ದ್ವಿತೀಯ ಪಿ.ಯು.ಸಿ ರಾಜ್ಯಶಾಸ್ತ್ರ ಅಧ್ಯಾಯ-4 ಸಾಮಾಜಿಕ ಚಳುವಳಿಗಳು ಮತ್ತು ಅವುಗಳ ರಾಜಕೀಯ ಪರಿಣಾಮಗಳು ನೋಟ್ಸ್‌|2nd Puc Political Science Chapter 4 Notes Question Answer

ದ್ವಿತೀಯ ಪಿ.ಯು.ಸಿ ರಾಜ್ಯಶಾಸ್ತ್ರ ಅಧ್ಯಾಯ-4 ಸಾಮಾಜಿಕ ಚಳುವಳಿಗಳು ಮತ್ತು ಅವುಗಳ ರಾಜಕೀಯ ಪರಿಣಾಮಗಳು ನೋಟ್ಸ್‌ ಪ್ರಶ್ನೋತ್ತರಗಳು, 2nd Puc Political Science Chapter 4 Samajika Chaluvaligalu Mattu Avugala Rajakiya Parinamagalu Notes Question Answer Guide Extract Mcq Pdf Download in Kannada Medium Karnataka State Syllabus, Samajika Chaluvaligalu Mattu Avugala Rajakiya Parinamagalu 2nd puc political science chapter 4 question answer in kannada part ಸಾಮಾಜಿಕ ಚಳುವಳಿಗಳು ಮತ್ತು ಅವುಗಳ ರಾಜಕೀಯ ಪರಿಣಾಮಗಳು Notes 2nd Puc Political Science 5th Chapter Notes in Kannada

Samajika Chaluvaligalu Mattu Avugala Rajakiya Parinamagalu

ಒಂದು ಅಂಕದ ಪ್ರಶ್ನೆಗಳು

1. ವರ್ಣಾಶ್ರಮ ವ್ಯವಸ್ಥೆಯಲ್ಲಿ ಇದ್ದಂತಹ ವರ್ಗಗಳೆಷ್ಟು?

ವರ್ಗಗಳು ವರ್ಣಾಶ್ರಮ ವ್ಯವಸ್ಥೆಯಲ್ಲಿ ಇದ್ದಂತಹ ವರ್ಗಗಳು.

2. ನಾಸಿಕ್ ಕಲಾರಾಮ್ ದೇವಸ್ಥಾನವನ್ನು ಮೊದಲು ಪ್ರವೇಶಿಸಿದ ದಲಿತ ನಾಯಕರು ಯಾರು?

ಡಾ।। ಬಿ. ಆರ್. ಅಂಬೇಡ್ಕರ್‌ರವರು ನಾಸಿಕ್ ಕಲಾರಾಮ್ ದೇವಸ್ಥಾನವನ್ನು ಮೊದಲು ಪ್ರವೇಶಿಸಿದ ದಲಿತ ನಾಯಕರು.

3. ‘ಮೂಕನಾಯಕ’ ಪತ್ರಿಕೆಯನ್ನು ಪ್ರಾರಂಭಿಸಿದವರು ಯಾರು?

ಅಂಬೇಡ್ಕರ್‌ರವರು ‘ಮೂಕನಾಯಕ’ ಪತ್ರಿಕೆಯನ್ನು ಪ್ರಾರಂಭಿಸಿದರು.

4. ‘ಮನುಸ್ಮೃತಿ’ ಯಾವಾಗ ಅಳವಡಿಸಲಾಗಿತ್ತು?

ಕ್ರಿ.ಪೂ 185 ರಲ್ಲಿ ‘ಮನುಸ್ಮೃತಿ’ ಯನ್ನು ಅಳವಡಿಸಲಾಗಿತ್ತು.

5. ಜ್ಯೋತಿ ಬಾ ಪುಲೆಯವರು ಯಾವ ಪರಿಕಲ್ಪನೆಯ ಬಗ್ಗೆ ಒತ್ತಿ ಹೇಳಿದರು?

ಜ್ಯೋತಿ ಬಾ ಪುಲೆಯವರು ಅಕ್ಷರ ಕ್ರಾಂತಿ ಎಂಬ ಪರಿಕಲ್ಪನೆಯ ಬಗ್ಗೆ ಒತ್ತಿ ಹೇಳಿದರು.

6. ಸಾಮಾಜಿಕ ತಾರತಮ್ಯ ಎಂದರೇನು?

ಕೀಳು ಭಾವನೆಯನ್ನು ಅನುಭವಿಸಿದ ಕೆಲವು ವರ್ಗಗಳು ಸಮಾಜದ ಮುಖ್ಯವಾಹಿನಿಯಲ್ಲಿ ಸೇರ್ಪಡೆಗೊಳ್ಳಲು ಅವಕಾಶವಿಲ್ಲದಿರುವ ಪರಿಸ್ಥಿತಿಯನ್ನು ಸಾಮಾಜಿಕ ತಾರತಮ್ಯ ಎನ್ನುವರು.

7. ಆರ್ಥಿಕ ಶೋಷಣೆ ಎಂದರೇನು?

ಬಡತನ ರೇಖೆಗಿಂತ ಕೆಳಗಿದ್ದವರು ಆರ್ಥಿಕ ಅಸಮಾನತೆಯ ಜೊತೆಗೆ ಶೋಷಣೆಗೆ ಒಳಗಾಗಿದ್ದರು ಇದನ್ನು ಆರ್ಥಿಕ ಶೋಷಣೆ ಎನ್ನುವರು.

8. ಮಂಡಲ ಆಯೋಗ ಯಾವಾಗ ಜಾರಿಗೆ ಬಂದಿತು?

ಶ್ರೀ. ಬಿ.ಪಿ. ಮಂಡಲ ಆಯೋಗ 1990ರಲ್ಲಿ ಜಾರಿಗೆ ಬಂದಿತು.

9. ಸತಿ-ಪದ್ಧತಿಯನ್ನು ಹೋಗಲಾಡಿಸಲು ಹೋರಾಡಿದ ನಾಯಕರು ಯಾರು?

ರಾಜಾರಾಮ್‌ ಮೋಹನ್‌ರಾಯರು ಸತಿ-ಪದ್ಧತಿಯನ್ನು ಹೋಗಲಾಡಿಸಲು ಹೋರಾಡಿದ ನಾಯಕರು.

10. ವಿಧವಾ ಪುನರ್ ವಿವಾಹ ಕಾಯಿದೆ ಯಾವಾಗ ಜಾರಿಗೆ ಬಂದಿತು?

1856 ರಲ್ಲಿ ವಿಧವಾ ಪುನರ್ ವಿವಾಹ ಕಾಯಿದೆ ಜಾರಿಗೆ ಬಂದಿತು

11. ರಾಷ್ಟ್ರೀಯ ಮಹಿಳಾ ಆಯೋಗ ಯಾವಾಗ ಜಾರಿಗೆ ಬಂದಿತು?

1992 ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಯಾವಾಗ ಜಾರಿಗೆ ಬಂದಿತು.

12. ಶೋಷಿತ ಮಹಿಳೆಯರಿಗೆ ಶಿಕ್ಷಣ ಪ್ರಾರಂಭಿಸಿದ ಪ್ರಥಮ ಶಿಕ್ಷಕಿಯನ್ನು ಹೆಸರಿಸಿ.

ಸಾವಿತ್ರಿ ಬಾ ಪುಲೆಯವರು ಶೋಷಿತ ಮಹಿಳೆಯರಿಗೆ ಶಿಕ್ಷಣ ಪ್ರಾರಂಭಿಸಿದ ಪ್ರಥಮ ಶಿಕ್ಷಕಿ.

13. ಕೌಟುಂಬಿಕ ದೌರ್ಜನ್ಯ ಕಾಯಿದೆ ಯಾವಾಗ ಜಾರಿಗೆ ಬಂದಿತು?

ಕೌಟುಂಬಿಕ ದೌರ್ಜನ್ಯ ಕಾಯಿದೆ 1954 ರಲ್ಲಿ ಜಾರಿಗೆ ಬಂದಿತು.

14. ಐ.ಎನ್.ಟಿ.ಯು.ಸಿ ವಿಸ್ತರಿಸಿ.

ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್.

15. ಸಿ.ಐ.ಟಿ.ಯು ವಿಸ್ತರಿಸಿ.

ಸೆಂಟರ್ ಫಾರ್ ಇಂಡಿಯನ್ ಟ್ರೇಡ್ ಯೂನಿಯನ್.

16. ಯು.ಟಿ.ಯು.ಸಿ. ವಿಸ್ತರಿಸಿ.

ಯುನೈಟೆಡ್ ಟ್ರೇಡ್ ಯುನಿಯನ್ ಕಾಂಗ್ರೆಸ್.

17. ಬಿ.ಎಂ.ಎಸ್. ವಿಸ್ತರಿಸಿ.

ಭಾರತೀಯ ಮದ್ದೂರ ಸಂಘ.

18. ಹೆಚ್.ಎಂ.ಪಿ. ವಿಸ್ತರಿಸಿ.

ಹಿಂದೂ ಮದ್ದೂರ್ ಪಂಚಾಯತ್.

19. ಹೆಚ್. ಎಂ. ಎಸ್. ವಿಸ್ತರಿಸಿ.

ಹಿಂದೂ ಮದ್ದೂರ್ ಸಭಾ.

20. ಯಾವ ದಿನವನ್ನು ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತದೆ?

ಮೇ 1 ನ್ನು ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತದೆ.

21. ರೈತರ ಮೂಲ ಕಸುಬು ಯಾವುದು?

ರೈತರ ಮೂಲ ಕಸುಬು ಕೃಷಿ.

22. ಬಿ.ಕೆ.ಯು. ವಿಸ್ತರಿಸಿ.

ಭಾರತೀಯ ಕಿಸಾನ್ ಒಕ್ಕೂಟ.

23. ಎನ್.ಸಿ.ಐ.ಪಿ ವಿಸ್ತರಿಸಿ.

ರಾಷ್ಟ್ರೀಯ ಬೆಳೆ ವಿಮೆ ಯೋಜನೆ.

24. ಎನ್.ಎ.ಐ.ಎಸ್ ವಿಸ್ತರಿಸಿ.

ರಾಷ್ಟ್ರೀಯ ಕೃಷಿ ವಿಮೆ ಯೋಜನೆ. National Ag-riculture Insurance Scheme.

25. ಪಿ.ಎಲ್.ಡಿ.ಬಿ. ವಿಸ್ತರಿಸಿ.

ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್.

26. ಎನ್.ಡಿ.ಸಿ. ವಿಸ್ತರಿಸಿ.

ರಾಷ್ಟ್ರೀಯ ಅಭಿವೃದ್ಧಿ ಮಂಡಳಿ.

27. ಕೆ.ಆರ್.ಆರ್.ಎಸ್. ವಿಸ್ತರಿಸಿ.

ಕರ್ನಾಟಕ ರಾಜ್ಯ ರೈತರ ಸಂಘ.

28. ಯು.ಡಿ.ಎಚ್.ಆರ್ ವಿಸ್ತರಿಸಿ.

ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ

29. ಎನ್.ಹೆಚ್.ಆರ್.ಸಿ ವಿಸ್ತರಿಸಿ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ.

30. ಕರ್ನಾಟಕದಲ್ಲಿ ಮಾನವ ಹಕ್ಕುಗಳ ಆಯೋಗ ಯಾವಾಗ ಸ್ಥಾಪನೆಯಾಯಿತು?

ಕರ್ನಾಟಕದಲ್ಲಿ ಮಾನವ ಹಕ್ಕುಗಳ ಆಯೋಗ 2005 ರಲ್ಲಿ ಸ್ಥಾಪನೆಯಾಯಿತು.

31. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಯಾವಾಗ ಸ್ಥಾಪನೆಯಾಯಿತು?

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ 1994ರಲ್ಲಿ ಸ್ಥಾಪನೆಯಾಯಿತು.

32. ಜಿಲ್ಲೆಯಲ್ಲಿ ಮಾನವ ಹಕ್ಕುಗಳ ರಕ್ಷಣೆ ಮಾಡುವ ಮುಖ್ಯಸ್ಥರು ಯಾರು?

ಜಿಲ್ಲೆಯಲ್ಲಿ ಮಾನವ ಹಕ್ಕುಗಳ ರಕ್ಷಣೆಯನ್ನು ಜಿಲ್ಲಾಧಿಕಾರಿಗಳು ಮಾಡುತ್ತಾರೆ.

33. ಚಿಪ್ಕೋ ಚಳುವಳಿಯ ರೂವಾರಿ ಯಾರು?

ಚಿಪ್ಕೋ ಚಳುವಳಿಯ ರೂವಾರಿ ಸುಂದರ್‌ಲಾಲ್ ಬಹುಗುಣ.

34. ಅಪ್ಪಿಕೋ ಚಳುವಳಿ ಎಲ್ಲಿ ಪ್ರಾರಂಭವಾಯಿತು?

ಕರ್ನಾಟಕದ ಮಲೆನಾಡಿನ ಶಿರ್ಸಿ, ಸಿದ್ದಾಪುರದಲ್ಲಿ ಪ್ರಾರಂಭವಾಯಿತು.

35. ನರ್ಮದಾ ಬಚಾವೋ ಆಂದೋಲನದ ನಾಯಕರು ಯಾರು?

ನರ್ಮದಾ ಬಚಾವೋ ಆಂದೋಲನದ ನಾಯಕರು ಬಾಬಾ ಆಮೆ ಮತ್ತು ಮೇದಾ ಪಾಟ್ಕರ್.

36. ಗಂಗಾ ನದಿಯ ಶುದ್ದೀಕರಣಕ್ಕಾಗಿ ಸರ್ವೋಚ್ಛ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದವರು ಯಾರು?

ಶ್ರೀ ಎಂ.ಸಿ. ಮೆಹತಾ ಗಂಗಾ ನದಿಯ ಶುದ್ದೀಕರಣಕ್ಕಾಗಿ ಸರ್ವೋಚ್ಛ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದರು.

37. ಜೀವ ವೈವಿಧ್ಯ ಕಾಯಿದೆ ಯಾವಾಗ ಜಾರಿಗೆ ಬಂದಿತು?

ಜೀವ ವೈವಿಧ್ಯ ಕಾಯಿದೆ 2002 ರಲ್ಲಿ ಜಾರಿಗೆ ಬಂದಿತು.

38. ಸಾಲು ಮರದ ತಿಮ್ಮಕ್ಕ ಯಾವ ಜಿಲ್ಲೆಗೆ ಸೇರಿದವರು?

ಸಾಲು ಮರದ ತಿಮ್ಮಕ್ಕ ರಾಮನಗರ ಜಿಲ್ಲೆಗೆ ಸೇರಿದವರು.

39. ಪಶ್ಚಿಮಘಟ್ಟ ಚಳುವಳಿ ಪ್ರಾರಂಭಿಸಿದವರು ಯಾರು?

ಪರಿಸರವಾದಿಗಳು ಪಶ್ಚಿಮಘಟ್ಟ ಚಳುವಳಿಯನ್ನು ಪ್ರಾರಂಭಿಸಿದರು.

40. ಯಾವ ದಿನದಂದು ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ?

ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ.

ಎರದು ಅಂಕದ ಪ್ರಶ್ನೆಗಳು

1. ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಯಾರು ಮತ್ತು ಯಾವಾಗ ಸ್ಥಾಪಿಸಿದರು?

1918 ರಲ್ಲಿ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ‘ಲೆಸ್ಲಿ ಮಿಲ್ಲರ್’ರವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಿ ಹಿಂದುಳಿದ ವರ್ಗದವರು ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿದರು.

2. ದಲಿತರೆಂದರೆ ಯಾರು?

ವರ್ಣಾಶ್ರಮದ ಐದನೇ ವರ್ಗದ ಜನ ಅಥವಾ ಪಂಚಮರು (ಶೋಷಿತರು/ಆಸ್ಪೃಶ್ಯರು).

3. ದಲಿತ ಕಾಯ್ದೆಯ ವಿಶೇಷತೆ ಏನು?

1989 ರ ದೌರ್ಜನ್ಯ ತಡೆ ಕಾಯ್ದೆಯು ‘ದಲಿತ ಕಾಯ್ದೆ’ ಎಂದು ಜನಪ್ರಿಯವಾಗಿದೆ. ಸೆಕ್ಷನ್ 21 ರ ಪ್ರಕಾರ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಗಳಿಗೆ ಕಾನೂನು ಸಲಹೆಯನ್ನು ಮತ್ತು ಸಾಮಾಜಿಕ, ಆರ್ಥಿಕ ಬೆಂಬಲ ನೀಡುವಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾದಾಗ ದಂಡನಾರ್ಹವಾಗುತ್ತದೆ. ಇದಕ್ಕಾಗಿ ವಿಶೇಷ ನ್ಯಾಯಾಲಯಗಳನ್ನು ನೇಮಿಸಲಾಗಿದೆ.

4. ಅಂಬೇಡ್ಕರ್‌ರ ಮೂರು ವಾಣಿಗಳು ಯಾವುವು?

‘ಶಿಕ್ಷಣ’, ‘ಸಂಘಟನೆ’ ಮತ್ತು ‘ಹೋರಾಟ’ ಇವು ಅಂಬೇಡ್ಕರರ ಮೂರು ವಾಣಿಗಳು.

5. ಪ್ರಾಚೀನ ಕಾಲದ ನಾಲ್ಕು ಸಾಮಾಜಿಕ ವರ್ಗಗಳಾವುವು?

ಪ್ರಾಚೀನ ಕಾಲದ ನಾಲ್ಕು ಸಾಮಾಜಿಕ ವರ್ಗಗಳು ಯಾವುವೆಂದರೆ

  1. ಬ್ರಾಹ್ಮಣ
  2. ಕ್ಷತ್ರಿಯ
  3. ವೈಶ್ಯ

6. ಹಿಂದುಳಿದ ವರ್ಗದವರ ಏಳಿಗೆಗೆ ಹೋರಾಡಿದ ನಾಯಕರು ಯಾರು?

ಕೇರಳದ ನಾರಾಯಣ ಗುರು, ತಮಿಳುನಾಡಿನ ಶ್ರೀ ಪೆರಿಯಾರ ರಾಮಸ್ವಾಮಿ, ಗ್ವಾಲಿಯರ್‌ನ ಮಹಾರಾಜ ಸಯ್ಯಾಜಿರಾವ್ ಗಾಯಕವಾಡ್, ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್. ಕೊಲ್ಲಾಪುರದ ಸಾಹು ಮಹಾರಾಜ ಮುಂತಾದವರು ಹಿಂದುಳಿದ ವರ್ಗದವರ ಏಳಿಗೆಗೆ ಹೋರಾಡಿದರು.

7. ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಹೋರಾಟ ಎಲ್ಲಿ ಮತ್ತು ಯಾವಾಗ ಪ್ರಾರಂಭವಾಯಿತು?

ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಹೋರಾಟ ಮೈಸೂರಿನಲ್ಲಿ, 1918 ರಲ್ಲಿ ಪ್ರಾರಂಭವಾಯಿತು.

8. ‘ಹಿಂದು ವಿಡೋಸ್ ಹೊಮ್’ ಎಲ್ಲಿ ಮತ್ತು ಯಾವಾಗ ಸ್ಥಾಪನೆಯಾಯಿತು?

1899 ರಲ್ಲಿ ಪೂನಾದಲ್ಲಿ ‘ಒಂದು ವಿಡೋಸ್ ಹೊಮ’ ಸ್ಥಾಪನೆಯಾಯಿತು.

9. ಲಿಂಗ ಅಸಮಾನತೆಯನ್ನು ಅಳಿಸಲು ಜಾರಿಗೆ ತಂದಿರುವ ಯಾವುದಾದರೂ ಎರಡು ಕಾಯ್ದೆಗಳನ್ನು ತಿಳಿಸಿ.

ಸಂವಿಧಾನದ 14 ನೇ ಮತ್ತು 15 ನೇ ವಿಧಿಗಳನ್ನು ಲಿಂಗ ಅಸಮಾನತೆಯನ್ನು ಅಳಿಸಲು ಜಾರಿಗೆ ತರಲಾಗಿದೆ.

10. ಮಹಿಳೆಯರ ರಕ್ಷಣೆಗೆ ಸಂಬಂಧಿಸಿದ ಎರಡು ಕಾಯ್ದೆಗಳನ್ನು ಹೆಸರಿಸಿ.

ಗೃಹ ಹಿಂಸೆಯ ವಿರುದ್ಧ ರಕ್ಷಣಾ ಕಾಯ್ದೆ 2005 ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ಈ ಕಾಯ್ದೆಗಳು ಮಹಿಳೆಯರಿಗೆ ಸಂಬಂಧಿಸಿವೆ.

11. ಇಬ್ಬರೂ ಭಾರತೀಯ ಕಮ್ಯೂನಿಸ್ಟ್ ನಾಯಕರನ್ನು ಹೆಸರಿಸಿ.

ಭಾರತೀಯ ಪ್ರಮುಖ ಕಮ್ಯೂನಿಸ್ಟ್ ನಾಯಕರುಗಳೆಂದರೆ ಎಸ್.ಎ. ಢಾಂಗೆ ಮತ್ತು ಇ.ಎಮ್.ಎಸ್.ನಂಬೂದ್ರಿಪಾಡ್.

12. ಕಾರ್ಮಿಕರೆಂದರೆ ಯಾರು?

ಕೃಷಿ ಮತ್ತು ಕೈಗಾರಿಕೆಗಳಲ್ಲಿ ಯಾರು ತಮ್ಮ ದೈಹಿಕ ಶ್ರಮವನ್ನು ಹಾಕಿ ಕೆಲಸ ಮಾಡುವರೋ ಅವರೇ ಕಾರ್ಮಿಕರು, ಈ ಕೆಲಸದಿಂದ ಪಡೆಯುವ ಕೂಲಿಯೇ ಅವರಿಗೆ ಜೀವನಾಧಾರವಾಗಿದೆ.

13. ಯಾವುದಾದರೂ ಎರಡು ಕಾರ್ಮಿಕ ಕಾಯ್ದೆಗಳನ್ನು ಹೆಸರಿಸಿ.

ಕಾರ್ಮಿಕ ಪರಿಹಾರ ಕಾಯ್ದೆ -1923 ಕಾರ್ಮಿಕರ ಭವಿಷ್ಯ ನಿಧಿ ಕಾಯ್ದೆ – 1965

14. ಕರ್ನಾಟಕ ರೈತ ಸಂಘದ ಇಬ್ಬರು ನಾಯಕರ ಹೆಸರು త్రిళిసి.

ಕರ್ನಾಟಕ ರೈತ ಸಂಘದ ಇಬ್ಬರು ನಾಯಕರುಗಳೆಂದರೆ ಪ್ರೊ|| ಎಮ್.ಡಿ. ನಂಜುಂಡಸ್ವಾಮಿ, ಮತ್ತು ಎನ್.ಡಿ. ಸುಂದರೇಶ.

15. ಖೇಡಾ ಚಳುವಳಿಯ ಎರಡು ಪ್ರಮುಖ ಕಾರಣಗಳು ಯಾವುವು?

ಖೇಡಾ ಚಳುವಳಿಯ ಎರಡು ಪ್ರಮುಖ ಕಾರಣಗಳೆಂದರೆ-

  1. ಬಂಗಾಳ ಸರ್ಕಾರ ನೀಲಿ ಬೆಳೆ ಬೆಳೆಯುವುದನ್ನು ನಿಷೇಧಿಸಿ ರೈತರ ಭೂಮಿಯನ್ನು ವಶಪಡಿಸಿಕೊಂಡರು.
  2. ರೈತರ ಸಮಸ್ಯೆಗಳನ್ನು ಕಡೆಗಣಿಸಿದ ಸರ್ಕಾರ ಹೆಚ್ಚು ಮೊತ್ತದ ತೆರಿಗೆ ವಿಧಿಸಿದರು.
  3. ಮಾನವ ಹಕ್ಕುಗಳ ಬಗ್ಗೆ ಅರ್ಥೈಸಿ.

ಮಾನವನಿಂದ ಬೇರ್ಪಡಿಸಲಾಗದಂತಹ ಹಕ್ಕುಗಳೇ ಮಾನವ ಹಕ್ಕುಗಳು. ಯಾವುದೇ ಧರ್ಮ, ಜಾತಿ, ಲಿಂಗ, ಬಣ್ಣ, ಭಾಷೆ, ಜನ್ಮಸ್ಥಳ, ಸಾಮಾಜಿಕ, ಆರ್ಥಿಕ ರಾಜಕೀಯ ಮತ್ತು ಇತರ ಸ್ಥಾನಮಾನಗಳ ಅಂತರವಿಲ್ಲದೇ ಮಾನವರು ಈ ಹಕ್ಕುಗಳನ್ನು ಅನುಭವಿಸುತ್ತಾರೆ.

16. ‘ಮರ್ಯಾದೆ ಹತ್ಯೆ’ ಎಂದರೇನು?

ಆಧುನಿಕತೆಯ ಪರಿಣಾಮವಾಗಿ ಯುವ ಜನತೆ ಅಂರ್ಜಾತಿಯ ವಿವಾಹ ಮತ್ತು ಅಂತರ್‌ಜಾತಿಯ ಧರ್ಮೀಯ ವಿವಾಹಗಳಿಗೆ ಮಾರುಹೋಗುತ್ತಿದ್ದಾರೆ. ಆದರೆ ಇದನ್ನು ತಪ್ಪಿಸಲು. ಕುಟುಂಬದ ಗೌರವವನ್ನು ಕಾಪಾಡಲು ಹತ್ಯೆ ಮಾಡಲಾಗುವುದು. ಇದನ್ನು ಮರ್ಯಾದೆ ಹತ್ಯೆ ಎನ್ನಲಾಗುವುದು.

17. ಪರಿಸರ ಚಳುವಳಿಗೆ ಸಂಬಂಧಿಸಿದ ಎರಡು ಕಾಯ್ದೆಗಳನ್ನು ಹೆಸರಿಸಿ.

ಪರಿಸರ ಸಂರಕ್ಷಣಾ ಕಾಯ್ದೆ – 1986

ಜೀವ ವೈವಿಧ್ಯ ಕಾಯ್ದೆ 2002

ಇವು ಪರಿಸರ ಚಳುವಳಿಗೆ ಸಂಬಂಧಿಸಿದ ಎರಡು ಕಾಯ್ದೆಗಳು.

18. ಪರಿಸರ ಎಂದರೇನು?

ನಮ್ಮ ಸುತ್ತಮುತ್ತಲಿನ ಜೈವಿಕ ಮತ್ತು ಅಜೈವಿಕ ಅಂಶಗಳ ಒಟ್ಟು ಸಮೂಹವೇ ಪರಿಸರ.

III. ಐದು ಅಂಕದ ಪ್ರಶ್ನೆಗಳು

1. ದಲಿತ ಚಳುವಳಿಯ ಕಾರಣಗಳಾವುವು?

ದಲಿತ ಚಳುವಳಿಗೆ ಕೆಳಗಿನ ಅಂಶಗಳು ಪ್ರಮುಖ ಕಾರಣಗಳಾಗಿವೆ.

ಸಾಮಾಜಿಕ ಅಸಮಾನತೆ:

ಸಮಾಜದಲ್ಲಿ ವಿವಿಧ ವರ್ಗ, ಜಾತಿ, ಧರ್ಮಗಳ ಆಧಾರದ ಮೇಲೆ ಶ್ರೇಷ್ಠ ಮತ್ತು ಕನಿಷ್ಟ, ಮೇಲು ಕೀಳು ಎಂಬ ತಾರತಮ್ಯಗಳಿಂದ ಶೋಷಣೆ ಮತ್ತು ದೌರ್ಜನ್ಯ ನಡೆಸುವುದು ಮತ್ತು ಸಮಾನ ಗೌರವ ನೀಡದೇ ಇರುವುದು ಸಾಮಾಜಿಕ ಅಸಮಾನತೆಯಾಗಿದೆ. ಇದು ದಲಿತ ಚಳುವಳಿಗೆ ನಾಂದಿಯಾಗಿದೆ.

ಆರ್ಥಿಕ ಅಸಮಾನತೆ:

ಆರ್ಥಿಕವಾಗಿ ಸದೃಢರಾದ ಮೇಲ್ವರ್ಗದವರು ತಮ್ಮ ಸಂಪತ್ತನ್ನು ಅಭಿವೃದ್ಧಿಪಡಿಸಲು ಕಾರಣಕರ್ತರಾದ ದಲಿತರನ್ನು ಅಮಾನವೀತವಾಗಿ ನಡೆಸಿಕೊಳ್ಳುವುದು. ಅಷ್ಟೇ ಅಲ್ಲದೇ ಅವರಿಗೆ ಸಿಗಬೇಕಾದ ಪಾಲನ್ನು ನಿರಾಕರಿಸಿದರು. ಇದರಿಂದ ಅವರ ಸ್ಥಿತಿ ದಯನೀಯವಾಯಿತು. ಈ ಚಳುವಳಿ ಸ್ಫೋಟಗೊಳ್ಳಲು ಇದು ಕಾರಣವಾಯಿತು.

ತಾರತಮ್ಯ:

ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ರಂಗಗಳಲ್ಲಿನ ತಾರತಮ್ಯಗಳೇ ದಲಿತರನ್ನು ನಿಕೃಷ್ಟ ಸ್ಥಿತಿಗೆ ತಳ್ಳಿದವು, ಈ ತಾರತಮ್ಯದ ವಿರುದ್ಧ ನಿರಂತರ ಹೋರಾಟಗಳು ದಲಿತ ಚಳುವಳಿಗೆ ಮೈಲಿಗಲ್ಲುಗಳಾಗಿವೆ.

ಅರಿವಿನ ಕೊರತೆ:

ಸಮಾಜದಲ್ಲಿ ದಲಿತರಿಗೆ ಶೋಷಣೆ ಮತ್ತು ದೌರ್ಜನ್ಯಗಳು ಏಕೆ ನಡೆಯುತ್ತದೆ ಎಂಬ ತಿಳುವಳಿಕೆ ಇಲ್ಲದಿರುವುದಕ್ಕೆ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಇವರನ್ನು ಶಿಕ್ಷಣದಿಂದ ದೂರ ಇರಿಸಲಾಗಿತ್ತು. ಕಾರಣ ಇವರಿಗೆ ತಿಳುವಳಿಕೆಯ ಕೊರತೆ ಇತ್ತು.

ರಾಜಕೀಯ ಅಸಮಾನತೆ:

ದಲಿತರು ರಾಜಕೀಯ ಕ್ಷೇತ್ರದಲ್ಲಿ ಸಮಾನ ಅವಕಾಶಗಳಿಂದ ವಂಚಿತರಾಗಿದ್ದರು. ಇದರಿಂದ ರಾಜಕೀಯ ಹಕ್ಕುಗಳನ್ನು ಪಡೆಯಲು ಸಾಧ್ಯವಾಗಲಿಲ್ಲ; ಎಲ್ಲಾ ರಾಜಕೀಯ ಅಧಿಕಾರಗಳು ಮೇಲ್ವರ್ಗದವರ ಹಿಡಿತದಲ್ಲಿದ್ದವು. ಈ ಅಧಿಕಾರವನ್ನು ಪಡೆಯಲು ಚಳುವಳಿಗಳು ಆರಂಭವಾದವು.

2. ಹಿಂದುಳಿದ ವರ್ಗಗಳ ಕಾರಣಗಳಾವುವು?

ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರನ್ನು ಹಿಂದುಳಿದ ವರ್ಗಗಳೆಂದು ಕರೆಯುತ್ತಾರೆ. ಈ ವರ್ಗಗಳು ಕೂಡ ದೌರ್ಜನ್ಯಕ್ಕೆ ಮತ್ತು ಶೋಷಣೆಗೆ ಒಳಪಟ್ಟಿದ್ದರು. ಹಿಂದುಳಿದ ವರ್ಗಗಳಿಗೆ ಉದಾಹರಣೆ: ಕುರುಬ, ಬೆಸ್ತ, ಮಡಿವಾಳ, ಕುಂಬಾರ, ಕಮ್ಮಾರ ಇತ್ಯಾದಿ.ಹಿಂದುಳಿದ ವರ್ಗಗಳ ಚಳುವಳಿಗೆ ಕಾರಣಗಳು ಈ ಕೆಳಗಿನಂತಿವೆ.

ಸಾಮಾಜಿಕ ತಾರತಮ್ಯ:

ಮೇಲು ಕೀಳೆಂಬ ಭೇದಭಾವವನ್ನು ಈ ವರ್ಗಗಳು ಹಲವಾರು ವರ್ಷಗಳಿಂದ ಅನುಭವಿಸಿದವು. ಹೀಗಾಗಿ ಸಾಮಾಜಿಕ ಮುಖ್ಯವಾಹಿನಿಯಲ್ಲಿ ಸೇರ್ಪಡೆಗೊಳ್ಳಲು ಇವರಿಗೆ ಅವಕಾಶವಿರಲಿಲ್ಲ. ಸ್ವಾತಂತ್ರೋತ್ತರ ಭಾರತದಲ್ಲಿ ಸೌಲಭ್ಯಗಳನ್ನು ಪಡೆಯಲು ಹಾಗೂ ತಮ್ಮ ಪಾಲನ್ನು ಪಡೆಯಲು ಈ ವರ್ಗಗಳು ಚಳುವಳಿಯನ್ನು ಪ್ರಾರಂಭಿಸಿದರು.

ಆರ್ಥಿಕ ಶೋಷಣೆ:

ಆರ್ಥಿಕ ಶೋಷಣೆಗಳಿಗೂ ಒಳಗಾಗಿದ್ದ ಈ ವರ್ಗಗಳು ಇಂತಹ ಶೋಷಣೆಗಳಿಂದ ಹೊರಬರಲು ಸಂಘಟಿತರಾಗಿ ಸೌಲಭ್ಯಗಳನ್ನು ಪಡೆಯುವ ಸಲುವಾಗಿ ಹೋರಾಟವನ್ನು ಪ್ರಾರಂಭಿಸಿದರು.

ಶೈಕ್ಷಣಿಕವಾಗಿ ಹಿಂದುಳಿದಿರುವಿಕೆ:

ಶಿಕ್ಷಣ ಸೌಲಭ್ಯದಿಂದ ವಂಚಿತರಾಗಿದ್ದ ಈ ವರ್ಗಗಳು ಈ ಹಕ್ಕನ್ನು ಪಡೆಯಲು ವ್ಯವಸ್ಥಿತವಾಗಿ ಚಳುವಳಿಯನ್ನು ಪ್ರಾರಂಭಿಸಿದರು.

ರಾಜಕೀಯ ಪ್ರಾತಿನಿಧ್ಯತೆಯ ವಂಚನೆ:

ಈ ರಂಗವೂ ಕೂಡ ಮೇಲ್ವರ್ಗದವರ ಪ್ರಾಬಲ್ಯಕ್ಕೆ ಒಳಗಾಗಿದ್ದರಿಂದ ಹಿಂದುಳಿದ ವರ್ಗದವರು ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿದ್ದರು. ಈ ವರ್ಗದವರನ್ನು ಪ್ರತಿನಿಧಿಸುವ ಯಾವ ವ್ಯಕ್ತಿಗಳಿಗೂ ಅವಕಾಶವಿರಲಿಲ್ಲ.

ಏಕೀಕರಣ:

350 ಕ್ಕಿಂತ ಹೆಚ್ಚು ಸಂಖ್ಯೆಯಲ್ಲಿರುವ ಹಿಂದುಳಿದ ವರ್ಗಗಳು ಛಿದ್ರ ಛಿದ್ರವಾಗಿದ್ದವು. ಇವುಗಳ ಮಧ್ಯ ಐಕ್ಯತೆಯನ್ನು ಸಾಧಿಸಲು ಚಳುವಳಿಯನ್ನು ಪ್ರಾರಂಭಿಸಿದರು. ಈ ಕಾರಣಾಂಶಗಳು ಚಳುವಳಿಯನ್ನು ಪ್ರಾರಂಭಿಸಿ ಸಾಕಷ್ಟು ಪ್ರಮಾಣದ ಸುಧಾರಣೆಗಳಿಗೆ ಸಾಕ್ಷಿಯಾದವು.

2. ಮಹಿಳಾ ಚಳುವಳಿಗೆ ಕಾರಣಗಳಾವುವು?

ಲಿಂಗ ತಾರತಮ್ಯವು ಪುರಾಣ ಕಾಲದಿಂದಲೂ ಕಂಡುಬರುತ್ತಿದೆ. ಮಹಿಳೆಯರು ಸ್ವಾತಂತ್ರ್ಯ ಸಾಮಾಜಿಕ, ಆರ್ಥಿಕ, ರಾಜಕೀಯ, ಮುಂತಾದ ರಂಗಗಳಲ್ಲಿ ಅವಕಾಶಗಳಿಂದ ವಂಚಿತರಾಗಿದ್ದರು.

ಈ ಕೆಳಗಿನ ಅಂಶಗಳು ಮಹಿಳಾ ಚಳುವಳಿಗೆ ಪ್ರಮುಖ ಕಾರಣವಾಗಿವೆ.

  1. ಅಸಮಾನತೆ:

ಸ್ತ್ರೀ ಮತ್ತು ಪುರುಷರಿಬ್ಬರ ನಡುವೆ ಇರುವ ಭೇದ ಭಾವ ತಾರತಮ್ಯಗಳು ಅಸಮಾನತೆಗೆ ಕಾರಣವಾಗಿವೆ. ಮಹಿಳೆಯರು ಶಿಕ್ಷಣ, ಉದ್ಯೋಗ, ಆಸ್ತಿಯ ಹಕ್ಕನ್ನು ಪಡೆಯುವಲ್ಲಿ ವಂಚಿತರಾಗಿದ್ದಾರೆ. ಅಸಮಾನತೆಯು ಮಹಿಳಾ ಚಳುವಳಿಗೆ ಪ್ರಮುಖ ಕಾರಣವಾಗಿದೆ.

  1. ವರದಕ್ಷಿಣೆ ಪಿಡುಗು:

ಮಹಿಳೆಯು ಈ ಸಾಮಾಜಿಕ ಪಿಡುಗಿನಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಶೋಷಣೆಗೆ ಒಳಗಾಗಿದ್ದಾಳೆ. ಮಹಿಳೆಯ ತಂದೆ ತಾಯಿಗಳು ಮತ್ತು ಪೋಷಕರು ಕೂಡಾ ಸಾಲಗಾರರಾಗಿ ಶೋಷಣೆಗೆ ಒಳಗಾಗಿದ್ದಾರೆ. ಇದು ಮಹಿಳಾ ಚಳುವಳಿಗೆ ಪ್ರಮುಖ ಕಾರಣವಾಗಿದೆ.

  1. ಮಾನವ ಹಕ್ಕುಗಳ ಸಂರಕ್ಷಣೆ ಮಾಡದಿರುವುದು:

ಮಹಿಳೆಯರ ಮೇಲಿನ ದೌರ್ಜನ್ಯವು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಹೀಗೆ ಮಾನವ ಹಕ್ಕುಗಳ ಉಲ್ಲಂಘನೆಯು ಮಹಿಳಾ ಚಳುವಳಿಗೆ ಕಾರಣವಾಗಿದೆ.

  1. ಲಿಂಗಾಧಾರಿತ ಸಾಮಾಜಿಕ ವ್ಯವಸ್ಥೆ:

ಪುರುಷರು ತಮ್ಮ ಏಕಸ್ವಾಮ್ಯವನ್ನು ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮುಂದುವರೆಸಿ, ತಮ್ಮ ದೌರ್ಜನ್ಯವನ್ನು ಮಹಿಳೆಯರ ಮೇಲೆ ಮುಂದುವರೆಸಿದ್ದಾರೆ.

  1. ಲೈಂಗಿಕ ಹಿಂಸಾಚಾರ:

ಸಮಯ, ಸ್ಥಳದ, ವಯೋಮಾನದ ಪರಿವೇ ಯಿಲ್ಲದ ಲೈಂಗಿಕ ಕಿರುಕುಳಗಳು ಮಹಿಳಾ ದೌರ್ಜನ್ಯಗಳು ಮಹಿಳೆಯ ಮೇಲೆ ಅವ್ಯಾಹತವಾಗಿ ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಇದರ ಪ್ರಮಾಣವು ಹೆಚ್ಚಿದೆ. ಇದು ಮಹಿಳಾ ಹೋರಾಟಕ್ಕೆ ಕಾರಣವಾಗಿದೆ.

  1. ಕೌಟುಂಬಿಕಿ ಹಿಟ್ಟು:

ಕುಟುಂಬಗಳಲ್ಲಿ ಪುರುಷರು ಅಜ್ಞಾನ, ಅವಿವೇಕತನ, ದುಶ್ಚಟಗಳಿಂದ ವಿವೇಚನೆಯಿಲ್ಲದೇ ಮಹಿಳೆಯನ್ನು ಹಿಂಸೆಗೆ ಗುರಿಪಡಿಸಿದ್ದಾರೆ. ಇದು ದೈಹಿಕ, ಮಾನಸಿಕ, ಲೈಂಗಿಕ ಹಿಂಸೆಯಾಗಿದ್ದು ಅನೇಕ ಬಾರಿ ಜೀವಕ್ಕೆ ಹಾನಿ ತರುತ್ತದೆ. ಇದು ಮಹಿಳೆಯರು, ಸಂಘ ಸಂಸ್ಥೆಗಳನ್ನು ಕಟ್ಟಿ ಹೋರಾಟ ನಡೆಸಲು ಕಾರಣವಾಗಿದೆ. ಈ ಎಲ್ಲಾ ಕಾರಣಗಳು ಮಹಿಳಾ ಚಳುವಳಿಗೆ ಪ್ರಮುಖ ಅಂಶಗಳಾಗಿವೆ. ಇವುಗಳಿಂದ ಅನೇಕ ಸಂವಿಧಾನಾತ್ಮಕ, ಸಾಮಾಜಿಕ, ರಾಜಕೀಯ ಬದಲಾವಣೆಗೆ ಸಹಕಾರಿಯಾಗಿದೆ.

3. ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಬಗ್ಗೆ ಟಿಪ್ಪಣಿ ಬರೆಯಿರಿ.

ಮಹಿಳೆಯರು ತಮ್ಮ ಕುಟುಂಬದಲ್ಲಿ ತನ್ನ ಕುಟುಂಬದ ಸದಸ್ಯರಿಂದಲೇ ಶೋಷಣೆಗೆ, ದೌರ್ಜನ್ಯಕ್ಕೆ ಒಳಗಾಗುತ್ತಲೇ ಇದ್ದಾರೆ. ಇಂತಹ ಶೋಷಣೆಗಳನ್ನು ಮತ್ತು ದೌರ್ಜನ್ಯಗಳನ್ನು ನಿಷೇಧಿಸಲು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನೇಕ ಕಾಯ್ದೆಗಳನ್ನು ಜಾರಿಗೆ ತಂದಿವೆ. ಕೇಂದ್ರ ಸರಕಾರವು ಜಾರಿಗೆ ತಂದಿರುವ ಕಾಯ್ದೆಗಳಲ್ಲಿ ಕೌಟುಂಬಿಕ ದೌರ್ಜನ್ಯ ಕಾಯಿದೆ 2005 ಕೂಡಾ ಅತ್ಯಂತ ಪ್ರಮುಖವಾದ ಕಾಯಿದೆಯಾಗಿದೆ.

ಮಹಿಳೆಯರಿಗೆ ಕೌಟುಂಬಿಕ ದೌರ್ಜನ್ಯದ ವಿರುದ್ದ ರಕ್ಷಣೆ ನೀಡುವ ಮಸೂದೆಗೆ ಸಂಸತ್ತು 2005 ರ ಆಗಸ್ಟ್ ನಲ್ಲಿ ಅಂಕಿತ ನೀಡಿತು. 2005 ರ ಕೌಟುಂಬಿಕ ದೌರ್ಜನ್ಯ : [Domestic Violence Prevention Act-2005] ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ, ಎಲ್ಲಾ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 26 ಅಕ್ಟೋಬರ್ 2006 ರಂದು ಜಾರಿಗೆ ಬಂದಿದೆ.

ಈ ಕಾಯ್ದೆ ಪ್ರಕಾರ ದೈಹಿಕ ಮತ್ತು ಮಾನಸಿಕ ಹಿಂಸೆ ಮತ್ತು ವರದಕ್ಷಿಣೆ ಅಥವಾ ಆಸ್ತಿಗಾಗಿ ಕಿರುಕುಳ ಕೊಡುವುದು ಕೌಟುಂಬಿಕ ದೌರ್ಜನ್ಯವಾಗುತ್ತದೆ. ಹಿಂಸೆಗೆ ಒಳಗಾದ ಮಹಿಳೆ ರಕ್ಷಣೆಗಾಗಿ ಪೋಲಿಸ್ ಅಧಿಕಾರಿ, ರಕ್ಷಣಾ ಅಧಿಕಾರಿ ಅಥವಾ ಮ್ಯಾಜಿಸ್ಟ್ರೇಟರನ್ನು ಸಂಪರ್ಕಿಸಬಹುದು. ಹಾಗೂ ಇಂಡಿಯನ್ ಪೀನಲ್ ಕೋಡ್‌ನ ಸೆಕ್ಷನ್ 498 A ಅನ್ವಯ ದೂರನ್ನು ದಾಖಲಿಸಬಹುದು.

“ಯಾರು ಮಹಿಳೆಯ ಗಂಡ ಅಥವಾ ಗಂಡನ ಸಂಬಂಧಿಕರಾಗಿದ್ದಾಗ, ಅಂತಹ ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸುತ್ತಾರೋ ಅವರಿಗೆ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ದಂಡಕ್ಕೂ ಗುರಿಯಾಗಬೇಕಾಗುತ್ತದೆ”.

ಸೆಕ್ಷೆನ್ 498 A ಪ್ರಕಾರ ಮಹಿಳೆಯ ಗಂಡ ಅಥವಾ ಗಂಡನ ಸಂಬಂಧಿಕರು ಅವಳ ಮೇಲೆ ಕ್ರೌರ್ಯದಿಂದ ವರ್ತಿಸಿದರೆ-ಶೋಷಿಸಿದರೆ, ಅವರಿಗೆ 3 ವರ್ಷಗಳಿಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಜೊತೆ ದಂಡವನ್ನು – ವಿಧಿಸಲಾಗುವುದು.

ದೌರ್ಜನ್ಯಕ್ಕೊಳಗಾದ ಮಹಿಳೆಯರು 1987 ರ ಲೀಗಲ್ ಸರ್ವೀಸಸ್ ಅಥಾರಿಟೀಸ್ ಆಕ್ಟ್ ಅನ್ವಯ ಉಚಿತ ನ್ಯಾಯ ಸೇವೆ ಪಡೆಯಬಹುದು. ಅಲ್ಲದೇ ಅಗತ್ಯವೆನಿಸಿದರೆ ಅಂತವ ಮಹಿಳೆಯರಿಗೆ ಆಶ್ರಯ ಸ್ಥಾನ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ರಾಜ್ಯವು ಒದಗಿಸಬೇಕು.

ಈ ಕಾಯ್ದೆಯು ಮಹಿಳೆಯರ ಮೇಲೆ ನಡೆಯುತ್ತಿದ್ದ ಶೋಷಣೆಗಳಿಂದ ಮತ್ತು ದೌರ್ಜನ್ಯಗಳಿಂದ ಹೊರಬರಲು ಬಹಳಷ್ಟು ಸಹಾಯಕವಾಗಿದೆ.

4. ಕಾರ್ಮಿಕ ಚಳುವಳಿಯ ಕಾರಣಗಳಾವುವು?

ಬಹಳಷ್ಟು ಸಂಕಷ್ಟದ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಉತ್ತಮ ಕೆಲಸದ ವಾತಾವರಣ ಮತ್ತು ಸರಿಯಾದ ಕೂಲಿಯನ್ನು ಪಡೆಯುವ ಸಲುವಾಗಿ ಕಾರ್ಮಿಕರು ಚಳುವಳಿಯನ್ನು ಸಂಘಟಿಸಿದರು. ಈ ಕಾರ್ಮಿಕ ಚಳುವಳಿಗೆ ಪ್ರಮುಖ ಕಾರಣಗಳು ಕೆಳಗಿನಂತಿವೆ.

1. ಕಾರ್ಮಿಕರ ಹಿತಾಸಕ್ತಿ ನಿರ್ಲಕ್ಷ್ಯ:

ಮಾಲೀಕರ ಹಿತಾಸಕ್ತಿಗೆ ಹೆಚ್ಚಿನ ಗಮನ ನೀಡಿ ಕಾರ್ಮಿಕರ ಹಿತಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕಾರಣ ಕಾರ್ಮಿಕರು ಚಳುವಳಿಗೆ ಧುಮುಕಿದರು.

2. ಉದ್ಯೋಗಿಗಳ ಕಡೆಗಣನೆ:

ಕಂಪನಿಯು ಅತ್ಯುನ್ನತ ಅಂಗವು ಕಾರ್ಮಿಕರ ಸಮಸ್ಯೆಗಳನ್ನು ಏಕಪಕ್ಷೀಯವಾಗಿ ನಿರ್ಧರಿಸುವ ವ್ಯವಸ್ಥೆ ರೂಢಿಯಲ್ಲಿತ್ತು. ಇದರಿಂದ ಸ್ವಾಭಾವಿಕವಾಗಿ ಕಾರ್ಮಿಕರು ಕಡೆಗಣಿಸಲ್ಪಡುತ್ತಿದ್ದರು.

3. ಸೌಲಭ್ಯ ಪಡೆಯಲು:

ಕೈಗಾರಿಕೆಗಳಲ್ಲಿ ಮತ್ತು ದುಡಿಯುವ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರು, ವಿಶ್ರಾಂತಿ ಗೃಹ, ‘ಶೌಚಾಲಯ ವ್ಯವಸ್ಥೆ, ಮಕ್ಕಳ ಪಾಲನಾ ಕೇಂದ್ರ ಮುಂತಾದ ಸೌಲಭ್ಯಗಳು ಕಾರ್ಮಿಕರಿಗೆ ಸಿಗುತ್ತಿಲ್ಲ ಈ ಸೌಲಭ್ಯಗಳನ್ನು ಪಡೆಯಲು ಚಳುವಳಿಯನ್ನು ಸಂಘಟಿಸುತ್ತಾರೆ.

4.ಕಲ್ಯಾಣ ಕಾರ್ಯಕ್ರಮಗಳು:

ಸಾಮಾಜಿಕ ಭದ್ರತೆಗಳಾದ ವಿಮೆ, ಬೋನಸ್, ಉಚಿತ ನಿವಾಸ, ಸಾರಿಗೆ ಮತ್ತು ಶಿಕ್ಷಣದ ಸೌಲಭ್ಯ ಕಾರ್ಮಿಕರ ಪರಿಹಾರ ಇನ್ನು ಮುಂತಾದವುಗಳನ್ನು ಪಡೆದುಕೊಳ್ಳಲು ಹೋರಾಟಕ್ಕೆ ಅಣಿಯಾಗಿದ್ದಾರೆ.

5. ಅಸಂಘಟಿತ ವಲಯಗಳ ಕಾರ್ಮಿಕರ ಸ್ಥಿತಿ:

ಕೃಷಿ ಕಾರ್ಮಿಕರು ಗರಿಷ್ಟ ಮಟ್ಟದಲ್ಲಿ ಶೋಷಣೆಗೆ ಒಳಗಾಗಿರುತ್ತಾರೆ. ಇಂತಹ ಅಸಂಘಟಿತ ವಲಯದಲ್ಲಿನ ಕಾರ್ಮಿಕರ ಸ್ಥಿತಿ ಶೋಚನೀಯವಾಗಿರುತ್ತದೆ. ಆದ್ದರಿಂದ ಕಾರ್ಮಿಕರು ಪರಿಹಾರಕ್ಕಾಗಿ ಹೋರಾಟ ಮಾಡುತ್ತಿದ್ದಾರೆ.

ಈ ಮೇಲಿನ ಅಂಶಗಳು ಚಳುವಳಿಗೆ ಕಾರಣವಾಗಿ ತಮ್ಮ ಜೀವನ ಸುಧಾರಣೆಗಾಗಿ ಪ್ರಯತ್ನ ಮಾಡಲಾಗುತ್ತಿದೆ.

6. ಚಳುವಳಿಯ ಪರಿಣಾಮಗಳೇನು? ಚರ್ಚಿಸಿ.

ರಾಜಕೀಯ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡಲು ಅವರಿಗೆ ಅವಶ್ಯವಿರುವ ಸೌಲಭ್ಯಗಳನ್ನು ನೀಡಲು, ಅವರ ಬೇಡಿಕೆಗಳನ್ನು ಈಡೇರಿಸಲು ಸಮಸ್ಯೆಗಳನ್ನು ನಿವಾರಿಸಲು ಸರ್ಕಾರ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮಗಳು ಕಾರ್ಮಿಕರ ಚಳುವಳಿಯ ಕಾರಣದಿಂದಾಗಿ ರಾಜಕೀಯ ಫಲಶೃತಿಗಳಾಗಿವೆ. ಅದಕ್ಕಾಗಿ ಸರಕಾರವು ಅನೇಕ ಕಾಯಿದೆಗಳನ್ನು ರಚಿಸಿದೆ. ಆ ಕಾಯಿದೆಗಳು ಈ ಕೆಳಗಂಡಂತಿವೆ.

1) ಕಾರ್ಮಿಕ ಪರಿಹಾರ ಕಾಯ್ದೆ 1923:

ಈ ಒಂದು ಕಾಯಿದೆಯು ಬ್ರಿಟಿಷ್ ಇಂಡಿಯಾದಲ್ಲಿ 1 ನೇ ಜುಲೈ 1924 ರಲ್ಲಿ ಜಾರಿಗೆ ಬಂದಿತು. ಕಾರ್ಮಿಕರು ಅಪಘಾತದಿಂದ ಗಾಯಗೊಂಡರೆ ಅವರಿಗೆ ಮಾಲೀಕರು ಹಣದ ರೂಪದಲ್ಲಿ ಪರಿಹಾರವನ್ನು ನೀಡಬೇಕು ಹಾಗೂ ಆ ಅಪಘಾತದಿಂದ ತೀರಿಕೊಂಡರೆ ಅವನ ಮಾಸಿಕ ವೇತನದ 50% ರಷ್ಟನ್ನು ನೀಡಬೇಕು.

2) ವೇತನ ಬಟವಾಡೆ ಕಾಯ್ದೆ-1936.

ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ವೇತನವನ್ನು ನಿಯಂತ್ರಿಸುವ ಕಾಯ್ದೆಯು ಇದಾಗಿದೆ.

3) ವಾರದ ರಜೆ ಕಾಯ್ದೆ – 1942

ಪ್ರತಿ ವಾರಕ್ಕೊಮ್ಮೆ ವೇತನ ಸಹಿತ ರಜೆಯನ್ನು ಕಾರ್ಮಿಕರಿಗೆ ನೀಡಬೇಕು ಎಂದು ಈ ಕಾಯ್ದೆಯ 1942 ರಲ್ಲಿ ಜಾರಿಗೆ ಬಂದಿತು.

4) ಕನಿಷ್ಟ ವೇತನ ಕಾಯ್ದೆ 1948

ಸರಕಾರವು ನಿಗಧಿಪಡಿಸುವ ಕನಿಷ್ಟ ವೇತನವನ್ನು ಮಾಲೀಕರು ನೀಡಬೇಕು.

5) ಕಾರ್ಮಿಕರ ರಾಜ್ಯ ವಿಮಾ ಕಾಯ್ದೆ – 1948

ಈ ಕಾಯ್ದೆಯು ಕಾರ್ಮಿಕರಿಗೆ ಸಾಮಾಜಿಕ-ಆರ್ಥಿಕ ನ್ಯಾಯವನ್ನು ಒದಗಿಸಿತು.

6) ಕಾರ್ಮಿಕರ ಭವಿಷ್ಯ ನಿಧಿ ಕಾಯ್ದೆ – 1965

ರಾಜ್ಯ ಸರ್ಕಾರ ಮಾಲೀಕರು ಮತ್ತು ಪ್ರತಿ ಕಾರ್ಮಿಕನೇ ಅವನ ಭವಿಷ್ಯಕ್ಕಾಗಿ ಹಣವನ್ನು ಕೂಡಿಡುವ ವ್ಯವಸ್ಥೆ ಇದಾಗಿದೆ.

7) ಬೋನಸ್ ಕಾಯ್ದೆ – 1965

ಒಂದು ಆರ್ಥಿಕ ವರ್ಷದಲ್ಲಿ ಆದ ಲಾಭಾಂಶದ ಒಂದಿಷ್ಟು ಭಾಗವನ್ನು ಬೋನಸ್ಸಾಗಿ ಕಾರ್ಮಿಕರಿಗೆ ನೀಡುವ ಕಾಯ್ದೆ ಇದಾಗಿದೆ.

ಈ ಎಲ್ಲಾ ಕಾಯ್ದೆಗಳು ಕಾರ್ಮಿಕ ಚಳುವಳಿಯ ಫಲಶೃತಿಗಳಾಗಿವೆ.

7. ರೈತ ಚಳುವಳಿಯ ಪ್ರಮುಖ ಕಾರಣಗಳಾವುವು?

ಭಾರತದ ಬೆನ್ನೆಲುಬು ರೈತರು. ಇವರು ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ರೈತರು ಅನೇಕ ಸಮಸ್ಯೆಗಳಿಗೆ ಸಿಲುಕಿದ್ದಾರೆ. ಹೀಗಾಗಿ ರೈತರು ಚಳುವಳಿಗೆ ಮುಂದಾಗಿದ್ದಾರೆ. ರೈತರ ಚಳುವಳಿಗೆ ‘ಈ ಕೆಳಗಿನ ಅಂಶಗಳು ಕಾರಣವಾಗಿವೆ.

1) ವಂಚಿತ ಭಾವನೆ :

ದ್ವಿತೀಯ ವಲಯಕ್ಕೆ ಹೋಲಿಸಿದರೆ ಈ ಪ್ರಾಥಮಿಕ ವಲಯಕ್ಕೆ ಅಂದರೆ ರೈತರಿಗೆ ದೊರೆತಿರುವ ಸೌಲಭ್ಯಗಳು ಅತಿ ಕಡಿಮೆ. ರೈತರು ಗುಣಮಟ್ಟದ ಬೀಜ ರಸಗೊಬ್ಬರ ಮತ್ತು ಕ್ರಿಮಿನಾಶಕಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಇದರ ಜೊತೆಗೆ ಬೆಳೆಗೆ ಸೂಕ್ತವಾದ ಬೆಲೆ ಮತ್ತು ಬೆಂಬಲ ಬೆಲೆ ಇಲ್ಲದೇ ಪರಿತಪಿಸುತ್ತಿದ್ದಾರೆ. ಕೃಷಿ ಸಲಕರಣೆಗಳಿಗೆ ರಿಯಾಯಿತಿ ದರ ಇಲ್ಲದೆ, ಪಡೆದ ಸಾಲಕ್ಕೆ ಮನ್ನಾ ಇಲ್ಲದೆ, ಬೆಳೆ ವಿಮೆ ಇಲ್ಲದೇ ತೊಂದರೆಗೊಳಗಾಗಿದ್ದಾರೆ. ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಂಘಟಿತರಾಗಿ ಹೋರಾಟಕ್ಕೆ ಸಜ್ಜಾಗಿದ್ದಾರೆ.

2) ರೈತರ ಸಮಸ್ಯೆಗಳ ಕಡೆಗಣನೆ :

ಬ್ರಿಟಿಷ್ ಸರಕಾರದ ಕಾಲದಿಂದಲೂ ರೈತರ ಸಮಸ್ಯೆಗಳು ಕಡೆಗಣಿಸಲ್ಪಟ್ಟಿದ್ದವು. ಆ ಸಮಯದಲ್ಲಿ ಬಂಗಾಳ ಸರ್ಕಾರ ನೀಲಿ ಬೆಳೆ ಬೆಳೆಯುವುದನ್ನು ನಿಷೇಧಿಸಿ ರೈತರ ಭೂಮಿಯನ್ನು ವಶಪಡಿಸಿಕೊಂಡರು. ಜೊತೆಯಲ್ಲಿ ಹೆಚ್ಚು ಮೊತ್ತದ ತೆರಿಗೆ ವಿಧಿಸಿದರು. ಈ ಎಲ್ಲಾ ಕಾರಣಗಳು ಖೇಡಾ ಚಳುವಳಿಗೆ ಕಾರಣವಾಯಿತು.

3) ಸಾಲದ ಹೊರೆ :

ಬ್ಯಾಂಕ್, ಇನ್ನಿತರ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಅದನ್ನು ಮರುಪಾವತಿ ಮಾಡಲು ಸಾಧ್ಯವಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಾರುಕಟ್ಟೆಯ ಏರಿಳಿತ. ಮಧ್ಯವರ್ತಿಗಳ ಹಾವಳಿ ಇವು ಇದಕ್ಕೆ ಕೆಲವು ಕಾರಣಗಳಾದವು. ಇದರಿಂದ ಸಾಲ ಮತ್ತು ಬಡ್ಡಿ ಹೊರೆ ಹೆಚ್ಚಾಗಿ ರೈತರು ಆತ್ಮಹತ್ಯೆ ಮುಂದಾಗುತ್ತಿದ್ದಾರೆ. ಇದು ಸಂಭಂದಿಸಿದ ಕುಟುಂಬಗಳ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡುವುದಲ್ಲದೇ ಸಹವರ್ತಿಗಳಲ್ಲಿ ಭಯದ ವಾತಾವರಣವನ್ನು ಮೂಡಿಸುತ್ತದೆ. ಇದರಿಂದ ಹೊರಬರಲು ರೈತ ಚಳುವಳಿಯು ಹುಟ್ಟಿಕೊಂಡಿತು.

4) ಪ್ರಾಕೃತಿಕ ವಿಕೋಪ:

ಭಾರತದಲ್ಲಿ ಅನಿಯಮಿತ ಮುಂಗಾರು ಸರ್ವಸಾಧಾರಣಾವಾಗಿದೆ. ಆದರೆ ಭಾರತದ ರೈತರು ಅನಿವಾರ್ಯವಾಗಿ ಮುಂಗಾರನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ಕೆಲವೊಮ್ಮೆ ಪ್ರಾಕೃತಿಕ ವಿಕೋಪಗಳಿಗೆ ಈಡಾಗಬೇಕಾಗುತ್ತದೆ. ಆವುಗಳಲ್ಲಿ ಪ್ರಮುಖವಾಗಿ ನೆರೆಹಾವಳಿ, ಬರಗಾಲ, ಕಳೆ, ಕೀಟಭಾಧೆ, ಭೂ ಸವಕಳಿ ಮತ್ತು ಬರಡು ಭೂಮಿ ಇತ್ಯಾದಿ. ಆದುದರಿಂದಲೇ “ಭಾರತದ ರೈತ ಮಳೆಯೊಡನೆ ಜೂಜಾಟವಾಡಿದಂತೆ” ಎಂಬ ಮಾತು ನಿಜವೆನಿಸುತ್ತದೆ.

5) ಅವೈಜ್ಞಾನಿಕ ಭೂಸ್ವಾಧೀನ :

ಎಲ್.ಪಿ.ಜಿ [ಉದಾರೀಕರಣ ಖಾಸಗೀಕರಣ, ಜಾಗತೀಕರಣ] ಗಳ ಪ್ರಭಾವದಿಂದ ನಗರೀಕರಣ ಮತ್ತು ಕೈಗಾರೀಕರಣಗಳ ಹೆಸರಿನಲ್ಲಿ ಸರ್ಕಾರಗಳು, ರೈತರ ಉಳುವ ಭೂಮಿಯನ್ನು ಅವೈಜ್ಞಾನಿಕವಾಗಿ ಸ್ವಾಧೀನಪಡಿಸಿಕೊಳ್ಳುತ್ತಿದೆ. ಜೊತೆಗೆ ಸೂಕ್ತವಾದ ಪರಿಹಾರವನ್ನು ಸಕಾಲಕ್ಕೆ ನೀಡದೆ ಇರುವುದರಿಂದ ಮತ್ತು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸದೆ ಇರುವುದರಿಂದ ರೈತರು, ಭೂಹೀನರು ಮತ್ತು ನಿರುದ್ಯೋಗಿಗಳಾಗುತ್ತಾರೆ. ಇದು ಸರ್ಕಾರದ ವಿರುದ್ಧ ರೈತರು ಬಂಡೇಳುವಂತೆ ಮಾಡುತ್ತದೆ.

7) ಬೆಂಬಲ ಬೆಲೆ :

ಅಸಂಖ್ಯಾತ ಸಮಸ್ಯೆಗಳ ನಡುವೆ ಮುಕ್ತ ಮಾರುಕಟ್ಟೆ ನೀತಿಯಿಂದ ರೈತರು ಬೆಳೆದ ಬೆಳೆಗೆ ಸೂಕ್ತವಾದ ಬೆಲೆಯು ನಿಗದಿಯಾಗದೇ ಮತ್ತು ಸರ್ಕಾರದಿಂದ ಬೆಂಬಲ ಬೆಲೆ ಘೋಷಣೆಯಾಗದೇ ಇದ್ದಾಗ ರೈತರು ಕಂಗಾಲಾಗುತ್ತಾರೆ. ಇಂತಹ ಸಂದರ್ಭದಲ್ಲಿ ಚಳುವಳಿಯ ತೀವ್ರತೆಯು ಹೆಚ್ಚಾಗುತ್ತದೆ.

8. ಭೂಸ್ವಾಧೀನ ಕಾಯ್ದೆ 2013ರ ಬಗ್ಗೆ ಚರ್ಚಿಸಿ.

  1. ನ್ಯಾಯಯುತ ಮತ್ತು ಹೆಚ್ಚಿನ ಪ್ರಮಾಣದ ಪರಿಹಾರವನ್ನು ನೀಡುವುದು:

ಸ್ವಾಧೀನಕ್ಕೊಳಪಟ್ಟ ಭೂಮಿಯ ಮಾಲಿಕರ ಕುಟುಂಬಗಳಿಗೆ ಮತ್ತು ಸ್ವಾಧೀನಕ್ಕೆ ಒಳಪಡುವ ಭೂಮಿಯ ಮಾಲಿಕರ ಕುಟುಂಬಗಳಿಗೆ ನ್ಯಾಯಯುತವಾದ ಬೆಲೆಯನ್ನು ಸರಕಾರ ಅಥವಾ ವೈಯಕ್ತಿಯ ಕಂಪನಿಗಳು ನೀಡಬೇಕು.

  1. ಪುನರ್ ವಸತಿಯನ್ನು ಕಲ್ಪಿಸುವುದು:

ಭೂಮಿಯನ್ನು ಕಳೆದುಕೊಂಡು ವಸತಿ ರಹಿತರಾದವರಿಗೆ ಪುನರ್ ವಸತಿಯನ್ನು ಕಲ್ಪಿಸಿಕೊಡುವುದು ಭೂ ಸ್ವಾಧೀನ ಪಡಿಸಿಕೊಂಡವರ ಕರ್ತವ್ಯವಾಗಿರುತ್ತದೆ. ಈ ಕಾಯಿದೆ ಅನ್ವಯ ಅವರಿಗೆ ಮನೆಗಳನ್ನು ನಿರ್ಮಾಣವನ್ನು ಮಾಡಿಕೊಡಬೇಕು.

  1. ರೈತರ ಭೂಮಿ ಒಡೆತನವನ್ನು ಅವರಿಗೆ ನೀಡುವುದು:

ಸ್ವಾಧೀನಪಡಿಸಿಕೊಂಡ ಭೂಮಿಯು ರೈತರದ್ದಾಗಿದ್ದರೆ ಆ ಭೂಮಿಯ ಒಡೆತನವನ್ನು ಅವರಿಗೇ ನೀಡುವುದು ಈ ಕಾಯ್ದೆಯ ಪ್ರಮುಖ ಶಿಫಾರಸ್ಸು ಆಗಿದೆ.

  1. ಕೃಷಿ ಭೂಮಿಯನ್ನು ಅಂತಿಮ ತೀರ್ಮಾನದ ನಂತರ ಸ್ವಾಧೀನಪಡಿಸಿಕೊಳ್ಳಬೇಕು:

ಉಳುಮೆ ಮಾಡುತ್ತಿರುವ ಭೂಮಿಯನ್ನು ಮೊದಲೇ ಸ್ವಾಧೀನಪಡಿಸಿಕೊಳ್ಳುವಂತಿಲ್ಲ. ಒಂದು ವೇಳೆ ನ್ಯಾಯಾಲಯದಲ್ಲಿ ಮೊಕದ್ದಮೆಗಳಿದ್ದರೆ ನ್ಯಾಯಾಲಯದ ಅಂತಿಮ ತೀರ್ಮಾನದವರೆಗೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವಂತಿಲ್ಲ.

  1. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ವಿಶೇಷ ಸೌಲಭ್ಯ.:

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ರೈತರ ಭೂಮಿಯನ್ನು ವಶಪಡಿಸಿಕೊಳ್ಳುವಂತಿಲ್ಲ ಒಂದು ವೇಳೆ ವಶಪಡಿಸಿಕೊಂಡರೆ, ವಶಪಡಿಸಿಕೊಂಡಷ್ಟೇ ಭೂಮಿಯನ್ನು ಬೇರೆ ಕಡೆ ನೀಡಬೇಕು. ಮುಂತಾದ ಅತ್ಯುತ್ತಮವಾದ ಶಿಫಾರಸ್ಸುಗಳನ್ನು ಈ ಕಾಲು. ಒಳಗೊಂಡಿದೆ ಇದು ರೈತ ಚಳುವಳಿಗೆ ಕಾರಣವಾಗಿರುವ ಅವೈಜ್ಞಾನಿಕ ಭೂ ಸ್ವಾಧೀನದಿಂದಾದ ಚಳುವಳಿಯ ಪ್ರಮುಖ ಫಲಶೃತಿಯಾಗಿದೆ. 3

9. ಮಾನವ ಹಕ್ಕುಗಳ ಚಳುವಳಿಯ ಕಾರಣಗಳಾವುವು?

ಜೀವನ ಸ್ವಾತಂತ್ರ್ಯ, ಸಮಾನತೆ ಮತ್ತು ಘನತೆಗೆ ಹಕ್ಕುಗಳು ಸಂಬಂಧಿಸಿವೆ. ಸ್ವತಂತ್ರವಾಗಿ ಜನಿಸಿದ ವ್ಯಕ್ತಿ ಕಾನೂನಿನ ಚೌಕಟ್ಟಿನಲ್ಲಿ ಸ್ವತಂತ್ರ ಜೀವನ ನಡೆಸುವುದೇ ಅವನ ಹಕ್ಕು.

ಭಾರತ ಮಾನವ ಹಕ್ಕುಗಳ ಕಾಯ್ದೆ-1993

ಯಾವುದೇ ಧರ್ಮ, ಜಾತಿ, ಲಿಂಗ, ಬಣ್ಣ, ಭಾಷೆ, ಜನ್ಮಸ್ಥಳ, ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಇತರ ಸ್ಥಾನಮಾನಗಳ ಅಂತರವಿಲ್ಲದೆ ಮಾನವರು ಈ ಹಕ್ಕುಗಳನ್ನು ಅನುಭವಿಸುತ್ತಾರೆ. ಇಂತಹ ಮಾನವ ಹಕ್ಕುಗಳ ಚಳುವಳಿಗೆ ಕಾರಣಗಳು ಈ ಕೆಳಗಿನಂತಿವೆ.

  1. ನಾಗರೀಕ ಹಕ್ಕುಗಳ ರಕ್ಷಣೆ:

ಎಲ್ಲರೂ ಸಮಾನವಾಗಿ ಹುಟ್ಟಿದ್ದಾರೆ ಮತ್ತು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಸ್ವತಂತ್ರರಾಗಿರುತ್ತಾರೆ. ಭಾರತ ಸಂವಿಧಾನದ 3 ನೇ ಅಧ್ಯಾಯದಲ್ಲಿ ನಾಗರೀಕರಿಗೆ ನೀಡಿರುವ ಹಕ್ಕುಗಳನ್ನೇ ಉಲ್ಲೇಖಿಸಿದೆ. ಆದರೆ ವಾಸ್ತವವಾಗಿ ದಲಿತರು, ಮಹಿಳೆಯರು ಮತ್ತು ಮಕ್ಕಳು ಶೋಷಣೆಗೆ ಒಳಗಾಗಿದ್ದಾರೆ. ಇಂತಹ ಶೋಷಣೆಯನ್ನು ತಡೆಗಟ್ಟಲು ಮಾನವ ಹಕ್ಕುಗಳ ಚಳುವಳಿಗಾರರು ಸತತ ಪ್ರಯತ್ನ ಮಾಡಿ ಅರಿವು ಮೂಡಿಸುತ್ತಿದ್ದಾರೆ.

  1. ದಾಸ್ಯದಿಂದ ವಿಮೋಚನೆ:

ಸಂವಿಧಾನಾತ್ಮಕವಾಗಿ ಗುಲಾಮಗಿರಿ ನಿಷೇಧಿಸಲ್ಪಟ್ಟಿದ್ದರೂ ರಾಷ್ಟ್ರದ ವಿವಿಧ ಭಾಗಗಳಲ್ಲಿ ಇನ್ನೂ ಚಾಲ್ತಿಯಲ್ಲಿದೆ. ಬಾಲಕಾರ್ಮಿಕ ಪದ್ಧತಿ ಜೀತಪದ್ದತಿ ಇವುಗಳನ್ನು ಅಲ್ಲಲ್ಲಿ ಕಾಣಬಹುದು. ಹೀಗಾಗಿ ಚಳುವಳಿ ಅನಿವಾರ್ಯವಾಗಿದೆ.

  1. ಕೌಟುಂಬಿಕ ಜೀವನದ ರಕ್ಷಣೆ:

ಪ್ರತಿಯೊಬ್ಬ ನಾಗರೀಕನು ಕೌಟುಂಬಿಕ ಜೀವನದ ಹಕ್ಕನ್ನು ಹೊಂದಿದ್ದಾನೆ. ಆಧುನಿಕತೆಯ ಪರಿಣಾಮವಾಗಿ ಯುವ ಜನತೆ ಅಂತರ್ಜಾತಿಯ ವಿವಾಹ ಮತ್ತು ಅಂತರ್ ಧರ್ಮೀಯ ವಿವಾಹಗಳಿಗೆ ಮಾರುಹೋಗುತ್ತಿದ್ದಾರೆ. ಆದರೆ ಇದನ್ನು ತಪ್ಪಿಸಲು ಕುಟುಂಬದ ಗೌರವವನ್ನು ಕಾಪಾಡಲು ‘ಮರ್ಯಾದಾ ಹತ್ಯೆ’ ಯಂತಹ ದುಷ್ಕೃತ್ಯಗಳಿಗೆ ಕಾರಣವಾಗುತ್ತದೆ. ವರದಕ್ಷಿಣೆ ಪಿಡುಗು ಅನೇಕ ಸಂದರ್ಭಗಳಲ್ಲಿ ಆತ್ಮಹತ್ಯೆ ಅಥವಾ ಕೊಲೆಯಲ್ಲಿ ಪರ್ಯಾವಸನವಾಗುತ್ತದೆ.

  1. ದಲಿತರ ಹಕ್ಕುಗಳ ರಕ್ಷಣೆ:

ಅನ್ಯಾಯ, ದೌರ್ಜನ್ಯ, ಸಾಮಾಜಿಕ ಬಹಿಷ್ಕಾರ, ಮಡೆಸ್ನಾನ, ಮಲ ಹೊರುವ ಪದ್ಧತಿ, ಇವುಗಳನ್ನು ಬಲವಂತವಾಗಿ ಮಾಡಿಸಲಾಗುತ್ತದೆ. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

  1. ಮೊಕದ್ದಮೆಗಳನ್ನು ದಾಖಲಿಸಲು ನಿರಾಕರಿಸುವುದು.

ಅನೇಕ ಸಂದರ್ಭಗಳಲ್ಲಿ ಅನ್ಯಾಯಕ್ಕೊಳಗಾದ ವ್ಯಕ್ತಿಗಳು ಸಂಬಂಧಿಸಿದ ಅಧಿಕಾರಗಳನ್ನು ಸಂಪರ್ಕಿಸಿ ಮೊಕದ್ದಮೆ ದಾಖಲಿಸಲು ಮುಂದಾದಾಗ ಪ್ರಭಾವಿ ವ್ಯಕ್ತಿಗಳ ಅಥವಾ ಬಲಿಷ್ಟರ ಮಧ್ಯ ಪ್ರವೇಶದಿಂದ ತಿರಸ್ಕರಿಸಲಾಗುತ್ತದೆ. ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸದೇ ವೈದ್ಯಕೀಯ ನೆರವು ನೀಡದ ಹಲವಾರು ನಿದರ್ಶನಗಳಿವೆ. ಇಂತಹ ಎಷ್ಟೋ ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ. ಈ ಮೇಲಿನ ಅಂಶಗಳಿಂದಾಗಿ ಅನೇಕ ಚಳುವಳಿಗಳು ಜರುಗಿವೆ.

10. ಪರಿಸರ ಚಳುವಳಿಯ ಕಾರಣಗಳಾವುವು?

ಮಾನವ ದುರಾಸೆಯಿಂದಾಗಿ ಪರಿಸರವನ್ನು ನಾಶಗೊಳಿಸುತ್ತಿದ್ದಾನೆ. ವಾಯು, ಜಲ, ಶಬ್ದ ಹೀಗೆ ಈ ಪರಿಸರವನ್ನು ಅವನತಿಯತ್ತ ಸಾಗಿಸುತ್ತಿದ್ದಾನೆ. ಮಾನವನು ನೈಸರ್ಗಿಕ ಸಂಪತ್ತನ್ನೇ ನಿರಂತರವಾಗಿ ಶೋಷಣೆ ಗುರಿ ಪಡಿಸುವುದರ ಸಲುವಾಗಿ ಜೀವ ವೈವಿಧ್ಯಗಳ ವಿನಾಶ ಪರಿಸರ ಚಳುವಳಿಗೆ ಕಾರಣವಾಗಿದೆ. ಈ ಕೆಳಗಿನ ಅಂಶಗಳು ಪರಿಸರ ಚಳುವಳಿಗೆ ಪ್ರಮುಖ ಕಾರಣಗಳಾಗಿವೆ.

  1. ಪರಿಸರ ನಾಶ:

ಭಾರತ ಸರ್ಕಾರ ಆರ್ಥಿಕ ಅಭಿವೃದ್ಧಿಯ ಸಲುವಾಗಿ ಕೈಗಾರಿಕೆ ಮತ್ತು ತಾಂತ್ರಿಕ ಅಭಿವೃದ್ಧಿಯನ್ನು ಕೈಗೊಂಡಿದೆ. ಇದರ ಫಲವಾಗಿ ಕೈಗಾರಿಕೀಕರಣದಿಂದ ಭೂ ಸವಕಳಿ ಮತ್ತು ಭೂಮಿಯ ಫಲವತ್ತತೆಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಿದೆ.

  1. ಪರಿಸರ ಮಾಲಿನ್ಯ:

ಪರಿಸರದಲ್ಲಿ ಉಂಟಾಗುತ್ತಿರುವ ಜಲಮಾಲಿನ್ಯ, ವಾಯುಮಾಲಿನ್ಯ, ಶಬ್ದಮಾಲಿನ್ಯ, ಇಂತಹ ಪರಿಸರ ಮಾಲಿನ್ಯಗಳಿಂದ ಅನೇಕ ಬಗೆಯ ಸಮಸ್ಯೆಗಳನ್ನು ಸಾಮಾನ್ಯ ಜನರು ಅನುಭವಿಸಬೇಕಾಗಿದೆ. ಪರಿಸರ ಮಾಲಿನ್ಯಗಳ ಪ್ರಕ್ರಿಯೆಗಳಿಂದಾಗಿ ನ್ಯಾಯಕ್ಕಾಗಿ ನೊಂದ ಜನರು, ಬುದ್ದಿಜೀವಿಗಳು ಮತ್ತು ಪರಿಸರವಾದಿಗಳು, ಚಳುವಳಿಯ ಹಾದಿಯನ್ನು ಹಿಡಿಯುವಂತೆ ಮಾಡಿದೆ.

  1. ಜೀವ ವೈವಿದ್ಯಗಳ ರಕ್ಷಣೆ:

ಮಿತಿ ಮೀರಿದ ನಗರ ನಿರ್ಮಾಣ ಕಾರ್ಯ ಮತ್ತು ಇಂಧನಕ್ಕೋಸ್ಕರ ಕಾಡು ಕಡಿಯುತ್ತಿರುವುದರಿಂದ ಅಲ್ಲಿ ಆಶ್ರಯ ಪಡೆದಿದ್ದ ವನ್ಯಜೀವಿಗಳು, ಪಕ್ಷಿಸಂಕುಲಗಳು ಆಹಾರದ ಕೊರತೆಯೂ ಸೇರಿದಂತೆ ಹಲವಾರು ನೈಸರ್ಗಿಕ ಸಮಸ್ಯೆಗಳನ್ನು ಅನುಭವಿಸುತ್ತಿವೆ. ಈ ಕಾರಣದಿಂದ ವನ್ಯಜೀವಿ ಸಂಪತ್ತನ್ನು ರಕ್ಷಿಸುವ ಸಲುವಾಗಿ ಚಿಸ್ಕೋ, ಅಪ್ಪಿಕೋ, ಪಶ್ಚಿಮಘಟ್ಟ ಉಳಿಸಿ ಚಳುವಳಿಗಳು ಪ್ರಾರಂಭವಾದವು.

  1. ಪರಿಸರ ಶಿಕ್ಷಣದ ಕೊರತೆ:

ನೈಸರ್ಗಿಕ ಪರಿಸರದಲ್ಲಿ ಅನುಭವ ಪಡೆಯದ ಹೊರತು ಅದರ ಅನುಕೂಲಗಳ ಅರಿವು ಮನುಷ್ಯರಿಗೆ ತಿಳಿಯುವುದಿಲ್ಲ “ಹಸಿರೇ ಉಸಿರು” ಕಾಡು ಕಡಿದರೆ ಪ್ರಕೃತಿಯ ವಿನಾಶ, ಇದರಿಂದ ಮನುಕುಲದ ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ. ಇಂತಹ ವಿಚಾರಧಾರೆಗಳು, ಪರಿಸರ ಜ್ಞಾನದ ಕೊರತೆಯಿಂದ ಅನೇಕ ತೊಂದರೆಗಳನ್ನು ಎದುರಿಸಬೇಕಾಗಿದೆ. ಆದ್ದರಿಂದ ಜನ ಜಾಗೃತಿಗೊಳಿಸಲು ಪರಿಸರವಾದಿಗಳು ಹೋರಾಟಕ್ಕೆ ಇಳಿದರು.

  1. ಪರಿಸರ ನಿರ್ವಹಣೆಯ ಕೊರತೆ:

ಪರಿಸರ ನಾಶ, ಪರಿಸರ ಮಾಲಿನ್ಯ, ಪ್ರಕೃತಿ ವಿಕೋಪದಿಂದ ಉಂಟಾದ ತೊಂದರೆಗಳು, ನಗರೀಕರಣದಿಂದ ಉಂಟಾದ ತ್ಯಾಜ್ಯ ವಸ್ತುಗಳು ಇವುಗಳಿಂದ ಮಾನವನ ದಿನನಿತ್ಯದ ಸಹಜ ಜೀವನಕ್ಕೆ ಹಾನಿ ಉಂಟಾಗುತ್ತಿದೆ. ಪರಿಸರ ಮಾಲಿನ್ಯಗಳನ್ನು ತಡೆಗಟ್ಟುವಲ್ಲಿ ಇದರ ನಿರ್ವಹಣೆಯಲ್ಲಿ ಉಂಟಾಗುವ ವಿಳಂಬದಿಂದ ನೊಂದ ಜನರು ಮತ್ತು ಪರಿಸರವಾದಿಗಳು ಚಳುವಳಿಯಲ್ಲಿ ತೊಡಗಿದರು.

11. ಪರಿಸರ ಚಳುವಳಿಯ ರಾಜಕೀಯ ಪರಿಣಾಮಗಳಾವುವು?

ಭಾರತದ ಸಂವಿಧಾನದ 4ನೇ ಅಧ್ಯಾಯದಲ್ಲಿರುವ ರಾಜ್ಯ ನೀತಿ ನಿರ್ದೇಶಕ ತತ್ವಗಳ ಅಡಿಯಲ್ಲಿ ಪರಿಸರ ರಕ್ಷಣೆಗೆ ಸಂಬಂಧಿಸಿದ ವಿಷಯಗಳನ್ನು 1976 ರಲ್ಲಿ 42. ನೇ ತಿದ್ದುಪಡಿಯ ಮೂಲಕ ಅಳವಡಿಸಲಾಯಿತು. ಭಾರತ ಸರ್ಕಾರವು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಪರಿಸರ ಯೋಜನೆ ರಾಷ್ಟ್ರೀಯ ಸಮಿತಿಯನ್ನು ರಚಿಸಿತು. 1985 ರಲ್ಲಿ ಇದು ಪರಿಸರ ಮತ್ತು ಅರಣ್ಯ ಸಚಿವಾಲಯ ಎಂಬ ಹೆಸರಿನಲ್ಲಿ ಪೂರ್ಣ ಪ್ರಮಾಣದ ಇಲಾಖೆಯಾಗಿ ಮಾರ್ಪಟ್ಟಿತು.

1.ಸಂವಿಧಾನಾತ್ಮಕ ಕಾಯಿದೆಗಳು:

ಭಾರತ ಸರ್ಕಾರ ಪರಿಸರಕ್ಕೆ ಸಂಬಂಧಿಸಿದಂತೆ ಕೆಲವು ಶಾಸನಗಳನ್ನು ರಚನೆ ಮಾಡಿತು. ಅವುಗಳೆಂದರೆ

1) ವನ್ಯಜೀವಿ ಸಂರಕ್ಷಣಾ ಕಾಯ್ದೆ – 1972

2) ಜಲಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ-1974

3) ಅರಣ್ಯ ಸಂರಕ್ಷಣಾ ಕಾಯ್ದೆ 1980

4) ವಾಯುಮಾಲಿನ್ಯ ತಡೆ ನಿಯಂತ್ರಣ ಕಾಯ್ದೆ – 1981

5) ಪರಿಸರ ಸಂರಕ್ಷಣಾ ಕಾಯ್ದೆ 1986

6) ಜೀವ ವೈವಿಧ್ಯ ಕಾಯ್ದೆ – 2002

  1. ಗಂಗಾ ನದಿ ನೀರಿನ ಶುದ್ದೀಕರಣ ಯೋಜನೆ:

ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಗಂಗಾ ನದಿಯ ಶುದ್ದೀಕರಣದ ಉದ್ದೇಶದಿಂದ ಒಂದು ತಜ್ಞರ ಸಮಿತಿಯನ್ನು ನೇಮಿಸಿತು. ಆ ಸಮಿತಿಯ ಶಿಫಾರಸ್ಸುಗಳು ಈ ಕೆಳಕಂಡಂತಿವೆ.

  1. ಗಂಗಾ ನದಿಯ ಪಾತ್ರದಲ್ಲಿ ಚರಂಡಿ ನೀರನ್ನು ಶುದ್ದೀಕರಿಸಲು ಶುದ್ದೀಕರಣ ಘಟಕವೊಂದನ್ನು ಸ್ಥಾಪಿಸಲು ಸೂಚಿಸಿತು.
  2. 28 ಚಿತಾಗಾರಗಳನ್ನು ನಿರ್ಮಾಣ ಮಾಡುವುದರ ಮೂಲಕ ಶವಗಳನ್ನು ನದಿಗೆ ಎಸೆಯುವುದನ್ನು ತಪ್ಪಿಸುವುದು.
  3. ತಾಜ್ ಮಹಲ್ ರಕ್ಷಣೆ ಮತ್ತು ಉಸ್ತುವಾರಿ.

3. ಕೃಷ್ಣ ಮಹಾಜನ್ ಸಮಿತಿ:

ಈ ಸಮಿತಿಯು ತಾಜ್‌ಮಹಲ್‌ನ ಸುತ್ತಮುತ್ತಲಿನ ಮಾಲಿನ್ಯ ತಪ್ಪಿಸುವ ಸಲುವಾಗಿ ಒಂದು ವರದಿಯನ್ನು ರಚಿಸಿತು. ಇದರಲ್ಲಿ ತಾಜ್‌ಮಹಲ್ ರಕ್ಷಣೆಗೆ ಬೇಕಾದ ಕ್ರಮಗಳನ್ನು ಒಳಗೊಂಡಿತ್ತು.

ಭಾರತದ ರಾಜ್ಯಗಳು ಕೇಂದ್ರದ ಸಲಹೆಯ ಮೇರೆಗೆ ವನ್ಯ ಜೀವಿ ಕಾಯ್ದೆ ಉಲ್ಲಂಘಿಸಿದವರನ್ನು ಶಿಕ್ಷಿಸಲು ರಾಜ್ಯಗಳಲ್ಲಿ ಪರಿಸರ ಪ್ರಾದೇಶಿಕ ಮತ್ತು ವಿಭಾಗೀಯ ಕಛೇರಿಗಳನ್ನು ಸ್ಥಾಪಿಸಿವೆ.

IV. ಹತ್ತು ಅಂಕದ ಪ್ರಶ್ನೆಗಳು

1. ದಲಿತ ಚಳುವಳಿಯ ಕಾರಣಗಳು ಮತ್ತು ರಾಜಕೀಯ ಪರಿಣಾಮಗಳನ್ನು ವಿವರಿಸಿ.

ದಲಿತ ಚಳುವಳಿಗೆ ಕೆಳಗಿನ ಅಂಶಗಳು ಪ್ರಮುಖ ಕಾರಣಗಳಾಗಿವೆ.

  1. ಸಾಮಾಜಿಕ ಅಸಮಾನತೆ:

ಸಮಾಜದಲ್ಲಿ ವಿವಿಧ ವರ್ಗ, ಜಾತಿ, ಧರ್ಮಗಳ ಆಧಾರದ ಮೇಲೆ ಶ್ರೇಷ್ಠ ಮತ್ತು ಕನಿಷ್ಟ ಮೇಲು ಕೀಳು ಎಂಬ ತಾರತಮ್ಯಗಳಿಂದ ಶೋಷಣೆ ಮತ್ತು ದೌರ್ಜನ್ಯ ನಡೆಸುವುದು ಮತ್ತು ಸಮಾನ ಗೌರವ ನೀಡದೇ ಇರುವುದು ಸಾಮಾಜಿಕ ಅಸಮಾನತೆಯಾಗಿದೆ. ಇದು ದಲಿತ ಚಳುವಳಿಗೆ ನಾಂದಿಯಾಗಿದೆ.

  1. ಆರ್ಥಿಕ ಅಸಮಾನತೆ:

ಆರ್ಥಿಕವಾಗಿ ಸದೃಢರಾದ ಮೇಲ್ವರ್ಗದವರು ತಮ್ಮ ಸಂಪತ್ತನ್ನು ಅಭಿವೃದ್ಧಿಪಡಿಸಲು ಕಾರಣಕರ್ತರಾದ ದಲಿತರನ್ನು ಅಮಾನವೀತವಾಗಿ ನಡೆಸಿಕೊಳ್ಳುವುದು ಅಷ್ಟೇ ಅಲ್ಲದೇ ಅವರಿಗೆ ಸಿಗಬೇಕಾದ ಪಾಲನ್ನು ನಿರಾಕರಿಸಿದರು. ಇದರಿಂದ ಅವರ ಸ್ಥಿತಿ ದಯನೀಯವಾಯಿತು. ಈ ಚಳುವಳಿ ಸ್ಫೋಟಗೊಳ್ಳಲು ಇದು ಕಾರಣವಾಯಿತು.

  1. ತಾರತಮ್ಯ:

ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ರಂಗಗಳಲ್ಲಿನ ತಾರತಮ್ಯಗಳೇ ದಲಿತರನ್ನು ನಿಕೃಷ್ಟ ಸ್ಥಿತಿಗೆ ತಳ್ಳಿದವು. ಈ ತಾರತಮ್ಯದ ವಿರುದ್ಧ ನಿರಂತರ ಹೋರಾಟಗಳು ದಲಿತ ಚಳುವಳಿಗೆ ಮೈಲಿಗಲ್ಲುಗಳಾಗಿವೆ.

  1. ಅರಿವಿನ ಕೊರತೆ:

ಸಮಾಜದಲ್ಲಿ ದಲಿತರಿಗೆ ಶೋಷಣೆ ಮತ್ತು ದೌರ್ಜನ್ಯಗಳು ಏಕೆ ನಡೆಯುತ್ತದೆ ಎಂಬ ತಿಳುವಳಿಕೆ ಇಲ್ಲದಿರುವುದಕ್ಕೆ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಇವರನ್ನು ಶಿಕ್ಷಣದಿಂದ ದೂರ ಇರಿಸಲಾಗಿತ್ತು. ಕಾರಣ ಇವರಿಗೆ ತಿಳುವಳಿಕೆಯ ಕೊರತೆ ಇತ್ತು.

  1. ರಾಜಕೀಯ ಅಸಮಾನತೆ:

ದಲಿತರು ರಾಜಕೀಯ ಕ್ಷೇತ್ರದಲ್ಲಿ ಸಮಾನ ಅವಕಾಶಗಳಿಂದ ವಂಚಿತರಾಗಿದ್ದರು. ಇದರಿಂದ ರಾಜಕೀಯ ಹಕ್ಕುಗಳನ್ನು ಪಡೆಯಲು ಸಾಧ್ಯವಾಗಲಿಲ್ಲ ಎಲ್ಲಾ ರಾಜಕೀಯ ಅಧಿಕಾರಗಳು ಮೇಲ್ವರ್ಗದವರ ಹಿಡಿತದಲ್ಲಿದ್ದವು ಈ ಅಧಿಕಾರವನ್ನು ಪಡೆಯಲು ಚಳುವಳಿಗಳು ಆರಂಭವಾದವು.

ದಲಿತ ಚಳುವಳಿಯ ರಾಜಕೀಯ ಪರಿಣಾಮಗಳು:

ದಲಿತ ಚಳುವಳಿಯ ಪರಿಣಾಮವಾಗಿ ಸ್ವಾತಂತ್ರೋತ್ತರದಲ್ಲಿ ದಲಿತರ ಸ್ಥಿತಿಯನ್ನು ಉತ್ತಮಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಯಿತು. ಭಾರತದ ಸಂವಿಧಾನ ದಲಿತರ ಸ್ಥಿತಿಯನ್ನು ಸುಧಾರಿಸಲು ಮತ್ತು ಅವರನ್ನು ಮುಖ್ಯ ವಾಹಿನಿಗೆ ತರಲು ಹಲವಾರು ಸಂವಿಧಾನಾತ್ಮಕ ಅವಕಾಶಗಳನ್ನು ಒದಗಿಸಿಕೊಟ್ಟಿತು.

ಸಂವಿಧಾನಾತ್ಮಕ ಕ್ರಮಗಳು:

  • ಸಂವಿಧಾನದ 14 ನೇ ವಿಧಿಯ ಪ್ರಕಾರ ಕಾನೂನಿನ ಎದುರು ಎಲ್ಲರೂ ಸಮಾನರು.
  • 15 ನೇ ವಿಧಿಯ 142 ನೇ ಉಪ ವಿಧಿಗಳ ಪ್ರಕಾರ ಜಾತಿ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ.
  • 15 ನೇ ವಿಧಿಯ 4 ನೇ ಉಪವಿಧಿಯ ಪ್ರಕಾರ ಪರಿಶಿಷ್ಟ ಜಾತಿ ಮತ್ತು ವರ್ಗಗಳು ಹಾಗೂ ಹಿಂದುಳಿದವರ ಸಾಮಾಜಿಕ ಮತ್ತು ಶೈಕ್ಷಣಿಕ ಉನ್ನತಿಗೆ ವಿಶೇಷ ಕ್ರಮಗಳು.
  • 16 ನೇ ವಿಧಿಯ ಪ್ರಕಾರ ಸಾರ್ವಜನಿಕ ಉದ್ಯೋಗಗಳಲ್ಲಿ ಸಮಾನ ಅವಕಾಶಗಳು.

17 ನೇ ವಿಧಿಯ ಪ್ರಕಾರ ಅಸ್ಪೃಶ್ಯತಾ ನಿವಾರಣೆ.

38 ನೇ ವಿಧಿಯ ಪ್ರಕಾರ ಪ್ರಜಾ ಕಲ್ಯಾಣಕ್ಕಾಗಿ ರಾಜ್ಯ ಶ್ರಮಿಸುವುದರ ಜೊತೆಗೆ ಸಂಪತ್ತಿನ ಅಸಮಾನ ಹಂಚಿಕೆ ಮತ್ತು ಸ್ಥಾನಮಾನ ಅವಕಾಶಗಳಲ್ಲಿ ಅಸಮಾನತೆಯನ್ನು ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಶ್ರಮಿಸಬೇಕು.

ವಿಧಿ 39 (ಎ) ಪ್ರಕಾರ ಜೀವನ ಮಾರ್ಗಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವುದು.

46 ನೇ ವಿಧಿಯ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡಲು ಸಾಮಾಜಿಕ ಅಸಮಾನತೆ ಮತ್ತು ಎಲ್ಲಾ ರೀತಿಯ ಶೋಷಣೆಯನ್ನು ತಡೆಗಟ್ಟುವುದು.

243 (ಡಿ) ಮತ್ತು 243 (ಟಿ) ವಿಧಿಗಳ ಪ್ರಕಾರ ಸ್ಥಳೀಯ ಸರ್ಕಾರಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸ್ಥಾನಗಳನ್ನು ಮೀಸಲಾಗಿರಿಸುವುದು.

330 ಮತ್ತು 332 ನೇ ವಿಧಿಯ ಪ್ರಕಾರ ಲೋಕಸಭೆ ರಾಜ್ಯ ವಿಧಾನಸಭೆಗಳಲ್ಲಿ ಸ್ಥಾನಗಳ ಮೀಸಲಾತಿ.

ಶಾಸನೀಯ ಕ್ರಮಗಳು:

ನಾಗರೀಕ ಹಕ್ಕುಗಳ ರಕ್ಷಣಾ ಕಾಯ್ದೆ-1955:

1976 ಕ್ಕಿಂತ ಮೊದಲು ಇದನ್ನು ‘ಅಸ್ಪೃಶ್ಯತಾ ಆಚರಣೆ ಅಪರಾಧ ಕಾಯ್ದೆ’ ಎಂದು ಕರೆಯಲಾಗುತ್ತಿತ್ತು. ಈ ಕಾಯ್ದೆ ಪ್ರಕಾರ ಯಾವುದೇ ವ್ಯಕ್ತಿಯನ್ನು ಸಾರ್ವಜನಿಕ ಸಂಸ್ಥೆ ಸಾರ್ವಜನಿಕ ಧಾರ್ಮಿಕ ಪೂಜಾಸ್ಥಳ, ಪ್ರಾರ್ಥನಾ ಸ್ಥಳ ಇವುಗಳ ಪ್ರವೇಶದ ವಿಷಯದಲ್ಲಿ ಅವಮಾನ ಮಾಡಿದರೆ ಜಾತಿ ಆಧಾರದ ಮೇಲೆ ಅಥವಾ ಅಸ್ಪೃಶ್ಯತಾ ಹೆಸರಿನಲ್ಲಿ ನೇರ ಅಥವಾ ಪರೋಕ್ಷವಾಗಿ ಅಸ್ಪೃಶ್ಯತೆಯನ್ನು ಚಾರಿತ್ರಿಕವಾಗಿ ತಾತ್ವಿಕವಾಗಿ ಅಥವಾ ಧಾರ್ಮಿಕ ಅಂಶಗಳ ಆಧಾರದ ಮೇಲೆ ಅನುಸರಿಸಿದರೆ ಅಪರಾಧವಾಗುತ್ತದೆ.

1989 ರ ದೌರ್ಜನ್ಯ ತಡೆ ಕಾಯ್ದೆ:

ಈ ಕಾಯ್ದೆಯ ಸೆಕ್ಷನ್ 21 ರ ಪ್ರಕಾರ ದೌರ್ಜನ್ಯಕ್ಕೊಳಗಾದ ವ್ಯಕ್ತಿಗಳಿಗೆ ಕಾನೂನು ಸಲಹೆಯನ್ನು ಸಾಮಾಜಿಕ ಮತ್ತು ಆರ್ಥಿಕ ಬೆಂಬಲ ನೀಡುವಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾದಾಗ ದಂಡನಾರ್ಹವಾಗುತ್ತದೆ. ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು ವಿಶೇಷ ನ್ಯಾಯಾಲಯಗಳನ್ನು ರಚಿಸಿ ಸರಕಾರಿ ಅಭಿಯೋಜಕರನ್ನು ನೇಮಿಸಲು ನಿರ್ದೇಶಿಸಲಾಗಿದೆ. ಆದುದರಿಂದಲೇ ಈ ಕಾಯ್ದೆಯು “ದಲಿತ ಕಾಯ್ದೆ” ಎಂದೇ ಜನಪ್ರಿಯವಾಗಿದೆ.

ದಲಿತರ ಹಕ್ಕುಗಳನ್ನು ರಕ್ಷಿಸಲು ಉತ್ತಮ ವ್ಯವಸ್ಥೆಯ ಅವಶ್ಯಕತೆ:

ತೊಂದರೆಗೊಳಗಾದ ದಲಿತರು ಪರಿಹಾರವನ್ನು ಪಡೆಯಲು ನ್ಯಾಯಾಂಗ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗದ ಸಹಾಯವನ್ನು ಪಡೆಯಬಹುದಾಗಿದೆ. ಇವೆಲ್ಲದರ ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರಾಷ್ಟ್ರೀಯ ಆಯೋಗ ಇವರಿಗೆ ಸಂಬಂಧಿಸಿದ ಹಕ್ಕುಗಳನ್ನು ರಕ್ಷಣೆ ಮಾಡುತ್ತದೆ.

ಹೀಗೆ ದಲಿತರ ಏಳಿಗೆಗಾಗಿ, ಅವರ ಸಾಮಾಜಿಕ ಜೀವನದ ಸ್ತಿತಿಗತಿಗಳ ಸುಧಾರಣೆಗಳಿಗಾಗಿ ಸರಕಾರವು ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ.

2. ಹಿಂದುಳಿದ ಚಳುವಳಿಯ ಕಾರಣಗಳು ಮತ್ತು ರಾಜಕೀಯ ಪರಿಣಾಮಗಳನ್ನು ವಿವರಿಸಿ.

ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರನ್ನು ಹಿಂದುಳಿದ ವರ್ಗಗಳೆಂದು ಕರೆಯುತ್ತಾರೆ.

‘ಈ ವರ್ಗಗಳು ಕೂಡ ದೌರ್ಜನ್ಯಕ್ಕೆ ಮತ್ತು ಶೋಷಣೆಗೆ ಒಳಪಟ್ಟಿದ್ದರು. ಹಿಂದುಳಿದ ವರ್ಗಗಳಿಗೆ ಉದಾಹರಣೆ: ಕುರುಬ, ಬೆಸ್ತ, ಮಡಿವಾಳ, ಕುಂಬಾರ, ಕಮ್ಮಾರ ಇತ್ಯಾದಿ. ಹಿಂದುಳಿದ ವರ್ಗಗಳ ಚಳುವಳಿಗೆ ಕಾರಣಗಳು ಈ ಕೆಳಗಿನಂತಿವೆ.

  1. ಸಾಮಾಜಿಕ ತಾರತಮ್ಯ:

ಮೇಲು ಕೀಳೆಂಬ ಭೇದಭಾವವನ್ನು ಈ ವರ್ಗಗಳು ಹಲವಾರು ವರ್ಷಗಳಿಂದ ಅನುಭವಿಸಿದವು. ಹೀಗಾಗಿ ಸಾಮಾಜಿಕ ಮುಖ್ಯವಾಹಿನಿಯಲ್ಲಿ ಸೇರ್ಪಡೆಗೊಳ್ಳಲು ಇವರಿಗೆ ಅವಕಾಶವಿರಲಿಲ್ಲ. ಸ್ವಾತಂತ್ರೋತ್ತರ ಭಾರತದಲ್ಲಿ ಸೌಲಭ್ಯಗಳನ್ನು ಪಡೆಯಲು ಹಾಗೂ ತಮ್ಮ ಪಾಲನ್ನು ಪಡೆಯಲು ಈ ವರ್ಗಗಳು ಚಳುವಳಿಯನ್ನು ಪ್ರಾರಂಭಿಸಿದರು.

ಆರ್ಥಿಕ ಶೋಷಣೆ:

ಆರ್ಥಿಕ ಶೋಷಣೆಗಳಿಗೂ ಒಳಗಾಗಿದ್ದ ಈ ವರ್ಗಗಳು ಇಂತಹ ಶೋಷಣೆಗಳಿಂದ ಹೊರಬರಲು ಸಂಘಟಿತರಾಗಿ ಸೌಲಭ್ಯಗಳನ್ನು ಪಡೆಯುವ ಸಲುವಾಗಿ ಹೋರಾಟವನ್ನು ಪ್ರಾರಂಭಿಸಿದರು.

ಶೈಕ್ಷಣಿಕವಾಗಿ ಹಿಂದುಳಿದಿರುವಿಕೆ:

ಶಿಕ್ಷಣ ಸೌಲಭ್ಯದಿಂದ ವಂಚಿತರಾಗಿದ್ದ ಈ ವರ್ಗಗಳು ಈ ಹಕ್ಕನ್ನು ಪಡೆಯಲು ವ್ಯವಸ್ಥಿತವಾಗಿ ಚಳುವಳಿಯನ್ನು ಪ್ರಾರಂಭಿಸಿದರು.

ರಾಜಕೀಯ ಪ್ರಾತಿನಿಧ್ಯತೆಯ ವಂಚನೆ:

ಈ ರಂಗವೂ ಕೂಡ ಮೇಲ್ವರ್ಗದವರ ಪ್ರಾಬಲ್ಯಕ್ಕೆ ಒಳಗಾಗಿದ್ದರಿಂದ ಹಿಂದುಳಿದ ವರ್ಗದವರು ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿದ್ದರು. ಈ ವರ್ಗದವರನ್ನು ಪ್ರತಿನಿಧಿಸುವ ಯಾವ ವ್ಯಕ್ತಿಗಳಿಗೂ ಅವಕಾಶವಿರಲಿಲ್ಲ.

ಏಕೀಕರಣ:

350 ಕ್ಕಿಂತ ಹೆಚ್ಚು ಸಂಖ್ಯೆಯಲ್ಲಿರುವ ಹಿಂದುಳಿದ . ವರ್ಗಗಳು ಛಿದ್ರ ಛಿದ್ರವಾಗಿದ್ದವು. ಇವುಗಳ ಮಧ್ಯ ಐಕ್ಯತೆಯನ್ನು ಸಾಧಿಸಲು ಚಳುವಳಿಯನ್ನು ಪ್ರಾರಂಭಿಸಿದರು.

ಈ ಕಾರಣಾಂಶಗಳು ಚಳುವಳಿಯನ್ನು ಪ್ರಾರಂಭಿಸಿ ಸಾಕಷ್ಟು ಪ್ರಮಾಣದ ಸುಧಾರಣೆಗಳಿಗೆ ಸಾಕ್ಷಿಯಾದವು.

ರಾಜಕೀಯ ಪರಿಣಾಮಗಳು:

ಭಾರತದಲ್ಲಿ ಹಿಂದುಳಿದ ವರ್ಗಗಳ ಚಳುವಳಿ ಈ ಮೇಲ್ಕಂಡ ಕಾರಣಗಳಿಂದ ಪ್ರಾರಂಭವಾಯಿತು. ಹಿಂದುಳಿದ

ವರ್ಗಗಳಿಗೆ ಮೀಸಲಾತಿ ಕಲ್ಪಿಸುವಲ್ಲಿ ಗ್ವಾಲಿಯಾರ್‌ನ ಸಯ್ಯಾಜಿರಾವ್ ಗಾಯಕವಾಡ್‌ರವರು ಮೊದಲಿಗರು. 1918 ರಲ್ಲಿ ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ‘ಲೆಸ್ಸಿ ಮಿಲ್ಲರ್’ ರವರ ಅಧ್ಯಕ್ಷತೆಯಲ್ಲಿ ಒಂದು ಆಯೋಗವನ್ನು ರಚಿಸಿ ಹಿಂದುಳಿದ ವರ್ಗದವರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿದರು. ಇದರೊಂದಿಗೆ ಮಹಾರಾಜರಿಂದ ನೇಮಕಗೊಂಡ ಶ್ರೀ ಕಾಂತ್‌ ರಾಜೇ ಅರಸ್‌ರವರು ಆಯೋಗ ನೀಡಿದ ಶಿಫಾರಸ್ಸುಗಳನ್ನು ಕಾರ್ಯಗತಗೊಳಿಸಿದರು. ಇದರಲ್ಲಿ ಆ ವರ್ಗಗಳಿಗೆ ನೀಡಿದ ಶೇಕಡ 50 ರಷ್ಟು ಮೀಸಲಾತಿ ಅತಿ ಮುಖ್ಯವಾದುದಾಗಿದೆ. ಈ ವರ್ಗಗಳ ಶೈಕ್ಷಣಿಕ ಅಭಿವೃದ್ದಿಗಾಗಿ ತಾತಯ್ಯ ಎಂದೇ ಜನಪ್ರಿಯರಾಗಿ ಕರೆಯಲ್ಪಟ್ಟ ಮೈಸೂರಿನ ಶ್ರೀ ವೆಂಕಟ ಕೃಷ್ಣಯ್ಯ ಮತ್ತು ದೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಪ್ರಮುಖರಾಗಿದ್ದಾರೆ.

ಸಂವಿಧಾನಾತ್ಮಕ ಕ್ರಮಗಳು:

  1. ಸಂವಿಧಾನದ 16 ರ 4ನೇ ಉಪವಿಧಿಯ ಪ್ರಕಾರ ಹಿಂದುಳಿದ ವರ್ಗದವರಿಗೆ ಸಾರ್ವಜನಿಕ ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ನೀಡಿದೆ.
  2. 340 ನೇ ವಿಧಿಯ ಪ್ರಕಾರ ಭಾರತದ ರಾಷ್ಟ್ರಪತಿಯವರು ಹಿಂದುಳಿದ ವರ್ಗಗಳ ಆಯೋಗವನ್ನು ನೇಮಿಸಲು ಅಧಿಕಾರ ಪಡೆದಿದ್ದಾರೆ.
  3. ಹಿಂದುಳಿದ ವರ್ಗದಲ್ಲಿರುವ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಸಾಲ ಸೌಲಭ್ಯ ಮತ್ತು ಆರ್ಥಿಕ ಸಹಾಯವನ್ನು ಒದಗಿಸಲು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆರ್ಥಿಕ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಲಾಗಿದೆ.
  4. ಭಾರತದ ಎಲ್ಲಾ ರಾಜ್ಯಗಳು, ರಾಜ್ಯ ಹಿಂದುಳಿದ ಆಯೋಗಗಳು ಮತ್ತು ಅಭಿವೃದ್ದಿ ಮಂಡಳಿಗಳನ್ನು ರಚಿಸಿಕೊಳ್ಳಲು ಅವಕಾಶವಿದೆ. ಕರ್ನಾಟಕದಲ್ಲಿ ಶ್ರೀ ದೇವರಾಜ್ ಅರಸ್ ಅಭಿವೃದ್ದಿ ಮಂಡಳಿ ಕಾರ್ಯ ನಿರ್ವಹಿಸುತ್ತಿದೆ.
  5. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳು ಮತ್ತು ಇತರೆ ಹಿಂದುಳಿದ ವರ್ಗಗಳ ವಿರುದ್ದ ನಡೆಯುವ ತಾರತಮ್ಯ ಮತ್ತು ಹಕ್ಕುಗಳ ಉಲ್ಲಂಘನೆಯ ವಿಷಯಕ್ಕೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸುತ್ತದೆ.

ಇತರೆ ಕ್ರಮಗಳು:

  • 1953 ರಲ್ಲಿ ಭಾರತ ಸರ್ಕಾರ ಶ್ರೀ ಕಾಕಾ ಕಾಲೇಲ್ಕರ್ ಅವರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗದವರ ಆಯೋಗವನ್ನು ರಚಿಸಿತು.
  • 1979 ರಲ್ಲಿ ಶ್ರೀ ಬಿ.ಪಿ. ಮಂಡಲ್‌ರವರ ನೇತೃತ್ವದಲ್ಲಿ ಇನ್ನೊಂದು ಸಮಿತಿಯನ್ನು ರಚಿಸಿತು. ಈ ಆಯೋಗವು 1980 ರಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ನೀಡಿತು. 7 ನೇ ಆಗಸ್ಟ್ 1990 ರಲ್ಲಿ ವರದಿಯನ್ನು ಜಾರಿಗೊಳಿಸಲಾಯಿತು. ಈ ಆಯೋಗವು 3743 ಜಾತಿಗಳನ್ನು ಮತ್ತು ಸಮುದಾಯಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಗುರುತಿಸಿತು. ಇವು ಒಟ್ಟು ಜನಸಂಖ್ಯೆಯ ಶೇಕಡ 52% ರಷ್ಟನ್ನು ಪ್ರತಿನಿಧಿಸುತ್ತದೆ.

ಈ ಆಯೋಗದ ಕೆಲವು ಶಿಫಾರಸ್ಸುಗಳು ಈ ಕೆಳಗಿನಂತಿವೆ.

  1. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವ್ಯಾಪ್ತಿಯಲ್ಲಿ ಬರುವ ತಾಂತ್ರಿಕ ಮತ್ತು ವೃತ್ತಿಪರ ಸಂಸ್ಥೆಗಳನ್ನು ಒಳಗೊಂಡು ಇತರೆ ಹಿಂದುಳಿದ ವರ್ಗಗಳಿಗೆ ಉದ್ಯೋಗ ಕ್ಷೇತ್ರದಲ್ಲಿ ಶೇಕಡ 27% ರಷ್ಟು ಮೀಸಲಾತಿಯನ್ನು ಕಲ್ಪಿಸುವುದು.
  2. ಒಂದು ವೇಳೆ ಇತರೆ ಹಿಂದುಳಿದ ವರ್ಗದವರು ಮುಕ್ತ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದರೆ ಅವರನ್ನು ಶೇಕಡಾ 27 ರ ಮೀಸಲಾತಿ ವ್ಯಾಪ್ತಿಯಲ್ಲಿ ತರಬಾರದು ಮತ್ತು ಅವರನ್ನು ಸಾಮಾನ್ಯ ವರ್ಗ ಎಂದೇ ಪರಿಗಣಿಸಬೇಕು, ಇದು ಬಡ್ತಿಗೂ ಅನ್ವಯಿಸುತ್ತದೆ.
  3. ಬ್ಯಾಕ್‌ಲಾಗ್ ಸಂದರ್ಭದಲ್ಲಿ ಮೂರು ವರ್ಷಗಳ ಕಾಲ ಕಾದಿರಿಸಬೇಕು.
  4. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗಿರುವಂತೆ ಉದ್ಯೋಗಕ್ಕೆ ವಯೋಮಿತಿಯನ್ನು ಸಡಿಲಿಸಬೇಕು.

1960 ರಲ್ಲಿ ಡಾ॥ ನಾಗನಗೌಡ ಸಮಿತಿ, 1972 ರಲ್ಲಿ ಎಲ್.ಜಿ. ಹಾವನೂರು ಸಮಿತಿ, 1977 ರಲ್ಲಿ ಚಿನ್ನಪ್ಪ ರೆಡ್ಡಿ ಸಮಿತಿ, 1983 ರಲ್ಲಿ ವೆಂಕಟಸ್ವಾಮಿ ಸಮಿತಿ ಇವರುಗಳು ಈ ಕ್ಷೇತ್ರದಲ್ಲಿ ಶ್ಲಾಘನೀಯ ಕಾರ್ಯವನ್ನು ನಿರ್ವಹಿಸಿರುತ್ತಾರೆ.

3. ಮಹಿಳಾ ಚಳುವಳಿಗೆ ಕಾರಣಗಳು ಮತ್ತು ರಾಜಕೀಯ ಪರಿಣಾಮಗಳನ್ನು ವರ್ಣಿಸಿ.

ಲಿಂಗ ತಾರತಮ್ಯವು ಪುರಾಣ ಕಾಲದಿಂದಲೂ ಕಂಡುಬರುತ್ತಿದೆ. ಮಹಿಳೆಯರು ಸ್ವಾತಂತ್ರ್ಯ ಸಾಮಾಜಿಕ, ಆರ್ಥಿಕ, ರಾಜಕೀಯ, ಮುಂತಾದ ರಂಗಗಳಲ್ಲಿ ಅವಕಾಶಗಳಿಂದ ವಂಚಿತರಾಗಿದ್ದರು.

ಈ ಕೆಳಗಿನ ಅಂಶಗಳು ಮಹಿಳಾ ಚಳುವಳಿಗೆ ಪ್ರಮುಖ ಕಾರಣವಾಗಿವೆ.

  1. ಅಸಮಾನತೆ:

ಸ್ತ್ರೀ ಮತ್ತು ಪುರುಷರಿಬ್ಬರ ನಡುವೆ ಇರುವ ಭೇಧ ಭಾವ ತಾರತಮ್ಯಗಳು ಅಸಮಾನತೆಗೆ ಕಾರಣವಾಗಿವೆ. ಮಹಿಳೆಯರು ಶಿಕ್ಷಣ, ಉದ್ಯೋಗ, ಆಸ್ತಿಯ ಹಕ್ಕನ್ನು ಪಡೆಯುವಲ್ಲಿ ವಂಚಿತರಾಗಿದ್ದಾರೆ. ಅಸಮಾನತೆಯು ಮಹಿಳಾ ಚಳುವಳಿಗೆ ಪ್ರಮುಖ ಕಾರಣವಾಗಿದೆ.

  1. ವರದಕ್ಷಿಣೆ ಪಿಡುಗು:

ಮಹಿಳೆಯು ಈ ಸಾಮಾಜಿಕ ಪಿಡುಗಿನಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಶೋಷಣೆಗೆ ಒಳಗಾಗಿದ್ದಾಳೆ. ಮಹಿಳೆಯ ತಂದೆ ತಾಯಿಗಳು ಮತ್ತು ಪೋಷಕರು ಕೂಡಾ ಸಾಲಗಾರರಾಗಿ ಶೋಷಣೆಗೆ ಒಳಗಾಗಿದ್ದಾರೆ. ಇದು ಮಹಿಳಾ ಚಳುವಳಿಗೆ ಪ್ರಮುಖ ಕಾರಣವಾಗಿದೆ.

ಮಾನವ ಹಕ್ಕುಗಳ ಸಂರಕ್ಷಣೆ ಮಾಡದಿರುವುದು:

ಮಹಿಳೆಯರ ಮೇಲಿನ ದೌರ್ಜನ್ಯವು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಹೀಗೆ ಮಾನವ ಹಕ್ಕುಗಳ ಉಲ್ಲಂಘನೆಯು ಮಹಿಳಾ ಚಳುವಳಿಗೆ ಕಾರಣವಾಗಿದೆ.

  1. ಲಿಂಗಾಧಾರಿತ ಸಾಮಾಜಿಕ ವ್ಯವಸ್ಥೆ:

ಪುರುಷರು ತಮ್ಮ ಏಕಸ್ವಾಮ್ಯವನ್ನು ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮುಂದುವರೆಸಿ, ತಮ್ಮ ದೌರ್ಜನ್ಯವನ್ನು ಮಹಿಳೆಯರ ಮೇಲೆ ಮುಂದುವರೆಸಿದ್ದಾರೆ.

  1. ಲೈಂಗಿಕ ಹಿಂಸಾಚಾರ:

ಸಮಯ ಸ್ಥಳದ ವಯೋಮಾನದ ಪರಿವೇ ಯಿಲ್ಲದ ಲೈಂಗಿಕ ಕಿರುಕುಳಗಳು ಮಹಿಳಾ ದೌರ್ಜನ್ಯಗಳು ಮಹಿಳೆಯ ಮೇಲೆ ಅವ್ಯಾಹತವಾಗಿ ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಇದರ ಪ್ರಮಾಣವು ಹೆಚ್ಚಿದೆ. ಇದು ಮಹಿಳಾ ಹೋರಾಟಕ್ಕೆ ಕಾರಣವಾಗಿದೆ.

  1. ಕೌಟುಂಬಿಕೆ ಹಿಂಸೆ:

ಕುಟುಂಬಗಳಲ್ಲಿ ಪುರುಷರು ಅಜ್ಞಾನ, ಅವಿವೇಕತನ, ದುಶ್ಚಟಗಳಿಂದ ವಿವೇಚನೆಯಿಲ್ಲದೇ ಮಹಿಳೆಯನ್ನು ಹಿಂಸೆಗೆ ಗುರಿಪಡಿಸಿದ್ದಾರೆ. ಇದು ದೈಹಿಕ, ಮಾನಸಿಕ, ಲೈಂಗಿಕ ಹಿಂಸೆಯಾಗಿದ್ದು ಅನೇಕ ಬಾರಿ ಜೀವಕ್ಕೆ ಹಾನಿ ತರುತ್ತದೆ. ಇದು ಮಹಿಳೆಯರು. ಸಂಘ ಸಂಸ್ಥೆಗಳನ್ನು ಕಟ್ಟಿ ಹೋರಾಟ ನಡೆಸಲು ಕಾರಣವಾಗಿದೆ.

ಈ ಎಲ್ಲಾ ಕಾರಣಗಳು ಮಹಿಳಾ ಚಳುವಳಿಗೆ ಪ್ರಮುಖ ಅಂಶಗಳಾಗಿವೆ. ಇವುಗಳಿಂದ ಅನೇಕ ಸಂವಿಧಾನಾತ್ಮಕ, ಸಾಮಾಜಿಕ, ರಾಜಕೀಯ ಬದಲಾವಣೆಗೆ ಸಹಕಾರಿಯಾಗಿದೆ.

ರಾಜಕೀಯ ಪರಿಣಾಮಗಳು:

ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆ ಮತ್ತು ದೌರ್ಜನ್ಯಗಳಿಂದ ಹೊರಬರಲು ಮಹಿಳಾ ಚಳುವಳಿ ಪ್ರಾರಂಭವಾಯಿತು. ಇದರೊಂದಿಗೆ ಮಹಿಳೆಯರ ಸಬಲೀಕರಣಕ್ಕಾಗಿ ಭಾರತ ಸರ್ಕಾರವು ಕೆಲವು ಸಂವಿಧಾನಾತ್ಮಕ ಸೌಲಭ್ಯಗಳನ್ನು ದೊರಕಿಸಿಕೊಟ್ಟಿದೆ.

  1. ಸಂವಿಧಾನಾತ್ಮಕ ಅವಕಾಶಗಳು:

ឯ໖ 14, 15, 15(3), 16, 34(2), 39(ಬಿ) ಮತ್ತು 42 ಇವು ಲಿಂಗಾಧಾರಿತ ಅಸಮಾನತೆಯನ್ನು ಮತ್ತು ತಾರತಮ್ಯವನ್ನು ನಿವಾರಿಸುತ್ತದೆ.

2. ಶಾಸನಾತ್ಮಕ ಕ್ರಮಗಳು:

ಅತ್ಯಾಚಾರ – [ಭಾರತ ದಂಡ ಸಂಹಿತೆ-376] ಅಪಹರಣ ಮತ್ತು ದುರುದ್ದೇಶಗಳಿಗೆ ಹೆಣ್ಣು ಮಕ್ಕಳನು. ಬಳಸಿಕೊಳ್ಳುವುದು [ಭಾರತ ದಂಡ ಸಂಹಿತೆ ಸೆಕ್ಷೆನ್ 363-373]

ವರದಕ್ಷಿಣೆಗಾಗಿ ಕಿರುಕುಳ [ ಭಾರತದ ದಂಡ ಸಂಹಿತ 3 498-2].

  • ವಿಶೇಷ ಕಾನೂನುಗಳು:

→ ಕೌಟುಂಬಿಕ ನ್ಯಾಯಾಲಯಗಳ ಕಾಯ್ದೆ 1954

→ ವಿಶೇಷ ವಿವಾಹ ಕಾಯ್ದೆ 1954

→ ಹಿಂದೂ ವಿವಾಹ ಕಾಯ್ದೆ – 1955

→ ವರದಕ್ಷಿಣೆ ನಿಷೇದ ಕಾಯ್ದೆ – 1961

→ ಗರ್ಭಿಣಿಯರ ವೈದ್ಯಕೀಯ ಮುಕ್ತಾಯ ಕಾಯ್ದೆ 1971

→ ಗೃಹ ಹಿಂಸೆಯ ವಿರುದ್ಧ ರಕ್ಷಣಾ ಕಾಯ್ದೆ – 2005

→ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006

3. ಮಹಿಳೆಯರಿಗಾಗಿ ವಿಶೇಷ ಸವಲತ್ತುಗಳು:

1992 ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು ಪ್ರಾರಂಭವಾಗಿದ್ದು ಮಹಿಳೆಯರಿಗೆ ಸಂಬಂಧಿಸಿದ ಕಾನೂನು ಕಾರ್ಯಕ್ರಮಗಳನ್ನು ವಿಶ್ಲೇಷಿಸಲು ಮತ್ತು ಸಂವಿಧಾನಾತ್ಮಕ ಕ್ರಮಗಳನ್ನು ಪರಿಶೀಲಿಸಲು ಹಾಗೂ ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಲ್ಪಟ್ಟಿದೆ.

4. ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ:

ಭಾರತದ ಸಂವಿಧಾನದ 73 ನೇ ಮತ್ತು 74 ನೇ ಸಂವಿಧಾನದ ತಿದ್ದುಪಡಿ ಕಾಯ್ದೆ ಅನ್ವಯ ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡಾ 33% ಸ್ಥಾನಗಳ ಮೀಸಲಾತಿ ನೀಡಲು ಕಾನೂನು ಅವಕಾಶ ನೀಡಿದೆ.

5. ಹೆಣ್ಣು ಮಗುವಿಗಾಗಿ ರಾಷ್ಟ್ರೀಯ ಕಾರ್ಯ ಯೋಜನೆ:

ಹೆಣ್ಣು ಮಕ್ಕಳಿಗೆ ಸುಭದ್ರ, ಉಜ್ವಲ ಮತ್ತು ಸಧೃಡ ಉವಿಮಕ್ಕಾಗಿ ಈ ಕಾರ್ಯ ಯೋಜನೆಗಳನ್ನು ರೂಪಿಸಿದೆ.

ಮಹಿಳಾ ಸಬಲೀಕರಣಕ್ಕಾಗಿ ರಾಷ್ಟ್ರೀಯ ಯೋಜನೆ:

ಮಹಿಳಾ ಮತ್ತು ಕಲ್ಯಾಣ ಇಲಾಖೆಯು ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ಅಡಿಯಲ್ಲಿ ಭಾರತ ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಕೆಲವು ಕಾರ್ಯಕ್ರಮ ಮತ್ತು ಯೋಜನೆಗಳನ್ನು ರೂಪಿಸಿದೆ. ಅವುಗಳೆಂದರೆ

  1. ಉದ್ಯೋಗ ಖಾತ್ರಿ ಯೋಜನೆ 1993
  2. ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆ – 1995
  3. ಸ್ವರ್ಣ ಜಯಂತಿ ಷಹರಿ ರೋಜ್‌ಗಾರ್ ಯೋಜನೆ 1997

1999 4. ಜವಾಹರ ಗ್ರಾಮ ಸಮೃದ್ಧಿ ಯೋಜನೆ

  1. ಸ್ವರ್ಣ ಜಯಂತಿ ಗ್ರಾಮಸ್ವರಾಜ್ ಯೋಜನೆ – 1999
  2. ໖ ৬ ₫ – 1999

ಇದರ ಜೊತೆಗೆ ಕರ್ನಾಟಕ ಸರ್ಕಾರವು ಕೂಡಾ ಮಹಿಳಾ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

  1. ಉದ್ಯೋಗಿನಿ ಯೋಜನೆ.
  2. ಮಹಿಳಾ ತರಬೇತಿ ಯೋಜನೆ.
  3. ದೇವದಾಸಿ ಪುನರ್ ವಸತಿ ಯೋಜನೆ.
  4. ಸೆಪ್ ಯೋಜನೆ.
  5. ಸ್ತ್ರೀ ಶಕ್ತಿ ಯೋಜನೆ.
  6. ಸಾಂತಾನ ಯೋಜನೆ.
  7. ಅಮೃತ ಯೋಜನೆ.
  8. ಭಾಗ್ಯಲಕಿ ಯೋಜನೆ.
  9. ಮನಸ್ತಿನಿ ಯೋಜನೆ.
  10. ಕಾರ್ಮಿಕ ಚಳುವಳಿಯ ಕಾರಣಗಳು ಮತ್ತು ರಾಜಕೀಯ ಪರಿಣಾಮಗಳನ್ನು ವಿವರಿಸಿ.

ಬಹಳಷ್ಟು ಸಂಕಷ್ಟದ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಉತ್ತಮ ಕೆಲಸದ ವಾತಾವರಣ ಮತ್ತು ಸರಿಯಾದ ಕೂಲಿಯನ್ನು ಪಡೆಯುವ ಸಲುವಾಗಿ ಕಾರ್ಮಿಕರು ಚಳುವಳಿಯನ್ನು ಸಂಘಟಿಸಿದರು. ಈ ಕಾರ್ಮಿಕ ಚಳುವಳಿಗೆ ಪ್ರಮುಖ ಕಾರಣಗಳು ಕೆಳಗಿನಂತಿವೆ.

  1. ಕಾರ್ಮಿಕರ ಹಿತಾಸಕ್ತಿ ನಿರ್ಲಕ್ಷ್ಯ:

ಮಾಲೀಕರ ಹಿತಾಸಕ್ತಿಗೆ ಹೆಚ್ಚಿನ ಗಮನ ನೀಡಿ ಕಾರ್ಮಿಕರ ಹಿತಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕಾರಣ ಕಾರ್ಮಿಕರು ಚಳುವಳಿಗೆ ಧುಮುಕಿದರು.

  1. ಉದ್ಯೋಗಿಗಳ ಕಡೆ ಗಣನೆ:

ಕಂಪನಿಯ ಅತ್ಯುನ್ನತ ಅಂಗವು ಕಾರ್ಮಿಕರ ಸಮಸ್ಯೆಗಳನ್ನು ಏಕಪಕ್ಷೀಯವಾಗಿ ನಿರ್ಧರಿಸುವ ವ್ಯವಸ್ಥೆ ರೂಢಿಯಲ್ಲಿತ್ತು. ಇದರಿಂದ ಸ್ವಾಭಾವಿಕವಾಗಿ ಕಾರ್ಮಿಕರು ಕಡೆಗಣಿಸಲ್ಪಡುತ್ತಿದ್ದರು.

  1. ಸೌಲಭ್ಯ ಪಡೆಯಲು:

ಕೈಗಾರಿಕೆಗಳಲ್ಲಿ ಮತ್ತು ದುಡಿಯುವ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರು, ವಿಶ್ರಾಂತಿ ಗೃಹ. ಶೌಚಾಲಯ ವ್ಯವಸ್ಥೆ. ಮಕ್ಕಳ ಪಾಲನಾ ಕೇಂದ್ರ ಮುಂತಾದ ಸೌಲಭ್ಯಗಳು ಕಾರ್ಮಿಕರಿಗೆ ಸಿಗುತ್ತಿಲ್ಲ. ಈ ಸೌಲಭ್ಯಗಳನ್ನು ಪಡೆಯಲು ಚಳುವಳಿಯನ್ನು ಸಂಘಟಿಸುತ್ತಾರೆ.

  1. ಕಲ್ಯಾಣ ಕಾರ್ಯಕ್ರಮಗಳು:

ಸಾಮಾಜಿಕ ಭದ್ರತೆಗಳಾದ ವಿಮೆ, ಬೋನಸ್, ಉಚಿತ ನಿವಾಸ, ಸಾರಿಗೆ ಮತ್ತು ಶಿಕ್ಷಣದ ಸೌಲಭ್ಯ ಕಾರ್ಮಿಕರ ಪರಿಹಾರ ಇನ್ನು ಮುಂತಾದವುಗಳನ್ನು ಪಡೆದುಕೊಳ್ಳಲು ಹೋರಾಟಕ್ಕೆ ಅಣಿಯಾಗಿದ್ದಾರೆ.

  1. ಅಸಂಘಟಿತ ವಲಯಗಳ ಕಾರ್ಮಿಕರ ಸ್ಥಿತಿ:

ಕೃಷಿ ಕಾರ್ಮಿಕರು ಗರಿಷ್ಟ ಮಟ್ಟದಲ್ಲಿ ಶೋಷಣೆಗೆ

ಒಳಗಾಗಿರುತ್ತಾರೆ ಇಂತಹ ಅಸಂಘಟಿತ ವಲಯದಲ್ಲಿನ ಕಾರ್ಮಿಕರ ಸ್ಥಿತಿ ಶೋಚನೀಯವಾಗಿರುತ್ತದೆ. ಆದ್ದರಿಂದ ಕಾರ್ಮಿಕರು ಪರಿಹಾರಕ್ಕಾಗಿ ಹೋರಾಟ ಮಾಡುತ್ತಿದ್ದಾರೆ.

ಈ ಮೇಲಿನ ಅಂಶಗಳು ಚಳುವಳಿಗೆ ಕಾರಣವಾಗಿ ತಮ್ಮ ಜೀವನ ಸುಧಾರಣೆಗಾಗಿ ಪ್ರಯತ್ನ ಮಾಡಲಾಗುತ್ತಿದೆ.

ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡಲು ಅವರಿಗೆ ಅವಶ್ಯವಿರುವ ಸೌಲಭ್ಯಗಳನ್ನು ನೀಡಲು, ಅವರ ಬೇಡಿಕೆಗಳನ್ನು ಈಡೇರಿಸಲು ಸಮಸ್ಯೆಗಳನ್ನು ನಿವಾರಿಸಲು ಸರ್ಕಾರ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮಗಳು ಕಾರ್ಮಿಕರ ಚಳುವಳಿಯ ಕಾರಣದಿಂದಾಗಿ ರಾಜಕೀಯ ಫಲಶೃತಿಗಳಾಗಿವೆ. ಅದಕ್ಕಾಗಿ ಸರಕಾರವು ಅನೇಕ ಕಾಯಿದೆಗಳನ್ನು ರಚಿಸಿದೆ. ಆ ಕಾಯಿದೆಗಳು ಈ ಕೆಳಗಂಡಂತಿವೆ.

1) ಕಾರ್ಮಿಕ ಪರಿಹಾರ ಕಾಯ್ದೆ 1923:

ಈ ಒಂದು ಕಾಯಿದೆಯು ಬ್ರಿಟಿಷ್ ಇಂಡಿಯಾದಲ್ಲಿ 1 ನೇ ಜುಲೈ 1924 ರಲ್ಲಿ ಜಾರಿಗೆ ಬಂದಿತು. ಕಾರ್ಮಿಕರು ಅಪಘಾತದಿಂದ ಗಾಯಗೊಂಡರೆ ಅವರಿಗೆ ಮಾಲೀಕರು ಹಣದ ರೂಪದಲ್ಲಿ ಪರಿಹಾರವನ್ನು ನೀಡಬೇಕು ಹಾಗೂ ಆ ಅಪಘಾತದಿಂದ ತೀರಿಕೊಂಡರೆ ಅವನ ಮಾಸಿಕ ವೇತನದ 50% ರಷ್ಟನ್ನು ನೀಡಬೇಕು.

2) ವೇತನ ಬಟವಾಡೆ ಕಾಯ್ದೆ-1936.

ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ವೇತನವನ್ನು ನಿಯಂತ್ರಿಸುವ ಕಾಯ್ದೆಯು ಇದಾಗಿದೆ.

3) ವಾರದ ರಜೆ ಕಾಯ್ದೆ – 1942

ಪ್ರತಿ ವಾರಕ್ಕೊಮ್ಮೆ ವೇತನ ಸಹಿತ ರಜೆಯನ್ನು ಕಾರ್ಮಿಕರಿಗೆ ನೀಡಬೇಕು ಎಂದು ಈ ಕಾಯ್ದೆಯ 1942 ರಲ್ಲಿ ಜಾರಿಗೆ ಬಂದಿತು.

4) ಕನಿಷ್ಟ ವೇತನ ಕಾಯ್ದೆ 1948

ಸರಕಾರವು ನಿಗಧಿಪಡಿಸುವ ಕನಿಷ್ಟ ವೇತನವನ್ನು ಮಾಲೀಕರು ನೀಡಬೇಕು.

5) ಕಾರ್ಮಿಕರ ವಿಮಾ ಕಾಯ್ದೆ 1948

ಈ ಕಾಯ್ದೆಯು ಕಾರ್ಮಿಕರಿಗೆ ಸಾಮಾಜಿಕ-ಆರ್ಥಿಕ ನ್ಯಾಯವನ್ನು ಒದಗಿಸಿತು.

6) ಕಾರ್ಮಿಕರ ಭವಿಷ್ಯ ನಿಧಿ ಕಾಯ್ದೆ 1965

ರಾಜ್ಯ ಸರ್ಕಾರ ಮಾಲೀಕರು ಮತ್ತು ಪ್ರತಿ ಕಾರ್ಮಿಕನೇ ಅವನ ಭವಿಷ್ಯಕ್ಕಾಗಿ ಹಣವನ್ನು ಕೂಡಿಡುವ ವ್ಯವಸ್ಥೆ ಇದಾಗಿದೆ.

7) ಬೋನಸ್ ಕಾಯ್ದೆ 1965

ಒಂದು ಆರ್ಥಿಕ ವರ್ಷದಲ್ಲಿ ಆದ ಲಾಭಾಂಶದ ಒಂದಿಷ್ಟು ಭಾಗವನ್ನು ಬೋನಸ್ಸಾಗಿ ಕಾರ್ಮಿಕರಿಗೆ ನೀಡುವ ಕಾಯ್ದೆ ಇದಾಗಿದೆ.

ಈ ಎಲ್ಲಾ ಕಾಯ್ದೆಗಳು ಕಾರ್ಮಿಕ ಚಳುವಳಿಯ ಫಲಶೃತಿಗಳಾಗಿವೆ.

5. ರೈತ ಚಳುವಳಿಯ ಕಾರಣಗಳು ಮತ್ತು ರಾಜಕೀಯ ಪರಿಣಾಮಗಳನ್ನು ವರ್ಣಿಸಿ.

ಭಾರತದ ಬೆನ್ನೆಲುಬು ರೈತರು. ಇವರು ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಭಿಸಿದ್ದಾರೆ. ರೈತರು ಅನೇಕ ಸಮಸ್ಯೆಗಳಿಗೆ ಸಿಲುಕಿದ್ದಾರೆ. ಹೀಗಾಗಿ ರೈತರು ಚಳುವಳಿಗೆ ಮುಂದಾಗಿದ್ದಾರೆ. ರೈತರ ಚಳುವಳಿಗೆ ಈ ಕೆಳಗಿನ ಅಂಶಗಳು ಕಾರಣವಾಗಿವೆ.

1) ವಂಚಿತ ಭಾವನೆ:

ದ್ವಿತೀಯ ವಲಯಕ್ಕೆ ಹೋಲಿಸಿದರೆ ಈ ಪ್ರಾಥಮಿಕ “ ವಲಯಕ್ಕೆ ಅಂದರೆ ರೈತರಿಗೆ ದೊರೆತಿರುವ ಸೌಲಭ್ಯಗಳು ಅತಿ ಕಡಿಮೆ. ರೈತರು ಗುಣಮಟ್ಟದ ಬೀಜ ರಸಗೊಬ್ಬರ ಮತ್ತು ಕ್ರಿಮಿನಾಶಕಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಇದರ ಜೊತೆಗೆ ಬೆಳೆಗೆ ಸೂಕ್ತವಾದ ಬೆಲೆ ಮತ್ತು ಬೆಂಬಲ ಬೆಲೆ ಇಲ್ಲದೇ ಪರಿತಪಿಸುತ್ತಿದ್ದಾರೆ. ಕೃಷಿ ಸಲಕರಣೆಗಳಿಗೆ ರಿಯಾಯಿತಿ ದರ ಇಲ್ಲದೆ, ಪಡೆದ ಸಾಲಕ್ಕೆ ಮನ್ನಾ ಇಲ್ಲದೆ

ಬೆಳೆ ವಿಮೆ ಇಲ್ಲದೇ ತೊಂದರೆಗೊಳಗಾಗಿದ್ದಾರೆ. ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಂಘಟಿತರಾಗಿ ಹೋರಾಟಕ್ಕೆ ಸಜ್ಜಾಗಿದ್ದಾರೆ.

2) ರೈತರ ಸಮಸ್ಯೆಗಳ ಕಡೆಗಣನೆ :

ಬ್ರಿಟಿಷ್ ಸರಕಾರದ ಕಾಲದಿಂದಲೂ ರೈತರ ಸಮಸ್ಯೆಗಳು ಕಡೆಗಣಿಸಲ್ಪಟ್ಟಿದ್ದವು. ಆ ಸಮಯದಲ್ಲಿ ಬಂಗಾಳ ಸರ್ಕಾರ ನೀಲಿ ಬೆಳೆ ಬೆಳೆಯುವುದನ್ನು ನಿಷೇಧಿಸಿ ರೈತರ ಭೂಮಿಯನ್ನು ವಶಪಡಿಸಿಕೊಂಡರು, ಜೊತೆಯಲ್ಲಿ ಹೆಚ್ಚು ಮೊತ್ತದ ತೆರಿಗೆ ವಿಧಿಸಿದರು. ಈ ಎಲ್ಲಾ ಕಾರಣಗಳು ಖೇಡಾ ಚಳುವಳಿಗೆ ಕಾರಣವಾಯಿತು.

3) ಸಾಲದ ಹೊರೆ:

ಬ್ಯಾಂಕ್, ಇನ್ನಿತರ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಅದನ್ನು ಮರುಪಾವತಿ ಮಾಡಲು ಸಾಧ್ಯವಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಾರುಕಟ್ಟೆಯ ಏರಿಳಿತ. ಮಧ್ಯವರ್ತಿಗಳ ಹಾವಳಿ ಇವು ಇದಕ್ಕೆ ಕೆಲವು ಕಾರಣಗಳಾದವು ಇದರಿಂದ ಸಾಲ ಮತ್ತು ಬಡ್ಡಿ ಹೊರೆ ಹೆಚ್ಚಾಗಿ ರೈತರು ಆತ್ಮಹತ್ಯೆ ಮುಂದಾಗುತ್ತಿದ್ದಾರೆ. ಇದು ಸಂಬಂಧಿಸಿದ ಕುಟುಂಬಗಳ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡುವುದಲ್ಲದೇ ಸಹ ವರ್ತಿಗಳಲ್ಲಿ ಭಯದ ವಾತಾವರಣವನ್ನು ಮೂಡಿಸುತ್ತದೆ. ಇದರಿಂದ ಹೊರ ಬರಲು ರೈತ ಚಳುವಳಿಯು ಹುಟ್ಟಿಕೊಂಡಿತು.

4) ಪ್ರಾಕೃತಿಕ ವಿಕೋಪ:

ಭಾರತದಲ್ಲಿ ಅನಿಯಮಿತ ಮುಂಗಾರು ಸರ್ವಸಾಧಾರಣಾವಾಗಿದೆ. ಆದರೆ ಭಾರತದ ರೈತರು ಅನಿವಾರ್ಯವಾಗಿ ಮುಂಗಾರನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ಕೆಲವೊಮ್ಮೆ ಪ್ರಾಕೃತಿಕ ವಿಕೋಪಗಳಿಗೆ ಈಡಾಗಬೇಕಾಗುತ್ತದೆ. ಆವುಗಳಲ್ಲಿ ಪ್ರಮುಖವಾಗಿ ನೆರೆಹಾವಳಿ, ಬರಗಾಲ, ಕಳೆ, ಕೀಟಭಾದೆ. ಭೂ ಸವಕಳಿ ಮತ್ತು ಬರಡು ಭೂಮಿ ಇತ್ಯಾದಿ ಆದುದರಿಂದಲೇ “ಭಾರತದ ರೈತ ಮಳೆಯೊಡನೆ ಜೂಜಾಟವಾಡಿದಂತೆ” ಎಂಬ ಮಾತು ನಿಜವೆನಿಸುತ್ತದೆ.

5) ಅವೈಜ್ಞಾನಿಕ ಭೂಸ್ವಾಧೀನ :

ಎಲ್.ಪಿ.ಜಿ [ಉದಾರೀಕರಣ ಖಾಸಗೀಕರಣ. ಜಾಗತೀಕರಣ] ಗಳ ಪ್ರಭಾವದಿಂದ ನಗರೀಕರಣ ಮತ್ತು ಕೈಗಾರೀಕರಣಗಳ ಹೆಸರಿನಲ್ಲಿ ಸರ್ಕಾರಗಳು, ರೈತರ ಉಳುವ ಭೂಮಿಯನ್ನು ಅವೈಜ್ಞಾನಿಕವಾಗಿ ಸ್ವಾಧೀನಪಡಿಸಿಕೊಳ್ಳುತ್ತಿದೆ. ಜೊತೆಗೆ ಸೂಕ್ತವಾದ ಪರಿಹಾರವನ್ನು ಸಕಾಲಕ್ಕೆ ನೀಡದೆ ಇರುವುದರಿಂದ ಮತ್ತು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸದೆ ಇರುವುದರಿಂದ ರೈತರು ಭೂಹೀನರು ಮತ್ತು ನಿರುದ್ಯೋಗಿಗಳಾಗುತ್ತಾರೆ. ಇದು ಸರ್ಕಾರದ ವಿರುದ್ಧ ರೈತರು ಬಂಡೇಳುವಂತೆ ಮಾಡುತ್ತದೆ.

6) ಬೆಂಬಲ ಬೆಲೆ :

ಅಸಂಖ್ಯಾತ ಸಮಸ್ಯೆಗಳ ನಡುವೆ, ಮುಕ್ತ ಮಾರುಕಟ್ಟೆ ನೀತಿಯಿಂದ ರೈತರು ಬೆಳೆದ ಬೆಳೆಗೆ ಸೂಕ್ತವಾದ ಬೆಲೆಯು ನಿಗದಿಯಾಗದೇ ಮತ್ತು ಸರ್ಕಾರದಿಂದ ಬೆಂಬಲ ಬೆಲೆ ಘೋಷಣೆಯಾಗದೇ ಇದ್ದಾಗ ರೈತರು ಕಂಗಾಲಾಗುತ್ತಾರೆ. ಇಂತಹ ಸಂದರ್ಭದಲ್ಲಿ ಚಳುವಳಿಯ ತೀವ್ರತೆಯು ಹೆಚ್ಚಾಗುತ್ತದೆ.

ರಾಜಕೀಯ ಪರಿಣಾಮಗಳು:

ರೈತರ ಸಮಸ್ಯೆಯನ್ನು ಕಡಿಮೆ ಮಾಡಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಅವುಗಳೆಂದರೆ

ಕೃಷಿ ಸಾಲ ಯೋಜನೆ:

ರಾಷ್ಟ್ರೀಯ ಬೆಳೆ ವಿಮೆ ಕಾರ್ಯಕ್ರಮ [N.C.I.P] ರಾಷ್ಟ್ರೀಯ ಕೃಷಿ ವಿಮೆ ಯೋಜನೆ [N.A.I.S] ವಾತಾವರಣ ಆಧಾರಿತ ಬೆಳೆ ವಿಮೆ ಯೋಜನೆ ಪ್ರಾಥಮಿಕ ಭೂ ಅಭಿವೃದ್ದಿ ಬ್ಯಾಂಕ್ [P.L.D.B]

ರಾಷ್ಟ್ರೀಯ ಕೃಷಿ ಸಾಲ ಯೋಜನೆ:

ರಾಷ್ಟ್ರೀಯ ಅಭಿವೃದ್ದಿ ಮಂಡಳಿ ಕೃಷಿ ಅಭಿವೃದ್ಧಿಗಾಗಿ ಸಾಕಷ್ಟು ವ್ಯಾಪಕವಾದ ಕ್ರಮಗಳನ್ನು 2007 ರ ರಾಷ್ಟ್ರೀಯ ಕೃಷಿ ಯೋಜನೆಯ ಮೂಲಕ ಹಮ್ಮಿಕೊಂಡಿದೆ. ಇದರ ಮುಖ್ಯ ಉದ್ದೇಶವೆಂದರೆ ಕೃಷಿ ಉತ್ಪಾದನೆಯನ್ನು 4% ರಷ್ಟು ಪ್ರಮಾಣದಲ್ಲಿ ಹೆಚ್ಚಿಸುವುದು. ಏಕರೂಪದ ಕೃಷಿ ನೀತಿಯನ್ನು ಎಲ್ಲಾ ರಾಜ್ಯಗಳಲ್ಲಿ ಅಳವಡಿಸಿ ರೈತರ ಅವಶ್ಯಕತೆಗಳನ್ನು ಪೂರೈಸುವುದಾಗಿದೆ.

ಸಾಲ ಮನ್ನಾ:

ನಿರೀಕ್ಷೆಗೆ ತಕ್ಕಂತೆ ಫಸಲು [ಬೆಳೆ] ಬಾರದಿದ್ದಾಗ ರೈತರು ತಾವು ಮಾಡಿರುವ ಸಾಲ ತೀರಿಸಲು ಅಸಮರ್ಥರಾಗುತ್ತಾರೆ. ಈ ಪರಿಸ್ಥಿತಿಯಿಂದ ರೈತರನ್ನು ಮೇಲೆತ್ತಲು ಸಾಲ ಮನ್ನಾ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಇದರ ಮೂಲಕ ರೈತರ ಆತ್ಮಹತ್ಯೆಯನ್ನು ತಪ್ಪಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.

ರೈತ ಸಂಪರ್ಕ ಕೇಂದ್ರಗಳ ಸ್ಥಾಪನೆ:

ರೈತರಿಗೆ ಉತ್ತಮ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ವಿತರಿಸಲು ರೈತ ಸಂಪರ್ಕ ಕೇಂದ್ರಗಳು ಹೋಬಳಿ ಮಟ್ಟದಲ್ಲಿ ಸ್ಥಾಪಿಸಲಾಗಿದೆ ಇವು ರೈತರಿಗೆ ಕೃಷಿ ಸಲಕರಣೆಗಳನ್ನು ಒದಗಿಸುವುದರ ಜೊತೆಯಲ್ಲಿ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡುತ್ತವೆ.

ಪಶು ವೈದ್ಯಕೀಯ ಸೇವೆ :

ಕೃಷಿಯ ಜೊತೆ ಜೊತೆಯಲ್ಲಿ ಸಾಗುತ್ತಿರುವ ಪಶು ಸಂಪತ್ತಿನ ಉಳಿವಿಗಾಗಿ ಸರ್ಕಾರ ಪಶು ವೈದ್ಯಕೀಯ ಸೇವೆಗಳನ್ನು ನೀಡುತ್ತದೆ. ಹಾಲು ಉತ್ಪಾದನೆ ಮತ್ತು ಡೈರಿ ಉತ್ಪನ್ನಗಳನ್ನು ಉತ್ತೇಜಿಸುವುದರ ಜೊತೆಗೆ ಸಾವಯವ ಕೃಷಿಯನ್ನು ಬೆಂಬಲಿಸುತ್ತದೆ.

ಭೂ ಸುಧಾರಣಾ ಕಾಯ್ದೆ:

1974 ರಲ್ಲಿ ಕರ್ನಾಟಕದ ಮುಖ್ಯ ಮಂತ್ರಿಗಳಾಗಿದ್ದ ಶ್ರೀ ದೇವರಾಜ್ ಅರಸ್ ರವರು ರಾಷ್ಟ್ರೀಯ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದರು. ಹಾಗೆಯೇ *2013 ರ ಭೂ ಸ್ವಾಧೀನ ಕಾಯ್ದೆ’ ಯ ಅನ್ವಯ ಭೂ ಮಾಲಿಕರಿಗೆ ಹೆಚ್ಚಿನ ಪರಿಹಾರ ಪುನರ್‌ವಸತಿಯನ್ನು ಒದಗಿಸುವುದು ರೈತರ ಭೂಮಿ ಒಡೆತನವನ್ನು ಅವರಿಗೆ ನೀಡುವುದು. ಅಂತಿಮ ತೀರ್ಮಾನವಾಗುವವರೆಗೂ ಕೃಷಿ ಭೂಮಿಯ ಸ್ವಾಧೀನಪಡಿಸಿಕೊಳ್ಳದೇ ಇರುವುದು ಮತ್ತು ವಶಪಡಿಸಿಕೊಂಡಷ್ಟೆ ಭೂಮಿಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಬೇರೆ ಕಡೆ ಭೂಮಿ ನೀಡುವುದು ಈ ಕಾಯ್ದೆಯ ಉದ್ದೇಶವಾಗಿದೆ.

ಈ ಮೇಲಿನ ಎಲ್ಲವೂಗಳು ರೈತ ಚಳುವಳಿಯಿಂದಾದ ರಾಜಕೀಯ ಪರಿಣಾಮಗಳಾಗಿವೆ.

ಮಾನವ ಹಕ್ಕು ಚಳುವಳಿಯ ಕಾರಣಗಳು ಮತ್ತು ರಾಜಕೀಯ ಪರಿಣಾಮಗಳನ್ನು ವಿವರಿಸಿ.

ಜೀವನ ಸ್ವಾತಂತ್ರ್ಯ, ಸಮಾನತೆ ಮತ್ತು ಘನತೆಗೆ ಹಕ್ಕುಗಳು ಸಂಬಂಧಿಸಿವೆ. ಸ್ವತಂತ್ರವಾಗಿ ಜನಿಸಿದ ವ್ಯಕ್ತಿ ಕಾನೂನಿನ ಚೌಕಟ್ಟಿನಲ್ಲಿ ಸ್ವತಂತ್ರ ಜೀವನ ನಡೆಸುವುದೇ ಅವನ ಹಕ್ಕು.

ಭಾರತ ಮಾನವ ಹಕ್ಕುಗಳ ಕಾಯ್ದೆ-1993

ಯಾವುದೇ ಧರ್ಮ, ಜಾತಿ, ಲಿಂಗ, ಬಣ್ಣ, ಭಾಷೆ, ಜನ್ಮಸ್ಥಳ, ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಇತರ ಸ್ಥಾನಮಾನಗಳ ಅಂತರವಿಲ್ಲದೆ ಮಾನವರು ಈ ಹಕ್ಕುಗಳನ್ನು ಅನುಭವಿಸುತ್ತಾರೆ. ಇಂತಹ ಮಾನವ ಹಕ್ಕುಗಳ ಚಳುವಳಿಗೆ ಕಾರಣಗಳು ಈ ಕೆಳಗಿನಂತಿವೆ.

ನಾಗರೀಕ ಹಕ್ಕುಗಳ ರಕ್ಷಣೆ:

ಎಲ್ಲರೂ ಸಮಾನವಾಗಿ ಹುಟ್ಟಿದ್ದಾರೆ ಮತ್ತು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಸ್ವತಂತ್ರರಾಗಿರುತ್ತಾರೆ. ಭಾರತ ಸಂವಿಧಾನದ 3 ನೇ ಅಧ್ಯಾಯದಲ್ಲಿ ನಾಗರೀಕರಿಗೆ ನೀಡಿರುವ ಹಕ್ಕುಗಳನ್ನೇ ಉಲ್ಲೇಖಿಸಿದೆ. ಆದರೆ ವಾಸ್ತವವಾಗಿ ದಲಿತರು, ಮಹಿಳೆಯರು ಮತ್ತು ಮಕ್ಕಳು ಶೋಷಣೆಗೆ ಒಳಗಾಗಿದ್ದಾರೆ.

ಇಂತಹ ಶೋಷಣೆಯನ್ನು ತಡೆಗಟ್ಟಲು ಮಾನವ ಹಕ್ಕುಗಳ ಚಳುವಳಿಗಾರರು ಸತತ ಪ್ರಯತ್ನ ಮಾಡಿ ಅರಿವು ಮೂಡಿಸುತ್ತಿದ್ದಾರೆ.

ದಾಸ್ಯದಿಂದ ವಿಮೋಚನೆ:

ಸಂವಿಧಾನಾತ್ಮಕವಾಗಿ ಗುಲಾಮಗಿರಿ ನಿಷೇಧಿಸಲ್ಪಟ್ಟಿದ್ದರೂ ರಾಷ್ಟ್ರದ ವಿವಿಧ ಭಾಗಗಳಲ್ಲಿ ಇನ್ನೂ ಚಾಲ್ತಿಯಲ್ಲಿದೆ. ಬಾಲಕಾರ್ಮಿಕ ಪದ್ಧತಿ ಜೀತಪದ್ದತಿ ಇವುಗಳನ್ನು ಅಲ್ಲಲ್ಲಿ ಕಾಣಬಹುದು. ಹೀಗಾಗಿ ಚಳುವಳಿ ಅನಿವಾರ್ಯವಾಗಿದೆ.

ಕೌಟುಂಬಿಕ ಜೀವನದ ರಕ್ಷಣೆ:

ಪ್ರತಿಯೊಬ್ಬ ನಾಗರೀಕನು ಕೌಟುಂಬಿಕ ಜೀವನದ ಹಕ್ಕನ್ನು ಹೊಂದಿದ್ದಾನೆ. ಆಧುನಿಕತೆಯ ಪರಿಣಾಮವಾಗಿ ಯುವ ಜನತೆ ಅಂತರ್ಜಾತಿಯ ವಿವಾಹ ಮತ್ತು ಅಂತರ್ ಧರ್ಮೀಯ ವಿವಾಹಗಳಿಗೆ ಮಾರುಹೋಗುತ್ತಿದ್ದಾರೆ. ಆದರೆ ಇದನ್ನು ತಪ್ಪಿಸಲು ಕುಟುಂಬದ ಗೌರವವನ್ನು ಕಾಪಾಡಲು ‘ಮರ್ಯಾದಾ ಹತ್ಯೆ’ ಯಂತಹ ದುಷ್ಕೃತ್ಯಗಳಿಗೆ ಕಾರಣವಾಗುತ್ತದೆ. ವರದಕ್ಷಿಣೆ ಪಿಡುಗು ಅನೇಕ ಸಂದರ್ಭಗಳಲ್ಲಿ ಆತ್ಮಹತ್ಯೆ ಅಥವಾ ಕೊಲೆಯಲ್ಲಿ ಪರ್ಯಾವಸನವಾಗುತ್ತದೆ.

ದಲಿತರ ಹಕ್ಕುಗಳ ರಕ್ಷಣೆ:

ಅನ್ಯಾಯ, ದೌರ್ಜನ್ಯ, ಸಾಮಾಜಿಕ ಬಹಿಷ್ಕಾರ, ಮಡೆಸ್ನಾನ, ಮಲ ಹೊರುವ ಪದ್ದತಿ, ಇವುಗಳನ್ನು ಬಲವಂತವಾಗಿ ಮಾಡಿಸಲಾಗುತ್ತದೆ. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

ಮೊಕದ್ದಮೆಗಳನ್ನು ದಾಖಲಿಸಲು ನಿರಾಕರಿಸುವುದು.

ಅನೇಕ ಸಂದರ್ಭಗಳಲ್ಲಿ ಅನ್ಯಾಯಕ್ಕೊಳಗಾದ ವ್ಯಕ್ತಿಗಳು ಸಂಬಂಧಿಸಿದ ಅಧಿಕಾರಗಳನ್ನು ಸಂಪರ್ಕಿಸಿ ಮೊಕದ್ದಮೆ ದಾಖಲಿಸಲು ಮುಂದಾದಾಗ ಪ್ರಭಾವಿ ವ್ಯಕ್ತಿಗಳ ಅಥವಾ ಬಲಿಷ್ಟರ ಮಧ್ಯಪ್ರವೇಶದಿಂದ ತಿರಸ್ಕರಿಸಲಾಗುತ್ತದೆ. ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸದೇ ವೈದ್ಯಕೀಯ ನೆರವು ನೀಡದ ಹಲವಾರು ನಿದರ್ಶನಗಳಿವೆ. ಇಂತಹ ಎಷ್ಟೋ ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ.

ಈ ಮೇಲಿನ ಅಂಶಗಳಿಂದಾಗಿ ಅನೇಕ ಚಳುವಳಿಗಳು ಜರುಗಿವೆ. ಮಾನವ ಹಕ್ಕು ಚಳುವಳಿಯ ರಾಜಕೀಯ ಪರಿಣಾಮಗಳು:

ಮಾನವ ಹಕ್ಕು ಚಳುವಳಿಗಳ ಫಲಶೃತಿಯಿಂದಾಗಿ ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ಯೋಜನೆಗಳನ್ನು

ಜಾರಿಗೆ ತಂದಿವೆ. ಇವೆಲ್ಲವು ಮಾನವ ಚಳುವಳಿಯ ರಾಜಕೀಯ ಪರಿಣಾಮಗಳಾಗಿವೆ.

  1. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ:

ಭಾರತದಲ್ಲಿ 8ನೇ ಜನವರಿ 1994 ರಂದು ರಾಷ್ಟ್ರೀಯ “ಮಾನವ ಹಕ್ಕುಗಳ ಆಯೋಗ” ಅಸ್ತಿತ್ವಕ್ಕೆ ಬಂದಿತು. ಆಯೋಗದ ಮುಖ್ಯಸ್ಥರು ಸರ್ವೋನ್ನತ ನ್ಯಾಯಾಲಯದ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರು ಹಾಗೂ ಇತರ ಸದಸ್ಯರನ್ನು ಒಳಗೊಂಡಿರುತ್ತದೆ. ಈ ಆಯೋಗವು ಮಾನವ ಹಕ್ಕುಗಳ ಪಟ್ಟಿಯನ್ನು ಸಿದ್ದಪಡಿಸಿ ಸರ್ಕಾರದಿಂದ ಅಂಗೀಕಾರ ಪಡೆದುಕೊಳ್ಳುತ್ತದೆ. ಮಾನವ ಹಕ್ಕುಗಳ ಉಲ್ಲಂಘನೆಯಾದಾಗ ನ್ಯಾಯಾಂಗದ ಸಹಾಯ ಪಡೆದು ಕ್ರಮಬದ್ಧವಾದ ವಿಚಾರಣೆ ನಡೆಸುತ್ತದೆ. ಈ ಹಂತ ಪಾರದರ್ಶಕತೆಯಿಂದ ಕೂಡಿರುತ್ತದೆ. ವಿಚಾರಣೆಯ ಸಂದರ್ಭದಲ್ಲಿ ಅಸ್ಥಿತ್ವದಲ್ಲಿರುವ ನಿಯಮಗಳು ಅಪೂರ್ಣವೆನಿಸಿದಾಗ ಹೊಸ ಶಾಸನಗಳನ್ನು ರಚಿಸಲು ಆಯೋಗಕ್ಕೆ ಅಧಿಕಾರವಿದೆ. ಅಂತಹ ಸಂದರ್ಭಗಳಲ್ಲಿ ಚಾಲ್ತಿಯಲ್ಲಿರುವ ಅಂತರಾಷ್ಟ್ರೀಯ ಕಾನೂನು ಒಪ್ಪಂದಗಳು ನಡವಳಿಕೆಗಳನ್ನು ಗೌರವಿಸಬೇಕಾಗುತ್ತದೆ.

  1. ರಾಜ್ಯ ಮಾನವ ಹಕ್ಕುಗಳ ಆಯೋಗ :

ಭಾರತ ಮಾನವ ಹಕ್ಕುಗಳ ಕಾಯ್ದೆ ಪ್ರಕಾರ ಪ್ರತಿಯೊಂದು ರಾಜ್ಯವು ಮಾನವ ಹಕ್ಕುಗಳ ಆಯೋಗವನ್ನು ರಚಿಸಿಕೊಳ್ಳಬೇಕು. ಈ ಆಯೋಗ ರಾಜ್ಯ ಶ್ರೇಷ್ಠ ನ್ಯಾಯಾಲಯದ ಹಾಲಿ ಅಥವಾ ಮಾಜಿ ಮುಖ್ಯ ನ್ಯಾಯಾಧೀಶರು ಮತ್ತು ಇತರ ಸದಸ್ಯರಿಂದ ರಚನೆಯಾಗಿರುತ್ತದೆ. ಕರ್ನಾಟಕದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾದರಿಯಲ್ಲಿಯೇ 2005 ರಲ್ಲಿ ರಾಜ್ಯಮಾನವ ಹಕ್ಕುಗಳ ಆಯೋಗವನ್ನು ಸ್ಥಾಪಿಸಲಾಗಿದೆ.

  1. ಮಕ್ಕಳ ಹಕ್ಕುಗಳು :

ಭಾರತದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯು ಸಾಮಾನ್ಯವಾಗಿದ್ದು, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಯವರು ತಮ್ಮ ವ್ಯಾಪ್ತಿಯಲ್ಲಿ ಬರುವ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಸಮಸ್ಯೆಯನ್ನು ವಿಚಾರಿಸಲು ಅವಕಾಶ ಕಲ್ಪಿಸಲಾಗಿದೆ. ಮಕ್ಕಳ ಸಹಾಯವಾಣಿಯ ಮೂಲಕ ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳ ದೂರನ್ನು ದಾಖಲಿಸಿಕೊಳ್ಳಬಹುದು.

  1. ಅರಿವು ಮೂಡಿಸುವುದು :

ವಿವಿಧ ಆಯೋಗಗಳಲ್ಲಿ ದಾಖಲಾದ ಮಕ್ಕಳ ಸಮಸ್ಯೆಗಳನ್ನು ಶೀಘ್ರವಾಗಿ ವಿಲೇವಾರಿ ಆಗುತ್ತಿರುವುದನ್ನು ಗಮನಿಸಿದಾಗ, ಜನರಲ್ಲಿ ಮಾನವ ಹಕ್ಕುಗಳ ಚಳುವಳಿ ಮತ್ತು ಅದರ ಸಾಧನೆಯ ಬಗ್ಗೆ ಅರಿವುಂಟಾಗಿರುವುದನ್ನು ಗಮನಿಸಬಹುದು.

7. ಪರಿಸರ ಚಳುವಳಿಯ ಕಾರಣಗಳು ಮತ್ತು ರಾಜಕೀಯ ಪರಿಣಾಮಗಳನ್ನು ಚರ್ಚಿಸಿ.

ಮಾನವ ದುರಾಸೆಯಿಂದಾಗಿ ಪರಿಸರವನ್ನು ನಾಶಗೊಳಿಸುತ್ತಿದ್ದಾನೆ. ವಾಯು, ಜಲ, ಶಬ್ದ ಹೀಗೆ ಈ ಪರಿಸರವನ್ನು ಅವನತಿಯತ್ತ ಸಾಗಿಸುತ್ತಿದ್ದಾನೆ. ಮಾನವನು ನೈಸರ್ಗಿಕ ಸಂಪತ್ತನ್ನೇ ನಿರಂತರವಾಗಿ ಶೋಷಣೆ ಗುರಿ ಪಡಿಸುವುದರ ಸಲುವಾಗಿ ಜೀವ ವೈವಿಧ್ಯಗಳ ವಿನಾಶವುಂಟಾಗಿ ಪರಿಸರ ಚಳುವಳಿಗೆ ಕಾರಣವಾಗಿದೆ. ಈ ಕೆಳಗಿನ ಅಂಶಗಳು ಪರಿಸರ ಚಳುವಳಿಗೆ ಪ್ರಮುಖ ಕಾರಣಗಳಾಗಿವೆ.

ಪರಿಸರ ನಾಶ :

ಭಾರತ ಸರ್ಕಾರ ಆರ್ಥಿಕ ಅಭಿವೃದ್ಧಿಯ ಸಲುವಾಗಿ ಕೈಗಾರಿಕೆ ಮತ್ತು ತಾಂತ್ರಿಕ ಅಭಿವೃದ್ಧಿಯನ್ನು ಕೈಗೊಂಡಿದೆ. ಇದರ ಫಲವಾಗಿ ಕೈಗಾರಿಕೀಕರಣದಿಂದ ಭೂ ಸವಕಳಿ ಮತ್ತು ಭೂಮಿಯ ಫಲವತ್ತತೆಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಿದೆ.

ಪರಿಸರ ಮಾಲಿನ್ಯ :

ಪರಿಸರದಲ್ಲಿ ಉಂಟಾಗುತ್ತಿರುವ ಜಲಮಾಲಿನ್ಯ, ವಾಯುಮಾಲಿನ್ಯ, ಶಬ್ದಮಾಲಿನ್ಯ, ಇಂತಹ ಪರಿಸರ ಮಾಲಿನ್ಯಗಳಿಂದ ಅನೇಕ ಬಗೆಯ ಸಮಸ್ಯೆಗಳನ್ನು ಸಾಮಾನ್ಯ ಜನರು ಅನುಭವಿಸಬೇಕಾಗಿದೆ. ಪರಿಸರ ಮಾಲಿನ್ಯಗಳ ಪ್ರಕ್ರಿಯೆಗಳಿಂದಾಗಿ ನ್ಯಾಯಕ್ಕಾಗಿ ನೊಂದ ಜನರು, ಬುದ್ದಿಜೀವಿಗಳು ಮತ್ತು ಪರಿಸರವಾದಿಗಳು, ಚಳುವಳಿಯ ಹಾದಿಯನ್ನು ಹಿಡಿಯುವಂತೆ ಮಾಡಿದೆ.

ಜೀವ ವೈವಿಧ್ಯಗಳ ರಕ್ಷಣೆ :

ಮಿತಿ ಮೀರಿದ ನಗರ ನಿರ್ಮಾಣ ಕಾರ್ಯ ಮತ್ತು ಇಂಧನಕ್ಕೋಸ್ಕರ ಕಾಡು ಕಡಿಯುತ್ತಿರುವುದರಿಂದ ಅಲ್ಲಿ ಆಶ್ರಯ ಪಡೆದಿದ್ದ ವನ್ಯಜೀವಿಗಳು, ಪಕ್ಷಿಸಂಕುಲಗಳು ಆಹಾರದ ಕೊರತೆಯೂ ಸೇರಿದಂತೆ ಹಲವಾರು ನೈಸರ್ಗಿಕ ಸಮಸ್ಯೆಗಳನ್ನು ಅನುಭವಿಸುತ್ತಿವೆ. ಈ ಕಾರಣದಿಂದ ವನ್ಯಜೀವಿ ಸಂಪತ್ತನ್ನು ರಕ್ಷಿಸುವ ಸಲುವಾಗಿ ಚಿಸ್ಕೋ, ಅಪ್ಪಿಕೋ, ಪಶ್ಚಿಮ ಘಟ್ಟ ಉಳಿಸಿ ಚಳುವಳಿಗಳು ಪ್ರಾರಂಭವಾದವು.

ಪರಿಸರ ಶಿಕ್ಷಣದ ಕೊರತೆ:

ನೈಸರ್ಗಿಕ ಪರಿಸರದಲ್ಲಿ ಅನುಭವ ಪಡೆಯದ ಹೊರತು ಅದರ ಅನುಕೂಲಗಳ ಅರಿವು ಮನುಷ್ಯರಿಗೆ ತಿಳಿಯುವುದಿಲ್ಲ “ಹಸಿರೇ ಉಸಿರು” ಕಾಡು ಕಡಿದರೆ ಪ್ರಕೃತಿಯ ವಿನಾಶ, ಇದರಿಂದ ಮನುಕುಲದ ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ. ಇಂತಹ ವಿಚಾರಧಾರೆಗಳು, ಪರಿಸರ ಜ್ಞಾನದ ಕೊರತೆಯಿಂದ ಅನೇಕ ತೊಂದರೆಗಳನ್ನು ಎದುರಿಸಬೇಕಾಗಿದೆ. ಆದ್ದರಿಂದ ಜನ ಜಾಗೃತಿಗೊಳಿಸಲು ಪರಿಸರವಾದಿಗಳು ಹೋರಾಟಕ್ಕೆ ಇಳಿದರು.

ಪರಿಸರ ನಿರ್ವಹಣೆಯ ಕೊರತೆ :

ಪರಿಸರ ನಾಶ, ಪರಿಸರ ಮಾಲಿನ್ಯ, ಪ್ರಕೃತಿ ವಿಕೋಪದಿಂದ ಉಂಟಾದ ತೊಂದರೆಗಳು. ನಗರೀಕರಣದಿಂದ ಉಂಟಾದ ತ್ಯಾಜ್ಯ ವಸ್ತುಗಳು ಇವುಗಳಿಂದ ಮಾನವನ ದಿನನಿತ್ಯದ ಸಹಜ ಜೀವನಕ್ಕೆ ಹಾನಿ’ ಉಂಟಾಗುತ್ತಿದೆ. ಪರಿಸರ ಮಾಲಿನ್ಯಗಳನ್ನು ತಡೆಗಟ್ಟುವಲ್ಲಿ, ಇದರ ನಿರ್ವಹಣೆಯಲ್ಲಿ’ ಉಂಟಾಗುವ ವಿಳಂಬದಿಂದ ನೊಂದ ಜನರು ಮತ್ತು ಪರಿಸರವಾದಿಗಳು ಚಳುವಳಿಯಲ್ಲಿ ತೊಡಗಿದರು.

ಭಾರತದ ಸಂವಿಧಾನದ 4ನೇ ಅಧ್ಯಾಯದಲ್ಲಿರುವ ರಾಜ್ಯ ನೀತಿ ನಿರ್ದೇಶಕ ತತ್ವಗಳ ಅಡಿಯಲ್ಲಿ ಪರಿಸರ ರಕ್ಷಣೆಗೆ ಸಂಬಂಧಿಸಿದ ವಿಷಯಗಳನ್ನು 1976 ರಲ್ಲಿ 42 ನೇ ತಿದ್ದುಪಡಿಯ ಮೂಲಕ ಅಳವಡಿಸಲಾಯಿತು. ಭಾರತ ಸರ್ಕಾರವು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ “ಪರಿಸರ ಯೋಜನೆ ರಾಷ್ಟ್ರೀಯ ಸಮಿತಿಯನ್ನು ರಚಿಸಿತು. 1985 ರಲ್ಲಿ ಇದು ಪರಿಸರ ಮತ್ತು ಅರಣ್ಯ ಸಚಿವಾಲಯ” ಎಂಬ ಹೆಸರಿನಲ್ಲಿ ಪೂರ್ಣ ಪ್ರಮಾಣದ ಇಲಾಖೆಯಾಗಿ ಮಾರ್ಪಟ್ಟಿತು.

ಸಂವಿಧಾನಾತ್ಮಕ ಕಾಯಿದೆಗಳು :

ಭಾರತ ಸರ್ಕಾರ ಪರಿಸರಕ್ಕೆ ಸಂಬಂಧಿಸಿದಂತೆ ಕೆಲವು ಶಾಸನಗಳನ್ನು ರಚನೆ ಮಾಡಿತು. ಅವುಗಳೆಂದರೆ

1) ವನ್ಯಜೀವಿ ಸಂರಕ್ಷಣಾ ಕಾಯ್ದೆ 1972

2) ಜಲಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ-1974

3) ಅರಣ್ಯ ಸಂರಕ್ಷಣಾ ಕಾಯ್ದೆ 1980

4) ವಾಯುಮಾಲಿನ್ಯ ತಡೆ ನಿಯಂತ್ರಣ ಕಾಯ್ದೆ – 1981

5) ಪರಿಸರ ಸಂರಕ್ಷಣಾ ಕಾಯ್ದೆ 1986

6) ಜೀವ ವೈವಿಧ್ಯ ಕಾಯ್ದೆ 2002

ಗಂಗಾ ನದಿ ನೀರಿನ ಶುದ್ದೀಕರಣ ಯೋಜನೆ :

ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಗಂಗಾ ನದಿಯ ಶುದ್ದೀಕರಣದ ಉದ್ದೇಶದಿಂದ ಒಂದು ತಜ್ಞರ ಸಮಿತಿಯನ್ನು ನೇಮಿಸಿತು. ಆ ಸಮಿತಿಯ ಶಿಫಾರಸ್ಸುಗಳು ಈ ಕೆಳಕಂಡಂತಿವೆ.

1) ಗಂಗಾ ನದಿಯ ಪಾತ್ರದಲ್ಲಿ ಚರಂಡಿ ನೀರನ್ನು ಶುದ್ದೀಕರಿಸಲು ಶುದ್ದೀಕರಣ ಘಟಕವೊಂದನ್ನು ಸ್ಥಾಪಿಸಲು ಸೂಚಿಸಿತು.

2) 28 ಚಿತಾಗಾರಗಳನ್ನು ನಿರ್ಮಾಣ ಮಾಡುವುದರ ಮೂಲಕ ಶವಗಳನ್ನು ನದಿಗೆ ಎಸೆಯುವುದನ್ನು ತಪ್ಪಿಸುವುದು.

3) ತಾಜ್ ಮಹಲ್ ರಕ್ಷಣೆ ಮತ್ತು ಉಸ್ತುವಾರಿ.

ಕೃಷ್ಣ ಮಹಾಜನ್ ಸಮಿತಿ:

ಈ ಸಮಿತಿಯು ತಾಜ್‌ಮಹಲ್‌ನ ಸುತ್ತಮುತ್ತಲಿನ ಮಾಲಿನ್ಯ ತಪ್ಪಿಸುವ ಸಲುವಾಗಿ ಒಂದು ವರದಿಯನ್ನು ರಚಿಸಿತು. ಇದರಲ್ಲಿ ತಾಜ್‌ ಮಹಲ್ ರಕ್ಷಣೆಗೆ ಬೇಕಾದ ಕ್ರಮಗಳನ್ನು ಒಳಗೊಂಡಿತ್ತು.

ಭಾರತದ ರಾಜ್ಯಗಳು ಕೇಂದ್ರದ ಸಲಹೆಯ ಮೇರೆಗೆ ವನ್ಯಜೀವಿ ಕಾಯ್ದೆ ಉಲ್ಲಂಘಿಸಿದವರನ್ನು ಶಿಕ್ಷಿಸಲು ರಾಜ್ಯಗಳಲ್ಲಿ ಪರಿಸರ ಪ್ರಾದೇಶಿಕ ಮತ್ತು ವಿಭಾಗೀಯ ಕಛೇರಿಗಳನ್ನು ಸ್ಥಾಪಿಸಿವೆ.

ಹೆಚ್ಚುವರಿ ಪ್ರಶ್ನೆಗಳು

1. ದಲಿತ ವರ್ಗವು ಒಳಗೊಂಡಿರುವ ಪಂಗಡಗಳು ಯಾವುವು?

ಆದಿ ಕರ್ನಾಟಕ, ಆದಿ, ದ್ರಾವಿಡ, ಆದಿ ಆಂಧ್ರ, ಆದಿ ಜಾಂಬವ, ಆದಿ ಮಹರ್ ಮತ್ತಿತರ ಪಂಗಡಗಳನ್ನು ಒಳಗೊಂಡಿದೆ.

2. ಯಾವಾಗ ಬಹಿಷ್ಕೃತ್ ಹಿತಕಾರಿಣಿ ಸಭಾ ಜನ್ಮ ತಾಳಿತು?

1924 ರಲ್ಲಿ ಬಹಿಷ್ಕೃತ್ ಹಿತಕಾರಿಣಿ ಸಭಾ ಜನ್ಮ ತಾಳಿತು.

3. ಯಾವ ಕಾಯ್ದೆಯು 1976 ರಲ್ಲಿ ತಿದ್ದುಪಡಿಯಾಗಿ ನಾಗರೀಕ ಹಕ್ಕುಗಳ ರಕ್ಷಣಾ ಕಾಯ್ದೆಯಾಗಿ ಮಾರ್ಪಾಡಾಯಿತು?

ಅಸ್ಪೃಶ್ಯತಾ ಆಚರಣೆ ಅಪರಾಧ ಕಾಯಿದೆಯು 1976 ರಲ್ಲಿ ತಿದ್ದುಪಡಿಯಾಗಿ ನಾಗರೀಕ ಹಕ್ಕುಗಳ ರಕ್ಷಣಾ ಕಾಯ್ದೆಯಾಗಿ ಮಾರ್ಪಾಡಾಯಿತು.

4. ಯಾರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗದವರ ಆಯೋಗ ರಚನೆಯಾಯಿತು?

1953 ರಲ್ಲಿ ಶ್ರೀ ಕಾಕಾ ಕಾಲೋಲ್ಕರ್ ಅವರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗದವರ ಆಯೋಗ ರಚನೆಯಾಯಿತು.

5.’ಲೆಸ್ಸಿ ಮಿಲ್ಲ‌ರ್’ ಆಯೋಗದ ರಚನೆಗೆ ಕಾರಣವೇನು?

ಮೈಸೂರು ರಾಜ್ಯದಲ್ಲಿ ಹಿಂದುಳಿದ ವರ್ಗದವರ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸಲು ‘ಲೆಸ್ಸಿ ಮಿಲ್ಲರ್’ ಆಯೋಗವನ್ನು ನಾಲ್ವಡಿ ಕೃಷ್ಣರಾಜ್ ಒಡೆಯರ್ ರಚನೆ ಮಾಡಿದರು.

6. ಮಹಾರಾಷ್ಟ್ರದ ಶೇತ್ಕಾರಿ ಚಳುವಳಿಯ ರೂವಾರಿ ಯಾರು?

ಮಹಾರಾಷ್ಟ್ರದ ಶೇತ್ಕಾರಿ ಚಳುವಳಿಯ ರೂವಾರಿ ಶರದ್ ಜೋಷಿ.

7. ಭಾರತೀಯ ಕಿಸಾನ್ ಒಕ್ಕೂಟದ ನಾಯಕರು ಯಾರು?

ಮಹೇಂದ್ರ ಸಿಂಗ್ ತಿಕಾಯತ್ ರವರು ಭಾರತೀಯ ಕಿಸಾನ್ ಒಕ್ಕೂಟದ ನಾಯಕರು.

8. ಕರ್ನಾಟಕದ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಯವರು ಯಾವ ಚಳುವಳಿಯ ಹರಿಕಾರರು?

ಕರ್ನಾಟಕದ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಯವರು ರೈತ ಚಳುವಳಿಯ ಹರಿಕಾರರು.

9. ಯಾವ ಮಂಡಳಿಯು ಕೃಷಿ ಯೋಜನೆಯನ್ನು ಜಾರಿಗೆ ತಂದಿತು?

ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯು ಕೃಷಿ ಯೋಜನೆಯನ್ನು ಜಾರಿಗೆ ತಂದಿತು.

10. ಭಾರತೀಯ ಮದ್ದೂರ್ ಸಂಘವನ್ನು ಯಾರು ಸ್ಥಾಪಿಸಿದರು?

ಭಾರತೀಯ ಮದ್ದೂರ್ ಸಂಘವನ್ನು ದತ್ತೋ ಪಂತ್‌ ಠೇಂಗಡಿಯವರು ಸ್ಥಾಪಿಸಿದರು.

Leave a Comment