ದ್ವಿತೀಯ ಪಿಯುಸಿ ಕನ್ನಡ ಹಿಂದಿನ ಪ್ರಶ್ನೆಪತ್ರಿಕೆ 2019, 2nd Puc Kannada Previous Question Paper 2019 2nd Puc Question Papers Karnataka, 2nd Puc Previous Question Paper 2019 pdf Kannada, 2nd Puc Supplementary Exam Papers, 2nd Puc Previous Year Question Papers, 2nd Puc Model Question Paper pdf, 2019 2nd Puc All Subject Question Paper ದ್ವಿತೀಯ ಪಿಯುಸಿ ಕನ್ನಡ ಮಾದರಿ ಪ್ರಶ್ನೆ ಪತ್ರಿಕೆಗಳು 2nd Puc ಮಾದರಿ ಪ್ರಶ್ನೆ ಪತ್ರಿಕೆಗಳು 2019 2nd puc last 5 years question papers pdf download last 5 years 12th board papers karnataka state board

ಮಾರ್ಚ್ 2019
ಅವಧಿ: 3-15 ಗಂಟೆ ಗರಿಷ್ಠ ಅಂಕ: 100
ಅ – ವಿಭಾಗ
I. ಈ ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ಒಂದೊಂದು ಪೂರ್ಣ ವಾಕ್ಯದಲ್ಲಿ ಉತ್ತರಿಸಿ:
10 x 1 = 10
೧. ರಾವಣನಿಗೆ ಯಾರ ಬಗ್ಗೆ ವೈರಾಗ್ಯ ಮೂಡಿತು?
೨. ಹಗೆಯನ್ನು ಏನೆಂದು ಉಪೇಕ್ಷಿಸಬಾರದೆಂದು ಸೋಮನಾಥನು ಹೇಳಿದ್ದಾನೆ?
೩. ‘ಮುಂಬೈ ಜಾತಕ’ದಲ್ಲಿ ಮಗು ತಾನಾಗಿ ಕಲಿತದ್ದು ಏನನ್ನು?
೪. ಎಣ್ಣೆಯಲ್ಲಿ ನೆನೆದ ಬತ್ತಿ ಹೇಗೆ ಕಾಣುತ್ತದೆ?
೫. ಅದೃಷ್ಟದ ಪ್ರಶ್ನೆ ಬಂದಾಗ ನೇಮಿಚಂದ್ರರಿಗೆ ಯಾರ ನೆನಪಾಗುತ್ತದೆ?
೬. ಕಲಾಂ ಅವರ ಕ್ರಿಯಾಶೀಲತೆಗೆ ಸಾಕ್ಷಿಯಾವುದು?
೭. ಯಾವ ಕತೆ ಹೇಳಬೇಕೆಂದು ಮನೋರಮೆ ಕೇಳಿದಳು?
೮. ಕೃಷ್ಣೇಗೌಡರ ಆನೆ ಮೊದಲು ಯಾವ ಮಠದಲ್ಲಿತ್ತು?
೯. ಜಬ್ಬಾರ್ ವೆಟರ್ನರಿ ಆಸ್ಪತ್ರೆಗೆ ಬರಲು ಕಾರಣವೇನು?
೧೦. ಆನೆಶಾಸ್ತ್ರದವನು ಏನೆಂದು ಭವಿಷ್ಯ ನುಡಿದಿದ್ದನು?
ಆ – ವಿಭಾಗ
II. ಅ) ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
4 x 2 = 8
೧೧. ಶಿವಪಥವನ್ನರಿಯದವನನ್ನು ಬಸವಣ್ಣನವರು ಹೇಗೆ ವಿಡಂಬಿಸಿದ್ದಾರೆ?
೧೨. ತಾನು ಘೋರತರ ವಿಷ ಕುಡಿಯುವುದಾಗಿ ದ್ರೌಪದಿ ಏಕೆ ಹೇಳುತ್ತಾಳೆ?
೧೩. ಶುಚಿ ಮತ್ತು ಸ್ವಾದಗಳನ್ನು ಕುರಿತು ಸೋಮನಾಥನ ಅಭಿಪ್ರಾಯವೇನು?
೧೩. ಮುಂಬೈನ ಅವಸರದ ಜೀವನಚಿತ್ರಕ್ಕೆ ಎರಡು ಉದಾಹರಣೆ ನೀಡಿ.
೧೫. ಆತ್ಮಕ್ಕೆ ಕಮಟು ಹತ್ತುವುದು ಎಂದರೇನು?
ಆ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ:
3 x 2 = 6
೧೬. ಕೊನೆಯಲ್ಲಿ ಬಸಲಿಂಗನಿಗೆ ಏನೆಂದು ನಿಶ್ಚಿತವಾಗತೊಡಗಿತ್ತು?
೧೭. ಮುದ್ದೇಗೌಡರು ಪಥ್ಯದ ವಿಚಾರವಾಗಿ ಹೊಂದಿದ್ದ ನಿಲುವು ಯಾವುದು?
೧೮. ಕಲಾಂ ಮೇಷ್ಟ್ರು ಹೇಳಿದ ಯಶಸ್ಸಿನ ಪಂಚಾಕ್ಷರಿ ಮಂತ್ರ ಯಾವುದು?
೧೯. ವೀರೇಂದ್ರ ಸಿಂಪಿ ಹೇಳುವಂತೆ ಭಾವೈಕ್ಯತೆ ಈ ದೇಶದಲ್ಲಿ ಎಲ್ಲಿದೆ? ಆದು ಹೇಗೆ?
ಇ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
3 x 2 = 6
೨೦. ದುರ್ಗಪ್ಪ ಏಕೆ ಬಂದಿರಬಹುದೆಂದು ನಿರೂಪಕರು ಯೋಚಿಸಿದರು?
೨೧. ಸೊರಗಿದ್ದ ಆನೆಯನ್ನು ಕೃಷ್ಣೇಗೌಡ ಹೇಗೆ ಸಾಕಿದ?
೨೨. ಹುಚ್ಚುನಾಯಿಗಳು ಆಸ್ಪತ್ರೆಯಲ್ಲಿ ಹೇಗೆ ವರ್ತಿಸುತ್ತವೆಂದು ಪುಟ್ಟಯ್ಯ ಹೇಳಿದನು?
೨೩. ಆನೆಯನ್ನು ಹದ್ದುಬಸ್ತಿನಲ್ಲಿಡುವುದರ ಬಗ್ಗೆ ವೇಲಾಯುಧನ ಅಪ್ಪ ಏನು ತಿಳಿಸಿದ್ದ?
ಇ – ವಿಭಾಗ
III. ಅ) ಯಾವುದಾದರೂ ಎರಡು ವಾಕ್ಯಗಳನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 2 x 3 = 6
೨೪. ತಾನೆ ಲಘುಮಾಡಿ ಲಘುವಾದನಯ್ಯ,
೨೫. ಕುಸುಮ ವಾಸನೆಯಿಲ್ಲ ಕೂಡಲು ಸ್ಥಳವಿಲ್ಲ.
೨೬. ಇನ್ನೊಂದು ಸೇರ್ಪಡೆ ಆ ಲೀಲಾಮಾತ್ರನಿಗೆ.
ಆ) ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 1 x 3 = 3
೨೭. ನೀರು ಬಿದ್ದರೆ ಕಣ್ಣು ಕಟ್ಟು ಹೋಗುವ ಅಪಾಯ ಇದೆ.
೨೮. ಕನ್ನಡಂ ಕತ್ತುರಿಯಲ್ತೆ.
ಇ) ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 1 x 3 = 3
೨೯. ನಮ್ಮ ಕಡೆ ಕೆಮ್ಮು ಕಾಲಿಂಗ್ ಬೆಲ್ ಇದ್ದಹಾಗೆ,
೩೦. ಕೋವಿ ಸಿಕ್ಕಿದೆ. ಆದರೆ ಹೆಣ ಸಿಗಲಿಲ್ಲ.
V. ಅ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ:
3 x 4 = 12
೩೧. ದ್ರೌಪದಿ ಅವಮಾನಕ್ಕೊಳಗಾದ ಮೂರು ಪ್ರಸಂಗಗಳನ್ನು ವಿವರಿಸಿ.
೩೨. ಗರತಿಯು ತವರಿಗೆ ಏನೆಂದು ಹರಸುತ್ತಾಳೆ?
೩೩. ಯಾವ ಸ್ಥಳಗಳಲ್ಲಿ ಜೀಸಸ್ ದಿನನಿತ್ಯ ಶಿಲುಬೆ ಏರಿದ್ದಾನೆ? ಚರ್ಚಿಸಿರಿ.
೩೪. ‘ಒಮ್ಮೆನಗುತ್ತೇವೆ’ ಎಂಬ ಕವಿತೆಯಲ್ಲಿ ವ್ಯಕ್ತವಾಗುವ ನಗುವಿನ ವೈಶಿಷ್ಟ್ಯ ವಿವರಿಸಿ.
ಆ) ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ: 2 x 4 = 8
೩೫. ಸಿಂಹಬಾಲದ ಕೋತಿಗಳು ಮತ್ತು ಹಾಡುಹಕ್ಕಿಗಳಿಗಾದ ಅನಾನುಕೂಲಗಳಾವುವು?
೩೬. ಕೇಂದ್ರ ಸರ್ಕಾರದ ಕಛೇರಿಗಳಲ್ಲಿ ಕನ್ನಡತನವಿಲ್ಲದಿರುವ ಬಗ್ಗೆ ಹಾಮಾನಾ ಹೇಗೆ ಟೀಕಿಸಿದ್ದಾರೆ?
೩೭. ಚಿನ್ನಮ್ಮ ಬೆಳ್ಳಿಲೋಟವನ್ನು ಮತ್ತೆ ಹೊಳೆಗೆ ಎಸೆಯಲು ಕಾರಣವೇನು? ವಿಶ್ಲೇಷಿಸಿ.
ಇ) ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ: 2 x 4 = 8
೩೮. ಆನೆ ಮತ್ತು ಮಾವುತ ವೇಲಾಯುಧನನ್ನು ಸಾಗಹಾಕಲು ಮಠದವರು ಹವಣಿಸಿದ್ದೇಕೆ?
೩೯. ದುರ್ಗಪ್ಪನಿಗೆ ಲೈನ್‌ಮನ್ ಕೆಲಸ ರೋಸಿ ಹೋಗಲು ಕಾರಣವೇನು?
೪೦. ಡ್ರೈವರ್ ಅಬ್ಬಾಸ್ ಮತ್ತು ಕ್ಲೀನರ್ ಕೃಷ್ಣರ ಸಾವಿಗೆ ಕೃಷ್ಣೇಗೌಡರ ಆನೆ ಕಾರಣವೆ? ವಿವರಿಸಿ.
ಉ – ವಿಭಾಗ
೪೧. ಕರುಣಿಸುವೊಡೆನಗೆ ದಶಕಂ
ಧರ ಧುರದೊಳ್ ರಘೂತನೂಜನಾಯು: ಪ್ರಾಣಂ
ಬರೆಗಂ ಬಾರದಿರೆನುತುಂ
ಧರಿತ್ರಿಯೊಳ್ ಮೈಯನೊಕ್ಕು ಮೂರ್ಛೆಗೆ ಸಂದಳ್
೪೨. ಏಳು ಚಿನ್ನ, ಬೆಳಗಾಯ್ತು ಅಣ್ಣ, ಮೂಡಲವು ತೆರೆಯೆ ಕಣ್ಣ
ನಕ್ಷತ್ರ ಜಾರಿ, ತಮವೆಲ್ಲ ಸೋರಿ, ಮಿಗಿಲಹುದು ಬಾನ ಬಣ್ಣ
ಜೇನ್ನೊಣದ ಹೆದೆಗೆ, ಹೂಬಾಣ ಹೂಡಿ, ಝಂ ಎಂದು ಬಿಟ್ಟ ಮಾರ
ಗುಡಿಗೋಪುರಕ್ಕು, ಬಲೆ ಬೀಸಿ ಬಂದ, ಅಗೊ ಬೆಳಕು-ಬೇಟೆಗಾರ.
ಭಾಷಾಭ್ಯಾಸ
VI. ಅ) ಕೆಳಗಿನ ಪ್ರಶ್ನೆಗಳಲ್ಲಿ ಯಾವುದಾದರೂ ಅರಕ್ಕೆ ಸೂಚನೆಗೆ ಅನುಗುಣವಾಗಿ ಉತ್ತರಿಸಿರಿ: 6 x 2 = 12
೪೩. ಈ ಪದಗಳ ಅರ್ಥ ಬರೆಯಿರಿ: ಪುಳಕ, ಹಾಸುಗಂಬಿ.
೪೪. ಈ ಪದಗಳಿಗೆ ನಾನಾರ್ಥ ಬರೆಯಿರಿ: ಹದ್ದು, ಕವಿ.
೪೫. ಈ ಪದಗಳಲ್ಲಿನ ಗುಣವಾಚಕಗಳನ್ನು ಬರೆಯಿರಿ: ಹುಸಿನಿದ್ದೆ, ಬೆಳ್ಳಿಲೋಟ
೪೬. ಈ ಪದಗಳ ವಿಭಕ್ತಿಯನ್ನು ಬರೆಯಿರಿ: ಗದ್ಯದೊಳ್, ಯಮಸುತಂಗೆ
೪೭. ಈ ಕ್ರಿಯಾಪದಗಳ ‘ಧಾತು’ ಬರೆಯಿರಿ: ಕಂಡರು, ಹೇಳಿದಾಗ
೪೮. ಈ ಕ್ರಿಯಾಪದಗಳನ್ನು ನಿಷೇಧಾರ್ಥಕ ರೂಪದಲ್ಲಿ ಬರೆಯಿರಿ: ನೋಡುವಳು, ಆಡಿದರು.
೪೯. ಈ ನುಡಿಗಟ್ಟುಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ: ದಾರಿದೀಪ, ತಲೆದೂಗು.
ಆ) ಯಾವುದಾದರೂ ಒಂದನ್ನು ಕುರಿತು ಪ್ರಬಂಧವನ್ನು ಬರೆಯಿರಿ: 1 x 5 = 5
೫೦. ಮಾತೃಭಾಷೆಯಲ್ಲಿ ಶಿಕ್ಷಣ.
೫೧. ಮತದಾನದ ಮಹತ್ವ,
ಇ) ಯಾವುದಾದರೂ ಒಂದನ್ನು ಕುರಿತು ಪತ್ರ ಬರೆಯಿರಿ: 1 × 4 = 4
೫೨. ನಿಮ್ಮೂರ ಜಾತ್ರೆಗೆ ಆಹ್ವಾನಿಸಿ ಸ್ನೇಹಿತರಿಗೊಂದು ಪತ್ರ ಬರೆಯಿರಿ.
೫೩. ಸೂಕ್ತ ಬಸ್ ಸಂಪರ್ಕ ವ್ಯವಸ್ಥೆ ಕುರಿತು ಇಲಾಖಾ ಮುಖ್ಯಸ್ಥರಿಗೆ ಪತ್ರ ಬರೆಯಿರಿ.
ಈ) ಈ ಕೆಳಗಿನ ಗಾದೆಗಳಲ್ಲಿ ಒಂದನ್ನು ವಿಸ್ತರಿಸಿ ಬರೆಯಿರಿ: 1 × 4 = 4
೫೪. ಹಣಕ್ಕಿಂತ ಗುಣ ಮುಖ್ಯ
೫೫. ಬುದ್ದಿವಂತ ಬರೀತಾನೆ, ವಿವೇಕಿ ಆರಿತಾನೆ.
*******************************
ಜೂನ್ 2019
ಅವಧಿ: 3 – 15 ಗಂಟೆ ಗರಿಷ್ಠ ಅಂಕಗಳು: 100
ಅ – ವಿಭಾಗ
I. ಈ ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ಒಂದೊಂದು ಪೂರ್ಣ ವಾಕ್ಯದಲ್ಲಿ ಉತ್ತರಿಸಿ:
10 x 1 = 10
೧. ರಾವಣನ ಎದುರು ಪ್ರತ್ಯಕ್ಷವಾದ ವಿದ್ಯಾದೇವತೆ ಯಾರು?
೨. ಶ್ರೀಗುರು ಹೇಗೆ ವರ್ತಿಸಬಾರದು?
೩. ಹೆಣ್ಣುಮಕ್ಕಳ ದುಃಖವನ್ನು ಬಲ್ಲವರು ಯಾರು?
೪. ಯಾರ ಕಂಬನಿಯನ್ನೊರಸಿ ಜೀಸಸ್ ದಿನನಿತ್ಯ ಶಿಲುಬೆ ಏರಿದ್ದಾನೆ?
೫. ಸರ್ಕಾರಿ ಆಸ್ಪತ್ರೆಯ ಬಗ್ಗೆ ಬಸಲಿಂಗನಲ್ಲಿದ್ದ ಅಭಿಪ್ರಾಯವೇನು?
೬. ಅದೃಷ್ಟದ ಆಯ್ಕೆ ಬಂದಾಗ ಲೇಖಕಿಗೆ ಯಾರು ಜ್ಞಾಪಕಕ್ಕೆ ಬರುತ್ತಾರೆ?
೭. ಅಬ್ದುಲ್ ಕಲಾಂ ಅವರ ಆತ್ಮಚರಿತ್ರೆಯ ಹೆಸರೇನು?
೮. ಮಕ್ಕಳು ಆನೆಯನ್ನು ಯಾವ ಹೆಸರಿನಿಂದ ಕೂಗುತ್ತಿದ್ದರು?
೯. ಟೆಲಿಫೋನ್ ಕಂಬದ ಮೇಲೆ ಮೃತನಾದ ಲೈನ್‌ಮನ್ ಯಾರು?
೧೦. ಪೊಲೀಸರು ಏನೆಂದು ಮಹಜರು ಬರೆದುಕೊಂಡರು?
ಅ – ವಿಭಾಗ
II. ಆ) ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
4 x 2 = 8
೧೧. ರಾವಣನು ಅಂತಿಮವಾಗಿ ಯಾವ ನಿರ್ಧಾರಕ್ಕೆ ಬರುತ್ತಾನೆ?
೧೨. ಹಡೆದವ್ವನನ್ನು ಯಾವಾಗ ನೆನೆಯಬೇಕೆಂದು ಜಾನಪದ ಕವಿ ಹೇಳುತ್ತಾನೆ?
೧೩. ಶಿಲುಬೆಗೇರಿಸಿದವರ ಗುಣಗಳು ಇಂದು ಯಾವ ವೇಷ ತಾಳಿವೆ?
೧೪. ಮಾಗುವ ಜೀವದ ಪಯಣ ಹೇಗೆ ಸಾಗುತ್ತಿದೆ?
೧೫. ಕವಯಿತ್ರಿ ನಗುವ ನಗು ಎಂತಹದು?
ಆ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
3 x 2 = 6
೧೬. ಪ್ಲೇವಿಯಾ ಬದುಕಿನಲ್ಲಿ ಆಯ್ಕೆ ಮಾಡಿಕೊಂಡ ದಾರಿ ಯಾವುದು?
೧೭. ಕನ್ನಡದ ಸಮಸ್ಯೆಗಳು ಎಲ್ಲಿಯವರೆಗೂ ಇದ್ದೇ ಇರುತ್ತವೆ?
೧೮. ಕಲಾಂ ಅವರ ಬದುಕಿನ ಮಂತ್ರ ಯಾವುದು?
೧೯. ‘ನೀರಿಳಿಯದ ಗಂಟಲಲ್ಲಿ ಕಡುಬನ್ನು ತುರುಕಿದಂತಾಯ್ತು’ ಎಂದು ಮನೋರಮೆ ಏಕೆ ಹೇಳಿದಳು?
ಇ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
3 x 2 = 6
೨೦. ಆನೆ ಸಾಕುವುದರ ಬಗ್ಗೆ ಜನರ ನಂಬಿಕೆ ಏನಾಗಿತ್ತು?
೨೧. ಫಾರೆಸ್ಟ್ ಡಿಪಾರ್ಟ್ ಮೆಂಟ್‌ನವರ ನಂಬರ್ ಒನ್ ಎನಿಮಿಗಳು ಯಾರು ಯಾರೆಂದು ನಾಗರಾಜ ಹೇಳುತ್ತಾನೆ?
೨೨. ನಾಯಿಯನ್ನು ಕೊಲ್ಲದೆ ನೌಕರರು ಸುಳ್ಳು ಹೇಳಿರುವರೆಂದು ನಿರೂಪಕರು ಯಾವ ಸಲಹೆ ನೀಡಿದರು?
೨೩. ಆನೆಯನ್ನು ಹದ್ದುಬಸ್ತಿನಲ್ಲಿಡುವುದರ ಬಗ್ಗೆ ವೇಲಾಯುಧನ ಅಪ್ಪ ಏನು ತಿಳಿಸಿದ್ದ?
ಇ – ವಿಭಾಗ
III. ಆ) ಯಾವುದಾದರೂ ಎರಡು ವಾಕ್ಯಗಳನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 2 x 3 = 6
೨೪. ಯಮಸುತಂಗರುಹುವೆನ ಧರ್ಮಕ್ಷಮೆಯ ಗರಹೊಡೆದಿಹುದು.
೨೫. ಬಲೆ ಬೀಸಿ ಬಂದ, ಅಗೋ ಬೆಳಕು – ಬೇಟೆಗಾರ
೨೬. ರಸ್ತೆಯಂಚಿನಲ್ಲೇ ಕೈಹಿಡಿದು ನಡೆಸಿದವಳು.
ಆ) ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 1 x 3 = 3
೨೭. ಹಾಡುವುದು ಅವುಗಳಿಗೆ ಅನಿವಾರ್ಯ, ಅವುಗಳ ಕರ್ಮ!
೨೮. ನಮ್ಮ ಭಾಷೆಯಲ್ಲಿ ಓದಿದ್ದೆ ಮೈಗೆ ಹತ್ತುವುದು.
ಇ) ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 1 × 3 = 3
೨೯. ಆನೆಗೂ ಮಾನ ಮರ್ಯಾದೆ ಇರುತ್ತೆ ತಿಳಿಕೋ.
೩೦. ಆನೆ ಬೇಲಿ ದಾಟಿ ಹೋಯ್ತು ಸಾರ್.
ಈ – ವಿಭಾಗ
IV. ಅ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ:
3 x 4 = 12
೩೧. ರಕ್ಷಿಸಬೇಕಾದವರೆ ಭಕ್ಷಕರಾದರೆ ಒದಗುವ ವಿಘಟನೆಯನ್ನು ಬಸವಣ್ಣನವರು ಹೇಗೆ ಚಿತ್ರಿಸಿದ್ದಾರೆ?
೩೨. ದ್ರೌಪದಿ ಅವಮಾನಕ್ಕೊಳಗಾದ ಮೂರು ಪ್ರಸಂಗಗಳನ್ನು ವಿವರಿಸಿ.
೩೩. ಸಮಾಜಕಂಟಕರ ಬಗೆಗೆ ಪುರಂದರದಾಸರ ಅಭಿಪ್ರಾಯಗಳನ್ನು ಸಂಗ್ರಹಿಸಿ ಬರೆಯಿರಿ.
೩೪. ‘ಒಂದು ಹೂ ಹೆಚ್ಚಿಗೆ ಇಡುತೀನಿ’ ಕವನದಲ್ಲಿ ವೃದ್ಧರ ತವಕ ತಲ್ಲಣಗಳನ್ನು ಕವಯಿತ್ರಿ ಹೇಗೆ ಚಿತ್ರಿಸಿದ್ದಾರೆ?
ಆ) ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ: 2 x 4 = 8
೩೫. ಬಸವಲಿಂಗ ಡಾ. ತಿಮ್ಮಪ್ಪನವರ ಸೂಚನೆಗಳನ್ನು ಪಾಲಿಸದೆ ಇರಲು ಕಾರಣವೇನು?
೩೬. ಧಣಿ ಹಾಗೂ ಹೊಳೆಯ ನಡುವಿನ ಸಮರವನ್ನು ಚಿತ್ರಿಸಿ.
೩೭. ಲೇಖಕರ ಅಭಿಪ್ರಾಯದಂತೆ ಪಟ್ಟಣದ ಹೊಟೇಲುಗಳು ಹೇಗಿರುತ್ತವೆ?
ಇ) ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ: 2 x 4 = 8
೩೮. ನಿರೂಪಕರು ಕೊಡಲಿ ವಸೂಲಿ ಮಾಡಲು ಹೋಗಲಿಲ್ಲವೇಕೆ? ವಿವರಿಸಿರಿ.
೩೯. ನಿದ್ರೆ ಮಂಪರಿನಲ್ಲಿದ್ದ ಡ್ರೈವರ್ ಪರಂಧಾಮಕ್ಕೆ ಹೋದ ಸಂದರ್ಭವನ್ನು ವಿವರಿಸಿ,
೪೦. ತನ್ನ ಆನೆಯ ಬಗ್ಗೆ ಕೃಷ್ಣಗೌಡರಲ್ಲಿ ಬೇಸರ ಮೂಡಲು ಕಾರಣಗಳೇನು?
ಉ – ವಿಭಾಗ
V. ‘ಯಾವುದಾದರೂ ಒಂದು ಪದ್ಯದ ಭಾವಾರ್ಥವನ್ನು ಬರೆಯಿರಿ: 1 x 5 = 5
೪೧. ಕದಡಿದ ಸಲಿಲಂ ತಿಳಿವಂ
ದದೆ ತನ್ನಿಂ ತಾನೆ ತಿಳಿದ ದಶವದನಂಗಾ
ದುದು ವೈರಾಗ್ಯಂ ಸೀತೆಯೊ
ಳುದಾತ್ತನೊಳ್ ಪುಟ್ಟದಲ್ಲೆ ನೀಲೀರಾಗಂ
೪೨. ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ।
ಕೆಲವಂ ಮಾಳ್ವವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತಂ।।
ಕೆಲವಂ ಸಜ್ಜನ ಸಂಘದಿಂದಲರಿಯಲ್ ಸರ್ವಜ್ಞನಪ್ಪಂ ನರಂ ।
ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀಚೆನ್ನಸೋಮೇಶ್ವರಾ ।।
ಭಾಷಾಭ್ಯಾಸ
VI. ಅ) ಕೆಳಗಿನ ಪ್ರಶ್ನೆಗಳಲ್ಲಿ ಯಾವುದಾದರೂ ಅರಕ್ಕೆ ಸೂಚನೆಗೆ ಅನುಗುಣವಾಗಿ ಉತ್ತರಿಸಿರಿ: 6 x 2 = 12
೪೩. ಈ ಪದಗಳ ಅರ್ಥ ಬರೆಯಿರಿ: 1) ಧರಿತ್ರಿ 2) ಸಲಿಲ.
೪೪. ಈ ವದಗಳಿಗೆ ನಾನಾರ್ಥ ಬರೆಯಿರಿ: 1) ತೊರೆ, 2) ಬಟ್ಟೆ
೪೫. ಈ ಪದಗಳಲ್ಲಿನ ಗುಣವಾಚಕಗಳನ್ನು ಬರೆಯಿರಿ: 1) ಮುಗ್ಧಜೀವಿ, 2) ಕಿರುಹಾದಿ,
೪೬. ಈ ಪದಗಳ ವಿಭಕ್ತಿಯನ್ನು ಬರೆಯಿರಿ: 1) ರಾಮನ, 2) ಗದ್ಯದೊಳ್.
೪೭. ಈ ಪದಗಳ ತತ್ಸಮ/ತದ್ಭವ ರೂಪವನ್ನು ಬರೆಯಿರಿ: 1) ಪ್ರಾಣ, 2) ದೃಷ್ಟಿ.
೪೮. ಈ ಕ್ರಿಯಾಪದಗಳ ಧಾತುಗಳನ್ನು ಬರೆಯಿರಿ: 1) ನುಡಿಸುವರು, 2) ನಿಂತರು.
೪೯. ಈ ಪದಗಳ ಕಾಲವನ್ನು ಬರೆಯಿರಿ: 1) ಹೋದರು, 2) ಕೇಳುವನು.
ಆ) ಯಾವುದಾದರೂ ಒಂದನ್ನು ಕುರಿತು ಪ್ರಬಂಧವನ್ನು ಬರೆಯಿರಿ: 1x 5 = 5
೫೦. ಸ್ತ್ರೀಭ್ರೂಣಹತ್ಯೆ
೫೧. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ.
ಇ) ಯಾವುದಾದರೂ ಒಂದನ್ನು ಕುರಿತು ಪತ್ರ ಬರೆಯಿರಿ: 1 x 4 = 4
೫೨. ಪರೀಕ್ಷಾ ಸಿದ್ಧತೆಯನ್ನು ಕುರಿತು ನಿಮ್ಮ ತಂದೆಗೆ ಪತ್ರ ಬರೆಯಿರಿ.
೫೩. ವರ್ಗಾವಣೆ ಪ್ರಮಾಣಪತ್ರ ಕೋರಿ ಕಾಲೇಜಿನ ಪ್ರಾಚಾರ್ಯರಿಗೆ ಪತ್ರ ಬರೆಯಿರಿ.
ಈ) ಈ ಕೆಳಗಿನ ಗಾದೆಗಳಲ್ಲಿ ಒಂದನ್ನು ವಿಸ್ತರಿಸಿ ಬರೆಯಿರಿ: 1 x 4 = 4
೫೪. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ
೫೫. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು.









