ದ್ವಿತೀಯ ಪಿಯುಸಿ ಕನ್ನಡ ಒಂದು ಹೂ ಹೆಚ್ಚಿಗೆ ಇಡುತೀನಿ ನೋಟ್ಸ್ ಪ್ರಶ್ನೋತ್ತರಗಳು, 2nd Puc Ondu Hoo Hechige Idutini Kannada Notes Question and Answer Summery Guide Extract Mcq Pdf Download in Kannada Medium Karnataka State Syllabus 2025 ಒಂದು ಹೂ ಹೆಚ್ಚಿಗೆ ಇಡುತೀನಿ ಭಾವಾರ್ಥ ಒಂದು ಹೂ ಹೆಚ್ಚಿಗೆ ಇಡುತೀನಿ Question answer ಒಂದು ಹೂ ಹೆಚ್ಚಿಗೆ ಇಡುತೀನಿ Question answer Ondu hoo hechige idutini saramsha 2nd puc kannada ondu hoo hechige idutini question answer ಒಂದು ಹೂ ಹೆಚ್ಚಿಗೆ ಇಡುತೀನಿ ಪದ್ಯದ ಸಾರಾಂಶ kseeb solutions for class 12 kannada poem 10 notes 2nd puc kannada 10th poem notes.
೧೦. ಒಂದು ಹೂ ಹೆಚ್ಚಿಗೆ ಇಡುತೀನಿ
– ಲಲಿತಾ ಸಿದ್ದಬಸವಯ್ಯ

ಕವಿ ಪರಿಚಯ
ಶ್ರೀಮತಿ ಲಲಿತಾ ಸಿದ್ದಬಸವಯ್ಯ (ಜನನ: 27-02-1955) ವರ್ತಮಾನದ ಸರಳ ಸಾಮಾನ್ಯ ಸಂಗತಿಗಳನ್ನು, ಅವುಗಳ ಒಳವಿವರಗಳೊಂದಿಗೆ ಕವಿತೆಯನ್ನಾಗಿ ಕಟ್ಟುವ ಕೌಶಲವನ್ನು ಕರಗತವಾಗಿಸಿಕೊಂಡಿರುವ ಅಪರೂಪದ ಕವಯಿತ್ರಿ. ಇವರು ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಜನಿಸಿದರು. ಇವರ ತಂದೆ ಡಿ.ಎಸ್. ಸಿದ್ದಲಿಂಗಯ್ಯ, ತಾಯಿ ಶ್ರೀಮತಿ ಆರ್. ಪುಟ್ಟಮ್ಮಣ್ಣಿ, ಕೊರಟಗೆರೆ-ತುಮಕೂರುಗಳಲ್ಲಿ ವ್ಯಾಸಂಗ ಮುಗಿಸಿ, ಬಿ.ಎಸ್ಸಿ. ಪದವೀಧರೆಯಾದರು. 28 ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ನಂತರ ಬರವಣಿಗೆಯಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ‘ಮೊದಲಸಿರಿ’, ‘ಇಹದ ಸ್ವರ’, ‘ಕೆಬ್ಬೆ ನೆಲ’, ‘ದಾರಿನೆಂಟ ಮತ್ತು ಬಿಡಿ ಹರಳು’ ಎಂಬ ಕವಿತಾ ಸಂಕಲನಗಳನ್ನೂ, ‘ಆನೆಘಟ್ಟ’ ಎಂಬ ಕಥಾಸಂಕಲನವನ್ನೂ, ‘ಇನ್ನೊಂದು ಸಭಾಪರ್ವ’ ಎಂಬ ನಾಟಕವನ್ನೂ ‘ಮಿ. ಛತ್ರಪತಿ’ ಎಂಬ ನಗೆಬರಹವನ್ನೂ ಪ್ರಕಟಿಸಿರುವ ಇವರಿಗೆ ಸಾಹಿತ್ಯ ಅಕಾಡೆಮಿ ಬಹುಮಾನ, ಬಿಎಂಶ್ರೀ ಕಾವ್ಯ ಪ್ರಶಸ್ತಿ, ಪುತಿನ ಕಾವ್ಯ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ ಮುಂತಾದ ಪುರಸ್ಕಾರಗಳು ಸಂದಿವೆ.
(ಅ) ಸಾಂದರ್ಭಿಕ ವಿವರಣೆಯನ್ನು ಬಯಸುವ ವಾಕ್ಯಗಳು
೧. ‘ಎಷ್ಟುಸಲವಮ್ಮ ಹೇಳುವುದು ನಿನಗೆ?’
ಶ್ರೀಮತಿ ಲಲಿತಾ ಸಿದ್ದಬಸವಯ್ಯ ಅವರ ‘ಒಂದು ಹೂ ಹೆಚ್ಚಿಗೆ ಇಡುತೀನಿ’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ.
ಮುದುಕಿಯ ಮಗ ಈ ಮೇಲಿನಂತೆ ಗದರಬಹುದೆಂದು ತನ್ನೊಳಗೆ ಯೋಚಿಸುತ್ತಾಳೆ. ಫೋನು ಝಣಗುಡುತ್ತಿದೆ. ಆದು ಮುದುಕನದಾಗಿರಬಹುದೆಂದು ಭಾವಿಸಿದ ಮುದುಕಿ ಯಾರೂ ಬರದಿದ್ದಾಗ ತಾನೇ ಎತ್ತಿಕೊಳ್ಳಲು ಹಿಂಜರಿಯುತ್ತಾಳೆ. ಫೋನ್ ಮುಟ್ಟಿದರೆ ಸೊಸೆ ಕೋಪಿಸಿಕೊಳ್ಳಬಹುದು, ಮಗ ಎಷ್ಟು ಸಲವಮ್ಮ ಹೇಳುವುದೆಂದು ಗದರಬಹುದೆಂಬ ಭಯ ಆಕೆಯದು. ಹಿಂದೆ ಗದರಿರುವ ಅನುಭವಗಳು ಈಗ ಈ ರೀತಿ ಯೋಚಿಸುವಂತೆ ಮಾಡಿದೆ. ಅವಲಂಬಿತಳಾಗಿರುವ ಆಕೆಗೆ ಮಗನ ಮನೆಯಲ್ಲಿ ಸ್ವಾತಂತ್ರ್ಯವೇ ಇಲ್ಲ. ಮಗನ ಬಗ್ಗೆ ಭಯದಿಂದಲೇ ವರ್ತಿಸಬೇಕಾದ ಸ್ಥಿತಿ ಮುದುಕಿಯದು.
೨. ಅಲ್ಲಿಯ ಮಾತು ಅವನಿಗೆ ಸಸೇಮಿರ ಬರದು.
ಶ್ರೀಮತಿ ಲಲಿತಾ ಸಿದ್ಧಬಸವಯ್ಯ ಅವರು ರಚಿಸಿರುವ ‘ಒಂದು ಹೂ ಹೆಚ್ಚಿಗೆ ಇಡುತೀನಿ’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.
ಮುದುಕಿ ಇರುವುದು ಹಿರಿಯ ಮಗನ ಬಳಿ, ಸದ್ಯ ಅದು ಕನ್ನಡ ಪ್ರದೇಶ. ಆದರೆ ಮುದುಕ ಕಿರಿಮಗ ಸೊಸೆಯೊಂದಿಗೆ ದೂರದ ಅಸ್ಸಾಮಿನಲ್ಲಿದ್ದಾನೆ. ತಾನಾದರೂ ಇಲ್ಲಿ ಯಾರೂ ಮನೆಯಲ್ಲಿಲ್ಲದ್ದಾಗ ಅವರಿವರೊಂದಿಗೆ ಕನ್ನಡದಲ್ಲಿ ಮಾತನಾಡಿ ಬಾಯಿತುರಿಕೆ ತೀರಿಸಿಕೊಳ್ಳಬಹುದು. ಆದರೆ ಮುದುಕನಿಗೆ ಅಸ್ಸಾಮಿ ಭಾಷೆ ಸ್ವಲ್ಪವೂ ಬಾರದು ಹೀಗಾಗಿ ಆತನಿಗೆ ಮಾತೇ ಮರೆತು ಹೋಗಿದೆ ಎಂದು ಮುದುಕಿಯೊಂದಿಗೆ ಹೇಳಿಕೊಂಡಿದನ್ನು ಮುದುಕಿಯು ನೆನಪಿಸಿಕೊಳ್ಳುವ ಸಂದರ್ಭವಿದಾಗಿದೆ.
೩. ಮಾತೇ ಮರೆತು ಹೋಗಿದೆ ಕಣೆ.
ಶ್ರೀಮತಿ ಲಲಿತಾ ಸಿದ್ದಬಸವಯ್ಯ ಅವರ ‘ಒಂದು ಹೂ ಹೆಚ್ಚಿಗೆ ಇಡುತೀನಿ’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.
ದೂರದ ಅಸ್ಲಾಮಿನಲ್ಲಿ ಕಿರಿಮಗನ ಮನೆಯಲ್ಲಿರುವ ಆತನಿಗೆ ಒಂಟಿತನ ಕಾಡುತ್ತಿದೆ. ಗುಡ್ಡದ ಮೇಲಿರುವ ವಸತಿಗೃಹದಲ್ಲಿ ಆತ ಒಂಟಿಯಾಗಿದ್ದಾನೆ. ಮಗ-ಸೊಸೆ ಬೆಳಿಗ್ಗೆ ಕೆಲಸಕ್ಕೆ ಹೋದರೆ ಹಿಂದಿರುಗುವುದು ಕತ್ತಲಾದ ಮೇಲೆ. ಅಕ್ಕಪಕ್ಕದವರೊಂದಿಗೆ ಮಾತನಾಡಲು ಅಲ್ಲಿಯ ಭಾಷೆ ಬರುವುದಿಲ್ಲ. ಹೀಗಾಗಿ ಆತನಿಗೆ ಮಾತೇ ಮರೆತು ಹೋದಂತಾಗಿದೆ. ಇದನ್ನಾತ ಮುದುಕಿಗೆ ಕರೆ ಮಾಡಿದಾಗ ತಿಳಿಸಿದ್ದಾನೆ.
೪. ಬಿಡುಗಡೆಗೆ ಹಾತೊರೆದು ರೈಟನ್ನೆ ರಾಂಗೆಂದಳೋ.
ಶ್ರೀಮತಿ ಲಲಿತಾ ಸಿದ್ಧಬಸವಯ್ಯ ಅವರ ‘ಒಂದು ಹೂ ಹೆಚ್ಚಿಗೆ ಇಡುತೀನಿ’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಂಡಿದೆ.
ಮುದುಕಿಯು ಫೋನ್ ರಿಸೀವ್ ಮಾಡುವಂತೆ ಮಹಡಿ ಮೇಲಿದ್ದ ಮೊಮ್ಮಗಳನ್ನು ಕಾಡುತ್ತಾಳೆ, ಕಂಪ್ಯೂಟರ್ ಪರದೆಯ ಮೇಲೆ ಮೂಜಗವನ್ನೇ ಆವಾಹಿಸಿಕೊಂಡು ಕುಳಿತಿದ್ದ ಆಕೆಗೆ ಅಜ್ಜಿಯ ಕಾಟದಿಂದ ಕಿರಿಕಿರಿಯಾಯಿತು. ಅವಳು ಧಡಧಡನೆ ಮೆಟ್ಟಲಿಳಿದು ಬಂದು, ಘೋನ್ ರಿಸೀವರನ್ನು ಎತ್ತಿ ಕುಕ್ಕಿ ‘ರಾಂಗ್ ನಂಬರ್’ ಎಂದು ಕ್ಷಣಾರ್ಧದಲ್ಲಿ ಮಾಯವಾದಳು. ಆಗ ಮುದುಕಿಯು ತನ್ನ ಮೊಮ್ಮಗಳು ಸರಿಯಾಗಿ ಕೇಳಿಸಿಕೊಂಡಳೋ ಅಥವಾ ಬಿಟ್ಟರೆ ಸಾಕೆಂದು ರೈಟನ್ನೇ ರಾಂಗೆಂದಳೋ ಎಂಬ ಅನುಮಾನ ಕಾಡುವ ಸಂದರ್ಭವಿದಾಗಿದೆ.
೫. ಒಂದು ಹೂ ಹೆಚ್ಚಿಗೆ ಇಡುತೀನಿ ನಿನ್ನ ಗಟ್ಟಿಪಾದಕ್ಕೆ
ಶ್ರೀಮತಿ ಲಲಿತಾ ಸಿದ್ದಬಸವಯ್ಯನವರ ‘ಒಂದು ಹೂ ಹೆಚ್ಚಿಗೆ ಇಡುತೀನಿ’ ಎಂಬ ಕವಿತೆಯ ವಾಕ್ಯವಿದು. ಇದು ಮುದುಕಿಯು ತನ್ನೊಳಗೇ ದೇವರಿಗೆ ಸಲ್ಲಿಸಿರುವ ಪ್ರಾರ್ಥನೆಯಾಗಿದೆ.
ಮುದುಕನಿಂದ ಕರೆ ಬಂದ ಸಮಯದಲ್ಲೇ ಮಗನ ಕಾರು, ಮೊಮ್ಮಗಳ ಸ್ಕೂಟಿ ಹೊರಟ ಸದ್ದು ಕೇಳಿದೆ. ಮೊಮ್ಮಗ ಸ್ಕೂಲಿಗೆ ಹೋಗುವ ವ್ಯಾನೂ ಬಂದಾಯಿತು. ಇನ್ನಿರುವ ಅಡ್ಡಿಯೆಂದರೆ ಸೊಸೆ. ಅವಳಿಗೂ ಹೊರಗಡೆಯ ಕೆಲಸ ಸಮ್ಮಿಲಿಸಿದರೆ ತಾನು ಮುದುಕನೊಂದಿಗೆ ಸ್ವಲ್ಪ ಹೊತ್ತು ನಿರಾಳವಾಗಿ ಮಾತನಾಡಿಕೊಳ್ಳಬಹುದು. ಇದಕ್ಕೆ ಅವಕಾಶ ಮಾಡಿಕೊಟ್ಟರೆ ತನ್ನ ಮನೆದೇವರಾದ ಗುಟ್ಟೆಮಲ್ಲಪ್ಪನಿಗೆ ಒಂದು ಹೂ ಹೆಚ್ಚಿಗೆ ಇಡುವುದಾಗಿ ಮುದುಕಿಯು ಸಲ್ಲಿಸುವ ಪ್ರಾರ್ಥನೆಯಾಗಿದೆ.
೬. ಇನ್ನೊಂದು ಸೇರ್ಪಡೆ ಆ ಲೀಲಾಮಾತ್ರನಿಗೆ.
ಶ್ರೀಮತಿ ಲಲಿತಾ ಸಿದ್ದಬಸವಯ್ಯನವರ ‘ಒಂದು ಹೂ ಹೆಚ್ಚಿಗೆ ಇಡುತೀನಿ’ ಎಂಬ ಕವಿತೆಯ ಕೊನೆಯ ವಾಕ್ಯವಿದು. ಇದನ್ನು ಕವಯಿತ್ರಿಯೇ ಅತ್ಯಂತ ವಿಷಾದದಿಂದ ಹೇಳಿದ್ದಾರೆ.
ಮುದುಕನಿಗೆ ಕರೆ ಬಂದ ಸಂದರ್ಭದಲ್ಲಿ ಮನೆಯವರೆಲ್ಲರೂ ಹೊರ ಹೊರಟರೆ ತಾನು ನಿರಾತಂಕವಾಗಿ ಮುದುಕನೊಂದಿಗೆ ಸ್ವಲ್ಪ ಹೊತ್ತು ಮಾತನಾಡಬಹುದೆಂದು ಮುದುಕಿಯು ಯೋಚಿಸುತ್ತಾಳೆ. ಅವಳು ಇದುವರೆಗೆ ಸಲ್ಲಿಸಿರುವ ಇಂತಹ ಒಂದು ದೊಡ್ಡ ಗಂಟೇ ದೇವರ ಬಳಿ ಇರುವಾಗ ಈಗಿನ ಅವಳ ಪ್ರಾರ್ಥನೆಯು ಇನ್ನೊಂದು ಸೇರ್ಪಡೆ ಎಂದು ಕವಯಿತ್ರಿ ವಿಷಾದದಿಂದ ಹೇಳಿದ್ದಾರೆ.
ಹೆಚ್ಚುವರಿ ಪ್ರಶ್ನೆಗಳು:
೭. ʼಹಲೋ ನಾನೇ ಕಣ್ರಿ ಮಾತಾಡಿʼ
ಶ್ರೀಮತಿ ಲಲಿತಾ ಸಿದ್ಧಬಸವಯ್ಯನವರು ಬರೆದಿರುವ ‘ಒಂದು ಹೂ ಹೆಚ್ಚಿಗೆ ಇಡುತೀನಿ’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಮುದುಕಿಯು ಮುದುಕನನ್ನು ಉದ್ದೇಶಿಸಿ ಈ ಮಾತನ್ನು ಹೇಳುತ್ತಾಳೆ.
ಎರಡನೆಯ ಬಾರಿಗೆ ಫೋನು ರಿಂಗಣಿಸಿದಾಗ ಮುದುಕಿಯು ಅದು ತನ್ನ ಮುದುಕನ ಕರೆಯೇ ಎಂದು ನಿರ್ಧರಿಸಿ, ಎರಡೂ ಕೈಯಲ್ಲಿ ರಿಸೀವರನ್ನು ಹಿಡಿದು ‘ಹಲೋ ನಾನೇ ಕಣೀ ಮಾತಾಡ್ರಿ ಮಾತಾಡ್ರಿ’ ಎನ್ನುತ್ತಾಳೆ. ಮುದುಕನ ಕರೆ ಬಂದಿರುವುದರಿಂದ ಅವಳಿಗಾದ ಸಂತೋಷ, ಫೋನ್ ಕಟ್ಟಾಗಿಬಿಟ್ಟರೆ ಎಂಬ ಆತಂಕಗಳೆಲ್ಲವೂ ಒಟ್ಟೋಟ್ಟಿಗೇ ನುಸುಳಿ ಅವಳ ದನಿಯನ್ನು ಉದ್ವೇಗದಲ್ಲಿಟ್ಟಿರುವುದನ್ನು ಗಮನಿಸಬಹುದು.
೮. ಹಂಚಿಕೊಂಡಿದ್ದಾರೆ ಅಪ್ಪಅಮ್ಮನನ್ನು,
ಶ್ರೀಮತಿ ಲಲಿತಾ ಸಿದ್ದಬಸವಯ್ಯ ಅವರು ಬರೆದಿರುವ ‘ಒಂದು ಹೂ ಹೆಚ್ಚಿಗೆ ಇಡುತೀನಿ’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.
ಮಕ್ಕಳಿಬ್ಬರು ತಮ್ಮ ತಂದೆ ತಾಯಿಯರನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತು ತಮ್ಮ ಅಪ್ಪನನ್ನು ಒಬ್ಬ ಮಗ, ಅಮ್ಮನನ್ನು ಒಬ್ಬ ಮಗ ಹಂಚಿಕೊಂಡಿರುವುದನ್ನು ವಿವರಿಸುತ್ತಾ ಕವಯಿತ್ರಿ ಈ ಮಾತನ್ನು ಹೇಳಿದ್ದಾರೆ. ವೃದ್ಧರನ್ನು ಪರಸ್ಪರ ಆಗಲಿಸಿ, ನೋಡಿಕೊಳ್ಳುವ ನೆಪದಲ್ಲಿ ಅವರಿಬ್ಬರಲ್ಲಿ ಸಂಕಟ, ತಳಮಳ, ದುಃಖವನ್ನು ತಂದುಹಾಕಿರುವ ಮಕ್ಕಳ ಕ್ರೌರ್ಯವನ್ನು ಕವಯಿತ್ರಿ ಇಲ್ಲಿ ಬೆರಳುಮಾಡಿ ತೋರಿಸುತ್ತಿದ್ದಾರೆ. ಇವತ್ತು ವೃದ್ಧರ ವಿಚಾರದಲ್ಲಿ ನಾವು ನಡೆದುಕೊಳ್ಳುತ್ತಿರುವ ರೀತಿ-ನೀತಿಗಳನ್ನು ಈ ಸಂದರ್ಭವು ವ್ಯಂಗ್ಯವಾಗಿ ಚಿತ್ರಿಸಿದೆ.
೯. ಪಾಪ ಮುದುಕ ದೂರದ ಆಸ್ಸಾಮಿನಲ್ಲಿ.
ಶ್ರೀಮತಿ ಲಲಿತಾ ಸಿದ್ದಬಸವಯ್ಯನವರು ಬರೆದಿರುವ ‘ಒಂದು ಹೂ ಹೆಚ್ಚಿಗೆ ಇಡುತೀನಿ’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ.
ಮಕ್ಕಳಿಬ್ಬರು ತಮ್ಮ ತಂದೆ-ತಾಯಿಯರನ್ನು ಹಂಚಿಕೊಂಡಿದ್ದಾರೆ. ತಾಯಿ ದೊಡ್ಡಮಗನ ಬಳಿಯಿದ್ದಾಳೆ. ಕನ್ನಡದ ವಾತಾವರಣವಿರುವ ಪ್ರದೇಶವಾದ್ದರಿಂದ ಮುದುಕಿ ಮಗ-ಸೊಸೆ ಇಲ್ಲದಾಗಲಾದರೂ ಅಕ್ಕಪಕ್ಕದವರೊಂದಿಗೆ ನಾಲ್ಕು ಮಾತಾಡಿ ಬಾಯಿತುರಿಕೆ ತೀರಿಸಿಕೊಳ್ಳುತ್ತಾಳೆ. ಆದರೆ ಮುದುಕನಿಗೆ ಈ ಅವಕಾಶವೂ ಇಲ್ಲ. ಏಕೆಂದರೆ ಮುದುಕನಿರುವುದು ಚಿಕ್ಕಮಗನ ಜೊತೆ ದೂರದ ಅಸ್ಲಾಮಿನಲ್ಲಿ, ಅಲ್ಲಿನ ಭಾಷೆ ಆತನಿಗೆ ಬರುವುದಿಲ್ಲವಾದ್ದರಿಂದ ಪರಕೀಯತೆ ಅವನನ್ನು ಆವರಿಸಿದೆ. ಇದನ್ನು ವಿವರಿಸುವಾಗ ಕವಯಿತ್ರಿ ಈ ಮೇಲಿನ ಮಾತನ್ನು ಹೇಳಿದ್ದಾನೆ.
(ಆ) ಒಂದು ಅಂಕದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿ).
೧. ಮುದುಕಿಯ ಭಯಕ್ಕೆ ಕಾರಣವೇನು?
ಫೋನೆತ್ತಿಕೊಂಡರೆ ಸೊಸೆ ಏನೆನ್ನುವಳೋ
೨. ಮುದುಕಿಗೆ ಯಾರಿಂದ ಫೋನ್ ಕರೆ ಬಂದಿತ್ತು?
ಮುದುಕನಿಂದ
೩. ಮುದುಕ ಇರುವುದೆಲ್ಲಿ?
ಅಸ್ಸಾಮ್
೪. ಮೊಮ್ಮಗಳು ಏನು ಮಾಡುತ್ತಿದ್ದಳು?
ಕಂಪ್ಯೂಟರಿನಲ್ಲಿ ಮೂಜಗವನ್ನೇ ಆವಾಹಿಸಿ ಕುಳಿತಿದ್ದಳು.
೫. ಮುದುಕಿ ಯಾವ ದೇವರಿಗೆ ಹರಕೆ ಹೊತ್ತಳು?
ಗುಟ್ಟೇಮಲ್ಲಪ್ಪ
೬. ಮುದುಕಿಯು ಏನೆಂದು ಹರಕೆ ಹೊತ್ತಳು?
ಗುಟ್ಟೇಮಲ್ಲಪ್ಪನ ಗಟ್ಟಿಪಾದಕ್ಕೆ ಒಂದು ಹೂ ಹೆಚ್ಚಿಗೆ ಇಡುತೀನಿ
ಹೆಚ್ಚುವರಿ ಪ್ರಶ್ನೆಗಳು:
೭. ಮುದುಕಿ ಯಾರಿಗೆ ಹೊರಗಿನ ಕೆಲಸ ಸಮ್ಮಿಲಿಸಲಿ ಎನ್ನುತ್ತಾಳೆ?
ಸೊಸೆಗೆ
೮. ಮೊಮ್ಮಗಳು ಫೋನೆತ್ತಿ ಕುಕ್ಕಿ ಏನೆಂದಳು?
ರಾಂಗ್ ನಂಬರ್
೯. ಮುದುಕಿ ಮಹಡಿಯ ಮೇಲಿರುವ ಯಾರನ್ನು ಕಾಡಿ ಕರೆಯುತ್ತಾಳೆ?
ಮೊಮ್ಮಗಳನ್ನು
೧೦. ಮುದುಕ ಏನನ್ನು ತಬ್ಬಿ ಹಿಡಿದಿದ್ದಾನೆ?
ಪೋನುಗೂಡು
೧೧. ಮುದುಕಿ ಯಾರ ಜೊತೆ ಇದ್ದಾಳೆ?
ಹಿರಿಯ ಮಗನ
೧೨. ಮುದುಕಿ ಯಾರೊಂದಿಗೆ ಮಾತಾಡಿ ತನ್ನ ಬಾಯತುರಿಕೆ ಕಡಿಮೆ ಮಾಡಿಕೊಳ್ಳುತ್ತಾಳೆ?
ಅಕ್ಕಪಕ್ಕದವರೊಡನೆ
(ಆ) ಎರಡು ಅಂಕಗಳ ಪ್ರಶ್ನೆಗಳು (ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ):
೧. ಮುದುಕಿಯ ಜೀವ ಎಳೆಯುತ್ತಿರುವುದೇಕೆ?
ಫೋನ್ ಮುದುಕನದಿರಬಹುದು, ಯಾರಾದರೂ ಬರುವ ಮುನ್ನ ನಿಂತುಹೋಗಬಹುದು, ಬೇಗ ಯಾರಾದರೂ ಬಂದು ಫೋನೆತ್ತಬಾರದೆ ಎಂದು ಮುದುಕಿಯ ಜೀವ ಎಳೆಯುತ್ತಿರುವುದು.
೨. ಮುದುಕ ಏನೆಂದು ಗೋಗರೆಯುತ್ತಾನೆ?
ಮುದುಕ ಫೋನು ಮಾಡಿದಾಗಲೆಲ್ಲ “ಮಾತಾಡು, ಮಾತಾಡು, ಆಡು ಮಾತಾಡುತ್ತಿರು ನಿಲ್ಲಿಸಬೇಡ” ಎಂದು ಗೋಗರೆಯುತ್ತಾನೆ.
೩. ಮೊಮ್ಮಗಳ ಆತುರಕ್ಕೆ ಮುದಮತಿ ಏನೆಂದುಕೊಂಡಳು?
ಮೊಮ್ಮಗಳ ಆತುರಕ್ಕೆ ಮುದುಕಿಯು “ಆ ಹುಡುಗಿ ಸರಿಯಾಗಿ ಕೇಳಿಸಿಕೊಂಡಳೋ ಅಥವಾ ಬಿಡುಗಡೆಗೆ ಹಾತೊರೆದು ರೈಟನ್ನೇ ರಾಂಗೆಂದಳೋ?” ಎಂದು ಕೊಂಡಳು.
೪. ಸೊಸೆಗೆ ಹೊರಗಿನ ಕೆಲಸ ಬರಲೆಂದು ಮುದುಕಿ ಬಯಸಿದ್ದೇಕೆ?
ಸೊಸೆಗೆ ಹೊರಗಿನ ಕೆಲಸ ಬಂದರೆ ಹೊರಹೋಗುತ್ತಾಳೆ. ಆಗ ತಾನು ನಿರಾತಂಕವಾಗಿ ಮುದುಕನೊಂದಿಗೆ ವಿರಾಮವಾಗಿ ಮಾತನಾಡಬಹುದೆಂಬ ಆಸೆಯಿಂದ ಮುದುಕಿಯು ಹಾಗೆಂದುಕೊಂಡಳು.
೫. ಮುದುಕಿಯು ಯಾರನ್ನು ಏನೆಂದು ಪ್ರಾರ್ಥಿಸುವಳು?
ಮುದುಕಿಯು ತನ್ನ ಮನೆದೇವರಾದ ಗುಟ್ಟೇಮಲ್ಲಪ್ಪನನ್ನು ಕುರಿತು ಸೊಸೆಗೆ ಹೊರಗಿನ ಕೆಲಸ ಬಂದಲ್ಲಿ ನಿನಗೆ ಒಂದು ಹೂ ಹೆಚ್ಚಿಗೆ ಇಡುತೀನಿ ಎಂದು ಪ್ರಾರ್ಥಿಸಿದಳು.
ಹೆಚ್ಚುವರಿ ಪ್ರಶ್ನೆಗಳು:
೬. ಮುದುಕ ಮುದುಕಿಯನ್ನು ಮಕ್ಕಳು ಹೇಗೆ ಹಂಚಿಕೊಂಡಿದ್ದಾರೆ?
ಮುದುಕನನ್ನು ಕಿರಿಮಗನೂ, ಮುದುಕಿಯನ್ನು ಹಿರಿಮಗನೂ ಹಂಚಿಕೊಂಡಿದ್ದಾರೆ.
೭. ಮುದುಕಿ ಮಹಡಿ ಹತ್ತುವ ರೀತಿ ಹೇಗೆ?
ಮುದುಕಿಯು ಮೊಣಕಾಲಚಿಪ್ಪ ಮೇಲೆ ಭಾರ ಹೇರುತ್ತ, ಹೇರಿದ ಭಾರಕ್ಕೆ ಅದುರುವ ಮಂಡಿಗಳ ಅಂಗೈಯಲ್ಲಿ ಅದುಮುತ್ತ ಒಂದೊಂದೇ ಮೆಟ್ಟಿಲು ಹತ್ತಿ ಮಹಡಿ ಏರುತ್ತಾಳೆ.
೮. ಮಗ ಏನೇನೆಂದು ಗದರಬಹುದು ಎಂದು ಮುದುಕಿ ಯೋಚಿಸುತ್ತಾಳೆ?
ಮಗ ‘ಎಷ್ಟು ಸಲವನ್ನು ಹೇಳುವುದು ನಿನಗೆ?’ ಮತ್ತು ‘ಅಳುವಂಥದ್ದೇನಾಗಿದೆಯನ್ನ ನಿನಗೆ?’ ಎಂದು ಗದರಬಹುದೆಂದು ಮುದುಕಿ ಯೋಚಿಸುತ್ತಾಳೆ.
(ಇ) ನಾಲ್ಕು ಅಂಕಗಳ ಪ್ರಶ್ನೆಗಳು (ಐದಾರು ವಾಕ್ಯಗಳಲ್ಲಿ ಉತ್ತರಿಸಿ):
೧. ಮಗ, ಸೊಸೆ ಮತ್ತು ಮೊಮ್ಮಗಳು ಮುದುಕಿಯನ್ನು ಹೇಗೆ ನಡೆಸಿಕೊಳ್ಳುವರು?
ಮುದುಕಿಗೆ ಮಗನ ಮನೆಯಲ್ಲಿ ಎಲ್ಲ ಅನುಕೂಲವೂ ಇದೆ. ಆದರೆ ಸ್ವಾತಂತ್ರ್ಯವಿಲ್ಲ. ಫೋನ್ ರಿಸೀವ್ ಮಾಡಲು ಸೊಸೆ ಏನೆನ್ನುವಳೋ ಎಂಬ ಭಯ. ಮಗನಿಗೆ ತಿಳಿದರೆ ‘ಎಷ್ಟು ಸಲವಮ್ಮ ನಿನಗೆ ಹೇಳುವುದು?’ ಎಂದು ಗದರಬಹುದೆ೦ಬ ಭಯ. ಸೊಸೆ ಏನಾದರೂ ಅನ್ನುತ್ತಲೇ ಇರುತ್ತಾಳೆ. ಮಗ ಆಗಾಗ ಗದರುತ್ತಲೇ ಇರುತ್ತಾನೆಂಬುದು ಇದರಿಂದ ಅರ್ಥವಾಗುತ್ತದೆ. ಅಲ್ಲದೆ ಮಗ-ಸೊಸೆ ಇಲ್ಲದಾಗ ಮುದುಕಿ ಬಾಯಿತುರಿಕೆ ಕಡಿಮೆ ಮಾಡಿಕೊಳ್ಳುವುದು ಕೂಡ ಆಕೆಗೆ ಸ್ವಾತಂತ್ರ್ಯ ವಿಲ್ಲವೆಂಬುದನ್ನೇ ಧ್ವನಿಸುತ್ತದೆ. ಇನ್ನು ಮೊಮ್ಮಗಳಿಗೂ ತನ್ನ ಅಜ್ಜಿಯ ಬಗ್ಗೆ ಅಕ್ಕರೆ ಇಲ್ಲ. ಮುದುಕಿ ಕರೆದಾಗ ಆಕೆ ಸಿಡಿಮಿಡಿಗೊಂಡು ಚಿಟಗುಡುತ್ತಲೇ ಬರುವುದನ್ನು ನೋಡುತ್ತೇವೆ. ಈ ಎಲ್ಲ ಸಂಗತಿಗಳೂ ನಮಗೆ ಮಗ-ಸೊಸೆ-ಮೊಮ್ಮಗಳು ಮುದುಕಿಯನ್ನು ಹೇಗೆ ನೋಡಿಕೊಳ್ಳುವರೆಂಬುದನ್ನು ವಿವರಿಸುತ್ತದೆ.
೨. ಮುದುಕನ ಕುರಿತು ಮುದುಕಿಯ ನೆನಕೆಗಳೇನು?
ಮುದುಕನಿಗಾಗಿ ಮುದುಕಿಯು ಚಡಪಡಿಸುತ್ತಾಳೆ. ದೂರದ ಅಸ್ಸಾಮಿನಲ್ಲಿರುವ ಮುದುಕನಿಗೆ ಅಲ್ಲಿನ ಭಾಷೆ ಬರುವುದಿಲ್ಲ. ಮಗ-ಸೊಸೆ ಕೆಲಸಕ್ಕೆ ಹೋದ ಮೇಲೆ ಒಬ್ಬಂಟಿ. ಮಾತಾಡಲೂ ಯಾರೂ ಇಲ್ಲದೆ ಮಾತೇ ಮರೆತುಹೋಗಿದೆ ಕಣೆ ಎಂಬ ಮುದುಕನ ಮಾತು ಅವಳಿಗೆ ನೆನಪಾಗುತ್ತದೆ. ಅಲ್ಲದೆ ಫೋನು ಮಾಡಿದಾಗಲೆಲ್ಲಾ ‘ಮಾತಾಡು ಮಾತಾಡು, ಆಡು ಮಾತಾಡುತ್ತಿರು, ನಿಲ್ಲಿಸಬೇಡ’ ಎಂದು ಮುದುಕ ಗೋಗರೆಯುವುದನ್ನು, ಆತ ಫೋನು ಗೂಡನ್ನೇ ತಬ್ಬಿಕೊಂಡಿರುವುದನ್ನು ನೆನೆದು ಮುದುಕಿಗೆ ಕಣ್ಣೀರು ಬಂದರೂ ಮುದುಕನಿಗೆ ತಿಳಿದರೆ ಕೊರಗಬಹುದೆಂಬ ಆತಂಕದಿಂದ ಸದ್ದಾಗದಂತೆ ಕಣ್ಣೀರು ಸುರಿಸುತ್ತಾಳೆ. ತನ್ನ ಸಂಗಾತಿಯ ನೆನಪು ಮುದುಕಿಯನ್ನು ಅವರಿಸಿಕೊಂಡಿದೆ.
೩. ಮುದುಕಿಯ ತಳಮಳ ಕವಿತೆಯಲ್ಲಿ ಹೇಗೆ ವ್ಯಕ್ತವಾಗಿದೆ?
ಮುದುಕಿಯ ತಳಮಳ ಇಡೀ ಕವಿತೆಯನ್ನು ಆವರಿಸಿಕೊಂಡಿದೆ. ಕವಿತೆಯ ಆರಂಭದಲ್ಲೇ ಫೋನಿನ ಝಣತ್ಕಾರದೊಂದಿಗೆ ಅವಳ ತಳಮಳ ಆರಂಭಗೊಳ್ಳುತ್ತದೆ. ಪೋನು ಎತ್ತಿಕೊಳ್ಳುವುದೋ ಬಿಡುವುದೋ? ಸೊಸೆ ಏನೆನ್ನುವಳೋ, ಮಗ ಗದರುವನೋ? ಮೊಮ್ಮಗಳು ಸರಿಯಾಗಿ ಕೇಳಿಸಿಕೊಂಡಳೋ, ರೈಟನ್ನೇ ರಾಂಗಂದಳೋ? ಮುದುಕ ಅಲ್ಲಿ ಚಡಪಡಿಸುತ್ತಿರಬಹುದು – ಈ ಮುಂತಾದ ಮುದುಕಿಯ ಪ್ರಶ್ನೆಗಳಲ್ಲಿ ಅವಳ ತಳಮಳ ಎದ್ದು ಕಾಣುತ್ತದೆ. ಅವಳು ಅಡುಗೆ ಮನೆ-ಓದುವ ಕೋಣೆ, ಮಹಡಿ ಎಂದೆಲ್ಲಾ ಓಡಾಡಿ ಯಾರಾದರೂ ಸಹಾಯಕ್ಕೆ ಬರಬಾರದೇ ಎಂದು ಹಪಹಪಿಸುವುದು ಮನಃಕಲಕುವಂತಿದೆ. ಅಂತಿಮವಾಗಿ ಆಕೆ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ದೇವರ ಮೊರೆ ಹೋಗುತ್ತಾಳೆ.
೪. ವೃದ್ಧರ ತವಕ-ತಲ್ಲಣಗಳನ್ನು ಕವಯಿತ್ರಿ ಹೇಗೆ ಚಿತ್ರಿಸಿದ್ದಾರೆ?
ಲಲಿತಾ ಸಿದ್ದಬಸವಯ್ಯ ಅವರ ‘ಒಂದು ಹೂ ಹೆಚ್ಚಿಗೆ ಇಡುತೀನಿ’ ಎಂಬ ಕವಿತೆಯು ವೃದ್ಧರ ತವಕ ತಲ್ಲಣಗಳನ್ನು ಹಿಡಿದಿಟ್ಟಿವೆ. ಎಷ್ಟೋ ವರ್ಷಗಳಿಂದ ಒಬ್ಬರಿಗೊಬ್ಬರು ಆಸರೆಯಾಗಿ ಬಾಳಿದ ವಯೋವೃದ್ಧ ತಂದೆ-ತಾಯಿಗಳನ್ನು ಜವಾಬ್ದಾರಿಯನ್ನು ನಿರ್ವಹಿಸುವ ನೆಪದಲ್ಲಿ ಮಕ್ಕಳಿಬ್ಬರೂ ಬೇರ್ಪಡಿಸುವ ಸಂದರ್ಭವನ್ನು ಪ್ರಸ್ತುತ ಕವಿತೆಯಲ್ಲಿ ಕಾಣುತ್ತೇವೆ. ಇಳಿ ವಯಸ್ಸಿನಲ್ಲಿ ದೂರಾಗಿ ಒಂದು ಫೋನಿನ ಕರೆಗಾಗಿ ತಳಮಳಿಸುವ ಹಿರಿಯ ಜೀವಗಳೆರಡರ ತವಕ-ತಲ್ಲಣಗಳನ್ನು ಕವಯಿತ್ರಿ ಹಿಡಿದಿಟ್ಟಿದ್ದಾರೆ ವಯೋವೃದ್ಧರನ್ನು ಅನಾದರದಿಂದ ಕಾಣುವ ಕೌಟುಂಬಿಕ ವ್ಯವಸ್ಥೆಯ ಬಗ್ಗೆ ಈ ಕವಿತೆ ವಿಷಾದದ ದನಿ ಎತ್ತಿದೆ ಎನ್ನಬಹುದು. ನಮ್ಮನ್ನು ಪ್ರೀತಿಯಿಂದ ಪೋಷಿಸಿದ ಹಿರಿಯರಿಗೆ ಅವರ ವೃದ್ಧಾಪ್ಯದಲ್ಲಿ ಆಸರೆಗೋಲಾಗದ ನಮ್ಮ ಹೊಣೆಗೇಡಿತನವನ್ನು ಕವಿತೆ ಪ್ರಶ್ನಿಸುವಂತಿದೆ.
ಹೆಚ್ಚುವರಿ ಪ್ರಶ್ನೆಗಳು:
೫. ದೂರದ ಆಸ್ಸಾಮಿನಲ್ಲಿ ಇರುವ ಮುದುಕನ ಸ್ಥಿತಿಯನ್ನು ವಿವರಿಸಿ.
ಮುದುಕನನ್ನು ದೂರದ ಅಸ್ಸಾಮಿನಲ್ಲಿರುವ ಕಿರಿಯ ಮಗ ಕರೆದೊಯ್ದಿರುತ್ತಾನೆ. ಅಲ್ಲಿ ಪಾಪ ಮುದುಕನಿಗೆ ಏಕಾಂತದ ಗೃಹಬಂಧನದಂತಹ ಬದುಕು ಮಗ-ಸೊಸೆ ಬೆಳಿಗ್ಗೆ ಒಂಬತ್ತಕ್ಕೆ ಮನೆಬಿಟ್ಟರೆ ಹಿಂದಿರುಗುವುದು ರಾತ್ರಿಗೆ, ಮನೆಯಿರುವುದೂ ಗುಡ್ಡದ ಮೇಲಾದ್ದರಿಂದ ಜನಸಂಚಾರ ವಿರಳ. ಮುಖ್ಯವಾಗಿ ಅಲ್ಲಿನ ಅಸ್ಸಾಮಿ ಭಾಷೆ ಸ್ವಲ್ಪವೂ ಬಾರದ ಮುದುಕ ಮಾತಿಗೆ ಹಾತೊರದು ಮುದುಕಿಗೆ ಕರೆ ಮಾಡಿ ಮಾತಾಡುವಂತೆ ಗೋಗೆರೆಯುತ್ತಾನೆ. ಒಟ್ಟಿನಲ್ಲಿ ಮುದುಕ ತಬ್ಬಲಿತನವನ್ನು ಅನುಭವಿಸುತ್ತಾ ಬದುಕಬೇಕಾದ ಸ್ಥಿತಿ ಒದಗಿದೆ.
ಭಾಷಾಭ್ಯಾಸ
೧. ಫೋನು, ಕಿಚನ್ನು, ಸ್ವಡೀರೂಮು, ಕ್ವಾರ್ಟರ್ಸು – ಮುಂತಾದ ಅನ್ಯದೇಶ ಪದಗಳು ಕವಿತೆಯಲ್ಲಿ ಬಳಕೆಯಾಗಿರು ವುದನ್ನು ಗಮನಿಸಿ, ಪಟ್ಟಿಮಾಡಿರಿ.
ಫೋನು, ಕಿಚನ್, ಸ್ಟಡೀರೂಮು, ಸಸೇಮಿರ, ಕ್ವಾರ್ಟರ್ಸು, ಕಂಪ್ಯೂಟರ್, ರಾಂಗ್ನಂಬರ್, ರೈಟ್, ರಿಸೀವರ್, ಹಲೋ, ಕಾರು, ಸ್ಟಾರ್ಟ್, ಸ್ಕೂಟಿ, ವ್ಯಾನು – ಇತ್ಯಾದಿ.
೨) ಬಾಯತುರಿಕೆ, ಕಡುಬಿನ ಸೋರೆ – ಈ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ.
ಬಾಯತುರಿಕೆ : ಅಜ್ಜಿಯು ಅವರಿವರೊಡನೆ ಮಾತಾಡಿ ಬಾಯಿತುರಿಕೆ ತೀರಿಸಿಕೊಂಡಳು.
ಕಡುಬಿನ ಸೋರೆ : ಇಬ್ಬರು ಮಾತನಾಡುತ್ತಿರುವಾಗ ನಡುವೆ ಕಡುಬಿನ ಸೋರೆ ಇಡಬಾರದು.
೩) ದಿಗಿಲು, ಕೊರಗು, ಅದುರು, ಅಟ್ಟ – ಇವುಗಳಿಗೆ ಸಮಾನಾರ್ಥಕಗಳನ್ನು ಬರೆಯಿರಿ.
దిగిలు – ಭಯ, ಹೆದರಿಕೆ, ಅಂಜಿಕೆ
ಕೊರಗು – ಯೋಚಿಸು, ಚಿಂತಿಸು
ಅದುರು – ನಡುಗು, ಕಂಪಿಸು
ಅಟ್ಟ – ಮಹಡಿ, ಮಾಡ.
ಕೆಳಗಿನ ಪದ್ಯದ ಭಾವಾರ್ಥವನ್ನು ಬರೆಯಿರಿ:
೧. ಹಂಚಿಕೊಂಡಿದ್ದಾರೆ ಅಪ್ಪ ಅಮ್ಮನನ್ನು
ಇಲ್ಲಿ ದೊಡ್ಡಮಗನ ತಾವಲ್ಲಿ ಮುದುಕಿ, ಸದ್ಯ ಕನ್ನಡ ದೇಶ
ಮಗ ಸೊಸೆ ಹೊರಗೆ ಹೋದಾಗಲಾದರೂ ನಾಲ್ಕು ಮಾತಾಡಿ
ತೀರಿಸಿಕೊಳ್ಳುತ್ತಾಳೆ ಬಾಯತುರಿಕೆ, ಪಾಪ ಮುದುಕ ದೂರದ
ಅಸ್ಸಾಮಿನಲ್ಲಿ, ಅಲ್ಲಿಯ ಮಾತು ಅವನಿಗೆ ಸಸೇಮಿರ ಬರದು.
ಶ್ರೀಮತಿ ಲಲಿತಾ ಸಿದ್ಧಬಸವಯ್ಯ ಅವರು ಬರೆದಿರುವ ‘ಒಂದು ಹೂ ಹೆಚ್ಚಿಗೆ ಇಡುತೀನಿ’ ಎಂಬ ಕವಿತೆಯಿಂದ ಈ ಮೇಲಿನ ಪದ್ಮಭಾಗವನ್ನು ಆಯ್ದುಕೊಳ್ಳಲಾಗಿದೆ.
ವಯಸ್ಸಾದ ತಂದೆ-ತಾಯಿಗಳನ್ನು ಮಕ್ಕಳು ಪ್ರೀತಿಯಿಂದ ನೋಡಿಕೊಳ್ಳದೆ ಅಪ್ಪ-ಅಮ್ಮನನ್ನು ಹಂಚಿಕೊಂಡು ಆ ವಯೋವೃದ್ಧ ಜೀವಗಳನ್ನು ಬೇರ್ಪಡಿಸುವ ಸಂದರ್ಭವನ್ನು ಕವಿಯತ್ರಿ ಇಲ್ಲಿ ಚಿತ್ರಿಸಿದ್ದಾರೆ.
ಇಬ್ಬರು ಗಂಡು ಮಕ್ಕಳು ತಮ್ಮ ಅಪ್ಪ-ಅಮ್ಮಂದಿರನ್ನು ಹಂಚಿಕೊಂಡಿದ್ದಾರೆ. ಮುದುಕಿ ಇರುವುದು ದೊಡ್ಡ ಮಗನ ಬಳಿ, ಸದ್ಯ ಅವಳಿರುವುದು ಕನ್ನಡ ಮಾತನಾಡುವ ಪರಿಸರದಲ್ಲಿ ಮಗ-ಸೊಸೆ ಹೊರಗಡೆಗೆ ಹೋದಾಗಲಾದರೂ ಅವರಿವರೊಂದಿಗೆ ನಾಲ್ಕು ಮಾತನಾಡಿ ಬಾಯಿತುರಿಕೆ ತೀರಿಸಿಕೊಳ್ಳುವ ಅವಕಾಶ ಅವಳಿಗಿದೆ. ಆದರೆ ಆಕೆಯ ಪತಿ ಇರುವುದು ಕಿರಿಮಗ-ಸೊಸೆಯೊಂದಿಗೆ ದೂರದ ಅಸ್ಸಾಮಿನಲ್ಲಿ. ಅಲ್ಲಿಯ ಅಸ್ಸಾಮಿ ಭಾಷೆ ಅವನಿಗೆ ಸ್ವಲ್ಪವೂ ಬರುವುದಿಲ್ಲ. ಆತನಿಗೆ ಬರುವುದು ಕನ್ನಡ ಭಾಷೆ ಮಾತ್ರ ಯಾರೊಂದಿಗೂ ಮಾತನಾಡಲಾಗದ ಅಸಹಾಯಕತೆ ಆತನದೆಂದು ಮುದುಕಿ ಚಿಂತಿಸುತ್ತಾಳೆ. ಜವಾಬ್ದಾರಿಯ ಹೆಸರಲ್ಲಿ ಹಿರಿಯ ಜೀವಗಳನ್ನು ಆಗಲಿಸಿರುವ ಇಂದಿನ ಮೌಲ್ಯರಹಿತ ವ್ಯವಸ್ಥೆಗೆ ಈ ಮೇಲಿನ ಸಾಲುಗಳು ಕನ್ನಡಿ ಹಿಡಿದಿವೆ
ಕವಿತಯ ಸಾರಾಂಶ ಮತ್ತು ವಿಮರ್ಶೆ
ʼಒಂದು ಹೂ ಹೆಚ್ಚಿಗೆ ಇಡುತೀನಿ’ ಎಂಬ ಕವಿತೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ʼಕವಿತೆ 2006 ಎಂಬ ಸಂಗ್ರಹದಿಂದ ಆಯ್ದುಕೊಳ್ಳಲಾಗಿದೆ. ದೂರದಲ್ಲಿರುವ ತನ್ನ ಬಾಳ ಸಂಗಾತಿಯಾದ ಮುದುಕನೊಬ್ಬನನ್ನು ನೆನೆದು ಚಿಡಪಡಿಸುವ ಮುದುಕಿಯೊಬ್ಬಳ ಮನಸ್ಸಿನ ತಲ್ಲಣಗಳು ಈ ಕವಿತೆಯಲ್ಲಿ ಚಿತ್ರಿತಗೊಂಡಿವೆ. ಮುದುಕಿ ಹಿರಿಮಗ, ಸೊಸೆ ಮತ್ತು ಮೊಮ್ಮಗಳ ಜೊತೆ ಕನ್ನಡದ ನೆಲದಲ್ಲಿ ನೆಲೆಸಿದ್ದಾಳೆ. ಮುದುಕ ಕಿರಿಮಗ ಮತ್ತು ಸೊಸೆಯ ಜೊತೆ ದೂರದ ಅಸ್ಸಾಮಿನಲ್ಲಿದ್ದಾನೆ. ಅವನ ದೂರವಾಣಿ ಕರೆಗಾಗಿ ಕಾತರಿಸುವ ಮುದುಕಿಯ ಮನದಾಳವನ್ನು ಕವಯಿತ್ರಿ ಲಲಿತಾ ಸಿದ್ಧಬಸವಯ್ಯ ಅಂತಃಕರಣದಿಂದ
೧. ಮುದುಕಿಗೆ ಭಯ, ಪೋನು ಮುಣಗುಟ್ಟುತ್ತಿದೆ ಎಡಬಿಡದೆ
ಎತ್ತಿಕೊಳ್ಳಲೋ ಬೇಡವೋ ಏನೆನ್ನುವಳೋ ಸೊಸೆ ಜೊತೆಗೆ
ಮಗ ಗವರಬಹುದು ‘ಎಷ್ಟು ಸಲವನ್ನು ಹೇಳುವುದು ನಿನಗೆ?’
ಫೋನು ಮಣೆಯವರೆಗೂ ಬರುತ್ತಾಳೆ ನಿಂತು ನೋಡುತ್ತಾಳೆ
ಒಂದುಸಲ ಕಿಚನ್ನಿನ ಕಡೆಗೆ ಇನ್ನೊಂದು ಸಲ ಸ್ಪಡಿರೂಮಿನೆಡೆಗೆ
ನಿಂತುಬಿಡುತ್ತೇನೋ ಇದು ಯಾರಾದರೂ ಬರಬಾರದೇ ಬೇಗ
ಆ ಕಡೆಗೆ ಮುದುಕನಿರಬಹುದು ಎಳೆಯುತ್ತಿದೆ ಅವಳ ಜೀವ
ದೂರವಾಣಿ ಕರೆ ಕೇಳಿ ಬರುತ್ತಿದೆ. ಒಂದೇ ಸಮನೆ ಫೋನು ಝಣಝಣ ಎಂದು ಸದ್ದು ಮಾಡುತ್ತಿದೆ. ಆದರೆ ಮುದುಕಿಗೆ ಫೋನ್ ಎತ್ತಿ ಮಾತಾಡಲು ಹಿಂಜರಿಕೆ. ಎತ್ತಿಕೊಳ್ಳಲೋ ಬೇಡವೋ ಎಂಬ ಗೊಂದಲದಲ್ಲಿ ಮುದುಕಿ ಇದ್ದಾಳೆ. ಸೊಸೆ ಏನೆನ್ನುವಳೋ ಎಂಬ ಭಯ ಒಂದು ಕಡೆಯಾದರೆ, “ಎಷ್ಟು ಸಲವಮ್ಮ ಹೇಳುವುದು ನಿನಗೆ?” ಎಂಬ ಮಗನ ಗದರುವಿಕೆಯೂ ಅವಳ ಕಿವಿಯಲ್ಲಿ ಝಣಗುಡುತ್ತಿದೆ. ಆದ್ದರಿಂದ ಫೋನು ಕರೆಯನ್ನು ಸ್ವೀಕರಿಸದೆ, ಯಾರಾದರೂ ಬಂದು ಫೋನು ಕರೆಯನ್ನು ಸ್ವೀಕರಿಸಬಾರದೆ ಎಂದು ಒಮ್ಮೆ ಅಡುಗೆಮನೆಯತ್ತ. ಇನ್ನೊಮ್ಮೆ ಓದುವ ಕೋಣೆಯತ್ತ ನೋಡುತ್ತಾಳೆ. ಯಾರಾದರೂ ಬಂದು ಫೋನನ್ನೆತ್ತಿಕೊಳ್ಳುವಷ್ಟರಲ್ಲಿ ಕರೆ ನಿಂತು ಹೋಗಬಹುದು, ಆ ಕರೆ ತನ್ನ ಮುದುಕನದಾಗಿರಬಹುದು. ಯಾರಾದರೂ ಬೇಗ ಬಂದು ಫೋನೆತ್ತಿಕೊಳ್ಳಬಾರದೆ ಎಂದು ಅವಳ ಜೀವ ಚಡಪಡಿಸುತ್ತದೆ. ಮಗನನ್ನು ಅವಲಂಬಿಸಿ ಬದುಕುತ್ತಿರುವ ಮುದುಕಿಯ ಸಂಕಟ ಇಲ್ಲಿ ಸರಳವಾದ ಭಾಷೆಯಲ್ಲಿ ಅನಾವರಣಗೊಂಡಿದೆ.
೨. ಹಂಚಿಕೊಂಡಿದ್ದಾರೆ ಅಪ್ಪ ಅಮ್ಮನನ್ನು
ಇಲ್ಲಿ ದೊಡ್ಡಮಗನ ತಾವಲ್ಲಿ ಮುದುಕಿ, ಸದ್ಯ ಕನ್ನಡ ದೇಶ
ಮಗ ಸೊಸೆ ಹೊರಗೆ ಹೋದಾಗಲಾದರೂ ನಾಲ್ಕು ಮಾತಾಡಿ
ತೀಡಿಸಿಕೊಳ್ಳುತ್ತಾಳೆ ಬಾಯತುರಿಕೆ, ಪಾಪ ಮುದುಕ ದೂರದ
ಅಸ್ಸಾಮಿನಲ್ಲಿ ಅಲ್ಲಿಯ ಮಾತು ಅವನಿಗೆ ಸಸೇಮಿರ ಬರದು
ಕಿರಿಮಗ ಮತ್ತವನ ಹೆಂಡತಿ
ಒಂಭತ್ತಕೆ ಗುಡ್ಡದ ಕ್ವಾರ್ಟರ್ಸು ಬಿಟ್ಟರೆ
ಮತ್ತೆ ಮನೆ ಸೇರುವುದು ಹೊತ್ತು ತಿರುಗಿದ ಮೇಲೆ
ಮಾತೇ ಮರೆತು ಹೋಗಿದೆ ಕಣೆ ಎನ್ನುತ್ತಾನೆ ಫೋನು ಮಾಡಿ
ದಾಗಲೆಲ್ಲ; ಮಾತಾಡು ಮಾತಾಡು ಆಡು ಮಾತಾಡುತ್ತಿರು
ನಿಲ್ಲಿಸಬೇಡ ಗೋಗರೆಯುತ್ತಾನೆ; ಫೋನು ಗೂಡನ್ನೇ ತಬ್ಬಿ
ಹಿಡಿದಿದ್ದಾನೆನ್ನುವುದು ಇಲ್ಲಿಂದಲೇ ಗೊತ್ತಾಗುತ್ತದೆ ಮುದುಕಿಗೆ
ಮೆಲ್ಲಗೆ ಅಳುತ್ತಾಳೆ, ಸುಯ್ಲು ಸೋರದ ಹಾಗೆ ನುಂಗುತ್ತಾಳೆ
ಒಳಗೊಳಗೆ ದಿಗಿಲು ಅವಳಿಗೆ, ಅತ್ತ ಮುದುಕನಿಗೆ ಗೊತ್ತಾದರೆ
ಪಾಪ ಕೊರಗುತ್ತಾನೆ ಇತ್ತ ಮಗನಿಗೆ ಕೇಳಿಸಿದರೆ ಗದರುತ್ತಾನೆ
ʼಸುಮ್ಮನಿರಮ್ಮ ಈಗ ಆಳುವಂಥದ್ದೇನಾಗಿದೆಯಮ್ಮ ನಿನಗೆ?’
ಅಣ್ಣ-ತಮ್ಮಂದಿರು ಅಪ್ಪ ಅಮ್ಮನನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹಂಚಿಕೊಂಡಿದ್ದಾರೆ. ಮುದುಕಿ ದೊಡ್ಡಮಗನ ಬಳಿ ಇದ್ದಾಳೆ. ಕನ್ನಡ ಮಾತನಾಡುವ ವಾತಾವರಣದಲ್ಲಿದ್ದೇನೆಂಬ ಸಮಾಧಾನ ಅವಳಿಗೆ ಮಗ-ಸೊಸೆ ಇಲ್ಲದ ಹೊತ್ತಿನಲ್ಲಾದರೂ ಬೇರೆಯವರೊಂದಿಗೆ ಮಾತನಾಡಿ ಬಾಯಚಪಲವನ್ನು ತೀರಿಸಿಕೊಳ್ಳಬಹುದು. ಮಗ ಸೊಸೆಯರಿದ್ದರೆ ಅದಕ್ಕೂ ಅವಕಾಶವಿಲ್ಲ. ಆದರೆ ಮುದುಕನ ಸ್ಥಿತಿ ಇನ್ನೂ ಕಠಿಣ. ಆತ ಕಿರಿಮಗನ ಜೊತೆಯಲ್ಲಿ ದೂರದ ಆಸ್ಸಾಮ್ ರಾಜ್ಯದಲ್ಲಿದ್ದಾನೆ. ಅಲ್ಲಿನ ಭಾಷೆ ಅವನಿಗೆ ಚೂರು ಬರದು. ಅವನಿಗೆ ಮಾತನಾಡಲು ಬರುವುದು ಕನ್ನಡ ಮಾತ್ರ. ಆದರೆ ಯಾರೊಂದಿಗೆ ಮಾತನಾಡುವುದು? ಗುಡ್ಡದ ಮೇಲಿರುವ ವಸತಿಗೃಹದಿಂದ ಮಗ-ಸೊಸೆ ಬೆಳಿಗ್ಗೆ ಕೆಲಸಕ್ಕೆ ಹೋದರೆ, ಹಿಂದಿರುಗುವುದು ಸಂಜೆಯಾದ ಮೇಲೆ, ಮಾತಾಡಲು ಜೊತೆಗಾರರಿಲ್ಲದ ಮುದುಕನಿಗೆ ಮಾತೇ ಮರೆತು ಹೋಗಿರುವಂತೆ ಭಾಸವಾಗಿದೆ. ಆದ್ದರಿಂದ ಮುದುಕಿಗೆ ಫೋನು ಮಾಡಿದಾಗಲೆಲ್ಲ “ಮಾತಾಡುತ್ತಲೇ ಇರು, ನಿಲ್ಲಿಸಬೇಡ” ಎಂದು ಗೋಗರೆಯುತ್ತಾನೆ. ಆತ ಫೋನು ಗೂಡನ್ನೇ ತಬ್ಬಿ ಹಿಡಿದಿರುವುದು ಗೊತ್ತಾದ ಮುದುಕಿಯು ತನ್ನೊಳಗೆ, ಇತರರಿಗೆ ಶಬ್ದ ಕೇಳದ ಹಾಗೆ ಅಳುತ್ತಾಳೆ. ಅಳುವುದು ಮುದುಕನಿಗೆ ತಿಳಿದರೆ ಕೊರಗುತ್ತಾನೆಂಬ ಆತಂಕ ಅವಳದು. ಅಲ್ಲದೆ ಹಿರಿಮಗನಿಗೆ ಕೇಳಿಸಿದರೆ “ಸುಮ್ಮನಿರಮ್ಮ ಈಗ ಆಳುವಂಥದ್ದೇನಾಗಿದೆಯಮ್ಮ ನಿನಗೆ?” ಎಂದು ಗದರುತ್ತಾನೆ. ಮುದುಕಿಗೆ ಗಟ್ಟಿಯಾಗಿ ಅತ್ತು ಹಗುರಾಗುವ ಅವಕಾಶವೂ ಇಲ್ಲ. ಅವಳ ಸಂಕಟವನ್ನು ಅರ್ಥಮಾಡಿಕೊಳ್ಳುವ ವ್ಯವಧಾನ ಮನೆಯವರಿಗಿಲ್ಲ.
೩. ಇನ್ನು ತಡೆಯಲಾಗದು ಸೋಪಾನಕದ್ದಿರುವ ಗಾಜುಬಿಲ್ಲೆ
ಜಾರಿಸದ ಹಾಗೆ ಮೊಣಕಾಲಚಿಪ್ಪ ಮೇಲೆ ಭಾರ ಹೇರುತ್ತ
ಹೇರಿದ ಭಾರಕ್ಕೆ ಆದುರುವ ಮಂಡಿಗಳ ಅಂಗೈಯಲ್ಲಿ
ಅದುಮುತ್ತ ಒಂದೊಂದೇ ಮೆಟ್ಟಿಲುಹತ್ತಿ ಕಾಡಿ ಕರೆಯುತ್ತಾಳೆ
ಮೊಮ್ಮಗಳನ್ನು; ಜಾಣೆ ಮೊಮ್ಮಗಳು ಮೂಜಗವನ್ನೆ
ಆವಾಹಿಸಿ ಕುಂತಿದ್ದಾಳೆ ಸ್ವಂತ ಕಂಪ್ಯೂಟರಿನ ಮೇಲೆ;
ರಸಾತಳಗಳೆದ್ದೆದ್ದು ಕುಣಿಯುತಿವೆ ಪರದೆ ಮೇಲೆ, ನಡುವೆ
ಈ ಅಜ್ಜಿ ಇಡಬಹುದೆ ಕಡುಬಿನ ಸೋರೆ
ಚಿಟುಗುಡುತ್ತಲೇ ಅಟ್ಟವಿಳಿದು ಬಂದ ಹುಡುಗಿ ಧಡ್ಡನೆ
ಫೋನೆತ್ತಿ ಕುಕ್ಕಿ “ರಾಂಗ್ ನಂಬರ್” ಕ್ಷಣಾರ್ಧದಲ್ಲಿ ಅಂತರ್ಧಾನ
ಮುದುಕಿಗೆ ಅನುಮಾನ, ಈ ಹುಡುಗಿ ಸರಿಯಾಗಿ ಕೇಳಿಸಿ
ಕೊಂಡಳೋ ಗಡಿಬಿಡಿಯಲ್ಲಿ ಬಿಡುಗಡೆಗೆ ಹಾತೊರೆದು
ರೈಟನ್ನೆ ರಾಂಗೆಂದಳೋ, ಬಚ್ಚಲಿಗೆ ಹೋಗಿ ನಿಮಿಷ ನಿಂತಿದ್ದು
ಮತ್ತೆ ಹೊರಗೆ ತಲೆಯಿಕ್ಕಿ ಅತ್ತಿತ್ತ ನೋಡಿ ಮೆತ್ರಗೆ ಫೋನಿನ
ಬಳಿಗೇ ಬರುತ್ತಾಳೆ.
ಫೋನ್ ಕರೆಯನ್ನು ಸ್ವೀಕರಿಸಲು ಯಾರೂ ಬರದಿದ್ದಾಗ ಮುದುಕಿ ಮೊಮ್ಮಗಳನ್ನಾದರೂ ಕರೆತರೋಣವೆಂದು ನಿರ್ಧರಿಸುತ್ತಾಳೆ. ಮೊಮ್ಮಗಳು ಮಹಡಿ ಮೇಲಿದ್ದಾಳೆ. ಅಲ್ಲಿಗೆ ಹೋಗುವುದು ವಯಸ್ಸಾದ ಮುದುಕಿಗೆ ಸುಲಭವಲ್ಲ, ಮಹಡಿಯ ಮೆಟ್ಟಿಲ ನುಣುಪಾದ ಬಿಲ್ಲೆಗಳ ಮೇಲೆ ಕಾಲಿಟ್ಟರೆ ಬೀಳಬಹುದೆಂಬ ಭಯ. ಅಲ್ಲದೆ ಮೊಣಕಾಲು ಮಂಡಿ ನೋಯುತ್ತದೆ. ಆದ್ದರಿಂದ ಮೊಣಕಾಲ ಚಿಪ್ಪಿನ ಮೇಲೆ ಭಾರ ಹೇರುತ್ತಾ ನಿಧಾನವಾಗಿ ಮೆಟ್ಟಿಲುಹತ್ತಿ ಬಂದು ಮೊಮ್ಮಗಳನ್ನು ಪೋನೆತ್ತಿಕೊಳ್ಳುವಂತೆ ಕಾಡುತ್ತಾಳೆ. ಮೊಮ್ಮಗಳು ತನ್ನದೇ ಲೋಕದಲ್ಲಿ ಮುಳುಗಿದ್ದಾಳೆ. ತನ್ನೆದುರಿಗಿರುವ ಕಂಪ್ಯೂಟರಿನ ಪರದೆಯ ಮೇಲೆ ಮೂರು ಜಗತ್ತನ್ನೇ ತೆರೆದು ಕುಳಿತಿದ್ದಾಳೆ. ಅವಳನ್ನು ಅಜ್ಜಿ ಡಿಸ್ಟರ್ಬು ಮಾಡಬಹುದೇ? ಅಜ್ಜಿಯ ಕಾಟದಿಂದ ಬೇಸತ್ತ ಆಕೆ ಸಿಡಿಮಿಡಿಗುಡುತ್ತಲೇ ಅಟ್ಟವಿಳಿದು ಬಂದು, ಧಡ್ಡನೆ ಫೋನೆತ್ತಿ ಕುಕ್ಕಿ ‘ರಾಂಗ್ ನಂಬರ್’ ಎಂದು ಕ್ಷಣಾರ್ಧದಲ್ಲಿ ಮಾಯವಾಗಿಬಿಟ್ಟಳು ತನ್ನ ಲೋಕಕ್ಕೆ. ಮುದುಕಿಗೆ ಅನುಮಾನ ಮೊಮ್ಮಗಳ ಮೇಲೆ. ಅವಳು ಸರಿಯಾಗಿ ಕೇಳಿಸಿಕೊಳ್ಳದೆ ಅವಸರದಲ್ಲಿ ರೈಟನ್ನೇ ರಾಂಗ್ ಎಂದಿರಬಹುದೆಂದು ಮುದುಕಿ ಯೋಚಿಸುತ್ತಾಳೆ. ಬಚ್ಚಲು ಮನೆಗೆ ಹೋಗಿ ಬಂದ ಮುದುಕಿ ಆ ಕಡೆ ಈ ಕಡೆ ನೋಡಿ ಮತ್ತೆ ಫೋನಿನ ಬಳಿಗೇ ಬಂದು ನಿಲ್ಲುತ್ತಾಳೆ. ಮತ್ತೆ ತನ್ನ ಮುದುಕನಿಂದ ಕರೆ ಬಂದೀತೆಂಬ ನಿರೀಕ್ಷೆ ಅವಳದು.
೪. ಅಗೋ ಅದು ಮತ್ತೆ ಝಣಝಣತ್ಕರಿಸಿ
ಅವಳ ಜೀವ ಬಾಯಿಗೆ ಬಂದು ತಡವರಿಸಿ ಎರಡೂ ಕೈಯಲ್ಲಿ
ರಿಸೀವರನೆತ್ತಿ ”ಹಲೋ ನಾನೇ ಕಷ್ಟೇ ಮಾತಾಡ್ರಿ ಮಾತಾಡ್ರಿ”
ಮಗನ ಕಾರು ಸ್ಟಾರ್ಟಾಯಿತು ಹಿಂದೆಯೇ ಮೊಮ್ಮಗಳ ಸ್ಕೂಟಿ
ಮೊಮ್ಮಗನ ವ್ಯಾನೂ ಬಂದಾಯಿತು; ಸೊಸೆಯೊಬ್ಬಳಿಗೆ ಈ ಹೊತ್ತು
ದೇವರೇ ಹೊರಗಿನ ಕೆಲಸ ಸಮ್ಮಿಲಿಸಲಿ, ಅಷ್ಟು ಮಾಡಪ್ಪ ನನ್ನಪ್ಪ
ಗುಟ್ಟೆಮಲ್ಲಪ್ಪ ಒಂದು ಹೂ ಹೆಚ್ಚಿಗೆ ಇಡುತೀನಿ ನಿನ್ನ ಗಟ್ಟಿಪಾದಕ್ಕೆ;
ಇವರೆಲ್ಲ ಹೊರಟರೆ ಆಚೆಗೆ ಒಂದಿಷ್ಟು ಹೊತ್ತು ನಿರಾಳೆ ಮಾತಾಡು
ತ್ತೇನೆ ನನ್ನ ಮುದುಕನ ಕೂಡೆ
ಒಳಗೊಳಗೆ ಪ್ರಾರ್ಥಿಸುತ್ತಿದೆ ಮುದುಕಿ
ಈಗಾಗಲೇ ಒಂದು ಬಿದ್ದಿರುವ ಆಗಣಿತ ಮೊರೆಗಳ ಒಟ್ಟಲಿಗೆ ಈಗ
ಇನ್ನೊಂದು ಸೇರ್ಪಡೆ ಆ ಲೀಲಾಮಾತ್ರನಿಗೆ
ಮುದುಕಿಯ ನಿರೀಕ್ಷೆಯಂತೆಯೇ ಮತ್ತೆ ಪೋನು ಝಣಝಣತ್ಕರಿಸುತ್ತದೆ. ಮುದುಕಿಗೆ ಜೀವವೇ ಬಾಯಿಗೆ ಬಂದಂತಾಗುತ್ತದೆ. ತಡವರಿಸುತ್ತಾ ಎರಡೂ ಕೈಯಲ್ಲಿ ಫೋನಿನ ರಿಸೀವರ್ ಅನ್ನು ಎತ್ತಿಕೊಂಡು ‘ಹಲೋ ನಾನೇ ಕಣ್ರಿ ಮಾತಾಡ್ರಿ’ ಎಂದು ಹೇಳುತ್ತಾಳೆ. ಅವಳ ನಿರೀಕ್ಷೆಯೂ ನಿಜವಾಗಿದೆ. ಮುದುಕನೊಂದಿಗೆ ನಿರಾಳವಾಗಿ ಮಾತನಾಡಲು ಯಾವ ಅಡ್ಡಿ ಆತಂಕವೂ ಬಾರದಿರಲೆಂದು ಆಕೆ ಪ್ರಾರ್ಥಿಸುತ್ತಾಳೆ. ಮಗನ ಕಾರು ಹೊರಟ, ಹಿಂದೆಯೇ ಮೊಮ್ಮಗಳ ಸ್ಕೂಟಿಯೂ ಹೊರಟ ಶಬ್ದ ಕೇಳುತ್ತದೆ. ಮೊಮ್ಮಗ ಶಾಲೆಗೆ ಹೋಗುವ ವ್ಯಾನೂ ಬಂದಾಯಿತು. ಇನ್ನು ಮನೆಯಲ್ಲಿರುವುದು ಮುದುಕಿ ಮತ್ತು ಸೊಸೆ ಇಬ್ಬರೇ. ಸೊಸೆಗೂ ಯಾವುದಾದರೂ ಹೊರಗಡೆಯ ಕೆಲಸ ಒದಗಿ ಬರಲಿ. ಆಗ ತಾನೊಂದಷ್ಟು ಹೊತ್ತು ತನ್ನ ಮುದುಕನೊಂದಿಗೆ ನಿರಾತಂಕವಾಗಿ ಹರಟೆ ಹೊಡೆಯಬಹುದು. ದೇವರು ಅಷ್ಟು ಸಹಾಯ ಮಾಡಿದರೆ ಅವನ ಪಾದಕ್ಕೆ ತಾನು ಒಂದು ಹೂ ಹೆಚ್ಚಿಗೆ ಇಡುವುದಾಗಿ ಮುದುಕಿ ತಮ್ಮ ಮನೆದೇವರಾದ ಗುಟ್ಟಿ ಮಲ್ಲಪ್ಪನಿಗೆ ಪ್ರಾರ್ಥಿಸಿಕೊಳ್ಳುತ್ತಾಳೆ. ಅವಳ ಇಂತಹ ಅನೇಕ ಪ್ರಾರ್ಥನೆಗಳ ಗಂಟೆ ದೇವರ ಬಳಿ ಇದೆ. ಈಗ ಅವುಗಳ ಜೊತೆ ಇನ್ನೊಂದರ ಸೇರ್ಪಡೆ ಎಂದು ಕವಯಿತ್ರಿ ವಿಷಾದಿಸಿದ್ದಾರೆ.
ಶಬ್ದಾರ್ಥ: ತಾವು – ಸ್ಥಳ; ಬಾಯತುರಿಕೆ – ಬಾಯಿಯ ಚವಲ; ಸಸೇಮಿರ – ಚೂರು: ಗೋಗರೆ – ದೈನ್ಯದಿಂದ ಬೇಡಿಕೊಳ್ಳು; ಸುಯ್ಲು – ನಿಟ್ಟುಸಿರು; ದಿಗಿಲು – ಭಯ; ಕಾಡಿ – ಪೀಡಿಸಿ, ಆವಾಹಿಸು – ನೆಲೆಗೊಳಿಸು; ಅಟ್ಟಿ – ಮಹಡಿ; ಅಂತರ್ಧಾನ – ಕಣ್ಮರೆಯಾಗು; ಸಮ್ಮಿಲಿಸು – ಒಂದುಗೂಡು; ನಿರಾಳ – ನೆಮ್ಮದಿ, ಚಿಂತೆಯಿಲ್ಲದೆ; ಕೂಡೆ – ಜೊತೆಗೆ; ಅಗಣಿತ – ಲೆಕ್ಕವಿಲ್ಲದಷ್ಟು; ಮೊರೆ-ಆರ್ತನಾದ, ಗೋಳಾಟ: ಒಟ್ಟಲಿಗೆ – ರಾಶಿಗೆ, ಗುಂಪಿಗೆ, ಲೀಲಾಮಾತ್ರ – ದೇವರು.
ಟಿಪ್ಪಣಿಗಳು
೧. ಸಸೇಮಿರ: ಸಸೇಮಿರ ಎಂಬ ಪದವು ತುಮಕೂರು ಮುಂತಾದ ಪ್ರದೇಶದಲ್ಲಿ ಬಳಕೆಯಾಗುತ್ತಿದೆ. ‘ಸ್ವಲ್ಪವೂ ಬರದು’, ‘ಏನೂ ತಿಳಿದಿಲ್ಲ’ ಎಂಬರ್ಥದಲ್ಲಿ ಬಳಕೆಯಾಗುವ ಈ ಪದದ ಮೂಲ ತಲುಗು ಬಳಕೆಯಿಂದ ದೂರ ಸರಿಯುತ್ತಿರುವ ಇಂತಹ ಪದಗಳನ್ನು ಕವಯಿತ್ರಿ ಕವಿತೆಯಲ್ಲಿ ಬಳಸಿರುವುದು ವಿಶೇಷವಾಗಿದೆ.
೨. ಕಡುಬಿನ ಸೋರೆ: ಸೋರೆ ಎಂದರೆ ಅಡುಗೆ ಮಾಡಲು, ಮಾಡಿದ ಅಡುಗೆ ಎತ್ತಿಡುವುದಕ್ಕೆ, ಕೆಲವೊಮ್ಮೆ ಕಾಳುಕಡಿ ಎತ್ತಿಡುವುದಕ್ಕೆ ಅಡುಗೆ ಮನೆಯಲ್ಲಿ ಬಳಸುವ ಮಣ್ಣಿನ ಪಾತ್ರೆ ಕುಡಿಕೆ, ಗಡಿಗೆ, ಮೊಗೆ, ಹರುವಿ, ಗುಡಾಣ, ವಾಡೆ ಇತ್ಯಾದಿಗಳ ಹಾಗೆ ಸೋರೆ ಕೂಡಾ ಮನೆಬಳಕೆಯ ಮಣ್ಣಿನ ಪಾತ್ರೆ. ಈಗಲೂ ಕೆಲವು ಗ್ರಾಮಗಳಲ್ಲಿ ಇವುಗಳ ಬಳಕೆಯುಂಟು.
ಹಿಟ್ಟು ಮಾಡಲು ಬಳಸುವ ಲಾಗಾಯ್ತಿನ ಸೋರೆಗೆ ಹಿಟ್ಟಿನ ಸೋರೆ, ಎಸರು ಅಂದರೆ ಸಾರಿಗೆ ಬಳಸಿದರೆ ಎಸರಿನ ಸೋರೆ, ಮಜ್ಜಿಗೆ ಕಡೆಯಲು ಪಳಗಿಸಿದರೆ ಮಜ್ಜಿಗೆ ಸೋರೆ ಹಾಗೆ ಕಡುಬು ಎತ್ತಿಡಲು ಮೀಸಲಿಟ್ಟಿದ್ದು ಕಡುಬಿನ ಸೋರೆ. ಸೋರೆ ಎತ್ತಿಡುವ ಸ್ಥಳವಾದರೂ ಯಾವುದು – ಅಡುಗೆ ಮನೆ, ಅದರಲ್ಲಿ ಕೇಳುವಂಥದ್ದೇನಿದೆ? ಮಣ್ಣಿನ ಪಾತ್ರೆಯನ್ನೇನು ಬೀರುವಲ್ಲಿಟ್ಟು ಬೀಗ ಹಾಕುತ್ತಾರೆಯೆ, ಇಲ್ಲ, ಆದರೂ ಕೆಲವೊಮ್ಮೆ ಅಧಿಕ ಪ್ರಸಂಗಿಗಳು ಮನೆಯಲ್ಲಿನ ಗಹನ ಸಮಸ್ಯೆಗಳನ್ನು ಬಿಟ್ಟು ಕಡುಬಿನ ಸೋರೆ ಎಲ್ಲಿಡಲಿ ಅಂತ ಕೇಳುತ್ತ ಅಡ್ಡಾಡುವುದುಂಟು. ಅಂಥವರಿಗಾಗಿ ಹುಟ್ಟಿಕೊಂಡ ವ್ಯಂಗ್ಯದ ಗಾದೆ ಇದು. – ಬಂದ ನೋಡಪ್ಪ ನಂದೆಲ್ಲಿಡಲಿ ಕಡುಬಿನ ಸೋರೆ ಅಂತ – ಈಗಲೂ ಹಳೆಮೈಸೂರಿನ ಹಳ್ಳಿಗಳಲ್ಲಿ ಗಂಭೀರ ಮಾತುಕತೆ ನಡುವೆ ತಲೆ ತೂರಿಸಿ ಅವಿವೇಕದ ಅಸಂಬದ್ದದ ಪ್ರಶ್ನೆಗಳನ್ನೆತ್ತುವ ವ್ಯಕ್ತಿಗಳನ್ನು ಹೀಗೆ ಆಡಿಕೊಳ್ಳುವುದುಂಟು.
ಈ ಕವಿತೆಯಲ್ಲಿ ಮುದುಕಿಯ ಗಹನ ಸಮಸ್ಯೆ ಮೊಮ್ಮಗಳ ಕಣ್ಣಿನಲ್ಲಿ ಜುಜುಬಿಯದು. ತಾನು ಗಹನವಾದ ಕಂಪ್ಯೂಟರ್ ಸ್ತ್ರೀನ್ ಮೇಲೆ ತಲ್ಲೀನಳಾಗಿರುವಾಗ ಅಜ್ಜಿ ಯಕಃಶ್ಚಿತ್ ಅಜ್ಜನ ಫೋನ್ ವಿಷಯ ತರುತ್ತಾಳಲ್ಲ ಅಂತ ಅವಳಿಗೆ ಸಿಡುಕು. ಅದಕ್ಕಾಗಿ ಈ ಗಾದೆ ಮಾತನ್ನು ಇಲ್ಲಿ ಬಳಸಿದೆ. ವಯೋವೃದ್ಧರ ಸಮಸ್ಯೆ ಆಲಿಸಲು, ಗಮನಿಸಲು ನಮಗಾರಿಗೂ ಬಿಡುವು ಇಲ್ಲ. ಸಹನೆಯೂ ಇಲ್ಲ, ಬಾಧ್ಯತೆ ಮೊದಲೆ ಇಲ್ಲ. ಅವರ ಗಂಭೀರ ತೊಂದರೆ ನಮಗೆ ಕಡುಬಿನ ಸೋರೆಯಂತೆ ಜುಜುಬಿಯದ್ದು.
೩. ಗುಟ್ಟೇಮಲ್ಲಪ್ಪ: ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ನಾಗೇನಹಳ್ಳಿಯಲ್ಲಿ ‘ಗುಟ್ಟೇ ಮಲ್ಲಪ್ಪ’ ದೇವಾಲಯವಿದೆ. ಗ್ರಾಮದೈವದ ಉಲ್ಲೇಖವನ್ನು ಮುದುಕಿಯ ಮೂಲಕ ಮಾಡಿರುವ ಕವಯತ್ರಿ ಪ್ರಾದೇಶಿಕ ಸೊಬಗನ್ನು ಕವಿತೆಯಲ್ಲಿ ಮೂಡಿಸಿದ್ದಾರೆ.
ಹೊಂದಿಸಿ ಬರೆಯುವುದಕ್ಕೆ ಬೇಕಾದ ಮಾಹಿತಿ:
- ಒಂದು ಹೂ ಹೆಚ್ಚಿಗೆ ಇಡುತೀನಿ – ಲಲಿತಾ ಸಿದ್ಧಬಸವಯ್ಯ
- ಒಂದು ಹೂ ಹೆಚ್ಚಿಗೆ ಇಡುತೀನಿ – ಗದ್ಯಗಂಧಿ ಶೈಲಿ
- ಮುದುಕ – ಅಸ್ಸಾಂ