ದ್ವಿತೀಯ ಪಿಯುಸಿ ಕನ್ನಡ ಹಿಂದಿನ ಪ್ರಶ್ನೆಪತ್ರಿಕೆ 2020|2nd Puc Kannada Previous Question Paper 2020

ದ್ವಿತೀಯ ಪಿಯುಸಿ ಕನ್ನಡ ಹಿಂದಿನ ಪ್ರಶ್ನೆಪತ್ರಿಕೆ 2020, 2nd Puc Kannada Previous Question Paper 2020 2nd Puc Question Papers Karnataka, 2nd Puc Previous Question Paper 2020 pdf Kannada, 2nd Puc Supplementary Exam Papers, 2nd Puc Previous Year Question Papers, 2nd Puc Model Question Paper pdf, 2020 2nd Puc All Subject Question Paper ದ್ವಿತೀಯ ಪಿಯುಸಿ ಕನ್ನಡ ಮಾದರಿ ಪ್ರಶ್ನೆ ಪತ್ರಿಕೆಗಳು 2nd Puc ಮಾದರಿ ಪ್ರಶ್ನೆ ಪತ್ರಿಕೆಗಳು 2020 ದ್ವಿತೀಯ ಪಿಯುಸಿ ಕನ್ನಡ ಪ್ರಶ್ನೆ ಪತ್ರಿಕೆ 2nd Puc Karnataka Previous Question Papers 2nd puc question papers with answers pdf second puc kannada model question paper model question paper 2020 2nd puc with answers pdf download

Previous Question Paper 2020

ಮಾರ್ಚ್‌ 2020

ಅವಧಿ: 3 – 15 ಗಂಟೆ ಗರಿಷ್ಠ ಅಂಕಗಳು: 100

ಅ – ವಿಭಾಗ

I. ಈ ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ಒಂದೊಂದು ಪೂರ್ಣ ವಾಕ್ಯದಲ್ಲಿ ಉತ್ತರಿಸಿ:

10 x 1 = 10

೧. ಹಗೆಯನ್ನು ಏನೆಂದು ಉಪೇಕ್ಷಿಸಬಾರದೆಂದು ಸೋಮನಾಥನು ಹೇಳಿದ್ದಾನೆ?

೨. ತತ್ವಜ್ಞಾನವನ್ನು ಕೇಳದವರಾರು?

೩. ಯಾವುದಕ್ಕೆ ಸೆಳವಿದೆಯೆಂದು ಬೇಂದ್ರೆ ಹೇಳುತ್ತಾರೆ?

೪. ಕವಯಿತ್ರಿ ಸುಕನ್ಯಾ ಮಾರುತಿ ಯಾರಲ್ಲಿ ಮೊರೆ ಇಡುತ್ತಾರೆ?

೫. ಸ್ಥಳೀಯ ಭಾಷೆ ಕಲಿಯದ ಅನ್ಯಭಾಷಿಕರು ಏನಾಗುತ್ತಾರೆ?

೬. ‘ಕನ್ನಡ ಕಸ್ತೂರಿಯಲ್ಲವೆ’ ಎಂದವರಾರು?

೭. ಕಲಿಯುಗದ ಅಮೃತ ಯಾವುದು?

೮. ಕೃಷ್ಣೇಗೌಡರ ಆನೆಯ ಹೆಸರೇನು?

೯. ಆನೆಶಾಸ್ತ್ರದವನು ಏನೆಂದು ಭವಿಷ್ಯ ನುಡಿದನು?

೧೦. ನಾಗರಾಜ ಕೋವಿ ಹಿಡಿದು ಎಲ್ಲಿ ಕುಳಿತಿದ್ದ?

ಆ – ವಿಭಾಗ

II. ಅ) ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಎರಡು -ಮೂರು ವಾಕ್ಯಗಳಲ್ಲಿ ಉತ್ತರಿಸಿ: 4 x 2 = 8

೧೧. ಉರಿಲಿಂಗ ಪೆದ್ದಿಯ ಪ್ರಕಾರ ಗುರುವಿನ ಲಕ್ಷಣಗಳೇನು?

೧೨. ದ್ರೌಪದಿ ತಾನು ಘೋರತರ ವಿಷ ಕುಡಿಯುವುದಾಗಿ ಏಕೆ ಹೇಳುತ್ತಾಳೆ?

೧೩. ಬಾನು ಮತ್ತು ಮರದ ನಿತ್ಯನೂತನತೆಯ ಬಗ್ಗೆ ಕವಿ ಏನು ಹೇಳಿದ್ದಾರೆ?

೧೪. ಮುದುಕ ಏನೆಂದು ಗೋಗರೆಯುತ್ತಾನೆ?

೧೫. ಎಣ್ಣೆಯಲ್ಲಿ ನೆನೆದು ಉರಿವ ಬತ್ತಿಯನ್ನು ಯಾವ ಯಾವುದಕ್ಕೆ ಹೋಲಿಸಲಾಗಿದೆ?

ಆ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:

3 x 2 = 6

೧೬. ಮಾರ್ಷನನ್ನು ಕಂಡು ಆದಿವಾಸಿಗಳು ಹೇಗೆ ಪ್ರತಿಕ್ರಿಯಿಸಿದರು?

೧೭. ಕರ್ನಾಟಕದಲ್ಲಿ ಕನ್ನಡಕ್ಕೆ ಯಾವ ಸ್ಥಾನವಿರಬೇಕೆಂದು ಹಾಮಾನಾ ಅಪೇಕ್ಷಿಸಿದ್ದಾರೆ?

೧೮. ಕಲಾಂ ಅವರ ದೃಷ್ಟಿಯಲ್ಲಿ ಕನಸುಗಳು ವಿನಾಗುತ್ತವೆ?

೧೯. ಹಳ್ಳಿಯ ಚಹಾದ ಅಂಗಡಿಯೆಂದರೆ ಹೇಗಿರುತ್ತದೆ?

ಇ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:

3 x 2 = 6

೨೦. ಮಠದವರಿಗೆ ಆನೆಗಿಂತ ವೇಲಾಯುಧನನ್ನು ಸಾಕಲು ತ್ರಾಸಾದುದೇಕೆ?

೨೧. ನಾಯಿಯನ್ನು ಕೊಲ್ಲದೆ ನೌಕರರು ಸುಳ್ಳು ಹೇಳಿರುವರೆಂದು ನಿರೂಪಕರು ಯಾವ ಸಲಹೆ ನೀಡಿದರು?

೨೨. ಡ್ರೈವರ್ ಅಬ್ಬಾಸ್, ಕ್ಲೀನರ್ ಕೃಷ್ಣರ ಸಾವಿಗೆ ಕಾರಣವೇನು?

೨೩. ಆನೆಯನ್ನು ಹದ್ದುಬಸ್ತಿನಲ್ಲಿಡುವುದರ ಬಗ್ಗೆ ವೇಲಾಯುಧನ ಅಪ್ಪ ಏನು ತಿಳಿಸಿದ್ದ?

ಇ – ವಿಭಾಗ

III. ಆ) ಯಾವುದಾದರೂ ಎರಡು ವಾಕ್ಯಗಳನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 2 x 3 = 6

೨೪. ಅಸಾಧ್ಯಮಪ್ಪ ಮರುವಕ್ಕಮಿಲ್ಲ.

೨೫. ತೃಣವೇ ಪರ್ವತವಲ್ಲವೇ.

೨೬. ಕುಸುಮ ವಾಸನೆಯಿಲ್ಲ ಕೂಡಲು ಸ್ಥಳವಿಲ್ಲ.

ಆ) ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 1 x 3 = 3

೨೭. ದುರಂತದ ಮೂಲ ಬೀಜಗಳು ಚಹಾ ಗಿಡದ ರೂಪದಲ್ಲಿ ಬಂದವು.

೨೮. ನಿನಗಾವ ರಸದೊಳಿಷ್ಟಂ?

ಇ) ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 1 x 3 = 3

೨೯. ಆನೆಗೂ ಮಾನ ಮರ್ಯಾದೆ ಇರುತ್ತೆ ತಿಳಿಕೋ.

೩೦. ಕಂಬದ ಮೇಲೆ ಯಾಕೋ ಕೈಲಾಸ ಕಂಡ ಹಾಗೆ ಇದೆಯಲ್ಲಾ.

ಈ – ವಿಭಾಗ

IV. ಅ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ.

3 x 4 = 12

೩೧. ಬಸವಣ್ಣನವರ ಪ್ರಕಾರ ನೈಜಭಕ್ತಿಯ ಲಕ್ಷಣಗಳಾವುವು?

೩೨. ತನಗೊದಗಿದ ಸಂಕಟವನ್ನು ಹೇಳಿಕೊಳ್ಳುವ ದ್ರೌಪದಿಯ ಸ್ವಗತದ ನುಡಿಗಳಾವುವು?

೩೩. ಹೆಣ್ಣು ಮಕ್ಕಳ ದುಃಖವನ್ನು ಬಲ್ಲವರು ಯಾರು? ಹೇಗೆ?

೩೪. ‘ಮುಂಬೈ ಜಾತಕ’ದಲ್ಲಿ ಮಕ್ಕಳ ಬಾಲ್ಯದ ಚಿತ್ರಣ ಹೇಗೆ ನಿರೂಪಿತವಾಗಿದೆ?

ಆ) ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ. 2 x 4 = 8

೩೫. ಕಣ್ಣುನೋವು ಶುರುವಾದ ಆರಂಭದಲ್ಲಿ ಬಸಲಿಂಗ ಪಡೆದುಕೊಂಡ ಚಿಕಿತ್ಸೆ ಯಾವ ರೀತಿಯದು?

೩೬. ಲೇಖಕಿಯ ಪತಿಯ ಮೂತ್ರಪಿಂಡದ ಕಲ್ಲು ಕರಗಿ ಹೋದದ್ದು ಹೇಗೆ?

೩೭. ಚಿನ್ನಮ್ಮ ಬೆಳ್ಳಿಲೋಟವನ್ನು ಮತ್ತೆ ಹೊಳೆಗೆ ಎಸೆಯಲು ಕಾರಣವೇನು?

ಇ) ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ: 2 x 4 = 8

೩೮. ದುರ್ಗಪ್ಪನಿಗೆ ಲೈನ್‌ಮನ್ ಕೆಲಸ ರೋಸಿ ಹೋಗಲು ಕಾರಣಗಳೇನು?

೩೯. ಪೋಸ್ಟ್‌ಮನ್ ಜಬ್ಬಾರನ ಬವಣೆಗಳನ್ನು ನಿರೂಪಕರು ಹೇಗೆ ವಿವರಿಸಿದ್ದಾರೆ?

೪೦. ನಾಗರಾಜನ ನಿಗೂಢ ಸಾವಿನ ಬಗ್ಗೆ ಜನರ ಅಭಿಪ್ರಾಯಗಳೇನು?

ಉ – ವಿಭಾಗ

V. ಯಾವುದಾದರೂ ಒಂದು ಪದ್ಯದ ಭಾವಾರ್ಥವನ್ನು ಬರೆಯಿರಿ: 1 x 5 = 5

೪೧. ಗುಣಪರಿಪಾಲನಾರ್ಥಮೆನಗಂ ಬಗೆದೋದಳಿಲ್ಲ ದಿವ್ಯಭೂ

ಷಣವಸನಾಂಗರಾಗಮುಮನೊಲ್ಲದೆ ಖೇಚರರಾಜ್ಯಲಕ್ಷ್ಮಿಯಂ

ತೃಣಸಮನಾಗೆ ಭಾವಿಸಿದಳೀ ಸತಿಯುಂ ಮೊದಲಾಗೆ ಪೌರುಷ

ಪ್ರಣಯಿಯನಿಂತಪೇಕ್ಷಿಸುವೆನೇ ಗುಣಹಾನಿಯನನ್ನ ಪಾಪದಿಂ

೪೨. ಶಿಲುಬೆಯೇರಿದ್ದಾನೆ ಜೀಸಸ್ ಗೋಡೆಯಲ್ಲಿ;

ಬಾಗಿದ ಶೀರ

ಕುತ್ತಿಗೆಯಲ್ಲಿ ಉಬ್ಬದೊಂದು ನರ,

ಯಾತನೆಗೂ ನಲ್ವಾತನೇ ನುಡಿವ ಮುಖ ಮುದ್ರೆ:

ತೆರೆದೆದೆ

ಎನ್ನುವಂತಿದೆ;

ಕೊಲೆಗಡುಕ ಬರಬ್ಬನ ವಕಾಲತ್ತು ನಡೆಸಿದವರೆ,

ಎಡಕ್ಕೊಬ್ಬ ಬಲಕ್ಕೊಬ್ಬ ಕಳ್ಳನ ತೂಗಿ ಸನ್ಮಾನಿಸಿದವರೆ.

ಮನ್ನಿಸಲಿ ನಿಮ್ಮನ್ನ – ಆ ದೇವರೆ!

ಭಾಷಾಭ್ಯಾಸ

VI. ಆ) ಕೆಳಗಿನ ಪ್ರಶ್ನೆಗಳಲ್ಲಿ ಯಾವುದಾದರೂ ಅರಕ್ಕೆ ಸೂಚನೆಗೆ ಅನುಗುಣವಾಗಿ ಉತ್ತರಿಸಿರಿ: 6 x 2 = 12

೪೩. ಈ ಪದಗಳ ಅರ್ಥ ಬರೆಯಿರಿ: ಮಸಕ, ಪಂಕ

೪೪. ಈ ಪದಗಳಿಗೆ ಸಮಾನಾರ್ಥಗಳನ್ನು ಬರೆಯಿರಿ: ಪುಷ್ಪ, ಸಲಿಲ

೪೫. ಈ ಪದಗಳ ತದ್ಭವ ರೂಪ ಬರೆಯಿರಿ: ಪುಸ್ತಕ, ಭಂಗ,

೪೬. ಈ ಕ್ರಿಯಾಪದಗಳ ʼಧಾತುʼ ಗುರುತಿಸಿ: ಸೋತನು, ಬಂದಳು.

೪೭. ಈ ಪದಗಳಲ್ಲಿನ ವಿಭಕ್ತಿಯ ಹೆಸರನ್ನು ಬರೆಯಿರಿ: ಲೋಕದೊಳ್, ಕುದುಪನನ್ನು,

೪೮. ಈ ಪದಗಳ ಕಾಲವನ್ನು ಬರೆಯಿರಿ: ಹೋಗುತ್ತಾರೆ, ಹೇಳಿದರು.

೪೯. ಈ ನುಡಿಗಟ್ಟುಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಬಳಸಿ: ಗಾಳಿಗೆ ತೂರು, ಅಜ್ಜನ ಕಾಲದ್ದು.

ಆ) ಯಾವುದಾದರೂ ಒಂದನ್ನು ಕುರಿತು ಪ್ರಬಂಧವನ್ನು ಬರೆಯಿರಿ: 1 x 5 = 5

೫೦. ಪ್ಲಾಸ್ಟಿಕ್‌ ಮುಕ್ತ ಭಾರತ.

೫೧. ಹೆಚ್ಚುತ್ತಿರುವ ವೃದ್ಧಾಶ್ರಮಗಳು.

ಇ) ಯಾವುದಾದರೂ ಒಂದನ್ನು ಕುರಿತು ಪತ್ರ ಬರೆಯಿರಿ: 1 x 4 = 4

೫೨. ಶಿಕ್ಷಕರ ದಿನಾಚರಣೆಯ ಮಹತ್ವ ಕುರಿತು ಗೆಳೆಯ/ಗೆಳತಿಗೊಂದು ಪತ್ರ ಬರೆಯಿರಿ.

೫೩. ವರ್ಗಾವಣೆ ಪತ್ರವನ್ನು ಕೋರಿ ಸಂಬಂಧಪಟ್ಟ ಅಧಿಕಾರಿಗೊಂದು ಪತ್ರ ಬರೆಯಿರಿ.

ಈ) ಈ ಕೆಳಗಿನ ಗಾದೆಗಳಲ್ಲಿ ಒಂದನ್ನು ವಿಸ್ತರಿಸಿ ಬರೆಯಿರಿ: 1 x 4 = 4

೫೪. ಕೆಲವರು ಗಳಿಸಿದರೆ ಕೆಲವರು ಉಂಡು ಜಾರುವರು.

೫೫. ಅತಿ ಆಸೆ ಗತಿಗೇಡು.

**********************************

ಸೆಪ್ಟೆಂಬರ್‌ 2020

ಅವಧಿ: 3-15 ಗಂಟೆ ಗರಿಷ್ಠ ಅಂಕಗಳು: 100

ಅ – ವಿಭಾಗ

I. ಈ ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ಒಂದೊಂದು ಪೂರ್ಣ ವಾಕ್ಯದಲ್ಲಿ ಉತ್ತರಿಸಿ:

10 x 1 = 10

೧. ಜಾಲಿಯ ಮರದಿಂದ ಯಾರಿಗೆ ನೆರಳು ಸಿಗುವುದಿಲ್ಲ?

೨. ಮಗು ಹುಟ್ಟಿದ್ದು ಎಲ್ಲಿ?

೩. ಎಣ್ಣೆಯಲ್ಲಿ ನೆನೆದ ಬತ್ತಿ ಹೇಗೆ ಕಾಣುತ್ತದೆ?

೪. ಜನರಿಗೆ ಯಾವುದಕ್ಕೆ ಗತಿಯಿಲ್ಲ?

೫. ನಮ್ಮ ದೇಶದಲ್ಲಿ ಖಿಲವಾಗಿ ಹೋದ ಧರ್ಮ ಯಾವುದು?

೬. ಧಣಿಗಳ ಹೆಸರೇನು?

೭. ಮುದ್ದಣ ಅರಮನೆಯಿಂದ ಬರುತ್ತಿರುವುದನ್ನು ನಿಂತು ನೋಡಿದವರಾರು?

೮. ನಿರೂಪಕರಿಗೆ ಯಾವ ಕೆಲಸ ಖಾಯಮ್ಮಾಗಿತ್ತು?

೯. ಆನೆಯ ಮಾವುತನ ಹೆಸರೇನು?

೧೦. ಟೆಲಿಫೋನ್ ಸಿಬ್ಬಂದಿ ಯಾರ ವಿರುದ್ದ ಮುಷ್ಕರ ಹೂಡಿದರು?

ಆ- ವಿಭಾಗ

II. ಆ) ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:

4 x 2 = 8

೧೧. ರಾವಣನು ಅಂತಿಮವಾಗಿ ಯಾವ ನಿರ್ಧಾರಕ್ಕೆ ಬರುತ್ತಾನೆ?

೧೨. ಮಲಗಿರುವ ಭೀಮನನ್ನು ಬ್ರೌಪದಿ ಹೇಗೆ ಎಬ್ಬಿಸಿದಳು?

೧೩. ಯಾರಿಗೆ ಷಡ್ರಸಾನ್ನವನಿಕ್ಕಿ ಉಪಯೋಗವಿಲ್ಲ? ಏಕೆ?

೧೪. ಮಾಗುವ ಜೀವದ ವಯಣ ಹೇಗೆ ಸಾಗುತ್ತಿದೆ?

೧೫. ಕವಯಿತ್ರಿ ಮುಗಿಲತ್ತ ಕೈಚಾಚಿ ಏಕೆ ನಿಂತಿದ್ದಾರೆ?

ಆ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ:

3 x 2 = 6

೧೬. ಮಾರ್ಷ್‌ನನ್ನು ಕಂಡು ಅದಿವಾಸಿಗಳು ಹೇಗೆ ಪ್ರತಿಕ್ರಿಯಿಸಿದರು?

೧೭. ವಿ.ಆರ್. ಕೃಷ್ಣಶಾಸ್ತ್ರಿಗಳ ಭಾಷಣ ಓದಿ ಲೇಖಕರಲ್ಲಿ ಮೂಡಿದ ಭಾವನೆಗಳಾವುವು?

೧೯. ನದಿಯ ಒಡಲು ಯಾವಾಗ ಪ್ರಕ್ಷುಬ್ಧವಾಗಿರುತ್ತದೆ?

೧೯. ಮನೋರಮೆ ಕತೆ ಹೇಳೆಂದು ಕೇಳಲು ಕಾರಣವೇನು?

ಇ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

3 x 2 = 6

೨೦. ನಮ್ಮ ಕಡೆ ಕೆಮ್ಮುವುದು ಕಾಲಿಂಗ್ ಬೆಲ್ ಇದ್ದ ಹಾಗೆ ಎಂದು ನಿರೂಪಕರು ಹೇಳುವುದೇಕೆ?

೨೧. ಕೃಷ್ಣೇಗೌಡರ ಆನೆ ಹುಟ್ಟಿ ಬೆಳೆದ ಬಗೆ ಹೇಗೆ?

೨೨. ಸೊರಗಿದ್ದ ಆನೆಯನ್ನು ಕೃಷ್ಣೇಗೌಡ ಹೇಗೆ ಸಾಕಿದ?

೨೩. ನಾಯಿಯನ್ನು ಕೊಲ್ಲದೆ ನೌಕರರು ಸುಳ್ಳು ಹೇಳಿರುವರೆಂದು ನಿರೂಪಕರು ಯಾವ ಸಲಹೆ ನೀಡಿದರು?

ಇ – ವಿಭಾಗ

III. ಅ) ಯಾವುದಾದರೂ ಎರಡು ವಾಕ್ಯಗಳನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 2 x 3 = 6

೨೪. ತಾನೆ ಲಘುಮಾಡಿ ಲಘುವಾದನಯ್ಯ

೨೫. ನೀ ತಂಪ ನನ್ನ ತವರೀಗಿ

೨೬. ಮಾತೇ ಮರೆತು ಹೋಗಿದೆ ಕಣೆ.

ಆ) ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 1 x 3 = 3

೨೭. ಕಾರ್ಮಿಕರು ಕೆಂಪು ಬಾವುಟ ಹಿಡಿದು ಹೋರಾಟಕ್ಕೆ ಸಜ್ಜಾಗಿದ್ದಾರೆ.

೨೮. ಅನಕ್ಷರಸ್ಪರ ಪಾರ್ಲಿಮೆಂಟು.

ಇ) ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 1 x 3 = 3

೨೯. ಕೃಷ್ಣೇಗೌಡರ ಅನೆಗೂ ಕಚ್ಚಿದೆ ಅಂತ ವರ್ತಮಾನ ಉಂಟಪ್ಪ.

೩೦. ‘ಆನೆ ಬೇಲಿ ದಾಟಿ ಹೋಯ್ತು ಸಾರ್.’

ಈ – ವಿಭಾಗ

IV. ಅ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ:

3 x 4 = 12̳

೩೧. ದ್ರೌಪದಿ ಅವಮಾನಕ್ಕೊಳಗಾದ ಮೂರು ಪ್ರಸಂಗಗಳನ್ನು ವಿವರಿಸಿರಿ.

೩೨. ವೀರ, ಮಂತ್ರಿ, ರಾಜ ಮತ್ತು ಯೋಗಿಗಳಿಗೆ ಇರಬೇಕಾದ ಅರ್ಹತೆಗಳೇನು?

೩೩. ನಗರ ಜೀವನದ ಯಾಂತ್ರಿಕ ವಿವರಗಳು ಕವಿತೆಯಲ್ಲಿ ಹೇಗೆ ಚಿತ್ರಿತಗೊಂಡಿವೆ? ವಿವರಿಸಿ.

೩೪. ಯಾವ ಸ್ಥಳಗಳಲ್ಲಿ ಜೀಸಸ್‌ ದಿನನಿತ್ಯ ಶಿಲುಬೆ ಏರಿದ್ದಾನೆ? ಚರ್ಚಿಸಿ.

ಆ) ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ: 2 x 4 = 8

೩೫. ಬಸಲಿಂಗನಿಗೆ ಸಿಟ್ಟು ಬರಲು ಕಾರಣವೇನು? ಅದನ್ನು ಆತ ಯಾವ ರೀತಿಯಲ್ಲಿ ವ್ಯಕ್ತಪಡಿಸುತ್ತಾನೆ?

೩೬. ಬದುಕಿನಲ್ಲಿ ಆಯ್ಕೆಗಳು ಮುಖ್ಯ ಎಂಬುದನ್ನು ಲೇಖಕಿ ಹೇಗೆ ನಿರೂಪಿಸಿದ್ದಾರೆ?

೩೭. ರಾಷ್ಟ್ರಪತಿಯಾಗಿ ಆಯ್ಕೆಯಾದಾಗ ಚೆನ್ನೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಲಾಂ ಹೇಳಿದ್ದೇನು? ವಿವರಿಸಿ.

ಇ) ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ: 2 x 4 = 8

೩೮. ದುರ್ಗಪ್ಪ ನಿರೂಪಕರ ಬಳಿಗೆ ಬಂದ ಸಂದರ್ಭವನ್ನು ವಿವರಿಸಿ.

೩೯. ಪುಟ್ಟಯ್ಯ ತನ್ನ ಅಸಹಾಯಕತೆಯನ್ನು ಹೇಗೆ ವಿವರಿಸುತ್ತಾನೆ?

೪೦. ಟೆಲಿಫೋನ್ ಲೈನ್‌ಮನ್ ತಿಪ್ಪಣ್ಣನ ಸಾವಿನ ಸಂದರ್ಭವನ್ನು ವಿವರಿಸಿ.

ಉ – ವಿಭಾಗ

V. ಯಾವುದಾದರೂ ಒಂದು ಪದ್ಯದ ಭಾವಾರ್ಥವನ್ನು ಬರೆಯಿರಿ: 1 x 5 = 5

೪೧. ಕರುಣಿಸುವೊಡೆನಗೆ ದಶಕಂ

ಧರ ಧುರದೊಳ್ ರಘುತನೂಜನಾಯು:ಪ್ರಾಣಂ

ಬರೆಗಂ ಬಾರದಿರೆನುತುಂ

ಧರಿತ್ರಿಯೊಳ್ ಮೈಯನೊಕ್ಕು ಮೂರ್ಛೆಗೆ ಸಂದಳ್

೪೨. ಯಾವಾಗೊ ಕೋಳಿ ಕೂಗಿಹುದು ಏಳಿ, ತಡವೇಕೆ ಪಾನಕೇಳಿ

ಮೊದಲಾಗಲೀಗ, ಅಂಗಡಿಯ ಕದವ ಈ ಕ್ಷಣಕೆ ತೆರೆಯ ಹೇಳಿ

ಜೀವನದ ನದಿಗೆ ಸೆಳವಿಹುದು, ಮರಣ ಬಂದೀತು ಕ್ಷಣವು ಉರುಳಿ

ಹೋದವರು ತಿರಗಿ ಬಂದಾರೆ, ಅವರು ಬರಲಿಕ್ಕು ಇಲ್ಲ ಮರಳಿ.

ಭಾಷಾಭ್ಯಾಸ

VI. ಅ) ಕೆಳಗಿನ ಪ್ರಶ್ನೆಗಳಲ್ಲಿ ಯಾವುದಾದರೂ ಆರಕ್ಕೆ ಸೂಚನೆಗೆ ಅನುಗುಣವಾಗಿ ಉತ್ತರಿಸಿರಿ: 6 × 2 = 12

೪೩. ಈ ಪದಗಳಿಗೆ ಅರ್ಥ ಬರೆಯಿರಿ: ಕೃತಾಂತ, ಕಡುಪುಂ.

೪೪. ಈ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ: ಕಲಹ, ಖತಿ

೪೫. ಈ ಪದಗಳಿಗೆ ಗುಣವಾಚಕಗಳನ್ನು ಬರೆಯಿರಿ: ಹಿತವಚನ, ಬೆಳ್ಳಿಲೋಟ.

೪೬. ಇವುಗಳ ವಿಭಕ್ತಿಯ ಹೆಸರನ್ನು ಬರೆಯಿರಿ: ಬಿಸಿಲಲ್ಲಿ, ಗುರುವಿಗೆ.

೪೭. ಈ ಪದಗಳಿಗೆ ತದ್ಭವ ರೂಪ ಬರೆಯಿರಿ: ಐಶ್ವರ್ಯ, ಸ್ವರ್ಗ,

೪೮. ಈ ಕೆಳಗಿನ ಕ್ರಿಯಾಪದಗಳ ‘ಧಾತು’ ಗುರುತಿಸಿ: ಓದುವನು, ಹೋದರು.

೪೯. ಇವುಗಳನ್ನು ನಿಷೇಧ ರೂಪದಲ್ಲಿ ಬರೆಯಿರಿ: ಹಾಡುವನು, ಬರುವುದು.

ಆ) ಯಾವುದಾದರೂ ಒಂದನ್ನು ಕುರಿತು ಪ್ರಬಂಧವನ್ನು ಬರೆಯಿರಿ: 1 x 5 = 5

೫೦. ಮೂಢನಂಬಿಕೆಗಳು,

೫೧. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ.

ಇ) ಯಾವುದಾದರೂ ಒಂದನ್ನು ಕುರಿತು ಪತ್ರ ಬರೆಯಿರಿ: 1 x 4 = 4

೫೨. ಶೈಕ್ಷಣಿಕ ಪ್ರವಾಸಕ್ಕೆ ಹೋಗಲು ಅನುಮತಿ ಕೋರಿ ನಿಮ್ಮ ತಂದೆಗೊಂದು ಪತ್ರ ಬರೆಯಿರಿ.

೫೩. ಅಂಕಪಟ್ಟಿ ಮತ್ತು ವರ್ಗಾವಣೆ ಪತ್ರ ನೀಡುವಂತೆ ಕೋರಿ ಪ್ರಾಂಶುಪಾಲರಿಗೆ ಪತ್ರ ಬರೆಯಿರಿ.

ಈ) ಈ ಕೆಳಗಿನ ಗಾದೆಗಳಲ್ಲಿ ಒಂದನ್ನು ವಿಸ್ತರಿಸಿ ಬರೆಯಿರಿ: 1 x 4 = 4

೫೪. ಹಾಸಿಗೆ ಇದ್ದಷ್ಟು ಕಾಲು ಚಾಚು.

೫೫. ದೇಶ ಸುತ್ತಬೇಕು, ಕೋಶ ಓದಬೇಕು.

Leave a Comment