ದ್ವಿತೀಯ ಪಿಯುಸಿ ಕನ್ನಡ ಪ್ರಬಂಧ ರಚನೆ |2nd Puc Kannada Prabandha Rachane

ದ್ವಿತೀಯ ಪಿಯುಸಿ ಕನ್ನಡ ಪ್ರಬಂಧ ರಚನೆ, 2nd Puc Kannada Prabandha Rachane 2nd Puc Kannada Grammer pdf 2nd puc kannada workbook answers prabandha rachane 2nd puc kannada workbook answers chapter 10 prabandha rachane 2nd puc kannada workbook answers 2nd puc kannada workbook answers grammar pdf download 2nd puc kannada workbook answers prabandha pdf download ದ್ವಿತೀಯ ಪಿಯುಸಿ ಕನ್ನಡ ನೋಟ್ಸ್ pdf download 2nd PUC Kannada Notes Question and answer ದ್ವಿತೀಯ Puc ಕನ್ನಡ prabandha ರಚನೆprabandha in kannada ಪ್ರಬಂಧ ಲೇಖನ ಪ್ರಬಂಧ ಬರೆಯುವುದು 5 prabandha in kannada small prabandha in kannada prabandha in kannada writing essay kannada prabandhagalu essay kannada prabandhagalu ಪ್ರಬಂಧ ಎಂದರೇನು in kannada

೧೦. ಪ್ರಬಂಧ ರಚನೆ

Prabandha Rachane

1. ತ್ಯಾಜ್ಯ ವಸ್ತುಗಳ ನಿರ್ವಹಣೆ ಸಮಸ್ಯೆ

ನಗರ ಪ್ರದೇಶಗಳಲ್ಲಿ ತ್ಯಾಜ್ಯವಸ್ತುಗಳ ನಿರ್ವಹಣೆಯು ಬಹುದೊಡ್ಡ ಸಮಸ್ಯೆಯಾಗಿದೆ. ನಾವು ‘ಕಸ’ ಎಂದು ಬಿಸಾಡುವ ಅನೇಕ ವಸ್ತುಗಳನ್ನು ಎಲ್ಲಿಗೆ ಕೊಂಡೊಯ್ಯಬೇಕು? ಏನು ಮಾಡಬೇಕೆಂಬುದೇ ಬಗೆಹರಿಯದ ಸಮಸ್ಯೆಯಾಗಿದೆ. ಕಸವಿಲೇವಾರಿ ತಡವಾದರೆ ಉಂಟಾಗುವ ಪರಿಸರ ಮಾಲಿನ್ಯ ಮತ್ತು ಸಾಂಕ್ರಾಮಿಕ ರೋಗಗಳ ಹಾವಳಿ ಉಂಟುಮಾಡುವ ಪರಿಣಾಮಗಳು ಘೋರತರವಾದುದು.

ನಗರ ಪ್ರದೇಶದ ಜನರು ತ್ಯಾಜ್ಯ ವಸ್ತುಗಳನ್ನು ನಿರ್ವಹಣೆ ಮಾಡುವುದೆಂದರೆ ರಾಶಿರಾಶಿಗೊಂಡ ಕಸವನ್ನು ಗ್ರಾಮಾಂತರ ಪ್ರದೇಶಗಳಿಗೆ ತೆಗೆದುಕೊಂಡು ಹೋಗಿ ತೆರೆದ ಬಯಲಿನಲ್ಲಿ ಸುರಿದು ಬರುವುದು ಎಂದುಕೊಂಡಿದ್ದಾರೆ. ಯಾವ ಊರಿಗೆ ಹೋದರೂ ಅಲ್ಲಿ ನಮ್ಮನ್ನು ಮೊದಲು ಸ್ವಾಗತಿಸುವುದು ಕೊಳೆತು ನಾರುತ್ತಿರುವ ಕಸದ ರಾಶಿಗಳೇ. ಈ ಬಗ್ಗೆ ಜನರು ಎಚ್ಚೆತ್ತುಕೊಂಡು ಇದನ್ನು ನಿಯಂತ್ರಿಸಬೇಕಾಗಿದೆ. ಗ್ರಾಮಸ್ಥರು ಒಂದಾಗಿ ನಗರ ತ್ಯಾಜ್ಯ ನಿರ್ವಹಣೆಯ ರೀತಿಯನ್ನು ಪ್ರತಿಭಟಿಸುತ್ತಿರುವುದು ಒಂದು ಆಶಾದಾಯಕವಾದ ಬೆಳವಣಿಗೆಯಾಗಿದೆ.

ನಗರ ಪ್ರದೇಶಗಳಲ್ಲೂ ಜಾಗೃತ ನಾಗರಿಕರು ಡೈಲಿ ಡಂಪ್ (Daily Dump) ನಂತಹ ಯೋಜನೆಗಳನ್ನು ಹುಟ್ಟುಹಾಕಿ, ತಮ್ಮದೇ ಆದ ರೀತಿಯ ಪ್ರಯತ್ನದಲ್ಲಿ ತೊಡಗಿರುವುದೂ ಕೂಡ ಉತ್ತಮ ಬೆಳವಣಿಗೆಯೇ ಸರಿ, ಆಳುವವರು-ಆಳಿಸಿಕೊಳ್ಳುವವರೆಂಬ ಭೇದಭಾವಗಳಿಲ್ಲದೆ ಭೂಮಿಯನ್ನು ಮೂಲ ಸ್ವರೂಪದಲ್ಲಿ ಉಳಿಸಿಕೊಳ್ಳಬೇಕೆಂಬ ಕಾಳಜಿಯುಳ್ಳವರೆಲ್ಲರೂ ಒಂದಾಗಿ ಕೈಜೋಡಿಸಬೇಕಾಗಿದೆ.

ಎಲ್ಲರಲ್ಲಿಯೂ ಉತ್ತಮ ತ್ಯಾಜ್ಯ ನಿರ್ವಹಣೆಯ ಅರಿವನ್ನು ಮೂಡಿಸುವಂತಹ ಕೆಲಸ ವಿಸ್ತ್ರತಗೊಳ್ಳಬೇಕು. ಇದು ಮೊದಲನೆಯ ಹೆಜ್ಜೆ. ಕಸವನ್ನು ಮೂಲದಲ್ಲಿಯೇ ವಿಂಗಡಿಸುವುದು, ಕಡಿಮೆ ಸಾಗಾಟ, ಉತ್ಕೃ ಷ್ಟಮಟ್ಟದ ಪರಿಷ್ಕರಣೆ-ಇವೆಲ್ಲವನ್ನೂ ಉತ್ತಮ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಸ್ವರೂಪ ಒಳಗೊಂಡಿರಬೇಕು. ಕೆಲವನ್ನು ಮುಂದಿನಂತೆ ಯೋಚಿಸಬಹುದು.

ಮೂಲದಲ್ಲಿಯೇ ವಿಂಗಡಿಸುವುದು-ಸಂಗ್ರಹಿಸುವುದು: ಕಸವು ಉತ್ಪಾದನೆಯಾಗುವಲ್ಲಿಯೇ ವಿವಿಧ ರೀತಿಯ ತ್ಯಾಜ್ಯಗಳನ್ನು ಪ್ರತ್ಯೇಕಿಸಿ ಸಂಗ್ರಹಿಸಿದರೆ, ಅವುಗಳನ್ನು ಮುಂದಿನ ನಿರ್ವಹಣೆಗೆ ಕೊಡುವುದು ಅತ್ಯಂತ ಮಹತ್ತ್ವದ-ಯೋಗ್ಯ ವಾದ ಹೆಜ್ಜೆ. ಹೀಗೆ ಮಾಡದೆ ಎಲ್ಲವನ್ನೂ ಕಲಸುಮೇಲೋಗರ ಮಾಡಿ ಎಸೆದರೆ, ಅವುಗಳನ್ನು ವಿಂಗಡನೆ ಮಾಡುವುದೇ ಕಷ್ಟದ ಕೆಲಸ. ಇಂದು ವಿಂಗಡನೆಗೊಳ್ಳದ ಮಿಶ್ರತ್ಯಾಜ್ಯಗಳು ಹೆಚ್ಚಾಗಿ ಪರಿಷ್ಕೃತಗೊಳ್ಳದೆ ಎಸೆಯಲ್ಪಡುತ್ತಿವೆ (landfill), ಇದರಿಂದ ಪರಿಸರಕ್ಕೆ ಊಹೆಗೆ ಮೀರಿದ ಹಾನಿ ಸಂಭವಿಸುತ್ತಿವೆ.

ಇನ್ನು ಕೆಲವೆಡೆ ಮಿಶ್ರತ್ಯಾಜ್ಯ ರಾಶಿಯಿಂದ ಉಪಯುಕ್ತ/ ಲಾಭದಾಯಕ ವಸ್ತುಗಳನ್ನು ಪ್ರತ್ಯೇಕಿಸಲು ಮುಗ ಮಕ್ಕಳು ಆರೋಗ್ಯ-ಶಿಕ್ಷಣದ ಪರಿವೆಯಿಲ್ಲದೆ ಕಸದ ರಾಶಿಯ ನಡುವೆ ದುಡಿಯುತ್ತಿದ್ದಾರೆ. ಹೀಗಾಗದಂತೆ ತಡೆಯಬೇಕಾದರೆ ಪ್ರತಿಯೊಬ್ಬರೂ ಕಸವನ್ನು ವಿಂಗಡಿಸುವುದು ತಮ್ಮ ಜವಾಬ್ದಾರಿಯೆಂದು ಅರಿತು, ಕಾರ್ಯಪ್ರವೃತ್ತರಾಗಬೇಕು. ಘನತ್ಯಾಜ್ಯಗಳಲ್ಲಿ ಕಾಗದ, ಗಾಜು, ಲೋಹಗಳು, ಪ್ಲಾಸ್ಟಿಕ್, ಇತ್ಯಾದಿಗಳನ್ನು ಮೂಲದಲ್ಲಿಯೇ ವಿಂಗಡಿಸಬಹುದಲ್ಲವೇ?

ತ್ಯಾಜ್ಯ ವಿಂಗಡನೆ ಎಂದರೇನೆಂಬುದನ್ನು ಮೊದಲು ತಿಳಿಯೋಣ: ತ್ಯಾಜ್ಯ ವಸ್ತುಗಳನ್ನು ವಿಂಗಡಿಸುವಾದ ಮೊದಲು ನಮಗಿರಬೇಕಾದ ತಿಳಿವಳಿಕೆಯೆಂದರೆ, ನಮ್ಮ ಮನೆಗಳಲ್ಲಿ ಉತ್ಪಾದನೆಗೊಳ್ಳುವ ತ್ಯಾಜ್ಯಗಳಲ್ಲಿ ಯಾವುದು ಸುಲಭವಾಗಿ ತಾನಾಗಿಯೇ ಮರಳಿ ಪ್ರಕೃತಿಯ ಪಂಚಭೂತಗಳಲ್ಲಿ ವಿಲೀನ(bio-degradable)ವಾಗುತ್ತವೆ? ಯಾವುದು ಆಗುವುದಿಲ್ಲ? ಎಂಬುದರ ತಿಳಿವಳಿಕೆ ಅತಿಮುಖ್ಯ ವಿಷಕಾರಿಯಾಗುವಂಥದ್ದು-ಆಗದಿರುವಂಥದ್ದು, ಪರಿಷ್ಕರಿಸಿದಾಗ ಒಳಿತುಂಟಾಗುವಂಥದ್ದು-ಆಗದೆ ಇರುವಂಥದ್ದು ಈ ಬಗೆಯ ಅರಿವನ್ನು ಮೂಡಿಸುವ ಪ್ರಯತ್ನ ಮೊದಲಾಗಬೇಕು. ಹೀಗೆ ತ್ಯಾಜ್ಯಗಳನ್ನು ಹಲವು ರೀತಿಯಲ್ಲಿ ವಿಂಗಡಿಸುವುದನ್ನು ಮೊದಲು ಕಲಿಸಿದಲ್ಲಿ ಅವುಗಳ ನಿರ್ವಹಣೆಗೆ ತುಂಬಾ ಸಹಾಯವಾಗುತ್ತದೆ. ಘನತ್ಯಾಜ್ಯಗಳು, ಆಹಾರ ಮತ್ತಿತರ ಸಸ್ಯಮೂಲದ/ಪ್ರಾಣಿಮೂಲದ ತ್ಯಾಜ್ಯಗಳು, ರಾಸಾಯನಿಕಗಳನ್ನೊಳಗೊಂಡ ತ್ಯಾಜ್ಯಗಳು, ಇತರೆ ತ್ಯಾಜ್ಯಗಳು – ಇವೆಲ್ಲದರ ವಿಂಗಡಣೆಯ ಅರಿವು ಬಹಳ ಮುಖ್ಯ ಹಳೇ ಲೋಹದ ವಸ್ತುಗಳು, ನ್ಯೂಸ್ ಪೇವರ್‌ಗಳು, ಹಾಲಿನ ಪ್ಯಾಕೆಟ್, ಒಡೆದ ಗಾಜಿನ ಬಾಟಲ್ ಇತ್ಯಾದಿಗಳನ್ನು ಕಸದ ರಾಶಿಯಲ್ಲಿ ಸೇರಿಸದೆ ರದ್ದಿಯವರಿಗೆ ಮಾರುವುದು ಒಳ್ಳೆಯದು. ಇತ್ತೀಚೆಗೆ ಆಹಾರ ತ್ಯಾಜ್ಯ ಇತ್ಯಾದಿಗಳನ್ನೂ ಈ ವಿಭಾಗಕ್ಕೆ ಸೇರಿಸಿ, ತ್ಯಾಜ್ಯ ಆಹಾರಗಳಿಂದ ಶಕ್ತಿ, ಉತ್ತಮ ಗೊಬ್ಬರವನ್ನು ಪಡೆಯಲಾಗುತ್ತಿವೆ.

ತ್ಯಾಜ್ಯವಸ್ತುಗಳ ಪರಿಷ್ಕರಣೆಯ ಅಗತ್ಯ: ತ್ಯಾಜ್ಯವಸ್ತುಗಳನ್ನು ವಿಂಗಡಿಸುವುದು ಮೊದಲ ಹಂತವಾದರೆ, ಅದರಷ್ಟೇ ಮುಖ್ಯವಾದುದು ಉತ್ಕೃಷ್ಟಮಟ್ಟದ ಪರಿಷ್ಕರಣೆ. ಇದು ನಿರ್ವಹಣೆಯ ಬಹುಮುಖ್ಯ ಅಂಶವೂ ಹೌದು, ಉಳಿದುವೆಲ್ಲ ಬೆಂಬಲಿಸುವ ಅಂಶಗಳು ಮಾತ್ರ (supporting factors). ಮರುಬಳಕೆಯಾಗಬಲ್ಲ ಪದಾರ್ಥಗಳನ್ನು ಪ್ರತ್ಯೇಕಗೊಳಿಸುವುದು, ಉಪಯೋಗಿಸುವುದು (recycle). ಈ ಪ್ರಕ್ರಿಯೆಯಲ್ಲಿ ತ್ಯಾಜ್ಯದಲ್ಲಿ ಅಡಕವಾಗಿರುವ ‘ಶಕ್ತಿ’ಯನ್ನು ಸಾಧ್ಯವಾದಷ್ಟು ಪಡೆಯುವುದು (ಉದಾ: ಇಂಧನವಾಗಿ ಉಪಯೋಗಿಸಲು ಸಾಧ್ಯವಿರುವ ದಹನ ಅನಿಲ), ಉಳಿದ ತ್ಯಾಜ್ಯವನ್ನು ಜಾಗರೂಕತೆಯಿಂದ ಸಂಸ್ಕರಿಸಿ ಯಾರಿಗೂ ಹಾನಿಕಾರಕವಲ್ಲದ ಪದಾರ್ಥಗಳನ್ನಾಗಿ ವಿಂಗಡಿಸುವುದು, ವಿಷಪದಾರ್ಥಗಳನ್ನು ಭಗತಗೊಳಿಸುವುದು – ಈ ಎಲ್ಲದರ ಬಗ್ಗೆ ಸಂಶೋಧನೆ ನಡೆಯಬೇಕು.

ತ್ಯಾಜ್ಯ ಉತ್ಪಾದನೆಯನ್ನು ಕಡಿಮೆ ಮಾಡುವ ಜವಾಬ್ದಾರಿ: ಇದರ ಬಗ್ಗೆ ನಾವೆಲ್ಲ ಗಂಭೀರವಾಗಿ ಯೋಚಿಸಬೇಕು. ಇದು ಸಮಸ್ಯೆಯನ್ನು ಅರ್ಧ ಕಡಿಮೆ ಮಾಡುತ್ತದೆ. ರೋಗವನ್ನು ಗುಣಪಡಿಸುವುದಕ್ಕಿಂತ ರೋಗ ಬರದಂತೆ ಎಚ್ಚರ ವಹಿಸುವುದು ಉತ್ತಮ, ತ್ಯಾಜ್ಯದ ಉತ್ಪಾದನೆಯನ್ನು ಕಡಿಮೆ ಮಾಡಿ, ಅದರ ವಿಲೇವಾರಿಯ ಬಗ್ಗೆ ನಿಶ್ಚಿಂತೆಯಿಂದ ಇರಬಹುದು. ಅಗತ್ಯ-ಆಸೆ-ದುರಾಶೆಗಳ ತುಲನೆ ಮಾಡಿ ಅನಗತ್ಯ ವಸ್ತುಗಳ ಬಳಕೆಯನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಬಹುದು. ಸಾಧ್ಯವಾದಷ್ಟೂ ಪರಿಸರ ಸ್ನೇಹಿಯಾದ ಉತ್ಪನ್ನಗಳನ್ನೇ ಬಳಸಬೇಕು. ಉತ್ಪಾದನೆ, ಸಾಗಾಟದ ದೃಷ್ಟಿಯಿಂದಲೂ ಪರಿಸರಸ್ನೇಹಿ ಉತ್ಪನ್ನಗಳಾಗಿರಬೇಕು. ಮರುಬಳಕೆಯ ಬಗ್ಗೆ ಯೋಚಿಸುವುದು, ಹಾಳಾದವನ್ನು ಎಸೆದು ಹೊಸದನ್ನು ತೆಗೆದುಕೊಳ್ಳುವ ಬದಲು, ರಿಪೇರಿ ಮಾಡಿಸಿ ಬಳಸುವುದು, ಬೇಡವಾದ ಉಪಯುಕ್ತ ವಸ್ತುಗಳನ್ನು ಇತರರಿಗೆ ಅಗತ್ಯವಿರುವವರಿಗೆ ಉಪಯೋಗಿಸಲು ಕೊಡುವುದು – ಎಷ್ಟೆಲ್ಲಾ ರೀತಿಯಲ್ಲಿ ತ್ಯಾಜ್ಯ ಉತ್ಪಾದನೆಯನ್ನು ಕಡಿಮೆಗೊಳಿಸಲು ಅವಕಾಶವಿದೆ. ಎಲ್ಲವನ್ನೂ ಸರ್ಕಾರವೇ ಸರಿಪಡಿಸಲೆಂದು ಯೋಚಿಸುವುದು ಸರಿಯಲ್ಲ. ನಮ್ಮ ಜವಾಬ್ದಾರಿಯನ್ನೂ ಅರಿತು ನಡೆಯುವುದು ಸರಿಯಾದ ದಾರಿ.

2. ಮಹಾತ್ಮರ ಜಯಂತಿ

ದೇಶದ, ಸಮಾಜದ, ಮಾನವಧರ್ಮದ ಒಳಿತಿಗಾಗಿ ಜೀವನವನ್ನು ಸಮರ್ಪಿಸಿಕೊಂಡ ವ್ಯಕ್ತಿಗಳೇ ಮಹಾಪುರುಷರು. ಈ ಮಹಾಪುರುಷರು ಇಲ್ಲವಾದಮೇಲೆ ಆಚರಿಸುವ ಅವರ ಹುಟ್ಟುಹಬ್ಬವೇ ಜಯಂತಿ, ಜೀವಂತವಿದ್ದಾಗ ಆಚರಿಸುವುದು ವರ್ಧಂತಿ. ಈ ಮಹಾಪುರುಷರಿಗೆ ಗೌರವ ಸೂಚಿಸುವ ಸಲುವಾಗಿ ಅವರ ಜಯಂತಿಯನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸಲಾಗುತ್ತದೆ. ಇದು ಹೆಚ್ಚು ಮಹತ್ವ ಪಡೆದಿರುವುದು ನಮ್ಮ ದೇಶದಲ್ಲಿ.

ಮಹಾಪುರುಷರ ಜಯಂತಿಯ ಉದ್ದೇಶ ಆ ವ್ಯಕ್ತಿಗಳನ್ನು ಕೇವಲ ಸ್ಮರಿಸುವುದು, ಗೌರವಿಸುವುದು ಅಲ್ಲ, ಬದಲಾಗಿ ಅವರ ಜೀವನ ಸಾಧನೆ, ಆದರ್ಶಗಳನ್ನು ಸಮಾಜಕ್ಕೆ ಪರಿಚಯಿಸುವುದು. ಆ ಮೂಲಕ ತಲೆಮಾರಿನಿಂದ ತಲೆಮಾರಿಗೆ ಅವರು ಹೇಳಿದ ಮೌಲ್ಯಗಳನ್ನು ದಾಟಿಸುವುದೇ ಆಗಿದೆ. ಇದು ಉಂಟುಮಾಡಬಲ್ಲ ಪ್ರೇರಣೆ, ಪರಿಣಾಮಗಳನ್ನು ಗಮನಿಸಿ ಮಹಾಪುರುಷರ ಜಯಂತಿಗೆ ದೇಶ ಮಹತ್ವ, ನೀಡಿದೆ. ಸಭೆಗಳ ಮೂಲಕ, ಭಾಷಣಗಳ ಮೂಲಕ, ಭಜನೆಗಳ ಮೂಲಕ, ಸ್ಪರ್ಧೆಗಳ ಮೂಲಕ, ಸಮಾಜ ಸೇವಾ ಕಾರ್ಯಕ್ರಮಗಳನ್ನು ಆಚರಿಸುವ ಸಂಪ್ರದಾಯ ಬೆಳೆದು ಬಂದಿದೆ. ಈ ಹಿನ್ನೆಲೆಯಲ್ಲಿ ನಮ್ಮ ದೇಶದಲ್ಲಿ ವಾಲ್ಮೀಕಿ, ಬುದ್ಧ, ಮಹಾವೀರ, ಬಸವ, ಕನಕ, ವಿವೇಕಾನಂದ, ಅಂಬೇಡ್ಕರ್, ಗಾಂಧಿ ಮೊದಲಾದ ಮಹಾಪುರುಷರ ಜಯಂತಿಯನ್ನು ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿದ್ದೇವೆ.

ಕಾಲ ಬದಲಾಗಿದೆ. ಸಮಾಜ ಬದಲಾಗಿದೆ. ವ್ಯಕ್ತಿ ಬದಲಾಗಿದ್ದಾನೆ. ಆತ್ಮೀಯತೆ ಔಪಚಾರಿಕವಾಗುತ್ತಿದೆ. ಮಾನವೀಯ ಸಂಬಂಧಗಳು ವ್ಯಾವಹಾರಿಕವಾಗುತ್ತಿದೆ. ಸರಕು ಸಂಸ್ಕೃತಿಯ ಈ ಕಾಲದಲ್ಲಿ ಮನುಷ್ಯನೇ ವ್ಯಾಪಾರದ ವಸ್ತುವಾಗುತ್ತಿರುವ ಭೀಕರ ಸನ್ನಿವೇಶ ಕಾಣುತ್ತಿದ್ದೇವೆ. ಆಚರಣೆಗಳ ಲಾಭ-ನಷ್ಟವೇ ಮುಖ್ಯವಾಗುತ್ತಿರುವ ಈ ಕಾಲಘಟ್ಟದಲ್ಲಿ ಆಚರಣೆಗಳು ಅರ್ಥ ಕಳೆದುಕೊಳ್ಳುತ್ತಿವೆ. ಕಾಟಾಚಾರದ ಆಚರಣೆಗೆ ಸೀಮಿತವಾಗಿಬಿಟ್ಟಿದೆ. ಇದರಿಂದಾಗಿ ಮಹಾಪುರುಷರ ವ್ಯಕ್ತಿತ್ವ ಜನರ ಮನಸ್ಸಿನಿಂದ ಕಣ್ಮರೆಯಾಗುವ ದುರಂತ ಸನ್ನಿವೇಶ ನಿರ್ಮಾಣವಾಗಿದೆ. ಹಾಗಾಗಿ ಮಹಾಪುರುಷರ ಜಯಂತಿ ಅರ್ಥಪೂರ್ಣವಾಗಬೇಕಾದರೆ ನಮ್ಮ ಧೋರಣೆ ಬದಲಾಗಬೇಕು. ಅವರ ಜೀವನ ಮತ್ತು ಆದರ್ಶ ನಮಗೆ ಮಾದರಿಯಾಗಬೇಕು. ಅವರು ಹೇಳಿದ ಮೌಲ್ಯಗಳು ನಮ್ಮ ಜೀವನದ ಭಾಗವಾಗಬೇಕು. ನಮ್ಮ ನಡೆ-ನುಡಿಯ ನಡುವಿರುವ ಅಂತರ ಹೋಗಿ ಶುದ್ಧವ್ಯಕ್ತಿತ್ವ ರೂಪುಗೊಂಡಾಗ ಮಾತ್ರ ಅಚರಣೆಗೆ ಅರ್ಥಬರುತ್ತದೆ. ತೋರಿಕೆಗಾಗಿ ಮಾಡುವ ಆಚರಣೆ ನಿಷ್ಟ್ರಯೋಜಕ ಎಂಬ ಶರಣರ ಮಾತು ಎಚ್ಚರದ ವಾಣಿಯಾಗಿ ನಮ್ಮ ಜೊತೆಗಿರಬೇಕು.

3. ಮತದಾನದ ಜಾಗೃತಿ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವು ಒಂದು ಅತ್ಯಂತ ಪ್ರಮುಖವಾದ ಅಂಶವಾಗಿದೆ. ಮತದಾನದ ಮೂಲಕವೇ ಜನಸಾಮಾನ್ಯರು ತಮ್ಮ ಪ್ರತಿನಿಧಿಗಳನ್ನು, ತನ್ಮೂಲಕ ಸರ್ಕಾರವನ್ನು ಚುನಾಯಿಸಬೇಕಾಗಿರುತ್ತದೆ. ಆದರೆ ಹಲವಾರು ಕಾರಣಗಳಿಂದಾಗಿ ಜನರು ಇತ್ತೀಚಿಗೆ ತಮ್ಮ ಮತವನ್ನು ಚಲಾಯಿಸುವುದರ ಬಗ್ಗೆ ನಿರಾಸಕ್ತಿಯನ್ನು ತಾಳುತ್ತಿದ್ದಾರೆ. ಇದರಿಂದಾಗಿ ಸುಸ್ಥಿರವಾದ ಸರ್ಕಾರದ ರಚನೆಗೆ ತೊಂದರೆಯಾಗುತ್ತಿದೆ. ಆದ್ದರಿಂದ ಚುನಾವಣಾ ಆಯೋಗವೂ ಸೇರಿದಂತೆ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಸಾರ್ವಜನಿಕರಲ್ಲಿ ಮತದಾನದ ಹಕ್ಕನ್ನು ಚಲಾಯಿಸುವ ಬಗ್ಗೆ ಜಾಗೃತಿಯನ್ನು ಉಂಟುಮಾಡುವ ಹಲವಾರು ಕಾಠ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ.

ಮತದಾನವು ಪ್ರತಿಯೊಬ್ಬ ಪ್ರಜೆಯ ಹಕ್ಕು, ಈ ಹಕ್ಕನ್ನು ಆತ ನಿರ್ಭೀತಿಯಿಂದ ಮತ್ತು ತನ್ನ ಮನಸ್ಸಿಗೆ ಬೇಕೆನಿಸಿದ ರೀತಿಯಲ್ಲಿ ಚಲಾಯಿಸಲು ಬೇಕಾದ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿಕೊಟ್ಟಿರುತ್ತದೆ. ಆದರೂ ಪಟ್ಟಭದ್ರ ಹಿತಾಸಕ್ತಿಗಳು ಹಣ, ವಸ್ತು, ಮಾದಕದ್ರವ್ಯ ಮುಂತಾದವುಗಳ ಆಮಿಷವನ್ನು ಒಡ್ಡಿ ಮತವನ್ನು ಖರೀದಿಸುವ ಯತ್ನವನ್ನು ನಡೆಸುತ್ತವೆ. ಕೆಲವೊಮ್ಮೆ ಹಿಂಸೆ ಮತ್ತು ಭಯೋತ್ಪಾದನೆಯ ಮೂಲಕ ಜನರು ಮತಗಟ್ಟೆಗಳಿಗೆ ಹೋಗುವುದನ್ನು ನಿರ್ಬಂಧಿಸಿ ಮತದಾನ ನಡೆಯದಂತೆ ಮಾಡುವ ಪ್ರಯತ್ನವೂ ನಡೆಯುತ್ತದೆ. ಈ ಎಲ್ಲದರ ವಿರುದ್ಧವೂ ಜನಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸಬೇಕಾದ ಅಗತ್ಯವಿದೆ.

ಬಹಳಷ್ಟು ಅವಿದ್ಯಾವಂತರು ಹಾಗೂ ಸಮಾಜದ ಕೆಳವರ್ಗಗಳ ಜನರು ತಮ್ಮ ಬಡತನ ಮತ್ತು ಮೌಡ್ಯದ ಕಾರಣದಿಂದಾಗಿ ಮತದಾನದ ಹಕ್ಕನ್ನು ದುರುಪಯೋಗ ಮಾಡಿಕೊಳ್ಳುತ್ತಾರಾದರೆ ಬಹಳಷ್ಟು ವಿದ್ಯಾವಂತರು ಅನಾಸಕ್ತಿ ಮತ್ತು ಬೇಜವಾಬ್ದಾರಿತನದಿಂದ ಮತದಾನದಿಂದ ದೂರ ಉಳಿಯುತ್ತಾರೆ. “ರಾಜಕಾರಣಿಗಳೆಲ್ಲರೂ ಭ್ರಷ್ಟರು, ಯಾರನ್ನು ಆಯ್ಕೆ ಮಾಡಿದರೂ ಪರಿಸ್ಥಿತಿ ಏನೂ ಬದಲಾಗದು. ಆದ್ದರಿಂದ ಸುಮ್ಮನೆ ವೋಟ್ ಮಾಡುವುದರಿಂದ ಏನು ಪ್ರಯೋಜನ?” ಎಂದೆಲ್ಲಾ ಯೋಚಿಸುವ ಇವರು ಚುನಾವಣಾ ದಿನದಂದು ರಜೆಯ ಮಜವನ್ನು ಅನುಭವಿಸುವ ಬಗ್ಗೆ ಚಿಂತಿಸುವರೇ ವಿನಃ ಮತಗಟ್ಟೆಗೆ ಹೋಗುವುದಿಲ್ಲ. ಹಾಗಾಗಿಯೇ ಅವಿದ್ಯಾವಂತರು ಇರುವ ಸ್ಥಳಗಳಿಗಿಂತ ವಿದ್ಯಾವಂತರು ವಾಸಿಸುವ ಪ್ರದೇಶಗಳಲ್ಲಿಯೇ ಮತದಾನದ ಪ್ರಮಾಣ ಬಹುತೇಕ ಸಂದರ್ಭಗಳಲ್ಲಿ ಕಡಿಮೆಯಿರುತ್ತದೆ. ಈ ಪರಿಸ್ಥಿತಿ ಬದಲಾಗಬೇಕಿದೆ. ತಾನು ನೀಡುವ ಪ್ರತಿಯೊಂದು ಮತವೂ ಸದೃಢವಾದ ಸಮಾಜ ಮತ್ತು ಸರಕಾರದ ರಚನೆಯಲ್ಲಿ ಪರಿಣಾಮಕಾರಿಯಾದ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಪ್ರತಿಯೊಬ್ಬ ನಾಗರೀಕನೂ ಅರ್ಥಮಾಡಿಕೊಳ್ಳಬೇಕಿದೆ. ಆದ್ದರಿಂದ ಮತದಾನದ ಹಕ್ಕಿನ ಬಗ್ಗೆ ಜಾಗೃತಿಯನ್ನು ಮೂಡಿಸಬೇಕಾದ ಕಾಯವನ್ನು ಎಲ್ಲೆಡೆ ಕೈಗೊಳ್ಳಲಾಗುತ್ತಿದೆ.

ಕರಪತ್ರ, ಭಿತ್ತಿಪತ್ರ, ಬೀದಿ ನಾಟಕ, ಗೀತಗಾಯನ, ಜಾಹೀರಾತು ಮುಂತಾದ ಮಾಧ್ಯಮಗಳನ್ನು ಬಳಸಿ ಮತದಾನದ ಪ್ರಾಮುಖ್ಯತೆಯನ್ನು ನಾಗರೀಕರಿಗೆ ವಿವರಿಸುವ ಪ್ರಯತ್ನ ಮಾಡಲಾಗುತ್ತದೆ. ಇದರೊಂದಿಗೆ ಇತ್ತೀಚಿನ ಲೋಕಸಭಾ ಚುನಾವಣೆಯ ಸಮಯದಲ್ಲಿ ಅಂಚೆ ಕಛೇರಿಯಲ್ಲಿ ಪತ್ರಗಳ ಮೇಲೆ ‘ಮತದಾನ ನಿಮ್ಮ ಹಕ್ಕು, ಅದನ್ನು ತಪ್ಪದೆ ಚಲಾಯಿಸಿ’ ಎಂಬ ಮುದ್ರೆಯನ್ನು ಒತ್ತುವುದರ ಮೂಲಕ, ಹಾಲಿನ ಪ್ಯಾಕೆಟ್‌ನ ಮೇಲೆಯೂ ಇಂತಹುದೇ ಹೇಳಿಕೆಗಳನ್ನು ಮುದ್ರಿಸುವ ಮೂಲಕ ವಿನೂತನವಾದ ರೀತಿಯಲ್ಲಿ ಜಾಗೃತಿಯನ್ನು ಮೂಡಿಸುವ ಪ್ರಯತ್ನ ನಡೆದಿದೆ. ಇದೆಲ್ಲದರಿಂದಾಗಿ ಮತದಾನದ ಪ್ರಮಾಣ ಹೆಚ್ಚಾದಲ್ಲಿ ಎಲ್ಲರ ಶ್ರಮ ಸಾರ್ಥಕವಾಗುತ್ತದೆ.

4. ತ್ಯಾಜ್ಯವಸ್ತುಗಳ ಮರುಬಳಕೆಯ ಅಗತ್ಯತೆ

ಒಮ್ಮೆ ಬಳಸಿದ ನಂತರ ನಿರುಪಯುಕ್ತವೆಂದು ಎಸೆಯಲಾಗುವ ವಸ್ತುಗಳೇ ತ್ಯಾಜ್ಯವಸ್ತುಗಳು, ಆದರೆ ಪುನಃ ಬಳಸಲಾಗದವು ಎಂದು ಭಾವಿಸಲಾಗುವ ಅನೇಕ ವಸ್ತುಗಳನ್ನು ಸ್ವಲ್ಪ ಪ್ರಯತ್ನದಿಂದ ಪುನಃ ಬಳಸುವುದು ಸಾಧ್ಯವಿದೆ. ಇದನ್ನೇ ತ್ಯಾಜ್ಯವಸ್ತುಗಳ ಮರುಬಳಕೆ’ ಎನ್ನಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಇಂತಹ ಮರುಬಳಕೆಯ ಅಗತ್ಯ ಹೆಚ್ಚಾಗಿದೆ. ಅಂತಹ ಹಲವು ಸಾಧ್ಯತೆಗಳನ್ನು ನೋಡೋಣ.

ಮೊತ್ತ ಮೊದಲನೆಯಾದಾಗಿ ಮರುಬಳಸಬಹುದಾದ ಅತ್ಯಂತ ಅಮೂಲ್ಯವಾದ ವಸ್ತುವೆಂದರೆ ನೀರು ಭೂಮಿಯ ಮೇಲ್ಪದರದಲ್ಲಿ ಬಹುಪಾಲು ನೀರೇ ತುಂಬಿದ್ದರೂ ಉಪಯೋಗಕ್ಕೆ ಯೋಗ್ಯವಾದ ಕುಡಿಯುವ ನೀರಿನ ಲಭ್ಯತೆ ಬಹಳ ಕಡಿಮೆ. ಹಾಗಾಗಿ ಲಭ್ಯವಿರುವ ಉತ್ತಮ ಗುಣಮಟ್ಟದ ನೀರನ್ನು ಬಹಳ ನಾಜೂಕಾಗಿ ಮತ್ತು ಜತನದಿಂದ ಬಳಸಬೇಕಾದ ಅಗತ್ಯವಿದೆ. ಬಹಳ ಕಷ್ಟಪಟ್ಟು ಶುದ್ದೀಕರಿಸಿದ ಕುಡಿಯುವ ನೀರನ್ನು ಜನರು ವಾಹನಗಳನ್ನು ತೊಳೆಯಲು, ಗಿಡಮರಗಳನ್ನು ಬೆಳೆಸಲು, ಕಟ್ಟಡಗಳನ್ನು ನಿರ್ಮಿಸಲು ಮುಂತಾದ ಕಾವ್ಯಗಳಿಗೆ ಬಳಸುವುದನ್ನು ನಾವು ಕಾಣುತ್ತೇವೆ. ಈ ಪದ್ಧತಿ ಬದಲಾಗಬೇಕು. ವಿದೇಶಗಳಲ್ಲಿ ಈ ಎಲ್ಲ ಕಾರಗಳಿಗೆ ಕಡ್ಡಾಯವಾಗಿ ಸ್ನಾನ ಮಾಡಿದ ಅಥವಾ ಬಟ್ಟೆ ಒಗೆಯಲು ಬಳಸಿದ ನೀರನ್ನು ಪುನು ಬಳಸಲಾಗುತ್ತದೆ. ಈ ವಿಧಾನವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳುವುದರಿಂದ ಅಮೂಲ್ಯ ವಾದ ಜಲಸಂಪತ್ತನ್ನು ರಕ್ಷಿಸುವುದು ಸಾಧ್ಯವಿದೆ.

ಇದೇ ರೀತಿಯಾಗಿ ಮರುಬಳಸಬಹುದಾದ ಮತ್ತೊಂದು ಅಮೂಲ್ಯ ಸಂಪತ್ತೆಂದರೆ ಕಾಗದ ನಮಗೆಲ್ಲ ತಿಳಿದಿರುವಂತೆ ಸಾವಿರಾರು ಎಕರೆ ಕಾಡನ್ನು ಕಡಿದು ಕಾಗದವನ್ನು ತಯಾರಿಸಲಾಗುತ್ತದೆ. ಅಷ್ಟೇ ಅಲ್ಲದೆ ಕಾಗದವನ್ನು ತಯಾರಿಸಲು ಅವಾರ ಪ್ರಮಾಣದ ವಿದ್ಯುತ್‌, ನೀರು ಮುಂತಾದವುಗಳೂ ಬೇಕು. ಇಷ್ಟೆಲ್ಲಾ ಶ್ರಮ ಮತ್ತು ಖರ್ಚಿನ ನಂತರ ಉತ್ಪಾದನೆಯಾದ ಕಾಗದವನ್ನು ನಾವು ಒಮ್ಮೆ ಮಾತ್ರ, ಕೆಲವೊಮ್ಮೆ ಕೇವಲ ಒಂದು ಬದಿಯನ್ನು ಬಳಸಿ ಬಿಸಾಡುವುದು ಖಂಡಿತ ತಪ್ಪು. ಅದರ ಬದಲಿಗೆ ಕಾಗದದ ಎರಡೂ ಬದಿಗಳನ್ನು ಬರೆಯಲು ಅಥವಾ ಮುದ್ರಿಸಲು ಬಳಸುವುದು ಉತ್ತಮ ವಿಧಾನ. ಅಷ್ಟೇ ಅಲ್ಲದೆ ಹೀಗೆ ಬಳಸಲಾದ ಕಾಗದವನ್ನು ನೆನೆಸಿ, ರುಬ್ಬಿ, ಪುನಃ ಕಾಗದವಾಗಿ ಬಳಸಲು ಸಾಧ್ಯವಿದೆ. ಜೊತೆಗೆ ಕಾರ್ಡ್ ಬೋರ್ಡ್, ರಟ್ಟು ಮುಂತಾದವುಗಳ ತಯಾರಿಯಲ್ಲಿಯೂ ಕಾಗದವನ್ನು ಮರುಬಳಸಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ಹಸುವಿನ ಸಗಣಿ ಮತ್ತು ಗಂಜಲವನ್ನು ಮರುಬಳಸಿ ಗೋಬರ್‌ಗ್ಯಾಸನ್ನು ಉತ್ಪಾದಿಸುವ ಪದ್ಧತಿ ಹೆಚ್ಚು ಜನಪ್ರಿಯವಾಗುತ್ತಿದೆ. ಅದೇ ರೀತಿಯಲ್ಲಿ ಅಳಿದುಳಿದ ಆಹಾರ ಪದಾರ್ಥಗಳು, ಹಣ್ಣು-ತರಕಾರಿಗಳ ಸಿಪ್ಪೆ ಮುಂತಾದ ವಸ್ತುಗಳನ್ನು ಬಳಸಿ ಸಾವಯವ ಗೊಬ್ಬರವನ್ನು ತಯಾರಿಸುವ ವಿಧಾನ ಎಲ್ಲೆಡೆ ಚಾಲ್ತಿಗೆ ಬರುತ್ತಿದೆ. ಈ ಬಗೆಯ ಗೊಬ್ಬರದ ಬಳಕೆಯಿಂದಾಗಿ ಭೂಮಿಯ ಸಾರದ ಸಂರಕ್ಷಣೆಯಾಗುವುದಲ್ಲದೆ ಪ್ರಾಣಿ ಮತ್ತು ಮನುಷ್ಯರ ದೇಹದ ಒಳಗೆ ರಾಸಾಯನಿಕ ವಸ್ತುಗಳು ಪ್ರವೇಶಿಸುವ ಪ್ರಮಾಣವೂ ಕಡಿಮೆಯಾಗುತ್ತದೆ.

ಹಾಳಾದ ಯಂತ್ರಗಳಲ್ಲಿರುವ ಚೆನ್ನಾದ ಭಾಗಗಳನ್ನು ಹೊರತೆಗೆದು ಪುನು ಬಳಸಿಕೊಳ್ಳುವುದು: ಹರಿದ-ಹಾಳಾದ ಬಟ್ಟೆಯ ತುಂಡುಗಳನ್ನು ಬಳಸಿಕೊಂಡು ಕಲಾಕೃತಿಗಳನ್ನು ತಯಾರಿಸುವುದು: ಪ್ಲಾಸ್ಟಿಕ್ ತ್ಯಾಜ್ಯವನ್ನು ಪುನಃ ಬಳಸಿ ವಸ್ತುಗಳನ್ನು ತಯಾರಿಸುವುದು; ಲೋಹ ಮತ್ತು ಮರದ ವಸ್ತುಗಳನ್ನು ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಮತ್ತೆ ಬಳಸುವುದು – ಮುಂತಾದ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ತ್ಯಾಜ್ಯ ವಸ್ತುಗಳನ್ನು ಪುನಃ ಬಳಸಿಕೊಳ್ಳುವುದು ಸಾಧ್ಯ. ಇದರಿಂದಾಗಿ ಅಮೂಲ್ಯ ವಾದ ನೈಸರ್ಗಿಕ ಸಂಪನ್ಮೂಲವನ್ನು ಬಳಸುವುದು ಮಾತ್ರವಲ್ಲದೆ ಅಪಾರ ಶ್ರಮ ಮತ್ತು ವೆಚ್ಚದಿಂದ ತಯಾರಾದ ಅನೇಕ ವಸ್ತುಗಳ ಪೂರ್ಣಪ್ರಮಾಣದ ಸದುಪಯೋಗವೂ ಸಾಧ್ಯವಾಗುತ್ತದೆ.

5. ನಗರ ನೈರ್ಮಲ್ಯವನ್ನು ಕಾಪಾಡುವುದರಲ್ಲಿ ನಾಗರೀಕರ ಪಾತ್ರ

ಮನುಷ್ಯ ಆರೋಗ್ಯಕರವಾಗಿರಬೇಕಾದರೆ ಅವನು ವಾಸಿಸುವ ಪ್ರದೇಶವು ಶುದ್ಧ ಮತ್ತು ರೋಗಮುಕ್ತವಾಗಿರ ಬೇಕಾದ್ದು ಅತ್ಯಗತ್ಯ. ಹಾಗಾಗಿ ನಮ್ಮ ನಗರಗಳು ನಿರ್ಮಲವಾಗಿರಬೇಕು. ನಗರದ ನೈರ್ಮಲ್ಯವನ್ನು ಕಾಪಾಡುವ ಜವಾಬ್ದಾರಿ ಪುರಸಭೆ, ನಗರಸಭೆ ಅಥವಾ ಮಹಾನಗರಪಾಲಿಕೆಯ ಅಧಿಕಾರಿಗಳದ್ದು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಅಷ್ಟೇ ಪ್ರಮಾಣದ ಹೊಣೆಗಾರಿಕೆ ಆಯಾ ಪ್ರದೇಶಗಳಲ್ಲಿ ವಾಸಿಸುವ ನಾಗರೀಕರ ಮೇಲೆಯೂ ಇರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ.

ತ್ಯಾಜ್ಯ ವಸ್ತುಗಳ ನಿರ್ವಹಣೆ ನಗರ ನೈರ್ಮಲ್ಯದಲ್ಲಿ ಅತ್ಯಂತ ಹೆಚ್ಚಿನ ಪಾತ್ರವನ್ನು ವಹಿಸುತ್ತದೆ. ಈ ನಿಟ್ಟಿನಲ್ಲಿ ನಾಗರೀಕರ ಪಾತ್ರ ಮಹತ್ವದ್ದಾಗಿದೆ. ತ್ಯಾಜ್ಯವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಅದನ್ನು ಸಂಗ್ರಹಿಸುವುದು ಪಾಲಿಕೆಯ ನೌಕರರಿಗೆ ಕಷ್ಟವಾಗುತ್ತದೆ. ಇದರಿಂದಾಗಿ ಎಲ್ಲ ಕಡೆಗಳಲ್ಲೂ ಕಸದ ಗುಡ್ಡೆಯು ಬೆಳೆದು ರೋಗಗಳು ಹರಡಲು ಕಾರಣ ವಾಗುತ್ತದೆ. ಆದ್ದರಿಂದ ನಾಗರೀಕರು ಕಸವನ್ನು ಎಲ್ಲೆಂದರಲ್ಲಿ ಬಿಸಾಡುವ ಬದಲಿಗೆ ಅವುಗಳನ್ನು ಬೇರೆ ಬೇರೆ ಗುಂಪುಗಳಾಗಿ ವಿಂಗಡಿಸಿ ಕಸ ಸಂಗ್ರಹಿಸುವ ಗಾಡಿಗಳಿಗೆ ನೀಡುವುದರಿಂದ ನಗರ ನೈರ್ಮಲ್ಯ ಹೆಚ್ಚುತ್ತದೆ.

ನಗರ ಪ್ರದೇಶಗಳಲ್ಲಿ ಕಟ್ಟಡಗಳ ನವೀಕರಣ ಮತ್ತು ನಿರ್ಮಾಣದ ಕಾರ ನಿರಂತರವಾಗಿ ನಡೆಯುತ್ತಿರುತ್ತದೆ. ಇಂತಹ ಸಂದರ್ಭಗಳಲ್ಲಿ ಕಲ್ಲು, ಮರಳು, ಜಲ್ಲಿ ಮುಂತಾದ ವಸ್ತುಗಳನ್ನು ರಸ್ತೆ ಅಥವಾ ಫುಟ್ ಪಾತ್ ಗಳ ಮೇಲೆ ರಾಶಿಹಾಕಲಾಗುತ್ತದೆ ಇವೆಲ್ಲವೂ ರಸ್ತೆ ಬದಿಯ ಚರಂಡಿಗಳಿಗೆ ಬೀಳುವುದರಿಂದ ಕೊಳಚೆನೀರು ಹರಿದು ಹೋಗಲು ಅಡ್ಡಿಯಾಗುತ್ತದೆ. ಇದೇ ರೀತಿಯಲ್ಲಿ ಚರಂಡಿ, ರಾಜಕಾಲುವೆ ಮುಂತಾದವುಗಳನ್ನು ಆಕ್ರಮಿಸಿಕೊಂಡು ಅದರ ಮೇಲೆ ಕಟ್ಟಡಗಳನ್ನು ಕಟ್ಟಿರುವುದರಿಂದಲೂ ಕೊಳಚೆ ನೀರು ಹೊರಗೆ ಹರಿದು ಹೋಗಲು ಸಾಧ್ಯವಿಲ್ಲವಾಗಿದೆ. ಆದ್ದರಿಂದ ಚರಂಡಿ ಮತ್ತು ರಾಜಕಾಲುವೆಗಳು ಅಡೆತಡೆಯಿಲ್ಲದಂತೆ ನೋಡಿಕೊಳ್ಳಬೇಕಿರುವುದು ನಾಗರೀಕರ ಕರ್ತವ್ಯವಾಗಿದೆ.

ನಗರಗಳಲ್ಲಿ ಆರೋಗ್ಯಕರವಾದ ವಾತಾವರಣವಿರಬೇಕಾದರೆ ಶುದ್ಧವಾದ ಗಾಳಿ ಮತ್ತು ಬೆಳಕಿನ ಸಂಚಾರ ಇರಬೇಕು. ಹೀಗಾಗಬೇಕಾದಲ್ಲಿ ಕಟ್ಟಡಗಳ ನಡುವೆ ಸಾಕಷ್ಟು ಅಂತರವಿರಬೇಕಾದ್ದು ಮುಖ್ಯ ಆದರೆ ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಸರ್ಕಾರದ ನೀತಿನಿಯಮಗಳನ್ನು ಉಲ್ಲಂಘಿಸಿ ಗಾಳಿ-ಬೆಳಕುಗಳ ಸಂಚಾರಕ್ಕೆ ಅವಕಾಶವೇ ಇಲ್ಲದಂತ ಒತ್ತೊತ್ತಾಗಿ ಕಟ್ಟಡಗಳನ್ನು ನಿರ್ಮಿಸುವ ಪದ್ಧತಿ ಹೆಚ್ಚುತ್ತಿದೆ. ಇದರೊಂದಿಗೆ ಉದ್ಯಾನವನ, ಕ್ರೀಡಾಂಗಣ, ಸಾಲುಮರಗಳ ಪ್ರದೇಶ, ಕೆರೆಬಯಲು ಮುಂತಾದವುಗಳನ್ನೂ ಅತಿಕ್ರಮಿಸಿ, ಇಲ್ಲೆಲ್ಲ ಕಟ್ಟಡಗಳನ್ನು ಕಟ್ಟುವ ಶೆಟ್ಟಿಚಾಳಿ ಆರಂಭವಾಗಿದೆ. ಇದರಿಂದಾಗಿ ನಗರ ನೈರ್ಮಲ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಹೊಡೆತವುಂಟಾಗುತ್ತಿದೆ. ನಾಗರೀಕರು ಈ ಎಲ್ಲವುಗಳ ವಿರುದ್ಧ ತಮ್ಮ ಧ್ವನಿ ಎತ್ತಬೇಕು. ಸಾಮೂಹಿಕವಾಗಿ ಸಂಘಟಿತರಾಗಿ ಇಂತಹ ಕುಕೃತ್ಯಗಳಲ್ಲಿ ತೊಡಗುವ ಪಟ್ಟಬದ್ಧ ಹಿತಾಸಕ್ತಿಗಳ ವಿರುದ್ಧ ಹೋರಾಡಬೇಕು. ಅಷ್ಟೇ ಅಲ್ಲದೆ ನಗರ ನೈರ್ಮಲ್ಯದ ಹೊಣೆ ಹೊತ್ತಿರುವ ಅಧಿಕಾರಿಗಳು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳದಂತೆ ಸದಾ ಜಾಗೃತರಾಗಿರಬೇಕು. ಹೀಗೆ ನಗರ ನೈರ್ಮಲ್ಯವನ್ನು ಉಳಿಸುವಲ್ಲಿ ನಾಗರೀಕರ ಪಾತ್ರ ಮಹತ್ತ್ವದ್ದಾಗಿದೆ.

6. ಕನ್ನಡ ಭಾಷೆಯನ್ನು ಅಭಿವೃದ್ಧಿಗೊಳಿಸುವ ಮಾರ್ಗಗಳು

ಕನ್ನಡ ಭಾರತದ ಅತ್ಯಂತ ಸಂಪದ್ಭರಿತವಾದ ಭಾಷೆಗಳಲ್ಲಿ ಒಂದು, ಸುಮಾರು ಎರಡು ಸಾವಿರ ವರ್ಷಗಳಿಗೂ ಹೆಚ್ಚು ಕಾಲದ ಇತಿಹಾಸವನ್ನು ಹೊಂದಿರುವ ಈ ಬಾಷೆಯನ್ನು ದಕ್ಷಿಣಭಾರತದ ಸುಮಾರು ಆರು ಕೋಟಿಗೂ ಹೆಚ್ಚು ಜನರು ತಮ್ಮ ಆಡುಭಾಷೆಯಾಗಿ ಮಾತನಾಡುತ್ತಾರೆ. ಆದರೆ ಇತ್ತೀಚೆಗೆ ಜಾಗತೀಕರಣ ಮತ್ತು ಪಾಶ್ಚಾತ್ಮೀಕರಣದ ಕಾರಣದಿಂದಾಗಿ ಕನ್ನಡ ಭಾಷೆಯು ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಭಾಷೆಯನ್ನು ಅಭಿವೃದ್ಧಿಗೊಳಿಸುವ ಮಾರ್ಗಗಳು ಯಾವುವು ಎಂಬುದನ್ನು ಚಿಂತಿಸಬೇಕಿದೆ.

ನಾವಿಂದು ತಂತ್ರಜ್ಞಾನದ ಯುಗದಲ್ಲಿದ್ದೇವೆ. ಹಾಗಾಗಿ ಕನ್ನಡವು ಉಳಿದು, ಬೆಳೆಯಬೇಕಾದರೆ ಆಧುನಿಕ ತಂತ್ರಜ್ಞಾನದ ಆಗತ್ಯಗಳಿಗೆ ತಕ್ಕಂತೆ ಅದನ್ನು ಒಗ್ಗಿಸಬೇಕಾದ ಅವಶ್ಯಕತೆ ಇದೆ, ಕಂಪ್ಯೂಟರ್, ಮೊಬೈಲ್, ಇಂಟರ್‌ನೆಟ್ ಮುಂತಾದ ಮಾಧ್ಯಮಗಳಲ್ಲಿ ಇಂಗ್ಲಿಷನ್ನು ಯಾವಲ್ಲ ಉದ್ದೇಶಗಳಿಗೆ ಈಗ ಬಳಸಲಾಗುತ್ತಿದೆಯೋ, ಆ ಎಲ್ಲ ಉದ್ದೇಶಗಳಿಗೂ ಕನ್ನಡವನ್ನು ಯಾವುದೇ ಅಡ್ಡಿ ಇಲ್ಲದೆ ಬಳಸುವಂತೆ ತಂತ್ರಜ್ಞಾನವನ್ನು ರೂಪಿಸಬೇಕಿರುವುದು ಮೊದಲ ಕೆಲಸ. ಈಗ ಕನ್ನಡದಲ್ಲಿ ನುಡಿ, ಬರಹ, ಶ್ರೀಲಿಪಿ ಮುಂತಾದ ಹಲವು ಸಾಫ್ಟ್‌ವೇರ್‌ಗಳಿವೆ. ಆದರೆ ಇವು ಒಂದಕ್ಕೊಂದು ಸಂಪೂರ್ಣವಾಗಿ ಪೂರಕ ವಾಗಿಲ್ಲ. ಜೊತೆಗೆ ಪ್ರತಿಯೊಂದರಲ್ಲಿಯೂ ಒತ್ತಕ್ಷರ, ಆರ್ಕಾವೊತ್ತು, ಸಂಯುಕ್ತಾಕ್ಷರ ಮುಂತಾದವುಗಳನ್ನು ಮೂಡಿಸಲು ಬೇರೆಬೇರೆಯೇ ಆದ ವಿಧಾನಗಳಿವೆ. ಇವೆಲ್ಲ ಬಹಳ ಶ್ರಮದಾಯಕವಾಗಿದ್ದು ಕಲಿಕೆಯೂ ಕಷ್ಟವಾಗಿದೆ. ಇದೆಲ್ಲವನ್ನು ಬಗೆಹರಿಸಿ ಸರಳವಾದ ರೀತಿಯಲ್ಲಿ ಮತ್ತು ಯಾವುದೇ ಸಾಫ್ಟ್‌ವೇರ್ ಬಳಸಿದರೂ ಸಮಾನವಾಗಿ ಬಳಕೆಯಾಗುವಂತಹ ವಿಧಾನದಲ್ಲಿ ಕನ್ನಡ ತಂತ್ರಾಂಶವನ್ನು ಸಿದ್ಧಗೊಳಿಸಬೇಕಿದೆ.

ಉನ್ನತಮಟ್ಟದಲ್ಲಿ ಈ ಬಗೆಯ ಬೆಳವಣಿಗೆ ಆಗಬೇಕಿರುವಂತೆಯೇ ಶಾಲಾಮಟ್ಟದಲ್ಲಿ ಕನ್ನಡವನ್ನು ಪರಿಣಾಮ ಕಾರಿಯಾಗಿ ಕಲಿಸುವುದರ ಮೂಲಕ ಭಾಷೆಯನ್ನು ಅಭಿವೃದ್ಧಿಪಡಿಸಬೇಕಿದೆ. ವರ್ಣಮಾಲೆ, ಕಾಗುಣಿತ ಮುಂತಾದವು ಗಳನ್ನು ತಪ್ಪಿಲ್ಲದೆ ಬರೆಯುವುದನ್ನು ಕಲಿಸುವುದು, ಉಕ್ತಲೇಖನವನ್ನು ಬರೆಸುವುದು, ಕನ್ನಡದಿಂದ ಇಂಗ್ಲಿಷಿಗೆ ಮತ್ತು ಇಂಗ್ಲಿಷಿನಿಂದ ಕನ್ನಡಕ್ಕೆ ಚಿಕ್ಕಚಿಕ್ಕ ಪ್ಯಾರಾಗಳನ್ನು ಅನುವಾದಿಸುವುದು ಮುಂತಾದ ವಿಧಾನಗಳನ್ನು ಬಳಸಿ ಚಿಕ್ಕ ವಯಸ್ಸಿನಲ್ಲಿಯೇ ಕನ್ನಡವನ್ನು ಸರಿಯಾಗಿ ಕಲಿಸಿದಾಗ ಅದು ಜೀವಮಾನದುದ್ದಕ್ಕೂ ಹಾಗೆಯೇ ಉಳಿದು ಬೆಳೆಯುತ್ತದೆ.

ಇಂದು ಜಗತ್ತಿನಾದ್ಯಂತ ಮಾಹಿತಿ ತಂತ್ರಜ್ಞಾನದ ಪ್ರಗತಿಯ ಕಾರಣದಿಂದಾಗಿ ಅಪಾರವಾದ ಜ್ಞಾನ ಪ್ರವಾಹವು ಹರಿಯುತ್ತಿದೆ. ಇದರ ಉಪಯೋಗವನ್ನು ಕನ್ನಡಿಗರೂ ಪಡೆದುಕೊಳ್ಳಬೇಕಾದರೆ ಆ ಮಾಹಿತಿಯು ಕನ್ನಡಕ್ಕೆ ಅನುವಾದಗೊಳ್ಳಬೇಕು. ಅದೇ ರೀತಿಯಲ್ಲಿ ಕನ್ನಡದಲ್ಲಿ ರಚಿತವಾಗಿರುವ ಅಪರೂಪದ ಕೃತಿಗಳು ಇಂಗ್ಲಿಷ್ ಸೇರಿದಂತೆ ಆನೇಕ ಪಾಶ್ಚಾತ್ಯ ಭಾಷೆಗಳಿಗೆ ಅನುವಾದಗೊಳ್ಳಬೇಕಾದ ಅಗತ್ಯವೂ ಇದೆ. ಈ ಕೊಡು-ಕೊಳ್ಳುವಿಕೆಯಿಂದಾಗಿ ಕನ್ನಡವೂ ಸಂಪದ್ಭರಿತವಾಗುವುದಲ್ಲದೆ ಕನ್ನಡಿಗರ ಸಾಧನೆಯ ಪರಿಚಯವು ಜಾಗತಿಕ ಮಟ್ಟದಲ್ಲಿ ಆಗುತ್ತದೆ.

ಈ ಎಲ್ಲ ರೀತಿಯ ಅಭಿವೃದ್ಧಿಯು ಆಗಬೇಕಾದರೆ ಮೊತ್ತಮೊದಲಿಗೆ ಕನ್ನಡಿಗರಿಗೆ ಕನ್ನಡದ ಬಗ್ಗೆ ಅಭಿಮಾನ ಬೆಳೆಯಬೇಕು. ”ಇದು ನಮ್ಮ ಭಾಷೆ. ನಾವೇ ಇದನ್ನು ಉಳಿಸಿ ಬೆಳೆಸದಿದ್ದರೆ ಮತ್ತಾರೂ ಆ ಕೆಲಸವನ್ನು ಮಾಡಲಾರರು’ ಎಂಬ ಪ್ರಜ್ಞೆ ನಮ್ಮಲ್ಲಿ ಮೂಡಬೇಕು. ಹೊಟ್ಟೆಪಾಡಿಗಾಗಿ ಯಾವ ಭಾಷೆಯನ್ನು ಬಳಸಿದರೂ ಕನ್ನಡವನ್ನು ಹೃದಯದ ಭಾಷೆಯಾಗಿ ಉಳಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ಕನ್ನಡದ ಅಭಿವೃದ್ಧಿ ಸಾಧ್ಯ

7. ಸ್ತ್ರೀ ಭ್ರೂಣಹತ್ಯೆ/ ಹೆಣ್ಣು ಭ್ರೂಣಹತ್ಯೆಯಿಂದ ಎದುರಾಗುವ ಸಮಸ್ಯೆಗಳು

ಪ್ರಕೃತಿಯ ಎಲ್ಲ ಜೀವಿಗಳಲ್ಲಿ ಗಂಡು ಮತ್ತು ಹೆಣ್ಣು ಎಂಬ ಸ್ವಾಭಾವಿಕವಾದ ಎರಡು ಬಗೆಗಳಿವೆ. ಇವೆರಡರಲ್ಲಿಯೂ ಒಂದು ಬಗೆಯ ಸಮತೋಲನವಿರುವಂತೆ ಪ್ರಕೃತಿಯಲ್ಲಿ ವ್ಯವಸ್ಥೆಯಿದೆ. ಹಾಗಾಗಿ ಯಾವುದೇ ಏರುಪೇರಿಲ್ಲದೆ ಜೀವಿಸಂಕುಲ ಮುಂದುವರೆಯುವುದು ಸಾಧ್ಯ.

ಆದರೆ ಭಾರತ ದೇಶದ ಮಾನವರಲ್ಲಿ ಈ ಹೆಣ್ಣು-ಗಂಡಿನ ಅನುಪಾತ (ratio)ದಲ್ಲಿ ಇತ್ತೀಚೆಗೆ ಬಹಳ ವಿರುಪೇರಾಗಿದೆ. ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ ಪ್ರತಿ 100 ಮಂದಿ ಪುರುಷರಿಗೆ ಸಮನಾಗಿ ಇರುವ ಸ್ತ್ರೀಯರ ಸಂಖ್ಯೆ ಸರಾಸರಿ 65 ಮಂದಿ ಮಾತ್ರ ಎಂದರೆ ಉಳಿದ 35 ಮಂದಿ ಪುರುಷರಿಗೆ ವಿವಾಹವಾಗುವ ಸಾಧ್ಯತೆ ಇಲ್ಲ. ಇದಕ್ಕೆ ಮುಖ್ಯವಾದ ಕಾರಣ ಸ್ತ್ರೀಭ್ರೂಣ ಹತ್ಯೆ.

ಪ್ರಕೃತಿಯ ದೃಷ್ಟಿಯಲ್ಲಿ ಗಂಡು ಮತ್ತು ಹೆಣ್ಣು ಎರಡರಲ್ಲಿಯೂ ಯಾವುದೇ ಭೇದಭಾವವಿಲ್ಲ. ಆದರೆ ಭಾರತೀಯ ಸಮಾಜದಲ್ಲಿ ಗಂಡು ಮಗುವನ್ನು ಹಡೆಯುವುದು ಒಂದು ಮಹಾನ್ ಗೌರವಾರ್ಹವಾದ ಸಂಗತಿಯಾದರೆ ಹೆಣ್ಣುಮಕ್ಕಳನ್ನು ಹಡೆಯುವುದು ನಾಚಿಕೆಗೇಡಿನ, ಅವಮಾನದ ಸಂಗತಿ. “ಗಂಡು ಕುಲವನ್ನು ಉದ್ದರಿಸುತ್ತಾನೆ. ಸತ್ತ ಮೇಲೆಯೂ ಮೋಕ್ಷವನ್ನು ನೀಡುತ್ತಾನೆ, ಆದರೆ ಕೊಟ್ಟಿ ಹೆಣ್ಣು ಕುಲಕ್ಕೆ ಹೊರಗು, ಅವಳಿಂದ ಖರ್ಚು ಹೆಚ್ಚೇ ಹೊರತು ಲಾಭವಿಲ್ಲ” ಎಂದೆಲ್ಲಾ ಹೀನಾಯವಾಗಿ ಯೋಚಿಸುವ ಅನೇಕ ಜನರು ನಮ್ಮಲ್ಲಿದ್ದಾರೆ. ಸ್ಕ್ಯಾನಿಂಗ್ ತಂತ್ರಜ್ಞಾನವು ಅಭಿವೃದ್ಧಿಗೊಂಡು ಗರ್ಭದಲ್ಲಿರುವ ಭ್ರೂಣವು ಹೆಣ್ಣು ಮಗುವಿನದೋ ಅಥವಾ ಗಂಡು ಮಗುವಿನದೋ ಎಂಬುದನ್ನು ಗುರುತಿಸುವ ಅವಕಾಶ ದೊರೆತಾಗ ಇಂತಹವರು ಹೆಣ್ಣು ಮಗುವನ್ನು ಭ್ರೂಣದ ಹಂತದಲ್ಲಿಯೇ ಕೊಂದು ಹಾಕುವಂತಹ ಹೇಯ ಕೃತ್ಯಕ್ಕೆ ಕೈಹಾಕಿದರು. ಇಂದು ಭ್ರೂಣದ ಲಿಂಗ ಪರೀಕ್ಷೆಯು ಶಿಕ್ಷಾರ್ಹ ಅಪರಾಧವಾದರೂ ಈ ಕೆಲಸ ತೆರೆಯ ಮರೆಯಲ್ಲಿ ಸದ್ದುಗದ್ದಲವಿಲ್ಲದೆ ಮುಂದುವರೆಯುತ್ತಲೇ ಇದೆ.

ಸ್ತ್ರೀಭ್ರೂಣ ಹತ್ಯೆಯಿಂದ ಎದುರಾಗುವ ಮೊತ್ತಮೊದಲ ಸಮಸ್ಯೆಯೆಂದರೆ ಈಗಾಗಲೇ ಉಲ್ಲೇಖಿಸಿದಂತೆ ಗಂಡು-ಹೆಣ್ಣುಗಳ ನಡುವಣ ಅನುಪಾತದಲ್ಲಿ ಉಂಟಾಗುವ ವ್ಯತ್ಯಾಸ. ಇದರ ಕಾರಣದಿಂದಾಗಿ ಅನೇಕ ಗಂಡುಮಕ್ಕಳಿಗೆ ಮದುವೆಯಾಗಲು ಹುಡುಗಿಯರು ದೊರೆಯುವುದಿಲ್ಲ. ನಮಗೆಲ್ಲ ತಿಳಿದಂತೆ ಕುಟುಂಬವು ಸಮಾಜದ ಮೂಲಭೂತ ಘಟಕ. ಕೌಟುಂಬಿಕ ವ್ಯವಸ್ಥೆಯು ಸರಿಯಿದ್ದಾಗ ಮಾತ್ರವೇ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ವ್ಯವಸ್ಥೆಗಳು ಸರಿಯಾಗಿರುತ್ತದೆ, ಕುಟುಂಬ ವ್ಯವಸ್ಥೆಯ ಮುಖ್ಯಾಂಶವಾದ ವಿವಾಹದ ವಿಷಯದಲ್ಲಿಯೇ ಸಮಸ್ಯೆಯಾದರೆ ಅದರ ಬಿಸಿಯು ಮೇಲಿನ ಎಲ್ಲ ಹಂತಗಳಿಗೂ ವ್ಯಾಪಿಸುತ್ತದೆ.

ಸ್ತ್ರೀಭ್ರೂಣ ಹತ್ಯೆಯ ಕಾರಣದಿಂದಾಗಿ ಸಮಾಜದಲ್ಲಿ ಏರುಪೇರು ಹೆಚ್ಚಾಗುವುದನ್ನು ನಾವು ಈಗಾಗಲೇ ಗಮನಿಸು ತ್ತಿದ್ದೇವೆ. ಪರಿಸ್ಥಿತಿಯು ಹೀಗೆಯೇ ಮುಂದುವರೆದಲ್ಲಿ ಮುಂದೊಂದು ದಿನ ಹೆಣ್ಣಿಗಾಗಿ ಯುದ್ಧಗಳೇ ನಡೆದರೂ ಹೆಚ್ಚಿಲ್ಲ. ಪರಿಸ್ಥಿತಿಯು ಆ ಮಟ್ಟವನ್ನು ಮುಟ್ಟದಿರುವಂತೆ ನೋಡಿಕೊಳ್ಳಬೇಕಿರುವ ಜವಾಬ್ದಾರಿ ಎಲ್ಲರದ್ದಾಗಿದೆ.

8. ಸಮಾನ ಶಿಕ್ಷಣದ ಅವಶ್ಯಕತೆ

ಸಮಾನ ಶಿಕ್ಷಣ ಎಂದರೆ ಹೆಣ್ಣು-ಗಂಡು, ಬಡವ-ಬಲ್ಲಿದ, ಸ್ಪೃಶ್ಯ-ಅಸ್ಪೃಶ್ಯ ಎಂಬ ಭೇದಭಾವವಿಲ್ಲದೆ ಸಮಾಜದ ಎಲ್ಲ ವರ್ಗಗಳ ಜನರಿಗೂ ಸಿಗಬೇಕಿರುವ ಸಮಾನವಾದ ಮತ್ತು ಏಕರೂಪದ ಶಿಕ್ಷಣದ ಅವಕಾಶ,

ಹಿಂದೆ ವಿದ್ಯೆಯು ಎಲ್ಲರಿಗೂ ದೊರಕುವಂತಹದ್ದಾಗಿರಲಿಲ್ಲ. ಅದು ಕೇವಲ ಮೇಲ್ವರ್ಗದವರ, ಅದರಲ್ಲಿಯೂ ವಿಶೇಷವಾಗಿ ಗಂಡಸರ ಸ್ವತ್ತಾಗಿತ್ತು. ಆದರೆ ಕಾಲ ಕಳೆದಂತೆ ಸಮಾಜದ ಕೆಳವರ್ಗದವರೂ ಸೇರಿದಂತೆ ಎಲ್ಲ ವರ್ಗಗಳ ಸ್ತ್ರೀ-ಪುರುಷರು ವಿದ್ಯೆಯನ್ನು ಕಲಿಯುವ ಅವಕಾಶ ದೊರೆಯಿತು. ಇದರಿಂದಾಗಿ ಸಮಾಜದಲ್ಲಿದ್ದ ತಾರತಮ್ಯವು ಕಡಿಮೆಯಾಯಿತು. ಸ್ತ್ರೀ-ಪುರುಷರಿಬ್ಬರಿಗೂ ಸಮಾನವಾಗಿ ಉದ್ಯೋಗಾವಕಾಶವು ದೊರೆತದ್ದರಿಂದ ಕುಟುಂಬದ ಮತ್ತು ಆ ಮೂಲಕ ರಾಷ್ಟ್ರದ ಆರ್ಥಿಕ ಮಟ್ಟವು ಸುಧಾರಿಸಿತು.

ಪ್ರಸ್ತುತ ಸಂದರ್ಭದಲ್ಲಿ ‘ಸಮಾನ ಶಿಕ್ಷಣ’ ಎಂಬ ಮಾತನ್ನು ‘ಸಮಾನ ಗುಣಮಟ್ಟದ ಶಿಕ್ಷಣ’ ಎಂಬ ಅರ್ಥದಲ್ಲಿ ಬಳಸಲಾಗುತ್ತಿದೆ. ಇಂದು ದೇಶದ ಎಲ್ಲ ವಿದ್ಯಾರ್ಥಿಗಳಿಗೂ ಮೂಲಭೂತ ಶಿಕ್ಷಣವು ದೊರಕಲು ಅಗತ್ಯವಾದ ವ್ಯವಸ್ಥೆಯನ್ನು ಮಾಡಲಾಗುತ್ತಿದೆಯಾದರೂ ಇದರಲ್ಲಿ ಏಕರೂಪತೆ ಇಲ್ಲ. ನಗರ ಪ್ರದೇಶಗಳಲ್ಲಿನ ಶ್ರೀಮಂತ ವಿದ್ಯಾರ್ಥಿಗಳು ಅತ್ಯಾಧುನಿಕ ವಾದ ಹಾಗೂ ಸುಸಜ್ಜಿತವಾದ ಶಾಲಾಕಾಲೇಜುಗಳಲ್ಲಿ ಕಲಿಯುತ್ತಲಿದ್ದಾರೆ. ಆದರೆ, ಗ್ರಾಮಾಂತರ ಪ್ರದೇಶಗಳಲ್ಲಿ ಇನ್ನೂ ಸರಿಯಾದ ಶಾಲಾಕಟ್ಟಡಗಳಿಲ್ಲ, ತರಬೇತಿ ಹೊಂದಿದ ಶಿಕ್ಷಕರಿಲ್ಲ ಹಾಗೂ ಯಾವುದೇ ರೀತಿಯ ಮೂಲಭೂತ ಸೌಕಯ್ಯಗಳು ಇಲ್ಲ. ಪರಿಸ್ಥಿತಿ ಹೀಗಿದ್ದಾಗ ಹಳ್ಳಿಗಾಡಿನ ಶಾಲೆಯಲ್ಲಿ ಓದುತ್ತಿರುವ ಒಬ್ಬ ವಿದ್ಯಾರ್ಥಿ ನಗರದ ಅತ್ಯಾಧುನಿಕ ಶಾಲೆಯ, ತನ್ನದೇ ತರಗತಿಯಲ್ಲಿ ಓದುತ್ತಿರುವ ಇನ್ನೊಬ್ಬ ವಿದ್ಯಾರ್ಥಿಯೊಂದಿಗೆ ಸ್ಪರ್ಧಿಸುವುದು ಸಾಧ್ಯವೇ ಇಲ್ಲದ ಮಾತಾಗುತ್ತದೆ.

ಈ ಪರಿಸ್ಥಿತಿ ಬದಲಾಗಬೇಕು. ಸಮಾಜದ ಎಲ್ಲ ವರ್ಗಗಳ ಜನರಿಗೂ ಒಂದೇ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಹಾಗಾದಾಗ ಮಾತ್ರ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯು ವಿಕಾಸವಾಗಿ ಅವರಿಂದ ನಾಡಿಗೆ ಲಾಭವಾಗುತ್ತದೆ ಎನ್ನುವುದು ಸಮಾನ ಶಿಕ್ಷಣದ ಧೈಯೋದ್ದೇಶ. ಈ ಕನಸನ್ನು ನನಸು ಮಾಡಲು ಸರ್ಕಾರ ಮತ್ತು ಸಾರ್ವಜನಿಕರು ಕೂಡಿ ಕೆಲವು ಕರ್ತವ್ಯಗಳನ್ನು ನಿರ್ವಹಿಸಬೇಕಾಗಿದೆ. ಅವೆಂದರೆ ಮೊತ್ತಮೊದಲನೆಯದಾಗಿ ಗುಣಮಟ್ಟದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳದಿರುವಿಕೆ. ನಗರ-ಗ್ರಾಮ ಎಂಬ ತಾರತಮ್ಯವಿಲ್ಲದೆ ಎಲ್ಲ ಕಡೆಗಳಲ್ಲಿಯೂ ಒಂದೇ ಗುಣಮಟ್ಟದ ಶಿಕ್ಷಣವನ್ನು ನೀಡುವ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಬೇಕು. ಎಲ್ಲ ಕಡೆಗಳಲ್ಲಿಯೂ ಚೆನ್ನಾಗಿ ನುರಿತ, ತರಬೇತಿ ಹೊಂದಿರುವ ಶಿಕ್ಷಕರನ್ನು ನೇಮಿಸುವುದರ ಮೂಲಕ ಸಮಾನವಾದ ರೀತಿಯಲ್ಲಿ ವಾರಪ್ರವಚನಗಳು ನಡೆಯುವಂತೆ ನೋಡಿಕೊಳ್ಳಬೇಕು. ಬಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಯನ್ನು ನೀಡುವ ಮೂಲಕ ‘ನಗರ ಪ್ರದೇಶದ ವಿದ್ಯಾರ್ಥಿಗಳ ಎದುರು ನಾವು ಯಾವ ರೀತಿಯಲ್ಲಿಯೂ ಸರಿಸಮವಲ್ಲ’ ಎಂಬ ಕೀಳರಿಮೆಗೆ ಒಳಗಾಗದಂತೆ ಗಮನಹರಿಸಬೇಕು.

ಈ ಎಲ್ಲ ವಿಧಾನಗಳ ಮೂಲಕ ಸಮಾಜದ ಎಲ್ಲ ವರ್ಗಗಳ ಜನರಿಗೆ ಸಮಾನವಾದ ಶಿಕ್ಷಣವನ್ನು ನೀಡುವುದರಿಂದ ವ್ಯಕ್ತಿಯ ಏಳಿಗೆ ಆಗುವುದಲ್ಲದೆ ಸಮುದಾಯ ಮತ್ತು ರಾಷ್ಟ್ರವೂ ಅಭಿವೃದ್ಧಿಯಾಗುತ್ತವೆ.

9. ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಆಗತ್ಯ

‘ಭಾರತ ಹಳ್ಳಿಗಳ ದೇಶ, ರೈತರೇ ದೇಶದ ಬೆನ್ನೆಲುಬು’ ಮುಂತಾದ ಹೇಳಿಕೆಗಳನ್ನು ಬಳಸಿ ಹಿಂದೆ ಭಾರತವನ್ನು ವರ್ಣಿಸಲಾಗುತ್ತಿತ್ತು. ಈಗ, ಎಂದರೆ ಕಳೆದ ಸುಮಾರು ಮೂರು ದಶಕಗಳಿಂದ ಈ ಮಾತುಗಳು ಅರ್ಥವನ್ನು ಕಳೆದುಕೊಳ್ಳುತ್ತಿವೆ. ಒಂದು ಅಧ್ಯಯನದ ಪ್ರಕಾರ ದೇಶದ ಸುಮಾರು ಶೇಕಡ 60ರಷ್ಟು ರೈತರು ಕೃಷಿಯನ್ನು ಬಿಟ್ಟು ತಮ್ಮ ಜೀವನೋಪಾಯಕ್ಕಾಗಿ ನಗರಗಳ ಕಡೆಗೆ ವಲಸೆ ಬರುತ್ತಿದ್ದಾರೆ. ಹಾಗಾಗಿ ಹಳ್ಳಿಗಳು ಪಾಳು ಬೀಳುತ್ತಿವೆ. ಇದು ಉತ್ತಮವಾದ ಬೆಳವಣಿಗೆಯಲ್ಲ. ಸಾವಿರಾರು ವರ್ಷಗಳಿಂದ ನಮ್ಮ ಪರಂಪರೆಯಲ್ಲಿ ಸೇರಿಕೊಂಡಿರುವ ಕೃಷಿ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಅಗತ್ಯ ಬಹಳವಾಗಿ ಇದೆ.

ಜಗತ್ತಿನಲ್ಲಿ ಅನೇಕ ಬಗೆಯ ಉದ್ಯೋಗಗಳಿವೆ. ಆದರೆ ಈ ಎಲ್ಲ ಉದ್ಯೋಗವನ್ನು ಕೈಗೊಳ್ಳುವವರೆಲ್ಲರೂ ಅನಿವಾರ ವಾಗಿ ತಮ್ಮ ಆಹಾರಕ್ಕಾಗಿ ರೈತರನ್ನು ಅವಲಂಬಿಸಲೇ ಬೇಕಿದೆ. ಆದ್ದರಿಂದಲೇ ಸರ್ವಜ್ಞಕವಿಯು “ಕೋಟಿ ವಿದ್ಯೆಗಳಿಗಿಂತ ಮೇಟಿ ವಿದ್ಯೆಯೇ ಮೇಲು” ಎಂದು ಹೇಳಿದ್ದು, ಆದರೆ ಇಂದು ಭಾರತದಲ್ಲಿ ನೀರಿನ ಕೊರತೆ, ವಿದ್ಯುತ್‌ನ ಅಭಾವ, ಕೈಗಾರಿಕೆಗಳ ಧಾಳಿ, ಸರಿಯಾದ ಬೆಲೆ ದೊರಕದಿರುವುದು ಮುಂತಾದ ಕಾರಣಗಳಿಂದಾಗಿ ರೈತರು ಕೃಷಿಗೆ ಬೆನ್ನು ತೋರಿಸುತ್ತಿದ್ದಾರೆ. ಇದರಿಂದಾಗಿ ಆಹಾರ ಪದಾರ್ಥಗಳ ಉತ್ಪಾದನೆಯಲ್ಲಿ ಗಮನಾರ್ಹವಾದ ಪ್ರಮಾಣದಲ್ಲಿ ಇಳಿತ ಉಂಟಾಗಿದೆ. ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ.

ಕೃಷಿ ಎನ್ನುವುದು ಇಂಜನಿಯರಿಂಗ್, ಶಿಕ್ಷಣ, ಅಂಚೆ, ಪೊಲೀಸ್‌ನಂತ ಕೇವಲ ಒಂದು ವೃತ್ತಿಯಲ್ಲ. ಬದಲಿಗೆ ಆದೊಂದು ಜೀವನ ವಿಧಾನ. ವ್ಯವಸಾಯದ ಜೊತೆ ಜೊತೆಗೆ ತೋಟಗಾರಿಕೆ, ಹೈನುಗಾರಿಕೆ, ಜೇನುಸಾಕಣೆ, ಪಶುಪಾಲನೆ, ಕುಂಬಾರಿಕೆ, ಕಮ್ಮಾರಿಕೆ, ನೇಕಾರಿಕೆ, ಹಂದಿಸಾಕಣೆ ಮುಂತಾದ ಹಲವು ಹತ್ತು ಕೃಷಿ ಸಂಬಂಧಿ ವೃತ್ತಿಗಳು ಇದರೊಂದಿಗೆ ನೇರವಾದ ಸಂಬಂಧವನ್ನು ಹೊಂದಿವೆ. ಕೃಷಿ ಸಂಸ್ಕೃತಿಯು ಉಳಿದು ಬೆಳೆಯುವುದರಿಂದ ಈ ಎಲ್ಲ ಉದ್ಯಮಗಳೂ ಜೀವಂತ ವಾಗಿ ಉಳಿಯುತ್ತವೆ. ಇಲ್ಲದಿದ್ದರೆ ಇವೆಲ್ಲವೂ ನಶಿಸಿಹೋಗುತ್ತದೆ.

ಭಾರತೀಯ ಸಂಸ್ಕೃತಿಯು ಕೃಷಿಯೊಂದಿಗೆ ತಳುಕುಹಾಕಿಕೊಂಡಿದೆ. ನಮ್ಮ ಹಬ್ಬ ಹರಿದಿನಗಳು, ಪೂಜೆ-ಪುನಸ್ಕಾರಗಳು, ಶಾಸ್ತ್ರ-ಸಂಪ್ರದಾಯಗಳು, ಭೋಜನಪದ್ದತಿ, ಮುಂತಾದ ಎಲ್ಲ ಸಾಂಸ್ಕೃತಿಕ ಅಂಶಗಳೂ ಕೃಷಿ ಸಂಬಂಧಿಯೇ ಆಗಿವೆ. ಕೃಷಿ ಸಂಸ್ಕೃತಿಯು ಉಳಿದಾಗ ಮಾತ್ರವೇ ಈ ಎಲ್ಲವೂ ಉಳಿಯಲು ಸಾಧ್ಯ. ಕೃಷಿ ಸಂಸ್ಕೃತಿ ಉಳಿದಲ್ಲಿ ಮಾತ್ರ ಮಾನವನ ಉಳಿವು ಎಂಬ ವಾಸ್ತವ ಸತ್ಯವನ್ನು ಎಲ್ಲರೂ ಮನಗಾಣಬೇಕಿದೆ.

10. ಭ್ರಷ್ಟಾಚಾರವನ್ನು ನಿರ್ಮೂಲನಗೊಳಿಸುವಲ್ಲಿ ಯುವಜನರ ಪಾತ್ರ

ನ್ಯಾಯಯುತವಲ್ಲದ ಮಾರ್ಗದ ಮೂಲಕ ಹಣ, ಅಧಿಕಾರ, ಸ್ಥಾನಮಾನಗಳನ್ನು ಗಳಿಸುವುದನ್ನೇ ಭ್ರಷ್ಟಾಚಾರ ಎಂದು ಕರೆಯಬಹುದು. ಇಂದು ಜಗತ್ತಿನ ಎಲ್ಲೆಡೆ, ಅದರಲ್ಲಿಯೂ ವಿಶೇಷವಾಗಿ ಭಾರತದಲ್ಲಿ ಭ್ರಷ್ಟಾಚಾರವು ತುಂಬಿ ತುಳುಕಾಡುತ್ತಿದೆ. ಈ ಭೂತವನ್ನು ನಾಶಮಾಡುವಲ್ಲಿ ಯುವಜನರ ಪಾತ್ರವು ಅತ್ಯಂತ ಮಹತ್ವದ್ದಾಗಿದೆ.

ಭಾರತ ದೇಶವು ಸುಮಾರು ಎರಡು ನೂರು ವರ್ಷಗಳ ಕಾಲ ಬ್ರಿಟಿಷರ ಆಳ್ವಿಕೆಯಲ್ಲಿತ್ತು. ಆ ಸಮಯದಲ್ಲಿ ಬ್ರಿಟಿಷರು ತಮ್ಮ ಅನುಕೂಲಕ್ಕೆ ತಕ್ಕಂತೆ ಇಲ್ಲಿಯ ಕಾನೂನುಗಳನ್ನು ರೂಪಿಸಿದರು. ಭಾರತದ ಅಪಾರವಾದ ಸಂಪತ್ತನ್ನು ತಮ್ಮ ದೇಶಕ್ಕೆ ಸಾಗಿಸಿದರು. ಬ್ರಿಟಿಷರ ವಿರುದ್ಧ ಹೋರಾಡಿದ ಭಾರತೀಯ ಸ್ವಾತಂತ್ರ ಹೋರಾಟಗಾರರಿಗೆ ಸ್ವಾರ್ಥದ ಆಸೆ ಇರಲಿಲ್ಲ. ಅವರು ತಮ್ಮ ತನು ಮನ ಧನಗಳನ್ನು ರಾಷ್ಟ್ರದ ಬಿಡುಗಡೆಗಾಗಿ ಸಮರ್ಪಿಸಿದರು. ಆದರೆ ಸ್ವಾತಂತ್ರ್ಯವನ್ನು ಗಳಿಸಿದ ಮೇಲೆ ನಮ್ಮ ರಾಷ್ಟ್ರನಾಯಕರ ಧೋರಣೆಗಳು ಬದಲಾದವು. ‘ರಾಷ್ಟ್ರಕ್ಕಾಗಿ ನಾವು’ ಎಂಬ ಉದಾತ್ತವಾದ ತತ್ತ್ವದ ಬದಲಿಗೆ ‘ನಮಗಾಗಿ ರಾಷ್ಟ್ರದ ಸಂಪತ್ತು’ ಎಂಬ ಭಾವನೆ ಜನನಾಯಕರಲ್ಲಿ ಬೆಳೆಯಿತು. ಅಕ್ರಮ ಮಾರ್ಗದಿಂದ ಹಣವನ್ನು ಸಂವಾದಿಸಿ ದಿಢೀರ್ ಶ್ರೀಮಂತರಾಗುವ ಹುಚ್ಚು ಹೆಚ್ಚಿತು. ಇದರಿಂದಾಗಿ ಭ್ರಷ್ಟಾಚಾರ ಹೆಚ್ಚಾಯಿತು. ಆದರೆ ಭ್ರಷ್ಟಾಚಾರವು ಬಹುಹಿಂದಿನಿಂದಲೂ ಇರುವುದಕ್ಕೆ ಪುರಾವೆಗಳಿವೆ.

ನಾವು, ಎಂದರೆ ಯುವಜನರು ಈ ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಿದೆ. ”ನಮಗೆ ಪ್ರತಿಭೆ ಇದೆ, ದುಡಿದು ತಿನ್ನುವ ಸಾಮರ್ಥ್ಯವಿದೆ. ಮೈಯಲ್ಲಿ ಶಕ್ತಿಯಿದೆ, ತಲೆಯಲ್ಲಿ ಬುದ್ದಿ ಇದೆ. ಇಷ್ಟೆಲ್ಲಾ ಸಾಮರ್ಥ್ಯವನ್ನು ಹೊಂದಿದ್ದೂ ಆಕ್ರಮ ಮಾರ್ಗದಿಂದ ಹಣ ಸಂಪಾದಿಸಬೇಕಾದ ಅಗತ್ಯ ನಮಗಿಲ್ಲ’ ಎಂಬ ಭಾವನೆ ನಮ್ಮ ಮನಸ್ಸಿನಲ್ಲಿ ಮೂಡಬೇಕು. ಅಕ್ರಮ ಸಂಪಾದನೆಯನ್ನು ಮಾಡುವುದು ಎಷ್ಟು ತಪ್ಪೋ, ಭ್ರಷ್ಟಾಚಾರವನ್ನು ಬೆಂಬಲಿಸುವುದೂ ಅಷ್ಟೇ ದೊಡ್ಡ ತಪ್ಪು, ಬಸ್‌ನಲ್ಲಿ ಪ್ರಯಾಣಿಸುವಾಗ ಟಿಕೆಟ್ ನೀಡದೆ ಕಂಡಕ್ಟರ್ ಹಣ ಪಡೆದರೆ ಪ್ರತಿಭಟಿಸುವುದರಿಂದ ಹಿಡಿದು ಉದ್ಯೋಗಕ್ಕಾಗಿ ಲಂಚ ನೀಡುವವರೆಗೆ ಎಲ್ಲೆಲ್ಲಿ ಭ್ರಷ್ಟಾಚಾರ ಕಂಡರೂ ಯುವಜನರು ಅದನ್ನು ವಿರೋಧಿಸಬೇಕು. ಭ್ರಷ್ಟಾಚಾರದ ಸುಳಿವು ಸಿಕ್ಕಲ್ಲಿ ಲೋಕಾಯುಕ್ತರೇ ಮೊದಲಾದ ಸೂಕ್ತ ಅಧಿಕಾರಿಗಳ ಗಮನಕ್ಕೆ ಅದನ್ನು ತರಬೇಕು. ಅಣ್ಣಾ ಹಜಾರೆ ಮುಂತಾದ ಪ್ರಾಮಾಣಿಕರ ಚಳುವಳಿಗಳನ್ನು ಬೆಂಬಲಿಸಬೇಕು.

‘ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು’ ಎಂಬ ಮಾತೊಂದಿದೆ. ಅದರಂತೆ ಯುವಜನರಲ್ಲಿ ಭ್ರಷ್ಟಾಚಾರದ ವಿರುದ್ಧದ ಜಾಗೃತಿ ಬೆಳೆದರೆ ಮುಂದೆ ಅವರು ಈ ದೇಶದ ನಾಗರೀಕರಾದಾಗ ಪರಿಸ್ಥಿತಿ ಸುಧಾರಿಸುತ್ತದೆ. ಭ್ರಷ್ಟಾಚಾರ ಮುಕ್ತ ಸಮಾಜವನ್ನು ನಿರ್ಮಿಸುವ ಸಾಮರ್ಥ್ಯ ಕೇವಲ ಯುವಜನರಿಗೆ ಮಾತ್ರ ಇದೆ. ಏಕೆಂದರೆ ಭಾರತದಲ್ಲಿ ಯುವಕರ ಪ್ರಮಾಣವೇ ಹೆಚ್ಚು ಪ್ರಾಮಾಣಿಕರಾದ ಜನಪ್ರತಿನಿಧಿಗಳನ್ನು ಆಯ್ಕೆಮಾಡುವ ಗುರುತರವಾದ ಜವಾಬ್ದಾರಿಯೂ ಯುವಜನರದೇ ಆಗಿದೆ.

11. ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ

ಸಮುದಾಯಕ್ಕೆ ಸೇವೆಯನ್ನು ಸಲ್ಲಿಸುವ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ವಿಕಸನಗೊಳಿಸಲು ಇರುವ ಯೋಜನೆಯೇ ‘ರಾಷ್ಟ್ರೀಯ ಸೇವಾ ಯೋಜನೆ’ (National Service Scheme, NSS) ಯಾಗಿದೆ. ಇದು ಭಾರತ ಸರ್ಕಾರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಅಡಿಯಲ್ಲಿ ಬರುವ ಒಂದು ಕಾಠ್ಯಕ್ರಮವಾಗಿದೆ. 1969ರ ಅಕ್ಟೋಬರ್ 2ರಂದು ದೇಶದಾದ್ಯಂತ ಇರುವ 37 ವಿಶ್ವವಿದ್ಯಾಲಯಗಳ 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ ಸ್ವಯಂ ಸೇವಕರೊ೦ದಿಗೆ ಈ ಯೋಜನೆಯು ಆರಂಭವಾಯಿತು. ಇಂದು 298 ಶಿಕ್ಷಣ ಸಂಸ್ಥೆಗಳ 32 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಯೋಜನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವವು ಖಂಡಿತ ವಿಕಸನಗೊಳ್ಳುತ್ತದೆ. ಯಾವುದೇ ನಾಗರೀಕ ಸೌಲಭ್ಯಗಳಿಲ್ಲದ ಗ್ರಾಮಾಂತರ ಪ್ರದೇಶಗಳಿಗೆ ಹೋಗಿ ರಸ್ತೆ ನಿರ್ಮಾಣ. ಚರಂಡಿಗಳ ಹೂಳೆತ್ತುವಿಕೆ, ತಿಪ್ಪೆಗುಂಡಿಗಳ ಶುಚಿತ್ವ ಮುಂತಾದ ಶ್ರಮದಾನದ ಕಾಠ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ದೈಹಿಕ ಶ್ರಮದ ಮಹತ್ವದ ಅರಿವಾಗುತ್ತದೆ. ಬಡವ-ಶ್ರೀಮಂತ, ಮೇಲು-ಕೀಳು ಎಂಬ ಭೇದಭಾವವು ಅಳಿದು ಸಹಬಾಳ್ವೆಯ ಪ್ರಜ್ಞೆಯು ಮೂಡುತ್ತದೆ.

ರಕ್ತದಾನ ಶಿಬಿರಗಳ ಆಯೋಜನೆಯು ಎನ್.ಎಸ್.ಎಸ್.ನ ಮತ್ತೊಂದು ಕಾಠ್ಯಕ್ರಮವಾಗಿದೆ. ಇದರಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ರಕ್ತದಾನದ ಪ್ರವೃತ್ತಿ ಬೆಳೆಯುತ್ತದೆ. ದೈಹಿಕ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಿ. ಬೇಕಾಗಿರುವ ಅಗತ್ಯದ ಬಗ್ಗೆ ಅರಿವು ಮೂಡುತ್ತದೆ. ಅಷ್ಟೇ ಅಲ್ಲದೆ ಶಿಬಿರಗಳನ್ನು ಆಯೋಜಿಸುವ ತರಬೇತಿಯೂ ದೊರೆಯುವುದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳು ಬೆಳೆಯುತ್ತವೆ.

ಗಿಡಮರಗಳು ಇಲ್ಲದ ಬಯಲು ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಆ ಪ್ರದೇಶವನ್ನು ಹಸಿರಾಗಿಸುವುದು ರಾಷ್ಟ್ರೀಯ ಸೇವಾ ಯೋಜನೆಯ ಪ್ರಮುಖ ಉದ್ದೇಶಗಳಲ್ಲಿ ಒಂದು. ಈ ಅರಣೀಕರಣದ ಕಾಠ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಅವರಲ್ಲಿ ಪರಿಸರ ಪ್ರಜ್ಞೆಯು ಹೆಚ್ಚುತ್ತದೆ. ಅಷ್ಟೇ ಅಲ್ಲದೆ ಸಾರ್ವಜನಿಕರಲ್ಲಿಯೂ ಅರಿವು ಮೂಡುತ್ತದೆ ಹಾಗೂ ಪರಿಸರಮಾಲಿನ್ಯವು ಗಣನೀಯವಾಗಿ ಕಡಿಮೆಯಾಗುತ್ತದೆ. ಪರ್ವತಾರೋಹಣ, ಚಾರಣ ಮುಂತಾದ ಸಾಹಸ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ತೊಡಗುವುದರಿಂದ ಅವರ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ. ಪ್ರವಾಹ, ಬೆಂಕಿ ಅಪಘಾತ, ಭೂಕಂಪ ಮುಂತಾದ ದುರಂತದ ಸಂದರ್ಭಗಳಲ್ಲಿ ಪರಿಹಾರ ಕಾರಾಚರಣೆಯನ್ನು ನಡೆಸುವಾಗ ಕೂಡಾ ಎನ್.ಎಸ್.ಎಸ್. ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುತ್ತದೆ. ಇದರಿಂದ ಅವರಲ್ಲಿ ಕಠಿಣ ಪರಿಸ್ಥಿತಿಗಳನ್ನು ನಿರ್ವಹಿಸುವ ಸಾಮರ್ಥ್ಯ ಬೆಳೆಯುತ್ತದೆ

ಈ ಎಲ್ಲ ಕಾರಣಗಳಿಂದಾಗಿ ವಿದ್ಯಾರ್ಥಿಗಳು ‘ರಾಷ್ಟ್ರೀಯ ಸೇವಾ ಯೋಜನೆ’ಯಲ್ಲಿ ಭಾಗವಹಿಸುವುದು ಅತ್ಯಗತ್ಯವಾಗಿದೆ.

12. ಯೋಗಾಭ್ಯಾಸದ ಉಪಯೋಗಗಳು

ಆರೋಗ್ಯ ಭಾಗ್ಯವು ಎಲ್ಲ ಭಾಗ್ಯಗಳಿಗಿಂತ ಮಿಗಿಲಾದದ್ದು. ನಾವು ಆರೋಗ್ಯವಾಗಿದ್ದರೆ ಮಾತ್ರ ಉಳಿದ ಎಲ್ಲ ಸಂಪತ್ತನ್ನು ಅನುಭವಿಸಲು ಸಾಧ್ಯ. ನಾವು ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಸರಿಸಬಹುದಾದ ಅತ್ಯುತ್ತಮ ವಿಧಾನವೆಂದರೆ ಯೋಗದ ಅಭ್ಯಾಸ.

ಯೋಗವು ಪ್ರಪಂಚಕ್ಕೆ ಭಾರತದ ಕೊಡುಗೆ. ಪತಂಜಲಿ ಮಹರ್ಷಿಗಳು ಯೋಗಶಾಸ್ತ್ರವನ್ನು ರೂಪಿಸಿದರು ಎಂದು ನಂಬಿಕೆ. ಯೋಗವು ದೇಹ ಮತ್ತು ಮನಸ್ಸುಗಳ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಅಗತ್ಯವಾದ ವಿಧಾನವನ್ನು ಹೇಳಿಕೊಡುತ್ತದೆ. ಆಲೋಪತಿ ಚಿಕಿತ್ಸಾ ವಿಧಾನದಲ್ಲಿರುವ ಅಡ್ಡ ಪರಿಣಾಮದ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿದಂತೆ ಈಗ ಪಾಶ್ಚಾತ್ಯ ದೇಶಗಳೂ ಸೇರಿದಂತೆ ವಿಶ್ವದಾದ್ಯಂತ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಜನಪ್ರಿಯವಾಗುತ್ತಿದೆ.

ಇತರ ಬಗೆಯ ವ್ಯಾಯಾಮಗಳು ದೇಹದ ಕೆಲವು ಅಂಗಗಳ ದೃಢತೆಯನ್ನಷ್ಟನ್ನೇ ತಂದುಕೊಡುತ್ತದೆ. ಆದರೆ ಯೋಗಾಭ್ಯಾಸದಿಂದ ಸಮಗ್ರವಾದ ದೇಹಾರೋಗ್ಯ ಲಭಿಸುತ್ತದೆ ಮತ್ತು ಇದರಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲ.

ಸ್ಕೂಲಕಾಯವು ಆಧುನಿಕ ಜೀವನಶೈಲಿಯ ಶಾಪಗಳಲ್ಲಿ ಒಂದಾಗಿದ್ದು ಹಲವು ಬಗೆಯ ಅನಾರೋಗ್ಯಗಳಿಗೆ ದಾರಿಮಾಡಿಕೊಡುತ್ತಿದೆ. ಯೋಗಾಭ್ಯಾಸದಿಂದ ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಬಗೆಹರಿಸಿಕೊಳ್ಳಬಹುದು

ಆಲೋವತಿ ಚಿಕಿತ್ಸಾ ವಿಧಾನವು ಕೇವಲ ದೈಹಿಕ ಸಮಸ್ಯೆಗಳಿಗೆ ಮಾತ್ರ ಪರಿಣಾಮಕಾರಿ, ಆದರೆ ಯೋಗದ ಅಭ್ಯಾಸದಿಂದ ದೈಹಿಕ ಸಮಸ್ಯೆಗಳು ದೂರಾಗುವುದು ಮಾತ್ರವಲ್ಲದೆ ಮಾನಸಿಕ ನೆಮ್ಮದಿಯೂ ದೊರೆಯುತ್ತದೆ. ಇದರಿಂದಾಗಿ ಮನೋ-ದೈಹಿಕ ಕಾಯಿಲೆಗಳು ದೂರಾಗುತ್ತವೆ. ದೇಹದ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ ಮತ್ತು ಆಸ್ತಮಾ, ಮೂಲವ್ಯಾಧಿ, ಸಂಧಿವಾತ ಮುಂತಾದ ದೀರ್ಘಕಾಲೀನ ಸಮಸ್ಯೆಗಳೂ ಕಾಲಕ್ರಮೇಣ ಕಡಿಮೆಯಾಗಿರುವ ನಿದರ್ಶನಗಳಿವೆ.

ದಿನನಿತ್ಯದ ಬದುಕಿನಲ್ಲಿ ಅನಿವಾರ್ಯವಾಗಿ ಎದುರಿಸಬೇಕಾದ ಹಲವಾರು ಮಾನಸಿಕ ಒತ್ತಡಗಳಿಂದ ನಗರ ಪ್ರದೇಶಗಳಲ್ಲಿ ವಾಸಿಸುವ ಜನರ ಆರೋಗ್ಯವು ಇತ್ತೀಚೆಗೆ ಬಹಳ ಹದಗೆಡುತ್ತಿದೆ ಈ ಸಮಸ್ಯೆಯಿಂದ ಪಾರಾಗಲು ಯೋಗವು ಬಹಳ ಸಹಾಯಕ, ಸೂರ್ಯ ನಮಸ್ಕಾರ, ಪ್ರಾಣಾಯಾಮ, ಕಪಾಲಭಾತಿ, ಶ್ವಾಸಧೌತಿ ಮೊದಲಾದ ವಿಧಾನಗಳನ್ನು ಸರಿಯಾಗಿ ಕಲಿತು ಅಭ್ಯಾಸಮಾಡುವ ಮೂಲಕ ಹಾಗೂ ಬಗೆಬಗೆಯ ಆಸನಗಳನ್ನು ಹಾಕುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದಾಗಿದೆ. ಯೋಗಾಭ್ಯಾಸದ ವಿಶೇಷವೆಂದರೆ ಹೆಣ್ಣು-ಗಂಡು. ಹಿರಿಯ-ಕಿರಿಯರೆಂಬ ಭೇದಭಾವವಿಲ್ಲದೆ ಎಲ್ಲರೂ ಇದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

13. ಐತಿಹಾಸಿಕ ಸ್ಥಳಗಳ ಸಂರಕ್ಷಣೆ

ಪ್ರಾಚೀನ ಕಾಲದ ದೇವಾಲಯ, ಅರಮನೆ, ಕೋಟೆ, ಕಟ್ಟಡ ಮುಂತಾದವುಗಳನ್ನು ಐತಿಹಾಸಿಕ ಸ್ಮಾರಕಗಳು ಎಂದು ಕರೆಯಲಾಗುತ್ತದೆ. ಇಂತಹ ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ಪ್ರದೇಶಗಳೇ ‘ಐತಿಹಾಸಿಕ ಸ್ಥಳಗಳು’. ಇಂತಹ ಸ್ಥಳಗಳನ್ನು ಸಂರಕ್ಷಿಸುವುದು ನಾಗರೀಕರಾದ ನಮ್ಮೆಲ್ಲರ ಹೊಣೆ.

‘ಇತಿಹಾಸವನ್ನು ಅರಿಯದವರು ಇತಿಹಾಸವನ್ನು ನಿರ್ಮಿಸಲಾರರು’ ಎಂಬುದೊಂದು ಮಾತಿದೆ. ಯಾರೇ ಆದರೂ ತಮ್ಮ ಜೀವನದಲ್ಲಿ ಅತ್ಯುನ್ನತವಾದ ಯಾವುದಾದರೂ ಸಾಧನೆಯನ್ನು ಮಾಡಬೇಕಾದರೆ ಆಯಾ ಕ್ಷೇತ್ರದಲ್ಲಿ ಹಿಂದಿನವರು ಮಾಡಿರುವ ಸಾಧನೆಗಳ ವಿವರಗಳನ್ನು ತಿಳಿದಿರಬೇಕಾದ್ದು ಅತ್ಯಗತ್ಯ ಅಂತೆಯೇ ಒಂದು ರಾಜ್ಯ ಅಥವಾ ದೇಶವು ಅಭಿವೃದ್ಧಿ ಹೊಂದಿ ಪ್ರಗತಿಯನ್ನು ಸಾಧಿಸಬೇಕಾದರೆ ತಮ್ಮ ಪೂರ್ವಜರ ಸಾಧನೆಗಳನ್ನು ಅರಿತರಬೇಕು. ಐತಿಹಾಸಿಕ ಸ್ಥಳಗಳು ಇಂತಹ ವಿವರಗಳನ್ನು ನಮಗೆ ನೀಡುತ್ತವೆ.

ಭಾರತವು ಪ್ರಾಚೀನವಾದ ನಾಗರೀಕತೆಯನ್ನು ಹೊಂದಿರುವ ರಾಷ್ಟ್ರ ಇಲ್ಲಿಯ ಪ್ರತಿಯೊಂದು ಹಳ್ಳಿ-ಊರು-ಪಟ್ಟಣ ಗಳಲ್ಲಿ ಐತಿಹಾಸಿಕವಾಗಿ ಪ್ರಾಮುಖ್ಯತೆಯನ್ನು ಪಡೆದಿರುವ ಅನೇಕ ಸ್ಮಾರಕಗಳಿವೆ. ಆದರೆ ಇವುಗಳ ಸಂರಕ್ಷಣೆಯ ಕೆಲಸ ಆಗಬೇಕಾದಷ್ಟು ಪ್ರಮಾಣದಲ್ಲಿ ಆಗುತ್ತಿಲ್ಲ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಇಂತಹ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆಂದೇ ‘ಪುರಾತತ್ತ್ವ ಇಲಾಖೆ’ ಎಂಬ ಇಲಾಖೆ ಇದೆಯಾದರೂ ಸಾರ್ವಜನಿಕರ ಸಹಕಾರವಿಲ್ಲದಿದ್ದಲ್ಲಿ ಇದು ಪರಿಣಾಮಕಾರಿಯಾಗಿ ಕಾರ್ ನಿರ್ವಹಿಸಲಾರದು. ಪ್ರಾಚೀನ ಸ್ಮಾರಕಗಳನ್ನು ನೋಡಲೆಂದು ಬರುವ ಪ್ರವಾಸಿಗಳು ಅವುಗಳ ಮೇಲೆ ಹೆಸರು ಇತ್ಯಾದಿಗಳನ್ನು ಕೆತ್ತಿ ಅವುಗಳನ್ನು ವಿರೂಪಗೊಳಿಸಿರುವ ಹಲವು ಉದಾಹರಣೆಗಳನ್ನು ಕಂಡಿದ್ದೇವೆ. ಖಂಡಿತಾ ಇದು ಮಾಡಬಾರದ ಕೆಲಸ, ಸರಿಯಾಗಿ ನಿರ್ವಹಣೆ ಇರದ ಸ್ಥಳಗಳಲ್ಲಿ ಶಾಸನದ ಕಲ್ಲುಗಳನ್ನು ಬಟ್ಟೆ ಒಗೆಯಲೋ ಅಥವಾ ಮೆಟ್ಟಿಲುಗಳಾಗಿಯೋ ಬಳಸಿರುವುದುಂಟು, ಕೋಟೆಯ ಅಥವಾ ದೇವಾಲಯದ ಕಲ್ಲುಗಳನ್ನು ಕಿತ್ತು ತಮ್ಮ ಮನೆಗಳನ್ನು ನಿರ್ಮಿಸಿಕೊಂಡವರಿದ್ದಾರೆ. ದೇವರ ಮೂರ್ತಿಗಳನ್ನು ಕಿತ್ತು ಪರದೇಶಗಳಿಗೆ ಮಾರುವ ಕಳ್ಳಸಾಗಾಣಿಕೆದಾರರಿದ್ದಾರೆ. ನಿಧಿಯ ಆಸೆಗಾಗಿ ವಿಗ್ರಹಗಳನ್ನು ನಾಶಮಾಡುವವರೂ ಇದ್ದಾರೆ. ಇವೆಲ್ಲವೂ ಕಾನೂನು ವಿರೋಧಿ ಕೃತ್ಯಗಳು. ಇಂತಹ ಕೆಲಸಗಳನ್ನು ಮಾಡುತ್ತಿರುವವರ ವಿವರಗಳು ತಿಳಿದುಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು.

ಅದೇ ರೀತಿಯಲ್ಲಿ ತಾಳೆಗರಿ ಪುಸ್ತಕಗಳು, ಪ್ರಾಚೀನ ನಾಣ್ಯಗಳು ಹಾಗೂ ವಿಗ್ರಹಗಳು, ಗ್ರಂಥಗಳು ಮುಂತಾದವೂ ಕೂಡಾ ಐತಿಹಾಸಿಕವಾಗಿ ಮಹತ್ವವಾದ ವಸ್ತುಗಳಾಗಿವೆ. ಇವೆಲ್ಲವೂ ರಾಷ್ಟ್ರೀಯ ಸಂಪತ್ತು. ಇವುಗಳನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯವಾಗಿದೆ.

14. ಜೈವಿಕ ಇಂಧನಗಳ ಮಹತ್ವ

ನಾವಿಂದು ಯಂತ್ರ ಯುಗದಲ್ಲಿ ಬದುಕುತ್ತಿದ್ದೇವೆ. ದಿನದ ಆರಂಭದಿಂದ ಹಿಡಿದು ರಾತ್ರಿ ಮಲಗಿದ ನಂತರವೂ ನಮಗೆ ಮಿಕ್ಸಿ, ಫ್ರಿಡ್ಜ್, ಕಾರು, ಫ್ಯಾನು ಮುಂತಾದ ಯಂತ್ರಗಳು ಅನಿವಾರ ಈ ಎಲ್ಲ ಯಂತ್ರಗಳೂ ಕೆಲಸ ಮಾಡಲು ಇಂಧನಗಳ ಅಗತ್ಯವಿದೆ. ಹಾಗಾಗಿ ನಮ್ಮ ಪೂರ್ವಿಕರೆಲ್ಲರಿಗಿಂತ ನಮಗೆ ಇಂದು ಹೆಚ್ಚಿನ ಪ್ರಮಾಣದಲ್ಲಿ ಇಂಧನದ ಅವಶ್ಯಕತೆ ಇಲ್ಲ ಅದರಲ್ಲಿಯೂ ವಿಶೇಷವಾಗಿ ಉರುವಲು (food) ಹಾಗೂ ವಾಹನ ಚಲನೆಗಾಗಿ ಬಳಕೆಯಾಗುವ ಇಂಧನದ ಪ್ರಮಾಣ ಅತಿಹೆಚ್ಚು ಈ ಎರಡೂ ಕಾವ್ಯಗಳಿಗೆ ಜೈವಿಕ ಇಂಧನ (bio-fl)ವನ್ನು ಬಳಸಬೇಕಾದ ಅಗತ್ಯ ಇಂದು ಹೆಚ್ಚಿದೆ.

ಇಂಧನಗಳನ್ನು ‘ಮರುಬಳಕೆ ಸಾಧ್ಯವಿರುವ’ ಮತ್ತು ‘ಮರುಬಳಕೆ ಸಾಧ್ಯವಿಲ್ಲದ’ ಎಂಬ ಎರಡು ಗುಂಪುಗಳಾಗಿ ವಿಂಗಡಿಸಬಹುದು. ನಾವು ಇಂದು ಅತಿ ಹೆಚ್ಚಾಗಿ ಬಳಸುತ್ತಿರುವ ನೈಸರ್ಗಿಕ ಅನಿಲ, ಪೆಟ್ರೋಲ್, ಡೀಸೆಲ್, ವಿದ್ಯುತ್, ಸೀಮೆಎಣ್ಣೆ ಮುಂತಾದವು ಪುನಃ ಬಳಸಲು ಸಾಧ್ಯವಿಲ್ಲದಂತಹವು. ಅತಿಯಾದ ಬಳಕೆಯಿಂದ ಈ ಇಂಧನಗಳ ಮೂಲಗಳು ಇಂದು ಬರಿದಾಗುತ್ತಿವೆ. ಅರಣ್ಯನಾಶದಿಂದಾಗಿ ಸೌದೆಯ ಪ್ರಮಾಣ ಕಡಿಮೆಯಾಗಿದೆ. ನದಿಗಳ ನೀರಿನಿಂದ ಉತ್ಪಾದಿಸಲಾಗುವ ಜಲವಿದ್ಯುತ್ ಬಹಳ ದುಬಾರಿ. ಈ ಎಲ್ಲ ಕಾರಣಗಳಿಂದ ಸೌರಶಕ್ತಿ, ಪವನ(ವಾಯು) ಶಕ್ತಿ ಮುಂತಾದ ಪುನಃ ಬಳಸಬಹುದಾದ ಇಂಧನಮೂಲಗಳನ್ನು ಉಪಯೋಗಿಸಿಕೊಳ್ಳಲು ಯತ್ನಿಸಲಾಗುತ್ತಿದೆ. ಇದರೊಂದಿಗೇ ಇರುವ ಮತ್ತೊಂದು ಸಾಧ್ಯತೆಯೇ ಜೈವಿಕ ಇಂಧನಗಳ ಬಳಕೆ.

ಜೈವಿಕ ಇಂಧನದ ಅತ್ಯುತ್ತಮ ಬಳಕೆಯಾಗಿ ನಾವು ಉದಾಹರಿಸಬಹುದಾದದ್ದು ಗೋಬರ್‌ಗ್ಯಾನ್‌ನ್ನು ಹಸುವಿನ ಸಗಣಿ, ಗಂಜಲ ಹಾಗೂ ಹಣ್ಣು ತರಕಾರಿಗಳ ತ್ಯಾಜ್ಯವಸ್ತುಗಳು ಗೋಬರ್‌ಗ್ಯಾಸ್‌ನ್ನು ತಯಾರಿಸಲು ಬೇಕಾಗುವ ಮೂಲ ವಸ್ತುಗಳು, ಇವುಗಳನ್ನು ಸಂಸ್ಕರಿಸುವುದರಿಂದ ಹೊರಬರುವ ಅನಿಲವನ್ನು ಅಡುಗೆ ಮಾಡಲು ಯಶಸ್ವಿಯಾಗಿ ಬಳಸಲಾಗುತ್ತಿದೆ. ವಾಹನಗಳನ್ನು ಓಡಿಸಲು ಅಪಾರ ಪ್ರಮಾಣದ ಇಂಧನದ ಅವಶ್ಯಕತೆ ಇದೆ. ಪೆಟ್ರೋಲ್ ಮತ್ತು ಡೀಸಲ್‌ಗಳ ಬದಲಾಗಿ ಸಕ್ಕರೆಯನ್ನು ತಯಾರಿಸುವಾಗ ಹೊರಬರುವ ‘ಎಥನಾಲ್’ ಎಂಬ ವಸ್ತುವನ್ನು ಬಳಸಬಹುದಾಗಿದೆ ಎಂಬುದನ್ನು ಸಂಶೋಧನೆಗಳು ತೋರಿಸಿಕೊಟ್ಟಿವೆ. ಅದೇ ರೀತಿಯಲ್ಲಿ ಹೊಂಗೆಮರದ ಕಾಯಿ, ‘ಜಟ್ರೋಪಾ’ ಎಂಬ ಗಿಡದ ಬೀ ಸೋಯಾ ಅವರೆ ಮುಂತಾದ ಸಸ್ಯಗಳಿಂದಲೂ ಎಣ್ಣೆಯನ್ನು ಹೊರತೆಗೆದು ವಾಹನಗಳ ಇಂಧನವಾಗಿ ಬಳಸಬಹುದಾಗಿದೆ.

ಜೈವಿಕ ಇಂಧನಗಳನ್ನು ಬಳಸುವುದರಿಂದ ಭೂಮಿಯ ಮೇಲ್ಪದರದ ಮೇಲೆ ಹಸಿರು ಹೆಚ್ಚುತ್ತದೆ. ವಾತಾವರಣದಲ್ಲಿ ಇಂಗಾಲಾಮ್ಲದ ಪ್ರಮಾಣ ಕಡಿಮೆಯಾಗುವುದರಿಂದ ಪರಿಸರನಾಶ ತಪ್ಪುತ್ತದೆ. ಭೂಮಿಯ ಒಡಲನ್ನು ನಿರಂತರವಾಗಿ ಕೊರೆಯುವುದು ತಪ್ಪುತ್ತದೆ. ನೈಸರ್ಗಿಕ ಸಂಪನ್ಮೂಲಗಳ ಬಳಕೆ ಕಡಿಮೆಯಾಗಿ ಭೂಮಿಯ ಆಯಸ್ಸು ಹೆಚ್ಚುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಜೈವಿಕ ಇಂಧನಗಳು ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಗಳಿಸಲಿವೆ.

15. ಭಾರತದ ಬಾಹ್ಯಾಕಾಶ ಕ್ಷೇತ್ರದ ಸಾಧನೆ

ವೈಜ್ಞಾನಿಕ ಸಂಶೋಧನೆಯ ಕ್ಷೇತ್ರದಲ್ಲಿ ಭಾರತವು ಸಾಧಿಸಿರುವ ಸಾಧನೆಯು ಮಹತ್ತರವಾದದ್ದು, ಅದರಲ್ಲಿಯೂ ವಿಶೇಷವಾಗಿ ಬಾಹ್ಯಾಕಾಶ ಸಂಶೋಧನೆಯ ಕ್ಷೇತ್ರದಲ್ಲಿ ನಮ್ಮ ದೇಶದ ವಿಜ್ಞಾನಿಗಳು ಏರಿರುವ ಎತ್ತರವನ್ನು ಅಮೆರಿಕಾ, ಇಂಗ್ಲೆಂಡ್, ಚೈನಾ, ಫ್ರಾನ್ಸ್‌ನಂತಹ ಮುಂದುವರೆದ ರಾಷ್ಟ್ರಗಳ ವಿಜ್ಞಾನಿಗಳೂ ಮುಟ್ಟಿಲ್ಲ ಎನ್ನುವುದು ನಿಜಕ್ಕೂ ಮಹತ್ತ್ವದ ಸಾಧನೆಯೇ ಸರಿ.

ಭಾರತ ದೇಶವು ಸ್ವಾತಂತ್ರ್ಯ ಪಡೆಯುತ್ತಿದ್ದಂತೆಯೇ ಇಲ್ಲಿಯ ವಿಜ್ಞಾನಿಗಳು ಹಾಗೂ ಆಡಳಿತಗಾರರು ಭಾರತದಂತಹ ಬೃಹತ್ ರಾಷ್ಟ್ರವು ತನ್ನದೇ ಆದ ಉಪಗ್ರಹಗಳನ್ನು ಹೊಂದಿರದಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ವಾಸ್ತವ ಸಂಗತಿಯನ್ನು ಆರಿತರು. ಅದರಂತೆ ಡಾ. ವಿಕ್ರಂ ಸಾರಾಭಾಯ್, ಮೇಘನಾದ ಸಹಾ, ಹೋಮಿ ಜಹಾಂಗೀರ್ ಬಾಬಾ ಮುಂತಾದ ಹಿರಿಯ ವಿಜ್ಞಾನಿಗಳ ನೇತೃತ್ವದಲ್ಲಿ 1962ರಲ್ಲಿ ಸಮಿತಿಯೊಂದನ್ನು ರಚಿಸಲಾಯಿತು. ಅದೇ ವರ್ಷ ಕೇರಳದ ತಿರುವನಂತಪುರು ಸಮೀಪದ ತುಂಬಾ ಎಂಬಲ್ಲಿ ರಾಕೆಟ್ ಉಡಾವಣಾ ಕ್ಷೇತ್ರ ಅಸ್ತಿತ್ವಕ್ಕೆ ಬಂತು. 1963ರ ನವೆಂಬರ್ 21ರಂದು ಇಲ್ಲಿಂದ ಅಮೆರಿಕಾದ ರಾಕೆಟನ್ನು ಹಾರಿಬಿಡುವುದರೊಂದಿಗೆ ಭಾರತದ ಬಾಹ್ಯಾಕಾಶ ಸಂಶೋಧನೆಯ ಸುವರ್ಣಯುಗ ಆರಂಭವಾಯಿತು. 1969ರಲ್ಲಿ ಬೆಂಗಳೂರಿನಲ್ಲಿ ಇಸ್ರೋ ಆರಂಭವಾಯಿತು. 1975ರಲ್ಲಿ ಇಸ್ರೋ ಸತೀಶ್‌ಧವನ್‌ರ ನೇತೃತ್ವದಲ್ಲಿ ನಮ್ಮ ದೇಶದ ಮೊತ್ತಮೊದಲ ಕೃತಕ ಉಪಗ್ರಹವಾದ ‘ಆರ್ಯಭಟ’ವನ್ನು ಆಕಾಶಕ್ಕೆ ಹಾರಿಬಿಟ್ಟಿತು. 1979ರಲ್ಲಿ ಭಾಸ್ಕರ-1, 1981ರಲ್ಲಿ ಭಾಸ್ಕರ-11 ಆಕಾಶವನ್ನು ಸೇರಿದವು. ಮುಂದೆ ಪ್ರೊ. ಯು.ಆರ್. ರಾವ್, ಡಾ. ಕಸ್ತೂರಿರಂಗನ್, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಮುಂತಾದ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ASLV, PSLV, GSLV ಮುಂತಾದ ರಾಕೆಟ್‌ಗಳನ್ನು ಭಾರತ ರೂಪಿಸಿದೆ. ಇದರಿಂದಾಗಿ ಹವಾಮಾನ, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಭೂತಪೂರ್ವವಾರ ಬದಲಾವಣೆಗಳಾಗಿವೆ.

1984ರಲ್ಲಿ ವಿಜ್ಞಾನಿಯಾದ ರಾಕೇಶ್ ಶರ್ಮ ಬಾಹ್ಯಾಕಾಶಕ್ಕೆ ಹಾರಿದ ಮೊದಲ ಭಾರತೀಯ ಆಕಾಶಯಾನಿಯಾದರು. ಅದೇ ರೀತಿ ಭಾರತೀಯ ಮೂಲದ ಕಲ್ಪನಾ ಚಾವ್ಹಾರು 2003ರಲ್ಲಿ ಹಾಗೂ ಸುನೀತಾ ವಿಲಿಯಮ್ಸ್‌ರು 2009 ಹಾಗೂ 2012ರಲ್ಲಿ ಆಕಾಶಯಾನವನ್ನು ಮಾಡಿದರು.

ಚಂದ್ರನನ್ನು ಅಭ್ಯಸಿಸಲೆಂದು ಆರಂಭಿಸಲಾದ ‘ಚಂದ್ರಯಾನ-1’, ‘ಚಂದ್ರಯಾನ-2’ ಮತ್ತು ‘ಚಂದ್ರಯಾನ-3’ ಬಾಹ್ಯಾಕಾಶ ಕ್ಷೇತ್ರದ ಸಾಧನೆಗಳಾಗಿವೆ. ಚಂದ್ರಯಾನ-2 ಇದುವರೆಗೂ ಯಾರೂ ಅಧ್ಯಯನ ಮಾಡದ ಚಂದ್ರನ ದಕ್ಷಿಣ ಧ್ರುವದ ಭಾಗದಲ್ಲಿ ಇಳಿಯಲು ಪ್ರಯತ್ನಿಸಿತು. 2023ರ ಆಗಸ್ಟ್ 23ರಂದು ಚಂದ್ರಯಾನ-3 ಯೋಜನೆಯ ಪ್ರಗ್ಯಾನ್ ಎಂಬ ರೋವರ್ ಅನ್ನು ಹೊತ್ತ ವಿಕ್ರಂ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನಲ್ಲಿ ಇಳಿಯಿತು. ಭಾರತ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿರುವ 4ನೇ ದೇಶವಾಗಿದೆ. ಮಾತ್ರವಲ್ಲದೇ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿರುವ ಮೊದಲ ನೌಕೆಯಾಗಿದೆ.

16. ಕ್ರೀಡೆ ಮತ್ತು ನಮ್ಮ ಆರೋಗ್ಯ

ಕ್ರೀಡೆಗಳು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ನಮ್ಮ ದೈಹಿಕ ಮತ್ತು ಮಾನಸಿಕ ಆರೊಗ್ಯದ ರಕ್ಷಣೆಗೆ ಆಟವಾಡುವುದು ಅತ್ಯಗತ್ಯ.

ನಿರಂತರವಾದ ಚಟುವಟಿಕೆಯಿಂದ ದೇಹದ ಅಂಗಾಂಗಗಳು ಸುಸ್ಥಿತಿಯಲ್ಲಿರುತ್ತವೆ. ಕ್ರಿಕೆಟ್, ಹಾಕಿ, ಬ್ಯಾಸ್ಕೆಟ್‌ಬಾಲ್, ಮುಂತಾದ ಆಟಗಳಲ್ಲಿ ಆಟಗಾರರು ವೇಗವಾಗಿ ಓಡುವುದರಿಂದ ದೇಹದಲ್ಲಿರುವ ಅನಗತ್ಯವಾದ ಕೊಬ್ಬು ಕರಗುತ್ತದೆ. ಸ್ನಾಯುಗಳು ಬಲಗೊಳ್ಳುತ್ತವೆ. ಕೀಲುಗಳ ಚಲನೆ ಸುಲಭವಾಗುತ್ತದೆ. ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾವ್ಯ ನಿರ್ವಹಿಸುತ್ತದೆ. ಇದೆಲ್ಲದರಿಂದಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯವು ಉತ್ತಮಗೊಳ್ಳುತ್ತದೆ, ಹೃದ್ರೋಗ, ಮಧುಮೇಹ, ರಕ್ತದ ಒತ್ತಡ ಮುಂತಾದ ರೋಗಗಳು ದೂರವಾಗುತ್ತವೆ.

ದೈಹಿಕ ಆರೋಗ್ಯವನ್ನು ಕಾಯ್ದುಕೊಳ್ಳುವುದು ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯವನ್ನು ಚೆನ್ನಾಗಿಟ್ಟು ಕೊಳ್ಳುವುದೂ ಅಷ್ಟೇ ಮುಖ್ಯ. ಚದುರಂಗ, ಕೇರಂ, ಚನ್ನೆಮಣೆ, ಪದಬಂಧ, ಚಿತ್ರಬಂಧ ಮುಂತಾದ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುವುದರಿಂದ ಬುದ್ಧಿಶಕ್ತಿಯು ಹೆಚ್ಚು ಚುರುಕಾಗುತ್ತದೆ. ಏಕಾಗ್ರತೆಯು ಹೆಚ್ಚುತ್ತದೆ. ಅದೇ ರೀತಿಯಲ್ಲಿ ಯೋಗಾಭ್ಯಾಸ ಹಾಗೂ ಪ್ರಾಣಾಯಾಮಗಳಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಲು ಸಾಧ್ಯ.

ನಿಯತವಾಗಿ ಆಟೋಟಗಳಲ್ಲಿ ತೊಡಗುವುದರಿಂದ ನಮ್ಮ ಮನಸ್ಸು ಉಲ್ಲಾಸಗೊಳ್ಳುತ್ತದೆ. ರಕ್ತಸಂಚಾರ ಸರಾಗವಾಗಿ ದೇಹದ ಸೌಂದರ ಹೆಚ್ಚುತ್ತದೆ. ಮುಪ್ಪು ದೂರವಾಗುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಕ್ರೀಡೆಗಳನ್ನು ಎಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.

17. ಮೂಢನಂಬಿಕೆಗಳು

ಜನರಲ್ಲಿ ಮೌಢ್ಯವನ್ನು ಬೆಳೆಸುವ, ತಾರ್ಕಿಕವಾಗಿ ವಿವರಿಸಲು ಸಾಧ್ಯವಾಗದ ನಂಬಿಕೆಗಳೇ ಮೂಢನಂಬಿಕೆಗಳು. ಮನುಷ್ಯ ನೆಮ್ಮದಿಯಾಗಿ ಬಾಳಲು ಅವನಿಗೆ ನಂಬಿಕೆಗಳು ಬೇಕೇ ಬೇಕು ಎಂಬುದು ನಿಜ. ಆದರೆ ಅವು ಅವರ ಬಾಳನ್ನು ಉದ್ದರಿಸುವಂತಿರಬೇಕೇ ಹೊರತೂ ಮೌಢ್ಯದತ್ತ ದೂಡುವಂತಿರಬಾರದು. ಉದಾಹರಣೆಗೆ, ಇತ್ತೀಚೆಗೆ ಟಿವಿಯಲ್ಲಿ ಒಬ್ಬ ಜ್ಯೋತಿಷಿಯು “ಸದ್ಯದಲ್ಲಿಯೇ ಪ್ರಳಯ ಸಂಭವಿಸಲಿದ್ದು ಜನರೆಲ್ಲ ಸತ್ತುಹೋಗಲಿದ್ದಾರೆ. ಇದನ್ನು ತಪ್ಪಿಸಬೇಕಾದರೆ ಐದು ಬಗೆಯ ಎಣ್ಣೆಯನ್ನು ಬೆರೆಸಿ ಅದರಲ್ಲಿ ದೀಪವನ್ನು ಹಚ್ಚಿ ದೇವರ ಮುಂದಿಡಬೇಕು” ಎಂದು ಬೊಗಳೆಬಿಟ್ಟನು. ಮರುದಿನವೇ ಎಣ್ಣೆ ಅಂಗಡಿಗಳ ಮುಂದೆ ಜನರ ದೊಡ್ಡ ಸಾಲು! ಪ್ರಳಯವು ಒಂದು ನೈಸರ್ಗಿಕ ಪ್ರಕ್ರಿಯೆ. ಅದು ನಿಜವಾಗಿ ಎಂದು ನಡೆಯುವುದೋ ಯಾರಿಗೂ ಹೇಳಲು ಸಾಧ್ಯವಿಲ್ಲ, ಅಂತಹವರಲ್ಲಿ ಕೇವಲ ದೀಪವನ್ನು ಉರಿಸಿ ಪ್ರಳಯವನ್ನು ತಪ್ಪಿಸುತ್ತೇವೆ ಎನ್ನುವುದು ಮೂಢನಂಬಿಕೆಯಲ್ಲದೆ ಮತ್ತೇನು?

‘ತಮಗಿಂತ ಬಲವಾದ ಶಕ್ತಿಯೊಂದು ಅಸ್ತಿತ್ವದಲ್ಲಿದೆ. ಅದನ್ನು ಒಲಿಸಿಕೊಂಡರೆ ಅದು ನಮಗೆ ಒಳಿತನ್ನು ಮಾಡುತ್ತದೆ. ಅದರ ವಿರೋಧ ಕಟ್ಟಿಕೊಂಡರೆ ನಮಗೆ ಕಷ್ಟ ಖಂಡಿತ’ ಎಂಬ ನಂಬಿಕೆಯೇ ದೇವರು-ಧರ್ಮಗಳಿಗೆಲ್ಲ ಮೂಲ. ಈ ನಂಬಿಕೆಯು ಒಂದು ಮಿತಿಯಲ್ಲಿದ್ದಾಗ ಅದು ನಮಗೆ ಒಳಿತನ್ನು ಉಂಟುಮಾಡುವುದು ನಿಜ. ಉದಾಹರಣೆಗೆ, ‘ಬೇರೆಯವರನ್ನು ಹಿಂಸಿಸಿದರೆ ನಮಗೆ ಪಾಪ ಬರುತ್ತದೆ. ಬಡವರಿಗೆ ದಾನ ನೀಡಿದರೆ ಪುಣ್ಯ ಬರುತ್ತದೆ’ ಮುಂತಾದ ನಂಬಿಕೆಗಳು, ಇಂತಹವುಗಳಿಂದ ಜನರಿಗೆ ಒಳಿತೇ ಹೊರತೂ ಕೆಡಕೇನಿಲ್ಲ. ಆದರೆ, ‘ಬೆಕ್ಕು ಅಡ್ಡ ಬಂದರೆ, ಒಂಟಿ ಸೀನು ಸೀನಿದರೆ ಅಪಶಕುನ’, ‘ಎಡಗೈಯಲ್ಲಿ ಯಾವುದಾದರೂ ವಸ್ತುವನ್ನು ಇಟ್ಟರೆ ಅದು ಕಳೆದು ಹೋಗುತ್ತದೆ’, ‘ಮಂಗಳವಾರದಂದು ಅಥವಾ ರಾಹುಕಾಲದಲ್ಲಿ ಶುಭಕೆಲಸವನ್ನು ಆರಂಭ ಮಾಡಿದರೆ ಅದು ಸರಿಯಾಗುವುದಿಲ್ಲ, ‘ಸಂಖ್ಯೆ ಹದಿಮೂರು ಅಶುಭಮುಂತಾದ ನಂಬಿಕೆಗಳಿಗೆ ಯಾವುದೇ ತಾರ್ಕಿಕ ಸಮರ್ಥನೆ ಇಲ್ಲ. ಹಾಗಾಗಿ ಇಂತಹವುಗಳನ್ನು ಮೂಢನಂಬಿಕೆಗಳೆಂದು ಕರೆಯಬಹುದು.

ಮೂಢನಂಬಿಕೆಗಳ ಬೀಜವನ್ನು ಜನರ ಮನಸ್ಸಿನಲ್ಲಿ ಬಿತ್ತುವುದು ಸುಲಭ. ಆದ್ದರಿಂದ ಮೋಸಗಾರರು ಮತ್ತು ಡಾಂಭಿಕರು ದುರ್ಬಲ ಮನಸ್ಸಿನವರಲ್ಲಿ ಇಂತಹ ನಂಬಿಕೆಗಳ ಬಗ್ಗೆ ಭಯ ಹುಟ್ಟಿಸಿ ತಾವು ಲಾಭವನ್ನು ಗಳಿಸಿಕೊಳ್ಳುತ್ತಾರೆ. ಆದ್ದರಿಂದ ಜನರು ಮೂಢನಂಬಿಕೆಗಳ ಬಗ್ಗೆ ಜಾಗರೂಕರಾಗಿರಬೇಕು ತಾರ್ಕಿಕವಾದ ನಂಬಿಕೆ ಹಾಗೂ ಮೂಢನಂಬಿಕೆಗಳಿಗೆ ಇರುವ ಸೂಕ್ಷ್ಮವಾದ ವ್ಯತ್ಯಾಸವನ್ನು ಕಂಡುಕೊಂಡು ತಮ್ಮ ಜೀವನವನ್ನು ಸುಖಮಯವಾಗಿಸಿಕೊಳ್ಳಬೇಕು.

18. ಪುಸ್ತಕಗಳ ಮಹತ್ವ

ಕಲಿಕೆ ಅಥವಾ ವಿದ್ಯಾಭ್ಯಾಸವು ಮಾನವನ ಜೀವನದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ನೋಡುವಿಕೆ, ಕೇಳುವಿಕೆ, ಸ್ವಪ್ರಯತ್ನ ಮುಂತಾದ ಹಲವು ವಿಧಾನಗಳ ಮೂಲಕ ನಾವು ಕಲಿಯುವುದು ಸಾಧ್ಯವಿದೆಯಾದರೂ ಪುಸ್ತಕಗಳ ಮೂಲಕ ಕಲಿಯುವುದು ಅತ್ಯಂತ ಪರಿಣಾಮಕಾರಿ ಹಾಗೂ ಉಪಯುಕ್ತ,

ಪುಸ್ತಕಗಳು ಜ್ಞಾನದ ಅತ್ಯಂತ ಬೆಲೆಬಾಳುವ ಮೂಲಗಳಾಗಿದ್ದು ನಮಗೆ ಹಲವು ರೀತಿಯಲ್ಲಿ ಉಪಕಾರಿಗಳಾಗಿವೆ. ವಿವಿಧ ವಿಶ್ವಗಳ ಹಾಗೂ ಸಂಸ್ಕೃತಿಗಳ ಜ್ಞಾನವನ್ನು ಮತ್ತು ಹಲವು ತಲೆಮಾರಿನ ಲೇಖಕರ ಅನುಭವದ ಸಾರವನ್ನು ನಮಗೆ ಪುಸ್ತಕಗಳು ಉಣಬಡಿಸುತ್ತವೆ. ಹೊಸ ತಂತ್ರಜ್ಞಾನಗಳ ಬಗೆಗೆ, ವಿವಿಧ ಭಾಷೆಗಳ ಬಗೆಗೆ ನಮ್ಮ ಜ್ಞಾನದ ಕ್ಷಿತಿಜವು ವಿಸ್ತರಿಸುವುದು ಪುಸ್ತಕಗಳಿಂದಲೇ ಎಂದರೆ ತಪ್ಪಲ್ಲ, ಆದ್ದರಿಂದಲೇ ಶತಶತಮಾನಗಳ ಕಾಲದಿಂದಲೂ ಎಲ್ಲ ಜ್ಞಾನಾಸಕ್ತರೂ ಪುಸ್ತಕ ಪ್ರೇಮಿಗಳಾಗಿದ್ದುದನ್ನು ನಾವು ಗಮನಿಸಬಹುದಾಗಿದೆ. ಕಾಲದಿಂದ ಕಾಲಕ್ಕೆ ಪುಸ್ತಕಗಳ ಸ್ವರೂಪ ಬದಲಾಗಿದೆ. ಪ್ರಾಚೀನ ಕಾಲದ ತಾಳೆಗರಿಯ ಪುಸ್ತಕಗಳಿಂದ ಹಿಡಿದು ಅತ್ಯಾಧುನಿಕವಾದ ಇ-ಪುಸ್ತಕಗಳವರೆಗೆ ಪುಸ್ತಕಗಳ ಸ್ವರೂಪ ಯಾವುದೇ ಆಗಿದ್ದರೂ ಅವುಗಳ ಪ್ರಾಮುಖ್ಯತೆ ತಗ್ಗಿಲ್ಲ.

ಪುಸ್ತಕಗಳು ನಮ್ಮ ಅತ್ಯುತ್ತಮ ಸ್ನೇಹಿತರಾಗಬಲ್ಲವು. ಇವು ನಮಗೆ ಉಚಿತವಾಗಿ ವಿಶ್ವಪರ್ಯಟನೆಯನ್ನು ಮಾಡಿಸುತ್ತವೆ. ಪುಸ್ತಕವನ್ನು ತೆರೆದು ಓದಲು ಆರಂಭಿಸಿದ ಒಡನೆಯೇ ನಾವು ಮತ್ತೊಂದು ಲೋಕಕ್ಕೆ ಪ್ರಯಾಣಿಸಬಹುದು. ಹಿಂದೆ ಆಗಿಹೋದ ಸಾಕ್ರಟಿಸ್, ಶಂಕರಾಚಾರ್ಯ, ಬುದ್ಧ, ಏಸುಕ್ರಿಸ್ತ ಮುಂತಾದ ಮಹಾನ್ ಚೇತನರೊಂದಿಗೆ ನಾವು ಬೌದ್ಧಿಕವಾದ ಸಂಪರ್ಕವನ್ನು ಕಲ್ಪಿಸಿಕೊಳ್ಳಬೇಕೆಂದರೆ ಪುಸ್ತಕಗಳೇ ಮುಖ್ಯ ಸಾಧನ. ಅದೇ ರೀತಿಯಲ್ಲಿ ನ್ಯೂಟನ್, ಐನ್‌ಸ್ಟೈನ್, ಎಡಿಸನ್ ಮುಂತಾದ ವಿಜ್ಞಾನಿಗಳ ಚಿಂತನೆಗಳನ್ನು ಮುಂದುವರೆಸಿ ಸಮಾಜಕ್ಕೆ ನಮ್ಮ ದೇಶದ ಕೊಡುಗೆಗಳನ್ನು ನೀಡಲೂ ಪುಸ್ತಕಗಳೇ ಬೇಕು. ಗಾಂಧಿ, ನೆಹರು, ಸುಭಾಷ್ ಚಂದ್ರ ಬೋಸ್ ಮುಂತಾದ ರಾಷ್ಟ್ರನಾಯಕರ ಜೀವನ ಚರಿತ್ರೆಗಳನ್ನು ಓದಿ ತಮ್ಮ ಜೀವನವನ್ನು ರೂಪಿಸಿಕೊಂಡ ವ್ಯಕ್ತಿಗಳ ಸಂಖ್ಯೆ ಅಪಾರ.

ಪುಸ್ತಕಗಳು ಬಡವ-ಬಲ್ಲಿದ, ಹಿರಿಯ-ಕಿರಿಯ, ಹೆಣ್ಣು-ಗಂಡು, ಪಂಡಿತ-ಪಾಮರ, ಮುಂತಾದ ಯಾವುದೇ ಭೇದಬಾವವಿಲ್ಲದೆ ಎಲ್ಲರಿಗೂ ಸಮಾನವಾಗಿ ಜ್ಞಾನದಾನವನ್ನು ಮಾಡುತ್ತವೆ. ಕಂಪ್ಯೂಟರ್ ಮುಂತಾದ ಅತ್ಯಾಧುನಿಕ ಯಂತ್ರಗಳನ್ನು ಬಳಸಲು ಬಾರದ ಜನರೂ ಕೂಡಾ ಪುಸ್ತಕಗಳ ಪುಟಗಳನ್ನು ತಿರುವಿ ಹಾಕಿ ಜ್ಞಾನವನ್ನು ಪಡೆಯುವುದು ಸಾಧ್ಯವಿದೆ. ಹಣದ ಕೊರತೆ ಇದ್ದಲ್ಲಿ ಸಾರ್ವಜನಿಕ ಗ್ರಂಥಾಲಯಗಳನ್ನು ಬಳಸಿಕೊಳ್ಳುವ ಅವಕಾಶವೂ ಇದೆ. ಹಾಗಾಗಿ ಬಹಳ ಕಡಿಮೆ ಖರ್ಚಿನಲ್ಲಿ ಜ್ಞಾನವನ್ನು ಸಂಪಾದಿಸಬೇಕೆಂದಿದ್ದರೆ ಇಂದಿಗೂ ಪುಸ್ತಕಗಳನ್ನೇ ಆಶ್ರಯಿಸದೆ ಬೇರೆ ವಿಧಿ ಇಲ್ಲ. ಪುಸ್ತಕಗಳನ್ನು ಓದಿ ಕಲಿತು ಬುದ್ದಿವಂತರಾದ ಜನ ತಮ್ಮ ಅನುಭವಗಳನ್ನು ಮತ್ತೆ ಪುಸ್ತಕಗಳ ರೂಪದಲ್ಲಿ ದಾಖಲಿಸುತ್ತಾ ಹೋಗುತ್ತಾರೆ. ಹೀಗೆ ಜ್ಞಾನಪ್ರವಾಹವು ತಲೆಮಾರಿನಿಂದ ತಲೆಮಾರಿಗೆ ಹರಿಯುವುದು ಸಾಧ್ಯವಾಗುತ್ತದೆ.

19. ಹೆಚ್ಚುತ್ತಿರುವ ವೃದ್ಧಾಶ್ರಮಗಳು.

ಮಾನವ ಕುಟುಂಬ ಜೀವಿ, ತಂದೆ, ತಾಯಿ, ಹೆಂಡತಿ, ಮಕ್ಕಳು, ಅಜ್ಜಿ-ತಾತ, ಚಿಕ್ಕಮ್ಮ-ಚಿಕ್ಕಪ್ಪ, ಮಾವ-ಅತ್ತೆ ಮುಂತಾದ ಕುಟುಂಬದ ಸದಸ್ಯರೊಂದಿಗೆ ಜೀವನವನ್ನು ನಡೆಸುತ್ತಿದ್ದ ಅವಿಭಕ್ತ ಮಾದರಿಯ ಜೀವನ ಶೈಲಿಯು ತೀರ ಇತ್ತೀಚಿನವರೆಗೆ ನಮ್ಮ ಸಮಾಜದಲ್ಲಿ ಇತ್ತು. ಆದರೆ ಇಂದು ಜಾಗತೀಕರಣ, ಔದ್ಯಮೀಕರಣ ಹಾಗೂ ಬದಲಾದ ಆರ್ಥಿಕ ಸ್ಥಿತಿಗತಿಗಳ ಕಾರಣದಿಂದಾಗಿ ಅವಿಭಕ್ತ ಕುಟುಂಬಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ಹಿಂದೆ ಭಾರತವು ಕೃಷಿ ಪ್ರಧಾನವಾದ ದೇಶವಾಗಿತ್ತು. ಕೃಷಿಯು ಮಾನವ ಶಕ್ತಿಯನ್ನು ಪ್ರಮುಖವಾಗಿ ಆಧರಿಸುವುದರಿಂದ ಕುಟುಂಬದಲ್ಲಿ ಹೆಚ್ಚಿನ ಸದಸ್ಯರಿದ್ದಷ್ಟೂ ಅದರಿಂದ ಹೆಚ್ಚು ಉಪಯೋಗವೇ ಆಗುತ್ತಿತ್ತು. ಎರಡನೇ ಮಹಾಯುದ್ಧದ ನಂತರ ಔದ್ಯಮೀಕರಣವು ಹೆಚ್ಚಿದ ಪರಿಣಾಮವಾಗಿ ಜನರು ಹಳ್ಳಿಗಳನ್ನು ಬಿಟ್ಟು ನಗರಗಳಿಗೆ ವಲಸೆ ಬಂದು ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಲಾರಂಭಿಸಿದರು. ಈ ಕಾರಣದಿಂದಾಗಿ ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಿತು. ಇದು ವೃದ್ಧಾಶ್ರಮಗಳ ಆರಂಭಕ್ಕೆ ದಾರಿಯಾಯಿತು. ಇಂದು ಜಾಗತೀಕರಣದ ಕಾರಣದಿಂದಾಗಿ ಪ್ರತಿಭಾವಂತ ತರುಣರು ತಮ್ಮ ತಾಯ್ಕಾಡನ್ನು ತೊರೆದು ಹೊರದೇಶಗಳಿಗೆ ದುಡಿಯಲೆಂದು ಹೋಗುತ್ತಿದ್ದಾರೆ. ತಮ್ಮೊಂದಿಗೆ ತಮ್ಮ ತಂದೆ-ತಾಯಿಗಳನ್ನು ವಿದೇಶಗಳಿಗೆ ಕರೆದೊಯ್ಯಲಾರದ ಇಂತಹ ಅನೇಕರು ಅವರನ್ನು ವೃದ್ಧಾಶ್ರಮಗಳಿಗೆ ಕಳುಹಿಸುತ್ತಿದ್ದಾರೆ. ಆದ್ದರಿಂದ ವೃದ್ಧಾಶ್ರಮಗಳ ಸಂಖ್ಯೆ ಎಲ್ಲೆಡೆ ಹೆಚ್ಚುತ್ತಿದೆ.

ವೃದ್ಧಾಶ್ರಮಗಳು ಹೆಚ್ಚುತ್ತಿರುವುದಕ್ಕೆ ಇರುವ ಮೊತ್ತಮೊದಲ ಕಾರಣವೆಂದರೆ ಕುಟುಂಬದ ಮೇಲಿನ ಆರ್ಥಿಕ ಒತ್ತಡ. ಇಂದು ಜೀವನಾವಶ್ಯಕ ವಸ್ತುಗಳ ಬೆಲೆಯು ದಿನದಿಂದ ದಿನಕ್ಕೆ ಗಣನೀಯವಾಗಿ ಏರುತ್ತಿದ್ದು ಮನೆಯ ಎಲ್ಲ ಸದಸ್ಯರೂ ದುಡಿಯುವುದು ಅನಿವಾರವಾಗಿದೆ. ಹಾಗಾಗಿ ಮಕ್ಕಳು, ಮುದುಕರು ಮುಂತಾದ ಅಶಕ್ತರನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇರದ ಪರಿಸ್ಥಿತಿ ಉದ್ಭವಿಸಿದೆ. ಇದರಿಂದಾಗಿ ವೃದ್ಧಾಶ್ರಮಗಳ ರೀತಿಯಲ್ಲಿಯೇ ಶಿಶುಪಾಲನಾ ಕೇಂದ್ರಗಳ ಸಂಖ್ಯೆಯೂ ಹೆಚ್ಚುತ್ತಿದೆ.

ವೃದ್ಧಾಶ್ರಮಗಳ ಹೆಚ್ಚಳಕ್ಕೆ ಇರುವ ಮತ್ತೊಂದು ಪ್ರಮುಖ ಕಾರಣವೆಂದರೆ ಮಾನವೀಯ ಸಂಬಂಧಗಳಲ್ಲಿ ಉಂಟಾಗಿರುವ ಶಿಥಿಲತೆ, ಆರ್ಥಿಕ ಸ್ವಾತಂತ್ರ್ಯದ ಕಾರಣದಿಂದಾಗಿ ಜನರು ದಿನೇ ದಿನೇ ಹೆಚ್ಚು ಹೆಚ್ಚು ಕೊಳ್ಳುಬಾಕರಾಗುತ್ತಿದ್ದಾರೆ. ಮನುಷ್ಯರನ್ನು ಪ್ರೀತಿಸುವುದಕ್ಕಿಂತ ವಸ್ತುಗಳನ್ನು ಹೆಚ್ಚಾಗಿ ಪ್ರೀತಿಸುವುದರಲ್ಲಿ ಅವರು ಸಂತೋಷವನ್ನು ಕಂಡುಕೊಳ್ಳುತ್ತಿದ್ದಾರೆ. ಅಶಕ್ತರಾದ, ಮುಪ್ಪಿನಿಂದ ಹಾಗೂ/ಅಥವಾ ಅನಾರೋಗ್ಯದಿಂದ ಕಷ್ಟಪಡುತ್ತಿರುವ ಹಿರಿಯ ನಾಗರೀಕರನ್ನು ಪ್ರೀತಿಯಿಂದ ಆರೈಕೆ ಮಾಡುವ ಉದಾರ ಬುದ್ದಿ ನಿಧಾನವಾಗಿ ಕಡಿಮೆಯಾಗುತ್ತಿದೆ. ಇದರೊಂದಿಗೆ ಹಿಂದೆ ಪ್ರಸ್ತಾಪಿಸಿದಂತೆ ವಿದೇಶಗಳಿಗೆ ತೆರಳುವ ಕಾರಣದಿಂದಲೂ ಹಿರಿಯ ನಾಗರೀಕರಿಗೆ ಮನೆಗಳಲ್ಲಿ ಆಶ್ರಯತಪ್ಪಿ ಅವರೆಲ್ಲ ವೃದ್ಧಾಶ್ರಮಗಳ ಕಡೆಗೆ ಮುಖ ಮಾಡುತ್ತಿದ್ದಾರೆ.

20. ನನ್ನ ಬಾಲ್ಯದ ನೆನಪುಗಳು / ನನ್ನ ಬಾಲ್ಯದ ಸ್ಮೃತಿಗಳು

ಪ್ರತಿಯೊಬ್ಬರ ಜೀವನದಲ್ಲಿಯೂ ಬಾಲ್ಯ ಎನ್ನುವುದು ಒಂದು ಸುಂದರವಾದ ಕಾಲಘಟ್ಟ ಯಾವುದೇ ಭೇದಭಾವವಿಲ್ಲದೆ ಎಲ್ಲರೊಂದಿಗೆ ಬೆರೆತು ಸಂತೋಷದಿಂದ ಆಡಿ, ಕುಣಿದು ಕಲಿತು ಬೆಳೆಯುವ ಅದ್ಭುತವಾದ ಕಾಲ ಅದು. ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುವುದು ಬೇಸಿಗೆಯ ಬಿರುಬಿಸಿಲಿನಲ್ಲಿ ತಂಗಾಳಿ ಬೀಸಿದಷ್ಟೇ ಹಿತಕರ.

ನನ್ನ ಬಾಲ್ಯದ ದಿನಗಳನ್ನು ನಾನು ಕಳೆದದ್ದು ರಾಮಾಪುರ ಎಂಬ ಪುಟ್ಟ ಹಳ್ಳಿಯಲ್ಲಿ. ಸುಮಾರು ನೂರು ಮನೆಗಳಿರುವ ಸುಂದರವಾದ ಹಳ್ಳಿ ಅದು. ಹಳ್ಳಿಯ ಒಂದು ಬದಿಯಲ್ಲಿ ‘ರಾಮದೇವರ ಗುಡ್ಡ’ ಎಂದು ಕರೆಯಲ್ಪಡುವ ಒಂದು ದೊಡ್ಡ ಬೆಟ್ಟವಿದೆ. ಬೆಟ್ಟದ ಮೇಲೆ ಇರುವ ‘ಅಮೃತತೀರ್ಥ’ ಎಂದ ಸ್ಥಳದಿಂದ ‘ಲೋಕಮೋಹಿನಿ’ ಎಂಬ ಹೊಳೆಯು ಹುಟ್ಟಿ ಹಳ್ಳಿಯ ಪಕ್ಕದಲ್ಲಿ ಹರಿಯುತ್ತದೆ. ಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಕೇವಲ ಏಳನೇ ತರಗತಿಯವರೆಗೆ ಮಾತ್ರ ಓದಲು ಸಾಧ್ಯ. ನಮಗೆ ಮೊದಲು ವಿದ್ಯೆ ಕಲಿಸಿದ ಗುರುಗಳು ನಾಗಯ್ಯನವರು. ಅವರು ಸದಾ ನಗುಮುಖವನ್ನು ಹೊಂದಿದ್ದ ಚಟುವಟಿಕೆಯ ವ್ಯಕ್ತಿ. ಅವರು ನಮಗೆ ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಎಲ್ಲ ವಿಷಯ ಗಳನ್ನೂ ತುಂಬಾ ಚೆನ್ನಾಗಿ ಕಲಿಸುತ್ತಿದ್ದರು. ಕುವೆಂಪು, ಬೇಂದ್ರೆ, ಕೆ.ಎಸ್.ನ. ಮುಂತಾದ ಕವಿಗಳ ಭಾವಗೀತೆಗಳನ್ನು ಬಹಳ ಚೆನ್ನಾಗಿ ಹಾಡುತ್ತಿದ್ದ ಅವರು ರಾಬಿನ್‌ಸನ್ ಕ್ರೂಸೋ, ಹವಳದ್ವೀಪ, ಭೂಗರ್ಭಯಾತ್ರೆ ಮುಂತಾದ ರೋಚಕ ಪ್ರವಾಸದ ಕೃತಿಗಳನ್ನು ಓದಿಹೇಳುತ್ತಿದ್ದರು. ಬೇಸಿಗೆ ರಜೆಯಲ್ಲಿ ನಮ್ಮೆಲ್ಲರನ್ನೂ ಕರೆದುಕೊಂಡು ಬೆಟ್ಟ ಹತ್ತುತ್ತಿದ್ದರು. ಬೆಟ್ಟದ ಮೇಲೆ ಬೆಳೆದಿರುತ್ತಿದ್ದ ಕಾರೆ, ನೇರಳೆ, ಬೋರೆ, ಸೀಬೆ, ಎಲಚಿ ಮುಂತಾದ ಹಣ್ಣುಗಳನ್ನು ನಾವು ಹೊಟ್ಟೆ ತುಂಬುವಷ್ಟು ಕಿತ್ತು ತಿನ್ನುತ್ತಿದ್ದವು. ನದಿಯಲ್ಲಿ ಈಜುವುದು, ಲಗೋರಿ, ಚಿನ್ನಿದಾಂಡು, ಮರಕೋತಿ ಮುಂತಾದ ಆಟಗಳನ್ನು ಆಡುವುದು, ಯಾರದ್ದಾದರೂ ತೋಟದಲ್ಲಿ ಏಳನೀರು, ಮಾವಿನಕಾಯಿ ಮುಂತಾದವುಗಳನ್ನು ಕದಿಯುವುದು ಮುಂತಾದ ‘ಮಹಾಕಾರ’ ದಲ್ಲಿ ನಮಗೆ ರಜೆ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ.

ಮಾಧ್ಯಮಿಕ ಶಾಲೆಯಲ್ಲಿ ನಮಗೆ ‘ರಂಗಮಣಿ’ ಎಂಬ ಒಬ್ಬ ಅಧ್ಯಾಪಕಿ ದೊರೆತರು. ಅವರು ನಮಗೆಲ್ಲ ಕಬ್ಬಿಣದ ಕಡಲೆಯಾಗಿದ್ದ ಇಂಗ್ಲಿಷ್ ಮತ್ತು ಗಣಿತವನ್ನು ಸುಲಿದ ಬಾಳೆಹಣ್ಣಿನಷ್ಟು ಸರಳ ಮಾಡಿದರು. ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರು ನಮ್ಮಿಂದ ಷೇಕ್‌ಸ್ವಿಯರನ ‘ಚಂಡಮಾರುತ’ ನಾಟಕದ ಒಂದು ಭಾಗವನ್ನು ಆಡಿಸಿದರು. ಹೀಗೆ ರಂಗಭೂಮಿಗೆ ನನ್ನನ್ನು ಮೊತ್ತಮೊದಲು ಏರಿಸಿದವರೇ ಅವರು, ಆಶುಭಾಷಣ, ಚರ್ಚಾಸ್ಪರ್ಧೆ, ಪ್ರಬಂಧ ಸ್ಪರ್ಧೆ ಮುಂತಾದ ಸಾಹಿತ್ಯಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ನಾನು ಗಳಿಸಲು ಸಾಧ್ಯವಾದದ್ದೂ ಅವರ ಮಾರ್ಗದರ್ಶನದಿಂದಲೇ, ನಾವು ಏಳನೇ ತರಗತಿಯಲ್ಲಿದ್ದಾಗ ಅವರು ಮದುವೆಯಾಗಿ ಬೇರೆ ಊರಿಗೆ ಹೋದಾಗ ನಮಗೆಲ್ಲ ಒಬ್ಬ ಅಕ್ಕನಿಂದ ದೂರವಾದಷ್ಟು ದುಃಖವಾಯಿತು. ಅದೇ ಸಂದರ್ಭದಲ್ಲಿ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ರಾಮರಾವ್ ಎಂಬುವರು ಶಾಲೆ ಮುಗಿದ ಮೇಲೆಯೂ ವಿಶೇಷ ತರಗತಿಗಳನ್ನು ತೆಗೆದುಕೊಂಡು ವಿಜ್ಞಾನ ವಿಷಯಗಳನ್ನು ಚೆನ್ನಾಗಿ ಕಲಿಸಿದರು. ಇದರಿಂದಾಗಿ ನಾನು ಏಳನೇ ತರಗತಿಯಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣನಾಗಲು ಸಾಧ್ಯವಾಯಿತು.

ಹೀಗೆ ರಾಮಾಪುರದಲ್ಲಿ ಕಳೆದ ನನ್ನ ಬಾಲ್ಯದ ದಿನಗಳನ್ನು ನಾನು ಎಂದೆಂದೂ ಮರೆಯಲಾರೆ.

21. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ

ಕಾಡುಗಳು ಪ್ರಕೃತಿಮಾತೆಯ ಅದ್ಭುತವಾದ ಸೃಷ್ಟಿ, ಆಹಾರ, ವಸ್ತ್ರ, ಉರುವಲು, ಕಟ್ಟಡ ನಿರ್ಮಾಣ ಸಾಮಗ್ರಿ, ಔಷಧಿ, ಮುಂತಾದ ತನ್ನ ಎಲ್ಲ ಮೂಲಭೂತ ಅಗತ್ಯಗಳ ಪೂರೈಕೆಗಾಗಿ ಮಾನವ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಆರಣ್ಯಸಂಪತ್ತನ್ನೇ ನಂಬಿದ್ದಾನೆ. ಅರಣ್ಯಗಳು ಕೇವಲ ಗಿಡಮರಗಳಿಂದ ಮಾತ್ರ ತುಂಬಿರದೆ ಅಪರೂಪದ ಪ್ರಾಣಿಪ್ರಭೇದಗಳ ತವರೂ ಆಗಿವೆ. ಈ ಎರಡೂ ಅಪರೂಪದ ನಿಧಿಗಳು ಇಂದು ಅಳಿವಿನ ಅಂಚಿನಲ್ಲಿದ್ದು ಅವುಗಳನ್ನು ಸಂರಕ್ಷಿಸಬೇಕಾದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ.

ಇತಿಹಾಸಪೂರ್ವ ಕಾಲದಿಂದಲೂ ಮಾನವ ತನ್ನ ಅಗತ್ಯಗಳ ಪೂರೈಕೆಗಾಗಿ ಅರಣ್ಯಗಳನ್ನು ಆಶ್ರಯಿಸಿದ್ದಾನೆ. ಆದರೆ ಹಿಂದೆಲ್ಲಾ ಮಾನವನ ಜನಸಂಖ್ಯೆ ಕಡಿಮೆ ಇದ್ದು ಅರಣ್ಯದ ವಿಸ್ತೀರ್ಣ ಹೆಚ್ಚಾಗಿದ್ದುದರಿಂದ ಪರಿಸರಕ್ಕೆ ಹೆಚ್ಚು ಧಕ್ಕೆಯಾಗುತ್ತಿರಲಿಲ್ಲ. ಆದರೆ 18-19ನೇ ಶತಮಾನಗಳಲ್ಲಿ ಕೈಗಾರಿಕೀಕರಣ ಹಾಗೂ ಯಾಂತ್ರಿಕತೆಯು ಹೆಚ್ಚಿತು. ರೋಗಗಳ ಸಂಖ್ಯೆ ಕಡಿಮೆಯಾದುದರಿಂದ ಜನಸಂಖ್ಯೆಯಲ್ಲಿ ಆಗಾಧವಾದ ಹೆಚ್ಚಳವಾಯಿತು. ಅವರ ಅಗತ್ಯಕ್ಕೆಂದು ಕಾಡನ್ನು ಕಡಿಯುವ ಪ್ರಮಾಣ ಹಿಂದೆಂದಿಗಿಂತಲೂ ಅತ್ಯಧಿಕವಾಯಿತು. ಇದೆಲ್ಲದರ ಕಾರಣದಿಂದಾಗಿ ಸಾವಿರಾರು ವರ್ಷಗಳ ಅವಧಿಯಲ್ಲಿ ಕಡಿಯಲಾಗದಷ್ಟು ಪ್ರಮಾಣದ ಕಾಡುಗಳನ್ನು ಕೇವಲ ನೂರಿನ್ನೂರು ವರ್ಷಗಳಲ್ಲಿ ಕಡಿಯಲಾಗಿದೆ.

ಕಾಡು ಅತ್ಯಂತ ಸಂಕೀರ್ಣವಾದ ಅನೇಕ ‘ಪರಿಸರ ವ್ಯವಸ್ಥೆ'(Ecosystem)ಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಉತ್ಪಾದಕರುಗಳು(Producers), ಅನುಭೋಗಿಗಳು (Consumers) ಮತ್ತು ವಿಘಟಕಕಾರಿಗಳು (Decomposers) ಎಂಬ ಮೂರು ಬಗೆಯ ಜೀವಿಗಳಿದ್ದು ಇವು ಪರಸ್ಪರ ಸಂಬಂಧವನ್ನು ಹೊಂದಿರುತ್ತವೆ. ಕಾಡನ್ನು ನಾಶಪಡಿಸುವುದರಿಂದ ಈ ಪರಿಸರ ವ್ಯವಸ್ಥೆಗಳು ಅಸ್ತವ್ಯಸ್ತಗೊಳ್ಳುತ್ತವೆ. ಅದರಿಂದಾಗಿ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ.

ಕಾಡಿನಲ್ಲಿರುವ ಗಿಡಮರಗಳು ನಮ್ಮ ಆಮ್ಲಜನಕದ ಅಗತ್ಯತೆಯ ಬಹುಪಾಲು ಭಾಗವನ್ನು ಪೂರೈಸುತ್ತವೆ. ವಾತಾವರಣದಲ್ಲಿರುವ ಇಂಗಾಲದ ಡೈ ಆಕ್ಸೈಡನ್ನು ಇವು ಹೀರಿಕೊಂಡು ಆಮ್ಲಜನಕವನ್ನು ಹೊರಬಿಡುತ್ತವೆ. ಅರಣ್ಯನಾಶದಿಂದಾಗಿ ವಾತಾವರಣದಲ್ಲಿನ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಇಂಗಾಲದ ಡೈಆಕ್ಸೈಡ್‌ನ ಪ್ರಮಾಣ ಹೆಚ್ಚುತ್ತದೆ. ಇದರಿಂದ ಓಜೋನ್ ಪದರವು ನಾಶವಾಗಿ ಹಸಿರುಮನೆ ಪರಿಣಾಮ ಉಂಟಾಗುತ್ತದೆ. ನದಿಗಳು ಬತ್ತಿ ಜಲಕ್ಷಾಮ ಉಂಟಾಗುತ್ತದೆ. ಮಳೆಮಾರುತಗಳ ಮೇಲೂ ಅರಣ್ಯನಾಶವು ದುಷ್ಪರಿಣಾಮವನ್ನು ಬೀರುತ್ತದೆ. ಈ ಎಲ್ಲ ಸಮಸ್ಯೆಗಳಿಗೆ ಅರಣ್ಯದ ರಕ್ಷಣೆಯೊಂದೇ ರಾಮಬಾಣ.

ವನ್ಯಮೃಗಗಳು ನಮ್ಮಂತೆಯೇ ಈ ಭೂಮಿಯಲ್ಲಿ ವಾಸಿಸುವ ಜೀವಿಗಳು, ಆದರೆ ಮಾನವ ದುಡ್ಡಿನಾಸೆಗಾಗಿ ಹಾಗೂ ತನ್ನ ಬೇಟೆಯ ಹುಚ್ಚಿಗಾಗಿ ಇವುಗಳನ್ನು ಕೊಲ್ಲುತ್ತಿದ್ದಾನೆ. ಅರಣ್ಯ ಪರಿಸರ ವ್ಯವಸ್ಥೆಯಲ್ಲಿ ವನ್ಯಮೃಗಗಳಿಗೆ ಗಣನೀಯವಾದ ಪಾತ್ರವಿದೆ. ಇವುಗಳನ್ನು ಕೊಲ್ಲುವುದರಿಂದ ಆ ವ್ಯವಸ್ಥೆ ಹಾಳಾಗುತ್ತದೆ.

ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕೆಂದರೆ ಅವ್ಯಾಹತವಾಗಿ ನಡೆಯುತ್ತಿರುವ ಅರಣ್ಯನಾಶವನ್ನು ಮೊದಲು ನಿಲ್ಲಿಸಬೇಕು. ಇದರೊಂದಿಗೆ ಬರಡಾಗಿರುವ ಭೂಪ್ರದೇಶಗಳಲ್ಲಿ ಹೊಸದಾಗಿ ಕಾಡನ್ನು ಬೆಳೆಸಬೇಕು. ʼವೃಕ್ಷೋ ರಕ್ಷತಿ ರಕ್ಷಿತಃ’ ಎಂಬಂತೆ ‘ಮರಗಳನ್ನು ರಕ್ಷಿಸುವವರನ್ನು ಮರವು ರಕ್ಷಿಸುತ್ತದೆ’ ಎಂಬ ಮಾತನ್ನು ಸದಾ ನೆನಪಿನಲ್ಲಿರಿಸಿಕೊಂಡು ಭೂಮಿಯನ್ನು ಸಾಧ್ಯವಿದ್ದಷ್ಟೂ ಹಸಿರಾಗಿಸಲು ಯತ್ನಿಸಬೇಕು. ಹಸಿರೇ ಉಸಿರು’ ಎಂಬುದು ನಮ್ಮ ಮೂಲಮಂತ್ರವಾಗಬೇಕು.

22. ಮಣ್ಣು-ಅಂತರ್ಜಲ ಸಂರಕ್ಷಣೆ

ಭೂಮಿಯು ನಮ್ಮೆಲ್ಲರಿಗೂ ಆಶ್ರಯವನ್ನು ನೀಡಿರುವ ಸುಂದರವಾದ ಗ್ರಹ. ಇದರ ಮೇಲ್ಪದರದ ಭಾಗವನ್ನು ನಾವು ‘ಮೇಲ್ಕಣ್ಣು’ ಎಂದು ಕರೆಯುತ್ತೇವೆ. ಇದರ ದಪ್ಪ ಸುಮಾರು 20 ಸೆಂ.ಮೀ.ಗಳು. ಮೇಲ್ಮಣ್ಣು ಸಾವಯವ ವಸ್ತುಗಳು ಮತ್ತು ಸೂಕ್ಷ್ಮ ಜೀವಿಗಳ ಮುಖ್ಯ ನಿಕ್ಷೇಪವಾಗಿದ್ದು ಭೂಮಿಯ ಬಹುಪಾಲು ಜೈವಿಕ ಚಟುವಟಿಕೆಗಳು ಮೇಲ್ಮಣ್ಣಿನ ಸ್ವರದಲ್ಲಿಯೇ ನಡೆಯುತ್ತದೆ. ಗಾಳಿ, ಮಳೆ ಅಥವಾ ನೀರಿನ ಪ್ರವಾಹದ ಕಾರಣದಿಂದಾಗಿ ಈ ಮೇಲ್ಮಣ್ಣಿನ ಪದರವು ನಾಶವಾಗುವ ಪ್ರಕ್ರಿಯೆಯನ್ನು ‘ಮಣ್ಣಿನ ಸವಕಳಿ’ (soil erosion) ಎಂದು ಕರೆಯಲಾಗುತ್ತದೆ. ಕೇವಲ ಅಮೆರಿಕ ಸಂಸ್ಥಾನ ಒಂದರಲ್ಲಿಯೇ ಪ್ರತಿವರ್ಷಕ್ಕೆ ಸುಮಾರು ಮೂರು ಟನ್‌ಗಳಷ್ಟು ಅತ್ಯಮೂಲ್ಯವಾದ ಮೇಲ್ಮಣ್ಣು ಸವಕಳಿಯಾಗುತ್ತದೆ. ಆದರೆ ಒಂದು ಇಂಚಿನಷ್ಟು ಮೇಲ್ಮಣ್ಣು ಸಹಜವಾಗಿ ರೂಪುಗೊಳ್ಳಲು 500 ವರ್ಷಗಳಷ್ಟು ಕಾಲ ಬೇಕು. ಈ ಒಂದೇ ಒಂದು ಉದಾಹರಣೆಯಿಂದ ಎಷ್ಟು ಅಮೂಲ್ಯವಾದ ಸಂಪತ್ತನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನು ಊಹಿಸಬಹುದು.

ಮಣ್ಣಿನ ಸವಕಳಿಯನ್ನು ತಪ್ಪಿಸಲು ಇರುವ ಅತ್ಯುತ್ತಮ ವಿಧಾನವೆಂದರೆ ಅದರ ಮೇಲೆ ಸಸ್ಯಗಳ ಹೊದಿಕೆಯನ್ನು ಹೊದಿಸುವುದು. ಬರಡು ಪ್ರದೇಶವೂ ಸೇರಿದಂತೆ ಮಣ್ಣಿನ ಸವಕಳಿ ಉಂಟಾಗಬಹುದಾದ ಎಲ್ಲ ಸ್ಥಳಗಳಲ್ಲಿ ಗಿಡಮರಗಳನ್ನು ಬೆಳಸುವುದರಿಂದ ನೀರು ಮತ್ತು ಗಾಳಿಯ ಹೊಡೆತದ ರಭಸವು ತಪ್ಪುತ್ತದೆ. ಅಷ್ಟೇ ಅಲ್ಲದೆ ಗಿಡಮರಗಳ ಬೇರುಗಳು ಮಣ್ಣನ್ನು ಗಟ್ಟಿಯಾಗಿ ಹಿಡಿದಿಡುವುದರಿಂದ ಮಣ್ಣು ಕೊಚ್ಚಿಹೋಗುವುದಿಲ್ಲ.

ಮೇಲಣ್ಣಿನಷ್ಟೇ ಅಮೂಲ್ಯವಾದ ಮತ್ತೊಂದು ನೈಸರ್ಗಿಕ ಸಂಪತ್ತೆಂದರೆ ಅಂತರ್ಜಲ, ಭೂಮಿಯ ಒಳಪದರದಲ್ಲಿ ಹುದುಗಿರುವ ಬರಿಗಣ್ಣಿಗೆ ಕಾಣದ ನೀರಿನ ಮೂಲವನ್ನು ‘ಅಂತರ್ಜಲ’ ಎಂದು ಕರೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೆರೆ, ಸರೋವರ, ನದಗಳಂತಹ ನೀರಿನ ಬಾಹ್ಯ ಮೂಲಗಳು ನಮ್ಮ ಬಳಕೆಗೆ ಅಗತ್ಯವಾದಷ್ಟು ಪ್ರಮಾಣದಲ್ಲಿ ಲಭ್ಯವಿರದಿರುವುದರಿಂದ ಬೋರ್‌ವಲ್‌ಗಳನ್ನು ಕೊರೆದು ನಾವು ಅಂತರ್ಜಲವನ್ನು ಬರಿದುಮಾಡುತ್ತಿದ್ದೇವೆ. ಯಾವುದೇ ವಿವೇಚನೆ ಇಲ್ಲದೆ ಈ ರೀತಿಯಾಗಿ ಅಂತರ್ಜಲದ ಮೂಲವನ್ನು ಬರಿದುಗೊಳಿಸುತ್ತಿರುವುದರಿಂದ ಇಂದು ಕೋಲಾರ ಜಿಲ್ಲೆಯಂತಹ ಸ್ಥಳಗಳಲ್ಲಿ ಒಂದು ಸಾವಿರ ಅಡಿಗಳಷ್ಟು ಆಳಕ್ಕೆ ಕೊರೆದರೂ ನೀರು ಸಿಗುತ್ತಿಲ್ಲ,

ಅಂತರ್ಜಲವನ್ನು ಉಳಿಸಿ ಬೆಳೆಸಬೇಕಾದರೆ ಮಳೆ ನೀರು ಮಣ್ಣಿನಲ್ಲಿ ಇಂಗುವಂತೆ ಮಾಡಬೇಕು. ಆದ್ದರಿಂದ ಸಾಧ್ಯವಾದ ಕಡೆಗಳಲ್ಲೆಲ್ಲಾ ‘ಇಂಗುಗುಂಡಿ’ಗಳನ್ನು ತೋಡಬೇಕು. ‘ಮಳೆ ನೀರಿನ ಕೊಯ್ದು’ (rainwater larvesting) ಎಂಬ ಸರಳ ವಿಧಾನವನ್ನು ಬಳಸಿ ಕಟ್ಟಡಗಳ ಮೇಲೆ ಬೀಳುವ ಮಳೆನೀರನ್ನು ಪುನಃ ಕೊಳವೆಬಾವಿಗಳಿಗೆ ಸೇರಿಸುವುದು ಸಾಧ್ಯವಿದೆ. ತೆರೆದ ಕಾಲುವೆಗಳ ಮೂಲಕ ನೀರನ್ನು ಹರಿಸುವ ಬದಲಿಗೆ ಕೊಳವೆಗಳ ಮೂಲಕ ಹರಿಸುವುದರಿಂದ ನೀರು ಆವಿಯಾಗುವುದು ತಪ್ಪುತ್ತದೆ. ಚಿಕ್ಕಚಿಕ್ಕ ಚೆಕ್‌ಡ್ಯಾಂಗಳನ್ನು ನಿರ್ಮಿಸಿ ನೀರನ್ನು ಇಂಗಿಸಬಹುದು. ಈ ಎಲ್ಲ ವಿಧಾನಗಳಿಂದ ಅಂತರ್ಜಲದ ಪ್ರಮಾಣ ಹೆಚ್ಚುತ್ತದೆ.

23. ಕೆರೆ-ನದಿಗಳ ನೈರ್ಮಲೀಕರಣ

ಕೆರೆಗಳು ಮತ್ತು ನದಿಗಳು ನಮ್ಮ ಕುಡಿಯುವ ನೀರಿನ ಅತಿ ಮುಖ್ಯ ಮೂಲಗಳಾಗಿವೆ. ಕೇವಲ ಮಾನವರು ಮಾತ್ರವಲ್ಲದೆ ಗಿಡಮರ, ಪ್ರಾಣಿಪಕ್ಷಿಗಳೂ ಸೇರಿದಂತೆ ಎಲ್ಲ ಜೀವಿಗಳೂ ತಮ್ಮ ಉಳಿವಿಗಾಗಿ ಕೆರೆ ಮತ್ತು ನದಿಗಳ ನೀರನ್ನೇ ಆಶ್ರಯಿಸಿವೆ.

ಆದರೆ ನಾಗರೀಕತೆಯು ಹೆಚ್ಚಿದಂತೆಲ್ಲ ನಾವು ಅಪೂರ್ವವಾದ ಈ ಸಂಪತ್ತನ್ನು ಕಲುಷಿತಗೊಳಿಸುತ್ತಿದ್ದೇವೆ. ಕೈಗಾರಿಕೆಗಳ ತ್ಯಾಜ್ಯವಸ್ತುಗಳು, ಕೊಳಚೆ ಪದಾರ್ಥಗಳು, ಅಪಾಯಕಾರಿ ರಾಸಾಯನಿಕ ವಸ್ತುಗಳು ಮುಂತಾದವುಗಳನ್ನು ಕೆರೆ-ನದಿಗಳ ನೀರಿಗೆ ಸೇರಿಸುವ ಮೂಲಕ ಜಲಮಾಲಿನ್ಯವು ಅತಿಹೆಚ್ಚು ಮಟ್ಟವನ್ನು ಮುಟ್ಟುವಂತೆ ಮಾಡಿದ್ದೇವೆ. ಈ ಪರಿಸ್ಥಿತಿ ಬದಲಾಗ ಬೇಕು. ಕೆರೆ ಮತ್ತು ನದಿಗಳ ನೀರು ನಿರ್ಮಲಗೊಳ್ಳಬೇಕು. ಹಾಗಾಗಬೇಕಿದ್ದಲ್ಲಿ ನಾವು ಕೆಳಕಂಡ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಲೇಬೇಕಿದೆ.

ಕೆರೆ ಮತ್ತು ನದಿಗಳನ್ನು ಕಲುಷಿತಗೊಳಿಸುತ್ತಿರುವ ಅತಿ ದೊಡ್ಡ ಮೂಲಗಳೆಂದರೆ ಕೈಗಾರಿಕೆಗಳು ಹಾಗೂ ನಗರದ ಕೊಳಚೆ ವಸ್ತುಗಳು, ಆದ್ದರಿಂದ ಕೈಗಾರಿಕೆಗಳ ತ್ಯಾಜ್ಯವನ್ನು ಸಂಪೂರ್ಣವಾಗಿ ಸಂಸ್ಕರಿಸಲು ಬೇಕಾದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ನಗರ ಪ್ರದೇಶದ ಕೊಳಚೆ ನೀರನ್ನು ಶುದ್ಧ ನೀರಿನ ಮೂಲಗಳಿಗೆ ಬೆರೆಸದೆ ಅದನ್ನು ಪ್ರತ್ಯೇಕವಾಗಿ ಸಂಸ್ಕರಿಸಿ ಬೇಕು. ಎಲ್ಲಬಗೆಯ ರಾಸಾಯನಿಕ ವಸ್ತುಗಳನ್ನು ಹೊರತೆಗೆದು ಶುದ್ದೀಕರಿಸಿದ ನೀರನ್ನು ಪುನರ್ಬಳಸುವ ವ್ಯವಸ್ಥೆ ಮಾಡಬೇಕು. ಇದರಿಂದಾಗಿ ನೀರಿನ ನೈರ್ಮಲ್ಯವನ್ನು ಕಾಪಾಡಬಹುದು.

ಇತ್ತೀಚಿನ ದಿನಗಳಲ್ಲಿ ಅಧಿಕ ಇಳುವರಿಯ ಆಸೆಗಾಗಿ ಕೃಷಿಯಲ್ಲಿ ರಾಸಾಯನಿಕ ಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಭೂಮಿದು ಮೇಲ್ಪದರದ ಮೇಲೆ ಉಳಿದುಬಿಡುವ ಇಂತಹ ರಾಸಾಯನಿಕಗಳು ಮಳೆಬಂದಾಗ ಹರಿದುಬಂದು ಶುದ್ಧನೀರಿನ ಮೂಲಗಳಿಗೆ ಸೇರಿ ಅದನ್ನು ಕಲುಷಿತಗೊಳಿಸುತ್ತದೆ. ಇದನ್ನು ತಪ್ಪಿಸಬೇಕೆಂದರೆ ರಾಸಾಯನಿಕ ಗೊಬ್ಬರಗಳ ಬದಲಿಗೆ ಸಾವಯವ ಗೊಬ್ಬರಗಳ ಬಳಕೆಯನ್ನು ಹೆಚ್ಚು ಮಾಡಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಜನರು ಶುದ್ಧ ನೀರಿನ ಮೂಲಗಳನ್ನೇ ಎಲ್ಲ ಕೆಲಸಕಾರಗಳಿಗೂ ಬಳಸುತ್ತಾರೆ. ಪ್ರಾಣಿಗಳನ್ನು ತೊಳೆಯುವುದು, ಬಟ್ಟೆ ಒಗೆಯುವುದು, ಕಡೆಗೆ ಕಾಶಿಯಂತಹ ಸ್ಥಳಗಳಲ್ಲಿ ಮೃತದೇಹಗಳನ್ನು ತೇಲಿಬಿಡಲೂ ನದಿಯನ್ನೇ ಬಳಸುವುದನ್ನು ನಾವು ಓದಿ ತಿಳಿದಿದ್ದೇವೆ. ಇವೆಲ್ಲವೂ ತಪ್ಪು. ಇಂತಹ ದುರಭ್ಯಾಸಗಳನ್ನು ನಾವು ದೂರಮಾಡದಿದ್ದರೆ ಶುದ್ಧನೀರಿನ ಮೂಲಗಳನ್ನು ನಿರ್ಮಲವಾಗಿ ಇಟ್ಟುಕೊಳ್ಳುವುದು ಕಷ್ಟಸಾಧ್ಯ.

ಕೆರೆ-ನದಿಗಳ ಆಸುಪಾಸಿನ ಪ್ರದೇಶಗಳನ್ನು ಶುದ್ಧವಾಗಿ ಇರಿಸುವುದು, ನೀರನ್ನು ಬಳಸುವಾಗ ಸಾಧ್ಯವಾದಷ್ಟೂ ಅಲ್ಲಿಯ ಪರಿಸರವನ್ನು ಕಲುಷಿತಗೊಳಿಸದಿರುವ ಮುಂತಾದ ವಿಧಾನಗಳಿಂದ ಅದನ್ನು ನಿರ್ಮಲವಾಗಿರಿಸಿಕೊಳ್ಳಬಹುದು.

24. ಸಾಂಸ್ಕೃತಿಕ ಚಟುವಟಿಕೆಗಳು / ಸಾಂಸ್ಕೃತಿಕ ಚಟುವಟಿಕೆಗಳ ಮಹತ್ವ

ಸಂಗೀತ, ನಾಟ್ಯ, ನಾಟಕ, ಚಿತ್ರಕಲೆ ಮುಂತಾದ ಕಲಾಪ್ರಕಾರಗಳನ್ನು ಪ್ರದರ್ಶಿಸುವುದನ್ನೇ ಸಾಂಸ್ಕೃತಿಕ ಚಟುವಟಿಕೆಗಳು ಎಂದು ಕರೆಯಲಾಗುತ್ತದೆ. ಸಂಸ್ಕೃತದ ಸುಭಾಷಿತವೊಂದು ಹೇಳುವಂತೆ ‘ಸಾಹಿತ್ಯ, ಸಂಗೀತ, ಕಲೆ…. ಮುಂತಾದವುಗಳಲ್ಲಿ ಆಸಕ್ತಿ ಹೊಂದಿರದ ಜನರು ಕೊಂಬು, ಬಾಲಗಳಿಲ್ಲದ ಪ್ರಾಣಿಗಳಿಗಿಂತ ಕಡೆ’, ಆದ್ದರಿಂದ ಮನುಷ್ಯ ನಾಗರೀಕನಾಗಿ, ಸುಸಂಸ್ಕೃತನಾಗಿ ಬದುಕಬೇಕಾದರೆ ಈ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಯಾವುದಾದರೂ ಒಂದೆರಡರಲ್ಲಿಯಾದರೂ ಆಸಕ್ತಿಯನ್ನು ಹೊಂದಿರಬೇಕಾದ್ದು ಅತಿ ಮುಖ್ಯ.

ಮನುಷ್ಯ ಪ್ರಾಣಿಲೋಕದ ಜೀವಿ ಎಂಬುದೇನೋ ನಿಜ, ಆದರೆ ಇತರ ಪ್ರಾಣಿಗಳಿಂದ ಅವನು ವಿಭಿನ್ನನಾಗಿರುವುದು ತನ್ನ ಚಿಂತನೆ ಮತ್ತು ಅಭಿವ್ಯಕ್ತಿಯ ಸಾಮರ್ಥ್ಯದಿಂದಾಗಿ, ಮಾತು ಅಭಿವ್ಯಕ್ತಿಯ ಅತ್ಯಂತ ಸಾಮಾನ್ಯ ಮಾಧ್ಯಮವಾದರೆ ಸಂಗೀತ, ನೃತ್ಯ, ಶಿಲ್ಪ, ಸಾಹಿತ್ಯ ಮುಂತಾದವು ಅವನ ಮನಸ್ಸಿನ ಭಾವನೆಗಳನ್ನು ಅರ್ಥಪೂರ್ಣವಾಗಿ ಮತ್ತು ಮನಮುಟ್ಟುವಂತೆ ಇತರರಿಗೆ ಅಭಿವ್ಯಕ್ತಿಸಬಲ್ಲ ಸಶಕ್ತವಾದ ಹಾಗೂ ವಿಶೇಷವಾದ ಮಾಧ್ಯಮಗಳು. ಈ ಮಾಧ್ಯಮಗಳನ್ನು ಚೆನ್ನಾಗಿ ಮೈಗೂಡಿಸಿಕೊಂಡಷ್ಟೂ ಆತ ಸಮಾಜದ ಇತರ ಜೀವಿಗಳೊಂದಿಗೆ ಚೆನ್ನಾಗಿ ತನ್ನ ಭಾವನೆಗಳನ್ನು ಹಂಚಿಕೊಳ್ಳಬಲ್ಲ. ಹಾಗಾಗಿ ಈ ಕಲಾಮಾಧ್ಯಮಗಳು ನಮಗೆ ಬೇಕು.

ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ನಮ್ಮ ದೇಹ-ಮನಸ್ಸುಗಳು ಉಲ್ಲಸಿತವಾಗುತ್ತದೆ. ನಿತ್ಯಜೀವನದ ಕಷ್ಟಕೋಟಲೆಗಳನ್ನು ಮರೆಸಿ ಮನಸ್ಸಿಗೆ ಶಾಂತಿಯನ್ನು ತರುತ್ತವೆ. ಸಾಂಪ್ರದಾಯಿಕವಾದ ಶಿಕ್ಷಣದಲ್ಲಿ ಸಫಲರಾಗದ ಎಷ್ಟೋ ಮಂದಿ ಜನರು ಈ ಕಲಾಪ್ರಕಾರಗಳನ್ನು ಮೊದಲಿಗೆ ಹವ್ಯಾಸವಾಗಿ ಹೊಂದಿ ನಂತರ ತಮ್ಮ ಜೀವನೋಪಾಯದ ದಾರಿಯನ್ನಾಗಿ ಮಾಡಿಕೊಂಡಿದ್ದಾರೆ. ಹಾಗಾಗಿ ಇದು ಬದುಕಿನ ದಾರಿಯೂ ಆಗಬಲ್ಲದು. ಎಷ್ಟೋ ಬಗೆಯ ರೋಗರುಜಿನಗಳನ್ನು ಸಂಗೀತದಿಂದ ಗುಣಪಡಿಸಲು ಸಾಧ್ಯ ಎಂಬುದನ್ನು ಸಂಶೋಧನೆಗಳು ತೋರಿಸಿಕೊಟ್ಟಿವೆ.

ಜೀವನವೆಂದರೆ ಕೇವಲ ಹೊಟ್ಟೆ-ಬಟ್ಟೆಗಳಿಗಾಗಿ ಹೊಡೆದಾಟ ನಡೆಸುವ ಯುದ್ಧರಂಗವಲ್ಲ, ಅದರಲ್ಲಿ ಚೆಲುವು-ಒಲವುಗಳ ಪಾತ್ರ ದೊಡ್ಡದು. ಭಾರತ ದೇಶದಲ್ಲಿ ಎಷ್ಟೋ ಜನರು ತಮ್ಮ ಹೊಟ್ಟೆಪಾಡಿಗಾಗಿ ಕಷ್ಟಪಡುತ್ತಿದ್ದರೂ ಅವರು ಅಭಿವೃದ್ಧಿ ಹೊಂದಿದ ದೇಶಗಳ ಶ್ರೀಮಂತ ಜನಗಳಿಗಿಂತ ಹೆಚ್ಚು ನೆಮ್ಮದಿಯಿಂದ ಬಾಳುತ್ತಿದ್ದಾರೆ. ಇದಕ್ಕೆ ಕಾರಣವೆಂದರೆ ಭಜನೆ, ಪೂಜೆ, ಧ್ಯಾನಗಳಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿರುವುದೇ ಆಗಿದೆ. ಹಾಗಾಗಿ ನೆಮ್ಮದಿಯ ಬದುಕಾಗಿ ಇಂತಹ ಕೆಲವಾದರೂ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಒಳ್ಳೆಯದು.

25. ಬದುಕುವ ಕಲೆ

ಬದುಕನ್ನು ಪ್ರೀತಿಸುವವರಿಗೆಲ್ಲ ‘ಬದುಕುವ ಕಲೆ’ ಕರಗತವಾಗಿರುತ್ತದೆ. ಈ ಕಾರಣದಿಂದಲೇ ಬದುಕುವುದನ್ನೂ ಅವರು ಕಲೆಯಾಗಿಸಿಕೊಂಡಿರುತ್ತಾರೆ. ಬದುಕಿರುವಷ್ಟು ಕಾಲವನ್ನು ಅರ್ಥಪೂರ್ಣವಾಗಿಸಿಕೊಳ್ಳುವ ಶಕ್ತಿಯನ್ನೇ ಬದುಕುವ ಕಲೆ’ ಎನ್ನಬಹುದು. ನಾನು ಬದುಕಿದ್ದೂ ಸಾರ್ಥಕವಾಯಿತೆಂದು ಭಾವಿಸುವ ರೀತಿಯಲ್ಲಿ ಬದುಕುವುದೇ ಈ ಬದುಕುವ ಕಲೆಯ ಮೂಲ ಆಶಯವಾಗಿದೆ ಎಂಬುದನ್ನು ನಾವು ಆರಿಯಬೇಕು.

ಸಾಮಾನ್ಯವಾಗಿ ಕಲೆಗಾರಿಕೆ ಎಂಬುದು ಕಲಾವಿದರಲ್ಲಿರುತ್ತದೆಂದು ನಾವು ಭಾವಿಸಿರುತ್ತೇವೆ. ಸಂಗೀತಕಲೆ, ಚಿತ್ರಕಲೆ, ನಾಟ್ಯಕಲೆ, ಅಭಿನಯ ಕಲೆ ಮುಂತಾಗಿ ಪರಿಣತಿ ಪಡೆದು ಪ್ರದರ್ಶಿಸಿ, ಮೆಚ್ಚುಗೆ ಗಳಿಸುವುದು ಕಲೆಗಾರಿಕೆಯ ಸಾಮಾನ್ಯ ಲಕ್ಷಣ ವಾಗಿರುತ್ತದೆ. ಈ ದಿಕ್ಕಿನಲ್ಲಿ ಯೋಚಿಸಿ ನೋಡಿದರೆ ಕಲೆಗಾರಿಕೆಯೆಂಬುದು ಪ್ರದರ್ಶನದ ಯಶಸ್ಸನ್ನೇ ಅವಲಂಬಿಸಿರುತ್ತವೆ. ವೀಕ್ಷಕರು ಕಲೆಯ ಪ್ರದರ್ಶನವನ್ನು ನೋಡಿ ಸಂತೋಷಿಸುವುದು, ಕಲೆಯನ್ನು ಅವರು ಆಸ್ವಾಧಿಸುವುದರ ಸಂಕೇತವೇ ಆಗುತ್ತದೆ. ಅಂದರೆ ಇತರರಿಗೆ ಸಂತೋಷವಾಗುವಂತೆಯೂ ನಮ್ಮ ಮಟ್ಟಿಗೆ ಸಾರ್ಥಕವೆನಿಸುವಂತೆಯೂ ಬದುಕುವುದೇ ಬದುಕುವ ಕಲೆ ಎಂದರ್ಥವಾಗುವುದಲ್ಲವೆ?

ಬದುಕನ್ನು ನಮ್ಮ ಮಟ್ಟಿಗೆ ಸಾರ್ಥಕಗೊಳಿಸಿಕೊಳ್ಳುವುದು, ಇತರರ ಪಾಲಿಗೆ ಸಹವೆನಿಸಿಕೊಳ್ಳುವುದು ಮುಂದಿನ ಹಂತ. ಏನಾದರೂ ಸಾಧನೆ ಮಾಡುವ ಮೂಲಕ ಸಂತೋಷಗೊಳಿಸಿಕೊಳ್ಳಬಹುದು. ನಮ್ಮೊಳಗಿನ ಆನಂದವೆಂಬುದಕ್ಕೆ ಸರಳವಾದ, ಸಾಮೂಹಿಕವಾದ ಅರ್ಥವಿರುವುದಿಲ್ಲ. ಒಬ್ಬರಿಗೆ ಯೋಗಾಭ್ಯಾಸ ಕೊಡುವ ಸಂತೋಷ ಮತ್ತೊಬ್ಬರಿಗೆ ನೃತ್ಯವೋ, ಸಂಗೀತವೋ, ಅಭಿನಯವೋ, ಕಲೆಯೋ ನೀಡಬಹುದು. ಚೆನ್ನಾಗಿ ಅಡುಗೆ ಮಾಡಿ ಬಡಿಸುವುದು, ಅತಿಥಿ ಸತ್ಕಾರ ಮಾಡುವುದು ಮತ್ತೊಬ್ಬರ ಪಾಲಿಗೆ ಖುಷಿ ನೀಡಬಹುದು. ಇನ್ನಾರೋ ಒಬ್ಬರಿಗೆ ತಾವಿರುವ ಮನೆಯನ್ನು ಅಂದವಾಗಿಟ್ಟುಕೊಳ್ಳುವುದು, ಪುಸ್ತಕಗಳನ್ನು ಓದುವುದು ಖುಷಿ ಕೊಡಬಹುದು. ಇವೆಲ್ಲಾ ವೈಯಕ್ತಿಕವಾಗಿ ನಾವು ಕಂಡು ಕೊಳ್ಳುವ ಸಂತೋಷದ ದಾರಿಗಳು. ಇದೇ ರೀತಿ ಅನಾಥರ ಸೇವೆ ಮಾಡುವುದು, ಊರಿಗೆ ಉಪಕಾರಿಯಾಗಿ ಬದುಕುವುದು, ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವುದು, ದೇಶಸೇವೆ ಮಾಡುವುದು, ನಾಡು-ನುಡಿ ಸೇವೆಗಾಗಿ ದುಡಿಯುವುದು, ಪರಿಸರ ಉಳಿಸಲು ಶ್ರಮಿಸುವುದು ಮುಂತಾದ ಸಂಗತಿಗಳೆಲ್ಲಾ ಸಮಷ್ಟಿಗಾಗಿ ನಾವು ಮಾಡಬಹುದಾದ ಆನಂದದಾಯಕ ವಾದ ಸಂಗತಿಗಳು, ಸಮಷ್ಟಿಯ ಹಿತದಲ್ಲಿ ನಮ್ಮ ಹಿತವನ್ನು ಕಾಣುವ ಮನೋಧರ್ಮ ಉತ್ತಮ ಬದುಕುವ ಕಲೆಗೆ ಮಾದರಿಯಾಗುತ್ತದೆ.

ಮಂದೀ-ಮಕ್ಕಳೊಳಗೆ ಚೆಂದಾಗಿ ಹೊಂದಿಕೊಂಡು ಬಾಳಿ, ನಾವು ಸತ್ತ ಮೇಲೆ ನಾಲ್ಕು ಜನರ ಬಾಯಲ್ಲಿ ಉಳಿಯ ಬೇಕೆಂಬುದಾಗಿ ಜಾನಪದರು ಒಂದೆಡೆ ಬದುಕುವ ಕಲೆಯನ್ನು ಬೋಧಿಸಿದ್ದಾರೆ. ನಮ್ಮ ಕಾಲಾನಂತರವೂ ಸಮಾಜ ನಮ್ಮನ್ನು ಒಳ್ಳೆಯ ಕಾರಣಗಳಿಗಾಗಿ ಸ್ಮರಿಸುವಂತೆ ಮಾಡುವ ದಾರಿಗಳನ್ನು ನಾವು ಹುಡುಕಿಕೊಂಡು. ಅದೇರೀತಿ ಬದುಕುವುದನ್ನು ರೂಢಿಸಿಕೊಂಡಾಗ ಬದುಕು ಸಾರ್ಥಕವೆನಿಸುತ್ತದೆ. ನಾವು ದ್ವೀಪಜೀವಿಗಳಲ್ಲ, ಸಮೂಹ ಜೀವಿಗಳು. ಹೀಗಾಗಿ ಪರಸ್ಪರ ಸಹ್ಯವಾದ ರೀತಿಯಲ್ಲಿ ಬದುಕಬೇಕು. ಒಬ್ಬರಿಗೆ ಉಪಕಾರ ಮಾಡದಿದ್ದರೂ ಅಪಕಾರ ಮಾಡದಂತೆ ಬದುಕುವುದು ನಮ್ಮ ಆದರ್ಶವಾಗಬೇಕು.

26. ಕಂಪ್ಯೂಟರ್

ಕಂಪ್ಯೂಟರ್ ಹಲವಾರು ವಿಧದ ಕೆಲಸಗಳನ್ನು ಮಾಡಬಲ್ಲ ಒಂದು ವಿದ್ಯುನ್ಮಾನ (ಎಲೆಕ್ಟ್ರಾನಿಕ್) ಯಂತ್ರ. ‘ಕಂಪ್ಯೂಟ್’ ಎಂದರೆ ‘ಲೆಕ್ಕಾಚಾರ ಮಾಡುವಿಕೆ’ ಎಂಬ ಅರ್ಥವುಳ್ಳ ಲ್ಯಾಟಿನ್ ಭಾಷೆಯ ಪದದಿಂದ ಕಂಪ್ಯೂಟರ್ ಪದ ಸೃಷ್ಟಿಯಾಗಿದೆ. ಕಂಪ್ಯೂಟರ್‌ಗೆ ತನ್ನದೇ ಆದ ಬುದ್ದಿವಂತಿಕೆ ಇಲ್ಲ. ಅದು ಬಳಸುವವನ ಆಜ್ಞೆಗಳನ್ನು (ಕಮಾಂಡ್) ಅನುಸರಿಸಿ ಕೆಲಸ ಮಾಡುತ್ತದೆ. ಕಂಪ್ಯೂಟರ್ ತನ್ನಷ್ಟಕ್ಕೆ ತಾನೇ ಕೆಲಸ ಮಾಡಲಾರದು. ಬಳಸುವವನು ಸರಿಯಾದ ನಿರ್ದೇಶನಗಳನ್ನು ನೀಡಬೇಕು. ನಿರ್ದೇಶನ ತಪ್ಪಾದರೆ ಉತ್ತರವೂ ತಪ್ಪಾಗುತ್ತದೆ.

ಕಂಪ್ಯೂಟರ್ ವಿಕಸನದ ಚರಿತ್ರೆ ಕ್ರಿ.ಪೂ. ೨೫೦೦ರಿಂದಲೇ ಆರಂಭವಾಗುತ್ತದೆ. ಅಬಾಕಸ್ ಎನ್ನುವುದೇ ಕ್ರಿ.ಪೂ. ೨೫೦೦ರಲ್ಲಿ ರೂಪಗೊಂಡ ಮೊದಲ ಕಂಪ್ಯೂಟರ್ ಎನ್ನಲಾಗುತ್ತಿದೆ. ಚೈನಾ ದೇಶದಲ್ಲಿ ತಯಾರಾದ ಇದನ್ನು ಗ್ರೀಕರು, ರೋಮನ್ನರು, ಜಪಾನೀಯರು ಬಳಸುತ್ತಿದ್ದರು.

ಆಂಗ್ಲವಿಜ್ಞಾನಿ ಮತ್ತು ಗಣಿತಜ್ಞ ಚಾರ್ಲ್ಸ್ ಬ್ಯಾಬೇಜ್ ೧೮೩೪ರಲ್ಲಿ ಮೊಟ್ಟಮೊದಲ ಡಿಜಿಟಲ್ ಕಂಪ್ಯೂಟರನ್ನು ವಿನ್ಯಾಸ ಗೊಳಿಸಿದೆ. ಅದರ ಸುಧಾರಿತ ರೂಪ ಅನಲಿಟಿಕಲ್ ಇಂಜಿನ್, ಇದೇ ಇಂದಿನ ಕಂಪ್ಯೂಟರ್‌ನ ಮೂಲಭೂತ ಪರಿಕಲ್ಪನೆಯನ್ನು ಹೊಂದಿತ್ತು. ಈ ಯಂತ್ರಕ್ಕೆ ಕಾರ್ಯ, ವಿಧಿ-ವಿಧಾನ(ಪ್ರೋಗ್ರಾಮ್)ಗಳನ್ನು ಆಡಾ ಬೈರನ್ (ಕವಿ ಲಾರ್ಡ್ ಬೈರನ್‌ರ ಮಗಳು) ಬರೆದಳು. ಈಕೆಯನ್ನು ಕಂಪ್ಯೂಟರ್ ಲೋಕದ ಪ್ರಪ್ರಥಮ ಪ್ರೋಗ್ರಾಮರ್ ಎಂದು ಪರಿಗಣಿಸಲಾಗುತ್ತಿದೆ.

ಕಂಪ್ಯೂಟರ್ ಅತ್ಯಂತ ಸಾಮರ್ಥ್ಯ ಉಳ್ಳ ಯಂತ್ರ. ಕಂಪ್ಯೂಟರ್ ಅನ್ನು ಮೊದಲು ದೊಡ್ಡ ದೊಡ್ಡ ಲೆಕ್ಕಗಳನ್ನು ಕಷ್ಟವಾದ ಲೆಕ್ಕಗಳನ್ನು ತಪ್ಪಿಲ್ಲದೆ, ವೇಗವಾಗಿ ಮಾಡಲು ವಿಜ್ಞಾನಿಗಳು ಹೆಚ್ಚಾಗಿ ಬಳಸುತ್ತಿದ್ದರು. ಆದರೆ ಕಾಲಕ್ರಮೇಣ ಗಣಕದಿಂದ ಹಲವಾರು ವಿಧದ ಕೆಲಸಗಳನ್ನು ಮಾಡಲು ಸಾಧ್ಯವಾಗುವಂತೆ ಅಭಿವೃದ್ಧಿಪಡಿಸಲಾಗಿದೆ. ಮಾಹಿತಿ ಸಂಗ್ರಹಣೆ, ಪಠ್ಯ ಸಂಸ್ಕರಣೆ ಇತ್ಯಾದಿ ಕೆಲಸಗಳಿಗೆ ಕಂಪ್ಯೂಟರ್ ಅನ್ನು ಬಳಸಲಾಗುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿ, ಸಾವಿರಾರು ಮೈಲು ದೂರವಿರುವ ಕಂಪ್ಯೂಟರ್ ಜೊತೆ ಸಂಪರ್ಕ ಪಡೆಯಬಹುದು. ಪಠ್ಯ ಚಿತ್ರ ಮತ್ತು ಧ್ವನಿ ಮಾಹಿತಿಯನ್ನು ಬಹಳ ತ್ವರಿತವಾಗಿ ರವಾನಿಸಬಹುದು. ಬೇರೆ ಕಂಪ್ಯೂಟರ್‌ಗಳಲ್ಲಿರುವ ಮಾಹಿತಿ ಪಡೆಯಬಹುದು.

ಗಣಕ ಯಂತ್ರಗಳು ಇತ್ತೀಚೆಗೆ ಎಲ್ಲ ಕ್ಷೇತ್ರಗಳಲ್ಲೂ ಬಳಕೆಯಾಗುತ್ತಿವೆ. ಉದಾಹರಣೆಗೆ, ಆಫೀಸು-ಬ್ಯಾಂಕುಗಳು, ಶಾಲಾ-ಕಾಲೇಜುಗಳು, ಆಸ್ಪತ್ರೆ-ಪ್ರಯೋಗಾಲಯಗಳು, ವಿವಿಧ ವಿಜ್ಞಾನ ಕ್ಷೇತ್ರಗಳು, ಬಾಹ್ಯಾಂತರಿಕ್ಷ ಕ್ಷೇತ್ರಗಳು, ನೃತ್ಯ ಸಿನೆಮಾಗಳಂತಹ ಕಲಾಮಾಧ್ಯಮಗಳು, ಟಿ.ವಿ. ಧಾರಾವಾಹಿ ತಯಾರಕರಿಗೆ, ಭ್ರಾಮಕ ಪ್ರಪಂಚದ ಆಟ, ಮನರಂಜನೆಗೆ, ಷೇರು ಮಾರುಕಟ್ಟೆ, ವರ್ತಕರ ವ್ಯಾಪಾರ ವಹಿವಾಟು, ಸಮಾಜಕಲ್ಯಾಣ ಕ್ಷೇತ್ರದಲ್ಲಿ, ಸಂಪರ್ಕ ಮಾಧ್ಯಮಗಳಾದ ದೂರವಾಣಿ, ವಿ-ಅಂಚೆ, ಅಂತರಜಾಲ, ಫ್ಯಾಕ್ಸ್ ಇತ್ಯಾದಿ. ಅಲ್ಲದೆ ಚುನಾವಣೆಯಲ್ಲಿ, ಸರ್ಕಾರಿ ಕಛೇರಿಗಳಲ್ಲಿ, ಬಸ್, ರೈಲು, ವಿಮಾನ ಪ್ರಯಾಣಕ್ಕಾಗಿ ಟಿಕೇಟು ಪಡೆಯುವ ಕೌಂಟರ್‌ಗಳಲ್ಲಿ, ಮಳಿಗೆ-ಮನೆಗಳಲ್ಲಿ, ಕಾನೂನು, ಪೊಲೀಸ್ ದಾಖಲೆಗಳಿಗೆ ಅಪರಾಧಿಗಳನ್ನು ಗುರುತಿಸಿ ಪತ್ತೆ ಮಾಡಲು, ಕ್ಷಿಪ್ರಗತಿಯಲ್ಲಿ ಕಾರ್ಯ ನಿರ್ವಹಿಸಲು ಇತ್ಯಾದಿ, ಒಟ್ಟಿನಲ್ಲಿ ಇಂದು ಗಣಕಗಳನ್ನು ದಿನನಿತ್ಯ ಜೀವನದಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಗಣಕಗಳಿಂದಾಗಿ ನಮ್ಮ ಜೀವನ ಸುಗಮ ಹಾಗೂ ಹೆಚ್ಚು ಸುಲಭವಾಗುತ್ತಿದೆ.

ಹೀಗೆ ಕಂಪ್ಯೂಟರ್ ಈಗ ಸರ್ವಾಂತರ್ಯಾಮಿಯಾಗಿ, ವಿಶ್ವವ್ಯಾಪಿಯಾಗಿದೆ. ಕಂಪ್ಯೂಟರಿನಿಂದಲೇ ಎಲ್ಲವೂ ಎನ್ನುವ ಹಂತ ತಲುಪಿದೆ. ಮಾನವನೇ ಅದರ ಕೈವಶವಾಗುವ ಪರಿಸ್ಥಿತಿ ಸಮೀಪಿಸುತ್ತಿದೆ ಎನಿಸುತ್ತಿದೆ.

27. ಮಹಾತ್ಮರ ಜೀವನಚರಿತ್ರೆಗಳ ಮಹತ್ವ

ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರಬೋಸ್, ರವೀಂದ್ರನಾಥ ಟ್ಯಾಗೂರ್, ಜೆ.ಆರ್.ಡಿ. ಟಾಟಾ, ಬಸವಣ್ಯ, ಅಂಬೇಡ್ಕರ್, ಅಬ್ದುಲ್ ಕಲಾಂ ಮುಂತಾದ ಅನೇಕ ಮಹಾತ್ಮರ ಜೀವನ ಚರಿತ್ರೆಗಳು ಪ್ರಕಟವಾಗಿವೆ. ಸಾಹಿತಿಗಳು ಕಲಾವಿದರು, ಸಾಮಾಜಿಕ ಹೋರಾಟಗಾರರು, ವಿಜ್ಞಾನಿಗಳು ತಮ್ಮ ಜೀವನಚಿತ್ರವನ್ನು ತಾವೇ ರಚಿಸಿಕೊಟ್ಟಿದ್ದಾರೆ. ಇಲ್ಲವೇ ಇತರರು ಅವರ ಜೀವನ ಚರಿತ್ರೆಯನ್ನು ಬರೆದಿದ್ದಾರೆ.

ಮಹಾತ್ಮರ ಜೀವನ ಚರಿತ್ರೆಗಳನ್ನು ಅಭ್ಯಾಸ ಮಾಡುವುದರಿಂದ ನಮಗೆ ಅವರು ಮಹಾತ್ಮರೆನಿಸಿಕೊಂಡಿದ್ದೇಕೆ೦ಬ ವಿಚಾರದ ಅರಿವಾಗುತ್ತದೆ. ಅವರ ಬಾಲ್ಯ, ವ್ಯಾಸಂಗಾಸಕ್ತಿ, ಬದುಕಿನ ಹೋರಾಟ, ಮಾಡಿದ ಸಾಧನೆ, ಗಳಿಸಿದ ಪುರಸ್ಕಾರ ಮುಂತಾದ ಸಂಗತಿಗಳು ನಮಗೆ ಸ್ಫೂರ್ತಿ ಒದಗಿಸುವುದರ ಜೊತೆಗೆ, ಕಷ್ಟದ ನಡುವೆಯೂ ಬೆಂಕಿಯಲ್ಲಿರಳುವ ಹೂವಿನಂತೆ ಬದುಕನ್ನು ಕಟ್ಟಿಕೊಳ್ಳಲು ನೆರವು ನೀಡುತ್ತವೆ. ಉದಾಹರಣೆಗಾಗಿ, ನಮ್ಮ ಮಾಜಿ ರಾಷ್ಟ್ರಪತಿಗಳಾದ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಯಾವ ಮೂಲಭೂತ ಸೌಕರ್ಯಗಳು ಇಲ್ಲದ ಒಂದು ಕುಗ್ರಾಮದಲ್ಲಿ ಹುಟ್ಟಿ ಬೆಳೆದರೂ ತಮ್ಮ ಅಚಲವಾದ ಶ್ರದ್ಧೆ ಪ್ರಾಮಾಣಿಕ ಪ್ರಯತ್ನ ಮತ್ತು ಸಂಕಲ್ಪ ಬಲದಿಂದ ಜಗದ್ವಿಖ್ಯಾತ ವಿಜ್ಞಾನಿ ಏನಿಸುವುದರೊಂದಿಗೆ ನಮ್ಮ ರಾಷ್ಟ್ರದ ಅತ್ಯುನ್ನತ ಹುದ್ದೆಗೇರಿ ‘ರಾಷ್ಟ್ರಪತಿ’ ಎನಿಸಿದರು. ಇದೇರೀತಿ ಪ್ರತಿಯೊಬ್ಬ ಮಹಾತ್ಮರ ಜೀವನದ ಸಂಗತಿಗಳು ನಮಗೆ ಪ್ರೇರಣೆಯನ್ನು ನೀಡಿ, ಮಾದರಿಯಾಗಬಲ್ಲವು.

ಮಹಾತ್ಮರ ಜೀವನ ಚರಿತ್ರೆಗಳಿಗೆ ಮಹತ್ತ್ವ ಪ್ರಾಪ್ತವಾಗುವುದು ಕೇವಲ ಅವರ ಜೀವನದ ವಿವರಗಳನ್ನು ಓದುವುದರಿಂದ ಮಾತ್ರವಲ್ಲ, ಅವರ ಸತ್ ವಿಚಾರಗಳನ್ನು ನಮ್ಮ ಬದುಕಿನಲ್ಲಿ ರೂಢಿಸಿಕೊಂಡು ನಾವೂ ಆ ದಿಸೆಯಲ್ಲಿ ಹೆಜ್ಜೆ ಹಾಕುವುದರಿಂದ ಹೀಗಾಗಿ ಮಹಾತ್ಮರ ಜೀವನ ಚರಿತ್ರೆಗಳನ್ನು ಪ್ರತಿಯೊಬ್ಬರೂ ಅಭ್ಯಾಸ ಮಾಡಿ, ಮನನ ಮಾಡಿಕೊಂಡು ಅದರಂತೆಯೇ ಬದುಕನ್ನು ರೂಪಿಸಿಕೊಳ್ಳುವುದು ಮುಖ್ಯವೆನಿಸುತ್ತದೆ.

28. ರಕ್ತದಾನ ಮತ್ತು ನೇತ್ರದಾನಗಳ ಮಹತ್ವ

ಮನುಷ್ಯ ಸಮಾಜಜೀವಿ ತನ್ನಂತಹವರೇ ಆದ ಲಕ್ಷಾಂತರ ಜನಗಳ ಸಮುದಾಯದಲ್ಲಿ ಆತ ಬದುಕುತ್ತಾನೆ. ಈ ಸಮಾಜದಲ್ಲಿ ಎಲ್ಲ ಸುಖಭೋಗಗಳನ್ನು ಹೊಂದಿರುವ ಶ್ರೀಮಂತರು ಇರುವಂತೆಯೇ ಯಾವುದೇ ಬಗೆಯ ಉತ್ತಮ ಪರಿಸ್ಥಿತಿ ಇರದ ದುರದೃಷ್ಟವಂತರೂ ಇದ್ದಾರೆ. ‘ದಾನ’ದ ಮೂಲಕ ಉಳ್ಳವರು ಇಲ್ಲದವರಿಗೆ ನೆರವಾಗುವುದು ಮಾನವೀಯತೆಯ ಲಕ್ಷಣ. ಊಟ, ಬಟ್ಟೆ, ಔಷಧಿ, ವಿದ್ಯೆ ಮುಂತಾದವುಗಳನ್ನು ದಾನಮಾಡಿ ಪುಣ್ಯಸಂಪಾದಿಸಿದೆವೆಂದು ಭಾವಿಸುವ ಅನೇಕ ಮಂದಿ ನಮ್ಮಲ್ಲಿದ್ದಾರೆ. ಆದರೆ ಇವೆಲ್ಲವುಗಳಿಗಿಂತ ರಕ್ತದಾನ ಹಾಗೂ ನೇತ್ರದಾನಗಳು ಅತ್ಯಂತ ಮಹತ್ವಪೂರ್ಣವೂ, ಅತ್ಯಗತ್ಯವೂ ಆದ ದಾನಗಳಾಗಿವೆ. ಅದು ಹೇಗೆಂಬುದನ್ನು ನೋಡೋಣ.

ರಕ್ತದಾನ: ರಕ್ತವು ನಮ್ಮ ದೇಹದ ಅತ್ಯಂತ ವಿಶಿಷ್ಟವಾದ ಘಟಕ. ನಿಜ ಹೇಳಬೇಕೆಂದರೆ ನಮ್ಮ ಜೀವಾಧಾರವಾದ ದ್ರವ ಇದು, ಆದರೆ ರಕ್ತದ ಕ್ಯಾನ್ಸರ್‌ನಂತಹ ರೋಗ ಇರುವವರಿಗೆ, ತೀವ್ರ ಅಪಘಾತದಲ್ಲಿ ನೊಂದಿರುವವರಿಗೆ ಅಥವಾ ಶಸ್ತ್ರಕ್ರಿಯೆಗೆ ಒಳಗಾದವರಿಗೆ ಹೆಚ್ಚಿನ ಪ್ರಮಾಣದಲ್ಲಿ ರಕ್ತವನ್ನು ದೇಹದ ಹೊರಗಿನಿಂದ ಪೂರೈಸಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ರಕ್ತಕ್ಕಾಗಿ ದಾನಿಗಳ ಮೊರೆ ಹೋಗದೆ ಬೇರೆ ದಾರಿಯೇ ಇಲ್ಲ. ಏಕೆಂದರೆ ವಿಜ್ಞಾನ ಮತ್ತು ತಂತ್ರಜ್ಞಾನಗಳು ಇಷ್ಟೆಲ್ಲಾ ಅಭಿವೃದ್ಧಿ ಹೊಂದಿದ್ದರೂ ನಾವಿನ್ನೂ ಕೃತಕವಾಗಿ ರಕ್ತವನ್ನು ತಯಾರಿಸಲು ಸಫಲರಾಗಿಲ್ಲ. ಹಾಗಾಗಿ ರಕ್ತವನ್ನು ದಾನಮಾಡುವುದು ಅನಿವಾರ್ಯವಾಗಿದೆ.

ರಕ್ತವು ಮೂರು ಬಗೆಯ ಘಟಕಗಳನ್ನು ಒಳಗೊಂಡಿದೆ. ಅವೆಂದರೆ ಕೆಂಪು ರಕ್ತಕಣಗಳು, ಪ್ಲಾಸ್ಕಾ ಹಾಗೂ ಪ್ಲೇಟ್‌ಲೆಟ್‌ಗಳು, ಕೆಂಪು ರಕ್ತಕಣಗಳನ್ನು 42 ದಿನಗಳವರೆಗೆ ಘನೀಕರಿಸಿ ಇಡಬಹುದಾದರೆ ಪ್ಲಾಸ್ಮಾವನ್ನು ಒಂದು ವರ್ಷದವರೆಗೆ ಹಾಗೂ ಪ್ಲೇಟ್‌ಲೆಟ್‌ಗಳನ್ನು ಐದು ದಿನಗಳವರೆಗೆ ಸಂರಕ್ಷಿಸಿ ಇಡಬಹುದಾಗಿದೆ. ಆದ್ದರಿಂದ ನಾವು ಒಂದು ಬಾರಿ ರಕ್ತದಾನ ಮಾಡಿದರೆ ಮೂರು ಬಗೆಯ ರೋಗಿಗಳಿಗೆ ಉಪಕಾರವಾಗುತ್ತದೆ.

ಒಬ್ಬ ಆರೋಗ್ಯವಂತ ಪುರುಷನು ವರ್ಷಕ್ಕೆ ನಾಲ್ಕು ಬಾರಿ ಹಾಗೂ ಮಹಿಳೆಯು ವರ್ಷದಲ್ಲಿ ಮೂರು ಬಾರಿ ರಕ್ತದಾನ ಮಾಡಬಹುದಾಗಿದೆ. ರಕ್ತದಾನದಿಂದಾಗಿ ದಾನಿಯ ದೇಹದಲ್ಲಿ ಆರೋಗ್ಯಕರವಾದ ರಕ್ತದ ಕಣಗಳ ಉತ್ಪಾದನೆ ಹೆಚ್ಚುತ್ತದೆ. ಇದರಿಂದ ಅವರ ಆರೋಗ್ಯವೂ ಸುಸ್ಥಿತಿಯಲ್ಲಿ ಇರುತ್ತದೆ. ಆಧುನಿಕ ಜೀವನ ಶೈಲಿಯ ಕಾರಣದಿಂದಾಗಿ ರೋಗಗಳು ಮತ್ತು ರೋಗಗಳ ಸಂಖ್ಯೆ ಏರುತ್ತಿದ್ದು ರಕ್ತದಾನ ಹಿಂದೆಂದಿಗಿಂತಲೂ ಈಗ ಹೆಚ್ಚು ಅಗತ್ಯವಾಗಿದೆ.

ನೇತ್ರದಾನ: ಕಣ್ಣುಗಳು ನಮ್ಮ ದೇಹದ ಪ್ರಮುಖ ಅಂಗಗಳಾಗಿವೆ. ಆದ್ದರಿಂದಲೇ ‘ಸರ್ವೆಂದ್ರಿಯಾಣಾಮ್ ನಯನು ಪ್ರಧಾನಂ’ ಎಂಬ ಮಾತು ಹುಟ್ಟಿದೆ. ಜೀವಿಯು ತನ್ನ ಸುತ್ತಲಿನ ಪರಿಸರದ ಜೊತೆಗೆ ಸಂಪರ್ಕವನ್ನು ಬೆಳೆಸಲು ಕಣ್ಣಾ ಪ್ರಮುಖ ಸಾಧನ. ವಿಜ್ಞಾನ ಮತ್ತು ತಂತ್ರಜ್ಞಾನಗಳ ಕ್ಷೇತ್ರದಲ್ಲಿ ನಾವು ಎಷ್ಟೆಲ್ಲಾ ಅಭಿವೃದ್ಧಿಯನ್ನು ಸಾಧಿಸಿದ್ದರೂ ಮಾನವನ ಅಂಗಾಂಶ(tissue)ವನ್ನು ಕೃತಕವಾಗಿ ಉತ್ಪಾದಿಸುವುದರಲ್ಲಿ ಇನ್ನೂ ಸಫಲರಾಗಿಲ್ಲ, ಹಾಗಾಗಿ ಕಣ್ಣಿನಂತಹ ಅಪೂರ್ವವಾದ ಅಂಗವನ್ನು ವ್ಯಕ್ತಿಯು ಸತ್ತನಂತರ ಸುಟ್ಟು ಅಥವಾ ಹೂಳಿ ನಾಶಮಾಡುವ ಬದಲಿಗೆ ದಾನಮಾಡಿದರೆ ಇಬ್ಬರು ವ್ಯಕ್ತಿಗಳಿಗೆ ಉಪಕಾರವಾಗುತ್ತದೆ. ನಾವು ತೀರಿದ ನಂತರ ನಮ್ಮ ದೇಹ ಆಳಿದರೂ ಅಂಧರ ಬಾಳಿಗೆ ಬೆಳಕಾಗುವ ಮೂಲಕ ನಾವು ಶಾಶ್ವತ ವಾಗಿರುವುದು ಸಾಧ್ಯವಾಗುತ್ತದೆ.

ಗಂಡು-ಹೆಣ್ಣು, ರೋಗಿ-ಆರೋಗ್ಯವಂತ, ದೊಡ್ಡವರು-ಚಿಕ್ಕವರು ಎಂಬ ಭೇದವಿಲ್ಲದೆ ಎಲ್ಲ ವಯೋಮಾನದ ಜನರೂ ತಮ್ಮ ಕಣ್ಣುಗಳನ್ನು ದಾನಮಾಡಲು ಸಾಧ್ಯವಿದೆ. ಈ ಎಲ್ಲ ಕಾರಣದಿಂದಾಗಿ ರಕ್ತದಾನ ಹಾಗೂ ನೇತ್ರದಾನವನ್ನು ನಾವು ಪ್ರೋತ್ಸಾಹಿಸಬೇಕು.

29. ಸ್ವಚ್ಛ ಭಾರತ ಆಂದೋಲನದಲ್ಲಿ ವಿದ್ಯಾರ್ಥಿಗಳ ಪಾತ್ರ

ಸ್ವಚ್ಛತೆ ಅಥವಾ ನೈರ್ಮಲ್ಯಕ್ಕೂ ಆರೋಗ್ಯಕ್ಕೂ ಪರಸ್ಪರ ಸಂಬಂಧವಿದೆ. ಶುದ್ಧವಾದ ಆಹಾರ, ನೀರು, ಗಾಳಿಗಳ ಸೇವನೆ ಯಿಂದ ಆರೋಗ್ಯವಾಗಿರಬಹುದು. ಅವು ಶುದ್ಧವಾಗಿರಬೇಕಾದರೆ ಪರಿಸರ ಶುದ್ಧವಾಗಿರಬೇಕು. ಪರಿಸರವನ್ನು ಕೆಡಿಸುವುದು, ಸ್ವಚ್ಛವಾಗಿರಿಸುವುದು ಎಲ್ಲವೂ ನಿವಾಸಿಗಳ ಕೈಯಲ್ಲಿದೆ. ಭಾರತದ ಹಳ್ಳಿಗಳಲ್ಲಿ, ನಗರಗಳಲ್ಲಿ ಸ್ವಚ್ಛತೆಯ ವಿಚಾರದಲ್ಲಿ ಗಮನವಿಲ್ಲ ದಿರುವುದನ್ನು ಎಲ್ಲೆಡೆಯಲ್ಲೂ ಕಾಣಬಹುದಾಗಿದೆ. ಹೀಗಾಗಿ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳಲು ಜನರನ್ನು ಪ್ರೇರಿಸುವ ”ಸ್ವಚ್ಛ ಭಾರತ ಅಭಿಯಾನ’ ಆರಂಭವಾಗಿದೆ.

‘ಆರೋಗ್ಯವೇ ಭಾಗ್ಯ’ ಎನ್ನುವುದು ಒಂದು ಸುಪ್ರಸಿದ್ಧವಾದ ಹೇಳಿಕೆ. ಆರೋಗ್ಯವಿಲ್ಲದೆ ಬೇರೆ ಎಲ್ಲ ಸಂಪತ್ತುಗಳಿದ್ದರು ಅದು ವ್ಯರ್ಥವೆನಿಸುತ್ತದೆ ಅದ್ದರಿಂದ ಆರೋಗ್ಯಕ್ಕಿಂತ ಮಿಗಿಲಾದ ಭಾಗ್ಯ ಬೇರೊಂದಿಲ್ಲ ಆರೋಗ್ಯವಾಗಿರಲು ಅದನ್ನು ಕಾಪಾಡಿಕೊಳ್ಳಲು ವಾಸ ಮಾಡುವ ಪರಿಸರ ಶುದ್ಧವಾಗಿರಬೇಕು. ‘ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂದ ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ? ಎನ್ನುವ ಸ್ಥಿತಿ ಎಲ್ಲೆಡೆ ಕಾಣಬರುತ್ತಿದೆ. ಜೀವಿ-ಗಲ್ಲಿಗಳಲ್ಲಿ ಕಸದ ರಾತ್ರಿ ಕೊಳೆತ ವಾಸನೆ ತುಂಬುರುವಂತೆ, ನಮ್ಮ ದೇಶದಲ್ಲಿರುವ ಕೆರೆ, ಸರೋವರ, ನದಿಗಳ ನೀರೂ ಶುದ್ಧವಾಗಿಲ್ಲ, ತೀರ್ಪಕ್ಷೇತ್ರಗಳು ಅಪವಿತ್ರವಾಗಿವೆ. ಈ ಸ್ಥಿತಿಯನ್ನು ಕೊನೆಗಾಣಿಸಲೆಂದು ಭಾರತದ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಗಾಂಧೀಜಿ ಅವರ ಜನ್ಮದಿನ ಬಂದು (ಅಕ್ಟೋಬರ್ 2. 2014) ಸ್ವಚ್ಛ ಭಾರತ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಗಾಂಧೀಜಿ ಹುಟ್ಟಿ 150 ವರ್ಷ ಪೂರ್ಣಗೊಳ್ಳುವ (ಅಕ್ಟೋಬರ್ 2, 2019) ವೇಳೆಗೆ ಸಂಪೂರ್ಣ ಭಾರತ ಸ್ವಚ್ಛವಾಗ ಬೇಕೆಂಬ ಗುರಿಯಿರಿಸಿದ್ದಾರೆ. ಹಳ್ಳಿಗಳಲ್ಲಿ ನಗರಗಳಲ್ಲಿ ತ್ಯಾಜ್ಯ ವಸ್ತುಗಳ ಸಮರ್ಪಕ ವಿಲೇವಾರಿಯಾಗಿ, ಪರಿಸರ ಶುದ್ಧವಾಗಬೇಕು, ಜನತೆಯಲ್ಲಿ ಸ್ವಚ್ಛತೆಯ ಅರಿವುಂಟಾಗಬೇಕು ಎನ್ನುವ ಆಂದೋಲನ ಆರಂಭವಾಗಿದೆ.

ಸದುದ್ದೇಶದ ಅಭಿಯಾನ ಯಶಸ್ವಿಯಾಗಲು ಜನರ ಸಂಪೂರ್ಣ ಸಹಕಾರ ಅತ್ಯವಶ್ಯ ಪ್ರತಿಯೊಬ್ಬರು ಸ್ವಚ್ಛತೆಯ ಹಿರಿಮೆಯನ್ನರಿತು ದಿನದ ಕೆಲವು ತಾಸುಗಳನ್ನು ಅದಕ್ಕಾಗಿ ಮೀಸಲಿರಿಸಬೇಕು: ವಿದ್ಯಾರ್ಥಿಗಳೂ ಮನಸ್ಸಿಟ್ಟು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಸರ್ವರ ಸಹಮತ, ಸಹಕಾರಗಳಿಂದ ಭಾರತದ ಅಸ್ವಚ್ಛತೆಯ ಕಪ್ಪು ಚುಕ್ಕೆಯನ್ನು ಯಾವುದೇ ಒಂದು ಬಗೆಯ ಬದಲಾವಣೆಯಿರಲಿ, ಪರಿವರ್ತನೆಯಿರಲಿ ಸಾಧ್ಯವಾಗುವುದು ಹೊಸ ತಲೆಮಾರಿನ ಉತ್ಸಾಹಿಗಳಿಂದ. ಆದ್ದರಿಂದ ‘ಸ್ವಚ್ಛತಾ ಆಂದೋಲನ’ದ ಯಶಸ್ಸಿನಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಹಿರಿದು. ವಿದ್ಯಾರ್ಥಿಗಳ ಎಳೆ ಮನಸ್ಸಿಗೆ ಬೇಕಾದುದಕ್ಕೆ ಬೇಕಾದಂತೆ ಒಗ್ಗಿಕೊಳ್ಳುವ ಗುಣ-ಶಕ್ತಿಗಳಿರುತ್ತವೆ.

ಅವರಲ್ಲಿ ‘ಸ್ವಚ್ಛತೆ’ಯ ಅರಿವು ಮೂಡಿಸುವುದು ಸುಲಭ ಅರಿವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬಲ್ಲ ವಿದ್ಯಾರ್ಥಿಯು ಅದನ್ನು ತನ್ನ ಜೀವನಕ್ರಮದಲ್ಲಿ ರೂಢಿಸಿಕೊಳ್ಳುವುದು ಮಾತ್ರವಲ್ಲ ಇತರರಿಗೂ ಅದನ್ನು ರವಾನಿಸಬಲ್ಲನು.

ವಿದ್ಯಾರ್ಥಿಗಳು ತಮ್ಮ ಸುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸ್ವತಃ ಶ್ರಮಿಸುವುದರೊಂದಿಗೆ ಇತರ ನಾಗರಿಕರಿಗೆ ಅರಿವು ಮೂಡಿಸುವ ಕೆಲಸದಲ್ಲೂ ತೊಡಗಿಸಿಕೊಳ್ಳಬಹುದು. ರಾಷ್ಟ್ರೀಯ ಸೇವಾ ಯೋಜನೆಯ ಪರಿಧಿಯೊಳಗಿರುವ ವಿದ್ಯಾರ್ಥಿಯು ಶ್ರಮದಾನದ ಮುಖೇನ ಸ್ವಚ್ಛತೆಯ ಅರಿವನ್ನು ಯಶಸ್ವಿಯಾಗಿ ಮೂಡಿಸಬಲ್ಲ. ತರಗತಿಯನ್ನು-ಮನೆಯನ್ನು ಮಾಲಿನ್ಯರಹಿತನಾಗಿರಿಸಬಲ್ಲ, ವಿದ್ಯಾರ್ಥಿಯು ಊರನ್ನು, ಸಮಾಜವನ್ನು ಸ್ವಚ್ಛವಾಗಿಡುವ ಉತ್ಸಾಹಿಯಾಗುತ್ತಾನೆ. ಕಸತ್ಯಾಜ್ಯಗಳ ವಿಲೇವಾರಿ ಸಮಸ್ಯೆಯನ್ನು ಎಲ್ಲರಿಗೂ ಅರ್ಥಮಾಡಿಸುವ ಬೀದಿ ನಾಟಕಗಳನ್ನು ಆಡಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಳ್ಳಬಲ್ಲರು – ಇಂತಹ ಹಲವಾರು ರಚನಾತ್ಮಕ ಕೆಲಸಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿ ಕೊಳ್ಳಬಹುದು.

ಸ್ವಚ್ಛತಾ ಆಂದೋಲನವು ಒಬ್ಬ ವ್ಯಕ್ತಿಯಿಂದ ಸಾಧ್ಯವಾಗದ ಕಾವ್ಯ ಆದ್ದರಿಂದ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಇದರಲ್ಲಿ ತೊಡಗಿಸಿಕೊಂಡರೆ ಈ ಬಗೆಯ ಆಂದೋಲನವು ಯಶಸ್ಸನ್ನು ಕಾಣುತ್ತದೆ. ಆ ಮೂಲಕ ಆರೋಗ್ಯಕರ ಸಮಾಜವನ್ನು ನಿರ್ಮಿಸಬಹುದು. ಮೊದಲು ವಿದ್ಯಾರ್ಥಿಗಳಿಗೆ ಸರಿಯಾದ ಅರಿವನ್ನು ಮೂಡಿಸಿ, ಅವರನ್ನು ಸ್ವಚ್ಛತಾ ಆಂದೋಲನದ ಹುರಿಯಾಳುಗಳನ್ನಾಗಿಸುವ ಹೊಣೆ ಸಮಾಜದ್ದು.

30. ನೋಟು ಅಮಾನ್ಯೀಕರಣ ಮತ್ತು ಕಪ್ಪು ಹಣ

ಚಲಾವಣೆಯಲ್ಲಿರುವ ನೋಟುಗಳನ್ನು ಕೇಂದ್ರ ಸರ್ಕಾರವು ‘ಅಮಾನ್ಯ’ಗೊಳಿಸಿ, ಅವುಗಳನ್ನು ಹಿಂಪಡೆಯುವ ಮೂಲಕ ನೋಟು ಅಮಾನೀಕರಣಕ್ಕೆ ಚಾಲನೆ ನೀಡಿತು. ಇದರಿಂದ ಜನರು ತಮ್ಮ ಬಳಿಯಲ್ಲಿ ತೆರಿಗೆ ಲೆಕ್ಕದಿಂದ ವಂಚಿಸಿ ಮುಚ್ಚಿಟ್ಟುಕೊಂಡಿದ್ದ ಕಪ್ಪುಹಣಕ್ಕೆ ಬೆಲೆ ಇಲ್ಲವಾಯ್ತು. ಸರ್ಕಾರವು ಕಪ್ಪು ಹಣವನ್ನು ಬ್ಯಾಂಕಿಗೆ ಹಿಂದಿರುಗಿಸಲು ಹಲವು ಷರತ್ತುಬದ್ಧ ಅವಕಾಶಗಳನ್ನು ನೀಡಿತು. ಇದರಿಂದ ಜನರ ಬಳಿಯಿರುವ ಕಪ್ಪು ಹಣವು ಸರ್ಕಾರದ ಬೊಕ್ಕಸಕ್ಕೆ ಹರಿದು ಬರುವುದೆಂದು ನಿರೀಕ್ಷಿಸಲಾಯಿತು. ಸಾವಿರ ಹಾಗೂ ಐನೂರು ರೂಪಾಯಿಗಳ ನೋಟುಗಳನ್ನು ಹಿಂದಕ್ಕೆ ಪಡೆಯಲಾಯ್ತು. ಬದಲಿಗೆ ಹೊಸ ವಿನ್ಯಾಸದ ಎರಡು ಸಾವಿರ ರೂಪಾಯಿಗಳನ್ನು, ಹೊಸ ಐನೂರು, ಇನ್ನೂರು, ನೂರು ಮತ್ತು ಹತ್ತು ಇತ್ತೀಚೆಗೆ ಐವತ್ತು ರೂಪಾಯಿಗಳ ನೋಟುಗಳನ್ನು ಚಲಾವಣೆಗೆ ತರಲಾಗಿದೆ.

ಸ್ವಲ್ಪಮಟ್ಟಿಗೆ ಸರ್ಕಾರದ ನಿರೀಕ್ಷೆಯಂತೆ ಕಪ್ಪು ಹಣ ತೆರಿಗೆಯ ವ್ಯಾಪ್ತಿಯೊಳಗೆ ಬಂದಿತು. ಆದರೆ ಸರ್ಕಾರ ಉದ್ದೇಶಿಸಿದ ಗುರಿ ತಲುಪಲು ಅಮಾನ್ಯೀಕರಣದಿಂದ ಯಶಸ್ಸು ಸಾಧಿಸಲು ಆಗಲಿಲ್ಲ. ಶ್ರೀಸಾಮಾನ್ಯ ಮತ್ತು ಬಡವರು ಇದರಿಂದ ತೀವ್ರವಾದ ತೊಂದರೆಯನ್ನು ಎದುರಿಸುವಂತಾಯಿತು. ಕಪ್ಪುಹಣ ಉಳ್ಳವರು ಬೇರೆ ಬೇರೆ ದಾರಿಯಲ್ಲಿ ಹಣದ ಪರಿವರ್ತನೆಗೆ ಮುಂದಾದರು. ನೋಟು ಅಮಾನೀಕರಣವು ಕಪ್ಪುಹಣವನ್ನೇ ಕೇಂದ್ರೀಕರಿಸುವುದರಿಂದ ಸಾಮಾನ್ಯರಿಗೆ ತಾತ್ಕಾಲಿಕವಾಗಿ ತೊಂದರೆಗಳಾಗುವುದು ಸಾಮಾನ್ಯವಾದರೂ ಅದರ ದೂರದ ಪರಿಣಾಮ ಸಮಾಜಕ್ಕೆ ಒಳ್ಳೆಯದನ್ನೇ ಮಾಡಬಲ್ಲದೆಂದು ಆಶಿಸಬಹುದಾಗಿದೆ.

31. ಡಿಜಿಟಲೀಕರಣದಲ್ಲಿ ಕನ್ನಡ ಭಾಷಾ ಬಳಕೆಯ ಅಗತ್ಯ

ಪ್ರಸ್ತುತ ವಿಷಯವು ಇಂದಿನ ಅತ್ಯಗತ್ಯ ಸಂಗತಿಯಾಗಿದೆ ತಂತ್ರಜ್ಞಾನವು ಈ ಹೊತ್ತಿನ ಅನಿವಾರ್ಯವಾದ ಮಾಧ್ಯಮವಾಗಿರುವುದರಿಂದ ಅದನ್ನು ಬಿಟ್ಟು ಈಗ ನಮ್ಮ ಬದುಕು ಸಾಗುವುದಿಲ್ಲವೆಂಬಷ್ಟು ಅವರಿಸಿಕೊಂಡಿದೆ. ಅದನ್ನು ಬಳಸದವರು ಈಗ ಪದವೀಧರರಾಗಿದ್ದರೂ ಅನಕ್ಷರಸ್ಥರೆನಿಸಿಕೊಳ್ಳುವರು. ಮೊಬೈಲ್, ಕಂಪ್ಯೂಟರ್‌ಗಳ ಮೂಲಕ ಅಂತರ್ಜಾಲವನ್ನು ಬಳಸುವ ನಾವು ಅದರ ಭಾಷೆಯಾಗಿ ಇಂಗ್ಲಿಷನ್ನು ಬಳಸಬೇಕಾಗಿದೆ. ತಂತ್ರಜ್ಞಾನದ ಭಾಷೆ ಇಂಗ್ಲಿಷಾಗಿರುವುದರಿಂದ ಇದು ಅನಿವಾರ್ಯ. ಆದರೆ ಈ ಮೂಲಕ ನಾವು ಅಷ್ಟರಮಟ್ಟಿಗೆ ನಮ್ಮ ಕನ್ನಡ ಭಾಷೆಯಿಂದ ದೂರಾಗುತ್ತಿರುವುದು ಸತ್ಯ.

ಇದು ಹೀಗೇ ಮುಂದುವರೆದರೆ ನಮ್ಮ ಕನ್ನಡ ಇನ್ನಷ್ಟು ಹಿನ್ನಡೆಯನ್ನು ಕಂಡು ಮುಂದೆ ಹೇಳಹೆಸರಿಲ್ಲದಂತೆ ಕಣ್ಮರೆಯಾಗುತ್ತದೆ. ಆದ್ದರಿಂದ ತಂತ್ರಜ್ಞಾನದ ಭಾಷೆಯನ್ನಾಗಿ ಕನ್ನಡವನ್ನು ಬಳಸುವಂತೆ ಮಾಡಬೇಕಾಗಿರುವುದು ಅನಿವಾರ್ಯ. ಎಲ್ಲೆಲ್ಲಿ ನಾವು ತಂತ್ರಜ್ಞಾನವನ್ನು ಬಳಸಿ ಇಂಗ್ಲಿಷಿನ ಮೂಲಕ ವ್ಯವಹರಿಸುತ್ತಿದ್ದೇವೆಯೋ ಅಲ್ಲೆಲ್ಲಾ ಕನ್ನಡವನ್ನು ಬಳಸುವಂತಾದರೆ ಕನ್ನಡ ಉಳಿಯುತ್ತದೆ. ನಮ್ಮ ನಿತ್ಯದ ವ್ಯವಹಾರದಲ್ಲಿ ಕನ್ನಡವನ್ನು ಬಳಸಲಾಗದಿದ್ದರೆ ಕನ್ನಡವನ್ನು ನಾವು ಉಳಿಸಿಕೊಳ್ಳ ಲಾಗುವುದಿಲ್ಲ. ಆದ್ದರಿಂದ ತಂತ್ರಜ್ಞಾನದ ಬಳಕೆಯಲ್ಲಿ ಕನ್ನಡದ ಸುಲಭ ಬಳಕೆಯ ಸಾಫ್ಟ್‌ವೇರ್‌ಗಳನ್ನು ಕಂಡುಹಿಡಿದು ಬಳಸಬೇಕು. ಇದಕ್ಕೆ ತಂತ್ರಜ್ಞರು ಮಾತ್ರವಲ್ಲದೆ, ಸರ್ಕಾರವೂ ಮನಸ್ಸು ಮಾಡಿ ಅಗತ್ಯವಾದ ಅನುದಾನವನ್ನು ಮಂಜೂರು ಮಾಡಬೇಕು. ಅಲ್ಲದೆ ಪ್ರತಿಯೊಬ್ಬ ಕನ್ನಡಿಗನಿಗೂ ತಂತ್ರಜ್ಞಾನದಲ್ಲಿ ಕನ್ನಡವನ್ನೇ ಬಳಸುತ್ತೇನೆನ್ನುವ ಸಂಕಲ್ಪ ಶಕ್ತಿ ಮೂಡಬೇಕು.

ತಂತ್ರಜ್ಞಾನವು ಅನಿವಾರ್ಯವಾದಂತೆ ಕನ್ನಡವೂ ನಮಗೆ ಅತ್ಯಂತ ಅನಿವಾರ್ಯ ಎಂಬುದನ್ನು ಜನರು ಅರಿಯಬೇಕಿದೆ. ಹೊಸ ಕಾಲದ ಅಗತ್ಯಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿಕೊಳ್ಳುವ ನಾವು, ನಮ್ಮ ಭಾಷೆಯಲ್ಲೇ ಅವುಗಳನ್ನು ಬಳಸುವಂತಾದಾಗ ಮಾತ್ರ ನಾವು ನಿಜವಾದ ಕನ್ನಡ ಪ್ರೇಮವುಳ್ಳ ಕನ್ನಡಿಗರೆನಿಸಿಕೊಳ್ಳುತ್ತೇವೆ.

ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ ಎನ್ನುವುದು ಸ್ವಲ್ಪಮಟ್ಟಿಗೆ ಸಮಾಧಾನದ ವಿಷಯ. ನುಡಿ, ಬರಹ, ಶ್ರೀಲಿಪಿ ಮುಂತಾದ ಮೃದು ತಂತ್ರಾಂಶಗಳನ್ನು ಬಳಸಿ ಕಂಪ್ಯೂಟರ್ನನಲ್ಲಿ ಕನ್ನಡವನ್ನು ಬಳಸಲು ಆರಂಭಿಸಿ ಸಾಕಷ್ಟು ಕಾಲವೇ ಸಂದಿದೆ. ಈಗ ಮೊಬೈಲ್‌ನಲ್ಲಿಯೂ ಕನ್ನಡ ಭಾಷೆ ಮತ್ತು ಲಿಪಿಯನ್ನು ಬಳಸುವ ಅವಕಾಶವಿದೆ. ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ ಪ್ರಾಚೀನ ಕೃತಿಗಳನ್ನು ಸಂರಕ್ಷಿಸುವ ಕಾರ ಪ್ರಗತಿಯಲ್ಲಿದೆ. ಬ.ಸಿ.ಆರ್. ತಂತ್ರಜ್ಞಾನವನ್ನು ಬಳಸಿ ಚಿತ್ರರೂಪದ ಸಂಕೇತಗಳನ್ನು ಅಕ್ಷರಗಳಾಗಿ ಓದಬಲ್ಲ ವ್ಯವಸ್ಥೆ ಕನ್ನಡಕ್ಕೂ ಬಂದಿದೆ. ಇದರೊಂದಿಗೆ ಯಂತ್ರಾನುವಾದ (Machine translation), ವಿಂಗಡನೆ (Sorting), ಹೊಂದಾಣಿಕೆ (Concordance), ಪೂರ್ವಕಲ್ಪಿತ ಪಠ್ಯ (Predictive text), ಕಾಗುಣಿತ ಪರೀಕ್ಷೆ (Spell check) ಮುಂತಾದ ಎಲ್ಲ ಡಿಜಿಟಲ್ ಸೌಲಭ್ಯಗಳೂ ಕನ್ನಡದಲ್ಲಿ ಇಂದು ಲಭ್ಯವಿವೆ.

32. ವಿದೇಶೀ ವ್ಯಾಮೋಹ ಮತ್ತು ಪ್ರತಿಭಾ ಪಲಾಯನ

ಭಾರತ ನಮ್ಮ ದೇಶ. ನಾವೆಲ್ಲ ಹುಟ್ಟಿ ಬೆಳೆದು ಜೀವಿಸುತ್ತಿರುವ ದೇಶ. ನಾವು ಇಲ್ಲಿಯ ಗಾಳಿಯನ್ನು ಉಸಿರಾಡುತ್ತಿದ್ದೇವೆ, ಇಲ್ಲಿಯ ನೆಲದಲ್ಲಿ ನಡೆದಾಡುತ್ತಿದ್ದೇವೆ ಹಾಗೂ ಇಲ್ಲಿಯ ಅನ್ನವನ್ನು ಉಣ್ಣುತ್ತಿದ್ದೇವೆ. ಆದರೂ ನಮ್ಮಲ್ಲಿ ಕೆಲವರಿಗೆ ಈ ದೇಶವನ್ನು ಕಂಡರೆ ಪ್ರೀತಿ ಅಭಿಮಾನಗಳಿಲ್ಲ. ಬದಲಿಗೆ ದೂರದ ಅಮೆರಿಕಾಕ್ಕೋ ಅಥವಾ ದುಬೈ, ಇಂಗ್ಲೆಂಡ್ ಮುಂತಾದ ಇನ್ನಾವುದಾದರೂ ದೇಶಕ್ಕೋ ಹೋಗಿ ಜೀವಿಸಿದರೆ ಇಲ್ಲಿಗಿಂತ ಚೆನ್ನಾಗಿ ಬದುಕಬಹುದು, ಹೆಚ್ಚು ಹಣವನ್ನು ಸಂವಾದಿಸಬಹುದು ಎಂಬ ಆಶೆ. ಇದನ್ನೇ ‘ವಿದೇಶೀ ವ್ಯಾಮೋಹ’ ಎಂದು ಕರೆಯಲಾಗುತ್ತದೆ. ದುರಂತದ ಸಂಗತಿಯೆಂದರೆ ಈ ರೀತಿ ಚಿಂತಿಸುವವರಲ್ಲಿ ಬಹುಮಟ್ಟಿನ ಜನರು ತುಂಬಾ ಬುದ್ದಿವಂತರು, ಪ್ರತಿಭಾಶಾಲಿಗಳು, ಪ್ರತಿಭಾಶಾಲಿಗಳ ಇಂತಹ ವಲಸೆಯನ್ನೇ ‘ಪ್ರತಿಭಾ ಪಲಾಯನ’ ಎಂದು ಹೆಸರಿಸಬಹುದು.

ಪ್ರತಿಭಾ ಪಲಾಯನವನ್ನು ಬೆಂಬಲಿಸುವ ಜನರ ಪ್ರಕಾರ ಇದಕ್ಕೆ ಮುಖ್ಯ ಕಾರಣ ವಿದೇಶಗಳಲ್ಲಿ ದೊರಕುವ ಅತ್ಯುಚ್ಚ ಮಟ್ಟದ ವಿದ್ಯಾಭ್ಯಾಸ ಹಾಗೂ ಆಗಾಧವಾದ ಉದ್ಯೋಗದ ಅವಕಾಶಗಳು, ಈ ವಾದದಲ್ಲಿ ಸ್ವಲ್ಪಮಟ್ಟಿನ ಸತ್ಯಾಂಶ ಇಲ್ಲದಿಲ್ಲ. ಭಾರತದಲ್ಲಿ ಇಂದುನಿಜವಾದ ಪ್ರತಿಭಾವಂತರಿಗೆ ಸೂಕ್ತವಾದ ಅವಕಾಶಗಳು ದೊರೆಯುತ್ತಿಲ್ಲ. ಹಣ, ಜಾತಿ, ಅಧಿಕಾರ ಮುಂತಾದ ಪ್ರಬಲಶಕ್ತಿಗಳು ಒಟ್ಟು ವ್ಯವಸ್ಥೆಯನ್ನುನಿಯಂತ್ರಿಸುತ್ತಿದ್ದು ಇದರಿಂದಾಗಿ ನಿಜವಾದ ಪ್ರತಿಭಾವಂತರು ಅವಕಾಶ ವಂಚಿತರಾಗಿದ್ದಾರೆ. ಉನ್ನತಮಟ್ಟದ ಶಿಕ್ಷಣವನ್ನು ಕಲಿಸಬೇಕಾದ ಶಿಕ್ಷಣ ಸಂಸ್ಥೆಗಳು ಕೀಳುಮಟ್ಟದ ರಾಜಕಾರಣದ ಕೆಸರಾಟದಲ್ಲಿ ಮುಳುಗಿ ಹೋಗಿವೆ. ಇಂತಹ ವಾತಾವರಣದಲ್ಲಿ ಉತ್ತಮ ಶಿಕ್ಷಣವನ್ನು ನಿರೀಕ್ಷಿಸುವುದು ಕನಸಿನ ಮಾತು. ಆದರೆ ವಿದೇಶಗಳಲ್ಲಿ ಈ ಸಮಸ್ಯೆ ಇಲ್ಲ. ಒಬ್ಬ ವ್ಯಕ್ತಿ ಪ್ರತಿಭಾವಂತನೆಂದು ತನ್ನನ್ನು ತಾನು ಸಾಬೀತುಪಡಿಸಕೊಂಡರೆ ಅವನಿಗೆ ಅಲ್ಲಿ ಎಲ್ಲ ಬಗೆಯ ಅವಕಾಶಗಳು ದೊರೆಯುತ್ತವೆ. ‘ವಿದ್ವಾನ್ ಸರ್ವತ್ರ ಪೂಜ್ಯತೆ’ ಎಂಬ ಮಾತು ಭಾರತಕ್ಕಿಂತ ವಿದೇಶಗಳಲ್ಲಿಯೇ ಹೆಚ್ಚು ಪಾಲಿಸಲ್ಪಡುತ್ತದೆ.

ಆದರೆ ಈ ವಿದೇಶಿ ವ್ಯಾಮೋಹ ಮತ್ತು ಪ್ರತಿಭಾ ಪಲಾಯನಗಳಿಂದ ಎಲ್ಲರಿಗೂ, ಎಲ್ಲ ಸಂದರ್ಭಗಳಲ್ಲಿಯೂ ಒಳತೇ ಆಗುತ್ತದೆ ಎಂದು ಹೇಳಲು ಬರುವುದಿಲ್ಲ. ‘ದೂರದ ಬೆಟ್ಟ ನುಣ್ಣಗೆ’ ಎಂಬಂತೆ ಈ ದಾರಿಯಲ್ಲಿಯೂ ಅನೇಕ ಲೋಪದೋಷಗಳಿವೆ. ಮೊತ್ತಮೊದಲನೆಯದಾಗಿ ರಾಷ್ಟ್ರದ ಮೇಲೆ ಆಗುವ ಪರಿಣಾಮ, ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೋಟ್ಯಂತರ ರೂಪಾಯಿಗಳನ್ನು ಖರ್ಚುಮಾಡುತ್ತಿವೆ. ಸರ್ಕಾರ ಮತ್ತು ಸಮಾಜದಿಂದ ದೊರಕುವ ಎಲ್ಲ ಸವಲತ್ತುಗಳನ್ನು ಪಡೆದುಕೊಂಡ ಪ್ರತಿಭಾವಂತರು ವಿದೇಶಗಳಲ್ಲಿ ಹೋಗಿ ನೆಲೆಸಿದರೆ ಅದರಿಂದ ನಮ್ಮ ದೇಶಕ್ಕೆ ಎಷ್ಟೊಂದು ಹಾನಿ, ಇರುವ ಪ್ರತಿಭಾವಂತರೆಲ್ಲ ದೇಶ ತೊರೆದು ಹೋದರೆ ದೇಶದ ಗತಿ ಏನು?

ಮತ್ತೊಂದು ಮುಖ್ಯ ಅಂಶವೆಂದರೆ ವಿದೇಶಕ್ಕೆ ಹೋದ ಎಲ್ಲರಿಗೂ ಸೂಕ್ತವಾದ ವಿದ್ಯೆ ಮತ್ತು ಉದ್ಯೋಗಗಳು ದೊರೆಯುತ್ತದೆಂದೇನೂ ಇಲ್ಲ. ತನ್ನ ಮನೆಯಲ್ಲಿ ಒಂದು ಹುಲ್ಲುಕಡ್ಡಿಯನ್ನೂ ತೆಗೆದು ಪಕ್ಕಕ್ಕೆ ಇಡದ ವಿದ್ಯಾರ್ಥಿಗಳು ವಿದೇಶಗಳಲ್ಲಿ ಹೊಟೇಲ್ ಮಾಣಿಗಳಾಗಿ, ಟ್ಯಾಕ್ಸಿ ಡ್ರೈವರುಗಳಾಗಿ, ಪೆಟ್ರೋಲ್ ಬಂಕಿನ ಸಹಾಯಕರುಗಳಾಗಿ ದುಡಿದು ಅನ್ನ ಸಂಪಾದಿಸಿಕೊಳ್ಳಬೇಕಾದ ಗತಿ ಇಂದು ಒದಗಿದೆ. ಬಹುತೇಕ ಎಲ್ಲ ದೇಶಗಳ ಸರ್ಕಾರಗಳೂ ಇತ್ತೀಚೆಗೆ ‘ತಮ್ಮ ನಾಗರೀಕರಿಗೇ ಉದ್ಯೋಗದಲ್ಲಿ ಆದ್ಯತೆ’ ಎಂಬ ನೀತಿಯನ್ನು ಅನುಸರಿಸುತ್ತಿರುವುದರಿಂದ ಇಲ್ಲಿಂದ ಹೋದ ಜನ ಅಲ್ಲಿ ಬಾಳಲಾರದೆ, ಹಿಂದಿರುಗಿ ಬರಲಾರದೆ ಒದ್ದಾಡುತ್ತಿದ್ದಾರೆ.

ಈ ಸಮಸ್ಯೆ ಬಗೆಹರಿಯಬೇಕಾದರೆ ನಮ್ಮ ಪ್ರತಿಭಾವಂತ ತರುಣರು ವಿದೇಶಕ್ಕೆ ವಿದ್ಯಾಭ್ಯಾಸಕ್ಕೆಂದು ಹೋದರೂ ಮರಳಿ ತಮ್ಮ ಮಾತೃಭೂಮಿಗೆ ಬಂದು ಇಲ್ಲಿ ಸೇವೆ ಸಲ್ಲಿಸಬೇಕು ಮತ್ತು ಇಲ್ಲಿ ಸರ್ಕಾರ ಮತ್ತು ಸಮಾಜಗಳು ಅವರ ಅರ್ಹತೆಗೆ ತಕ್ಕುದಾದ ಮಾನ-ಮಾನ್ಯತೆಗಳನ್ನು ನೀಡುವ ಬಗ್ಗೆ ತೀವ್ರವಾಗಿ ಚಿಂತಿಸಬೇಕು.

33. ಗುಡ್ಡಗಾಡು ಬಂಜರು ಬೇಸಾಯ

ಭಾರತದಲ್ಲಿ ಹಲವು ಬಗೆಯ ಕೃಷಿ ಪದ್ಧತಿಗಳು ಅಸ್ತಿತ್ವದಲ್ಲಿವೆ. ಬಯಲು ಪ್ರದೇಶಗಳಲ್ಲಿ ಬತ್ತ, ಕಬ್ಬು ಮುಂತಾದ ಬೆಳೆಗಳನ್ನು ನೀರಿನ ಆಸರೆ ಚೆನ್ನಾಗಿ ಇರುವ ಗದ್ದೆಗಳಲ್ಲಿ ಬೆಳೆದರೆ ಹಣ್ಣು, ತರಕಾರಿ ಮುಂತಾದ ವಾಣಿಜ್ಯದ ಬೆಳೆಗಳನ್ನು ತೋಟಗಳಲ್ಲಿ ಬೆಳೆಯಲಾಗುತ್ತದೆ. ನೀರಾವರಿ ಸೌಲಭ್ಯ ಹೆಚ್ಚಿಗೆ ಇರದ ಒಣಭೂಮಿಯಲ್ಲಿ ಜೋಳ, ರಾಗಿ ಮುಂತಾದ ಮಿಷಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಚೆನ್ನಾಗಿ ಮಳೆಬೀಳುವ ಗುಡ್ಡಗಾಡು ಪ್ರದೇಶಗಳಲ್ಲಿ ಕಾಫಿ, ಟೀ, ಏಲಕ್ಕಿ ಮುಂತಾದವು ಕೃಷಿಗೊಳ್ಳುತ್ತವೆ. ಆದರೆ ಬೆಟ್ಟ ಪ್ರದೇಶಗಳಲ್ಲಿ ಇರುವ ಬಂಜರು ಪ್ರದೇಶಗಳಲ್ಲಿ ಈ ಯಾವ ಬಗೆಯ ಕೃಷಿಗೂ ಅವಕಾಶವಿಲ್ಲ. ಇಂತಹ ಸ್ಥಳಗಳಲ್ಲಿ ನೀಲಗಿರಿ, ಅಕೇಶಿಯಾ, ಸರ್ವೆ ಮುಂತಾದ ಮರಗಳನ್ನು ಬೆಳೆಯಲಾಗುತ್ತದೆ. ಇದನ್ನೇ ಗುಡ್ಡಗಾಡು ಬಂಜರು ಬೇಸಾಯ ಎನ್ನಲಾಗುತ್ತದೆ.

ಗುಡ್ಡಗಳ ಮೇಲೆ ಬೀಳುವ ಮಳೆಯ ನೀರು ಕೆಳಕ್ಕೆ ಹರಿದು ಬರುವಾಗ ಫಲವತ್ತಾದ ಮೇಲ್ಮಣ್ಣನ್ನು ಕೊಚ್ಚಿಹಾಕುತ್ತದೆ. ಇದರಿಂದ ಭೂಮಿಯು ಬರಡಾಗುತ್ತದೆ. ಈ ಅನಾಹುತವನ್ನು ತಪ್ಪಿಸಲು ಪೊದೆಯ ರೂಪದ ಚಿಕ್ಕ ಗಾತ್ರದ ಮರಗಿಡಗಳನ್ನು ಬೆಳೆಯಲಾಗುವುದು. ಇದರಿಂದಾಗಿ ಮಣ್ಣಿನ ಸವಕಳಿಯು ತಪ್ಪುತ್ತದೆ. ನಿಧಾನವಾಗಿ ಮಣ್ಣಿನ ಫಲವತ್ತತೆಯು ಹೆಚ್ಚಾಗುತ್ತದೆ. ಆನಂತರ ಕಾಡಿನ ಸ್ವಲ್ಪ ಭಾಗವನ್ನು ಕಡಿದು ಅಲ್ಲಿ ನೀರಿನ ಹೆಚ್ಚಿನ ಅವಶ್ಯಕತೆ ಇರದ ಬತ್ತದ ತಳಿಗಳು, ಜೋಳ, ಕಾಳುಗಳು ಹಾಗೂ ತರಕಾರಿಗಳನ್ನು ಎರಡು-ಮೂರು ವರ್ಷಗಳ ಕಾಲ ಬೆಳೆಯಲಾಗುತ್ತದೆ. ನಂತರ ಆ ಪ್ರದೇಶವನ್ನು ಬಿಟ್ಟು ಮತ್ತೊಂದು ಕಡೆಗೆ ಕೃಷಿಭೂಮಿಯನ್ನು ಸ್ಥಳಾಂತರಿಸಲಾಗುತ್ತದೆ. ಇಂತಹ ‘ಸ್ಥಳಾಂತರಿಸುವ ಕೃಷಿ’ (Shifting Agriculture) ಯನ್ನು ಜಮ್, ಪೋನಮ್, ಪೊದು ಎಂದೆಲ್ಲಾ ಕರೆಯಲಾಗುತ್ತದೆ. ಆದರೆ ಈ ಬಗೆಯ ಬೇಸಾಯದಿಂದಾಗಿ ಅಮೂಲ್ಯವಾದ ಅರಣ್ಯಸಂಪತ್ತು ನಾಶವಾಗುತ್ತದೆ.

ಗುಡ್ಡಗಾಡು ಬಂಜರು ಬೇಸಾಯವು ಬಹಳ ಕಷ್ಟಕರವಾಗಿದ್ದು ಅಪಾರವಾದ ಶ್ರಮ, ಹಣ ಹಾಗೂ ತಾಳ್ಮೆಯನ್ನು ಆಪೇಕ್ಷಿಸುತ್ತದೆ. ಹಾಗಾಗಿ ಹೆಚ್ಚು ಜನರು ಇದರಲ್ಲಿ ಆಸಕ್ತರಾಗಿಲ್ಲ.

34. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ

ಅಥವಾ

ಮಾತೃಭಾಷೆಯಲ್ಲಿ ಶಿಕ್ಷಣ

ಪ್ರತಿಯೊಂದು ಮಗುವೂ ಶಿಕ್ಷಣವನ್ನು ಪಡೆಯುವುದರ ಮೂಲಕ ಸಮಾಜದಲ್ಲಿ ಗಣ್ಯ ನಾಗರೀಕನಾಗುತ್ತದೆ; ಹಾಗಾಗಿ ಶಿಕ್ಷಣವೆನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅತ್ಯಂತ ಮುಖ್ಯ ವಿಜ್ಞಾನ, ಇತಿಹಾಸ, ಸಾಹಿತ್ಯ ಮುಂತಾದ ಹಲವು ಹತ್ತು ವಿಷಯಗಳನ್ನು ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಲ್ಲಿ ಕಲಿಯುತ್ತಾರೆ. ಈ ವಿಷಯಗಳನ್ನು ಯಾವ ಭಾಷೆಯಲ್ಲಿ ಬೋಧಿಸಲಾಗುತ್ತದೆಯೋ ಅದನ್ನೇ ‘ಭಾಷಾ ಮಾಧ್ಯಮ’ ಎಂದು ಕರೆಯಲಾಗುತ್ತದೆ.

ಕರ್ನಾಟಕದಲ್ಲಿ ಇಂದು ಖಾಸಗಿ ಶಾಲಾ ಕಾಲೇಜುಗಳಲ್ಲಿ ಬಹುಮಟ್ಟಿಗೆ ಇಂಗ್ಲಿಷ್ ಭಾಷೆಯನ್ನು ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡವನ್ನು ಬೋಧನಾ ಮಾಧ್ಯಮವಾಗಿ ಬಳಸಲಾಗುತ್ತಿದೆ. ಆದರೆ ಮನಃಶಾಸ್ತ್ರಜ್ಞರು ಮತ್ತು ಭಾಷಾ ವಿಜ್ಞಾನಿಗಳ ಪ್ರಕಾರ ಯಾವುದೇ ಒಂದು ಮಗುವು ತನ್ನ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಪಡೆಯುವುದರಿಂದ ಅದರ ಕಲಿಕಾ ಸಾಮರ್ಥ್ಯವು ಹೆಚ್ಚುತ್ತದೆ. ಆದ್ದರಿಂದಲೇ ಜಪಾನ್, ಜರ್ಮನಿ, ರಷ್ಯಾ, ಮುಂತಾದ ಅನೇಕ ದೇಶಗಳಲ್ಲಿ ಅಲ್ಲಿಯ ಪ್ರಾದೇಶಿಕ ಭಾಷೆಗಳಲ್ಲಿಯೇ ಇಂಜಿನಿಯರಿಂಗ, ವೈದ್ಯಕೀಯ ಮುಂತಾದ ತಾಂತ್ರಿಕ ವಿಷಯಗಳನ್ನು ಬೋಧಿಸಲಾಗುತ್ತದೆ.

ಆದರೆ ಭಾರತದಲ್ಲಿ ಐತಿಹಾಸಿಕ ಕಾರಣಗಳಿಂದಾಗಿ ದೇಶಭಾಷೆಗಳ ಬದಲಿಗೆ ಇಂಗ್ಲಿಷನ್ನು ಬೋಧನಾ ಮಾಧ್ಯಮವಾಗಿ ಬಳಸುವ ಪದ್ಧತಿ ಬೆಳೆದು ಬಂದಿದೆ. ‘ಇಂಗ್ಲಿಷ್ ಮೀಡಿಯಂನಲ್ಲಿ ಕಲಿತವರು ಶ್ರೇಷ್ಠ, ಕನ್ನಡ ಮೀಡಿಯಂನಲ್ಲಿ ಓದಿದವರು ದಡ್ಡರು’ ಎನ್ನುವುದು ಬಹು ಜನರ ಮನಸ್ಸಿನಲ್ಲಿರುವ ತಪ್ಪು ಕಲ್ಪನೆ. ಆದರೆ ಡಾ.ಸಿ.ಎನ್.ಆರ್. ರಾವ್‌ರಂತಹ ವಿಜ್ಞಾನಿಗಳು, ಡಾ. ಎಚ್. ನರಸಿಂಹಯ್ಯನವರಂತಹ ಶಿಕ್ಷಣತಜ್ಞರು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿಯೇ ಪಡೆದರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿಶಿಷ್ಟವಾದ ಸಾಧನೆಯನ್ನು ಮಾಡಲು ಸಾಧ್ಯವಾಯಿತು ಎನ್ನುವುದನ್ನು ಮರೆಯುವಂತಿಲ್ಲ.

ಇಂಗ್ಲಿಷ್ ಒಂದು ಅತ್ಯುತ್ತಮವಾದ ಸಂಪರ್ಕ ಭಾಷೆ ಎನ್ನುವುದರಲ್ಲಿ ತಪ್ಪಿಲ್ಲ, ಆದರೆ ಚಿಕ್ಕಮಕ್ಕಳ ಎಳೆಯ ಮೆದುಳಿನ ಮೇಲೆ ಇಂಗ್ಲಿಷ್‌ನಂತಹ ಅವೈಜ್ಞಾನಿಕ ಭಾಷೆಯನ್ನು ಹೇರುವುದು ಸರಿಯಲ್ಲ. ಬದಲಿಗೆ ಕನಿಷ್ಠಪಕ್ಷ ಒಂದರಿಂದ ಏಳನೇ ತರಗತಿಯವರೆಗೆ ಶಿಕ್ಷಣವನ್ನು ಕನ್ನಡ ಭಾಷೆಯಲ್ಲಿ ನೀಡಬೇಕು. ಈ ಅವಧಿಯಲ್ಲಿ ಇಂಗ್ಲಿಷನ್ನು ಒಂದು ವಿಷಯವಾಗಿ ಚೆನ್ನಾಗಿ ಕಲಿಸಬೇಕು. ಆಗ ವಿದ್ಯಾರ್ಥಿಗಳು ಎರಡೂ ಭಾಷೆಗಳಲ್ಲಿ ಪ್ರಭುತ್ವವನ್ನು ಸಾಧಿಸುವುದು ಸಾಧ್ಯವಾಗುತ್ತದೆ.

35. ಕ್ರೀಡೆಗಳ ಮಹತ್ವ

‘ಕ್ರೀಡೆ’ ಎಂಬುದು ‘ಆಟ’ ಎಂಬುದರ ಸಮಾನಾರ್ಥಕವಾದ ಪದ. ಆಟಗಳ ಮಹತ್ವ ಹಲವು ಬಗೆಯದು. ಮನುಷ್ಯ ಸಂತೋಷದಿಂದಿರಲು, ಆರೋಗ್ಯದಿಂದಿರಲು, ಬದುಕಿನ ಎಷ್ಟೋ ಜಂಜಡಗಳಿಂದ ಹೊರಬರಲು, ಏಕಾಗ್ರತೆ ಸಾಧಿಸಲು, ಶಿಸ್ತನ್ನು ರೂಢಿಸಿಕೊಳ್ಳಲು ಆಟಗಳು ಬೇಕೇಬೇಕು. ಈ ವಿಚಾರಗಳಲ್ಲಿ ಆಟಗಳ ನೆರವು ಅಷ್ಟಿಷ್ಟಲ್ಲ, ಆದ್ದರಿಂದ ಕ್ರೀಡೆಗಳಿಗೆ ನಮ್ಮ ಬದುಕಿನಲ್ಲಿ ಬಹುಬಗೆಯ ಮಹತ್ವ ಬಂದಿದೆ.

ಕ್ರೀಡೆಗಳಲ್ಲಿ ಹಲವು ಬಗೆಗಳಿದ್ದು ಅವನ್ನು ಸ್ಕೂಲವಾಗಿ ಒಳಾಂಗಣ ಕ್ರೀಡೆಗಳು ಹಾಗೂ ಹೊರಾಂಗಣ ಕ್ರೀಡೆಗಳೆಂದು ವಿಭಾಗಿಸಬಹುದು. ಒಳಾಂಗಣ ಕ್ರೀಡೆಗಳೆಂದರೆ ಮನೆಯೊಳಗೇ ಆಡಬಹುದಾದ ಆಟಿಗಳು, ಪಗಡೆಯಾಟ, ಚೌಕಾಬಾರ, ಚೆಸ್‌ ಆಟಿ, ಕೇರಂ ಬೋರ್ಡ್, ಚೆನ್ನಾಮಗೆ ಅಥವಾ ಅಳಿಗುಳಿ ಮಣೆಯಾಟ, ಇಸ್ಪೀಟಾಟ ಮುಂತಾದವನ್ನು ಉಲ್ಲೇಖಿಸಬಹುದು. ಬೇಕಾದರೆ ಚುಕ್ಕಿಆಟಿ, ಕಳ್ಳ-ಪೊಲೀಸ್ ಹುಡುಕಾಟಗಳನ್ನೂ ಇಲ್ಲಿ ಹೆಸರಿಸಬಹುದು. ಮನೆಯವರು ಅಥವಾ ಗೆಳೆಯರು ಕೂಡಿ ಆಡುವ ಈ ಆಟಗಳು ಒದಗಿಸುವ ಮನೋರಂಜನೆಯು ಬೆಲೆಕಟ್ಟಲಾರದಷ್ಟಿರುತ್ತದೆ. ಸಾಮರಸ್ಯ ಭಾವನೆಯನ್ನು ಬೆಳೆಸುತ್ತವೆ. ಈ ಆಟಗಳಲ್ಲಿ ಏರ್ಪಡುವ ಜಗಳ, ಹುಸಿಮುನಿಸುಗಳೂ ಕೂಡ ಪ್ರಿಯವೇ ಆಗಿ ಕ್ರೀಡಾ ಮನೋಭಾವವನ್ನು ಬೆಳೆಸುವುದರಿಂದ ಬದುಕಿನಲ್ಲಿ ಸೋಲು-ಗೆಲವುಗಳನ್ನು ಸ್ವೀಕರಿಸುವ ಮನೋಬಲಗಳನ್ನೂ ಕಲಿಕೆಗೆ ಬೇಕಾದ ಏಕಾಗ್ರತೆಯನ್ನೂ, ಬುದ್ಧಿಶಕ್ತಿಯ ಚಾಣೆಯನ್ನೂ ಬೌದ್ಧಿಕ ಕಸರತ್ತನ್ನೂ ಈ ಕ್ರೀಡೆಗಳು ಕಲಿಸುತ್ತವೆ.

ಇನ್ನು ಹೊರಾಂಗಣ ಕ್ರೀಡೆಗಳಾದ ಫುಟ್‌ಬಾಲ್, ಕಬ್ಬಡಿ, ಕ್ರಿಕೆಟ್, ಮುಂತಾದವು ಮನುಷ್ಯನಿಗೆ ಸಾಂಘಿಕ ಹೋರಾಟವನ್ನು ಕಲಿಸಿದರೆ ಅಥ್ಲೆಟಿಕ್‌ನ ಓಟಿ, ನೆಗತ, ಜಿಗಿತ, ಜಿಮ್ ಮುಂತಾದವು ಮನುಷ್ಯನ ವೈಯಕ್ತಿಕ ಸಾಧನೆಗೆ ದೈಹಿಕ-ಮನೋಬಲಕ್ಕೆ ಕಾರಣವಾಗುತ್ತದೆ. ಕ್ರೀಡೆಗಳು ಮನುಷ್ಯನ ಆರೋಗ್ಯದ ಮೇಲೆ ಬೀರುವ ಸಕಾರಾತ್ಮಕ ಪರಿಣಾಮ ಮಹತ್ವದ್ದು ಜಡತ್ವವನ್ನು ತೊಲಗಿಸಿ, ದೇಹವನ್ನು ಹುರಿಗೊಳಿಸುವ, ಆರೋಗ್ಯವಂತರನ್ನಾಗಿಸುವ ಆಟಗಳು ಮನುಷ್ಯನಿಗೆ ಬೇಕು. ಆದ್ದರಿಂದಲೇ ವಯೋಮಾನದ ಅಂತರವಿಲ್ಲದೆ ಎಲ್ಲರೂ ಆಟಿಗಳಲ್ಲಿ ತೊಡಗಲು ಉತ್ಸಾಹ ತೋರುತ್ತಾರೆ. ಕ್ರೀಡೆಗಳು ಮನುಷ್ಯನ ದೇಹ ಮತ್ತು ಮನಸ್ಸುಗಳನ್ನು ಸದಾ ಆರೋಗ್ಯದಾಯಕವಾಗಿಸುವುದರಿಂದ ಅವುಗಳಿಗೆ ಇನ್ನಿಲ್ಲದ ಮಹತ್ವವಿದೆ.

36. ತಂತ್ರಜ್ಞಾನದಲ್ಲಿ ಕನ್ನಡ ಭಾಷೆಯ ಬಳಕೆ

ಪ್ರಸ್ತುತ ವಿಷಯವು ಇಂದಿನ ಅತ್ಯಗತ್ಯ ಸಂಗತಿಯಾಗಿದೆ. ತಂತ್ರಜ್ಞಾನವು ಈ ಹೊತ್ತಿನ ಅನಿವಾರ್ಯವಾದ ಮಾಧ್ಯಮ ವಾಗಿರುವುದರಿಂದ ಅದನ್ನು ಬಿಟ್ಟು ಈಗ ನಮ್ಮ ಬದುಕು ಸಾಗುವುದಿಲ್ಲವೆಂಬಷ್ಟು ಆವರಿಸಿಕೊಂಡಿದೆ. ಅದನ್ನು ಬಳಸದವರು ಈಗ ಪದವೀಧರರಾಗಿದ್ದರೂ ಅನಕ್ಷರಸ್ಥರೆನಿಸಿಕೊಳ್ಳುವರು, ಮೊಬೈಲ್, ಕಂಪ್ಯೂಟರ್‌ಗಳ ಮೂಲಕ ಅಂತರ್‌ಜಾಲವನ್ನು ಬಳಸುವ ನಾವು ಅದರ ಭಾಷೆಯಾಗಿ ಇಂಗ್ಲಿಷನ್ನು ಬಳಸಬೇಕಾಗಿದೆ. ತಂತ್ರಜ್ಞಾನದ ಭಾಷೆ ಇಂಗ್ಲಿಷಾಗಿರುವುದರಿಂದ ಇದು ಅನಿವಾರ್ಯ, ಆದರೆ ಈ ಮೂಲಕ ನಾವು ಅಷ್ಟರಮಟ್ಟಿಗೆ ನಮ್ಮ ಕನ್ನಡ ಭಾಷೆಯಿಂದ ದೂರಾಗುತ್ತಿರುವುದು ಸತ್ಯ.

ಇದು ಹೀಗೇ ಮುಂದುವರೆದರೆ ನಮ್ಮ ಕನ್ನಡ ಇನ್ನಷ್ಟು ಹಿನ್ನಡೆಯನ್ನು ಕಂಡು ಮುಂದೆ ಹೇಳಹೆಸರಿಲ್ಲದಂತೆ ಕಣ್ಮರೆಯಾಗುತ್ತದೆ. ಆದ್ದರಿಂದ ತಂತ್ರಜ್ಞಾನದ ಭಾಷೆಯನ್ನಾಗಿ ಕನ್ನಡವನ್ನು ಬಳಸುವಂತೆ ಮಾಡಬೇಕಾಗಿರುವುದು ಅನಿವಾರ್ಯ.

ಎಲ್ಲೆಲ್ಲಿ ನಾವು ತಂತ್ರಜ್ಞಾನವನ್ನು ಬಳಸಿ ಇಂಗ್ಲಿಷಿನ ಮೂಲಕ ವ್ಯವಹರಿಸುತ್ತಿದ್ದೇವೆಯೋ ಅಲ್ಲೆಲ್ಲಾ ಕನ್ನಡವನ್ನು ಬಳಸುವಂತಾದರೆ ಕನ್ನಡ ಉಳಿಯುತ್ತದೆ. ನಮ್ಮನಿತ್ಯದ ವ್ಯವಹಾರದಲ್ಲಿ ಕನ್ನಡವನ್ನು ಬಳಸಲಾಗದಿದ್ದರೆ ಕನ್ನಡವನ್ನು ನಾವು ಉಳಿಸಿಕೊಳ್ಳಲಾಗುವುದಿಲ್ಲ. ಆದ್ದರಿಂದ ತಂತ್ರಜ್ಞಾನದ ಬಳಕೆಯಲ್ಲಿ ಕನ್ನಡದ ಸುಲಭ ಬಳಕೆಯ ಸಾಫ್ಟ್‌ವೇರ್‌ಗಳನ್ನು ಕಂಡುಹಿಡಿದು ಬಳಸಬೇಕು. ಇದಕ್ಕೆ ತಂತ್ರಜ್ಞರು ಮಾತ್ರವಲ್ಲದೆ, ಸರ್ಕಾರವೂ ಮನಸ್ಸು ಮಾಡಿ ಅಗತ್ಯವಾದ ಅನುಧಾನವನ್ನು ಮಂಜೂರು ಮಾಡಬೇಕು. ಅಲ್ಲದೆ ಪ್ರತಿಯೊಬ್ಬ ಕನ್ನಡಿಗನಿಗೂ ತಂತ್ರಜ್ಞಾನದಲ್ಲಿ ಕನ್ನಡವನ್ನೇ ಬಳಸುತ್ತೇನೆನ್ನುವ ಸಂಕಲ್ಪ ಶಕ್ತಿ ಮೂಡಬೇಕು.

ತಂತ್ರಜ್ಞಾನವು ಅನಿವಾರ್ಯವಾದಂತೆ ಕನ್ನಡವೂ ನಮಗೆ ಅತ್ಯಂತ ಅನಿವಾರ್ಯ ಎಂಬುದು ಜನ ಆರಿಯಬೇಕಿದೆ. ಹೊಸ ಕಾಲದ ಅಗತ್ಯಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿಕೊಳ್ಳುವ ನಾವು ನಮ್ಮ ಭಾಷೆಯಲ್ಲೇ ಅವುಗಳನ್ನು ಬಳಸುವಂತಾದಾಗ ಮಾತ್ರ ನಾವು ನಿಜವಾದ ಕನ್ನಡ ಪ್ರೇಮವುಳ್ಳ ಕನ್ನಡಿಗರೆನಿಸಿಕೊಳ್ಳುತ್ತೇವೆ.

37. ಭೀಕರ ಬರಗಾಲ

ಇದು ಭೀಕರ ಒಣಗಿ ಹೋಗಿರುವ ಕರೆಬಾವಿಗಳು, ಹಸಿರಿನ ಹೆಸರೇ ಇಲ್ಲದೆ ಬಿರುಕು ಬಿಟ್ಟಿರುವ ಭೂಮಿ, ನೀರು-ಮೇವಿಗಾಗಿ ಹಾತೊರೆಯುತ್ತಿರುವ ಪ್ರಾಣಿಪಕ್ಷಿಗಳು, ತುತ್ತು ಅನ್ನ-ಗುಟುಕು ನೀರಿಗಾಗಿ ಹಂಬಲಿಸುವ ಬಡಜನ ಬರಗಾಲದಲ್ಲಿ ಕಾಣುವ ದೃಶ್ಯಗಳು, ವಾರ್ಷಿಕ ಮಳೆಯ ಅಭಾವ, ದೀರ್ಘಕಾಲಿಕ ಅಂತರ್ಜಲ ಮತ್ತು ಭೂಮೇಲೆ ನೀರಿನ ಕೊರತೆ, ಸಂಗ್ರಹಿಸಿದ ನೀರಿನ ಕೊರತೆ, ಶುದ್ದ ಜಲದ ಅಧಿಕ ಬಳಕೆ, ಅತಿಯಾಗಿ ಸಾಕುಪ್ರಾಣಿಗಳನ್ನು ಮೇಯಿಸುವಿಕೆ, ಆರಣ್ಯನಾಶ, ಅವೈಜ್ಞಾನಿಕ ಬೇಸಾಯದ ಕ್ರಮ, ಗಣಿಗಾರಿಕೆ, ಇತ್ಯಾದಿ ಬರ ಉಂಟಾಗಲು ಪ್ರಮುಖ ಕಾರಣಗಳು.

ವರ್ಷಾನುಗಟ್ಟಲೆ ಮಳೆಬಾರದೆ ಇರುವ ಕಾರಣದಿಂದಾಗಿ ಉಂಟಾಗುವ ತೀವ್ರ ಪ್ರಮಾಣದ ಬರಗಾಲವೇ ಭೀಕರ ಬರಗಾಲ. ಪ್ರಕೃತಿಯಲ್ಲಿ ಆಗುವ ವೈಪರೀತ್ಯದ ಕಾರಣದಿಂದಾಗಿ ಕೆಲವೊಮ್ಮೆ ಬರಬೇಕಾದ ಮಳೆ ಬಾರದೆ ಹೋಗಬಹುದು. ಅದರಿಂದಾಗಿ ಮೇವು, ನೀರಿಗೆ ಸ್ವಲ್ಪ ಸಮಸ್ಯೆಯಾಗಬಹುದು. ಆದರೆ ಮರುವರ್ಷ ಸರಿಯಾದ ಪ್ರಮಾಣದಲ್ಲಿ ಮಳೆಯಾದರೆ ಸಮಸ್ಯೆ ಪರಿಹಾರವಾಗುತ್ತದೆ. ಆದರೆ ಕೆಲವೊಮ್ಮೆ ದುರದೃಷ್ಟವಶಾತ್ ನಾಲ್ಕಾರು ವರ್ಷಗಳ ಕಾಲ ಸತತವಾಗಿ ಮಳೆ ಬಾರದೆ ಹೋದರೆ ಪರಿಸ್ಥಿತಿ ಆಗ ಬಿಗಡಾಯಿಸುತ್ತದೆ. ಭೂಮಿಯ ಅಂತರ್ಜಲವೂ ಬರಿದಾಗುವುದರಿಂದ ಕೆರೆಬಾವಿಗಳು ಬತ್ತಿಹೋಗಿ ಕುಡಿಯಲು ನೀರು ಸಿಗದಾಗುತ್ತದೆ. ಆಹಾರಧಾನ್ಯಗಳನ್ನು ಬೆಳೆಯಲು ಸಾಧ್ಯವಾಗುವುದಿಲ್ಲ. ಮೇವಿಲ್ಲದೆ ಪ್ರಾಣಿಗಳು ಸಾವನ್ನಪ್ಪುವ ಪರಿಸ್ಥಿತಿ ಒದಗುತ್ತದೆ. ಸಾಂಕ್ರಾಮಿಕ ರೋಗಗಳಿಂದಾಗಿ ಲಕ್ಷಾಂತರ ಮಂದಿ ಪ್ರಾಣ ನೀಗುವಂತಾಗುತ್ತದೆ.

19 ಮತ್ತು 20ನೇ ಶತಮಾನಗಳಲ್ಲಿ ಭಾರತದಲ್ಲಿ ಇಂತಹ ಭೀಕರ ಬರಗಾಲಗಳು ಕಾಣಿಸಿಕೊಂಡ ವಿವರಗಳು ಇತಿಹಾಸದಲ್ಲಿ ಕಾಣಸಿಗುತ್ತವೆ. ಅಂತಹ ಸಂದರ್ಭಗಳಲ್ಲಿ ಜನರು ನೆಲದಡಿಯಲ್ಲಿ ಹುದುಗಿರುತ್ತಿದ್ದ ಗಡ್ಡೆಗೆಣಸುಗಳನ್ನು ತಿಂದು. ಕೆಸರು ನೀರನ್ನು ಶೋಧಿಸಿ ಕುಡಿದು ಬದುಕುತ್ತಿದ್ದರೆಂದು ಹೇಳುತ್ತಾರೆ. ಕೆಲವು ಮಂದಿ ಕ್ರೂರಿಗಳು ಪರಿಸ್ಥಿತಿಯ ದುರ್ಲಾಭವನ್ನು ಪಡೆದು ಜನರನ್ನು ಹಿಂಸಿಸಿ ಶ್ರೀಮಂತರಾದರೆ, ಸಹೃದಯಿಗಳಾದ ಅನೇಕ ಶ್ರೀಮಂತರು ಕೆರೆಕುಂಟೆಗಳನ್ನು ಆಗೆಸಿ, ಜನರಿಗೆ ಆಹಾರವನ್ನು ಒದಗಿಸಿ ಉಪಕಾರ ಮಾಡಿದ್ದೂ ಇದೆ.

ಭೀಕರ ಬರಗಾಲವು ಮತ್ತೆಮತ್ತೆ ಬಾಧಿಸದಿರಬೇಕಾದರೆ ನಮ್ಮ ಅರಣ್ಯಗಳನ್ನು ರಕ್ಷಿಸುವುದೊಂದೇ ದಾರಿ. ಕಾಡು ಉಳಿದರೆ ಚೆನ್ನಾಗಿ ಮಳೆ ಬೀಳುತ್ತದೆ. ಮಳೆ ಬಿದ್ದರೆ ಬರಗಾಲ ಹೆದರಿ ಓಡುತ್ತದೆ. ಆದ್ದರಿಂದ ಕಾಡನ್ನು ಬೆಳೆಸಿ ನಾಡನ್ನು ಉಳಿಸೋಣ.

38. ಪರಿಸರ ಸಂರಕ್ಷಣೆ

ಪರಿಸರ ಎಂದರೆ ನಾವು ಮತ್ತು ನಮ್ಮ ಸುತ್ತಮುತ್ತಲಿರುವ ಚರಾಚರ ವಸ್ತುಗಳು. ಮಾಲಿನ್ಯ ಎಂದರೆ ಮಲಿನಗೊಂಡಿರುವುದು. ಈ ಮಲಿನವಾದ ಪರಿಸರವನ್ನು ಮಾಲಿನ್ಯದಿಂದ ಮುಕ್ತಗೊಳಿಸುವ ವಿಧಾನಗಳು ಯಾವುವು ಎಂದು ಚರ್ಚಿಸಬೇಕಾದುದು ಇಂದಿನ ಅತ್ಯಾವಶ್ಯಕ ವಿಷಯಗಳಲ್ಲೊಂದಾಗಿದೆ.

ಪರಿಸರ ಮಾಲಿನ್ಯವನ್ನು ವಾಯು, ಜಲ ಮತ್ತು ಶಬ್ದಮಾಲಿನ್ಯಗಳೆಂದು ಪ್ರಧಾನವಾಗಿ ಗುರುತಿಸಲಾಗುವುದು. ಈ ಮೂರು ಅಂಶಗಳು ಈಗಾಗಲೇ ಸಾಕಷ್ಟು ಕಲುಷಿತಗೊಂಡಿವೆ. ಮತ್ತಷ್ಟು ಕಲುಷಿತಗೊಳ್ಳದಂತೆ ಈಗ ಎಚ್ಚರವಹಿಸಿದರೆ ಮುಂದಿನ ಪೀಳಿಗೆಯಾದರೂ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾದೀತು!

ಪರಿಸರವನ್ನು ಮೂರು ಹಂತಗಳಲ್ಲಿ ಮಾಲಿನ್ಯರಹಿತಗೊಳಿಸಬಹುದು. ಮೊದಲು ವೈಯಕ್ತಿಕ ಹಂತದಲ್ಲಿ ಪ್ರತಿಯೊಬ್ಬ ಪೌರನೂ ತನ್ನ ಜವಾಬ್ದಾರಿಯನ್ನರಿತು ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಪರಿಸರ ಮಾಲಿನ್ಯದಿಂದಾಗುವ ದುಷ್ಪರಿಣಾಮಗಳನ್ನು ಅರಿತಿರಬೇಕು. ತನ್ನಿಂದಾಗಿ ಪರಿಸರದ ಮೇಲಾಗುವ ಮಲಿನತೆಯನ್ನು ತಡೆಹಿಡಿದಾಗ ಪರಿಸರವು ಮಾಲಿನ್ಯದಿಂದ ದೂರ ಉಳಿದೀತು!

ಸಮಾಜದ ಎಲ್ಲ ಸದಸ್ಯರೂ ಇದೇ ಪ್ರಜ್ಞೆಯನ್ನು ಬೆಳೆಸಿಕೊಂಡು ವಾಯು, ಜಲ ಮತ್ತು ಶಬ್ದಮಾಲಿನ್ಯಗಳನ್ನು ನಿರ್ಬಂಧಿಸಿದರೆ ಪರಿಸರ ತನ್ನ ಪರಿಶುದ್ಧತೆಯನ್ನು ಸಹಜವಾಗಿಯೇ ರೂಢಿಸಿಕೊಳ್ಳುವುದು. ವಾಹನ, ಕಾರ್ಖಾನೆ, ಮುಂತಾದವುಗಳು ಹೊರಚೆಲ್ಲುವ ಹೊಗೆ ಮತ್ತು ಕಲುಷಿತ ನೀರು ಪರಿಸರವನ್ನು ಹಾನಿಗೊಳಿಸುವುದು. ಈ ದಿಸೆಯಲ್ಲಿ ಸರಕಾರವು ಅನೇಕ ಶಾಸನಗಳನ್ನು ಜಾರಿಗೆ ತಂದಿದೆಯಾದರೂ (1981ರ ಕೇಂದ್ರ ಸರ್ಕಾರದ ವಾಯುಮಾಲಿನ್ಯ ನಿಯಂತ್ರಣ ಕಾಯಿದೆ, 1986ರ ಪರಿಸರ ರಕ್ಷಣೆ ಕಾಯಿದೆ ಮುಂತಾದವು) ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದ ಹೊರತು ಈ ಪರಿಸರದ ಮಲಿನತೆಯ ಪ್ರಮಾಣವು ಕಡಿಮೆಯಾಗುವುದೂ ಇಲ್ಲ: ಮಾನವನ ಭವಿಷ್ಯ ಉಜ್ವಲವೂ ಆಗುವುದಿಲ್ಲ. ಪರಿಸರದ ಮೇಲೆ ಮತ್ತು ಜನರ ಮೇಲೆ ಹಾಗೂ ವಿಮಾನ ಹಾರಾಟದ ಮೇಲೆ ಸಹ ಇದು ದುಷ್ಪರಿಣಾಮ ಬೀರಿದುದು ಗಮನಾರ್ಹವಾಗಿದೆ.

39. ಮತದಾನದ ಮಹತ್ವ

ಮತದಾನವು ನಮ್ಮೆಲ್ಲರ ಹಕ್ಕು ಇದರ ಮಹತ್ವ ಹಲವು ಬಗೆಯದು. ಪ್ರಜಾಪ್ರಭುತ್ವವು ಮತದಾನವನ್ನು ಸಂವಿಧಾನಾತ್ಮಕವಾಗಿ ನೀಡಿದೆ. ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಪ್ರಜೆಗಳೇ ಆಳುವ ಸರ್ಕಾರದಲ್ಲಿ ಮತದಾನವು ಅತ್ಯಂತ ಪ್ರಧಾನವಾದ ಪಾತ್ರವನ್ನು ವಹಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯು ನಿಂತಿರುವುದೇ ಚುನಾವಣೆಯ ಮೇಲೆ; ಹಾಗಾಗಿ ಪ್ರತಿಯೊಬ್ಬ ಅರ್ಹವಯಸ್ಕರೂ ಮತದಾನ ಮಾಡಲೇಬೇಕು.

ಸಂವಿಧಾನವನ್ನು ನಾವು ದೇವರೆಂದು ಒಪ್ಪಿಕೊಂಡಿದ್ದೇವೆ. ಈ ದೇವರಿಗೆ ಗೌರವ ತೋರಲಾದರೂ ನಾವು ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸಲೇಬೇಕು. ನಾವು ನಮ್ಮ ದೇಶದ ಪ್ರಜೆ ಎಂಬುದನ್ನು ಮತದಾನವು ದೃಢಪಡಿಸುತ್ತದೆ. ನಾವು ಮತದಾನ ಮಾಡದೆ ಸುಮ್ಮನೆ ಉಳಿದರೆ ಈ ವ್ಯವಸ್ಥೆಯ ವಿರುದ್ಧ ಮಾತನಾಡಲು, ಪ್ರಶ್ನೆಮಾಡಲು ನಮಗೆ ಯಾವ ನೈತಿಕತೆಯೂ ಇರುವುದಿಲ್ಲ. ಈ ನೈತಿಕತೆ ಬರಬೇಕಾದರೆ ನಾವೆಲ್ಲರೂ ಮತದಾನ ಮಾಡಬೇಕು.

ಜನಪ್ರತಿನಿಧಿಗಳಿಂದ ಉತ್ತಮ ಆಡಳಿತ ನಿರೀಕ್ಷಿಸಿದರೆ ಸಾಲದು. ಉತ್ತಮ ವ್ಯಕ್ತಿಯನ್ನು ಆಯ್ಕೆಮಾಡುವ ಜವಾಬ್ದಾರಿಯನ್ನು ನಾವು ಪಾಲಿಸಬೇಕು. ಮುಂದಿನ ಪೀಳಿಗೆಗೆ ಪ್ರಜಾಪ್ರಭುತ್ವವನ್ನು ಉಳಿಸಿಕೊಡಲಾದರೂ ನಾವು ಮತದಾನ ಮಾಡಬೇಕು. ನಾವು ಚುನಾವಣಾ ಸಮಯದಲ್ಲಿ ನಮ್ಮ ಕರ್ತವ್ಯ ನಿರ್ವಹಿಸಿದರೆ ಮುಂದಿನ ಪೀಳಿಗೆಯವರೂ ಸಹ ಅದನ್ನು ಪಾಲಿಸುತ್ತಾರೆ. ಇಲ್ಲವಾದರೆ ಮುಂದೊಂದು ದಿನ ಸರ್ವಾಧಿಕಾರ ಬರುವ ಸಾಧ್ಯತೆಯಿದೆ.

ನಾವು ಮತದಾನ ಮಾಡುವುದರಿಂದ ದೇಶದ ಬೆಳವಣಿಗೆ ಸಾಧ್ಯವಾಗುತ್ತವೆ ಎಂದು ನಂಬಿದ್ದೇವೆ. ಈ ನಂಬಿಕೆ ಯಿಂದಲೇ ದೇಶದ ಪ್ರಗತಿಗೆ ನಾವು ಶ್ರಮಿಸಬೇಕು. ಸೂಕ್ತ ಮತ್ತು ಸಮರ್ಥ ಅಭ್ಯರ್ಥಿಯನ್ನು ನಾವು ಆಯ್ಕೆ ಮಾಡಲು ಮತದಾನ ಮಾಡಬೇಕು. ಕೊನೆಯ ಪಕ್ಷ ಯಾವ ಅಭ್ಯರ್ಥಿಯೂ ಇಷ್ಟವಿಲ್ಲವೆಂದಾದರೆ ‘ನೋಟಾ’ ಗುರುತಿಸಲಾದರೂ ನಾವು ಮತದಾನ ಮಾಡಬೇಕು. ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಆಡಳಿತ ವ್ಯವಸ್ಥೆ, ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು.

40. ಪ್ಲಾಸ್ಟಿಕ್‌ ಮುಕ್ತ ಭಾರತ

ವೈಜ್ಞಾನಿಕ ಅನ್ವೇಷಣೆಗಳು ವರಗಳೆನಿಸುತ್ತವೆ; ಶಾಪಗಳೂ ಆಗುತ್ತವೆ. ಒಳ್ಳೆಯದು ಆದಂತೆ ಕೆಡುಕನ್ನೂ ಉಂಟು ಮಾಡುತ್ತವೆ. ಕೆಲವು ಸಂಶೋಧನೆಗಳು ಮೊದಮೊದಲು ಅತ್ಯಂತ ಉಪಯೋಗಕರವೆಂಬ ಪ್ರಶಸ್ತಿ ಪಡೆದು, ಕ್ರಮೇಣ ಅತಿ ಹಾನಿಕರವೆಂಬ ಹೀನಸ್ಥಿತಿಗೆ ಪಾತ್ರವಾಗುತ್ತವೆ. ಪ್ಲಾಸ್ಟಿಕ್ ಎನ್ನುವುದು ಇಂತಹ ಸಂಶೋಧನೆಗಳಲ್ಲಿ ಒಂದೆಂದು ಪರಿಗಣಿತವಾಗಿದೆ.

‘ಪ್ಲಾಸ್ಟಿಕ್’ ಎನ್ನುವುದು ಪೆಟ್ರೋಲಿನ ಒಂದು ಉಪಉತ್ಪನ್ನವಾಗಿದೆ. ಅದು ಅತಿಶೀಘ್ರವಾಗಿ ನಾನಾ ಬಗೆಗಳಲ್ಲಿ ರೂಪಪಡೆದು ವಿಶ್ವವ್ಯಾಪಿಯೆನಿಸಿತು. ಅದಿಲ್ಲದೆ ಯಾವ ಕಾರ್ಯವೂ ಅಸಾಧ್ಯವೆನ್ನುವಷ್ಟು ಪ್ರಸಿದ್ದಿ ಪಡೆಯಿತು. ಬಹುಪಯೋಗಿ ಎನಿಸಿತು. ಅದಿಲ್ಲದ ಸ್ಥಳವೇ ಇಲ್ಲವೆನಿಸಿತು. ಪ್ಲಾಸ್ಟಿಕ್ ಉತ್ಪನ್ನಗಳಲ್ಲಿ ಏಕಬಳಕೆಯವು ಮತ್ತು ಬಹು ಬಳಕೆಯವು ಎಂದು ಎರಡು ವಿಧಗಳಿವೆ. ಪ್ಯಾಕೆಟ್ ರೂಪದಲ್ಲಿ ಬರುವ ಆಹಾರ, ದಿನಸಿ ಮುಂತಾದ ಸಾಮಗ್ರಿಗಳು, ದಿನಸಿ ಎಣ್ಣೆ, ಜ್ಯೂಸ್ ಮುಂತಾದ ಬಾಟಲಿಗಳು, ಸ್ಟ್ರಾ, ಪ್ಲಾಸ್ಟಿಕ್ ಕಪ್, ಪಾತ್ರೆಗಳು, ಆಹಾರದ ಡಬ್ಬಿಗಳು ಮೊದಲಾದವು ವಿಕಬಳಕೆಯವೆನಿಸಿವೆ. ವ್ಯಾಪಾರಕ್ಕೆಂದು ಹೋದಾಗ ಎಲ್ಲೆಡೆಗಳಲ್ಲೂ ಪ್ಲಾಸ್ಟಿಕ್ ಕೋಶಗಳಲ್ಲಿ ಕೊಡುವುದು ಸಾಮಾನ್ಯವಾಗಿದೆ. ಅವು ಹಗುರ ಮತ್ತು ಪಾರದರ್ಶಕವಾಗಿವೆ. ಅತಿ ಕಡಿಮೆ ಬೆಳೆಯುಳ್ಳವನಿಸಿವೆ. ಒಮ್ಮೆ ಬಳಸಿ ಎಸೆಯಬಹುದಾಗಿದೆ. ಆಟಿಕೆ, ವಾಹನ, ವಿಮಾನ, ಗಣಕಯಂತ್ರ ಮುಂತಾದುವುಗಳಲ್ಲಿ ಬಳಕೆಯಾಗುವ ಪ್ಲಾಸ್ಟಿಕ್ ಅನ್ನು ಬಹುಪಯೋಗಿಯೆನ್ನಬಹುದು. ಹೀಗೆ ಪ್ಲಾಸ್ಟಿಕ್ ಆತ್ಮವಶ್ಯವೆನಿಸುವಂತೆ ಸರ್ವತ್ರ ಬಳಕೆಯಾಗುತ್ತಿದೆ.

ಪ್ಲಾಸ್ಟಿಕ್‌ನ ನೈಜರೂಪ ಈಗೀಗ ಗೋಚರವಾಗುತ್ತಿದೆ. ಅದು ಚಿರಂಜೀವಿ, ಸಾವಿಲ್ಲದ ರಾಕ್ಷಸ, ಯಾವ ರೂಪದ ಪ್ಲಾಸ್ಟಿಕ್ ವಸ್ತುವಾದರೂ ಮಣ್ಣಿನೊಡನೆ ಮಣ್ಣಾಗುವುದಿಲ್ಲ, ನೀರಿನಲ್ಲಿ ಕರಗುವುದಿಲ್ಲ, ಸುಟ್ಟರೂ ಪೂರ್ತಿ ಸುಡದೆ ವಾಯುಮಾಲಿನ್ಯವನ್ನುಂಟು ಮಾಡುತ್ತದೆ. ೧೯೫೦ರ ನಂತರ ಜಾಗತಿಕವಾಗಿ ೯ ಬಿಲಿಯನ್ ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗಿದೆ. ಭಾರತದಲ್ಲಿ ಪ್ರತಿದಿನ ೨೫,೯೪೦ ಟನ್‌ನಷ್ಟು ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದೆ. ೨೧ನೇ ಶತಮಾನದಲ್ಲಿ ಅದರ ಉತ್ಪಾದನೆ ಶೇ. ೪೪ರಷ್ಟು ಹೆಚ್ಚಾಗಿದೆ. ವಿಶ್ವದ ಜನರಲ್ಲಿ ಪ್ರತಿಯೊಬ್ಬರೂ ಪ್ರತಿದಿನ ಸರಾಸರಿ ೨.೮ ಕೆ.ಜಿ.ಗಳಷ್ಟು ಪ್ಲಾಸ್ಟಿಕ್ ಅನ್ನು ಬಳಸುತ್ತಾರೆ ಎನ್ನಲಾಗಿದೆ.

ಒಮ್ಮೆ ಬಳಸಿ ಎಸೆಯುವ ಪ್ಲಾಸ್ಟಿಕ್ ತ್ಯಾಜ್ಯವಾಗಿ ಪರಿಗಣಿತವಾಗುತ್ತಿವೆ. ನೆಲ, ನೀರು, ನದಿ, ಸಾಗರ, ಜಲಾಶಯ ಗಳಲ್ಲೆಲ್ಲಾ ಪ್ಲಾಸ್ಟಿಕ್ ತ್ಯಾಜ್ಯ ತುಂಬಿತುಳುಕುವಂತಾಗಿದೆ. ಪ್ರಾಣಿಗಳ ಹೊಟ್ಟೆಗೂ ಸೇರಿ ಸಾವು ತರುತ್ತಿವೆ. ಮೀನು, ಮೊಸಳೆ, ತಿಮಿಂಗಿಲ ಮುಂತಾದ ಜಲವಾಸಿಗಳಿಗೂ ಅಪಾಯವುಂಟುಮಾಡುತ್ತಿವೆ. ಮನುಷ್ಯರಿಗೂ ಅದರ ರಾಸಾಯನಿಕ ಕ್ರಿಯೆಯಿಂದ ಶಾರೀರಿಕ ತೊಂದರೆಗಳಾಗುತ್ತಿವೆ.

ನಾಶ ಹೊಂದದ ವಿನಾಶಕಾರಿಯಾದ ಈ ಪ್ಲಾಸ್ಟಿಕ್ ಮಾಡುವ ಹಾನಿಯಿಂದ ಬಿಡುಗಡೆ ಪಡೆಯಲು ಇರುವ ಏಕೈಕ ಮಾರ್ಗವೆಂದರೆ ಅದರ ಬಳಕೆಯನ್ನು ನಿಲ್ಲಿಸುವುದು ಮತ್ತು ಉತ್ಪಾದನೆಯನ್ನು ಸ್ಥಗಿತಗೊಳಿಸುವುದು, ವಿಶ್ವದ ಹಲವು ರಾಷ್ಟ್ರಗಳು ಈ ದಿಸೆಯಲ್ಲಿ ಕಾರ್ಯಕ್ರಮಗಳನ್ನು ಕೈಗೊಂಡಿವೆ. ಪ್ಲಾಸ್ಟಿಕ್ ಮುಕ್ತ ರಾಷ್ಟ್ರವನ್ನಾಗಿಸಲು ಭಾರತವೂ ಪಣತೊಟ್ಟಿದೆ. ಈ ದಿಸೆಯಲ್ಲಿ ಜನರು ಆಗತ್ಯವಾಗಿ ಸಹಕರಿಸಬೇಕಾಗಿದೆ.

41. ಜಾಗತಿಕ ಮಹಾಮಾರಿ ಕರೋನಾದ ಪ್ರಕೋಪ / ಕೊರೋನಾ ಕಾಲದ ಬದುಕು

ಜಗತ್ತು ಈವರೆಗೆ ಪ್ಲೇಗ್, ಕಾಲರಾ, ಏಡ್ಸ್ ಮುಂತಾದ ಅನೇಕ ಮಾರಣಾಂತಿಕ ಕಾಯಿಲೆಗಳನ್ನು ಕಂಡಿದೆ. ಆದರೆ ಇತ್ತೀಚೆಗೆ ಕಾಣಿಸಿಕೊಂಡ ಕರೋನಾ ಅಥವಾ ಕೋವಿಡ್-19 ಎಂಬ ವೈರಾಣು ರೋಗ ಇವೆಲ್ಲಕ್ಕಿಂತ ಹೆಚ್ಚು ಮಾರಕವಾಗಿ ಇಡಿಯ ಮನುಕುಲವನ್ನು ತಲ್ಲಣಗೊಳಿಸಿದೆ. 2019ರ ಅಂತ್ಯಭಾಗದಲ್ಲಿ ಈ ಕಾಯಿಲೆಯು ಮೊದಲಿಗೆ ಚೀನಾ ದೇಶದ ಊಹಾನ್ ಎಂಬ ಪ್ರಾಂತ್ಯದಲ್ಲಿ ಕಂಡುಬಂದಿತು. ಈ ಕಾಯಿಲೆಯ ಉಗಮದ ಬಗೆಗೆ ಹಲವು ವಾದಗಳಿದ್ದು ಇನ್ನೂ ಖಚಿತವಾದ ತೀರ್ಮಾನಕ್ಕೆ ಬರಲಾಗಿಲ್ಲ. ಕೆಲವೇ ತಿಂಗಳುಗಳ ಸಮಯದಲ್ಲಿ ಇದು ಇಡಿಯ ವಿಶ್ವವನ್ನು ವ್ಯಾಪಿಸಿತು.

ಕರೋನಾ ವೈರಸ್‌ನಿಂದ ಪೀಡಿತರಾದವರಲ್ಲಿ ಉಸಿರಾಟದ ಸಮಸ್ಯೆ ಮತ್ತು ಜ್ವರ ಮೊದಲಿಗೆ ಕಾಣಿಸಿಕೊಳ್ಳುತ್ತದೆ. ರೋಗ ನಿರೋಧಕ ಶಕ್ತಿ ಉಳ್ಳವರು ಸಾಮಾನ್ಯ ಉಪಚಾರದಿಂದ ಈ ಹಂತದಿಂದ ಹೊರಬಂದು ಗುಣಮುಖರಾಗಬಹುದು. ಆದರೆ ವೃದ್ಧರು, ಮಧುಮೇಹ, ರಕ್ತದೊತ್ತಡ, ಹೃದಯರೋಗ ಮತ್ತು ಶ್ವಾಸಕೋಶದ ರೋಗಿಗಳಿಗೆ ಇದು ಮಾರಣಾಂತಿಕವಾಗಬಲ್ಲದು.

ಕರೋನಾ ವೈರಸ್ ರೋಗಿಗಳ ಉಗುಳು ಮತ್ತು ಸೀನಿನ ಮೂಲಕ ವಸರಿಸುತ್ತದೆ ಈ ಮಾರಣಾಂತಿಕವಾದ ಕಾಯಿಲೆ ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿತು ಸರ್ಕಾರಗಳು ಇದನ್ನು ನಿಯಂತ್ರಿಸುವ ಸಲುವಾಗಿ ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡವು, ವಿಮಾನ, ರೈಲು, ಬಸ್ಸು ಮುಂತಾದ ಎಲ್ಲಾ ಸಂಚಾರಿ ವ್ಯವಸ್ಥೆಗಳನ್ನು ನಿಲ್ಲಿಸಲಾಯಿತು. ಕೈಗಾರಿಕೆ. ಅಂಗಡಿ, ಸಿನಿಮಾ, ಹೊಟೇಲ್ ಮುಂತಾದ ಉದ್ಯಮಗಳನ್ನು ಮುಚ್ಚಿದರು. ಕರ್ಪೂ ವಿಧಿಸುವ ಮೂಲಕ ಜನರ ಓಡಾಟವನ್ನು ನಿರ್ಬಂಧಿಸಲಾಯಿತು. ಉದ್ಯೋಗಿಗಳು ಮನೆಗಳಿಂದಲೇ ಕಾರನಿರ್ವಹಿಸುವಂತಾಯಿತು. ಶಾಲಾ-ಕಾಲೇಜುಗಳು ಮುಚ್ಚಿದವು. ಆನ್‌ಲೈನ್ ಮೂಲಕ ಶಿಕ್ಷಣ ಮುಂದುವರೆಸುವುದು ಅನಿವಾರವಾಯಿತು. ಮುಖಗವಸು (ಮಾಸ್ಕ್) ಧರಿಸುವಿಕೆ, ಸಾಮಾಜಿಕ ಅಂತರ ಮುಂತಾದವುಗಳನ್ನು ಕಡ್ಡಾಯಗೊಳಿಸಲಾಯಿತು. ಈ ಎಲ್ಲ ಕ್ರಮಗಳಿಂದಾಗಿ ಕರೋನಾ ಬಹುಮಟ್ಟಿಗೆ ತಹಬಂದಿಗೆ ಬಂದಿದೆ. ಲಸಿಕೆಯನ್ನು ಬಳಸಿ ಇದನ್ನು ನಿರ್ಮೂಲಗೊಳಿಸುವ ಯತ್ನಗಳು ನಡೆದಿವೆ.

ಕರೋನಾದ ಕಾರಣದಿಂದಾಗಿ ವಿಶ್ವಾದ್ಯಂತ ಆರ್ಥಿಕ ಚಟುವಟಿಕೆಗಳು ಅಸ್ತವ್ಯಸ್ತಗೊಂಡಿವೆ. ಅನೇಕ ಉದ್ಯಮಗಳು ಮುಚ್ಚಿಹೋಗಿವೆ. ಲಕ್ಷಾಂತರ ಮಂದಿ ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಜನಸಾಮಾನ್ಯರು ಅನುಭವಿಸಿದ ಕಷ್ಟವಂತೂ ಹೇಳತೀರದು. ಸರ್ಕಾರಗಳು ಅವರ ಬದುಕಿನ ಮಟ್ಟವನ್ನು ಸುಧಾರಿಸಲು ಸಾಕಷ್ಟು ಕಾಠ್ಯಕ್ರಮಗಳನ್ನು ಹಾಕಿಕೊಂಡಿವೆಯಾದರೂ ಅವರ ಬವಣೆ ತೀರಿಲ್ಲ, ಕರೋನಾದ ಕಾರಣದಿಂದಾಗಿ ಉಂಟಾಗಿರುವ ತಲ್ಲಣ ನಿಯಂತ್ರಣಕ್ಕೆ ಬಂದು ಪರಿಸ್ಥಿತಿ ಸಹಜ ಗತಿಗೆ ಬರಲು ಇನ್ನೂ ಒಂದರಡು ವರ್ಷಗಳಾದರೂ ಬೇಕಾಗಬಹುದು.

42. ಓದುವ ಹವ್ಯಾಸ

‘ಹವ್ಯಾಸ’ ಎಂದರೆ ನಮಗೆ ಅತ್ಯಂತ ಇಷ್ಟವಾದ ಒಂದು ಚಟುವಟಿಕೆ. ವಿದ್ಯೆ, ಉದ್ಯೋಗಗಳು ಎಷ್ಟೋ ವೇಳೆ ನಮಗೆ ಉಲ್ಲಾಸವನ್ನು ತರದೆ ಅದು ಅನಿವಾರ ಕರ್ತವ್ಯವೆನಿಸಿರಬಹುದು. ಆದರೆ ಹವ್ಯಾಸವೆಂದರೆ ಈ ರೀತಿಯಲ್ಲ. ಅವರವರ ಮನಸ್ಸಿಗೆ ಸಂತೋಷ ಕೊಡುವುದರೊಡನೆ ಆ ಕಾರ ಮಾಡದಿರಲು ಸಾಧ್ಯವಾಗದ ಒಂದು ಮನಃಸ್ಥಿತಿ ಇದಾಗಿರುತ್ತದೆ. ನಮ್ಮ ಸುತ್ತಮುತ್ತಲಿನ ಜನರನ್ನು ನೋಡಿದಾಗ ನಾನಾ ಬಗೆಯ ಹವ್ಯಾಸಗಳನ್ನು ಹೊಂದಿರುವವರನ್ನು ಗುರುತಿಸಬಹುದು. ಸಂಗೀತ ಕೇಳುವುದು, ಉಪನ್ಯಾಸವನ್ನು ಆಲಿಸುವುದು, ಹರಟೆ ಹೊಡೆಯುವುದು, ಓದುವುದೇ ಮೊದಲಾದ ಹವ್ಯಾಸ ಹೊಂದಿರುವವರನ್ನು ನಾವು ಕಾಣುತ್ತೇವೆ. ಇವುಗಳಲ್ಲಿ ಓದುವ ಹವ್ಯಾಸ ನಿಜಕ್ಕೂ ಉತ್ತಮ ರೀತಿಯ ಹವ್ಯಾಸವಾಗಿದೆ. ಈ ಓದುವ ಹವ್ಯಾಸವನ್ನು ಹೊಂದಿರುವವರ ಸಂಖ್ಯೆ ಎಲ್ಲ ದೇಶಗಳಲ್ಲಿಯೂ ಕಡಿಮೆಯೇ ಎಂದರೆ ತಪ್ಪಾಗಲಾರದು.

ಓದುವ ಹವ್ಯಾಸದಿಂದ ಹಲವು ಬಗೆಯ ಪ್ರಯೋಜನಗಳುಂಟು, ಮೊದಲನೆಯದಾಗಿ, ಓದುವ ಹವ್ಯಾಸ ಉಳ್ಳವರಿಗೆ ಹೊತ್ತು ಕಳೆಯುವುದು ಒಂದು ಸಮಸ್ಯೆಯಾಗದು. ಮತ್ತೊಬ್ಬರೊಡನೆ ಅನವಶ್ಯಕವಾಗಿ ಆಗಬಹುದಾದ ಸಂಘರ್ಷ ತಪ್ಪುವುದು. ಹೆಚ್ಚು ಹೆಚ್ಚು ವಿಷಯಗಳನ್ನು ತಿಳಿದು ಜ್ಞಾನದ ಅಭಿವೃದ್ಧಿಯಾಗುವುದು: ಲೋಕದ ವಿಚಾರದಲ್ಲಿ ಹೆಚ್ಚಿನ ಅರಿವು ಉಂಟಾಗು ವುದು. ಓದುವುದರಿಂದ ಬೌದ್ಧಿಕ ಶಕ್ತಿ ಅಧಿಕಗೊಳ್ಳುವುದರೊಡನೆ ಮನಃಶ್ಯಾಂತಿಗೆ ದಾರಿಯಾಗುತ್ತದೆ. ಈ ಹವ್ಯಾಸದಿಂದ ಇತರರಿಗೆ ಯಾವುದೇ ಬಗೆಯ ತೊಂದರೆಯಾಗುವುದಿಲ್ಲ. ಟಿ.ವಿ. ನೋಡುವ ಹವ್ಯಾಸವನ್ನು ಒಬ್ಬರು ಹೊಂದಿದ್ದರೆ ಮನೆಯಲ್ಲಿರುವ ಒಬ್ಬೊಬ್ಬರಿಗೆ ಒಂದೊಂದು ಕಾರ್ಯಕ್ರಮ ನೋಡುವುದರಲ್ಲಿ ಆಸಕ್ತಿ ಉಂಟಾಗಿ ಏಕತೆ ಇಲ್ಲದೆ ಸಂಘರ್ಷಕ್ಕೆ ದಾರಿಯಾಗಬಹುದು. ಓದುವ ಹವ್ಯಾಸವನ್ನು ಹೊಂದಿರುವವರಿಗೆ ಈ ಸಮಸ್ಯೆ ಉಂಟಾಗದು. ಅವರವರಿಗೆ ಬೇಕಾದ ಪುಸ್ತಕವನ್ನು ಅವರು ಓದುತ್ತಾ ಒಂದು ಮೂಲೆಯಲ್ಲಿ ಕುಳಿತರಾಯಿತು. ಯಾರೊಬ್ಬರಿಗೂ ತೊಂದರೆಯಾಗದು.

ನೃತ್ಯ-ಸಂಗೀತ-ಸಾಹಿತ್ಯಾದಿ ಕಾಠ್ಯಕ್ರಮಗಳಲ್ಲಿ ಭಾಗವಹಿಸುವ ಹವ್ಯಾಸ ಹೊಂದಿರುವವರು ದೂರ ದೂರದ ಸ್ಥಳಗಳಿಗೆ ಹೋಗಬೇಕಾಗುವ ಶ್ರಮ ವಹಿಸಬೇಕಾಗುತ್ತದೆ. ಆದರೆ ಓದುವ ಹವ್ಯಾಸವಿರುವವರಿಗೆ ಈ ತೊಂದರೆ, ಶ್ರಮ ಇಲ್ಲ. ಆದ್ದರಿಂದ ಓದುವ ಹವ್ಯಾಸ ಒಂದು ಒಳ್ಳೆಯ ಹವ್ಯಾಸವೆನ್ನಬಹುದು.

43. ಜಲಮಾಲಿನ್ಯ / ಜಲಸಂರಕ್ಷಣೆ

ಪ್ರಪಂಚದ ಜನ ಮತ್ತು ಜಾನುವಾರುಗಳಿಗೆ ವಾಯುವನ್ನು ಬಿಟ್ಟರೆ ನೀರು ಅತಿ ಪ್ರಮುಖವಾದ ಅಂಶವೆನಿಸಿದೆ. ಈ ನೀರು ಭೂಮಿಯ ಸುಮಾರು ೭೩ಕ್ಕೂ ಹೆಚ್ಚು ಭಾಗ ಆವರಿಸಿದೆ. ಆದರೆ ಈ ನೀರಿನಲ್ಲಿ ಕೇವಲ ಪ್ರತಿಶತ ಮೂರು ಭಾಗ ಮಾತ್ರ ಬಳಕೆಗೆ ಉಚಿತವಾಗಿದೆ. ಈ ನೀರೂ ಸಹ ಅನೇಕ ಕಾರಣಗಳಿಂದ ಕಲುಷಿತಗೊಳ್ಳುತ್ತಿದೆ. ಜಲಮಾಲಿನ್ಯ ಎಂದರೆ ಕಲುಷಿತಗೊಂಡ ನೀರು ಎಂದರ್ಥ.

ವಿಶೇಷವಾಗಿ ನಗರಗಳಲ್ಲಿ ಹೆಚ್ಚಿದ ಕಾರ್ಖಾನೆಗಳಿಂದ ಮತ್ತು ಮನೆಮನೆಗಳಿಂದ ಹೊರಚೆಲ್ಲುವ ಕೊಳಕು ನೀರು ಅಥವಾ ಗ್ರಾಮಸಾರದಿಂದ ಅನೇಕ ರೋಗಗಳು ಹಬ್ಬುವ ಸಾಧ್ಯತೆ ಇದೆ. ಮನುಷ್ಯರಷ್ಟೇ ಅಲ್ಲದೆ ಪ್ರಾಣಿಗಳೂ ಸಹ ಇಂಥ ಅನೇಕ ಹಾನಿಕಾರಕ ರೋಗಗಳಿಗೆ ಬಲಿಯಾಗುವ ಸಾಧ್ಯತೆ ಇದೆ.

ಜಲಮಾಲಿನ್ಯವನ್ನು ವೈಯಕ್ತಿಕ, ಸಾಮಾಜಿಕ ಮತ್ತು ಸಾರ್ವಜನಿಕ ಹಂತಗಳಲ್ಲಿ ತಡೆಗಟ್ಟುವ ಪ್ರಯತ್ನ ಮಾಡಬಹುದು. ಪ್ರತಿಯೊಬ್ಬ ಪ್ರಜೆಯೂ ಜಾಗೃತನಾಗಿ ತನ್ನಿಂದಾಗಬಹುದಾದ ಜಲಮಾಲಿನ್ಯವನ್ನು ತಡೆಗಟ್ಟಿದಾಗ – ಅಂದರೆ ತನ್ನ ಕಾರಣದಿಂದ ಕಲುಷಿತಗೊಳ್ಳಬಹುದಾದ ನೀರನ್ನು ಹೊರಚೆಲ್ಲದೆ ಇಂಗಿಸುವ ಪ್ರಯತ್ನ ಮಾಡಬೇಕಲ್ಲದೆ, ರಾಸಾಯನಿಕ ವಸ್ತುಗಳನ್ನು ಬಳಸಿದಾಗ ಕಲುಷಿತಗೊಂಡ ನೀರನ್ನು ಪುರ್ನಬಳಕೆಗೆ ಸಾಧ್ಯವಾಗುವಂತೆ ಮಾಡಬಹುದು.

ಸಾರ್ವತ್ರಿಕವಾಗಿ ಅಂದರೆ ವಿಶೇಷವಾಗಿ ಕಾರ್ಖಾನೆಗಳ ಮತ್ತು ವ್ಯವಸಾಯದ ಕಾರಣಗಳಿಗಾಗಿ ಬಳಸುವ ಕ್ರಿಮಿನಾಶಕ ಗಳು, ರೋಗನಿವಾರಕಗಳು ಮತ್ತು ಕಾರ್ಖಾನೆಗಳಲ್ಲಿ ಕಚ್ಚಾವಸ್ತುಗಳನ್ನು ಶುದ್ದೀಕರಿಸಲು, ಯಂತ್ರಗಳನ್ನು ತಂಪುಗೊಳಿಸಲು, ಚರ್ಮ ಹದಗೊಳಿಸುವಾಗ – ಹೀಗೆ ಹಲವು ಹತ್ತು ರೀತಿಗಳಿಂದ ಕಲುಷಿತಗೊಳ್ಳುವ ನೀರನ್ನು ಸರಕಾರದ ನೀತಿ ನಿಯಮ ಗಳನ್ವಯ ಶುದ್ಧಗೊಳಿಸುವ ಪ್ರಯತ್ನ ಈಗಾಗಲೇ ನಡೆದಿದೆ. ಅದು ಮತ್ತಷ್ಟು ತೀವ್ರಗೊಂಡಾಗ ಮಾತ್ರ ಈ ಸಮಸ್ಯೆಯನ್ನು ಪರಿಹರಿಸುವುದು ಸಾಧ್ಯ.

ರೈತರು ತಮ್ಮ ಹೊಲ ಮತ್ತು ತೋಟಗಳಿಗೆ ಬಳಸಿದ ರಾಸಾಯನಿಕ ವಸ್ತುಗಳು ಹರಿದು ಕೆರೆಕಟ್ಟೆ ಸೇರದಂತೆ ಬದುಗಳನ್ನು ಎತ್ತರಿಸುವ ಮೂಲಕ ನೀರು ಕಲುಷಿತಗೊಳ್ಳದಂತೆ ರಕ್ಷಿಸಬಹುದು. ಹೀಗೆ ಜನರು ಜಾಗೃತರಾದಾಗ ಜನಾಂದೋಲನದಿಂದ ಮಾತ್ರ ಈ ಜ್ವಲಂತವಾದ ಸಮಸ್ಯೆಯನ್ನು ಹತ್ತಿಕ್ಕಲು ಸಾಧ್ಯ.

44. ಸಾಂಕ್ರಾಮಿಕ ರೋಗಗಳ ಬಗ್ಗೆ ವಹಿಸಬೇಕಾದ ಎಚ್ಚರಿಕೆಗಳು

‘ಆರೋಗ್ಯವೇ ಭಾಗ್ಯ’ ಎನ್ನುವ ಅರ್ಥಪೂರ್ಣವಾದ ಹೇಳಿಕೆಯಿದೆ. ದೈಹಿಕ, ಮಾನಸಿಕ ರೋಗಗಳಿಗೆ ಒಳಗಾಗದೆ ಇರುವುದೇ ಆರೋಗ್ಯವೆನಿಸುತ್ತದೆ. ಉತ್ತಮ ವೇತನವಿರುವ ಉದ್ಯೋಗ, ವಾಹನ ಸೌಲಭ್ಯ, ದೊಡ್ಡ ಮನೆ, ಮಡದಿ, ಮಕ್ಕಳು, ಆಳುಕಾಳುಗಳು, ಹಣ- ಇವೆಲ್ಲವೂ ಇದ್ದು, ರೋಗಕ್ಕೆ ಒಳಗಾಗದೆ ಈ ಸಕಲ ಸುಖಸಂಪತ್ತುಗಳನ್ನು ಅನುಭವಿಸಲಾಗುವುದಿಲ್ಲ. ಅಂಥವನಿಗೆ ಬಡವನಾಗಿದ್ದರೂ ಆರೋಗ್ಯವಂತನಾಗಿರುವುದು ಲೇಸು ಎನಿಸುತ್ತದೆ. ಆದುದರಿಂದಲೇ ಆರೋಗ್ಯಕ್ಕಿಂತ ಮಿಗಿಲಾದ ಭಾಗ್ಯ ಬೇರೆ ಇಲ್ಲ ಎನ್ನುವ ಮಾತು ಬಳಕೆಯಲ್ಲಿದೆ.

ತನ್ನ ಸಮಾಜದ, ಪರಿಸರದ ಆರೋಗ್ಯವನ್ನು ರಕ್ಷಿಸಿಕೊಳ್ಳುವ ಹೊಣೆ ಮನುಷ್ಯನಿಗೆ ಇದೆ. ಆತ ಶುದ್ಧವಾದ ನೀರು, ಗಾಳಿ, ಆಹಾರಗಳ ಸೇವನೆಯಿಂದ ರೋಗಗಳು ಬರದಂತೆ ತಡೆಗಟ್ಟಬಹುದು. ತಾನು ಶುಚಿಯಾಗಿರಬೇಕು, ಪರಿಸರವನ್ನೂ ಶುಚಿಯಾಗಿರಿಸಬೇಕು. ಆಗ ರೋಗಗಳು ಹರಡಲು ಸಾಧ್ಯವಾಗುವುದಿಲ್ಲ.

ಈ ಹಿಂದೆ ‘ಮಡಿ’ ಎನ್ನುವ ಅರ್ಥದಲ್ಲಿ ಶುಚಿತ್ವವನ್ನು ಆಚರಿಸಲಾಗುತ್ತಿತ್ತು. ಹೊರಗೆ ಕೆಲಸಮಾಡಿ, ಪ್ರಯಾಣ ಮಾಡಿ ಬಂದಾಗ ಪಾದರಕ್ಷೆಗಳನ್ನು, ಕೆಲಸಕ್ಕೆ ಬಳಸಿದ ಉಪಕರಣಗಳನ್ನು ಮನೆಯ ಹೊರಗೇ ಇರಿಸಿ ಕೈಕಾಲುಗಳನ್ನು ತೊಳೆದು ಒಳಗೆ ಪ್ರವೇಶಿಸಬೇಕಾಗಿತ್ತು. ಆನಂತರ ಉಟ್ಟ ಬಟ್ಟೆಯನ್ನು ಕಳಚಿಟ್ಟು ಸ್ಥಾನ ಮಾಡಿ ಬೇರೆ ಉಡುಗೆಯನ್ನು ತೊಡಬೇಕಾಗಿತ್ತು. ಮನೆಯಲ್ಲಿಯೇ ಇರುವವರು ಆಹಾರ ಸೇವಿಸುವ ಮೊದಲು ಕೈಕಾಲುಗಳನ್ನು ತೊಳೆದುಕೊಳ್ಳುತ್ತಿದ್ದರು. ಮನೆಯ ನೆಲವನ್ನು ದನದ ಸಗಣಿಯನ್ನು ಬಳಸಿ ಸಾರಿಸುತ್ತಿದ್ದರು. ಸಗಣಿಗೆ ಕ್ರಿಮಿನಾಶಕ ಶಕ್ತಿಯಿದೆ ಎಂದು ಅವರು ತಿಳಿದಿದ್ದರು. ತಾಮ್ರದ ಪಾತ್ರೆ ಅಥವಾ ಮಣ್ಣಿನ ಮಡಿಕೆಗಳಲ್ಲಿರಿಸಿದ ನೀರನ್ನು ಕುಡಿಯುತ್ತಿದ್ದರು. ಆಹಾರ ಸೇವನೆಯಲ್ಲಿ ಎಚ್ಚರ ವಹಿಸುತ್ತಿದ್ದರು.

ನವ ನಾಗರಿಕತೆಯೆಂಬ ಹೆಸರಿನಲ್ಲಿ ಈ ಪದ್ಧತಿಗಳೆಲ್ಲವೂ ಕಣ್ಮರೆಯಾಗಲಾರಂಭಿಸಿದ್ದವು. ಬೀದಿಬದಿಯ ಆಹಾರ ಸೇವನೆ, ಕತ್ತರಿಸಿಟ್ಟ ಹಣ್ಣುಹಂಪಲಗಳನ್ನು ತಿನ್ನುವುದು ಮುಂತಾದುವುಗಳಿಂದಾಗಿ ಕಾಲರಾ, ಆಮಶಂಕೆ ಮೊದಲಾದ ರೋಗಗಳು ಹರಡತೊಡಗಿದವು. ಸುತ್ತಲ ಪರಿಸರವನ್ನು ಶುಚಿಯಾಗಿಡದ ಕಾರಣ, ಸೊಳ್ಳೆಗಳು, ವಿವಿಧ ಕ್ರಿಮಿಕೀಟಿಗಳು ಹೆಚ್ಚಾದುವು. ಮಲೇರಿಯಾ, ಚಿಕುನ್‌ಗುನ್ಯಾ ಡೆಂಗಿ (ಡೆಂಗೂ) ಇತ್ಯಾದಿ ರೋಗಗಳು ವ್ಯಾಪಿಸಿದವು. ಇಷ್ಟಾಗಿಯೂ ಜನರು ಎಚ್ಚೆತ್ತುಕೊಳ್ಳಲಿಲ್ಲ. ಶುಚಿತ್ರದ ಪರಿಣಾಮವನ್ನು ಅರಿಯವೇ, ವೈದ್ಯರ ಸಂಪತ್ತನ್ನು ಹೆಚ್ಚಿಸತೊಡಗಿದರು. ಜನರನ್ನು ಎಚ್ಚರಿಸಲು ಕೊರೋನಾ (ಕೋವಿಡ್ 19) ದಂತಹ ರೋಗವೇ ಹುಟ್ಟಬೇಕಾಯಿತು. ಉಸಿರಾಟ, ಸ್ಪರ್ಶ, ಪರಸ್ಪರ ಸಂಪರ್ಕದಿಂದ ಈ ರೋಗ ಹರಡುವುದೆಂದು ತಿಳಿದಾಗ, ಶುಚಿತ್ವಕ್ಕೆ ಶರಣಾಗಲೇಬೇಕಾಯಿತು. ಪರಸ್ಪರ ಆಲಿಂಗನ, ಕೈನುಲಕುವಿಕೆ ಇತ್ಯಾದಿ ಸಂಪರ್ಕವನ್ನು ನಿಷೇಧಿಸಲಾಯಿತು. ಎಲ್ಲರೂ ಬಾಯಿ ಮತ್ತು ಮೂಗುಗಳನ್ನು ಮುಚ್ಚುವ ಮುತುಗವಸು (ಮಾಸ್ಕ್) ಗಳನ್ನು ತೊಡಲೇಬೇಕೆಂದು ಕಡ್ಡಾಯ ಮಾಡಲಾಯಿತು. ರೋಗಕ್ಕೆ ಒಳಗಾದವರನ್ನು ಅನ್ನರ ಸಂಪರ್ಕವಿಲ್ಲದಂತೆ ಇಡುವಂತೆ ಮಾಡಲಾಯಿತು. ಹೊರಗೆ ಕೆಲಸ ಮಾಡಿಯೋ, ಓಡಾಡಿಯೋ ಬಂದಾಗ ಬಟ್ಟೆ ಬದಲಾಯಿಸಿ, ಶುದ್ದೀಕರಣ ದ್ರವ ಅಥವಾ ಸಾಬೂನಿನಿಂದ ಕೈಕಾಲುಗಳನ್ನು ತೊಳೆದುಕೊಳ್ಳುವಂತೆ ನಿರ್ದೇಶಿಸಲಾಯಿತು. ಎಲ್ಲೇ ಹೋದರೂ ಅಲ್ಲಿ ಹೋದವರ ದೇಹದ ತಾಪವನ್ನು ಪರೀಕ್ಷಿಸುವ, ಕೈಗಳಿಗೆ ಶುದ್ದೀಕರಣ ದ್ರವವನ್ನು ಸಿಂಪಡಿಸುವ ಕ್ರಮ ಬಳಕೆಗೆ ಬಂತು. ಸಭೆ-ಸಮಾರಂಭಗಳನ್ನು ತಡೆಗಟ್ಟಲಾಯಿತು. ಜನರು ವರಸ್ಪರ ದೂರವಿರುವಂತೆ ಎಚ್ಚರಿಸಲಾಯಿತು. ಹೀಗೆ ಈ ಕೊರೋನಾ ರೋಗ ಜನರಲ್ಲಿ ಶುಚಿತ್ವದ ಪಾತ್ರವೇನೆಂಬುದರ ಅರಿವು ಮೂಡಿಸಿತು. ಇಷ್ಟೆಲ್ಲಾ ಎಚ್ಚರ ವಹಿಸಿದರೂ ಜಗತ್ತಿನಾದ್ಯಂತ ಅಸಂಖ್ಯಾತ ಜನರನ್ನು ಇದು ಬಲಿ ಪಡೆಯಿತು. ಈ ರೋಗಕ್ಕೆ ಲಸಿಕೆಯನ್ನು ಅಭಿವೃದ್ಧಿಪಡಿಸಿ ಜನರ ಮೇಲೆ ಬಳಸಲಾಗುತ್ತಿದೆ. ಆದರೂ ಈ ರೋಗ ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ವಿಶ್ವಾದ್ಯಂತ ಎಲ್ಲ ಕ್ಷೇತ್ರಗಳಿಗೂ ಬಹಳ ಹಾನಿಯನ್ನುಂಟುಮಾಡಿದ ಇದು ವಿಚಿತ್ರ ವ್ಯಾಧಿಯೆನಿಸಿದೆ.

ಶುಚಿತ್ವವನ್ನು ಪಾಲಿಸದೇ ಇದ್ದರೆ ಯಾವ ಬಗೆಯ ಅನಾಹುತವಾಗಬಹುದೆಂಬುದರ ಪಾರವನ್ನು ಈ ಕೊರೋನಾ ರೋಗವು ಜಗತ್ತಿನ ಜನರಿಗೆ ಮನಗಾಣಿಸಿದೆ. ಅಶುಚಿತ್ವದತ್ತ ಹೆಜ್ಜೆಯಿರಿಸುತ್ತಿದ್ದ ಜನತೆ ಈಗಲಾದರೂ ಶುಚಿತ್ವದತ್ತ ಗಮನವಿರಿಸಿ ಎಂದು ಅದು ಎಚ್ಚರಿಸಿದೆ.

45. ದೇಶದ ಪ್ರಗತಿಯಲ್ಲಿ ಯುವಜನರ ಪಾತ್ರ

ಯಾವುದೇ ಒಂದು ದೇಶ ಅಭಿವೃದ್ಧಿಯನ್ನು ಹೊಂದಬೇಕಾದರೆ ಅದರಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿರುತ್ತದೆ. ಏಕೆಂದರೆ ಹಿರಿಯರಿಗೆ ಹೋಲಿಸಿದರೆ ಯುವಜನರಲ್ಲಿ ದುಡಿಯುವ ಶಕ್ತಿ, ಕೆಲಸವನ್ನು ಸಾಧಿಸಬೇಕೆನ್ನುವ ಛಲ ಹಾಗೂ ಮುಂದೆ ನುಗ್ಗುವ ಸಾಮರ್ಥ್ಯಗಳು ಹೆಚ್ಚಾಗಿ ಇರುತ್ತವೆ. ಹಿರಿಯರು ತಮ್ಮ ಅನುಭವದ ಬಲದಿಂದ ರಾಷ್ಟ್ರದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಬಹುದು. ಆದರೆ ವಯೋಸಹಜವಾದ ದೌರ್ಬಲ್ಯಗಳು, ಸೀಮಿತ ಅವಕಾಶಗಳು, ಪೂರ್ವಾಗ್ರಹಪೀಡಿತ ದೃಷ್ಟಿಕೋನ – ಮುಂತಾದವುಗಳಿಂದಾಗಿ ಅವುಗಳನ್ನು ಕಾರ್ಯರೂಪಕ್ಕೆ ತರಲು ಅವರಿಗೆ ಸಾಧ್ಯವಾಗದಿರಬಹುದು.

ಆದರೆ ಯುವಕರು ಹಾಗಲ್ಲ. ಅವರಲ್ಲಿ ಪುಟಿಯುವ ಉತ್ಸಾಹವಿರುತ್ತದೆ, ಯಾವ ಕೆಲಸವನ್ನಾದರೂ ಪಟ್ಟುಹಿಡಿದು ಮಾಡಿ ಮುಗಿಸಬೇಕೆಂಬ ಛಲವಿರುತ್ತದೆ. ಹೊಸ ಹೊಸ ಸಂಗತಿಗಳನ್ನು ಕಲಿಯುವ ಆಸಕ್ತಿ ಇರುತ್ತದೆ, ಹೊಸ ಬಗೆಯ ಚಿಂತನೆಗಳಿಗೆ ತಮ್ಮನ್ನು ತಾವು ತೆರೆದುಕೊಳ್ಳುವ ಮನೋಭಾವ ಅವರದಾಗಿರುತ್ತದೆ. ಸುತ್ತಲಿನ ಪ್ರಪಂಚದಲ್ಲಿ ನಡೆಯುತ್ತಿರುವ ವಿದ್ಯಮಾನಗಳು, ಹೊಸ ಸಂಶೋಧನೆಗಳು, ಕ್ರಾಂತಿಕಾರಿ ಬದಲಾವಣೆಗಳನ್ನು ತಮ್ಮ ಕಾರ್ಯಶೈಲಿಯಲ್ಲಿಯೂ ಅಳವಡಿಸಿಕೊಂಡು ತಮ್ಮನ್ನು ತಾವು ಸಜ್ಜುಗೊಳಿಸಿಕೊಳ್ಳುವ ಸಾಮರ್ಥ್ಯ ಅವರಲ್ಲಿರುತ್ತದೆ. ಹಿರಿಯರ ಕೆಲಸವನ್ನು ಮೆದುಳಿನ ಚಟುವಟಿಕೆಗಳಿಗೆ ಹೋಲಿಸಬಹುದಾದರೆ ಯುವಜನರು ಕಟ್ಟುಮಸ್ತಾದ ಕೈಕಾಲುಗಳಿದ್ದಂತೆ. ಎಂತಹ ಕಠಿಣ ಕೆಲಸವನ್ನೂ ಅವರು ಸರಾಗವಾಗಿ ಮಾಡಬಲ್ಲರು.

ಬದುಕಿನಲ್ಲಿ ತಾವು ಕಂಡು ಉಂಡ ಕಷ್ಟ, ನೋವು, ಸಂಕಟಗಳ ಕಾರಣದಿಂದಾಗಿ ಹಿರಿಯ ತಲೆಮಾರಿನ ಜನ ಒಂದು ಬಗೆಯ ತಾಟಸ್ಥ, ಜಡ್ಡುಗಟ್ಟಿದ ಮನೋಭಾವವನ್ನು ಬೆಳೆಸಿಕೊಂಡಿರುತ್ತಾರೆ. ಆದರೆ ಯುವಜನರಲ್ಲಿ ಜೀವನಾಸಕ್ತಿ ಪುಟಿಯುತ್ತಿರುತ್ತದೆ, ಪರಿಶ್ರಮದಿಂದ ದೇಶವನ್ನು ಕಟ್ಟುವ ಮೂಲಕ ನಮ್ಮ ದೇಶವೂ ಇತರ ಮುಂದುವರೆದ ರಾಷ್ಟ್ರಗಳಿಗೆ ಸರಿಸಾಟಿಯಾಗಿ ನಿಲ್ಲುವಂತೆ ಮಾಡಬೇಕೆಂಬ ಆದರ್ಶ ಅವರನ್ನು ಕ್ರಿಯಾಶೀಲರನ್ನಾಗಿ ಮಾಡುತ್ತದೆ.

ಹೀಗೆ ಹಿರಿಯರ ಅನುಭವ, ಯುವಜನರ ಕರ್ತೃತ್ವ ಶಕ್ತಿಗಳೆರಡೂ ಬೆರೆತಾಗ ದೇಶದ ಪ್ರಗತಿ ಸಾಧ್ಯವಾಗುತ್ತದೆ.

46. ಚಂದ್ರಯಾನದಲ್ಲಿ ಭಾರತದ ಸಾಧನೆ

ಬಾಹ್ಯಾಕಾಶ ವಿಜ್ಞಾನದ ಕ್ಷೇತ್ರದಲ್ಲಿ ಭಾರತವು ಗಣನೀಯವಾದ ಸಾಧನೆಯನ್ನು ಮಾಡಿದೆ. ಅದರಲ್ಲಿಯೂ ವಿಶೇಷವಾಗಿ ಚಂದ್ರನನ್ನು ಕುರಿತ ಅಧ್ಯಯನದಲ್ಲಿ ಭಾರತವು ಇನ್ನಾವುದೇ ದೇಶವು ಸಾಧಿಸಿರದಷ್ಟು ಉನ್ನತ ಮಟ್ಟದ ಯಶಸ್ಸನ್ನು ಗಳಿಸಿದೆ ಎಂದರೆ ತಪ್ಪಲ್ಲ.

ದೇಶದ ಮೊದಲ ಚಂದ್ರನಿಗೆ ಸಂಬಂಧಿಸಿದ ಕಾರಾಚರಣೆಯಾದ ‘ಚಂದ್ರಯಾನ-1’ನ್ನು 2008ರಲ್ಲಿ ಕೈಗೊಳ್ಳ ಲಾಯಿತು. ಚಂದ್ರನ ಮೇಲೆ ನೀರು ಇದೆಯೋ ಇಲ್ಲವೋ ಎನ್ನುವುದನ್ನು ತಿಳಿಯುವುದು ಇದರ ಉದ್ದೇಶವಾಗಿತ್ತು. ಇದಕ್ಕೆಂದು ಕಳುಹಿಸಲಾದ ಬಾಹ್ಯಾಕಾಶ ನೌಕೆಯು ಹತ್ತು ತಿಂಗಳ ಕಾಲ ಚಂದ್ರನನ್ನು ಸುತ್ತಿ ನೀರಿನ ಮಂಜುಗಡ್ಡೆಯನ್ನು ಪತ್ತೆಹಚ್ಚಿತು.

ಚಂದ್ರನನ್ನು ಕುರಿತಾದ ಹೆಚ್ಚಿನ ಸಂಶೋಧನೆಯನ್ನು ಕೈಗೊಳ್ಳುವ ಉದ್ದೇಶದಿಂದ 2019ರಲ್ಲಿ ‘ಚಂದ್ರಯಾನ-2’ನ್ನು ಕೈಗೊಳ್ಳಲಾಯಿತಾದರೂ ತಾಂತ್ರಿಕ ಕಾರಣಗಳಿಂದ ಈ ಯೋಜನೆ ಸಂಪೂರ್ಣವಾಗಿ ಸಫಲವಾಗಲಿಲ್ಲ.

‘ಚಂದ್ರಯಾನ-2’ನ ವಿಫಲತೆಯಿಂದ ಎದೆಗುಂದದ ಭಾರತೀಯ ವಿಜ್ಞಾನಿಗಳು ಮತ್ತೆ 2023ರ ಆಗಸ್ಟ್ ತಿಂಗಳಿನಲ್ಲಿ ‘ಚಂದ್ರಯಾನ-3’ ಎಂಬ ಕಾರಾಚರಣೆಯನ್ನು ನಡೆಸಿದರು. ಅಂದು ‘ವಿಕ್ರಮ್ ಲ್ಯಾಂಡರ್’ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದು ಭಾರತಕ್ಕೆ ಅವಾರ ಕೀರ್ತಿಯನ್ನು ತಂದುಕೊಟ್ಟಿತು. ‘ಚಂದ್ರನ ದಕ್ಷಿಣ ಧ್ರುವದಲ್ಲಿ ತನ್ನ ನೌಕೆಯನ್ನು ಇಳಿಸಿದ ಮೊತ್ತಮೊದಲ ದೇಶ’ ಎಂಬ ಹಿರಿಮೆಗೆ ಭಾರತ ಪಾತ್ರವಾಯಿತು. ರೋವರ್ ಇಳಿದ ಸ್ಥಳವನ್ನು ಭಾರತವು ”ಶಿವಶಕ್ತಿ ಪಾಯಿಂಟ್” ಎಂದು ಹೆಸರಿಸಿದ್ದು ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಪ್ಪಿಗೆಯಾಗಿದೆ. ‘ವಿಕ್ರಮ್ ಲ್ಯಾಂಡರ್’ ಮತ್ತು ‘ಪ್ರಗ್ಯಾನ್ ರೋವ‌ರ್’ಗಳು 14 ದಿನಗಳ ಕಾಲ ಚಂದ್ರನ ಮೇಲೆ ಸಂಚರಿಸಿ ಭಾರತಕ್ಕೆ ಅಮೂಲ್ಯವಾದ ಮಾಹಿತಿಯನ್ನು ರವಾನಿಸಿದವು.

ಚಂದ್ರನ ಮೇಲೆ ಇದುವರೆಗೂ ರಷ್ಯಾ, ಅಮೆರಿಕಾ ಮತ್ತು ಚೀನಾ ಮಾತ್ರ ತಮ್ಮ ನೌಕಗಳನ್ನು ಬಹಳ ಕಷ್ಟ ಪಟ್ಟು, ಅನೇಕ ಪ್ರಯತ್ನಗಳ ನಂತರ ಇಳಿಸಿದ್ದವು. ಆದರೆ ಭಾರತ ಕೇವಲ ಮೂರೇ ಪ್ರಯತ್ನಗಳಲ್ಲಿ ಚಂದ್ರನ ಮೇಲೆ ನೌಕೆಯನ್ನು ಇಳಿಸುವ ಮೂಲಕ ವಿಕ್ರಮ ಸಾಧಿಸಿದೆ.

47. ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಮಹತ್ವ

ಆರೋಗ್ಯ ಭಾಗ್ಯವು ಎಲ್ಲ ಭಾಗ್ಯಗಳಿಗಿಂತ ಮಿಗಿಲಾದದ್ದು ನಾವು ಆರೋಗ್ಯವಾಗಿದ್ದರೆ ಮಾತ್ರ ಉಳಿದ ಎಲ್ಲ ಸಂಪತ್ತನ್ನು ಅನುಭವಿಸಲು ಸಾಧ್ಯ. ನಾವು ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಸರಿಸಬಹುದಾದ ಅತ್ಯುತ್ತಮ ವಿಧಾನವೆಂದರೆ ಯೋಗದ ಅಭ್ಯಾಸ ಮತ್ತು ಪ್ರಕೃತಿ ಚಿಕಿತ್ಸೆಯ ಬಳಕೆ.

ಯೋಗವು ಪ್ರಪಂಚಕ್ಕೆ ಭಾರತದ ಕೊಡುಗೆ, ಪತಂಜಲಿ ಮಹರ್ಷಿಗಳು ಯೋಗಶಾಸ್ತ್ರವನ್ನು ರೂಪಿಸಿದರು ಎಂದು ನಂಬಿಕೆ. ಯೋಗವು ದೇಹ ಮತ್ತು ಮನಸ್ಸುಗಳ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಅಗತ್ಯವಾದ ವಿಧಾನವನ್ನು ಹೇಳಿಕೊಡುತ್ತದೆ. ಪ್ರಕೃತಿ ಚಿಕಿತ್ಸೆಯಲ್ಲಿ ಯಾವುದೇ ಬಗೆಯ ರಾಸಾಯನಿಕ ವಸ್ತುಗಳನ್ನು ಬಳಸಲಾಗುವುದಿಲ್ಲ. ಬದಲಿಗೆ ಗಿಡಮೂಲಿಕೆಗಳು, ಮಣ್ಣು, ನೀರು ಮುಂತಾದ ಪ್ರಾಕೃತಿಕ ವಸ್ತುಗಳನ್ನು ಮಾತ್ರವೇ ಬಳಸಲಾಗುತ್ತದೆ. ಹಾಗಾಗಿ ಈ ಪದ್ಧತಿ ಯಲ್ಲಿ ಯಾವುದೇ ಅಡ್ಡ ಪರಿಣಾಮಗಳಿರುವುದಿಲ್ಲ. ಅಲೋಪತಿ ಚಿಕಿತ್ಸಾ ವಿಧಾನದಲ್ಲಿರುವ ಅಡ್ಡ ಪರಿಣಾಮದ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿದಂತೆ ಈಗ ಪಾಶ್ಚಾತ್ಯ ದೇಶಗಳೂ ಸೇರಿದಂತೆ ವಿಶ್ವದಾದ್ಯಂತ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಜನಪ್ರಿಯ ವಾಗುತ್ತಿದೆ.

ಇತರ ಬಗೆಯ ವ್ಯಾಯಾಮಗಳು ದೇಹದ ಕೆಲವು ಅಂಗಗಳ ದೃಢತೆಯಷ್ಟನ್ನೇ ತಂದುಕೊಡುತ್ತದೆ. ಆದರೆ ಯೋಗಾಭ್ಯಾಸದಿಂದ ಸಮಗ್ರವಾದ ದೇಹಾರೋಗ್ಯ ಲಭಿಸುತ್ತದೆ ಮತ್ತು ಇದರಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲ.

ಸ್ಕೂಲಕಾಯವು ಆಧುನಿಕ ಜೀವನಶೈಲಿಯ ಶಾವಗಳಲ್ಲಿ ಒಂದಾಗಿದ್ದು ಹಲವು ಬಗೆಯ ಅನಾರೋಗ್ಯಗಳಿಗೆ ದಾರಿಮಾಡಿಕೊಡುತ್ತಿದೆ. ಯೋಗಾಭ್ಯಾಸದಿಂದ ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಬಗೆಹರಿಸಿಕೊಳ್ಳಬಹುದು.

ಆಲೋಪತಿ ಚಿಕಿತ್ಸಾ ವಿಧಾನವು ಕೇವಲ ದೈಹಿಕ ಸಮಸ್ಯೆಗಳಿಗೆ ಮಾತ್ರ ಪರಿಣಾಮಕಾರಿ, ಆದರೆ ಪ್ರಕೃತಿ ಚಿಕಿತ್ಸೆ ಮತ್ತು ಯೋಗದ ಅಭ್ಯಾಸದಿಂದ ದೈಹಿಕ ಸಮಸ್ಯೆಗಳು ದೂರಾಗುವುದು ಮಾತ್ರವಲ್ಲದೆ ಮಾನಸಿಕ ನೆಮ್ಮದಿಯೂ ದೊರೆಯುತ್ತದೆ. ಇದರಿಂದಾಗಿ ಮನೋ-ದೈಹಿಕ ಕಾಯಿಲೆಗಳು ದೂರಾಗುತ್ತವೆ. ಉಪವಾಸ, ಮಣ್ಣಿನ ಚಿಕಿತ್ಸೆ, ವಾಯು ಚಿಕಿತ್ಸೆ, ಜಲ ಚಿಕಿತ್ಸೆ ಮಸಾಜ್ ಮುಂತಾದವುಗಳಿಂದ ದೇಹದ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ ಮತ್ತು ಆಸ್ತಮಾ, ಮೂಲವ್ಯಾಧಿ, ಸಂಧಿವಾತ ಮುಂತಾದ ದೀರ್ಘಕಾಲೀನ ಸಮಸ್ಯೆಗಳೂ ಕಾಲಕ್ರಮೇಣ ಕಡಿಮೆಯಾಗಿರುವ ನಿದರ್ಶನಗಳಿವೆ.

ದಿನನಿತ್ಯದ ಬದುಕಿನಲ್ಲಿ ಅನಿವಾರವಾಗಿ ಎದುರಿಸಬೇಕಾದ ಹಲವಾರು ಮಾನಸಿಕ ಒತ್ತಡಗಳಿಂದ ನಗರ ಪ್ರದೇಶ ಗಳಲ್ಲಿ ವಾಸಿಸುವ ಜನರ ಆರೋಗ್ಯವು ಇತ್ತೀಚೆಗೆ ಬಹಳ ಹದಗೆಡುತ್ತಿದೆ. ಈ ಸಮಸ್ಯೆಯಿಂದ ಪಾರಾಗಲು ಪ್ರಕೃತಿ ಚಿಕಿತ್ಸೆ ಮತ್ತು ಯೋಗವು ಬಹಳ ಸಹಾಯಕ, ಸೂರ ನಮಸ್ಕಾರ, ಪ್ರಾಣಾಯಾಮ, ಕಪಾಲಭಾತಿ, ಶ್ವಾಸಭೌತಿ ಮೊದಲಾದ ವಿಧಾನಗಳನ್ನು ಸರಿಯಾಗಿ ಕಲಿತು ಅಭ್ಯಾಸಮಾಡುವ ಮೂಲಕ ಹಾಗೂ ಬಗೆಬಗೆಯ ಆಸನಗಳನ್ನು ಹಾಕುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದಾಗಿದೆ. ಯೋಗಾಭ್ಯಾಸದ ವಿಶೇಷವೆಂದರೆ ಹೆಣ್ಣು-ಗಂಡು, ಹಿರಿಯ-ಕಿರಿಯರೆಂಬ ಭೇದಭಾವವಿಲ್ಲದೆ ಎಲ್ಲರೂ ಇದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಅಂತೆಯೇ ಪ್ರಕೃತಿ ಚಿಕಿತ್ಸೆಯು ಹೆಚ್ಚು ದುಬಾರಿಯಲ್ಲದೆ, ಯಾವುದೇ ಅಡ್ಡಪರಿಣಾಮಗಳಿಲ್ಲದ ಉತ್ತಮವಾದ ಪರ್ಯಾಯ ಚಿಕಿತ್ಸಾ ವಿಧಾನವಾಗಿದೆ.

48. ಕನ್ನಡಾಭಿಮಾನ

ಕನ್ನಡಾಭಿಮಾನವೆಂದರೆ ‘ಕನ್ನಡ ನನ್ನ ಮಾತೃಭಾಷೆ, ನಾನೊಬ್ಬ ಕನ್ನಡಿಗ’ ಎನ್ನುವ ಹಮ್ಮ

ಪ್ರತಿಯೊಬ್ಬ ವ್ಯಕ್ತಿಗೂ ತನ್ನ ನಾಡು, ನುಡಿ, ಸಂಸ್ಕೃತಿಗಳ ಬಗ್ಗೆ ಹೆಮ್ಮೆ, ಅಭಿಮಾನಗಳಿರಬೇಕಾದ್ದು ಅವಶ್ಯಕ. ನನ್ನ ಮನೆ. ನನ್ನ ಕುಟುಂಬ, ನನ್ನ ಊರು, ನನ್ನ ರಾಜ್ಯ, ನನ್ನ ದೇಶ ಎಂಬ ಅಭಿಮಾನ ಇಲ್ಲದವ ಈ ಸಮಾಜದಲ್ಲಿ ಬದುಕಲು ಅನರ್ಹ. ಅದೇ ರೀತಿಯಲ್ಲಿ ಕನ್ನಡ ನಾಡಿನಲ್ಲಿ ಬದುಕುವ ಪ್ರತಿಯೊಬ್ಬರೂ ಈ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಗಳ ಬಗೆಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು.

ಇಡಿಯ ಜಗತ್ತು ಒಪ್ಪಿ ಗೌರವಿಸುವಂತಹ, ಮೆಚ್ಚಿ ಹೊಗಳುವಂತಹ ಸಾಧನೆಗಳನ್ನು ಕನ್ನಡ ನಾಡಿನ ಜನ ಶತಶತಮಾನಗಳಿಂದ ಮಾಡಿಕೊಂಡು ಬಂದಿದ್ದಾರೆ. ಇಲ್ಲಿಯ ನೀರು-ನೆಲಗಳು ಸಂಪತ್ತಿನ ಆಗರಗಳಾಗಿವೆ. ಕಲೆ-ಸಾಹಿತ್ಯ ಸಂಸ್ಕೃತಿ, ಕ್ರೀಡೆ ಮುಂತಾದವುಗಳಲ್ಲಿ ಕನ್ನಡಿಗರು ಅದ್ವಿತೀಯ ಸಾಧನೆಯನ್ನು ಮಾಡಿದ್ದಾರೆ. ಈ ಎಲ್ಲ ಸಂಗತಿಗಳನ್ನು ಚೆನ್ನಾಗಿ ಕರಿತುಕೊಂಡು ಅದನ್ನು ಸಾರಿ ಹೇಳುವುದು, ಆ ಪರಂಪರೆಯನ್ನು ನಮ್ಮ ಕೈಲಾದಷ್ಟು ಚೆನ್ನಾಗಿ ಮುಂದುವರೆಸುವುದೇ ಕನ್ನಡಾಭಿಮಾನ.

“ಕನ್ನಡಾಭಿಮಾನವೆಂದರೆ ಕೇವಲ ನವೆಂಬರ್ ತಿಂಗಳಿನಲ್ಲಿ ಅದ್ದೂರಿಯಾಗಿ ರಾಜ್ಯೋತ್ಸವವನ್ನು ಆಚರಿಸುವುದು” ಎಂದು ಕೆಲವರು ತಿಳಿದಿದ್ದಾರೆ. ಇದು ತಪ್ಪು ತಿಳುವಳಿಕೆ, ಕನ್ನಡಾಭಿಮಾನ ಕೇವಲ ತೋರಿಕೆಗೆ, ಆಡಂಬರದ ಆಚರಣೆಗೆ ಸೀಮಿತವಾಗಬಾರದು. ಅದು ನಮ್ಮ ಜೀವನದ ಉಸಿರಾಗಬೇಕು. ತಪ್ಪಿಲ್ಲದೆ ಕನ್ನಡವನ್ನು ಓದಿ, ಬರೆಯುವ, ಕನ್ನಡ ಬಾರದೇ ಇರುವವರಿಗೆ ಕನ್ನಡವನ್ನು ಕಲಿಸುವ ಮೂಲಕ ನಮ್ಮ ಕನ್ನಡಾಭಿಮಾನವನ್ನು ನಾವು ವ್ಯಕ್ತಪಡಿಸಬೇಕು. ಕನ್ನಡ ಚಲನಚಿತ್ರಗಳನ್ನು ನೋಡುವುದು, ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡ ಸಂಸ್ಕೃತಿಯ ತಾಣಗಳಿಗೆ ಭೇಟಿ ನೀಡುವುದು – ಇವೆಲ್ಲವೂ ಕನ್ನಡದ ಅಭಿಮಾನವನ್ನು ವ್ಯಕ್ತಪಡಿಸುವ ವಿಧಾನಗಳೇ ಆಗಿವೆ. “ತನು ಕನ್ನಡ, ನುಡಿ ಕನ್ನಡ, ಮನ ಕನ್ನಡವಾಗಿರಲಿ” ಎನ್ನುವ ಕವಿವಾಣಿಯನ್ನು ನಾವೆಲ್ಲರೂ ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಕನ್ನಡಾಭಿಮಾನವಾಗಿದೆ.

Leave a Comment