ದ್ವಿತೀಯ ಪಿಯುಸಿ ಕನ್ನಡ ದ್ವಿರುಕ್ತಿಗಳು | 2nd Puc Dvirukti Padagalu in Kannada

ದ್ವಿತೀಯ ಪಿಯುಸಿ ಕನ್ನಡ ದ್ವಿರುಕ್ತಿಗಳು, 2nd Puc Kannada Dvirukthigalu dvirukti padagalu kannada ದ್ವಿರುಕ್ತಿ ಪದಗಳು pdf dvirukti padagalu in kannada 2nd Puc Kannada Grammer pdf in Kannada 2nd Puc Kannada Dvirukthigalu notes 2nd Puc Kannada Dvirukthigalu pdf Download 2nd Puc Kannada Dvirukthigalu Grammer Pdf ದ್ವಿರುಕ್ತಿ meaning in kannada ದ್ವಿರುಕ್ತಿ ಪದಗಳು examples ದ್ವಿರುಕ್ತಿ ಪದಗಳು 100 pdf Download in kannada medium dwirukthi galu dvirukti padagalu in kannada

ದ್ವಿರುಕ್ತಿಗಳು

Dvirukthigalu

ಈ ಕೆಳಗಿನ ದ್ವಿರುಕ್ತಿಗಳನ್ನು ಕೂಡಿಸಿ ಬರೆಯಲು ಪ್ರಯತ್ನಿಸಿ:

೧. ಬಯಲು + ಬಯಲು =ಬಟ್ಬಬಯಲು
೨. ನುರಿ + ನುರಿ =ನುಗ್ಗುನುರಿ
೩. ಬಡಿ + ಬಡಿ = ಬಗ್ಗುಬಡಿ
೪. ತುದಿ + ತುದಿ =ತುತ್ತತುದಿ
೫. ಕೊನೆಗೆ + ಕೊನೆಗೆ = ಕೊನೆಕೊನೆಗೆ
೬. ಮಧ್ಯಾಹ್ನ + ಮಧ್ಯಾಹ್ನ = ಮಟ್ಟಮಧ್ಯಾಹ್ನ
೭. ಹಸಿರು + ಹಸಿರು = ಅಚ್ಚಹಸಿರು
೮. ಕುದಿ + ಕುದಿ = ಕುದಿಕುದಿದು
೯. ಹೊಸದು + ಹೊಸದು =ಹೊಚ್ಚಹೊಸದು
೧೦. ಕೆಳಗೆ + ಕೆಳಗೆ =ಕೆಳಕೆಳಗೆ

ಪರೀಕ್ಷೆಯಲ್ಲಿ ಎರಡು ಅಂಕಗಳಿಗೆ ದ್ವಿರುಕ್ತಿ ಅಥವಾ ನುಡಿಗಟ್ಟುಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಲು ಕೇಳಲಾಗುವುದು. ದ್ವಿರುಕ್ತಿಗಳನ್ನು ಅರ್ಥಪೂರ್ಣವಾಗಿ ಬಳಸಿ ವಾಕ್ಯಗಳನ್ನು ರಚಿಸುವುದನ್ನು ಅಭ್ಯಾಸ ಮಾಡಬೇಕು. ಈ ಕೆಳಕಂಡ ದ್ವಿರುಕ್ತಿಗಳನ್ನು ಸ್ವಂತ ವಾಕ್ಯದಲ್ಲಿ ಪ್ರಯೋಗಿಸಿ

೧. ಬೇಗಬೇಗ : ತರಗತಿಗೆ ತಡವಾಗುವುದೆಂದು ಬೇಗಬೇಗನೆ ಹೆಜ್ಜೆ ಹಾಕಿದೆವು.

೨. ಮೆಲ್ಲಮೆಲ್ಲನೆ : ಆಹಾರವನ್ನು ಮೆಲ್ಲಮೆಲ್ಲನೆ ಆಗಿದು ತಿನ್ನಬೇಕು.

೩. ಓಡೋಡಿ : ಆಕೆ ಬಸ್ಸಿಗೆ ತಡವಾಗುವುದೆಂದು ಓಡೋಡಿ ಹೋದಳು.

೪. ನಡೆನಡೆದು : ಬಿಸಿಲಿನಲ್ಲಿ ನಡೆನಡೆದು ಆಯಾಸವಾಯಿತು.

೫. ಪರಿಪರಿಯಾಗಿ : ಪರಿಪರಿಯಾಗಿ ಬೇಡಿದರೂ ಅವನ ಮನಸ್ಸು ಕರಗಲಿಲ್ಲ.

೬. ಹೌದುಹೌದು : ಉಪನ್ಯಾಸಕರ ವಿಚಾರಧಾರೆಗೆ ಪ್ರೇಕ್ಷಕರು ಹೌದುಹೌದು ಎಂದು ತಲೆದೂಗಿದರು.

೭. ನೋಡುನೋಡು : ನೋಡುನೋಡುತ್ತಿರುವಂತೆ ವರ್ಷ ಕಳೆದೇಹೋಯಿತು.

೮. ನಲಿನಲಿದು : ಬಾಲ್ಯದಲ್ಲಿ ನಲಿನಲಿದು ಆಡಿದ ನೆನಪು ಸದಾ ಬರುತ್ತದೆ.

೯. ಕುಣಿಕುಣಿದು : ಹಸುವನ್ನು ನೋಡಿದ ಕರು ಕುಣಿಕುಣಿದು ಓಡಿಬಂದಿತು.

೧೦. ತುತ್ತತುದಿ : ಯಶಸ್ಸಿನ ತುತ್ತತುದಿಗೆ ವಿರಬೇಕಾದರೆ ಸಾಧನೆ ಅತಿ ಮುಖ್ಯ.

೧೧. ಆಗಲಿಆಗಲಿ : ನನ್ನ ಮಾತಿಗೆ ಆತ ಆಗಲಿಆಗಲಿ ಎಂದು ತಲೆ ಆಡಿಸಿದನು.

೧೨. ಬಿದ್ದೂಬಿದ್ದೂ : ನಗೆಹನಿ ಓದಿದಾಗ ಬಿದ್ದೂ ಬಿದ್ದೂ ನಗುತ್ತೇವೆ.

೧೩. ನಡುನಡುವೆ : ಕಥೆ ಹೇಳುವಾಗ ನಡುನಡುವೆ ಮಾತಾಡಿ ಅಡ್ಡಿಪಡಿಸಬಾರದು.

೧೪, ಹಳೆಹಳೆಯ : ತುಂಬಾ ಹಳೆಹಳೆಯ ಚಿತ್ರಗಳನ್ನು ಮ್ಯೂಸಿಯಂನಲ್ಲಿ ಪ್ರದರ್ಶಿಸಿದ್ದರು.

೧೫. ಬರೆಬರೆದು : ಬರೆಬರೆದು ಓದುವ ಅಭ್ಯಾಸ ಒಳ್ಳೆಯದು.

ಹೆಚ್ಚುವರಿ ಪ್ರಶ್ನೆಗಳು:

೧. ದೊಡ್ಡದೊಡ್ಡ : ವನದಲ್ಲಿ ದೊಡ್ಡದೊಡ್ಡ ಮರಗಳು ಇವೆ.

೨. ನಿಲ್ಲುನಿಲ್ಲು : ಓಡುತ್ತಿದ್ದ ಮಗುವಿಗೆ ತಾಯಿ ನಿಲ್ಲು ನಿಲ್ಲು ಎಂದು ಕೂಗಿದಳು.

೩. ಹೆಚ್ಚುಹೆಚ್ಚು : ಕೀರ್ತಿವಂತರಾಗಲು ಹೆಚ್ಚುಹೆಚ್ಚು ಸಾಧನೆ ಮಾಡುವುದು ಅಗತ್ಯ.

೪. ಮನೆಮನೆ : ಭಿಕ್ಷುಕ ಭಿಕ್ಷೆಗಾಗಿ ಮನೆಮನೆ ತಿರುಗುತ್ತಿದ್ದ.

೫. ಬನ್ನಿಬನ್ನಿ : ಅತಿಥಿಗಳು ಮನೆಗೆ ಬಂದಾಗ ಬನ್ನಿಬನ್ನಿ ಎಂದು ಸ್ವಾಗತಿಸುತ್ತೇವೆ.

೬. ಅಬ್ಬಬ್ಬಾ : ಅಬ್ಬಬ್ಬಾ ಎಷ್ಟು ದೊಡ್ಡ ನಾಗರಹಾವನ್ನು ನೋಡಿದೆ!

೭. ಬೇಡಬೇಡ : ಬೇಡಬೇಡವೆಂದರೂ ಅಮ್ಮ ಹೊಟ್ಟೆತುಂಬಾ ಊಟ ಮಾಡಿಸಿದರು.

೮. ನಕ್ಕೂನಕ್ಕೂ : ನಗೆಹನಿಯನ್ನು ಓದಿ ನಕ್ಕೋನಕ್ಕೂ ಸಾಕಾಯಿತು.

೯. ಚಿಕ್ಕಚಿಕ್ಕ : ಚಿಕ್ಕಚಿಕ್ಕ ಮಕ್ಕಳು ಬಣ್ಣಬಣ್ಣದ ವೇಷಧರಿಸಿ ಸಂಭ್ರಮಿಸಿದರು.

೧೦. ಬಟ್ಟಬಯಲು : ಆಟದ ಮೈದಾನವು ಉರಾಚೆಯ ಬಟ್ಟಬಯಲಿನಲ್ಲಿದೆ.

೧೧. ನುಗ್ಗುನುರಿ : ಕುಸ್ತಿಪಟುವು ಎದುರಾಳಿಯನ್ನು ನುಗ್ಗುನುರಿ ಮಾಡಿದನು.

೧೨. ಬಗ್ಗುಬಡಿ : ಶತ್ರುಗಳನ್ನು ಬಗ್ಗುಬಡಿದು ದೇಶವನ್ನು ರಕ್ಷಿಸುವುದು ದೇಶಭಕ್ತಿಯ ಪ್ರತೀಕ.

೧೩. ಕೊನೆಕೊನೆಗೆ : ಕೊನೆಕೊನೆಗೆ ಊಟಕ್ಕೆ ಕುಳಿತವರಿಗೆ ಪಲ್ಯವೇ ಇರಲಿಲ್ಲ.

೧೪. ಕಟ್ಟಕಡೆಗೆ : ಕಟ್ಟಕಡೆಯ ಬಾರಿಗೆ ತವರನ್ನು ಕಣ್ಣಲ್ಲಿ ತುಂಬಿಕೊಂಡು ಹೆಣ್ಣು ಹೊರಟಳು.

೧೫. ಮಟ್ಟಮಧ್ಯಾಹ್ನ : ಸೂರ್ಯನು ನೆತ್ತಿಗೇರುವಾಗ ಮಟ್ಟ ಮಧ್ಯಾಹ್ನವಾಗಿತ್ತು.

೧೬. ಹಚ್ಚಹಸಿರು : ನಿತ್ಯಹರಿದ್ವರ್ಣದ ಕಾಡಿನಿಂದಾಗಿ ಅಂಡಮಾನ್ ಹಚ್ಚಹಸಿರಾಗಿ ಮೆರೆಯುತ್ತಿದೆ.

೧೭. ಕುದಿಕುದಿದು : ಭೀಮನು ಕೀಚಕನ ವಿಚಾರದಲ್ಲಿ ಒಳಗೇ ಕುದಿಕುದಿದು ನರಳಿದನು.

೧೮. ಕೆಳಕೆಳಗೆ : ನದಿಯ ನೀರು ಜೋಗದಲ್ಲಿ ಕೆಳಕೆಳಗೆ ಧುಮ್ಮಿಕ್ಕಿ ಹರಿಯುತ್ತವೆ.

೧೯. ಮೊತ್ತಮೊದಲು : ನೂರುಮೀಟರ್ ಓಟದಲ್ಲಿ ಮೊತ್ತಮೊದಲಿಗನಾಗಿ ಗುರಿ ತಲುಪಿದೆ.

೨೦. ಸಹಸ್ರಸಹಸ್ರ : ಮಹಾಮಸ್ತಾಕಾಭಿಷೇಕಕ್ಕೆ ಜನ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದರು.

೨೧. ಹೆಜ್ಜೆಹೆಜ್ಜೆ : ಹಿರಿಯರ ಅನುಭವದ ಮಾತುಗಳು ನಮ್ಮ ಹೆಜ್ಜೆಹೆಜ್ಜೆಗೂ ದಾರಿದೀಪವಾಗುತ್ತದೆ.

೨೨. ಹೊಚ್ಚಹೊಸದು : ಸಿನಿಮಾ ನಟನೆಯು ನನಗೆ ಹೊಚ್ಚಹೊಸ ಅನುಭವವಾಗಿತ್ತು.

೨೩. ಒಳ್ಳಿತೊಳ್ಳಿತು : ಗುರುಗಳು ನನ್ನ ಅಭಿವೃದ್ಧಿಯ ವಿಚಾರ ತಿಳಿದು ಒಳ್ಳೆತೊಳ್ಳಿತಾಗಲೆಂದು ಹರಸಿದರು.

೨೪. ಲೇಸುಲೇಸು : ಮಾಂಸಾಹಾರಕ್ಕಿಂತ ಸಸ್ಯಹಾರವೇ ಲೇಸುಲೇಸೆಂದು ಸವಿದು ಆನಂದಿಸಿದೆವು.

೨೫. ತಡೆತಡೆ : ಅವಸರದಲ್ಲಿ ಹೆಜ್ಜೆಹಾಕುವುದನ್ನು ಕಂಡ ನನ್ನ ಗೆಳೆಯ ತಡೆತಡೆ, ನಿಧಾನವಾಗಿ ನಡೆ ಎಂದನು

Leave a Comment