ದ್ವಿತೀಯ ಪಿಯುಸಿ ಕನ್ನಡ ಹಿಂದಿನ ಪ್ರಶ್ನೆಪತ್ರಿಕೆ 2015, 2nd Puc Kannada Previous Question Paper 2015 2nd Puc Question Papers Karnataka, 2nd Puc Previous Question Paper, 2nd Puc Supplementary Exam Papers, 2nd Puc Previous Year Question Papers, 2nd Puc Model Question Paper pdf, 2nd Puc All Subject Question Paper ದ್ವಿತೀಯ ಪಿಯುಸಿ ಕನ್ನಡ ಮಾದರಿ ಪ್ರಶ್ನೆ ಪತ್ರಿಕೆಗಳು 2nd Puc ಮಾದರಿ ಪ್ರಶ್ನೆ ಪತ್ರಿಕೆಗಳು kannada model question paper 2025 2nd puc 2nd puc kannada blueprint 2025 pdf 2nd puc kannada madari prashne patrike

ಮಾರ್ಚ್ – 2015
ಅವಧಿ: 3-15 ಗಂಟೆ ಗರಿಷ್ಠ ಅಂಕಗಳು: 100
ಅ – ವಿಭಾಗ
I. ಅ) ಈ ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ಒಂದೊಂದು ಪೂರ್ಣ ವಾಕ್ಯದಲ್ಲಿ ಉತ್ತರಿಸಿ
10 x 1 = 10
೧. ರಾವಣನ ಎದುರು ಪ್ರತ್ಯಕ್ಷವಾದ ವಿದ್ಯಾದೇವತೆ ಯಾರು
೨. ರಾಜಸಭೆಯೊಳಗೆ ದ್ರೌಪದಿಯನ್ನು ಒದೆದವರು ಯಾರು?
೩. ಲಕ್ಷದಾರಿಗಳ ಚದುರಂಗದಾಟ ಯಾವುದು?
೪. ಚಿತ್ತವನ್ನು ಯಾವುದಕ್ಕೆ ಹೋಲಿಸಲಾಗಿದೆ?
೫. ಕನ್ನಡದ ಮೂಲಕ ಕಲಿತು ಶ್ರೇಷ್ಠ ವಿಜ್ಞಾನಿಯಾದವರು ಯಾರು?
೬. ಮನೋರಮೆ ಬಹುಮಾನವಾಗಿ ಮುದ್ದಣ್ಣನಿಗೆ ಏನನ್ನು ಕೊಡುವೆನೆಂದಳು?
೭. ಕಲಿಯುಗದ ಅಮೃತ ಯಾವುದು?
೮. ಕೃಷ್ಣೇಗೌಡನ ಆನೆಯ ಮಾವುತನ ಹೆಸರೇನು?
೯. ಶಿವೇಗೌಡರು ರಾತ್ರೋರಾತ್ರಿ ಆನೆ ಕರೆದುಕೊಂಡು ಹೋದುದ್ದೇಕೆ?
೧೦. ಕೃಷ್ಣೇಗೌಡನನ್ನು ಕೊನೆಯಲ್ಲಿ ಕಾಡಿದ ಕಳವಳವೇನು?
ಆ – ವಿಭಾಗ
II. ಅ) ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
4 x 2 = 8
೧೧. ರಾವಣನು ಸೊಕ್ಕಿನಿಂದ ಸೀತೆಯನ್ನುದ್ದೇಶಿಸಿ ಆಡಿದ ಮಾತುಗಳಾವುವು?
೧೨. ಉರಿಲಿಂಗಪೆದ್ದಿಯ ಪ್ರಕಾರ ಗುರುವಿನ ಲಕ್ಷಣಗಳೇನು?
೧೩. ಜಾಲಿಯ ಮರದ ನಿರರ್ಥಕತೆಯನ್ನು ಪುರಂದರದಾಸರು ಹೇಗೆ ತಿಳಿಸಿದ್ದಾರೆ?
೧೪. ‘ಮುಂಬೈ ಜಾತಕ’ ಕವಿತೆಯಲ್ಲಿ ಚಿತ್ರಿಸಿರುವಂತೆ ಮಗು ಹುಟ್ಟಿ, ಬೆಳೆದುದು ಎಲ್ಲಿ?
೧೫. ದನಗಳಿಗೆ, ಜನಗಳಿಗೆ ಏನೇನು ಇಲ್ಲ?
ಆ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
3 x 2 = 6
೧೬. ಸಿಂಹಬಾಲದ ಕೋತಿಗಳಿಗೆ ಒದಗಿದ ತೊಂದರೆ ಏನು?
೧೭. ಕಲಾಂ ಅವರ ಬದುಕಿನ ಮಂತ್ರ ಯಾವುದು?
೧೮. ‘ನೀರಿಳಿಯದ ಗಂಟಲಲ್ಲಿ ಕಡುಬನ್ನು ತುರುಕಿದಂತಾಯ್ತು’ ಎಂದು ಮನೋರಮೆ ಹೇಳಿದ್ದೇಕೆ?
೧೯. ಪಟ್ಟಣದ ಹೊಟೇಲಿನ ಕಟ್ಟಡ ಹೇಗಿದೆ?
ಇ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
3 x 2 = 6
೨೦. ದುರ್ಗಪ್ಪ ಏಕೆ ಬಂದಿರಬಹುದೆಂದು ನಿರೂಪಕರು ಯೋಚಿಸಿದರು?
೨೧. ಕಾಡಪ್ಪ ಶೆಟ್ಟರು ಯಾವ ವರ್ತಮಾನವನ್ನು ಮುಟ್ಟಿಸಿದರು?
೨೨. ಜಬ್ಬಾರ್ ನಿರೂಪಕರಿಗೆ ಅಂಚೆ ವಿಲೇವಾರಿ ಬಗ್ಗೆ ಅಸಡ್ಡೆಯಿಂದ ಹೇಳಿದ್ದೇನು?
೨೩. ಡ್ರೈವರ್ ಅಬ್ಬಾಸ್, ಕ್ಲೀನರ್ ಕೃಷ್ಣರ ಸಾವಿಗೆ ಕಾರಣವೇನು?
ಇ – ವಿಭಾಗ
III. ಅ) ಯಾವುದಾದರೂ ಎರಡು ವಾಕ್ಯಗಳನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 2 x 3 = 6
೨೪. ಕಲಿ ಭೀಮನೇ ಮಿಡುಕುಳ್ಳ ಗಂಡನು.
೨೫. ಆಪತ್ತಿನೊಳ್ ಮಣಿದು ನೋಡದ ಬಂಧುವೇತಕೆ?
೨೬. ಬಲೆ ಬೀಸಿ ಬಂದ, ಆಗೋ ಬೆಳಕು-ಬೇಟೆಗಾರ
ಆ) ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 1 x 3 = 3
೨೭. ಹಾಡುವುದು ಅವುಗಳಿಗೆ ಅನಿವಾರ್ಯ: ಅವುಗಳ ಕರ್ಮ!
೨೮. ಕನ್ನಡಿಗರು ಮೊದಲು ಕನ್ನಡದವರಾಗಬೇಕು.
ಇ) ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 1 x 3 = 3̈
೨೯. ನಮ್ಮ ಕಡೆ ಕೆಮ್ಮು ಕಾಲಿಂಗ್ ಬೆಲ್ ಇದ್ದಹಾಗೆ.
೩೦. ಕೃಷ್ಣೇಗೌಡರ ಆನೆಗೂ ಕಚ್ಚಿದೆ ಅಂತ ವರ್ತಮಾನ ಉಂಟಪ್ಪ.
ಈ – ವಿಭಾಗ
IV. ಅ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ:
3 x 4 = 12̳
೩೧. ಶಿವಪಥವನ್ನರಿಯದವನ ಭಕ್ತಿ ನಿರರ್ಥಕವೆಂಬುದನ್ನು ಬಸವಣ್ಣ ಯಾವ ಯಾವ ಉದಾಹರಣೆಗಳ ಮೂಲಕ ವಿವರಿಸಿದ್ದಾನೆ?
೩೨. ತನಗಾದ ಅವಮಾನವನ್ನು ಬ್ರೌಪದಿ ಭೀಮನಿಗೆ ಹೇಳಿಕೊಂಡ ಬಗೆಯನ್ನು ವಿವರಿಸಿ.
೩೩. ಜನಪದರು ಹೇಳುವಂತೆ ನಮ್ಮ ನೆರೆಹೊರೆ ಹೇಗಿರಬೇಕು? ವಿವರಿಸಿ.
೩೪. ಯಾವ ಸ್ಥಳಗಳಲ್ಲಿ ಜೀಸಸ್ ದಿನನಿತ್ಯ ಶಿಲುಬೆ ಏರಿದ್ದಾನೆ? ವಿವರಿಸಿ.
ಆ) ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ: 2 x 4 = 8̳
೩೫. ಬಸಲಿಂಗ ಡಾ: ತಿಮ್ಮಪ್ಪನವರ ಸೂಚನೆಗಳನ್ನು ಪಾಲಿಸದೆ ಇರಲು ಕಾರಣವೇನು?
೩೬. ಕಮಲ ಮೇಡಂಗೆ ಮೂತ್ರಪಿಂಡದಲ್ಲಿ ಕಲ್ಲು ಮೂಡಿದ್ದೇಕೆ?
೩೭. ಮುಸುರೆ ಪಾತ್ರೆಗಳು ನೀರು ಪಾಲಾದುದು ಹೇಗೆ? ಅವುಗಳನ್ನು ಮೇಲೆತ್ತಲು ಮಾಡಿದ ಪ್ರಯತ್ನಗಳೇನು?
ಇ) ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ: 2 x 4 = 8
೩೮. ಕೃಷ್ಣೇಗೌಡನ ಆನೆ ಹುಟ್ಟಿ ಬೆಳೆದ ಬಗೆಯನ್ನು ವಿವರಿಸಿ.
೩೯. ಟೆಲಿಫೋನ್ ಲೈನ್‌ಮನ್ ತಿಪ್ಪಣ್ಣನ ಸಾವಿನ ಸಂದರ್ಭವನ್ನು ವಿವರಿಸಿ.
೪೦. ನಾಗರಾಜನ ನಿಗೂಢ ಕಣ್ಮರೆಯ ಬಗ್ಗೆ ಜನರ ಅಭಿಪ್ರಾಯಗಳೇನು?
ಉ – ವಿಭಾಗ
V. ಯಾವುದಾದರೂ ಒಂದು ಪದ್ಯದ ಭಾವಾರ್ಥವನ್ನು ಬರೆಯಿರಿ:
೪೧. ಕದಡಿದ ಸಲಿಲಂ ತಿಳಿವಂ
ದದೆ ತನ್ನಿಂ ತಾನೆ ತಿಳಿದ ದಶವದನಂಗಾ
ದುದು ವೈರಾಗ್ಯಂ ಸೀತೆಯೊ
ಳುದಾತ್ತನೊಳ್ ಪುಟ್ಟದಲ್ಲೆ ನೀಲೀರಾಗಂ,
೪೨. ಹಂಚಿಕೊಂಡಿದ್ದಾರೆ ಅಪ್ಪ ಅಮ್ಮನನ್ನು
‘ಇಲ್ಲಿ ದೊಡ್ಡಮಗನ ತಾವಲ್ಲಿ ಮುದುಕಿ, ಸದ್ಯ ಕನ್ನಡ ದೇಶ
ಮಗ ಸೊಸೆ ಹೊರಗೆ ಹೋದಾಗಲಾದರೂ ನಾಲ್ಕು ಮಾತಾಡಿ
ತೀರಿಸಿಕೊಳ್ಳುತ್ತಾಳೆ ಬಾಯತುರಿಕೆ, ಪಾಪ ಮುದುಕ ದೂರದ
ಅಸ್ಸಾಮಿನಲ್ಲಿ, ಅಲ್ಲಿಯ ಮಾತು ಅವನಿಗೆ ಸಸೇಮಿರ ಬರದು.
ಭಾಷಾಭ್ಯಾಸ
VI. ಅ) ಕೆಳಗಿನ ಪ್ರಶ್ನೆಗಳಲ್ಲಿ ಯಾವುದಾದರೂ ಅರಕ್ಕೆ ಸೂಚನೆಗೆ ಅನುಗುಣವಾಗಿ ಉತ್ತರಿಸಿರಿ: 6 x 2 = 12
೪೩. ಈ ವದಗಳಿಗೆ ಅರ್ಥ ಬರೆಯಿರಿ: ಮಾರ, ಗಾಲಿ.
೪೪. ಈ ಪದಗಳಿಗೆ ಸಮಾನಾರ್ಥಕಗಳನ್ನು ಬರೆಯಿರಿ: ಭೂಮಿ, ಮನೆ.
೪೫. ಈ ಪದಗಳಿಗೆ ತದ್ಭವ ರೂಪ ಬರೆಯಿರಿ: ಯೋಗಿ, ಮುಖ.
೪೬. ಈ ನುಡಿಗಟ್ಟುಗಳನ್ನು ವಾಕ್ಯದಲ್ಲಿ ಬಳಸಿ: ತಲೆಬಾಗು, ಕೈಯೊಡ್ಡು.
೪೭. ಈ ಪದಗಳಲ್ಲಿನ ಗುಣವಾಚಕಗಳನ್ನು ಗುರುತಿಸಿ: ಹೆಮ್ಮರ, ಶುದ್ಧನೀರು.
೪೮. ಈ ಕೆಳಗಿನ ಕ್ರಿಯಾಪದಗಳ ‘ಧಾತು’ ಗುರುತಿಸಿ: ಹಾಡುವಳು, ಕಲಿಯುವರು.
೪೯. ಇವುಗಳ ಕಾಲಸೂಚಕಗಳನ್ನು ಬರೆಯಿರಿ: ಬರುವರು. ನೋಡಿತು.
ಆ) ಯಾವುದಾದರೂ ಒಂದನ್ನು ಕುರಿತು ಪ್ರಬಂಧವನ್ನು ಬರೆಯಿರಿ: 1 x 5 = 5
೫೦. ನನ್ನ ಬಾಲ್ಯದ ನೆನಪುಗಳು.
೫೧. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ.
ಇ) ಯಾವುದಾದರೂ ಒಂದನ್ನು ಕುರಿತು ಪತ್ರ ಬರೆಯಿರಿ: 1 x 4 = 4
೫೨. ನೀವು ಕೈಗೊಂಡ ಶೈಕ್ಷಣಿಕ ಪ್ರವಾಸದ ಕುರಿತು ನಿಮ್ಮಗೆಳೆಯ/ಗೆಳತಿಗೆ ಒಂದು ಪತ್ರವನ್ನು ಬರೆಯಿರಿ.
೫೩. ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆಯಲು ಅವಕಾಶ ಕೋರಿ ಬ್ಯಾಂಕಿನ ವ್ಯವಸ್ಥಾಪಕರಿಗೆ ಒಂದು ಪತ್ರವನ್ನು ಬರೆಯಿರಿ.
ಈ) ಈ ಕೆಳಗಿನ ಗಾದೆಗಳಲ್ಲಿ ಒಂದನ್ನು ವಿಸ್ತರಿಸಿ ಬರೆಯಿರಿ: 1 × 4 = 4
೫೪. ಆಳಾಗಿ ದುಡಿ, ಅರಸಾಗಿ ಉಣ್ಣು,
೫೫. ತಾಳಿದವನು ಬಾಳಿಯಾನು.
*******************************************
ಜೂನ್ 2015
ಅವಧಿ: 3-15 ಗಂಟೆ ಗರಿಷ್ಠ ಅಂಕಗಳು: 100
ಅ – ವಿಭಾಗ
I. ಈ ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ಒಂದೊಂದು ಪೂರ್ಣ ವಾಕ್ಯದಲ್ಲಿ ಉತ್ತರಿಸಿ:
10 x 1 = 10
೧. ಯಾರ ಕೈಯಲ್ಲಿ ದರ್ಪಣವಿದ್ದು ಫಲವಿಲ್ಲ?
೨. ದ್ರೌಪದಿ ಮುಂದಲೆಯ ಹಿಡಿದವರಾರು?
೩. ಕುಳಿತು ಕೆಮ್ಮುವ ಪ್ರಾಣಿ ಯಾವುದು?
೪. ಕವಯಿತ್ರಿ ಯಾವುದಕ್ಕೆ ಧಿಕ್ಕಾರವಿರಲಿ ಎನ್ನುತ್ತಾರೆ?
೫. ವಾಲ್ ಪರೈಗೆ ಬಂದ ಬ್ರಿಟಿಷ್ ಪ್ರಜೆ ಯಾರು?
೬. ಕನ್ನಡದ ಮೂಲಕ ಕಲಿತು ಶ್ರೇಷ್ಠ ವಿಜ್ಞಾನಿಯಾದವರು ಯಾರು?
೭. ಯಾವ ಕತೆ ಹೇಳಬೇಕೆಂದು ಮನೋರಮೆ ಕೇಳಿದಳು?
೮. ದುರ್ಗಪ್ಪ ಏನನ್ನು ಕೇಳಿ ಪಡೆಯಲು ಬಂದಿದ್ದನು?
೯. ಮುನ್ಸಿಪಾಲಿಟಿ ಪ್ರೆಸಿಡೆಂಟರ ಹೆಸರೇನು?
೧೦. ಆನೆ ಕಣ್ಮರೆಯಾದ ವಿಚಾರವನ್ನು ನಾಗರಾಜನಿಗೆ ಹೇಳಿದವರಾರು?
II. ಅ) ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
4 x 2 = 8
೧೧. ಗುರುವಿನ ಲಕ್ಷಣಗಳೇನು?
೧೨. ಧನ ಮತ್ತು ಸುತನ ವಿಷಯದಲ್ಲಿ ಸೋಮನಾಥನ ಅಭಿಪ್ರಾಯವೇನು?
೧೩. ಹಡೆದವ್ವನನ್ನು ಯಾವಾಗ ನೆನೆಯಬೇಕು?
೧೪. ಮುದುಕ ಏನೆಂದು ಗೋಗರೆಯುತ್ತಾನೆ?
೧೫. ಎಣ್ಣೆ ತೀರಿದ ದೀಪಗಳು ಏನನ್ನು ಸೂಚಿಸುತ್ತವೆ?
ಆ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
3 x 2 = 6
೧೬. ಕಣ್ಣನ್ನು ಪರೀಕ್ಷಿಸಿದ ಡಾ।। ತಿಮ್ಮಪ್ಪ ಬಸಲಿಂಗನಿಗೆ ಏನೆಂದು ಹೇಳಿದರು?
೧೭. ಕರ್ನಾಟಕದಲ್ಲಿ ಕನ್ನಡಕ್ಕೆ ಯಾವ ಸ್ಥಾನವಿರಬೇಕೆಂದು ಹಾಮಾನಾ ಅಪೇಕ್ಷಿಸಿದ್ದಾರೆ?
೧೮. ಮಳೆಗಾಲದಲ್ಲಿ ಹೊಳೆ ಹೇಗೆ ಕಿರಿಕಿರಿ ಎಬ್ಬಿಸುತ್ತದೆ?
೧೯. ಹಳ್ಳಿಯ ಚಹಾದ ಅಂಗಡಿಯೆಂದರೆ ಹೇಗಿರುತ್ತದೆ?
ಇ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
3 x 2 = 6
೨೦. ಆನೆ ಸಾಕುವುದರ ಬಗ್ಗೆ ಜನರ ನಂಬಿಕೆ ಏನಾಗಿತ್ತು?
೨೧. ನಾಗರಾಜ ದುರ್ಗಪ್ಪನ ಮೇಲೆ ಏನೆಂದು ರೇಗಿದನು?
೨೨. ಹುಚ್ಚುನಾಯಿಗಳು ಆಸ್ಪತ್ರೆಯಲ್ಲಿ ಹೇಗೆ ವರ್ತಿಸುತ್ತವೆಂದು ಪುಟ್ಟಯ್ಯ ಹೇಳಿದನು?
೨೩. ಅರಣ್ಯ ಇಲಾಖೆಯವರು ನಾಗರಾಜನನ್ನು ಕುರಿತು ಏನೆಂದು ಜಾಹೀರಾತು ನೀಡಿದರು?
III. ಅ) ಯಾವುದಾದರೂ ಎರಡು ವಾಕ್ಯಗಳನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 2 x 3 = 6
೨೪. ಕುಸುಮ ವಾಸನೆಯಿಲ್ಲ ಕೂಡಲು ಸ್ಥಳವಿಲ್ಲ.
೨೫. ರಸ್ತೆಯಂಚಿನಲ್ಲೇ ಕೈ ಹಿಡಿದು ನಡೆಸಿದವಳು.
೨೬. ನಿದ್ದೆ ತಿಳಿದೆದ್ದ ಮಗು ಅತ್ತದ್ದು ಹಾಲಿಗೋ ಅಮ್ಮನಿಗೋ.
ಆ) ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 1 x 3 = 3
೨೭. ದುರಂತದ ಮೂಲ ಬೀಜಗಳು ಚಹಾ ಗಿಡದ ರೂಪದಲ್ಲಿ ಬಂದವು
೨೮. ಮಗುವೇ ಮೊದಲ ವಿಜ್ಞಾನಿ.
ಇ) ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 1 x 3 = 3
೨೯. ಆನೆ ಸಾಕುವುದು ಎಂದರೆ ಎಲೆಕ್ಷನ್ನಿಗೆ ನಿಂತ ಹಾಗೆ.
೩೦. ಇತ್ತಲಾಗಿ ಮುಖ ಹಾಕಲಿ, ಅದನ್ನು ಕೋವೀಲೆ ಹೊಡೀತೀನಿ.
ಈ – ವಿಭಾಗ
IV. ಅ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ:
3 x 4 = 12
೩೧. ದ್ರೌಪದಿ ಅವಮಾನಕ್ಕೊಳಗಾದ ಮೂರು ಪ್ರಸಂಗಗಳನ್ನು ವಿವರಿಸಿರಿ.
೩೨. ಹೆಣ್ಣುಮಕ್ಕಳ ದುಃಖವನ್ನು ಬಲ್ಲವರು ಯಾರು? ಹೇಗೆ?
೩೩. ‘ಬೆಳಗು ಜಾವ’ ಕವನದ ಮೂಲಕ ಕವಿ ಬೇಂದ್ರೆ ಹೇಳಿರುವ ವಿಚಾರಗಳಾವುವು?
೩೪. ಯಾವ ಸ್ಥಳಗಳಲ್ಲಿ ಜೀಸಸ್ ದಿನನಿತ್ಯ ಶಿಲುಬೆ ಏರಿದ್ದಾನೆ? ಚರ್ಚಿಸಿ
ಆ) ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ: 2×4=8
೩೫. ಬಸಲಿಂಗನಿಗೆ ಸಿಟ್ಟು ಬರಲು ಕಾರಣವೇನು? ಅದನ್ನು ಆತ ಯಾವ ರೀತಿಯಲ್ಲಿ ವ್ಯಕ್ತಪಡಿಸುತ್ತಾನೆ?
೩೬. ಸೀತಾ ಎಂಬ ಗೆಳತಿಯ ಗುಣ-ಸ್ವಭಾವವನ್ನು ಲೇಖಕಿ ಹೇಗೆ ಚಿತ್ರಿಸಿದ್ದಾರೆ?
೩೭. ಮುದ್ದಣ್ಣ-ಮನೋರಮೆಯರ ಸಂವಾದದ ಸ್ವಾರಸ್ಯವನ್ನು ವಿವರಿಸಿ.
ಇ) ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ: 2×4=8
೩೮. ಆನೆ ಮತ್ತು ಮಾವುತ ವೇಲಾಯುಧನನ್ನು ಸಾಗಹಾಕಲು ಮರದವರು ಹವಣಿಸಿದ್ದೇಕೆ?
೩೯. ನಿದ್ರೆ ಮಂಪರಿನಲ್ಲಿದ್ದ ಡ್ರೈವರ್ ಪರಂಧಾಮಕ್ಕೆ ಹೋದ ಸಂದರ್ಭವನ್ನು ವಿವರಿಸಿ.
೪೦. ವೇಲಾಯುಧನ ಹೆಂಡತಿಗೆ ಆನೆಯ ಬಗ್ಗೆ ಸವತಿ ಮಾತ್ಸರ್ಯ ಮೂಡಲು ಕಾರಣಗಳೇನು?
ಉ – ವಿಭಾಗ
V. ಯಾವುದಾದರೂ ಒಂದು ಪದ್ಯದ ಭಾವಾರ್ಥವನ್ನು ಬರೆಯಿರಿ: 1 x 5 = 5
೪೧. ಕದಡಿದ ಸಲಿಲಂ ತಿಳಿವಂ
ದದೆ ತನ್ನಿಂ ತಾನೆ ತಿಳಿದ ದಶವದನಂಗಾ
ದುದು ವೈರಾಗ್ಯಂ ಸೀತೆಯೊ
ಳುದಾತ್ತನೊಳ್ ಪುಟ್ಟದಲ್ಲೆ ನೀಲೀರಾಗಂ.
೪೨. ಉಣದಿರ್ಪಾ ಧನಮಿರ್ದೊಡೇನು ಸುತನಿರ್ದೇಂ ಮುಪ್ಪಿನಲ್ಲಾಗದಾ।
ಒಣಗರಿಗೆ ಬಾರದಿರ್ದ ಮಳೆ ತಾಂ ಬಂದೇನಾಪತ್ತಿನೊಳ್।।
ಮಣಿದುಂ ನೋಡದ ಬಂಧುವೇತಕೆಣಿಸಲ್ ಕಾಲೋಚಿತಕ್ಕೆದಿದಾ।
ತೃಣವೇ ಪರ್ವತವಲ್ಲವೇ ಹರಹರಾ ಶ್ರೀಚೆನ್ನಸೋಮೇಶ್ವರಾ।।
ಭಾಷಾಭ್ಯಾಸ
VI. ಅ) ಕೆಳಗಿನ ಪ್ರಶ್ನೆಗಳಲ್ಲಿ ಯಾವುದಾದರೂ ಆರಕ್ಕೆ ಸೂಚನೆಗೆ ಅನುಗುಣವಾಗಿ ಉತ್ತರಿಸಿರಿ: 6 x 2 = 12
೪೩. ಈ ಪದಗಳಿಗೆ ಸಮಾನಾರ್ಥಗಳನ್ನು ಬರೆಯಿರಿ: ಕಲಹ, ತಾರೆ.
೪೪. ಈ ಪದಗಳಿಗೆ ನಾನಾರ್ಥಗಳನ್ನು ಬರೆಯಿರಿ: ಅಡಿ, ಕವಿ.
೪೫. ಈ ಪದಗಳಿಗೆ ತದ್ಭವ ರೂಪ ಬರೆಯಿರಿ: ಕ್ಷಮಾ, ಅಗ್ನಿ.
೪೬. ಈ ನುಡಿಗಟ್ಟುಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಬಳಸಿ: ಗಾಳಿಸುದ್ದಿ, ಕಾಲುಕೀಳು,
೪೭. ಇವುಗಳ ಕಾಲಸೂಚಕಗಳನ್ನು ಬರೆಯಿರಿ: ಬರುವಳು. ಹೋದನು.
೪೮. ಇವುಗಳಲ್ಲಿನ ಗುಣವಾಚಕಗಳನ್ನು ಬರೆಯಿರಿ: ಕಿರುಹಾದಿ, ರಸಬಳ್ಳಿ,
೪೯. ಇವುಗಳ ವಿಭಕ್ತಿಯನ್ನು ಗುರುತಿಸಿರಿ: ಧರ್ಮಜನಿಗೆ, ರಾವಣನೇ.
ಆ) ಯಾವುದಾದರೂ ಒಂದನ್ನು ಕುರಿತು ಪ್ರಬಂಧವನ್ನು ಬರೆಯಿರಿ: 1×5=5
೫೦. ಕನ್ನಡ ಭಾಷೆಯನ್ನು ಅಭಿವೃದ್ಧಿಗೊಳಿಸುವ ಮಾರ್ಗಗಳು.
೫೧. ಕ್ರೀಡೆ ಮತ್ತು ನಮ್ಮ ಆರೋಗ್ಯ.
ಇ) ಯಾವುದಾದರೂ ಒಂದನ್ನು ಕುರಿತು ಪತ್ರ ಬರೆಯಿರಿ: 1×4=4
೫೨. ಬ್ಯಾಂಕಿನಲ್ಲಿ ನಿಮ್ಮ ಉಳಿತಾಯ ಖಾತೆಯ ಅಕೌಂಟ್ ತೆರೆಯಲು ವ್ಯವಸ್ಥಾಪಕರಿಗೊಂದು ಪತ್ರ ಬರೆಯಿರಿ.
೫೩. ಪರೀಕ್ಷಾ ಸಿದ್ಧತೆಯನ್ನು ತಿಳಿಸಿ ನಿಮ್ಮ ತಂದೆಗೆ ಒಂದು ಪತ್ರ ಬರೆಯಿರಿ.
ಈ) ಈ ಕೆಳಗಿನ ಗಾದೆಗಳಲ್ಲಿ ಒಂದನ್ನು ವಿಸ್ತರಿಸಿ ಬರೆಯಿರಿ: 1×4-4
೫೪. ಅಜ್ಜಿ ಇಲ್ಲದ ಮನೆ, ಮಜ್ಜಿಗೆ ಇಲ್ಲದ ಊಟ.
೫೫. ಅಪಾಯ ಬಂದಾಗ ಉಪಾಯದಿಂದ ಗೆಲ್ಲಬೇಕು.
****************************************