ವಿವಿಧ ಆಕಾರ ಮತ್ತು – ಗುಣಗಳನ್ನು ಕೊಡಲಾಯಿತು. ಮೂರ್ತಿ ಪೂಜೆ ಅಸ್ಥಿತ್ವಕ್ಕೆ ಬಂದಿತು. ಹೊಸ ದೇವತೆಗಳಾದ ಬ್ರಹ್ಮ, ವಿಷ್ಣು, ಮಹೇಶ್ವರ, ಗಣೇಶ, ಕಾರ್ತಿಕೇಯ, ಪಾರ್ವತಿ, ಲಕ್ಷ್ಮೀ, ಕಾಳೀ, ದುರ್ಗ, ಮುಂತಾದವರು ಅಸ್ತಿತ್ವಕ್ಕೆ ಬಂದರು. ಆಕಳನ್ನು ಪವಿತ್ರವೆಂದು ಪರಿಗಣಿಸಲಾಗಿತ್ತು. ಯಜ್ಞಯಾಗಾದಿಗಳ ಆಚರಣೆಯೂ ವಿಸ್ತ್ರತವಾಯಿತು.
  • ವರ್ಗಗಳು, ಆಶ್ರಮಗಳು ಮತ್ತು ಪುರುಷಾರ್ಥಗಳು ವೈದಿಕ ಧರ್ಮದ ಅವಿಭಾಜ್ಯ ಅಂಗಗಳಾಗಿದ್ದವು.
  • ವೈದಿಕ ಧರ್ಮವು ಹುಟ್ಟು, ಸಾವು, ಪುನರ್ಜನ್ಮ ಚಕ್ರದಲ್ಲಿ ಮತ್ತು ಆತ್ಮದ ಪರಕಾಯ ಪ್ರವೇಶದ ಪರಿಕಲ್ಪನೆಯಲ್ಲೂ ನಂಬಿಕೆ ಹೊಂದಿದೆ.
  1. ವೈದಿಕ ಕಾಲದ ಶಿಕ್ಷಣ ಮತ್ತು ವಿಜ್ಞಾನ ಕುರಿತು ಟಿಪ್ಪಣಿ ಬರೆಯಿರಿ.
  • ಗುರುಕುಲ, ಪಾಠಶಾಲೆ, ಅಗ್ರಹಾರ ಮತ್ತು ಘಟಕಗಳಲ್ಲಿ ಶಿಕ್ಷಣವನ್ನು ನೀಡಲಾಗುತ್ತಿತ್ತು. ದೇವಾಲಯಗಳೂ ಕೂಡ ಶಿಕ್ಷಣ ಕೇಂದ್ರಗಳಾಗಿದ್ದವು.
  • ಉನ್ನತ ಶಿಕ್ಷಣವನ್ನು ಕಂಚಿ ಮತ್ತು ತಕ್ಷಶಿಲಾಗಳಂತಹ ವಿಶ್ವವಿದ್ಯಾನಿಲಯಗಳಲ್ಲಿ ಒದಗಿಸಲಾಗುತ್ತಿತ್ತು.
  • ಸ್ತ್ರೀ ಪುರುಷರಿಬ್ಬರೂ ಶಿಕ್ಷಣ ಪಡೆಯುತ್ತಿದ್ದರು.
  • ವೇದಗಳು, ಪುರಾಣಗಳು, ತತ್ವಶಾಸ್ತ್ರ, ಗಣಿತ, ಖಗೋಳಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ಔಷಧಶಾಸ್ತ್ರ, ತರ್ಕಶಾಸ್ತ್ರ, ಮುಂತಾದವುಗಳು ಪ್ರಮುಖ ಬೋಧನಾ ವಿಷಯಗಳಾಗಿದ್ದವು. ಸಂಸ್ಕೃತ ಭೋದನಾ ಮಾಧ್ಯಮವಾಯಿತು.
  • ಆರ್ಯರು ಗಣಿತ, ರೇಖಾಗಣಿತ, ಔಷಧಶಾಸ್ತ್ರ ಮತ್ತು ಲೋಹಶಾಸ್ತ್ರಗಳಲ್ಲಿ ಹೆಚ್ಚಿನ ಪ್ರಗತಿ ಹೊಂದಿದ್ದರು.
  • ಸೂರ್ಯ ಮತ್ತು ಚಂದ್ರ, ಚಂದ್ರ ಮತ್ತು ಭೂಮಿ ಹಾಗೂ ಸೂರ್ಯ ಮತ್ತು ಭೂಮಿಗಳ ನಡುವಿನ ಅಂತರದ ಲೆಕ್ಕಾಚಾರ ಅವರಿಗೆ ತಿಳಿದಿತ್ತು. ಗ್ರಹಣಗಳು ಮತ್ತು ಧೂಮಕೇತುಗಳ ಸಂಭವಿಸುವಿಕೆಯ ಜ್ಞಾನ ಅವರಿಗಿತ್ತು.
  • ಔಷಧಶಾಸ್ತ್ರದಲ್ಲಿಯೂ ಹೆಚ್ಚಿನ ಪ್ರಗತಿ ಸಾಧಿಸುತ್ತಿದ್ದರು.
  • ಚಂದ್ರಮಾನ ಪಂಚಾಂಗವನ್ನು ಅನುಸರಿಸುತ್ತಿದ್ದರು.

1.ಆರ್ಯರು ಭಾರತಕ್ಕೆ ಯಾವ ದಿಕ್ಕಿನಲ್ಲಿ ಬಂದರೆಂದು ನಂಬಲಾಗಿದೆ?

ವಾಯುವ್ಯ ದಿಕ್ಕಿನಿಂದ.

2. ಪ್ರೊಫೆಸರ್ ಮ್ಯಾಕ್‌ಡೊನಾಲ್ಡ್‌ರವರ ಪ್ರಕಾರ ಆರ್ಯರ ಮೂಲಸ್ಥಳ ಯಾವುದು?

ಆಗ್ನೆಯ ಏಷ್ಯಾ.

3 ಆರ್ಯರು ಯಾರು? ಮತ್ತು ಅವರ ಮೂಲಸ್ಥಳ ಯಾವುದು?

ಆರ್ಯರು ಕ್ಯಾಸ್ಪಿಯನ್ ಸಮುದ್ರ ಪ್ರದೇಶದ ಹಳ್ಳಿಗಾಡಿನ ದನಗಾಹಿಗಳು.

4. ಆರ್ಯರು ಟಿಬೆಟ್ ಮೂಲದವರೆಂದು ಹೇಳಿದವರಾರು?

ಬಾಲಗಂಗಾಧರ ತಿಲಕ್.

5. ನಿಷ್ಕ ಎಂದರೇನು?

ಒಂದು ಚಿನ್ನದ ತುಣುಕು.

6. ಪುರುಷಾರ್ಥಗಳು ಎಂದರೇನು?

ಧರ್ಮ, ಅರ್ಥ, ಕಾಮ, ಮೋಕ್ಷ.

7. ಆರ್ಯರ ವ್ಯಾಪಾರ ಪದ್ಧತಿಯು ಯಾವುದರ ಮೂಲಕ ನಡೆಯುತ್ತಿತ್ತು?

ವಸ್ತುವಿನಿಮಯ.

  • ಸೋಹರ್ ನದಿ ಕಣಿವೆ ಈಗಿನ ಪಾಕಿಸ್ಥಾನದಲ್ಲಿದೆ.
  • ಪ್ಯಾಲಿಯೋ ಎಂದರೆ ಹಳೆಯ ಲಿಥಿಕ್ ಎಂದರೆ ಶಿಲೆ ಎಂದರ್ಥ.
  • ದಕ್ಷಿಣ ಭಾರತದಲ್ಲಿ ಮಾನವನು ಉಪಯೋಗಿಸಿದ ಮೊದಲ ಲೋಹ ಕಬ್ಬಿಣ.

Leave a Comment