ದ್ವಿತೀಯ ಪಿಯುಸಿ ಕನ್ನಡ ಹಿಂದಿನ ಪ್ರಶ್ನೆಪತ್ರಿಕೆ 2021, 2nd Puc Kannada Previous Question Paper 2021 2nd Puc Question Papers Karnataka, 2nd Puc Previous Question Paper 2021 pdf Kannada, 2nd Puc Supplementary Exam Papers, 2nd Puc Previous Year Question Papers, 2nd Puc Model Question Paper pdf 2021 2nd Puc All Subject Question Paper ದ್ವಿತೀಯ ಪಿಯುಸಿ ಕನ್ನಡ ಮಾದರಿ ಪ್ರಶ್ನೆ ಪತ್ರಿಕೆಗಳು 2nd Puc ಮಾದರಿ ಪ್ರಶ್ನೆ ಪತ್ರಿಕೆಗಳು 2021 2nd puc kannada question paper 2021 pdf 2nd puc kannada annual question paper 2021 pdf kannada medium

ಆಗಸ್ಟ್ 2021
ಅವಧಿ: 3-15 ಗಂಟೆ ಗರಿಷ್ಠ ಅಂಕಗಳು: 100
ಅ – ವಿಭಾಗ
I. ಈ ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ಒಂದೊಂದು ಪೂರ್ಣ ವಾಕ್ಯದಲ್ಲಿ ಉತ್ತರಿಸಿ:
10 x 1 = 10
೧. ಸೀತೆಯನ್ನು ರಾವಣ ಎಲ್ಲಿರಿಸಿದ್ದನು?
೨. ಹಗೆಯನ್ನು ಏನೆಂದು ಉಪೇಕ್ಷಿಸಬಾರದೆಂದು ಸೋಮನಾಥ ಹೇಳಿದ್ದಾನೆ?
೩. ಜಾಲಿಯ ಮರದಂತಿರುವವರು ಯಾರು?
೪. ಕ್ರಿಸ್‌ಮಸ್ ಸಂದರ್ಭದಲ್ಲಿ ಹತ್ತಿ ಯಾವ ಕೆಲಸ ಮಾಡಿದೆ?
೫. ಸರಕಾರಿ ಆಸ್ಪತ್ರೆಯ ಬಗ್ಗೆ ಬಸಲಿಂಗನಲ್ಲಿದ್ದ ಅಭಿಪ್ರಾಯವೇನು?
೬. ದುರಾಸೆಯ ಹುಡುಗನನ್ನು ನಿರಾಕರಿಸಿದವರು ಯಾರು?
೭. ಚಿಪ್ ಎಂದರೇನು?
೮. ಆನೆಯ ಮಾವುತನ ಹೆಸರೇನು?
೯. ಯಾವ ವಿಷಯ ಪ್ರಸ್ತಾಪಿಸಲು ನಿರೂಪಕರು ಮೀಟಿಂಗಿಗೆ ಹೋಗಿದ್ದರು?
೧೦. ಪೊಲೀಸರು ಏನೆಂದು ಮಹಜರು ಬರೆದುಕೊಂಡರು?
ಆ – ವಿಭಾಗ
II. ಅ) ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
4 x 2 = 8
೧೧. ಸೀತೆಯ ತಲ್ಲಣಕ್ಕೆ ಕಾರಣವೇನು?
೧೨. ಮನೆಮನೆಯನ್ನು ತಿರಿಯದವನು ಯಾರು? ಕೆರೆಯುದಕವನ್ನು ಅರಸದವನು ಯಾರು?
೧೩. ಮಲಗಿರುವ ಭೀಮನನ್ನು ದ್ರೌಪದಿ ಹೇಗೆ ಎಬ್ಬಿಸಿದಳು?
೧೪. ಹಡೆದ ತಂದೆ-ತಾಯಿಯ ಮಹತ್ವ ತಿಳಿಸಿ.
೧೫. ಮುಂಬೈ ಜಾತಕ’ದಲ್ಲಿ ಮಗು ಏನೇನು ಕಲಿಯಿತೆಂದು ಹೇಳಲಾಗಿದೆ?
ಆ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
3 x 2 = 6
೧೬. ಮಾರ್ಷ್‌ನನ್ನು ಕಂಡು ಆದಿವಾಸಿಗಳು ಹೇಗೆ ಪ್ರತಿಕ್ರಿಯಿಸಿದರು?
೧೭. ನಮ್ಮ ಸಾರ್ವಜನಿಕ ಶಾಲೆಗಳ ಬಗ್ಗೆ ಲೇಖಕರ ಅಭಿಪ್ರಾಯವೇನು?
೧೮. ಧಣಿಪತ್ನಿ ಬೆಳ್ಳಿ ಲೋಟವನ್ನು ಹೇಗೆ ಪರಿಚಯಿಸಿದ್ದಾಳೆ?
೧೯. ಕಲಾಂ ಮೇಷ್ಟ್ರು ಹೇಳಿದ ಯಶಸ್ಸಿನ ಪಂಚಾಕ್ಷರಿ ಮಂತ್ರ ಯಾವುದು?
ಇ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
3 x 2 = 6
೨೦. ದುರ್ಗಪ್ಪ ಏಕೆ ಬಂದಿರಬಹುದೆಂದು ನಿರೂಪಕರು ಯೋಚಿಸಿದರು?
೨೧. ಸೊರಗಿದ್ದ ಆನೆಯನ್ನು ಕೃಷ್ಣೇಗೌಡ ಹೇಗೆ ಸಾಕಿದ?
೨೨. ಹುಚ್ಚುನಾಯಿಗಳು ಆಸ್ಪತ್ರೆಯಲ್ಲಿ ಹೇಗೆ ವರ್ತಿಸುತ್ತವೆಂದು ಪುಟ್ಟಯ್ಯ ಹೇಳಿದನು?
೨೩. ಆನೆಯನ್ನು ಹದ್ದುಬಸ್ತಿನಲ್ಲಿಡುವುದರ ಬಗ್ಗೆ ವೇಲಾಯುಧನ ಅಪ್ಪ ಏನು ತಿಳಿಸಿದ್ದ?
ಇ – ವಿಭಾಗ
III. ಅ) ಯಾವುದಾದರೂ ಎರಡು ವಾಕ್ಯಗಳನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 2 x 3 = 6
೨೪. ಧರೆ ಹತ್ತಿ ಉರಿದಡೆ ನಿಲಲುಬಾರದು.
೨೫. ನಾರುವ ದುರ್ಗಂಧ ಬಿಡಬಲ್ಲುದೆ?
೨೬. ಬಂಗಾರ ನಿನಗೆ ಸ್ಥಿರವಲ್ಲ.
ಆ) ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 1 x 3 = 3
೨೭. ಹಾಡುವುದು ಅವುಗಳಿಗೆ ಅನಿವಾರ್ಯ, ಅವುಗಳ ಕರ್ಮ!
೨೮. ಇಂಗ್ಲಿಷ್, ಹಿಂದಿ ಬಾರದವರು ವಿಮಾನ ಪ್ರಯಾಣ ಮಾಡಬಾರದೆ?
ಇ) ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 1 x 3 = 3̈
೨೯. ಆನೆ ಸಾಕುವುದು ಎಂದರೆ ಎಲೆಕ್ಷನ್ನಿಗೆ ನಿಂತ ಹಾಗೆ.
೩೦. ಹದಿನಾಲ್ಕು ಇಂಜೆಕ್ಷನ್ ಹೊಟ್ಟೆಗೆ ಚುಚ್ಚಿಸ್ಕೋತೀನಿ.
ಈ – ವಿಭಾಗ
IV. ಅ) ಯಾವುದಾದರೂ ಮೂರು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ:
3 x 4 = 12
೩೧. ದ್ರೌಪದಿ ಅವಮಾನಕ್ಕೊಳಗಾದ ಮೂರು ಪ್ರಸಂಗಗಳನ್ನು ವಿವರಿಸಿ.
೩೨. ಜ್ಞಾನವನ್ನು ಹೊಂದುವ ಮಾರ್ಗ ಯಾವುವೆಂಬುದನ್ನು ಸೋಮನಾಥ ವಿವರಿಸಿದ್ದಾನೆ?
೩೩. ನಗರ ಜೀವನದ ಯಾಂತ್ರಿಕ ವಿವರಗಳು ‘ಮುಂಬೈ ಜಾತಕ’ ಕವಿತೆಯಲ್ಲಿ ಹೇಗೆ ಚಿತ್ರಿತವಾಗಿವೆ? ವಿವರಿಸಿ.
೩೪. ಯಾವ ಸ್ಥಳಗಳಲ್ಲಿ ಜೀಸಸ್ ದಿನನಿತ್ಯ ಶಿಲುಬೆ ಏರಿದ್ದಾನೆ? ಚರ್ಚಿಸಿ.
ಆ) ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ: 2 x 4 = 8̳
೩೫. ಬಸಲಿಂಗ ಎದುರಿಸುತ್ತಿದ್ದ ಸಮಸ್ಯೆಗಳು ಯಾವುವು?
೩೬. ಸೀತಾ ಎಂಬ ಗೆಳತಿಯ ಗುಣ-ಸ್ವಭಾವವನ್ನು ಲೇಖಕಿ ಹೇಗೆ ಚಿತ್ರಿಸಿದ್ದಾರೆ?
೩೭. ಧಣಿ ಹಾಗೂ ಹೊಳೆಯ ನಡುವಿನ ಸಮರವನ್ನು ಚಿತ್ರಿಸಿ.
ಇ) ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ: 2 x 4 = 8̳̳̇̇
೩೮. ನಿರೂಪಕರು ಕೊಡಲಿ ವಸೂಲಿ ಮಾಡಲು ಹೋಗಲಿಲ್ಲ ಏಕೆ? ವಿವರಿಸಿ.
೩೯. ನಿದ್ರೆ ಮಂಪರಿನಲ್ಲಿದ್ದ ಡ್ರೈವರ್ ಪರಂಧಾಮಕ್ಕೆ ಹೋದ ಸಂದರ್ಭವನ್ನು ವಿವರಿಸಿ.
೪೦. ನಾಗರಾಜನ ನಿಗೂಢ ಸಾವಿನ ಬಗ್ಗೆ ಜನರ ಅಭಿಪ್ರಾಯವೇನು? ವಿವರಿಸಿ.
ಉ – ವಿಭಾಗ
V. ಯಾವುದಾದರೂ ಒಂದು ಪದ್ಯದ ಭಾವಾರ್ಥವನ್ನು ಬರೆಯಿರಿ: 1 x 5 = 5
೪೧. ಕರುಣಿಸುವೊಡೆನಗೆ ದಶಕಂ
ಧರ ಧುರದೊಳ್ ರಘಂತನೂಜನಾಯು:ಪ್ರಾಣಂ
ಬರೆಗಂ ಬಾರದಿರೆನುತುಂ
ಧರಿತ್ರಿಯೊಳ್ ಮೈಯನೊಕ್ಕು ಮೂರ್ಛಿಗೆ ಸಂದಳ್,
೪೨. ಯಾವಾಗೋ ಕೋಳಿ ಕೂಗಿಹುದು ಏಳಿ, ತಡವೇಕೆ ಪಾನಕೇಳಿ
ಮೊದಲಾಗಲೀಗ, ಅಂಗಡಿಯ ಕದವ ಈ ಕ್ಷಣಕೆ ತೆರೆಯ ಹೇಳಿ
ಜೀವನದ ನದಿಗೆ ಸೆಳವಿಹುದು, ಮರಣ ಬಂದೀತು ಕ್ಷಣವು ಉರುಳಿ
ಹೋದವರು ತಿರಗಿ ಬಂದಾರೆ, ಅವರು ಬರಲಿಕ್ಕು ಇಲ್ಲ ಮರಳಿ,
ಭಾಷಾಭ್ಯಾಸ
VI. ಅ) ಕೆಳಗಿನ ಪ್ರಶ್ನೆಗಳಲ್ಲಿ ಯಾವುದಾದರೂ ಅರಕ್ಕೆ ಸೂಚನೆಗೆ ಅನುಗುಣವಾಗಿ ಉತ್ತರಿಸಿರಿ: 6 x 2 = 12
೪೩. ಈ ಪದಗಳ ಅರ್ಥ ಬರೆಯಿರಿ: ತೃಣ, ಮಾನಿನಿ.
೪೪. ಈ ಪದಗಳಿಗೆ ಎರಡೆರಡು ಸಮಾನಾರ್ಥಕ ಪದಗಳನ್ನು ಬರೆಯಿರಿ: ಕಣ್ಣು, ಕಡಲು.
೪೫. ಈ ಪದಗಳ ಧಾತುರೂಪ ಬರೆಯಿರಿ: ನಿಂತರು, ಬರೆಯುವಳು.
೪೬. ಈ ಪದಗಳ ತದ್ಭವ ರೂಪ ಬರೆಯಿರಿ: ಮುಖ, ಆಕಾಶ,
೪೭. ಈ ಪದಗಳ ವಿಭಕ್ತಿಯನ್ನು ಹೆಸರಿಸಿ: ಮೊಮ್ಮಗಳನ್ನು, ತಿಮ್ಮಪ್ಪನಲ್ಲಿ,
೪೮. ಈ ಪದಗಳ ಕಾಲವನ್ನು ಬರೆಯಿರಿ: ಹಾಡಿದರು. ಕೇಳುತ್ತಾರೆ.
೪೯. ಈ ನುಡಿಗಟ್ಟುಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ: ದಾರಿದೀಪ, ಮೊರೆಹೋಗು
ಆ) ಯಾವುದಾದೂ ಒಂದನ್ನು ಕುರಿತು ಪ್ರಬಂಧವನ್ನು ಬರೆಯಿರಿ. 1 x 5 = 5
೫೦. ಕೊರೋನಾ ಕಾಲದ ಬದುಕು.
೫೧. ಓದುವ ಹವ್ಯಾಸ.
ಇ) ಯಾವುದಾದರೂ ಒಂದನ್ನು ಕುರಿತು ಪತ್ರ ಬರೆಯಿರಿ: 1 x 4 = 4
೫೨. ನಿಮ್ಮ ಪರೀಕ್ಷಾ ಸಿದ್ಧತೆಯ ಕುರಿತು ತಾಯಿಗೆ ಒಂದು ಪತ್ರ ಬರೆಯಿರಿ.
೫೩. ಎರಡು ದಿನಗಳ ರಜೆಯನ್ನು ಕೋರಿ ನಿಮ್ಮ ಪ್ರಾಂಶುಪಾಲರಿಗೆ ಒಂದು ಮನವಿ ಪತ್ರ ಬರೆಯಿರಿ.
ಈ) ಈ ಕೆಳಗಿನ ಗಾದೆಗಳಲ್ಲಿ ಒಂದನ್ನು ವಿಸ್ತರಿಸಿ ಬರೆಯಿರಿ: 1 x 4 = 4
೫೪. ದೇಶ ಸುತ್ತಬೇಕು, ಕೋಶ ಓದಬೇಕು.
೫೫. ಹಣಕ್ಕಿಂತ ಗುಣ ಮುಖ್ಯ.









