2nd Puc History 4.7 Vardhanaru Mattu Arambhika Chalukyaru Pallavaru Chapter Notes Question Answer Guide Extract Mcq Pdf Download in Kannada Medium Karnataka State Syllabus 2025 ದ್ವಿತೀಯ ಪಿಯುಸಿ ಇತಿಹಾಸ 4.7 ವರ್ಧನರು ಮತ್ತು ಆರಂಭಿಕ ಚಾಲುಕ್ಯರು-ಪಲ್ಲವರು ಪಾಠದ ನೋಟ್ಸ್ ಪ್ರಶ್ನೋತ್ತರಗಳು ಕನ್ನಡ ಮಾಧ್ಯಮ vardhanaru history in kannada question answer kseeb solutions for class 12 history kannada medium chapter 4.7 Vardhanaru history in kannada question answer pdf download 12th Standard history All Chapter Notes vardhanaru history in kannada 2nd puc ಇತಿಹಾಸ notes 2nd puc History Notes kannada.

I. ಈ ಕೆಳಗಿನ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಆರಿಸಿ బರೆಯಿರಿ.
1.ಹರ್ಷಚರಿತೆ’ ಬರೆದವರು
ಎ) ವರಾಹಮೀರ
ಬಿ) ಬಾಣಂಭಟ್ಟ
ಸಿ) ಶ್ರೀವಿಜಯ
ಡಿ) ಅಮರಸಿಂಹ
2. ಉತ್ತರಪಥೇಶ್ವರ ಎಂಬ ಬಿರುದು ಹೊಂದಿದ್ದವರು
ಎ) ಇಮ್ಮಡಿ ಪುಲಿಕೇಶಿ
ಬಿ) ಅಶೋಕ
ಸಿ) ಕಾನಿಷ್ಕ
ಡಿ) ಹರ್ಷವರ್ಧನ
3. ಕದಂಬ ವಂಶ ಸ್ಥಾಪಕ
ಎ) ಸಿಮುಖ
ಬಿ) ಚಂದ್ರಗುಪ್ತ
ಸಿ) ಹಾಲ
ಡಿ) ಮಯೂರವರ್ಮ
4. ಹರ್ಷವರ್ಧನನ ತಂಗಿ
ಎ) ರಾಗ
ಬಿ) ಬಿಂದುಶ್ರೀ
ಸಿ) ಸೌಮ್ಯಶ್ರೀ
ಡಿ) ರಾಜಶ್ರೀ
5. ದಕ್ಷಿಣ ಪಥೇಶ್ವರ ಎಂಬ ಬಿರುದು ಹೊಂದಿದ್ದವರು
ಎ) ಹರ್ಷವರ್ಧನ
ಬಿ) ಇಮ್ಮಡಿಪುಲಕೇಶಿ
ಸಿ) ಒಂದನೇ ಪುಲಿಕೇಶಿ,
ಡಿ) ಹಾಲ
6. ಹರ್ಷವರ್ಧನನ ರಾಜಧಾನಿ
ಎ) ಪಾಟಲೀಪುತ್ರ
ಬಿ) ಥಾನೇಶ್ವರ
ಸಿ) ತಲಕಾಡು
ಡಿ) ಮಥುರಾ
7. ಐಹೊಳೆ ಶಾಸನ ರಚಿಸಿದವರು
ಎ) ಚಾರುಕೀರ್ತಿ
ಬಿ) ರವಿಕೀರ್ತಿ
ಸಿ) ಸೋಮಕೀರ್ತಿ
ಡಿ) ಕೃಷ್ಣಕೀರ್ತಿ
8. ಬಾದಾಮಿ ಚಾಲುಕ್ಯರ ರಾಜಲಾಂಛನ
ಎ) ಆನೆ
ಬಿ) ಸಿಂಹ
ಸಿ) ಗಂಡುಭೇರುಂಡ
ಡಿ) ವರಾಹ
9. ಹರ್ಷವರ್ಧನನು ಅಧಿಕಾರಕ್ಕೆ ಬಂದ ವರ್ಷ
ಎ) 606
ಬಿ) 607
ಸಿ) 608
ಡಿ) 609
10. ‘ಅಸ್ಸಾಂ’ನ ಪುರಾತನ ಹೆಸರು
ಎ) ಮಹಿಷಪುರ
ಬಿ) ಮೇಥಪುರ
ಸಿ) ಕಾಮರೂಪ
ಡಿ) ನಳಂದಾ
11. ಪರಮೇಶ್ವರ ಬಿರುದಾಂಕಿತ ದೊರೆ
ಎ) ಹರ್ಷವರ್ಧನ
ಬಿ) ಕಾನಿಷ್ಕ
ಸಿ) ಮಯೂರ
ಡಿ) ಇಮ್ಮಡಿಪುಲಕೇಶಿ
II. ಬಿಟ್ಟ ಸ್ಥಳ ಭರ್ತಿಮಾಡಿ:
1.’ನಾಗಾನಂದ’ ನಾಟಕದ ಕರ್ತೃ ಹರ್ಷವರ್ಧನ
2. ‘ಪರಮೇಶ್ವರ’ ಈ ಬಿರುದನ್ನು ಪಡೆದ ದೊರೆ ಇಮ್ಮಡಿಪುಲಕೇಶಿ
3. ‘ಅಸ್ಸಾಂ’ನ ಪುರಾತನ ಹೆಸರು ಕಾಮರೂಪ
4. ಹರ್ಷವರ್ಧನನ ತಂಗಿಯ ಹೆಸರು ರಾಜಶ್ರೀ
5. ಹರ್ಷವರ್ಧನನು ಅಧಿಕಾರಕ್ಕೆ ಬಂದ ವರ್ಷ 606
6. ಚಾಲುಕ್ಯರ ವಾಸ್ತುಶಿಲ್ಪವನ್ನು “ಭಾರತೀಯ ದೇವಾಲಯಗಳ ವಾಸ್ತುಶಿಲ್ಪದ ತೊಟ್ಟಿಲು” ಎಂಬುದಾಗಿ ಕರೆದವರು ಪರ್ಸಿಬೌನ್
7. ಉತ್ತರಪಥೇಶ್ವರ ಎಂಬ ಬಿರುದು ಹರ್ಷವರ್ಧನ ನಿಗೆ ಇತ್ತು.
8. ದಕ್ಷಿಣ ಪಥೇಶ್ವರ ಎಂಬ ಬಿರುದು ಇಮ್ಮಡಿಪುಲಕೇಶಿಗೆ ಇತ್ತು.
9. ಪ್ರಯಾಗ ಬೌದ್ಧಮಹಾಸಮ್ಮೇಳನ ಜರುಗಿದ್ದು 643
10. ಚಾಲುಕ್ಯರ ರಾಜಧಾನಿ ವಾತಾಪಿ (ಬಾದಾಮಿ)
11. ಕದಂಬ ವಂಶ ಸ್ಥಾಪಕ ಮಯೂರವರ್ಮ
12. ಕನ್ನಡದ ಮೊದಲ ಶಾಸನ ಹಲ್ಮಿಡಿ
13. ಗಂಗರ ಪ್ರಸಿದ್ದ ದೊರೆ ದುರ್ವಿನೀತ
14. ವಿಜಯಾಭಟ್ಟಾರಿಕೆ ರಚಿಸಿದ ಕೃತಿ ಕೌಮುದಿಮಹೋತ್ಸವ
15. ಹರ್ಷವರ್ಧನನ ರಾಜಧಾನಿ ಥಾನೇಶ್ವರ
III ಹೊಂದಿಸಿ ಬರೆಯಿರಿ.
ಕ್ರಮ ಸಂಖ್ಯೆ | ಅ | ಆ | ಉತ್ತರಗಳು |
---|---|---|---|
1 | ದಕ್ಷಿಣ ಪಥೇಶ್ವರ | ವಿಜಯಾ ಭಟ್ಟಾರಿಕೆ | ಇಮ್ಮಡಿ ಪುಲಕೇಶಿ |
2 | ಉತ್ತರ ಪಥೇಶ್ವರ | ಹರ್ಷವರ್ಧನನ ಸಹೋದರಿ | ಹರ್ಷವರ್ಧನ |
3 | ದುರ್ವಿನೀತ | ಬಾಣಂಭಟ್ಟ | ಗಂಗರ ಪ್ರಸಿದ್ದ ದೊರೆ |
4 | ಮಯೂರವರ್ಮ | ಬಾದಾಮಿ ಚಾಲುಕ್ಯರ ರಾಜಲಾಂಛನ | ಕದಂಬರವಂಶ ಸ್ಥಾಪಕ |
5 | ಹರ್ಷಚರಿತ | ಚಾಲುಕ್ಯರ ರಾಜಧಾನಿ | ಬಾಣಂಭಟ್ಟ |
6 | ರಾಜಶ್ರೀ | ಕದಂಬರವಂಶ ಸ್ಥಾಪಕ | ಹರ್ಷವರ್ಧನನ ಸಹೋದರಿ |
7 | ಕೌಮುದಿಮಹೋತ್ಸವ | ಹರ್ಷವರ್ಧನ | ವಿಜಯಾ ಭಟ್ಟಾರಿಕೆ |
8 | ಐಹೊಳೆ ಶಾಸನ | ಇಮ್ಮಡಿ ಪುಲಕೇಶಿ | ರವಿಕೀರ್ತಿ |
9 | ವರಾಹ | ಗಂಗರ ಪ್ರಸಿದ್ದ ದೊರೆ | ಬಾದಾಮಿ ಚಾಲುಕ್ಯರ ರಾಜಲಾಂಛನ |
10 | ಬಾದಾಮಿ (ವಾತಾಪಿ) | ರವಿಕೀರ್ತಿ | ಚಾಲುಕ್ಯರ ರಾಜಧಾನಿ |
11 | ಗೊಮ್ಮಟೇಶ್ವರ ವಿಗ್ರಹ | ಕನ್ನಡದ ಪ್ರಥಮ ಶಾಸನ | ಚಾವುಂಡರಾಯ |
12 | ಹಲ್ಮಿಡಿ ಶಾಸನ | ಚಾವುಂಡರಾಯ | ಕನ್ನಡದ ಪ್ರಥಮ ಶಾಸನ |
IV. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ.
1.ಕದಂಬರ ಸ್ಥಾಪಕ ಯಾರು?
ಮಯೂರವರ್ಮ
2. ಕನ್ನಡದ ಮೊದಲ ಶಾಸನ ಯಾವುದು?
ಹಲ್ಮಿಡಿ
3. ಗಂಗರ ಪ್ರಸಿದ್ದ ದೊರೆ ಯಾರು?
ದುರ್ವಿನೀತ.
4. ಆರಂಭಿಕ ಚಾಲುಕ್ಯರ ರಾಜಧಾನಿ ಯಾವುದಾಗಿತ್ತು?
ಬಾದಾಮಿ (ವಾತಾಪಿ).
5. ಕನೌಜಿನ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿದವರು ಯಾರು?
ಹ್ಯೂಯನ್ ತ್ಸಾಂಗ್
6. ಉತ್ತರಪಥೇಶ್ವರ ಎಂದು ಯಾರು ಪ್ರಸಿದ್ದರಾಗಿದ್ದರು?
ಹರ್ಷವರ್ಧನ.
7. ದಕ್ಷಿಣಪಥೇಶ್ವರ ಎಂದು ಪ್ರಸಿದ್ಧರಾಗಿದ್ದವರು ಯಾರು?
ಇಮ್ಮಡಿ ಪುಲಿಕೇಶಿ.
8. ಹರ್ಷಚರಿತೆ ಬರೆದವರು ಯಾರು?
ಬಾಣಭಟ್ಟ.
9. ಹರ್ಷವರ್ಧನನ ರಾಜಧಾನಿ ಯಾವುದು?
ಥಾನೇಶ್ವರ.
10. ಹರ್ಷವರ್ಧನನ ಸಹೋದರಿ ಯಾರು?
ರಾಜಶ್ರೀ.
11. ಬಾದಾಮಿ ಚಾಲುಕ್ಯರ ಪ್ರಸಿದ್ದ ದೊರೆ ಯಾರು?
ಇಮ್ಮಡಿ ಪುಲಿಕೇಶಿ.
12. ಬಾದಾಮಿ ಚಾಲುಕ್ಯರ ರಾಜಲಾಂಛನ ಯಾವುದು?
ವರಾಹ.
13. ರವಿಕೀರ್ತಿ ರಚಿಸಿದ ಶಾಸನ ಯಾವುದು?
ಐಹೊ:ಳೆಶಾಸನ
14. ವಿಜಯಾ ಭಟ್ಟಾರಿಕೆ ರಚಿಸಿದ ಕೃತಿಯನ್ನು ಹೆಸರಿಸಿ.
ಕೌಮುದಿ ಮಹೋತ್ಸವ.
15. ಹ್ಯೂಯನ್ ತ್ಸಾಂಗ್ ನ ಕೃತಿ ಯಾವುದು?
ಸಿ.ಯು.ಕಿ.
16.’ವರ್ಧನರ ಶ್ರೇಷ್ಠ ದೊರೆ ಯಾರು?
ಹರ್ಷವರ್ಧನ.
17. ಪ್ರಯಾಗ ಬೌದ್ಧ ಮಹಾಸಮ್ಮೇಳನ ಯಾವಾಗ ನಡೆಯಿತು?
ಸಾ.ಶ. 643.
18. ಶ್ರವಣಬೆಳಗೊಳದಲ್ಲಿ ಗೊಮ್ಮಟೇಶ್ವರ ವಿಗ್ರಹವನ್ನು ಪ್ರತಿಷ್ಠಾಪಿಸಿದವರು ಯಾರು?
ಚಾವುಂಡರಾಯ
19. ಇಮ್ಮಡಿ ಪುಲಕೇಶಿಯ ತಂದೆ ಹೆಸರೇನು?
ಕೀರ್ತಿವರ್ಮ
20. ಚಾಲುಕ್ಯರ ವಾಸ್ತುಶಿಲ್ಪವನ್ನು “ಭಾರತೀಯ ದೇವಾಲಯಗಳ ವಾಸ್ತುಶಿಲ್ಪದ ತೊಟ್ಟಿಲು” ಎಂದು ಕರೆದವರಾರು?
ಪರ್ಸಿಬ್ರೌನ್
21. ಐಹೊಳೆ ಶಾಸನವನ್ನು ರಚಿಸಿದವರು ಯಾರು?
ರವಿಕೀರ್ತಿ.
V. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ 2 ಪದ ಅಥವಾ 2 ವಾಕ್ಯಗಳಲ್ಲಿ ಉತ್ತರಿಸಿ.
1. ಹರ್ಷವರ್ಧನನ ತಂದೆ ತಾಯಿಗಳು ಯಾರು?
ಪ್ರಭಾಕರವರ್ಧನ ಮತ್ತು ಯಶೋಮತಿ.
2. ಹರ್ಷವರ್ಧನನ ಯಾವುದಾದರೂ ಎರಡು ಸಾಹಿತ್ಯ ಕೃತಿಗಳನ್ನು ಹೆಸರಿಸಿ.
ಹರ್ಷವರ್ಧನನು ಸಂಸ್ಕೃತದಲ್ಲಿ ‘ರತ್ನಾವಳಿ’, ‘ಪ್ರಿಯದರ್ಶಿಕಾ’ ಮತ್ತು ‘ನಾಗನಂದ’ ಎಂಬ ನಾಟಕಗಳನ್ನು ಬರೆದನು.
3. ಗೊಮ್ಮಟೇಶ್ವರ ವಿಗ್ರಹವನ್ನು ಪ್ರತಿಷ್ಠಾಪಿಸಿದವರು ಯಾರು ಮತ್ತು ಎಲ್ಲಿ?
ಚಾವುಂಡರಾಯ, ಕರ್ನಾಟಕದ ಶ್ರವಣಬೆಳಗೊಳದಲ್ಲಿ
4.ಇಮ್ಮಡಿ ಪುಲಿಕೇಶಿಯ ಯಾವುದಾದರೂ ಎರಡು ಬಿರುದುಗಳನ್ನು ಹೆಸರಿಸಿರಿ.
‘ದಕ್ಷಿಣ ಪಥೇಶ್ವರ’ ಮತ್ತು ‘ಮಹಾರಾಜಾಧಿರಾಜ’
5. ಐಹೊಳೆಯಲ್ಲಿರುವ ಯಾವುದಾದರೂ ಎರಡು ದೇವಾಲಯಗಳನ್ನು ಹೆಸರಿಸಿ.
ಲಾಡ್ ಖಾನ್ ದೇವಾಲಯ, ದುರ್ಗದ ದೇವಾಲಯ.
6. ಪಟ್ಟದಕಲ್ಲಿನಲ್ಲಿರುವ ಯಾವುದಾದರೂ ಎರಡು ದೇವಲಯಗಳನ್ನು ಹೆಸರಿಸಿ.
ಪಾಪನಾಥ, ಸಂಗಮೇಶ್ವರ ದೇವಾಲಯಗಳು.
7. ಪಲ್ಲವರ ವಾಸ್ತು ಶಿಲ್ಪದ ಯಾವುದಾದರೂ ಎರಡು ಪ್ರಮುಖ ಕೇಂದ್ರಗಳನ್ನು ಹೆಸರಿಸಿ.
ಕಾಮಾಕ್ಷಿ ದೇವಾಲಯ, ಕೈಲಾಸನಾಥ ದೇವಾಲಯ.
VI. ಈ ಕೆಳಗಿನ ಪ್ರಶ್ನೆಗೆ 15-20 ವಾಕ್ಯಗಳಲ್ಲಿ ಉತ್ತರಿಸಿ:
1. ಹರ್ಷವರ್ಧನನ ಸಾಧನೆಗಳನ್ನು ವಿವರಿಸಿ.
ಹರ್ಷವರ್ಧನನು ವರ್ಧನರ ಶ್ರೇಷ್ಠದೊರೆ. ಪ್ರಭಾಕರ ವರ್ಧನ ಮತ್ತು ಯಶೋಮತಿ ಇವನ ತಂದೆತಾಯಿಗಳು. ಇವನಿಗೆ ರಾಜ್ಯವರ್ಧನ ಎಂಬ ಅಣ್ಣ ಮತ್ತು ರಾಜಶ್ರೀ ಎಂಬ ತಂಗಿ ಇದ್ದಳು. ತನ್ನ ತಂದೆಯ ಸಾವಿನಿಂದ ಈತನ ತಾಯಿಯು ಸಹಗಮನ ಮಾಡಿದಳು. ಮಾಳ್ವದ ದೇವಗುಪ್ತನು ರಾಜಶ್ರೀಯ ಗಂಡನಾದ ಗೃಹವರ್ಮನನ್ನು ಕೊಂದು ಅವಳನ್ನು ಕನೌಜಿನಲ್ಲಿ ಬಂಧಿಸಿಟ್ಟಿದ್ದನು. ಇವಳನ್ನು ಬಿಡಿಸಿಕೊಂಡು ಬರಲು ಹೋದ ರಾಜ್ಯವರ್ಧನನನ್ನು ಗಾವುಡದೇಶದ ಶಶಾಂಕ ಎಂಬುವವನು ಹತ್ಯೆ ಮಾಡಿದನು. ಇಂತಹ ದುಃಖದ ಪರಿಸ್ಥಿತಿಯಲ್ಲಿ ಅಧಿಕಾರಕ್ಕೆ ಬಂದ ಹರ್ಷವರ್ಧನನು ತನ್ನ ಸೇಡನ್ನು ತೀರಿಸಿಕೊಳ್ಳಲು ಉದ್ದೇಶಿಸಿದನು.
- ರಾಜಶ್ರೀಯು ಕಾರಾಗೃಹದಿಂದ ತಪ್ಪಿಸಿಕೊಂಡು ವಿಂಧ್ಯಪರ್ವತದ ಕಡೆ ಹೋದ ಸುದ್ದಿ ತಿಳಿದು ಅವಳನ್ನು ಹುಡುಕಿ ಕನೌಜನನ್ನು ವಶಪಡಿಸಿಕೊಂಡನು.
- ಮಾಳ್ವದ ದೊರೆ ದೇವಗುಪ್ತನನ್ನು ಸೋಲಿಸಿ ಅವನ ರಾಜ್ಯವನ್ನು ತನ್ನ ಸಾಮ್ರಾಜ್ಯದೊಳಗೆ ವಿಲೀನಗೊಳಿಸಿದನು.
- ವಲ್ಲಭಿಯ ಎರಡನೇ ಧ್ರುವಸೇನನ್ನು ಸೋಲಿಸಿ ಅವನಿಗೆ ತನ್ನ ಮಗಳನ್ನು ಕೊಟ್ಟು ಮದುವೆಮಾಡಿ ವೈವಾಹಿಕ ಸಂಬಂಧ ಏರ್ಪಡಿಸಿಕೊಂಡನು.
- ಶಶಾಂಕನ ಮರಣದ ನಂತರ ಒರಿಸ್ಸಾ, ಮಗಧ, ಒಡ್ರ, ಕೊಂಗೊಂಡ ಮತ್ತು ಬಂಗಾಳಗಳನ್ನು ಗೆದ್ದುಕೊಂಡನು.
- ನೇಪಾಳದ ದೊರೆಯನ್ನು ಸೋಲಿಸಿ ಕಪ್ಪಕಾಣಿಕೆಗಳನ್ನು ಸ್ವೀಕರಿಸಿದನು.
- ಉತ್ತರ ಭಾರತದ ರಾಜ್ಯಗಳನ್ನು ಗೆದ್ದು ‘ಉತ್ತರ ಪಥೇಶ್ವರ’ ಎಂಬ ಬಿರುದನ್ನು ಧರಿಸಿದನು.
- ದಕ್ಷಿಣದ ಇಮ್ಮಡಿ ಪುಲಿಕೇಶಿಯೊಡನೆ ಯುದ್ಧ ನಡೆಸಿ ಆತನಿಂದ ಸೋಲನ್ನು ಅನುಭವಿಸಿದನು.
- ಸಾ.ಶ. 641ರಲ್ಲಿ ಮಗದ ರಾಜನೆಂದು ಕರೆದುಕೊಂಡನು. ಚೀನಾದೊಡನೆ ರಾಯಭಾರಿಗಳನ್ನು ವಿನಿಮಯ ಮಾಡಿಕೊಂಡನು.
- ಬೌದ್ಧ ಧರ್ಮದ ಏಳಿಗೆಗಾಗಿ ಸಮ್ಮೇಳನಗಳನ್ನು ನಡೆಸಿದನು.
2. ಚಾಲುಕ್ಯ ಮತ್ತು ಪಲ್ಲವ ಸಂಘರ್ಷವನ್ನು ವಿವರಿಸಿ.
ಚಾಲುಕ್ಯ ಮತ್ತು ಪಲ್ಲವರ ಸಂಘರ್ಷವು ಸಾ.ಶ. 6ನೇ ಶತಮಾನದಿಂದ 8ನೇ ಶತಮಾನದವರೆವಿಗೂ ನಡೆಯಿತು. ಈ ಸಂಘರ್ಷದಲ್ಲಿ ಪ್ರಮುಖ ಪಾತ್ರ ವಹಿಸಿದವರು ಪಾಂಡ್ಯರು. ಕೃಷ್ಣ, ತುಂಗಭದ್ರ, ದೋಅಬ್ ಪ್ರದೇಶಗಳ ಮೇಲೆ ಹಕ್ಕು ಸಾಧಿಸುವ ನಿಟ್ಟಿನಲ್ಲಿ ಇವರಿಬ್ಬರ ನಡುವೆ ದೀರ್ಘ ಸಂಘರ್ಷ ನಡೆಯಿತು.
- ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ ಆರಂಭವಾದ ಪಲ್ಲವ ಚಾಲುಕ್ಯ ಸಂಘರ್ಷವು ಕೊನೆಯ ಚಾಲುಕ್ಯ ದೊರೆಗಳ ಕಾಲದವರೆವಿಗೂ ನಡೆಯಿತು.
- ಇಮ್ಮಡಿ ಪುಲಿಕೇಶಿ ಪಲ್ಲವರ ಒಂದನೇ ಮಹೇಂದ್ರ ವರ್ಮನನ್ನು ಸೋಲಿಸಿದನು. ಆದರೆ ಅವನು ಮಹೇಂದ್ರವರ್ಮನ ಮಗನಾದ ಒಂದನೇ ನರಸಿಂಹ ವರ್ಮನಿಂದ ಸೋಲಬೇಕಾಯಿತು. ಇದರಿಂದ ಬಾದಾಮಿ 12 ವರ್ಷಗಳ ಕಾಲ ಪಲ್ಲವರ ವಶದಲ್ಲಿತ್ತು. ನಂತರ ಪುಲಿಕೇಶಿಯ ಮಗನಾದ 1ನೇ ವಿಕ್ರಮಾದಿತ್ಯ ತನ್ನ ವಶಕ್ಕೆ ಪಡೆದನು.
- ಇವನು ಪಲ್ಲವ ದೊರೆಗಳಾದ ಒಂದನೇ ನರಸಿಂಹ ವರ್ಮನ್, 2ನೇ ಮಹೇಂದ್ರವರ್ಮನ್ ಮತ್ತು ಒಂದನೇ ಪರಮೇಶ್ವರವರ್ಮನ್ರನ್ನು ಸೋಲಿಸಿದನು.
- ನಂತರ ವಿಕ್ರಮಾದಿತ್ಯನ ಮಗನಾದ ವಿನಯಾದಿತ್ಯನು 2ನೇ ಮಹೇಂದ್ರವರ್ಮನನ್ನು ಸೋಲಿಸಿ ಕಂಚಿಯನ್ನು ವಶಪಡಿಸಿಕೊಂಡನು.
- ನಂತರ ವಿನಯಾದಿತ್ಯನ ಮಗ ವಿಜಯಾದಿತ್ಯನು 5ನೇ ಪರಮೇಶ್ವರವರ್ಮನ್ನನ್ನು ಸೋಲಿಸಿದನು.
- ವಿಜಯಾದಿತ್ಯನ ಮಗನಾದ ಇಮ್ಮಡಿ ವಿಕ್ರಮಾದಿತ್ಯನ ಕಾಲಕ್ಕೆ, ಪುನಃ ಚಾಲುಕ್ಯ-ಪಲ್ಲವರ ಸಂಘರ್ಷ ಆರಂಭವಾಯಿತು. ಈತ 2ನೇ ಪರಮೇಶ್ವರವರ್ಮನ್ ಮತ್ತು ನಂದಿವರ್ಮನ್ನನ್ನು ಸೋಲಿಸಿದನು. ಸಾ.ಶ. 740ರ ಹೊತ್ತಿಗೆ ಪಲ್ಲವರು ಸಂಪೂರ್ಣವಾಗಿ ಸೋತುಹೋದರು.
- ಸುಮಾರು ನೂರು ವರ್ಷಗಳ ಕಾಲ ನಡೆದ ಚಾಲುಕ್ಯ ಪಲ್ಲವ ಸಂಘರ್ಷ ಈ ಎರಡೂ ಸಾಮ್ರಾಜ್ಯಗಳ ಅವನತಿಗೆ ಕಾರಣವಾಯಿತು.
IV. ಈ ಕೆಳಗಿನ ಪ್ರಶ್ನೆಗೆ 30-40 ವಾಕ್ಯಗಳಲ್ಲಿ ಉತ್ತರಿಸಿ:
1. ಇಮ್ಮಡಿ ಪುಲಿಕೇಶಿಯ ಸಾಧನೆಗಳನ್ನು ವಿವರಿಸಿ.
ಇಮ್ಮಡಿ ಪುಲಿಕೇಶಿಯು ಕೀರ್ತಿವರ್ಮನ ಮಗನಾಗಿದ್ದು ಚಾಲುಕ್ಯ ಅರಸರಲ್ಲಿಯೇ ಶ್ರೇಷ್ಠ ದೊರೆ. ಇವನು ಅಧಿಕಾರಕ್ಕೆ ಬಂದಾಗ ಅಪ್ರಾಪ್ತನಾಗಿದ್ದರಿಂದ ಈತನ ಚಿಕ್ಕಪ್ಪನಾದ ಮಂಗಳೇಶನು ಆಡಳಿತ ನೋಡಿಕೊಳ್ಳುತ್ತಿದ್ದನು. ನಂತರದಲ್ಲಿ ಪ್ರಾಪ್ತ ವಯಸ್ಸಿಗೆ ಬಂದಾಗಲೂ ತನ್ನ ಚಿಕ್ಕಪ್ಪ ಅಧಿಕಾರವನ್ನು ನೀಡದಿದ್ದಾಗ ಆತನನ್ನು ಕೊಂದು ಸಿಂಹಾಸನವೇರಿದನು.
- ಪುಲಿಕೇಶಿಯು ತನ್ನ ಚಿಕ್ಕಪ್ಪನೊಡನೆ ಅಂತಃಕಲಹದಲ್ಲಿ ತೊಡಗಿದ್ದಾಗ ರಾಷ್ಟ್ರಕೂಟರ ನಾಯಕರಾದ ಅಪ್ಪಾಯಿಕ ಮತ್ತು ಗೋವಿಂದರು ಚಾಲುಕ್ಯ ಪ್ರದೇಶಗಳ ಮೇಲೆ ದಾಳಿ ಮಾಡಿದರು. ಇವರಿಬ್ಬರನ್ನು ಪುಲಿಕೇಶಿಯು ಭೀಮಾ ನದಿ ತೀರದಲ್ಲಿ ಸೋಲಿಸಿದನು.
- ಕದಂಬರನ್ನು ಸೋಲಿಸಿ ಬನವಾಸಿಯನ್ನು ಗೆದ್ದುಕೊಂಡನು.
- ಕೊಂಕಣದ ಮೌರ್ಯರನ್ನು, ದಕ್ಷಿಣ ಕನ್ನಡದ ಅಳುಪರನ್ನು ಮತ್ತು ತಲಕಾಡಿನ ಗಂಗರನ್ನು ಸೋಲಿಸಿದನು.
- ಉತ್ತರದ ಕಡೆ ಯುದ್ಧ ಮುಂದುವರೆಸಿ ಲಾಟ, ಮಾಳ್ವ, ಗೂರ್ಜರ ದೊರೆಗಳನ್ನು ಸೋಲಿಸಿದನು.
ಹರ್ಷವರ್ಧನನೊಡನೆ ಯುದ್ಧ ಸಾ.ಶ. 634 :
ಉತ್ತರ ಪಥೇಶ್ವರನಾದ ಹರ್ಷವರ್ಧನನು ಪುಲಿಕೇಶಿಯೊಡನೆ ಯುದ್ಧಕ್ಕೆ ಬಂದವನಾದರೂ ಇವರಿಬ್ಬರು ನಡುವೆ ಭೀಕರ ಕದನದಲ್ಲಿ ಹರ್ಷವಧನನನ್ನು ಸೋಲಿಸಿದನು. ಗೆಲುವು ಪಡೆದ ಪುಲಿಕೇಶಿ ‘ದಕ್ಷಿಣ ಪಥೇಶ್ವರ’ ಎಂಬ ಬಿರುದನ್ನು ಧರಿಸಿದನು. ನಂತರ ಇವರಿಬ್ಬರ ನಡುವೆ ಸ್ನೇಹ ಸಂಬಂಧ ಏರ್ಪಟ್ಟು ನರ್ಮದಾ ನದಿ ಇವರಿಬ್ಬರ ಸಾಮ್ರಾಜ್ಯದ ಗಡಿಯಾಯಿತು.
- ನಂತರ ಪುಲಿಕೇಶಿ ಕೋಸಲ, ಕಳಿಂಗ, ಪಿಷ್ಠಪುರ. ವೆಂಗಿಮಂಡಲಗಳನ್ನು ವಶಪಡಿಸಿಕೊಂಡನು.
- ಕಂಚಿಯ ಮೇಲೆ ದಾಳಿನಡೆಸಿ ಪಲ್ಲವ ದೊರೆ 1ನೇ ಮಹೇಂದ್ರವರ್ಮನನ್ನು ಸೋಲಿಸಿದನು. ಚೋಳ ಚೇರರನ್ನು ಸೋಲಿಸಿ ಕಪ್ಪ ಕಾಣಿಕೆಗಳನ್ನು ಪಡೆದು ರಾಜಧಾನಿಗೆ ಹಿಂದಿರುಗಿದನು.
- ಈತನು ಕೊನೆಯ ದಿನಗಳಲ್ಲಿ ಮತ್ತೆ ಕಂಚಿಯನ್ನು ಗೆಲ್ಲಲು ಮುಂದಾಗಿ ಪಲ್ಲವ ದೊರೆ 1ನೇ ಮಹೇಂದ್ರವರ್ಮನ ವಿರುದ್ಧ ಪೆರಿಯಾಲ, ಮಣಿಮಂಗಲ ಮತ್ತು ಸರಮಾರ ಕದನಗಳಲ್ಲಿ ಸೋತನು. ಈ ಯುದ್ಧದಲ್ಲಿ ಪುಲಿಕೇಶಿಯು ಕೊಲೆಯಾಗಿರಬೇಕೆಂದು ನಂಬಲಾಗಿದೆ.
- ನರಸಿಂಹವರ್ಮನು ಬಾದಾಮಿಯನ್ನು ಲೂಟಿ ಮಾಡಿ, ವಶಪಡಿಸಿಕೊಂಡು ‘ವಾತಾಪಿಕೊಂಡನ್’ ಎಂಬ ಬಿರುದನ್ನು ಧರಿಸಿದನು. ಕೆಲವು ವರ್ಷಗಳವರೆವಿಗೆ ಚಾಲುಕ್ಯರು ಪಲ್ಲವರ ಹಿಡಿತಕ್ಕೆ ಒಳಪಟ್ಟರು. ಹೀಗೆ ಇಮ್ಮಡಿ ಪುಲಿಕೇಶಿಯು ಪ್ರಾಚೀನ ಭಾರತದ ಅಗ್ರಗಣ್ಯ ಅರಸರಲ್ಲಿ ಒಬ್ಬನಾಗಿದ್ದನು. ಈತನಿಗೆ ‘ದಕ್ಷಿಣಪಥೇಶ್ವರ’ ‘ಸತ್ಯಾಶ್ರಯ’, ‘ಮಹಾರಾಜಾಧಿರಾಜ’ ‘ಪರಮೇಶ್ವರ’ ‘ಪೃಥ್ವಿವಲ್ಲಬ’ ಇತ್ಯಾದಿ ಬಿರುದುಗಳಿದ್ದವು.
ಹೆಚ್ಚುವರಿ ಪ್ರಶ್ನೆಗಳು:
1. ಹರ್ಷವರ್ಧನನು ಸಾ.ಶ.ಎಷ್ಟರಲ್ಲಿ ಅಧಿಕಾರಕ್ಕೆ ಬಂದನು?
ಸಾ.ಶ. 606ರಲ್ಲಿ
2. ಹರ್ಷವರ್ಧನನ ಸಹೋದರಿಯ ಹೆಸರೇನು?
ರಾಜಶ್ರೀ
3. ಹರ್ಷವರ್ಧನನ ಅಣ್ಣನಾದ ರಾಜ್ಯವರ್ಧನನನ್ನು ಕೊಂದವನಾರು?
ಗಾವುಡ ದೇಶದ ಶಶಾಂಕ
4.’ಅಸ್ಸಾಂ’ನ ಪುರಾತನ ಹೆಸರೇನು?
ಕಾಮರೂಪ
5. ಹರ್ಷವರ್ಧನನ ಕಾಲದಲ್ಲಿ ಮಾಳ್ವದ ದೊರೆ ಯಾರಾಗಿದ್ದರು?
ದೇವಗುಪ್ತ
6.’ಪರಮೇಶ್ವರ’ ಈ ಬಿರುದು ಯಾರದು?
ಇಮ್ಮಡಿ ಪುಲಿಕೇಶಿ
7. ‘ನಾಗಾನಂದ’ ಎಂಬ ನಾಟಕವನ್ನು ರಚಿಸಿದ ಅರಸ ಯಾರು?
ಹರ್ಷವರ್ಧನ
8. ಇಮ್ಮಡಿ ಪುಲಿಕೇಶಿಯ ತಂದೆಯ ಹೆಸರೇನು?
ಕೀರ್ತಿವರ್ಮ
9. ಚಾಲುಕ್ಯರ ವಾಸ್ತುಶಿಲ್ಪವನ್ನು “ಭಾರತೀಯ ದೇವಾಲಯಗಳ ವಾಸ್ತುಶಿಲ್ಪದ ತೊಟ್ಟಿಲು” ಎಂದು ಕರೆದವರಾರು?
ಪರ್ಸಿಬ್ರೌನ್
ನೆನಪಿನಲ್ಲಿಡಬೇಕಾದ ಅಂಶಗಳು:
- ಹರ್ಷವರ್ಧನನು ವರ್ಧನರ ಶ್ರೇಷ್ಠದೊರೆ.
- ಹರ್ಷ ಚರಿತೆ ಬರೆದವನು ಭಾಣಭಟ್ಟ,
- ಹರ್ಷವರ್ಧನನು ‘ಉತ್ತರ ಪಥೇಶ್ವರ’ ಎಂಬ ಬಿರುದನ್ನು ಹೊಂದಿದ್ದರು.
- ಕಂದಂಬ ವಂಶದ ಸ್ಥಾಪಕ ಮಯೂರವರ್ಮ.
- ಬಾದಾಮಿ ಚಾಲುಕ್ಯರ ಪ್ರಸಿದ್ದ ದೊರೆ ಇಮ್ಮಡಿ ಪುಲಿಕೇಶಿ.
- ಈತನು ‘ದಕ್ಷಿಣ ಪಥೇಶ್ವರ’ ಎಂಬ ಬಿರುದನ್ನು ಹೊಂದಿದ್ದನು.