ದ್ವಿತೀಯ ಪಿಯುಸಿ ಕನ್ನಡ ಮಾದರಿ ಪ್ರಶ್ನೆ ಪತ್ರಿಕೆ | 2nd Puc Kannada Model Question Paper

ದ್ವಿತೀಯ ಪಿಯುಸಿ ಪರೀಕ್ಷೆಯ ಮಾದರಿ ಪ್ರಶ್ನೆಪತ್ರಿಕೆಗಳು, 2nd Puc Question Papers Karnataka, 2nd Puc Model Question Paper, 2nd Puc Supplementary Exam Papers, 2nd Puc Previous Year Question Papers, 2nd Puc Model Question Paper pdf, 2nd Puc All Subject Question Paper ದ್ವಿತೀಯ ಪಿಯುಸಿ ಕನ್ನಡ ಮಾದರಿ ಪ್ರಶ್ನೆ ಪತ್ರಿಕೆಗಳು Sslc ಮಾದರಿ ಪ್ರಶ್ನೆ ಪತ್ರಿಕೆಗಳು 2nd Puc madari prashne patrike kannada 2nd Puc madari prashne patrike kannada question paper model question paper 2nd puc with answers pdf download 2nd puc model question paper with answer ಕನ್ನಡ ಮಾದರಿ ಪ್ರಶ್ನೆ ಪತ್ರಿಕೆ 2025 pdf ಕನ್ನಡ ಮಾದರಿ ಪ್ರಶ್ನೆ ಪತ್ರಿಕೆ 2025 model question paper 2025 2nd puc with answers pdf download

Model Question Paper

ಪರಿಷ್ಕೃತ ಮಾದರಿ ಪ್ರಶ್ನೆಪತ್ರಿಕೆ

(ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯಿಂದ ಪ್ರಕಟಿತ)

ಅವಧಿ: 3-15 ಗಂಟೆ ಗರಿಷ್ಠ ಅಂಕಗಳು: 80

ಆ – ವಿಭಾಗ

I. ಅ) ಕೆಳಗಿನ ಪ್ರಶ್ನೆಗಳಿಗೆ ನೀಡಿರುವ ಉತ್ತರಗಳಲ್ಲಿ ಸರಿಯಾದುದನ್ನು ಆರಿಸಿ ಬರೆಯಿರಿ: 10 x 1=10

೧. ಸೌಮಿತ್ರಿ ಎಂದರೆ ಯಾರು?

ಅ) ರಾಮ

ಆ) ಭರತ

ಇ) లಕ್ಷ್ಮಣ

ಈ) ರಾವಣ

೨. ಗುರು ಹೇಗೆ ವರ್ತಿಸಬಾರದು?

ಅ) ಕೆಟ್ಟದಾಗಿ

ಆ) ಲಘುವಾಗಿ

ಇ) ಸರಿಯಾಗಿ

ಈ) ತಪ್ಪಾಗಿ

೩. “ಯಮಸುತಂಗರುಹುವೆನೆ ಧರ್ಮ

ಕ್ಷಮೆಯ ಗರ ಹೊಡೆದಿಹುದು ಪಾರ್ಥನು

ಮಮತೆಯುಳ್ಳವನೆಂಬೆನೇ ತಮ್ಮಣ್ಣನಾಜ್ಞೆಯಲಿ

ಭ್ರಮಿತನಾಗಿಹನು” – ಈ ಪದ್ಯಭಾಗದಲ್ಲಿ ದ್ರೌಪದಿ ಧರ್ಮರಾಯನನ್ನು ಕುರಿತು ಏನೆಂದು ಚಿಂತಿಸುತ್ತಾಳೆ?

ಅ) ಧರ್ಮ ಪರಿಪಾಲನಾ ನಿರತ

ಆ) ತನ್ನ ಮೇಲೆ ಮಮತೆಯುಳ್ಳವನು

ಇ) ಧರ್ಮ ಮತ್ತು ಕ್ಷಮೆಯ ದೆವ್ವ ಹಿಡಿದವನು

ಈ) ಅರ್ಜುನನ ಮೇಲೆ ಪ್ರೀತಿಯುಳ್ಳವನು

೪. ದನಗಳಿಗೆ ಏನಿಲ್ಲ ಎಂದು ಕವಯಿತ್ರಿ ಹೇಳುತ್ತಾರೆ?

ಅ) ನೀರಿಲ್ಲ

ಆ) ಮೇವಿಲ್ಲ

ಇ) ಗಂಜಿಯಿಲ್ಲ

ಈ) ಊಟವಿಲ್ಲ

೫. ಕ್ರಿಸ್ಮಸ್ ಸಂದರ್ಭದಲ್ಲಿ ಹತ್ತಿ ಯಾವ ಕೆಲಸ ಮಾಡಿದೆ?

ಅ) ಬತ್ತಿ

ಆ) ಮಂಜು

ಇ) ದೀಪ

ಈ) ನಕ್ಷತ್ರ

೬. ದುರಾಸೆಯ ಹುಡುಗನನ್ನು ನಿರಾಕರಿಸಿದವರು ಯಾರು?

ಅ) ಸೀತಾ

ಆ) ಪ್ಲೇವಿಯಾ

ಇ) ಕಮಲಾ ಮೇಡಂ

ಈ) ನಿಶಾ ಶರ್ಮ

೭. “ಎಲವೋ ಹುಲು ಮಾನವ ವೆಂಕಪ್ಪಯ್ಯ, ಸುತ್ತಲ ನಾಕೂರಲ್ಲಿರುವ ಯಾವನೇ ಶ್ಯಾನುಭೋಗ ಉಗ್ರಾಣಿಯನ್ನಾದರೂ ಕರೆತಂದು ನನ್ನೆದುರು ಸರಪಳಿ ಎಳೆಸು. ಅವೆಲ್ಲವೂ ನನ್ನದಲ್ಲದಿದ್ದರೆ ಕೇಳು ಮತ್ತೆ…”

‘ಧಣಿಗಳ ಬೆಳ್ಳಿಲೋಟಿ’ ಗದ್ಯದ ಈ ಸಾಲುಗಳು ಕೆಳಗಿನ ಯಾವ ಹೇಳಿಕೆಯನ್ನು ಸಮರ್ಥಿಸುತ್ತದೆ?

ಅ) ವೆಂಕಪ್ಪಯ್ಯನವರ ನಿಸ್ವಾರ್ಥ

ಆ) ಹೊಳೆಗೆ ವೆಂಕಪ್ಪಯ್ಯನ ಮೇಲಿನ ಪ್ರೀತಿ

ಇ) ಪ್ರಕೃತಿಯ ಮೇಲಿನ ಮಾನವ ಪ್ರೀತಿ

ಈ) ಪ್ರಕೃತಿ ಮೇಲಿನ ಮನುಷ್ಯನ ದಬ್ಬಾಳಿಕೆ

೮. ದುರ್ಗಪ್ಪ ಏನನ್ನು ಕೇಳಿ ಪಡೆಯಲು ಬಂದಿದ್ದನು?

ಅ) ಮಚ್ಚು

ಆ) ಕೊಡಲಿ

ಇ) ಸಲಿಕೆ

ಈ) ಗುದ್ದಲಿ

೯. ಟೆಲಿಫೋನ್ ಕಂಬದ ಮೇಲೆ ಮೃತನಾದ ಲೈನ್‌ಮನ್‌ ಯಾರು?

ಅ) ದುರ್ಗಪ್ಪ

ಆ) ತಿಪ್ಪಣ್ಣ

ಇ) ರಮೇಶ್‌ಬಾಬು

ಈ) ಪ್ರಕಾಶ

೧೦. “ಇದ್ದಿದ್ದನ್ನು ನಡೆಸ್ಕೊಂಡು ಹೋಗೋದೆ ಕಷ್ಟ ಆಗಿದೆ. ಜನಗಳ ವಿಶ್ವಾಸವನ್ನು ಉಳಿಸ್ಕೊಂಡು, ಕುರ್ಚಿನೂ ಉಳಿಸಿಕೊಂಡು ಟರ್ಮು ಮುಗಿಸಿದರೆ ಸಾಕಾಗಿದೆ” – ಖಾನ್ ಸಾಹೇಬರ ಈ ಮಾತು ಏನನ್ನು ಸೂಚಿಸುತ್ತದೆ?

ಅ) ಜನರ ಮೇಲಿನ ಕಾಳಜಿ

ಆ) ಜನರೊಟ್ಟಿಗಿನ ಸಹಬಾಳ್ವೆ

ಇ) ಅಧಿಕಾರದ ಲಾಲಸೆ

ಈ) ಸಮಾಜದ ಮೇಲಿನ ಪ್ರೀತಿ


ಆ) ಬಿಟ್ಟ ಸ್ಥಳಗಳಿಗೆ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ. 5 X 1 = 5

(ಮುದ್ದಣ, ಮಗು, ಪೂಣಚ್ಚಿ, ಹಳ್ಳಿಯ ಚಹಾ ಹೊಟೇಲ್, ಬೌದ್ಧ, ಮನೋರಮೆ)

೧೧. ಮಾರ್ಷ್‌ನ ಜೊತೆಗಾರನ ಹೆಸರು……….

೧೨. ನಮ್ಮ ದೇಶದಲ್ಲಿ ಖಿಲವಾಗಿ ಹೋದ ಧರ್ಮ………

೧೩. ಅಬ್ದುಲ್ ಕಲಾಂ ಅವರ ಪ್ರಕಾರ ಭೂಮಿಯ ಮೇಲಿನ ಮೊದಲ ವಿಜ್ಞಾನಿ………

೧೪. ಕನ್ನಡವು ಕಸ್ತೂರಿಯಲ್ಲವೇ! ಎಂದವರು……….

೧೫. ಲೋಕಲ್ ಸುದ್ದಿಗಳಿಗೆ……………..ಇಲ್ಲಿ ಪ್ರಾಶಸ್ತ್ರವಿದೆ.

ಇ) ಹೊಂದಿಸಿ ಬರೆಯಿರಿ 5 x 1 = 5

೧೬. ಹಬ್ಬಲಿ ಅವರ ರಸಬಳ್ಳಿ (ಅ) ಹತ್ತಿ…… ಚಿತ್ತ…. ಮತ್ತು

೧೭. ಜಾಲಿಯ ಮರದಂತೆ (ಆ) ಬೆಳಗು ಜಾವ

೧೮. ಅಂಬಿಕಾತನಯದತ್ತ (ಇ) ಪುರಂದರದಾಸರು

೧೯. ಜಿ.ಎಸ್. ಶಿವರುದ್ರಪ್ಪ (ಈ) ಜನಪದ

೨೦. ಟಿ. ಯಲ್ಲಪ್ಪ (ಉ) ಮುಂಬೈ ಜಾತಕ

(ಊ) ಒಂದು ಹೂ ಹೆಚ್ಚಿಗೆ ಇಡುತೀನಿ

ಆ – ವಿಭಾಗ

II. ಅ) ಈ ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ: 3 X 2 = 6

೨೧. ರಾವಣನು ಅಂತಿಮವಾಗಿ ಯಾವ ನಿರ್ಧಾರಕ್ಕೆ ಬರುತ್ತಾನೆ?

೨೨. ಹಿತ್ತಾಳೆಗಿಂತ ಬಲುಹೀನ ಯಾವುದು?

೨೩. ಕವಿ ಬೇಂದ್ರೆ ಬಾಳಿನ ಬಗ್ಗೆ ಕೊಡುವ ಸಂದೇಶವೇನು?

೨೪. ಶಿಲುಬೆಗೇರಿಸಿದವರ ಗುಣಗಳು ಇಂದು ಯಾವ ವೇಷ ತಾಳಿವೆ?

ಆ) ಈ ಕೆಳಗಿನ ಯಾವುದಾದರೂ ಎರಡು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ: 2 x 2 = 4

೨೫. ಡಾ|| ಚಂದ್ರಪ್ಪ ಬಸಲಿಂಗನಿಗೆ ತಿಮ್ಮಪ್ಪನ ಬಗ್ಗೆ ಕೊಟ್ಟ ಅಭಿಪ್ರಾಯವೇನು?

೨೬. ಬ್ರಿಟಿಷರು ಬರುವ ಮೊದಲು ವಾಲ್‌ಪರೈನ ಸೊಬಗನ್ನು ವರ್ಣಿಸಿ,

೨೭. ಮುದ್ದಣನನ್ನು ಮನೋರಮೆ ಹೇಗೆ ಉಪಚರಿಸಿದಳು?

೨೮. ಸುದ್ದಿಯ ಸೂರಪ್ಪನಾದ ಭರಮಣ್ಣ ಗೊಂಬೆಯನ್ನು ಹೇಗೆ ವರ್ಣಿಸುತ್ತಾನೆ?

ಇ) ಈ ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ: 3 x 2 = 6̈

೨೯. ಕೃಷ್ಣೇಗೌಡರ ಆನೆ ಹುಟ್ಟಿ ಬೆಳೆದ ಬಗೆ ಹೇಗೆ?

೩೦. ಫಾರೆಸ್ಟ್ ಡಿಪಾರ್ಟ್‌ ಮೆಂಟಿನ ನಂಬರ್ ಒನ್ ಎನಿಮಿಗಳು ಯಾರು?

೩೧. ಹುಚ್ಚುನಾಯಿಗಳು ಆಸ್ಪತ್ರೆಯಲ್ಲಿ ಹೇಗೆ ವರ್ತಿಸುತ್ತವೆಂದು ಪುಟ್ಟಯ್ಯ ಹೇಳಿದ?

೩೨. ತಿಪ್ಪಣ್ಣನ ಸಾವಿಗೆ ಆನೆಯೇ ಕಾರಣವೆಂದು ದುರ್ಗಪ್ಪನ ಹೇಳಿಕೆ ಸರಿಯೇ? ಸಮರ್ಥಿಸಿ.

ಇ – ವಿಭಾಗ

III. (ಅ) ಈ ಕೆಳಗಿನ ಯಾವುದಾದರೂ ಎರಡು ವಾಕ್ಯಗಳನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 2 x 3 = 6

೩೩. ಹಗೆಗಳನ್ನು ಹಿಂಡಿದನು ಮನದೊಳಗೆ

೩೪. ಕುಳಿತು ಕೆಮ್ಮುವ ಪ್ರಾಣಿ.

೩೫. ಮಾತೇ ಮರೆತು ಹೋಗಿದೆ ಕಣೆ.

ಆ) ಈ ಕೆಳಗಿನ ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 1 x 3 = 3

೩೬. ನಾವು ಯಾವ ಪತ್ರಿಕೆಗಳನ್ನು ಓದುತ್ತಿದ್ದೇವೆ?

೩೭. ಭಗವಂತನ ಸೃಷ್ಟಿಯಲ್ಲಿರುವವರೆಲ್ಲ ಆತನೆ ಬಂಧುಗಳೇ.

ಇ) ಈ ಕೆಳಗಿನ ಯಾವುದಾದರೂ ಒಂದು ವಾಕ್ಯವನ್ನು ಕುರಿತು ಸಂದರ್ಭ ಸೂಚಿಸಿ, ಸ್ವಾರಸ್ಯ ಬರೆಯಿರಿ: 1 x 3 = 3

೩೮. “ವೆಪನ್ ಸಾರ್, ವೆಪನ್ ನಮಗೆ ಮುಖ್ಯ”.

೩೯. “ಕಂಬದ ಮೇಲೆ ಯಾಕೋ ಕೈಲಾಸ ಕಂಡ ಹಾಗೆ ಇದೆಯಲ್ಲಾ”.

ಈ – ವಿಭಾಗ

IV.ಅ) ಈ ಕೆಳಗಿನ ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ: 2 x 4 = 8

೪೦. ರಾವಣನ ಮನಃಪರಿವರ್ತನೆಯ ಸಂದರ್ಭವನ್ನು ಕವಿ ಹೇಗೆ ನಿರೂಪಿಸಿದ್ದಾರೆ?

೪೧. ರಕ್ಷಿಸಬೇಕಾದವರೆ ಭಕ್ಷಕರಾದರೆ ಒದಗುವ ವಿಘಟನೆಯನ್ನು ಬಸವಣ್ಣನವರು ಹೇಗೆ ಚಿತ್ರಿಸಿದ್ದಾರೆ?

೪೨. ದ್ರೌಪದಿ ಅವಮಾನಕ್ಕೊಳಗಾದ ಮೂರು ಪ್ರಸಂಗಗಳನ್ನು ವಿವರಿಸಿರಿ.

೪೩. ಯಾವ ಯಾವ ಸಂಗತಿಗಳನ್ನು ಉಪೇಕ್ಷಿಸಬಾರದಾಗಿ ಸೋಮನಾಥನು ತಿಳಿಸಿದ್ದಾನೆ?

ಆ) ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ: 1 x 4 = 4

೪೪. ಬಸಲಿಂಗ ಎದುರಿಸುತ್ತಿದ್ದ ಸಮಸ್ಯೆಗಳು ಯಾವುವು?

೪೫. ಸೀತಾ ಎಂಬ ಗೆಳತಿಯ ಗುಣಸ್ವಭಾವವನ್ನು ಲೇಖಕಿ ಹೇಗೆ ಚಿತ್ರಿಸಿದ್ದಾರೆ?

೪೬. ಧಣಿ ಮತ್ತು ಹೊಳೆಯ ನಡುವಿನ ಸಮರವನ್ನು ಚಿತ್ರಿಸಿ.

ಇ) ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ: 1 x 4 = 4

೪೭. ಕೃಷ್ಣೇಗೌಡರ ಆನೆ ಹುಟ್ಟಿ ಬೆಳೆದ ಬಗೆಯನ್ನು ವಿವರಿಸಿ. ಅದು ಪೇಟೆಯಲ್ಲಿ ಏನು ಮಾಡುತ್ತಿತ್ತು?

೪೮. ನಿದ್ರೆ ಮಂಪರಿನಲ್ಲಿದ್ದ ಡ್ರೈವರ್ ಪರಂಧಾಮಕ್ಕೆ ಹೋದ ಸಂದರ್ಭವನ್ನು ವಿವರಿಸಿ.

ಭಾಷಾಭ್ಯಾಸ

V. ಆ) ಕೆಳಗಿನ ಪ್ರಶ್ನೆಗಳಲ್ಲಿ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಸೂಚನೆಗೆ ಅನುಗುಣವಾಗಿ ಉತ್ತರಿಸಿರಿ: 4 x 2 = 8

೪೯. ಈ ಕೆಳಗಿನ ಯಾವುದಾದರೂ ಎರಡು ಪದಗಳಿಗೆ ನಾನಾರ್ಥಗಳನ್ನು ಬರೆಯಿರಿ:

ಬಟ್ಟೆ, ಆರಿ, ದೊರೆ.

೫೦. ಈ ಕೆಳಗಿನ ಯಾವುದಾದರೂ ಎರಡು ಕ್ರಿಯಾಪದಗಳ ಧಾತುರೂಪವನ್ನು ಬರೆಯಿರಿ:

ಹಾಡುವಳು, ಕುಣಿಯುತ್ತಿತ್ತು ನುಡಿದನು.

೫೧. ಈ ಕೆಳಗಿನ ಯಾವುದಾದರೂ ಎರಡು ನುಡಿಗಟ್ಟುಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ: ಅಡಿಪಾಯ, ಅಜಗಜಾಂತರ, ಕಣ್ಣರಳಿಸು.

೫೨. ಈ ಕೆಳಗಿನ ಯಾವುದಾದರೂ ಎರಡು ಪದಗಳಿಗೆ ಗುಣವಾಚಕಗಳನ್ನು ಬರೆಯಿರಿ:

ಕಿರುಹಾದಿ, ಮರಿಗೂಬೆ, ಘೋರಪಾತಕಿ.

೫೩. ಈ ಕೆಳಗಿನ ಯಾವುದಾದರೂ ಎರಡು ಪದಗಳಿಗೆ ವಿಭಕ್ತಿಪ್ರತ್ಯಯ ಬರೆಯಿರಿ:

ಕಚೇರಿಯಲ್ಲಿ, ಬಸಲಿಂಗನನ್ನು, ಕದಡಿದ.

೫೪. ಈ ಕೆಳಗಿನ ಯಾವುದಾದರೂ ಎರಡು ಪದಗಳಿಗೆ ನಿಷೇಧಾರ್ಥಕ ಪದ ಬರೆಯಿರಿ:

ಹಾಡುವನು, ಓದಿದಳು. ಹೋಗುವುದು.

ಆ) ಈ ಕೆಳಗಿನ ಯಾವುದಾದರೂ ಒಂದನ್ನು ಕುರಿತು ಪ್ರಬಂಧವನ್ನು ಬರೆಯಿರಿ: 1×4-4

೫೫. ದೇಶದ ಪ್ರಗತಿಯಲ್ಲಿ ಯುವಜನರ ಪಾತ್ರ,

ಅಥವಾ

ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ.

ಇ) ಈ ಕೆಳಗಿನ ಯಾವುದಾದರೂ ಒಂದನ್ನು ಕುರಿತು ಪತ್ರ ಬರೆಯಿರಿ: 1 x 4 = 4

(ಯಾವುದೇ ಪತ್ರ ಲೇಖನದಲ್ಲಿ ಹೆಸರು ನಮೂದಿಸಬಾರದು; ಸಂಕೇತಾಕ್ಷರಗಳನ್ನು ಮಾತ್ರ ಬಳಸಬೇಕು. ಉದಾ: ಆ.ಬ.ಕ.)

೫೬. ನಿಮಗೆ ಶೈಕ್ಷಣಿಕ ಸಾಲ ಸೌಲಭ್ಯವನ್ನು ಒದಗಿಸುವಂತೆ ಕೋರಿ ಬ್ಯಾಂಕಿನ ವ್ಯವಸ್ಥಾಪಕರಿಗೆ ಒಂದು ಪತ್ರ ಬರೆಯಿರಿ.

ಅಥವಾ

ನಿಮ್ಮ ಕಾಲೇಜಿನಲ್ಲಿ ಆಚರಿಸಿದ ಸ್ವಾತಂತ್ಯೋತ್ಸವವನ್ನು ಕುರಿತು ನಿಮ್ಮ ಗೆಳೆಯ/ಗೆಳತಿಗೆ ಒಂದು ಪತ್ರ ಬರೆಯಿರಿ.

Leave a Comment