2nd Puc History 5.4 Vijayanagara Samrajya Notes|ದ್ವಿತೀಯ ಪಿಯುಸಿ ಇತಿಹಾಸ 5.4 ವಿಜಯನಗರ ಸಾಮ್ರಾಜ್ಯ ನೋಟ್ಸ್

2nd Puc History 5.4 Vijayanagara Samrajya Chapter Notes Question Answer Guide Extract Mcq Pdf Download in Kannada Medium Karnataka State Syllabus 2025 ದ್ವಿತೀಯ ಪಿಯುಸಿ ಇತಿಹಾಸ 5.4 ವಿಜಯನಗರ ಸಾಮ್ರಾಜ್ಯ ನೋಟ್ಸ್ ಪ್ರಶ್ನೋತ್ತರಗಳು ಕನ್ನಡ ಮಾಧ್ಯಮ ವಿಜಯನಗರ ಸಾಮ್ರಾಜ್ಯ ನೋಟ್ಸ್ ವಿಜಯನಗರ ಸಾಮ್ರಾಜ್ಯ pdf in kannada 2nd puc history vijayanagara samrajya in kannada notes ದ್ವಿತೀಯ ಪಿಯುಸಿ ಇತಿಹಾಸ ನೋಟ್ಸ್ vijayanagara samrajya history in kannada 2nd puc kseeb solutions for class 12 history kannada medium chapter 5.4 Downlaod vijayanagara samrajya in kannada Vijayanagara samrajya history in kannada 2nd puc questions and Answer

Vijayanagara Samrajya

1.ಬೆಂಗಳೂರಿನ ನಿರ್ಮಾತ

ಎ) ಬೋಜೆಗೌಡ

ಬಿ) ನಾಡಗೌಡ

ಡಿ) ಕೆಂಚೇಗೌಡ

2. ರಕ್ಕಸದಂಗಡಿ ಕದನ ನಡೆದ ವರ್ಷ

ಎ) 1560

ಬಿ) 1562

ಸಿ) 1563

3. ವಿಜಯನಗರ ಸಾಮ್ರಾಜ್ಯದ ರಾಜಧಾನಿ

ಬಿ) ಬೇಲೂರು

ಸಿ) ಕಂಚಿ

ಡಿ) ವಾತಾಪಿ

4. ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿದ ಮಹಿಳೆ

ಎ) ಕಿತ್ತೂರು ಚೆನ್ನಮ್ಮ

ಬಿ) ರಾಣಿ ಅಬ್ಬಕ್ಕ

ಸಿ) ಸೀತಮ್ಮ

5. ಮೈಸೂರು ದಸರಾ ಆರಂಭಿಸಿದ ರಾಜ

ಎ) ಜಯಚಾಮರಾಜೇಂದ್ರ ಒಡೆಯರ್

ಬಿ) ಯದುವೀರ ಒಡೆಯ‌ರ್

ಡಿ) ಚಿಕ್ಕದೇವರಾಜ ಒಡೆಯರ್

6. ಕೃಷ್ಣದೇವರಾಯ ಯಾವ ವಂಶದ ದೊರೆ

ಎ) ಸಂಗಮ

ಬಿ) ಸಾಳ್ವ

ಡಿ) ಅರವೀಡು

1.ವಿಜಯನಗರಕ್ಕೆ ಭೇಟಿ ನೀಡಿದ್ದ ಪರ್ಶಿಯನ್ ರಾಯಭಾರಿ ಅಬ್ದುಲ್‌ ರಜಾಕ್

2. ‘ಮಧುರಾವಿಜಯಂ’ ಕೃತಿ ರಚಿಸಿದವನು ಗಂಗಾದೇವಿ

3. ಕೃಷ್ಣದೇವರಾಯ ತುಳುವ ವಂಶದ ದೊರೆ.

4. ಚಿತ್ರದುರ್ಗದ ಕೋಟೆ ಕಟ್ಟಿಸಿದವನು ಮದಕರಿ ನಾಯಕ

5. ಬೆಂಗಳೂರು ನಿರ್ಮಾತೃ ಕೆಂಪೇಗೌಡ

6. ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪೆ

7. ವಿಜಯನಗರವನ್ನಾಳಿದ ಮೊದಲ ರಾಜ 1ನೇ ಹರಿಹರರಾಯ

8. ‘ಯವನ ರಾಜ್ಯ ಪ್ರತಿಷ್ಠಾಪನಾಚಾರ್ಯ’ ಎಂಬ ಬಿರುದು ಪಡೆದಿದ್ದ ರಾಜ ಕೃಷ್ಣದೇವರಾಯ

9. ವಿಜಯನಗರ ಸಾಮ್ರಾಜ್ಯ ಸ್ಥಾಪಕರು ಹರಿಹರ ಮತ್ತು ಬುಕ್ಕರಾಯ

10. ವಿಜಯನಗರದ ಪ್ರಸಿದ್ಧ ದೊರೆ ಕೃಷ್ಣದೇವರಾಯ

11. ದಸರಾ ಉತ್ಸವ ಆರಂಭಿಸಿದ ರಾಜ ರಾಜ ಒಡೆಯರ್

12. ನವಕೋಟಿ ನಾರಾಯಣ ಎಂಬ ಬಿರುದು ಹೊಂದಿದ್ದವರು ಚಿಕ್ಕದೇವರಾಜ ಒಡೆಯರ್

13. ತಾಳಿಕೋಟೆ ಕದನ ನಡೆದ ವರ್ಷ ಸಾ.ಶ.1565

14. ವಿಜಯನಗರ ಸಾಮ್ರಾಜ್ಯದ ಅವನತಿಗೆ ಕಾರಣವಾದ ಕದನ ತಾಳಿಕೋಟೆ (ರಕ್ಕಸದಂಗಡಿ)

15. ಹದಿಬದೆಯ ಧರ್ಮ ಗ್ರಂಥ ಬರೆದವರು ಸಂಚಿಹೊನ್ನಮ್ಮ

16. ಕನ್ನಡದ ಪ್ರಥಮ ನಾಟಕ ಮಿತ್ರಾಮಿಂದ ಗೋವಿಂದ

17. ಕೃಷ್ಣದೇವರಾಯನ ಬಿರುದು ಕನ್ನಡ ರಾಜ್ಯ ರಮಾರಮಣ

18. ‘ಆಮುಕ್ತಮೌಲ್ಯದ’ ಕೃತಿ ರಚಿಸಿದವರು ಕೃಷ್ಣದೇವರಾಯ

19. ವಿಜಯನಗರ ಅರಸರ ಕುಲದೇವರು ಶ್ರೀವಿರುಪಾಕ್ಷ

20. ಕೃಷ್ಣದೇವರಾಯ ಸಿಂಹಾಸನವೇರಿದ ವರ್ಷ ಸಾ.ಶ.1509

ಕ್ರಮ ಸಂಖ್ಯೆಉತ್ತರಗಳು
1ತಾಳಿಕೋಟೆ ಕದನಕೃಷ್ಣದೇವರಾಯಸಾ.ಶ. 1565
2ಮಧುರಾವಿಜಯಂಪರ್ಶಿಯನ್‌ ರಾಯಭಾರಿಗಂಗಾದೇವಿ
3ಅಬ್ದುಲ್‌ ರಜಾಕ್ರಾಜ ಒಡೆಯರ್ಪರ್ಶಿಯನ್‌ ರಾಯಭಾರಿ
4ಹಂಪಿಮದಕರಿ ನಾಯಕವಿಜಯನಗರ ರಾಜಧಾನಿ
5ಮೈಸೂರು ದಸರಾಸಾ.ಶ. 1565ರಾಜ ಒಡೆಯರ್
6ತುಳುವ ವಂಶಬೆಂಗಳೂರು ನಿರ್ಮಾತೃಕೃಷ್ಣದೇವರಾಯ
7ಚಿತ್ರದುರ್ಗ ಕೋಟೆವಿಜಯನಗರ ರಾಜಧಾನಿಮದಕರಿ ನಾಯಕ
8ಕೆಂಪೇಗೌಡ3ನೇ ಮಹಮದ್‌ ಷಾನ ಮುಖ್ಯಮಂತ್ರಿಬೆಂಗಳೂರು ನಿರ್ಮಾತೃ
9ಶ್ರೀ ವಿರೂಪಾಕ್ಷಹದಿಬದೆಯ ಧರ್ಮವಿಜಯನಗರ ಅರಸರ ಕುಲದೇವರು
10ಶಿವಪ್ಪನಾಯಕವಿಜಯನಗರ ಸಾಮ್ರಾಜ್ಯ ಸ್ಥಾಪಕರುಕೆಳದಿ
11ಸಂಚಿಹೊನ್ನಮ್ಮಗಂಗಾದೇವಿಹದಿಬದೆಯ ಧರ್ಮ
12ನವಕೋಟಿ ನಾರಾಯಣವಿಜಯನಗರ ಅರಸರ ಕುಲದೇವರುಚಿಕ್ಕದೇವರಾಜ ಒಡೆಯರ್
13ಹರಿಹರ, ಬುಕ್ಕರಾಯಅಲ್ಲಸಾನಿ ಪೆದ್ದಣ್ಣವಿಜಯನಗರ ಸಾಮ್ರಾಜ್ಯ ಸ್ಥಾಪಕರು
14ಆಂಥ್ರಕವಿತಾ ಪಿತಾಮಹಕನ್ನಡದ ಪ್ರಥಮ ನಾಟಕಅಲ್ಲಸಾನಿ ಪೆದ್ದಣ್ಣ
15ಮಿತ್ರಾವಿಂದ ಗೋವಿಂದಚಿಕ್ಕದೇವರಾಜ ಒಡೆಯರ್ಕನ್ನಡದ ಪ್ರಥಮ ನಾಟಕ
16ಮಹಮದ್‌ ಗವಾನ್ಕೆಳದಿ3ನೇ ಮಹಮದ್‌ ಷಾನ ಮುಖ್ಯಮಂತ್ರಿ

1. ವಿಜಯನಗರ ಸಾಮ್ರಾಜ್ಯದ ಸ್ಥಾಪಕರು ಯಾರು?

ಹರಿಹರ ಮತ್ತು ಬುಕ್ಕರಾಯರು

2. ವಿಜಯನಗರ ಸಾಮ್ರಾಜ್ಯದ ರಾಜಧಾನಿ ಯಾವುದು?

ಹಂಪಿ (ವಿಜಯನಗರ)

3. ವಿಜಯನಗರದ ಅರಸರ ಕುಲದೇವರು ಯಾವುದು?

ಶ್ರೀ ವಿರೂಪಾಕ್ಷ

4. ವಿಜಯನಗರವನ್ನಾಳಿದ ಮೊದಲ ರಾಜ ಯಾರು?

ಒಂದನೇ ಹರಿಹರರಾಯ.

5. ಕೃಷ್ಣದೇವರಾಯನು ಯಾವ ವಂಶಕ್ಕೆ ಸೇರಿದವನು?

ತುಳುವ ವಂಶ.

6. ವಿಜಯನಗರಕ್ಕೆ ಭೇಟಿ ನೀಡಿದ ಪರ್ಷಿಯಾದ ರಾಯಭಾರಿಯನ್ನು ಹೆಸರಿಸಿ.

ಅಬ್ದುಲ್ ರಜಾಕ್.

7. ‘ಮಧುರಾವಿಜಯಂ’ ಎಂಬ ಕೃತಿ ರಚಿಸಿದವರು ಯಾರು?

ಗಂಗಾದೇವಿ.

8. ಚಿತ್ರದುರ್ಗದ ಕೋಟೆಯನ್ನು ಕಟ್ಟಿಸಿದವರು ಯಾರು?

ಐದನೆಯ ಮದಕರಿನಾಯಕ

9. ‘ನವಕೋಟಿ ನಾರಾಯಣ’ ಎಂದು ಯಾರನ್ನು ಕರೆಯಲಾಗಿತ್ತು?

ಚಿಕ್ಕದೇವರಾಜ ಒಡೆಯರ್.

10. ತಾಳಿಕೋಟೆ ಕದನ ನಡೆದ ವರ್ಷಯಾವುದು?

ಸಾ.ಶ.1565

11. ಮೈಸೂರು ದಸರಾ ಉತ್ಸವ ಆರಂಭಿಸಿದ ರಾಜನನ್ನು ಹೆಸರಿಸಿ.

ರಾಜ ಒಡೆಯರ್.

12. ‘ಯವನ ರಾಜ್ಯ ಪ್ರತಿಷ್ಠಾಪನಾಚಾರ್ಯ’ ಎಂಬ ಬಿರುದನ್ನು ಹೊಂದಿದ್ದವನು ಯಾರು?

ಕೃಷ್ಣದೇವರಾಯ.

1. ವಿಜಯನಗರ ಸಾಮ್ರಾಜ್ಯದ ಸ್ಥಾಪಕರು ಯಾರು?

ಹರಿಹರ ಮತ್ತು ಬುಕ್ಕರಾಯರು.

2. ಕೃಷ್ಣದೇವರಾಯನ ಯಾವುದಾದರೂ ಎರಡು ಸಾಹಿತ್ಯ ಕೃತಿಗಳನ್ನು ಹೆಸರಿಸಿ.

ಅಮುಕ್ತಮೌಲ್ಯದ, ಜಾಂಬವತಿ ಕಲ್ಯಾಣ

3. ಕೃಷ್ಣದೇವರಾಯನ ಯಾವುದಾದರೂ ಎರಡು ಬಿರುದುಗಳನ್ನು ತಿಳಿಸಿರಿ.

‘ಕನ್ನಡರಾಜ್ಯ ರಮಾರಮಣ’ ಮತ್ತು ‘ಕವಿಪುಂಗವ’.

4. ‘ಮನುಚರಿತಮು’ ಬರೆದವರು ಯಾರು ಮತ್ತು ಅವನ ಬಿರುದು ಯಾವುದು?

ಅಲ್ಲಸಾನಿಪೆದ್ದನ್ನ ಅವನ ಬಿರುದು ‘ಆಂದ್ರಕವಿತಾ ಪಿತಾಮಹ’.

5.ಚಿಕ್ಕದೇವರಾಜ ಒಡೆಯರ ಯಾವುದಾದರೂ ಎರಡು ಬಿರುದುಗಳನ್ನು ತಿಳಿಸಿರಿ.

‘ಕರ್ನಾಟಕ ಚಕ್ರವರ್ತಿ’ ‘ನವಕೋಟಿ ನಾರಾಯಣ’

6. ಕನ್ನಡದ ಪ್ರಥಮ ನಾಟಕ ಯಾವುದು ಮತ್ತು ಅದರ ಕತೃ ಯಾರು?

ಮಿತ್ರಾನಂದ ಗೋವಿಂದ, ಕರ್ತೃ ಸಿಂಗರಾಯ್ಯ.

7. ಹದಿಬದೆಯ ಧರ್ಮ ಎಂಬ ಕೃತಿಯನ್ನು ಬರೆದವರು ಯಾರು ಮತ್ತು ಅವಳನ್ನು ಪ್ರೋತ್ಸಾಹಿಸಿದ ರಾಜ ಯಾರು?

ಸಂಚಿ ಹೊನ್ನಮ್ಮ, ಪ್ರೋತ್ಸಾಹಿಸಿದ ರಾಜ ಚಿಕ್ಕದೇವರಾಜ ಒಡೆಯರ್.

8. ಶಿವಪ್ಪನಾಯಕನು ಯಾರು ಹಾಗೂ ಅವನು ಏಕೆ ಪ್ರಸಿದ್ಧನಾಗಿದ್ದಾನೆ?

ಶಿವಪ್ಪನಾಯಕ ಕೆಳದಿನಾಯಕ, ಈತ ತನ್ನ “ಶಿಸ್ತು” ಎಂಬ ಕಂದಾಯ ಪದ್ದತಿಗೆ ಪ್ರಸಿದ್ಧನಾಗಿದ್ದಾನೆ.

1. ತಾಳಿಕೋಟೆಯ ಕದನದ ಕಾರಣಗಳು ಮತ್ತು ಪರಿಣಾಮಗಳು ಯಾವುವು?

ತಾಳಿಕೋಟೆ ಕದನವು ಸಾ.ಶ. 1565ರಲ್ಲಿ ಅಳಿಯ ರಾಮರಾಯ ಮತ್ತು ಷಾಹಿ ಸುಲ್ತಾನರ ಒಕ್ಕೂಟದ ನಡುವೆ ನಡೆಯಿತು.

ಕಾರಣಗಳು:

  • ದೋ-ಅಬ್ ಪ್ರದೇಶದ ಮೇಲಿನ ಪ್ರಭುತ್ವ.
  • ಧಾರ್ಮಿಕ ಭಿನ್ನತೆ.
  • ಅಳಿಯ ರಾಮರಾಯನ ನೀತಿ. ಷಾಹಿ ಸುಲ್ತಾನರ ಆಂತರಿಕ ಕಚ್ಚಾಟದಲ್ಲಿ ಹಸ್ತಕ್ಷೇಪ ಮಾಡಿದ್ದು, ಸುಲ್ತಾನರೊಂದಿಗೆ ಒಡೆದು ಆಳುವ ನೀತಿ ಅನುಸರಿಸಿದ್ದು.
  • ತಕ್ಷಣದ ಕಾರಣ : ಬಿಜಾಪುರದ ಆದಿಲ್ ಷಾನು
  • ರಾಯಚೂರು ಕೋಟೆಯನ್ನು ಹಿಂದಿರುಗಿಸಬೇಕೆಂದು ಒತ್ತಾಯಿಸಲಾಗಿ ರಾಮರಾಯ ಅವರನ್ನು ಯುದ್ದಕ್ಕೆ ಆಹ್ವಾನಿಸಿದನು.

ಪರಿಣಾಮಗಳು:

  1. ವಿಜಯನಗರ ಸಾಮ್ರಾಜ್ಯವು ಅಂತ್ಯಗೊಂಡು ಲೂಟಿಯಾಯಿತು.
  2. ಪೋರ್ಚುಗೀಸರಿಗೆ ವಿಜಯನಗರ ಅರಸರ ಬೆಂಬಲವಿಲ್ಲದೆ ವ್ಯಾಪಾರ-ಕುಸಿಯಿತು.
  3. ಹಿಂದೂ ಧಾರ್ಮಿಕ ಬೆಳವಣಿಗೆಗೆ ಅಡ್ಡಿಯಾಯಿತು.
  4. ಅರವೀಡು ಮನೆತನವು ದಕ್ಷಿಣ ಭಾರತದ ಮೇಲೆ ನಿಯಂತ್ರಣ ಸಾಧಿಸಲು ಅಸಮರ್ಥವಾಯಿತು
  5. ವಿಜಯನಗರದ ಸಾಮಂತರಾಗಿದ್ದ ಅರಸರು ಸ್ವಾತಂತ್ರ್ಯವನ್ನು ಘೋಷಿಸಿಕೊಂಡರು.

2. ವಿಜಯನಗರದ ಸಾಮ್ರಾಜ್ಯದ ಕಲೆ ಮತ್ತು ವಾಸ್ತುಶಿಲ್ಪವನ್ನು ವಿವರಿಸಿರಿ.

ವಿಜಯನಗರ ಅರಸರು : ಕಲೆ ಮತ್ತು ವಾಸ್ತುಶಿಲ್ಪಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ. ರಾಜಧಾನಿಯಾದ ಹಂಪಿಯು ಶ್ರೇಷ್ಠವಾದ ಕಲೆ ಮತ್ತು ವಾಸ್ತುಶಿಲ್ಪದ ಕೇಂದ್ರವಾಗಿತ್ತು. ಇವರು ದ್ರಾವಿಡ ವಾಸ್ತುಶಿಲ್ಪ ಶೈಲಿಯನ್ನು ಅನುಸರಿಸಿದ್ದರೂ ಸಹ ಕೆಲವೊಂದು ವಿಶೇಷ ಲಕ್ಷಣಗಳಿಂದಾಗಿ ‘ವಿಜಯನಗರ ವಾಸ್ತುಶಿಲ್ಪ ಶೈಲಿ’ ಎಂದು ಕರೆಯಲ್ಪಟ್ಟಿವೆ.

  • ವಿಜಯನಗರ ಸ್ಮಾರಕಗಳು ದಕ್ಷಿಣ ಭಾರತದಾದ್ಯಂತ ಹರಡಿಕೊಂಡಿವೆ. ಆದರೆ ಅವುಗಳಲ್ಲಿ ಅತ್ಯಂತ ಸುಂದರವಾದವು ಹಂಪಿಯಲ್ಲಿವೆ.
  • ವಿರೂಪಾಕ್ಷ ದೇವಾಲಯ, ವಿಠಲಸ್ವಾಮಿ ದೇವಾಲಯ, ಕಲ್ಲಿನ ರಥ, ಕೃಷ್ಣಸ್ವಾಮಿ ದೇವಾಲಯ, ಅಚ್ಯುತರಾಯ ಸ್ವಾಮಿ ದೇವಾಲಯ, ಹಜಾರರಾಮಸ್ವಾಮಿ ದೇವಾಲಯ, ಮಹಾನವಮಿ ದಿಬ್ಬದ ಕಟ್ಟೆ ಹಂಪಿಯಲ್ಲಿವೆ.
  • ‘ಕಮಲ ಮಹಲ್’ ಹಿಂದೂ ಇಸ್ಲಾಮಿಕ್ ಶೈಲಿಯ ಕಟ್ಟಡ ವಾಸ್ತುಶಿಲ್ಪಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.
  • ಶೃಂಗೇರಿಯ ವಿದ್ಯಾಶಂಕರ, ವೆಲ್ಲೂರಿನ ಜಲಕಂಠೇಶ್ವರ, ಕಂಚಿಪುರದ ಏಕಾಂಬನಾಥ, ಶ್ರೀರಂಗಂನ ಶ್ರೀರಂಗನಾಥ, ಮಧುರೈ ಮೀನಾಕ್ಷಿ ಸುಂದರೇಶ್ವರ, ದೇವಾಲಯಗಳು ಪ್ರಮುಖ ದೇವಾಲಯಗಳಾಗಿವೆ.
  • ಇವರು ಮೂರ್ತಿ ಶಿಲ್ಪಕ್ಕೂ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಕಡಲೆಕಾಳು ಗಣೇಶ, ಸಾಸಿವೆಕಾಳು ಗಣೇಶ, ಇರುಗಪ್ಪ ದಂಡನಾಯಕನ ಮೂರ್ತಿ ಮುಂತಾದವು ಪ್ರಮುಖವಾಗಿವೆ.
  • ಚಿತ್ರಕಲೆಗೂ ವಿಶೇಷವಾದ ಪ್ರೋತ್ಸಾಹ ನೀಡಿದ ದಾಸಕೂಟ-ವ್ಯಾಸಕೂಟಗಳು ತನ್ನದೇ ಕೊಡುಗೆಗಳನ್ನು ನೀಡಿದ್ದಾರೆ. ಪುರಂದರದಾಸರನ್ನು ‘ಕರ್ನಾಟಕ ಸಂಗೀತ ಪಿತಾಮಹ’ ಎಂದು ಕರೆಯಲಾಗಿದೆ.

3. ವಿಜಯನಗರ ಕುರಿತು ವಿದೇಶಿ ವರದಿಗಳನ್ನು ವಿವರಿಸಿರಿ.

  • ನಿಕೋಲೋ ಕೊಂಟಿ: ಇಟಲಿಯಿಂದ ಬಂದಿದ್ದು. ವಿಜಯನಗರವು ಬೆಟ್ಟಗಳಿಂದ ಕೂಡಿದ್ದು ಇಲ್ಲಿನ ರಾಜ ಬಹು ಶಕ್ತಿಶಾಲಿಯಾಗಿದ್ದಾನೆ ಎಂದಿದ್ದಾನೆ.
  • ಅಬ್ದುಲ್ ರಜಾಕ್ : ಪರ್ಶಿಯಾದ ರಾಯಭಾರಿಯಾಗಿದ್ದು ರಾಯನನ್ನೂ, ರಾಜನನ್ನೂ ಹೊಗಳುತ್ತಾ “ಈ ಭೂಮಿಯ ಮೇಲೆ ಇಂತಹ ರಾಜ ಹಾಗೂ ಈ ರಈತಿ ನಗರ ಇದ್ದ ಬಗ್ಗೆ ಕಣ್ಣುಗಳು ನೋಡಿಲ್ಲ. ಕಿವಿಗಳು ಕೇಳಿಲ್ಲ” ಎಂದಿದ್ದಾನೆ. ಮಹಾನವಮಿಯ ಬಗ್ಗೆ ವಿವರಿಸಿದ್ದಾನೆ.
  • ನಿಕಟನ್ : ರಷ್ಯಾದ ಪ್ರವಾಸಿಯಾಗಿದ್ದು ಜನಜೀವನ ಮತ್ತು ರಾಜವೈಭವ ಕುರಿತು ವಿವರಿಸಿದ್ದಾನೆ.
  • ಡ್ಯೂರೆಟ್ ಬಾರ್ಬೋಸಾ: ಪೋರ್ಚುಗೀಸ್ ಪ್ರವಾಸಿಯಾಗಿದ್ದು ‘ಹಂಪಿಯ ಮಾರುಕಟ್ಟೆಗಳು ಮುತ್ತು,ವಜ್ರ, ರೇಷ್ಮೆ ಮುಂತಾದ ವಸ್ತುಗಳ ಕೇಂದ್ರವಾಗಿವೆ ಎಂದಿದ್ದಾನೆ.
  • ಡೊಮಿಂಗೋಪಯಾಜ್ : ಪೋರ್ಚುಗೀಸ್ ಪ್ರವಾಸಿಯಾಗಿದ್ದು ಕೃಷ್ಣದೇವರಾಯನ ಮುಖದ ಸಿಡುಬಿನ ಕಲೆಗಳ ಬಗ್ಗೆ ಬರೆದಿದ್ದಾನೆ.
  • ಘರ್ನಾವೋ ನ್ಯೂನುಜ್: ಪೋರ್ಚುಗಲ್ ಪ್ರವಾಸಿಯಾಗಿದ್ದು ಅಂದಿನ ರಾಜಕೀಯ ಮತ್ತು ಸಾಂಸ್ಕೃತಿಕ ಸ್ಥಿತಿಗತಿಗಳ ಬಗ್ಗೆ ವರ್ಣಿಸಿದ್ದಾನೆ.
  • ಸೀಜರ್ ಫೆಡ್ರಿಸ್: ಇಟಲಿಯ ಪ್ರವಾಸಿಯಾಘಿದ್ದು1567ರಲ್ಲಿ ವಿಜಯನಗರಕ್ಕೆ ಭೇಟಿ ನೀಡಿದ್ದು ತಾಳಿ ಕೋಟೆ ಕದನದಲ್ಲಿ ಗಿಲಾನಿ ಸಹೋದರರು ವಹಿಸಿದ . ಪಾತ್ರದ ಬಗ್ಗೆ ವಿವರಿಸಿದ್ದಾನೆ. ವಿಜಯನಗರವು ಈ ಕದನದ ನಂತರ ಹಾಳುಬಿದ್ದ ನಗರವಾಗಿದ್ದು ಇಲ್ಲಿ ಮಾನವರಲ್ಲದೆ ಕೇವಲ ಪ್ರಾಣಿಗಳು ಮಾತ್ರ ವಾಸಿಸುತ್ತಿದ್ದವೆಂದು ಹೇಳಿದ್ದಾನೆ.

VII. ಈ ಕೆಳಕಂಡ ಪ್ರಶ್ನೆಗಳಿಗೆ ತಲಾ 30-40 ವಾಕ್ಯಗಳಲ್ಲಿ ಉತ್ತರಿಸಿ:

1. ಕೃಷ್ಣದೇವರಾಯನ ಸಾಧನೆಗಳ ಬಗ್ಗೆ ಒಂದು ವಿವರಣೆ ಬರೆಯಿರಿ.

ದಕ್ಷಿಣ ಭಾರತವನ್ನು ಅಳಿದ ಸರ್ವಶ್ರೇಷ್ಠ ಸಾಮ್ರಾಟರಲ್ಲಿ ಕೃಷ್ಣದೇವರಾಯನೂ ಒಬ್ಬನು. ಇವನು ತುಳುವ ವಂಶದ ನರಸನಾಯಕ ಮತ್ತು ನಾಗಲಾದೇವಿಯವರ ಪುತ್ರ. ಸಾ.ಶ. 1509ರಲ್ಲಿ ಅಧಿಕಾರಕ್ಕೆ ಬಂದನು. ತಿಮ್ಮರಸನು ಇವನ ಶ್ರೇಷ್ಠ ಪ್ರಧಾನ ಮಂತ್ರಿಯಾಗಿದ್ದನು.

ಸೈನಿಕ ಸಾಧನೆಗಳು:

  • ಸಾ.ಶ. 1510ರ ಯುದ್ಧ: ಬಿಜಾಪುರದ ಸುಲ್ತಾನ ಯೂಸೋಪ್ ಆದಿಲ್ ಷಾ ಹಾಗೂ ಬೀದರ್ ಸುಲ್ತಾನ ಮಹಮದ್ ಆದಿಲ್ ಷಾ ವಿಜಯನಗರದ ಮೇಲೆ ಆಕ್ರಮಣ ಮಾಡಿದರು. ಈ ಯುದ್ಧದಲ್ಲ ಯೂಸಫ್ ಆದಿಲ್ ಷಾ ಪ್ರಾಣವನ್ನು ಕಳೆದುಕೊಂಡನು. ಕೃಷ್ಣದೇವರಾಯನು ರಾಯಚೂರು ಕೋಟೆ. ಕೃಷ್ಣ ತುಂಗಭದ್ರ ದೋ ಅಬ್ ಪ್ರದೇಶಗಳ ಆಕ್ರಮಿಸಿಕೊಂಡನು.
  • ಉಮ್ಮತ್ತೂರಿನ ಮುತ್ತಿಗೆ ಸಾ.ಶ. 1513 : ಉಮ್ಮತ್ತೂರಿನ ನಾಯಕ ಗಂಗರಾಜನು ಬಂಡಾಯವೆದ್ದಾಗ ಇದನ್ನು ಪ್ರಾಮಾಣಿಕ ಯಶಸ್ಸಿನ ಸರಣಿ ಹತ್ತಿಕ್ಕಿ ಶಿವನಸಮುದ್ರ ಮತ್ತು ಶ್ರೀರಂಗಪಟ್ಟಣ ಕೋಟೆಗಳನ್ನು ವಶಪಡಿಸಿಕೊಂಡನು.
  • ಕಳಿಂಗ ದಿಗ್ವಿಜಯ ಸಾ.ಶ. 1513-1518: ಒರಿಸ್ಸಾದ ಗಜಪತಿ ಪ್ರತಾಪರುದ್ರನನ್ನು ಸೋಲಿಸಲು ಕೃಷ್ಣದೇವರಾಯನು ದಂಡಯಾತ್ರೆ ಆರಂಭಿಸಿದನು ಇದು ಐದು ಹಂತಗಳಲ್ಲಿ ಜರುಗಿತು. ಮೊದಲನೆಯದಾಗಿ ಉದಯಗಿರಿ ಕೋಟೆಯನ್ನು ವಶಪಡಿಸಿಕೊಂಡನು. ಎರಡನೆಯದಾಗಿ ಕೊಂಡವೀಡು ಕೋಟೆಗೆ ಮುತ್ತಿಗೆ ಹಾಕಿ ಪ್ರತಾಪರುದ್ರನ ಬೆಂಬಲಿಗರಾದ ರೆಡ್ಡಿಗಳನ್ನು ಸೋಲಿಸಿ ಕೃಷ್ಣಾ ತೀರದ ಆಂಧ್ರಭಾಗವನ್ನು ವಶಪಡಿಸಿಕೊಂಡನು.
  • ಮೂರನೆಯದಾಗಿ ವಿಜಯವಾಡ, ಕೊಂಡಪಲ್ಲಿ ದುರ್ಗಗಳಲ್ಲಿ ವಶಪಡಿಸಿಕೊಂಡನು. ಯುದ್ಧದಲ್ಲಿ ಮುಖಾಮುಖಿಯಾದ ಗಜಪತಿರಾಯನು ಪಲಾಯನ ಗೈದನು. ನಾಲ್ಕನೆಯದಾಗಿ ತೆಲಂಗಾಣ, ಅನಂತಗಿರಿ, ಕನಕಗಿರಿ, ದೇವಕೊಂಡ ಕೋಟೆಗಳನ್ನು ವಶಪಡಿಸಿಕೊಂಡು ಪೋತುನೂರು ಎಂಬಲ್ಲಿ ವಿಜಯಸ್ತಂಭವನ್ನು ಸ್ಥಾಪಿಸಿದನು.
  • ಐದನೆಯದಾಗಿ ಪ್ರತಾಪರುದ್ರನ ರಾಜಧಾನಿ ಕಟಕ್‌ಗೆ ಮುತ್ತಿಗೆ ಹಾಕಿದಾಗ, ಈತ ಕೃಷ್ಣದೇವರಾಯನೊಡನೆ ಶಾಂತಿ ಸಂಧಾನ ಏರ್ಪಡಿಸಿಕೊಂಡು ಅವನ ಮಗಳಾದ ಜಗನ್ನೋಹಿನಿಯನ್ನು ಕೊಟ್ಟು ವಿವಾಹ ಮಾಡಿದನು.
  • ರಾಯಚೂರು ಯುದ್ಧ: ಕಳಿಂಗಯುದ್ಧದ ಸಮಯದಲ್ಲಿ ಬಿಜಾಪುರದ ಇಸ್ಮಾಯಿಲ್ ಆದಿಲ್ ಷಾನು ರಾಯಚೂರು ಕೋಟೆಯನ್ನು ಪುನಃ ವಶಪಡಿಸಿಕೊಂಡಿದ್ದನು. ಕೃಷ್ಣದೇವರಾಯನು ಪೋರ್ಚುಗೀಸರ ಸಹಕಾರದೊಂದಿಗೆ ಮರಳಿ ವಶಕ್ಕೆ ತೆಗೆದುಕೊಂಡನು.
  • ‘ಸಿಲೋನಿನಲ್ಲಿ ರಾಜ ವಿಜಯಬಾಹುವಿನ ವಿರುದ್ಧ ಬಂಡಾಯವಾಗಿದ್ದಾಗ, ರಾಯ ಮಧ್ಯ ಪ್ರವೇಶಿಸಿ ಶಾಂತಿ ಸ್ಥಾಪಮನೆ ಮಾಡಿದನು.
  • ಕೃಷ್ಣದೇವರಾಯನ ಕೊನೆಯ ದಿನಗಳು ದುಃಖದಿಂದ ಕೂಡಿದ್ದವು. ಕ್ರಿ.ಶ. 1524ರಲ್ಲಿ ಅವನ ಒಬ್ಬನೇ ಪುತ್ರ ತಿರುಮಲ ಅನುಮಾನಾಸ್ಪದವಾಗಿ ಸಾವಿಗೀಡಾದನು. ‘ಇದರಿಂದ ಮನನೊಂದ ರಾಜ ಸಾ.ಶ. 1529ರಲ್ಲಿ ಮರಣ ಹೊಂದಿದನು.
  • ಈತನನ್ನು ‘ಕನ್ನಡ ರಾಜ್ಯದ ರಮಾರಮಣ’ ಕವಿಪುಂಗವ, ಕರ್ನಾಟಕಾಂಧ್ರಭೋಜ, ‘ಯವನ ರಾಜ್ಯ ಪ್ರತಿಷ್ಠಾಪನಾಚಾರ್ಯ’ ಮುಂತಾದ ಬಿರುದುಗಳನ್ನಿತ್ತು ಕರೆಯಲಾಗಿದೆ.

2. ವಿಜಯನಗರ ಸಾಮ್ರಾಜ್ಯದ ಸಾಂಸ್ಕೃತಿಕ ಕೊಡುಗೆಗಳನ್ನು ವಿವರಿಸಿ.

ವಿಜಯನಗರ ಅರಸರು ಭಾರತೀಯ ಸಂಸ್ಕೃತಿಗೆ ತನ್ನದೇ ಆದ ಕೊಡುಗೆಗಳನ್ನು ನೀಡಿದ್ದಾರೆ.

ಆಡಳಿತ :- ಬಲಿಷ್ಟವಾದ ಕೇಂದ್ರ ಸರ್ಕಾರವನ್ನು ಜಾರಿಗೆ ತಂದು ರಾಜನೇ ಅದರ ಕೇಮದ್ರಬಿಂದುವಾಗಿದ್ದನು. ರಾಜಪ್ರಭುತ್ವವು ಅನುವಂಶಿಕವಾಗಿತ್ತು. ಆಡಳೀತದಲ್ಲಿ ಸಹಕರಿಸಲು ಮಂತ್ರಿಮಂಡಲವಿದ್ದು ವಿವಿಧ ಇಲಾಖಗಳ ಮೇಲ್ವಿಚಾರಣೆ ನಡೆಸುತ್ತಿದ್ದರು. ಸಾಮ್ರಾಜ್ಯವನ್ನು ಹಲವಾರು ಪ್ರಾಂತ್ಯಗಳಾಗಿ ವಿಂಗಡಿಸಿ ಸಾಮಂತರನ್ನು ನೇಮಿಸಲಾಗಿತ್ತು ಗ್ರಾಮವು ಆಡಳಿತದ ಅತಿ ಚಿಕ್ಕ ಘಟಕವಾಗಿತ್ತು. ಭೂಕಂದಾಯವು ರಾಜ್ಯಾಂದ್ಯಂತ ಪ್ರಮುಖ ಮೂಲವಾಗಿದ್ದು ಪ್ರಬಲವಾದ ಸೈನ್ಯವಿತ್ತು.

ಸಾಮಾಜಿಕ ಸ್ಥಿತಿ: ಸಮಾಜದಲ್ಲಿ ಬ್ರಾಹ್ಮಣರು ಉನ್ನತಸ್ಥಾನದಲ್ಲಿದ್ದು ಕಮ್ಮಾರರು, ಅಕ್ಕಸಾಲಿಗರು, ನೇಕಾರರು, ಕೃಷಿಕರು, ವ್ಯಾಪಾರಿಗಳಿದ್ದರು. ಸಾಮ್ರಾಜ್ಯದಲ್ಲಿ ಮುಸ್ಲಿಂರು ನೆಲೆಸಿದ್ದು ಪ್ರಾರ್ಥನೆಗೆಂದು ಅವರಿಗೆ ಮಸೀದಿಗಳನ್ನು ನಿರ್ಮಿಸಲಾಗಿತ್ತು. ಹಿಂದೂ, ಬೌದ್ಧ, ಜೈನ ಧರ್ಮಗಳ ಅನುಯಾಯಿಗಳಾಗಿದ್ದರು.

ಆರ್ಥಿಕ ಸ್ಥಿತಿ: ಕೃಷಿ ಮೂಲ ಕಸುಬಾಗಿತ್ತು. ಹಲವಾರು ಕಾಲುವೆ, ಕೆರೆ ಮತ್ತು ಜಲಾಶಯಗಳನ್ನು ನಿರ್ಮಿಸಿದ್ದರು. ವಿಜಯನಗರವು ಬಟ್ಟೆ, ಮುತ್ತು, ರತ್ನ, ಹರಳುಗಳು, ಸಾಂಬಾರು ಪದಾರ್ಥಗಳಿಗೆ ಹೆಸರುವಾಸಿಯಾಗಿತ್ತು.

ಶಿಕ್ಷಣ ಮತ್ತು ಸಾಹಿತ್ಯ : ಅಗ್ರಹಾರಗಳು, ಮಠಗಳು ಮತ್ತು ದೇವಾಲಯಗಳು ಪ್ರಮುಖವಾಗಿದ್ದವು ಹಂಪಿ, ಕೋಡಿಮಠ, ಶೃಂಗೇರಿ, ಎಡಿಯೂರು, ಕುಣಿಗಲ್ ಆ ಕಾಲದ ಪ್ರಮುಖ ಶಿಕ್ಷಣ ಕೇಂದ್ರಗಳಾಗಿದ್ದವು. ಸಾಹಿತ್ಯಾರಾಧಕರಾಗಿದ್ದು ರಾಜರು ಸ್ವತಃ ವಿದ್ವಾಂಸರಾಗಿದ್ದರು. ಕೃಷ್ಣದೇವರಾಯ ‘ಅಮುಕ್ತ ಮೌಲ್ಯದ’ ಎಂಬ ಕೃತಿಯನ್ನು, ಗಂಗಾವತಿ ಮಧುರಾವಿಜಯಂ, ಕುಮಾರವ್ಯಾಸ (ಗದುಗಿನ ಭಾರತ), ನಂಜುಂಡ ಕವಿ ಕುಮಾರರಾಮನ ಕಥೆ, ಕನಕದಾಸ ಮೋಹನತರಂಗಿಣಿ, ಪುರಂದರದಾಸರು ಕೀರ್ತನೆಗಳನ್ನು ರಚಿಸಿದ್ದಾರೆ.

ಕಲೆ ಮತ್ತು ವಾಸ್ತುಶಿಲ್ಪ: ವಿಜಯನಗರ ಅರಸರು ಕಲೆ ಮತ್ತು ವಾಸ್ತುಶಿಲ್ಪಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ. ರಾಜಧಾನಿಯಾದ ಹಂಪಿಯು ಶ್ರೇಷ್ಠವಾದ ಕಲೆ ಮತ್ತು ವಾಸ್ತುಶಿಲ್ಪದ ಕೇಂದ್ರವಾಗಿತ್ತು. ಇವರು ದ್ರಾವಿಡ ವಾಸ್ತಶಿಲ್ಪ ಶೈಲಿಯನ್ನು ಅನುಸರಿಸಿದ್ದರೂ ಸಹ ಕೆಲವೊಂದು ವಿಶೇಷ ಲಕ್ಷಣಗಳಿಂದಾಗಿ ‘ವಿಜಯನಗರ ವಾಸ್ತುಶಿಲ್ಪ ಶೈಲಿ” ಎಂದು ಕರೆಯಲ್ಪಟಿವೆ.

  • ವಿಜಯನಗರದ ಸ್ಮಾರಕಗಳು ದಕ್ಷಿಣ ಭಾರತದಾದ್ಯಂತ ಹರಡಿಕೊಂಡಿವೆ. ಆದರೆ ಅವುಗಳಲ್ಲಿ ಅತ್ಯಂತ ಸುಂದರವಾದವು ಹಂಪಿಯಲ್ಲಿವೆ.
  • ವಿರೂಪಾಕ್ಷ ದೇವಾಲಯ, ವಿಠಲಸ್ವಾಮಿ ದೇವಾಲಯ, ಕಲ್ಲಿನ ರಥ, ಕೃಷ್ಣಸ್ವಾಮಿ ದೇವಾಲಯ, ಅಚ್ಯುತರಾಯ ಸ್ವಾಮಿ ದೇವಾಲಯ, ಹಜಾರ ರಾಮಸ್ವಾಮಿ ದೇವಾಲಯ, ಮಹಾನವಮಿ ದಿಬ್ಬದ ಕಟ್ಟೆ ಹಂಪಿಯಲ್ಲಿವೆ.
  • ‘ಕಮಲ ಮಹಲ್’ ಹಿಂದೂ ಇಸ್ಲಾಮಿಕ್ ಶೈಲಿಯ ಕಟ್ಟಡ ವಾಸ್ತುಶಿಲ್ಪಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.
  • ಶೃಂಗೇರಿಯ ವಿದ್ಯಾಶಂಕರ, ವೆಲ್ಲೂರಿನ ಜಲಕಂಠೇಶ್ವರ, ಕಂಚಿಪುರದ ಏಕಾಂಬನಾಥ, ಶ್ರೀರಂಗಂನ ಶ್ರೀರಂಗನಾಥ, ಮಧುರೈ ಮೀನಾಕ್ಷಿ ಸುಂದರೇಶ್ವರ ದೇವಾಲಯಗಳು ಪ್ರಮುಖ ದೇವಾಲಯಗಳಾಗಿವೆ.
  • ಇವರು ಮೂರ್ತಿ ಶಿಲ್ಪಕ್ಕೂ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಕಡಲೆಕಾಳು ಗಣೇಶ, ಸಾಸಿವೆಕಾಳು ಗಣೇಶ, ಇರುಗಪ್ಪ ದಂಡನಾಯಕನ ಮೂರ್ತಿ ಮುಂತಾದವು ಪ್ರಮುಕವಾಗಿವೆ.
  • ಚಿತ್ರಕಲೆಗೂ ವಿಶೇಷವಾದ ಪ್ರೋತ್ಸಾಹವನ್ನು ನೀಡಿದ್ದಾರೆ.

ಲಲಿತಕಲೆಗಳು: ನೃತ್ಯ ಸಂಗೀತಕ್ಕೂ ಪ್ರೋತ್ಸಾಹ ನೀಡಿದ್ದ ದಾಸಕೂಟ-ವ್ಯಾಸಕೂಟಗಳು ತನ್ನದೇ ಕೊಡುಗೆಗಳನ್ನು ನೀಡಿದ್ದಾರೆ. ಪುರಂದರದಾಸರನ್ನು ‘ಕರ್ನಾಟಕ ಸಂಗೀತ ಪಿತಾಮಹ’ ಎಂದು ಕರೆಯಲಾಗಿದೆ.

1. ವಿಜಯನಗರ ಅರಸರ ಕುಲದೇವರು ಯಾವುದು?

ಶ್ರೀ ವಿರೂಪಾಕ್ಷ

2. ಕುಮ್ಮಟದುರ್ಗದ ಆಡಳಿತಗಾರ ಯಾರಾಗಿದ್ದರು?

ಕುಮಾರರಾಮ

3. ಸಂಗಮ ಸಹೋದರರ ಹೆಸರುಗಳನ್ನು ತಿಳಿಸಿ.

ಹರಿಹರ, ಬುಕ್ಕ, ಕಂಪಣ, ಮಾರಪ್ಪ ಮತ್ತು ಮುದ್ದಪ್ಪ

4. ಕೃಷ್ಣದೇವರಾಯನು ಯಾವಾಗ ಸಿಂಹಾಸನವೇರಿದನು?

ಸಾ.ಶ. 1509ರ ಶ್ರೀಕೃಷ್ಣ ಜನ್ಮಾಷ್ಟಮಿಯ ದಿನ.

5. ಕೃಷ್ಣದೇವರಾಯನಿಗೆ ತನ್ನ ಮಗಳಾದ ಜಗನ್ನೋಹಿನಿಯನ್ನು ಕೊಟ್ಟು ವಿವಾಹ ಸಂಬಂಧ ಏರ್ಪಡಿಸಿಕೊಂಡ ಅರಸ ಯಾರು?

ಒರಿಸ್ಸಾದ ಪ್ರತಾಪರುದ್ರ

6. ವಿಜಯ ಬಾಹುವಿನ ಮಗ ಯಾರು?

ಭುವನೈಕ್ಯಬಾಹು

7. ಉಮ್ಮತ್ತೂರಿನ ನಾಯಕ ಯಾರು?

ಗಂಗರಾಜ

8. ‘ಉಷಾ ಪರಿಣಯಂ’ ಎಂಬ ಕೃತಿಯ ಕರ್ತೃ ಯಾರು?

ಕೃಷ್ಣದೇವರಾಯ

  • ಕೃಷ್ಣದೇವರಾಯನು ವಿಜಯನಗರ ಅರಸರ ಪ್ರಸಿದ್ಧ ದೊರೆ.
  • ಹಂಪಿ ಇವರ ರಾಜಧಾನಿಯಾಗಿತ್ತು.
  • ರಕ್ಕಸತಂಗಡಿ ಯುದ್ಧವು 1565ರಲ್ಲಿ ನಡೆಯಿತು.
  • ಬೆಂಗಳೂರಿನ ನಿರ್ಮಾತ ಕೆಂಪೇಗೌಡ.
  • 3ನೇ ಮಹಮದ್ ಶಾನ ಮುಖ್ಯಮಂತ್ರಿ ಮಹಮದ್ ಗವಾನ್.

Leave a Comment