ದ್ವಿತೀಯ ಪಿಯುಸಿ ಕನ್ನಡ ಹಳ್ಳಿಯ ಚಹಾ ಹೋಟೇಲುಗಳು ನೋಟ್ಸ್ ಪ್ರಶ್ನೋತ್ತರಗಳು, 2nd Puc Kannada Halliya chaha hotelugalu Notes halliya chaha hotelugalu notes in kannada pdf free download ಹಳ್ಳಿಯ ಚಹಾ ಹೋಟೇಲುಗಳು ಪ್ರಬಂಧ, halliya chaha hotelugalu notes in kannada halliya chaha hotelugalu assignment in kannada pdf Halliya chaha hotelugalu Notes Question and Answer kseeb solutions for class 12 kannada chapter 8 notes in kannada medium halliya chaha hotel notes Halliya Chaha hotelegalu 2nd puc kannada lesson explained
೮. ಹಳ್ಳಿಯ ಚಹಾ ಹೋಟೇಲುಗಳು
– ವೀರೇಂದ್ರ ಸಿಂಪಿ

ಲೇಖಕರ ಪರಿಚಯ
ಬೀದರ್‌ನಲ್ಲಿ ವಾಸವಿರುವ ಪ್ರೊ. ವೀರೇಂದ್ರ ಸಿಂಪಿಯವರು ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಎಂಬಲ್ಲಿ 1938ರಲ್ಲಿ ಜನಿಸಿದರು. ಕನ್ನಡದ ಖ್ಯಾತ ಲೇಖಕ ಸಿಂಪಿ ಲಿಂಗಣ್ಣ ಇವರ ತಂದೆ, ತಾಯಿ ಸೋಬಲವ್ವ, ಬೀದರ್‌ನ ಜಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ವೀರೇಂದ್ರ ಸಿಂಪಿಯವರು ಕನ್ನಡದ ಪ್ರಮುಖ ಲಲಿತಪ್ರಬಂಧ ಬಿಕಲನಗಳನ್ನು ಪ್ರಕಟಿಸಿದ್ದಾರೆ. ಅಂಕಣ ಬರಹ, ಅನುವಾದ, ಜೀವನಚರಿತ್ರೆ, ಗ್ರಂಥಸಂಪಾದನೆ ಮುಂತಾದ ಕ್ಷೇತ್ರಗಳಲ್ಲಿ ಮಾರು ಮೂವತ್ತೇಳು ಕೃತಿಗಳನ್ನು ವೀರೇಂದ್ರ ಸಿಂಪಿಯವರು ಹೊರತಂದಿದ್ದಾರೆ.
ಅ. ಸಾಂದರ್ಭಿಕ ವಿವರಣೆಯನ್ನು ಬಯಸುವ ವಾಕ್ಯಗಳು
೧. ಆದು ಯಾವ ಶಸ್ತ್ರಕ್ಕೂ ಮಣಿಯದು.
ಪ್ರೊ. ವಿರೇಂದ್ರ ಸಿಂಪಿಯವರು ಬರೆದಿರುವ ‘ಹಳ್ಳಿಯ ಚಹಾ ಹೊಟೇಲುಗಳು’ ಎಂಬ ಲಲಿತ ಪ್ರಬಂಧದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.
ಪಟ್ಟಣದ ಹೊಟೇಲುಗಳ ಬಗ್ಗೆ ವಿವರಿಸುವಾಗ ಲೇಖಕರು ಈ ಮೇಲಿನ ವಾಕ್ಯವನ್ನು ಹೇಳಿದ್ದಾರೆ. ಪಟ್ಟಣದ ಹೊಟೇಲಿನ ತಿಂಡಿಗಳು ತಾಜಾತನದಿಂದ ಕೂಡಿರುವುದಿಲ್ಲ. ಅದು ಯಾವಾಗ ತಯಾರಾಗಿದೆಯೆಂಬುದು ಸ್ವತಃ ಮಾಣಿಗೇ ತಿಳಿದಿರುವುದಿಲ್ಲ. ವಡೆಗೆ ಆದೇಶಿಸಿದರೆ ತಂಗಳಾದ ವಡೆ ನಮ್ಮೆದುರಿಗೆ ಬಂದು ಕೂರುತ್ತದೆ. ಅದು ಎಷ್ಟು ಪೆಡುಸಾಗಿರುತ್ತ ವೆಂದರೆ ಯಾವ ಶಸ್ತ್ರದಿಂದಲೂ ಅದನ್ನು ಚೂರು ಮಾಡಿ ತಿನ್ನಲಾಗದಷ್ಟು ಒರಟಾಗಿರುತ್ತವೆಂದು ಲೇಖಕರು ವಿವರಿಸಿರುವ ಸಂದರ್ಭವಿದಾಗಿದೆ.
೨. ಇಂದು ಸ್ಪೆಶಲ್ ಅವಲಕ್ಕಿ ಸೂಸಲ ಮಾಡಿದ್ದೇನೆ.
ಪ್ರೊ. ವಿರೇಂದ್ರ ಸಿಂಪಿಯವರು ಬರೆದಿರುವ ‘ಹಳ್ಳಿಯ ಚಹಾ ಹೊಟೇಲುಗಳು ಎಂಬ ಲಲಿತ ಪ್ರಬಂಧದಿಂದ ಈ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.
ಹಳ್ಳಿಯ ಚಹಾ ಹೊಟೇಲಿನ ಮಾಣಿಗಳು ಗ್ರಾಹಕರನ್ನು ಆದರಿಸಿ ಆತಿಥ್ಯ ನೀಡುವ ಬಗೆಯನ್ನು ವಿವರಿಸುತ್ತಾ ಲೇಖಕರು ಈ ಮೇಲಿನ ಮಾತನ್ನು ಹೇಳಿದ್ದಾರೆ. ಪೂರಿ ತಿಂದು ಪ್ಲೇಟನ್ನು ಪಕ್ಕಕ್ಕೆ ಸರಿಸುವಷ್ಟರಲ್ಲಿ ಮಾನ ಇಂದು ಸ್ಪೆಶಲ್ ಅವಲಕ್ಕಿ ಉಸಲಿ (ಸೂಸಲ) ಮಾಡಿದ್ದೇನೆ” ಎಂದು ಮತ್ತೊಂದು ಪ್ಲೇಟನ್ನು ಪಕ್ಕದಲ್ಲಿ ತಂದಿರಿಸುತ್ತಾರೆ. ಈ ರೀತಿಯ ಉಪಚಾರವನ್ನು ಯಾವ ಹೆಂಡತಿಯೂ ತನ್ನ ಗಂಡನಿಗೆ ಮಾಡಿರಲಾರಳೆಂದು ಲೇಖಕರು ಹಳ್ಳಿ ಹೊಟೇಲಿನ ಮಾಣಿಗಳನ್ನು ಕೊಂಡಾಡಿದ್ದಾರೆ.
೩. ಅನಕ್ಷರಸ್ಥರ ಪಾರ್ಲಿಮೆಂಟು.
ಪ್ರೊ. ವಿರೇಂದ್ರ ಸಿಂಪಿಯವರು ಬರೆದಿರುವ ‘ಹಳ್ಳಿಯ ಚಹಾ ಹೊಟೇಲುಗಳು’ ಎಂಬ ಲಲಿತ ಪ್ರಬಂಧದಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸಬಹುದಾಗಿದೆ.
ಹಳ್ಳಿಯ ಚಹಾ ಹೊಟೇಲುಗಳೆಂದರೆ ಅದೊಂದು ಸಾರ್ವಜನಿಕರ ಕೂಟವೆಂದು ವರ್ಣಿಸಿರುವ ಲೇಖಕರು ಎಲ್ಲ ಬಗೆಯ, ಎಲ್ಲ ವರ್ಗದ, ಎಲ್ಲ ಚೌಕಿಯ ಜನರೂ ಕೂಡುವ ಸ್ಥಳವಿದೆಂದು ಹೇಳಿ ಯಾರ್ಯಾರಿಗೆ ಯಾವ ಯಾವ ರೀತಿ ಚಖಾ ಹೊಟೇಲು ಕಂಡಿದೆ ಎಂಬುದನ್ನು ವಿವರಿಸುವಾಗ ಲೇಖಕರು ಅನಕ್ಷರಸ್ಥರ ಪಾಲಿಗೆ ಇದು ಪಾರ್ಲಿಮೆಂಟಿದ್ದಂತೆ ಎಂದಿದ್ದಾರೆ. ಎಲ್ಲ ವಿಚಾರಗಳನ್ನೂ ಅಲ್ಲಿ ಚರ್ಚಿಸುವುದರಿಂದ ಅವನ್ನು ಪಾರ್ಲಿಮೆಂಟೆಗೆ ಲೇಖಕರು ಹೋಲಿಸಿದ್ದಾರೆ.
೪. ನನ್ನ ದೃಷ್ಟಿಯಲ್ಲಿ ವಾರ್ತಾ ಇಲಾಖೆ ಇದ್ದಂತೆ.
ಪ್ರೊ. ವಿರೇಂದ್ರ ಸಿಂಪಿಯವರು ಬರೆದಿರುವ ‘ಹಳ್ಳಿಯ ಚಹಾ ಹೊಟೇಲುಗಳು’ ಎಂಬ ಲಲಿತ ಪ್ರಬಂಧದಲ್ಲಿ ಹಳ್ಳಿಯ ಹೊಟೇಲುಗಳನ್ನು ವಾರ್ತಾ ಇಲಾಖೆಗೆ ಹೋಲಿಸಿದ್ದಾರೆ.
ಹಳ್ಳಿಯ ಚಹಾ ಹೊಟೇಲುಗಳೆಂದರೆ ಸುದ್ದಿಯ ತಾಣ. ಯಾರ ಮನೆಯ ಹಸು ಕರುಹಾಕಿತು, ಯಾರ ಎಮ್ಮೆ ಸತ್ತಿತ್ತು, ಯಾರ ಹೆಂಡತಿ ಸುಂದರಿ, ಯಾರು ಭ್ರಷ್ಟ, ಯಾರ ಮಗ ಪೋಲಿ – ಇತ್ಯಾದಿ ಇತ್ಯಾದಿ ಸಂಗತಿಗಳೆಲ್ಲವೂ ಅಲ್ಲಿ ಹರಡುತ್ತಿರುತ್ತವೆ. ಇಲ್ಲಿ ಬರುವವರಿಗೆ ತಮ್ಮ ತಮ್ಮ ಮನೆಗಳ ಸ್ವಂತ ವಿಚಾರಗಳು ತಿಳಿದಿರದಿದ್ದರೂ ಊರಿನ ಮೂಲೆಮೂಲೆಗಳ ವಿಚಾರವೂ ತಿಳಿದಿರುತ್ತದೆ. ಆದ್ದರಿಂದ ಲೇಖಕರು ಹಳ್ಳಿಯ ಚಹಾ ಹೊಟೇಲುಗಳನ್ನು ವಾರ್ತಾಇಲಾಖೆಗೆ ಹೋಲಿಸಿರುವುದು ಸರಿಯಾಗಿದೆ.
೫. ಇಳಕಲ್ ಸೀರೆ ಉಟ್ಟ ಗುಳೇದಗುಡ್ಡ ಕುಪ್ಪಸ ತೊಟ್ಟ ಹೆಣ್ಣಿದ್ದಂತೆ.
ಪ್ರೊ. ವಿರೇಂದ್ರ ಸಿಂಪಿಯವರು ಬರೆದಿರುವ ‘ಹಳ್ಳಿಯ ಚಹಾ ಹೊಟೇಲುಗಳು’ ಎಂಬ ಲಲಿತ ಪ್ರಬಂಧದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.
ಪೇಟೆಯ ಮತ್ತು ಹಳ್ಳಿಯ ಹೊಟೇಲುಗಳನ್ನು ಹೋಲಿಸುತ್ತಾ ಲೇಖಕರು ಈ ಮೇಲಿನ ಮಾತನ್ನು ಹೇಳಿದ್ದಾರೆ. ಪೇಟೆಯ ಹೊಟೇಲುಗಳು ನೋಡಲು ಅಂದ ಚೆಂದವಾಗಿ ಕಾಣುತ್ತವೆ. ಆದರೆ ಅಲ್ಲಿನ ತಿಂಡಿಗಳಲ್ಲಿ ರುಚಿಯ ಸೊಗಸಿರುವುದಿಲ್ಲ. ಆದ್ದರಿಂದ ಅವು ನಾಜೂಕಾದ ಹೆಣ್ಣಿದ್ದಂತೆ. ಆದರೆ ಹಳ್ಳಿಯ ಹೊಟೇಲುಗಳು ಗುಳೇದಗುಡ್ಡದ ಕುಬುಸ ತೊಟ್ಟಿ ಹೆಣ್ಣಿದ್ದಂತೆ. ನೋಡಲು ಚೆನ್ನಾಗಿಲ್ಲದಿದ್ದರೂ ಸುಖ ಹೆಚ್ಚು ಎಂದು ಹೋಲಿಕೆ ಮಾಡಿ ಹೇಳಿದ್ದಾರೆ.
ಹೆಚ್ಚುವರಿ ಪ್ರಶ್ನೆಗಳು:
೬. ಈಗ ಸಿನೆಮಾ ದೇವತೆಗಳ ದರ್ಶನವೂ ಆಗುತ್ತದೆ
ಪ್ರೊ. ವಿರೇಂದ್ರ ಸಿಂಪಿಯವರು ಬರೆದಿರುವ ‘ಹಳ್ಳಿಯ ಚಹಾ ಹೊಟೇಲುಗಳು’ ಎಂಬ ಲಲಿತ ಪ್ರಬಂಧದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ.
ಲೇಖಕರು ಹಳ್ಳಿಯ ಚಹಾ ಹೊಟೇಲುಗಳಲ್ಲಿ ಆಗಿರುವ ಪರಿವರ್ತನೆಯನ್ನು ವಿವರಿಸುತ್ತಾ ಈ ಮೇಲಿನ ವಾಕ್ಯವನ್ನು ಹೇಳಿದ್ದಾರೆ. ಮೊದಲು ಹೊಟೇಲಿನಲ್ಲಿ ತಿರುಪತಿ ತಿಮ್ಮಪ್ಪನ ಫೋಟೋ ಮಾತ್ರ ಇರುತ್ತಿತ್ತು. ಈಗ ಆ ತಿಮ್ಮಪ್ಪನ ಪಕ್ಕದಲ್ಲಿ ಐಶ್ವರ್ಯ ರೈ, ಹೇಮಮಾಲಿನಿ, ಧರ್ಮೇಂದ್ರ ಮುಂತಾದವರ ಕ್ಯಾಲೆಂಡರುಗಳೂ ನೇತಾಡುತ್ತಿರುತ್ತವೆ. ಇದನ್ನು ವಿವರಿಸುತ್ತಾ ಲೇಖಕರು ಸಿನಿಮಾ ನಟರನ್ನೇ ದೇವತೆಗಳೆಂದು ಕರೆದಿದ್ದಾರೆ. ಇದು ಹಳ್ಳಿಗಾಡಿನ ಹೊಟೇಲುಗಳಲ್ಲಿ ನವೀನತೆಯ ಗಾಳಿ ಬೀಸುತ್ತಿರುವುದರ ಸಂಕೇತವೆಂದು ಲೇಖಕರು ಅಭಿಪ್ರಾಯ ಪಟ್ಟಿದ್ದಾರೆ.
೭. ಭಜಿಯಂ ತಿನ್ನದ ಜನ್ಮ ವ್ಯರ್ಥ,
ಪ್ರೊ. ವಿರೇಂದ್ರ ಸಿಂಪಿಯವರು ಬರೆದಿರುವ ‘ಹಳ್ಳಿಯ ಚಹಾ ಹೊಟೇಲುಗಳು’ ಎಂಬ ಲಲಿತ ಪ್ರಬಂಧದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.
ಲೇಖಕರು ತಮ್ಮ ಹಳ್ಳಿಯ ಚಹಾ ಹೊಟೇಲಾದ ಚಂದ್ರಭವನವನ್ನು ವರ್ಣಿಸುತ್ತಾ ಈ ಮಾತನ್ನು ಹೇಳಿದ್ದಾರೆ. ಜೋಗದ ಜಲಪಾತವನ್ನು ನೋಡಿದ ಕವಿಯು “ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ಸಾಯೋದ್ರೋಳಗೆ ಒಮ್ಮೆ ನೋಡು ಜೋಗದ ಗುಂಡಿ” ಎಂದು ಹಾಡಿದ. ಈ ಕವಿ ಏನಾದರೂ ನಮ್ಮ ಹಳ್ಳಿಯ ಚಂದ್ರಭವನಕ್ಕೆ ಭೇಟಿಯಿಡುತ್ತಿದ್ದರೆ ‘ಇಲ್ಲಿ ಚಹಾ ಕುಡಿಯದ, ಭಜಿಯಂ ತಿನ್ನದ ಜನ್ಮ ವ್ಯರ್ಥವೆಂದು ಹಾಡಿಬಿಡುತ್ತಿದ್ದ’ ಎಂದಿದ್ದಾರೆ ಲೇಖಕರು. ಹಳ್ಳಿಯ ಚಹಾ ಹೊಟೇಲಿನ ಚಹಾ ಮತ್ತು ಭಜಿಯು ಅಷ್ಟು ಸೊಗಸಾಗಿರುತ್ತದೆ ಎಂಬುದು ಲೇಖಕರ ಭಾವವಾಗಿದೆ.
೮. ನನ್ನ ಹೆರ್ಸ ಹಟ್ರಿ’,
ಪ್ರೊ. ವಿರೇಂದ್ರ ಸಿಂಪಿಯವರು ಬರೆದಿರುವ ‘ಹಳ್ಳಿಯ ಚಹಾ ಹೊಟೇಲುಗಳು’ ಎಂಬ ಲಲಿತ ಪ್ರಬಂಧದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ.
ಹಳ್ಳಿಯ ಹೊಟೇಲುಗಳಲ್ಲಿ ಎಷ್ಟು ಬೇಕಾದರೂ ತಿನ್ನಬಹುದು. ಅಲ್ಲಿ ತಿಂದುದ್ದಕ್ಕೆ ಹಣವನ್ನು ತಕ್ಷಣವೇ ಕೊಡಬೇಕಾಗಿಲ್ಲ. ಅದನ್ನು ಸಾಲವಾಗಿ ಪಾವತಿಸಬಹುದು. ತಿಂದವರು ‘ನನ್ನ ಹೆಸರ್ಲೆ ಹಜ್ರ’ ಎಂದು ಹೊರಟೇ ಬಿಡುತ್ತಾರೆ. ಬರೆದುಕೊಂಡು ವಸೂಲಿ ಮಾಡುವುದು ಮಾಲೀಕರ ಕರ್ತವ್ಯವಾಗಿರುತ್ತದೆ. ಸಾಲ ಮಾಡಿದವರಾದರೂ ಸುಗ್ಗಿ ಕಾಲದಲ್ಲಿ ನಾಲ್ಕು ಮೂಟೆ ಜೋಳ ತಂದು ಮಾಲೀಕನಿಗೆ ಪಾವತಿಸಿದರಾಯ್ತು ಎಂದು ಹೇಳುವ ಮೂಲಕ ಹಳ್ಳಿಯ ಚಹಾ ಹೊಟೇಲಿನ ಸಾಲ ಮಾಡುವ-ತೀರಿಸುವ ಸಂಗತಿಯನ್ನು ವಿವರಿಸಿದ್ದಾರೆ. ಪೇಟೆಯ ಜನಕ್ಕೆ ಇಂತಹ ಅವಕಾಶವಿರುವುದಿಲ್ಲ. ಎಲ್ಲದ್ದಕ್ಕೂ ಮೊದಲು ಹಣ ಪಾವತಿಸಲೇ ಬೇಕು. ಹಳ್ಳಿಯಲ್ಲಿ ಎಲ್ಲವೂ ಸಲೀಸು ಎಂಬುದು ಲೇಖಕರ ಅಭಿಪ್ರಾಯ.
(ಆ) ಒಂದು ಅಂಕದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿ)
೧. ಕಲಿಯುಗದ ಆಮೃತ ಯಾವುದು?
ಚಹಾ
೨. ಮೂರು ಕಾಲಿನ ಕುರ್ಚಿ ಎಲ್ಲಿದೆ?
ಹಳ್ಳಿಯ ಚಹಾ ಹೊಟೇಲುಗಳಲ್ಲಿ
೩. ಎತ್ತುಗಳು ಗಕ್ಕೆಂದು ಎಲ್ಲಿ ನಿಲ್ಲುತ್ತವೆ?
ಚಹಾ ಹೊಟೇಲುಗಳ ಮುಂದೆ
೪. ಬಾಯಿಚಪಲ ಯಾರಿಗೆ ಜಾಸ್ತಿ ಇರುತ್ತದೆ?
ವೃದ್ಧರಿಗೆ
೫. ಲೇಖಕರ ದೃಷ್ಟಿಯಲ್ಲಿ ಹಳ್ಳಿಯ ಚಹಾದ ಅಂಗಡಿ ಹೇಗೆ ಕಂಡಿದೆ?
ವಾರ್ತಾ ಇಲಾಖೆ
೬. ಯಾರ ಬಗ್ಗೆ ಮೂಕರ್ಜಿಯ ದೂರನ್ನು ಹಳ್ಳಿಗರು ಕೊಡುತ್ತಾರೆ?
ಹೆಡ್‌ಮಾಸ್ಟರ್
೭. ಕಲ್ಲಪ್ಪನವರ ಗೂಢ ಪ್ರಶ್ನೆ ಯಾವುದು?
ಶಿವಶರಣಪ್ಪನಿಗೆ ಅಷ್ಟು ಸುಂದರ ಹೆಂಡತಿ ಯಾಕಿರಬೇಕೆಂಬುದು
೮. ಲೋಕಲ್ ಸುದ್ದಿಗಳಿಗೆ ಎಲ್ಲಿ ಪ್ರಾಶಸ್ತ್ರವಿದೆ?
ಹಳ್ಳಿಯ ಹೊಟೇಲುಗಳಲ್ಲಿ
೯. ಲೇಖಕರು ಹೇಳುವ ಹಳ್ಳಿಯ ಹೊಟೇಲಿನ ಹೆಸರೇನು?
ದೂರದರ್ಶನದಲ್ಲಿ
೧೦. ಯಾವುದಕ್ಕೆ ಭೇಟಿ ಕೊಡಬೇಕೆಂದು ಲೇಖಕರು ಹೇಳುತ್ತಾರೆ?
ಹಳ್ಳಿಯ ಚಹಾ ಫಳಾರದ ಅಂಗಡಿಗೆ
ಹೆಚ್ಚುವರಿ ಪ್ರಶ್ನೆಗಳು
೧೧. ಭಾವೈಕ್ಯತೆ ಎಂದು ಬಾಯಿ ಬಾಯಿ ಬಡಕೊಂಡರೆ ಭಾವೈಕ್ಯತೆ ಹುಟ್ಟದು. ಭಾವೈಕ್ಯತೆ ನಮ್ಮ ದೇಶದಲ್ಲಿ ಎಲ್ಲಿಯಾದರೂ ಇದ್ದಿದ್ದರೆ ಅದು ನಮ್ಮ ಹಳ್ಳಿಯ ಯಾವ ಸ್ಥಳದಲ್ಲಿ ಇದೆ ಎಂದು ಲೇಖಕರು ಹೇಳಿದ್ದಾರೆ?
ಹೊಟೇಲುಗಳಲ್ಲಿ
೧೨. ಅನಕ್ಷರಸ್ಥರ ಪಾರ್ಲಿಮೆಂಟ್ ಎಂದು ಲೇಖಕರು ಯಾವುದನ್ನು ಕರೆದಿದ್ದಾರೆ?
ಹಳ್ಳಿಯ ಚಹಾ ಫಳಾರದ ಹೊಟೇಲು
೧೩. ಶುಭ್ರ ಸಮವಸ್ತ್ರದ ಮಾಣಿಯನ್ನು ಎಲ್ಲಿ ಕಾಣಬಹುದು?
ಪೇಟೆಯ ಹೊಟೇಲ್ ಗಳಲ್ಲಿ
(ಇ) ಎರಡು ಅಂಶಗಳ ಪ್ರಶ್ನೆಗಳು (ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ):
೧. ಪಟ್ಟಣದ ಹೊಟೇಲಿನ ಕಟ್ಟಡ ಹೇಗಿದೆ?
ಪಟ್ಟಣದ ಹೊಟೇಲುಗಳಲ್ಲಿ ಮನವನ್ನಾಕರ್ಷಿಸುವ ಭವ್ಯವಾದ ಕಟ್ಟಡಗಳಿವೆ. ನಡೆದರೆ ಕಾಲು ಜಾರುವ ಫರಸಿಯ ನೆಲವಿದೆ.
೨. ಹಳ್ಳಿಯ ಚಹಾದ ಅಂಗಡಿಯೆಂದರೆ ಹೇಗಿರುತ್ತದೆ?
ಅಥವಾ
ಹಳ್ಳಿಯ ಚಹಾ ಹೊಟೇಲುಗಳು ಹೇಗಿರುತ್ತವೆ?
ಹಳ್ಳಿಯ ಚಹಾ ಅಂಗಡಿಯಲ್ಲಿ ಮುರುಕು ಬೆಂಚು ಇರುತ್ತವೆ ಮತ್ತು ಮೂರು ಕಾಲಿನ ಕುರ್ಚಿಗಳಿದ್ದು ನೋಡಲು ಆಕರ್ಷಕವಾಗಿರುವುದಿಲ್ಲ.
೩. ಈ ದೇಶದಲ್ಲಿ ಭಾವೈಕ್ಯತೆ ಎಲ್ಲಿದೆ?
ಎಲ್ಲ ವರ್ಗದ, ಎಲ್ಲ ಜಾತಿಯ, ಎಲ್ಲ ವಯಸ್ಸಿನ ಜನರೂ ಒಂದಡೆ ಕಲೆಯುವ ಜಾಗವೆಂದರೆ ಹಳ್ಳಿಯ ಚಷಾ ಹೊಟೇಲುಗಳು, ಆದ್ದರಿಂದ ಈ ದೇಶದಲ್ಲಿ ನಿಜವಾದ ಭಾವೈಕ್ಯತೆ ಎಂಬುದು ಹಳ್ಳಿಯ ಹೊಟೇಲುಗಳಲ್ಲಿ ಮಾತ್ರ ಇರುತ್ತದೆ.
೪. ರೋಗಿಗಳ ಹಾಗೂ ಪಕ್ಕ ಮಾಡುವವರ ಜಿದ್ದು ಎಂತಹುದು?
ರೋಗಿಗಳು ಮತ್ತು ಪಥ್ಯ ಮಾಡುವವರು ಹೇಗೂ ತಮ್ಮ ಕಾಯಿಲೆ ವಾಸಿಯಾಗುವುದಿಲ್ಲ; ಹಾಗೂ ಸಾಯುತ್ತೇವೆ ಹೀಗೂ ಸಾಯುತ್ತೇವೆ. ಆದ್ದರಿಂದ ಕರಿದಿದ್ದನ್ನು ತಿಂದೇ ಸಾಯುತ್ತೇವೆ ಎನ್ನುವ ಜಿದ್ದನ್ನು ಹೊಂದಿರುತ್ತಾರೆ.
೫. ಗಿಡ್ಡ ಮಾಸ್ತರು ಶಾಲೆಯಲ್ಲಿ ಹುಡುಗರಿಗೆ ಏಕೆ ಹೊಡೆಯುತ್ತಾರೆ?
ಗಿಡ್ಡ ಮಾಸ್ತರರು ಶಾಲೆಯಲ್ಲಿ ಹುಡುಗರಿಗೆ ಹೊಡೆಯುವುದಕ್ಕೆ ಮನೆಯಲ್ಲಿ ಅವರ ಹೆಂಡತಿಯು ಕೊಡುತ್ತಿದ್ದ ಕಾಟವೇ ಕಾರಣ
೬. ಹಳ್ಳಿಗರ ಆಕ್ಷೇಪದ ವಿಷಯ ಯಾವುದು?
ವಿಧವೆಯಾದ ‘ಅಕ್ಕಾ ಅವರು’ ಏಕೆ ಅಷ್ಟು ಬೆಳ್ಳಗಿನ ಸೀರೆ ಉಡಬೇಕು ಎಂಬುದು ಅವರ ಜಿಜ್ಞಾಸೆಯ ವಿಷಯ.
೭. ಸುದ್ದಿಯ ಸೂರಪ್ಪನಾದ ಭರಮಣ್ಣ ಗೊಂಬೆಯನ್ನು ಹೇಗೆ ವರ್ಣಿಸುತ್ತಾನೆ?
ಸುದ್ದಿಯ ಸೂರಪ್ಪ ತಾನು ಪಟ್ಟಣಕ್ಕೆ ಹೋದಾಗ ಶೋರೂಂನ ಎದುರಿಗೆ ನಿಲ್ಲಿಸಿದ್ದ ಹೆಣ್ಣು ಗೊಂಬೆಯನ್ನು ಎವೆಯಿಕ್ಕದೆ ನೋಡಿದ್ದಾಗಿಯೂ “ಏನ್ ಹೆಣ್ಣಪ್ಪಾ ಅದು, ಕೈ ತೊಳೆದು ಅದನ್ನು ಮುಟ್ಟಬೇಕು” ಎಂಬಂತಿತ್ತೆಂದೂ ವರ್ಣಿಸಿದ್ದಾನೆ.
ಹೆಚ್ಚುವರಿ ಪ್ರಶ್ನೆ
೮. ಚಹಾಫಳಾರದ ಅಂಗಡಿಯ ಆಜೀವ ಸದಸ್ಯರಾಗಿಬಿಡುವವರು ಯಾರು?
ವೃದ್ಧರು ಮತ್ತು ಪೆನ್‌ಶನ್‌ದಾರರಿಗೆ ಬಾಯಿರುಚಿ ಹೆಚ್ಚು, ಮನೆಯಲ್ಲಿ ಮಗ-ಸೊಸೆ ಬಾಯಿರುಚಿಗೆ ಅಡ್ಡಿಪಡಿಸುತ್ತಾರೆಂದು ಇವರೆಲ್ಲಾ ಚಹಾಫಳಾರದ ಅಂಗಡಿಯ ಆಜೀವ ಸದಸ್ಯರಾಗಿ ಬಿಡುತ್ತಾರೆ
ನಾಲ್ಕು ಅಂಕಗಳ ಪ್ರಶ್ನೆಗಳು (ಐದಾರು ವಾಕ್ಯಗಳಲ್ಲಿ ಉತ್ತರಿಸಿ):
೧. ಹಳ್ಳಿಯ ಚಹಾದಂಗಡಿಯನ್ನು ಪರಿಚಯಿಸಿ.
ಹಳ್ಳಿಯ ಚಹಾದ ಅಂಗಡಿಗಳು ಹಳ್ಳಿಗರ ಪಾಲಿಗೆ ಎಲ್ಲಾ ಅರ್ಥದಲ್ಲಿಯೂ ಮನೊರಂಜನಾ ಕೇಂದ್ರಗಳು, ನೋಡಲು ಮುರುಕಲು ಟೇಬಲ್ಲು, ಮೂರಾಲಿನ ಕುರ್ಚಿಗಳಲ್ಲಿದ್ದರೂ ಅಲ್ಲಿನ ಚಹಾವು ಅಮೃತಕ್ಕೆ ಸಮಾನವಾದುದು. ಅಲ್ಲಿ ಮಾಣಿಯಿಂದ ಸಿಗುವ ಉಪಚಾರ ಮನೆಯಲ್ಲಿ ಹೆಂಡತಿಯಿಂದಲೂ ದೊರಕದು. ಎಲ್ಲ ವರ್ಗದ ಜನರಿಗೂ ಅವರವರದೇ ಆದ ರೀತಿಯಲ್ಲಿ ಈ ಹೊಟೇಲುಗಳು ಆಕರ್ಷಣೆಯ ಕೇಂದ್ರ, ಹಿರಿಯರು-ಕಿರಿಯರು, ರೈತರು, ವಯೋವೃದ್ಧರು, ರೋಗಿಗಳು, ಶಿಕ್ಷಕರು, ಗುತ್ತಿಗೆದಾರರು ಎಲ್ಲರೂ ಇಲ್ಲಿನ ಚಹಾ ಮತ್ತು ಫಳಾರಗಳನ್ನು ಸವಿಯುವವರೆ. ಇದು ಒಂದು ರೀತಿಯಲ್ಲಿ ಸುದ್ದಿಗಳನ್ನು ಹುಟ್ಟು ಹಾಕುವ ಮತ್ತು ಬಿತ್ತರಿಸುವ ವಾರ್ತಾ ಭವನವಿದ್ದಂತೆ. ಅಲ್ಲಿ ದೊರೆಯುವ ಸುಖ-ಸಂತೋಷಗಳು ಯಾವ ಸ್ವರ್ಗದಲ್ಲಿಯೂ ಸಿಗಲಾರವೆಂದು ಲೇಖಕರು ಅಭಿಪ್ರಾಯಪಟ್ಟಿರುವುದನ್ನು ನೆನಪಿಸಿಕೊಳ್ಳಬಹುದು.
೨. ಪಟ್ಟಣದ ಚಹಾದಂಗಡಿಗಳು ಹೇಗಿರುತ್ತವೆ?
ಪಟ್ಟಣದ ಹೊಟೇಲುಗಳು ಭವ್ಯ ಕಟ್ಟಡಗಳನ್ನು ಹೊಂದಿ ಮನವನ್ನು ಆಕರ್ಷಿಸುವಂತಿರುತ್ತವೆ. ನಡೆದರೆ ಜಾರುವ ನುಣುಪಾದ ನೆಲ, ಕುಳಿತುಕೊಳ್ಳಲು ಮೆತ್ತನೆಯ ಕುರ್ಚಿಗಳು, ಬಣ್ಣ ಬಣ್ಣದ ಟೇಬಲ್ಲುಗಳು, ತಿರುಗುವ ಫ್ಯಾನುಗಳು – ಈ ಎಲ್ಲದರಿಂದ ನಾಜೂಕಾದ ಹೆಣ್ಣಿನ ರೀತಿ ಕಾಣುತ್ತದೆ. ಆದರೆ ಅಲ್ಲಿ ಸಿಗುವ ತಿಂಡಿಗಳನ್ನು ತಿನ್ನುವುದೇ ಕಷ್ಟ. ಅದು ಯಾವಾಗ ತಯಾರಾದುದೆಂದು ಯಾರಿಗೂ ತಿಳಿಯದು. ಮಾಣಿಗಳು ಸಮವಸ್ತ್ರ ಧರಿಸಿ ಯಂತ್ರಗಳಂತೆ ಕರ್ತವ್ಯ ನಿರ್ವಹಿಸುತ್ತಾರೆ. ನೆಮ್ಮದಿಯಾಗಿ ಸ್ವಲ್ಪ ಹೊತ್ತು ಕುಳಿತು ತಿಂಡಿ ತಿನ್ನಲು ಅಲ್ಲಿ ಅವಕಾಶವಿರುವುದಿಲ್ಲ. ಗಿಜಿಗಿಜಿಗುಟ್ಟುವ ಜನ ನಾವು ಕುಳಿತ ಸ್ಥಳವನ್ನಾಕ್ರಮಿಸಲು ನಮ್ಮ ಎದೆಯ ಮೇಲೆ ನಿಂತಂತೆ ಕಾದಿರುತ್ತಾರೆ. ಹೀಗಾಗಿ ಪಟ್ಟಣದಲ್ಲಿ ಹೊಟೇಲುಗಳಿಗೆ ಹೋಗುವುದೆಂದರೆ ಬೇಸರದ ಸಂಗತಿ.
೩. ಹಳ್ಳಿ ಮತ್ತು ಪಟ್ಟಣದ ಹೊಟೇಲುಗಳ ಮಾಣಿಗಳನ್ನು ಕುರಿತು ಬರೆಯಿರಿ.
ಹಳ್ಳಿಯ ಹೊಟೇಲುಗಳಲ್ಲಿರುವ ಮಾಣಿಗಳ ಉಪಚಾರ ಮರೆಯಲಾಗದ್ದು ಅವರು ಗ್ರಾಹಕರ ವಿಚಾರದಲ್ಲಿ ತೋರಿಸುವ ಪ್ರೀತಿ, ಆದರ, ಅತಿಥ್ಯಗಳು ಯಾವ ಹೆಂಡತಿಯಿಂದಲೂ ಗಂಡಂದಿರಿಗೆ ದೊರಕದು. ಒಂದನ್ನು ತಿಂದು ಮುಗಿಸುವ ವೇಳೆಗೆ ಮತ್ತೊಂದು ತಿಂಡಿಯನ್ನು ತಂದು ಎದುರಿಗಿಟ್ಟು ನಿಮಗಾಗಿಯೇ ಮಾಡಿದ್ದು ಎಂದು ಉಪಚರಿಸುತ್ತಾರೆ. ಯಾರಿಗೂ ಅದನ್ನು ನಿರಾಕರಿಸುವ ಮನಸೇ ಬರುವುದಿಲ್ಲ. ಪೇಟೆಯ ಮಾಣಿಗಳು ಸಮವಸ್ತ್ರಧರಿಸಿರುವ ಯಂತ್ರಗಳಂತಿರುತ್ತಾರೆ. ತಿಂಡಿ ಏನೇನಿದೆ ಎಂದು ಕೇಳಿದಾಕ್ಷಣ ಯಾವುದೂ ಗೊತ್ತಾಗದ ಹಾಗೆ ಒದರುತ್ತಾರೆ. ಅವರು ತಂದುಕೊಡುವ ತಿಂಡಿಗಳು ಎಂದು ತಯಾರಾದುದೆಂಬ ಮಾಹಿತಿ ಸ್ವತಃ ಅವರಿಗೇ ಇರುವುದಿಲ್ಲ.
೪. ಹಳ್ಳಿಗರು ಹೊತ್ತನ್ನು ಹೇಗೆ ಕಳೆಯುತ್ತಾರೆ? ವಿವರಿಸಿ.
ಹಳ್ಳಿಗರಿಗೆ ಚಹಾ ಹೊಟೇಲುಗಳು ಮನೋರಂಜನಾ ಕೇಂದ್ರಗಳಿದ್ದಂತೆ. ಚಹಾ ಕುಡಿಯಲು, ತಿಂಡಿ ತಿನ್ನಲು ಮಾತ್ರ ಜನ ಇಲ್ಲಿಗೆ ಬರುವುದಿಲ್ಲ. ಮಾಡಲು ಕೆಲಸವಿಲ್ಲದವರು, ಕೆಲಸವಿದ್ದರೂ ಮಾಡುವ ಮನಸ್ಸಿಲ್ಲದವರು, ಹೊತ್ತುಹೋಗದವರು ಎಲ್ಲರೂ ಇಲ್ಲಿ ಸೇರುತ್ತಾರೆ. ಕೆಲವರು ಚಹಾ ಕುಡಿಯುತ್ತಾ ಇಡೀ ದಿನ ಕೇರಂ ಆಡುತ್ತಾ ಕುಳಿತರೆ, ಉಳಿದ ವರ್ಗದ ಜನರು ದಿನದ 5-6 ತಾಸುಗಳನ್ನಾದರೂ ಚಹಾ ಫಳಾರದ ಅಂಗಡಿಯಲ್ಲಿ ಕಳೆಯುತ್ತಾರೆ. ತಿನ್ನುವ ಚಪಲ – ಮಾತಿನ ಚಪಲ ಎಲ್ಲವೂ ಇಲ್ಲಿ ತೀರುತ್ತದೆ. ಅಲ್ಲಿ ಕುಳಿತು ಊರ ಮೂಲೆಮೂಲೆ ಸುದ್ದಿಗಳನ್ನು ಸಂಗ್ರಹಿಸುವುದು ಬಿತ್ತರಿಸುವುದು ನಡೆಸುತ್ತಾರೆ. ಕಾಲುಬಿಟ್ಟ ಕತ್ತೆಯಂತೆ ಊರ ಸುತ್ತು ತಿರುಗಾಡುವ ಗಂಡಸರಿಗೆ ಸಾಮಾಜಿಕ ವಿಷಯಗಳ ಬಗ್ಗೆ ಮಾತನಾಡಲು ಹೊಟೇಲುಗಳೇ ಪ್ರಶಸ್ತವಾದ ಸ್ಥಳ.
೫. ಹಳ್ಳಿಯ ಹೊಟೇಲುಗಳಲ್ಲಿ ಬಂದ ನವೀನತೆಯ ಕುರಿತು ಬರೆಯಿರಿ.
ಹಳ್ಳಿಯ ಹೊಟೇಲುಗಳಲ್ಲಿ ಸಿನಿಮಾ ತಾರೆಯರು ದೇವತೆಗಳಂತೆ ಕಾಣಿಸಿಕೊಂಡು ಆಧುನೀಕರಣಕ್ಕೆ ಕಾರಣರಾಗುತ್ತಾರೆ. ಐಶ್ವರ್ಯ ರೈ, ಹೇಮಮಾಲಿನಿ, ಧರ್ಮೇಂದ್ರರ ಕ್ಯಾಲೆಂಡರುಗಳೂ ಅಲ್ಲಿ ಶೋಭಿಸುವಷ್ಟು ನವೀನತೆಯ ಗಾಳಿ ಹಳ್ಳಿಯ ಚಹಾ ಫಳಾರದ ಅಂಗಡಿಗಳಲ್ಲಿ ಬೀಸುತ್ತಿದೆ. ಇಪ್ಪತ್ತು ವರ್ಷಗಳ ಹಿಂದೆ ಜನರನ್ನು ತಣಿಸಲು ಗ್ರಾಮಾಫೋನ್ ರೆಕಾರ್ಡುಗಳಿದ್ದವು. ಇಂದು ಅವುಗಳ ಜಾಗದಲ್ಲಿ ಟಿ.ವಿ. ರೇಡಿಯೋ, ಸ್ವೀರಿಯೋ, ಟೇಪ್ ರೆಕಾರ್ಡರುಗಳು ಶ್ರೋತೃಗಳ ಕರ್ಣಪಟಲವನ್ನು ಹರಿದುಬಿಡುವಂತೆ ದಾಳಿಯಿಟ್ಟಿವೆ. ತರುಣರು ಹೊಸ ಹಾಡುಗಳನ್ನು ಕೇಳುತ್ತಾ ಗುನುಗುತ್ತಿದ್ದರೆ, ವೃದ್ಧರೂ ಕುಳಿತು ತಲೆದೂಗುವಂತಹ ವಾತಾವರಣ ಅಲ್ಲಿ ಕಾಣಿಸಿಕೊಂಡಿದೆ.
ಹೆಚ್ಚುವರಿ ಪ್ರಶ್ನೆಗಳು:
೬. ಚಹಾದಂಗಡಿಯ ಪರಮಭಕ್ತರು ಯಾರು? ವಿವರಿಸಿ.
ಬೆಳಿಗ್ಗೆ ಮುಂಜಾನೆ ಹಳ್ಳಿ ಹೊಟೇಲಿನ ಚಹಾ ಬೀಳದೆ ಪ್ರಾತಃರ್ವಿಧಿ ತೀರಿಸಲಿಕ್ಕೂ ಆಗದ ಜನ ತಂಬಿಗೆ ತಕ್ಕೊಂಡು ಬಯಲಿಗೆ ಹೋಗುವ ಮೊದಲು ಹೊಟೇಲಿಗೆ ಬರುತ್ತಾರೆ. ಇವರೇ ಚಹಾದಂಗಡಿಯ ಪರಮಭಕ್ತರು. ಮನೆಯಲ್ಲಿ ಹಲ್ಲು ಬಾಯನ್ನು ತೊಳೆದುಕೊಳ್ಳದೆ, ತಮ್ಮ-ತವರು ಮನೆಯಾದ ಚಹಾ ಫಳಾರದ ಅಂಗಡಿಯಲ್ಲಿ ಒಂದು ಗ್ಲಾಸು ನೀರಿನಲ್ಲಿ ಮುಕ್ಕಳಿಸಿ, ಬಾಯಿ ತೊಳೆದುಕೊಂಡು, ಉಗುಳಿ ಚಹಾ ಸೇವನೆ ಮಾಡುತ್ತಾರೆ. ಆದ್ದರಿಂದ ಇವರು ಚಹಾದಂಗಡಿಯ ಪರಮಭಕ್ತರು ಎಂದು ಲೇಖಕರು ಹೇಳಿದ್ದಾರೆ.
೭. ಜನರು ತಮ್ಮ ವಿವಿಧ ಬಗೆಯ ಭಾವನೆಗಳಿಗೆ ಹಳ್ಳಿಯ ಚಹಾ ಹೊಟೇಲಿನಲ್ಲಿ ಹೇಗೆ ಅಭಿವ್ಯಕ್ತಿಯನ್ನೀಯುತ್ತಾರೆ?
ಚಹಾ ಹೊಟೇಲಿಗೆ ಬರುವವರಿಗೆ ಮಾತನಾಡಲು ಇಂಥದೇ ವಿಷಯವಾಗಿರಬೇಕು ಎಂದೇನಿರುವುದಿಲ್ಲ. ಮೇಸ್ಟು ಮಕ್ಕಳಿಗೆ ಹೊಡೆಯಲು ಕಾರಣ ಅವರಿಗೆ ಹೆಂಡತಿಯ ಕಾಟ ಕಾರಣ ಎಂದೊಬ್ಬರು ಮಾತಾಡಿದರೆ, ಮತ್ತೊಬ್ಬ ವೈದ್ಯರು ಸರಿಯಾಗಿ ಕೆಲಸ ಮಾಡುತ್ತಿಲ್ಲವೆನ್ನುತ್ತಾರೆ. ಯುವಕನೊಬ್ಬ ಮದುವೆಗೆ ವರದಕ್ಷಿಣೆ ಪಡೆದುದು, ತಳವಾರನಿಗೆ ಸೊಕ್ಕು ಬಂದಿದ್ದು, ಶಿವಶರಣಪ್ಪನಿಗೆ ಅಷ್ಟು ಸುಂದರ ಹೆಂಡತಿ ಏಕಿರಬೇಕು ಎಂಬುದು – ಇತ್ಯಾದಿ ಇತ್ಯಾದಿ ತಮ್ಮ ತೆವಲು, ಹೊಟ್ಟೆಕಿಚ್ಚು, ಸಿಟ್ಟು, ದರ್ಪ, ಧಕ್ಕೆಗೊಂಡ ಗರ್ವ, ಆಳಲು ಎಲ್ಲವನ್ನು ಪಾರ್ಲಿಮೆಂಟಿನಂತಿರುವ ಹಳ್ಳಿಯ ಚಹಾ ಹೊಟೇಲುಗಳಲ್ಲಿ ಅಭಿವ್ಯಕ್ತಿ ನೀಡುತ್ತಾರೆಂದು ಲೇಖಕರು ವಿವರಿಸಿದ್ದಾರೆ.
ಭಾಷಾಭ್ಯಾಸ:
೧) ಈ ಪಠ್ಯದಲ್ಲಿ ಬಂದಿರುವ ಆನ್ಯದೇಶ ಪದಗಳನ್ನು ಗಮನಿಸಿ:
ಹೊಟೇಲ್, ಫ್ಯಾನ್, ಡೆಕೋಲಮ್, ಟೇಬಲ್, ಗ್ಲಾಸು, ಪ್ಲೇಟ್, ಮಿನಿ, ಸೈಜ್, ಜೋಕ್, ಬೆಂಚು, ಸ್ಪೆಶಲ್, ಇಂಜಿನ್, ಕೌಂಟರ್, ಕ್ರಿಕೆಟ್, ಗೌಂಡ್, ಚರ್ಚ್, ಕ್ಲಬ್, ಪಾರ್ಲಿಮೆಂಟ್, ಪೆನ್‌ಶನ್, ಕೇರಂ ಬೋರ್ಡ್, ಕಾಲೇಜ್, ನರ್ಸರಿ, ಸೀಟ್, ಅಡ್ವಾನ್ಸ್, ಲೀಡರ್, ಪ್ರಿಸ್ಕ್ರಿಪೈನ್, ಮಿಡ್‌ಡೇ ಮೀಲ್ಸ್, ಹೆಡ್ ಮಾಸ್ಟರ, ಪ್ಯಾಂಟ್, ಶರ್ಟ್, ಲೋಕಲ್, ಸ್ಟುಪಿಡ್, ಗ್ರಾಮಫೋನ್, ರೆಕಾರ್ಡ್, ರೇಡಿಯೋ, ಸ್ಟೀರಿಯೋ, ಟೇಪ್‌ರೆಕಾರ್ಡ್, ಸೀರಿಯಲ್, ಟಿ.ವಿ.
೨) ಹಟ್ರಿ, ಮ್ಯಾಲ, ಹೆಸರ್ಲೆ, ಉದ್ರಿ – ಇವುಗಳ ಗ್ರಾಂಥಿಕ ರೂಪಗಳನ್ನು ಬರೆಯಿರಿ.
ಹಚ್ರಿ – ಹಚ್ಚಿರಿ (ಬರೆಯಿರಿ)
ಮ್ಯಾಲ – ಮೇಲೆ
ಹೆಸರ್ಲೆ – ಹೆಸರಿನಲ್ಲಿ
ಉದ್ರಿ – ಉದ್ದರಿ
೩) ಪಠ್ಯಭಾಗದಲ್ಲಿ ಬಂದಿರುವ ಹೊಟೇಲು ತಿಂಡಿಗಳ ಪಟ್ಟಿ ಮಾಡಿ.
ಬೋಂಡ, ದೋಸೆ, ಉತ್ತಪ್ಪ, ಉಪಮಾ, ಪೂರಿ, ಭಜಿ, ಇಡ್ಲಿ, ವಡೆ, ಅವಲಕ್ಕಿ ಸೂಸಲ ಇತ್ಯಾದಿ.
೪) ಹೊಡೆಯುತ್ತ, ಬರುವಾಗ, ಬರುತ್ತಾರೆ, ಹಬ್ಬಿದೆ, ಹಾಕುತ್ತಾರೆ – ಈ ಪದಗಳ ಕಾಲವನ್ನು ಸೂಚಿಸಿ.
ಹೊಡೆಯುತ್ತ – ವರ್ತಮಾನಕಾಲ
ಹಬ್ಬಿದೆ – ಭೂತಕಾಲ
ಬರುತ್ತಾರೆ – ವರ್ತಮಾನಕಾಲ
ಹಾಕುತ್ತಾರೆ – ವರ್ತಮಾನಕಾಲ
ಪ್ರಬಂಧದ ಸಾರಾಂಶ ಮತ್ತು ವಿಮರ್ಶೆ:
ಪ್ರೊ. ವೀರೇಂದ್ರ ಸಿಂಪಿಯವರು ತಾವು ಕಂಡ ಹಳ್ಳಿಯ ಚಹಾ ಹೊಟೇಲುಗಳು ಹಳ್ಳಿಗರ ದಿನನಿತ್ಯದ ಬದುಕಿನಲ್ಲಿ ವಹಿಸುವ ಮಹತ್ತರ ಪಾತ್ರದ ಕಡೆಗೆ ಗಮನ ಸೆಳೆದಿದ್ದಾರೆ. ಹಳ್ಳಿಯ ಚಹಾ ಹೊಟೇಲುಗಳಲ್ಲಿ ಸಿಗುವ ಚಹಾ ಅಮೃತಕ್ಕೆ ಸಮಾನವೆಂಬುದು ಅವರ ಅಭಿಪ್ರಾಯ. ಆದ್ದರಿಂದ ಹಳ್ಳಿಯ ಹೊಟೇಲುಗಳಲ್ಲಿ ಚಹಾ ಸೇವನೆ ಮಾಡಿರದವರ ಜೀವನ ಅಪೂರ್ಣವೆಂದಿದ್ದಾರೆ.
ಮೊದಲಿಗೆ, ಪೇಟೆಯ ಹೊಟೇಲುಗಳ ಕಡೆ ಲೇಖಕರು ಗಮನಹರಿಸಿದ್ದಾರೆ. ಅವರು ಹೇಳುವಂತೆ ನಗರದ ಪ್ರವೇಶದ ಹೊಟೇಲುಗಳಲ್ಲಿ ನಡೆಯಲು ನುಣುಪಾದ ನೆಲ, ಕೂರಲು ಮೆತ್ತನೆಯ ಕುರ್ಚಿ, ತಂಗಾಳಿ ಬೀಸುವ ಫ್ಯಾನು, ಕುಡಿಯಲು ನೀರು, ಏನು ಬೇಕೆಂದು ವಿಚಾರಿಸುವ ಸಮವಸ್ತ್ರಧಾರಿ ಮಾಣಿ ಎಲ್ಲವೂ ಲಭ್ಯ. ಮಾಣಿಯಾದರೋ ತಿಂಡಿಗಳ ಹೆಸರನ್ನು ನೆನಪಿಟ್ಟುಕೊಳ್ಳಲಾಗದಂತೆ ಯಂತ್ರದಂತೆ ನೀರಸವಾಗಿ ಹೇಳುವನು. ಗಲಿಬಿಲಿಯಲ್ಲಿ ಗ್ರಾಹಕರು ಆದೇಶಿಸುವ ತಿಂಡಿ ಯಾವತ್ತಿನದೆಂದು ಸ್ವತಃ ಮಾಣಿಗೂ ತಿಳಿದಿರುವುದಿಲ್ಲ. ಇದು ಸಾಲದೆಂಬಂತೆ ನೆಮ್ಮದಿಯಾಗಿ ತಿನ್ನಲು ಬಿಡದ, ನಮ್ಮ ಸ್ಥಳವನ್ನಾಕ್ರಮಿಸಿಕೊಳ್ಳಲು ಎದೆ ಮೇಲೆ ನಿಂತಂತಿರುವ ಇತರ ಸಹ ಗ್ರಾಹಕರ ಕಾಟ. ಇಂತಹ ನೂಕು – ನುಗ್ಗಲು ತಿಂಡಿ ತಿನ್ನಲು ಪ್ರಶಸ್ತವಾದ ಸ್ಥಳವೇ ಅಲ್ಲವೆಂಬುದು ಲೇಖಕರು ನಗರದ ಹೊಟೇಲುಗಳ ಬಗ್ಗೆ ಹೊಂದಿರುವ ಭಾವನೆ.
ಲೇಖಕರ ಹಳ್ಳಿಯ ಚಂದ್ರಭವನದಲ್ಲಿರುವುದು ಮುರುಕು ಬೆಂಚು, ಮೂರು ಕಾಲಿನ ಖುರ್ಚಿಯಾದರೂ ಅದು ಅವರಿಗೆ ಸ್ವರ್ಗಕ್ಕೆ ಸಮಾನ. ಅಲ್ಲಿಯ ಚಹಾದ ಪರಿಮಳ, ರುಚಿ ಬೇರೆಲ್ಲೂ ಸಿಗಲಾರದು. ಇದಕ್ಕಿಂತಲೂ ಮುಖ್ಯವಾದುದೆಂದರೆ ಹಳ್ಳಿ ಚಹಾ ಹೊಟೇಲುಗಳ ಮಾಣಿ ಗ್ರಾಹಕರ ಬಗ್ಗೆ ತೋರುವ ಅದರ ಅತಿಥ್ಯಗಳು. ಮನೆಯಲ್ಲೂ ಇಂತಹ ಆತಿಥ್ಯ ಸಿಗದು. ಒಂದರ ಹಿಂದೆ ಒಂದರಂತೆ ಪೂರಿ, ಭಜಿ ಎಲ್ಲವೂ ಲಭ್ಯ. ಅಲ್ಲದೆ ಅವಸರವಿಲ್ಲದೆ ಆರಾಮವಾಗಿ ಕುಳಿತು ತಿಂದು ತೇಗುವ ಅವಕಾಶವಿಲ್ಲಿದೆ. ಹಳ್ಳಿಯ ಚಹಾ ಹೊಟೇಲಿನ ಮತ್ತೊಂದು ಸೌಲಭ್ಯವೆಂದರೆ ಹಣವಿಲ್ಲದಿದ್ದರೂ ಅಲ್ಲಿ ನಡೆಯುತ್ತದೆ. ಸಾಲದ ಲೆಕ್ಕ ಬರೆಸಿ, ಸುಗ್ಗಿ ಕಾಲದಲ್ಲಿ ನಾಲ್ಕು ಮೂಟೆ ಜೋಳವನ್ನು ಹೊಟೇಲಿಗೆ ತಂದು ಹಾಕಿದರೆ ಮುಗಿಯಿತು. ಮುಂದಿನ ಸುಗ್ಗಿವರೆಗೂ ಆರಾಮವಾಗಿರಬಹುದು.
ಇಂಗ್ಲೆಂಡಿನಲ್ಲಿ ಪ್ರತಿಯೊಂದು ಹಳ್ಳಿಯಲ್ಲೂ ಚರ್ಚು ಮತ್ತು ಕ್ರಿಕೆಟ್ ಮೈದಾನಗಳಿವೆಯಂತೆ. ಇದೇ ರೀತಿ ನಮ್ಮ ಪ್ರತಿಹಳ್ಳಿಯಲ್ಲೂ ಚಹಾ ಹೊಟೇಲುಗಳಿವೆಯೆಂದು ಲೇಖಕರು ಹೇಳುತ್ತಾರೆ. ಈ ಹೊಟೇಲುಗಳು ಬಾಯಿ ಚಪಲದೊಂದಿಗೆ ಹರಟುವ ನಾಲಗೆ ಚಪಲವನ್ನೂ ತಣಿಸುತ್ತವೆ. ಅಲ್ಲಿ ರಸಿಕರು, ಉಂಡಾಡಿಗಳು, ಗೃಹಸ್ಥರು, ವೃದ್ಧರು, ರೋಗಿಗಳು ಎಲ್ಲರೂ ಬರುತ್ತಾರೆ. ಎಲ್ಲ ವಯಸ್ಸಿನ, ಎಲ್ಲ ವರ್ಗದ, ಎಲ್ಲ ಜಾತಿಯ ಜನರಿಲ್ಲಿಗೆ ಬರುವುದರಿಂದ ಇಲ್ಲಿ ನಿಜವಾದ ‘ಭಾವೈಕ್ಯತೆ’ಯನ್ನು ಕಾಣಬಹುದೆಂದು ಲೇಖಕರು ಹೇಳಿದ್ದಾರೆ. ಇಲ್ಲಿಗೆ ಬರುವ ಜನರಲ್ಲಿ ವೈಶಿಷ್ಟ್ಯವಿದೆ. ಪ್ರಾತರ್ವಿಧಿ ಪೂರೈಸಲೂ ಕೆಲವರಿಗೆ ಚಹಾ ಹೊಟ್ಟೆಗೆ ಬೀಳಬೇಕು. ಮನೆಯಲ್ಲಿ ಹಲ್ಲುಜ್ಜದೆ ಹೊಟೇಲಿನಲ್ಲಿಯೇ ಬಾಯಿ ತೊಳೆದುಕೊಳ್ಳುವವರೂ ಇದ್ದಾರೆ. ಹೊಲಕ್ಕೆ ಹೊರಟ ರೈತರು, ನಿಷ್ಠಾವಂತರು, ಹೆಂಡತಿ-ಮಕ್ಕಳ ಬಗ್ಗೆ ಚಿಂತೆ ಮಾಡದ ಶೂರರು, ಬಾಯಿಚಪಲದ ಪಿಂಚಣಿದಾರರು, ಮನೆಯಲ್ಲಿ ಮಾತ್ರ ಪಥ್ಯ ಮಾಡುವ ರೋಗಿಗಳು, ಉತ್ಸಾಹಿ ತರುಣರು, ಪುಢಾರಿಗಳು, ಚಂದಾ ವಸೂಲಿದಾರರು. ಗ್ರಾಮಪಂಚಾಯ್ತಿ ಸರಪಂಚರು, ವ್ಯಾಪಾರಿಗಳು, ಶಿಕ್ಷಕರು – ಎಲ್ಲರೂ ಚಹಾ ಹೊಟೇಲಿಗೆ ಬಂದು ರುಚಿ ನೋಡುವವರೇ.
ಹಳ್ಳಿಯ ಚಹಾ ಹೊಟೇಲುಗಳನ್ನು ಲೇಖಕರು ವಾರ್ತಾ ಇಲಾಖೆಗೆ ಹೋಲಿಸಿದ್ದಾರೆ. ಹೆಣ್ಣು ಮಕ್ಕಳು ನೀರಿಗೆ, ಬಟ್ಟೆ ತೊಳೆಯಲು ಹೋದಾಗ ಪರಸ್ಪರ ಸುಖದುಃಖಗಳನ್ನು ಹೇಳಿಕೊಳ್ಳುವಂತೆ ಗಂಡಸರು ಚಹಾ ಹೊಟೇಲಿನಲ್ಲಿ ಕುಳಿತು ಎಲ್ಲ ವಿಚಾರಗಳ ಹರಟೆ ಹೊಡೆಯುತ್ತಾರೆ. ಅವರಿಗೆ ತಮ್ಮ ಮನೆಯ ವಿಚಾರ ಗೊತ್ತಿರದಿದ್ದರೂ ಊರ ಮೂಲೆ ಮೂಲೆಯ ಸಂಗತಿಗಳೆಲ್ಲಾ ಗೊತ್ತಿರುತ್ತದೆ. ಯಾರ ಮನೆಯಲ್ಲಿ ಹಸು ಕರು ಹಾಕಲಿ, ಎಮ್ಮೆ ಸಾಯಲಿ, ಯಾರದೋ ಹೆಂಡತಿ ವಿಷಯ, ಇನ್ನಾರ ಬಗ್ಗೆಯೋ ಮರು, ಮಕ್ಕಳ ವಿಚಾರ, ಹೊಟ್ಟೆಕಿಚ್ಚು ದ್ವೇಷ ಎಲ್ಲದಕ್ಕೂ ಹಳ್ಳಿಯ ಹೊಟೇಬೆಂಬ ಪಾರ್ಲಿಮೆಂಟಿನಲ್ಲಿ ಸ್ಥಳವುಂಟು, ನಗರದಲ್ಲಿ ತಾವು ಕಂಡ ಅನುಭವಗಳನ್ನೂ ಇಲ್ಲಿ ಕುಳಿತು ಚರ್ಚಿಸುವವರು ಇದ್ದಾರೆ. ಅಲ್ಲದೆ ಹಳ್ಳಿಯ ಚಹಾ ಹೊಟೇಲುಗಳು ಚಲನಚಿತ್ರ ನಟಿಯರ ಭಾವಚಿತ್ರಗಳ, ಚಿತ್ರಗೀತೆಗಳ, ಧಾರಾವಾಹಿಗಳ ಎಲ್ಲ ರಂಜನೆಯ ಕೇಂದ್ರವೂ ಆಗಿರುತ್ತವೆ. ಆದ್ದರಿಂದ ಲೇಖಕರು ಜೋರಾಗಿ ಮಳೆಸುರಿಯುತ್ತಿರುವಾಗ ಇಂತಹ ಹೊಟೇಲುಗಳಲ್ಲಿ ಕುಳಿತು ಚಹಾ ಸೇವಿಸುವುದು ಎಲ್ಲ ಸುಖ-ಸಂತೋಷಗಳಿಗಿಂತ ಮಿಗಿಲಾದುದು. ಈ ಕಾರಣದಿಂದ ಎಲ್ಲರೂ ಸಮೀಪದ ಹಳ್ಳಿಯ ಚಹಾ ಹೊಟೇಲುಗಳಿಗೆ ಭೇಟಿಕೊಡಿರೆಂದು ಸಲಹೆ ಮಾಡಿದ್ದಾರೆ.
ಶಬ್ದಾರ್ಥ: ಫಳಾರ – ತಿಂಡಿ; ಮಾಣಿ – ಹೊಟೇಲಲ್ಲಿ ತಿಂಡಿತಿನಿಸುಗಳು, ಚಹಾ ಕೊಡುವ ಹುಡುಗ; ಹಚ್ರಿ – ಖಾತೆಯಲ್ಲಿ ಬರೆಯುವುದು; ತರುಬಿ – ನಿಲ್ಲಿಸಿ; ಫರಸಿ – ಕಲ್ಲುಹಾಸು.
ಟಿಪ್ಪಣಿಗಳು:
೧. ಇಳಕಲ್ಲಿನ ಸೀರೆ:
ಇಳಕಲ್ ಎಂಬುದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಒಂದು ಪಟ್ಟಣ, ಕೈಮಗ್ಗದ ನೇಕಾರಿಕ ಇಲ್ಲಿನ ಮುಖ್ಯ ಕಸಬು, ಇಲ್ಲಿ ತಯಾರಾಗುವ ಸೀರೆ ಪಾರಂಪರಿಕವಾಗಿ ಶ್ರೇಷ್ಠತೆಯನ್ನು ಉಳಿಸಿಕೊಂಡು ಬಂದಿದೆ. ಸಂಪ್ರದಾಯಸ್ಥರು ಈ ಸೀರೆಯನ್ನು ಬಳಸುವುದು ವಾಡಿಕೆಯಾದರೂ ಆಧುನಿಕರೂ ಇಷ್ಟಪಡುವಂತೆ ಹಲವು ವಿನ್ಯಾಸಗಳಲ್ಲಿ ಸಿದ್ಧಪಡಿಸುವ ಕೌಶಲ್ಯವನ್ನು ಇಲ್ಲಿನ ನೇಕಾರರು ಮೆರೆದಿದ್ದಾರೆ.
೨. ಗುಳೇದಗುಡ್ಡದ ಖಣ:
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಮತ್ತೊಂದು ಕೈಮಗ್ಗದ ನೇಕಾರಿಕೆಯ ಪಟ್ಟಣವಿದು. ಇಲ್ಲಿ ಕುಪ್ಪಸದ ಬಟ್ಟೆ (ರವಿಕೆ ಬಟ್ಟೆ)ಯನ್ನು ಹಲವಾರು ಬಣ್ಣ, ವಿನ್ಯಾಸಗಳಲ್ಲಿ ಕೈಮಗ್ಗಗಳಲ್ಲಿ ನೇಕಾರರು ತಯಾರಿಸುತ್ತಾರೆ, ಸಂಪ್ರದಾಯಸ್ಥರು ಈ ಕುಪ್ಪಸವನ್ನು ವಿಶೇಷವಾಗಿ ಧರಿಸುವುದು ವಾಡಿಕೆ. ಗುಳೇದಗುಡ್ಡದ ಖಣವು (ಖಣ ಎಂದರೆ ಕುಪ್ಪಸದ ಬಟ್ಟೆಗಿರುವ ಇನ್ನೊಂದು ವಾಡಿಕೆಯ ಹೆಸರು) ಇಳಕಲ್ಲಿನ ಸೀರೆಗೆ ಅನುರೂಪವಾದ, ಹೊಂದಾಣಿಕೆಯ ವಸ್ತ್ರ ವೈಶಿಷ್ಟ್ಯವೆನಿಸಿದ
ಖಾಲಿ ಬಿಟ್ಟ ಸ್ಥಳಗಳನ್ನು ಭರ್ತಿ ಮಾಡಿರಿ:
೧. ಕಲಿಯುಗದ ಅಮೃತ………………..
ಚಹಾ
೨. ಲೇಖಕರು ಹೇಳುವ ಹಳ್ಳಿಯ ಹೊಟೇಲಿನ ಹೆಸರು………….
ಚಂದ್ರಭವನ
೩. ………………….ನ್ನು ಲೇಖಕರು ಅನಕ್ಷರಸ್ಥರ ಪಾರ್ಲಿಮೆಂಟ್ ಎಂದು ಕರೆದಿದ್ದಾರೆ.
ಹಳ್ಳಿಯ ಚಹಾ ಹೊಟೇಲ್
೪. ಚಂದ್ರಭವನದಲ್ಲಿ ಚಹಾವನ್ನು ಸೋಸುವವನು…………………
ಮಲ್ಲಣ್ಣ
೫. ……………..ಚಹಾ ಫಳಾರದ ಹೊಟೇಲಿನ ಆಜೀವ ಸದಸ್ಯರು.
ವೃದ್ಧರು/ಪೆನಶನ್‌ದಾರರು
೬. ಲೇಖಕರ ದೃಷ್ಟಿಯಲ್ಲಿ ಹಳ್ಳಿಯ ಚಹಾದ ಅಂಗಡಿ……………..ಇದ್ದಂತೆ.
ವಾರ್ತಾ ಇಲಾಖೆ
೭. ವೃದ್ಧರಿಗೆ………………. ಜಾಸ್ತಿ ಇರುತ್ತದೆ.
ಬಾಯಿ ಚಪಲ
೮. …………..ಬಗ್ಗೆ ಮೂಕರ್ಜಿಯ ದೂರನ್ನು ಹಳ್ಳಿಗರು ಕೊಡುತ್ತಾರೆ.
ಶಾಲೆಯ ಹೆಡ್‌ಮಾಸ್ಟರ್
೯. ಹಳ್ಳಿಯ ಹೊಟೇಲುಗಳಲ್ಲಿ ಈಗ …………….. ದೇವತೆಗಳ ದರ್ಶನವೂ ಆಗುತ್ತದೆ.
ಸಿನಿಮಾ