2ND PUC History Sindhu Nagarikate Notes | ದ್ವಿತೀಯ ಪಿಯುಸಿ ಸಿಂಧೂ ನಾಗರೀಕತೆ ಪಾಠದ ನೋಟ್ಸ್ 2nd puc histoy ಅಧ್ಯಾಯ 3ರ ಪಾಠದ ಪ್ರಶ್ನೋತ್ತರಗಳು Second puc history Chapter 2 Question Answer 12th Standard history chapter 2 notes pdf Download in Kannda Medium 2nd puc history all Chapter notes pdf in Kannada 2nd puc history guide kannda Second puc histoy question Answer in karnataka

I.ಈ ಕೆಳಗಿನ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆರಿಸಿ బರೆಯಿರಿ
1. ಭಾರತೀಯ ಪುರಾತತ್ವ ಇಲಾಖೆಯನ್ನು ಸ್ಥಾಪಿಸಿದ ವರ್ಷ
ಎ) 1902
ಬಿ) 1901
ಸಿ) 1903
ಡಿ) 1904
2. ಸಿಂಧೂ ನಾಗರೀಕತೆಯ ಸ್ನಾನಗೃಹ ಕಂಡುಬಂದ ನಗರ
ಎ) ಲೋಥಾಲ್
ಬಿ) ಕಾಲಿಬಂಗನ್
ಸಿ) ಮಹೇಂಜೊದಾರೋ
ಡಿ) ದೋಲವಿರಾ
3. ಸಿಂಧೂ ನಾಗರೀಕತೆಯ ಹಡಗುಕಟ್ಟೆ ಕಂಡುಬಂದ ನಗರ
ಎ) ಕಾಲಿಬಂಗನ್
ಬಿ) ಲೋಥಲ್
ಸಿ) ಧೋಲವಿರಾ
ಡಿ) ಹರಪ್ಪಾ
4. ಹರಪ್ಪಾ ಕಂಡುಹಿಡಿದವರು
ಎ) ಡಾ॥ ಆರ್.ಡಿ. ಬ್ಯಾನರ್ಜಿ
ಬಿ) ಡಾ||ಆರ್. ಬಿ. ದಯಾರಾಮ್ ಸಹಾನಿ
ಸಿ) ಎಫ್.ಎ.ಖಾನ್
ಡಿ) ಹುಸೇನ್
5. ಬನವಲಿ ಯಾವ ರಾಜ್ಯದಲ್ಲಿದೆ.
ಎ) ಕೇರಳ
ಬಿ) ತಮಿಳುನಾಡು
ಸಿ) ಗುಜರಾತ್
ಡಿ) ಹರಿಯಾಣ
6. ಪಾಕಿಸ್ತಾನದಲ್ಲಿರುವ ಕೋಟ್ ಡಿಜಿ ಪ್ರದೇಶವನ್ನು ಕಂಡುಹಿಡಿದವರು
ಎ) ದಯಾರಾಮ ಸಹಾನಿ
ಬಿ) ಆರ್.ಡಿ. ಬ್ಯಾನರ್ಜಿ
ಸಿ) ಮೆನನ್
ಡಿ) ಎಫ್. ಎ. ಖಾನ್
7. ಸಿಂಧೂ ಜನರ ಪ್ರಧಾನ ದೇವತೆ
ಎ) ಪಿತೃದೇವತೆ
ಬಿ) ನಿಸರ್ಗ
ಸಿ) ಮರ
ಡಿ) ಮಾತೃದೇವತೆ
8. ಮಹೇಂಜೊದಾರೋ ಕಂಡುಹಿಡಿದವರು
ಎ) ದಯಾರಾಮ್ ಸಹಾನಿ
ಬಿ) ಎಫ್.ಎ.ನಾ
ಸಿ) ಆರ್.ಡಿ. ಬ್ಯಾನರ್ಜಿ
ಡಿ) ಮೆನನ್
II. ಖಾಲಿಬಿಟ್ಟ ಸ್ಥಳವನ್ನು ಭರ್ತಿಮಾಡಿ.
1. ಮಹೆಂಜೋದಾರೋ ಎಂದರೆ ಮಡಿದವರ ದಿಬ್ಬ ಎಂದರ್ಥ.
2. ಸಿಂಧೂ ನಾಗರೀಕತೆಯ ಹಡಗುಕಟ್ಟೆ ಇರುವ ಸ್ಥಳ ಲೋಥಾಲ್
3. ಸಿಂಧೂ ನಾಗರೀಕತೆಯ ಸ್ನಾನಗೃಹ ಇರುವ ಸ್ಥಳ ಮಹೆಂಜೋದಾರೋ
4. ಸಿಂಧೂಜನರ ಪ್ರಧಾನ ಕಸುಬು ವ್ಯವಸಾಯ
5. ಸಿಂಧೂಜನರ ಪ್ರಧಾನ ದೇವತೆ ಮಾತೃದೇವತೆ
6. ಭಾರತೀಯ ಪುರಾತತ್ವ ಇಲಾಖೆಯನ್ನು ಸ್ಥಾಪಿಸಿದ 1904
7. ಹರಪ್ಪಾ ಕಂಡುಹಿಡಿದವರು ಡಾ|| ಆರ್.ಬಿ. ದಯಾರಾಮ್ ಸನಾಹಿ
8. ಮಹೆಂಜೊದಾರೋ ಕಂಡುಹಿಡಿದವರು ಡಾ| ಆರ್.ಡಿ. ಬ್ಯಾನರ್ಜಿ
9. ಸಿಂಧೂ ಜನರ ಶವಸಂಸ್ಕಾರ ಪದ್ಧತಿ ದಹನ ಮತ್ತು ಹೂಳುವ ಪದ್ಧತಿ
10. ಸಿಂಧೂ ನಾಗರೀಕತೆಯ ಜನರು ವಸ್ತುವಿನಿಮಯ ಪದ್ಧತಿ ಮೂಲಕ ವ್ಯಾಪಾರಿ ಚಟುವಟಿಕೆಗಳನ್ನು ನಡೆಸುತ್ತಿದ್ದರು.
11. ಬನವಲಿ ಹರಿಯಾಣ ರಾಜ್ಯದಲ್ಲಿದೆ.
12. ಸುಟ್ಟ ಇಟ್ಟಿಗೆಗಳಿಂದ ನಿರ್ಮಿಸಿರುವ ವೇದಿಕೆ ಹರಪ್ಪಾ ಮತ್ತು ಕಾಲಿಬಂಗನ್ ಗಳಲ್ಲಿ ಕಂಡುಬಂದಿದೆ.
III. ಹೊಂದಿಸಿ ಬರೆಯಿರಿ.
ಕ್ರಮ ಸಂಖ್ಯೆ | ಅ | ಆ | ಉತ್ತರಗಳು |
---|---|---|---|
1 | ಮಹೇಂಜೋದಾರೋ | ದಹನ ಮತ್ತು ಹೂಳುವುದು | ಮಡಿದವರ ದಿಬ್ಬ |
2 | ಲೋಥಾಲ್ | ಮಾತೃದೇವತೆ | ಹಡಗು ಕಟ್ಟೆ |
3 | ಸ್ನಾನಗೃಹ | ಹರಿಯಾಣ | ಮಹೆಂಜೋದಾರೋ |
4 | ವ್ಯವಸಾಯ | ಎಫ್. ಎ. ಖಾನ್ | ಮುಖ್ಯ ಕಸುಬು |
5 | ಪ್ರಧಾನ ದೇವತೆ | ಹಡಗು ಕಟ್ಟೆ | ಮಾತೃದೇವತೆ |
6 | ಹರಪ್ಪಾ | ಮಡಿದವರ ದಿಬ್ಬ | ದಯಾರಾಮ್ ಸಹಾನಿ |
7 | ಬನವಲಿ | ಮುಖ್ಯ ಕಸುಬು | ಹರಿಯಾಣ |
8 | ಪಾಕಿಸ್ತಾನದ ಕೋಟ್‌ಡಿಜಿ | ಮಹೆಂಜೋದಾರೋ | ಎಫ್. ಎ. ಖಾನ್ |
9 | ಶವಸಂಸ್ಕಾರ ಪದ್ದತಿ | ದಯಾರಾಮ್ ಸಹಾನಿ | ದಹನ ಮತ್ತು ಹೂಳುವುದು |
IV. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ:
1.ಭಾರತೀಯ ಪುರಾತತ್ವ ಇಲಾಖೆಯನ್ನು ಯಾವ ವರ್ಷ ಸ್ಥಾಪಿಸಲಾಯಿತು?
1904
2. ಮೊಹೆಂಜೊದಾರೋ ಪದದ ಅರ್ಥವೇನು?
ಮೊಹೆಂಜೊದಾರೋ ಎಂದರೆ ಮಡಿದವರ ದಿಬ್ಬ.
3. ಸಿಂಧೂ ನಾಗರೀಕತೆಯ ಸ್ನಾನ ಗೃಹ ಎಲ್ಲಿದೆ?
ಸಿಂಧೂ ನಾಗರೀಕತೆಯ ಸ್ನಾನ ಗೃಹ ಮೆಹಂಜೋದಾರೋನಲ್ಲಿದೆ.
4. ಸಿಂಧೂ ನಾಗರೀಕತೆಯ ಹಡಗು ಕಟ್ಟೆ ಎಲ್ಲಿ ಪತ್ತೆಯಾಗಿದೆ?
ಸಿಂಧೂ ನಾಗರೀಕತೆಯ ಹಡಗು ಕಟ್ಟೆ ಲೋಥಾಲ್‌ನಲ್ಲಿ ಪತ್ತೆಯಾಗಿದೆ.
5. ಸಿಂಧೂ ಜನರ ಪ್ರಧಾನ ದೇವತೆಯನ್ನು ಹೆಸರಿಸಿ.
ಸಿಂಧೂ ಜನರ ಪ್ರಧಾನ ದೇವತೆ ಮಾತೃದೇವತೆ.
6. ಮೆಹೆಂಜೋದಾರೋ ಎಂದರೆ ಏನು ಅರ್ಥ?
ಮಡಿದವರ ದಿಬ್ಬ
7. ಸಿಂಧೂನಾಗರೀಕತೆಯ ಜನರ ಮುಖ್ಯ ಕಸುಬೇನು?
ವ್ಯವಸಾಯ
8. ‘ಬನವಲಿ’ ಎಲ್ಲಿದೆ?
ಬನವಲಿ ಹರಿಯಾಣದಲ್ಲಿದೆ.
9. ಪಾಕಿಸ್ತಾನದಲ್ಲಿರುವ ಕೋಟ್‌ಜಿ ಪ್ರದೇಶವನ್ನು ಕಂಡುಹಿಡಿದವರು ಯಾರು?
ಎಫ್.ಎ.ಖಾನ್
10. ಹರಪ್ಪಾ ಕಂಡುಹಿಡಿದವರಾರು?
ಡಾ|| ಆರ್.ಬಿ. ದಯಾರಾಮ್ ಸಹನಿ
11. ಮಹೆಂಜೋದಾರೋ ಕಂಡುಹಿಡಿದವರಾರು?
ಡಾ| ಆರ್.ಡಿ. ಬ್ಯಾನರ್ಜಿ
12. ಸಿಂಧೂಜನರ ಯಾವುದಾದರೂ ಎರಡು ರಫ್ತುಗಳನ್ನು ತಿಳಿಸಿ?
ದಂತ, ಚಿನ್ನ
13. ಸಿಂಧೂಜನರ ಯಾವುದಾದರೂ ಎರಡು ಆಮದುಗಳನ್ನು ತಿಳಿಸಿ?
ಹರಳುಗಳು, ತಾಮ್ರ
14. ಸುಟ್ಟ ಇಟ್ಟಿಗೆಗಳಿಂದ ನಿರ್ಮಿಸಿರುವ ವೇದಿಕೆ ಎಲ್ಲಿ ಕಂಡುಬಂದಿದೆ?
ಹರಪ್ಪಾ, ಕಾಲಿಬಂಗನ್
15. ಸಿಂಧೂ ನಾಗರೀಕತೆ ಪ್ರಪಂಚದ ಇತರೆ ಯಾವ ನಾಗರೀಕತೆಗಳ ಸಮಕಾಲೀನ ನಾಗರೀಕತೆಯಾಗಿದೆ?
ಈಜಿಪ್ಟ್, ಚೀನಾ, ಮೆಸಪಟೋಮಿಯಾ
V. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ 2 ಪದ ಅಥವಾ 2 ವಾಕ್ಯಗಳಲ್ಲಿ ಉತ್ತರಿಸಿ:
1.ಹರಪ್ಪಾ ಮತ್ತು ಮೊಹೆಂಜೊದಾರೋಗಳನ್ನು ಯಾರು ಕಂಡುಹಿಡಿದರು?
ಹರಪ್ಪಾ ಡಾ॥ ಆರ್.ಬಿ. ದಯಾರಾಮ್ ಸಹಾನಿ ಮೆಹೆಂಜೊದಾರೋ ಡಾ|| ಆರ್.ಡಿ. ಬ್ಯಾನರ್ಜಿ
2. ಸಿಂಧೂ ನಾಗರೀಕತೆಯಲ್ಲಿ ಪತ್ತೆಯಾದ ಯಾವುದಾದರೂ ಎರಡು ನಗರಗಳನ್ನು ಹೆಸರಿಸಿ.
ಕಾಲಿಬಂಗನ್, ದೋಲವಿರಾ.
3. ಸಿಂಧೂ ಜನರ ಶವ ಸಂಸ್ಕಾರ ಪದ್ಧತಿಗಳನ್ನು ತಿಳಿಸಿ.
ದಹನ ಮತ್ತು ಹೂಳುವ ಪದ್ಧತಿ.
4. ಸಿಂಧೂ ಜನರ ಯಾವುದಾದರೂ ಎರಡು ಆಮದುಗಳನ್ನು ತಿಳಿಸಿ.
ಅಮೂಲ್ಯವಾದ ಹರಳುಗಳು, ತಾಮ್ರ ಮತ್ತು ತವರ.
5. ಸಿಂಧೂ ಜನರ ಯಾವುದಾದರೂ ಎರಡು ರಫ್ತುಗಳನ್ನು ತಿಳಿಸಿ.
ದಂತ, ಚಿನ್ನ, ಮುತ್ತು ಮತ್ತು ಮರದ ದಿಮ್ಮಿ.
6. ಸಿಂಧೂ ನಾಗರೀಕತೆಯ ಅಂತ್ಯಕ್ಕೆ ಕಾರಣವಾದ ಯಾವುದಾದರೂ ಎರಡು ಕಾರಣಗಳನ್ನು ತಿಳಿಸಿ.
- ಆರ್ಯರ ಆಕ್ರಮಣ
- ಪ್ರಕೃತಿ ವಿಕೋಪ
VI ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ 15-20 ವಾಕ್ಯಗಳಲ್ಲಿ ಉತ್ತರಿಸಿ:
1.ಸಿಂಧೂ ನಾಗರೀಕತೆಯ ನಗರ ಯೋಜನೆಯನ್ನು ವಿವರಿಸಿ.
ಸಿಂಧೂ ನಾಗರೀಕತೆಯ ನಗರ ಯೋಜನೆ; ಅವರು ಅತ್ಯಂತ ಉನ್ನತ ನಾಗರೀಕ ಮತ್ತು ಅಭಿವೃದ್ಧಿ ಹೊಂದಿದ ಜೀವನವನ್ನು ನಡೆಸುತ್ತಿದ್ದರೆಂಬುದನ್ನು ಸಾಬೀತುಪಡಿಸುತ್ತದೆ.
- ಯೋಜನಾಬದ್ದ ನಗರ ನಿರ್ಮಾಣ ಕೆಲವು ನಗರಗಳು ಪಶ್ಚಿಮಕ್ಕೆ ಎತ್ತರದ ಪೀಠದ ಮೇಲೆ ನಿರ್ಮಿತ ಪುರದುರ್ಗ ಹೊಂದಿವೆ.
- ಪೂರ್ವಕ್ಕೆ ಜನವಸತಿ ಪ್ರದೇಶವಿದೆ. ಅವೆರಡರ ಸುತ್ತಲೂ ಇಟ್ಟಿಗೆಗಳ ಬೃಹತ್ ಗೋಡೆಯಿದೆ.
- ಬೀದಿಗಳು ನೇರವಾಗಿದ್ದು, ದೀಪದ ಕಂಬುಗಳು ಕಂಡುಬಂದಿದೆ.
- ರಸ್ತೆಯ ಬದಿಯಲ್ಲಿ ಕಸದ ತೊಟ್ಟಿಗಳನ್ನು ಇಡಲಾಗಿದ್ದು ಇವುಗಳು ಒಂದು ಉತ್ತಮ ನಗರಾಡಳಿತವಿತ್ತೆಂಬುದನ್ನು ಸಾಬೀತುಪಡಿಸುತ್ತದೆ.
- ಒಳಚರಂಡಿ ವ್ಯವಸ್ಥೆ, ಇಂಗುಗುಂಡಿ, ವಿಶಾಲವಾದ ರಸ್ತೆಗಳಿಂದ ಕೂಡಿತ್ತು.
- ಮೆಹೆಂಜೋದಾರೋವಿನಲ್ಲಿ ಸ್ನಾನದ ಕೊಳ, ಉಗ್ರಾಣಗಳು ಕಂಡುಬಂದಿವೆ.
- ಸುಟ್ಟ ಇಟ್ಟಿಗೆಗಳಿಂದ, ಮೇಲ್ಟಾವಣೆ ಹೊಂದಿದ ಒಂದು ಮತ್ತು ಬಹು ಅಂತಸ್ತಿನ ಮನೆಗಳೂ ಕಂಡುಬಂದಿವೆ.
2. ಸಿಂಧೂ ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳನ್ನು ತಿಳಿಸಿರಿ
ಸಾಮಾಜಿಕ ಪರಿಸ್ಥಿತಿ:
- ಸಮಾಜದಲ್ಲಿ ವೃತ್ತಿ ಆಧಾರಿತ ವರ್ಗಗಳಾದ ಪಂಡಿತ ವರ್ಗ, ಯೋಧರು, ವ್ಯಾಪಾರಿಗಳು ಮತ್ತು ಶ್ರಮಿಕರು ಎಂಬುದಾಗಿದ್ದರು.
- ಗೋಧಿ ಪ್ರಮುಖ ಆಹಾರವಾಗಿದ್ದು, ಬಾರ್ಲಿ, ಅಕ್ಕಿ, ಹಣ್ಣು, ತರಕಾರಿ, ಹಾಲು, ಮೀನು, ಮಾಂಸ, ಹಂದಿಮಾಂಸ, ಕೋಳಿ, ಆಮೆ, ಮುಂತಾದವುಗಳನ್ನು ಉಪಯೋಗಿಸುತ್ತಿದ್ದರು.
- ಉಡುಪು ಸರಳವಾಗಿದ್ದು ಹತ್ತಿ ಮತ್ತು ಉಣ್ಣೆ ಬಟ್ಟೆಗಳನ್ನು ತೊಡುತ್ತಿದ್ದರು. ಪುರುಷರು ಮತ್ತು ಮಹಿಳೆಯರು ಮೇಲು ಉಡುಗೆ ಮತ್ತು ಧೋತಿಯನ್ನು ಧರಿಸುತ್ತಿದ್ದರು.
- ಸ್ತ್ರೀ ಪುರುಷರಿಬ್ಬರೂ ಆಭರಣಪ್ರಿಯರಾಗಿದ್ದು ಕಿವಿಯೋಲೆ, ಕಾಲುಗೆಜ್ಜೆ, ನಡುಪಟ್ಟಿ, ನತ್ತು ಮತ್ತು ಕಂಚಿನ ಕನ್ನಡಿ ಮತ್ತು ದಂತದ ಬಾಚಣಿಗೆಯನ್ನು ಉಪಯೋಗಿಸುತ್ತಿದ್ದರು.
- ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಲ್ಲಿ ಜನರಿಗೆ ಹೆಚ್ಚು ಬಲವಿತ್ತು. ಬೇಟೆ, ಪಗಡೆ, ಮೀನು ಹಿಡಿಯುವುದು, ಚದುರಂಗ, ನೃತ್ಯ, ಸಂಗೀತ ಪ್ರಮುಕ ಹವ್ಯಾಸಗಳಾಗಿದ್ದವು.
- ಅಲಂಕೃತ ಮಣ್ಣಿನ ಪಾತ್ರೆಗಳನ್ನು ಉಪಯೋಗಿಸುತ್ತಿದ್ದರು.
- ತಾಮ್ರ ಮತ್ತು ಕಂಚಿನ ಆಯುಧಗಳಾದ ಕೊಡಲಿ, ಭರ್ಜಿ, ಕಠಾರಿ, ಗದೆ, ಕವಣೆ, ಬಿಲ್ಲುಬಾಣಗಳನ್ನು ಉಪಯೋಗಿಸುತ್ತಿದ್ದರು.
- ಶವಸಂಸ್ಕಾರವನ್ನು ದಹನ ಇಲ್ಲವೇ ಹೂಳುವ ಪದ್ಧತಿಗಳ ಮೂಲಕ ನಡೆಸುತ್ತಿದ್ದರು.
ಆರ್ಥಿಕ ಸ್ಥಿತಿ:
- ಕೃಷಿ ಪ್ರಮುಖ ಕಸುಬಾಗಿದ್ದು, ಅದರೊಂದಿಗೆ ಪಶುಪಾಲನೆ ಮತ್ತು ಹೈನುಗಾರಿಕೆ ಇತ್ತು. ನೀರಾವರಿ ಕಲೆಯೂ ಗೊತ್ತಿತ್ತು.
- ನೂಲುವುದು, ನೇಯುವುದು, ಬಣ್ಣಹಾಕುವುದು, ಕುಂಬಾರಿಕೆ, ಮರಗೆಲಸ, ಲೋಹಕೈಗಾರಿಕೆ, ಮುಂತಾದ ಕುಶಲ ಕೈಗಾರಿಕೆಗಳು ಅಸ್ಥಿತ್ವದಲ್ಲಿದ್ದವು.
- ಸಿಂಧೂ ಜನರಿಗೆ ತೂಕ ಮತ್ತು ಅಳತೆಗಳು ಗೊತ್ತಿದ್ದವು. ದಶಮಾಂಶ ಪದ್ಧತಿಯ ಜ್ಞಾನವಿತ್ತು.
- ವಸ್ತು ವಿನಿಮಯ ಪದ್ಧತಿಯಿ ಮೂಲಕ ವ್ಯಾಪಾರ ಚಟುವಟಿಕೆ ನಡೆಯುತ್ತಿತ್ತು.
- ದಕ್ಷಿಣ ಭಾರತ, ರಾಜಸ್ತಾನ, ಗುಜರಾತ್ ಮುಂತಾದವುಗಳೊಂದಿಗೆ ಆಂತರಿಕ ವ್ಯಾಪಾರ ಸಂಪರ್ಕ ಹೊಂದಿದ್ದರು.
- ದಂತ, ಚಿನ್ನ ಮತ್ತು ಮರದ ದಿಮ್ಮಿ ಮತ್ತು ಇತರ ವಸ್ತುಗಳನ್ನು ರಫ್ತು ಮಾಡುತ್ತಿದ್ದರು.
- ಅಮೂಲ್ಯ ಹರಳುಗಳು, ತಾಮ್ರ ಮತ್ತು ತವರ ಆಮದು ಮಾಡಿಕೊಳ್ಳುತ್ತಿದ್ದರು.
- ಆನೆ ಮತ್ತು ಒಂಟೆಗಳನ್ನು ರಸ್ತೆ ಸಾರಿಗೆಗಾಗಿ ಉಪಯೋಗಿಸುತ್ತಿದ್ದರು.
3. ಸಿಂಧೂ ನಾಗರೀಕತೆಯ ಲಕ್ಷಣಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
ಸಿಂಧೂ ನಾಗರೀಕತೆಯ ನಗರ ಯೋಜನೆ ಅವರು ಅತ್ಯಂತ ಉನ್ನತ ನಾಗರೀಕ ಮತ್ತು ಅಭಿವೃದ್ಧಿ ಹೊಂದಿದ ಜೀವನವನ್ನು ನಡೆಸುತ್ತಿದ್ದರೆಂಬುದನ್ನು ಸಾಬೀತುಪಡಿಸುತ್ತದೆ.
- ಯೋಜನಾ ಬದ್ದ ನಗರ ನಿರ್ಮಾಣ ಕೆಲವು ನಗರಗಳು
- ಪಶ್ಚಿಮಕ್ಕೆ ಎತ್ತರದ ಪೀಠದ ಮೇಲೆ ನಿರ್ಮಿತ ಪುರದುರ್ಗ ಹೊಂದಿವೆ.
- ಪೂರ್ವಕ್ಕೆ ಜನವಸತಿ ಪ್ರದೇಶವಿದೆ. ಅವೆರಡರ ಸುತ್ತಲೂ ಇಟ್ಟಿಗೆಗಳ ಬೃಹತ್ ಗೋಡೆಯಿದೆ.
- ಬೀದಿಗಳು ನೇರವಾಗಿದ್ದು, ದೀಪದ ಕಂಬಗಳು ಕಂಡುಬಂದಿವೆ.
- ರಸ್ತೆಯ ಬದಿಯಲ್ಲಿ ಕಸದ ತೊಟ್ಟಿಗಳನ್ನು ಇಡಲಾಗಿದ್ದು ಇವುಗಳು ಒಂದು ಉತ್ತಮ ನಗರಾಡಳಿತ ವಿತ್ತೆಂಬುದನ್ನು ಸಾಬೀತುಪಡಿಸುತ್ತದೆ.
- ಒಳಚರಂಡಿ ವ್ಯವಸ್ಥೆ, ಇಂಗುಗುಂಡಿ, ವಿಶಾಲವಾದ ರಸ್ತೆಗಳಿಂದ ಕೂಡಿತ್ತು.
- ಮೆಹೆಂಜೋದಾರೋವಿನಲ್ಲಿ ಸ್ನಾನದ ಕೊಳ, ಉಗ್ರಾಣಗಳು ಕಂಡುಬಂದಿವೆ.
- ಸುಟ್ಟ ಇಟ್ಟಿಗೆಗಳಿಂದ, ಮೇಲ್ಟಾವಣೆ ಹೊಂದಿದ ಒಂದು ಮತ್ತು ಬಹು ಅಂತಸ್ತಿನ ಮನೆಗಳೂ ಕಂಡುಬಂದಿವೆ. ಸಾಮಾಜಿಕ ಪರಿಸ್ಥಿತಿ
- ಸಮಾಜದಲ್ಲಿ ವೃತ್ತಿ ಆಧಾರಿತ ವರ್ಗಗಳಾದ ಪಂಡಿತ ವರ್ಗ, ಯೋಧರು, ವ್ಯಾಪಾರಿಗಳು ಮತ್ತು ಶ್ರಮಿಕರು ಎಂಬುದಾಗಿದ್ದರು.
- ಗೋಧಿ ಪ್ರಮುಖ ಆಹಾರವಾಗಿದ್ದು, ಬಾರ್ಲಿ, ಅಕ್ಕಿ, ಹಣ್ಣು, ತರಕಾರಿ, ಹಾಲು, ಮೀನು, ಮಾಂಸ, ಹಂದಿಮಾಂಸ, ಕೋಳಿ, ಆಮೆ, ಮುಂತಾದವುಗಳನ್ನು ಉಪಯೋಗಿಸುತ್ತಿದ್ದರು.
- ಉಡುಪು ಸರಳವಾಗಿದ್ದು ಹತ್ತಿ ಮತ್ತು ಉಣ್ಣೆ ಬಟ್ಟೆಗಳನ್ನು ತೊಡುತ್ತಿದ್ದರು. ಪುರುಷರು ಮತ್ತು ಮಹಿಳೆಯರು ಮೇಲು ಉಡುಗೆ ಮತ್ತು ಧೋತಿಯನ್ನು ಧರಿಸುತ್ತಿದ್ದರು.
- ಸ್ತ್ರೀ ಪುರುಷರಿಬ್ಬರೂ ಆಭರಣಪ್ರಿಯರಾಗಿದ್ದು ಕಿವಿಯೋಲೆ, ಕಾಲುಗೆಜ್ಜೆ, ನಡುಪಟ್ಟಿ, ನತ್ತು ಮತ್ತು ಕಂಚಿನ ಕನ್ನಡಿ ಮತ್ತು ದಂತದ ಬಾಚಣಿಗೆಯನ್ನು ಉಪಯೋಗಿಸುತ್ತಿದ್ದರು.
- ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಲ್ಲಿ ಜನರಿಗೆ ಹೆಚ್ಚು ಬಲವಿತ್ತು. ಬೇಟೆ, ಪಗಡೆ, ಮೀನು ಹಿಡಿಯುವುದು, ಚದುರಂಗ, ನೃತ್ಯ, ಸಂಗೀತ ಪ್ರಮುಕ ಹವ್ಯಾಸಗಳಾಗಿದ್ದವು.
- ಅಲಂಕೃತ ಮಣ್ಣಿನ ಪಾತ್ರೆಗಳನ್ನು ಉಪಯೋಗಿಸುತ್ತಿದ್ದರು.
- ತಾಮ್ರ ಮತ್ತು ಕಂಚಿನ ಆಯುಧಗಳಾದ ಕೊಡಲಿ, ಭರ್ಜಿ, ಕಠಾರಿ, ಗದೆ, ಕವಣೆ, ಬಿಲ್ಲುಬಾಣಗಳನ್ನು ಉಪಯೋಗಿಸುತ್ತಿದ್ದರು.
- ಶವಸಂಸ್ಕಾರವನ್ನು ದಹನ ಇಲ್ಲವೇ ಹೂಳುವ ಪದ್ಧತಿಗಳ ಮೂಲಕ ನಡೆಸುತ್ತಿದ್ದರು.
ಆರ್ಥಿಕ ಸ್ಥಿತಿ:
- ಕೃಷಿ ಪ್ರಮುಖ ಕಸುಬಾಗಿದ್ದು, ಅದರೊಂದಿಗೆ ಪಶುಪಾಲನೆ ಮತ್ತು ಹೈನುಗಾರಿಕೆ ಇತ್ತು. ನೀರಾವರಿ ಕಲೆಯೂಗೊತ್ತಿತ್ತು.
- ನೂಲುವುದು, ನೇಯುವುದು, ಬಣ್ಣಹಾಕುವುದು, ಕುಂಬಾರಿಕೆ, ಮರಗೆಲಸ, ಲೋಹಕೈಗಾರಿಕೆ, ಮುಂತಾದ ಕುಶಲ ಕೈಗಾರಿಕೆಗಳು ಅಸ್ಥಿತ್ವದಲ್ಲಿದ್ದವು.
- ಸಿಂಧೂ ಜನರಿಗೆ ತೂಕ ಮತ್ತು ಅಳತೆಗಳು ಗೊತ್ತಿದ್ದವು. ದಶಮಾಂಶ ಪದ್ಧತಿಯ ಜ್ಞಾನವಿತ್ತು.
- ವಸ್ತು ವಿನಿಮಯ ಪದ್ಧತಿಯಿ ಮೂಲಕ ವ್ಯಾಪಾರ ಚಟುವಟಿಕೆ ನಡೆಯುತ್ತಿತ್ತು.
- ದಕ್ಷಿಣ ಭಾರತ, ರಾಜಸ್ತಾನ, ಗುಜರಾತ್ ಮುಂತಾದವುಗಳೊಂದಿಗೆ ಆಂತರಿಕ ವ್ಯಾಪಾರ ಸಂಪರ್ಕ ಹೊಂದಿದ್ದರು.
- ದಂತ, ಚಿನ್ನ ಮತ್ತು ಮರದ ದಿಮ್ಮಿ ಮತ್ತು ಇತರ ವಸ್ತುಗಳನ್ನು ರಫ್ತು ಮಾಡುತ್ತಿದ್ದರು.
- ಅಮೂಲ್ಯ ಹರಳುಗಳು, ತಾಮ್ರ ಮತ್ತು ತವರ ಆಮದು ಮಾಡಿಕೊಳ್ಳುತ್ತಿದ್ದರು.
- ಆನೆ ಮತ್ತು ಒಂಟೆಗಳನ್ನು ರಸ್ತೆ ಸಾರಿಗೆಗಾಗಿ ಉಪಯೋಗಿಸುತ್ತಿದ್ದರು.
ಹೆಚ್ಚುವರಿ ಪ್ರಶ್ನೆಗಳು:
1. ಸಿಂಧೂ ನಾಗರೀಕತೆ ಪ್ರಪಂಚದ ಇತರೆ ಯಾವ ನಾಗರೀಕತೆಗಳ ಸಮಕಾಲೀನ ನಾಗರೀಕತೆಯಾಗಿದೆ?
ಈಜಿಪ್ಟ್, ಮೆಸಪಟೋಮಿಯಾ ಮತ್ತು ಚೀನಾ ನಾಗರೀಕತೆಗಳ ಸಮಕಾಲೀನ ನಾಗರೀಕತೆಯಾಗಿದೆ.
2. ಪಾಕಿಸ್ತಾನದಲ್ಲಿರುವ ಕೋಟ್‌ಡಿಜಿ ಪ್ರದೇಶವನ್ನು ಕಂಡುಹಿಡಿದವರು ಯಾರು?
ಎಫ್.ಎ.ಖಾನ್.
3. ಸುಟ್ಟ ಇಟ್ಟಿಗೆಗಳಿಂದ ನಿರ್ಮಿಸಿರುವ ವೇದಿಕೆ ಎಲ್ಲಿ ಕಂಡುಬಂದಿದೆ?
ಹರಪ್ಪಾ ಮತ್ತು ಕಾಲಿಬಂಗನ್‌ಗಳಲ್ಲಿ.
4. ‘ಬನವಲಿ’ ಯಾವ ರಾಜ್ಯದಲ್ಲಿದೆ?
ಹರಿಯಾಣ.
5. ಸುಮರು 5000 ವರ್ಷಗಳಿಂದ ನಿಸರ್ಗದ ಹೊಡೆತವನ್ನು ಎದುರಿಸಿ ಉಳಿದಿರುವ ಹರಪ್ ನಾಗರೀಕತೆಯ ಕುರುಹು ಯಾವುದು?
ಮೊಹೇಂಜುದಾರೋವಿನ ಸ್ನಾನದ ಕೊಳ.
ನೆನಪಿನಲ್ಲಿಡಬೇಕಾದ ಅಂಶಗಳು:
- ಮೆಹೆಂಜೋದಾರೋ ಎಂದರೆ ಮಡಿದವರ ದಿಬ್ಬ ಎಂದರ್ಥ.
- ಲೋಥಾಲ್‌ನಲ್ಲಿ ಹಡಗು ಕಟ್ಟೆಯೊಂದು ಕಂಡುಬಂದಿದೆ.
- ಈ ಕಾಲದ ಜನರು ವಸ್ತುವಿನಿಮಯ ಪದ್ಧತಿ ಮೂಲಕ ವ್ಯಾಪಾರಿ ಚಟುವಟಿಕೆಗಳನ್ನು ನಡೆಸುತ್ತಿದ್ದರು.
- ಕೃಷಿ ಇವರ ಮುಖ್ಯ ಕಸುಬಾಗಿತ್ತು.