2nd Puc Kannada Hatti… Chitta… Mattu… Notes Question Answer Summery Guide Extract ̤mcq Pdf Download in kannada medium Karnataka State Syllabus 2025 Hatti chitta mattu kannada question answer hatti chitta mattu summary 2nd puc kannada chapter 11 question answer ದ್ವಿತೀಯ ಪಿಯುಸಿ ಕನ್ನಡ ಹತ್ತಿ… ಚಿತ್ತ… ಮತ್ತು… ನೋಟ್ಸ್ ದ್ವಿತೀಯ ಪಿಯುಸಿ ಕನ್ನಡ ನೋಟ್ಸ್ hatti chitta mattu kannada question answer hatti chitta mattu kannada notes pdf
೧೧. ಹತ್ತಿ… ಚಿತ್ತ… ಮತ್ತು…
– ಟಿ. ಯಲ್ಲಪ್ಪ

ಕವಿ ಪರಿಚಯ
ಪ್ರೊ. ಟಿ. ಯಲ್ಲಪ್ಪನವರು ಅಕ್ಟೋಬರ್ 2, 1970ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಪ್ರಸ್ತುತ ಬೆಂಗಳೂರಿನ ಕೆ.ಆರ್. ಪುರಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ‘ಕಡಲಿಗೆ ಕಳಿಸಿದ ದೀಪ’, ‘ಚಿಟ್ಟೆ ಮತ್ತು ಜೀವಯಾನ’, ‘ನವಿಲಿಗೆ ಬಿದ್ದ ಕತ್ತಲ ಕನಸು’ (ಕವಿತಾ ಸಂಕಲನಗಳು), ‘ಇಪ್ಪತ್ತೆರಡರ ಆಳಲು’ (ಲಲಿತ ಪ್ರಬಂಧ) ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಕಡಲಿಗೆ ಕಳಿಸಿದ ದೀಪ’ ಕೃತಿಯು ‘Anklets’ ಎಂಬ ಹೆಸರಿನಲ್ಲಿ ಇಂಗ್ಲಿಷಿಗೆ ಅನುವಾದಗೊಂಡಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಜಿ.ಎಸ್. ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಚೆನ್ನವೀರ ಕಣವಿ ಕಾವ್ಯ ಪ್ರಶಸ್ತಿ, ವೀಚಿ ಕಾವ್ಯ ಪ್ರಶಸ್ತಿಗಳು ಇವರಿಗೆ ಸಂದಿವೆ.
ಆಕರ: ‘ಚಿಟ್ಟೆ ಮತ್ತು ಜೀವಯಾನ’.
(ಅ) ಸಾಂದರ್ಭಿಕ ವಿವರಣೆಯನ್ನು ಬಯಸುವ ವಾಕ್ಯಗಳು
೧. ಬೆಳಕ ಬಟ್ಟೆಯ ತೊಡುವ ಯೋಗಿಯಂತೆ!
ಟಿ. ಯಲ್ಲಪ್ಪನವರ ಹತ್ತಿ … ಚಿತ್ರ … ಮತ್ತು…’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ. ಹಣತೆಯ ಎಣ್ಣೆಯಲ್ಲಿ ನೆನೆದು ತನ್ನನ್ನು ಸುಟ್ಟುಕೊಂಡು ಬೆಳಗುತ್ತಿರುವ ಬತ್ತಿಯನ್ನು ಕವಿಯು ಬೆಳಕಿನ ಬಟ್ಟೆ ತೊಡುವ ಯೋಗಿಗೆ ಹೋಲಿಸಿರುವುದು ಅರ್ಥಪೂರ್ಣವಾಗಿದೆ.
ಯೋಗಿಯಾದವನು ತನ್ನ ದೇಹವನ್ನು ದಂಡಿಸಿ, ಮನೋನಿಗ್ರಹ ಮಾಡಿಕೊಂಡು ಜ್ಞಾನ ಸಂಪಾದಿಸಿ ಯೋಗಿಯಾಗಿ ಸಮಾಜಕ್ಕೆ ಉಪಯೋಗಿಯಾಗಿ ಬದುಕುತ್ತಾನೆ. ಅಂದರೆ ಸ್ವಾರ್ಥ ತ್ಯಾಗಮಾಡಿ ಲೋಕಕಲ್ಯಾಣಕ್ಕೆ ದುಡಿಯುತ್ತಾನೆ. ಹತ್ತಿಯೂ ಯೋಗಿಯಂತೆಯೇ ತನ್ನನ್ನು ಸುಟ್ಟುಕೊಂಡು ಬೆಳಕು ನೀಡಿ ಬೇರೆಯವರನ್ನು ಬೆಳಗುತ್ತದೆ. ಈ ಬತ್ತಿ ತನ್ನ ಬಣ್ಣ ಮತ್ತು ಉದ್ದೇಶಗಳಲ್ಲಿ ಬೆಳಕಿನ ಬಟ್ಟೆ ತೊಟ್ಟಿ ಯೋಗಿಯ ಹಾಗೆಯೇ ಕಾಣುತ್ತದೆ. ಇದು ಅರ್ಥದ ಸುಸಂಬದ್ಧತೆಯಿಂದಲೂ ಅರ್ಥಪೂರ್ಣ ಹೋಲಿಕೆಯಾಗಿದೆ.
೨. ಮಾಗುವ ಜೀವದ ಪಯಣ ಸಾಗುತ್ತಿದೆ ಸದ್ದಿಲ್ಲದೆ.
ಪ್ರೊ. ಟಿ. ಯಲ್ಲಪ್ಪನವರ ‘ಹತ್ತಿ … ಚಿತ್ರ… ಮತ್ತು…’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಂಡಿದೆ. ಈ ಸೃಷ್ಟಿಯಲ್ಲಿ ಪರಿಪಕ್ವತೆಯನ್ನು ಸಾಧಿಸಿದ ಜೀವಗಳೆಲ್ಲ ನಿಸ್ವಾರ್ಥದಿಂದ ಸಮಾಜದ ಒಳಿತಿಗಾಗಿ ತಮ್ಮನ್ನು ಸಮರ್ಪಿಸಿ ಕೊಳ್ಳುತ್ತವೆ. ಅವು ತಮ್ಮ ಕೆಲಸವು ಬೇರೆಯವರಿಗೆ ತಿಳಿಯಬೇಕೆಂದಾಗಲೀ, ಗಮನ ಸೆಳೆಯಬೇಕೆಂದಾಗಲೀ, ಹೊಗಳಿಸಿಕೊಳ್ಳ ಬೇಕೆಂದಾಗಲೀ ಆಶಿಸುವುದಿಲ್ಲ. ಅವು ಸದ್ದಿಲ್ಲದ ಕರ್ಮಯೋಗಿಯಂತೆ ತಮ್ಮ ಬಾಳ ಪಯಣವನ್ನು ಮುಂದುವರೆಸುತ್ತವೆ. ಇದು ಪಕ್ವಗೊಂಡ. ಮಾಗಿದ ಜೀವದ ಬದುಕಿನ ಲಕ್ಷಣವೂ ಹೌದು. ಹತ್ತಿಯ ಬೀಜದ ಬದುಕಿನ ರೀತಿಯೂ ಮಾಗಿದ ಜೀವವೊಂದರ ಸದ್ದಿಲ್ಲದ ಪಯಣದಂತೆ ಕವಿಗೆ ಅನ್ನಿಸಿದೆ.
೩. ನಿದ್ದೆ ತಿಳಿದೆದ್ದ ಮಗು ಅತ್ತದ್ದು ಹಾಲಿಗೋ ಅಮ್ಮನಿಗೊ.
ಪ್ರೊ. ಟಿ. ಯಲ್ಲಪ್ಪನವರ ‘ಹತ್ತಿ… ಚಿತ್ತ… ಮತ್ತು…’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ. ನಿದ್ದೆಯಿಂದ ಎದ್ದ ಮಗುವಿನ ‘ಅಳು’ ಅಗತ್ಯದ ಸುಳಿವನ್ನು ನೀಡುತ್ತಿದೆ ಎಂದುಕೊಂಡು ನಾವು ಮಗುವು ಹಸಿವಿನಿಂದ ಹಾಲಿಗಾಗಿ ಅಳುತ್ತಿರಬಹುದೆಂದೋ ಅಥವಾ ಅಮ್ಮನಿಗಾಗಿ ಆಳುತ್ತಿರಬಹುದೆಂದೋ ಯೋಚಿಸುತ್ತೇವೆ. ಅಮ್ಮ ಸಿಕ್ಕರೆ ಹಾಲು ಸಿಗುತ್ತದೆಯಲ್ಲವೆ? ಎಂಬ ಪ್ರಶ್ನೆ ಎದುರಾಗುವುದು ಸಹಜ. ಆದರೆ ಎಷ್ಟು ಜನ ತಾಯಂದಿರು ಎದೆ ಹಾಲನ್ನೇ ಕುಡಿಸಿ ಬೆಳೆಸುತ್ತಾರೆ? ಎಷ್ಟೋ ಮಕ್ಕಳು ಅಮ್ಮನಿದ್ದೂ ಬಾಟ್ಲಿಯ ಹಾಲಿಗೆ ಬಾಯೊಡ್ಡುವ ನತದೃಷ್ಟ ಮಗುವಿನ ಅನಾಥಪ್ರಜ್ಞೆ ಈ ಸೃಷ್ಟಿಯಲ್ಲಿ ಇದ್ದೇ ಇದೆ. ಅದನ್ನು ಈ ಸೃಷ್ಟಿಯೇ ವಿಶ್ವಮಾತೃಪ್ರಜ್ಞೆಯಾಗಿ ಸಂತೈಸುತ್ತದೆ ಎಂಬ ಭಾವನೆಯಿಂದ ಕವಿ ಈ ಮೇಲಿನ ಸಾಲನ್ನು ರಚಿಸಿದ್ದಾರೆ.
೪. ಎಣ್ಣೆ ತೀರಿರುವ ದೀಪಗಳಿಗೆ ಬತ್ತಿ ಹೊಸೆಯುವ ಕೆಲಸ.
ಪ್ರೊ. ಟಿ. ಯಲ್ಲಪ್ಪನವರ ‘ಹತ್ತಿ… ಚಿತ್ತ… ಮತ್ತು…’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ. ಎಣ್ಣೆ ತೀರದ ದೀಪಗಳಿಗೆ ಬತ್ತಿ ಹೊಸೆಯುವುದರಿಂದ ಏನು ಪ್ರಯೋಜನ ಎಂಬ ಪ್ರಶ್ನೆ ಎದುರಾಗಬಹುದು. ಆದರೆ ಮತ್ತೆ ಎಣ್ಣೆ ಹೊಯ್ಯುವ ಈ ಬಗೆಯ ಜೀವನ ಪ್ರೇಮವು ಬದುಕನ್ನು ಮತ್ತೆ ಹೊಸದಾಗಿ ಪ್ರಾರಂಭಿಸಬೇಕೆಂಬ ಪ್ರಯತ್ನಕ್ಕೆ ಕಾರಣವಾಗುತ್ತದೆ ಅಯನ್ನು ಮುಗಿಯುತ್ತಿರುವ ಮಾಗಿದ ಮುಪ್ಪಿನ ಜೀವಿಗಳನ್ನೂ ನಾವು ಇದೇ ಬಗೆಯ ಆಶಾವಾದಿತನದಿಂದಲೇ ಅಷ್ಟೆ ಮಾಡಬೇಕೇ ವಿನಾ ಆರೈಕೆ ವ್ಯರ್ಥವೆಂದು ತಿಳಿಯಬೇಕಾಗಿಲ್ಲ ಎಂಬ ಧನಾತ್ಮಕ ಧೋರಣೆಯನ್ನು ಈ ಮೇಲಿನ ವಾಕ್ಯ ನೀಡಿತ దవవద్దు జిలిగిడిందు రాణి విజయలవ? ఈ ఆశావాదినానవః బదున నిజవాడ ంధన
೫. ಬೆಣ್ಣೆಯಾಗುವ ಕರ್ಮ ತಪ್ಪಿದ್ದಲ್ಲ.
ಪ್ರೊ. ಟಿ. ಯಲ್ಲಪ್ಪನವರ ‘ಹತ್ತಿ… ಚಿತ್ತ… ಮತ್ತು…’ ಎಂಬ ಕವಿತೆಯಲ್ಲಿ ಈ ಮೇಲಿನ ವಾಕ್ಯವನ್ನು ಸ್ವೀಕರಿಸಿದೆ. ಎಣ್ಣೆಯು ಹತ್ತಿಯನ್ನೇ ಸುಡುವುದು ದುರಂತದಂತೆ ಕಾಣುತ್ತದೆ. ಆದರೆ ಅದೇ ಸೃಷ್ಟಿಯ ನಿಯಮ ಮತ್ತು ಅದೇ ಅವರ ಬದುಕಿನ ಸಾರ್ಥಕ್ಯವೂ ಆಗಿದೆ. ವ್ಯಕ್ತಿ ತನ್ನನ್ನು ಸುತ್ತಿದ ಮೋಹ-ಪಾಶಗಳು ಕಿಲುಬು ಹರಿದುಕೊಂಡು, ಅವುಗಳನ್ನು ಸುಟ್ಟುಕೊಡು ಅದನ್ನೇ ಬೆಳಕು ಎಂದುಕೊಂಡು ಲೋಕ ಕಲ್ಯಾಣಕ್ಕೆ ಸಮರ್ಪಣೆಗೊಳ್ಳುವ ಜೀವನ ತತ್ತ್ವವನ್ನು ಈ ವಾಕ್ಯ ಧ್ವನಿಸುವುದರಿದ ಈ ಮೇಲಿನ ವಾಕ್ಯ ಮಹತ್ತ್ವದ್ದಾಗಿದೆ.
ಹೆಚ್ಚುವರಿ ಪ್ರಶ್ನೆ:
೬. ಈ ಪರಿಯ ಸೊಬಗು ಇನ್ಯಾವ ಜೀವದೊಳು ಕಾಣಲರಿಯೆ!
ಪ್ರೊ. ಟಿ. ಯಲ್ಲಪ್ಪನವರ ಹತ್ತಿ … ಚಿತ್ತ… ಮತ್ತು…’ ಎಂಬ ಕವಿತೆಯಲ್ಲಿ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಕವಿತೆಯ ಕೊನೆಯ ಸಾಲು ಇದಾಗಿದೆ.
ಹತ್ತಿಯ ಜೀವನದ ಸಾರ್ಥಕತೆಯನ್ನು ಮೆಚ್ಚಿಕೊಳ್ಳುತ್ತಾ ಕವಿಯು ಈ ಮೇಲಿನ ಮಾತನ್ನು ಆಡಿದ್ದಾರೆ. ಹತ್ತಿಯ ಮೊದಲು ದೀಪದ ಬತ್ತಿಯಾಗುತ್ತದೆ. ಮುಂದೆ ಅದೇ ಬೆಳಕಿನ ಬೀಜವಾಗಿ, ತೈಲವಾಗಿ ಉರಿದು ತನ್ನನ್ನು ತಾವ ಇಲ್ಲವಾಗಿಸಿಕೊಳ್ಳುತ್ತದೆ. ಇದು ಅದರ ಆತ್ಮನಿರ್ವಾಣದ ಪರಿಯಾಗಿದೆ. ಈ ಬಗೆಯ ಸಾರ್ಥಕವಾದ ರೀತಿಯ ಆತ್ಮನಿರ್ವಾಣದ ಪರಿಯನ್ನು ಬೇರೆ ಯಾವ ಜೀವದಲ್ಲೂ ಕಾಣಲಾಗದೆಂದು ಕವಿಯು ಮೆಚ್ಚುಗೆಯಿಂದ ನುಡಿದಿರುವ ಸಂದರ್ಭದಲ್ಲಿ ಈ ಮೇಲಿನ ವಾಕ್ಯವಿದೆ.
(ಆ) ಒಂದು ಅಂಕದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿ)
೧. ಎಣ್ಣೆಯಲ್ಲಿ ನೆನೆದ ಬತ್ತಿ ಹೇಗೆ ಕಾಣುತ್ತದೆ?
ಮಿಂದು ಮಡಿಯುಟ್ಟಿ ಭಕ್ತನಂತೆ
೨. ಚಿತ್ರವನ್ನು ಯಾವುದಕ್ಕೆ ಹೋಲಿಸಲಾಗಿದೆ?
ಹತ್ತಿಯ ಬೀಜಕ್ಕೆ
೩. ಅನಾಥ ಭಾವವನ್ನು ಸೂಚಿಸುವ ಪದ ಯಾವುದು?
ಅಮ್ಮನಿದ್ದೂ ಬಾಟಲಿನ ಹಾಲಿಗೆ ಬಾಯೊಡ್ಡುವ ಮಗು
೪. ಹತ್ತಿಯ ಬೀಜಕ್ಕೆ ಯಾವುದು ತಪ್ಪದ ಕರ್ಮ?
ಬೆಣ್ಣೆಯಾಗುವುದು
೫. ವ್ಯರ್ಥವಲ್ಲದ ಕೆಲಸವು ಯಾವುದು?
ಬತ್ತಿ ಹೊಸೆಯುವ ಕೆಲಸ
೬. ತೈಲ ತೀರಿದ್ದು ಹೇಗೆ ತಿಳಿಯುತ್ತದೆ?
ದೀಪ ಆರಿದಾಗ
ಹೆಚ್ಚುವರಿ ಪ್ರಶ್ನೆ:
೭. ನಿದ್ದೆ ತಿಳಿದು ಎದ್ದದ್ದು ಯಾರು?
ಮಗು
೯. ಜಗದೊಳು ಸದ್ದಿಲ್ಲನದೆ ಸಾಗುತ್ತಿರುವುದು ಯಾವುದು?
ಮಾಗುವ ಜೀವದ ಪಯಣ
೧೦. ಎಣ್ಣೆ ತೀರಿದ ದೀಪಗಳು ಏನನ್ನು ಸೂಚಿಸುತ್ತವೆ?
ಆಯುಷ್ಯದ ಅಂತ್ಯ
೧೧. ಹಣತೆಯಲ್ಲಿ ಹೊಸೆದು ಬತ್ತಿಯಾಗಿರುವುದು ಯಾವುದು?
ಹತ್ತಿ
೧೨. ಆತ್ಮಕ್ಕೆ ಕಮಟು ಹತ್ತುವುದು ಎಂದರೇನು?
ಆತ್ಮನಾಶವಾಗುವುದು
೧೩. ಮಾಗುವ ಜೀವದ ಪಯಣ ಹೇಗೆ ಸಾಗುತ್ತಿದೆ?
ಸದ್ದಿಲ್ಲದೆ
(ಆ) ಎರಡು ಅಂಕದ ಪ್ರಶ್ನೆಗಳು (ಎರಡು – ಮೂರು ವಾಕ್ಯದಲ್ಲಿ ಉತ್ತರಿಸಿ).
೧. ಎಣ್ಣೆಯಲ್ಲಿ ನೆನೆದು ಉರಿದ ಬತ್ತಿಯನ್ನು ಯಾವ ಯಾವುದಕ್ಕೆ ಹೋಲಿಸಲಾಗಿದೆ?
ಎಣ್ಣೆಯಲ್ಲಿ ನೆನೆದು ಉರಿವ ಬತ್ತಿಯನ್ನು ಮಿಂದು ಮಡಿಯುಟ್ಟಿ ಭಕ್ತನಿಗೆ, ಬೆಳಕಿನ ಬಟ್ಟೆಯನ್ನು ತೊಟ್ಟಿರುವ ಯೋಗಿಗೆ ಮತ್ತು ಜೇಡರ ಹುಳುವಿಗೆ ಹೋಲಿಸಲಾಗಿದೆ.
೨. ಮಾಗುವ ಜೀವದ ಪಯಣ ಹೇಗೆ ಸಾಗುತ್ತಿದೆ?
ಹತ್ತಿಯ ಬೀಜದಲ್ಲಿ ಚಿತ್ತ ಹತ್ತಿ ಉರಿಯುವ ಬತ್ತಿಯಾಗಿ, ಬತ್ತಿಯನ್ನೇ ಸುಡುವ ತೈಲವು ಆಗಿ, ಹತ್ತಿ ಉರಿಯುವ ಬೆಳಕು ಆಗಿ ಮಾಗುವ ಜೀವದ ಪಯಣ ಸದ್ದಿಲ್ಲದೇ ಸಾಗುತ್ತಿದೆ.
೩. ಆತ್ಮಕ್ಕೆ ಕಮಟು ಹತ್ತುವುದು ಎಂದರೇನು?
ಆತ್ಮಕ್ಕೆ ಕಮಟು ಹತ್ತುವುದು ಎಂಬುದು ಆತ್ಮನಾಶವನ್ನು ಸಂಕೇತಿಸುವ ಪದವಾಗಿದೆ.
೫. ಎಣ್ಣೆ ತೀರಿದ ದೀಪಗಳು ಏನನ್ನು ಸೂಚಿಸುತ್ತವೆ?
ಎಣ್ಣೆ ತೀರಿದ ದೀಪಗಳು ಆಯುಷ್ಕದ ಅಂತ್ಯವನ್ನು ಸೂಚಿಸುತ್ತದೆ.
೫. ಹತ್ತಿಯ ಬೀಐ ಲೋಕದ ಹಿತಕ್ಕೆ ತನ್ನನ್ನು ಹೇಗೆ ಸುಟ್ಟುಕೊಳ್ಳುತ್ತದೆ?
ಹತ್ತಿಯ ಬೀಜವು ಲೋಕದ ಹಿತಕ್ಕಾಗಿ ತನ್ನನ್ನೇ ಸುಟ್ಟುಕೊಂಡು ಬೆಳಕನ್ನು ನೀಡುತ್ತದೆ.
ಹೆಚ್ಚುವರಿ ಪ್ರಶ್ನೆ
೧. ಆತ್ಮಪರಿನಿರ್ವಾಣದ ಸೊಬಗನ್ನು ಕವಿ ಹೇಗೆ ಚಿತ್ರಿಸಿದ್ದಾರೆ?
ಆತ್ಮಪರಿನಿರ್ವಾಣದ ಸೊಬಗನ್ನು ಕವಿಯು ಹತ್ತಿಯ ಜೀವನವನ್ನು ಉದಾಹರಣೆ ನೀಡುವ ಮೂಲಕ ಚಿತ್ರಿಸಿದ್ದಾರೆ. ಹತ್ತಿಯು ಬತ್ತಿಯಾಗಿ, ಬೆಳಕಿನ ಬಿತ್ತವಾಗಿ, ತೈಲವಾಗಿ ಉರಿದು ಆತ್ಮಪರಿನಿರ್ವಾಣ ಹೊಂದುತ್ತದೆ. ಈ ಪರಿಯು ಸೊಬಗನ್ನು ಇನ್ನಾವ ಜೀವದಲ್ಲೂ ಕಾಣಲಾಗದೆಂದು ಕವಿ ಹೇಳಿದ್ದಾರೆ.
(ಇ) ನಾಲ್ಕು ಅಂಕಗಳ ಪ್ರಶ್ನೆಗಳು (ಐದಾರು ವಾಕ್ಯಗಳಲ್ಲಿ ಉತ್ತರಿಸಿ):
೧. ಹತ್ತಿಯ ಬೀಜದ ಮತ್ತು ಮಾನವ ಜೀವದ ಪಯಣವನ್ನು ಕವಿ ಹೇಗೆ ಸಮೀಕರಿಸಿದ್ದಾರೆ?
ಪ್ರೊ. ಟಿ. ಯಲ್ಲಪ್ಪನವರ ‘ಹತ್ತಿ … ಚಿತ್ರ … ಮತ್ತು …’ ಎಂಬ ಕವಿತೆಯು ಹತ್ತಿಯ ಬೀಜದ ಮೂಲಕ ಮಾನವ ಜೀವನದ ಪಯಣವನ್ನು ಸಮೀಕರಿಸಿದೆ. ಹತ್ತಿಯ ಬೀಜದ ಆವರಣದೊಳಗೆ ಅದನ್ನು ಸುಡಲು ಬೇಕಾದ ಬತ್ತಿ, ಬೆಳಗಲು ಬೇಕಾದ ಎಣ್ಣೆಗಳಿರುವಂತೆಯೇ ಮನುಷ್ಯನ ಹುಟ್ಟಿನಿಂದಲೇ ಅವನನ್ನು ಆವರಿಸಿಕೊಂಡಿರುವ ದೇಹ-ಮನಸ್ಸುಗಳು ಅವನನ್ನು ಸುಡುತ್ತಲೂ ಬೆಳಗಿಸುತ್ತಲೂ ಅವನ ಅಸ್ತಿತ್ವವನ್ನು ಕಾಯುತ್ತವೆ. ಅಂತಿಮವಾಗಿ ಮನುಷ್ಯನ ಚೇತನವೋ ಆತ್ಮವೋ ಅವನ ದೈಹಿಕವಾದ ಜಂಜಾಟ ಮತ್ತು ಲೌಕಿಕವಾದ ಅಡೆತಡೆಗಳ ಮಧ್ಯೆಯೂ ತನ್ನನ್ನು ಸಮಾಜಕ್ಕೆ ಕೊಟ್ಟುಕೊಂಡು, ತನ್ನ ಅಹಂಕಾರ ಕಳೆವಿನೊಂದಿಗೆ ತನ್ನ ವ್ಯಕ್ತಿತ್ವದ ಸಫಲತೆಯನ್ನು ಕಂಡುಕೊಳ್ಳುತ್ತವೆ. ಇದನ್ನೇ ವೈಚಾರಿಕವಾಗಿ ನಾವು ಮೋಕ್ಷ ಎಂದು ವಾಗಿ ಹತ್ತಿಬೀಜ ಮತ್ತು ಮಾನವನ ಜೀವನದ ಪಯಣವನ್ನು ಕವಿ ಸಮೀಕರಿಸಿದ್ದಾರೆ.
೨. ಬತ್ತಿ ಎಣ್ಣೆ, ಭಕ್ತ ಯೋಗಿ, ಜೇಡ – ಇವುಗಳ ಆತ್ಮಸಮರ್ಪಣೆಯ ಆಶಯವನ್ನು ಕವಿತೆ ಹೇಗೆ ಚಿತ್ರಿಸಿದೆ?
ಬತ್ತಿಯು ಎಣ್ಣೆಯಲ್ಲಿ ನೆನೆದು, ಉರಿಯುವ ಮೂಲಕ ತನ್ನನ್ನು ತಾನೇ ಸುಟ್ಟುಕೊಂಡರೂ ಲೋಕವನ್ನು ಬೆಳಗಿ ಆತ್ಮ ಸಮರ್ಪಣೆ ಮಾಡಿಕೊಳ್ಳುತ್ತದೆ. ಇದೇ ರೀತಿ ಭಕ್ತ ಮತ್ತು ಯೋಗಿ ಇಬ್ಬರೂ ಭಗವಂತನ ಹುಡುಕಾಟದಲ್ಲಿರುವವರು ಭಕ್ತನಾಗಲೀ ಯೋಗಿಯಾಗಲೀ ತಮ್ಮ ಚಿತ್ರದ ಅಹಂಕಾರವನ್ನು ತ್ಯಜಿಸಿ, ದೇಹ ದಂಡನೆಯ ಮೂಲಕ ಭೌತಿಕ ಶರೀರದ ಹಂಗನ್ನು ತೊರೆದು ಮನೋನಿಗ್ರಹದಿಂದ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲು ಹಂಬಲಿಸುತ್ತಾರೆ. ಜೇಡರಹುಳು ಕೂಡ ತನ್ನ ದೇಹದಿಂದ ರಚಿಸಿದ ಬಲೆಯಲ್ಲಿ ದೇಹವನ್ನು ರಕ್ಷಿಸಿಕೊಂಡರೂ ಅಂತಿಮವಾಗಿ ತಾನೇ ಹೆಣೆದ ಬಲೆಯ ಜಾಲದಲ್ಲಿ ಸಿಲುಕಿ ಸಾಯುತ್ತದೆ. ಹೀಗೆ ಕವಿ ಹತ್ತಿ, ಎಣ್ಣೆ, ಭಕ್ರ, ಯೋಗಿ, ಜೇಡ – ಇವುಗಳು ಆತ್ಮಸಮರ್ಪಣೆಯನ್ನು ಅರ್ಥಪೂರ್ಣವಾಗಿ ಜೊಡಿಸಿ ವಿವರಿಸಿದ್ದಾರೆ.
೩. ‘ಹತ್ತಿ…, ಚಿತ್ರ…, ಮತ್ತು…’ ಕವಿತೆಯ ಸ್ವಾರಸ್ಯವನ್ನು ಚರ್ಚಿಸಿರಿ.
ಪ್ರೊ. ಟಿ. ಯಲ್ಲಪ್ಪನವರ ‘ಹತ್ತಿ … ಚಿತ್ರ… ಮತ್ತು …’ ಎಂಬ ಕವಿತೆಯು ಒಂದು ವಿಶಿಷ್ಟವಾದ ರಚನೆಯಾಗಿದೆ. ಇಲ್ಲಿ ಅತ್ಮ-ಪರಮಾತ್ಮಗಳ ಅಸ್ತಿತ್ವವನ್ನು ಹತ್ತಿ ಮತ್ತು ಚಿತ್ತಗಳ ಮೂಲಕ ಸಂಕೇತಿಸಲಾಗಿದೆ. ಜೀವಾತ್ಮದ ಸಾರ್ಥಕತೆಯಿರುವುದು ತನ್ನ ಅಹಂಕಾರವನ್ನು ಸುಟ್ಟುಕೊಂಡು ಬೆಳಕನ್ನು-ಜ್ಞಾನವನ್ನು ಹೊಂದುವುದರಲ್ಲಿ. ಇಲ್ಲಿ ಹತ್ತಿಯ ಬೀಜವು ದೀಪದ ಬೆಳಕಿಗೆ ಜೀವದ್ರವವ್ಯವಾಗಿದೆ. ಹತ್ತಿಯು ತನ್ನನ್ನು ತಾನೇ ಸುಟ್ಟುಕೊಂಡು ಬೆಳಕನ್ನು ನೀಡಿ ಜಗದ ಕತ್ತಲನ್ನು ನೀಗುವುದಕ್ಕೆ ಯತ್ನಿಸುತ್ತದೆ. ಜೀವಾತ್ಮವೂ ಇದೇ ರೀತಿ ಕಾರಪ್ರವೃತ್ತವಾಗಬೇಕೆಂಬ ಆಶಯವನ್ನು ಈ ಕವಿತೆ ಒಳಗೊಂಡಿರುವುದೆ ಇಲ್ಲಿ ಸ್ವಾರಸ್ಯವಾಗಿವೆ.
ಭಾಷಾಭ್ಯಾಸ:
೧. ಬೀಜ, ಯೋಗಿ – ಮುಂತಾದ ಪದಗಳ ತದ್ಭವ ರೂಪಗಳನ್ನು ಬರೆಯಿರಿ.
ಬೀಜ – ಬಿತ್ತ
ಯೋಗಿ – ಜೋಗಿ
ಪ್ರಾಣ – ಹರಣ
ಕರ್ಮ- ಕೆಲಸ
೨. ತೈಲ – ಎಣ್ಣೆ. ಇಲ್ಲಿ ಎಣ್ಣೆ ಎಂಬ ಪದವು ಎಳ್ + ನೆಯ್ = ಎಳೆನೆಯ್ > ಎಣ್ಣೆ > ಎಣ್ಣೆ ಎಂದಾಗಿದೆ. ಇದೇ ರೀತಿ ತಿಲ (ಎಳ್ಳಿನಿಂದ) ದಿಂದ ಬಂದದ್ದು ತೈಲ ಎಂದಾಗಿರುವುದನ್ನು ಗಮನಿಸಿ.
೩) ಮಾಗು, ಚಿತ್ತ, ಮಿಂದು, ಹಣತೆ, ಸಂತೈಸು – ಇವುಗಳಿಗೆ ಸಮಾನಾರ್ಥಕಗಳನ್ನು ಬರೆಯಿರಿ.
ಮಾಗು : ಪಕ್ವಗೊಳ್ಳು, ಹಣ್ಣಾಗು
ಚಿತ್ತ : ಬುದ್ಧಿ, ಮನಸ್ಸು
ಹಣತೆ : ದೀಪ, ಜ್ಯೋತಿ
ಮಿಂದು : ಮೀಯ್, ಸ್ನಾನಮಾಡಿ, ಜಳಕ ಮಾಡಿ
ಸಂತೈಸು : ಸಮಾಧಾನಪಡಿಸು, ಸುಮ್ಮನಿರಿಸು.
೪. ಮಿಂದು ಎಂಬುದರ ಮೂಲ ರೂಪ ‘ಮೀ’ ಅಥವಾ ‘ಮೀಯ್’ ಎಂಬುದು. ಇದೇ ರೀತಿ ಹೊಸೆಯುವ, ತಿಳಿದೆದ್ದು ಮುಂತಾದವುಗಳ ಮೂಲ ರೂಪವನ್ನು ಬರೆಯಿರಿ.
ಹೊಸೆಯುವ – ಹೊಸೆ
ತಿಳಿದೆದ್ದು – ತಿಳಿ
ನೀಗುವಂತೆ – ನೀಗು
ಉರಿಯುವ – ಉರಿ
ಕಾಣಲರಿಯೆ – ಕಾಣು.
ಸಾಗುತ್ತಿವೆ – ಸಾಗು
ಅತ್ತದ್ದು – ಅಳು
ಕವಿತೆಯ ಸಾರಾಂಶ ಮತ್ತು ವಿಮರ್ಶೆ
ಪ್ರಸ್ತುತ ಕವಿತೆಯಲ್ಲಿ ಆತ್ಮ-ಪರಮಾತ್ಮಗಳ ಅಸ್ತಿತ್ವವನ್ನು ಹತ್ತಿ ಮತ್ತು ಚಿತ್ರಗಳ ಮೂಲಕ ಸಂಕೇತಿಸಲಾಗಿದೆ. ಜೀವಾತ್ಮದ ಸಾರ್ಥಕತೆಯಿರುವುದು ತನ್ನ ಅಹಂಕಾರವನ್ನು ಸುಟ್ಟುಕೊಂಡು ಬೆಳಕನ್ನು-ಜ್ಞಾನವನ್ನು ಹೊಂದುವುದರಲ್ಲಿ ಹತ್ತಿಯೂ ತನ್ನನ್ನು ತಾನೇ ಸುಟ್ಟುಕೊಂಡು ಬೆಳಕನ್ನು ನೀಡಿ ಜಗದ ಕತ್ತಲನ್ನು ನೀಗುವುದಕ್ಕೆ ಯತ್ನಿಸುವಂತೆ ಜೀವಾತ್ಮನ ಇದೇ ರೀತಿ ಕಾರ್ಯ ಪ್ರವೃತ್ತವಾಗಬೇಕೆಂಬ ಆಶಯವನ್ನು ಕವಿ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಸದ್ದಿಲ್ಲದೆ ದುಡಿದು ಲೋಕಕ್ಕೆ ದೊಡ್ಡ ಕೊಡುಗೆ, ಅರಿವಿನ ಬೆಳಕನ್ನು ಕೊಟ್ಟು ಹೋದ ಸಾಧಕರ ಸಾರ್ಥಕ ಬದುಕನ್ನು ವಿಶಿಷ್ಟ ರೀತಿಯಲ್ಲಿ ಕವಿತೆ ಧ್ವನಿಸುತ್ತದೆ.
೧) ಹಚ್ಚಿಟ್ಟ ಹಣತೆಯಲ್ಲಿ
ಹೊಸೆದು ಬತ್ತಿಯಾಗಿರುವ ಹತ್ತಿ
ಮಿಂದು ಮಡಿಯುಟ್ಟ ಭಕ್ತನಂತೆ
ತೈಲದಲಿ ಮುಳುಗಿ
ತಮದ ಕತ್ತಲ ಸುಡುತ
ಬೆಳಕ ಬಟ್ಟೆಯ ತೊಡುವ
ಯೋಗಿಯಂತೆ!
ತನ್ನೊಡಲ ನೂಲಿನಲೇ ಜೇಡ
ತನ್ನ ಜೀವಜಾಲದ ಕೇಡ
ತಾನೇ ಬಗೆದು ಪ್ರಾಣ ನೀಗುವಂತೆ
ಬೆಳಗುತ್ತಿರುವ ಹಣತೆಯು ಎಣ್ಣೆಯಲ್ಲಿ ತೊಯ್ದು ತನ್ನನ್ನು ತಾನೇ ಸುಟ್ಟುಕೊಂಡು ಬೆಳಗುತ್ತಿರುವ ಬತ್ತಿಯನ್ನು ಕಂಡಾಗ ಅದು ಕವಿಯ ಕಣ್ಣಿಗೆ ಮಿಂದು ಮಡಿಯುಟ್ಟಿ ಭಕ್ತನಂತೆಯೂ ಯೋಗಿಯಂತೆಯೂ ಜೇಡರ ಹುಳುವಿನಂತೆಯೂ ಕಾಣಿಸಿಕೊಳ್ಳುತ್ತದೆ. ಭಕ್ತ ಮತ್ತು ಯೋಗಿ ಇಬ್ಬರೂ ಭಗವಂತನ ಹುಡುಕಾಟದಲ್ಲಿರುವವರೆ. ಇವರಿಬ್ಬರ ಭಕ್ತಿ ಹಾಗೂ ಯೋಗ ಮಾರ್ಗಗಳೆರಡೂ ಭಗವಂತನ ಸಾಕ್ಷಾತ್ಕಾರಕ್ಕೆ ಇರುವ ಭಿನ್ನವಾದ ದಾರಿಗಳಷ್ಟೆ, ಆದರೆ ಆಶಯ ಮಾತ್ರ ಒಂದೇ ಆಗಿದೆ. ಇವೆರಡರ ನಡುವೆ ಜೇಡರ ಹುಳುವಿನ ಉಲ್ಲೇಖವಿದೆ. ಭಕ್ತನಾಗಲೀ ಯೋಗಿಯಾಗಲೀ ತಮ್ಮ ‘ಅಹಂಕಾರ’ವನ್ನು ತ್ಯಜಿಸಿ, ದೇಹದಂಡನೆಯ ಮೂಲಕ ಭೌತಿಕ ಶರೀರದ ಹಂಗನ್ನು ತೊರೆದು ಮನೋನಿಗ್ರಹದ ಮೂಲಕ ಭಗವಂತನನ್ನು ಪಡೆಯಲು ಹಂಬಲಿಸುವ ಹಾಗೆಯೇ ಜೇಡರಹುಳು ಕೂಡ ತನ್ನ ದೇಹದಿಂದ ರಚಿಸಿದ ಬಲೆಯಲ್ಲಿ ತನ್ನ ದೇಹವನ್ನು ಕಾಪಾಡಿಕೊಂಡು ಕೊನೆಗೆ ತಾನೇ ಹೆಣೆದ ಬಲೆಯ ಜಾಲದಲ್ಲಿ ಸಿಲುಕಿ ಸಾಯುತ್ತದೆ. ಮಾನವ ದೇಹದೊಳಗೆ ಬಂಧಿಯಾಗಿ ಅಲ್ಲೇ ಮಿಡುಕಾಡುವ ಜೀವದ ತೊಳಲಾಟ ಮತ್ತು ಅದರ ಬಿಡುಗಡೆಗಾಗಿ ಜೀವದ ಹೋರಾಟವನ್ನು ಧ್ವನಿಸಲು ಕವಿ ಜೇಡರ ಹುಳುವಿನ ರೂಪಕ ಬಳಸಿಕೊಂಡಿರುವುದು ಅರ್ಥಪೂರ್ಣವಾಗಿದೆ.
೨. ಹತ್ತಿಯ ಬೀಜದಂತೆ
ಚಿತ್ತ ಹತ್ತಿ ಉರಿಯುವ ಬತ್ತಿಯಾಗಿ
ಬತ್ತಿಯನ್ನೇ ಸುಡುವ
ತೈಲವೂ ಆಗಿ
ಹೊತ್ತಿ ಉರಿಯುವ
ಬೆಳಕೂ ಆಗಿ
ಮಾಗುವ ಜೀವದ ಪಯಣ
ಸಾಗುತ್ತಿದೆ ಜಗದೊಳು ಸದ್ದಿಲ್ಲದೆ
ಜೇಡರಹುಳು ತಾನೇ ನೇಯ್ದ ಬಲೆಯಲ್ಲಿ ಸಿಲುಕಿ ಜೀವ ನೀಗುವ ಹಾಗೆ ಮಾನವ ಜೀವವೂ ದೇಹ ಒಡ್ಡುವ ಅಮಿಷಗಳ ಬಲೆಯಲ್ಲಿ ಸಿಲುಕಿ ಒದ್ದಾಡುತ್ತದೆ. ಹತ್ತಿಯ ಬೀಜ ತಾನೇ ಸುತ್ತಿಕೊಂಡ ಹತ್ತಿಯಿಂದ ತಯಾರಿಸಿದ ಬತ್ತಿಯಿಂದ ತನ್ನ ಒಡಲಿನಿಂದಲೇ ಉದಿಸಿದ ಎಣ್ಣೆಯಿಂದಲೇ ಸುಡಲ್ಪಟ್ಟು ಇಲ್ಲವಾಗುತ್ತದೆ ಆದರೂ ಅದರಿಂದ ಉಂಟಾದ ಬೆಳಕು ಲೋಕಕಲ್ಯಾಣಕ್ಕೆ ಕಾರಣವಾಗುತ್ತದೆ. ಅಂತೆಯೇ ಈ ಜೀವವಾದರೂ ಹಾಗೆಯೇ ದೇಹದ ವಾಂಛೆಗಳಿಂದ ಘಾಸಿಗೊಂಡರು ಅತ್ಮದ ಉನ್ನತಿಗೆ ಕಾರಣವಾಗುವುದರಲ್ಲೇ ಅದರ ಸಾರ್ಥಕ್ಯವನ್ನು ಕಂಡುಕೊಳ್ಳುತ್ತದೆ. ಇದು ಜೀವದ ಏಳುಬೀಳಿನ ಪರ್ಯಾ ಕಥನವನ್ನು ಹೇಳಲು ಬಳಕೆಯಾಗಿರುವ ರೂಪಕವಾಗಿದೆ. ಆದರೆ ಇದು ಸದ್ದಿಲ್ಲದೆ ನಡೆಯುವ ಕಣ್ಣಿಗೆ ಕಾಣದ ಅಮತ್ರ ಪಯಣವಾಗಿದೆ.
೩) ಇದ್ದುದಿದ್ದೇ ಇತ್ತು
ನಿದ್ದೆ ತಿಳಿದಿದ್ದ ಮಗು
ಅತ್ತದ್ದು ಹಾಲಿಗೋ ಅಮ್ಮನಿಗೋ
ಅಮ್ಮನಿದ್ದೂ ಬಾಟಲಿನ ಹಾಲಿಗೆ
ಬಾಯೊಡ್ಡುವ ಮಗುವ
ಅನಾಥವೆಂದು ಕರೆಯಲಾಗದ ಭಾವ
ಇದ್ದೂ ಇಲ್ಲದಂತೆ ಸಂತೈಸುತ್ತಿದೆ ಇನ್ನೂ
ಈ ದೇಹ, ಜೀವ, ಆತ್ಮ ಪರಮಾತ್ಮಗಳ ಜಿಜ್ಞಾಸೆ ನಮ್ಮಲ್ಲಿ ಅನಾದಿಯಾಗಿ ನಡೆದೇ ಇದ್ದರೂ ಜೀವಸೃಷ್ಟಿ ಮತ್ರಾ ನಿಂತಿಲ್ಲ. ಅದು ನಿಸರ್ಗ ಸಹಜವಾಗಿ ನಡೆದೇ ಇದೆ. ನಿದ್ದೆ ತಿಳಿದೆದ್ದ ಮಗುವಿನ ಅಳುವನ್ನು ಕೇಳಿದವರು ಅವರವರಿಗೆ ತಿಳಿದಂತೆ ಅರ್ಥೈಸುತ್ತಾರೆ. ಅಮ್ಮನಿದ್ದೂ ಬಾಟಲಿ ಹಾಲಿಗೆ ಬಾಯೊಡ್ಡಬೇಕಾದ ಮಗುವಿನ ತಬ್ಬಲಿತನದ ದೌರ್ಭಾಗ್ಯನ್ನು ಆಧುನಿಕವೆನ್ನಬೇಕೋ ಎಂದು ತಿಳಿಯದ ಗೊಂದಲದ ನಡುವೆಯೂ ಮನುಷ್ಯನ ಯಾವುದೋ ಜೈವಿಕ ಅಗತ್ಯಗಳಿಗೆ ಕಟ್ಟಿಹಾಕಿ ಈ ಸೃಷ್ಟಿ ಅವನನ್ನು ಸಂತೈಸುತ್ತಿದೆ ಎಂದು ಕವಿ ಭಾವಿಸುತ್ತಾನೆ
೪. ತೈಲ ತೀರಿದೆಯೆಂದು
ತಿಳಿದೇ ತಿಳಿದೀತು
ದೀಪ ಆರಿದ ಮೇಲೆ
ಅತ್ಮಕ್ಕೆ ಕಮಟು ಹತ್ತುವ ತನಕ
ಬತ್ತಿ ಮುಗಿದಿದೆ ಎಂದು ತಿಳಿವುದಾದರೂ ಹೇಗೆ?
ಭೌತಶರೀರದ ಅಳಿವು ಅವರ ಉಸಿರಾಟ ನಿಂತ ಒಡನೆಯೇ ನಮ್ಮ ಅರಿವಿಗೆ ಬರುತ್ತದೆ. ಎಣ್ಣೆ ಮುಗಿದು, ಬತ್ತಿ ಉರಿದು ಹೋದ ಮೇಲೆ ದೀಪವೂ ಆರಿಹೋಗುತ್ತದೆ. ದೇಹದ ಅಳಿವು-ದೀಪದ ಅರುವಿಕೆ ಇವೆರಡೂ ಭೌತಿಕ ಕ್ರಿಯೆಗಳ ಅಂತ್ಯ ಅನುಭವಕ್ಕೆ ವೇದ್ಯವಾಗುವಂತಹದು ಮತ್ತು ಮೂರ್ತವಾಗಿ ಗೋಚರಿಸುವಂತಹದ್ದು. ಆದರೆ ಆತ್ಮದ ಅರಿವು ಅಭೌತಿಕ-ಅಮೂರ್ತ, ಆತ್ಮಕ್ಕೆ ಕಮಟು ಹತ್ತುವ ವಾಸನೆಯನ್ನು ವ್ಯಕ್ತಿ ತಾನಲ್ಲದೆ ಅನ್ಯರಿಗೆ ತರಿಸಲಾಗುವುದಿಲ್ಲ. ಇಲ್ಲಿ ಬತ್ತಿಯ ಸುಟ್ಟು ವಾಸನೆಯ ಮೂಲಕ ವ್ಯಕ್ತಿಯ ಆತ್ಮದ ಅವನತಿಯನ್ನು ಸೂಚಿಸುತ್ತಿದೆ. ಅದು ಜೀವಾತ್ಮಗಳ ಪತನವೂ ಆಗಿರಬಹುದು.
೫. ಎಣ್ಣೆ ತೀರಿರುವ ದೀಪಗಳಿಗೆ
ಬತ್ತಿ ಹೊಸೆಯುವ ಕೆಲಸ
ವ್ಯರ್ಥವೇನಲ್ಲ
ಹತ್ತಿಗೆ ಮೆತ್ತಿಕೊಂಡೇ
ಇರುವ ಬೀಜಕ್ಕೆ
ಬೆಣ್ಣೆಯಾಗುವ ಕರ್ಮ ತಪ್ಪಿದ್ದಲ್ಲ
ತಪ್ಪೂ ಅಲ್ಲ!
ಕೆಲವೊಮ್ಮೆ ಕೆಲವು ಕೆಲಸ ಮೇಲ್ನೋಟಕ್ಕೆ ಮೂರ್ಖತನದ್ದೆಂಬಂತೆ ಕಾಣುತ್ತದೆ ಉದಾಹರಣೆಗೆ, ವಯಸ್ಸಾದ ಮುಪ್ಪಿನ ಜೀವಿಗಳಿಗೆ ಹೇಗೂ ಸಾಯುವವರೆಂದು ಗೊತ್ತಿದ್ದು ಚಿಕಿತ್ಸೆ ಏಕೆಂದು ನಿರ್ಲಕ್ಷ್ಯ ವಹಿಸುವುದು ಮೂರ್ಖತನವೇ ಆದೀತು. ಮತ್ತೆ ಮತ್ತೆ ತೈಲ ಸುರಿಯುವ ಬತ್ತಿ ಹೊಸೆಯುವ ಅಶಾವಾದಿತನ, ಜೀವದ ಅಳಿವನ್ನು ಮುಂದೂಡುತ್ತಲೇ ಸಾವನ್ನು ಎದುರಿಸುವ ಜೀವನ ಪ್ರೇಮಗಳನ್ನು ಮೂರ್ಖತನವೆನ್ನಲಾಗದು ಹತ್ತಿಗೆ ಮೆತ್ತಿಕೊಂಡೇ ಇರುವ ಹತ್ತಿ ಬೀಜದಲ್ಲಿ ಹತ್ತಿಯನ್ನು ಸುಡಲು ಬೇಕಾದ ತೈಲವೂ ಅಂಟಿಕೊಂಡೇ ಇರುತ್ತದೆ. ಇದೇ ರೀತಿ ಭೌತಿಕವಾದ ಈ ದೇಹಕ್ಕೂ ಸಾವೆಂಬುದು ನಿಸರ್ಗದತ್ತವಾಗಿಯೇ ಅಂಟಿಕೊಂಡಿದೆ ಎಂಬ ಸಾರ್ವಕಾಲೀಕ ಕಟುವಾಸ್ತವ ಸತ್ಯವನ್ನು ಕವಿ ಕವಿತೆಯ ಈ ಭಾಗದಲ್ಲಿ ಚರ್ಚಿಸಿದ್ದಾರೆ.
೬. ಹತ್ತಿ ಬತ್ತಿಯಾಗಿ
ಬೆಳಕಿನ ಬಿತ್ತವಾಗಿ
ತೈಲವಾಗುರಿದು ಇಲ್ಲವಾಗುವ
ಆತ್ಮಪರಿನಿರ್ವಾಣದ
ಈ ಪರಿಯ ಸೊಬಗ
ಇನ್ನಾವ ಜೀವದೊಳು
ಕಾಣಲರಿಯೆ!
ಹತ್ತಿಯ ಬೀಜದ ಅವರಣದೊಳಗೇ ಅವನ್ನು ಸುಡಲು ಬೇಕಾದ ಬತ್ತಿ, ಬೆಳಗಲು ಬೇಕಾದ ಎಣ್ಣೆ ಎರಡೂ ಇರುವಂತೆ, ಮನುಷ್ಯನ ಹುಟ್ಟಿನಿಂದಲೇ ಅವನನ್ನು ಅವರಿಸಿಕೊಂಡಿರುವ ದೇಹ-ಮನಸ್ಸುಗಳು ಅವನನ್ನು ಸುಡುತ್ತಲೂ ಬೆಳಗಿಸುತ್ತಲೂ ಅವನ ಅಸ್ತಿತ್ವವನ್ನು ಕಾಯುತ್ತವೆ. ಅಂತಿಮವಾಗಿ ಮನುಷ್ಯನ ಚೇತನವೋ, ಆತ್ಮವೋ, ಅವನ ದೈಹಿಕವಾದ ಜಂಜಡ ಮತ್ತು ಲೌಕಿಕವಾದ ಅಡೆತಡೆಗಳ ಮಧ್ಯೆಯೂ ತನ್ನನ್ನು ಸಮಾಜಕ್ಕೆ ಕೊಟ್ಟುಕೊಂಡು ತನ್ನ ಅಹಂಕಾರದ ಅಳಿವಿನೊಂದಿಗೇ ತನ್ನ ವ್ಯಕ್ತಿತ್ವದ ಸಫಲತೆಯನ್ನು ಕಂಡುಕೊಳ್ಳುವುದನ್ನೇ ನಾವು ‘ಮೋಕ್ಷ’ ಎಂದು ವೈಚಾರಿಕವಾಗಿ ಅರ್ಥೈಸಿಕೊಳ್ಳುತ್ತೇವೆ. ಒಂದು ಜೀವ ಇಂತಹ ಸಫಲತೆಗಾಗಿ, ಆತ್ಮ-ತ್ಯಾಗಕ್ಕೆ ನಡೆಸುವ ಸವೆಸುವ ಪಯಣಕ್ಕೆ ಉತ್ತಮ ರೂಪಕವಾಗಿ ಈ ಹತ್ತಿ ಮತ್ತು ಮಾನವನ ಚಿತ್ರಗಳು ಈ ಕವಿತೆಯಲ್ಲಿ ಬಳಕೆಯಾಗಿವೆ.
ಶಬ್ದಾರ್ಥ: ತಮ – ಕತ್ತಲು, ಅಂಧಕಾರ; ಬೆಳಕಬಟ್ಟೆ – ಜ್ಞಾನವೆಂಬ ಬಟ್ಟೆಯನ್ನು ಧರಿಸಿದವನು; ಯೋಗಿ – ಯೋಗಶಾಸ್ತ್ರ ಬಲ್ಲಾತ, ದೇಹ ಮತ್ತು ಮನಸ್ಸುಗಳ ನಿಯಂತ್ರಣ ಸಾಧಿಸಿದವನು; ಕೇಡು – ನಾಶ, ಕೆಡುಕು, ಅಳಿವು; ಕರ್ಮ – ಕೆಲಸ; ಆತ್ಮಪರಿನಿರ್ವಾಣ – ಮೋಕ್ಷ, ಮುಕ್ತಿ, ಆತ್ಮದ ಬಿಡುಗಡೆ; ಬಿತ್ತ – ಬೀಜ.
ವಿಶೇಷ ಪ್ರಯೋಗಗಳು:
- ತನ್ನ ಜೀವಜಾಲದ ಕೇಡು : ತನ್ನ ಜೀವಕ್ಕೆ ಬಲೆಯಾಗಿರುವ ಆಪತ್ತುಗಳ ಅಳಿವಿಗಾಗಿ ಎಂಬರ್ಥ.
- ಆತ್ಮಕ್ಕೆ ಕಮಟು ಹತ್ತು : ಆತ್ಮನಾಶ ಎಂಬುದರ ಸೂಚನೆ.
- ಎಣ್ಣೆ ತೀರಿದ ದೀಪ : ಆಯಸ್ಸು ಮುಗಿದ ಜೀವಕ್ಕೆ ಬಳಕೆಯಾಗಿರುವ ರೂಪಕ.
- ಕರ್ಮ : ಕಾರ್ಯ, ಕೆಲಸ ಅಥವಾ ಪೂರ್ವಜನ್ಮದ ಬಳುವಳಿ ಎಂಬ ಅರ್ಥದಲ್ಲಿ
ಹೊಂದಿಸಿ ಬರೆಯುವುದಕ್ಕೆ ಬೇಕಾದ ಮಾಹಿತಿ:
ಹತ್ತಿ… ಚಿತ್ತ… ಮತ್ತು… – ಟಿ. ಯಲ್ಲಪ್ಪ
ಹತ್ತಿ… ಚಿತ್ತ… ಮತ್ತು… – ಚಿಟ್ಟೆ ಮತ್ತು ಜೀವಯಾನ
ಚಿಟ್ಟೆ ಮತ್ತು ಜೀವಯಾನ – ಟಿ. ಯಲ್ಲಪ್ಪ
ಹತ್ತಿ… ಚಿತ್ತ… ಮತ್ತು… – ಆತ್ಮ-ಪರಮಾತ್ಮಗಳ ಸಂಗತಿ
ಚಿತ್ತ – ಹತ್ತಿಯ ಬೀಜ