ದ್ವಿತೀಯ ಪಿಯುಸಿ ಕನ್ನಡ ಹಿಂದಿನ ಪ್ರಶ್ನೆಪತ್ರಿಕೆ 2017|2nd Puc Kannada Previous Question Paper 2017

ದ್ವಿತೀಯ ಪಿಯುಸಿ ಕನ್ನಡ ಹಿಂದಿನ ಪ್ರಶ್ನೆಪತ್ರಿಕೆ 2017, 2nd Puc Kannada Previous Question Paper 2017 2nd Puc Question Papers Karnataka, 2nd Puc Previous Question Paper 2017 pdf Kannada, 2nd Puc Supplementary Exam Papers, 2nd Puc Previous Year Question Papers, 2nd Puc Model Question Paper pdf, 2nd Puc All Subject Question Paper ದ್ವಿತೀಯ ಪಿಯುಸಿ ಕನ್ನಡ ಮಾದರಿ ಪ್ರಶ್ನೆ ಪತ್ರಿಕೆಗಳು 2nd Puc ಮಾದರಿ ಪ್ರಶ್ನೆ ಪತ್ರಿಕೆಗಳು 2nd Puc Kannada Previous Question Paper previous year question papers class 12 karnataka state board pdf model question paper 2017 2nd puc with answers ದ್ವಿತೀಯ ಪಿಯುಸಿ ಕನ್ನಡ ಪ್ರಶ್ನೆಪತ್ರಿಕೆ

2nd Puc Kannada Previous Question Paper 2017

ಮಾರ್ಚ್‌ 2017

ಅವಧಿ: 3 – 15 ಗರಿಷ್ಠ ಅಂಕಗಳು: 100

ಅ – ವಿಭಾಗ

I. ಈ ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ಒಂದೊಂದು ಪೂರ್ಣ ವಾಕ್ಯದಲ್ಲಿ ಉತ್ತರಿಸಿ:

10 x 1 = 10

೧. ಯಾರ ಕೈಯಲ್ಲಿ ದರ್ಪಣವಿದ್ದು ಫಲವಿಲ್ಲ?

೨. ಅಣ್ಣನಾಜ್ಞೆಯಲ್ಲಿ ಭ್ರಮಿತನಾದವನು ಯಾರು?

೩. ಲಕ್ಷದಾರಿಗಳ ಚದುರಂಗದಾಟ ಯಾವುದು?

೪. ಮೊಮ್ಮಗಳು ಏನು ಮಾಡುತ್ತಿದ್ದಳು?

೫. ಬಸಲಿಂಗ ವೈದ್ಯರಿಗಾಗಿ ಅಲೆದಾಗ ಜೊತೆಗಿದ್ದ ರಾಜಕಾರಣಿ ಯಾರು?

೬. ನಮ್ಮ ದೇಶದಲ್ಲಿ ಖಿಲವಾಗಿ ಹೋದ ಧರ್ಮ ಯಾವುದು?

೭. ಬಾಯಿಚಪಲ ಯಾರಿಗೆ ಜಾಸ್ತಿ ಇರುತ್ತದೆ?

೮. ಆನೆಯ ಮಾವುತನ ಹೆಸರೇನು?

೯. ಶಿವೇಗೌಡರು ರಾತ್ರೋರಾತ್ರಿ ಆನೆ ಕರೆದುಕೊಂಡು ಹೋದುದ್ದೇಕೆ?

೧೦. ಟೆಲಿಫೋನ್ ಸಿಬ್ಬಂದಿ ಯಾರ ವಿರುದ್ಧ ಮುಷ್ಕರ ಹೂಡಿದರು?

ಆ – ವಿಭಾಗ

II. ಅ) ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

4 x 2 = 8

೧೧. ಸೂರ್ಯ ಮತ್ತು ದೀಪಗಳಿಂದಾಗುವ ಉಪಯೋಗಗಳಾವುವು?

೧೨. ಧನ ಮತ್ತು ಸುತನ ವಿಷಯದಲ್ಲಿ ಸೋಮನಾಥನ ಅಭಿಪ್ರಾಯವೇನು?

೧೩. ಯಾರಿಗೆ ಪಡ್ರಸಾನ್ನವನಿಕ್ಕಿ ಉಪಯೋಗವಿಲ್ಲ? ಏಕೆ?

೧೪. ಮುದುಕ ಏನೆಂದು ಗೋಗರೆಯುತ್ತಾನೆ?

೧೫. ಹತ್ತಿಯ ಬೀಜ ಲೋಕದ ಹಿತಕ್ಕೆ ತನ್ನನ್ನು ಹೇಗೆ ಸುಟ್ಟುಕೊಳ್ಳುತ್ತದೆ?

ಆ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:

3 x 2 = 6

೧೬. ಕೈಗಾರಿಕೋದ್ಯಮಿಗಳಿಂದ ಕಾಡು ನಾಶವಾದುದು ಹೇಗೆ?

೧೭. ಎ.ಆರ್. ಕೃಷ್ಣಶಾಸ್ತ್ರಿಗಳ ಭಾಷಣ ಓದಿ ಲೇಖಕರಲ್ಲಿ ಮೂಡಿದ ಭಾವನೆಗಳಾವುವು?

೧೮. ಕಲಾಂ ಅವರ ಬದುಕಿನ ಮಂತ್ರ ಯಾವುದು?

೧೯. ಹಳ್ಳಿಯ ಚಹಾದ ಅಂಗಡಿಯೆಂದರೆ ಹೇಗಿರುತ್ತದೆ?

ಇ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ,

3 x 2 = 6

೨೦. ದುರ್ಗಪ್ಪ ಏಕೆ ಬಂದಿರಬಹುದೆಂದು ನಿರೂಪಕರು ಯೋಚಿಸಿದರು?

೨೧. ಆನೆ ಸಾಕುವುದರ ಬಗ್ಗೆ ಜನರ ನಂಬಿಕೆ ಏನಾಗಿತ್ತು?

೨೨. ಹುಚ್ಚುನಾಯಿಗಳು ಆಸ್ಪತ್ರೆಯಲ್ಲಿ ಹೇಗೆ ವರ್ತಿಸುತ್ತವೆಂದು ಪುಟ್ಟಿಯು ಹೇಳಿದನು?

೨೩. ಡ್ರೈವರ್ ಅಬ್ಬಾಸ್, ಕ್ಲೀನರ್ ಕೃಷ್ಣರ ಸಾವಿಗೆ ಕಾರಣವೇನು?

ಇ – ವಿಭಾಗ

III. ಅ) ಯಾವುದಾದರೂ ಎರಡು ವಾಕ್ಯಗಳನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ. 2 x 3 = 6

೨೪. ಅಸಾಧ್ಯಮಪ್ಪ ಮರುವಕ್ಕವಿಲ್ಲ.

೨೫. ತೃಣವೇ ಪರ್ವತವಲ್ಲವೇ.

೨೬. ಮನ್ನಿಸಲಿ ನಿಮ್ಮನ್ನ ಆ ದೇವರೆ!

ಅ) ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 1 x 3 = 3

೨೭. ಈ ಪ್ರದೇಶಕ್ಕೆ ಆಗ ಹೆಸರೇ ಇರಲಿಲ್ಲ.

೨೮. ವಿಜ್ಞಾನದ ಅಡಿಪಾಯವೇ ಪ್ರಶ್ನೆ ಕೇಳುವುದು.

ಇ) ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ; 1 x 3 = 3

೨೯. ನಂಗೇನು ಈ ನಾಯಿಗಳನ್ನು ಕಂಡರೆ ಪ್ರೀತಿನಾ ಸ್ವಾಮಿ!

೩೦. ಕಂಬದ ಮೇಲೆ ಯಾಕೋ ಕೈಲಾಸ ಕಂಡ ಹಾಗೆ ಇದೆಯಲ್ಲಾ.

ಈ – ವಿಭಾಗ

VI. ಅ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ:

3 x 4 = 12

೩೧. ರಾವಣನಲ್ಲಿ ಕಂಡುಬರುವ ಪಶ್ಚಾತ್ತಾಪವನ್ನು ಕವಿ ಹೇಗೆ ನಿರೂಪಿಸಿದ್ದಾನೆ?

೩೨. ಜನಪದರು ಹೇಳುವಂತೆ ನಮ್ಮ ನೆರೆಹೊರೆಯವರು ಹೇಗಿರಬೇಕು? ವಿವರಿಸಿರಿ.

೩೩. ‘ಬೆಳಗು ಜಾವ’ ಕವನದ ಮೂಲಕ ಕವಿ ಬೇಂದ್ರೆ ಹೇಳಿರುವ ವಿಚಾರಗಳಾವುವು?

೩೪. ‘ಒಮ್ಮನಗುತ್ತೇವೆ’ ಎಂಬ ಕವಿತೆಯಲ್ಲಿ ವ್ಯಕ್ತವಾಗುವ ನಗುವಿನ ವೈಶಿಷ್ಟ್ಯ ವಿವರಿಸಿರಿ.

ಆ) ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ: 2 x 4 = 8

೩೫. ಲೇಖಕಿಯ ವತಿಯ ಮೂತ್ರಪಿಂಡದ ಕಲ್ಲು ಕರಗಿ ಹೋಗಿದ್ದು ಹೇಗೆ?

೩೬. ಮುಸುರೆ ಪಾತ್ರೆಗಳು ನೀರುಪಾಲಾದದ್ದು ಹೇಗೆ? ಅವುಗಳನ್ನು ಮೇಲೆತ್ತಲು ಮಾಡಿದ ಪ್ರಯತ್ನಗಳೇನು?

೩೭. ಮುದ್ದಣ ಅರಮನೆಯಿಂದ ಬಂದ ಪರಿಯನ್ನೂ ಮನೋರಮೆಯ ಉಪಚಾರವನ್ನೂ ವಿವರಿಸಿ.

ಇ) ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ: 1 x 4 = 8̳̳̇

೩೮. ನಿರೂಪಕರು ಕೊಡಲಿ ವಸೂಲಿ ಮಾಡಲು ಹೋಗಲಿಲ್ಲವೇಕೆ?

೩೯. ಅರಣ್ಯ ಇಲಾಖೆಯ ಶತ್ರುಗಳ ಕಾರ್ಯಭಾರವನ್ನು ನಾಗರಾಜ ವಿವರಿಸಿದ್ದು ಹೇಗೆ?

೪೦. ನಾಗರಾಜನ ನಿಗೂಢ ಸಾವಿನ ಬಗ್ಗೆ ಜನರ ಅಭಿಪ್ರಾಯಗಳೇನು?

ಉ – ವಿಭಾಗ

V. ಯಾವುದಾದರೂ ಒಂದು ಪದ್ಯದ ಭಾವಾರ್ಥವನ್ನು ಬರೆಯಿರಿ: 1 x 5 = 5

೪೧. ಹೆಂಡತಿಯ ಹರಿಬದಲಿಯೊಬ್ಬನೆ

ಗಂಡುಗೂಸ ವೈರಿಯನು ಕಡಿ

ಖಂಡವನು ಮಾಡುವನು ಮೇಣ್ ತನ್ನೊಡಲನಿಕ್ಕುವನು

ಗಂಡರೈವರು ಮೂರು ಲೋಕದ

ಗಂಡರೊಬ್ಬಳನಾಳಲಾರಿರಿ

ಗಂಡರೋ ನೀವ್ ಭಂಡರೊ ಹೇಳೆಂದಳಿಂದುಮುಖಿ।।

೪೨. ತಾಯಿ: ಸಾವಿರ ಗಾಲಿ ಉರುಳಿ ಹೊರಳುವ ರಸ್ತೆಯಂಚಿನಲ್ಲೇ

ಕೈ ಹಿಡಿದು ನಡೆಸಿದವಳು, ಇರುವ ಒಂದಿಂಚು

ಕೋಣೆಯಲ್ಲೇ ಹೊರಲೋಕವನು ಪರಿಚಯಿಸಿ

ಎಚ್ಚರಿಕೆ ಕೊಟ್ಟವಳು,

ಭಾಷಾಭ್ಯಾಸ

VI. ಅ) ಕೆಳಗಿನ ಪ್ರಶ್ನೆಗಳಲ್ಲಿ ಯಾವುದಾದರೂ ಅರಕ್ಕೆ ಸೂಚನೆಗೆ ಅನುಗುಣವಾಗಿ ಉತ್ತರಿಸಿರಿ: 6 x 2 = 12

೪೩. ಈ ಪದಗಳಿಗೆ ಅರ್ಥವನ್ನು ಬರೆಯಿರಿ: ತೃಣ, ಸಂಕುಲ,

೪೪. ಈ ಪದಗಳಿಗೆ ಸಮಾನಾರ್ಥಗಳನ್ನು ಬರೆಯಿರಿ: ಕುಸುಮ, ಮರ್ಕಟ,

೪೫. ಈ ಪದಗಳಿಗೆ ತದ್ಭವ ರೂಪ ಬರೆಯಿರಿ: ಸ್ವರ್ಗ, ಘೋಕ.

೪೬. ಈ ಪದಗಳ ವಿಭಕ್ತಿಯ ಹೆಸರನ್ನು ಬರೆಯಿರಿ: ನಲ್ಗತೆಯಂ, ಮಗುವೇ.

೪೭. ಈ ಕೆಳಗಿನ ಕ್ರಿಯಾಪದಗಳ ‘ಧಾತು’ ಗುರುತಿಸಿ: ಬಂದನು, ಗೆದ್ದನು.

೪೮. ಈ ಕೆಳಗಿನ ಕ್ರಿಯಾವದಗಳ ಕಾಲವನ್ನು ಸೂಚಿಸಿರಿ: ಹೇಳಿದರು, ಹಾಕುತ್ತಾರೆ.

೪೯. ಈ ನುಡಿಗಟ್ಟುಗಳನ್ನು ವಾಕ್ಯದಲ್ಲಿ ಬಳಸಿ: ತಲೆದೂಗು, ಎರಡು ಬಗೆ.

ಆ) ಯಾವುದಾದರೂ ಒಂದನ್ನು ಕುರಿತು ಪ್ರಬಂಧವನ್ನು ಬರೆಯಿರಿ. 1 x 5 = 5

೫೦. ಕೃಷಿ ಸಂಸ್ಕೃತಿ

೫೧. ಕ್ರೀಡೆಗಳ ಮಹತ್ವ.

ಇ) ಯಾವುದಾದರೂ ಒಂದನ್ನು ಕುರಿತು ಪತ್ರ ಬರೆಯಿರಿ: 1 x 4 = 4

೫೨. ನಿಮ್ಮ ಊರಿನಲ್ಲಿ ನಡೆಯುವ ಜಾತ್ರೆಗೆ ಆಹ್ವಾನಿಸಿ ನಿಮ್ಮ ಮಿತ್ರನಿಗೆ ಪತ್ರವನ್ನು ಬರೆಯಿರಿ.

೫೩. ನಿಮ್ಮ ಅಣ್ಣನ ಮದುವೆಗೆ ನಾಲ್ಕು ದಿನ ರಜೆ ಕೋರಿ ನಿಮ್ಮ ಪ್ರಾಚಾರ್ಯರಿಗೆ ಪತ್ರವನ್ನು ಬರೆಯಿರಿ.

ಈ) ಈ ಕೆಳಗಿನ ಗಾದೆಗಳಲ್ಲಿ ಒಂದನ್ನು ವಿಸ್ತರಿಸಿ ಬರೆಯಿರಿ. 1 × 4 = 4

೫೪. ಬೆಳೆಯುವ ಸಿರಿ ಮೊಳಕೆಯಲ್ಲಿ

೫೫. ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.

*********************************

ಜುಲೈ 2017

ಅವಧಿ: 3 -15 ಗರಿಷ್ಠ ಅಂಕಗಳು: 100

ಅ – ವಿಭಾಗ

I. ಈ ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ಒಂದೊಂದು ಪೂರ್ಣ ವಾಕ್ಯದಲ್ಲಿ ಉತ್ತರಿಸಿ:

10 x 1 = 10

೧. ಬಸವಣ್ಣನವರ ವಚನಗಳ ಅಂಕಿತ ಯಾವುದು?

೨. ಯಾರನ್ನು ಯೋಗಿ ಎನ್ನಬಹುದು?

೩. ಬ್ಯಾಸಗಿ ದಿವಸಕ್ಕೆ ಯಾವ ಮರ ತಂಪು?

೪. ಮಗು ಹುಟ್ಟಿದ್ದು ಎಲ್ಲಿ?

೫. ಬಸಲಿಂಗನಿಗೆ ಕಾಣಿಸಿಕೊಂಡ ತೊಂದರೆ ಯಾವುದು?

೬. ವಾಲ್‌ ಪರೈಗೆ ಬಂದ ಬ್ರಿಟಿಷ್ ಪ್ರಜೆ ಯಾರು?

೭. ಭಾಷೆ ಯಾವುದಕ್ಕಿಂತ ದೊಡ್ಡದು?

೮. ನಿರೂಪಕರ ಕೊಡಲಿಯ ಆಕಾರ ಹೇಗಿತ್ತು?

೯. ಪುಟ್ಟಯ್ಯ ಯಾರು?

೧೦. ಕೃಷ್ಣೇಗೌಡನನ್ನು ಕಾಡಿದ ಕಳವಳವೇನು?

ಆ – ವಿಭಾಗ

II. ಅ) ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:

4 x 2 = 8

೧೧. ಮಲಗಿರುವ ಭೀಮನನ್ನು ದ್ರೌಪದಿ ಹೇಗೆ ಎಬ್ಬಿಸಿದಳು?

೧೨. ದುರ್ಜನರ ಕಾರ್ಯ ಯಾವ ಬಗೆಯದು?’

೧೩. ಶಿಲುಬೆಗೇರಿಸಿದವರ ಗುಣಗಳು ಇಂದು ಯಾವ ವೇಷ ತಾಳಿವೆ?

೧೪. ದನಗಳಿಗೆ, ಜನಗಳಿಗೆ ಏನೇನು ಇಲ್ಲ?

೧೫. ಮಾಗುವ ಜೀವನದ ಪಯಣ ಹೇಗೆ ಸಾಗುತ್ತಿದೆ?

ಆ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ:

3 x 2 = 6

೧೬. ಸೀತಾಳ ಓದುವ ಆಸಕ್ತಿ ಹೇಗಿತ್ತು?

೧೭. ಧಣಿಗಳ ಹೊಳೆಯನ್ನು ಹೇಗೆ ಮೂದಲಿಸುತ್ತಿದ್ದರು?

೧೮. ಮನೋರಮೆ ಕತೆ ಹೇಳೆಂದು ಕೇಳಲು ಕಾರಣವೇನು?

೧೯. ಹಳ್ಳಿಯ ಚಹಾದ ಅಂಗಡಿಯೆಂದರೆ ಹೇಗಿರುತ್ತದೆ?

ಇ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ:

3 x 2 = 6

೨೦. ಮಠದವರಿಗೆ ಅನೆಗಿಂತ ವೇಲಾಯುಧನನ್ನು ಸಾಕಲು ತ್ರಾಸಾದುದೇಕೆ?

೨೧. ಕಾಡಪ್ಪ ಶೆಟ್ಟರು ಯಾವ ವರ್ತಮಾನವನ್ನು ಮುಟ್ಟಿಸಿದರು?

೨೨. ನಾಗರಾಜ ದುರ್ಗಪ್ಪನ ಮೇಲೆ ಏನೆಂದು ರೇಗಿದನು?

೨೩. ಖೇಡಿಗಳು ನಾಗರಾಜನನ್ನು ಖೂನಿ ಮಾಡಿರುವರೆಂದು ರಾಮಪ್ಪ ಹೇಗೆ ವಿವರಿಸಿದನು?

ಇ – ವಿಭಾಗ

III. ಅ) ಯಾವುದಾದರೂ ಎರಡು ವಾಕ್ಯಗಳನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 2 x 3 = 6

೨೪. ಮಾನಿನಿಗಿನಿತು ದುಃಖಮಂ ಪುಟ್ಟಿಸಿದೆಂ.

೨೫. ತಾನೆ ಲಘುಮಾಡಿ ಲಘುವಾದನಯ್ಯ.

೨೬. ಭಾಳ ಮರುಗ್ಯಾಳ ಮನದಾಗ.

ಆ) ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 1 × 3 = 3

೨೭. ಹಾಡುವುದು ಅವುಗಳಿಗೆ ಅನಿವಾರ್ಯ; ಅವುಗಳ ಕರ್ಮ!

೨೮. ಒಂದೊಂದು ಭಾಷೆಯು ಒಂದೊಂದು ವರ.

ಇ) ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 1 x 3 = 3

೨೯. ಬುಟ್ಟಿಗಟ್ಟೆ ಬಿದ್ದಿಲ್ಲವ ಅದರ ಲದ್ದಿ!

೩೦. ಇತ್ತಲಾಗಿ ಮುಖ ಹಾಕಲಿ, ಅದನ್ನು ಕೋವಿಲೆ ಹೊಡೀತೀನಿ.

ಈ – ವಿಭಾಗ

IV. ಅ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ:

3 x 4 = 12

೩೧. ರಾವಣನ ಮನಃಪರಿವರ್ತನೆಯ ಸಂದರ್ಭವನ್ನು ಕವಿ ಹೇಗೆ ಚಿತ್ರಿಸಿದ್ದಾನೆ? ವಿವರಿಸಿ.

೩೨. ಸಕಾಲಕ್ಕೆ ಒದಗುವ ಸಹಾಯವೇ ಶ್ರೇಷ್ಠ ಎಂಬುದನ್ನು ಕವಿ ಹೇಗೆ ತಿಳಿಸಿದ್ದಾನೆ?

೩೩. ನಗರ ಜೀವನದ ಯಾಂತ್ರಿಕ ವಿವರಗಳು ‘ಮುಂಬೈ ಜಾತಕ’ ಕವಿತೆಯಲ್ಲಿ ಹೇಗೆ ಚಿತ್ರಿತಗೊಂಡಿವೆ? ವಿವರಿಸಿ.

೩೪. ವೃದ್ರರ ತವಕ-ತಲ್ಲಣಗಳು ಒಂದು ಹೂ ಹೆಚ್ಚಿಗೆ ಇಡುತೀನಿ’ ಕವಿತೆಯಲ್ಲಿ ಹೇಗೆ ನಿರೂಪಿತವಾಗಿವೆ? ವಿವರಿಸಿ.

ಆ) ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ. 2 x 4 = 8

೩೫. ಬಸಲಿಂಗ ಡಾ। ತಿಮ್ಮಪ್ಪನವರ ಸೂಚನೆಗಳನ್ನು ಪಾಲಿಸದಿರಲು ಕಾರಣವೇನು?

೩೬. ಲೇಖಕಿಯ ಪತಿಯ ಮೂತ್ರಪಿಂಡದ ಕಲ್ಲು ಕರಗಿಹೋದದ್ದು ಹೇಗೆ?

೩೭. ತಮ್ಮನ್ನು ಭೇಟಿಯಾದ ಮಕ್ಕಳಿಗೆ ಕಲಾಂ ಹೇಳಿದ್ದೇನು?

ಇ) ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ. 2 x 4 = 8

೩೮. ಎಲ್ಲರ ನಿರೀಕ್ಷೆ ಸುಳ್ಳಾಗುವಂತೆ ಕೃಷ್ಣಗೌಡ ಆನೆಯನ್ನು ಹೇಗೆ ಸಾಕಿದನು?

೩೯. ಬೀದಿನಾಯಿಗಳ ನಿವಾರಣೆಗೆ ಖಾನ್ ಸಾಹೇಬರು ತೆಗೆದುಕೊಂಡಿದ್ದ ಕ್ರಮಗಳಾವುವು?:

೪೦. ನಾಗರಾಜನ ನಿಗೂಢ ಸಾವಿನ ಬಗ್ಗೆ ಜನರ ಅಭಿಪ್ರಾಯವೇನು?

ಉ – ವಿಭಾಗ

V. ಯಾವುದಾದರೂ ಒಂದು ಪದ್ಯದ ಭಾವಾರ್ಥವನ್ನು ಬರೆಯಿರಿ: 1 x 5 = 5

೪೧. ಎಲ್ಲರೊಳು ಕಲಿಭೀಮನೇ ಮಿಡು

ಕುಳ್ಳ ಗಂಡನ ಹಾನಿ ಹರಿಬಕೆ

ನಿಲ್ಲದ೦ಗೈಸುವನು ಕಡು ಹೀಹಾಳಿಯುಳ್ಳವನು

ಖುಲ್ಲನಿವನುಪಟಳವನಾತಂ

ಗೆಲ್ಲವನು ಹೇಳುವನು ಬಳಿಕವ

ನಲ್ಲಿ ಹುರುಳಿಲ್ಲದೊಡೆ ಕುಡಿವೆನು ಘೋರತರ ವಿಷವ.

೪೨. ನಿಶೆಯಿಳಿದ ಉಷೆಯ, ಎಳನಗೆಯ ಬಗೆಗೆ, ಸೋತಿರಲು ಜಗವು ಸವಿಗೆ

ಕಣ್ಣಿದಿರು ಒಂದು, ಕಟ್ಟಿತ್ತು ಕನಸು; ಕೂಗೊಂದು ಬಂತು ಕಿವಿಗೆ.

ಮಕ್ಕಳಿದ ಕೇಳಿ, ರಸ ಕುಡಿಯಲೇಳಿ, ಹುಸಿನಿದ್ದೆಗಿದ್ದ ಸಾಕು

ಈ ತುಂಬಿಬಾಳು, ತುಂಬಿರುವ ತನಕ, ತುಂತುಂಬಿ ಕುಡಿಯಬೇಕು.

ಭಾಷಾಭ್ಯಾಸ

VI. ಅ) ಕೆಳಗಿನ ಪ್ರಶ್ನೆಗಳಲ್ಲಿ ಯಾವುದಾದರೂ ಅರಕ್ಕೆ ಸೂಚನೆಗೆ ಅನುಗುಣವಾಗಿ ಉತ್ತರಿಸಿರಿ: 6 x 2 = 12

೪೩. ಈ ಪದಗಳಿಗೆ ಅರ್ಥವನ್ನು ಬರೆಯಿರಿ: ಬಿತ್ತ, ಗೆರಟ.

೪೪. ಈ ಪದಗಳಿಗೆ ಸಮಾನಾರ್ಥಗಳನ್ನು ಬರೆಯಿರಿ: ಅನಲ, ಸಮರ.

೪೫. ಈ ಪದಗಳಿಗೆ ನಾನಾರ್ಥಕ ಪದಗಳನ್ನು ಬರೆಯಿರಿ: ಬಗೆ, ನರ.

೪೬. ಈ ಪದಗಳಲ್ಲಿನ ಗುಣವಾಚಕ ಪದ ಬರೆಯಿರಿ: ಕಾರ್ಮೋಡ, ದುರ್ಜನ.

೪೭. ಎರಡು ದ್ವಿರುಕ್ತಿ ಪದಗಳನ್ನು ಬರೆಯಿರಿ.

೪೮. ಈ ಕೆಳಗಿನ ನುಡಿಗಟ್ಟುಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ: ದಾರಿದೀಪ, ತಲೆಬಾಗು.

೪೯. ಈ ಕೆಳಗಿನ ಪದಗಳಲ್ಲಿನ ವಿಭಕ್ತಿಯ ಹೆಸರನ್ನು ಬರೆಯಿರಿ: ಧರೆಯೊಳ್, ಗುಡಿಸಲಿನಿಂದ

ಅ) ಯಾವುದಾದರೂ ಒಂದನ್ನು ಕುರಿತು ಪ್ರಬಂಧವನ್ನು ಬರೆಯಿರಿ: 1 x 5 = 5

೫೦. ಭೀಕರ ಬರಗಾಲ

೫೧. ಪರಿಸರ ಸಂರಕ್ಷಣೆ.

ಇ) ಯಾವುದಾದರೂ ಒಂದನ್ನು ಕುರಿತು ಪತ್ರ ಬರೆಯಿರಿ: 1 x 4 = 4

೫೨. ಉನ್ನತ ವ್ಯಾಸಂಗಕ್ಕಾಗಿ ಸಾಲಸೌಲಭ್ಯವನ್ನು ಕೋರಿ ಬ್ಯಾಂಕ್‌ನ ವ್ಯವಸ್ಥಾಪಕರಿಗೆ ಒಂದು ಪತ್ರ ಬರೆಯಿರಿ.

೫೩. ನಿಮ್ಮ ಶೈಕ್ಷಣಿಕೆ ಪ್ರವಾಸದ ಅನುಭವವನ್ನು ಕುರಿತು ನಿಮ್ಮಗೆಳೆಯ/ಗೆಳತಿಗೊಂದು ಪತ್ರ ಬರೆಯಿರಿ.

ಈ) ಈ ಕೆಳಗಿನ ಗಾದೆಗಳಲ್ಲಿ ಒಂದನ್ನು ವಿಸ್ತರಿಸಿ ಬರೆಯಿರಿ: 1 x 4 = 4

೫೪. ಮನಸ್ಸಿದ್ದರೆ ಮಾರ್ಗ.

೫೫. ತಾಳಿದವನು ಬಾಳಿಯಾನು.

Leave a Comment