ದ್ವಿತೀಯ ಪಿಯುಸಿ ಕನ್ನಡ ಕೃಷ್ಣೇಗೌಡನ ಆನೆ ನೋಟ್ಸ್, 2nd Puc Kannada Krishnegowdana Aane Notes Krishnegowdana Aane question and answer krishnegowdana aane notes pdf download krishnegowdana aane notes kannada pdf free download krishnegowdana aane story in kannada ಕೃಷ್ಣೇಗೌಡನ ಆನೆ ವಿಮರ್ಶೆ krishnegowdana aane class 12 notes ಕೃಷ್ಣೇಗೌಡನ ಆನೆ question answer ಕೃಷ್ಣೇಗೌಡನ ಆನೆ mcq questions Krishnegowdana aane summary in Kannada ಕೃಷ್ಣೇಗೌಡನ ಆನೆ ನಾಟಕ 2nd puc krishnegowdana aane story in kannada
ದೀರ್ಘ ಗದ್ಯ
ಕೃಷ್ಣೇಗೌಡನ ಆನೆ
– ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ಲೇಖಕರ ಪರಿಚಯ:
ಶ್ರೀಯುತ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಕನ್ನಡದ ಶ್ರೇಷ್ಠ ಕಥೆಗಾರರು. ಜನಿಸಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ (1938), ತಂದೆ ಕುವೆಂಪು, ತಾಯಿ ಹೇಮಾವತಿ, ಮೈಸೂರು ಮತ್ತು ಶಿವಮೊಗ್ಗಗಳಲ್ಲಿ ವಿದ್ಯಾಭ್ಯಾಸ ನಡೆಸಿದರು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸಮೀಪದಲ್ಲಿ ಕಾಫಿ ತೋಟ ಮಾಡಿಕೊಂಡು ಬರವಣಿಗೆ, ಶಿಕಾರಿ, ಛಾಯಾಗ್ರಹಣ, ಪುಸ್ತಕ ಪ್ರಕಾಶನ ಮುಂತಾದ ವೃತ್ತಿಗಳಲ್ಲಿ ತೊಡಗಿಕೊಂಡಿದ್ದರು.
‘ಬೃಹನ್ನಳೆ, ಸೋಮುವಿನ ಸ್ವಗತಲಹರಿ’ (ಕವಿತೆ), ‘ಯಮಳ ಪ್ರಶ್ನೆ’ (ನಾಟಕ), ‘ಹುಲಿಯೂರಿನ ಸರಹದ್ದು’, ‘ಅಬಚೂರಿನ ಪೋಸ್ಟಾಫೀಸು’, ‘ಕಿರುಗೂರಿನ ಗಯ್ಯಾಳಿಗಳು’, ‘ಪಾಕಕ್ರಾಂತಿ ಮತ್ತು ಇತರ ಕತೆಗಳು’ (ಸಣ್ಣಕಥೆಗಳು), ‘ಕರ್ವಾಲೋ’, ‘ಸ್ವರೂಪ’, ‘ನಿಗೂಢ ಮನುಷ್ಯರು’, ‘ಚಿದಂಬರ ರಹಸ್ಯ’, ‘ಜುಗಾರಿಕ್ರಾಸ್’, ‘ಮಾಯಾಲೋಕ-1’, ‘ಕಾಡು ಮತ್ತು ಕ್ರೌರ’ (ಕಾದಂಬರಿಗಳು) ಇವುಗಳೊಂದಿಗೆ ಅನೇಕ ಪರಿಸರ ಸಂಬಂಧಿ ಕೃತಿಗಳನ್ನು ತೇಜಸ್ವಿ ಕನ್ನಡಕ್ಕೆ ನೀಡಿದ್ದಾರೆ. ಇವರ ಸಣ್ಣಕತೆಗಳಾದ ‘ಅಬಚೂರಿನ ಪೋಸ್ಟಾಫೀಸು’, ‘ಕುಬಿ ಮತ್ತು ಇಯಾಲ’, ‘ತಬರನ ಕಥೆ’ಗಳು ಚಲನಚಿತ್ರಗಳಾಗಿವೆ. ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ, ಪಂಪಪ್ರಶಸ್ತಿ, ರಾಷ್ಟ್ರಪತಿ ಸ್ವರ್ಣಕಮಲ ಪ್ರಶಸ್ತಿಗಳನ್ನು ತೇಜಸ್ವಿ ಪಡೆದಿದ್ದಾರೆ. ಭಾರತದ ಬಹುತೇಕ ಭಾಷೆಗಳಿಗೆ ಇವರ ಕೃತಿಗಳು ಅನುವಾದಗೊಂಡಿದೆ. ತೇಜಸ್ವಿ 2007ರಲ್ಲಿ ನಿಧನರಾದರು.
ಆಕರ: ‘ಕಿರುಗೂರಿನ ಗಯ್ಯಾಳಿಗಳು’.
ಸಾಂದರ್ಭಿಕ ವಿವರಣೆಯನ್ನು ಬಯಸುವ ವಾಕ್ಯಗಳು
೧. ನಮ್ಮ ಕಡೆ ಕೆಮ್ಮು ಕಾಲಿಂಗ್ ಬೆಲ್ ಇದ್ದಹಾಗೆ,
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಕೃಷ್ಣೇಗೌಡನ ಆನೆ’ ಕಥೆಯ ಮೊದಲ ಅಧ್ಯಾಯದ ಆರಂಭದಲ್ಲಿ ಬರುವ ವಾಕ್ಯವಿದು.
ನಿರೂಪಕರು ಜೀಪಿನ ಅಡಿ ಮಲಗಿ ರಿಪೇರಿ ಕೆಲಸದಲ್ಲಿ ತೊಡಗಿರುವಾಗ ಅಲ್ಲಿಗೆ ಬಂದ ಎಲೆಕ್ಟ್ರಿಕ್ ಲೈನ್‌ಮನ್ ದುರ್ಗಪ್ಪ ನಿರೂಪಕರ ಗಮನ ಸೆಳೆಯಲು ಒಂದೆರಡು ಬಾರಿ ಕಮ್ಮಿದನು. ಆ ಸಂದರ್ಭದಲ್ಲಿ ನಿರೂಪಕರು ಈ ಮೇಲಿನ ವಾಕ್ಯವನ್ನಾಡಿದ್ದಾರೆ. ಮನೆ ಬಳಿ ಯಾರೂ ಕಣ್ಣಿಗೆ ಬೀಳದಿದ್ದಾಗ ಅಲ್ಲಿಗೆ ಬಂದವರು ಕಮ್ಮಿ-ಕ್ಯಾಕರಿಸಿ ಗಲಾಟೆ ಮಾಡಿ ಮನೆಯವರ ಗಮನ ಸೆಳೆಯಲು ಪ್ರಯತ್ನಿಸುವುದನ್ನು ನಿರೂಪಕರು “ನಮ್ಮ ಕಡೆ ಕೆಮ್ಮು ಕಾಲಿಂಗ್ ಬೆಲ್ ಇದ್ದಹಾಗೆ” ಎಂದು ವಿವರಿಸಿದ್ದಾರೆ.
೨. ಆನೆ ಸಾಕುವುದು ಎಂದರೆ ಎಲೆಕ್ಷನ್ನಿಗೆ ನಿಂತ ಹಾಗೆ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.
ಕೃಷ್ಣೇಗೌಡ ಎಲ್ಲ ತರಹದ ವ್ಯವಹಾರಗಳಲ್ಲೂ ನಷ್ಟ ಅನುಭವಿಸಿದ್ದನ್ನು ಊರ ಜನ ಬಲ್ಲವರಾಗಿದ್ದರು. ಆತ ಗೂಳೂರು ಮಠದಿಂದ ಆನೆಯನ್ನು ಕರೆತಂದಾಗ ಇಲ್ಲಿಗೆ ಆತನ ಕಥೆ ಮುಗಿದಂತೆಯೇ ಎಂದು ಎಲ್ಲರೂ ಭಾವಿಸಿದರು. ಏಕೆಂದರೆ ಆನೆ ಸಾಕುವುದು ಎಂದರೆ ಎಲೆಕ್ಷನ್ನಿಗೆ ನಿಂತ ಹಾಗೆಯೇ! ಮನೆ ಮಠ ಸಂಪೂರ್ಣ ಹಾಳುಮಾಡಿಕೊಂಡು ಹೆಂಡತಿ ಮಕ್ಕಳ ಬಾಯಿಗೆ ಮಣ್ಣು ಹಾಕುವ ಹತ್ತಿರದ ದಾರಿಯಿದೆಂದು ಎಲ್ಲರೂ ನಂಬಿದ್ದರು. ಆದರೆ ಅವರ ನಂಬಿಕೆ ಸುಳ್ಳಾಗುವಂತೆ ಕೃಷ್ಣೇಗೌಡ ಆನೆ ತಂದ ಮೇಲೆ ಶ್ರೀಮಂತನಾಗುತ್ತಾ ನಡೆದ.
೩. ಆನೆಗೂ ಮಾನ ಮರ್ಯಾದೆ ಇರುತ್ತೆ ತಿಳುಕೋ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಲ್ಲಿ ಜನರು ರೆಹಮಾನನಿಗೆ ಹೇಳುವ ಮಾತಿದು. ರೆಹಮಾನನ ಅಂಗಡಿಯನ್ನು ಆನೆ ದೂಡಿ ಬೀಳಿಸಲು ಕಾರಣ ಆತ ಆನೆಯ ಮರ್ಮಕ್ಕೆ ತಾಗುವಂತೆ ಬೈಯ್ದದೆಂದು ರೆಹಮಾನನ ಹೆಂಡತಿ ಜುಬೇದಾಳು ಎಲ್ಲರೆದುರಿಗೆ ಸಾಕ್ಷಿ ನುಡಿದಾಗ, ಜನರೆಲ್ಲಾ ಆನೆಯನ್ನು ಬೈಯ್ದ ರೆಹಮಾನನ್ನುದ್ದೇಶಿಸಿ “ಆನೆಗೂ ಮಾನ ಮರ್ಯಾದೆ ಇರುತ್ತೆ ತಿಳಿದುಕೋ” ಎಂದು ಬೈಯ್ದರಲ್ಲದೆ, ಆನೆಗೂ ಒಂದು ವ್ಯಕ್ತಿತ್ವವನ್ನು ಆರೋಪಿಸಿದರೆಂದು ನಿರೂಪಕರು ಹೇಳಿದ್ದಾರೆ.
೪. “ನನ್ನ ಕೊಡಲಿ ಯಾಕೆ ತಂದು ಆಫೀಸಿನಲ್ಲಿ ಇಡ್ಕೊಂಡಿದ್ದೀರ?”
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಲ್ಲಿ ನಿರೂಪಕರು ಫಾರೆಸ್ಟರ್ ನಾಗರಾಜನನ್ನು ಈ ಮೇಲಿನಂತೆ ಕೇಳುವರು.
ದುರ್ಗಪ್ಪ ಮರ ಕಡಿಯುತ್ತಿದ್ದನೆಂದು ಅವನ ಕೊಡಲಿಯನ್ನು ಅರಣ್ಯ ಇಲಾಖೆಯವರು ಕಿತ್ತುತಂದಿಟ್ಟುಕೊಂಡಿದ್ದರು. ಕೊಡಲಿಯು ವಾಸ್ತವವಾಗಿ ನಿರೂಪಕರದ್ದಾದ್ದರಿಂದ ಅವರು ದುರ್ಗಪ್ಪನಿಂದ ವಿಚಾರ ತಿಳಿದು, ಮೊದಲೇ ನಿರೂಪಕರಿಗೆ ಇಂಥ ತರಲೆ ಕೇಸುಗಳ ಜಾಡು ತಿಳಿದು ವಿಷಯ ತಿಳಿದುಕೊಳ್ಳುವ ಕೆಟ್ಟ ಕುತೂಹಲವಿದ್ದುದರಿಂದ ಕೊಡಲಿಯ ಮೇಲೆ ವ್ಯಾಮೋಹವಿರದಿದ್ದರೂ ನಾಗರಾಜನ ಬಳಿ ಬಂದರು. ಬಂದವರೆ “ಅಲ್ಲ ನಾಗರಾಜ್ ನಿಮ್ಮ ಡಿಪಾರ್ಟ್ ಮೆಂಟಿನ ಮರ ಕಡಿದರೆ ನೀವು ಅವನ ಮೇಲೆ ಕ್ರಮ ತಗೊಳ್ಳಿ, ಆದರೆ ನನ್ನ ಕೊಡಲಿ ಯಾಕೆ ತಂದು ಆಫೀಸಿನಲ್ಲಿ ಇಡ್ಕೊಂಡಿದ್ದೀರಾ?” ಎಂದು ಕೇಳಿದ ಸಂದರ್ಭವಿದಾಗಿದೆ.
೫. ವೆಪನ್ ಸಾರ್, ವೆಪನ್ ನಮಗೆ ಮುಖ್ಯ.
ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಲ್ಲಿ ಫಾರೆಸ್ಟರ್ ನಾಗರಾಜ ನಿರೂಪಕರಿಗೆ ಈ ಮೇಲಿನ ಮಾತನ್ನು ಹೇಳುವನು.
ನಿರೂಪಕರು ಫಾರೆಸ್ಟರ್ ನಾಗರಾಜನ ಕಚೇರಿಗೆ ಬಂದು ಮರಕಡಿದವನ ಮೇಲೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು ನನ್ನ ಕೊಡಲಿ ತಂದು ಆಫೀಸಿನಲ್ಲಿಟ್ಟುಕೊಂಡಿರುವುದೇಕೆಂದು ಕೇಳಿದರು. ಅದಕ್ಕೆ ಉತ್ತರಿಸುತ್ತಾ ನಾಗರಾಜನು “ವೆಪನ್ ಸಾರ್, ವೆಪನ್ ನಮಗೆ ಮುಖ್ಯ’ ಎಂದು ಹೇಳಿ, ಕೋರ್ಟಿನಲ್ಲಿ ಅಪರಾಧಿಯು ಯಾವುದರಿಂದ ಮರ ಕಡಿಯುತ್ತಿದ್ದನೆಂದು ಪ್ರಶ್ನಿಸಿದರೆ ಹಾಜರುಪಡಿಸಲು ವೆಪನ್ ಮುಖ್ಯವಾದುದರಿಂದ ತಾನು ದುರ್ಗಪ್ಪನ ಕೊಡಲಿಯನ್ನು ಕಿತ್ತಿಟ್ಟು ಕೊಂಡಿರುವೆನೆಂದು ತಿಳಿಸಿದನು. ಅಲ್ಲದೆ, ಇಂತಹ ಕಾನೂನುಬಾಹಿರ ಅಪರಾಧಕ್ಕೆ ಕೊಡಲಿ ಕೊಟ್ಟುದೇಕೆಂದು ನಿರೂಪಕರನ್ನೇ ಪ್ರಶ್ನಿಸಿದರು.
೬. ನಿನ್ನ ಪುಕಾರೇನಿದ್ರೂ ಬರವಣಿಗೇಲಿ ಇರಬೇಕು.
ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದ್ದು, ಫಾರೆಸ್ಟರ್ ನಾಗರಾಜನು ದುರ್ಗಪ್ಪನಿಗೆ ಇದನ್ನು ಹೇಳಿದನು.
ನಾಗರಾಜ ಮರಕಡಿಯುತ್ತಿದ್ದ ಅಪರಾಧಕ್ಕೆ ದುರ್ಗಪ್ಪನನ್ನು ಲಾಕಪ್ಪಿಗೆ ಹಾಕಿಸುವೆನೆಂದು ಹೆದರಿಸಿದಾಗ ದುರ್ಗಪ್ಪ ತಾನು ಮರ ಕಡಿದಿಲ್ಲವೆಂದೂ, ಕೃಷ್ಣೇಗೌಡನ ಆನೆ ಮುರಿದು ಬೀಳಿಸಿದ್ದೆಂದೂ ಹಳೇ ಪ್ರವರವನ್ನು ಪುನರಾವರ್ತನೆ ಮಾಡಿದನು. ಅವನು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಿರುವುದನ್ನು ಕೇಳಿ ನಾಗರಾಜನಿಗೆ ರೇಗಿ ಹೋಯಿತು. ಆಗ ಅವನು ದುರ್ಗಪ್ಪ ತನ್ನ ಹೇಳಿಕೆಯನ್ನು ಬರೆದುಕೊಡಬೇಕೆಂದೂ, ಬರವಣಿಗೆಯಲ್ಲಿದ್ದರೆ ಮಾತ್ರ ತಾನು ಆನೆಯ ಮೇಲೆ ಕ್ರಮ ಕೈಗೊಳ್ಳಬಹುದೆಂದೂ ತಿಳಿಸಿದ ಸಂದರ್ಭವಿದಾಗಿದೆ.
೭. ಡ್ರೈವರಣ್ಣ ಎತ್ಲಾಗಿ ಹೋದ! ಇಲ್ಲೇ ಇದ್ನಲ್ಲ!
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.
ಶಿವೇಗೌಡರ ಸಾಮಿಲ್ಲಿನಲ್ಲಿ ವೇಲಾಯುಧ ಮತ್ತು ಆನೆ ಇಬ್ಬರೂ ಪಾನಮತ್ತರಾಗಿದ್ದ ನಿಮಿತ್ತ ಲಾರಿ ಮತ್ತು ನಾಟಾಗಳಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚದೆ ಇದ್ದ ಲಾರಿಯನ್ನು ಆನೆ ವೇಲಾಯುಧನ ಆದೇಶದಂತೆ ತಳ್ಳಿ ಬೀಳಿಸಿತು. ಲಾರಿ ಧಡಾರನೆ ಬಿತ್ತ ಸದ್ದು ಕೇಳಿ ಶಿವೇಗೌಡರು ಮತ್ತು ಲಾರಿ ಕ್ಲೀನರ್ ಎಲ್ಲರೂ ಓಡಿ ಬಂದು ಉರುಳಿ ಬಿದ್ದಿರುವ ಲಾರಿ ನೋಡಿ ಕಂಗಾಲಾಗಿ ಹೋಗುವರು. ಆದರೆ ಕ್ಲೀನರ್ ಹಗ್ಗ ಬಿಚ್ಚುವ ಬದಲು ಯಾರನ್ನೋ ಹುಡುಕುತ್ತಿರುವುದು ಕಂಡು ಏನೆಂದು ಕೇಳಿದಾಗ, ಆತ “ಡ್ರೈವರಣ್ಣ ಎತ್ಲಾಗಿ ಹೋದ! ಇಲ್ಲೇ ಇದ್ದನಲ್ಲ” ಎಂದು ಗೊಣಗಿದ. ಆನಂತರವಷ್ಟೇ ಲಾರಿಯೊಳಗೆ ಸತ್ತುಬಿದ್ದಿದ್ದ ಡ್ರೈವರನ ಪತ್ತೆಯಾಗುವುದು.
೮. ಕುಶಾಲಿಗಂತ ಸೊಂಡಿಲು ಬೀಸಿದರೆ ಸಾಕಲ್ಲ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಕೃಷ್ಣೇಗೌಡನ ಆನೆ’ ಎಂಬ ನೀಳತೆಯಿಂದ ಆಯ್ದಿರುವ ಈ ಮೇಲಿನ ವಾಕ್ಯವನ್ನು ದುರ್ಗಪ್ಪ ನಿರೂಪಕರ ಬಳಿ ಹೇಳುವನು.
ಕೊಡಲಿ ಹಿಂದಿರುಗಿಸಲು ನಿರೂಪಕರ ಮನೆಗೆ ಬಂದಿದ್ದ ದುರ್ಗಪ್ಪ ಶಿವೇಗೌಡ ಮತ್ತು ಕೃಷ್ಣೇಗೌಡ ಇಬ್ಬರೂ ಸೇರಿ ಡ್ರೈವರ್‌ನ ಸಾವಿನ ಸುದ್ದಿಯನ್ನು ಮುಚ್ಚಿಹಾಕಿದ ಸಂಗತಿಯನ್ನು ತಿಳಿಸಿದನಲ್ಲದೆ, ಷರಾಬು ಕುಡಿದು ಡ್ರೈವರ್‌ನ ಸಾವಿಗೆ ಕಾರಣವಾದ ಕೃಷ್ಣೇಗೌಡನ ಆನೆಯನ್ನು ಮನಸಾರೆ ಶಪಿಸಿದನು. ಆ ಸಂದರ್ಭದಲ್ಲಿ “ಆ ಆನೆಗೆ ಹೆಂಡ ಕುಡಿಸಿದರೆ ಹೇಗಾಗಬಹುದು ಹೇಳಿ, ಮಕ್ಕಳು ಮರಿ ಓಡಾಡೋ ಜಾಗದಲ್ಲಿ ಕುಶಾಲಿಗಿಂತ ಸೊಂಡಿಲು ಬೀಸಿದರೆ ಸಾಕಲ್ಲ. ನಮ್ಮಂತೋರು ನಮಃಶಿವಾಯ ಅನ್ನೋದಕ್ಕೆ” ಎಂದು ತನ್ನ ಆತಂಕವನ್ನು ದುರ್ಗಪ್ಪ ನಿರೂಪಕರಿಗೆ ತಿಳಿಸಿದನು.
೯. ಹದಿನಾಲ್ಕು ಇಂಜೆಕ್ಷನ್ ಹೊಟ್ಟೆಗೆ ಚುಚ್ಚಿಸ್ಕೋತೀನಿ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.
ಜಬ್ಬಾರ್ ತನಗೆ ನಾಯಿಕಚ್ಚಿರುವ ವಿಷಯವನ್ನು ನಿರೂಪಕರಿಗೆ ತಿಳಿಸುತ್ತಾ ಈ ಮೇಲಿನ ಮಾತನ್ನು ಹೇಳಿದ್ದಾನೆ. ಪೋಸ್ಟ್ ಕೊಡಲು ಹೋದಲ್ಲಿ ಎಲ್ಲರ ಮನೆ ಮುಂದೆಯೂ ನಾಲ್ಕು ನಾಲ್ಕು ನಾಯಿ ಮಲಗಿರುತ್ತದೆಂದೂ, ಪ್ರತಿ ವರ್ಷವೂ ಒಂದಲ್ಲ ಒಂದು ನಾಯಿ ತನಗೆ ಕಚ್ಚುವುದೆಂದೂ ಆತ ನಿರೂಪಕರಿಗೆ ತಿಳಿಸಿದನು, ಹುಚ್ಚು ಬಂದ ಮೇಲೆ ಅದಕ್ಕೆ ಔಷಧವೇ ಇಲ್ಲದ ಕಾರಣ ತಾನು ಹುಚ್ಚು ನಾಯಿಯಾಗಿರಲಿ, ಇಲ್ಲದಿರಲಿ ಅದು ಕಚ್ಚಿದ ಮೇಲೆ ಹದಿನಾಲ್ಕು ಇಂಜೆಕ್ಷನ್ ಹೊಟ್ಟೆಗೆ ಚುಚ್ಚಿಸಿಕೊಳ್ಳುವುದಾಗಿ ನಿರೂಪಕರ ಬಳಿ ಜಬ್ಬಾರ್ ಹೇಳಿಕೊಳ್ಳುವನು.
೧೦. ಕೃಷ್ಣೇಗೌಡರ ಆನೆಗೂ ಕಚ್ಚಿದೆ ಅಂತ ವರ್ತಮಾನ ಉಂಟಪ್ಪ,
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.
ವೆಟರ್ನರಿ ಸ್ಟಾಕ್‌ಮನ್ ಪುಟ್ಟಯ್ಯ ನಿರೂಪಕರ ಬಳಿ ಮಾತನಾಡುತ್ತಾ ಒಂದು ಹುಚ್ಚು ನಾಯಿ ಏಳು ಜನಕ್ಕೆ, ಮತ್ತು ಹತ್ತಾರು ದನಗಳಿಗೆ ಕಚ್ಚಿರುವುದನ್ನು ತಿಳಿಸಿ, ಅವರಿಗೆಲ್ಲ ಇಂಜೆಕ್ಷನ್ ಸಪ್ಲೆಮಾಡಲಾಗದ ತನ್ನ ಅಸಹಾಯಕತೆಯನ್ನು ವಿವರಿಸುತ್ತಾನೆ. ಆನಂತರ ಕೃಷ್ಣೇಗೌಡರ ಆನೆಗೂ ಹುಚ್ಚುನಾಯಿ ಕಚ್ಚಿದೆಯೆಂಬ ವರ್ತಮಾನವಿರುವುದಾಗಿಯೂ ಒಂದು ವೇಳೆ ಅದನ್ನು ಇಂಜೆಕ್ಷನ್‌ಗೆ ಕರೆತಂದರೆ ಏನು ಮಾಡುವುದೆಂಬ ತನ್ನ ಕಳವಳ-ಚಿಂತೆಯನ್ನು ವ್ಯಕ್ತಪಡಿಸುವನು.
೧೧. ನಂಗೇನು ಈ ನಾಯಿಗಳನ್ನು ಕಂಡರೆ ಪ್ರೀತೀನಾ ಸ್ವಾಮಿ!
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಲ್ಲಿ ಮುನ್ಸಿಪಾಲಿಟಿ ಅಧ್ಯಕ್ಷರಾದ ಖಾನ್ ಸಾಹೇಬರು ನಿರೂಪಕರನ್ನು ಉದ್ದೇಶಿಸಿ ಈ ಮೇಲಿನ ಮಾತನ್ನು ಹೇಳುತ್ತಾರೆ.
ನಿರೂಪಕರು ಮೂಡಿಗೆರೆಯಲ್ಲಿ ಬೀದಿನಾಯಿಗಳ ಕಾಟ ಹೆಚ್ಚಿರುವುದರಿಂದ ಈ ಬಗ್ಗೆ ವಿಚಾರಿಸಲು ಪುರಸಭೆಗೆ ಹೋಗುತ್ತಾರೆ. ಅಲ್ಲಿದ್ದ ಮುನ್ಸಿಪಾಲಿಟಿ ಅಧ್ಯಕ್ಷರಾದ ಖಾನ್ ಸಾಹೇಬರು ತಮ್ಮ ‘ನಾಯಿ ನಿರ್ಮೂಲನ’ ಕಾರ್ಯಕ್ರಮಗಳನ್ನು ವಿವರಿಸುವ ಮೊದಲು “ನಂಗೇನು ಈ ನಾಯಿಗಳನ್ನು ಕಂಡರೆ ಪ್ರೀತೀನಾ ಸ್ವಾಮಿ!” ಎಂದು ಪೀಠಿಕೆ ಹಾಕಿ ಆನಂತರ ತಾವು ಕೈಗೊಂಡ ಹಲವು ಯೋಜನೆಗಳನ್ನು ನಿರೂಪಕರಿಗೆ ವಿವರಿಸಿರುವ ಸಂದರ್ಭವಿದಾಗಿದೆ.
೧೨. ಹೊರಗಡೆಯಿಂದ ಇಲ್ಲಿಗೆ ಎಕ್ಸ್‌ಪೋರ್ಟ್ ಆದವು.
ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಲ್ಲಿ ಮುನ್ಸಿಪಾಲಿಟಿಯ ಪ್ರೆಸಿಡೆಂಟ್ ಈ ಮೇಲಿನ ಮಾತನ್ನು ನಿರೂಪಕರಿಗೆ ಹೇಳುವರು.
ನಿರೂಪಕರು ಮುನ್ಸಿಪಾಲ್ಟಿ ಪ್ರೆಸಿಡೆಂಟರಾದ ಖಾನ್ ಸಾಹೇಬರನ್ನು ಭೇಟಿ ಮಾಡಿ ಊರಿನಲ್ಲಿ ಹೆಚ್ಚಿರುವ ಕಂತ್ರಿನಾಯಿಗಳ ವಿಚಾರವನ್ನು ಪ್ರಸ್ತಾಪಿಸಿದರು. ಆಗ ಖಾನ್ ಸಾಹೇಬರು ಮೂಡಿಗೆರೆಯೊಳಗೆ ತುಂಬಾ ಕಂತ್ರಿ ನಾಯಿಗಳಿರೋದು ನಿಜ. ಆದರೆ ಅವೆಲ್ಲಾ ಇಲ್ಲಿಯ ನಾಯಿಗಳಲ್ಲ. ಯಾರೋ ಹೊರಗಡೆಯಿಂದ ಲಾರಿಯಲ್ಲಿ ನಾಯಿಗಳನ್ನು ತುಂಬಿಕೊಂಡು ಬಂದು ಇಲ್ಲಿ ರಾತ್ರೋರಾತ್ರಿ ಬಿಟ್ಟು ಹೋಗಿದ್ದಾರೆ ಎಂದು ದೂರಿದ ಸಂದರ್ಭವಿದಾಗಿದೆ.
೧೩. ಮುನಿಸಿಪಲ್ ಪ್ರೆಸಿಡೆಂಟಾಗಿ ಈ ಊರನ್ನು ಸ್ವಚ್ಛವಾಗಿಡೋದು ನಿಮ್ಮ ಕರ್ತವ್ಯ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಲ್ಲಿ ಮುನ್ಸಿಪಾಲಿಟಿಯ ಪ್ರೆಸಿಡೆಂಟ್ ಖಾನ್ ಸಾಹೇಬರಿಗೆ ನಿರೂಪಕರು ಈ ಮೇಲಿನ ಮಾತನ್ನು ತಿಳಿಸುವರು.
ಕಂತ್ರಿನಾಯಿಗಳು ಹೆಚ್ಚಾಗಿರುವ ಪ್ರಸ್ತಾಪವನ್ನು ಖಾನ್ ಸಾಹೇಬರು ಹಿಂದೂ-ಮುಸ್ಲಿಂ ಧರ್ಮದೊಂದಿಗೆ ಗಂಟುಹಾಕುತ್ತಿದ್ದಾರೆಂದು ನಿರೂಪಕರಿಗೆ ಅನ್ನಿಸಿತು. ತನ್ನ ಜವಾಬ್ದಾರಿ ಸರಿಯಾಗಿ ನಿರ್ವಹಿಸದೆ ಧರ್ಮಗಳ ಕಾರಣ ಕೊಡುತ್ತಿರುವ ಆತನಿಗೆ ಆತನ ಕರ್ತವ್ಯ ಪ್ರಜ್ಞೆಯನ್ನು ನೆನಪಿಸುತ್ತಾ ನಿರೂಪಕರು “ಖಾನ್ ಸಾಹೇಬ್ರೆ ನೀವು ಸಣ್ಣಪುಟ್ಟ ವಿಷಯ ಎಲ್ಲ ತಂದು ಧರ್ಮಕ್ಕೆ ಗಂಟುಹಾಕಿ ಸುಮ್ಮ ಸುಮ್ಮನೆ ಕಾಂಪ್ಲಿಕೇಟ್ ಮಾಡ್ತಿದ್ದೀರ. ಮುನ್ಸಿಪಲ್ ಪ್ರೆಸಿಡೆಂಟಾಗಿ ಈ ಊರನ್ನು ಸ್ವಚ್ಛವಾಗಿಡೋದು ನಿಮ್ಮ ಕರ್ತವ್ಯ” ಎಂದು ತಿಳುವಳಿಕೆ ಹೇಳಿದ ಸಂದರ್ಭವಿದು.
೧೪. ಕಂಬದ ಮೇಲೇ ಯಾಕೋ ಕೈಲಾಸ ಕಂಡಹಾಗೆ ಇದೆಯಲ್ಲಾ.
ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ.
ನುಗ್ಗೆಹಳ್ಳಿಯ ಟೆಲಿಫೋನ್ ಲೈನು ಸರಿಮಾಡಲು ಹೋದ ತಿಪ್ಪಣ್ಣನ ಸುದ್ದಿಯಿಲ್ಲದಾಗ, ರಮೇಶಬಾಬು ತಿಪ್ಪಣ್ಣನ ಸೋಮಾರಿತನವನ್ನು ಶಪಿಸುತ್ತಾ ಲೈನ್‌ಮನ್ ಶಂಕರಪ್ಪನನ್ನು ಕರೆದುಕೊಂಡು ನುಗ್ಗೆಹಳ್ಳಿ ಲೈನು ನೋಡುತ್ತಾ ಹೊರಟನು. ಅಲ್ಲಿ ಜಂಕ್ಷನ್ ಬಾಕ್ಸ್ ಇದ್ದ ಹದಿನೇಳನೇ ಕಂಬದ ಮೇಲೆ ಕುಳಿತಿದ್ದ ತಿಪ್ಪಣ್ಣನನ್ನು ಕಂಡ ಶಂಕರಪ್ಪ “ಏನ್ ಸಾರ್ ಇದೂ! ಏನಾಯ್ತು ಇವನಿಗೆ? ಕಂಬದ ಮೇಲೇ ಯಾಕೋ ಕೈಲಾಸ ಕಂಡಹಾಗೆ ಇದೆಯಲ್ಲಾ” ಎಂದು ಕಾತರ ಮತ್ತು ಕಳವಳದ ದನಿಯಲ್ಲಿ ಹೇಳಿದನು, ತಿಪ್ಪಣ್ಣ ನಿಜವಾಗಿಯೂ ಕಂಬದ ಮೇಲೆ ಕೈಲಾಸ ಕಂಡಿರುತ್ತಾನೆ.
೧೫. ಈ ಕಂಬದೊಳ್ಗೆ ಏನೋ ಸೇರ್ಕೊಂಡಿದೆ.
ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಲ್ಲಿ ಲೈನ್‌ಮನ್ ಶಂಕರಪ್ಪ ರಮೇಶಬಾಬುಗೆ ಈ ಮೇಲಿನ ವಾಕ್ಯವನ್ನು ಹೇಳುತ್ತಾನೆ.
ಕಂಬದ ಮೇಲೆ ಕುಳಿತಿರುವ ತಿಪ್ಪಣ್ಣನಿಗೆ ಜೀವವಿದ್ದಲ್ಲಿ ಆಸ್ಪತ್ರೆಗೆ ಸೇರಿಸುವ ಉದ್ದೇಶದಿಂದ ರಮೇಶಬಾಬು ಶಂಕರಪ್ಪನಿಗೆ ಕಂಬ ಹತ್ತಿ ನೋಡಲು ಸೂಚಿಸುತ್ತಾನೆ. ಶಂಕರಪ್ಪ ಅರ್ಧಕಂಬ ಹತ್ತುವಷ್ಟರಲ್ಲಿ ಅವನ ಕೈಕಾಲೆಲ್ಲ ಜುಮ್ಮೆಂದು, ಜೀವ ನಡುಗಿದಂತಾಗಿ ಜಾರಿ ಕೆಳಗೆ ಬಿದ್ದನು. ಅವನ ಬಳಿ ಓಡಿ ಬಂದ ರಮೇಶಬಾಬು ಏನಾಯ್ತೆಂದು ವಿಚಾರಿಸಿದಾಗ ಶಂಕರಪ್ಪ “ಇದ್ದಿದ್ದಂಗೆ ಶಿಡ್ಲು ಹೊಡೆದಂಗಾಯ್ತು ಸಾರ್, ಈ ಕಂಬದೊಳೆ ಏನೋ ಸೇರ್‌ಕೊಂಡಿದೆ” ಎಂದು ಭೂತದರ್ಶನವಾದವನಂತೆ ತೊದಲಿದನು. ಎಲೆಕ್ಟ್ರಿಕ್ ಲೈನು ಟೆಲಿಫೋನ್ ಲೈನಿಗೆ ತಗಲುತ್ತಿರುವುದೆಂಬ ಅರಿವು ಶಂಕರಪ್ಪನಿಗಾಗದೆ, ಆತ ಕಂಬದಲ್ಲಿ ಭೂತ ಪಿಶಾಚಿ ಸೇರಿಕೊಂಡಿದೆ ಎಂದು ಯೋಚಿಸುತ್ತಾನೆ. ಅನುಭವಿಯಾದ ರಮೇಶಬಾಬುವಿಗೆ ನಡೆದಿರಬಹುದಾದ ಸಂಗತಿ ಅರ್ಥವಾಗುತ್ತದೆ.
೧೬. ಆನೆ ಬೇಲಿ ದಾಟಿ ಹೋಯ್ತು ಸಾರ್.
ತೇಜಸ್ವಿಯವರು ರಚಿಸಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಲ್ಲಿ ರಾಮಪ್ಪನು ನಾಗರಾಜನಿಗೆ ಈ ಮೇಲಿನಂತೆ ಹೇಳುವನು.
ಆನೆಗಾಗಿ ಕಾಯುತ್ತಾ ನಾಗರಾಜ ಕೃಷ್ಣೇಗೌಡರ ತೋಟದ ಬೇಲಿ ಮೂಲೆಯಲ್ಲಿ ಬಿಳಿ ಬೂರುಗದ ಮರದ ಕೆಳಗೆ ಶಿಕಾರಿಗಂಡಿಯಲ್ಲಿ ಕೋವಿ ಹಿಡಿದುಕೊಂಡು ಕುಳಿತಿದ್ದನು. ಆನೆ ಭಾರೀ ಪ್ರಾಣಿಯಾದರೂ ಸುಳಿವೇ ಕೊಡದೆ ತಂಗಾಳಿಯಂತ ಓಡಾಡಬಲ್ಲದೆಂಬುದನ್ನು ಆತ ಅನುಭವದಿಂದ ಬಲ್ಲವನಾಗಿದ್ದ. ಅಷ್ಟರಲ್ಲಿ ಅಲ್ಲಿಗೆ ಬಂದ ರಾಮಪ್ಪನು ಆನೆಯು ಬೇಲಿ ದಾಟಿ ಹೋಯ್ತೆಂಬ ಸಂಗತಿಯನ್ನು ತಿಳಿಸಿದನು. ಇದರಿಂದ ನಾಗರಾಜನಿಗೆ ಇನ್ನಷ್ಟು ರೇಗಿ ಹೋಯಿತು.
೧೭. ಕೋವಿ ಸಿಕ್ಕಿದೆ. ಆದರೆ ಹೆಣ ಸಿಗಲಿಲ್ಲ.
ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.
ನಾಗರಾಜ ಅಂತರ್ಧಾನನಾದುದು ಬಗೆಹರಿಯಲಾಗದ ಸಮಸ್ಯೆಯಾಯಿತು. ಆತನನ್ನು ಕೊಲೆ ಮಾಡಲಾಯಿತೋ, ಆನೆ ತುಳಿದು ಸಾಯಿಸಿತೋ, ಆತ್ಮಹತ್ಯೆ ಮಾಡಿಕೊಂಡನೋ ಎಂಬ ಯಾವ ಸಂಗತಿಗಳೂ ತೀರ್ಮಾನಗೊಳ್ಳಲಿಲ್ಲ. ಪೊಲೀಸರು ಕಾಡೆಲ್ಲಾ ಹುಡುಕಾಡಿ ಕೊನೆಗೆ ನಾಗರಾಜನ “ಕೋವಿ ಸಿಕ್ಕಿದೆ. ಆದರೆ ಹೆಣ ಸಿಗಲಿಲ್ಲ” ಎಂದು ಮಹಜರು ಬರೆದುಕೊಂಡು ಸುಮ್ಮನಾದರೆಂದು ನಿರೂಪಕರು ತಿಳಿಸಿದ್ದಾರೆ.
ಹೆಚ್ಚುವರಿ ಪ್ರಶ್ನೆಗಳು:
೧೮. ಆ ಮರದ ಕೆಳಗೆ ಬುಟ್ಟಿಗಟ್ಲೆ ಬಿದ್ದಿಲ್ಲವ ಅದರ ಲದ್ದಿ!
ಈ ಮಾತನ್ನು ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ರಚಿಸಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಿಂದ ಆಯ್ದುಕೊಳ್ಳಲಾಗಿದೆ. ದುರ್ಗಪ್ಪ ನಿರೂಪಕರನ್ನು ಉದ್ದೇಶಿಸಿ ಈ ಮೇಲಿನ ಮಾತನ್ನು ಆಡುವನು.
ಮರದ ಕೊಂಬೆ ತಂತಿ ಮೇಲೆ ಮುರಿದು ಬೀಳಲು ಕೃಷ್ಣೇಗೌಡನ ಆನೆಯೇ ಕಾರಣವೆಂದು ದುರ್ಗಪ್ಪ ನಿರೂಪಕರ ಬಳಿ ದೂರುತ್ತಾನೆ. ಆಗ ನಿರೂಪಕರು ಅದು ಹೇಗೆ ಆನೆ ಕೆಲಸ ಅಂತೀಯ? ತಂತಿ ಮೇಲೆ ಕೊಂಬೆ ಎಳೆದರೆ ಅದಕ್ಕೆ ಕರೆಂಟು ಹೊಡೆದು ಸತ್ತುಹೋಗಲ್ಲವಾ? ಎಂದು ಪ್ರಶ್ನಿಸುತ್ತಾರೆ. ಆಗ ದುರ್ಗಪ್ಪ ತನ್ನ ಮಾತನ್ನು ಸಮರ್ಥಿಸಿಕೊಳ್ಳುತ್ತಾ ಮರದ ಕೆಳಗೆ ಆನೆಯ ಲದ್ದಿ ಬುಟ್ಟಿಗಟ್ಟಲೆ ಬಿದ್ದಿರುವುದೇ ತನ್ನ ಮಾತಿಗೆ ಆಧಾರವೆಂದು ತಿಳಿಸುತ್ತಾನೆ.
೧೯. ಕರೆಂಟು ಕೆಲಸಕ್ಕೆ ಕೊಡಲಿ ಯಾಕೋ?
ಈ ಮಾತನ್ನು ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ಎಂಬ ನೀಳ್ಗತೆಯಿಂದ ಅಯ್ದುಕೊಂಡಿದ್ದು ನಿರೂಪಕರು ಲೈನ್‌ಮನ್ ದುರ್ಗಪ್ಪನನ್ನು ಉದ್ದೇಶಿಸಿ ಇದನ್ನು ಹೇಳಿದ್ದಾರೆ.
ನಿರೂಪಕರ ಮನೆಗೆ ಬಂದ ದುರ್ಗಪ್ಪ ಕೊಡಲಿ ಬೇಕಾಗಿತ್ತೆಂದು ಕೇಳುತ್ತಾನೆ. ಆಗ ನಿರೂಪಕರು ‘ಕರೆಂಟು ಕೆಲಸಕ್ಕೆ ಕೊಡಲಿ ಯಾಕೋ? ಎಂದು ಅಚ್ಚರಿ ಮತ್ತು ಕುತೂಹಲದಿಂದ ಕೇಳುತ್ತಾರೆ. ಆಗ ದುರ್ಗಪ್ಪ ಲೈನ್‌ಮೇಲೆ ಮರದ ಕೊಂಬೆ ಮುರಿದು ಬಿದ್ದಿರುವ ಸಂಗತಿಯನ್ನು ತಿಳಿಸಿ. ಅದನ್ನು ಕಡಿದು ಹಾಕಲು ಕೊಡಲಿಯನ್ನು ತೆಗೆದುಕೊಂಡು ಹೋಗುವ ಸಂದರ್ಭವಿದಾಗಿದೆ,
೨೦. ಕೃಷ್ಣೇಗೌಡರ ಆನೆ ಇಂಥ ಪುಂಡು ಆನೆ ಎಂದು ಗೊತ್ತಿರಲಿಲ್ಲ.
ಈ ಮೇಲಿನ ವಾಕ್ಯವನ್ನು ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳತೆಯಿಂದ ಆಯ್ದುಕೊಂಡಿದ್ದು ಕಾಡಪ್ಪಶೆಟ್ಟರು ಹೇಳುತ್ತಾರೆ.
ಆನೆ ಆಭರಣಗಳ ಸಹಿತ ಕಾಡಿಗೆ ಓಡಿಹೋಗಿದ್ದರಿಂದ ಕಾಡಪ್ಪಶೆಟ್ಟರು ತಾವು ಬಾಡಿಗೆಗೆ ತಂದಿದ್ದ ಏಳೆಂಟು ಸಾವಿರ ಬೆಲೆಬಾಳುವ ಆಭರಣಗಳನ್ನಾದರೂ ಮರಳಿ ಪಡೆಯುವ ಉದ್ದೇಶದಿಂದ ಕೃಷ್ಣೇಗೌಡನ ಆನೆಯನ್ನು ಕಾಡಿನಲ್ಲಿ ಹುಡುಕುತ್ತಿರುವಾಗ ಎದುರಾದ ನಿರೂಪಕರು ಮತ್ತು ಪ್ರಕಾಶರನ್ನುದ್ದೇಶಿಸಿ “ಕೃಷ್ಣೇಗೌಡರ ಆನೆ ಇಂಥ ಪುಂಡು ಆನೆ ಎಂದು ಗೊತ್ತಿರಲಿಲ್ಲ. ಗೂಳೂರು ಮಠದ ಜಗದ್ಗುರುಗಳು ಅದು ಯಾವ ಧೈರ್ಯದ ಮೇಲೆ ಇದರ ಮೇಲೆ ಕುಳಿತು ಕೊಳ್ಳುತ್ತಿದ್ದರೋ” ಎಂದು ಕೋಪದಿಂದ ನುಡಿಯುತ್ತಾರೆ.
೨೧. ರೆಹಮಾನ್ ಎರಡು ಮಾತು ಅನ್ನಬಾರದ್ದನ್ನು ಅಂದುಬಿಟ್ಟ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ. ಜುಬೇದಾ ಈ ಮಾತನ್ನು ನಿರೂಪಕರೆದುರು ಹೇಳುತ್ತಾಳೆ.
ರೆಹಮಾನ್ ಎಂಬುವವನು ತನ್ನ ಗೂಡಂಗಡಿಯನ್ನು ಕೃಷ್ಣೇಗೌಡರ ಆನೆ ಗೌರಿಯೇ ದೂಡಿ ಬೀಳಿಸಿದೆ ಎಂದು ವಾದಿಸುತ್ರ, ಪ್ರತ್ಯಕ್ಷ ಸಾಕ್ಷಿ ಎಂದು ಜುಬೇದಾಳನ್ನು ತೋರಿಸುತ್ತಾನೆ. ಆದರೆ ಅವನ ನಿರೀಕ್ಷೆಗೆ ವ್ಯತಿರಿಕ್ತವಾಗಿ ಜುಬೇದ ರೆಹಮಾನ್ ಆನೆಗೆ ಎರಡು ಮಾತು ಅನ್ನಬಾರದ್ದನ್ನು ಅಂದುಬಿಟ್ಟ ಎನ್ನುತ್ತಾಳೆ. ಕೊನೆಗೆ ಅಲ್ಲಿ ಸೇರಿದ್ದ ಜನ, ಆನೆಗೂ ಮಾನ ಮರ್ಯಾದೆ ಇರುತ್ತೆ ತಿಳ್ಕೊ ಅಂತ ರೆಹಮಾನನಿಗೆ ಬುದ್ದಿ ಹೇಳಿ ನಿರ್ಗಮಿಸುತ್ತಾರೆ.
೨೨. ಆಯ್ಯೋ ಯಾವೋ ಮದ್ವೆಮನೆ ಕಾಗದ ಸಾರ್,
ಈ ಮೇಲಿನ ವಾಕ್ಯವನ್ನು ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಲ್ಲಿ ಪೋಸ್ಟ್‌ಮನ್ ಜಬ್ಬಾರ್ ನಿರೂಪಕರನ್ನುದ್ದೇಶಿಸಿ ಈ ಮೇಲಿನ ಮಾತನ್ನು ಹೇಳಿದ್ದಾನೆ.
ವೆಟರ್ನರಿ ಆಸ್ಪತ್ರೆ ಬಳಿ ನಿಂತಿದ್ದ ಜಬ್ಬಾರ್‌ನನ್ನು ಉದ್ದೇಶಿಸಿ ನಿರೂಪಕರು ಕೆಲವು ದಿನಗಳಿಂದ ಪೋಸ್ಟ್ ಯಾಕೆ ತಂದುಕೊಟ್ಟಿಲ್ಲವೆಂದು ಪ್ರಶ್ನಿಸುತ್ತಾರೆ. ಅದಕ್ಕೆ ಉತ್ತರಿಸುತ್ತಾ ಜಬ್ಬಾರ್ ‘ಅಯ್ಯೋ ಯಾವೋ ಮದ್ವೆಮನೆ ಕಾಗದ ಸಾರ್. ನೀವೇನು ಹೋಗಲ್ಲವಲ್ಲ’ಎಂದು ಉಡಾಫೆಯಿಂದ ಉತ್ತರಿಸುತ್ತಾನೆ. ಜಬ್ಬಾರನು ತನ್ನ ಕರ್ತವ್ಯಲೋಪವನ್ನು ಮುಚ್ಚಿಕೊಳ್ಳಲು ಲೇಖಕರು ಮದುವೆಗೆ ಹೋಗುವುದಿಲ್ಲ. ಹಾಗಾಗಿ ಮದುವೆ ಕಾಗದಗಳನ್ನು ಯಾವಾಗ ಕೊಟ್ಟರೂ ಒಂದೇ ಎಂದು ಉಡಾಫೆಯಿಂದ ಮಾತಾಡುವುದನ್ನು ಗಮನಿಸಬಹುದು.
೨೩. ಪೋಸ್ಟು ಬಾಕ್ಸ್‌ಗಳನ್ನು ನೇತುಹಾಕುವುದು ಕಡಿಮೆ ಖರ್ಚಲ್ಲವೆ!
ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.
ಪೋಸ್ಟ್‌ಮನ್ ಜಬ್ಬಾರನ ತೊಂದರೆಗಳನ್ನು ವಿವರಿಸುತ್ತಾ ನಿರೂಪಕರು ಈ ಮಾತನ್ನಾಡಿರುವರು. ಮೂಡಿಗೆರೆಯಂಥ ಕುಗ್ರಾಮ ಆಧುನೀಕರಣಗೊಳ್ಳುತ್ತಾ ಟೆಲಿಫೋನ್ ಎಕ್ಸ್‌ಛೇಂಜ್, ವಿದ್ಯುತ್ ಎಲ್ಲ ಬಂದಹಾಗೆ ಅಂಚೆ ಇಲಾಖೆಯವರೂ ತಮ್ಮ ಸೇವೆಯನ್ನು ವಿಸ್ತರಿಸುತ್ತಾ ಹೋದುದ್ದನ್ನು ವಿವರಿಸಿ ಲೇಖಕರು ಈ ಸೇವೆ ವಿಸ್ತಾರಗೊಂಡ ಬಗೆಯನ್ನು ಲೇವಡಿ ಮಾಡಿದ್ದಾರೆ. ಹ್ಯಾಂಡ್‌ಪೋಸ್ಟ್, ಬಿದಿರಳ್ಳಿ ಮುಂತಾದೆಡೆ ಪೋಸ್ಟ್ ಬಾಕ್ಸ್‌ಗಳನ್ನು ನೇತಾಕಿದ್ದೇ ಆ ಇಲಾಖೆಯ ಸೇವಾ ವಿಸ್ತರಣೆಯಾಗಿತ್ತು! ಇದನ್ನು ಹೇಳುತ್ತಾ ಲೇಖಕರು ಪೋಸ್ಟಾಫೀಸ್ ಶಾಖೆ ತೆರೆಯುವ ಬದಲು ಪೋಸ್ಟ್ ಬಾಕ್ಸ್‌ಗಳನ್ನು ನೇತುಹಾಕುವುದು ಕಡಿಮೆ ಖರ್ಚಲ್ಲವೇ! ಎಂದು ವ್ಯಂಗ್ಯವಾಡಿದ್ದಾರೆ. ಜಬ್ಬಾರ್ ಪೋಸ್ಟ್ ಕೊಡುವುದರೊಂದಿಗೆ ಪ್ರತಿದಿನ ಅಲ್ಲೆಲ್ಲಾ ಹೋಗಿ ಕ್ಲಿಯರ್ ಮಾಡಬೇಕಾದ ತೊಂದರೆಗೆ ಸಿಲುಕಿದ್ದನು.
೨೪. ಕುಡುಕ ನನ್ನಮಗನೆ ಎಂಥ ಗಂಡಾಂತ್ರ ತಂದಿಟ್ಟೆ ನೋಡು.
ಈ ಮೇಲಿನ ವಾಕ್ಯವನ್ನು ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ಕಥೆಯಿಂದ ಆಯ್ದುಕೊಂಡಿದೆ.
ವೇಲಾಯುಧ ಕುಡಿದ ನಿಶೆಯಲ್ಲಿ ಮರದ ದಿಮ್ಮಿಗೂ ಲಾರಿಗೂ ಕಟ್ಟಿದ್ದ ಹಗ್ಗ ಬಿಚ್ಚದೆ ದಿಮ್ಮಿಯನ್ನು ದೂಡುವಂತೆ ಆನೆಗೆ ಹೇಳಿದ ಕಾರಣದಿಂದಲೇ ಡ್ರೈವರ್ ಸತ್ತು ಹೋಗಿದ್ದಾನೆಂದು ತಿಳಿದ ಶಿವೇಗೌಡರು ವೇಲಾಯುಧನಿಗೆ ‘ಕುಡಕ ನನ್‌ಮಗ್ನೆ ಎಂಥ ಗಂಡಾಂತರ ತಂದಿಟ್ಟೆ ನೋಡು’ ಎಂದು ಬೈಯ್ದ ಸಂದರ್ಭವಿದಾಗಿದೆ. ಅವರಿಗೆ ತಮ್ಮ ಕಳ್ಳನಾಟಾ ದಂಧೆ ಪೊಲೀಸರಿಗೆ ತಿಳಿದರೆ ತಮ್ಮ ಸಾಮಿಲ್ಲು, ಲಾರಿ, ಆನೆ ಎಲ್ಲವನ್ನು ಸೀಜ್ ಮಾಡುತ್ತಾರೆ. ತಮ್ಮ ಗುಟ್ಟು ಬಯಲಾಗುತ್ತದೆ ಎಂಬ ಭಯ. ಆದ್ದರಿಂದ ಇದಕ್ಕೆ ಕಾರಣನಾದ ವೇಲಾಯುಧನನ್ನು ಈ ಮೇಲಿನಂತೆ ಬೈಯುತ್ತಾರೆ.
೨೫. ಸರಿಯಾದ ವೆಪನ್ ಕೊಟ್ಟರೆ ಅದನ್ನು ಈಗಿಂದೀಗಲೇ ಶೂಟ್ ಮಾಡಿ ಬಿಡುತ್ತೇನೆ.
ಈ ಮೇಲಿನ ವಾಕ್ಯವನ್ನು ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಿಂದ ಆಯ್ದುಕೊಳ್ಳಲಾಗಿದ್ದು ನಾಗರಾಜನು ತಮ್ಮ ಇಲಾಖೆಯ ರೇಂಜರ್‌ನ್ನು ಉದ್ದೇಶಿಸಿ ಈ ಮಾತನ್ನು ಹೇಳುತ್ತಾನೆ.
ಖಾನ್ ಸಾಹೇಬರು ಕರೆದ ಪುರಪ್ರಮುಖರ ಸಭೆಯಲ್ಲಿ ಆನೆಯ ವಿಚಾರವೇ ಮುಖ್ಯವಾಗುತ್ತವೆ. ಯಾವ ಲಾಭವೂ ಇಲ್ಲದೆ ಆ ಆನೆಗೆ ಕೇಡು ಬಗೆಯುವ ಸದವಕಾಶ ಉಪಯೋಗಿಸಿಕೊಳ್ಳಲು ಎಲ್ಲರೂ ಕಾತರರಾಗಿರುವುದನ್ನು ಕಂಡ ನಾಗರಾಜ ರೇಂಜರ್ ಎದುರಿಗೆ “ನನಗೆ ಸರಿಯಾದ ವೆಪನ್ ಕೊಟ್ಟರೆ ಅದನ್ನು ಈಗಿಂದೀಗಲೇ ಶೂಟ್ ಮಾಡಿಬಿಡುತ್ತೇನೆ. ಊರಿನ ಬಳ ಕಾಡಾನೆಗಳ ಕಾಟಕ್ಕೂ ಈ ಹೆಣ್ಣಾನೆಯೇ ಕಾರಣ” ಎಂದು ಹಾರಾಡಿದ ಸಂದರ್ಭವಿದಾಗಿದೆ.
೨೬. ಬುಟ್ಟಿಗಟ್ಟೆ ಬಿದ್ದಿಲ್ಲವ ಅದರ ಲದ್ದಿ!
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಲ್ಲಿ ಲೈನ್‌ಮನ್ ದುರ್ಗಪ್ಪ ನಿರೂಪಕರಿಗೆ ಈ ಮೇಲಿನ ಮಾತನ್ನು ಹೇಳುತ್ತಾನೆ.
ನಿರೂಪಕರ ಮನೆಗೆ ಕೊಡಲಿ ಕೇಳಲು ಬಂದ ದುರ್ಗಪ್ಪನನ್ನು ನಿರೂಪಕರು ಕರೆಂಟು ಕೆಲಸಕ್ಕೆ ಕೊಡಲಿ ಏಕೆಂದು ಪ್ರಶ್ನಿಸಿದಾಗ, ಅವನು ಕೃಷ್ಣೇಗೌಡರ ಆನೆಯಿಂದಾಗಿ ಮರವೊಂದು ಮುರಿದುಕೊಂಡು ತಂತಿಮೇಲೆ ಬಿದ್ದಿರುವುದರಿಂದ ಮರವನ್ನು ಕಡಿದು ಲೈನ್ ಕ್ಲಿಯರ್ ಮಾಡಲು ಎಂದು ಉತ್ತರಿಸುತ್ತಾನೆ. ಆಗ ಲೇಖಕರು “ಅದು ಹೇಗೆ ಆನೆ ಕೆಲಸ ಅಂತೀಯಾ? ತಂತಿ ಮೇಲೆ ಕೊಂಬೆ ಎಳೆದರೆ ಅದಕ್ಕೆ ಕರೆಂಟು ಹೊಡೆದು ಸತ್ತೋಗಲ್ವಾ?’ ಎಂದು ಪ್ರಶ್ನಿಸಿದರು. ಆಗ ದುರ್ಗಪ್ಪ ತನ್ನ ಮಾತನ್ನು ಸಮರ್ಥಿಸಿಕೊಳ್ಳುತ್ತಾ ಪುರಾವೆಯಾಗಿ ಮರದ ಪಕ್ಕ ಆನೆಯ ಲದ್ದಿ ಬಿದ್ದಿರುವುದನ್ನು ತಿಳಿಸುತ್ತಾನೆ.
೨೭. ಆನೆ ಮಾತ್ರ ಏನು ಮಾಡಿದರೂ ಸುಮ್ಮನಿರ್ತೀಯ. ಅದು ಹೆಣ್ಣಾನೆ ತಿಳುಕೋ!
ಈ ಮೇಲಿನ ವಾಕ್ಯವನ್ನು ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳತೆಯಲ್ಲಿ ವೇಲಾಯುಧನನ್ನು ಕುರಿತು ಆತನ ಹೆಂಡತಿ ಹೇಳುವ ಮಾತಿದಾಗಿದೆ.
ಆನೆಗೆ ಬುದ್ದಿ ಕಲಿಸಿದ ಮೇಲೆ ನಿನಗೆ ಕಲಿಸುತ್ತೇನೆ ಎಂದು ವೇಲಾಯುಧ ಹೆಂಡತಿಗೆ ಜೋರು ಮಾಡಿದಾಗ ಆಕೆ “ಹಂಗೇ ಮಾಡು. ನಾನು ಮಾತ್ರ ಚೂರು ತಪ್ಪು ಮಾಡಿದರೂ ಹೊಡಿಯೋದಕ್ಕೆ ಬರ್ತಿಯಾ. ಆನೆ ಮಾತ್ರ ಏನು ಮಾಡಿದರೂ ಸುಮ್ಮನಿದ್ದೀಯಾ. ಅದು ಹೆಣ್ಣಾನೆ ತಿಳುಕೋ! ಸದರ ಕೊಟ್ರೆ ಏನು ಬೇಕಾದರೂ ಮಾಡುತ್ತೆ” ಎಂದು ಮಾರ್ಮಿಕವಾಗಿ ನುಡಿಯುತ್ತಾಳೆ. ಇದರಿಂದ ವೇಲಾಯುಧನ ಕೋಪ ಏರುತ್ತಾ ಹೋದ ಪರಿಣಾಮ ಅವನ ಅಂತ್ಯವಾಗುತ್ತದೆ.
೨೮. ಅದನ್ನು ಸುತ್ತಿಗೆ ಎಂದು ಕರೆಯಬಹುದಿತ್ತು.
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಿಂದ ಈ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ದುರ್ಗಪ್ಪನು ತಮ್ಮ ಕೊಡಲಿಯನ್ನು ಹಿಂದಿರುಗಿಸದೇ ಇದ್ದಾಗ ನಿರೂಪಕರ ಮನಸ್ಸಿನಲ್ಲಿ ಮೂಡಿದ ಭಾವನೆ ಅದು.
ವಿದ್ಯುತ್ ಇಲಾಖೆಯ ಲೈನ್‌ಮನ್ ಆಗಿದ್ದ ದುರ್ಗಪ್ಪ ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದ ಮರಗಳ ಕೊಂಬೆಗಳನ್ನು ಸವರಲೆಂದು ನಿರೂಪಕರಿಂದ ಕೊಡಲಿಯನ್ನು ಕೊಂಡುಹೋಗಿದ್ದ. ಆದರೆ ಅದನ್ನು ಎಷ್ಟು ದಿನವಾದರೂ ಹಿಂದಿರುಗಿಸಿರಲಿಲ್ಲ. ಆದರೆ ನಿರೂಪಕರಿಗೆ ಕೊಡಲಿ ವಾಪಸ್ ಬರಲಿಲ್ಲವೆಂಬ ಚಿಂತೆ ಇರಲಿಲ್ಲ. ಏಕೆಂದರೆ ಕೆರೆ ಕೆಲಸಕ್ಕೆಂದು ಬಂದಿದ್ದ ಮಣ್ಣು ಒಡ್ಡರು ಅದನ್ನು ತೆಗೆದುಕೊಂಡು ಹೋಗಿ ಅದರ ಹಿಂಭಾಗ ಯಾವುದು, ಮುಂಭಾಗ ಯಾವುದು ಎನ್ನುವುದು ಗೊತ್ತಾಗದಷ್ಟು ಅದನ್ನು ಹಾಳುಮಾಡಿದ್ದರು. ಆದ್ದರಿಂದಲೇ ನಿರೂಪಕರು ತಮ್ಮ ಕೊಡಲಿಯನ್ನು ಕುರಿತು ‘ಅದನ್ನು ಸುತ್ತಿಗೆ ಎಂದು ಕರೆಯಬಹುದಿತ್ತು’ ಎಂದಿದ್ದಾರೆ.
೨೯. ಕಂತ್ರಿನಾಯಿಗಳನ್ನು ಕಡಿಮೆ ಮಾಡೋದಕ್ಕೆ ಆಗೋಲ್ವೆ?
ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳತೆಯಲ್ಲಿ ವೆಟರ್ನರಿ ಆಸ್ಪತ್ರೆಯ ಸ್ಟಾಕ್‌ಮನ್ ಪುಟ್ಟಯ್ಯ ಈ ಮೇಲಿನ ವಾಕ್ಯವನ್ನು ನಿರೂಪಕರ ಬಳಿ ಹೇಳುವನು.
ಊರಿನಲ್ಲಿ ಕಂತ್ರಿನಾಯಿಗಳು ಹೆಚ್ಚಾಗಿರುವುದಕ್ಕೆ ಮುನ್ಸಿಪಾಲಿಟಿಯವರ ಬೇಜವಾಬ್ದಾರಿತನವನ್ನು ನಿಂದಿಸುತ್ತಾ ಪುಟ್ಟಯ್ಯ ನಿರೂವಕರ ಬಳಿ “ನೋಡಿ ಸಾರ್, ಈ ಊರಿನ ಮುನ್ಸಿಪಾಲಿಟಿಯವರು ಸ್ವಲ್ಪವೂ ಜವಾಬ್ದಾರಿಯಿಲ್ಲದ ಜನ ಇವರಿಂದ ಮತ್ತೇನು ಆಗದಿದ್ರೂ ಪರ್ವಾಗಿಲ್ಲ. ಈ ಊರಿನ ಕಂತ್ರಿ ನಾಯಿಗಳನ್ನು ಕಡಿಮೆ ಮಾಡೋದಕ್ಕೆ ಆಗೋಲ್ವೇ?’ ಎಂದು ದೂರಿದ ಸಂದರ್ಭವಿದು.
೩೦. ಹೌದಾ, ಎಲ್ಲಿ ಕಚ್ಚಿತೋ ಜಬ್ಬಾರ್?
ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ.
ಊರಿನಲ್ಲಿ ಕಂತ್ರಿನಾಯಿಗಳ ಕಾಟ ಹೆಚ್ಚಾಗಿರುವುದಕ್ಕೆ ಮುನ್ಸಿಪಾಲಿಟಿಯವರ ಬೇಜವಾಬ್ದಾರಿತನವೇ ಕಾರಣವೆಂದು ವೆಟರ್ನರಿ ಸ್ಟಾಕ್‌ಮನ್ ಪುಟ್ಟಯ್ಯ ನಿರೂವಕರ ಬಳಿ ದೂರಿದನು. ಆಗ ನಿರೂಪಕರು ನಿಮ್ಮ ಡಾಕ್ಟರ್‌ಗೆ ಹೇಳಿ ಮುನ್ನಿಪಾಲು ಪ್ರೆಸಿಡೆಂಟರಿಗೆ ಒಂದು ಕಂಪ್ಲೇಂಟ್ ಕೊಡಿಸಬೇಕೆಂದೂ, ಜಬ್ಬಾರ್‌ನಿಗೂ ನಾಯಿ ಕಚ್ಚಿದೆಯೆಂದೂ ತಿಳಿಸಿದಾಗ ಪುಟ್ಟು ಜಬ್ಬಾರನಿಗೆ “ಹೌದಾ, ಎಲ್ಲಿ ಕಚ್ಚಿತೋ ಜಬ್ಬಾರ್?” ಎಂದು ಪ್ರಶ್ನಿಸಿರುವ ಸಂದರ್ಭವಿದಾಗಿದೆ.
೩೧. ಇನ್ನು ಮೇಲೆ ನಾಯಿ ಕೊಂದರೆ ಬಾಲ ತಗೊಂಡು ಬಂದು ತೋರಿಸಬೇಕು ಅಂತ ಹೇಳಿ,
ಈ ಮೇಲಿನ ವಾಕ್ಯವನ್ನು ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಿಂದ ಆಯ್ದುಕೊಳ್ಳಲಾಗಿದೆ.
ನಿರೂಪಕರು ಮುನ್ಸಿಪಾಲಿಟಿ ಅಧ್ಯಕ್ಷರಾದ ಖಾನ್ ಸಾಹೇಬರನ್ನು ಉದ್ದೇಶಿಸಿ ಈ ಮೇಲಿನಂತೆ ನುಡಿಯುತ್ತಾರೆ. ಖಾನ್ ಸಾಹೇಬರು ತಮ್ಮಡಾಗ್ ಎರಾಡಿಕೇಶನ್ ಕಾರ್ಯಕ್ರಮವನ್ನೆಲ್ಲಾ ವಿವರಿಸಿದ ಮೇಲೆ, ಇಷ್ಟೆಲ್ಲಾ ಮಾಡಿದ ಮೇಲೂ ಊರಿನಲ್ಲಿ ನಾಯಿಗಳ ಸಂಖ್ಯೆ ಹೆಚ್ಚಿದೆ ಏನು ಮಾಡಲಿ? ಎಂದು ತಮ್ಮ ಅಸಹಾಯಕತೆಯನ್ನು ನಿರೂಪಕರ ಮುಂದೆ ವ್ಯಕ್ತಪಡಿಸಿದಾಗ ನಿರೂಪಕರು ‘ನಿಮ್ಮ ಕೆಲಸಗಾರರು ನಾಯಿಯನ್ನು ಕೊಲ್ಲದೆ ನಿಮಗೆ ಸುಳ್ಳು ಲೆಕ್ಕ ಕೊಟ್ಟಿದ್ದಾರೆ. ಇನ್ನು ಮೇಲೆ ನಾಯಿಕೊಂಡ ಅದರ ಬಾಲ ತಂದು ತೋರಿಸಬೇಕು ಅಂತ ಹೇಳಿ’ ಎಂದು ಸಲಹೆ ಮಾಡುತ್ತಾರೆ. ನಿರೂಪಕರ ಸಲಹೆಯಲ್ಲಿ ಜಾಣ್ಮೆ ಹಾಗೂ ಹಾಸ್ಯಪ್ರಜ್ಞೆ ಎರಡೂ ಇಣುಕಿವೆ.
೩೨. ದುಣ್ಣಮುಂಡೆ ಆನೆಯನ್ನು ತೂಗೋದಕ್ಕೆ ತಕ್ಕಡಿ ಎಲ್ಲಿಂದ ತತ್ರೀರ ಹೇಳಿ.
ಈ ಮೇಲಿನ ವಾಕ್ಯವನ್ನು ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಲ್ಲಿ ವೆಟರಿ ಆಸ್ಪತ್ರೆಯ ಸ್ಟಾಕ್‌ಮನ್ ಪುಟ್ಟಯ್ಯ ನಿರೂಪಕರಿಗೆ ಈ ಮೇಲಿನ ಮಾತನ್ನು ಹೇಳಿದ್ದಾನೆ.
ಕೃಷ್ಣೇಗೌಡನ ಆನೆಗೂ ಹುಚ್ಚುನಾಯಿ ಕಚ್ಚಿರುವ ಗಾಳಿಸುದ್ದಿಯನ್ನು ಲೇಖಕರಿಗೆ ತಿಳಿಸುತ್ತಾ ಪುಟ್ಟಯ್ಯ “ಓದ ವೇಳೆ ಆನೆಯನ್ನು ಕರೆತಂದು ಇಂಜೆಕ್ಷನ್ ಚುಚ್ಚಲು ಹೇಳಿದರೆ ಗತಿಯೇನು? ಆನೆಗೆ ಕೊಡುವ ಡೋಸೇಜೂ ಗೊತ್ತಿಲ್ಲ’ ಬಾಡಿ ತೂಕದ ಮೇಲೆ ಡೋಸೇಜು ನಿರ್ಧಾರವಾಗುವುದರಿಂದ ದುಣ್ಣಮುಂಡೆ ಆನೆಯನ್ನು ತೂಗೋದಕ್ಕೆ ತಕ್ಕಡಿ ಎಲ್ಲಿಯ ತದ್ದೀರ ಹೇಳಿ” ಎಂದು ತನ್ನ ಅಸಹಾಯಕತೆಯನ್ನು ವಿವರಿಸಿದ ಸಂದರ್ಭವಿದು.
೩೩. ಸತ್ತಿರೋ ತಿಪ್ಪಣ್ಣನಿಗೂ, ಎಲ್ಲೋ ಓಡಾಡಿಕೊಂಡಿರೋ ಆನೆಗೂ ಕಟ್ತೀರಲ್ಲಯ್ಯ
ಈ ಮೇಲಿನ ವಾಕ್ಯವನ್ನು ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಿಂದ ಆಯ್ದುಕೊಳ್ಳಲಾಗಿದೆ.
ತಿಪ್ಪಣ್ಣನ ಸಾವಿಗೆ ಕೃಷ್ಣೇಗೌಡನ ಆನೆಯೇ ಕಾರಣ ಎಂದು ದುರ್ಗಪ್ಪ ಹೇಳಿದಾಗ ನಿರೂಪಕರು “ಆದೇನ್ಮಾಡುತ್ತಯ್ಯಾ ಆನೆ. ಎಲ್ಲೋ ಕಂಬದ ಮೇಲೆ ಸತ್ತಿರೋ ತಿಪ್ಪಣ್ಣಂಗೂ, ಎಲ್ಲೋ ಓಡಾಡಿಕೊಂಡಿರೋ ಆನೆಗೂ ಕಟ್ಟಿರಲ್ಲ! ಬಾಯಿಲ್ಲದೋರು ಈ ಪ್ರವಂಚದಲ್ಲಿ ಬದುಕೋ ಹಂಗೆ ಇಲ್ಲವೇನಯ್ಯಾ?” ಎಂದು ಬೇಸರದಿಂದ ನುಡಿಯುತ್ತಾರೆ. ಆನೆಯನ್ನು ಹೊಣೆಯಾಗಿಸಿದ್ದು ಲೇಖಕರ ಅಸಮಾಧಾನಕ್ಕೆ ಕಾರಣವಾಯ್ತೆನ್ನಬಹುದು.
೩೪. ಸತ್ತಿರೋದು ನಿಮ್ಮದು ಇವತ್ತಲ್ಲಾ ನಾಳೆ ನೀವೇ ಕೊಂದು ತಿನ್ನೋ ಪ್ರಾಣಿ.
ಈ ಮೇಲಿನ ವಾಕ್ಯವನ್ನು ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಿಂದ ಆಯ್ದುಕೊಳ್ಳಲಾಗಿದೆ.
ಕ್ಲೀನರ್ ಕೃಷ್ಣ ಮತ್ತು ಡ್ರೈವರ್ ಅಬ್ಬಾಸ್ ಸಾವಿನ ತನಿಖೆ ನಡೆಯುತ್ತಿದ್ದ ಸಂದರ್ಭದಲ್ಲಿ ಸುಬ್ಬಣ್ಣ ನಾಗರಾಜನ ಕಾರ್ಯವೈಖರಿಯನ್ನು ಟೀಕಿಸುತ್ತಾ “ಆನೆ ನನ್ನ ಕೊಟ್ಟಿಗೆ ಬೀಳಿಸಿ ನಾಲ್ಕೈದು ಮೇಕೆ ಸಾಯಿಸಿದೆ. ಡಿಪಾರ್ಟ್ ಮೆಂಟಿನವರು ನಷ್ಟ ಕಟ್ಟಿಕೊಡ್ತಾರಾ?” ಎಂದು ಗೊಣಗುತ್ತಾ ಅಲ್ಲಿದ್ದವರನ್ನು ವಿನಾಕಾರಣ ನಾಗರಾಜನ ಮೇಲೆ ಎತ್ತಿಕಟ್ಟಿದನು. ಆಗ ನಾಗರಾಜ ಸತ್ತಿರೋದು ನಿಮ್ಮದು ಇವತ್ತಲ್ಲಾ ನಾಳೆ ನೀವೇ ಕೊಂದು ತಿನ್ನೋ ಪ್ರಾಣಿ. ಅದಕ್ಕೆ ಯಾಕ್ರಿ ನಷ್ಟ ಕಟ್ಟಿಕೊಡಬೇಕು? ನಾಳೆ ಮಾಡೋ ಸಾರು ಇವತ್ತೇ ಮಾಡ್ರಿ” ಎಂದಂದು ಅಲ್ಲಿದ್ದವರನ್ನೆಲ್ಲಾ ಕೆರಳಿಸಿ ಬಿಡುತ್ತಾನೆ. ಪೊಲೀಸರು ಅಲ್ಲೇ ಇದ್ದುದರಿಂದ ಗಲಾಟೆ ಆಗುವ ಸಂಭವ ತಪ್ಪಿತೆಂದು ನಿರೂಪಕರು ವಿವರಿಸಿದ್ದಾರೆ.
೩೫. ಇತ್ತಲಾಗಿ ಮುಖ ಹಾಕಲಿ ಅದನ್ನು ಕೋವೀಲೆ ಹೊಡೀತೀನಿ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಲ್ಲಿ ಹಳೇಕೊಪ್ಪದ ಸುಬ್ಬಣ್ಣ ಈ ಮೇಲಿನ ಮಾತನ್ನು ಹೇಳುವನು.
ಒಂದು ರಾತ್ರಿ ತೋಟದ ಮನೆಯಲ್ಲಿ ಮಲಗಿದ್ದ ಸುಬ್ಬಣ್ಣ ನಾಯಿಗಳು ಒಂದೇ ಸಮನೆ ಬೊಗಳುವುದನ್ನು ಕೇಳಿ ಹೊರಬಂದಾಗ ಅವನ ಕಣ್ಣೆದುರೇ ಕೊಟ್ಟಿಗೆಯ ಮಾಡು ದೊಪ್ಪನೆ ಕುಸಿದು ಬಿತ್ತು. ಮೇಕೆಗಳು ಆರಚಾಡಿದವು, ಕೆಲವು ಸತ್ತೇ ಹೋದವು. ಸೇರಿದ ಜನರು ಕೊಟ್ಟಿಗೆಯನ್ನೇ ಉರುಳಿಸಿ ಹೋಗಿರಬೇಕಾದರೆ ಇದು ಕೃಷ್ಣೇಗೌಡನ ಆನೆಯದೆ ಕೆಲಸವೆಂದು ನಿರ್ಧರಿಸಿ ಆನೆಯನ್ನು ಬಗೆಬಗೆಯಾಗಿ ನಿಂದಿಸಿದಾಗ ಅವರದುರಿಗೆ ಸುಬ್ಬಣ್ಣ “ಇನ್ನೊಂದು ಸಾರಿ ಅದು ಇತ್ತಲಾಗಿ ಮುಖಹಾಕಲಿ, ಅದನ್ನು ಕೋವಿಲೆ ಹೊಡಿತೀನಿ” ಎಂದು ಕೂಗಾಡಿದ ಸಂದರ್ಭವಿದಾಗಿದೆ.
೩೬. ಆದು ಸತ್ರೆ ಸಾಯಲಿ ಬಿಡೋ. ಆದ್ಕೇನು ಮಕ್ಳಾ ಮರಿಯಾ?’
ಈ ಮೇಲಿನ ವಾಕ್ಯವನ್ನು ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಲ್ಲಿ ದುರ್ಗಪ್ಪ ನಾರಾಯಣನನ್ನು ಉದ್ದೇಶಿಸಿ ಹೇಳುತ್ತಾನೆ.
ಆನೆ ಲೈಟುಕಂಬಕ್ಕೆ ಮೈಯುಜ್ಜುವುದರಿಂದ ವೈರ್ ಟಿಚ್ಚಾಗಿ ಉಂಟಾದ ಫಜೀತಿಯನ್ನು ದುರ್ಗಪ್ಪ ವಿವರಿಸಿದಾಗ. ನಾರಾಯಣ ಹಾಗಿದ್ದರೆ ಆನೆಗೂ ಒಂದು ದಿನ ಗ್ರಾಚಾರ ಕಾವಿದೆ ಎನ್ನುತ್ತಾನೆ. ಅದಕ್ಕೆ ಉತ್ತರಿಸುತ್ತಾ ದುರ್ಗಪ್ಪ ‘ಅದು ಸತ್ರೆ ಸಾಯಲಿ ಬಿಡೋ, ಆದ್ಕೇನು ಮಕ್ಳಾ ಮರಿಯಾ? ಪೋಲಿ ಮುಂಡೇದು’ ಎಂದು ಬೈದು, ತಿಪ್ಪಣ್ಣನ ಸಾವಿಗೆ ಆನೆಯೇ ಕಾರಣವೆಂಬ ತನ್ನ ಅಭಿಪ್ರಾಯವನ್ನು ಪುನರುಚ್ಚರಿಸುತ್ತಾನೆ.
೩೭. ಕಾಡಾನೆಗಳ ಕಾಟಕ್ಕೂ ಈ ಹೆಣ್ಣಾನೆಯೇ ಕಾರಣ.
ತೇಜಸ್ವಿಯವರು ಬರೆದಿರುವ ‘ಕೃಷ್ಣೇಗೌಡನ ಆನೆ’ ಎಂಬ ನೀಳ್ಗತೆಯಲ್ಲಿ ಫಾರೆಸ್ಟರ್ ನಾಗರಾಜನು ಮೇಲಿನ ವಾಕ್ಯವನ್ನು ಹೇಳಿದ್ದಾನೆ.
ಮುನ್ಸಿಪಲ್ ಪ್ರೆಸಿಡೆಂಟರು ಕರೆದ ಪುರಪ್ರಮುಖರ ಸಭೆಯಲ್ಲಿ ಕೃಷ್ಣೇಗೌಡನ ಆನೆಯದೇ ಮುಖ್ಯ ವಿಷಯ ವಾಯಿತಲ್ಲದೆ, ಅದೇ ಎಲ್ಲಾ ಅನಾಹುತಗಳಿಗೂ ಮುಖ್ಯ ಕಾರಣವೆಂದು ಆರೋಪಿಸಲಾಯ್ತು. ನಾಗರಾಜನಿಗೆ ಆನೆಯ ಬಗ್ಗೆ ವಿಪರೀತ ಕೋಪ ಬಂದಿತ್ತು. ಆತ ಎಲ್ಲರೆದುರು ತನಗೆ ಸರಿಯಾದ ವೆಪನ್ ಕೊಟ್ಟರೆ ಆನೆಯನ್ನು ಈಗಲೇ ಶೂಟ್ ಮಾಡುವುದಾಗಿಯೂ ಊರಿನ ಬಳಿ ಕಾಡಾನೆಗಳು ಬಂದು ಕಾಟಿ ಕೊಡುತ್ತಿರುವುದಕ್ಕೆ ಈ ಹೆಣ್ಣಾನೆಯೇ ಕಾರಣವೆಂದೂ ಹಾರಾಡಿದ ಸಂದರ್ಭವಿದು.
ಆ) ಒಂದು ಅಂಕದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿ).
೧. ನಿರೂಪಕರಿಗೆ ಯಾವ ಕೆಲಸ ಖಾಯಮ್ಮಾಗಿತ್ತು?
ತಿಂಗಳಿಗೊಮ್ಮೆ ಜೀಪಿನ ಗೇರ್‌ಬಾಕ್ಸ್ ರಿಪೇರಿಯ ಕೆಲಸ
೨. ದುರ್ಗಪ್ಪ ಏನನ್ನು ಕೇಳಿ ಪಡೆಯಲು ಬಂದಿದ್ದನು?
ಕೊಡಲಿ
೩. ದುರ್ಗಪ್ಪನ ಪ್ರಕಾರ ತರ್ಲೆ ಡಿಪಾರ್ಟ್ ಮೆಂಟ್ ಯಾವುದು?
ಟೆಲಿಫೋನ್
೪. ಕೃಷ್ಣೇಗೌಡರ ಆನೆ ಮೊದಲು ಯಾವ ಮಠದಲ್ಲಿತ್ತು?
ಗೂಳೂರು ಮಠ
೫. ಕೃಷ್ಣೇಗೌಡರ ಆನೆಯ ಹೆಸರೇನು?
ಗೌರಿ
೬. ಆನೆಗೆ ಜಗದ್ಗುರುಗಳನ್ನು ಹೊರುವ ಕೆಲಸ ತಪ್ಪಿಹೋದುದೇಕೆ?
ಅಡ್ಡಪಲ್ಲಕ್ಕಿಯಲ್ಲಿ ಗುರುಗಳನ್ನು ಹೊರಲಾರಂಭಿಸಿದ್ದರಿಂದ
೭. ಕೃಷ್ಣೇಗೌಡರ ಆನೆಯ ಮಾವುತನ ಹೆಸರೇನು?
ವೇಲಾಯುಧ
೮. ರೆಹಮಾನ್ ‘ಐ ವಿಟ್‌ನೆಸ್’ ಎಂದು ಯಾರನ್ನು ತೋರಿಸಿದನು?
ಜುಬೇದಾಳನ್ನು
೯. ನಿರೂಪಕರ ಇಕಾಲಜಿಸ್ಟ್ ಗೆಳೆಯ ಯಾರು?
ಪ್ರಕಾಶ
೧೦. ಆನೆ ಇಲ್ಲದ್ದರಿಂದ ವೇಲಾಯುಧ ಎಲ್ಲಿ ಕೆಲಸಕ್ಕೆ ಸೇರಿದ?
ಶಿವೇಗೌಡರ ಸಾಮಿಲಿನಲ್ಲಿ
೧೧. ಶಿವೇಗೌಡರು ರಾತ್ರೋರಾತ್ರಿ ಆನೆ ಕರೆದುಕೊಂಡು ಹೋದುದ್ದೇಕೆ?
ಕಳ್ಳನಾಟ ಇಳಿಸಲು
೧೨. ಪೋಸ್ಟ್ಮನ್ ಜಬ್ಬಾರನಿಗೆ ಒದಗಿದ ತೊಂದರೆ ಏನು?
ನಾಯಿ ಕಚ್ಚಿತ್ತು
೧೩. ಜಬ್ಬಾರ್ ವೆಟರ್ನರಿ ಆಸ್ಪತ್ರೆಗೆ ಬರಲು ಕಾರಣವೇನು?
ನಾಯಿ ಕಚ್ಚಿದ್ದರಿಂದ ಇಂಜೆಕ್ಷನ್ ತೆಗೆದುಕೊಳ್ಳಲು
೧೪. ಮುನ್ಸಿಪಾಲಿಟಿ ಪ್ರೆಸಿಡೆಂಟರ ಹೆಸರೇನು?
ಖಾನ್ ಸಾಹೇಬ್ರು
೧೫. ನಿರೂಪಕರ ಪ್ರಕಾರ ಮುನ್ಸಿಪಾಲಿಟಿ ಪ್ರೆಸಿಡೆಂಟರ ಕರ್ತವ್ಯ ಯಾವುದು?
ಪಟ್ಟಣದ ಸ್ವಚ್ಛತೆಯನ್ನು ಕಾಪಾಡುವುದು
೧೬. ಟೆಲಿಫೋನ್ ಕಂಬದ ಮೇಲೆ ಮೃತನಾದ ಲೈನ್ ಮನ್ ಯಾರು?
ದುರ್ಗಪ್ಪ
೧೭. ಟೆಲಿಫೋನ್ ಸಿಬ್ಬಂದಿ ಯಾರ ವಿರುದ್ಧ ಮುಷ್ಕರ ಹೂಡಿದರು?
ವಿದ್ಯುತ್ ಇಲಾಖೆಯ ವಿರುದ್ಧ
೧೮. ಯಾವ ವಿಷಯ ಪ್ರಸ್ತಾಪಿಸಲು ಲೇಖಕರು ಮೀಟಿಂಗಿಗೆ ಹೋಗಿದ್ದರು?
ಬೀದಿನಾಯಿಗಳ ನಿರ್ಮೂಲನ
೧೯. ರೇಂಜರ್ ಆನೆಗೆ ಶೂಟ್ ಮಾಡುವಂತೆ ಯಾರಿಗೆ ಸೂಚಿಸಿದರು?
ನಾಗರಾಜನಿಗೆ
೨೦. ಆನೆಶಾಸ್ತ್ರದವನು ಏನೆಂದು ಭವಿಷ್ಯ ನುಡಿದಿದ್ದನು?
ಆನೆಯಿಂದ ಐದು ಜನರಿಗೆ ಸಾವೆಂದು
೨೧. ನಾಗರಾಜ ಕೋವಿ ಹಿಡಿದು ಎಲ್ಲಿ ಕುಳಿತಿದ್ದ?
ಶಿಕಾರಿ ಗರಡಿಯಲ್ಲಿ
೨೨. ಪೋಲಿಸರು ಏನೆಂದು ಮಹಜರು ಬರೆದುಕೊಂಡರು?
ನಾಗರಾಜನ ಕೋವಿ ಸಿಕ್ಕಿದೆ, ಹೆಣ ಸಿಕ್ಕಿಲ್ಲ
ಹೆಚ್ಚುವರಿ ಪ್ರಶ್ನೆಗಳು̳̳
೨೩. ದುರ್ಗಪ್ಪ ಕೊಡಲಿಯನ್ನು ಎಲ್ಲಿ ಹುಡುಕಿದ?
ನಿರೂಪಕರ ಮನೆಯ ಅಟ್ಟದ ಮೇಲೆ
೨೪. ಖಾಕಿ ಪ್ಯಾಂಟ್ ಧಾರಿ ಕಾಲುಗಳನ್ನು ನೋಡಿ ನಿರೂಪಕರಿಗೆ ಯಾವ ಡಿಪಾರ್ಟ್ ಮೆಂಟ್ ನೆನಪಿಗೆ ಬಂತು?
ಪೊಲೀಸ್
೨೫. ಕೃಷ್ಣೇಗೌಡ ದುಡ್ಡಿನ ಮುಖ ನೋಡಿದ್ದು ಯಾವಾಗ?
ಆನೆಯನ್ನು ಕೊಂಡುತಂದ ಮೇಲೆ
೨೬. ಹಾಳಾಗಿದ್ದ ಕೊಡಲಿ ನೋಡಲು ಹೇಗೆ ಕಾಣುತ್ತಿತ್ತು?
ಸುತ್ತಿಗೆ
೨೭. ಸರ್ಕಾರ ಯಾವ ಕಂಪನಿಗೆ ಬೆಂಕಿಕಡ್ಡಿ ಮರ ಕಡಿಯಲು ಗುತ್ತಿಗೆ ಕೊಟ್ಟಿತ್ತು?
ವಿಮ್ ಕೋ
೨೮. ಕೃಷ್ಣೇಗೌಡನ ಆನೆ ಯಾರ ಅಂಗಡಿಯನ್ನು ದೂಡಿ ಬೀಳಿಸಿತ್ತು?
ರೆಹಮಾನ
೨೯. ನಾಗರಾಜನ ಬಳಿ ಬಂದ ನಿರೂಪಕರು ಏನೆಂದು ಕೇಳಿದರು?
ರೀ ನಾಗರಾಜ್, ನನ್ನ ಕೊಡಲಿ ಯಾಕ್ರಿ ಇಡ್ಕೊಂಡಿದಿರಾ?
೩೦. ಫಾರೆಸ್ಟರ್ ಹೆಸರೇನು?
ನಾಗರಾಜ
೩೧. ನಿರೂಪಕರಿಗಿದ್ದ ಕೆಟ್ಟ ಕುತೂಹಲ ಯಾವುದು?
ತರಲೆ ಕೇಸುಗಳ ಕ್ಷುದ್ರ ಸಂಗತಿಗಳ ಜಾಡುಹಿಡಿಯುವ
೩೨. ನಿಶೆಯಲ್ಲಿದ್ದ ವೇಲಾಯುಧನಿಗೆ ಸಾಮಿಲ್ಲಿನಲ್ಲಿ ಯಾವ ವಿಚಾರ ಮರೆತುಹೋಯಿತು?
ದಿಮ್ಮಿಗೂ ಲಾರಿಗೂ ಕಟ್ಟಿದ್ದ ಹಗ್ಗ ಬಿಚ್ಚಿಲ್ಲವೆಂಬ
೩೩. ಕ್ಲೀನರ್ ಹಗ್ಗ ಬಿಚ್ಚುವ ಬದಲು ಯಾರನ್ನು ಹುಡುಕುತ್ತಿದ್ದ?
ಡ್ರೈವರ್‌ನನ್ನು
೩೪. ಯಾರು ಆನೆಯನ್ನು ಬಾಡಿಗೆ ಕೊಟ್ಟು ಕೆಲಸಕ್ಕೆ ಕರೆದೊಯ್ಯುತ್ತಿದ್ದರು?
ವಿಮ್ಕೊ ಕಂಪೆನಿಯವರು
೩೫. ಪುಟ್ಟಯ್ಯ ಯಾರು?
ವೆಟರ್ನರಿ ಆಸ್ಪತ್ರೆಯ ಸ್ಟಾಕ್‌ಮನ್
೩೬. ದುರ್ಗಪ್ಪನಿಗೆ ಯಾವ ಲೈನು ನೋಡಿಕೊಳ್ಳುವ ಜವಾಬ್ದಾರಿ ವಹಿಸಲಾಗಿತ್ತು?
ಕಳಸಾ ಲೈನು
೩೭. ದಾರಿ ಬದಿಯಲ್ಲಿ ನಿಂತಿದ್ದ ಲೂನ ಯಾರದು?
ಪೋಸ್ಟ್ಮನ್ ಜಬ್ಬಾರನದು
೩೮. ಜಬ್ಬಾರನ ಸಂಬಳ ಎಷ್ಟು?
ಅರುವತ್ತು ರೂಪಾಯಿ
೩೯. ಕತ್ತಲಲ್ಲಿ ನೆಲದಿಂದ ಮೇಲೆದ್ದು ನೇತಾಡುತ್ತಿದ್ದುದು ಎಷ್ಟನೇ ನಂಬರಿನ ಕಂಬ?
ಹದಿನೇಳನೇ
೪೦. ರಮೇಶ್ ಬಾಬು ಯಾರು?
ಟೆಲಿಫೋನ್ ಇಲಾಖೆಯ ಇಂಜಿನಿಯರ್
೪೧. ಹಳೇಕೊಪ್ಪದಲ್ಲಿ ಯಾವ ಮನೆಯ ಮಾಡು ದೊಪ್ಪನೆ ಕುಸಿದುಬಿತ್ತು?
ಸುಬ್ಬಣ್ಣ
೪೨. ಆನೆ ಬೇಲಿಡಾಟಿ ಹೋಯ್ತೆಂದು ನಾಗರಾಜನಿಗೆ ಹೇಳಿದವರಾರು?
ರಾಮಪ್ಪ
೪೩. ಆನೆಯ ಕಾಲಿಗೆ ಸರಪಳಿ ಕಟ್ಟದೆ ಇರಲು ಕೃಷ್ಣೇಗೌಡ ಕೊಟ್ಟ ಕಾರಣವೇನು?
ಆನೆಯ ಕಾಲಿಗೆ ಗಾಯವಾಗಿರುವುದರಿಂದ
೪೪. ಕೃಷ್ಣೇಗೌಡನನ್ನು ಕೊನೆಯಲ್ಲಿ ಕಾಡಿದ ಕಳವಳವೇನು?
ಆನೆ ಕಾಡಿನಿಂದ ಹಿಂದಿರುಗಿದರೆ ಏನು ಮಾಡುವುದೆಂದು
೪೫. ಸಾರ್ವಜನಿಕರು ನಾಗರಾಜನ ಸಾವಿನ ಬಗ್ಗೆ ಏನೆಂದು ಯೋಚಿಸಿದರು?
ಸಭೆಯಲ್ಲಾದ ಅಪಮಾನದಿಂದ ಆತ್ಮಹತ್ಯೆ
೪೬. ನಿರೂಪಕರ ಕೊಡಲಿಯ ಆಕಾರ ಹೇಗಿತ್ತು?
ಸುತ್ತಿಗೆ
೪೭. ಮಕ್ಕಳು ಆನೆಯನ್ನು ಯಾವ ಹೆಸರಿನಿಂದ ಕೂಗುತ್ತಿದ್ದರು?
ಗೌರಿ
೪೮. ವೆಟರ್ನರಿ ಸ್ಟಾಕ್‌ಮನ್ ಹೆಸರೇನು?
ಪುಟ್ಟಯ್ಯ
೪೯. “ಇದ್ದಿದ್ದನ್ನು ನಡೆಸ್ಕೊಂಡು ಹೋಗೋದೆ ಕಷ್ಟ ಆಗಿದೆ. ಜನಗಳ ವಿಶ್ವಾಸವನ್ನು ಉಳಿಸ್ಕೊಂಡು, ಕುರ್ಚಿನೂ ಉಳಿಸಿಕೊಂಡು ಟರ್ಮು ಮುಗಿಸಿದರೆ ಸಾಕಾಗಿದೆ” – ಖಾನ್ ಸಾಹೇಬರ ಈ ಮಾತು ಏನನ್ನು ಸೂಚಿಸುತ್ತದೆ?
ಅಧಿಕಾರದ ಲಾಲಸೆ
೫೦. “ನಿನ್ನ ಪುಕಾರೇನಿದ್ರೂ ಬರ್ವಣಿಗೇಲಿ ಇರಬೇಕು. ಹಂಗಿದ್ರೆ ಮಾತ್ರ ನಾನು ಆಕ್ಷನ್ ತಗೊಳ್ಳೋದು”ನಾಗರಾಜನ ಈ ಮಾತು ಏನನ್ನು ಸೂಚಿಸುತ್ತದೆ?
ದುರ್ಗಪ್ಪನ ಮೇಲಿನ ಕೋಪ
೫೧. ಗೌರಿ ಆನೆಗೆ ಗಾಯ ಮಾಡಿ ಕೈಕಾಲು ಮುರಿದರೆ ನೋಡಿಕೊಳ್ಳುವುದು ಮುರಿದವರ ಜವಾಬ್ದಾರಿಯೆ ಹೊರತು ತನ್ನದಲ್ಲವೆಂದೂ, ಅದು ಸತ್ತರೆ ಅದರ ಹೆಣ ಸಾಗಿಸಲು ಸಹ ತನ್ನಿಂದ ಸಾಧ್ಯವಿಲ್ಲವೆಂದೂ ಕೃಷ್ಣೇಗೌಡ ಹೇಳಲು ಕಾರಣ
ಆನೆಯಿಂದ ಮಾನಸಿಕ ಕಿರುಕುಳ ಅನುಭವಿಸುತ್ತಿರುವುದರಿಂದ
೫೨. “ಇನ್ನು ಮೇಲೆ ನಾಯಿ ಕೊಂದರೆ ಬಾಲ ತಗೊಂಡು ಬಂದು ತೋರಿಸಬೇಕು ಅಂತ ಹೇಳಿ, ಅವರ ಲೆಕ್ಕ ಸುಳ್ಳೋ ನಿಜವೋ ನಿಮಗೆ ಗೊತ್ತಾಗುತ್ತೆ”- ಇಲ್ಲಿ ನಿರೂಪಕರು ಯಾರ ಬೇಜವಾಬ್ದಾರಿ ಕುರಿತು ಹೇಳಿದ್ದಾರೆ?
ನೌಕರರ
೫೩. “ಕೊಂಬೆ ಸವರಿ ಲೈನ್ ಕ್ಲಿಯರ್ ಮಾಡ್ತಿರಬೇಕಾದರೆ ಫಾರೆಸ್ಟಿನವರು ಬಂದು ಡಿಪಾರ್ಟ್‌ಮೆಂಟಿನ ಮರ ಯಾಕೆ ಕಡೀತೀಯಾ ಅಂತ ಕೊಡ್ಲಿ ಕಿಡ್ಕೊಂಡುಬಿಟ್ಟಿದ್ದಾರೆ ಸಾರ್. ಕೇಳಿದರೆ ಕೋರ್ಟಿನಲ್ಲಿ ಕೇಸಾತ್ತೀವಿ ಕೋರ್ಟಿನಾಗೆ ಇಸ್ಕೋ ಅಂತಾರೆ.” – ಲೈನ್‌ಮನ್ ದುರ್ಗಪ್ಪನ ಈ ಮಾತಿನ ಭಾವ
ಫಾರೆಸ್ಟ್ ಡಿಪಾರ್ಟ್ ಮೆಂಟಿನ ಬಗ್ಗೆ ಸಿಟ್ಟು ತೋರಿಸುವುದು.
೫೪. “ಹಾಗಾದರೆ ನನ್ನ ಕೊಡಲಿಗೆ ತರ್ಪಣ ಬಿಡೋದು ಒಳ್ಳೆಯದು ಅನ್ನಿ”, ಇಲ್ಲಿ ‘ತರ್ಪಣ’ ಎಂಬ ಪದದ ಧ್ವನ್ಯರ್ಥ ಏನು?
ಆಸೆಬಿಡು
೫೫. “ಕೃಷ್ಣೇಗೌಡರ ಆನೆ ಇಂಥ ಪುಂಡು ಆನೆ ಎಂದು ಗೊತ್ತಿರಲಿಲ್ಲ. ಗೂಳೂರು ಮಠದ ಜಗದ್ಗುರುಗಳು ಯಾವ ಧೈರ್ಯದ ಮೇಲೆ ಇದರ ಮೇಲೆ ಕುಳಿತುಕೊಳ್ಳುತ್ತಿದ್ದರೋ” ಎಂದು ಕಾಡಪ್ಪಶೆಟ್ಟರು ಆನೆಯ ಬಗ್ಗೆ ಆರೋಪಿಸಲು ಕಾರಣವೇನು?
ಮೆರವಣಿಗೆ ಸಮಯದಲ್ಲಿ ಅಲಂಕೃತಗೊಂಡಿದ್ದ ಆನೆ ಅಂಬಾರಿ ಸಮೇತ ಓಡಿಹೋಗಿದ್ದರಿಂದ
೫೬. “ನನಗೆ ಸರಿಯಾದ ವೆಪನ್ ಕೊಟ್ಟರೆ ಅದನ್ನು ಈಗಿಂದೀಗಲೇ ಶೂಟ್ ಮಾಡಿ ಬಿಡುತ್ತೇನೆ. ಊರಿನ ಬಳಿ ಕಾಡಾನೆಗಳ ಕಾಟಕ್ಕೂ ಈ ಹೆಣ್ಣಾನೆಯೇ ಕಾರಣ” ಎಂದು ರೇಂಜರ್ ಎದುರು ನಾಗರಾಜ ಹೇಳಲು ಕಾರಣವೇನು?
ಗೌರಿ ಆನೆಯಿಂದಾಗಿ ತನ್ನ ವೃತ್ತಿಘನತೆಗೆ ಧಕ್ಕೆವುಂಟಾಗಿದ್ದಕ್ಕಾಗಿ
೫೭. “ಇಂಥ ತರಲೆ ಕೇಸುಗಳ ಜಾಡು ಹಿಡಿದು ವಿಷಯ ತಿಳಿದುಕೊಳ್ಳುವ ಕೆಟ್ಟ ಕುತೂಹಲ ಬೇರೆ. ನನ್ನ ಎಷ್ಟೋ ಕತೆಗಳ ಮೂಲ ಇಂಥ ಕ್ಷುದ್ರ ಗೋಜಲುಗಳಲ್ಲೇ ಹುದುಗಿರುತ್ತದೆ.”
– ಈ ಮಾತು ಕೆಳಗಿನ ಯಾವ ಹೇಳಿಕೆಯನ್ನು ಸಮರ್ಥಿಸುತ್ತದೆ?
ಕತೆಗೆ ಯಾವ ವಿಷಯವಾದರೂ ನಡೆಯುತ್ತದೆ.
58, “ಸತ್ತಿರೋದು ನಿಮ್ಮದು ಇವತ್ತಲ್ಲಾ ನಾಳೆ ನೀವೇ ಕೊಂದು ತಿನ್ನೋ ಪ್ರಾಣಿ. ಅದಕ್ಕೆ ಯಾಕ್ರಿ ನಷ್ಟ ಕಟ್ಟಿ ಕೊಡಬೇಕು?” ಇದನ್ನು ಯಾವ ಪ್ರಾಣಿ ಕುರಿತು ಹೇಳುತ್ತಾರೆ?
ಆನೆ
೫೯. “ನೀನೇನು ಕತ್ತೆ ಕಾಯ್ತಿದ್ದೀಯೇನೋ? ಷೂಟ್ ಮಾಡೋದಕ್ಕೆ ಏನಾಗಿತ್ತು ನಿನಗೆ?” – ಎಂದು ರೇಗಿದ ಫಾರೆಸ್ಟರ್ ನಾಗರಾಜ ಆನೆಯ ಬಗ್ಗೆ ಹೀಗೆ ನಿರ್ಧರಿಸಿದ್ದ –
ಆನೆಯನ್ನು ಕೊಂದೇ ಬಿಡಬೇಕೆಂದು
೬೦. “ನನಗೆ ಸರಿಯಾದ ವೆಪನ್ ಕೊಟ್ಟರೆ ಅದನ್ನು ಈಗಿಂದೀಗಲೇ ಶೂಟ್ ಮಾಡಿ ಬಿಡುತ್ತೇನೆ. ಊರಿನ ಬಳಿ ಕಾಡಾನೆಗಳ ಕಾಟಕ್ಕೂ ಈ ಹೆಣ್ಣಾನೆಯೇ ಕಾರಣ” ಎಂದು ನಾಗರಾಜ ಹೇಳಲು ಕಾರಣವೇನು?
ಆನೆಯ ನೆವದಿಂದ ವೈರಿಗಳೆಲ್ಲ ಒಟ್ಟಾಗಿರುವುದಕ್ಕಾಗಿ
೬೧. “ನಾನು ಬೆಳಗಿಂದ ನಾಕೈದು ಸಾರಿ ಲೈನ್ ಚಾರ್ಜ್ ಮಾಡಿದೆ. ಏನ್ ಮಾಡಿದ್ರು ಪೀಜೇ ನಿಲ್ಲಾಕಿಲ್ಲ. ಲೈನು ಟ್ರಬಲ್ಲಿದೆ ಅಂತ ಲೈನು ಮೇಲೆ ನೋಡಿಕೊಂಡು ಬಂದೆ. ಶಿವೇಗೌಡರ ಸಾಮಿಲ್ ಹತ್ರ ಕೊಂಬೆ ಲೈನು ಮೇಲೆ ಬಿದ್ದಿದೆ.” – ಏನನ್ನು ಸಮರ್ಥಿಸಲು ದುರ್ಗಪ್ಪ ಈ ಮೇಲಿನ ಮಾತುಗಳನ್ನು ನಿರೂಪಕರಿಗೆ ಹೇಳುತ್ತಾನೆ?
ಕೃಷ್ಣೇಗೌಡರ ಆನೆಯ ಕೆಲಸವನ್ನು
೬೨. “ಆನೆ ಹೊಸಕಿ ಬಿಸಾಕಿದ್ದ ಮಾಂಸದ ಉಂಡೆಯನ್ನು ತನ್ನ ಗಂಡನದೆಂದು ಗುರುತಿಸಿ ಗೊಳೋ ಎಂದು ಅಳುತ್ತಾ ಕುಳಿತಿದ್ದ ವೇಲಾಯುಧನ ಹೆಂಡತಿ ಪೊಲೀಸರು ಮಹಜರಿಗೆ ಬರುತ್ತಲೂ ಗಟ್ಟಿ ಗಂಟಲಲ್ಲಿ ಹುಯ್ಯಲಿಡಲು ಶುರುಮಾಡಿದಳು.”- ಇದಕ್ಕೆ ಕಾರಣ
ಸರ್ಕಾರದಿಂದ ತನಗೇನಾದರೂ ಪರಿಹಾರ ದೊರೆಯುತ್ತದೆಂದು
೬೩. “ನಾವು ಬರ್ತಿವಿ, ನೀವು ಮುಂದೆ ನಡೀರಿ ಸಾರ್. ಈ ತರ ತೊಂದರೆ ಆಗಿದೆ ಅಂತ ಹೇಳೋದಕ್ಕೆ ನಮಗೇನು ಭಯವ? ಹುಚ್ಚು ನಾಯಿ ಕೈಲಿ ಕಚ್ಚಿಸ್ಕೊಂಡು ಪ್ರಾಣ ಕಳ್ಕೊಳ್ಳೋರು ನಾವಲ್ಲ? ಪ್ರೆಸಿಡೆಂಟ್ರಿಗೇನು ಗೊತ್ತಾಗುತ್ತೆ ಹೇಳಿ” – ಈ ಮಾತಿನ ದನಿಯ ವರಸೆ ಏನನ್ನು ಸೂಚಿಸುತ್ತದೆ?
ಪುಟ್ಟಯ್ಯನ ಚಿತಾವಣೆ
೬೪. “ನನಗೆ ಈ ಪುರಾತನ ಕಾಲದ ಜೀಪಿನ ಹಳೆಯ ಭಾಗಗಳನ್ನು ಬದಲಿಸಿ ಅದರ ಒರಿಜಿನಾಲಿಟಿ ಹಾಳು ಮಾಡುವುದು ಸರಿತೋರಲಿಲ್ಲ. ನನ್ನ ಈ ಒರಿಜಿನಾಲಿಟಿ ಉಳಿಸುವ ಪ್ರಯತ್ನದಿಂದ ತಿಂಗಳಿಗೊಮ್ಮೆ ಜೀಪಿನ ಆಡಿ ಬಿದ್ದುಕೊಂಡು ಅದರ ಗೇರ್ ಬಾಕ್ಸ್ ಬಿಚ್ಚಿ ರಿಪೇರಿ ಮಾಡುವ ಕೆಲಸ ಖಾಯಮ್ಮಾಗಿತ್ತು” – ನಿರೂಪಕರ ಈ ಮಾತು ಏನನ್ನು ಸೂಚಿಸುತ್ತದೆ?
ಸ್ವಂತಿಕೆ ಉಳಿಸುವ ಪ್ರಯತ್ನ
೬೫. “ಟೆಲಿಫೋನ್ ಕಂಬದ ಮೇಲೇ ಯಾಕೋ ಕೈಲಾಸ ಕಂಡಹಾಗೆ ಇದೆಯಲ್ಲಾ” ಈ ಮಾತನ್ನು ಶಂಕರಪ್ಪ ಯಾರನ್ನು ಕುರಿತು ಹೇಳಿದ್ದಾನೆ?
ತಿಪ್ಪಣ್ಣ
೬೬. “ಕೃಷ್ಣೇಗೌಡರ ಆನೆ ಇಂಥ ಪುಂಡು ಆನೆ ಎಂದು ಗೊತ್ತಿರಲಿಲ್ಲ. ಗೂಳೂರು ಮಠದ ಜಗದ್ಗುರುಗಳು ಯಾವ ಧೈರ್ಯದ ಮೇಲೆ ಇದರ ಮೇಲೆ ಕುಳಿತುಕೊಳ್ಳುತ್ತಿದ್ದರೋ” – ಈ ಮಾತುಗಳಲ್ಲಿನ ಅರ್ಥ ಏನು?
ಆನೆ ನಂಬಿಕೆಗೆ ಅರ್ಹವಲ್ಲ
೬೭. “ಸತ್ತಿರೋದು ನಿಮ್ಮದು ಇವತ್ತಲ್ಲಾ ನಾಳೆ ನೀವೇ ಕೊಂದು ತಿನ್ನೋ ಪ್ರಾಣಿ. ಅದಕ್ಕೆ ಯಾತ್ರೆ ನಷ್ಟ ಕಟ್ಟಿ ಕೊಡಬೇಕು? ನಾಳೆ ಮಾಡೋ ಸಾರು ಇವತ್ತೇ ಮಾಡ್ರಿ.” ಈ ಸಾಲಿನ ಪ್ರಾಮುಖ್ಯತೆ
ನಾಗರಾಜನ ಅಸಡ್ಡೆ ಮಾತು
೬೮. “ಆದೇನ್ಮಾಡುತಯ್ಯಾ ಆನೆ. ಎಲ್ಲೋ ಕಂಬದ ಮೇಲೆ ಸತ್ತಿರೋ ತಿಪ್ಪಣ್ಣನಿಗೂ, ಎಲ್ಲೋ ಓಡಾಡಿಕೊಂಡಿರೋ ಆನೆಗೂ ಕಟೀರಲ್ಲಯ್ಯಾ, ಬಾಯಿಲ್ಲದೋರು ಈ ಪ್ರಪಂಚದಲ್ಲಿ ಬದುಕೋಹಂಗೇ ಇಲ್ಲವೇನಯ್ಯಾ?” – ಹೀಗೆಂದು ನಿರೂಪಕರು ದುರ್ಗಪ್ಪನಿಗೆ ಹೇಳಿದ ಮಾತಿನಲ್ಲಿ ವ್ಯಕ್ತವಾಗುವ ಭಾವ.
ಆನೆ ಗೌರಿಯ ಬಗೆಗೆ ನಿರೂಪಕರಲ್ಲಿರುವ ಸಹಾನುಭೂತಿ
೬೯. “ಆನೆ ಅಷ್ಟು ದೊಡ್ಡ ಪ್ರಾಣಿಯಾದರೂ ಸುಳಿವೇ ಕೊಡದೆ ತಂಗಾಳಿಯಂತೆ ಓಡಾಡಬಲ್ಲದು ಎನ್ನುವುದು ನಾಗರಾಜನ ಸರ್ವಿಸ್ಸಿನಲ್ಲಿ ಎಷ್ಟೋ ಸಾರಿ ಗಮನಕ್ಕೆ ಬಂದಿತ್ತು. ಅದಕ್ಕೆ ಅವನು ‘ಮೈಯೆಲ್ಲಾ ಕಣ್ಣಾಗಿ’ ಕುಳಿತಿದ್ದ” – ಇಲ್ಲಿ ‘ಮೈಯೆಲ್ಲಾ ಕಣ್ಣಾಗಿ’ ಕುಳಿತಿದ್ದ ಎನ್ನುವುದು ಏನನ್ನು ಸೂಚಿಸುತ್ತದೆ?
ಪೂರ್ಣ ಎಚ್ಚರದಿಂದ ಗಮನಿಸುವುದು
೭೦. “ಕುಡಿದ ಮತ್ತಿನಲ್ಲಿ ವೇಲಾಯುಧನಿಗೆ ಇದೇಕೆ ನಾಟಾ ಉರುಳುವುದರ ಬದಲು ಲಾರಿಯೇ ಉರುಳುತ್ತಿದೆ ಆರ್ಥವಾಗಲಿಲ್ಲ.” – ಇಲ್ಲಿ ನಾಟಾ ಸಮೇತ ಲಾರಿ ಉರುಳಲು ಕಾರಣ
ನಾಟಕ್ಕೂ ಲಾರಿಗೂ ಕಟ್ಟಿದ್ದ ಹಗ್ಗ ಬಿಚ್ಚದೇ ಅನ್ಲೋಡ್ ಮಾಡಲು ಆನೆಗೆ ಹೇಳಿದ್ದು
ಇ) ಎರಡು ಅಂಕದ ಪ್ರಶ್ನೆಗಳು (ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ):
೧. ನಮ್ಮ ಕಡೆ ಕೆಮ್ಮುವುದು ಕಾಲಿಂಗ್ ಬೆಲ್ ಇದ್ದಹಾಗೆ ಎಂದು ನಿರೂಪಕರು ಹೇಳುವುದೇಕೆ?
ಮನೆ ಬಳಿ ಬಂದವರು ಗಮನ ಸೆಳೆಯಲು ಕೆಮ್ಮುವುದು, ಕ್ಯಾಕರಿಸುವುದು ಮಾಡಿ ಗಲಾಟೆ ಮಾಡುತ್ತಿದ್ದುದರಿಂದ ಲೇಖಕರು ನಮ್ಮ ಕಡೆ ಕೆಮ್ಮುವುದು ಕಾಲಿಂಗ್ ಬೆಲ್ ಇದ್ದಹಾಗೆ ಎಂದು ನಿರೂಪಕರು ಹೇಳಿದ್ದಾರೆ.
೨. ದುರ್ಗಪ್ಪ ಏಕೆ ಬಂದಿರಬಹುದೆಂದು ನಿರೂಪಕರು ಯೋಚಿಸಿದರು?
ದುರ್ಗಪ್ಪ ಮನೆ ಬಳಕೆಗೆ ಕಾಫಿ ಬೀಜವನ್ನೋ, ಏಲಕ್ಕಿಯನ್ನೋ ಕೇಳಲೆಂದೋ, ಇನಾಮು ಕೇಳಲೆಂದೋ ಬಂದಿರಬಹುದೆಂದು ನಿರೂಪಕರು ಯೋಚಿಸಿದರು.
೩. ಕೃಷ್ಣೇಗೌಡನ ಆನೆ ಹುಟ್ಟಿ ಬೆಳೆದ ಬಗೆ ಹೇಗೆ?
ಕೃಷ್ಣೇಗೌಡನ ಆನೆ ಗೌರಿಯು ಹುಟ್ಟಿದ್ದು ಬೆಳೆದದ್ದು ಎಲ್ಲ ಊರಿನಲ್ಲಿ ಜನಗಳ ನಡುವೆಯೇ, ಹಾಗಾಗಿ ಅದಕ್ಕೆ ಕಾಡಿನ ಬಗ್ಗೆಯಾಗಲೀ, ಕಾಡಿನಲ್ಲಿರುವ ಇತರ ಕಾಡಾನೆಗಳ ಬಗ್ಗೆಯಾಗಲೀ ಏನೂ ತಿಳಿವಳಿಕೆ ಇರಲಿಲ್ಲ.
೪. ಮಠದವರಿಗೆ ಆನೆಗಿಂತ ವೇಲಾಯುಧನನ್ನು ಸಾಕಲು ತ್ರಾಸಾದುದೇಕೆ?
ಇಪ್ಪತ್ತನಾಲ್ಕು ಗಂಟೆಯೂ ಕುಡಿದೇ ಇರುತ್ತಿದ್ದ ವೇಲಾಯುಧ ಮಠದ ಸಾತ್ವಿಕ ವಾತಾವರಣಕ್ಕೆ ದೊಡ್ಡ ತಲೆನೋವಾಗಿದ್ದ ಆನೆ ಇರುವವರೆಗೆ ತನ್ನ ಅನಿವಾರ್ಯತೆಯನ್ನು ಅರಿತ ಅವನು ಮಠಕ್ಕೆ ಕಿರುಕುಳ ಕೊಡಲಾರಂಭಿಸಿದ್ದರಿಂದ ಮಠದವರಿಗೆ ಆನೆಗಿಂತಲೂ ಅದರ ಮಾವುತನನ್ನು ಸಾಕುವುದು ಹೆಚ್ಚು ತ್ರಾಸದಾಯಕವಾಗಿತ್ತು.
೫. ಆನೆ ಸಾಕುವುದರ ಬಗ್ಗೆ ಜನರ ನಂಬಿಕೆ ಏನಾಗಿತ್ತು?
ಆನೆ ಸಾಕುವುದೆಂದರೆ ಎಲೆಕ್ಷನ್ನಿಗೆ ನಿಂತ ಹಾಗೆ! ಮನೆ ಮಠ ಸಂಪೂರ್ಣ ಹಾಳುಮಾಡಿಕೊಂಡು ಹೆಂಡತಿ ಮಕ್ಕಳ ಬಾಯಿಗೆ ಮಣ್ಣು ಹಾಕುವ ಕ್ಷಿಪ್ರ ಮಾರ್ಗ ಇದೆಂದು ಜನರೆಲ್ಲರೂ ದೃಢವಾಗಿ ನಂಬಿದ್ದರು.
೬. ಸೊರಗಿದ್ದ ಆನೆಯನ್ನು ಕೃಷ್ಣೇಗೌಡ ಹೇಗೆ ಸಾಕಿದ?
ಮಠದಲ್ಲಿ ಬರಿ ಒಣಹುಲ್ಲು ಮೊಸರನ್ನ ತಿಂದು ಸೊರಗಿದ್ದ ಆನೆಗೆ ಕೃಷ್ಣೇಗೌಡ ಬಯನೆ ಸೊಪ್ಪು, ಹಸಿಹುಲ್ಲು, ಹಿಂಡಿ, ಬೆಲ್ಲ, ಗೆಣಸು ಎಲ್ಲವನ್ನು ತಿನ್ನಿಸಿ ಪೆಗಡುದಸ್ತಾಗಿ ಬೆಳೆಸಿದನು.
೭. ಕಾಡಾನೆಗಳ ಹಾವಳಿಗೆ ಪ್ರಕಾಶ ನೀಡಿದ ಕಾರಣಗಳೇನು?
ಅಥವಾ
ಕಾಡಾನೆಗಳ ಹಾವಳಿಗೆ ಕೃಷ್ಣೇಗೌಡರ ಆನೆ ಕಾರಣವಲ್ಲ ಎನ್ನುವ ಪ್ರಕಾಶರ ಹೇಳಿಕೆಯನ್ನು ಸಮರ್ಥಿಸಿ.
ಭದ್ರಾ ಅಣೆಕಟ್ಟಿನಿಂದ ಮುಳುಗಡೆಯಾಗುವ ಕಾಡುಗಳನ್ನು ಸರ್ವೇ ಮಾಡಲು ಬಂದಿದ್ದ ಪ್ರಕಾಶ ಮೂಡಿಗೆರೆಯಲ್ಲಿ ಒಂದು ಭಾಷಣ ಮಾಡುತ್ತ, ಅರಣ್ಯ ಇಲಾಖೆಯವರು ಕಾಡಿನ ಮರಗಳನ್ನು ಕಡಿದು ನೀಲಗಿರಿ, ಅಕೇಶಿಯಾ ಮುಂತಾದ ಆನೆಗಳಿಗೆ ನಿರುಪಯುಕ್ತವಾದ ಮರಗಳನ್ನು ನೆಡುತ್ತಿರುವುದರಿಂದ ಕಾಡಾನೆಗಳು ಊರಿನಕಡೆ ಬಂದು ಜನರ ಪೈರು ಫಸಲಿಗೆ ಹಾನಿ ಮಾಡುತ್ತಿವೆ. ಆದ್ದರಿಂದ ಈ ಸಮಸ್ಯೆಗೆ ಕೃಷ್ಣೇಗೌಡರ ಆನೆ ಕಾರಣವಲ್ಲ ಎಂಬುದು ಪ್ರಕಾಶರ ಸಮರ್ಥನೆ.
೮. ಫಾರೆಸ್ಟ್ ಡಿಪಾರ್ಟ್ ಮೆಂಟಿನವರ ನಂಬರ್ ಒನ್ ಎನಿಮಿಗಳು ಯಾರು ಯಾರು?
ನಾಗರಾಜನ ಅಭಿಪ್ರಾಯದಂತೆ, ಪಿಡಬ್ಲ್ಯೂ ಡಿನವರು, ಎಲೆಕ್ನಿಕ್ ಡಿಪಾರ್ಟ್ ಮೆಂಟಿನವರು ಮತ್ತು ಟೆಲಿಫೋನ್ ಡಿಪಾರ್ಟ್‌ಮೆಂಟಿನವರು ಅರಣ್ಯ ಇಲಾಖೆಯ ನಂಬರ್ ಒನ್ ಎನಿಮಿಗಳು.
೯. ನಾಗರಾಜ ದುರ್ಗಪ್ಪನ ಮೇಲೆ ಏನೆಂದು ರೇಗಿದನು?
ನಾಗರಾಜ ದುರ್ಗಪ್ಪನಿಗೆ ‘ಏನೋ, ಮರ ಯಾಕೆ ಕಡೀತೀಯಾಂತ ಕೇಳಿದರೆ ಮ್ಯಾಲಿನೋರ ಕೇಳ್ಳಳ್ಳಿ ಅಂತ ಉಚಾಯಿಸಿ ಮಾತಾಡ್ತೀಯಾ? ಹೇಳದೆ ಕೇಳದೆ ಡಿಪಾರ್ಟ್ ಮೆಂಟಿನ ಮರಕಡಿದರೆ ಇನ್ನೊಂದು ಸಾರಿ, ಮತ್ತೇನಿಲ್ಲ! ನಿನ್ನ ಲಾಕಪ್ಪಿಗೆ ಹಾಕಿಸಿ ಬಿಡ್ತೀನಿ. ಏನಂತ ತಿಳ್ಕೊಂಡಿದ್ದೀಯ’ ಎಂದು ಗದರಿಸಿದನು.
೧೦. ಡ್ರೈವರ್‌ನ ತಲೆ ಜಜ್ಜಿ ಹೋದದ್ದು ಹೇಗೆ? ಅದಕ್ಕೆ ಆನೆ ಕಾರಣವೇ?
ಆನೆಯು ವೇಲಾಯುಧನ ಆಜ್ಞೆಯಂತೆ ನಾಟಾಗಳನ್ನು ತಳ್ಳಿತು. ಆದರೆ ಕ್ಲೀನರ್ ನಾಟಾಗಳಿಗೆ ಮತ್ತು ಲಾರಿಗೆ ಸೇರಿಸಿ ಕಟ್ಟಿದ್ದ ಹಗ್ಗವನ್ನು ಬಿಚ್ಚಿರಲಿಲ್ಲವಾದ್ದರಿಂದ ಲಾರಿಯೇ ಉರುಳಿಬಿದ್ದಿತು. ಆಗ ಕ್ಯಾಬಿನ್ನಿನಲ್ಲಿಟ್ಟಿದ್ದ ಮಣಭಾರದ ಲಾರಿಯ ಜಾಕ್ ಧೂಪ್ಪನ ಡ್ರೈವರ್ ತಲೆ ಮೇಲೆ ಬಿದ್ದು ತಲೆ ಜಜ್ಜಿ ಹೋಗಿದ್ದರಿಂದ ಆತ ಸಾವನ್ನಪ್ಪಿದ. ಆನೆ ನೇರವಾಗಿ ಅವನ ಸಾವಿಗೆ ಕಾರಣವಲ್ಲ.
೧೧. ತನ್ನ ಕೆಲಸ ಅತ್ಯಂತ ಅಪಾಯಕಾರಿಯೆಂದು ದುರ್ಗಪ್ಪ ವಿವರಿಸಿದ್ದು ಹೇಗೆ?
ದುರ್ಗಪ್ಪ ಲೇಖಕರನ್ನು ಕುರಿತು ನಮ್ಮ ಡಿಪಾರ್ಟ್ ಮೆಂಟಿನ ಲೈನ್‌ಮನ್‌ಗಳಾರೂ ಸರ್ವಿಸ್ ಮುಗಿಸಿ ರಿಟೈರಾಗಿರೋದನ್ನ ನೋಡಿದ್ದೀರಾ? ಕರೆಂಟಿನ ಜೊತೆ ಕೆಲಸ ಅದು. ಒಂದಲ್ಲಾ ಒಂದು ದಿನ ಸ್ವಲ್ಪ ಎಚ್ಚರ ತಪ್ಪಿದ್ರೂ ಅಲ್ಲಿಗೆ ನಮ್ಮ ಸರ್ವಿಸ್ ಮುಗಿದಂತೆಯೇ ಎಂದು ವಿವರಿಸಿದ.
೧೨. ಜಬ್ಬಾರ್ ನಿರೂಪಕರಿಗೆ ಆಂಚೆ ವಿಲೇವಾರಿ ಬಗ್ಗೆ ಅಸಡ್ಡೆಯಿಂದ ಏನು ಹೇಳಿದ?
ನಿರೂಪಕರು ಜಬ್ಬಾರನ ಅಂಚೆ ವಿಲೇವಾರಿ ತಡವಾದುದರ ಬಗ್ಗೆ ಆಕ್ಷೇಪಿಸಿದರೆ ಆತ “ಆಯ್ಯೋ ಯಾವೋ ಮದೈಮನೆ ಕಾಗದ ಸಾರ್, ನೀವೇನು ಹೋಗೋದಿಲ್ಲ ಏನಿಲ್ಲ, ಅವನ್ನು ಇವತ್ತು ಕೊಟ್ಟರೂ ಒಂದೇ, ನಾಳೆ ಕೊಟ್ಟಿರೂ ಒಂದೇ” ಎ೦ದು ಆಸಡ್ಡೆಯಿಂದ ಹೇಳುತ್ತಿದ್ದ.
೧೩. ನಾಯಿ ಕಚ್ಚಿದ್ದೆಲ್ಲಿ ಎಂದಾಗ ಜಬ್ಬಾರ್ ಇರುಸುಮುರುಸಿನಿಂದ ಏನು ಹೇಳಿದನು?
ಪುಟ್ಟಯ್ಯ ನಾಯಿ ಕಚ್ಚಿದ್ದೆಲ್ಲೆಂದು ಪ್ರಶ್ನಿಸಿದಾಗ ಜಬ್ಬಾರ್ “ಹೋಗಲಿ ಬಿಡಿ. ಅದು ಬೀದೀಲಿ ತೋರಿಸೋಹಂಗಿಲ್ಲ. ನನ್ನ ಮಗಂದು ಅಂಥಾ ಜಾಗದಲ್ಲಿ ಕಚ್ಚಿದೆ. ಪ್ಯಾಂಟು ಬಿಚ್ಚಬೇಕಾಗುತ್ತೆ” ಎಂದು ತಗ್ಗಿದ ದನಿಯಲ್ಲಿ ಉತ್ತರಿಸಿದನು.
೧೪. ಹುಚ್ಚುನಾಯಿಗಳು ಆಸ್ಪತ್ರೆಯಲ್ಲಿ ಹೇಗೆ ವರ್ತಿಸುತ್ತವೆಂದು ಪುಟ್ಟಯ್ಯ ಹೇಳಿದ?
ಪುಟ್ಟಯ್ಯ ನಿರೂಪಕರಿಗೆ “ಹುಚ್ಚುನಾಯಿಗಳ ಹತ್ರ ಧೈರ್ಯದ ಪ್ರಶ್ನೆನೆ ಬರೋಲ್ಲ ಸಾರ್. ಅವಕ್ಕೆ ತಲೆಕೆಟ್ಟು ಕಂಡಕಂಡಿದ್ದಕ್ಕೆಲ್ಲಾ ಕಚ್ಚುತ್ತವೆ. ಆಸ್ಪತ್ರೆಗೆ ತಗೊಂಡು ಬಂದವನ್ನ ನೋಡಿದೀನಲ್ಲ. ಮೇಜು, ಕುರ್ಚಿಗಳ ಕಾಲಿಗೆಲ್ಲ ಕಚ್ಚುತ್ತವೆ” ಎಂದು ಹೇಳಿದನು.
೧೫. ನಾಯಿಯನ್ನು ಕೊಲ್ಲದೆ ನೌಕರರು ಸುಳ್ಳು ಹೇಳಿರುವರೆಂದು ನಿರೂಪಕರು ಯಾವ ಸಲಹೆ ನೀಡಿದರು?
”ನಿಮ್ಮ ನೌಕರರು ಒಂದೇ ಒಂದು ನಾಯಿಯನ್ನೂ ಕೊಲ್ಲದೆ ನಿಮಗೆ ಸುಳ್ಳು ಲೆಕ್ಕ ಕೊಟ್ಟಿದ್ದಾರೆ ಖಾನ್‌ಸಾಬ್. ಒಂದು ಕೆಲಸ ಮಾಡಿ, ಇನ್ನು ಮೇಲೆ ನಾಯಿಕೊಂದರೆ ಬಾಲ ತಗೊಂಡು ಬಂದು ತೋರಿಸಬೇಕು ಅಂತ ಹೇಳಿ, ಅವರ ಲೆಕ್ಕ ಸುಳ್ಳೋ ನಿಜವೋ ನಿಮಗೆ ಗೊತ್ತಾಗುತ್ತೆ’ ಎಂದು ನಿರೂಪಕರು ಸಲಹೆ ಕೊಟ್ಟರು.
೧೬. ಆನೆಯೇ ತಿಪ್ಪಣ್ಣನ ಸಾವಿಗೆ ಕಾರಣವೆಂದು ದುರ್ಗಪ್ಪ ಹೇಳಿದಾಗ ನಿರೂಪಕರ ಪ್ರತಿಕ್ರಿಯೆ ಏನು?
ನಿರೂಪಕರು ದುರ್ಗಪ್ಪನಿಗೆ “ಅದೇನ್ಮಾಡುತ್ತಯ್ಯಾ ಆನೆ. ಎಲ್ಲೋ ಕಂಬದ ಮೇಲೆ ಸತ್ತಿರೋ ತಿಪ್ಪಣ್ಣನಿಗೂ, ಎಲ್ಲೋ ಓಡಾಡಿಕೊಂಡಿರೋ ಆನೆಗೂ ಕಟ್ತೀರಲ್ಲಯ್ಯಾ. ಬಾಯಿಲ್ಲದೋರು ಈ ಪ್ರಪಂಚದಲ್ಲಿ ಬದುಕೋ ಹಂಗೇ ಇಲ್ಲವೇನಯ್ಯಾ?” ಎಂದು ಪ್ರತಿಕ್ರಿಯಿಸಿದರು.
೧೭. ಡ್ರೈವರ್ ಅಬ್ಬಾಸ್, ಕ್ಲೀನರ್ ಕೃಷ್ಣರ ಸಾವಿಗೆ ಕಾರಣವೇನು?
ಅಬ್ಬಾಸ್‌ನಿಗೆ ಲಾರಿ ಓಡಿಸುವಾಗ ಬೀಡಿ ಎಳೆಯುವ ತೆವಲು ಶುರುವಾಗಿ ಕ್ಲೀನರ್ ಕೃಷ್ಣನಿಗೆ ಸೇರಿಂಗ್ ಹಿಡಿದುಕೊಳ್ಳಲು ಕೊಟ್ಟಿದ್ದನು. ದೊಡ್ಡ ಮರ ಎದುರಾದಾಗ ಕೃಷ್ಣ ಸ್ಟೇರಿಂಗ್ ಬಿಡದೆ ಬಲವಾಗಿ ಹಿಡಿದುಕೊಂಡಿದ್ದರಿಂದ ಲಾರಿ ಮರದ ಕಡೆ ನುಗ್ಗಿತು. ಗಾಬರಿಯಲ್ಲಿ ಅಬ್ಬಾಸ್‌ಗೆ ಬ್ರೇಕ್ ಹಾಕಬೇಕೆಂದು ಹೊಳೆಯಲಿಲ್ಲ. ಲಾರಿ ಮರಕ್ಕೆ ಡಿಕ್ಕಿ ಹೊಡೆದು ಹಿಂದುಗಡೆ ಇದ್ದ ಅಪಾರ ತೂಕದ ದಿಮ್ಮಿಗಳು ಕ್ಯಾಬಿನ್ನನ್ನು ಮುರಿದು ಮುನ್ನುಗ್ಗಿದ್ದರಿಂದ ನಡುವೆ ಸಿಕ್ಕಿದ ಕ್ಲೀನರ್ ಕೃಷ್ಣ, ಡ್ರೈವರ್ ಅಬ್ಬಾಸ್ ಇಬ್ಬರೂ ಸತ್ತುಹೋದರು.
೧೮. ಡ್ರೈವರ್ ಅಬ್ಬಾಸ್ ಮತ್ತು ಕ್ಲೀನರ್ ಕೃಷ್ಣರ ಸಾವಿಗೆ ಆನೆ ಕಾರಣವಲ್ಲವೆಂದು ವೇಲಾಯುಧ ಯಾರಿಗೂ ಹೇಳಲಿಲ್ಲವೇಕೆ?
ಕ್ಲೀನರ್ ಕೃಷ್ಣ ಮತ್ತು ಡ್ರೈವರ್ ಅಬ್ಬಾಸ್ ಸತ್ತಿದ್ದಕ್ಕೆ ತನ್ನ ಆನೆ ಕಾರಣವಲ್ಲವೆಂಬುದು ವೇಲಾಯುಧನಿಗೆ ಗೊತ್ತಿತ್ತು. ಏಕೆಂದರೆ ಲಾರಿಯಲ್ಲಿ ಬರುತ್ತಿದ್ದ ಕಳ್ಳಮಾಲನ್ನು ಶಿವೇಗೌಡರ ಸಾಮಿಲಿನಲ್ಲಿ ಆನ್‌ಲೋಡ್ ಮಾಡಲು ಆನೆಯೊಂದಿಗೆ ವೇಲಾಯುಧ ಸಾಮಿಲ್ಲಿನಲ್ಲೇ ಕಾಯುತ್ತಿದ್ದ. ಆನೆಗೂ ಅವರ ಸಾವಿಗೂ ಸಂಬಂಧವಿಲ್ಲವೆಂದು ಹೇಳುವ ವರಿಸ್ಥಿತಿಯಲ್ಲಿ ಆತ ಇರಲಿಲ್ಲ. ಏಕೆಂದರೆ ಅದೆಲ್ಲಾ ಕಳ್ಳ ವ್ಯವಹಾರವಾಗಿತ್ತು
೧೯. ಆನೆಯನ್ನು ಹದ್ದುಬಸ್ತಿನಲ್ಲಿಡುವುದರ ಬಗ್ಗೆ ವೇಲಾಯುಧನ ಅಪ್ಪ ಏನು ತಿಳಿಸಿದ್ದ?
ಆನೆಯ ಕಾಲಿನ ಉಗುರುಗಳ ಬಳಿ ಅಂಕುಶದಿಂದ ತಿವಿದರೆ ಸಾಕು ಅದಕ್ಕೆ ಪ್ರಾಣವೇ ಹೋಗುವಷ್ಟು ನೋವಾಗುತ್ತ ದೆಂದೂ, ಆ ಭಯಂಕರ ನೋವಿಗೆ ನಾಲ್ಕು ಸಾರಿ ತಿವಿಯುವುದರೊಳಗೆ ಎಂಥ ಪುಂಡು ಆನೆಯಾದರೂ ಶರಣಾಗಿ ನೆಲದ ಮೇಲೆ ಮಲಗಿಬಿಡುತ್ತದೆಂದೂ ವೇಲಾಯುಧನ ಅಪ್ಪ ತಿಳಿಸಿದ್ದನು.
೨೦. ಅರಣ್ಯ ಇಲಾಖೆಯವರು ನಾಗರಾಜನನ್ನು ಕುರಿತು ಪತ್ರಿಕೆಗಳಲ್ಲಿ ಏನೆಂದು ಜಾಹೀರಾತು ನೀಡಿದರು?
ಅರಣ್ಯ ಇಲಾಖೆಯವರು ಪತ್ರಿಕೆಗಳಲ್ಲಿ ನಾಗರಾಜನ ಫೋಟೋ ಹಾಕಿಸಿ, “ಮನೆಯವರು, ಮೇಲಧಿಕಾರಿಗಳು ಹಾಗೂ ಊರಿನ ಜನರೆಲ್ಲ ನಿನ್ನದೇ ನಿರೀಕ್ಷೆಯಲ್ಲಿದ್ದಾರೆಂದೂ, ನಿನ್ನ ವಿರುದ್ಧ ಯಾವುದೇ ಕ್ರಮ ಅಥವಾ ಮೋಕಾಸ್ ನೋಟೀಸ್ ಅಥವಾ ತನಿಖೆ ನಡೆಸುವುದಿಲ್ಲವೆಂದೂ, ಈ ಮನವಿ ನೋಡಿದ ಕೂಡಲೇ ಎಲ್ಲಿದ್ದರೂ ಹಿಂದಿರುಗಿ ಬರತಕ್ಕದ್ದು” ಎಂದೂ ಜಾಹೀರಾತು ನೀಡಿದ್ದರು.
ಹೆಚ್ಚುವರಿ ಪ್ರಶ್ನೆಗಳು:
೨೧. ಕೊಂಬೆ ಲೈನ್ ಮೇಲೆ ಬೀಳಲು ಆನೆ ಕಾರಣವೆಂದು ದುರ್ಗಪ್ಪ ಹೇಗೆ ಹೇಳಿದ?
ಮರದ ಕೆಳಗೆ ಬುಟ್ಟಿಗಟ್ಟಲೆ ಆನೆಯ ಲದ್ದಿ ಬಿದ್ದಿರುವುದರಿಂದಲೂ, ಶಿವೇಗೌಡರ ಸಾಮಿಲ್ಲಿನ ಪಕ್ಕದಲ್ಲಿಯೇ ಮರದ ಕೊಂಬೆ ಮುರಿದು ಬಿದ್ದಿರುವುದರಿಂದಲೂ ಆನೆಯೇ ಕೊಂಬೆಯನ್ನು ಲೈನ್ ಮೇಲೆ ಬೀಳಿಸಿದೆಯೆಂದು ದುರ್ಗಪ್ಪ ಹೇಳುತ್ತಾನೆ.
೨೨. ಲೇಖಕರಿಗೆ ಜೀಪಿನ ವಿಷಯದಲ್ಲಿ ಯಾವ ಸಲಹೆ ಸರಿತೋರಲಿಲ್ಲ?
ಲೇಖಕರಿಗೆ ಅವರ ಹಳೆಯ ಫೋರ್ಡ್ ಜೀಪಿನ ಗೇಬಾಕ್ಸ್ ತೆಗೆದುಹಾಕಿ ಹೊಸ ಮಾಡಲಿನ ವಿಲ್ಲೀರ್ಸ್ ಜೀಪ್ ಗೇರ್‌ಬಾಕ್ಸ್ ಜೋಡಿಸಿಬಿಡು ಎಂಬ ಕೆಲವರ ಸಲಹೆ ಸರಿಬರಲಿಲ್ಲ. ಅವರಿಗೆ ತಮ್ಮ ಜೀಪಿನ ಒರಿಜಿನಾಲಿಟಿ ಹಾಳು ಮಾಡುವುದು ಸರಿತೋರಲಿಲ್ಲ.
೨೩. ನಿರೂಪಕರು ಕೊಡಲಿ ಅಮೂಲ್ಯವಾದುದಾಗಿರಲಿಲ್ಲ ಎಂದು ಹೇಳಲು ಕಾರಣವೇನು?
ಕೆರೆ ಕೆಲಸಕ್ಕೆಂದು ಬಂದಿದ್ದ ಮಣ್ಣು ಒಡ್ಡರು ಆಗಯುವಾಗ ಅಡ್ಡಾಗುವ ಬೇರುಗಳನ್ನು ಕಡಿಯಲೆಂದು ನಿರೂಪಕರ ಕೊಡಲಿಯನ್ನು ಬಳಸುವಾಗ ಕಲ್ಲುಮಣ್ಣು ನೋಡದೆ ಯರ್ರಾಬಿರಿ, ಜಜ್ಜಿ ಅದರ ಹಿಂಭಾಗ ಯಾವುದು ಮುಂಭಾಗ ಯಾವುದೆಂದು ಗೊತ್ತಾಗದಷ್ಟು ಹಾಳುಮಾಡಿದ್ದರಿಂದ ಲೇಖಕರಿಗೆ ಕೊಡಲಿಯು ಅಮೂಲ್ಯವಾದುದಲ್ಲ ಎನಿಸಿತ್ತು.
೨೪. ಕೃಷ್ಣೇಗೌಡ ಗೂಳೂರು ಮಠದ ಆನೆಯನ್ನು ಕೊಂಡುಕೊಂಡದ್ದು ಏಕೆ?
ವಿಮ್ಕೊ ಕಂಪೆನಿಯವರು ಪಾತಾಳದಲ್ಲಿದ್ದ ಮರಗಳನ್ನು ಲಾರಿದಾರಿಗೆ ಸಾಗಿಸಲು ಆನೆ ಬಾಡಿಗೆಗೆ ತರಲು ಯೋಚಿಸುತ್ತಿದ್ದ ವಿಚಾರ ತಿಳಿದ ಕೃಷ್ಣೇಗೌಡ ಆ ಕಾಂಟ್ರಾಕ್ಷನ್ನು ತಾನೇ ಪಡೆದು, ಈ ಕೆಲಸದಿಂದ ಹಣಗಳಿಸಲು ಉದ್ದೇಶಿಸಿ ಗೂಳೂರು ಮಠದ ಆನೆಯನ್ನು ಕೊಂಡುತಂದನು.
೨೫. ಕೃಷ್ಣೇಗೌಡನ ಆನೆ ಮೂಡಿಗೆರೆ ಪೇಟೆಗೆ ಹೇಗೆ ಒಗ್ಗಿಕೊಂಡಿತ್ತು?
ಕೃಷ್ಣೇಗೌಡರ ಆನೆಯು ಯಾವ ಲಂಗುಲಗಾಮಿಲ್ಲದ ದನಕರುಗಳ ಹಾಗೆ ಪೇಟೆಯೊಳಗೆ ತಿರುಗಿಕೊಂಡಿರುತ್ತಿತ್ತು. ಸ್ಕೂಲು ಮಕ್ಕಳು ದೂರದಿಂದಲೇ ಗೌರಿ ಎಂದು ಕೂಗಿದರೆ ಸಾಕು ಸೊಂಡಿಲೆತ್ತಿ ಸಲಾಮ್ ಮಾಡುತ್ತಿತ್ತು. ದಾರಿ ಬದಿಯ ಪೆಟ್ಟಿಗೆ ಅಂಗಡಿಗಳವರು ಹಣ್ಣು ಖರ್ಚಾದ ಬಾಳೆಗೊನೆಗಳ ದಿಂಡು, ಸಿಪ್ಪೆ, ಜಜ್ಜಿ ಹಾಳಾದ ಹಣ್ಣುಗಳನ್ನು ಇಟ್ಟಿದ್ದರೆ ಅವನ್ನು ಸೊಂಡಿಲಲ್ಲಿ ತೆಗೆದುಕೊಂಡು ತಿಂದು ಆರಾಮಾಗಿ ಪೇಟೆಯ ಜೀವನಕ್ಕೆ ಒಗ್ಗಿಕೊಂಡಿತ್ತು.
೨೬. ಭಾಷೆ ಉಪಯೋಗಿಸಿ ಕರೆಯಬೇಕೆಂದರೆ ಇರುವ ತೊಂದರೆಗಳೇನು?
ಭಾಷೆ ಉಪಯೋಗಿಸಿ ಕರೆಯಬೇಕೆಂದರೆ ಕೆಲವು ತೊಂದರೆಗಳಿರುತ್ತವೆ. ಮನೆಯವರ ಹೆಸರೇನು? ಹೆಸರು ಹಿಡಿದು ಕರೆಯಬೇಕೋ? ಸ್ವಾಮಿ ಎನ್ನಬೇಕೋ? ಬಹುವಚನ ಉಪಯೋಗಿಸಬೇಕೊ? ಏಕವಚನ ಉಪಯೋಗಿಸಬೇಕೋ – ಇವೇ ಮುಂತಾದ ಬಿಕ್ಕಟ್ಟುಗಳಿದ್ದವು.
೨೭. ಎಲ್ಲಿಗೆ ಮತ್ತು ಏಕೆ ರಾತ್ರೋರಾತ್ರಿ ಆನೆಯನ್ನು ಕರೆದುಕೊಂಡು ಹೋದರು?
ಶಿವೇಗೌಡರ ಸಾಮಿಲ್ಲಿನಲ್ಲಿ ಕಳ್ಳ ನಾಟ ಇಳಿಸಲು ರಾತ್ರೋರಾತ್ರಿ ಆನೆಯನ್ನು ಕರೆದುಕೊಂಡು ಹೋದರು.
೨೮. ರೆಹಮಾನ್ ಆನೆ ತನ್ನ ಅಂಗಡಿ ಬೀಳಿಸಿತು ಎಂದದ್ದನ್ನು ವೇಲಾಯುಧ ಒಪ್ಪಲಿಲ್ಲವೇಕೆ?
ರೆಹಮಾನನ ಮಾತಿನಂತೆ ಅನೆಯು ಬಾಳೆಹಣ್ಣಿಗಾಗಿ ಅಂಗಡಿಯನ್ನು ದೂಡಿ ಬೀಳಿಸಿದ್ದಿದ್ದರೆ ಅಲ್ಲಿ ಬಿದ್ದ ಬಾಳೆಹಣ್ಣುಗಳನ್ನು ಅದು ತಿನ್ನಬೇಕಿತ್ತು. ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಬಾಳೆಹಣ್ಣುಗಳಲ್ಲಿ ಆನೆ ಒಂದನ್ನೂ ಮುಟ್ಟಿರಲಿಲ್ಲ ನಾದ್ದರಿಂದ ವೇಲಾಯುಧ ರಹಮಾನನ ಮಾತನ್ನು ನಿರಾಕರಿಸಿದನು.
೨೯. ನಿರೂಪಕರಿಗೆ ಆನೆಗಳ ಬಗ್ಗೆ ಯಾವ ಅನುಮಾನ ಮೂಡಿತು?
ನಿರೂಪಕರಿಗೆ ಕಾಡಾನೆಗಳು ಬೆನ್ನಮೇಲೆ ಅಂಬಾರಿ ಹೊತ್ತುಕೊಂಡಿದ್ದ ಕೃಷ್ಣೇಗೌಡನ ಆನೆಯನ್ನು ತಮ್ಮ ಗುಂಪಿಗೆ ಸೇರಿಸಿಕೊಳ್ಳುತ್ತವೆಯೇ ಎಂದು ಅನುಮಾನ ಮೂಡಿತು.
೩೦. ನಾಗರಾಜ ದುರ್ಗಪ್ಪನ ಮೇಲೆ ಏನೆಂದು ರೇಗಿದನು?
ನಾಗರಾಜ ದುರ್ಗಪ್ಪನಿಗೆ “ಏನೋ ಮರ ಯಾಕೆ ಕಡೀತೀಯಾಂತ ಕೇಳಿದರೆ ಮ್ಯಾಲಿನೋರ ಕೇಳ್ಳಳ್ಳಿ ಅಂತ ಉಚಾಯಿಸಿ ಮಾತಾಡ್ತೀಯಾ? ಹೇಳದೆ ಕೇಳದೆ ಡಿಪಾರ್ಟ್ಮೆಂಟಿನ ಮರಕಡಿದರೆ ಇನ್ನೊಂದು ಸಾರಿ, ಮತ್ತೇನಿಲ್ಲ! ನಿನ್ನೇ ಲಾಕಪ್ಪಿಗೆ ಹಾಕಿಸಿ ಬಿಡ್ತೀನಿ. ಏನಂತ ತಿಳ್ಕೊಂಡಿದ್ದೀಯ” ಎಂದು ಗದರಿಸಿದನು.
೩೧. ಕೊಡಲಿ ಕುರಿತು ನಿರೂಪಕರು ನಾಗರಾಜನನ್ನು ಪ್ರಶ್ನಿಸಿದಾಗ ಅವನು ಹೇಳಿದ್ದೇನು?
ಲೇಖಕರ ಮಾತಿಗೆ ನಾಗರಾಜನು ಅವರಾಧಿಯು ಬಳಸಿದ ಆಯುಧ ತಮಗೆ ತುಂಬಾ ಮುಖ್ಯವೆಂದೂ, ಕೋರ್ಟಿನಲ್ಲಿ ಹಾಜರುಪಡಿಸಬೇಕಾದೀತೆಂದೂ, ಇಂಥ ಕಾನೂನು ಬಾಹಿರ ಕೆಲಸಕ್ಕೆ ಕೊಡಲಿ ಕೊಟ್ಟಿದ್ದು ನಿರೂಪಕರ ತಪ್ಪೆಂದೂ ವಾದಿಸಿದನು.
೩೨. ಆನೆ ಮರ ತಳ್ಳುವ ಬಗೆಯನ್ನು ನಿರೂಪಕರು ಹೇಗೆ ವಿವರಿಸಿದ್ದಾರೆ?
ನಿರೂಪಕರು ವಿವರಿಸಿರುವಂತೆ, ಆನೆಗಳು ದೊಡ್ಡ ದೊಡ್ಡ ಮರಗಳಿಗೆ ಹಣೆ ಹಚ್ಚಿ ಒಮ್ಮೆ ತಳ್ಳಿದರೆ ಸಾಕು ಬೇರುಗಳೆಲ್ಲ ಪಟಪಟ ನೆಲದಿಂದೆದ್ದು ಮರ ಬುಡ ಸಮೇತ ಪಲ್ಟಾಯಿಸಿ ಬಿಡುತ್ತದೆ. ಎಂಥ ಮರಗಳಾದರೂ ಆನೆಯ ದೈತ್ಯಶಕ್ತಿಯ ಎದುರು ಚೀತ್ಕರಿಸಿ ನೆಲಕ್ಕೆ ಉರುಳುತ್ತವೆ.
೩೩. ಪೋಸ್ಟಲ್ ಡಿಪಾರ್ಟ್ ಮೆಂಟ್ ಸೇವೆ ವಿಸ್ತರಿಸಿದ್ದು ಜಬ್ಬಾರನ ಮೇಲೆ ಬೀರಿದ ಪರಿಣಾಮವೇನು?
ಪೋಸ್ಟ್‌ಲ್ ಡಿಪಾರ್ಟ್‌ಮೆಂಟಿನ ಸೇವೆ ವಿಸ್ತರಿಸಿದ್ದರಿಂದ ಪೋಸ್ಟ್ಮನ್ ಜಬ್ಬಾರನಿಗೆ ತೊಂದರೆಯಾಯಿತು. ಪೋಸ್ಟ್ ಕೊಡುವುದಲ್ಲದೆ ಪ್ರತಿದಿನ ಪೋಸ್ಟ್ ಬಾಕ್ಸ್ ಇರುವವರೆಗೂ ಹೋಗಿ ಪೋಸ್ಟ್ ಸಂಗ್ರಹಿಸಿ ಹೆಡ್ಡಾಫೀಸಿಗೆ ಕೊಡುವ ಜವಾಬ್ದಾರಿಯೂ ಅವನ ಹೆಗಲಿಗೆ ಬಿತ್ತು.
೩೪. ನಿರೂಪಕರು ಕ್ಯಾಲಿಕ್ಯುಲೇಟರಿನಲ್ಲಿ ಲೆಕ್ಕಹಾಕಿ ಜಬ್ಬಾರ್ ಏನೆಂದರು?
ನಿರೂಪಕರು ತಮ್ಮ ಹೊಸ ಕ್ಯಾಲಿಕ್ಕುಲೇಟರಿನಲ್ಲಿ ಲೆಕ್ಕ ಹಾಕಿ “ಹನ್ನೆರಡು ವರ್ಷಕ್ಕೆ ಕಡಿಮೆ ಎಂದರೂ ಎರಡು ಲಕ್ಷ ಕಿಲೋಮೀಟರು ನಡೆದಿದ್ದೀಯ, ನಿನ್ನ ಮೂಗಿನ ನೇರಕ್ಕೆ ನಡೆದಿದ್ದರೆ ಇಡೀ ಭೂಮಂಡಲ ಸುತ್ತಿ ಬರಬಹುದಿತ್ತು.” ಎಂದು ಜಬ್ಬಾರ್‌ಗೆ ಹೇಳಿದ್ದರು.
೩೫. ಜಬ್ಬಾರ್ ತಾನು ವೆಟರ್ನರಿ ಆಸ್ಪತ್ರೆಗೆ ಬಂದುದಕ್ಕೆ ಕೊಟ್ಟ ಕಾರಣವೇನು?
ಹುಚ್ಚುನಾಯಿ ಕಚ್ಚಿರುವುದರಿಂದ ಇಂಜೆಕ್ಷನ್ ತೆಗೆದುಕೊಳ್ಳಲು ಸರ್ಕಾರಿ ಆಸ್ಪತ್ರೆಗೆ ಹೋಗಿದ್ದಾಗಿಯೂ ಅಲ್ಲಿ ಅದು ಅಲಭ್ಯವಾದುದರಿಂದ ಇಂಜೆಕ್ಷನ್ ತೆಗೆದುಕೊಳ್ಳಲು ವೆಟರರಿ ಆಸ್ಪತ್ರೆಗೆ ಬಂದುದಾಗಿ ಜಬ್ಬಾರ್ ನಿರೂಪಕರಿಗೆ ಹೇಳಿದನು.
೩೬. ನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ಬಾರದಿರಲು ಖಾನ್ ಸಾಹೇಬರು ಕೊಟ್ಟ ಕಾರಣವೇನು?
ಖಾನ್ ಸಾಹೇಬರು ತಮ್ಮ ನಾಯಿ ನಿರ್ಮೂಲನಾ ಕಾಠ್ಯಕ್ರಮಗಳನ್ನೆಲ್ಲಾ ವಿವರಿಸಿದ ನಂತರ, ಮೂಡಿಗೆರೆಯಲ್ಲಿ ಕಂತ್ರಿನಾಯಿ ಸಂಖ್ಯೆ ಹೆಚ್ಚಲು ಬೇರೆ ಊರಿನವರು ಪ್ರಾಣಿಹಿಂಸೆ ಮಾಡುವುದು ಧರ್ಮವಿರೋಧವಾದ್ದರಿಂದ ರಾತ್ರೋರಾತ್ರಿ ನಾಯಿಗಳನ್ನು ಲಾರಿಯಲ್ಲಿ ತುಂಬಿಕೊಂಡು ಬಿಟ್ಟು ಹೋಗುತ್ತಿರುವುದೇ ಮುಖ್ಯಕಾರಣವೆಂದರು.
೩೭. ಶಂಕ್ರಪ್ಪ, ಕಂಬದಲ್ಲಿ ಏನೋ ಸೇರ್ಕೊಂಡಿದೆ ಎಂದಾಗ ರಮೇಶ್ ಬಾಬುಗೆ ಹೊಳೆದ ಸಂಗತಿ ಯಾವುದು?
ರಮೇಶ್‌ಬಾಬು ಅನುಭವಕ್ಕೆ ಥಟ್ಟನೆ ಹೊಳೆದ ಉತ್ತರವೆಂದರೆ ಕಂಬದೊಳಗೆ ದೆವ್ವವೂ ಇಲ್ಲ, ಪಿಶಾಚಿಯೂ ಇಲ್ಲ. ಎಲೆಕ್ಟಿಕ್ ಡಿಪಾರ್ಟ್‌ಮೆಂಟಿನವರ ಹೈ ವೋಲೈಜ್ ಲೈನು ಎಲ್ಲೋ ಟೆಲಿಫೋನ್ ಲೈನಿಗೆ ತಾಗುತ್ತಿದೆ. ಆದ್ದರಿಂದಲೇ ನುಗ್ಗೇಹಳ್ಳಿ ಲೈನುಗಳಷ್ಟೂ ಡೆಡ್ಡಾಗಿವೆ ತಿಪ್ಪಣ್ಣನ ಸಾವಿಗೂ ಇದೆ ಕಾರಣ ಎಂಬುದು.
೩೮. ಆನೆಯನ್ನು ಇತರರಿಗೆ ದಾಟಿಸಿಬಿಡಲು ಕೃಷ್ಣೇಗೌಡನಿಗಿದ್ದ ತೊಡಕುಗಳೇನು?
ಆನೆಯನ್ನು ಇತರರಿಗೆ ದಾಟಿಸಿ ಬಿಡಲು ಕೃಷ್ಣೇಗೌಡ ಯೋಚಿಸಿದನಾದರೂ ಅದು ಸುಲಭದ್ದಾಗಿರಲಿಲ್ಲ. ಏಕೆಂದರೆ ಸರ್ಕಸ್ ಕಂಪೆನಿಗಳು ಮುಚ್ಚಿಹೋಗಿದ್ದವು. ಜಗದ್ಗುರುಗಳು ಅಡ್ಡಪಲ್ಲಕ್ಕಿ ಬಿಟ್ಟು ಬೆಂಜ್ ಕಾರುಗಳನ್ನು ಆಶ್ರಯಿಸಿದ್ದರು. ಮರದ ವ್ಯಾಪಾರಿಗಳಿಗೂ ಆನೆ ಬೇಕಾಗಿರಲಿಲ್ಲ. ಕಾಡಿಗೆ ಅಟ್ಟೋಣವೆಂದರೆ ಅದು ಹಿಂದಿರುಗಿ ಬರಬಹುದೆಂಬ ಭಯದಿಂದ ಕೃಷ್ಣಗೌಡ ಆನೆಯ ಬಗ್ಗೆ ರೋಸಿಹೋಗಿದ್ದ.
೩೯. ತಿಪ್ಪಣ್ಣನ ಸಾವಿಗೆ ಆನೆಯೇ ಕಾರಣವೆಂದು ದುರ್ಗಪ್ಪನ ಹೇಳಿಕೆ ಸರಿಯೇ? ಸಮರ್ಥಿಸಿ.
ತಿಪ್ಪಣ್ಣನ ಸಾವಿಗೆ ಆನೆಯೇ ಕಾರಣ ಎಂಬ ದುರ್ಗಪ್ಪನ ಹೇಳಿಕೆ ಸರಿಯೆಂದು ಹೇಳಲಾಗುವುದಿಲ್ಲ. ಏಕೆಂದರೆ ಆತ ಹೇಳಿದಂತೆ ಆನೆ ಕರೆಂಟಿನ ವೈರಿಗೆ ಮೈ ತಿಕ್ಕಿಕೊಂಡಿದ್ದನ್ನು ಯಾರೂ ನೋಡಿರಲಿಲ್ಲ. ದುರ್ಗಪ್ಪನ ಮಾತು ಕೇವಲ ಊಹ ಅಷ್ಟೆ.
೪೦. ವೇಲಾಯುಧನ ಸಾವಿಗೂ ಕೃಷ್ಣೇಗೌಡನ ಆನೆಗೂ ಸಂಬಂಧವಿಲ್ಲ ಎಂಬುದನ್ನು ಪ್ರಕಾಶ ಯಾವ ಆಧಾರದ ಮೇಲೆ ಹೇಳಿದರು?
ಪ್ರಕಾಶ ವೇಲಾಯುಧ ಸತ್ತುಬಿದ್ದಿದ್ದ ಸ್ಥಳದ ಪರಿಶೀಲನೆ ಮಾಡುತ್ತ ಆನೆಯ ದಂತ ನೆಲಕ್ಕೆ ತಾಗಿ ಪಿಕಾಸಿಯಲ್ಲಿ ಆಗದ ಹಾಗೆ ಮಣ್ಣು ಎದ್ದಿರುವುದನ್ನು ಕಂಡನು. ಕೃಷ್ಣೇಗೌಡನ ಆನೆ ಗೌರಿ ಹೆಣ್ಣಾದ್ದರಿಂದ ಅದಕ್ಕೆ ದಂತವಿರಲು ಸಾಧ್ಯವಿಲ್ಲವೆಂಬುದು ಅವನ ತಿಳುವಳಿಕೆಯಾಗಿದ್ದರಿಂದ ಆತ ವೇಲಾಯುಧನ ಸಾವಿಗೂ ಕೃಷ್ಣೇಗೌಡನ ಆನೆಗೂ ಯಾವ ಸಂಬಂಧವೂ ಇಲ್ಲವೆಂದು
೪೧. ಖೇಡಿಗಳು ನಾಗರಾಜನನ್ನು ಖನಿ ಮಾಡಿರುವರೆಂದು ರಾಮಪ್ಪ ಹೇಗೆ ವಿವರಿಸಿದ?
ರಾಮಪ್ಪ “ನಾಗರಾಜ ಗಂಗಾಧರನ ಗ್ಯಾಂಗಿನ ಕಾರನ್ನು ನಿಲ್ಲಿಸಿ ಒಳಗೇನಿದೆ ಚೆಕ್ ಮಾಡಲು ಇಣುಕಿ ನೋಡಿದನಂತೆ. ಒಳಗಿದ್ದ ಖೇಡಿಯೊಬ್ಬ ನಾಗರಾಜನ ತಲೆಯನ್ನು ಹೊರಗೆಳೆದುಕೊಳ್ಳದಂತೆ ಜುಟ್ಟು ಹಿಡಿದು ಕಾರಿನ ಗಾಜನ್ನು ಏರಿಸಿ ಕುತ್ತಿಗೆ ಸಿಗಿಸಿದನಂತೆ. ಕಿಟಿಕಿಯಲ್ಲಿ ಕುತ್ತಿಗೆ ಸಿಕ್ಕಿಕೊಂಡು ವಿಲವಿಲ ಒದ್ದಾಡುತ್ತಿದ್ದ ನಾಗರಾಜನ ಸಮೇತ ಕಾರು ಚಾರ್ಮಾಡಿ ಕಡೆಗೆ ಓಡಿತೆಂದು’ ಹೇಳಿದನು.
೪೨. ಗುರುತು ಸಿಗದ ಹೆಣ ವೇಲಾಯುಧನದು ಎಂದು ತಿಳಿದಮೇಲೆ ಪೊಲೀಸರಿಗೆ ಬಂದ ಪೀಕಲಾಟವೇನು?
ಪೊಲೀಸರು ಗುರುತು ಸಿಗದ ಹೆಣವನ್ನು ನಾಗರಾಜನದೆಂದೇ ಹೇಳಿ ಕೇಸ್ ಕ್ಲೋಸ್ ಮಾಡುವ ಹವಣಿಕೆಯಲ್ಲಿದ್ದರು. ಆದರೆ ಆ ಹಣವು ವೇಲಾಯುಧನದೇ ಎಂದು ಬಟ್ಟೆ ಮತ್ತು ಅಂಕುಶಗಳನ್ನು ತೋರಿಸಿ ವೇಲಾಯುಧನ ಹೆಂಡತಿ ಗೋಳಾಡಿದ್ದರಿಂದ ಪೊಲೀಸರಿಗೆ ನಾಗರಾಜನ ಅಂತರ್ಧಾನ ಪೀಕಲಾಟಕ್ಕೆ ಬಂದಿತು. ಎಷ್ಟು ಹುಡುಕಿದರೂ ಅವರಿಗೆ ನಾಗರಾಜನ ಪತ್ತೆಯೇ ಆಗಲಿಲ್ಲ.
೪೩. ಕಾಡಪ್ಪ ಶೆಟ್ಟರು ಯಾವ ವರ್ತಮಾನವನ್ನು ಮುಟ್ಟಿಸಿದರು?
ಕಾಡಪ್ಪ ಶೆಟ್ಟರು ಕಾಡೊಳಗಿನ ದಾರಿಯಲ್ಲಿ ಪ್ರಕಾಶ ಮತ್ತು ನಿರೂಪಕರಿಗೆ ಸಿಕ್ಕು “ಕೃಷ್ಣೇಗೌಡನ ಆನೆಯ ಮೇಲೆ ಅಯ್ಯಪ್ಪ ಸ್ವಾಮಿ ಫೋಟೋ ಇಟ್ಟು ಮೆರವಣಿಗೆ ಮಾಡುತ್ತಿದ್ದಾಗ ಅದಕ್ಕೆ ಇದ್ದಕ್ಕಿದ್ದಂತೆ ತಲೆಕೆಟ್ಟು ಅಂಬಾರಿ ಸಮೇತ ಕಾಡಿಗೆ ಓಡಿ ಹೊಯ್ತು” ಎಂಬ ವರ್ತಮಾನವನ್ನು ತಲುಪಿಸಿದರು.
೪೪. ಬೇಸಿಗೆ ಬಂತೆಂದರೆ ಮೂಡಿಗೆರೆಯ ಜನರಲ್ಲಿ ಕೆದರುವ ಭಾವನೆಗಳಾವುವು?
ಬೇಸಿಗೆ ಬಂತೆಂದರೆ ಸಾಕು ಮೂಡಿಗೆರೆಯಲ್ಲಿ ಮನುಷ್ಯರಿಗೆ ನೂರಾರು ತರದ ತೆವಲುಗಳು, ಕಾಮನೆಗಳು, ದ್ವೇಷಗಳು, ಮಾತ್ಸರ್ಯಗಳು ಕೆದರುತ್ತವೆ.
ಈ) ನಾಲ್ಕು ಅಂಕದ ಪ್ರಶ್ನೆಗಳು (ಐದಾರು ವಾಕ್ಯಗಳಲ್ಲಿ ಉತ್ತರಿಸಿ)
೧. ದುರ್ಗಪ್ಪ ನಿರೂಪಕರ ಬಳಿಗೆ ಬಂದ ಸಂದರ್ಭವನ್ನು ವಿವರಿಸಿ.
ದುರ್ಗಪ್ಪ ಎಲೆಕ್ನಿಕ್ ಡಿಪಾರ್ಟ್ ಮೆಂಟಿನ ಲೈನ್‌ಮನ್ ಆಗಿದ್ದನು. ಆತ ನಿರೂಪಕರ ಬಳಿ ಬಂದಾಗ ನಿರೂಪಕರು ಜೀಪಿನ ಅಡಿಯಲ್ಲಿ ಮಲಗಿಕೊಂಡು ರಿಪೇರಿ ಮಾಡುತ್ತಿದ್ದರು. ಅಲ್ಲಿಂದ ಅವರಿಗೆ ಎರಡು ಖಾಕಿ ಪ್ಯಾಂಟುಗಳ ಕಾಲುಗಳು ಕಾಣಿಸಿದವು. ದುರ್ಗಪ್ಪ ಬಂದವನೆ ಕಮ್ಮಿನ ಕಾಲಿಂಗ್ ಬೆಲ್ಲಿನಿಂದ ನಿರೂಪಕರ ಗಮನ ಸೆಳೆದ, ವಿಚಾರಿಸಲು ತಾನು ವಿದ್ಯುತ್ತು ಇಲಾಖೆಯ ಲೈನ್‌ಮನ್ ಎಂದು ಪರಿಚಯಿಸಿಕೊಂಡನು. ಆನಂತರ ಆತ ಮುರಿದು ಬಿದ್ದಿರುವ ಮರದ ಕೊಂಬೆ ಕಡಿಯಲು ತನಗೆ ಕೊಡಲಿ ಬೇಕೆಂದು ಕೇಳಿದ. ನಿರೂಪಕರು ಆತನೇ ಕೊಡಲಿಯನ್ನು ಅಟ್ಟದ ಮೇಲಿಂದ ಹುಡುಕಿ ತೆಗೆದುಕೊಂಡು ಹೋಗಬೇಕೆಂದು ತಿಳಿಸಿದರು. ದುರ್ಗಪ್ಪ ಹಾಗೆಯೇ ಮಾಡಿದ, ಈ ಸಂದರ್ಭದಲ್ಲಿ ದುರ್ಗಪ್ಪ ಕೃಷ್ಣೇಗೌಡನ ಆನೆಯೇ ಕೊಂಬೆಯನ್ನು ಮುರಿದಿದೆಯೆಂದು ಬೈಯುವುದನ್ನೂ, ಟೆಲಿಫೋನ್ ಡಿಪಾರ್ಟ್ ಮೆಂಟಿನವರನ್ನು ತರಲೆಗಳೆಂದು ಜರಿಯುವುದನ್ನು ಗಮನಿಸುತ್ತೇವೆ. ದುರ್ಗಪ್ಪ ಕೊಡಲಿಗಾಗಿ ನಿರೂಪಕರ ಬಳಿ ಬರುವುದರೊಂದಿಗೆ ಇಡೀ ಕಥೆಯ ಹರಹು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.
೨. ನಿರೂಪಕರು ಕೊಡಲಿ ವಸೂಲಿ ಮಾಡಲು ಹೋಗಲಿಲ್ಲವೇಕೆ?
ನಿರೂಪಕರು ದುರ್ಗಪ್ಪ ಕೊಡಲಿ ತೆಗೆದುಕೊಂಡು ಹೋಗಿ ಮೂರ್ನಾಲ್ಕು ದಿನವಾದರೂ ಹಿಂದಿರುಗಿಸಲು ಬರದಿದ್ದಾಗ ಆ ಬಗ್ಗೆ ಚಿಂತಿಸುವರೆ ವಿನಾ ಕೊಡಲಿಯನ್ನು ವಸೂಲಿ ಮಾಡಲು ಹೋಗಲಿಲ್ಲ. ಏಕೆಂದರೆ ಅವರಿಗೆ ಅದರ ಬಗ್ಗೆ ಯಾವುದೇ ವ್ಯಾಮೋಹವಿರಲಿಲ್ಲ. ಅಲ್ಲದೆ ಅದು ಹೇಳದೆ ಕೇಳದೆ ಕದ್ದು ತೆಗೆದುಕೊಂಡು ಹೋಗಬೇಕಾದ ವಸ್ತುವಾಗಿರಲಿಲ್ಲ. ನಿರೂಪಕರ ಮನೆಯ ಕೊಡಲಿಯನ್ನು ಕರೆ ಕೆಲಸಕ್ಕೆಂದು ಬಂದಿದ್ದ ಮಣ್ಣು ಒಡ್ಡರು ತೆಗೆದುಕೊಂಡು ಹೋಗಿ ಅಗೆಯುವಾಗ ಆಡ್ಡಾಗುವ ಬೇರುಗಳನ್ನು ತುಂಡರಿಸಲು ಯರ್ರಾಬಿರ್ರಿ ಜಪ್ಪಿ ಹಾಕಿದ್ದರು. ಅದರ ಆಕಾರ ಹಿಂದು-ಮುಂದು ತಿಳಿಯದೆ ನೋಡಲು ಸುತ್ತಿಗೆಯಂತೆ ಕಾಣುತ್ತಿತ್ತು, ಹೀಗಾಗಿ ದುರ್ಗಪ್ಪ ಆ ಕೊಡಲಿಯನ್ನು ಇಟ್ಟುಕೊಂಡರೆ ಯಾವ ನಷ್ಟವೂ ಇಲ್ಲವೆನ್ನಿಸಿ ಲೇಖಕರು ಅದನ್ನು ವಸೂಲು ಮಾಡಲು ಹೋಗಿರಲಿಲ್ಲ.
೩. ಕೃಷ್ಣೇಗೌಡರ ಆನೆ ಹುಟ್ಟಿ ಬೆಳೆದ ಬಗೆಯನ್ನು ವಿವರಿಸಿ. ಅದು ಪೇಟೆಯಲ್ಲಿ ಏನು ಮಾಡುತ್ತಿತ್ತು?
ಕೃಷ್ಣೇಗೌಡರ ಆನೆಯು ಗೂಳೂರು ಮಠದ ಆನೆ ಹಾಕಿದ ಮರಿಯಾಗಿದ್ದು ಅದು ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಊರಿನ ಜನಗಳ ನಡುವೆಯೇ ಆಗಿತ್ತು. ಹಾಗಾಗಿ ಅದಕ್ಕೆ ಕಾಡಿನ ಬಗ್ಗೆ, ಕಾಡಾನೆಗಳ ಬಗ್ಗೆ ಯಾವುದೇ ತಿಳಿವಳಿಕೆ ಇರಲಿಲ್ಲ. ಮೂಡಿಗೆರೆ ಪೇಟೆಗೆ ಚೆನ್ನಾಗಿ ಒಗ್ಗಿಕೊಂಡಿದ್ದ ಆನೆಯು ಯಾವುದೇ ಲಂಗುಲಗಾಮಿಲ್ಲದೆ ದನಕರುಗಳ ರೀತಿಯಲ್ಲಿ ತಿರುಗಿಕೊಂಡಿರುತ್ತಿತ್ತು. ಸ್ಕೂಲು ಮಕ್ಕಳು ದೂರದಿಂದಲೇ ಗೌರಿ ಎಂದು ಕೂಗಿದಾಗ ಸೊಂಡಿಲೆತ್ತಿ ಸಲಾಂ ಮಾಡುತ್ತಿತ್ತು, ದಾರಿ ಬದಿಯ ಪೆಟ್ಟಿಗೆ ಅಂಗಡಿಗಳವರು ಹಣ್ಣು ಖರ್ಚಾದ ಬಾಳೆಗೊನೆಗಳ ದಿಂಡು, ಸಿಪ್ಪೆಗಳು, ಜಜ್ಜಿ ಹಾಳಾದ ಹಣ್ಣುಗಳನ್ನು ಅದಕ್ಕೆ ಕೊಡಲು ಇಟ್ಟಿರುತ್ತಿದ್ದರು. ಆ ಆನೆ ಪ್ರತಿನಿತ್ಯ ಎಲ್ಲಾ ಪೆಟ್ಟಿಗೆ ಅಂಗಡಿಗಳ ಬಳಿಗೂ ಹೋಗಿ ಅವನ್ನೆಲ್ಲಾ ಸೊಂಡಿಲಲ್ಲಿ ತಗೊಂಡು ತಿನ್ನುತ್ತಿತ್ತು. ಹೀಗೆ ಕೃಷ್ಣೇಗೌಡನ ಆನೆ ಗೌರಿಯು ಪೇಟೆಯಲ್ಲಿ ಹುಟ್ಟಿ, ಪೇಟೆಯಲ್ಲೇ ಬೆಳೆದು ಆರಾಮವಾಗಿ ಓಡಾಡಿಕೊಂಡಿತ್ತು.
೪. ಆನೆ ಮತ್ತು ಮಾವುತ ವೇಲಾಯುಧನನ್ನು ಸಾಗಹಾಕಲು ಮಠದವರು ಹವಣಿಸಿದ್ದೇಕೆ?
ಮಠದ ಜಗದ್ಗುರುಗಳನ್ನು ಜನರು ಅಡ್ಡ ಪಲ್ಲಕ್ಕಿಯಲ್ಲಿ ತಮ್ಮ ಹೆಗಲ ಮೇಲೆ ಹೊರತೊಡಗಿದ್ದರಿಂದ ಆನೆಗೆ ಜಗದ್ಗುರುಗಳನ್ನು ಹೊರುವ ಕೆಲಸ ತಪ್ಪಿಹೋಗಿ ಆನೆಯನ್ನು ಸಾಕುವುದು ಮಠದವರಿಗೆ ನಿರುಪಯುಕ್ತವೆನ್ನಿಸಿತು. ಅಲ್ಲದೆ ಆನೆಯ ಮಾವುತ ದಿನದ ಇಪ್ಪತ್ನಾಲ್ಕು ಗಂಟೆಯೂ ಕುಡಿದಿರುತ್ತಿದ್ದುದರಿಂದ ಆತ ಮಠದ ಸಾತ್ವಿಕ ವಾತಾವರಣಕ್ಕೆ ದೊಡ್ಡ ತಲೆನೋವಾಗಿದ್ದ. ಆತನ ದುರ್ನಡತೆಗಾಗಿ ಒಮ್ಮೆ ಭೀಮಾರಿ ಹಾಕಿ ಮಠದಿಂದ ಓಡಿಸಿದಾಗ ಆನೆ ಆತ ಹಿಂದಿರುಗಿ ಬರುವವರೆಗೂ ಊಟವನ್ನೇ ವರ್ಜಿಸಿತ್ತು. ಹಾಗಾಗಿ ಆನೆ ಮತ್ತು ಅದರ ಮಾವುತ ದೇಲಾಯುಧನನ್ನು ಮಠದಿಂದ ಹೊರಹಾಕಿ ಕೈತೊಳೆದುಕೊಳ್ಳಲು ಮಠದವರು ಹವಣಿಸುತ್ತಿದ್ದರು.
೫. ಎಲ್ಲರ ನಿರೀಕ್ಷೆ ಸುಳ್ಳಾಗುವಂತೆ ಕೃಷ್ಣೇಗೌಡ ಆನೆಯನ್ನು ಹೇಗೆ ಸಾಕಿದನು?
ಕೃಷ್ಣೇಗೌಡ ಗೂಳೂರು ಮಠದ ಆನೆಯನ್ನೂ, ಅದರ ಮಾವುತ ವೇಲಾಯುಧನ ಸಂಸಾರವನ್ನೂ ಮೂಡಿಗೆರೆಗೆ ಕರೆತಂದಾಗ ಇಲ್ಲಿಗೆ ಇವನ ಕತೆ ಮುಗಿಯಿತೆಂದು ಜನರೆಲ್ಲ ಭಾವಿಸಿದ್ದರು. ಎಲ್ಲ ತರಹದ ವ್ಯವಹಾರಗಳಲ್ಲೂ ನಷ್ಟ ಅನುಭವಿಸಿ ಸೋತು ಹೋಗಿದ್ದ ಕೃಷ್ಣಗೌಡ ಆನೆ ಸಾಕುವುದು ಕಷ್ಟವೆಂಬುದು ಅವರ ಭಾವನೆಯಾಗಿತ್ತು. ಆನೆ ಸಾಕುವುದೆಂದರೆ ಎಲೆಕ್ಷನ್ನಿಗೆ ನಿಂತ ಹಾಗೆ! ಮನೆ ಮಠ ಸಂಪೂರ್ಣ ಹಾಳುಮಾಡಿಕೊಂಡು ಹೆಂಡತಿ ಮಕ್ಕಳ ಬಾಯಿಗೆ ಮಣ್ಣು ಹಾಕುವ ಕ್ಷಿಪ್ರ ಮಾರ್ಗವಿದೆಂದೂ ಎಲ್ಲರೂ ದೃಢವಾಗಿ ನಂಬಿದ್ದರು ಆದರೆ ಇದಕ್ಕೆ ತದ್ವಿರುದ್ಧವಾಗಿ ಕೃಷ್ಣೇಗೌಡ ಆನೆಯನ್ನು ಚೆನ್ನಾಗಿ ಸಾಕಿದನು. ಮರದಲ್ಲಿ ಬರಿ ಒಣಹುಲ್ಲು, ಮೊಸರನ್ನ ತಿಂದು ಸೊರಗಿದ್ದ ಆ ಆನೆಗೆ ಕೃಷ್ಣೇಗೌಡ ಬಯನ ಸೊಪ್ಪು, ಹಸಿಹುಲ್ಲು, ಹಿಂಡಿ, ಬೆಲ್ಲ, ಗೆಣಸು, ಎಲ್ಲ ಕೊಟ್ಟು ಕೃಷ್ಣೇಗೌಡ ಆನೆಯನ್ನು ಪೊಗಡುದಸ್ತಾಗಿ ಬೆಳೆಸಿದ. ಆನೆ ಮರ ಎಳೆದು ತಂದ ಬಾಡಿಗೆಯಿಂದ ಕೃಷ್ಣೇಗೌಡನಿಗೆ ಒಳ್ಳೆಯ ಲಾಭ ಬಂದಿತು.
೬. ಕಾಡಾನೆಗಳ ಹಾವಳಿ ನಿರೂಪಕರ ಅನುಭವಕ್ಕೆ ಬಂದುದು ಹೇಗೆ?
ಕಾಡಾನೆಗಳು ಯಾರನ್ನೋ ಹೆದರಿಸಿ ತೊಂದರೆ ಮಾಡಿದವಂತೆ ಎಂಬ ವರ್ತಮಾನ ಬರುತ್ತಿತ್ತೇ ಹೊರತೂ ನಿರೂಪಕರಿಗೆ ಕಾಡಾನೆಗಳ ಹಾವಳಿಯ ಪರಿಚಯವಿರಲಿಲ್ಲ. ಒಂದು ದಿನ ಮನೆ ನಲ್ಲಿಗೆ ಹಾಕಿದ್ದ ಪೈಪಿನಲ್ಲಿ ನೀರು ಬರುವುದು ನಿಂತು ಹೋಯ್ತು. ಲೇಖಕರು ಪೈಪು ಎಲ್ಲಿ ಹಾಳಾಗಿದೆಯೆಂದು ಹುಡುಕುತ್ತಾ ಹೋದಾಗ ಸ್ವಲ್ಪ ದೂರದಲ್ಲಿ ಪೈಪು ಇಡಲು ಮಾಡಿದ್ದ ದಾರಿಗಳು ಗುಂಡಿಬಿದ್ದು ಪೈಪುಗಳು ಪುಡಿಪುಡಿಯಾಗಿ ಪಾತಾಳದವರೆಗೆ ಹುಗಿದು ಹೋಗಿದ್ದವು. ಆನೆಗಳ ಕಾಟ ಈ ರೀತಿಯಿರಬಹುದೆಂಬ ಅಂದಾಜು ಲೇಖಕರಿಗಾದುದು ಅದೇ ಮೊದಲು. ಇನ್ನು ಕೆಲವು ಕಡೆ ಬೇಲಿಯನ್ನು ಆನೆಗಳು ಹಾಳುಮಾಡಿದ್ದವು.
೭. ಆರಣ್ಯ ಇಲಾಖೆಯ ಶತ್ರುಗಳ ಕಾರ್ಯಭಾರವನ್ನು ನಾಗರಾಜ ವಿವರಿಸಿದ್ದು ಹೇಗೆ?
ನಾಗರಾಜನ ಪ್ರಕಾರ ಪಿ.ಡಬ್ಲ್ಯು.ಡಿ.ಯವರು, ಕರೆಂಟಿನವರು, ಟೆಲಿಫೋನಿನವರು ಈ ಮೂರು ಡಿಪಾರ್ಟ್ ಮೆಂಟುಗಳು ಅರಣ್ಯ ಇಲಾಖೆಯವರಿಗೆ ನಂಬರ್ ಒನ್ ಎನಿಮಿಗಳು. “ಪಿಡಬ್ಲ್ಯುಡಿಯವರು ರಸ್ತೆಗೆ ಟಾರು ಹಾಕಲು ಅರಣ್ಯ ಇಲಾಖೆಯ ರಸ್ತೆ ಬದಿಯ ಮರಗಳನ್ನೆಲ್ಲ ಕಡಿದು ಟಾರು ಕಾಯಿಸ್ಕೊಂಡರೆ, ಕರೆಂಟಿನವರು-ಟೆಲಿಫೋನಿನವರು ಲೈನು ಎಳೆಯೋದಕ್ಕೆ ಫಾರೆಸ್ಟ್ ಕ್ಲಿಯರ್ ಮಾಡ್ತೀವಿ ಎಂದು ಎಲ್ಲೆಂದರಲ್ಲಿ ಸಾವಿರಾರು ಎಕರೆ ಕಾಡು ಕಡಿದು ಹಾಳು ಮಾಡಿದ್ದಾರೆ. ಈಗ ಹಳ್ಳಿಹಳ್ಳಿಗೆ ಕರಂಟು-ಟೆಲಿಫೋನ್ ಕೊಡಬೇಕೆಂದು ಸರ್ಕಾರ ಪಾಲಿಸಿ ಮಾಡಿರುವುದರಿಂದ ಲೈನ್ ಕ್ಲಿಯರ್ ಮಾಡೋ ನೆಪದಲ್ಲಿ ಇವರ್ಯಾರೂ ಮನೆಗೆ ಸೌದ ಕೊಳ್ತಾನೇ ಇಲ್ಲ” ಎಂದು ನಾಗರಾಜ ತಮ್ಮ ಎನಿಮಿ ಡಿಪಾರ್ಟ್ ಮೆಂಟುಗಳ ಕಾರ್ಯವೈಖರಿಗಳನ್ನು ಟೀಕಿಸಿದನು.
೮. ನಿದ್ರೆ ಮಂಪರಿನಲ್ಲಿದ್ದ ಡ್ರೈವರ್ ಪರಂಧಾಮಕ್ಕೆ ಹೋದ ಸಂದರ್ಭವನ್ನು ವಿವರಿಸಿ.
ಕ್ಲೀನರ್ ನಾಯರ್, ಲಾರಿಗೂ ನಾಟಾಗಳಿಗೂ ಸೇರಿಸಿ ಬಿಗಿದಿದ್ದ ಹಗ್ಗವನ್ನು ಬಿಚ್ಚಬೇಕೆಂಬುದನ್ನು ಮರೆತು ಹೊಟೇಲಿನಲ್ಲಿ ಚಹಾ ಕುಡಿದು ಬರಲು ಹೋಗಿದ್ದನು. ಆಗ ಡ್ರೈವರ್ ಒಬ್ಬನೆ ನಿದ್ರೆ ಮಂಪರಿನಲ್ಲಿ ತೂಕಡಿಸುತ್ತ ಸ್ವೀರಿಂಗ್ ಚಕ್ರದ ಮೇಲೆ ತಲೆವಾಲಿಸಿಕೊಂಡು ಅರೆನಿದ್ದೆಯಲ್ಲಿದ್ದ. ಷರಾಬಿನ ನಶೆಯಲ್ಲಿದ್ದ ವೇಲಾಯುಧನಿಗೂ ಹಗ್ಗ ಬಿಚ್ಚಬೇಕೆಂದು ನೆನಪಾಗಲಿಲ್ಲ. ಆತ ಹಿಂದು ಮುಂದು ನೋಡದೆ ಆನೆಗೆ ಲಾರಿ ಮೇಲಿನ ದಿಮ್ಮಿಗಳನ್ನು ತಳ್ಳಿ, ಉರುಳಿಸಲು ಹೇಳಿದ. ದಿಮ್ಮಿಗಳು ಲಾರಿ ಸಮೇತ ನೆಲಕ್ಕೆ ಉರುಳಿದವು. ಲಾರಿ ಮೆಲ್ಲನೆ ವಾಲುತ್ತ ಒಂದು ಕಡೆ ಉರುಳಿ ಬಿದ್ದಿದ್ದರಿಂದ ಡ್ರೈವರ್‌ಗೆ ಹೆಚ್ಚಿನ ಅಪಾಯವಾಗುವ ಸಾಧ್ಯತೆಗಳು ಕಡಿಮೆ ಇತ್ತಾದರೂ ಕ್ಯಾಬಿನ್ನಿನಲ್ಲಿ ಇಟ್ಟಿದ್ದ ಮಣಭಾರದ ಲಾರಿ ಜಾಕ್ ದೊಪ್ಪನೆ ಅವನ ಬುರುಡೆಯ ಮೇಲೆ ಬಿದ್ದ ಹೊಡೆತಕ್ಕೆ ಅವನ ತಲೆ ಜಜ್ಜಿ ಕಮಕ್‌ಕಿಮಕ್ ಎನ್ನದೆ ಆತ ಪರಂಧಾಮ ಸೇರುವಂತಾಯಿತು.
೯. ಡ್ರೈವರ್ ಸಾವಿನ ಸುದ್ದಿಯನ್ನು ಶಿವೇಗೌಡ ಮತ್ತಿತರರು ಹೇಗೆ ಮುಚ್ಚಿಹಾಕಿದರು?
ಡ್ರೈವರ್ ಸತ್ತಿದ್ದನ್ನು ನೋಡಿ ಕ್ಲೀನರ್ ನಾಯರ್, ವೇಲಾಯುಧ ಮತ್ತು ಶಿವೇಗೌಡರು ಕಂಗಾಲಾಗಿ ಹೋದರು. ಆದರೆ ಡ್ರೈವರ್‌ನ ಸಾವಿನ ವಿಚಾರವನ್ನು ಮುಚ್ಚಿಹಾಕಿದರು. ಬೆಳಿಗ್ಗೆ ನೋಡುವಾಗ ಲಾರಿ ಸರಿಯಾಗಿ ಏನೂ ಆಗಿಯೇ ಇಲ್ಲವೆಂಬಂತೆ ನಿಂತಿತ್ತು. ಈ ಸುದ್ದಿ ಬರೀ ಪಿಸುಮಾತಿನಲ್ಲಿ ಹರಿದಾಡಿದ್ದರಿಂದ ಶಿವೇಗೌಡರು-ಕೃಷ್ಣಗೌಡರು ಸೇರಿ ಮುಚ್ಚಿ ಹಾಕಿರಬಹುದೆಂದು ನಿರೂಪಕರು ಯೋಚಿಸಿದರು. ಯಾರೂ ಡ್ರೈವರ್ ಸಾವಿನ ಬಗ್ಗೆ ದೂರು ಕೊಡದ ನಿಮಿತ್ತ ಯಾರ ಮೇಲೂ ಕಾನೂನಿನ ಕ್ರಮ ಜಾರಿಯಾಗಲಿಲ್ಲ. ಲಾರಿ ಟ್ರಿಪ್ಪಿಗೆ ಹೋದ ದಿಕ್ಕಿನಲ್ಲೆಲ್ಲ ಆ ಡ್ರೈವರ್‌ನಿಗೆ ಒಂದೊಂದು ಸಂಸಾರ ಇತ್ತಾದ್ದರಿಂದ ಅವರಲ್ಲಿ ಯಾರೂ ಅಧಿಕೃತ ಯಾರು ಅನಧಿಕೃತ ಎಂದು ನಿರ್ಧರಿಸಲಾಗದ ಕ್ಲೀನರ್ ಯಾರಿಗೂ ತಿಳಿಸದೆ ಸುಮ್ಮನಾಗಿಬಿಟ್ಟನು. ದುರ್ಗಪ್ಪ ನಿರೂಪಕರ ಕೊಡಲಿ ಹಿಂದಿರುಗಿಸಲು ಬಂದವನು ಡ್ರೈವರ್‌ನ ಹೆಣವನ್ನು ಮರದ ಹೊಟ್ಟೆನೊಳಗೆ ಹಾಕಿ ಆಗಾಗ ಬೆಂಕಿ ಕೊಡುವಂತೆ ಬೆಂಕಿಕೊಟ್ಟು ಬೂದಿ ಮಾಡಿದರೆಂದು ತಿಳಿಸಿದನು.
೧೦. ದುರ್ಗಪ್ಪನಿಗೆ ಲೈನ್‌ಮನ್ ಕೆಲಸ ರೋಸಿ ಹೋಗಲು ಕಾರಣಗಳೇನು?
ದುರ್ಗಪ್ಪನಿಗೆ ಲೈನ್‌ಮಾನ್ ಕೆಲಸ ರೋಸಿ ಹೋಗಲು ಮುಖ್ಯ ಕಾರಣ ಅವನಿಗೆ ಶಿವೇಗೌಡರ ಸಾಮಿಲ್ಲಿನ ಎದುರು ಹೋಗಿದ್ದ ಕಳಸಾ ಲೈನು ನೋಡಿಕೊಳ್ಳಲು ಕೊಟ್ಟಿದ್ದದ್ದು. ಆ ವಿದ್ಯುತ್ ಲೈನ್ ಮೂಡಿಗೆರೆಯಲ್ಲೇ ತುಂಬಾ ತರಲೆ ಲೈನ್ ಎಂದು ಹೆಸರಾಗಿತ್ತು. ಲೈನು ಹಳೇಕೋಟೆ, ಗೌಡಳ್ಳಿ, ಭೈರಾಪುರ, ಬಣಕಲ್ಲು, ನಿಡುವಾಳೆ, ಜಾವಳಿ ಎಲ್ಲೆಲ್ಲೋ ಕಗ್ಗಾಡಿನ ನಡುವೆ ನುಸುಳಿ ಹೋಗಿತ್ತು. ಈ ದರಿದ್ರ ಲೈನ್ ನೋಡಿಕೊಳ್ಳಲು ಹೋಗಿ ದುರ್ಗಪ್ಪನಿಗೆ ಬದುಕಿನ ಆಸೆಯೇ ಬತ್ತಿಹೋಗಿತ್ತು. ಬೆಳಿಗ್ಗೆ ಎದ್ದು ದುರ್ಗಪ್ಪ ತಂತಿ ಸುರುಳಿ, ಕಟಿಂಗ್ ಪ್ಲಯರು ಹಿಡಿದು ಎಲ್ಲಿ ಟ್ರಬಲ್ ಇದೆ ಎಂದು ಹುಡುಕಿಕೊಂಡು ಹೊರಡಬೇಕಾಗುತ್ತಿತ್ತು. ಅವನ ಕಷ್ಟ ಯಾರಿಗೂ ಅರ್ಥವಾಗದೆ ಎಲ್ಲರಿಂದಲೂ ಬೈಗುಳ ತಿಂದು ಅವನಿಗೆ ತನ್ನ ಕೆಲಸದ ಮೇಲೆ ರೇಜಿಗೆ ಮೂಡಿತ್ತು.
೧೧. ಪೋಸ್ಟ್ ಮನ್ ಜಬ್ಬಾರನ ಬವಣೆಗಳನ್ನು ನಿರೂಪಕರು ಹೇಗೆ ವಿವರಿಸಿದ್ದಾರೆ?
ಜಬ್ಬಾರ್ ಹೆಸರಿಗಷ್ಟೇ ಕೇಂದ್ರ ಸರ್ಕಾರದ ನೌಕರನಾಗಿದ್ದ. ಕಳೆದ ಹದಿನಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಇನ್ನೂ ಟೆಂಪರ್ವರಿಯಾಗೇ ಉಳಿದಿದ್ದ. ಅವನ ಸಂಬಳವಾದರೂ ಕೇವಲ ಅರುವತ್ತು ರೂಪಾಯಿಗಳು ಮಾತ್ರ. ಈ ಸಂಬಳದಲ್ಲಿ ಹೊಟ್ಟೆ ಹೊರೆಯಲಾಗದೆ ನೂರೆಂಟು ಪತ್ರಿಕೆಗಳ ಏಜೆನ್ಸಿ ಪಡೆದು, ತಾನು ಪೋಸ್ಟ್ ವಿತರಿಸುವೆಡೆಯಲ್ಲೆಲ್ಲಾ ಚಂದದಾರರನ್ನು ಗಳಿಸಲು ಯತ್ನಿಸುತ್ತಿದ್ದ, ದಿನಾ ಪತ್ರಿಕೆಗಳ ಕಂತೆಯನ್ನು ತನ್ನ ಸೆಕೆಂಡ್‌ಹ್ಯಾಂಡ್ ಲೂನಾದ ಮೇಲೆ ಹೇರಿಕೊಂಡು ಹದಿನೆಂಟು ಕಿಲೋಮೀಟರ್ ಸಂಚರಿಸಬೇಕಿತ್ತು, ಹ್ಯಾಂಡ್ ಪೋಸ್ಟ್, ಬಿದಿರಳ್ಳಿ ಮುಂತಾದ ಕಡೆ ನೇತುಹಾಕಿದ್ದ ಬಾಕ್ಸ್ಗಳಿಂದ ಪೋಸ್ಟ್ ಕ್ಲಿಯರ್ ಮಾಡಿ ತರಬೇಕಿತ್ತು. ಅವನು ಪೋಸ್ಟ್ ಕೊಡಲು ಹೋದಲೆಲ್ಲಾ ವರ್ಷಕ್ಕೆ ಒಂದು ನಾಯಿಯಿಂದಲಾದರೂ ಕಚ್ಚಿಸಿಕೊಳ್ಳುತ್ತಿದ್ದ ಇವೇ ಮುಂತಾದ ತೊಂದರೆಗಳನ್ನು ಜಬ್ಬಾರ್ ಎದುರಿಸುತ್ತಿದ್ದನೆಂದು ನಿರೂಪಕರು ವಿವರಿಸಿದ್ದಾರೆ.
೧೨. ಪುಟ್ಟಯ್ಯ ತನ್ನ ಅಸಹಾಯಕತೆಯನ್ನು ಹೇಗೆ ವಿವರಿಸುತ್ತಾನೆ?
ವೆಟರ್ನರಿ ಆಸ್ಪತ್ರೆಯ ಸ್ಟಾಕ್‌ಮನ್ ಪುಟ್ಟಯ್ಯ ತನ್ನ ಅಸಹಾಯಕತೆಯನ್ನು ನಿರೂಪಕರೆದುರು ತೋಡಿಕೊಳ್ಳುವುದನ್ನು ಗಮನಿಸುತ್ತೇವೆ. ಆತ ಕೆಲಸ ಮಾಡುತ್ತಿದ್ದುದು ಪಶುಚಿಕಿತ್ಸಾಲಯದಲ್ಲಾದರೂ ಹುಚ್ಚುನಾಯಿ ಕಡಿತಕ್ಕೆ ಮನುಷ್ಯರಿಗೂ ಇಂಜಕ್ಷನ್ ಕೊಡಬೇಕಾಗಿತ್ತು. ರೆಫ್ರಿಜರೇಟರ್ ಒಳಗೆ ಸಾವಿರಾರು ರೂಪಾಯಿ ಔಷಧಿಗಳಿಟ್ಟಿದ್ದರೂ ಆಗಾಗ ವಿದ್ಯುತ್ ಇಲಾಖೆಯವರು ಕರೆಂಟ್ ತೆಗೆದುಬಿಡುವುದರಿಂದ ಔಷಧಿಗಳೆಲ್ಲ ಕೆಡುತ್ತಿದ್ದವು. ಹುಚ್ಚುನಾಯಿ ಕಚ್ಚಿದೆ ಎಂದು ಬಂದ ನೂರಾರು ದನಗಳನ್ನು ಆತ “ರೆಫ್ರಿಜಿರೇಟರ್ ಕೆಲಸ ಮಾಡುತ್ತಿಲ್ಲ, ಸಿರಂ ಕೆಟ್ಟೋಗಿದೆ” ಎಂದು ಹಿಂದಕ್ಕೆ ಕಳುಹಿಸಬೇಕಿತ್ತು. ಅಲ್ಲದೆ, ಸಿರಂ ಕಳಿಸಲು ಕನೂರಿಗೆ ಇಂಡೆಂಟ್ ಹಾಕಿದ್ದನಾದರೂ ಅಲ್ಲಿಂದ ಅದು ಬಾರದೆ ತೊಂದರೆಯಾಗಿತ್ತು, ಮನುಷ್ಯರಿಗೆ ಕೆಟ್ಟುಹೋಗಿರುವ ಸೀರಂ ಇಂಜೆಕ್ಷನ್ ಚುಚ್ಚುವುದು ಹೇಗೆಂಬ ಚಿಂತೆ ಪುಟ್ಟಯ್ಯನನ್ನು ಬಾಧಿಸುತಿತ್ತು
೧೩. ಬೀದಿನಾಯಿಗಳ ನಿವಾರಣೆಗೆ ಖಾನ್ ಸಾಹೇಬರು ತೆಗೆದುಕೊಂಡಿದ್ದ ಕ್ರಮಗಳಾವುವು?
ನಿರೂಪಕರು ಮುನ್ಸಿಪಾಲಿಟಿ ಪ್ರೆಸಿಡೆಂಟರಾದ ಖಾನ್ ಸಾಹೇಬರ ಬಳಿಬಂದು ಬೀದಿನಾಯಿಗಳ ಕಾಟದ ಬಗ್ಗೆ ವಿಚಾರಿಸಿದಾಗ, ಅವರು ತಮ್ಮ ನಾಯಿ ನಿರ್ಮೂಲನಾ ಕಾಠ್ಯಕ್ರಮಗಳ ಬಗ್ಗೆ ವಿವರಗಳನ್ನು ನೀಡುತ್ತಾರೆ. ನಾಯಿಗಳನ್ನು ಶೂಟ್ ಮಾಡಿಸಲು ಕ್ರಮಕೈಗೊಂಡಿದ್ದರು. ಪಾಯ್ಸನ್ ತರಿಸಿ ನಾಯಿಗಳನ್ನು ಸಾಯಿಸಿದ್ದರು. ವರ್ಷಕ್ಕೆ ಇನ್ನೂರು ಮುನ್ನೂರು ನಾಯಿಗಳನ್ನಾದರೂ ತಾವು ಕೊಂದಿರುವುದಾಗಿ ಖಾನ್ ಸಾಹೇಬರು ವಿವರಿಸಿದರು. ಪಾಯ್ಸನ್ ಕಲಬೆರಕೆಯಾಗಿರುವುದರಿಂದ ಅದು ಪರಿಣಾಮಕಾರಿಯಾಗಿರಲಿಲ್ಲ. ಅಲ್ಲದೆ ಹೊರಗಡೆಯಿಂದ ಲಾರಿಯಲ್ಲಿ ನಾಯಿಗಳನ್ನು ತು೦ಬಿಕೊಂಡು ಬಂದು ರಾತ್ರೋರಾತ್ರಿ ಇಲ್ಲಿ ಬಿಟ್ಟು ಹೋಗುತ್ತಿರುವುದರಿಂದ ನಾಯಿಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ -ಈ ಮುಂತಾದ ತಮ್ಮ ಕಾಠ್ಯಕ್ರಮಗಳ ವಿವರಗಳನ್ನು ಖಾನ್ ಸಾಹೇಬರು ನಿರೂಪಕರಿಗೆ ನೀಡಿದರು.
೧೪. ಟೆಲಿಫೋನ್ ಲೈನ್‌ಮನ್ ತಿಪ್ಪಣ್ಣನ ಸಾವಿನ ಸಂದರ್ಭವನ್ನು ವಿವರಿಸಿ.
ತಿಪ್ಪಣ್ಣ ಟೆಲಿಫೋನ್ ಇಲಾಖೆಯಲ್ಲಿ ಲೈನ್‌ಮನ್ ಆಗಿ ಕೆಲಸ ಮಾಡುತ್ತಿದ್ದ. ಆತ ನುಗ್ಗೇಹಳ್ಳಿಯ ಸಮೀಪದ ಲೈನ್‌ನಲ್ಲಿ ತೊಂದರೆಯಿದೆಯೆಂದು ಜಂಕ್ಷನ್ ಬಾಕ್ಸ್ ಇದ್ದ ಕಂಬವನ್ನೇರುವಾಗ ಅದು ತನಗೆ ಮೃತ್ಯುಸ್ತಂಭವಾದೀತೆ೦ದು ಯೋಚಿಸಿರಲಿಲ್ಲ. ಎಂದಿನಂತೆ ಆತ ಬೆಳಿಗ್ಗೆ ಎಕ್ಸ್‌ಛೇಂಜ್ ಬಳಿಗೆ ಬಂದಾಗ ನುಗ್ಗೆಹಳ್ಳಿ ಕಡೆಯ ಅಷ್ಟೂ ಲೈನುಗಳು ಡೆಡ್ಡಾಗಿರುವ ಸಂಗತಿ ತಿಳಿದು ಅಲ್ಲಿಗೆ ಬಂದಿದ್ದನು. ಊರಿನಿಂದ ಸಾಕಷ್ಟು ದೂರದಲ್ಲಿದ್ದ ಹದಿನೇಳನೇ ಕಂಬದ ಜಂಕ್ಷನ್ ಬಾಕ್ಸ್ ಪರಿಶೀಲನೆ ಮಾಡಿ, ಯಾವ ಯಾವ ಲೈನು ಡೆಡ್ಡಾಗಿದೆ ಎಂದು ತಿಳಿಯಲು ತಿಪ್ಪಣ್ಣ ಆ ಕಂಬ ಹತ್ತಿದ್ದ, ಮೂವತ್ತು-ನಲವತ್ತು ತಂತಿಗಳ ತೊಡಕಿನೊಳಗೆ ನುಸುಳಿ ತಿಪ್ಪಣ್ಣ ಜಂಕ್ಷನ್ ಬಾಕ್ಸ್ ಬಿಚ್ಚಿ ಸ್ಕ್ರೂ ಡ್ರೈವರಿನಲ್ಲಿ ಎಂಥದನ್ನೋ ಮೀಟುತ್ತಿರಬೇಕಾದರೆ ವಿದ್ಯುತ್ ತಂತಿ ಟೆಲಿಫೋನ್ ತಂತಿಗೆ ತಗುಲಿ ಶಾಕ್ ಹೊಡೆದು ಕುಳಿತ ಭಂಗಿಯಲ್ಲೇ ತಿಪ್ಪಣ್ಣ ಸತ್ತುಹೋದನು. ಅಲ್ಲಿ ಓಡಾಡುತ್ತಿರುವ ಜನರಿಗೆ ಆತ ರಿಪೇರಿಯಲ್ಲಿ ಮಗ್ನನಾಗಿರುವಂತೆ ಕಂಡು ನಿರ್ಲಕ್ಷ್ಯದಿಂದಿದ್ದರು. ಆನಂತರ ರಮೇಶ್ ಬಾಬು ಮತ್ತು ಶಂಕರಪ್ಪ ತಿಪ್ಪಣ್ಣನನ್ನು ಹುಡುಕಿಕೊಂಡು ಬಂದಾಗ ಸತ್ಯದ ಅರಿವಾಗುವುದು.
೧೫. ಡ್ರೈವರ್ ಅಬ್ಬಾಸ್ ಮತ್ತು ಕ್ಲೀನರ್ ಕೃಷ್ಣನ ಸಾವಿಗೆ ಕೃಷ್ಣೇಗೌಡನ ಆನೆ ಕಾರಣವೆ? ವಿವರಿಸಿ.
ಡ್ರೈವರ್ ಅಬ್ಬಾಸ್ ಮತ್ತು ಕ್ಲೀನರ್ ಕೃಷ್ಣ ಇಬ್ಬರ ಸಾವಿಗೆ ಕೃಷ್ಣಗೌಡನ ಆನೆಯು ಕಾರಣವಲ್ಲ. ಲೋಡುಲಾರಿ ಓಡಿಸಿಕೊಂಡು ಬರುತ್ತಿದ್ದ ಅಬ್ಬಾಸಿಗೆ ಇದ್ದಕ್ಕಿದ್ದಂತೆ ಎರಡು ದಂ ಬೀಡಿ ಎಳೆಯುವ ತೆವಲು ಆರಂಭವಾಯ್ತು, ಆಗ ಅವನು ಕ್ಲೀನರ್ ಕೃಷ್ಣನ ಕೈಯಲ್ಲಿ ಸ್ಟೇರಿಂಗ್ ಕೊಟ್ಟು ಬೀಡಿ ಹತ್ತಿಸಿಕೊಂಡು ಎರಡು ದಂ ಎಳೆದನು. ಆದರೆ ಅಷ್ಟರಲ್ಲಿ ಲಾರಿ ಎದುರಿಗಿದ್ದ ದೊಡ್ಡ ಮರದ ಕಾಂಡದ ಕಡೆಗೆ ನುಗ್ಗಿಬಿಟ್ಟಿತು. ಅಬ್ಬಾಸ್ ಅವಸರದಲ್ಲಿ ಸ್ಟೇರಿಂಗ್ ಬಿಡುವಂತೆ ಕೂಗಿದರೂ ವಜ್ರಮುಷ್ಟಿಯಲ್ಲಿ ಹಿಡಿದುಕೊಂಡಿದ್ದ ಕ್ಲೀನರ್ ಕೃಷ್ಣ ಬಿಡಲಿಲ್ಲ. ಆ ಗಾಬರಿಯಲ್ಲಿ ಡ್ರೈವರ್ ಅಬ್ಬಾಸನಿಗೆ ಬ್ರೇಕು ತುಳಿಯಬೇಕೆಂದು ಮರೆತು ಹೋಯಿತು. ಗೋಣಿಮರಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಹಿಂದುಗಡೆ ಇದ್ದ ಅಪಾರ ತೂಕದ ದಿಮ್ಮಿಗಳು ಕ್ಯಾಬಿನ ಮುರಿದು ಮುನ್ನುಗ್ಗಿದವು. ಮರದ ದಿಮ್ಮಿಗಳಿಗೂ ಗೋಣಿಮರಕ್ಕೂ ನಡುವೆ ಸಿಕ್ಕಿಬಿದ್ದ ಅಬ್ಬಾಸ್ ಮತ್ತು ಕೃಷ್ಣ ಇಬ್ಬರೂ ಅಪ್ಪಚ್ಚಿಯಾಗಿ ಹೋದರು. ಎಲ್ಲರೂ ಗೋಣಿಮರದ ಬಳಿಯಿದ್ದ ಆನೆಯ ಹೆಜ್ಜೆ ಗುರುತುಗಳನ್ನು ನೋಡಿ ಆನೆಯೇ ಅವರಿಬ್ಬರ ಸಾವಿಗೆ ಕಾರಣವೆಂದು ಭಾವಿಸಿದರು. ಆದರೆ, ಆ ಸಮಯದಲ್ಲಿ ಆನೆ ಶಿವೇಗೌಡರ ಸಾಮಿಲ್ಲಿನಲ್ಲಿ ಕಳ್ಳನಾಟಾ ಸಾಗಿಸುವ ಕೆಲಸದಲ್ಲಿ ಸಹಾಯ ಮಾಡುತ್ತಿತ್ತು. ಹೀಗಾಗಿ ಆನೆ ಇವರಿಬ್ಬರ ಸಾವಿಗೆ ಕಾರಣವಲ್ಲ ಎಂದು ಹೇಳಬಹುದು.
೧೬. ವೇಲಾಯುಧನ ಹೆಂಡತಿಗೆ ಆನೆಯ ಬಗ್ಗೆ ಸವತಿ-ಮಾತ್ಸರ್ಯ ಮೂಡಲು ಕಾರಣಗಳೇನು?
ವೇಲಾಯುಧನ ಹೆಂಡತಿಗೆ ಆನೆಯ ಬಗ್ಗೆ ಒಂದು ರೀತಿಯ ವಿಚಿತ್ರವಾದ ಸವತಿ ಮಾತೃರವಿತ್ತು. ಆದ್ದರಿಂದಲೇ ಆಕೆ ವೇಲಾಯುಧ ಆನೆಯ ಜೊತೆ ಮಲಗಲು ಹೊರಟಾಗ ‘ನೀನ್ಯಾವ ಸೀಮೆ ಗಂಡಸು’ ಎಂದು ಜರೆದಳು. ಚೂರು ತಪ್ಪು ಮಾಡಿದರೂ ತನ್ನನ್ನು ಹಿಡಿದು ಬಡಿಯುವ ಗಂಡನ ಬಗ್ಗೆ ಆಕೆಗೆ ಕೋಪ, ಸದರ ಕೊಟ್ಟರೆ ಹೆಣ್ಣಾನೆ ಏನು ಬೇಕಾದರೂ ಮಾಡುತ್ತೆ ಎಂದು ಆಕೆ ಹೀಯಾಳಿಸುವಳು. ವೇಲಾಯುಧ ಹಗಲು-ರಾತ್ರಿ ಹೆಣ್ಣಾನೆಯೊಂದಿಗೆ ಕೆಲಸಕ್ಕೆಂದು ತಿರುಗುವುದು ಆಕೆಯಲ್ಲಿ ಆನೆಯ ಬಗ್ಗೆ ಸವತಿ ಮಾತ್ಸರ್ಯ ಮೂಡಲು ಕಾರಣವಾಗಿತ್ತು. ಮದುವೆಯಾಗಿ ಹಲವು ವರ್ಷ ಕಳೆದಿದ್ದರೂ ತಾನಿನ್ನು ಬಸುರಿಯಾಗದಿರುವುದು ಆಕೆಯ ಆನೆ ದ್ವೇಷಕ್ಕೆ ಮೂಲ ಕಾರಣವಾಗಿತ್ತು. ಹೆಣ್ಣಾನೆಯು ವೇಲಾಯುಧನನ್ನು ತುಂಬಾ ಹಚ್ಚಿಕೊಂಡಿದ್ದು ಆಕೆಗೆ ಆನೆ ತನ್ನ ಪ್ರತಿಸ್ಪರ್ಧಿ ಎಂದು ತಿಳಿಯಲು ಕಾರಣವಾಗಿತ್ತು. ಹೆಣ್ಣಾದವಳು ತನ್ನ ಗಂಡ ಯಾವುದನ್ನು ಅತಿಯಾಗಿ ಹಚ್ಚಿಕೊಂಡರೂ ಅದು ತನ್ನ ಆಕರ್ಷಣ ಶಕ್ತಿಗೆ ಸವಾಲೆಂದೇ ಭಾವಿಸುತ್ತಾಳೆ, ಇದೇ ಬಗೆಯ ಭಾವನೆಯು ವೇಲಾಯುಧನ ಹೆಂಡತಿಗೆ ಆನೆಯ ಬಗ್ಗೆ ಇತ್ತೆನ್ನಬಹುದು.
೧೯. ನಾಗರಾಜನ ನಿಗೂಢ ಸಾವಿನ ಬಗ್ಗೆ ಜನರ ಅಭಿಪ್ರಾಯಗಳೇನು? ವಿವರಿಸಿ,
ನಾಗರಾಜನ ಅಂತರ್ಧಾನ ಆತನ ಬಗ್ಗೆ ಇಲ್ಲಸಲ್ಲದ ಊಹಾಪೋಹಗಳು ಹರಡಲು ಕಾರಣವಾಯಿತು. ಕಾಡಿನಲ್ಲಿ ಆತನ ಕೋವಿ ಮಾತ್ರ ಸಿಕ್ಕಿತು. ಪೊಲೀಸರು ಕಾಡಿನಲ್ಲಿ ಹುಡುಕಾಡಿ “ನಾಗರಾಜನ ಕೋವಿ ಸಿಕ್ಕಿದೆ, ಹೆಣ ಸಿಗಲಿಲ್ಲ” ಎಂದು ಮಹಜರು ಬರೆದುಕೊಂಡರು. ಕೆಲವರು ಆತ ಸಾರ್ವಜನಿಕ ಸಭೆಯಲ್ಲಾದ ಅಪಮಾನದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಮಾತನಾಡಿಕೊಂಡರೆ, ಇನ್ನು ಕೆಲವರು ನಾಗರಾಜನಿಗೆ ಇದ್ದಕ್ಕಿದ್ದಂತೆ ಮನಃಪರಿವರ್ತನೆಯಾಗಿ ತಲೆ ಬೋಳಿಸಿಕೊಂಡು ಧರ್ಮಸ್ಥಳದಲ್ಲಿ ತಿರುಗುತ್ತಿರುವನೆಂದು ಮಾತನಾಡಿದರು. ಕಳ್ಳದಂಧೆಯ ಗಂಗಾಧರನ ಗ್ಯಾಂಗಿನವರು ಆತನ ಕೊಲೆ ಮಾಡಿರಬಹುದು, ಆನೆ ತುಳಿದು ಸಾಯಿಸಿರಬಹುದು – ಇತ್ಯಾದಿ ಸಂಗತಿಗಳನ್ನು ಜನ ಮಾತನಾಡಿಕೊಂಡರು. ಇಲಾಖೆಯವರು ಹಿಂದಿರುಗಿ ಬರುವಂತೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ, ಆತನ ನಿರೀಕ್ಷೆಯಲ್ಲಿದ್ದರು.̇
೧೮. ತನ್ನ ಆನೆಯ ಬಗ್ಗೆ ಕೃಷ್ಣೇಗೌಡನಲ್ಲಿ ಬೇಸರ ಮೂಡಲು ಕಾರಣಗಳೇನು?
ಆನೆಯನ್ನು ತಂದ ಹೊಸತರಲ್ಲಿ ದುಡ್ಡಿನ ಮುಖ ಕಂಡ ಕೃಷ್ಣೇಗೌಡ ಅನೆಯು ತನ್ನ ಪಾಲಿಗೆ ಲಕ್ಷ್ಮಿಯೆಂದೇ ಭಾವಿಸಿದ. ಆದರೆ ಆನೆಯ ಮೇಲೆ ಆಪಾದನೆಗಳ ಸುರಿಮಳೆಯಾದಾಗ ಆತನಿಗೆ ಅದರ ಮೇಲೆ ರೇಜಿಗೆ ಆರಂಭವಾಯಿತು. ಗೂಳೂರು ಮಠದವರು ಆನೆಯನ್ನು ತನಗೆ ಸಾಗಹಾಕಿದಂತೆ ತಾನೂ ಯಾರಿಗಾದರೂ ದಾಟಿಸಿ ಬಿಡಲು ಯೋಚಿಸಿದ. ಆದರೆ ಸಾಧ್ಯವಾಗಲಿಲ್ಲ, ಸರ್ಕಸ್ ಕಂಪನಿಗಳು ಮುಚ್ಚಿವೆ, ಜಗದ್ಗುರುಗಳು ಆನೆ ಮೇಲೆ ಕೂರದೆ ಅಡ್ಡಪಲ್ಲಕ್ಕಿ-ಬೆಂಜ್ ಕಾರುಗಳ ಮೊರೆಹೋಗಿದ್ದಾರೆ. ಮರದ ವ್ಯಾಪಾರಿಗಳಿಗೂ ಆನೆ ಬೇಡವಾಗಿದೆ. ಕಾಡಿಗೆ ಅಟ್ಟಿಬಿಡೋಣವೆಂದರೆ ಅದು ಹಿಂದಿರುಗಿ ಲಾಯಕ್ಕೆ ಬರುತ್ತದೆ – ಈ ಎಲ್ಲಾ ಯೋಜನೆಗಳಿಂದ ಕೃಷ್ಣಗೌಡನಿಗೆ ತನ್ನ ಆನೆಯು ಕುತ್ತಿಗೆಗೆ ಕಟ್ಟಿಕೊಂಡ ಕಲ್ಲುಗುಂಡಿನಂತೆ ಭಾಸವಾಯಿತು.
ಹೆಚ್ಚುವರಿ ಪ್ರಶ್ನೆಗಳು:
೧೯. ಆನೆ ರೆಹಮಾನನ ಅಂಗಡಿ ಬೀಳಿಸಿದ ಸಂದರ್ಭವನ್ನು ಚಿತ್ರಿಸಿ.
ನಿರೂಪಕರು ಒಮ್ಮೆ ಸ್ಕೂಟರಿನಲ್ಲಿ ಹೋಗುವಾಗ ರೆಹಮಾನನ ಅಂಗಡಿ ಮುಂದೆ ಗಲಾಟೆಯಾಗುತ್ತಿರುವುದನ್ನು ನೋಡಿ ಸ್ಕೂಟರ್ ನಿಲ್ಲಿಸಿ ಹೋಗಿ ನೋಡಿದರು. ರೆಹಮಾನನು ಕೃಷ್ಣೇಗೌಡರ ಆನೆಯು ತನ್ನ ಗೂಡಂಗಡಿಯನ್ನು ದೂಡಿ ಬೀಳಿಸಿದೆ ಎಂದು ಅಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬಾಳೇಹಣ್ಣು ಮತ್ತಿತರ ವಸ್ತುಗಳನ್ನು ತೋರಿಸುತ್ತಾ, ಇದಕ್ಕೆಲ್ಲಾ ವೇಲಾಯುಧನ ಅವಜ್ಞೆಯೇ ಕಾರಣವೆಂದೂ, ತನಗಾದ ನಷ್ಟವನ್ನು ಕೃಷ್ಣೇಗೌಡನೇ ತುಂಬಿಕೊಡಬೇಕೆಂದೂ ಕೂಗಾಡುತ್ತಿದ್ದನು. ವೇಲಾಯುಧ ಬಾಳೇಹಣ್ಣು ಕೊಟ್ಟು ಅಭ್ಯಾಸ ಮಾಡಿಸಿದ ರೆಹಮಾನ್‌ನನ್ನೇ ಬೈಯ್ದನಾದರೂ ಆನೆ ಬಾಳೇಹಣ್ಣಿಗಾಗಿ ಅಂಗಡಿಯನ್ನು ಬೀಳಿಸಿದ್ದರೆ ಅಲ್ಲಿ ಬಿದ್ದಿರುವ ಬಾಳೇಹಣ್ಣನ್ನು ಏಕೆ ತಿಂದಿಲ್ಲ? ಎಂದು ತನ್ನ ವಾದವನ್ನು ಮಂಡಿಸುತ್ತಿದ್ದನು. ಅಷ್ಟರಲ್ಲಿ ರೆಹಮಾನ್ ಜುಬೇದಾಳನ್ನು ಪ್ರತ್ಯಕ್ಷ ಸಾಕ್ಷಿಯಾಗಿ ಹೇಳಲು, ಆಕೆ ಅವನ ನಿರೀಕ್ಷೆಗೆ ವಿರುದ್ಧವಾಗಿ “ರೆಹಮಾನ್ ಆನೆಗೆ ಕೆಟ್ಟ ಮಾತು ಬೈದಿದ್ದರಿಂದ ಅದು ಅಂಗಡಿಯನ್ನು ದೂಡಿಬೀಳಿಸಿತು” ಎಂದಳು. ಜನರು ಆನೆಗೂ ಮಾನ-ಮರ್ಯಾದೆ ಇರುತ್ತೆ ತಿಳ್ಕೋ, ಎಂದರೆ, ನಿರೂಪಕರಿಗೆ ಮಾತ್ರ ಆನೆಯ ಮರ್ಮಕ್ಕೆ ತಾಗುವ ಬೈಯ್ಗಳ ಅದ್ಯಾವುದಿರಬಹುದೆಂದು ಕುತೂಹಲ ಮೂಡಿತು. ಆನೆ ಮಾತ್ರ ತನಗೇನೂ ಗೊತ್ತಿಲ್ಲವೆಂಬಂತೆ ಬಾಲ-ಕಿವಿ ಆಡಿಸುತ್ತಾ ನಿಂತುಕೊಂಡಿತ್ತು.
೨೦. ಮೂಡಿಗೆರೆಯಲ್ಲಿ ಪ್ರಕಾಶ ಮಾಡಿದ ಭಾಷಣದ ಪರಿಣಾಮವನ್ನು ವಿವರಿಸಿ.
ಪ್ರಕಾಶ ಒಮ್ಮೆ ಭಾಷಣ ಮಾಡುತ್ತಾ ಕಾಡಾನೆಗಳು ಊರಿನಕಡೆ ಬಂದು ಜನರ ಪೈರು-ಫಸಲಿಗೆ ಹಾನಿಯುಂಟು ಮಾಡಲು ಕಾರಣ ಅರಣ್ಯ ಇಲಾಖೆಯವರು ಕಾಡಿನ ಮರಗಳನ್ನು ತೆಗೆದು ನೀಲಗಿರಿ ಆಕೆಶಿಯಾ ಮುಂತಾದ ಆನೆಗಳಿಗೆ ನಿರುಪಯುಕ್ತವಾದ ಗಿಡಗಳನ್ನು ನೆಡುತ್ತಿರುವುದು ಎಂದು ಹೇಳಿದನು. ಭಾಷಣದ ಮಧ್ಯೆ ಆತ ಕ್ವಚಿತ್ತಾಗಿ ಪ್ರಸ್ತಾಪಿಸಿದ ಈ ವಿಷಯವು ದೊಡ್ಡ ತರಲೆಗೆ ಕಾರಣವಾಯ್ತು, ಗಂಧಸಾಗಣೆಗೆ ಪ್ರತಿಬಂಧಿಸುತ್ತಾ, ಮರ ಸಾಗಿಸಲು ಪರ್ಮಿಟ್ಟಿಗೆ ಸತಾಯಿಸುತ್ತ, ಶಿಕಾರಿಗೆ ಅಡ್ಡಿ ಮಾಡುತ್ತಿದ್ದ ಫಾರೆಸ್ಟರ್ ನಾಗರಾಜನ ಮೇಲೆ ಖದೀಮರೆಲ್ಲ ಹರಿಹಾಯ್ದರು. ನೀಲಗಿರಿಯ ನರ್ಸರಿಯನ್ನೆಲ್ಲಾ ಹಾಳು ಮಾಡಿ ಅರಣ್ಯ ಇಲಾಖೆಯ ವಿರುದ್ಧ ಧರಣಿ ಕುಳಿತರು. ನಾಗರಾಜ ಸುಮ್ಮನಿರದೆ ಕಾಡಾನೆಗಳು ಊರಿಗೆ ಬರಲು ಕೃಷ್ಣಗೌಡನ ಹೆಣ್ಣಾನೆ ಕಾರಣವೆಂದು ತಪ್ಪನ್ನು ಆನೆಯ ಮೇಲೆ ಹೊರಿಸಿದನು. ಈ ಎಲ್ಲಾ ವಿದ್ಯಮಾನಗಳೂ ಪ್ರಕಾಶ ಮಾಡಿದ ಭಾಷಣದ ಪರಿಣಾಮವೆನ್ನಬಹುದು.
೨೧. ಜಬ್ಬಾರ್ ಮತ್ತು ಪುಟ್ಟಯ್ಯ ಸೇರಿ ನಿರೂಪಕರನ್ನು ಖಾನ್ ಸಾಹೇಬನ ಬಳಿ ಹೋಗುವಂತೆ ಪುಸಲಾಯಿಸಿದ ರೀತಿಯನ್ನು ವಿವರಿಸಿ.
ವೆಟಿರ್ನರಿ ಸ್ಟಾಕ್‌ಮನ್ ಪುಟ್ಟಯ್ಯ ಮತ್ತು ಪೋಸ್ಟ್‌ಮನ್ ಜಬ್ಬಾರ್ ಇಬ್ಬರೂ ನಿರೂಪಕರೊಂದಿಗೆ ಬೀದಿನಾಯಿ ಕಾಟದ ವಿಚಾರವನ್ನು ಚರ್ಚಿಸಿದರು. ಹುಚ್ಚುನಾಯಿ ಕಡಿತದಿಂದ ಊರಿನ ಜನರಿಗಾಗುತ್ತಿರುವ ತೊಂದರೆಯನ್ನು ವಿವರಿಸುತ್ತಾ, ಮುನ್ನಿಪಾಲಿಟಿ ಅಧ್ಯಕ್ಷರಾದ ಖಾನ್ ಸಾಹೇಬರು ನಾಯಿಕಾಟ ನಿಯಂತ್ರಿಸುವುದನ್ನು ಬಿಟ್ಟು ಮಸೀದಿ ಸುತ್ತಮುತ್ತ ಸ್ವಚ್ಛ ಮಾಡಿಸುವುದರಲ್ಲೇ ಕಾಲಕಳೆಯುತ್ತಿರುವರೆಂದು ದೂರಿದರು. ನಿರೂಪಕರು ಒಂದು ಮಾತು ಬೈಯ್ದರ ಮುನ್ಸಿಪಾಲಿಟಿ ಅಧ್ಯಕ್ಷರು ಹೆದರಬಹುದು ಮತ್ತು ಪತ್ರಿಕೆಯಲ್ಲಿ ಬರೆಯುತ್ತಾರೆಂಬ ಭಯದಿಂದಲಾದರೂ ಕೆಲಸ ಮಾಡಬಹುದೆಂದು ನಿರೂಪಕರನ್ನು ಪುಸಲಾಯಿಸಿದರು. ಅವರ ಮಾತಿನಿಂದ ನಿರೂಪಕರ ಕೋಪ ಏರುತ್ತಾ ಹೋಗಿ, ಮುನ್ಸಿಪಾಲಿಟಿಗೆ ಹೋಗಿ ಜಗಳಾಡಲು ಮಾನಸಿಕವಾಗಿ ಸಿದ್ಧರಾದರು. ಪುಟ್ಟಯ್ಯ-ಜಬ್ಬಾರ್ ಇಬ್ಬರೂ ನಿರೂಪಕರೊಂದಿಗೆ ತಾವೂ ಬರುವುದಾಗಿ ಹೇಳಿದರೂ ಕೊನೆಯಲ್ಲಿ ಬರದೆ ಕೈಕೊಟ್ಟು ಓಡಿದರು. ಇವರಿಬ್ಬರ ಚಿತಾವಣೆಯಿಂದಾಗಿ ನಿರೂಪಕರು ಬೀದಿನಾಯಿ ಕಾಟದ ವಿಚಾರವಾಗಿ ಮಾತಾಡಲು ಮುನ್ಸಿಪಾಲಿಟಿಗೆ ಬರುವಂತಾಯ್ತು.
೨೨. ಪುರಪ್ರಮುಖರ ಮೀಟಿಂಗಿನಲ್ಲಿ ನಡೆದ ವಾಗ್ವಾದವನ್ನು ಸಂಗ್ರಹಿಸಿ.
ಪುರಸಭಾಧ್ಯಕ್ಷರು ಕರೆದ ಪುರಪ್ರಮುಖರ ಸಭೆಯು ಸಂತೆ ದಿನ ನಡೆಯಿತು. ಪುರಸೊತ್ತು ಇದ್ದವರೆಲ್ಲಾ ಪುರಪ್ರಮುಖರೇ ಆಗಿಬಿಟ್ಟಿದ್ದರು. ಬೀದಿ ನಾಯಿ ವಿಚಾರ ಪ್ರಸ್ತಾಪಿಸಲು ನಿರೂಪಕರೂ ಹೋಗಿದ್ದರು. ಇಲ್ಲಿ ಕುಳಿತಿದ್ದವರೆಲ್ಲಾ ಬಿಸಿಲಿನ ಬೇಗೆಯಿಂದ ದಣಿವಾರಿಸಿಕೊಳ್ಳಲು ಕುರ್ಚಿ ಸಿಕ್ಕಿದ್ದಕ್ಕೆ ಮೀಟಿಂಗ್‌ನಲ್ಲಿ ಕುಳಿತುಹೋಗಲು ಬಂದಂತಿತ್ತು. ಇಡೀ ಸಭೆಯ ಕೇಂದ್ರ ವಿಚಾರ ಕೃಷ್ಣಗೌಡನ ಆನೆಯದಾಗಿತ್ತು. ಆನೆಯ ಕಾಲಿಗೆ ಸರಪಳಿ ಹಾಕದಿರುವ ಬಗ್ಗೆ ಕೃಷ್ಣೇಗೌಡನನ್ನು ದೂರಲಾಯಿತು. ನಾಗರಾಜನನ್ನು ಕಂಡರೆ ಆಗದ ಖದೀಮರೆಲ್ಲಾ ನಾಗರಾಜನ ಬೇಜವಾಬ್ದಾರಿತನವನ್ನು ಎತ್ತಿ ಆಡಿ ಅವಮಾನಿಸಿದರು. ರೇಂಜರ್ ನಾಗರಾಜನಿಗೆ ಆನೆಯನ್ನು ಶೂಟ್ ಮಾಡಿದರೂ ಚಿಂತೆಯಿಲ್ಲ, ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದರು. ಆನೆಗೆ ಯಾರ ಪ್ರಭಾವವೂ ಇಲ್ಲದ ಕಾರಣ ಅದು ಅಪರಾಧಿಯಾಗುತ್ತಾ ಹೋಯಿತು. ನಾಗರಾಜ ನನಗೆ ಸರಿಯಾದ ವೆಪನ್ ಕೊಟ್ಟರೆ ಆನೆಯನ್ನು ಸುಟ್ಟುಬಿಡುವುದಾಗಿ ರೇಂಜರ್ ಎದುರು ಕೂಗಾಡಿದ. ಕೃಷ್ಣೇಗೌಡ ಆನೆಗೆ ತೊಂದರೆಯಾದರೆ ತನ್ನಿಂದ ನಿಭಾಯಿಸಲಾಗುವುದಿಲ್ಲ, ಒಂದು ವೇಳೆ ಅದು ಸತ್ತರೆ ಅದರ ಹೆಣಸಾಗಿಸುವುದೂ ತನ್ನಿಂದ ಸಾಧ್ಯವಿಲ್ಲವೆಂದು ಘೋಷಿಸಿದ. ಹೀಗೆ ಪುರಪ್ರಮುಖರ ಸಭೆಯಲ್ಲಿ ಕೃಷ್ಣೇಗೌಡನ ಆನೆ ಅಪರಾಧಿ ಸ್ಥಾನದಲ್ಲಿ ನಿಂತಿತು. ಒಬ್ಬೊಬ್ಬರೂ ಆನೆಯ ಮೇಲೆ ವಿನಾಕಾರಣ ಆರೋಪಗಳನ್ನು ಹೊರೆಸಿದರು. ಗೊಂದಲಮಯ ವಾತಾವರಣದೊಂದಿಗೆ ಸಭೆ ಬರಕಾಸ್ತಾಯಿತು.
೨೩. ವೇಲಾಯುಧನ ಸಾವಿನ ಸಂದರ್ಭವನ್ನು ಚಿತ್ರಿಸಿ.
ವೇಲಾಯುಧ ಆನೆಯ ಕಾಲ್ತುಳಿತಕ್ಕೆ ಸಿಕ್ಕು ಅಪ್ಪಚ್ಚಿಯಾಗಿ ಹೋಗುತ್ತಾನೆ. ಕೃಷ್ಣಗೌಡರು ಅನೆಯಿಂದಾದ ಆಪಾದನೆಗಳಿಂದ ರೇಗಿ ವೇಲಾಯುಧನಿಗೆ ಬೈಯುತ್ತಾರೆ. ಇದರಿಂದ ಕೋಪಗೊಂಡ ವೇಲಾಯುಧ ಕುಡಿದು ಆನೆಗೆ ಸರಿಯಾಗಿ ಬುದ್ದಿ ಕಲಿಸಬೇಕೆಂದು ಯೋಚಿಸುತ್ತಿರುವಾಗಲೇ ಅವನ ಹೆಂಡತಿಯೂ ವೇಲಾಯುಧ ಹೆಣ್ಣಾನೆಯನ್ನು ಅತಿಯಾಗಿ ಹಚ್ಚಿಕೊಂಡಿರುವುದನ್ನು ಮರ್ಮಕ್ಕೆ ತಾಗುವಂತೆ ಎತ್ತಿ ಆಡುತ್ತಾಳೆ. ಅವನ ಪುರುಷತ್ವವನ್ನೇ ತನ್ನ ಹರಿತ ಮಾತುಗಳಿಂದ ಅಲ್ಲಾಡಿಸಿ ಬಿಡುತ್ತಾಳೆ. ಇದೆಲ್ಲದರಿಂದ ವ್ಯಗ್ರವಾದ ವೇಲಾಯುಧ ಆನೆಯ ಕಾಲಿಗೆ ಅಂಕುಶದಿಂದ ಚುಚ್ಚಿ ಅದನ್ನು ದಾರಿಗೆ ತರಬೇಕೆಂದು ತೀರ್ಮಾನಿಸುತ್ತಾನೆ. ಕುಡಿದ ಮತ್ತಿನಲ್ಲಿ ತಾನು ಚುಚ್ಚುತ್ತಿರುವುದು ತಾನು ನೋಡಿಕೊಳ್ಳುತ್ತಿರುವ ಕೃಷ್ಣೇಗೌಡನ ಆನೆಗಲ್ಲ, ದಂತವಿರುವ ಕಾಡಿನ ಗಂಡಾನೆಗೆ ಎಂಬುದನ್ನು ಆತ ಗಮನಿಸುವುದಿಲ್ಲ. ಅನೆಯ ಕಾಲನ್ನು ಅಂಕುಶದಿಂದ ಚುಚ್ಚಲು ಬಾಗಿದವನನ್ನು ಕಾಡಾನೆಯು ನಿಮಿಷ ಮಾತ್ರದಲ್ಲಿ ಅಪ್ಪಚ್ಚಿ ಮಾಡಿ, ವೇಲಾಯುಧ ಗುರುತು ಸಿಗದ ಮಾಂಸದ ಮುದ್ದೆಯಾಗಿ ಹೋಗುತ್ತಾನೆ.
೨೪. ‘ಕೃಷ್ಣೇಗೌಡನ ಆನೆ’ ಕತೆಯಲ್ಲಿ ಬರುವ ಭ್ರಷ್ಟವ್ಯವಸ್ಥೆಯ ಚಿತ್ರಣವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
‘ಕೃಷ್ಣೇಗೌಡನ ಆನೆ’ ಕತೆಯಲ್ಲಿ ತೇಜಸ್ವಿಯವರು ಸಮಾಜದ ಭ್ರಷ್ಟ ವ್ಯವಸ್ಥೆಗೆ ಕನ್ನಡಿ ಹಿಡಿದಿದ್ದಾರೆ. ಶಿವೇಗೌಡ-ಕೃಷ್ಣೇಗೌಡರು ನಡೆಸುವ ಕಳ್ಳನಾಟಾ ಸಾಗಾಣಿಕೆಯ ಅವ್ಯವಹಾರ, ಗಂಗಾಧರನ ಗ್ಯಾಂಗಿನವರ ಕಳ್ಳದಂಧೆ-ಕೊಲೆ ಸುಲಿಗೆಗಳು, ಮುನ್ಸಿಪಾಲ್ಟಿ ಪ್ರೆಸಿಡೆಂಟರ ಅಧಿಕಾರ ವ್ಯಾಮೋಹ, ಪಿಡಬ್ಲ್ಯುಡಿ, ಟೆಲಿಫೋನ್, ಎಲೆಕ್ನಿಕಲ್ ಡಿಪಾರ್‌ಮೆಂಟಿನವರ ಅರಣ್ಯ ಲೂಟಿ, ಗ್ರಾಮೀಣರಲ್ಲಿ ಎದ್ದು ಕಾಣುವ ಆನೀತಿ ಮುಂತಾದ ಸಂಗತಿಗಳನ್ನು ಲೇಖಕರು ಈ ಕಥೆಯಲ್ಲಿ ದಾಖಲಿಸಿದ್ದಾರೆ. ಜಬ್ಬಾರ್ ಮತ್ತು ದುರ್ಗಪ್ಪರ ಅಸಹಾಯಕತೆ, ನಾಗರಾಜನ ಅಧಿಕಾರ ವ್ಯಾಮೋಹ, ಪೊಲೀಸ್ ಇಲಾಖೆಯವರ ಕರ್ತವ್ಯಲೋಪ ಎಲ್ಲವನ್ನೂ ಸಾಂದರ್ಭಿಕವಾಗಿ ನಿರೂಪಕರು ಚಿತ್ರಿಸಿದ್ದಾರೆ. ವ್ಯವಸ್ಥೆಯ ನಿಷ್ಕ್ರಿಯತೆ, ಭ್ರಷ್ಟತೆ, ಪರಸ್ಪರರ ಈಷ್ರೆ , ರಾಜಕೀಯ, ಧಾರ್ಮಿಕ, ಸಾಮಾಜಿಕ ಹಾಗೂ ಅಧಿಕಾರಶಾಹಿಯೊಳಗಿನ ಕರಾಳ ಸತ್ಯಗಳನ್ನು ಲೇಖಕರು ಈ ಕಥೆಯಲ್ಲಿ ಕಾಣಿಸಿದ್ದಾರೆನ್ನಬಹುದು.
೨೫. ಆನೆಯು, ಕತೆಯಲ್ಲಿ ಬರುವ ಬಾಯಿಲ್ಲದ ಜನರ ಸಂಕೇತವಾಗಿರುವುದನ್ನು ವಿವರಿಸಿ.
ಕೃಷ್ಣೇಗೌಡನ ಆನೆಯು ಬಲಭೀಮನಾಗಿದ್ದರೂ ‘ಬಾಯಿ’ಯಿಲ್ಲದ ಕಾರಣ ಪಾಪದ ಪ್ರಾಣಿಯಾಗಿದೆ. ಅಲ್ಲದೆ ಸಮಾಜದಲ್ಲಿ ಬಾಯಿಯಿಲ್ಲದೆ ಬದುಕುವ ಅಸಹಾಯಕ ಜನರ ಸಂಕೇತವೆಂಬಂತೆ ಚಿತ್ರಿತವಾಗಿದೆ. ಆನೆಯ ಮೇಲೆ ಬಂದ ಆಪಾದನೆಗಳು ಹಲವು, ಆದರೆ ಯಾವುದಕ್ಕೂ ಆನೆ ನೇರವಾಗಿ ಕಾರಣವಾಗುವುದಿಲ್ಲ. ಅದಿರುವುದು ಮನುಷ್ಯನ ನಿಯಂತ್ರಣದಲ್ಲಿ, ಆದರೂ ಜನ ತಮ್ಮಮನಸ್ಸಿಗೆ ತೋಚಿದ್ದನ್ನು ಆನೆಯಮೇಲೆ ಹೊರಿಸುತ್ತಾ ಅದನ್ನು ಅಪರಾಧಿಯನ್ನಾಗಿಸುತ್ತಾರೆ. ಪ್ರತಿಯೊಬ್ಬನೂ ಆನೆಗೊಂದು ವ್ಯಕ್ತಿತ್ವವನ್ನು ಆರೋಪಿಸಿ, ತನಗೆ ಕಂಡಂತೆ ಅರ್ಥೈಸುತ್ತಾನೆ. ಎಲ್ಲ ಪಾಪಕೃತ್ಯಗಳ ಅಪರಾಧವನ್ನು ಹೊತ್ತ ಆನೆ ‘ಬಾಯಿಯಿಲ್ಲದ’ ಎಲ್ಲರಿಗೂ, ಎಲ್ಲದಕ್ಕೂ ಸಂಕೇತವೆಂಬಂತೆ ಚಿತ್ರಿತವಾಗಿದೆ. ಮಾನವನ ಸ್ವಾರ್ಥಮೂಲ ನೆಲೆಯಿಂದ ಉತ್ಪನ್ನವಾದ, ಬಲವಂತದಲ್ಲಿ ತನ್ನ ಮೂಲ ಸಹಜ ಸ್ವಭಾವವನ್ನು ಬಿಟ್ಟುಕೊಟ್ಟಿರುವ ಆನೆಯು ತನಗಾಗಿ ಅಲ್ಲದೆ, ಪರರ ಇಚ್ಛೆಯ ನಿಯಂತ್ರಣದಲ್ಲಿ ಬದುಕುತ್ತದೆ. ಸಮಾಜದಲ್ಲಿ ದನಿಯೆತ್ತಲಾರದ ದಮನಿತರ ಸ್ಥಿತಿ ಕೂಡ ಇದಕ್ಕೆ ಭಿನ್ನವಾಗಿಲ್ಲ.
೨೬. ಕೃಷ್ಣೇಗೌಡನ ಆನೆ ನೀಳ್ಗತೆಯಲ್ಲಿ ಪ್ರಸ್ತಾಪವಾಗಿರುವ ಆನೆ-ಮಾನವರ ನಡುವಿನ ಸಂಘರ್ಷದ ನಿಜಕಾರಣಗಳನ್ನು ವಿಶ್ಲೇಷಿಸಿ.
‘ಕೃಷ್ಣೇಗೌಡನ ಆನೆ’ ಕತೆಯಲ್ಲಿ ಆನೆ ಮತ್ತು ಮಾನವರ ನಡುವಿನ ಸಂಘರ್ಷವನ್ನು ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಇಲ್ಲಿ ಬರುವ ಹೆಣ್ಣಾನೆ ಗೌರಿಗೆ ಕಾಡಿನ ಪರಿಚಯವಿಲ್ಲ. ಊರಿನಲ್ಲಿ ಜನರ ನಡುವೆ ಹುಟ್ಟಿ ಬೆಳೆದರೂ, ಅವರಿಗೆ ಒಗ್ಗಿಕೊಂಡಿದ್ದರೂ ಜನಗಳ ತೆವಲಿಗೆ ಬಲಿಯಾಗಿ ಸಂಬಂಧ ಪಡದ ತಪ್ಪುಗಳಿಗೆ ಹೊಣೆಯಾಗುತ್ತಾ ಹೋಗುತ್ತದೆ. ಬಾಯಿ ಇದ್ದ ಜನರು ಬಾಯಿಯಿಲ್ಲದ ಆನೆಯನ್ನು ಅಪರಾಧಿಯಾಗಿಸುತ್ತಾರೆ. ಜನರಿಗೆ ಆನೆಯು ಯಾವ ತೊಂದರೆ ನೀಡದಿದ್ದರೂ ಅದು ಅವರ ನಡುವೆ ಬದುಕಲು ಅನರ್ಹವೆನಿಸುತ್ತದೆ. ಅರಣ್ಯ ಸಂಸ್ಕೃತಿಯ ಆನೆಗೂ ನಗರ ಸಂಸ್ಕೃತಿಯ ಜನರಿಗೂ ನಡುವೆಯೂ ಸಂಘರ್ಷವು ಸೂಕ್ಷ್ಮನೆಲೆಯಲ್ಲಿ ರಚಿತವಾಗಿದೆ. ಕೃಷ್ಣಗೌಡನ ಆನೆ ಕೊನೆಗೂ ಅರಣ್ಯ ಸಂಸ್ಕೃತಿಗೆ ಮರಳಿ ನಗರ ಸಂಸ್ಕೃತಿಯನ್ನು ಧಿಕ್ಕರಿಸುವುದು ಇಲ್ಲಿನ ವ್ಯಂಗ್ಯವಾಗಿದೆ.
ಭಾಷಾಭ್ಯಾಸ
೧) ನಾಟಿ, ನಾಟು, ನಾಟಿ – ಈ ಪದಗಳ ಅರ್ಥವ್ಯತ್ಯಾಸವನ್ನು ಕೇಳಿ ತಿಳಿಸಿರಿ.
‘ನಾಟಿ’ ಎಂದರೆ ಗದ್ದೆಯಲ್ಲಿ ಬತ್ತದ ಸಸಿಗಳನ್ನು ನೆಡುವುದು.
‘ನಾಟು’ ಎಂದರೆ ತಾಗುವುದು. ಉದಾಹರಣೆಗೆ: ನಾನು ಹೇಳಿದ ವಿಷಯ ಅವರ ಮನಸ್ಸಿಗೆ ನಾಟಿತು (ತಾಗಿತು).
‘ನಾಟ’ ಎಂದರೆ ಮರದ ದಿಮ್ಮಿಗಳು.
೨) ಧೇನಿಸುತ್ತ, ಗ್ರಾಚಾರ – ಮುಂತಾದ ಪದಗಳನ್ನು ಪಟ್ಟಿಮಾಡಿ ಅವುಗಳ ಗ್ರಾಂಥಿಕ ರೂಪಗಳನ್ನು ಬರೆಯಿರಿ.
ಗ್ರಾಚಾರ – ಗ್ರಹಜಾರ
ಅದ್ಯಾಕೆ – ಅದು ಯಾಕೆ?
ತರ್ಲೆ- ತರಲೆ
ತರಬ್ಯಾರ್ಡಿ – ತರಬೇಡಿರಿ
ತೇಗಿತಾನೇ – ತೆಗೆಯುತ್ತಲೇ
ಇಲ್ಲಾಂತ – ಇಲ್ಲಾ ಅಂತ
ಮುರ್ಕೊಂಡು – ಮುರಿದುಕೊಂಡು
ಕಿತ್ಕೊಳ್ಳೋಕೆ – ಕಿತ್ತುಕೊಳ್ಳುವುದಕ್ಕೆ
ಮತ್ತಿನ್ನೇನು – ಮತ್ತೆ ಇನ್ನೇನು
ನಾನ್ಯಾಕೆ – ನಾನು ಯಾಕೆ
ಇರುತ್ತೆ – ಇರುತ್ತದೆ
ಎತ್ಲಾಗೆ – ಎತ್ತಲಾಗೆ
ಇಲ್ಯಾಕೆ – ಇಲ್ಲಿಯಾಕೆ
ಕೇಳ್ಬೇಕಲ್ಲ – ಕೇಳಬೇಕಲ್ಲ
ಇಟ್ಕೊಂಡಿದ್ದೀರ – ಇಟ್ಟುಕೊಂಡಿದ್ದೀರಾ
ಕೂತ್ಕೊಳ್ಳಿ – ಕುಳಿತುಕೊಳ್ಳಿ
ಅವಂದು – ಅವನದು
ತಯ್ಯಾರಿದ್ರೆ – ತಯಾರು ಇದ್ದರೆ
ಮಾಡೋರದ್ದು – ಮಾಡುವವರದ್ದು
ಕಲಿಸಿಯಾದ ಮೇಲೆ – ಕಲಿಸಿ ಆದ ಮೇಲೆ
ಗಂಡಾಂತ್ರ – ಗಂಡಾಂತರ
ಬಂದಿದ್ವು – ಬಂದಿದ್ದವು
ಮದ್ವೆಮನೆ – ಮದುವೆಮನೆ
ಹಂಗೆಲ್ಲಾ – ಹಾಗೆಲ್ಲ …………. ಇತ್ಯಾದಿ.
೩) ಆಡಿ, ಕಳೆ, ಬಗೆ, ಹಿಡಿ, ಹದ್ದು – ಇವುಗಳಿಗೆ ನಾನಾರ್ಥ ರೂಪಗಳನ್ನು ಬರೆಯಿರಿ.
೧. ಅಡಿ = ಅಳತೆ
ಕೆಳಗೆ, ಪಾದ
೨. ಕಳೆ = ಕಾಂತಿ
ಕಡಿಮೆ ಮಾಡು, ಪೈರಿನ ನಡುವೆ ಬೆಳೆವ ಹುಲ್ಲು
೩. ಬಗೆ = ಯೋಚಿಸು, ರೀತಿ
ವಿಧ
೪. ಹಿಡಿ = ಕಾವು, ಗ್ರಹಿಸು
ಮುಷ್ಟಿ, ಆಕ್ರಮಿಸು
೫. ಹದ್ದು = ಪಕ್ಷಿ
ಗಡಿ, ಮಿತಿ
೪) ‘ಕೃಷ್ಣಗೌಡನ ಆನೆ’ ಕತೆಯಲ್ಲಿ ನಿರೂಪಕ ಬಳಸುವ ನುಡಿಗಟ್ಟುಗಳನ್ನು ಗಮನಿಸಿರಿ. ಅವುಗಳ ಅರ್ಥ ತಿಳಿದುಕೊಳ್ಳಲು ಯತ್ನಿಸಿ.
ಉದಾಹರಣೆಗೆ: ತುತ್ತೂರಿ ಊದು, ತರ್ಪಣ ಬಿಡು, ನರಪೇತಲ ನಾರಾಯಣ, ಗಾಳಿಸುದ್ದಿ ಹಬ್ಬು, ಹೆಸರುವಾಸಿಯಾಗು, ಮುಖ ಹಿಂಜಿಕೊಳ್ಳು, ಅಧಿಕಪ್ರಸಂಗ ಮಾಡು, ಕಾಲುಕೀಳು, ಕಣ್ಣಿಗೆ ಒತ್ತಿಕೋ, ಗಾಳಿಗೆ ಉಗಿ, ದೇಶಾವರಿ ನಗೆ ಬೀರು, ಮೂಗು ಹಾಕು, ಮೇಲೆ ಎತ್ತಿ ಕಟ್ಟು, ಉರಿಯುವ ಬೆಂಕಿಗೆ ತುಪ್ಪ ಸುರಿ, ಹದ್ದುಬಸ್ತಿನಲ್ಲಿಡು ಇತ್ಯಾದಿ.
ತುತ್ತೂರಿ ಊದು – ಪ್ರಚಾರಮಾಡು
ತರ್ಪಣ ಬಿಡು – ಸಂಬಂಧ ಕಡಿದುಕೋ
ಗಾಳಿಸುದ್ದಿ ಹಬ್ಬು – ಆಧಾರವಿಲ್ಲದ ಸುದ್ದಿ ಹರಡು
ಮುಖ ಹಿಂಜಿಕೊಳ್ಳು – ಅಸಮಾಧಾನ ತೋರು
ನರಪೇತಲ ನಾರಾಯಣ – ಸಣ್ಣಗಿರುವ ಮನುಷ್ಯ
ಹೆಸರುವಾಸಿಯಾಗು – ಪ್ರಸಿದ್ಧವಾಗು
ಅಧಿಕಪ್ರಸಂಗ ಮಾಡು – ತಲೆಹರಟೆ ಮಾಡು
ಕಾಲುಕೀಳು – ಓಡಿಹೋಗು
ಕಣ್ಣಿಗೆ ಒತ್ತಿಕೋ – ಭಕ್ತಿಯಿಂದ ಸ್ವೀಕರಿಸು
ಗಾಳಿಗೆ ಉಗಿ – ವ್ಯರ್ಥ ಪ್ರಯತ್ನ
ದೇಶಾವರಿ ನಗೆ ಬೀರು – ಏನೂ ಅರ್ಥವಿಲ್ಲದ ನಗು
ಮೂಗು ಹಾಕು – ಮಧ್ಯೆ ಪ್ರವೇಶಿಸು
ಮೇಲೆ ಎತ್ತಿ ಕಟ್ಟು – ಪ್ರಚೋದಿಸು
ಹದ್ದುಬಸ್ತಿನಲ್ಲಿಡು – ನಿಯಂತ್ರಣದಲ್ಲಿಡು
ಉರಿಯುವ ಬೆಂಕಿಗೆ ತುಪ್ಪ ಸುರಿ – ಕುಮ್ಮಕ್ಕು ಕೊಡು.
೫) ಈ ಕಥೆಯಲ್ಲಿ ಬಂದಿರುವ ಆನ್ಯದೇಶ ಪದಗಳನ್ನು ಪಟ್ಟಿಮಾಡಿರಿ.
ಫೋರ್ಡ್, ಜೀಪು, ಗೇರ್‌ಬಾಕ್ಸ್, ಮಿಲಿಟರಿ, ಮಾಡೆಲ್, ಪ್ಯಾಂಟ್, ಬೂಟ್ಸ್, ಕಾಲಿಂಗ್ ಬೆಲ್, ಲೈನ್‌ಮನ್, ಟೆಲಿಫೋನ್, ಕರೆಂಟ್, ಡಿಪಾರ್ಟ್ ಮೆಂಟ್, ಇನಾಮು, ಮುಲಾಮು, ಸಿರಂ, ಡ್ರೈವರ್, ವೆಟರಿ, ಇಂಜೆಕ್ಷನ್, ಒರಿಜಿನಾಲಿಟಿ, ಮೂಡು, ಕ್ಲಿಯರ್, ಓಪನ್, ಜಾರ್ಜ್, ಟ್ರಬಲ್, ಗ್ಯಾರಂಟಿ, ಐ ವಿಟ್‌ನೆಸ್, ನರ್ಸರಿ, ಫೋಟೋ, ಪೋಸ್ಟಾಫೀಸ್, ಡ್ಯೂಟಿ, ಆಫೀಸು, ಫೈಲು, ಯೂನಿಫಾರಂ, ಇತ್ಯಾದಿ,
ಕಥೆಯ ಸಾರಾಂಶ ಮತ್ತು ವಿಮರ್ಶೆ
ಅಧ್ಯಾಯ-1
ನಿರೂಪಕರು ತಮ್ಮ ಜೀಪಿನ ಗೇರ್‌ಬಾಕ್ಸ್ ಬಿಚ್ಚಿ ರಿಪೇರಿ ಮಾಡುತ್ತಿದ್ದರು. ಹಳೆಯ ಮಿಲಿಟರಿ ಜೀಪಿನ ಗೇರ್‌ಬಾಕ್ಸ್ ಆಗಾಗ ತೊಂದರೆ ಕೊಡುತ್ತಿದ್ದುದರಿಂದ ತಿಂಗಳಿಗೊಮ್ಮೆ ಜೀಪಿನಡಿ ಬಿದ್ದುಕೊಂಡು ಅದರ ಗೇರ್ ಬಾಕ್ಸ್ ಬಿಚ್ಚಿ ರಿಪೇರಿ ಮಾಡುವ ಕೆಲಸ ಅವರಿಗೆ ಖಾಯಮ್ಮಾಗಿತ್ತು. ಅಂದು ಅದೇರೀತಿ ರಿಪೇರಿ ಮಾಡುತ್ತಿರಬೇಕಾದರೆ ಎಲೆಕ್ನಿಕ್ ಲೈನ್‌ಮನ್ ದುರ್ಗಪ್ಪ ಹುಡುಕಿಕೊಂಡು ಬಂದ. ಅವನು ಸದಾ ಟೆಲಿಫೋನ್ ಇಲಾಖೆಯವರನ್ನು ಬೈಯುತ್ತಿರುತ್ತಿದ್ದನು. ವಿದ್ಯುತ್ ಇಲಾಖೆಯ ವೈರಿನ ಹತ್ತಿರ ಅವರ ವೈರ್ ತರುತ್ತಾರೆಂಬುದು ಅವನ ತಕರಾರು, ಈಗ ನಿರೂಪಕರ ಬಳಿ ಕೊಡಲಿಯೊಂದನ್ನು ಕೇಳಿ ಪಡೆಯಲು ಬಂದಿದ್ದನು. ಒಂದು ಮರದ ಕೊಂಬೆ ಮುರಿದು ಬಿದ್ದಿರುವುದನ್ನು ಕಡಿದು ಹಾಕಿ ಲೈನ್ ಕ್ಲಿಯರ್ ಮಾಡುವುದು ಅವನ ಉದ್ದೇಶವಾಗಿತ್ತು, ಮರದ ಹತ್ತಿರ ಆನೆಯ ಲದ್ದಿ ಬಿದ್ದಿರುವುದರಿಂದ ಈ ಕೆಲಸ ಕೃಷ್ಣಗೌಡನ ಆನೆಯದೇ ಎಂದಾತ ನಿರೂಪಕರ ಬಳಿ ದೂರಿದ. ಆನೆ ತಂತಿ ಮೇಲೆ ಕೊಂಬೆ ಎಳೆದರೆ ಅದಕ್ಕೆ ಕರೆಂಟು ಹೊಡೆದು ಸಾಯುವುದಿಲ್ಲವೇ? ಎಂದು ನಿರೂಪಕರು ಪ್ರಶ್ನಿಸಿದರು. ಅದಕ್ಕೆ ದುರ್ಗಪ್ಪ “ಭಾನುವಾರ ರಿಪೇರಿ ಕೆಲಸಕ್ಕೆ ಲೈನ್ ಓಪನ್ ಇರುತ್ತದಾದ್ದರಿಂದ ಅದು ಬದುಕಿದೆ. ಇಲ್ಲದಿದ್ದರೆ ಸುಟ್ಟು ಭಸ್ಮವಾಗಿರೋದು ಕಿಡಿಗೇಡಿ ಮುಂಡೇದು” ಎಂದು ಆನೆಯನ್ನು ಶಪಿಸಿದ. ಕೊಡಲಿಯನ್ನು ದುರ್ಗಪ್ಪನೇ ಅಟ್ಟಹತ್ತಿ ಹುಡುಕಿಕೊಳ್ಳಬೇಕೆ೦ದು ಹೇಳಿ ನಿರೂಪಕರು ಮತ್ತೆ ಜೀಪ್ ರಿಪೇರಿ ಕೆಲಸದಲ್ಲಿ ಮಗ್ನರಾದರು. ದುರ್ಗಪ್ಪ ಕೊಡಲಿ ಹುಡುಕಿ ತೆಗೆದುಕೊಂಡು ಹೋದವನು ಮತ್ತೆ ಮೂರು-ನಾಲ್ಕು ದಿನವಾದರೂ ಕೊಡಲಿ ಹಿಂದಿರುಗಿಸಲು ಬರಲೇ ಇಲ್ಲ ಎಂದು ಲೇಖಕರು ಚಿಂತಿಸಿದರು. ಮಣ್ಣು ಒಡ್ಡರು ಅಗೆಯುವಾಗ ಅಡ್ಡ ಬಂದ ಬೇರುಗಳನ್ನು ಕಡಿಯಲು ನಿರೂಪಕರ ಕೊಡಲಿ ಪಡೆದು ಯದ್ವಾತದ್ವಾ ಜಪ್ಪಿ ಅದರ ಹಿಂಭಾಗ ಯಾವುದು? ಮುಂಭಾಗ ಯಾವುದೆಂಬುದು ತಿಳಿಯದಷ್ಟು ಮೊಂಡಾಗಿ ಸುತ್ತಿಗೆಯಂತೆ ತೋರುತ್ತಿತ್ತು. ಹೀಗಾಗಿ ಕೊಡಲಿ ಕೊಡಲಿಲ್ಲವೆಂದು ನಿರೂಪಕರು ದುರ್ಗಪ್ಪನನ್ನು ಹುಡುಕಿಕೊಂಡು ಹೋಗಲಿಲ್ಲ.
ಆಧ್ಯಾಯ-2
ಕೃಷ್ಣಗೌಡ ಆನೆಯನ್ನು ಗೂಳೂರು ಮಠದಿಂದ ತಂದಿದ್ದನು. ಅದು ಊರಿನಲ್ಲಿ ಜನಗಳ ಮಧ್ಯೆ ನಿರಾಳವಾಗಿ ಓಡಾಡಿಕೊಂಡಿತ್ತು. ಮೂಡಿಗೆರೆಯ ಪೇಟೆಯಲ್ಲಿ ಪೋಲಿ ದನಗಳ ರೀತಿ ಓಡಾಡಿಕೊಂಡಿದ್ದು ಅಂಗಡಿಯವರು ಕೊಡುವ ಬಾಳೆಹಣ್ಣಿನ ಸಿಪ್ಪೆ ತಿಂದುಕೊಂಡಿತ್ತು. ಶಾಲಾ ಹುಡುಗರು ‘ಗೌರಿ’ ಎಂದರೆ ಸಲಾಂ ಮಾಡುತ್ತಿತ್ತು. ಗೂಳೂರು ಮಠದ ಸ್ವಾಮಿಗಳನ್ನು ಜನ ಅಡ್ಡಪಲ್ಲಕ್ಕಿಯಲ್ಲಿ ಹೊರಲಾರಂಭಿಸಿದ ಮೇಲೆ ಆನೆಗೆ ಜಗದ್ಗುರುಗಳನ್ನು ಹೊರುವ ಕೆಲಸ ತಪ್ಪಿಹೋಗಿ ನಿರುದ್ಯೋಗಿಯಾಗಿತ್ತು. ಮಠದವರು ಆನೆಯನ್ನು ಮತ್ತು ಮಠದ ಸಾತ್ವಿಕ ವಾತಾವರಣವನ್ನು ಕುಡಿತದಿಂದ ಹಾಳುಗೆಡುವುತ್ತಿದ್ದ ಅದರ ಮಾವುತ ಮೇಲಾಯುಧನನ್ನು ಯಾರಿಗಾದರೂ ದಾಟಿಸಬೇಕೆಂಬ ಹವಣಿಕೆಯಲ್ಲಿರುವಾಗಲೇ ಕೃಷ್ಣೇಗೌಡನು ವೇಲಾಯುಧ ಮಠದಲ್ಲಿ ಮಾಡಿದ್ದ ನಾಲೈಮ ಸಾವಿರ ಸಾಲ ತೀರಿಸಿ ಅವನ ಕುಟುಂಬ ಮತ್ತು ಆನೆಯನ್ನು ಮೂಡಿಗೆರೆಗೆ ಕರೆತಂದ ವಿಮ್‌ಕೋ ಕಂಪನಿಯವರಿಗೆ ಪಾತಾಳದಲ್ಲಿದ್ದ ಮರದ ದಿಮ್ಮಿಯನ್ನು ಮೇಲೆ ಸಾಗಿಸಲು ಆನೆ ನೆರವಿನ ಕಾಟ್ರಾಕ್ಟ್ ಪಡೆದು ಕೃಷ್ಣೇಗೌಡ ಲಾಭ ಮಾಡಿಕೊಳ್ಳಲಾರಂಭಿಸಿದ ಹಲವಾರು ವ್ಯವಹಾರಗಳಲ್ಲಿ ಕೈಸುಟ್ಟುಕೊಂಡಿದ್ದ ಕೃಷ್ಣೇಗೌಡ ಆನೆಯನ್ನು ಕೊಂಡು ತಂದಾಗ ಆತನ ಕಥೆ ಮುಗಿದಂತೆಯೇ ಎಂದು ಭಾವಿಸಿದ್ದವರಿಗೆ ಅಚ್ಚರಿ ಮೂಡುವಂತೆ ಕೃಷ್ಣೇಗೌಡನಿಗೆ ಧನಲಕ್ಷ್ಮಿ ಒಲಿದು ಬಂದಳು.
ಪ್ರತಿ ಬೇಸಿಗೆಯಲ್ಲೂ ಆನೆ ಏನಾದರೊಂದು ರಾದ್ದಾಂತ ಮಾಡುತ್ತಿತ್ತು. ಅದು ಆನೆ ಮಾಡುತ್ತಿದ್ದ ರಾದ್ಧಾಂತವೋ ಜನಗಳೇ ಅದರ ಮೇಲೆ ಸುಮ್ಮನೆ ಹೊರಿಸುತ್ತಿದ್ದ ಆಪಾದನೆಯೋ ತಿಳಿಯುತ್ತಿರಲಿಲ್ಲ. ನಿರೂಪಕರು ಒಮ್ಮೆ ನೋಡಿದಾಗ ಆನೆ ರೆಹಮಾನನ ಗೂಡಂಗಡಿಯನ್ನು ದೂಡಿ ಬೀಳಿಸಿತೆಂದು ಜನ ಗುಂಪುಗಟ್ಟಿದ್ದರು. ವೇಲಾಯುಧ ಆನೆ ಬೀಳಿಸಿಲ್ಲವೆಂದು ವಾದ ಮಾಡುತ್ತಿದ್ದ ರೆಹಮಾನ್ ತನ್ನ ಪತ್ನಿಯನ್ನು ಸಾಕ್ಷಿ ಹೇಳೆಂದಾಗ ಆಕೆ ರೆಹಮಾನ್‌ಗೆ ವಿರುದ್ಧವಾಗಿ ತನ್ನ ಗಂಡ ಆನೆಯ ಮರ್ಮಕ್ಕೆ ತಾಗುವಂತೆ ಕೆಟ್ಟ ಮಾತು ಬೈಯ್ದಿದ್ದರಿಂದ ಆನೆ ಹಾಗೆ ಮಾಡಿತೆಂದು ಹೇಳಿಬಿಟ್ಟಳು. ಆತ ಆನೆಯ ಮರ್ಮಕ್ಕೆ ತಾಗುವಂತಹ ಕಟ್ಟಿಮಾತು ಏನೆಂದಿರಬಹುದೆಂದು ನಿರೂಪಕರು ಚಿಂತಿಸುತ್ತಿದ್ದಾಗ, ಮತ್ತೊಬ್ಬರು ರೆಹಮಾನ್‌ಗೆ ಆನೆಗೂ ಮಾನ-ಮರ್ಯಾದೆ ಇರುತ್ತದೆ ತಿಳಿದುಕೋ ಎಂದು ಬುದ್ದಿ ಹೇಳಿದರು.
ಮತ್ತೊಮ್ಮೆ ಬೇಸಿಗೆಯಲ್ಲಿ ನಿರೂಪಕರ ಮನೆಯ ನಲ್ಲಿಯ ಪೈಪ್ ಒಡೆದಾಗ ನಿರೂಪಕರಿಗೆ ಆನೆಯ ಹಾವಳಿ ಮಾಡಿದ ವರದಿ ಬಂದವು ಕಾಡನ್ನು ಸರ್ವೆ ಮಾಡಲು ಬಂದಿದ್ದ ಪ್ರಕಾಶ ಮೂಡಿಗೆರೆಯಲ್ಲಿ ಭಾಷಣ ಮಾಡುತ್ತಾ ಕಾಡಾನೆಗಳು ಊರಿನಕಡೆ ಬಂದು ಪೈರು ಹಾಳುಮಾಡಲು ಕಾರಣ ಅರಣ್ಯ ಇಲಾಖೆಯವರು ಕಾಡಿನ ಮರಗಳನ್ನು ಕಡಿದು ಆಕೇಶಿಯಾ/ನೀಲಗಿರಿ ಮರಗಳನ್ನು ನೆಟ್ಟಿರುವುದು ಎಂದಾಗ ರೈತರಿಗೆ ಅರಣ್ಯ ಇಲಾಖೆಯವರ ಮೇಲೆ ಕೋಪ ಉಕ್ಕಿತು. ಅವರು ಅರಣ್ಯ ಇಲಾಖೆಯ ಮುಂದೆ ಧರಣಿ ಕುಳಿತರು. ಫಾರೆಸ್ಟರ್ ನಾಗರಾಜ ಕೃಷ್ಣೇಗೌಡನ ಹೆಣ್ಣಾನೆಯನ್ನು ಹುಡುಕಿಕೊಂಡು ಕಾಡಾನೆಗಳು ಊರಿಗೆ ಬರುತ್ತಿವೆ ಎಂದು ಕೃಷ್ಣೇಗೌಡನ ಆನೆಯನ್ನು ದೂರಿದರೂ ಜನ ಒಪ್ಪದೆ ಗಲಾಟೆ ಮಾಡಿದರು.
ಇಷ್ಟರಲ್ಲಿ ಅಯ್ಯಪ್ಪ ಸ್ವಾಮಿಯ ಅಂಬಾರಿ ಹೊತ್ತ ಕೃಷ್ಣೇಗೌಡನ ಆನೆಗೆ ಕರೆಂಟ್ ತಗಲಿ ಅದು ಅಂಬಾರಿ ಸಮೇತ ಕಾಡಿಗೆ ಓಡಿಹೋಯಿತೆಂಬ ವರ್ತಮಾನ ಬಂತು. ಕಾಡಾನೆಗಳು ಮೈತುಂಬಾ ಸಿಂಗಾರ ಮಾಡಿಕೊಂಡಿರುವ ಕೃಷ್ಣೇಗೌಡನ ಆನೆಯನ್ನು ಸೇರಿಸಿಕೊಳ್ಳುತ್ತವೆಯೇ ಎಂದು ನಿರೂಪಕರಿಗೆ ಅನುಮಾನವಾಯ್ತು, ಆನೆ ಕಾಡಿಗೆ ಹೋದ ಮೇಲೆ ಅದರ ರಾದ್ಧಾಂತ ಮುಗಿದವೆಂದು ಜನ ಸುಮ್ಮನಿರುವಾಗಲೇ ಆನೆ ಏನೂ ನಡೆದೇ ಇಲ್ಲವೆಂಬಂತೆ ಸೊಂಡಿಲಾಡಿಸುತ್ತಾ ಬಂದಿತು. ಕಾಡಿಗೆ ಹೋಗಿ ಬಂದಿರುವ ಅದರ ಬಗ್ಗೆ ಜನ ಭಯಪಟ್ಟರೂ ಅದು ಮಾತ್ರ ಎಂದಿನಂತೆ ಬಾಳೆಹಣ್ಣು ತಿಂದುಕೊಂಡು ಆರಾಮವಾಗಿ ಓಡಾಡಿಕೊಂಡಿತ್ತು.
ಅಧ್ಯಾಯ-3:
ಮೂರು ದಿನ ಕಳೆದ ಮೇಲೆ ನಿರೂಪಕರಿಗೆ ಪೋಸ್ಟಾಫೀಸಿನ ಬಳಿ ದುರ್ಗಪ್ಪ ಕಾಣಿಸಿದ. ವಿಚಾರಿಸಿದಾಗ ಫಾರೆಸ್ಟರ್ ನಾಗರಾಜ ಕೊಡಲಿ ಕಿತ್ತುಕೊಂಡು ಬಂದು ಆಫೀಸಿನಲ್ಲಿಟ್ಟುಕೊಂಡಿರುವ ವಿಚಾರ ತಿಳಿಸಿದ. ನಿರೂಪಕರಿಗೆ ಕೊಡಲಿಯ ಮೇಲೆ ವ್ಯಾಮೋಹವಿರದಿದ್ದರೂ ಇಂತಹ ತರಲೆ ಕೇಸುಗಳ ಜಾಡು ಹಿಡಿದು ವಿಷಯ ತಿಳಿದುಕೊಳ್ಳುವ ಕೆಟ್ಟ ಕುತೂಹಲವಿದ್ದುದರಿಂದ ಕೊಡಲಿ ಕೇಳಲು ಫಾರೆಸ್ಟರ್ ನಾಗರಾಜನ ಬಳಿ ಬಂದರು. ನಾಗರಾಜ ದುರ್ಗಪ್ಪ ಮರ ಕಡಿಯುತ್ತಿದ್ದ ವೆಪನ್ ಕೊಡಲಿಯಾಗಿರುವುದರಿಂದ ಸಾಕ್ಷ್ಯಕ್ಕೆ ಅದು ಬೇಕೆಂದೂ, ಇಂತಹ ಕೆಲಸಕ್ಕೆ ಕೊಡಲಿ ಕೊಟ್ಟಿದ್ದು ನಿರೂಪಕರ ತಪ್ಪೆಂದೂ ವಾದಿಸಿದ. ಅಲ್ಲದೆ ಅರಣ್ಯ ಇಲಾಖೆಯವರು ಲೈನು ಎಳೆಯೋದಕ್ಕೆ ಫಾರೆಸ್ಟ್ ಕ್ಲಿಯರ್ ಮಾಡುವ ನೆಪದಲ್ಲಿ ಮನೆಗೆ ಸೌದೆ ಮಾಡಿಕೊಳ್ಳುವರೆಂದು ದೂರಿದ. ನಿರೂಪಕರು ನಾಗರಾಜ ದುರ್ಗಪ್ಪನನ್ನು ಕೋರ್ಟಿಗೆಳೆಯುವುದು ಸಾಧ್ಯವಿಲ್ಲವೆಂದೂ ಆತ ದುರ್ಗಪ್ಪನನ್ನು ಹೆದರಿಸಲು ಹೀಗೆ ಮಾತನಾಡುತ್ತಿರಬಹುದೆಂದು ತರ್ಕಿಸಿದರು. ನಾಗರಾಜನಿಗೆ ಲೇಖಕರು ಇವೆಲ್ಲಾ ಕೋರ್ಟಿನಲ್ಲಿ ಇತ್ಯರ್ಥವಾಗುವ ಕೇಸುಗಳೇನೊ ಎಂದು ದಬಾಯಿಸಿದಾಗ, ನಾಗರಾಜ ತಾನು ಕಾನ್‌ಫಿಸಿಕೇಟ್ ಮಾಡಿ ತಂದ ಕಳ್ಳಸಾಗಾಣಿಕೆ ಮಾಡಿದ ಅಂಬಾಸೀಡರ್ ಕಾರುಗಳನ್ನು ತೋರಿಸಿದ. ಅವೆಲ್ಲಾ ಗುಜರಿಯವರಿಗೂ ಉಪಯೋಗಕ್ಕೆ ಬಾರದಂತೆ ತುಕ್ಕು ಹಿಡಿದಿದ್ದವು. ಕೊನೆಗೆ ನಾಗರಾಜ ಮನಸ್ಸು ಬದಲಿಸಿ, ದುರ್ಗಪ್ಪನಿಗೆ ಎಚ್ಚರಿಕೆ ನೀಡಿ ಕೊಡಲಿಯನ್ನು ಹಿಂದಿರುಗಿಸಿದ. ದುರ್ಗಪ್ಪ ಮರ ಬೀಳಿಸಿದ ಆನೆಯನ್ನು ದೂರಿದಾಗ ನಾಗರಾಜ ಅದನ್ನು ಕಾನ್‌ಫಿಸಿಕೇಟ್ ಮಾಡಿ ತಂದು ಕಟ್ಟಿಹಾಕುವುದಾಗಿಯೂ, ದುರ್ಗಪ್ಪ ತನ್ನ ದೂರನ್ನು ಬರವಣಿಗೆಯಲ್ಲಿ ಕೊಡಬೇಕೆಂದೂ ಹೇಳಿದನು. ಆನೆಯು ಮರ ಬೀಳಿಸಿದ್ದನ್ನು ಕಣ್ಣಾರೆ ನೋಡದ ದುರ್ಗಪ್ಪ ಗೊಣಗಿಕೊಂಡು ಸುಮ್ಮನಾದರೆ ನಿರೂಪಕರು ಕಾರುಗಳನ್ನು ಕಾನ್‌ಫಿಸಿಕೇಟ್ ಮಾಡಿ ತಂದಂತೆ ತರಲು ಸಾಧ್ಯವೇ ಎಂದು ಯೋಚಿಸುತ್ತಾ ಮನೆಯ ಕಡೆ ನಡೆದರು.
ಅಧ್ಯಾಯ-4:
ಆನೆ ಕೆಲಸ ಮಾಡುವಾಗ ಅದರ ಬಲವನ್ನು ನೋಡಿದರೆ ಅದನ್ನು ನಾಗರಾಜ ಕಾನ್ ಫಿಸಿಕೇಟ್ ಮಾಡಿ ತರುತ್ತೇನೆಂದಿದ್ದು ನಿರೂಪಕರಿಗೆ ತಮಾಷೆಯಾಗಿ ಕಂಡಿತು. ಆನೆಯ ಅಪಾರ ಶಕ್ತಿಯ ಅರಿವಾಗುವುದು ಅದು ಕೆಲಸ ಮಾಡುವುದನ್ನು ಕಂಡವರಿಗೆ ಮಾತ್ರ ವೇಲಾಯುಧನ ಹಿಂದೆ ವಿಧೇಯವಾಗಿ ಸಾಗುವ ಅದು ದೊಡ್ಡ ದೊಡ್ಡ ಮರಗಳನ್ನು ಹಣೆಯಿಂದ ನೂಕಿದರೆ ಮರಗಳು ಬೇರುಸಮೇತ ನೆಲಕ್ಕೆ ಉರುಳುತ್ತಿದ್ದವು. ಈ ಶಕ್ತಿಯನ್ನರಿತೇ ಹಿಂದೆ ಯುದ್ಧದಲ್ಲಿ ರಾಜರು ಆನೆಯ ಬೆಟಾಲಿಯನ್‌ಗಳನ್ನು ಹೊಂದಿರುತ್ತಿದ್ದರು. ಇಂಥ ಬಲಭೀಮನಾದ ಆನೆ ನರಪೇತಲ ನಾರಾಯಣನಂತಿದ್ದ ವೇಲಾಯುಧನ ಮಾತನ್ನು ವಿಧೇಯತೆಯಿಂದ ಪಾಲಿಸುತ್ತಿದ್ದುದು ನಿರೂಪಕರಿಗೆ ತಮಾಷೆಯಾಗಿ ಕಾಣಿಸುತ್ತಿತ್ತು. ವಾರಕ್ಕೊಮ್ಮೆ ಮೂಡಿಗೆರೆಯ ಪಕ್ಕ ಹರಿಯುವ ನದಿಯಲ್ಲಿ ವೇಲಾಯುಧ ಆನೆಯ ಮೈಮೇಲೆಲ್ಲ ಹತ್ತಿ ತಿಕ್ಕಿ ಸ್ನಾನಮಾಡಿಸಿದಾಗ ಸುಮ್ಮನೆ ತಿಕ್ಕಿಸಿಕೊಳ್ಳುತ್ತಿದ್ದ ಆನೆ ನೀರಿನಿಂದ ಈಚೆ ಬಂದೊಡನೆ ಮಣ್ಣನ್ನು ಪೌಡರ್‌ನಂತೆ ಮೈಗೆ ಎರಚಿಕೊಳ್ಳುತ್ತಿತ್ತು.
ಹೆಚ್ಚಿನ ಕೆಲಸವಿದ್ದಾಗಲೆಲ್ಲ ಕೃಷ್ಣೇಗೌಡರು ಆನೆಗೆ ಕುಡಿಯಲು ಎರಡು ಲೀಟರು ಪರಾಬು ಕೊಡುತ್ತಿದ್ದರು. ಇದರಲ್ಲಿ ವೇಲಾಯುಧನೇ ಅರ್ಧವನ್ನು ಮುಗಿಸಿರುತ್ತಿದ್ದ. ಇವರಿಬ್ಬರ ದೆಸೆಯಿಂದ ಆರಂಭವಾದ ಹಗರಣಗಳಲ್ಲಿ ಆನೆ ಒಬ್ಬ ಲಾರಿ ಡ್ರೈವರ್‌ನ ಸಾವಿಗೆ ಕಾರಣವಾಯ್ತೆಂದು ಗಾಳಿಸುದ್ದಿ ಹಬ್ಬಿತು. ಶಿವೇಗೌಡರ ಸಾಮಿಲ್ಲಿನಲ್ಲಿ ಕಳ್ಳನಾಟ ಇಳಿಸಲು ಆನೆ ಕರೆದೊಯ್ದಾಗ ನಡೆದ ಘಟನೆಯಿದು. ರಾತ್ರಿವೇಳೆ ಕೆಲಸಕ್ಕೆಂದು ಆನೆ ಮತ್ತು ಮಾವುತ ಇಬ್ಬರು ಷರಾಬು ಕುಡಿದು ಬಂದಿದ್ದರು. ಲಾರಿಯ ಕ್ಲೀನರ್ ನಾಯರ್ ಚಹಾ ಕುಡಿದು ಬರಲು ಹೋಗಿದ್ದಾಗ ಡ್ರೈವರ್ ಒಬ್ಬನೇ ನಿದ್ದೆ ಮಂಪರಿನಲ್ಲಿ ತೂಕಡಿಸುತ್ತಾ ಸ್ಟೇರಿಂಗ್ ಹಿಡಿದು ಕೂತಿದ್ದ. ಮತ್ತಿನಲ್ಲಿದ್ದ ವೇಲಾಯುಧ ಲಾರಿ ಮತ್ತು ನಾಟಾಗಳಿಗೆ ಬಿಗಿದಿದ್ದ ಹಗ್ಗವನ್ನು ಬಿಚ್ಚಲು ಮರೆತು, ಹಾಗೆಯೇ ನಾಟಾ ಉರುಳಿಸಲು ಆನೆಗೆ ಸೂಚಿಸಿದ; ಆನೆ ಲಾರಿ ಸಮೇತ ಉರುಳಿಸಿತು. ಕ್ಯಾಬಿನ್ನಿನ್ನಲ್ಲಿದ್ದ ಮಣಭಾರದ ಲಾರಿ ಜಾಕ್ ಡ್ರೈವರ್ ತಲೆಮೇಲೆ ಬಿದ್ದು ಆತ ಸತ್ತನು. ಕ್ಲೀನರ್ ಬಂದ ಮೇಲಷ್ಟೇ ಅವನ ಸಾವಿನಸುದ್ದಿ ತಿಳಿದಿದ್ದು. ಇದು ರಾತ್ರೋರಾತ್ರಿ ನಡೆದ ಕಳ್ಳತನದ ಕೆಲಸವಾದ್ದರಿಂದ ಕೃಷ್ಣೇಗೌಡರು-ಶಿವೇಗೌಡರು ಸೇರಿ ಈ ವಿಚಾರವನ್ನು ಮುಚ್ಚಿಹಾಕಿದರು. ಡ್ರೈವರ್‌ನ ಹೆಣವನ್ನು ಮರದ ಹೊಟ್ಟಿನೊಳಗೆ ಹಾಕಿ ಬೂದಿಮಾಡಿದರೆಂದು ಕೊಡಲಿ ಹಿಂದಿರುಗಿಸಲು ಬಂದ ದುರ್ಗಪ್ಪ ನಿರೂಪಕ ಬಳಿ ದೂರಿದನಲ್ಲದೆ, ಆನೆಗೆ ಹೆಂಡ ಕುಡಿಸುವುದರ ಅಪಾಯಗಳನ್ನು ವಿವರಿಸಿದ. ನಿರೂಪಕರು ‘ನಿನಗೆ ಸಾಯುವ ಭಯವೇ’ ಎಂದುದಕ್ಕೆ ತನ್ನ ಲೈನ್‌ಮನ್ ಕೆಲಸದ ಅಪಾಯಕಾರಿ ಸಂಗತಿಗಳನ್ನು ವಿವರಿಸಿದ. ನಿರೂಪಕರಿಗೆ ಆತ ತಂತಿಗಳ ಬಲೆಯಲ್ಲಿ ಸಿಲುಕಿಕೊಂಡ ರೇಜಿಗೆಗೆ ಆನೆಯನ್ನು ಬೈಯುತ್ತಿರುವನೆನ್ನಿಸಿತು.
ಅಧ್ಯಾಯ-5:
ನಿರೂಪಕರು ಎಲೆಕ್ನಿಕ್ ಬಿಲ್ಲು ಕಟ್ಟಲು ವೆಟರ್ನರಿ ಆಸ್ಪತ್ರೆ ಎದುರು ಹೋಗುತ್ತಿರುವಾಗ ಪೋಸ್ಟ್ ಮ್ಯಾನ್ ಜಬ್ಬಾರನ ಲೂನಾ ನಿಂತಿರುವುದು ಕಾಣಿಸಿತು. ಮೂರು ದಿನದಿಂದ ಪೋಸ್ಟ್ ಕೊಟ್ಟಿಲ್ಲವೇಕೆಂದು ಪ್ರಶ್ನಿಸಿದಾಗ “ಅಯ್ಯೋ ಯಾವೋ ಮದ್ವೆಮನೆ ಕಾಗದ, ನೀವೇನು ಹೋಗೋದಿಲ್ವಲ್ಲಾ” ಎಂದು ಉದಾಸೀನವಾಗಿ ಮಾತನಾಡಿದ. ಹದಿನಾರು ವರ್ಷಗಳಿಂದ ಟೆಂಪರ್ವರಿಯಾಗಿ ಕೆಲಸ ಮಾಡುತ್ತಿರುವ ಆತ ಕೇವಲ ಅರುವತ್ತು ರೂಪಾಯಿ ಸಂಬಳ ಪಡೆಯುತ್ತಿದ್ದರಿಂದ, ತೊಂದರೆ ಎದುರಿಸಲು ನೂರೆಂಟು ಪತ್ರಿಕೆಗಳ ಏಜೆನ್ಸಿ ತೆಗೆದುಕೊಂಡು, ಆ ಮ್ಯಾಗಝೀನುಗಳನ್ನೆಲ್ಲಾ ತನ್ನ ಲೂನಾದ ಮೇಲೆ ಕತ್ತೆಯ ಮೇಲೆ ಹೇರು ಹೊರುವಂತೆ ಹೊತ್ತು ಪೋಸ್ಟ್ ಕೊಡಲು ಹೋದಲ್ಲೆಲ್ಲಾ ಚಂದಾದಾರರಿಗೆ ತಲುಪಿಸುತ್ತಿದ್ದ. ಕೇಂದ್ರ ಅಂಚೆ ಕಛೇರಿಯವರು ಎಲ್ಲೆಡೆ ಅಂಚೆ ಕಛೇರಿ ತೆಗೆಯುವ ಬದಲು, ಅಂಚೆ ಪಟ್ಟಿಗಳನ್ನು ನೇತುಹಾಕಿದ್ದರಿಂದ ಅಲ್ಲಿಂದ ಕ್ಲಿಯರೆನ್ಸ್ ಮಾಡಲು ಜಬ್ಬಾರ್ ಫಜೀತಿ ಪಡುತ್ತಿದ್ದ. ನಿರೂಪಕರು ಯಾಕೆ ನಾಲ್ಕು ದಿನದಿಂದ ಮುಖಾನೇ ನೋಡಲಿಲ್ಲವೆಂದು ವಿಚಾರಿಸಿದಾಗ ಆತ ಹ್ಯಾಂಡ್‌ಪೋಸ್ಸಿನಲ್ಲಿ ನಾಯಿ ಕಚ್ಚಿದ್ದರಿಂದ ಇಂಜೆಕ್ಷನ್ ತೆಗೆದುಕೊಳ್ಳಲು ವೆಟರ್ನರಿ ಆಸ್ಪತ್ರೆಗೆ ಬಂದುದಾಗಿ ಹೇಳಿದ. ಪೋಸ್ಟ್ ಕೊಡಲು ಹೋದಲ್ಲೆಲ್ಲಾ ನಾಯಿಯ ಹಾವಳಿಯಿಂದಾಗಿ ತಾನು ಆಗಾಗ ನಾಯಿಕಡಿತಕ್ಕೆ ಒಳಗಾಗುವ ತೊಂದರೆಯನ್ನು ವಿವರಿಸಿದ. ಅಲ್ಲೇ ನಿಂತಿದ್ದ ವೆಟರರಿ ಸ್ಟಾಕ್‌ಮನ್ ಪುಟ್ಟಯ್ಯ ತಮ್ಮ ಬಳಿಯಿರುವ ಹುಚ್ಚುನಾಯಿ ಇಂಜೆಕ್ಷನ್ ಮನುಷ್ಯರಿಗೆ ಕೊಡುವಷ್ಟು ಚೆನ್ನಾಗಿಲ್ಲವೆಂದೂ ಕರೆಂಟಿನ ತೊಂದರೆಯಿಂದಾಗ ಸೀರಂ ಕೆಟ್ಟು ಹೋಗಿದೆಯೆಂದು ವಿವರಿಸಿದನು.
ನಿರೂಪಕರು ಪೇಟೆಯಲ್ಲಿ ಓಡಾಡುವಾಗ ಮಾರಿಗೊಂದರಂತೆ ಮಲಗಿರುವ ನಾಯಿಗಳನ್ನು ನೋಡಿದ್ದರಿಂದ ಬೀದಿನಾಯಿಕಾಟದ ಅರಿವು ಅವರಿಗಾಗಿತ್ತು. ಪುಟ್ಟಯ್ಯ ಸೀರಂಗೆ ಖರ್ಚು ಮಾಡುವ ಹಣದಲ್ಲಿ ನೂರರಲ್ಲಿ ಒಂದು ಭಾಗ ಖರ್ಚು ಮಾಡಿದರೂ ಕಂತ್ರಿ ನಾಯಿಕಾಟ ನಿವಾರಿಸಿ ಎಷ್ಟೊಂದು ಜೀವ ಉಳಿಸಬಹುದೆಂದು ಮುನ್ಸಿಪಾಲಿಟಿಯವರ ಕರ್ತವ್ಯ ಲೋಪವನ್ನು ನಿರೂಪಕರೆದುರು ಎತ್ತಿ ಆಡಿದ. ನಿರೂಪಕರಿಗೆ ಮುನ್ಸಿಪಾಲಿಟಿಯವರ ಮೇಲೆ ವಿಪರೀತ ಕೋಪ ಬಂದಿತು. ಹುಚ್ಚುನಾಯಿ ಕಚ್ಚಿದವರಿಗೆ ಮುಸ್ಲಿಪಾಲಿಟಿಯವರು ಇಂಜೆಕ್ಷನ್ ಚುಚ್ಚಿಸುವ ಕಾರಕ್ರಮ ಅವಿವೇಕದ್ದೆಂದು ಅನ್ನಿಸಿತು. ನಿರೂಪಕರಿಗೆ ಕೋಪ ಬಂದಿರುವುದನ್ನು ಗಮನಿಸಿದ ಪುಟ್ಟಯ್ಯ ಇನ್ನಷ್ಟು ಕೋಪ ಬರಿಸುವಂತೆ ನಿನ್ನೆ ಒಂದು ಹುಚ್ಚು ನಾಯಿ ಏಳು ಜನರಿಗೆ ಕಚ್ಚಿತೆಂದೂ ಕೃಷ್ಣೆಗೌಡನ ಆನೆಗೂ ಕಚ್ಚಿರುವ ಸುದ್ದಿ ಇದೆಯೆಂದೂ, ಒಂದು ವೇಳೆ ಆನೆಯನ್ನು ಇಂಜೆಕ್ಷನ್ನಿಗೆ ಕರೆತಂದರೆ ಏನು ಮಾಡುವುದೆಂಬ ತನ್ನ ಯೋಚನೆಯನ್ನು – ತಿಳಿಸಿದ. ಅದಕ್ಕೆ ನಿರೂಪಕರು ನಾಯಿಯ ಹಲ್ಲು ಆನೆಯ ಚರ್ಮಕ್ಕೆ ನಾಟಲು ಸಾಧ್ಯವೇ? ಎಂದು ಅನುಮಾನಿಸಿದಾಗ, ಕಚ್ಚಲಾಗದಿದ್ದರೂ ಅವರ ಜೊಲ್ಲು ಆನೆಯ ಕಾಲಿನ ಗಾಯಕ್ಕೆ ತಾಗಿದರೂ ಸಾಕು. ಆನೆಗೆ ಹುಚ್ಚು ಹಿಡಿಯಬಹುದೆಂದು ನಂಬಿಸಲೆತ್ನಿಸಿದೆ. ಅಲ್ಲದೆ ನೀವು ಮುನ್ಸಿಪಾಲ್ಟಿ ಪ್ರೆಸಿಡೆಂಟ್ ಖಾನ್ ಸಾಹೇಬರಿಗೆ ಬೀದಿನಾಯಿ ನಿವಾರಣೆ ಬಗ್ಗೆ ಒಂದು ಮಾತು ಹೇಳಬೇಕೆಂದೂ ಪ್ರಚೋದಿಸಿದ. ಜಬ್ಬಾರ್ ಮತ್ತು ಪುಟ್ಟಿಯರ ಚಿತಾವಣೆಯಿಂದ ಕೋಪಗೊಂಡಿದ್ದ ನಿರೂಪಕರು ಮುನ್ಸಿಪಾಲ್ಟಿ ಕಡೆಗೆ ಹೊರಟರು.
ಅಧ್ಯಾಯ-6:
ಮುನ್ಸಿಪಾಲ್ಟಿ ಪ್ರೆಸಿಡೆಂಟ್ ನಿರೂಪಕರ ತಕರಾರಿಗೆ ಉತ್ತರಿಸುತ್ತಾ ತಾನು ಡಾಗ್ ಪಾಯಿಸನ್ ತರಿಸಿ ಹಾಕಿದ್ದರೂ ಔಷಧಿ ಕಲಬೆರಕೆಯಾಗಿರುವುದರಿಂದ ನಾಯಿಗಳು ಸಾಯುತ್ತಿಲ್ಲವೆಂದರು. ಮುಸ್ಲಿಮರಾದ ತಮಗೆ ನಾಯಿ-ಹಂದಿ ಎರಡೂ ಖುರಾನ್ ಪ್ರಕಾರ ವಿರೋಧಿಗಳೆಂದೂ, ನಾಯಿ ನಿರ್ಮೂಲನಕ್ಕೆ ತಾನು ಸೂಕ್ತ ಕ್ರಮ ಕೈಗೊಂಡಿರುವುದಾಗಿಯೂ ಹೇಳಿದರು. ನಿರೂಪಕರು ನಾಯಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವ ವಿಚಾರವನ್ನು ಗಮನಕ್ಕೆ ತಂದಾಗ ಪ್ರೆಸಿಡೆಂಟರು ಅವೆಲ್ಲಾ ಹೊರಗಿನಿಂದ ಇಂಪೋರ್ಟ್ ಆದವೆಂದೂ, ನಾಯಿಗಳನ್ನು ಕೊಲ್ಲದ ಅಹಿಂಸಾಧರ್ಮಿಗಳು ರಾತ್ರೋರಾತ್ರಿ ಲಾರಿಗಳಲ್ಲಿ ನಾಯಿಗಳನ್ನು ತುಂಬಿತಂದು ಇಲ್ಲಿ ಬಿಡುತ್ತಾರೆಂದೂ ಆರೋಪಿಸಿದರು. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲು ತಮ್ಮ ಬಳಿ ಸರಿಯಾದ ಸಾಕ್ಷ್ಯ ಧಾರಗಳಿಲ್ಲವೆಂದೂ, ಮುಸ್ಲಿಮನಾದ ತಾನು ಅನ್ಯಧರ್ಮದವರನ್ನು ಟೀಕಿಸಿದರೆ ಅದು ಕೋಮು ಸಂಘರ್ಷಕ್ಕೆ ಕಾರಣವಾಗಬಹುದೆಂದೂ ತಿಳಿಸಿದರು. ನಿರೂಪಕರಿಗೆ ತಮ್ಮೆಲ್ಲ ಪ್ರಶ್ನೆಗಳಿಗೂ ಆತನ ಬಳಿ ರೆಡಿಮೇಡ್ ಉತ್ತರಗಳಿವೆಯೆಂಬುದರ ಅರಿವಾಯಿತು. ನಿರೂಪಕರು ಸಣ್ಣಪುಟ್ಟ ವಿಷಯಗಳನ್ನು ಧರ್ಮಕ್ಕೆ ಗಂಟುಹಾಕಿ ಕಾಂಪ್ಲಿಕೇಟ್ ಮಾಡಬಾರದೆಂದು ಪ್ರೆಸಿಡೆಂಟರಿಗೆ ಹೇಳಿದರು. ಅದಕ್ಕೆ ಅವರು ಮೊನ್ನೆ ದಿನ ಕೃಷ್ಣೇಗೌಡನ ಆನೆಯನ್ನು ಬೀದಿಗೆ ತರಬೇಡಿರಂದಿದ್ದಕ್ಕೆ ಜನ ನೀವು ರಂಜಾನ್‌ಗೆ ಒಂಟಿ ಮೆರವಣಿಗೆ ಮಾಡೋದ್ಯಾಕೆ ಎಂದು ಧರ್ಮದ ಮೂಲಕ್ಕೆ ಜಗಳವನ್ನು ತಂದುದನ್ನು ಹೇಳಿ, ತಮ್ಮ ಅಸಹಾಯಕತೆಯನ್ನು ವಿವರಿಸಿ ನಿರೂಪಕರನ್ನು ಬೀಳ್ಕೊಟ್ಟರು.
ಅಧ್ಯಾಯ-7:
ಮೂಡಿಗೆರೆಯ ಸುತ್ತ ಚಾಚಿಕೊಂಡಿರುವ ನಾನಾ ನಮೂನೆಯ ತಂತಿಗಳು ಆಧುನಿಕತೆಯ ಸಂಕೇತವಾಗಿದ್ದವು. ವಿವಿಧ ಇಲಾಖೆಗಳ ತಂತಿಗಳಿಂದಾಗಿ ಮೂಡಿಗೆರೆಯು ತಂತಿಯ ಬಲೆಯೊಳಗೆ ಸಿಲುಕಿದಂತಿತ್ತು. ಒಂದು ಇಲಾಖೆಯವರು ಇನ್ನೊಂದು ಇಲಾಖೆಯವರನ್ನು ದೂರುವುದು ಮಾಮೂಲಾಗಿತ್ತು. ಟೆಲಿಫೋನ್ ಡಿಪಾರ್ಟ್‌ಮೆಂಟಿನ ವೈರುಗಳು ಸಡಿಲಾಗಿ ಯಾರಿಗೋ ಮಾಡಿದ ಕರೆ ಇನ್ಯಾರಿಗೋ ಹೋಗುತ್ತಿತ್ತು. ಜಂಕ್ಷನ್ ಬಾಕ್ಸ್ ಸಮೀಪದ ಹದಿನೇಳನೆಯ ಕಂಬ ರಿಪೇರಿಯಾಗಬೇಕಿದ್ದರಿಂದ ಟೆಲಿಫೋನ್ ಲೈನ್‌ಮನ್ ತಿಪ್ಪಣ್ಣನೆಂಬುವನು ಪರೀಕ್ಷೆ ಮಾಡಲೆಂದು ಹತ್ತಿದವನು, ಅಲ್ಲಿಯೇ ಮರಣ ಹೊಂದಿದನು. ಆತ ಕುಳಿತ ಭಂಗಿಯಲ್ಲೇ ಸತ್ತಿದ್ದರಿಂದ ನೋಡಿದವರಿಗೆ ಅವನೇನೋ ರಿಪೇರಿ ಮಾಡುತ್ತಿರುವಂತೆ ಕಂಡು ಯಾರೂ ಅತ್ತಕಡೆ ಲಕ್ಷ್ಯವಹಿಸಲಿಲ್ಲ. ಆದರೆ ಲೈನು ಸರಿಹೋಗಿಲ್ಲದ್ದರಿಂದ ತಿಪ್ಪಣ್ಣನನ್ನು ಹುಡುಕಿಕೊಂಡು ಬಂದ ಜೂನಿಯರ್ ಇಂಜಿನಿಯರ್ ರಮೇಶ್‌ಬಾಬು ಲೈನ್‌ಮನ್ ಶಂಕ್ರಪ್ಪನೊಂದಿಗೆ ಜಂಕ್ಷನ್ ಬಾಕ್ಸಿದ್ದ ಹದಿನೇಳನೇ ಕಂಬದ ಬಳಿ ಬಂದಾಗ ಅವರಿಗೆ ತಿಪ್ಪಣ್ಣ ಸತ್ತಿರುವ ಸಂಗತಿ ತಿಳಿಯಿತು. ಟೆಲಿಫೋನ್ ವೈರಿನ ಮೇಲೆ ಎಲೆಕ್ಟ್ರಿಕ್ ಡಿಪಾರ್ಟ್‌ಮೆಂಟ್ ಮೆಂಟಿನ ಹೈ ವೋಲ್ವೇಜ್ ಲೈನು ಬಂದಿದ್ದು ಅದು ಟಚ್ಚಾಗಿದ್ದರಿಂದಲೇ ತಿಪ್ಪಣ್ಣ ಸತ್ತಿರುವನೆಂದು ರಮೇಶ್ ಬಾಬು ಹೇಳಿದನು. ಇದರಿಂದ ಕೋಪಗೊಂಡ ಟೆಲಿಫೋನ್ ಇಲಾಖೆಯ ಸಿಬ್ಬಂದಿ ಎಲೆಕ್ಟ್ರಿಕ್ ಡಿಪಾರ್ಟ್‌ಮೆಂಟ್ನ ವಿರುದ್ದ ತಕ್ಷಣವೇ ಧಿಕ್ಕಾರ ಕೂಗುತ್ತಾ ಮುಷ್ಕರ ಹೂಡಿದರು. ವಿದ್ಯುತ್ ಇಲಾಖೆಯ ಲೈನ್‌ಮನ್ ನಿರೂಪಕರಿಗೆ ಈ ಸಂಗತಿಯನ್ನು ವಿವರಿಸಿ ಹೇಳಿದನು. ಕೃಷ್ಣೇಗೌಡನ ಆನೆಯು ಮೈತುರಿಸಿಕೊಳ್ಳಲು ಕಂಬಕ್ಕೋ ವೈರಿಗೋ ಉಜ್ಜಿದಾಗ ಎಲೆಕ್ಟ್ರಿಕ್ ಲೈನು ಟೆಲಿಫೋನ್ ವೈರಿಗೆ ತಾಗಿ ತಿಪ್ಪಣ್ಣ ಸತ್ತಿರುವನೆಂದು ದುರ್ಗಪ್ಪನು ನಾರಾಯಣ ಮತ್ತು ನಿರೂಪಕರಿಗೆ ಹೇಳಿದನು. ಲೇಖಕರಿಗೆ ಬಾಯಿಯಿಲ್ಲದ ಆನೆಯ ಮೇಲೆ ವಿನಾ ಕಾರಣ ಆತ ಆರೋಪ ಮಾಡುತ್ತಿರುವನೆನ್ನಿಸಿ ಬಾಯಿಯಿಲ್ಲದವರು ಈ ಪ್ರಪಂಚದಲ್ಲಿ ಬದುಕುವಂತೆಯೇ ಇಲ್ಲವೇ ಎಂದು ಕೋಪಿಸಿದರು. ಆನೆಯ ಮೇಲೆ ತಿಪ್ಪಣ್ಣನ ಸಾವಿನ ಆಪಾದನೆಯೂ ಅಂಟಿಕೊಂಡಿತು.
ಆಧ್ಯಾಯ-8:
ಬಾಯಿಯಿಲ್ಲದ ಆನೆಯ ಮೇಲೆ ಯಾರಿಗೂ ದ್ವೇಷವಿರದಿದ್ದರೂ ಅದರ ಮೇಲೆ ಮೊದಲಿನಷ್ಟು ಪ್ರೀತಿ-ವಿಶ್ವಾಸಗಳು ಇರಲಿಲ್ಲ. ಜನರ ದೃಷ್ಟಿಯಲ್ಲಿ ನಡೆಯುವ ಎಲ್ಲಾ ಅನಾಹುತಗಳಿಗೆ ಆನೆಯೇ ಕಾರಣವೆಂದು ನಿಧಾನವಾಗಿ ಅದು ಅಪರಾಧಿಯಾಗುತ್ತಾ ಹೋಯಿತು. ಕಾಡಿಗೆ ಹೋಗಿ ಬಂದ ಆನೆಯ ಮೇಲಿನ ಜನರ ಧೋರಣೆ ಬದಲಾಗಿತ್ತು. ಇದಾವುದರ ಪರಿವೆಯಿಲ್ಲದ ಆನೆ ತನ್ನ ಪಾಡಿಗೆ ತಾನು ಓಡಾಡಿಕೊಂಡಿತ್ತು. ಜನ ತಮ್ಮ ತಮ್ಮ ಮನೋವಿಕಾರಗಳನ್ನು ಆನೆಯ ಮೇಲೆ ಹೊರಿಸಿ ನಿರಾಳವಾಗುತ್ತಿದ್ದಾರೆಂದು ನಿರೂಪಕರಿಗೆ ಅನ್ನಿಸಿತು. ಎಲ್ಲರೂ ಸಭೆ ಸೇರಿ ಆನೆಯನ್ನು ಶೂಟ್ ಮಾಡಬೇಕೆಂದು ಚಿಂತಿಸಿದರು.
ಇಷ್ಟರ ನಡುವೆ ಹಳೇಕೊಪ್ಪದ ಸುಬ್ಬಣ್ಣನ ಮನೆಯ ಕೊಟ್ಟಿಗೆಯನ್ನು ಆನೆ ಬೀಳಿಸಿದ್ದರಿಂದ ಕೊಟ್ಟಿಗೆಯೊಳಗಿದ್ದ ಮೇಕೆಗಳಲ್ಲಿ ಕೆಲವು ಸತ್ತವು ಎಂಬ ಆರೋಪ ಎದುರಾಯಿತು. ಕುರಿಗಳ ಮೇವನ್ನು ಕಳ್ಳತನದಿಂದ ಕದಿಯಲು ಬಂದ ಆನೆಯಿಂದಾಗಿಯೇ ಇಂತಹ ಸ್ಥಿತಿ ಬಂತೆಂದೂ, ಅದು ಇನ್ನೊಮ್ಮೆ ಬಂದರೆ ಕೋವಿಯಿಂದ ಹೊಡೆಯುವುದಾಗಿಯೂ ಸುಬ್ಬಣ್ಣ ಎಗರಾಡಿದನು. ಅದೇ ದಿನ ರಾತ್ರಿ ಶಿವೇಗೌಡರ ಸಾಮಿಲ್ಲಿಗೆ ಕಳ್ಳನಾಟ ಸಾಗಿಸುತ್ತಿದ್ದ ಅಬ್ಬಾಸನ ಲಾರಿ ರಸ್ತೆ ಪಕ್ಕದ ಗೋಣಿ ಮರಕ್ಕೆ ಡಿಕ್ಕಿ ಹೊಡೆದು ಮರದ ದಿಮ್ಮಿಗಳಿಗೂ ಗೋಣಿಮರಕ್ಕೂ ನಡುವೆ ಸಿಕ್ಕಿಬಿದ್ದ ಡ್ರೈವರ್ ಅಬ್ಬಾಸ್, ಕ್ಲೀನರ್ ಕೃಷ್ಣ ಇಬ್ಬರೂ ಅಪ್ಪಚ್ಚಿಯಾಗಿ ಹೋದರು. ಅಬ್ಬಾಸನಿಗೆ ಬೀಡಿಯ ದಂ ಎಳೆಯುವ ಚಟ ಬಲವಾಗಿ ಕಾಡಿ ಅವನು ಕ್ಲೀನರ್‌ಗೆ ಸ್ಟೇರಿಂಗ್ ಹಿಡಿದುಕೊಳ್ಳಲು ತಿಳಿಸಿದ ಪರಿಣಾಮ ಈ ಅಪಘಾತ ಸಂಭವಿಸಿದ್ದರೂ ಗೋಣಿಮರದ ಸುತ್ತ ಇದ್ದ ಅನೆಯ ಹೆಜ್ಜೆಗುರುತಿನಿಂದಾಗಿ ಆನೆಯೇ ಅವರಿಬ್ಬರ ಸಾವಿಗೆ ಕಾರಣವೆಂದು ಜನ ದೂರಿದರು. ಆದರೆ ಅಲ್ಲಿಗೆ ಬಂದ ಫಾರೆಸ್ಟರ್ ನಾಗರಾಜ ಸಾವಿನ ಗಾಂಭೀರವನ್ನು ಲೆಕ್ಕಿಸದೆ ಕಳ್ಳನಾಟ ಸಾಗಿಸುತ್ತಿದ್ದವರು ಯಾರೆಂದು ವಿಚಾರಿಸಲು ಹೋಗಿ ಜನರ ಕೆಂಗಣ್ಣಿಗೆ ಬಲಿಯಾಗಬೇಕಾಯ್ತು. ಸುಬ್ಬಣ್ಣ ತನ್ನ ಕೊಟ್ಟಿಗೆಯನ್ನು ಬೀಳಿಸಿದ್ದು ಆ ಆನೆಯೇ ಎಂದು ಗೊಣಗಿ ಜನರನ್ನು ಇನ್ನಷ್ಟು ಕೆರಳಿಸಿದನು. ಜನರಿಗೆಲ್ಲ ನಾಗರಾಜನ ಮೇಲೆ ಕೋಪ ಬಂದಿತಾದರೂ ಪೊಲೀಸ್ ಇನ್‌ಸ್ಪೆಕ್ಟರ್ ಅಲ್ಲಿದ್ದುದರಿಂದ ಜಗಳವಾಗುವುದು ತಪ್ಪಿತು. ಎಲ್ಲಾ ಆವಾದನೆಗಳೂ ಆನೆಯ ಕೊರಳಿಗೆ ಸುತ್ತಲ್ಪಟ್ಟಿವು.
ಆಧ್ಯಾಯ-9:
ಒಂದು ಮಧ್ಯಾಹ್ನ ಮುನ್ಸಿಪಲ್ ಪ್ರೆಸಿಡೆಂಟ್ ಖಾನ್ ಸಾಹೇಬರು ಮೂಡಿಗೆರೆಯ ಪ್ರಮುಖರ ಮೀಟಿಂಗ್ ಕರೆದರು. ನಾಯಿಗಳ ವಿಚಾರ ಪ್ರಸ್ತಾಪಿಸಲು ನಿರೂಪಕರೂ ಹೋಗಿದ್ದರು. ರೇಂಜ್ ಫಾರೆಸ್ಟ್ ಆಫೀಸರ್ ಸಹ ಮೀಟಿಂಗಿಗೆ ಬಂದಿದ್ದರಿಂದ ಕೃಷ್ಣೇಗೌಡನ ಆನೆಯ ವಿಷಯವೇ ಮುಖ್ಯ ಚರ್ಚೆಗೆ ಬಂತು. ಖಾನ್ ಸಾಹೇಬರು ಆನೆಯನ್ನು ಹದ್ದುಬಸ್ತಿನಲ್ಲಿಡುವುದು ರೇಂಜರ್ ಜವಾಬ್ದಾರಿ ಎಂದುಬಿಟ್ಟರು. ಎಲ್ಲರೂ ತಮ್ಮ ತಮ್ಮ ಪುಕಾರುಗಳನ್ನು ದನಿಗೂಡಿಸಿದರು. ನಾಗರಾಜನಿಗೆ ತಾನು ದರಿದ್ರ ಆನೆಯೊಂದರ ವಕ್ತಾರನಾಗಬೇಕಾಗಿ ಬಂದುದು ಅಸಹನೀಯವಾಯ್ತು, ಅವನಿಗೆ ಆನೆಯ ನೆಪದಲ್ಲಿ ವೈರಿಗಳೆಲ್ಲ ಒಟ್ಟಾಗುತ್ತಿರುವಂತನ್ನಿಸಿತು. ಕೆಲವರು ಕೃಷ್ಣೇಗೌಡನು ಆನೆಯ ಕಾಲಿಗೆ ಸರವಳಿ ಕಟ್ಟುತ್ತಿಲ್ಲವೇಕೆಂದು ಬೈಯ್ದರು. ಆತನೂ ಆನೆಯ ಕಿತಾಪತಿಯಿಂದಾಗಿ ರೋಸಿಹೋಗಿದ್ದ. ಯಾರಿಗಾದರೂ ಅದನ್ನು ಮಾರೋಣವೆಂದರೆ ಮಾರಲಾಗದ, ಕಾಡಿಗೆ ಕಟ್ಟಿದರೂ ವಾಪಸ್ಸು ಬರುವ ಆನೆ ಅವನ ಪಾಲಿಗೆ ಕುತ್ತಿಗೆಗೆ ಕಟ್ಟಿಕೊಂಡ ಕಲ್ಲುಗುಂಡಿನಂತೆ ಭಾಸವಾಯ್ತು ಆನೆಯ ಕಾಲಿಗೆ ಗಾಯವಾಗಿರುವುದರಿಂದ ಸರಪಳಿ ಹಾಕಲಾಗದೆಂಬ ವೇಲಾಯುಧನ ಮಾತನ್ನೇ ಸಭೆಗೆ ತಿಳಿಸಿದನು. ವೆಟರ್ನರಿ ಸ್ಟಾಕ್‌ಮನ್ ಪುಟ್ಟಯ್ಯ ಅದರ ಗಾಯಕ್ಕೆ ಹುಚ್ಚುನಾಯಿಯ ಜೊಲ್ಲು ತಾಗಿದರೆ ಆನೆಗೆ ಹುಚ್ಚು ಬಂದೇ ಬರುತ್ತದೆಂದು ಯಾರ ಬಳಿಯೋ ಹೇಳುತ್ತಿರುವುದು ನಿರೂಪಕರ ಗಮನಕ್ಕೆ ಬಂತು. ಕೃಷ್ಣೇಗೌಡ ತನ್ನ ಆನೆ ಲಾಯಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಬೆಂದರೂ ಯಾರೂ ನಂಬದಿದ್ದಾಗ ಆ ಗುಂಪಿನ ಶಮನಕ್ಕೆಂದು ತನ್ನ ಆನೆ ರಾತ್ರಿವೇಳೆ ಲಾಯಬಿಟ್ಟು ಹೊರಬಂದರೆ ಯಾರು ಏನು ಬೇಕಾದರೂ ಮಾಡಿಕೊಳ್ಳಬಹುದು, ಕೊಂದರೂ ಪರವಾಗಿಲ್ಲ ಎಂದುಬಿಟ್ಟ. ರೇಂಜರ್ ಸಾಹೇಬರು ನಾಗರಾಜನಿಗೆ ಅಂತಹ ಸಂದರ್ಭ ಬಂದರೆ ಆನೆಗೆ ಶೂಟ್ ಮಾಡಿಬಿಡು ಎಂದರು. ಕೃಷ್ಣೇಗೌಡ ತನ್ನ ಆನೆಗೆ ಏನಾದರೂ ಆದರೆ ಅವರೇ ನೋಡಿಕೊಳ್ಳಬೇಕು. ಆನೆ ಸತ್ತರೆ ಅದರ ಹೆಣಸಾಗಿಸಲು ಸಹ ತನ್ನಿಂದ ಸಾಧ್ಯವಿಲ್ಲವೆಂದುಬಿಟ್ಟ. ನಾಗರಾಜನಿಗೆ ಸರಿಯಾದ ಶಾಸ್ತಿಯಾಯ್ತೆಂದು ಉಳಿದೆಲ್ಲರಿಗೂ ಸಮಾಧಾನವಾಯ್ತು.
ಅಧ್ಯಾಯ-10:
ಸಭೆ ಮುಗಿಸಿಕೊಂಡು ಬಂದ ಕೃಷ್ಣೇಗೌಡ ಆನೆಯನ್ನು ಹದ್ದುಬಸ್ತಿನಲ್ಲಿಟ್ಟುಕೊಂಡಿಲ್ಲವೆಂದು ವೇಲಾಯುಧನಿಗೆ ಬೈಯ್ದನು. ಹಿಂದೆ ಆ ಆಸೆ ಗೂಳೂರು ಮಠದಲ್ಲಿರುವಾಗ ಆ ಆನೆಯಿಂದ ಐದು ಜನ ಪ್ರಾಣ ಕಳೆದುಕೊಳ್ಳುವರೆಂದು ಆನೆಶಾಸ್ತ್ರದವನ್ನು ನುಡಿದಿದ್ದ ಭವಿಷ್ಯ ವೇಲಾಯುಧನಿಗೆ ನೆನಪಾಯ್ತು, ಡ್ರೈವರ್ ಅಬ್ಬಾಸ್ ಮತ್ತು ಕ್ಲೀನರ್ ಕೃಷ್ಣರ ಸಾವಿಗೆ ತನ್ನ ಆನೆ ಕಾರಣ ವಲ್ಲವೆಂದು ಅವನಿಗೆ ತಿಳಿದಿತ್ತು. ಏಕೆಂದರೆ ಆತ ಆ ಸಮಯದಲ್ಲಿ ಶಿವೇಗೌಡರ ಸಾಮಿಲ್ಲಿಗೆ ಆನೆಯೊಂದಿಗೆ ಕಳ್ಳನಾಟ ಸಾಗಿಸಲು ಹೋಗಿದ್ದನು. ಅದನ್ನು ಯಾರದುರಿಗೂ ಹೇಳುವಂತಿರಲಿಲ್ಲ. ಈಗ ಕೃಷ್ಣೇಗೌಡರು ಕೋಪದಿಂದ ಬೈಯ ಕಾರಣ ತನ್ನ ಆನೆಯೇನಾದರೂ ಇಂದು ರಾತ್ರಿ ಕಳ್ಳತನದಲ್ಲಿ ಹೊರಹೊರಟಿರೆ ಸರಿಯಾಗಿ ಚುಚ್ಚಿ ಬುದ್ದಿ ಕಲಿಸಲು ತೀರ್ಮಾನಿಸಿದ. ಪಾನಮತ್ತನಾಗಿ ಅನೆಯ ಲಾಯದಲ್ಲಿ ಮಲಗಲು ಹೊರಟ ಗಂಡನನ್ನು ವೇಲಾಯುಧನ ಹೆಂಡತಿ ಆನೆ ಲಾಯದಲ್ಲಿ ಮಲಗುವ ನೀನ್ಯಾವ ಸೀಮೆ ಗಂಡಸೆಂದು ಛೇಡಿಸಿದಳು. ಮಕ್ಕಳಿಲ್ಲದ ಆಕೆಗೆ ಹೆಣ್ಣು ಆನೆಯಾದ ಗೌರಿಯ ಮೇಲೆ ಒಂದು ಬಗೆಯ ಸವತಿ ಮಾತ್ಸರ್ಯವಿತ್ತು. ಹೆಂಡತಿಯ ಮಾತಿನಿಂದ ವ್ಯಗ್ರನಾಗಿದ್ದ ವೇಲಾಯುಧ ಲಾಯಕ್ಕೆ ಬಂದವನೆ ಆನೆಯ ಕಾಲಿನ ಉಗುರಿಗೆ ಅಂಕುಶದಿಂದ ತಿವಿದು ಬುದ್ದಿ ಕಲಿಸಲು ಪಾದಗಳತ್ತ ನುಗ್ಗಿದ. ಅಲ್ಲಿದ್ದುದು ಕಾಡಿನಿಂದ ಬಂದಿರುವ ಗಂಡಾನೆ ಎಂಬುದು ಕುಡಿದಿದ್ದ ಅವನಿಗೆ ತಿಳಿಯಲಿಲ್ಲ. ಆನೆಯು ಸೊಂಡಿಲಿನಿಂದ ಅವನ ಸೊಂಟವನ್ನು ಸುತ್ತಿ ಎತ್ತಿ ಬಿಸಾಡಿ ತುಳಿದ ಪರಿಣಾಮ ವೇಲಾಯುಧ ಮಾಂಸದ ಮುದ್ದೆಯಾಗಿ ಹೋದ.
ಅಧ್ಯಾಯ-11:
ನಾಗರಾಜ ಕೋವಿ ಹಿಡಿದುಕೊಂಡು ಕೃಷ್ಣೇಗೌಡರ ತೋಟದ ಬೇಲಿ ಮೂಲೆಯ ಶಿಕಾರಿ ಗಂಡಿಯಲ್ಲಿ ಆನೆಗಾಗಿ ಕಾಯುತ್ತಾ ಕುಳಿತಿದ್ದ. ಆನೆ ಅಷ್ಟು ದೊಡ್ಡ ಪ್ರಾಣಿಯಾದರೂ ಶಬ್ದದ ಸುಳಿವನ್ನೇ ಕೊಡದೆ ತಂಗಾಳಿಯಂತೆ ಓಡಾಡಬಲ್ಲದೆಂಬುದು ಆತನಿಗೆ ತಿಳಿದಿತ್ತು. ಅಷ್ಟರಲ್ಲಿ ಕೋವಿಹಿಡಿದು ಬಂದ ರಾಮಪ್ಪ ಆನೆ ಬೇಲಿದಾಟಿ ಹೋದುದನ್ನು ತಿಳಿಸಿದನು. ಆನೆಗೆ ಕೋವಿಯಿಂದ ಹೊಡೆಯಲಿಲ್ಲವೇಕೆಂದು ನಾಗರಾಜ ರಾಮಪ್ಪನನ್ನು ಬೈದನು. ನಿಜವಾಗಿಯೂ ಆನೆಯನ್ನು ಕೊಲ್ಲುವ ಉದ್ದೇಶ ನಾಗರಾಜನಿಗಿದೆಯೆಂದು ರಾಮಪ್ಪನಿಗೆ ತಿಳಿದಿರಲಿಲ್ಲ. ಅವನು ಹೆದರುತ್ತಲೇ ಮೂರಾಲ್ಕು ಆನೆಗಳಿದ್ದವೆಂದು ಹೇಳಿದರೂ ನಾಗರಾಜನಿಗೆ ತನ್ನ ವೈರಿಗಳ ಮುಖವೇ ನೆನಪಿಗೆ ಬಂದು “ನಾನು ಬರೋವರು ಇಲ್ಲೇ ಬಿದ್ದಿರು” ಎಂದು ರಾಮಪ್ಪನಿಗೆ ಹೇಳಿ ಹೋದ, ನಾಗರಾಜನನ್ನು ಅದೇ ಕೊನೆಯ ಬಾರಿಗೆ ರಾಮಪ್ಪ ಕಂಡದ್ದು, ಕೃಷ್ಣೇಗೌಡನ ಆನೆಯ ಜೊತೆ ಇನ್ನೊಂದೆರಡು ಕಾಡಾನೆಗಳಿದ್ದವೇ? ಅವು ನಾಗರಾಜನನ್ನು ಕೊಂದು ಹಾಕಿದವೇ? ಎಂಬ ಪ್ರಶ್ನೆಗಳಿಗೆ ಉತ್ತರವೇ ಸಿಗಲಿಲ್ಲ.
ಅಧ್ಯಾಯ-12:
ಮಾಂಸದ ಮುದ್ದೆಯಾಗಿದ್ದ ವೇಲಾಯುಧನ ಹೆಣವನ್ನೇ ನಾಗರಾಜನೆಂದು ಕೇಸ್ ಕ್ಲೋಸ್ ಮಾಡುವ ಪೊಲೀಸರ ಹವಣಿಕೆಗೆ ವೇಲಾಯುಧನ ಹೆಂಡತಿ ಅಡ್ಡಿಯಾದಳು. ಕೆಲವರು ಕಾಡಾನೆಗಳ ಹಿಂದೆ ಹೋದ ನಾಗರಾಜನ ಹುಚ್ಚುತನವನ್ನು ನಿಂದಿಸಿದರೆ, ವೆಟರ್ನರಿ ಸ್ಟಾಕ್‌ಮನ್ ಪುಟ್ಟಯ್ಯ ತನ್ನ ಮಾವುತನನ್ನೇ ಕೊಂದ ಆನೆಗೆ ನಿಜವಾಗಿಯೂ ಹುಚ್ಚುನಾಯಿ ಕಡಿತದಿಂದ ಬುದ್ದಿ ಕೆಟ್ಟಿತ್ತೆಂದ. ಇನ್ನು ಕೆಲವರು ಸಾರ್ವಜನಿಕ ಸಭೆಯಲ್ಲಾದ ಅವಮಾನದಿಂದ ನಾಗರಾಜ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದರು. ವೇಲಾಯುಧನ ಹೆಂಡತಿ ಮಹಜರಿಗೆ ಬಂದ ಪೊಲೀಸರೆದುರು ಪರಿಹಾರ ಕೊಡಿಸಲೆಂದು ಹುಯ್ಯಲಿಡುತ್ತಿದ್ದಳು. ನಿರೂಪಕರಿಗೆ ನಡೆದಿರಬಹುದಾದ ಘಟನೆಯ ವಿವರಗಳು ಹೊಳೆದವಾದರೂ ಅದನ್ನು ಅವರು ಯಾರಿಗೂ ಹೇಳ ಹೋಗಲಿಲ್ಲ. ನೇಲಾಯುಧನ ಅವಸಾನ, ನಾಗರಾಜನ ಅಂತರ್ಧಾನ ಬಗೆಹರಿಯದ ಸಮಸ್ಯೆಗಳಾದವು. ಪೊಲೀಸರು ಕಾಡಿನಲ್ಲಿ ಹುಡುಕಾಡಿ ನಾಗರಾಜನ ಕೋವಿ ಸಿಕ್ಕಿದೆ. ಹೆಣ ಸಿಕ್ಕಿಲ್ಲವೆಂದು ಮಹಜರು ಬರೆದುಕೊಂಡರು.
ನಾಗರಾಜನ ಕೋವಿ ಸಿಕ್ಕಿರುವ ಬಗ್ಗೆಯೂ ಊಹಾಪೋಹಗಳು ಶುರುವಾದವು. ಕೆಲವರು ಆತ ಮನಃಪರಿವರ್ತನೆಗೊಂಡು ಕೋವಿ ಚರಂಡಿಗೆಸೆದು, ಧರ್ಮಸ್ಥಳದಲ್ಲಿ ತಲೆ ಬೋಳಿಸಿಕೊಂಡು ಓಡಾಡುತ್ತಿರುವನೆಂದರು. ರಾಮಪ್ಪ ಅಲ್ಲಿಗೂ ಹೋಗಿ ನೋಡಿ, ನಾಗರಾಜ ಸಿಗಲಿಲ್ಲವೆಂದು ಹಿಂದಿರುಗಿದನು. ಇನ್ನು ಕೆಲವರು ಗಂಧ ಸಾಗಾಣಿಕೆಯ ಗಂಗಾಧರನ ಕಡೆಯವರು ಖೂನಿ ಮಾಡಿರಬಹುದೆಂದು ಮಾತನಾಡಿಕೊಂಡರು. ಇಂತಹ ಊಹಾಪೋಹಗಳಿಂದ ನೊಂದ ಆತನ ಮನೆಯವರಿಗೆ ಎಷ್ಟು ಕಳವಳವಾಗಬಹುದೆಂದು ಯಾರೂ ಯೋಚಿಸಿರಲಿಲ್ಲ. ಇಲಾಖೆಯವರು ಪತ್ರಿಕೆಗಳಲ್ಲಿ ನಾಗರಾಜನ ಫೋಟೋ ಹಾಕಿಸಿ, ಎಲ್ಲರೂ ನಿನಗಾಗಿ ಕಾದಿದ್ದಾರೆ. ನಿನ್ನ ವಿರುದ್ಧ ಯಾವುದೇ ಕ್ರಮಕೈಗೊಳ್ಳುವುದಿಲ್ಲ. ಹಿಂದಿರುಗಿ ಬಾ ಎಂದು ಜಾಹೀರಾತು ಪ್ರಕಟಿಸಿ, ನಾಗರಾಜ ಬರಬಹುದೆಂದು ಕಾಯುತ್ತಿದ್ದರು. ಕೃಷ್ಣೇಗೌಡನಿಗೆ ಮಾತ್ರ ಕಾಡಿನಿಂದ ತನ್ನ ಆನೆ ಮತ್ತೆ ಊರಿಗೆ ಬಂದರೆ ಗತಿಯೇನು ಎಂಬ ಕಳವಳವಾಗಿತ್ತು
ಶಬ್ದಾರ್ಥ: ಖಾಯಮ್ಮು-ಶಾಶ್ವತ; ಪುಕಾರು-ಗದ್ದಲ, ತಕರಾರು, ಅಪವಾದ; ಇನಾಮು-ಬಹುಮಾನ; ಪರ-ರೀತಿ; ಅನ್ಯಮನಸ್ಕ -ಮನಸ್ಸು ಬೇರೆಡೆಯಲ್ಲಿರುವುದು; ಪೀಜು-ಪ್ಯೂಸ್ (fuse); ಜಪ್ಪಿ-ಜಜ್ಜಿ; ದೂಷಿಸು-ಆಪಾದನೆ ಮಾಡು; ಸಲಾಮ್-ನಮಸ್ಕಾರ; ಹವಣಿಸು-ಯೋಚಿಸು, ಉಪಾಯಮಾಡು; ತ್ರಾಸ-ಕಷ್ಟ; ಸಾತ್ವಿಕ-ಒಳ್ಳೆಯವನು; ವರ್ಜಿಸು-ಬಿಟ್ಟು ಬಿಡು; ಬಡಾಯಿ-ಜಂಬ; ಕ್ಷಿಪ್ರಮಾರ್ಗ-ಸುಲಭದ ದಾರಿ; ಪೊಗಡುದಸ್ತು-ಮೈಕೈ ತುಂಬಿಕೊಂಡಿರು; ಸೈರಣೆ-ತಾಳ್ಮೆ; ಅವಜ್ಞೆ-ಕಡೆಗಣಿಸುವಿಕೆ; ಐ ವಿಟ್‌ನೆಸ್ – (Cye-witness) – ಪ್ರತ್ಯಕ್ಷ ಸಾಕ್ಷಿ; ಮರ್ಮಕ್ಕೆ-ಮನಸ್ಸಿಗೆ ತಾಗುವಂತಹ; ಜಖಂ-ಹಾನಿಯಾಗು; ಪರಿವರ್ತನೆ-ಬದಲಾವಣೆ; ಕ್ಷುದ್ರ-ಚಿಕ್ಕ ಪುಟ್ಟ, ಅಸಂಭವ ಸಾಧ್ಯವಾಗದು; ಇತ್ಯರ್ಥ-ತೀರ್ಮಾನ; ಪ್ರವರ-ಅನವಶ್ಯಕ ವಿವರಣೆ; ಅಭಿಮತ-ಅಭಿಪ್ರಾಯ; ನಾಟ-ಮರದ ದಿಮ್ಮಿ; ರೋಸಿಹೋಗು-ಸಾಕಾಗಿ ಹೋಗು; ರೇಜಿಗೆ-ಜುಗುಪ್ಸೆ; ಪಾರ್ಶ್ವ-ಭಾಗ; ಬಿಟ್ಟಿ-ಪುಕ್ಕಟೆ; ಆಸ್ಥೆ -ಕಾಳಜಿ; ಚಿತಾವಣೆ-ಇತರರನ್ನು ಪ್ರಚೋದಿಸುವುದು; ಕುಗುರು-ತೂಕಡಿಸು; ಕಾನ್‌ಫಿಸಿಕೇಟ್ (confiscate)-ಜಪ್ತಿಮಾಡು, ಮುಟ್ಟುಗೋಲು ಹಾಕು, ವಶಪಡಿಸಿಕೋ; ಮನ್ನಾ-ರದ್ದು; ಎರಾಡಿಕೇಶನ್(eradication)-ನಿರ್ಮೂಲನ, ಮೂಲೋತ್ಪಾಟ; ಮನ್ನಾಜಂಗ್ಲಿ-ಮೀಸಲು ಅರಣ್ಯ; ಮಹಜರ್-ಸ್ಥಳ ಪರಿಶೀಲನೆ; ವಕ್ತಾರ-ಪ್ರತಿನಿಧಿ; ಪರವಾನಗಿ-ಅನುಮತಿ; ಬರಖಾಸ್ತಾಗು-ಮುಗಿದುಹೋಗು; ದುರ್ಬುದ್ದಿ-ಕೆಟ್ಟಬುದ್ದಿ; ಹಿಯ್ಯಾಳಿಸು-ನಿಂದಿಸು; ಅಂಕುಶ-ಆನೆಯನ್ನು ಹದ್ದಿನಲ್ಲಿಡಲು ಉಪಯೋಗಿಸುವ ಒಂದು ಲೋಹದ ಸಾಧನ; ನೀಳದಂತ-ಉದ್ದನೆಯ ಹಲ್ಲು; ಗಂಡಿ-ತಗ್ಗು ಪ್ರದೇಶ, ಕುಳಿ; ಎಪ್ಪ-ತೊಂದರೆ; ಅವಾಕ್ಕಾಗು-ಮಾತಿಲ್ಲದಂತಾಗು. ಆಶ್ಚರ್ಯಪಡು; ಪಂಗಿ-ಸಾಲು; ಹುಯ್ಯಲಿಡು-ರೋದಿಸು; ಸ್ಥಿಮಿತ-ಹಿಡಿತ; ಪ್ರಹಸನ– ನಾಟಕ; ಪೀಕಲಾಟ-ಸಂಕಷ್ಟ; ಶಂಕಿಸು-ಅನುಮಾನಿಸು; ಖನಿ-ಕೊಲೆ; ವದಂತಿ-ಸುದ್ದಿ; ಹೇಸದ-ಹೆದರದ.
ಟಿಪ್ಪಣಿಗಳು
೧. ಸಿರಂ (serum)
ಇದೊಂದು ವೈದ್ಯಶಾಸ್ತ್ರದಲ್ಲಿ ಬಳಕೆಯಲ್ಲಿರುವ ಪದ ನಿರ್ದಿಷ್ಟ ರೋಗಕಾರಕ ಸೂಕ್ಷ್ಮಜೀವಿಯನ್ನು ನಾಶ ಮಾಡಬಲ್ಲ ಪ್ರತಿಕಾಯವಿರುವ, ಮುಖ್ಯವಾಗಿ ಲಸಿಕೆಗಳಲ್ಲಿ ಬಳಸುವ ಪ್ರಾಣಿ ಮೂಲದ ದ್ರವ, ಆಧ್ಯಾಯ-5ರಲ್ಲಿ ವೆಟರ್ನರಿ ಸ್ಟಾಕ್‌ಮನ್ ಪುಟ್ಟಯ್ಯ ಕರೆಂಟಿನ ತೊಂದರೆಯಿಂದಾಗಿ ಸಿರಂ ಕೆಟ್ಟೋಗಿದೆ ಎಂಬ ಮಾತು ಹೇಳುವುದನ್ನು ಗಮನಿಸಬಹುದು.
೨. ಮನ್ನಾಜಂಗ್ಲಿ:
ಸರ್ಕಾರವು ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿ, ತನ್ನ ಹತೋಟಿಯಲ್ಲಿಟ್ಟುಕೊಂಡಿರುವ ಮೀಸಲು ಅರಣ್ಯ ಪ್ರದೇಶವನ್ನು ಮನ್ನಾಜಂಗ್ಲಿ ಎಂದು ಕರೆಯುತ್ತಾರೆ. ಇದು ಅನ್ಯದೇಶ ಪದವಾಗಿದ್ದು ಜನರ ಭಾಷೆಯಲ್ಲಿ ಬೆರೆತುಹೋಗಿದೆ.