ದ್ವಿತೀಯ ಪಿಯುಸಿ ಕನ್ನಡ ಹಿಂದಿನ ಪ್ರಶ್ನೆಪತ್ರಿಕೆ 2018, 2nd Puc Kannada Previous Question Paper 2018 2nd Puc Question Papers Karnataka, 2nd Puc Previous Question Paper 2018 pdf Kannada, 2nd Puc Supplementary Exam Papers, 2nd Puc Previous Year Question Papers, 2nd Puc Model Question Paper pdf, 2nd Puc All Subject Question Paper ದ್ವಿತೀಯ ಪಿಯುಸಿ ಕನ್ನಡ ಮಾದರಿ ಪ್ರಶ್ನೆ ಪತ್ರಿಕೆಗಳು 2nd Puc ಮಾದರಿ ಪ್ರಶ್ನೆ ಪತ್ರಿಕೆಗಳು 2018

ಮಾರ್ಚ್ 2018
ಅವಧಿ: 3 – 15 ಗಂಟೆ ಗರಿಷ್ಠ ಅಂಕಗಳು: 100
ಅ – ವಿಭಾಗ
I. ಈ ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ಒಂದೊಂದು ಪೂರ್ಣ ವಾಕ್ಯದಲ್ಲಿ ಉತ್ತರಿಸಿ:
10 x 1 = 19
೧. ಗುರು ಹೇಗೆ ವರ್ತಿಸಬಾರದು?
೨. ಧರ್ಮರಾಯನಿಗೆ ಎಂಥ ಗರ ಹೊಡೆದಿದೆ?
೩. ಹೊರಲೋಕವನ್ನು ಪರಿಚಯಿಸಿ ಎಚ್ಚರಿಕೆ ಕೊಟ್ಟವಳು ಯಾರು?
೪. ತೈಲ ತೀರಿದ್ದು ಹೇಗೆ ತಿಳಿಯುತ್ತದೆ?
೫. ಮಾರ್ಷನ ಜೊತೆಗಾರನ ಹೆಸರೇನು?
೬. ಬೆಳ್ಳಿಲೋಟವನ್ನು ಲಪಟಾಯಿಸಿದ ಅಪವಾದವನ್ನು ಯಾರ ಮೇಲೆ ಹೊರಿಸಲಾಯಿತು?
೭. ವಿಜ್ಞಾನದ ಅಡಿಪಾಯ ಯಾವುದು?
೮. ಕೃಷ್ಣೇಗೌಡರ ಆನೆ ಮೊದಲು ಯಾವ ಮಠದಲ್ಲಿತ್ತು?
೯. ನಿರೂಪಕರ ಪ್ರಕಾರ ಮುನ್ಸಿಪಾಲಿಟಿ ಪ್ರೆಸಿಡೆಂಟರ ಕರ್ತವ್ಯ ಯಾವುದು?
೧೦. ರೇಂಜರ್ ಆನೆಗೆ ಶೂಟ್ ಮಾಡುವಂತೆ ಯಾರಿಗೆ ಸೂಚಿಸಿದರು?
ಆ – ವಿಭಾಗ
II. ಅ) ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
4 x 2 = 8
೧೧. ರಾವಣ ತನ್ನ ಅಂತಃಪುರದ ಸ್ತ್ರೀಯರನ್ನು ಹೇಗೆ ಸಂತೈಸಿದನು?
೧೨. ಯಾರಿಗೆ ತತ್ತ್ವಜ್ಞಾನ ಹೇಳಿ ಪ್ರಯೋಜನವಿಲ್ಲ? ಏಕೆ?
೧೩. ಬಾನು ಮತ್ತು ಮರದ ನಿತ್ಯನೂತನತೆಯ ಬಗ್ಗೆ ಕವಿ ಏನು ಹೇಳಿದ್ದಾರೆ?
೧೪. ಎಣ್ಣೆಯಲ್ಲಿ ನೆನೆದು ಉರಿದ ಬತ್ತಿಯನ್ನು ಯಾವ ಯಾವುದಕ್ಕೆ ಹೋಲಿಸಲಾಗಿದೆ?
೧೫. ಕವಯಿತ್ರಿ ನಗುವ ನಗು ಎಂತಹುದು?
ಆ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
3 x 2 = 6
೧೬. ಕನ್ನಡದ ಸಮಸ್ಯೆಗಳು ಎಲ್ಲಿಯವರೆಗೂ ಇದ್ದೇ ಇರುತ್ತವೆ?
೧೭. ಮುಂಜಾನೆ ಚಿನ್ನಮ್ಮ ಯಾವ ಕೆಲಸದಲ್ಲಿ ತೊಡಗಿದ್ದಳು?
೧೮. ಕಲಾಂ ಅವರು ಆತ್ಮಕಥೆ ಬರೆದುದು ಏತಕ್ಕಾಗಿ?
೧೯. ‘ನೀರಿಳಿಯದ ಗಂಟಲಲ್ಲಿ ಕಡುಬನ್ನು ತುರುಕಿದಂತಾಯ್ತು’ ಎಂದು ಮನೋರಮೆ ಹೇಳಿದ್ದೇಕೆ?
ಇ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
3 x 2 = 6
೨೦. ದುರ್ಗಪ್ಪ ಏಕೆ ಬಂದಿರಬಹುದೆಂದು ನಿರೂಪಕರು ಯೋಚಿಸಿದರು?
೨೧. ಕಾಡಾನೆಗಳ ಹಾವಳಿಗೆ ಪ್ರಕಾಶ್ ನೀಡಿದ ಕಾರಣಗಳೇನು?
೨೨. ತನ್ನ ಕೆಲಸ ಅತ್ಯಂತ ಅಪಾಯಕಾರಿಯೆಂದು ದುರ್ಗಪ್ಪ ವಿವರಿಸಿದ್ದು ಹೇಗೆ?
೨೩. ಆನೆಯನ್ನು ಹದ್ದುಬಸ್ತಿನಲ್ಲಿಡುವುದರ ಬಗ್ಗೆ ವೇಲಾಯುಧನ ಅಪ್ಪ ಏನು ತಿಳಿಸಿದರು?
ಇ – ವಿಭಾಗ
III. ಅ) ಯಾವುದಾದರೂ ಎರಡು ವಾಕ್ಯಗಳನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 2 x 3 = 6
೨೪. ಮರ್ಕಟನ ಕೈಯಲ್ಲಿ ಮಾಣಿಕ್ಯವಿದ್ದು ಫಲವೇನು?
೨೫. ಜ್ಯೋತಿ ನಿನ್ನ್ಯಾರ ಹೋಲರ.
೨೬. ಬಲೆ ಬಿಸಿ ಬಂದ, ಅಗೋ ಬೆಳಕು – ಬೇಟೆಗಾರ
ಆ) ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 1 x 3 = 3
೨೭. ಕಾರ್ಮಿಕರು ಕೆಂಪು ಬಾವುಟ ಹಿಡಿದು ಹೋರಾಟಕ್ಕೆ ಸಜ್ಜಾಗಿದ್ದಾರೆ.
೨೮. ನಿನಗಾವ ರಸದೊಳಿಷ್ಟಂ?
ಇ) ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 1 x 3 = 3
೨೯. ಆನೆಗೂ ಮಾನ ಮರ್ಯಾದೆ ಇರುತ್ತೆ ತಿಳುಕೊ.
೩೦. ಈ ಕಂಬದೊಳ್ಳೆ ಏನೋ ಸೇರ್ಕೊಂಡಿದೆ.
ಈ – ವಿಭಾಗ
IV. ಅ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ:
3 x 4 = 12
೩೧. ದ್ರೌಪದಿ ಅವಮಾನಕ್ಕೊಳಗಾದ ಮೂರು ಪ್ರಸಂಗಗಳನ್ನು ವಿವರಿಸಿ.
೩೨. ವೀರ, ಮಂತ್ರಿ, ರಾಜ ಮತ್ತು ಯೋಗಿಗಳಿಗೆ ಇರಬೇಕಾದ ಅರ್ಹತೆಗಳೇನು?
೩೩. ಶಿಲುಬೆಗೇರಿದ ಜೀಸಸ್ನ ದೇಹ ಏನನ್ನು ಹೇಳುವಂತಿದೆ? ವಿವರಿಸಿ.
೩೪. ಮುದುಕನ ಕುರಿತು ಮುದುಕಿಯ ನೆನಕೆಗಳೇನು?
ಆ) ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ: 2 x 4 = 8
೩೫. ಕಣ್ಣುನೋವು ಶುರುವಾದ ಆರಂಭದಲ್ಲಿ ಬಸಲಿಂಗ ಪಡೆದುಕೊಂಡ ಚಿಕಿತ್ಸೆ ಯಾವ ರೀತಿಯದು?
೩೬. ಸೀತಾ ಎಂಬ ಗೆಳತಿಯ ಗುಣ-ಸ್ವಭಾವವನ್ನು ಲೇಖಕಿ ಹೇಗೆ ಚಿತ್ರಿಸಿದ್ದಾರೆ?
೩೭. ಪಟ್ಟಣದ ಚಹಾದಂಗಡಿಗಳು ಹೇಗಿರುತ್ತವೆ?
ಇ) ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ: 2 x 4 = 8
೩೮. ಆನೆ ಮತ್ತು ಮಾವುತ ವೇಲಾಯುಧನನ್ನು ಸಾಗಹಾಕಲು ಮಠದವರು ಹವಣಿಸಿದ್ದೇಕೆ?
೩೯. ನಿದ್ರೆ ಮಂಪರಿನಲ್ಲಿದ್ದ ಡ್ರೈವರ್ ಪರಂಧಾಮಕ್ಕೆ ಹೋದ ಸಂದರ್ಭವನ್ನು ವಿವರಿಸಿ.
೪೦. ಡ್ರೈವರ್ ಅಬ್ಬಾಸ್ ಮತ್ತು ಕ್ಲೀನರ್ ಕೃಷ್ಣರ ಸಾವಿಗೆ ಕೃಷ್ಣೇಗೌಡರ ಆನೆ ಕಾರಣವೆ? ಚರ್ಚಿಸಿ.
ಉ – ವಿಭಾಗ
V. ಯಾವುದಾದರೂ ಒಂದು ಪದ್ಯದ ಭಾವಾರ್ಥವನ್ನು ಬರೆಯಿರಿ: 1 x 5 = 5
೪೧. ಇರದುಯ್ದೀಗಳೆ ಕೊಡ್ಟೊಡೆನ್ನ ಕಡುಪುಂ ಕಟ್ಟಾಯಮುಂ ಬೀರಮುಂ
ಬಿರುದುಂ ಬೀಸರಮಕ್ಕುಮೋಸರಿಸಿದಂತಾಗಿರ್ತುಮಂತಾಗದಂ
ತಿರೆ ದೋರ್ಗವ್ರಮನಿರ್ವಲಂ ಪೊಗಚ್ಚಿನಂ ಸೌಮಿತ್ರಿಯಂ ರಾಮನಂ
ವಿರಥರ್ಮಾಡಿ ರಣಾಗ್ರದೊಳ್ ಪಿಡಿದು ತಂದಾಂ ಕೊಟ್ಟಪೆಂ ಸೀತೆಯಂ
೪೨. ವಿದ್ಯೆ: ಶಾಲೆ ಕಾಲೇಜುಗಳು ಕಲಿಸಿದ್ದು; ದಾರಿ ಬದಿ
ನೂರಾರು ಜಾಹೀರಾತುಗಳು ತಲೆಗೆ ತುರುಕಿದ್ದು;
ರೇಡಿಯೊ ಸಿಲೋನ್ ವ್ಯಾಪಾರ ವಿಭಾಗ ಶಿಫಾರಸು ಮಾಡಿದ್ದು,
ನೀನಾಗಿ ಕಲಿತದ್ದು ಬಲು ಕಡಿಮೆ, ಬಸ್ಸ್ಟಾಪಿನಲಿ ನಿಂತ
ಬಣ್ಣಗಳ ಕಡೆಗೆ ಕಣ್ಣಾಡಿಸುವುದೊಂದನ್ನು ಹೊರತು.
ಭಾಷಾಭ್ಯಾಸ
V1. ಅ) ಕೆಳಗಿನ ಪ್ರಶ್ನೆಗಳಲ್ಲಿ ಯಾವುದಾದರೂ ಆರಕ್ಕೆ ಸೂಚನೆಗೆ ಅನುಗುಣವಾಗಿ ಉತ್ತರಿಸಿರಿ: 6 x 2 = 12
೪೩. ಈ ವದಗಳಿಗೆ ಅರ್ಥವನ್ನು ಬರೆಯಿರಿ: ಹೆದೆ, ದಾರಂದ.
೪೪. ಈ ಪದಗಳಿಗೆ ನಾನಾರ್ಥಗಳನ್ನು ಬರೆಯಿರಿ, ಹೊಳೆ, ಬಟ್ಟೆ,
೪೫. ಈ ಪದಗಳಿಗೆ ತದ್ಭವ ರೂಪ ಬರೆಯಿರಿ: ಲಕ್ಷ, ಯಶ.
೪೬. ಈ ಪದಗಳಲ್ಲಿನ ಗುಣವಾಚಕ ಪದ ಬರೆಯಿರಿ: ಹಿತವಚನ, ಹುಸಿನಿದ್ದೆ.
೪೭. ಈ ಪದಗಳ ವಿಭಕ್ತಿಯನ್ನು ಹೆಸರಿಸಿ: ಇವರಂ, ಕಟ್ಟಿಗೆಯ.
೪೮. ಈ ಕ್ರಿಯಾಪದಗಳ ಕಾಲವನ್ನು ಸೂಚಿಸಿರಿ: ಹೋಗುವರು, ನೋಡುತ್ತಾಳೆ.
೪೯. ಈ ದ್ವಿರುಕ್ತಿಗಳನ್ನು ವಾಕ್ಯದಲ್ಲಿ ಬಳಸಿ: ಅಡಿಗಡಿಗೆ, ತುತ್ತತುದಿ,
ಆ) ಯಾವುದಾದರೂ ಒಂದನ್ನು ಕುರಿತು ಪ್ರಬಂಧವನ್ನು ಬರೆಯಿರಿ: 1 x 5 = 5
೫೦. ತ್ಯಾಜ್ಯ ವಸ್ತುಗಳ ಮರುಬಳಕೆ.
೫೧. ಹೆಚ್ಚುತ್ತಿರುವ ವೃದ್ಧಾಶ್ರಮಗಳು.
ಇ) ಯಾವುದಾದರೂ ಒಂದನ್ನು ಕುರಿತು ಪತ್ರ ಬರೆಯಿರಿ: 1 x 4 = 4
೫೨. ನಿಮ್ಮ ಕಾಲೇಜಿನಲ್ಲಿ ಆಚರಿಸಿದ ಕನ್ನಡ ರಾಜ್ಯೋತ್ಸವವನ್ನು ಕುರಿತು ಗೆಳೆಯ/ಗೆಳತಿಗೆ ಪತ್ರ ಬರೆಯಿರಿ.
೫೩. ನಿಮ್ಮೂರಿನಲ್ಲಿ ಒಂದು ಗ್ರಂಥಾಲಯವನ್ನು ತೆರೆಯಲು ಕೋರಿ ಮುಖ್ಯ ಗ್ರಂಥಪಾಲಕರಿಗೊಂದು ಪತ್ರ ಬರೆಯಿರಿ.
ಈ) ಈ ಕೆಳಗಿನ ಗಾದೆಗಳಲ್ಲಿ ಒಂದನ್ನು ವಿಸ್ತರಿಸಿ ಬರೆಯಿರಿ: 1 x 4 = 4
೫೪. ಆಳಾಗಿ ದುಡಿ, ಅರಸಾಗಿ ಉಣ್ಣು,
೫೫. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು.
***********************************
ಜೂನ್ 2018
ಅವಧಿ: 3 – 15 ಗಂಟೆ ಗರಿಷ್ಠ ಅಂಕಗಳು: 100
ಅ – ವಿಭಾಗ
I. ಈ ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ಒಂದೊಂದು ಪೂರ್ಣ ವಾಕ್ಯದಲ್ಲಿ ಉತ್ತರಿಸಿ:
10 x 1 = 10
೧. ಎಂತಹ ನೆರೆಯವರು ಇರಬೇಕು?
೨. ಹುಸಿನಿದ್ದೆ ಸಾಕು ಎಂದು ಕವಿ ಯಾರಿಗೆ ಹೇಳುತ್ತಾರೆ?
೩. ಕ್ರಿಸ್ಮಸ್ ಸಂದರ್ಭದಲ್ಲಿ ಹತ್ತಿ ಯಾವ ಕೆಲಸ ಮಾಡಿದ?
೪. ಕವಯಿತ್ರಿ ಯಾರಲ್ಲಿ ಮೊರೆ ಇಡುತ್ತಾರೆ?
೫. ಬಸಲಿಂಗನಿಗೆ ಕಾಣಿಸಿಕೊಂಡ ತೊಂದರೆ ಯಾವುದು?
೬. ಮನೋರಮೆ ಬಹುಮಾನವಾಗಿ ಏನನ್ನು ಕೊಡುವೆನೆಂದಳು?
೭. ಲೇಖಕರು ಹೇಳುವ ಹಳ್ಳಿಯ ಹೊಟೇಲಿನ ಹೆಸರೇನು?
೮. ದುರ್ಗಪ್ಪ ಏನನ್ನು ಕೇಳಿ ಪಡೆಯಲು ಬಂದಿದ್ದನು?
೯. ಜಬ್ಬಾರ್ ವೆಟಿಲ್ಲರಿ ಆಸ್ಪತ್ರೆಗೆ ಬರಲು ಕಾರಣವೇನು?
೧೦. ನಾಗರಾಜ ಕೋವಿ ಹಿಡಿದು ಎಲ್ಲಿ ಕುಳಿತಿದ್ದ?
ಆ – ವಿಭಾಗ
II. ಅ) ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ: 4 x 2 = 8
೧೧. ರಾವಣನು ಅಂತಿಮವಾಗಿ ಯಾವ ನಿರ್ಧಾರಕ್ಕೆ ಬರುತ್ತಾನೆ?
೧೨. ಯಾರು ಮನೆಮನೆಯನ್ನು ತಿರಿಯನು? ಕರೆಯುದಕವನ್ನರಸದವನು ಯಾರು?
೧೩. ಜಾಲಿಯ ಮರವು ನಿರುಪಯುಕ್ತವೆಂಬುದನ್ನು ಪುರಂದರದಾಸರು ಹೇಗೆ ನಿರೂಪಿಸಿದ್ದಾರೆ?
೧೪. ತಂದೆ ಮಗುವಿಗೆ ಕಾಣಿಸಿಕೊಳ್ಳುವ ಬಗೆ ಹೇಗೆ?
೧೫. ಮುದುಕಿಯು ಯಾರನ್ನು ಏನೆಂದು ಪ್ರಾರ್ಥಿಸುವಳು?
ಆ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
3 x 2 = 6
೧೬. ಕಮಲ ಮೇಡಂ ವೈದ್ಯರ ಯಾವ ಸಲಹೆಯನ್ನು ರೂಢಿಸಿಕೊಂಡರು?
೧೭. ಮುಸುರೆ ಪಾತ್ರೆಗಳ ‘ಒಡೆಯ’ ಏನೆಂದು ಯೋಚಿಸಿದನು?
೧೮. ಮುದ್ದಣನನ್ನು ಮನೋರಮೆ ಹೇಗೆ ಉಪಚರಿಸಿದಳು?
೧೯. ರೋಗಿಗಳ ಹಾಗೂ ಪಥ ಮಾಡುವವರ ಜಿದ್ದು ಎಂತಹುದು?
ಇ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
3 x 2 = 6
೨೦. ಕೃಷ್ಣೇಗೌಡರ ಆನೆ ಹುಟ್ಟಿ ಬೆಳೆದ ಬಗೆ ಹೇಗೆ?
೨೧. ಡ್ರೈವರ್ನ ತಲೆ ಜಜ್ಜಿ ಹೋದದ್ದು ಹೇಗೆ? ಆನೆ ಅದಕ್ಕೆ ಕಾರಣವೇ?
೨೨. ಆನೆಯೇ ತಿಪ್ಪಣ್ಣನ ಸಾವಿಗೆ ಕಾರಣವೆಂದು ದುರ್ಗಪ್ಪ ಹೇಳಿದಾಗ ನಿರೂಪಕರ ಪ್ರತಿಕ್ರಿಯೆ ಏನು?
೨೩. ಡ್ರೈವರ್ ಅಬ್ಬಾಸ್, ಕ್ಲೀನರ್ ಕೃಷ್ಣರ ಸಾವಿಗೆ ಕಾರಣವೇನು?
ಇ – ವಿಭಾಗ
III. ಅ) ಯಾವುದಾದರೂ ಎರಡು ವಾಕ್ಯಗಳನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ:
2 x 3 = 6
೨೪. ಕಲಿ ಭೀಮನೇ ಮಿಡುಕುಳ್ಳ ಗಂಡನು.
೨೫. ಮುಳುಗಿರಲಿ ಮುಪ್ಪು ಚಿಂತನದಿ.
೨೬. ಬೆಣ್ಣೆಯಾಗುವ ಕರ್ಮ ತಪ್ಪಿದ್ದಲ್ಲ.
ಆ) ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 1 x 3 = 3
೨೭. ಅದು ಅವರು ಆವರೆಗೂ ನೋಡಿರದ ಪ್ರಾಣಿ.
೨೮. ಮಗುವೇ ಮೊದಲ ವಿಜ್ಞಾನಿ.
ಇ) ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 1 × 3 = 3
೨೯. ವೆಪನ್ ಸಾರ್, ವೆಪನ್ ನಮಗೆ ಮುಖ್ಯ.
೩೦. ಆನೆ ಬೇಲಿ ದಾಟಿ ಹೋಯ್ತು ಸಾರ್.
ಈ – ವಿಭಾಗ
IV. ಅ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ:
3 x 4 = 12
೩೧. ಶಿವಪಥವನ್ನರಿಯದವನ ಭಕ್ತಿ ನಿರರ್ಥಕವೆಂಬುದನ್ನು ಬಸವಣ್ಣ ಯಾವ ಯಾವ ಉದಾಹರಣೆಗಳ ಮೂಲಕ ವಿವರಿಸಿದ್ದಾರೆ?
೩೨. ಭೀಮನು ದ್ರೌಪದಿಯನ್ನು ಹೇಗೆ ಸಂತೈಸಿದನು?
೩೩. ಮಗು ಕಲಿತದ್ದನ್ನು ಮತ್ತು ವಿದ್ಯಾಭ್ಯಾಸ ಮಾಡುವ ವಿವರಗಳನ್ನು ವಿಶ್ಲೇಪಿಸಿ.
೩೪. ಮುದುಕಿಯ ತಳಮಳ ಕವಿತೆಯಲ್ಲಿ ಹೇಗೆ ವ್ಯಕ್ತವಾಗಿದೆ?
ಆ) ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ: 2 x 4 = 8
೨೫. ಬಸಲಿಂಗ ಕೊನೆಯಲ್ಲಿ ತೆಗೆದುಕೊಂಡ ನಿರ್ಧಾರ ಯಾವುದು? ಅದಕ್ಕೆ ಕಾರಣಗಳೇನು?
೩೬. ಕನ್ನಡಿಗರೆನ್ನಿಸಿಕೊಳ್ಳಲು ಯಾವ ಯೋಗ್ಯತೆಯ ಪ್ರಶ್ನೆಗಳು ನಮ್ಮನ್ನು ಚುಚ್ಚಬೇಕು? ವಿವರಿಸಿ.
೩೭. ಕಳೆದ ಬೆಳ್ಳಿಲೋಟ ಮತ್ತೆ ಕಂಡಾಗ ಧಣಿಯಲ್ಲಿ ಆತಂಕ, ಗಾಬರಿ, ಭಯ ಉಂಟಾಗಲು ಕಾರಣವೇನು?
ಇ) ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ. 2 x 4 = 8
೩೮. ಕಾಡಾನೆಗಳ ಹಾವಳಿ ನಿರೂವಕರ ಅನುಭವಕ್ಕೆ ಬಂದುದು ಹೇಗೆ?
೩೯. ದುರ್ಗಪ್ಪನಿಗೆ ಲೈನ್ಮಾನ್ ಕೆಲಸ ರೋಸಿ ಹೋಗಲು ಕಾರಣಗಳೇನು?
೪೦. ಟೆಲಿಫೋನ್ ಲೈನ್ಮನ್ ತಿಪ್ಪಣ್ಣನ ಸಾವಿನ ಸಂದರ್ಭವನ್ನು ವಿವರಿಸಿ.
ಉ – ವಿಭಾಗ
V. ಯಾವುದಾದರೂ ಒಂದು ಪದ್ಯದ ಭಾವಾರ್ಥವನ್ನು ಬರೆಯಿರಿ: 1 x 5 = 5
೪೧. ರಾವಣನ ರೂಪು ಸೀತಾ
ದೇವಿಗೆ ತೃಣಕಲ್ಲಮಾಯ್ತು ಪತಿಭಕ್ತಿಯೊಳಾ
ರೀ ವನಿತೆಯ ತಜದಿಂ ಸ
ದ್ವಾವಮನೊಳಕೊಂಡ ಪುಣ್ಯವತಿಯರ್ ಸತಿಯರ್
೪೨. ಚಿಗುರೆಂದುಂ ಮೆಲೆ ಬೇವು ಸ್ವಾದವಹುದೇ ಚೇಳ್ ಚಿಕ್ಕದೆಂದಳ್ಕರಿಂ।
ತಗೆಯಲ್ ಕಚ್ಚದೆ ಪಾಲನೂಡಿ ಫಣಿಯಂ ಸಾಕಲ್ಕೆ ವಿಶ್ವಾಸಿಯೇ।।
ಖಗಮಂ ಸಾಕುವೆನೆಂದು ಗೂಗೆಮರಿಯಂ ಸಂಪ್ರೀತಿಯಂದೋವರೇ।
ಪಗೆಯಂ ಬಾಲಕನೆಂಬರೇ ಹರಹರಾ ಶ್ರೀಚೆನ್ನಸೋಮೇಶ್ವರಾ।।
ಭಾಷಾಭ್ಯಾಸ
VI. ಅ) ಕೆಳಗಿನ ಪ್ರಶ್ನೆಗಳಲ್ಲಿ ಯಾವುದಾದರೂ ಆರಕ್ಕೆ ಸೂಚನೆಗೆ ಅನುಗುಣವಾಗಿ ಉತ್ತರಿಸಿರಿ: 6 x 2 = 12
೪೩. ಈ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ: ಸಮರ, ಬಾನು.
೪೪. ಈ ಪದಗಳಲ್ಲಿನ ಗುಣವಾಚಕ ಪದ ಬರೆಯಿರಿ: ಕಡುಪಾಪ, ಗೂಗೆಮರಿ..
೪೫. ಈ ಕೆಳಗಿನ ನುಡಿಗಟ್ಟುಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ: ತಲೆಬಾಗು, ಕೈಕೊಡು.
೪೬. ಈ ಕ್ರಿಯಾಪದಗಳ ಧಾತು ಗುರುತಿಸಿ: ಕಟ್ಟಿಸು, ಹೋದರು.
೪೭. ಈ ಪದಗಳ ತತ್ಸಮ ರೂಪ ಬರೆಯಿರಿ: ಪರಕಿಸು, ಆಗಸ.
೪೮. ಈ ವದಗಳ ನಿಷೇಧ ರೂಪ ಬರೆಯಿರಿ. ಬರುತ್ತಾರೆ, ಮಾಡುವರು.
೪೯. ಈ ಕೆಳಗಿನ ಪದಗಳ ವಿಭಕ್ತಿಯ ಹೆಸರನ್ನು ಬರೆಯಿರಿ: ಧರಿತ್ರಿಯೊಳ್, ಪಾಪಿಗೆ
ಆ) ಯಾವುದಾದರೂ ಒಂದನ್ನು ಕುರಿತು ಪ್ರಬಂಧವನ್ನು ಬರೆಯಿರಿ: 1 x 5 = 5
೫೦. ಮೂಢನಂಬಿಕೆಗಳು.
೫೧. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ.
ಇ) ಯಾವುದಾದರೂ ಒಂದನ್ನು ಕುರಿತು ಪತ್ರ ಬರೆಯಿರಿ: 1 x 4 = 4
೫೨. ಶೈಕ್ಷಣಿಕ ಪ್ರವಾಸಕ್ಕೆ ಹೋಗಲು ಅನುಮತಿ ಕೋರಿ ನಿಮ್ಮ ತಂದೆಗೊಂದು ಪತ್ರ ಬರೆಯಿರಿ.
೫೩. ವರ್ಗಾವಣೆ ಪತ್ರ ಮತ್ತು ಅಂಕಪಟ್ಟಿ ಕೋರಿ ನಿಮ್ಮ ಪ್ರಾಂಶುಪಾಲರಿಗೆ ಪತ್ರವನ್ನು ಬರೆಯಿರಿ.
ಈ) ಈ ಕೆಳಗಿನ ಗಾದೆಗಳಲ್ಲಿ ಒಂದನ್ನು ವಿಸ್ತರಿಸಿ ಬರೆಯಿರಿ: 1 × 4 = 4
೫೪. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ,
೫೫. ಹಾಸಿಗೆ ಇದ್ದಷ್ಟು ಕಾಲು ಚಾಚು.









