2nd Puc History Madyakalina Yuga Chapter Notes Question Answer Guide Extract Mcq Pdf Download in Kannada Medium Karnataka State Syllabus 2025 ದ್ವಿತೀಯ ಪಿಯುಸಿ ಇತಿಹಾಸ ಮಧ್ಯಕಾಲೀನ ಯುಗ ನೋಟ್ಸ್ ಪ್ರಶ್ನೋತ್ತರಗಳು 12ನೇ ತರಗತಿ ಹಿಸ್ಟರಿ ನೋಟ್ಸ್ ಕರ್ನಾಟಕ ಕನ್ನಡ ಮಾಧ್ಯಮ ದೆಹಲಿ ಸುಲ್ತಾನರು ನೋಟ್ಸ್ dehali sultanaru history in kannada 2nd puc ದೆಹಲಿ ಸುಲ್ತಾನರು ನೋಟ್ಸ್ 2nd puc kseeb solutions for class 12 history kannada medium chapter 5.1 dehali sultanaru notes in kannada 2nd puc dehali sultanaru history in kannada question answer.

I. ಈ ಕೆಳಗಿನ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಆರಿಸಿ ಬರೆಯಿರಿ.
1.’ಕುತುಬ್ ಮಿನಾರ್’ ಅನ್ನು ಕಟ್ಟಿಸಿದವರು
ಎ) ಅಲ್ಲಾವುದ್ದೀನ್ ಖಿಲ್ಜಿ
ಬಿ) ಬಾಬರ್
ಸಿ) ಕುತುಬುದ್ದೀನ್ ಐಬಕ್
ಡಿ) ಮಹಮದ್ ಬಿನ್ ತೊಘಲಕ್
2. ಖಿಲ್ಜಿ ಸಂತತಿಯ ಸ್ಥಾಪಕ
ಎ) ಜಲಾಲ್ ಉದ್ದೀನ್ ಖಿಲ್ಜಿ
ಬಿ) ಅಲ್ಲಾವುದ್ದೀನ್ ಖಿಲ್ಜಿ
ಸಿ) ಮಲ್ಲಿಕಾಫರ್ ಖಿಲ್ಜಿ
ಡಿ) ಕುತುಬುದ್ದೀನ್
3. ದೆಹಲಿಯಿಂದ ದೇವಗಿರಿಗೆ ತನ್ನ ರಾಜಧಾನಿಯನ್ನು ವರ್ಗಾಹಿಸಿದವನು
ಎ) ಘಿಯಾಸುದ್ದೀನ್ ತೊಘಲಕ್
ಬಿ) ಅಲ್ಲಾವುದ್ದೀನ್ ಖಲ್ಜಿ
ಸಿ) ಮಲ್ಲಿಕಾಫರ್ ಖಿಲ್ಜಿ
ಡಿ) ಮಹಮದ್ ಬಿನ್ ತೊಘಲಕ್
4. ತೊಘಲಕ್ ಸಂತತಿಯ ಸ್ಥಾಪಕ
ಎ) ಮಹಮದ್ ಬಿನ್ ತೊಘಲಕ್
ಬಿ) ಕುತುಬ್ ದ್ದೀನ್ ತೊಘಲಕ್
ಸಿ) ಬಾಬರ್
ಡಿ) ಘಿಯಾಸುದ್ದೀನ್ ತೊಘಲಕ್
5. 2ನೇ ತರೈನ್ ಕದನ
ಎ) ಸಾ.ಶ. 1190
ಬಿ) ಸಾ.ಶ. 1191
ಸಿ) ಸಾ.ಶ. 1192
ಡಿ) ಸಾ.ಶ. 1193
6. ಅಲ್ಬೆರೋನಿ ಯಾವ ದೇಶದವನು
ಎ) ಗ್ರೀಕ್
ಬಿ) ಈಜಿಪ್ಟ್
ಸಿ) ಅರಬ್
ಡಿ) ಪರ್ಶಿಯಾ
7. ಘಜ್ನಿ ಮಹಮ್ಮದ್ ಭಾರತದ ಮೇಲೆ ಮಾಡಿದ ದಾಳಿ
ಎ) 15 ಬಾರಿ
ಬಿ) 16 ಬಾರಿ
ಸಿ) 17 ಬಾರಿ
ಡಿ) 18 ಬಾರಿ
II. ಬಿಟ್ಟ ಸ್ಥಳವನ್ನು ಭರ್ತಿಮಾಡಿರಿ
1.’ಭಾರತದ ಗಿಣಿ’ ಅಮೀರ್ ಖುಸ್ರು ಅವರನ್ನು ಕರೆಯಲಾಗಿದೆ.
2. ಅಲ್ಬೆರುನಿಯ ಪ್ರಸಿದ್ದ ಪುಸ್ತಕ ಕಿತಾಬ್-ಉಲ್-ಹಿಂದ್
3. ಅಲ್ಲಾವುದ್ದೀನ್ ಖಿಲ್ಜಿಯ ಪ್ರಸಿದ್ಧ ದಂಡನಾಯಕ ಅಮೀರ್ ಖುಸ್ರು
4. ಖಿಲ್ಜಿ ಸಂತತಿಯ ಸ್ಥಾಪಕ ಕುತುಬ್-ಉದ್- ದಿನ್- ಐಬಕ್
5. ದೆಹಲಿಯಿಂದ ದೇವಗಿರಿಗೆ ರಾಜಧಾನಿಯನ್ನು ವರ್ಗಾಯಿಸಿದವನು ಮಹಮದ್ ಬಿನ್ ತೊಘಲಕ್
6. ದೆಹಲಿಯಲ್ಲಿ ಕುತುಬ್ ಮಿನಾರ್ ಕಟ್ಟಿಸಿದವನು ಕುತುಬ್-ಉದ್-ದೀನ್-ಐಬಕ್
7. ಖಿಲ್ಜಿ ಸಂತತಿಯ ಸ್ಥಾಪಕ ಜಲಾಲ್‌ಉದ್ದೀನ್ ಖಿಲ್ಜಿ
8. ತೊಘಲಕ್ ಸಂತತಿಯ ಸ್ಥಾಪಕ ಘಿಯಾಸುದ್ದೀನ್ ತೊಘಲಕ್
9. ಸಾಂಕೇತಿಕ ನಾಣ್ಯ ಜಾರಿಗೊಳಿಸಿದವರು ಮಹಮದ್ ಬಿನ್ ತೊಘಲಕ್
10. ಭಾರತದ ಮೇಲೆ ದಾಳಿ ಮಾಡಿದ ಮೊದಲ ಮುಸ್ಲಿಮರು ಅರಬರು
11. 2ನೇ ತರೈನ ಕದನ ನಡೆದ ವರ್ಷ ಸಾ.ಶ. 1192
III.ಹೊಂದಿಸಿ ಬರೆಯಿರಿ.
ಕ್ರಮ ಸಂಖ್ಯೆ | ಅ | ಆ | ಉತ್ತರಗಳು |
---|---|---|---|
1 | ಮಲ್ಲಿಕಾಫರ್ | ಮಹಮ್ಮದ್ ಬಿನ್ ತೊಘಲಕ್ | ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ |
2 | ಭಾರತದ ಗಿಣಿ | ಕುತುಬ್-ಉದ್-ದೀನ್-ಐಬಕ್ | ಅಮೀರ್ ಖುಸ್ರು |
3 | ಅಲ್ಬೆರುನಿ | ಜಲಾಲ್ ಉದ್ದೀನ್ ಖಿಲ್ಜಿ | ಪರ್ಶಿಯಾ ದೇಶ |
4 | ಕುತುಬ್ ಮಿನಾರ್ | ಘಿಯಾಸುದ್ದೀನ್ ತೊಘಲಕ್ | ಕುತುಬ್-ಉದ್-ದೀನ್-ಐಬಕ್ |
5 | ಖಿಲ್ಜಿ ಸಂತತಿ ಸ್ಥಾಪಕ | ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ | ಜಲಾಲ್ ಉದ್ದೀನ್ ಖಿಲ್ಜಿ |
6 | ತೊಘಲಕ್ ಸಂತತಿಯ ಸ್ಥಾಪಕ | ಪರ್ಶಿಯಾ ದೇಶ | ಘಿಯಾಸುದ್ದೀನ್ ತೊಘಲಕ್ |
7 | ಸಾಂಕೇತಿಕ ನಾಣ್ಯ ಚಲಾವಣೆ | ಅಮೀರ್ ಖುಸ್ರು | ಮಹಮ್ಮದ್ ಬಿನ್ ತೊಘಲಕ್ |
IV.ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ:
1.’ಭಾರತದ ಗಿಣಿ’ ಎಂದು ಯಾರನ್ನು ಕರೆಯಲಾಗಿದೆ?
ಅಮೀರ್‌ಖುಸ್ರು,
2. ಅಲ್ಲಾವುದ್ದೀನ್ ಖಿಲ್ಜಿಯ ಪ್ರಸಿದ್ಧ ದಂಡನಾಯಕ ಯಾರು?
ಮಲ್ಲಿಕಾಫರ್
3. ಘಜ್ನಿ ಮಹಮದ್ ಭಾರತದ ಮೇಲೆ ಎಷ್ಟುಬಾರಿ ದಾಳಿ ಮಾಡಿದ್ದಾನೆ?
17 ಬಾರಿ
4. ಖಿಲ್ಜಿ ಸಂತತಿಯ ಸ್ಥಾಪಕರು ಯಾರು?
ಜಲಾಲ್ ಉದ್ದೀನ್ ಖಲ್ಟಿ,
5. ತೊಘಲಕ್ ಸಂತತಿಯ ಸ್ಥಾಪಕರು ಯಾರು?
ಫಿಯಾಸುದ್ದೀನ್ ತೊಘಲಕ್.
6. ಕುತುಬ್ ಮಿನಾರ್ ಕಟ್ಟಿಸಿದವರು ಯಾರು?
ಕುತುಬ್‌ದ್ದೀನ್ ಐಬಕ್
7. ಸಾಂಕೇತಿಕ ನಾಣ್ಯವನ್ನು ಜಾರಿಗೊಳಿಸಿದವರು ಯಾರು?
ಮಹಮದ್ ಬಿನ್ ತೊಘಲಕ್.
8. ದೆಹಲಿಯಿಂದ ದೇವಗಿರಿಗೆ ರಾಜಧಾನಿಯನ್ನು ವರ್ಗಾಯಿಸಿದವರು ಯಾರು?
ಮಹಮದ್ ಬಿನ್ ತೊಘಲಕ್.
9. ಗುಲಾಮಿ ಸಂತತಿಯ ಸ್ಥಾಪಕರು ಯಾರು?
ಕುತುಬ್-ಉದ್-ದಿನ್-ಐಬಕ್.
10. ಅಮೀರ್ ಖುಸ್ರು ಯಾವ ದೇಶದವನು?
ಪರ್ಶಿಯಾದೇಶ
11. ಭಾರತದ ಮೇಲೆ ದಾಳಿ ಮಾಡಿದ ಮೊದಲ ಮುಸ್ಲಿಮರು ಯಾರು?
ಅರಬ್ಬರು.
12. ತಾರೀಖ್-ಇ-ಅಲೈ ಯಾರ ಕೃತಿ?
ಅಮೀರ್ ಖುಸ್ರು
V. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಎರಡು ಪದ ಅಥವಾ ಎರಡು ವಾಕ್ಯಗಳಲ್ಲಿ ಉತ್ತರಿಸಿ:
1. 2ನೇ ತರೈನ್ ಕದನ ನಡೆದ ವರ್ಷ ಯಾವುದು? ಅದು ಯಾರ ನಡುವೆ ನಡೆಯಿತು?
2ನೇ ತರೈನ್ ಕದನ ಸಾ.ಶ.1192ರಲ್ಲಿ ಘಜ್ಜಿ ಮಹಮದ್ ಮತ್ತು ಪೃಥ್ವಿರಾಜ್ ಚೌಹಾನ್ ನಡುವೆ ನಡೆಯಿತು.
2. ದೆಹಲಿಯನ್ನು ಆಳಿದ ಯಾವುದಾದರೂ ಎರಡು ಸುಲ್ತಾನ ಸಂತತಿಗಳನ್ನು ಹೆಸರಿಸಿ.
ಗುಲಾಮಿ ಸಂತತಿ, ತೊಘಲಕ್ ಸಂತತಿ.
3. ಅಲ್ಲಾವುದ್ದೀನ್ ಖಲ್ಜಿ ಕಟ್ಟಿಸಿದ ಯಾವುದಾದರೂ ಎರಡು ಪ್ರಮುಖ ಸ್ಮಾರಕಗಳನ್ನು ಹೆಸರಿಸಿ.
ಜಮೈತ್ಖಾನ್ ಮಸೀದಿ, ಅಲೈ ದರ್ವಾಜಾ
4. ಎರಡನೇ ಸಿಕಂದರ್ ಎಂದು ಅಲ್ಲಾವುದ್ದೀನ್ ಖಿಲ್ಜಿ ಯು ತನ್ನನ್ನು ಕರೆದುಕೊಂಡಿದ್ದು ಏಕೆ?
ಇವನಿಗೆ ಇಡೀ ಪ್ರಪಂಚವನ್ನೇ ಗೆಲ್ಲಬೇಕೆಂಬ ಆಸೆ ಇತ್ತು ಆದರೆ ಭಾರತವನ್ನು ಮಾತ್ರ ಗೆಲ್ಲುವಲ್ಲಿ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಆದ್ದರಿಂದ 2ನೇ ಸಿಕಂದರ್ ಎಂದು ಕರೆದುಕೊಂಡನು.
5. ಅಲ್ಲಾವುದ್ದೀನ್ ಖಿಲ್ಜಿಯ ಇಬ್ಬರು ಸೇನಾಪತಿಗಳನ್ನು ಹೆಸರಿಸಿ
ಉಲುಫ್‌ಖಾನ್, ನಜರತ್ ಖಾನ್
6. ಮಹಮದ್ ಬಿನ್ ತೊಘಲಕ್ ರಾಜಧಾನಿಯ ವರ್ಗಾವಣೆ ಮಾಡಿದ್ದಕ್ಕೆ ಯಾವುದಾದರೂ ಎರಡು ಕಾರಣಗಳನ್ನು ನೀಡಿ.
- ಮಂಗೋಲರ ಧಾಳಿಯನ್ನು ತಡೆಯಲು.
- ದೆಹಲಿಯ ಗಡಿಪ್ರದೇಶಕ್ಕೆ ಹತ್ತಿರವಿದ್ದುದು.
7. ತೊಘಲಕ್ ಕಾಲದ ಇಬ್ಬರು ಇತಿಹಾಸಕಾರರನ್ನು ಹೆಸರಿಸಿ.
ಜಿಯಾವುದ್ದೀನ್ ಬರಾನಿ, ಇಬಾನ್ ಬತೂತ.
8. ‘ತಾರೀಕ್-ಇ-ಫಿರೋಜ್ ಷಾಹಿ’ ಯನ್ನು ಬರೆಯಲಾರಂಭಿಸಿದವರು ಯಾರು? ಅದನ್ನು ಪೂರ್ಣಗೊಳಿಸಿದವರು ಯಾರು?
ಬರಾನಿ, ಪೂರ್ಣಗೊಳಿಸಿದನು ಶಾಮ್ಸ್-ಇ-ಸಿರಾಜ್
9. ಅಮೀರ್ ಖುಸ್ರುವಿನ ಎರಡು ಗ್ರಂಥಗಳನ್ನು ಹೆಸರಿಸಿ.
ಖಜ್ಯಾನ್-ಉಲ್-ಪುಹತ್, ತಾರೀಖ್-ಇ-ಅಲೈ
VI. ಈ ಕೆಳಗಿನ ಪ್ರಶ್ನೆಗಳಿಗೆ ಪ್ರತಿಯೊಂದನ್ನು 15 ರಿಂದ 20 ವಾಕ್ಯಗಳಲ್ಲಿ ಉತ್ತರಿಸಿ.
1. ಅಲ್ಲಾವುದ್ದೀನ್ ಖಲ್ಜಿಯ ದಕ್ಷಿಣ ದಂಡಯಾತ್ರೆಯ ಬಗ್ಗೆ ಒಂದು ವಿವರಣೆ ಬರೆಯಿರಿ.
ದಕ್ಷಿಣ ಭಾರತದ ಅಪಾರ ಸಂಪತ್ತು ಮತ್ತು ಅದನ್ನು ಆಕ್ರಮಿಸುವ ಉದ್ದೇಶದಿಂದ ತನ್ನ ಸಮರ್ಥ ಸೇನಾನಿಯಾದ ಮಲ್ಲಿಕಾಫರ್‌ನನ್ನು ದಕ್ಷಿಣ ಭಾರತದ ದಂಡಯಾತ್ರೆಗೆ ನಿಯೋಜಿಸಿದನು.
- ದೇವಗಿರಿಯ ಮೇಲೆ ಆಕ್ರಮಣ (ಸಾ.ಶ. 1307): ದೇವಗಿರಿಯ ರಾಜರಾಮಚಂದ್ರದೇವನನ್ನು ಸೋಲಿಸಿ. ರಾಣಿ ದೇವಲದೇವಿಯನ್ನು ಸೆರೆಹಿಡಿದನು. ಅವಳನ್ನು అల్లావుద్దినా బిల్లియ ఒరియ మగ ಖಜರ್‌ಖಾನನು ವಿವಾಹವಾದನು. ರಾಮಚಂದ್ರ ದೇವನು ವಾರ್ಷಿಕ ಕಪ್ಪ ಕಾಣಿಕೆ ಕೊಡಲು ಒಪ್ಪಿದನು.
- ವಾರಂಗಲ್‌ನ ದಂಡಯಾತ್ರೆ (ಸಾ.ಶ. 1309): ಹೊಯ್ಸಳ ರಾಜ 3ನೇ ವೀರಲ್ಲಾಳನ ದ್ವಾರಸಮುದ್ರದ ಮೇಲೆ ಆಕ್ರಮಣ ಮಾಡಿದ ಮಲ್ಲಿಕಾಫರ್ ರಾಜಧಾನಿಯನ್ನು ಲೂಟಿ ಮಾಡಿ ಹಲವಾರು ದೇವಾಲಯಗಳನ್ನು ಕೆಡವಿದನು.
- ಮಧುರೈನ ಆಕ್ರಮಣ (ಸಾ.ಶ. 1311): ಮಧುರೈನಲ್ಲಿ ಸುಂದರ ಪಾಂಡ್ಯ ಮತ್ತು ವೀರ ಪಾಂಡ್ಯ ಎಂಬ ಸಹೋದರರ ಮಧ್ಯೆ ಅಂತಃ ಕಲಹ ನಡೆಯುತ್ತಿತ್ತು. ಈ ಮಧ್ಯೆ ಮಲ್ಲಿಕಾಫರ್‌ನ ಸೈನ್ಯ ನುಗ್ಗಿ ಹಲವಾರು ನಗರ ಹಾಗೂ ದೇವಾಲಯಗಳನ್ನು ಲೂಟಿ ಮಾಡಿತು. ಅಲ್ಲಿನ ಪ್ರಸಿದ್ದ ದೇವಾಲಯವನ್ನು ಧ್ವಂಸಮಾಡಿ ಮಸೀದಿಯನ್ನು ನಿರ್ಮಿಸಿದನು.
- ದೇವಗಿರಿಯ ಮೇಲೆ 2ನೇ ಆಕ್ರಮಣ (ಸಾ.ಶ. 1312): ಇದು ಕೊನೆಯ ಯುದ್ಧವಾಗಿದ್ದು ದೇವಗಿರಿಯ ಶಂಕರದೇವನು ಕಪ್ಪ ಕಾಣಿಕೆಗಳನ್ನು ತಡೆಹಿಡಿದು ಸ್ವತಂತ್ರನಾಗಲು ಪ್ರಯತ್ನಿಸುತ್ತಿದ್ದುದನ್ನು ಅರಿತ ಮಲ್ಲಿಕಾಫರ್ ಅವನನ್ನು ಸಾಯಿಸಿ ದೇವಗಿರಿಯನ್ನು ವಶಪಡಿಸಿಕೊಂಡನು.
2. ಅಲ್ಲಾವುದ್ದೀನ್ ಖಲ್ಟಿಯ ಸುಧಾರಣೆಗಳನ್ನು ತಿಳಿಸಿ.
ಅಲ್ಲಾವುದ್ದೀನನು ಪ್ರಬಲ ಮತ್ತು ಸಮರ್ಥ ಆಡಳಿತಗಾರನಾಗಿದ್ದು ದೈವದತ್ತ ನಂಬಿಕೆ ಇಟ್ಟಿದ್ದನು.
- ಸರದಾರರು ಮತ್ತು ಅಧಿಕಾರಗಳ ವೈವಾಹಿಕ ಸಂಬಂಧವನ್ನು ನಿರ್ಬಂಧಿಸಿದ್ದು, ಅವರ ಗುಪ್ತಸಭೆ ಮತ್ತು ಔತಣಕೂಟಗಳನ್ನು ನಿಷೇಧಿಸಿದ್ದನು ಮತ್ತು ಗುಪ್ತಚರರನ್ನು ನೇಮಿಸಿದ್ದನು.
- ಸೈನಿಕ ಸುಧಾರಣೆಗಳು: ಬೃಹತ್ ಮತ್ತು ಸರ್ವಸನ್ನದ ಸೈನ್ಯವಿತ್ತು.
- ಕುದುರೆಗಳಿಗೆ ಮುದ್ರೆ ಹಾಕುವ ಪದ್ಧತಿ, ಸೈನಿಕರ ನಕಲಿ ಹಾಜರಾತಿ ಮತ್ತು ಭ್ರಷ್ಟಾಚಾರವನ್ನು ತಡೆಯಲು ವಿವರಣಾತ್ಮಕ ದಾಖಲೆಗಳ ನಿರ್ವಹಣೆಯನ್ನು ಜಾರಿಗೆ ತಂದನು.
- ಜಾಗೀರ್ ಪದ್ಧತಿಯನ್ನು ರದ್ದುಪಡಿಸಿ ನಗದು ರೂಪದಲ್ಲಿ ವೇತನ ನೀಡಿದನು.
- ಅರೀಜ್-ಇ-ಮುಮಾಲಿಕ್ ಎಂಬ ಅಧಿಕಾರಿಯು ಸೈನಿಕರ ಅಧಿಕಾರವನ್ನು ಹೊಂದಿದ್ದನು.
- ಕಂದಾಯ ಸುಧಾರಣೆಗಳು : ವೈಜ್ಞಾನಿಕ ತಳಹದಿಯ ಮೇಲೆ ಭೂ ಮಾಪನವನ್ನು ಆರಂಭಿಸಿ ಭೂ ಕಂದಾಯವನ್ನು ನಿಗಧಿಪಡಿಸಿದನು.
- ಸರದಾರರು, ಜಾಗೀರ್‌ದಾರರು ಮತ್ತು ಉಲ್ಲೇಮಾರ ಮೇಲೆ ಅವನು ಹೆಚ್ಚಿನ ತೆರಿಗೆಗಳನ್ನು ಹೇರಿದನು.
- ಮುಸ್ಲಿಂಯೇತರ ಮೇಲೆ ‘ಜಜಿಯಾ’ ವನ್ನು ವಿಧಿಸಿದನು. ಅವರು ಯಾತ್ರಾ ತೆರಿಗೆ, ಸರಕು ತೆರಿಗೆಗಳನ್ನು ಕೊಡಬೇಕಿತ್ತು.
- ಕಂದಾಯ ಅಧಿಕಾರಿಗಳ ಭ್ರಷ್ಟಾಚಾರವನ್ನು ತಡೆಯುವ ಉದ್ದೇಶದಿಂದ ಅವರ ವೇತನವನ್ನು ಹೆಚ್ಚಿಸಿದನು.
- ರೈತರಿಂದ ಭೂ ಕಂದಾಯವನ್ನು ಸಂಗ್ರಹಿಸಲು ‘ಮುಸ್ತಕ್‌ರಾಜ್’ ಎಂಬ ವಿಶೇಷ ಅಧಿಕಾರಿಯ ಹುದ್ದೆಯನ್ನು ಸೃಷ್ಟಿಸಿದನು.
- ಆರ್ಥಿಕ ಸುಧಾರಣೆಗಳು : [ಮಾರುಕಟ್ಟೆ ನಿಯಮಗಳು]
- ಸೈನಿಕರಿಗೆ ಮೂಲಭೂತ ಅಗತ್ಯತೆಗಳನ್ನು ಪೂರೈಸಲು ಮಾರುಕಟ್ಟೆ ನಿಯಮ ಜಾರಿಗೊಳಿಸಿ. ದೈನಂದಿನ ಉಪಯೋಗದ ಎಲ್ಲಾ ವಸ್ತುಗಳ ದರಗಳನ್ನು ನಿಗದಿಗೊಳಿಸಲಾಯಿತು. ಮಾರುಕಟ್ಟೆಯನ್ನು ನಿಯಂತ್ರಿಸಲು ಪ್ರತ್ಯೇಕ ಇಲಾಖೆ ಮತ್ತು ವಿಶೇಷ ಅಧಿಕಾರಿಗಳನ್ನು ನೇಮಿಸಿದನು. ರಾಜಧಾನಿಯಲ್ಲಿ ನಿಗಧಿಗೊಳಿಸಿದ್ದ ದರಗಳು ಎಲ್ಲಾ ನಗರಗಳಿಗೂ ಅನ್ವಯವಾಗುತ್ತಿದ್ದವು.
- ಸರ್ಕಾರಿ ಉಗ್ರಾಣಗಳಲ್ಲಿ ಧಾನ್ಯಗಳನ್ನು ಶೇಖರಿಸಿಡಲಾಗುತ್ತಿತ್ತು. ತುರ್ತು ಸಂದರ್ಭಗಳಾದ ಕೊರತೆಯ ಸಮಯ ಮತ್ತು ಬರಗಾಲಗಳಿಗಾಗಿ ಉಪಯೋಗಿಸಲಾಗುತ್ತಿತ್ತು.
- ಯಾವುದೇ ವ್ಯಾಪಾರಿ ಅಥವಾ ಮಾರಾಟಗಾರ ತೂಕ ಮತ್ತು ಅಳತೆಗಳಲ್ಲಿ ವಂಚಿಸಿದರೆ ವಂಚಿಸಲಾದ ತೂಕಕ್ಕೆ ಸಮನಾದಷ್ಟು ಮಾಂಸವನ್ನು ಅವನ ಶರೀರ (ತೊಡೆ)ದಿಂದ ಕತ್ತರಿಸಿ ಹಾಕುವ ಶಿಕ್ಷೆ ವಿಧಿಸಲಾಗುತ್ತಿತ್ತು.
- ಅಲ್ಲಾವುದ್ದೀನ್ ಖಿಲ್ಜಿಯ ಕೊನೆಯ ದಿನಗಳು ಸುಖಕರವಾಗಿರಲಿಲ್ಲ. ಅವನ ನಂಬಿಕಸ್ತ ಸೇನಾಪತಿ ಮಲಿಕಾಫರ್ ಅವನಿಗೆ ವಿಷಪ್ರಾಶನ ಮಾಡಿದ್ದರಿಂದ ಸುಲ್ತಾನನು ಸಾ.ಶ. 1316ರಲ್ಲಿ ಮರಣ ಹೊಂದಿದನು.
3. ಮಹಮದ್ ಬಿನ್ ತೊಘಲಕ್‌ನನ್ನು ‘ವೈರುಧ್ಯಗಳ ಮಿಶ್ರಣ’ ಎಂದು ಏಕೆ ಕರೆಯಲಾಗಿದೆ?
ಮಹಮದ್ ಬಿನ್ ತೊಘಲಕನು ಸುಶಿಕ್ಷಿತ ವಿದ್ವಾಂಸ. ವಾಗ್ನಿ, ಧರ್ಮನಿಷ್ಠೆ ಮುಸಲ್ಮಾನನಾಗಿದ್ದನು ಇವನು ಜಾರಿಗೆ ತಂದ ಯೋಜನೆಗಳು ಸಮಪರ್ಕವಾಗಿರಲಿಲ್ಲ ಆದ್ದರಿಂದಲೇ ಈತನನ್ನು ವೈರುದ್ಯಗಳ ಮಿಶ್ರಣ ಎಂದು ಕರೆಯಲಾಗಿದೆ.
- ತನ್ನ ಸಾಮ್ರಾಜ್ಯದ ಆದಾಯವನ್ನು ಹೆಚ್ಚಿಸಿದಲು ಗಂಗಾ ಮತ್ತು ಯಮುನಾ ನದಿಗಳ ಫಲವತ್ತಾದ ದೋ ಅಬ್ ಪ್ರದೇಶಗಳ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸಿದನು; ಇದು ಉತ್ತಮವಾದುದೇ ಆದರೂ ಮಳೆಯ ಕೊರತೆಯಿಂದಾಗಿ ರೈತರಿಗೆ ತೆರಿಗೆಯ ಭಾರ ಹೆಚ್ಚಾಯಿತು. ತೆರಿಗೆ ನೀಡದ ರೈತರ ವಿರುದ್ಧ ನಿರ್ದಯವಾಗಿ ಕ್ರಮಕೈಗೊಂಡು ಜನಪ್ರಿಯತೆಯನ್ನು ಕಳೆದುಕೊಂಡನು.
- ತನ್ನ ರಾಜಧಾನಿಯನ್ನು ಮಂಗೋಲರ ದಾಳಿಯಿಂದ ತಪ್ಪಿಸಲು ಮತ್ತು ದೆಹಲಿಯ ಗಡಿ ಪ್ರದೇಶಕ್ಕೆ ಹತ್ತಿರವಿದ್ದುದರಿಂದ ಸಾಮ್ರಾಜ್ಯದ ಕೇಂದ್ರದಲ್ಲಿದ್ದ ದೇವಗಿರಿಗೆ ವರ್ಗಾಯಿಸಲು ಹೊಸ ನಗರವನ್ನೇ ನಿರ್ಮಿಸಿ ಎಲ್ಲಾ ಜನತೆಯು ಸುಮಾರು 1120 ಕಿ.ಮೀ. ದೂರದ ದೇವಗಿರಿಗೆ ಹೊರಡಲು ಆದೇಶಿಸಿದನು. ದಟ್ಟಕಾಡುಗಳ ಮೂಲಕ ಅನಾಯಾಸ ಪ್ರಯಾಣ. ಭಾರೀ, ಮಳೆ, ಖಾಯಿಲೆ, ಹಸಿವು ದರೋಡೆಕೋರರ ದಾಳಿಯಿಂದಾಗಿ ಅಪಾರವಾದ ಸಾವು ನೋವು ಉಂಟಾಗಿ ನಂತರ ಇದು ಸುಲ್ತಾನನಿಗೆ ತಿಳಿದು ಮತ್ತೆ ಜನರು ದೆಹಲಿಗೆ ಮರಳುವಂತೆ ಆದೇಶಿಸಿ ಇನ್ನೂ ಹೆಚ್ಚಿನ ಸಾವು ನೋವುಗಳಿಗೆ ಕಾರಣವಾಗಿ ಜನಪ್ರಿಯತೆಯನ್ನು ಕಳೆದುಕೊಂಡನು.
- ನಾಣ್ಯ ಚಲಾವಣೆಯ ಪ್ರಯೋಗ ನಡೆಸಿ ದುಬಾರಿ ಲೋಹಗಳಾದ ಚಿನ್ನ ಮತ್ತು ಬೆಳ್ಳಿಯನ್ನು ಉಳಿತಾಯ ಮಾಡಲು ಇದರ ಸಮಾನ ಮೌಲ್ಯದ ರ್ತಾ ನಾಣ್ಯಗಳನ್ನು ಜಾರಿಗೆ ತಂದನು. ಇದರಿಂದ ನ ನಾಣ್ಯದ ಹಾವಳಿ ಹೆಚ್ಚಾಗಿ ದೇಶದ ಅರ್ಥವ್ಯವಸ್ಥೆ ಕುಸಿಯಿತು. ಖಜಾನೆ ಬರಿದಾಯಿತು.
VII ಈ ಕೆಳಗಿನ ಪ್ರಶ್ನೆಗಳಿಗೆ ಪ್ರತಿಯೊಂದನ್ನು 30 ರಿಂದ 40 ವಾಕ್ಯಗಳಲ್ಲಿ ಉತ್ತರಿಸಿ:
1. ಅಲ್ಲಾವುದ್ದೀನ್ ಖಿಲ್ಜಿಯ ಸಾಧನೆಗಳನ್ನು ವಿವರಿಸಿ.
ಅಲಿಗುರ್ಷಪ್ ಎಂಬ ಮೂಲ ಹೆಸರುಳ್ಳ ಅಲ್ಲಾವುದ್ದೀನ್ ಖಿಲ್ಜಿ ಯು ಸಣ್ಣ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ಜಲಾಲುದ್ದೀನ್ ಆಶ್ರಯದಲ್ಲಿ ಬೆಳೆದು. ಆತನ ಮಗಳನ್ನು ವಿವಾಹವಾಗಿ ಕರಾ ಪ್ರಾಂತ್ಯದ ರಾಜ್ಯಪಾಲನಾಗಿ ದೇವಗಿರಿಯ ಮೇಲೆ ಆಕ್ರಮಾಣ ಮಾಡಿ ನಂತರ ಜಲಾಲುದ್ದೀನ್ ನನ್ನೇ ಕೊಂದು ಅಧಿಕಾರಕ್ಕೆ ಬಂದನು.
- ಉತ್ತರ ಭಾರತದ ದಿಗ್ವಿಜಯಗಳಲ್ಲಿ ಗುಜರಾತಿನ ಮೇಲೆ ಆಕ್ರಮಣ ಮಾಡಿ ಕರ್ಣದೇವನನ್ನು, ರಣತಂಬೋರ್‌ನ ಮೇಲೆ ಆಕ್ರಮಣ ಮಾಡಿ ಹಮೀದೇವನನ್ನು, ಮೇವಾಡದ ರಾಣಾರಥನ್ ಸಿಂಗ್‌ನನ್ನು ಸೋಲಿಸಿದನು. ಸಾ.ಶ. 1296 ರಿಂದ 1308ರ ವರೆಗೆ ಮಂಗೋಲಿಯನ್ನರ ದಾಳಿಯನ್ನು ಎದುರಿಸಿ ಯಶಸ್ಸು ಕಂಡನು.
- ದಕ್ಷಿಣ ಭಾರತದ ಅಪಾರ ಸಂಸತ್ತು ಮತ್ತು ಅದನ್ನು ಆಕ್ರಮಿಸುವ ಉದ್ದೇಶದಿಂದ ತನ್ನ ಸಮರ್ಥ ಸೇನಾನಿಯಾದ ಮಲ್ಲಿಕಾಫರ್‌ನನ್ನು ದಕ್ಷಿಣ ಭಾರತದ ದಂಡಯಾತ್ರೆಗೆ ನಿಯೋಜಿಸಿದನು.
- ದೇವಗಿರಿಯ ಮೇಲೆ ಆಕ್ರಮಣ (ಸಾ.ಶ. 1307): ದೇವಗಿರಿಯ ರಾಜ ರಾಮಚಂದ್ರದೇವನನ್ನು ಸೋಲಿಸಿ. ರಾಣಿ ದೇವಲದೇವಿಯನ್ನು ಸೆರೆಹಿಡಿದನು ಅವಳನ್ನು ಅಲ್ಲಾವುದ್ದೀನ್ ಖಿಲ್ಜಿಯ ಹಿರಿಯ ಮಗ ಖಜಗರ್‌ಖಾನನು ವಿವಾಹವಾದನು. ರಾಮಚಂದ್ರದೇವನು ವಾರ್ಷಿಕ ಕಪ್ಪ ಕಾಣಿಕೆಕೊಡಲು ಒಪ್ಪಿದನು.
- ವಾರಂಗಲ್ ದಂಡಯಾತ್ರೆ (ಸಾ.ಶ. 1309): ವಾರಂಗಲ್‌ನ ರಾಜ ಪ್ರತಾಪರುದ್ರದೇವನು ಮಲ್ಲಿಕಾಫರನಿಗೆ ಶರಣಾಗಿ ಶಾಂತಿ ಒಪ್ಪಂದ ಮಾಡಿಕೊಳ್ಳಬೇಕಾಯಿತು. ಅಲ್ಲದೆ ಅಪಾರವಾದ ಸಂಪತ್ತನ್ನು ಕೊಟ್ಟನು.
- ದ್ವಾರಸಮುದ್ರದ ಮೇಲೆ ದಾಳೀ (ಸಾ.ಶ. 1310): ಹೊಯ್ಸಳ ರಾಜ 3ನೇ ವೀರಬಲ್ಲಾಳನ ದ್ವಾರಸಮುದ್ರದ ಮೇಲೆ ಆಕ್ರಮಣ ಮಾಡಿದ ಮಲ್ಲಿಕಾಫ ಜಧಾನಿಯನ್ನು ಲೂಟಿ ಮಾಡಿ ಹಲವಾರು ದೇವಾಲಯಗಳನ್ನು ಕೆಡವಿದನು.
- ಮಧುರೈನ ಆಕ್ರಮಣ (ಸಾ.ಶ. 1311): ಮಧುರೈನಲ್ಲಿ ಸುಂದರ ಪಾಂಡ್ಯ ಮತ್ತು ವೀರ ಪಾಂಡ್ಯ ಎಂಬ ಸಹೋದರರ ಮಧ್ಯೆ ಅಂತಃ ಕಲಹ ನಡೆಯುತ್ತಿತ್ತು. ಈ ಮಧ್ಯೆ ಮಲ್ಲಿಕಾಫರ್‌ನ ಸೈನ್ಯ ನುಗ್ಗಿ ಹಲವಾರು ನಗರ ಹಾಗೂ ದೇವಾಲಯಗಳನ್ನು ಲೂಟಿ ಮಾಡಿತು. ಅಲ್ಲಿನ ಪ್ರಸಿದ್ಧ ದೇವಾಲಯವನ್ನು ಧ್ವಂಸಮಾಡಿ ಮಸೀದಿಯನ್ನು ನಿರ್ಮಿಸಿದನು.
- ದೇವಗಿರಿಯ ಮೇಲೆ 2ನೇ ಆಕ್ರಮಣ (ಸಾ.ಶ.1312): ಇದು ಕೊನೆಯ ಯುದ್ಧವಾಗಿದ್ದು ದೇವಗಿರಿಯ ಶಂಕರದೇವನು ಕಪ್ಪ ಕಾಣಿಕೆಗಳನ್ನು ತಡೆಹಿಡಿದು ಸ್ವತಂತ್ರನಾಗಲು ಪ್ರಯತ್ನಿಸುತ್ತಿದ್ದುದನ್ನು ಅರಿತ ಮಲ್ಲಿಕಾಫರ್ ಅವನನ್ನು ಸಾಯಿಸಿ ದೇವಗಿರಿಯನ್ನು ವಶಪಡಿಸಿಕೊಂಡನು. ಅಲ್ಲಾವುದ್ದೀನನು ಪ್ರಬಲ ಮತ್ತು ಸಮರ್ಥ ಆಡಳಿತಗಾರನಾಗಿದ್ದು ದೈವದತ್ತ ನಂಬಿಕೆ ಇಟ್ಟಿದ್ದನು.
- ಸರದಾರರು ಮತ್ತು ಅಧಿಕಾರಿಗಳ ವೈವಾಹಿಕ ಸಂಬಂಧವನ್ನು ನಿರ್ಬಂಧಿಸಿದ್ದು, ಅವರ ಗುಪ್ತಸಭೆ ಮತ್ತು ಔತಣಕೂಟಗಳನ್ನು ನಿಷೇಧಿಸಿದ್ದನು ಮತ್ತು ಗುಪ್ತಚರರನ್ನು ನೇಮಿಸಿದ್ದನು.
- ಸೈನಿಕ ಸುಧಾರಣೆಗಳು: ಬೃಹತ್ ಮತ್ತು ಸರ್ವಸನ್ನದ ಸೈನ್ಯವಿತ್ತು.
- ಕುದುರೆಗಳಿಗೆ ಮುದ್ರೆ ಹಾಕುವ ಪದ್ಧತಿ, ಸೈನಿಕರ ನಕಲಿ ಹಾಜರಾತಿ ಮತ್ತು ಭ್ರಷ್ಟಾಚಾರವನ್ನು ತಡೆಯಲು ವಿವರಣಾತ್ಮಕ ದಾಖಲೆಗಳ ನಿರ್ವಹಣೆಯನ್ನು ಜಾರಿಗೆ ತಂದನು.
- ಜಾಗಿರ್ ಪದ್ಧತಿಯನ್ನು ರದ್ದು ಪಡಿಸಿ ನಗದು ರೂಪದಲ್ಲಿ ವೇತನ ನೀಡಿದನು.
- ಅರೀಜ್-ಇ-ಮುಮಾಲಿಕ್ ಎಂಬ ಅಧಿಕಾರಿಯು ಸೈನಿಕರ ಅಧಿಕಾರವನ್ನು ಹೊಂದಿದ್ದನು.
- ಕಂದಾಯ ಸುಧಾರನೆಗಳು: ವೈಜ್ಞಾನಿಕ ತಳಹದಿಯ ಮೇಲೆ ಭೂ ಮಾಪನವನ್ನು ಆರಂಭಿಸಿ ಭೂ ಕಂದಾಯವನ್ನು ನಿಗಧಿಪಡಿಸಿದನು.
- ಸರದಾರರು, ಜಾಗೀರ್‌ದಾರರು ಮತ್ತು ಉಲೇಮಾರ ಮೇಲೆ ಅವನು ಹೆಚ್ಚಿನ ತೆರಿಗೆಗಳನ್ನು ಹೇರಿದನು.
- ಮುಸ್ಲಿಂಮೇತರ ಮೇಲೆ ‘ಜಜಿಯಾ’ವನ್ನು ವಿಧಿಸಿದನು, ಅವರು ಯಾತ್ರಾ ತೆರಿಗೆ, ಸರಕು ತೆರಿಗೆಗಳನ್ನು ಕೊಡಬೇಕಿತ್ತು.
- ಕಂದಾಯ ಅಧಿಕಾರಿಗಳ ಭ್ರಷ್ಟಾಚಾರವನ್ನು ತಡೆಯುವ ಉದ್ದೇಶದಿಂದ ಅವರ ವೇತನವನ್ನು ಹೆಚ್ಚಿಸಿದನು.
- ರೈತರಿಂದ ಭೂ ಕಂದಾಯವನ್ನು ಸಂಗ್ರಹಿಸಲು ‘ಮುಸ್ತಕ್‌ರಾಜ್’ ಎಂಬ ವಿಶೇಷ ಅಧಿಕಾರಿಯ ಹುದ್ದೆಯನ್ನು ಸೃಷ್ಟಿಸಿದನು.
- ಆರ್ಥಿಕ ಸುಧಾರಣೆಗಳು : (ಮಾರುಕಟ್ಟೆ ನಿಯಮಗಳು)
- ಸೈನಿಕರಿಗೆ ಮೂಲಭೂತ ಅಗತ್ಯತೆಗಳನ್ನು ಪೂರೈಸಲು ಮಾರುಕಟ್ಟೆ ನಿಯಮ ಜಾರಿಗೊಳಿಸಿ. ದೈನಂದಿನ ಉಪಯೋಗದ ಎಲ್ಲಾ ವಸ್ತುಗಳ ದರಗಳನ್ನು ನಿಗದಿಗೊಳಿಸಲಾಯಿತು. ಮಾರುಕಟ್ಟೆಯನ್ನು ನಿಯಂತ್ರಿಸಲು ಪ್ರತ್ಯೇಕ ಇಲಾಖೆ ಮತ್ತು ವಿಶೇಷ ಅಧಿಕಾರಿಗಳನ್ನು ನೇಮಿಸಿದನು. ರಾಜಧಾನಿಯಲ್ಲಿ ನಿಗಧಿಗೊಳಿಸಿದ್ದ ದರಗಳು ಎಲ್ಲಾ ನಗರಗಳಿಗೂ ಅನ್ವಯವಾಗುತ್ತಿದ್ದವು.
- ಸರ್ಕಾರಿ ಉಗ್ರಾಣಗಳಲ್ಲಿ ಧಾನ್ಯಗಳನ್ನು ಶೇಖರಿಸಿಡಲಾಗಿತ್ತಿತ್ತು. ತುರ್ತು ಸಂದರ್ಭಗಳಾದ ಕೊರತೆಯ ಸಮಯ ಮತ್ತು ಬರಗಾಲಗಳಿಗಾಗಿ ಉಪಯೋಗಿಸಲಾಗುತ್ತಿತ್ತು.
- ಯಾವುದೇ ವ್ಯಾಪಾರಿ ಅಥವಾ ಮಾರಾಟಗಾರ ತೂಕ ಮತ್ತು ಅಳತೆಗಳಲ್ಲಿ ವಂಚಿಸಿದರೆ ವಂಚಿಸಲಾದ ತೂಕಕ್ಕೆ ಸಮನಾದಷ್ಟು ಮಾಂಸವನ್ನು ಅವನ ಶರೀರ (ತೊಡೆ) ದಿಂದ ಕತ್ತರಿಸಿ ಹಾಕುವ ಶಿಕ್ಷೆ ವಿಧಿಸಲಾಗುತ್ತಿತ್ತು.
- ಅಲ್ಲಾವುದ್ದೀನ್ ಖಿಲ್ಜಿಯ ಕೊನೆಯ ದಿನಗಳು ಸುಖಕರವಾಗಿರಲಿಲ್ಲ. ಅವನ ನಂಬಿಕಸ್ತ ಸೇನಾಪತಿ ಮಲಿಕಾಫರ್ ಅವನಿಗೆ ವಿಷಪ್ರಾಶನ ಮಾಡಿದ್ದರಿಂದ ಸುಲ್ತಾನನು ಸಾ.ಶ. 1316ರಲ್ಲಿ ಮರಣ ಹೊಂದಿದನು.
2. ಮಹಮದ್ ಬಿನ್ ತೊಘಲಕ್ ಆಡಳಿತ ಪ್ರಯೋಗಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಶಿಸಿ.
ಮಹಮದ್ ಬಿನ್ ತೊಘಲಕ್‌ನು ಸುಶಿಕ್ಷಿತ ವಿದ್ವಾಂಸ, ವಾಗ್ನಿ, ಧರ್ಮನಿಷ್ಠೆ ಮುಸಲ್ಮಾನರಾಗಿದ್ದರು ಇವನು ಜಾರಿಗೆ ತಂದ ಯೋಜನೆಗಳು ಸಮರ್ಪಕವಾಗಿರಲಿಲ್ಲ. ಆದ್ದರಿಂದಲೇ ಈತನನ್ನು ವೈರುದ್ಧಗಳ ಮಿಶ್ರಣ ಎಂದು ಕರೆಯಲಾಗಿದೆ.
- ತನ್ನ ಸಾಮ್ರಾಜ್ಯದ ಆದಾಯವನ್ನು ಹೆಚ್ಚಿಸಲು ಗಂಗಾ ಮತ್ತು ಯಮುನಾ ನದಿಗಳ ಫಲವತ್ತಾದ ದೋ ಅಬ್ ಪ್ರದೇಶಗಳ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸಿದನು ಇದು ಉತ್ತಮವಾದುದೇ ಆದರೂ ಮಳೆಯ ಕೊರತೆಯಿಂದಾಗಿ ರೈತರಿಗೆ ತೆರಿಗೆಯ ಭಾರ ಹೆಚ್ಚಾಯಿತು. ತೆರಿಗೆ ನೀಡದ ರೈತರ ವಿರುದ್ಧ ನಿರ್ದಯವಾಗಿ ಕ್ರಮ ಕೈಗೊಂಡು ಜನಪ್ರಿಯತೆಯನ್ನು ಕಳೆದುಕೊಂಡನು.ತನ್ನ ರಾಜಧಾನಿಯನ್ನು ಮಂಗೋಲರ ದಾಳಿಯಿಂದ ತಪ್ಪಿಸಲು ಮತ್ತು ದೆಹಲಿಯ ಗಡಿ ಪ್ರದೇಶಕ್ಕೆ ಹತ್ತಿರವಿದ್ದುದರಿಂದ ಸಾಮ್ರಾಜ್ಯದ ಕೇಂದ್ರದಲ್ಲಿದ್ದ ದೇವಗಿರಿಗೆ ವರ್ಗಾಯಿಸಲು ಹೊಸ ನಗರವನ್ನೇ ನಿರ್ಮಿಸಿ ಎಲ್ಲಾ ಜನತೆಯು ಸುಮಾರು 1120 ಕಿ.ಮೀ. ದೂರದ ದೇವಗಿರಿಗೆ ಹೊರಡಲು ಆದೇಶಿಸಿದನು. ದಟ್ಟಕಾಡುಗಳ ಮೂಲಕ ಅನಾಯಾಸ ಪ್ರಯಾಣ. ಭಾರೀ, ಮಳೆ, ಖಾಯಿಲೆ, ಹಸಿವು, ದರೋಡೆಕೋರರ ದಾಳಿಯಿಂದಾಗಿ ಅಪಾರವಾದ ಸಾವು ನೋವು ಉಂಟಾಗಿ ನಂತರ ಇದು ಸುಲ್ತಾನನಿಗೆ ತಿಳಿದು ಮತ್ತೆ ಜನರು ದೆಹಲಿಗೆ ಮರಳುವಂತೆ ಆದೇಶಿಸಿ ಇನ್ನೂ ಹೆಚ್ಚಿನ ಸಾವು ನೋವುಗಳಿಗೆ ಕಾರಣವಾಗಿ ಜನಪ್ರಿಯತೆಯನ್ನು ಕಳೆದುಕೊಂಡನು.
- ನಾಣ್ಯ ಚಲಾವಣೆಯ ಪ್ರಯೋಗ ನಡೆಸಿ ದುಬಾರಿ ಲೋಹಗಳಾದ ಚಿನ್ನ ಮತ್ತು ಬೆಳ್ಳಿಯನ್ನು ಉಳಿತಾಯ ಮಾಡಲು ಇದರ ಸಮಾನ ಮೌಲ್ಯದ ತಾಮ್ರದ ನಾಣ್ಯಗಳನ್ನು ಜಾರಿಗೆ ತಂದನು. ಇದರಿಂದ ನಕಲಿ ನಾಣ್ಯದ ಹಾವಳಿ ಹೆಚ್ಚಾಗಿ ದೇಶದ ಅರ್ಥವ್ಯವಸ್ಥೆ ಕುಸಿಯಿತು. ಖಜಾನೆ ಬರಿದಾಯಿತು.
3. ದೆಹಲಿ ಸುಲ್ತಾನರ ಕೊಡುಗೆಗಳ ಬಗ್ಗೆ ಒಂದು ವಿವರಣೆ ನೀಡಿ.
ಆಡಳಿತ : ದೆಹಲಿ ಸುಲ್ತಾನರ ರಾಜ್ಯವು ದೇವ ಪ್ರಭುತ್ವವಾಗಿತ್ತು. ಷರಿಯತ್ [ಇಸ್ಲಾಂ ಕಾನೂನು] ರಾಜ್ಯದ ನಿಯಮವಾಗಿತ್ತು. ಉಲೇಮಾ [ಇಸ್ಲಾಂ ವಿದ್ವಾಂಸರ ಒಂದು ಸಮಿತಿ] ರಾಜ್ಯ ಮತ್ತು ಆಡಳಿತವನ್ನು ನಿಯಂತ್ರಿಸುತ್ತಿತ್ತು. ಸುಲ್ತಾನರು ತಮ್ಮನ್ನು ಖಲೀಫಾನ ಸಹಾಯಕರೆಂದು ಕರೆದುಕೊಂಡಿದ್ದರು.
- ಸುಲ್ತಾನನೇ ಅಧಿಕಾರದ ಕೇಂದ್ರ ಬಿಂದುವಾಗಿದ್ದು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಅಧಿಕಾರ ಹೊಂದಿದ್ದು, ಮಂತ್ರಿಗಳ ಮತ್ತು ಖರೀಫರ ಸಲಹೆಯ ಮೇರೆಗೆ ಆಡಳಿತವನ್ನು ನಿರ್ವಹಿಸುತ್ತಿದ್ದನು. ವಜೀರ್, ಅಲೀಜ್-ಇ-ಮಾಮ್ಮಿಕ್. ಅಮೀರ್-ಇ-ಮಸೀಸ್, ಬರೀದ್-ಇ-ಮುವಾಲಿಬ್, ಖಾಜಿ-ಉಲ್-ಖಾಜತ್-ಮೊದಲಾದ ಮಂತ್ರಿಗಳಿದ್ದರು.
- ಕಂದಾಯ : ಭೂ ಕಂದಾಯ, ಯುದ್ಧದ ಲೂಟಿ, ವಾರ್ಷಿಕ ಕಪ್ಪ ಕಾಣಿಕೆಗಳು, ಜಜಿಯಾ ಕಂದಾಯ ಮುಂತಾದವು ಆದಾಯದ ಮೂಲಗಳಾಗಿದ್ದವು.
- ಸೈನ್ಯ : ಅಶ್ವಪಡೆ, ಗಜಪಡೆ, ಕಾಲ್ಗಳಗಳಿಂದ ಕೂಡಿತ್ತು. ದಿವಾನ್-ಇ-ಅರೀಚ್ ಸೈನ್ಯಾಡಳಿತದ ಉಸ್ತುವಾರಿ ಹೊತ್ತಿದ್ದನು.
- ಪ್ರಾಂತೀಯ ಆಡಳಿತ : ಸಾಮ್ರಾಜ್ಯವನ್ನು ‘ಇಕ್ತಾ’ ಎಂಬ ಅನೇಕ ಪ್ರಾಂತ್ಯಗಳನ್ನಾಗಿ ವಿಂಗಡಿಸಿ ‘ನಯಿಬ್ ಸುಲ್ತಾನ್’ ಎಂಬ ರಾಜ್ಯಪಾಲನ ಅಧೀನದಲ್ಲಿತ್ತು. ಪ್ರತಿಯೊಂದು ಪ್ರಾಂತ್ಯವನ್ನು ಶಿಕ್ ಮತ್ತು ಫರಗಣಗಳಾಗಿ ವಿಂಗಡಿಸಿ ಶಿಖ್‌ಗಳು ಮತ್ತು ಅಮೀಲ್ ಎಂಬ ಅಧಿಕಾರಿಗಳಿದ್ದರು.
- ಸಾಹಿತ್ಯ : ಇವರ ಕಾಲದ ಪರ್ಷಿಯನ್ ಮತ್ತು ದೇಶೀಯ ಭಾಷಾ ಸಾಹಿತ್ಯದ ಅಭಿವೃದ್ಧಿಗೆ ಸಾಕ್ಷಿಯಾಗಿತ್ತು. ಮಧ್ಯಏಷ್ಯದ ಪರ್ಷಿಯನ್ ಕವಿಗಳು ಇವರ ಆಶ್ರಯ ಪಡೆದಿದ್ದರು. ‘ಭಾರತದ ಗಿಳಿ’ ಎಂದು ಕರೆಯುವ ಅಮೀರ್ ಖುಸ್ರು, ಖಜ್ಜಾನ್-ಉಲ್-ಪುತಹ್ ಮತ್ತು ತಾರೀಖ್-ಇ-ಅಲೈ ಎಂಬ ಗ್ರಂಥಗಳನ್ನೂ, ಅಮೀರ್ ಹಸನ್ ದೆಹಲ್ವಿಯಾ ಅಷ್ಟಷಟ್ಟದಿ ಎಂಬ ಗ್ರಂಥವನ್ನೂ ರಚಿಸಿದರು. ಮಹ್ಮದ್‌ಬಿನ್ ತೊಗಲಕ್ ಮತ್ತು ಫಿರೋಷಾ ತೊಗಲಕ್ ಪ್ರಸಿದ್ಧ ವಿದ್ವಾಂಸರಾಗಿದ್ದರು. ಜಿಯಾ-ಉದ್-ದಿನ್ ಬರಾನಿ ಮತ್ತು ಇಬನ್ ಬತೂತ ಇವರ ಕಾಲದ ಪ್ರಸಿದ್ದ ಇತಿಹಾಸಕಾರರಾಗಿದ್ದರು. ಭಕ್ತಿ ಚಳುವಳಿಯ ಸ್ಥಳೀಯ ಭಾಷಾ ಸಾಹಿತ್ಯಗಳ ಬೆಳವಣಿಗೆಗೂ ಅವಕಾಶ ಕಲ್ಪಿಸಿತು. ಚಾಂದ್ ಬರ್ದಾಯಿಯು ಪೃಥ್ವಿರಾಜ ರಾಸೋ, ಮತ್ತು ಮಲಿಕ್ ಮಹಮದ್ ಜೈಸಿಯು ‘ಪದ್ಮಾವತಿ’ ಎಂಬ ಗ್ರಂಥಗಳನ್ನು ರಚಿಸಿದರು. ಸಂಸ್ಕೃತ ಗ್ರಂಥಗಳನ್ನು ಪರ್ಷಿಯನ್ ಭಾಷೆಗೆ ಭಾಷಾಂತರಿಸಲು ಪ್ರೋತ್ಸಾಹ ನೀಡಲಾಯಿತು.
- ಕಲೆ ಮತ್ತು ವಾಸ್ತುಶಿಲ್ಪ: ಭಾರತೀಯ ವಾಸ್ತುಶಿಲ್ಪ ಪರಂಪರೆಯನ್ನು ದೆಹಲಿ ಸುಲ್ತಾನರು ಸಮೃದ್ಧಗೊಳಿಸಿದರು. ಮಿನಾರ್ಗಗಳು, ಕಮಾನುಗಳು, ಗುಮ್ಮಟಗಳು, ಹಜಾರಗಳು, ಬೃಹತ್ ಹೆಬ್ಬಾಗಿಲುಗಳನ್ನು ನಿರ್ಮಿಸಿ ಇಂಡೋ-ಇಸ್ಲಾಮಿಕ್ ಎಂಬ ಹೊಸ ವಾಸ್ತುಶೈಲಿಯ ಪರಂಪರೆಗೆ ನಾಂದಿಯಿಟ್ಟರು.
- ದೆಹಲಿಯ ಖುವಾತ್-ಉಲ್ ಇಸ್ಲಾಂ ಮಸೀದಿ. ಅಜ್ಜರದ ಅಡೈ-ದಿನ್-ಕಾ-ಜೋಪರ ಮಸೀದಿ. ಕುತುಬ್ ಮಿನಾರ್, ಹೌಜ್-ಇ-ಶಾಪ್ಸ್, ಜಾಮಿ ಮಸೀದಿ, ಜಮೈತ್ ಖಾನ್ ಮಸೀದಿ, ಅಲೈ ದರ್ವಾಜ, ಹಲವಾರು ಪಟ್ಟಣಗಳು, ಕೋಟೆಗಳನ್ನು ನಿರ್ಮಿಸಿದರು.
ಹೆಚ್ಚುವರಿ ಪ್ರಶ್ನೆಗಳು:
1.ಸಾ.ಶ. 8 ರಿಂದ 12ನೇ ಶತಮಾನದ ಅವಧಿಯಲ್ಲಿ ಉತ್ತರ ಭಾರತದಲ್ಲಿ ಸುಮಾರು ಎಷ್ಟು ಸ್ವತಂತ್ರ ರಾಜ್ಯಗಳಿದ್ದವು?
ಸುಮಾರು 70 ಸ್ವತಂತ್ರ್ಯ ರಾಜ್ಯಗಳಿದ್ದವು.
2. ಘಜ್ಜಿ ಮೊಹಮದ್ ನು ಭಾರತದ ಮೇಲೆ ಎಷ್ಟು ಬಾರಿ ಆಕ್ರಮಣ ಮಾಡಿದನು?
17 ಬಾರಿ
3. ಸಾ.ಶ. 712ರಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿದ ಮುಸ್ಲಿಂ ಆಕ್ರಮಣಕಾರನ ಹೆಸರೇನು?
ಬಸ್ರಾದ ರಾಜ್ಯಪಾಲ ಮೊಹಮದ್ ಬಿನ್ ಖಾಸಿಂ.
4. ಅಲ್ಬೇರೋನಿ ಯಾವ ದೇಶದವನು?
ಪರ್ಶಿಯಾ ದೇಶದವನು.
5. ಮಹಮದ್ ಘೋರಿಯು ಸಾ.ಶ. ಎಷ್ಟರಲ್ಲಿ ಮರಣ ಹೊಂದಿದನು?
ಸಾ.ಶ. 1206ರಲ್ಲಿ
6. ಅಲ್ಲಾವುದ್ದೀನ್ ಖಿಲ್ಜಿಯ ಮೊದಲ ಹೆಸರೇನು?
‘ಅಲಿಗುರ್ಷಪ್’
7. ಕುತುಬ್-ಉದ್-ದಿನ್ ಐಬಕ್‌ನು ಯಾರಿಂದ ದಾಸ್ಯ ವಿಮೋಚನೆಯನ್ನು ಪಡೆದುಕೊಂಡನು?
ಬಾಗ್ದಾದಿನ ಖಲೀಫನಿಂದ.
8. ಟರ್ಕಿ ಭಾಷೆಯಲ್ಲಿ ಖಲ್ಜಿ ಎಂಬುದರ ಅರ್ಥವೇನು?
‘ಖಡ್ಗಧಾರಿ ಪುರುಷರು’
ನೆನಪಿನಲ್ಲಿಡಬೇಕಾದ ಅಂಶಗಳು:
- ಕುತುಬುದ್ದೀನ್ ಐಬಕ್‌ನು ದೆಹಲಿಯಲ್ಲಿ ಕುತುಬ್‌ಮಿನಾರ್ ಅನ್ನು ಕಟ್ಟಿಸಿದನು.
- ಭಾರತದ ಮೇಲೆ ಧಾಳಿ ಮಾಡಿದ ಮೊದಲ ಮುಸ್ಲಿಂರು ಅರಬ್ಬರು.
- ಸಾಂಕೇತಿಕ ನಾಣ್ಯವನ್ನು ಜಾರಿಗೊಳಿಸಿದವರು ಮಹಮದ್ ಬಿನ್ ತೊಘಲಕ್.
- ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ ಮಲ್ಲಿಕಾಫರ್,
- ಅಮೀರ್ ಖುಸ್ರುವನ್ನು “ಭಾರತದ ಗಿಳಿ” ಎಂದು ಕರೆಯುವರು.