ದ್ವಿತೀಯ ಪಿಯುಸಿ ಕನ್ನಡ ಬದುಕನ್ನು ಪ್ರೀತಿಸಿದ ಸಂತ ನೋಟ್ಸ್ | 2nd Puc Kannada Badukannu Pritisida Santa Notes

2nd Puc Kannada Badukannu Pritisida Santa Notes Question Answer Summery Guide Extract Mcq Pdf Download in Kannada Medium Karnataka State Syllabus 2025 badukannu pritisida santa in kannada question answer ದ್ವಿತೀಯ ಪಿಯುಸಿ ಕನ್ನಡ ಬದುಕನ್ನು ಪ್ರೀತಿಸಿದ ಸಂತ ನೋಟ್ಸ್ ಪ್ರಶ್ನೋತ್ತರಗಳು, ಬದುಕನ್ನು ಪ್ರೀತಿಸಿದ ಸಂತ summary ಬದುಕನ್ನು ಪ್ರೀತಿಸಿದ ಸಂತ question answer badukannu preetisida santa question answer badukannu pritisida santa class 12, 2nd puc kannada notes ದ್ವಿತೀಯ ಪಿಯುಸಿ ಕನ್ನಡ ನೋಟ್ಸ್ pdf Kannada 2nd PUC Notes pdf download kseeb solutions for class 12 kannada chapter 6 notes

೬. ಬದುಕನ್ನು ಪ್ರೀತಿಸಿದ ಸಂತ

– ಎಚ್.‌ ಆರ್.‌ ರಾಮಕೃಷ್ಣರಾವ್

Badukannu Pritisida Santa

ಲೇಖಕರ ಪರಿಚಯ:

ಪ್ರೊ. ಎಚ್.ಆರ್. ರಾಮಕೃಷ್ಣರಾವ್ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ 30-05-1935ರಲ್ಲಿ ಜನಿಸಿದರು. ಶ್ರೀ ಎಚ್.ವಿ. ರಂಗರಾವ್ ಮತ್ತು ರಂಗಮ್ಮ ಎಂಬ ದಂಪತಿಗಳ ಮಗ ಇವರು. ಮೈಸೂರು ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. ‘ಕಲಾಂ ಮೇಷ್ಟ್ರು’, ‘ಡಾ. ಸುಬ್ರಮಣ್ಯನ್ ಚಂದ್ರಶೇಖರ್’, ‘ಸರ್ ಐಸಾಕ್ ನ್ಯೂಟನ್’, ‘ಸಂಕ್ಷಿಪ್ತ ಖಗೋಳ ವಿಜ್ಞಾನ ಚರಿತ್ರೆ’, ‘ಅಂತರಿಕ್ಷ’, ‘ಚಂದ್ರಯಾನ’, ‘ಬಿಗ್‌ಬ್ಯಾಂಗ್’, ‘ಪ್ರಳಯ-2012’ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ವಿಜ್ಞಾನದ ವಿಚಾರಗಳನ್ನು ಕನ್ನಡದಲ್ಲಿ ಜನಪ್ರಿಯಗೊಳಿಸುವ ಸಲುವಾಗಿ ರಾಜ್ಯದಾದ್ಯಂತ ಉಪನ್ಯಾಸಗಳನ್ನು ನೀಡಿದ್ದಾರೆ. ಆಕಾಶವಾಣಿ, ದೂರದರ್ಶನಗಳಲ್ಲೂ ವಿಜ್ಞಾನ ಸಂಬಂಧಿ ಕಾಠ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ನಿವೃತ್ತಿಯ ನಂತರವೂ ಬೆಂಗಳೂರಿನ ವಿವಿಧ ಕಾಲೇಜುಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತಿದ್ದಾರೆ.

ಆಕರ: ‘ಕಲಾಂ ಮೇಷ್ಟ್ರು’.

(ಅ) ಸಾಂದರ್ಭಿಕ ವಿವರಣೆಯನ್ನು ಬಯಸುವ ವಾಕ್ಯಗಳು

೧. ಭಗವಂತನ ಸೃಷ್ಟಿಯಲ್ಲಿರುವವರೆಲ್ಲ ಆತನ ಬಂಧುಗಳೆ.

ಪ್ರೊ. ಎಚ್.ಆರ್. ರಾಮಕೃಷ್ಣರಾವ್ ಅವರು ಬರೆದಿರುವ ‘ಬದುಕನ್ನು ಪ್ರೀತಿಸಿದ ಸಂತ’ ಎಂಬ ವ್ಯಕ್ತಿಚಿತ್ರದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.

ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ ಅವರು ವಿಜ್ಞಾನ-ತಂತ್ರಜ್ಞಾನಗಳ ಸಂಕೀರ್ಣ ಪ್ರಪಂಚದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಪ್ರಶಸ್ತಿ, ಪುರಸ್ಕಾರ ಅಥವಾ ಹಣ ಗಳಿಸಲಿಲ್ಲ ಎಂಬುದನ್ನು ವಿವರಿಸುತ್ತಾ ಲೇಖಕರು “ಭಗವಂತನ ಸೃಷ್ಟಿಯಲ್ಲಿರುವವರೆಲ್ಲ ಆತನ ಬಂಧುಗಳೇ, ಯಾರು ಅವರುಗಳ ಸೇವೆ ಮಾಡುತ್ತಾರೋ ಅವರೇ ದೇವರಿಗೆ ಹತ್ತಿರವಾದವರು’ ಎಂಬುದು ಕಲಾಂ ಅವರ ಬದುಕಿನ ಮಂತ್ರವಾಗಿತ್ತು ಎಂದಿದ್ದಾರೆ. ಕಲಾಂ ಅವರ ನಿಷ್ಕಾಮಕರ್ಮ ದುಡಿಮೆಗೆ ಈ ಮಾತು ಕನ್ನಡಿ ಹಿಡಿಯುತ್ತದೆ.

೨. ನೀನು ಯಾವ ಸ್ಕೂಲಿನಲ್ಲಿ ಓದುತ್ತಿದ್ದೀಯೆ?

ಪ್ರೊ. ಎಚ್.ಆರ್. ರಾಮಕೃಷ್ಣರಾವ್ ಅವರು ರಚಿಸಿರುವ ‘ಬದುಕನ್ನು ಪ್ರೀತಿಸಿದ ಸಂತ’ ಎಂಬ ವ್ಯಕ್ತಿಚಿತ್ರದಲ್ಲಿ ಕಲಾಂ ಅವರು ಸಿಕಂದರಾಬಾದಿನ ಶಾಲಾ ಬಾಲಕಿಯನ್ನು ಈ ಮೇಲಿನಂತೆ ಪ್ರಶ್ನಿಸಿದ್ದಾರೆ.

1988ರಲ್ಲಿ ಪೃಥ್ವಿ ಕ್ಷಿಪಣಿಯ ಉಡಾವಣೆಗೆ ಸಿದ್ಧತೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಸಿಕಂದರಾಬಾದಿನ ಶಾಲಾ ಬಾಲಕಿಯೊಬ್ಬಳು ಪೃಥ್ವಿಯ ಮಾದರಿ ಚಿತ್ರವನ್ನು ಬರೆದು, ಅದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದನ್ನು ನೋಡಿ ಸಂತಸಪಟ್ಟು ಕಲಾಂ ಆ ಹುಡುಗಿಗೆ ನಿಜವಾದ ಪೃಥ್ವಿ ಕ್ಷಿಪಣಿಯನ್ನು ನೋಡಿ ಆನಂದಿಸುವ ಅವಕಾಶ ಕಲ್ಪಿಸಿಕೊಟ್ಟರು. ಸಹಭೋಜನ ಸಮಯ ದಲ್ಲಿ ಕಲಾ೦ ಆ ಬಾಲಕಿಯೊಂದಿಗೆ ಮಾತನಾಡುತ್ತ ಆಕೆಯ ಶಾಲೆ, ತಂದೆಯ ಉದ್ಯೋಗ, ಆಕೆಯ ಹವ್ಯಾಸಗಳ ಬಗ್ಗೆ ವಿಚಾರಿಸಿದ ಸಂದರ್ಭದಲ್ಲಿ ಈ ಮೇಲಿನ ವಾಕ್ಯವಿದೆ. ಕಲಾಂ ಅವರ ಪ್ರೋತ್ಸಾಹಕ ಗುಣ, ಸರಳತೆಗೆ ಈ ಸಂದರ್ಭವು ಸಾಕ್ಷಿಯಾಗಿದೆ.

೩. ವಿಜ್ಞಾನದ ಅಡಿಪಾಯವೇ ಪ್ರಶ್ನೆ ಕೇಳುವುದು.

ಪ್ರೊ. ಎಚ್.ಆರ್. ರಾಮಕೃಷ್ಣರಾವ್ ಅವರು ಬರೆದಿರುವ ‘ಬದುಕನ್ನು ಪ್ರೀತಿಸಿದ ಸಂತ’ ಎಂಬ ವ್ಯಕ್ತಿಚಿತ್ರದಿಂದಾಯ್ದ ಈ ಮೇಲಿನ ಮಾತನ್ನು ಕಲಾಂ ಅವರು ಹುಡುಗನೊಬ್ಬನ ಪ್ರಶ್ನೆಗೆ ಉತ್ತರವಾಗಿ ಹೇಳಿದ್ದಾರೆ.

ಹುಡುಗನೊಬ್ಬನು ಮೊದಲ ವಿಜ್ಞಾನಿ ಯಾರೆಂದು ಕಲಾಂ ಅವರನ್ನು ಪ್ರಶ್ನಿಸಿದ್ದನು. ಅದಕ್ಕೆ ಉತ್ತರಿಸುತ್ತ ಕಲಾಂ ಅವರು ವಿಜ್ಞಾನದ ಮೂಲವನ್ನು ಪರಿಚಯಿಸಿದ್ದಾರೆ. ಅವರ ಅಭಿಪ್ರಾಯದಲ್ಲಿ ವಿಜ್ಞಾನದ ಅಡಿಪಾಯ ಯಾವುದೆಂದರೆ ಪ್ರಶ್ನೆ ಕೇಳುವುದು. ವಿಜ್ಞಾನ ಹುಟ್ಟಿದ್ದು ಮತ್ತು ಈಗಲೂ ಜೀವಂತವಾಗಿರುವುದು ಪ್ರಶ್ನೆಗಳಿಂದ, ಮನೆಯಲ್ಲಿ ಪ್ರಶ್ನೆ ಕೇಳುವ ಮಕ್ಕಳೇ ಮೊದಲ ವಿಜ್ಞಾನಿಗಳೆಂಬ ಕಲಾಂ ಅವರ ಅಭಿಪ್ರಾಯವು ಸೂಕ್ತವಾದ ಉತ್ತರವಾಗಿದೆ.

೪. ಮಗುವೇ ಮೊದಲ ವಿಜ್ಞಾನಿ.

ಪ್ರೊ. ಎಚ್.ಆರ್. ರಾಮಕೃಷ್ಣರಾವ್ ಅವರು ಬರೆದಿರುವ ಬದುಕನ್ನು ಪ್ರೀತಿಸಿದ ಸಂತ’ ಎಂಬ ವ್ಯಕ್ತಿಚಿತ್ರದಲ್ಲಿ ಕಲಾಂ ಅವರು ಬಾಲಕನೊಬ್ಬನ ಪ್ರಶ್ನೆಗೆ ಉತ್ತರಿಸುತ್ತಾ ಈ ಮೇಲಿನ ಮಾತನ್ನು ಹೇಳಿದ್ದಾರೆ.

ಬಾಲಕನೊಬ್ಬ ಕಲಾಂ ಅವರಿಗೆ “ಭೂಮಿಯ ಮೇಲಿನ ಮೊದಲ ವಿಜ್ಞಾನಿ ಯಾರಾಗಿರಬಹುದು? ದಯವಿಟ್ಟು ಹೇಳಿ?” ಎಂದು ಪ್ರಶ್ನಿಸಿದ ಸಂದರ್ಭದಲ್ಲಿ ಕಲಾಂ ಅವರು, “ವಿಜ್ಞಾನದ ಅಡಿಪಾಯವೇ ಪ್ರಶ್ನೆ ಕೇಳುವುದು, ಕೊನೆಯಿಲ್ಲದಷ್ಟು ಪ್ರಶ್ನೆಗಳನ್ನು ಕೇಳುವವರು ಮಕ್ಕಳೇ ಎಂಬುದು ಪೋಷಕರಿಗೂ ಮತ್ತು ಶಿಕ್ಷಕರಿಗೂ ಚೆನ್ನಾಗಿ ತಿಳಿದಿದೆ. ಆದ್ದರಿಂದ ಮಗುವೇ ಮೊದಲ ವಿಜ್ಞಾನಿ” ಎಂದು ಉತ್ತರಿಸಿದರು. ಎಲ್ಲರಿಗೂ ಈ ಉತ್ತರ ಸಮ್ಮತವೆನ್ನಿಸಿ ಚಪ್ಪಾಳೆ ತಟ್ಟಿದರು.

೫. ವ್ಯಕ್ತಿಗಿಂತ ರಾಷ್ಟ್ರ ದೊಡ್ಡದು.

ಪ್ರೊ. ಎಚ್.ಆರ್. ರಾಮಕೃಷ್ಣರಾವ್ ಅವರು ಬರೆದಿರುವ ‘ಬದುಕನ್ನು ಪ್ರೀತಿಸಿದ ಸಂತ’ ಎಂಬ ವ್ಯಕ್ತಿಚಿತ್ರದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ.

ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಗಳಾಗಿ ಆಯ್ಕೆಯಾದ ಸುದ್ದಿ ಪ್ರಕಟವಾದಾಗ ಚೆನ್ನೈನಲ್ಲಿದ್ದರು. ಸುದ್ದಿ ಮಾಧ್ಯಮದವರು ಅವರ ಸಂದರ್ಶನ ಪಡೆಯಲು ಸುತ್ತುವರೆದಾಗ ರಾಜಕಾರಣಿಯಂತೆ ವರ್ತಿಸದ ಕಲಾಂ ಅವರು ಪತ್ರಕರ್ತರನ್ನು ಮಕ್ಕಳಂತೆ ಕಂಡು, ಅವರೆಲ್ಲರ ಬಾಯಿಂದ ಒಟ್ಟಾಗಿ “ವ್ಯಕ್ತಿಗಿಂತ ರಾಷ್ಟ್ರ ದೊಡ್ಡದು” ಎಂಬುದನ್ನು ಹೇಳುವಂತೆ ಮಾಡಿದ ಸಂದರ್ಭವಿದಾಗಿದೆ.

೬. ಮಿ. ಪ್ರೆಸಿಡೆಂಟ್ ನಿಮ್ಮ ಯಶಸ್ಸಿನ ಗುಟ್ಟೇನು?

ಪ್ರೊ. ಎಚ್.ಆರ್. ರಾಮಕೃಷ್ಣರಾವ್ ಅವರು ಬರೆದಿರುವ ‘ಬದುಕನ್ನು ಪ್ರೀತಿಸಿದ ಸಂತ’ ಎಂಬ ವ್ಯಕ್ತಿಚಿತ್ರದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಂಡಿದೆ.

ಅಬ್ದುಲ್ ಕಲಾಂ ಅವರನ್ನು ಭೇಟಿಯಾದ ಮಕ್ಕಳು ಅವರನ್ನು ಯಾವಾಗಲೂ ಕೇಳುವ ಪ್ರಶ್ನೆ “ಮಿ. ಪ್ರೆಸಿಡೆಂಟ್, ನಿಮ್ಮ ಯಶಸ್ಸಿನ ಗುಟ್ಟೇನು?” ಎಂಬುದಾಗಿತ್ತು. ಅದಕ್ಕೆ ಕಲಾಂ ಅವರ ಉತ್ತರದ ಪಂಚಾಕ್ಷರಿ ಮಂತ್ರವೆಂದರೆ ಕುತೂಹಲ, ಆಲೋಚನಾ ಶಕ್ತಿ, ಜ್ಞಾನ (ತಿಳಿವು), ಕಷ್ಟಪಟ್ಟು ಕೆಲಸ ಮಾಡುವುದು ಮತ್ತು ಗುರಿ ಸಾಧಿಸುವ ಛಲ ಎಂಬುದಾಗಿತ್ತು. ಕಲಾಂ ಅವರ ಈ ಉತ್ತರ ಪ್ರತಿಯೊಬ್ಬರ ಬದುಕಿನ ಮೂಲಮಂತ್ರವಾಗಬೇಕಾಗಿದೆ.

೭. ಎಲ್ಲ ಮಕ್ಕಳ ಕನಸೂ ಒಂದೇ.

ಪ್ರೊ. ಎಚ್.ಆರ್. ರಾಮಕೃಷ್ಣರಾವ್ ಅವರು ಬರೆದಿರುವ ‘ಬದುಕನ್ನು ಪ್ರೀತಿಸಿದ ಸಂತ’ ಎಂಬ ವ್ಯಕ್ತಿಚಿತ್ರದಿಂದ ಈ ವಾಕ್ಯವನ್ನು ಆರಿಸಲಾಗಿದೆ. ಅಧ್ಯಕ್ಷರಾದ ನಂತರ ಲಕ್ಷಾಂತರ ಮಕ್ಕಳನ್ನು ಭೇಟಿ ಮಾಡಿದ ಕಲಾಂರವರಿಗೆ ಬಡವ-ಶ್ರೀಮಂತರೆಂಬ ಭೇದ ಗೊತ್ತಿರಲಿಲ್ಲ. ಎಲ್ಲ ಮಕ್ಕಳ ಕನಸೂ ಒಂದೇ ಆಗಿದೆ ಎಂದು ಕಲಾಂ ಅವರು ಹೇಳಿದ್ದಾರೆ. ಆದೆಂದರೆ “ಎಲ್ಲರೂ ಶಾಂತಿ, ಸಮೃದ್ಧಿ ಮತ್ತು ಸುಭದ್ರ ಭಾರತದಲ್ಲಿ ಬದುಕ ಬಯಸುತ್ತಾರೆ” ಎಂದಿದ್ದಾರೆ. ಕಲಾಂ ಅವರು ಮಕ್ಕಳ ಉಜ್ವಲ ಭವಿಷ್ಯಕ್ಕೆ ಬೇಕಾದ ಭಾರತ ಹೇಗಿರಬೇಕೆಂಬುದನ್ನು ಈ ಮೇಲಿನ ಮಾತಿನ ಮೂಲಕ ಸ್ಪಷ್ಟಪಡಿಸಿದ್ದಾರೆ.

ಹೆಚ್ಚುವರಿ ಪ್ರಶ್ನೆಗಳು:

೮. ಆ ಹುಡುಗಿಯನ್ನು ಇಲ್ಲಿಗೆ ಯಾಕೆ ಕರೆಸಬಾರದು?

ಪ್ರೊ. ಎಚ್.ಆರ್. ರಾಮಕೃಷ್ಣರಾವ್ ಅವರು ಬರೆದಿರುವ ‘ಬದುಕನ್ನು ಪ್ರೀತಿಸಿದ ಸಂತ’ ಎಂಬ ವ್ಯಕ್ತಿಚಿತ್ರದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.

ಸಿಕಂದರಾಬಾದಿನ ಶಾಲಾ ಬಾಲಕಿಯು ತಯಾರಿಸಿದ್ದ ಪೃಥ್ವಿ ಕ್ಷಿಪಣಿಯ ಮಾದರಿ ಚಿತ್ರವನ್ನು ಪತ್ರಿಕೆಯಲ್ಲಿ ನೋಡಿ ಮೆಚ್ಚಿದ ಕಲಾಂ ಅವರು ಉಪನಿರ್ದೇಶಕ ಸಾರಸ್ವತ ಅವರನ್ನು ವಿಚಾರಿಸಿದಾಗ ಅವರು ಹೆಮ್ಮೆಯಿಂದ “ಈ ಬಾಲಕಿ, ನಮ್ಮ ಕ್ಷಿಪಣಿಯ ಆಕಾರ, ಗಾತ್ರ ಕುರಿತು ಒಂದಷ್ಟು ವಿವರ ಕೇಳಿದ್ದಳು. ನಾನು ಮಾಹಿತಿ ನೀಡಿದ್ದೆ. ನೋಡಿ ಎಂಥ ಅದ್ಭುತ ಮಾದರಿ ತಯಾರಿಸಿದ್ದಾಳೆ” ಎಂದಾಗ ಅಬ್ದುಲ್ ಕಲಾಂ ಅವರು “ಹಾಗಾದರೆ, ಆ ಹುಡುಗಿಯನ್ನು ಇಲ್ಲಿಗೆಯಾಕೆ ಕರೆಸಬಾರದು? ಆ ಮಗು ನಿಜವಾದ ಪೃಥ್ವಿ ಕ್ಷಿಪಣಿಯನ್ನು ನೋಡಲಿ” ಎಂದು ಸಲಹೆ ನೀಡಿದ ಸಂದರ್ಭವಿದಾಗಿದೆ. ಮುಂದೆ ಆ ಬಾಲಕಿ ಅಲ್ಲಿಗೆ ಬಂದು, ಕ್ಷಿಪಣಿಯನ್ನು ನೋಡಿ ಆನಂದಿಸುವಳು. ಕಲಾಂ ಅವರ ಉದಾರ ಹೃದಯವಂತಿಕೆಯನ್ನು ಇಲ್ಲಿ ಪರಿಚಯಿಸಿಕೊಳ್ಳಬಹುದು.

೯. ಸಾಧ್ಯವಿಲ್ಲ ಎಂದು ಹೇಳುವ ನೂರು ಕಾರಣಗಳ ಬಗ್ಗೆ ನನಗೆ ಸ್ವಲ್ಪವೂ ಆಸಕ್ತಿ ಇಲ್ಲ.

ಪ್ರೊ. ಎಚ್.ಆರ್. ರಾಮಕೃಷ್ಣರಾವ್ ಅವರು ಬರೆದಿರುವ ‘ಬದುಕನ್ನು ಪ್ರೀತಿಸಿದ ಸಂತ’ ಎಂಬ ವ್ಯಕ್ತಿಚಿತ್ರದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.

ಹೈದರಾಬಾದಿನ ಒಂದು ಆಸ್ಪತ್ರೆಗೆ ಅಬ್ದುಲ್ ಕಲಾಂ ಅವರು ಭೇಟಿಕೊಟ್ಟ ಸಂದರ್ಭದಲ್ಲಿ ‘ಬುದ್ದಿಮಾಂದ್ಯ ಮಕ್ಕಳ ಮಿದುಳಿನಲ್ಲಿ ಕಂಪ್ಯೂಟ‌ರ್ ಸಹಾಯದಿಂದ ಚಿಪ್ ಅಳವಡಿಸಿ, ಅವರ ಬುದ್ದಿಮಾಂದ್ಯತೆ ನಿವಾರಿಸಬಹುದೆ?’ ಎಂದು ವೈದ್ಯರನ್ನು ಪ್ರಶ್ನಿಸಿದ್ದರು. ವೈದ್ಯರು ಆ ಸಾಧ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ ಕಲಾಂ ಅವರು ‘ಇದು ಸಾಧ್ಯವಿಲ್ಲ ಎಂದು ಹೇಳುವ ನೂರು ಕಾರಣಗಳ ಬಗ್ಗೆ ನನಗೆ ಸ್ವಲ್ಪವೂ ಆಸಕ್ತಿಯಿಲ್ಲ. ಅದು ಹೇಗೆ ಸಾಧ್ಯವಾಗುತ್ತದೆ ಎಂಬ ಒಂದು ಕಾರಣ ಹೇಳಬಲ್ಲಿರಾ?” ಎಂದು ಮರುಪ್ರಶ್ನಿಸಿದ ಸಂದರ್ಭವಿದಾಗಿದೆ. ಕಲಾಂ ಅವರು ಯಾವಾಗಲೂ ಸಾಧ್ಯತೆಗಳನ್ನು ಅರಸುವ ಆಶಾಜೀವಿ ಯಾಗಿದ್ದರೆಂಬುದನ್ನು ಈ ಸಂದರ್ಭದಿಂದ ಅರಿಯಬಹುದು.

೧೦. ಸರಿಯಾದ ಶಿಕ್ಷಣ ನಮ್ಮ ಯುವಕರಲ್ಲಿ ಆತ್ಮಗೌರವ ಮತ್ತು ಘನತೆಗಳನ್ನು ಪೋಷಿಸುತ್ತದೆ.

ಪ್ರೊ. ಎಚ್.ಆರ್. ರಾಮಕೃಷ್ಣರಾವ್ ಅವರು ಬರೆದಿರುವ ‘ಬದುಕನ್ನು ಪ್ರೀತಿಸಿದ ಸಂತ’ ಎಂಬ ವ್ಯಕ್ತಿಚಿತ್ರದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ.

ವಿದ್ಯಾರ್ಥಿ ಮತ್ತು ಶಿಕ್ಷಕರ ಸಂಬಂಧದ ಬಗ್ಗೆ ಮಾತನಾಡುತ್ತಾ ಕಲಾಂ ಅವರು ಈ ಮೇಲಿನ ಮಾತನ್ನು ಹೇಳಿದ್ದಾರೆ. ವಿದ್ಯಾಭ್ಯಾಸ ಹಾಗೂ ಶಿಕ್ಷಕ-ವಿದ್ಯಾರ್ಥಿ ಸಂಬಂಧಗಳನ್ನು ವ್ಯಾಪಾರಿ ಮನೋಭಾವದಿಂದ ನೋಡಬಾರದು. ರಾಷ್ಟ್ರಾಭಿವೃದ್ಧಿಯೇ ಮುಖ್ಯಗುರಿಯಾಗಬೇಕು ಎಂದು ಹೇಳಿದ ಕಲಾ ಅವರು “ಸರಿಯಾದ ಶಿಕ್ಷಣ ನಮ್ಮ ಯುವಕರಲ್ಲಿ ಆತ್ಮಗೌರವ ಮತ್ತು ಘನತೆಗಳನ್ನು ಪೋಷಿಸುತ್ತದೆ” ಎಂದಿದ್ದಾರೆ. ಯಾವುದೇ ಕಾನೂನು ಒತ್ತಡದಿಂದ ಈ ಗುಣಗಳನ್ನು ಬೆಳೆಸಬಾರದು. ಇವುಗಳನ್ನು ನಾವೇ ಪೋಷಿಸಿಕೊಳ್ಳಬೇಕು ಎಂದು ಕಲಾಂ ಸದಾ ಚಿಕ್ಕಮಕ್ಕಳಿಗೆ ಹೇಳುತ್ತಿದ್ದರು

(ಆ) ಒಂದು ವಾಕ್ಯದಲ್ಲಿ ಉತ್ತರಿಸಿ (ಒಂದು ಅಂಕದ ಪ್ರಶ್ನೆಗಳು)

೧. ದೇವರಿಗೆ ಹತ್ತಿರವಾದವರು ಯಾರು?

ಪೂಜೆ ಮಾಡುವವರು

೨. ಚಿಪ್ ಎಂದರೇನು?

ಅಗತ್ಯ ಮಾಹಿತಿಗಳನ್ನು ಕ್ರೋಡೀಕರಿಸಿರುವ ಸೂಕ್ಷ್ಮ ಎಲೆಕ್ಟ್ರಾನಿಕ್ ಸಾಧನ

೩. ಕಲಾಂ ಅವರ ಆತ್ಮಚರಿತ್ರೆಯ ಹೆಸರೇನು?

ವಿಂಗ್ಸ್ ಆಫ್ ಫೈರ್

೪. ಕಲಾಂ ಅವರ ಕ್ರಿಯಾಶೀಲತೆಗೆ ಸಾಕ್ಷಿ ಯಾವುದು?

ಸಂಶೋಧನಾ ಕೇಂದ್ರ ಸ್ಥಾಪಿಸಿದ್ದು

೫. ವಿಜ್ಞಾನದ ಅಡಿಪಾಯ ಯಾವುದು?

ಪ್ರಶ್ನಿಸುವುದು

೬. ಭೂಮಿಯ ಮೇಲಿನ ಮೊದಲ ವಿಜ್ಞಾನಿ ಯಾರು?

ಮಗು

೭. ಕಲಾಂರವರು ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾದ ಸುದ್ದಿ ತಿಳಿದಾಗ ಅವರು ಎಲ್ಲಿದ್ದರು?

ಚೆನ್ನೈ

೮. ಕಲಾಂರನ್ನು ಶಾಲೆಗೆ ಕಳಿಸುವಂತೆ ಪ್ರೇರೇಪಿಸಿದವರು ಯಾರು?

ಶಿವಸುಬ್ರಮಣ್ಣ ಆಯ್ಕರ್

೯. ಕಲಾಂರವರು ಯಾವ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರೊಫೆಸರ್ ಆಗಿದ್ದರು?

ಅಣ್ಣಾಮಲೈ ವಿಶ್ವವಿದ್ಯಾಲಯ

ಹೆಚ್ಚುವರಿ ಪ್ರಶ್ನೆಗಳು:

೧೦. ಕಲಾಂ ‘ಮಗುವೇ ಮೊದಲ ವಿಜ್ಞಾನಿ’ ಎಂದಿದ್ದಾರೆ. ಏಕೆ?

ಕೊನೆಯಿಲ್ಲದಷ್ಟು ಪ್ರಶ್ನೆಗಳನ್ನು ಕೇಳುವವರು ಮಕ್ಕಳಾದ್ದರಿಂದ

೧೧. ಸಿಕಂದರಾಬಾದಿನ ಶಾಲಾ ಬಾಲಕಿ ನೋಡಿದ ಕ್ಷಿಪಣಿ ಯಾವುದು?

ಪೃಥ್ವಿ

೧೨. ‘ವಿಂಗ್ಸ್ ಆಫ್ ಫೈರ್’ ಎನ್ನುವ ಕೃತಿ ಯಾರ ಆತ್ಮಚರಿತ್ರೆಯಾಗಿದೆ?

ಅಬ್ಧುಲ್‌ ಕಲಾಂ

೧೩. ‘ಬದುಕನ್ನು ಪ್ರೀತಿಸಿದ ಸಂತ’ ಬರೆದವರು ಯಾರು?

ಎಚ್.‌ ಆರ್‌. ರಾಮಕೃಷ್ಣ ರಾವ್‌

೧೪. ಹೈದಾರಾಬಾದಿನ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಪ್ರಯೋಗಾಲಯದ ನಿರ್ದೇಶಕರು ಯಾರು?

ವಿ. ಜೆ .ಸುಂದರಮ್

ಎರಡು ಅಂಕಗಳ ಪ್ರಶ್ನೆಗಳು (ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ):

೧. ಕಲಾಂ ಅವರ ಬದುಕಿನ ಮಂತ್ರ ಯಾವುದು?

“ಭಗವಂತನ ಸೃಷ್ಟಿಯಲ್ಲಿರುವವರೆಲ್ಲ ಆತನ ಬಂಧುಗಳೆ, ಯಾರು ಅವರುಗಳ ಸೇವೆ ಮಾಡುತ್ತಾರೋ ಅವರೇ ದೇವರಿಗೆ ಹತ್ತಿರವಾದವರು” ಎಂಬುದೇ ಕಲಾಂ ಅವರ ಬದುಕಿನ ಮಂತ್ರವಾಗಿತ್ತು.

೨. ಕಲಾಂ ಅವರು ಆತ್ಮಕತೆ ಬರೆದುದು ಏತಕ್ಕಾಗಿ?

ಸಾಮಾಜಿಕ ಸೌಲಭ್ಯಗಳಿಂದ ವಂಚಿತವಾಗಿರುವ ಊರಿನಲ್ಲಿ ಜನಿಸಿದ ಮಕ್ಕಳಿಗೆ ತಾವು ಹಿಂದುಳಿದವರು, ಅಸಮರ್ಥರು ಅನ್ನುವ ಭ್ರಮೆಯಿಂದ ಬಿಡುಗಡೆ ಹೊಂದಲು ತಮ್ಮ ಬದುಕು ಸ್ಫೂರ್ತಿ ನೀಡಬಹುದೇನೋ ಎಂಬ ಭಾವನೆಯಿಂದ ಆತ್ಮಕಥೆ ಬರೆದಿರುವುದಾಗಿ ಕಲಾಂ ಹೇಳಿಕೊಂಡಿದ್ದಾರೆ.

೩. ಕಲಾಂ ಅವರು ಬಂಡೆಗಳ ಬಸಿರಲ್ಲಿ ಕಂಡದ್ದೇನು?

ಕಲಾಂ ಅವರೊಬ್ಬ ಶಿಲ್ಪಿ, ಬೇರೆಯವರಿಗೆ ಬಂಡೆಯಾಗಿ ಕಾಣಿಸಿದ್ದು ಕಲಾಂ ಅವರಿಗೆ ಅದರೊಳಗಿನ ಶಿವಶಕ್ತಿಯಾಗಿ ಕಾಣಿಸುತ್ತದೆ. ಕಗ್ಗಲ್ಲ ಬಂಜರು ನಾಡಿನಲ್ಲಿ, ಬಂಡೆಗಳ ಬಸಿರಲಿ “ಶಿವನ ನಿಹಿತ ಶಕ್ತಿ”ಯನ್ನು ಕಲಾಂ ಕಂಡರು.

೪. ಉಪನಿರ್ದೇಶಕ ಸಾರಸ್ವತ ಸಿಕಂದರಾಬಾದ್ ಶಾಲಾ ಬಾಲಕಿ ಬಗೆಗೆ ಹೇಳಿದ ಹೆಮ್ಮೆಯ ಮಾತುಗಳಾವುವು?

ಸಾರಸ್ವತ ಅವರು “ಈ ಬಾಲಕಿ ನಮ್ಮ ಕ್ಷಿಪಣಿಯ ಆಕಾರ, ಗಾತ್ರ ಕುರಿತು ಒಂದಷ್ಟು ವಿವರ ಕೇಳಿದ್ದಳು. ನಾನು ಮಾಹಿತಿ ನೀಡಿದ್ದೆ. ನೋಡಿ ಎಂಥ ಅದ್ಭುತ ಮಾದರಿ ತಯಾರಿಸಿದ್ದಾಳೆ” ಎಂದು ಹೆಮ್ಮೆಯಿಂದ ಹೇಳಿದರು.

೫. ಕಲಾಂ ಅವರ ದೃಷ್ಟಿಯಲ್ಲಿ ಕನಸುಗಳು ವಿನಾಗುತ್ತವೆ?

ಕಲಾಂ ಅವರ ದೃಷ್ಟಿಯಲ್ಲಿ “ಕನಸುಗಳು ಆಲೋಚನೆಗಳಾಗುತ್ತವೆ. ಆಲೋಚನೆಗಳು ಸೃಜನಾತ್ಮಕ ಕ್ರಿಯೆಗಳಾಗಿ ಪರಿವರ್ತನೆಗೊಳ್ಳುತ್ತವೆ”.

೬. ಕಲಾಂ ಮೇಷ್ಟ್ರು ಹೇಳಿದ ಯಶಸ್ಸಿನ ಪಂಚಾಕ್ಷರಿ ಮಂತ್ರ ಯಾವುದು?

ಕಲಾಂ ಅವರು ಹೇಳುವ ಯಶಸ್ಸಿನ ಪಂಚಾಕ್ಷರಿ ಮಂತ್ರವೆಂದರೆ: ಕುತೂಹಲ, ಆಲೋಚನಾ ಶಕ್ತಿ, ಜ್ಞಾನ (ತಿಳಿವು), ಕಷ್ಟಪಟ್ಟು ಕೆಲಸಮಾಡುವುದು ಮತ್ತು ಗುರಿ ಸಾಧಿಸುವ ಛಲ.

ಹೆಚ್ಚುವರಿ ಪ್ರಶ್ನೆಗಳು:

೭. ಕಲಾಂ ಹೇಳಿದ ಭಗವದ್ಗೀತೆಯ ಪ್ರಸಿದ್ದ ಸಾಲುಗಳು ಯಾವುವು?

”ಇದುವರೆಗೆ ಏನಾಗಿದೆಯೋ ಅದೆಲ್ಲ ಒಳ್ಳೆಯದಕ್ಕೆ, ಈಗ ಆಗುತ್ತಿರುವುದೂ ಒಳ್ಳೆಯದಕ್ಕಾಗಿಯೇ ಮತ್ತು ಮುಂದೆ ಆಗಲಿರುವುದೂ ಒಳ್ಳೆಯದಕ್ಕಾಗಿಯೇ” ಎಂಬ ಭಗವದ್ಗೀತೆಯ ಪ್ರಸಿದ್ದ ಸಾಲುಗಳನ್ನು ಅಬ್ದುಲ್ ಕಲಾಂ ಹೇಳಿದರು.

೮. ಪದ್ಮಶೇಷಾದ್ರಿ ಬಾಲಭವನದ ಮಕ್ಕಳಿಗೆ ಕಲಾಂ ಕೇಳಿದ ಪ್ರಶ್ನೆ ಯಾವುದು?

ಚೆನ್ನೈನ ಪದ್ಮಶೇಷಾದ್ರಿ ಬಾಲಭವನದ ಪ್ರೌಢಶಾಲೆಯ ಮಕ್ಕಳಿಗೆ ಅಬ್ದುಲ್ ಕಲಾಂ ಅವರು “ಭೂಮಿ ಸೂರ್ಯನನ್ನು ಪರಿಭ್ರಮಿಸಲು ಒಂದು ವರ್ಷ ತೆಗೆದುಕೊಳ್ಳುತ್ತದೆ. ಹಾಗಿದ್ದಲ್ಲಿ ಹದಿನೈದನೇ ಪರಿಭ್ರಮಣ ಪಥದಲ್ಲಿದ್ದ ವ್ಯಕ್ತಿಗೆ ಎಷ್ಟು ವಯಸ್ಸಾಗಿರುತ್ತದೆ?” ಎಂದು ಪ್ರಶ್ನಿಸಿದರು.

೯. ಉತ್ತಮ ಬದುಕಿಗೆ ಆದರ್ಶ ಮಾದರಿಯ ತ್ರಿಭುಜ ಯಾವುವು?

ತಾಯಿ, ತಂದೆ ಮತ್ತು ಶಿಕ್ಷಕರು ಸೇರಿ ಆದ ತ್ರಿಭುಜವೇ ಉತ್ತಮ ಬದುಕಿಗೆ ಆದರ್ಶ ಮಾದರಿಗಳು.

೧೦. ಹದಿನೈದು ವರ್ಷ ತಲುಪುವವರೆಗೆ ನಮಗೆ ಯಾರು ಆದರ್ಶ ಮಾದರಿ?

ಹದಿನೈದು ವರ್ಷ ತಲುಪುವರೆಗೆ ನಮಗೆ ತಂದೆ, ತಾಯಿ, ಗುರುಗಳೇ ಆದರ್ಶ ಮಾದರಿಗಳು.

೧೧. ಸರಿಯಾದ ಶಿಕ್ಷಣ ಏನನ್ನು ಪೋಷಿಸುತ್ತದೆ?

ಸರಿಯಾದ ಶಿಕ್ಷಣವು ನಮ್ಮ ಯುವಕರಲ್ಲಿ ಆತ್ಮಗೌರವ ಮತ್ತು ಘನತೆಗಳನ್ನು ಪೋಷಿಸುತ್ತದೆ.

ನಾಲ್ಕು ಅಂಕಗಳ ಪ್ರಶ್ನೆಗಳು (ಐದಾರು ವಾಕ್ಯಗಳಲ್ಲಿ ಉತ್ತರಿಸಿ):

೧. ಕಲಾಂ ಅವರು ಯಾವಾಗಲೂ ಸಾಧ್ಯತೆಗಳನ್ನು ಅರಸುವ ಆಶಾಜೀವಿ ಹೇಗೆ? ವಿವರಿಸಿ.

ಕಲಾಂ ಅವರು ರಾಷ್ಟ್ರಪತಿಯಾಗಿ ಆಯ್ಕೆಗೊಳ್ಳುವುದಕ್ಕೂ ಕೆಲವು ದಿನಗಳ ಹಿಂದೆ ಹೈದರಬಾದಿನ ಒಂದು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವೈದ್ಯರನ್ನು ಬುದ್ಧಿಮಾಂದ್ಯ ಮಕ್ಕಳ ಮೆದುಳಿನಲ್ಲಿ ʼಚಿಪ್‌ʼ ಅಳವಡಿಸಿ ಗುಣಪಡಿಸಲು ಸಾಧ್ಯವೆ? ಎಂದು ಪ್ರಶ್ನಿಸಿದ್ದರು. ವೈದ್ಯರು ಸಾಧ್ಯತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ ಕಲಾಂ “ಇದು ಸಾಧ್ಯವಿಲ್ಲ ಎಂದು ಹೇಳುವ ನೂರು ಕಾರಣಗಳ ಬಗ್ಗೆ ನನಗೆ ಸ್ವಲ್ಪವೂ ಆಸಕ್ತಿಯಿಲ್ಲ. ಅದು ಹೇಗೆ ಸಾಧ್ಯವಾಗುತ್ತದೆ ಎಂಬ ಒಂದು ಕಾರಣ ಹೇಳಬಲ್ಲಿರಾ?” ಎಂದು ಮರುಪ್ರಶ್ನಿಸಿದರು. ಅವರ ಈ ಮೇಲಿನ ಮಾತಿನ ಉದಾಹರಣೆಯನ್ನು ಗಮನಿಸಿದರೆ ಅಬ್ದುಲ್‌ ಕಲಾಂ ಯಾವಾಗಲೂ ಸಾಧ್ಯತೆಗಳನ್ನು ಅರಸುವ ಆಶಾಜೀವಿ ಎಂಬುದು ಮನದಟ್ಟಾಗುತ್ತವೆ.

೨. ಚೆನ್ನನ ಪದ್ಮಶೇಷಾದ್ರಿ ಬಾಲಭವನದ ಪ್ರೌಢಶಾಲೆಯಲ್ಲಿ ನಡೆದ ಕ್ರಿಜ್ ಕಾರ್ಯಕ್ರಮದ ಔಚಿತ್ವವನ್ನು ಕುರಿತು ವಿವರಿಸಿ.

ಚೆನ್ನೈನ ಪದ್ಮಶೇಷಾದ್ರಿ ಬಾಲಭವನದ ಪ್ರೌಢಶಾಲೆಯಲ್ಲಿ ಕ್ವಿಜ್ ಕಾರ್ಯಕ್ರಮ ಏರ್ಪಾಡಾಗಿತ್ತು. ಭಾರತರತ್ನ ಅಬ್ದುಲ್ ಕಲಾಂ ಅವರೇ ಕ್ವಿಜ್ ಮಾಸ್ಟರ್ ಆಗಿದ್ದರು. ಅವರು ಏನೆಲ್ಲ ಪ್ರಶ್ನಿಸಬಹುದೆಂಬ ಕಾತುರದಲ್ಲಿ ಮಕ್ಕಳಿದ್ದಾಗ ಕಲಾಂ ಅವರು “ಭೂಮಿ ಸೂರ್ಯನನ್ನು ಪರಿಭ್ರಮಿಸಲು ಒಂದು ವರ್ಷ ತೆಗೆದುಕೊಳ್ಳುತ್ತದೆ. ಹಾಗಿದ್ದಲ್ಲಿ ಹದಿನೈದನೇ ಪರಿಭ್ರಮಣ ಪಥದಲ್ಲಿದ್ದ ವ್ಯಕ್ತಿಗೆ ಎಷ್ಟು ವಯಸ್ಸಾಗಿರುತ್ತದೆ?” ಎಂದು ಪ್ರಶ್ನಿಸಿದರು. ಈ ಪ್ರಶ್ನೆಯಿಂದ ಅನೇಕ ಮಕ್ಕಳು ತಬ್ಬಿಬ್ಬಾದರ ಅಭಿಷೇಕ್ ಎಂಬ ಹುಡುಗ ಸ್ವಲ್ಪ ಯೋಚಿಸಿ ‘ಹದಿನಾಲ್ಕು’ ಎಂದುತ್ತರಿಸಿದ. ಅವನ ಉತ್ತರ ಸರಿಯಾಗಿತ್ತು ಭೂಮಿಯ ಮೇಲೆ ನಿಂತಿದ್ದ ವ್ಯಕ್ತಿ ಹದಿನಾಲ್ಕು ಸುತ್ತು ಮುಗಿಸಿರುತ್ತಾನಾದ್ದರಿಂದ ಅವನ ಉತ್ತರ ಸರಿಯಾಗಿತ್ತು. ಗಹನವಾದ ಸಂಗತಿಗಳನ್ನು ಈ ರೀತಿಯ ಕಥೆಯ ರೂಪದಲ್ಲಿ ಹೇಳುತ್ತಿದ್ದ ಕಲಾಂ ಅವರ ಗುಣಕ್ಕೆ ಈ ಉದಾಹರಣೆ ಸೂಕ್ತವಾದುದೆನಿಸಿದೆ.

೩. ತಾಯಿ, ತಂದೆ, ಶಿಕ್ಷಕರು ಸೇರಿ ಆದ ತ್ರಿಭುಜವೇ ಉತ್ತಮ ಬದುಕಿಗೆ ಆದರ್ಶ ಮಾದರಿ, ಹೇಗೆ? ವಿವರಿಸಿ,

ಕಲಾಂ ಅವರು ವಿವರಿಸುವಂತೆ ಮಕ್ಕಳನ್ನು ಬುದ್ದಿವಂತರೂ ಮತ್ತು ಕಷ್ಟಪಟ್ಟು ಕೆಲಸ ಮಾಡುವಂತಹವರೂ ಆದ ಉತ್ತಮ ಮನುಷ್ಯರನ್ನಾಗಿ ಮಾಡುವುದು ತಂದೆ-ತಾಯಿಗಳ ಆದ್ಯಕರ್ತವ್ಯ, ಅಧ್ಯಾಪಕರು ಕಲಿಕೆ ಮತ್ತು ಜ್ಞಾನದ ಬೆಳಕನ್ನು ನೀಡಿ ಮಕ್ಕಳನ್ನು ಕ್ರಿಯಾಶೀಲರನ್ನಾಗಿಸುವ ಆದರ್ಶ ವ್ಯಕ್ತಿಗಳು, ಆದ್ದರಿಂದ ತಂದೆ-ತಾಯಿ-ಶಿಕ್ಷಕ ಸೇರಿ ಆದ ತ್ರಿಭುಜವೇ ಮಕ್ಕಳ ಉತ್ತಮ ಬದುಕಿಗೆ ಆದರ್ಶ ಮಾದರಿ. ಈ ಮೂವರೂ ಶ್ರದ್ಧೆಯಿಂದ ದುಡಿದಾಗ ಮಾತ್ರ ಭಾರತಕ್ಕೆ ಹೊಸ ತಾರುಣ್ಯ ಬರುತ್ತದೆ ಮಾತಾಪಿತೃಗಳ ಹಿಂದೆ ಶಾಲೆ ಇರುತ್ತದೆ ಮತ್ತು ಶಿಕ್ಷಕರ ಹಿಂದೆ ಮನೆ ಇರುತ್ತದೆ. ಆದ್ದರಿಂದ ಇವರೇ ಆದರ್ಶ ಬದುಕಿಗೆ ಮಾದರಿ ಎಂದು ಕಲಾಂ ಹೇಳಿದ್ದಾರೆ.

೪. ರಾಷ್ಟ್ರಪತಿಯಾಗಿ ಆಯ್ಕೆಯಾದಾಗ ಚೆನ್ನೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಲಾಂ ಹೇಳಿದ್ದೇನು? ವಿವರಿಸಿ.

ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಗಳಾಗಿ ಆಯ್ಕೆಯಾದ ಸುದ್ದಿ ಪ್ರಕಟವಾದಾಗ ಚೆನ್ನೈನಲ್ಲಿದ್ದರು. ಮಾಧ್ಯಮದವರು ಪತ್ರಿಕಾಗೋಷ್ಠಿ ಏರ್ಪಡಿಸಿದ್ದರು. ಕಲಾಂ ಅವರನ್ನು ಸಂದರ್ಶಿಸಲು ಆಧುನಿಕ ಎಲೆಕ್ಟ್ರಾನಿಕ್ ಮಾಧ್ಯಮ ದವರೆಲ್ಲಾ ಜಮಾಯಿಸಿ ಸಂತೆಯಾಗಿತ್ತು. ತಾವು ಪ್ರಶ್ನೆ ಕೇಳುತ್ತಿರುವುದು ರಾಜಕಾರಣಿಯನ್ನಲ್ಲ ಎಂಬುದನ್ನು ಮಾಧ್ಯಮದವರು ಮರೆತಿದ್ದರು. ಕಲಾಂ ಅವರು ಪರಿಸ್ಥಿತಿಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು “ಎಲ್ಲರೂ ಗಮನವಿಟ್ಟು ಕೇಳಿ. ಇದುವರೆಗೆ ಏನಾಗಿದೆಯೋ ಅದೆಲ್ಲ ಒಳ್ಳೆಯದಕ್ಕೆ, ಈಗ ಆಗುತ್ತಿರುವುದೂ ಒಳ್ಳೆಯದಕ್ಕೆ ಮತ್ತು ಮುಂದೆ ಆಗಲಿರುವುದೂ ಒಳ್ಳೆಯದಕ್ಕೆ ಅರ್ಥವಾಯಿತೆ?” ಎಂದು ಶಿಷ್ಯರನ್ನು ಕೇಳುವಂತೆ ಕೇಳಿದಾಗ ಅಲ್ಲಿದ್ದ ಪತ್ರಕರ್ತರೆಲ್ಲ ಹೂಗುಟ್ಟಿದರಂತೆ. ಭಗವದ್ಗೀತೆಯ ಪ್ರಸಿದ್ಧ ಸಾಲುಗಳಿಂದ ಜೀವನಮೌಲ್ಯ ಬೋಧಿಸಿದ ಕಲಾಂ ಅವರೆಲ್ಲರ ಬಾಯಿಂದ ಒಟ್ಟಾಗಿ “ವ್ಯಕ್ತಿಗಿಂತ ರಾಷ್ಟ್ರ ದೊಡ್ಡದು” ಎಂದು ಹೇಳಿಸಿದರಂತೆ. ಕಲಾಂ ಅವರ ವಿಶಿಷ್ಟ ವ್ಯಕ್ತಿತ್ವ ಈ ಸಂದರ್ಭದಲ್ಲಿ ಎದ್ದು ಕಾಣುತ್ತದೆ.

೫. ತಮ್ಮನ್ನು ಭೇಟಿಯಾದ ಮಕ್ಕಳಿಗೆ ಕಲಾಂ ಹೇಳಿದ್ದೇನು?

ತಮ್ಮನ್ನು ಭೇಟಿಯಾದ ಮಕ್ಕಳಿಗೆ ಅಬ್ದುಲ್ ಕಲಾಂ ಅವರು ತಮ್ಮ ಯಶಸ್ಸಿನ ಮೂಲಗುಟ್ಟಾದ ಕುತೂಹಲ, ಆಲೋಚನಾ ಶಕ್ತಿ, ಜ್ಞಾನ, ಕಷ್ಟಪಟ್ಟು ಕೆಲಸ ಮಾಡುವುದು ಮತ್ತು ಗುರಿ ಸಾಧಿಸುವ ಛಲ ಎಂಬ ಪಂಚಾಕ್ಷರಿ ಮಂತ್ರವನ್ನು ಬೋಧಿಸುತ್ತಿದ್ದರು. “ಎಲ್ಲವನ್ನು ಪ್ರಶ್ನಿಸಿ. ಪ್ರಶ್ನೆಗಳಿಂದ ವಿಕಸನಗೊಂಡದ್ದೇ ವಿಜ್ಞಾನ. ನಾವು ಮೊದಲು ಕ್ಷಿಪಣಿ ತಯಾರಿಸುತ್ತೇವೆಂದಾಗ ಅನೇಕರು ಅದು ಅಸಾಧ್ಯ ಎಂದಿದ್ದರು. ನಾವು ಪಟ್ಟು ಹಿಡಿದು ಗುರಿ ಸಾಧಿಸಿದವು” ಎಂದು ದೃಢತೆಯಿಂದ ಹೇಳುತ್ತಿದ್ದರು. ಗಹನವಾದ ವಿಚಾರಗಳನ್ನು ಕಥೆಯ ರೂಪದಲ್ಲಿ ಮಕ್ಕಳಿಗೆ ತಿಳಿಸಿ ಹೇಳುತ್ತಿದ್ದುದು ಕಲಾಂ ಅವರ వృష వాగిస్తు.

ಭಾಷಾಭ್ಯಾಸ

೧) ಅನ್ಯದೇಶ ಪದಗಳನ್ನು ಗಮನಿಸಿ:

ಎಲೆಕ್ಟ್ರಾನಿಕ್, ಕಂಪ್ಯೂಟರ್. ಕ್ಯಾಂಟೀನ್, ಕ್ವಿಜ್, ಕ್ಲಾಸ್, ಡಿಜಿಟಲ್, ಪ್ರೆಸಿಡೆಂಟ್.

೨) ನಾನಾರ್ಥ ಪದಗಳನ್ನು ಗಮನಿಸಿರಿ:

ಅಡಿ – ಪಾದ, ಅಳತೆ, ಅಂಗುಲ

ಹಿಂಡು – ಗುಂಪು, ಹಾಲನ್ನು ಕರೆ

ಕಲಿ – ತಿಳಿ, ಯುಗ

೩) ಹೇಳಿದರು – ಇದು ಭೂತಕಾಲದ ರೂಪ

ಇದೇ ರೀತಿ ಈ ಪಠ್ಯದಲ್ಲಿ ಬಂದಿರುವ ಪದಗಳನ್ನು ಪಟ್ಟಿ ಮಾಡಿರಿ.

ಕೊಟ್ಟಿದ್ದರು. ಪ್ರಶ್ನಿಸಿದರು, ಪ್ರಕಟಿಸಿದರು, ಬಂದರು, ಮಾಡಿದರು, ತೋರಿಸಿದರು, ಏರ್ಪಡಿಸಿದ್ದರು, ದನಿಗೂಡಿಸಿದರು. ಬಿಚ್ಚಿಡುತ್ತಿದ್ದರು – ಇತ್ಯಾದಿ.

೪) ಕಂಡರು – ಇದರ ಕ್ರಿಯಾಪ್ರಕೃತಿ – ಕಾಣು; ನಿಷೇಧರೂಪ – ಕಾಣರು.

ಇದೇ ರೀತಿ ಈ ಪಠ್ಯದಲ್ಲಿ ಬಂದಿರುವ ಪದಗಳನ್ನು ಪಟ್ಟಿಮಾಡಿ ತಿಳಿಯಿರಿ.

ಕ್ರಿಯಾಪದ ಕ್ರಿಯಾಪ್ರಕೃತಿ ನಿಷೇಧರೂಪ

ಮಾಡುತ್ತಾರೆ…………………. ಮಾಡು……………………. ಮಾಡರು/ಮಾಡುವುದಿಲ್ಲ

ಹೇಳಿದರು…………………….. ಹೇಳು………………………. ಹೇಳರು/ಹೇಳಲಿಲ್ಲ

ನೀಡುತ್ತದೆ……………………. ನೀಡು………………………. ನೀಡರು/ನೀಡುತ್ತಿಲ್ಲ

ನೋಡಿತು……………………. ನೋಡು…………………….. ನೋಡಲಿಲ್ಲ

ಬಂದರು………………………. ಬರು……………………………ಬರಲಿಲ್ಲ

ಕೇಳಿದರು………………………. ಕೇಳು……………………….. ಕೇಳಲಿಲ್ಲ – ಇತ್ಯಾದಿ.

ಲೇಖನದ ಸಾರಾಂಶ ಮತ್ತು ವಿಮರ್ಶೆ:

‘ಬದುಕನ್ನು ಪ್ರೀತಿಸಿದ ಸಂತ’ ಎಂಬ ಲೇಖನವು ಮಾಜಿ ರಾಷ್ಟ್ರಪತಿಗಳಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜೀವನಕ್ಕೆ ಸಂಬಂಧಿಸಿದ ಕೆಲವು ಸಂದರ್ಭಗಳನ್ನು ವಿವರಿಸುವ ಲೇಖನವಾಗಿದೆ. ವಿಜ್ಞಾನ – ತಂತ್ರಜ್ಞಾನಗಳ ಸಂಕೀರ್ಣ ಪ್ರಪಂಚದಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿದ ವಿಜ್ಞಾನಿ ಕಲಾಂ ಅವರಿಗೆ ಯಾವುದೇ ಪ್ರಶಸ್ತಿ ಪುರಸ್ಕಾರಗಳ ವ್ಯಾಮೋಹವಿರಲಿಲ್ಲ. ಜನರ ಸೇವೆಯೇ ದೇವರ ಸೇವೆ ಎಂಬುದನ್ನು ಬದುಕಿನಲ್ಲಿ ಅಳವಡಿಸಿಕೊಂಡ ಧೀಮಂತ ವ್ಯಕ್ತಿಯಾಗಿದ್ದರು. ಅವರೊಮ್ಮೆ ಹೈದರಾಬಾದಿನ ಬುದ್ದಿಮಾಂದ್ಯ ಆಸ್ಪತ್ರೆಗೆ ಭೇಟಿ ನೀಡಿ ಆ ಮಕ್ಕಳ ಮಿದುಳಿನಲ್ಲಿ ‘ಚಿಪ್’ನ ಎಲೆಕ್ಟ್ರಾನಿಕ್ ಸಾಧನ ಅಳವಡಿಸಬಹುದೇ ಎಂದು ವೈದ್ಯರನ್ನು ಕೇಳಿದರು. ವೈದ್ಯರು ಸಾಧ್ಯವಿಲ್ಲವೆಂದಾಗ ತೃಪ್ತರಾಗದ ಕಲಾಂ ಹೇಗೆ ಸಾಧ್ಯವಾಗುತ್ತದೆಂಬುದನ್ನು ಹೇಳಿ ಎಂದು ಮರುಪ್ರಶ್ನಿಸಿದ್ದರು. ಅವರು ಯಾವಾಗಲೂ ಸಾಧ್ಯತೆಗಳನ್ನು ಅರಸುವ ಆಶಾಜೀವಿ, 1999ರಲ್ಲಿ ಅವರು ‘ವಿಂಗ್ಸ್ ಆಫ್ ಫೈರ್’ ಎಂಬ ಆತ್ಮಕಥನವನ್ನು ಪ್ರಕಟಿಸಿದರು. ಯಾವುದೋ ಮೂಲೆಯ ಊರಲ್ಲಿ ಹುಟ್ಟಿ ಸಾಮಾಜಿಕ ಸೌಲಭ್ಯಗಳಿಂದ ವಂಚಿತವಾಗಿರುವ ಮಗುವಿಗೆ ಅಂಥದ್ದೇ ಪರಿಸರದಲ್ಲಿದ್ದ ತನ್ನ ಭವಿಷ್ಯ ಅರಳಿದ್ದನ್ನು ಓದಿದಾಗ ಭರವಸೆ ಮೂಡಲೆಂಬ ಆಶಯದಿಂದ ಅವರು ಆತ್ಮಕಥೆಯನ್ನು ಬರೆದಿರುವುದಾಗಿ ಹೇಳಿಕೊಂಡಿರುವುದು ಸಮಂಜಸವಾಗಿದೆ. ಹೈದರಾಬಾದಿನ ಸಮೀಪದ ಬರಡು ಭೂಮಿಯಲ್ಲಿ ‘ಸಂಶೋಧನಾ ಕೇಂದ್ರ ಇಮಾರತ್’ ಸ್ಥಾಪಿಸಿದ್ದು ಅವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ.

ಕಲಾಂ ಮಕ್ಕಳಲ್ಲಿ ತೋರುತ್ತಿದ್ದ ಪ್ರೀತಿ-ಆಸಕ್ತಿಗಳು ಅನನ್ಯವಾಗಿದ್ದವು. 1988ರಲ್ಲಿ ಪೃಥ್ವಿ ಉಡಾವಣಾ ಸಿದ್ಧತೆಯ ಸಮಯದಲ್ಲಿ ಕಲಾಂ ಕೈಯಲ್ಲಿ ಪತ್ರಿಕೆಯೊಂದನ್ನು ಹಿಡಿದುಕೊಂಡು ಬಂದಿದ್ದರು. ಸಿಕಂದರಾಬಾದಿನ ಶಾಲಾ ಬಾಲಕಿಯೊಬ್ಬಳು ತಯಾರಿಸಿದ್ದ ಪೃಥ್ವಿ ಕ್ಷಿಪಣಿಯ ಮಾದರಿ ಚಿತ್ರ ಆ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದನ್ನು ನೋಡಿ ಸಂತಸಪಟ್ಟು ಆ ಬಾಲಕಿಯನ್ನು ಇಲ್ಲಿಗೆ ಕರೆಸಿ, ಆ ಮಗು ನಿಜವಾದ ಪೃಥ್ವಿ ಕ್ಷಿಪಣಿಯನ್ನು ನೋಡಿ ಆನಂದಿಸಲಿ ಎಂದರು. ಆ ಹುಡುಗಿ ಬಂದು ಕ್ಷಿಪಣಿಯ ಮೈಸವರಿ ಆನಂದಪಟ್ಟಳು. ಕಲಾಂ ಅವರು ಅವಳ ಸ್ಕೂಲು, ತಂದೆಯ ಉದ್ಯೋಗ, ಅವಳ ಹವ್ಯಾಸಗಳ ಬಗ್ಗೆ ನಗುನಗುತ್ತಾ ಪ್ರಶ್ನಿಸಿದಾಗ ಆ ಹುಡುಗಿಗಾದ ಆನಂದ ಹೇಳತೀರದಾಯ್ತು.

ಮತ್ತೊಮ್ಮೆ ಚೆನ್ನೈನ ಪದ್ಮಶೇಷಾದ್ರಿ ಪ್ರೌಢಶಾಲೆಯಲ್ಲಿ ರಸಪ್ರಶ್ನೆ ಕಾರ್ಯಕ್ರಮವಿತ್ತು. ಅಲ್ಲಿ ಕ್ವಿಜ್ ಮಾಸ್ಟರ್ ಆಗಿದ್ದವರು ಕಲಾಂ. ಕಲಾಂ ”ಭೂಮಿ ಸೂರ್ಯನನ್ನು ಪರಿಭ್ರಮಿಸಲು ಒಂದು ವರ್ಷ ತೆಗೆದುಕೊಳ್ಳುತ್ತದೆ. ಹಾಗಿದ್ದಲ್ಲಿ ಹದಿನೈದನೇ ಪರಿಭ್ರಮಣ ಪಥದಲ್ಲಿದ್ದ ವ್ಯಕ್ತಿಗೆ ಎಷ್ಟು ವಯಸ್ಸಾಗಿರುತ್ತದೆ” ಎಂದು ಕೇಳಿದಾಗ ಅಲ್ಲಿದ್ದ ಮಕ್ಕಳೆಲ್ಲ ತಬ್ಬಿಬ್ಬಾದರು. ಆದರೆ ಅಭಿಷೇಕ್ ಎಂಬ ಬಾಲಕ ‘ಹದಿನಾಲ್ಕು ವರ್ಷ’ ಎಂದುತ್ತರಿಸಿದ. ಅವನ ಉತ್ತರ ಸರಿಯಾಗಿತ್ತು. ಭೂಮಿಯ ಮೇಲೆ ನಿಂತಿದ್ದ ವ್ಯಕ್ತಿ ಹದಿನಾಲ್ಕು ಸುತ್ತು ಮುಗಿಸಿರುತ್ತಾನೆ. ಆದ್ದರಿಂದ ಅಭಿಷೇಕನ ಉತ್ತರ ಸರಿಯಾಗಿತ್ತು. ಕಲಾಂ ಅವರು ತಮ್ಮ ವಯಸ್ಸನ್ನು ಹೇಳುತ್ತಿದ್ದುದು ಹೀಗೆಯೇ. ಅವರಿದ್ದಲ್ಲಿ ಮಕ್ಕಳ ಹಿಂಡು ಸದಾ ಹಿಂದಿರುತ್ತಿತ್ತು. ಗಹನವಾದ ಸಂಗತಿಗಳನ್ನು ಕಲಾಠಿ ಮೇಷ್ಟ್ರು ಮಕ್ಕಳಿಗೆ ಸಣ್ಣಸಣ್ಣ ಕತೆಗಳ ಮೂಲಕ ವಿವರಿಸಿ ಹೇಳುತ್ತಿದ್ದರು.

ಅಬ್ದುಲ್ ಕಲಾಂ ಅವರು ತಮ್ಮ ಬದುಕಿನ ಅನುಭವಗಳನ್ನು ಮಕ್ಕಳಿಗೆ ಉಣಬಡಿಸುತ್ತಿದ್ದರು. ಮಕ್ಕಳಿಗೆ 15 ವರ್ಷದವರೆಗೆ ತಂದೆ – ತಾಯಿಗಳೇ ಆದರ್ಶರಾಗಬೇಕೆಂಬುದು ಅವರ ಅಭಿಪ್ರಾಯ. ತಾವು ಚಿಕ್ಕವರಿದ್ದಾಗ ತಮ್ಮ ತಂದೆ – ತಾಯಿ ಶ್ರೀಮಂತರಲ್ಲದಿದ್ದರೂ ಹಸಿದವರಿಗೆ ಊಟ ಹಾಕುತ್ತಿದ್ದುದನ್ನು, ಬಡವರಿಗೆ ಸಹಾಯ ಹಸ್ತ ಚಾಚುತ್ತಿದ್ದುದನ್ನು ನೋಡಿ ಬೆಳೆದುದನ್ನು ಮಕ್ಕಳಿಗೆ ಹೇಳುತ್ತಿದ್ದರು. ಮಕ್ಕಳನ್ನು ಬುದ್ದಿವಂತರೂ ಮತ್ತು ಕಷ್ಟಪಟ್ಟು ಕೆಲಸ ಮಾಡುವ ಮನುಷ್ಯರನ್ನಾಗಿ ರೂಪಿಸುವುದು ತಂದೆ-ತಾಯಿಗಳ ಕರ್ತವ್ಯವಾದರೆ, ಮಕ್ಕಳಿಗೆ ಜ್ಞಾನದ ಬೆಳಕನ್ನು ನೀಡಿ ಅವರು ಕ್ರಿಯಾಶೀಲರನ್ನಾಗಿಸುವ ಹೊಣೆ ಶಿಕ್ಷಕರದೆಂಬುದು ಕಲಾಂ ಅವರ ನಿಲುವು. ಆದ್ದರಿಂದ ಮಕ್ಕಳಿಗೆ ತಂದೆ-ತಾಯಿ-ಶಿಕ್ಷಕರೆಂಬ ತ್ರಿಭುಜಗಳ ನೆಲೆ ಅಗತ್ಯ. ಈ ಮೂವರೂ ಶ್ರದ್ಧೆಯಿಂದ ದುಡಿದಾಗ ಮಾತ್ರ ಭಾರತಕ್ಕೆ ಹೊಸ ತಾರುಣ್ಯ ಬರುತ್ತದೆಂಬುದು ಕಲಾಂ ಅವರ ಅಭಿಪ್ರಾಯ. ಮನೆ ಮತ್ತು ಶಾಲೆಗಳು ಪರಸ್ಪರ ಪೂರಕವಾಗಿರಬೇಕು. ವಿದ್ಯಾರ್ಥಿ-ಶಿಕ್ಷಕರ ಸಂಬಂಧಗಳು ವ್ಯಾಪಾರಿ ಮನೋಭಾವದಿಂದ ಕೂಡಿರಬಾರದು. ಸರಿಯಾದ ಶಿಕ್ಷಣದಿಂದ ನಮ್ಮ ಯುವಕರಲ್ಲಿ ಆತ್ಮಗೌರವ ಮತ್ತು ಘನತೆ ವೃದ್ಧಿಸುತ್ತದೆ ಎಂದು ಕಲಾಂ ಭಾವಿಸುತ್ತಾರೆ.

‘ಭೂಮಿಯ ಮೇಲಿನ ಮೊದಲ ವಿಜ್ಞಾನಿ ಯಾರಾಗಿರಬಹುದು?’ ಎಂದು ಬಾಲಕನೊಬ್ಬ ಪ್ರಶ್ನಿಸಿದ್ದಕ್ಕೆ ಕಲಾಂ ನೀಡಿರುವ ಉತ್ತರ ಸ್ವಾರಸ್ಯಕರವಾಗಿದೆ. ಅವರು ಉತ್ತರಿಸಿದ್ದು ಹೀಗೆ: “ನನಗನ್ನಿಸುತ್ತೆ, ವಿಜ್ಞಾನ ಹುಟ್ಟಿದ್ದು ಮತ್ತು ಈಗಲೂ ಜೀವಂತವಾಗಿರುವುದು ಪ್ರಶ್ನೆಗಳಿಂದ. ವಿಜ್ಞಾನದ ಅಡಿಪಾಯವೇ ಪ್ರಶ್ನೆ ಕೇಳುವುದು. ಕೊನೆಯಿಲ್ಲದಷ್ಟು ಪ್ರಶ್ನೆಗಳನ್ನು ಕೇಳುವವರು ಮಕ್ಕಳೇ ಎಂಬುದು ಪೋಷಕರಿಗೂ ಮತ್ತು ಶಿಕ್ಷಕರಿಗೂ ಚೆನ್ನಾಗಿ ಗೊತ್ತಿದೆ. ಆದ್ದರಿಂದ ಮಗುವೇ ಮೊದಲ ವಿಜ್ಞಾನಿ”. ಕಲಾಂ ಅವರ ಈ ಉತ್ತರದಿಂದ ಅಲ್ಲಿದ್ದವರಿಗೆಲ್ಲಾ ತುಂಬಾ ಸಂತೋಷವಾಯಿತು.

ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದ ಸುದ್ದಿ ಪ್ರಕಟವಾದಾಗ ಚೆನ್ನೈನ ಮಾಧ್ಯಮ ಪತ್ರಕರ್ತರು ಕಲಾಂ ಅವರನ್ನು ಸಂದರ್ಶಿಸಲು, ಪ್ರಶ್ನೆ ಕೇಳಲು ಜಮಾಯಿಸಿದ್ದರು. ರಾಜಕಾರಣಿಯಲ್ಲದ ಕಲಾಂ ಸಂದರ್ಶನಕ್ಕೆ ಅವಕಾಶ ನೀಡದೆ ಅವರನ್ನೆಲ್ಲಾ ಶಾಲಾ ಮಕ್ಕಳಂತೆ ಕಂಡು ಆಗುವುದು, ಆಗಿರುವುದು ಎಲ್ಲವೂ ಒಳ್ಳೆಯದಕ್ಕೆ ಎಂದರಲ್ಲದೆ, ಅವರೆಲ್ಲರಿಂದಲೂ “ವ್ಯಕ್ತಿಗಿಂತ ರಾಷ್ಟ್ರ ದೊಡ್ಡದು” ಎಂದು ಹೇಳಿಸಿದರು. “ನಿಮ್ಮ ಯಶಸ್ಸಿನ ಗುಟ್ಟೇನು?” ಎಂದು ಮಕ್ಕಳು ಕೇಳಿದರೆ ಅವರು ಯಶಸ್ಸಿನ ಪಂಚಾಕ್ಷರಿ ಮಂತ್ರವೆಂದರೆ ಕುತೂಹಲ, ಆಲೋಚನಾಶಕ್ತಿ, ಜ್ಞಾನ, ಕಷ್ಟಪಟ್ಟು ಕೆಲಸ ಮಾಡುವುದು ಮತ್ತು ಗುರಿ ಸಾಧಿಸುವ ಛಲ ಎನ್ನುತ್ತಿದ್ದರು. ಅಧ್ಯಕ್ಷರಾದ ತರುವಾಯವೂ ಕಲಾಂ ಲಕ್ಷಾಂತರ ಮಕ್ಕಳನ್ನು ಭೇಟಿಮಾಡಿ ಅವರೆಲ್ಲರೂ ಶಾಂತಿ, ಸಮೃದ್ಧಿ ಮತ್ತು ಸುಭದ್ರವಾದ ಭಾರತದಲ್ಲಿ ಬದುಕ ಬಯಸಲೆಂದು ಆಶಿಸಿದ್ದಾರೆ.

ಶಬ್ದಾರ್ಥ: ಸಂಕೀರ್ಣ – ಇಕ್ಕಟ್ಟಾದ, ಜಟಿಲವಾದ; ಊರ್ಧ್ವಮುಖ – ಮೇಲುಮುಖ; ಉದ್ದೀಪನ – ಉತ್ತೇಜನ, ಉರಿಸುವ; ನಿಹಿತ – ಇಟ್ಟ, ಇರಿಸಿದ; ಸಬೂಬು – ಕಾರಣ, ನೆಪ; ಕ್ಷಿಪಣಿ – ದೂರದಿಂದ ನಿಯಂತ್ರಿಸಲ್ಪಡುವ ಸ್ಫೋಟಕವಾಗಿ ಉಡಾಯಿಸುವ ಸಾಧನ; ಮಜಲು – ಹಂತ; ಘನತೆ – ಶ್ರೇಷ್ಠತೆ; ಸೃಜನಾತ್ಮಕತೆ – ಕ್ರಿಯಾತ್ಮಕವಾದ; ದೃಢತೆ – ಬಲಿಷ್ಠವಾದ, ದಿಟ್ಟವಾದ; ಕ್ರೋಡೀಕರಿಸು – ಸಂಗ್ರಹಿಸು; ಭ್ರಮೆ – ಭ್ರಾಂತಿ, ಹುಚ್ಚು, ಉನ್ಮಾದ; ಆಡಚಣೆ – ತೊಂದರೆ; ಜಮಾಯಿಸು – ಸೇರು.

ಖಾಲಿ ಬಿಟ್ಟ ಸ್ಥಳಗಳನ್ನು ಭರ್ತಿ ಮಾಡಿರಿ:

೧. ಕಲಾಂರವರ ಪ್ರಕಾರ ಭೂಮಿಯ ಮೇಲಿನ ಮೊದಲ ವಿಜ್ಞಾನಿ—————–

ಮಗು

೨. ಕಲಾಂ ಅವರನ್ನು ಶಾಲೆಗೆ ಕಳುಹಿಸುವಂತೆ ಪ್ರೇರೇಪಿಸಿದವರು——————–

ಶಿವಸುಬ್ರಹ್ಮಣ್ಯ ಅಯ್ಯರ್

೩. ಕಲಾಂ ಅವರ ಆತ್ಮಚರಿತ್ರೆಯ ಹೆಸರು————–

ವಿಂಗ್ಸ್ ಆಫ್ ಫೈರ್

೪. ವಿಜ್ಞಾನದ ಅಡಿಪಾಯ—————

ಪ್ರಶ್ನಿಸುವುದು

೫. ವ್ಯಕ್ತಿಗಿಂತ—————–ದೊಡ್ಡದು.

ರಾಷ್ಟ್ರ

೬. ಅಗತ್ಯ ಮಾಹಿತಿಗಳನ್ನು ಕ್ರೋಡೀಕರಿಸಿರುವ ಸೂಕ್ಷ್ಮ ಎಲೆಕ್ಟ್ರಾನಿಕ್ ಸಾಧನ————

ಚಿಪ್

೭. ಕಲಾಂರವರು—————ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.

ಅಣ್ಣಾಮಲೈ

Leave a Comment