2nd Puc History Mouryaru Chapter Notes|ದ್ವಿತೀಯ ಪಿ.ಯು.ಸಿ ಇತಿಹಾಸ 4.3 ಮೌರ್ಯರು (ಸಾ.ಶ.ಪೂ. 320-180) ನೋಟ್ಸ್

ದ್ವಿತೀಯ ಪಿ.ಯು.ಸಿ ಇತಿಹಾಸ 4.3 ಮೌರ್ಯರು ನೋಟ್ಸ್ ಪ್ರಶ್ನೋತ್ತರಗಳು, 2nd Puc History 4.3 Chapter Notes Question Answer Guide Extract Mcq Pdf Download in Kannada Medium 2025 2nd puc history notes kseeb solutions kannada medium 2nd puc ಇತಿಹಾಸ notes Kseeb Solution For Class 12 history Chapter 4.3 Notes 2nd puc history 4th chapter question answer mouryaru history in kannada.

Mouryaru

ದ್ವಿತೀಯ ಪಿ.ಯು.ಸಿ ಇತಿಹಾಸ 4.3 ಮೌರ್ಯರು ನೋಟ್ಸ್ ಪ್ರಶ್ನೋತ್ತರಗಳು

1.ಮೌರ್ಯವಂತದ ಸ್ಥಾಪಕ

ಎ) ಅಶೋಕ

ಬಿ) ಬಿಂದುಸಾರ

ಡಿ) ಸಿಮುಖ

2. ಮೌರ್ಯರ ರಾಜಧಾನಿ

ಎ) ತಲಕಾಡು

ಸಿ) ಮಥುರಾ

ಡಿ) ಕುಶಿನಗರ

3. ‘ಅರ್ಥಶಾಸ್ತ್ರ’ ಗ್ರಂಥ ಬರೆದವರು

ಎ) ಮೆಗಾಸ್ತನೀಸ್

ಬಿ) ಬಾಣ

ಸಿ) ವಿಶಾಖದತ್ತ

4. ಬೌದ್ಧಧರ್ಮ ಸ್ವೀಕರಿಸಿದ ಮೌರ್ಯಸಾಮ್ರಾಟ

ಎ) ಚಂದ್ರಗುಪ್ತ

ಬಿ) ಬಿಂದುಸಾರ

ಡಿ) ಸಿಮುಖ

5. ಮೆಗಾಸ್ತನೀಸ್ ಯಾರ ರಾಯಭಾರಿ

ಎ) ಪರ್ಶಿಯನ್

ಬಿ) ಅರಬ್

ಡಿ)‌ ಇಟಲಿ

6. ಪಾಟಲಿಪುತ್ರದ ಇಂದಿನ ಹೆಸರು

ಎ) ಬಿಹಾರ

ಸಿ) ಮಥುರಾ

ಡಿ) ಕುಶೀನಗರ

1.’ಅರ್ಥಶಾಸ್ತ್ರ’ ಕೃತಿ ಬರೆದವರು ಕೌಟಿಲ್ಯ

2. ಮೌರ್ಯ ವಂಶದ ಸ್ಥಾಪಕ ಚಂದ್ರಗುಪ್ತಮೌರ್ಯ

3. ಮೆಗಾಸ್ತನೀಸನ ಪ್ರಸಿದ್ಧ ಕೃತಿ ಇಂಡಿಕಾ

4. ಮೌರ್ಯವಂಶದ ಪ್ರಸಿದ್ದ ರಾಜ ಅಶೋಕ

5. ಮೌರ್ಯರ ರಾಜಧಾನಿ ಪಾಟಲಿಪುತ್ರ

6. ಮುದ್ರಾರಾಕ್ಷಸ ಕೃತಿ ರಚಿಸಿದವರು ವಿಶಾಖದತ್ತ

7. ಚಂದ್ರಗುಪ್ತನಿಂದ ಸೋಲಿಸಲ್ಪಟ್ಟ ಗ್ರೀಕ್‌ ದೊರೆ ಅಲೆಕ್ಸಾಂಡರ್

8. ಬೌದ್ಧಧರ್ಮ ಸ್ವೀಕರಿಸಿದ ಮೌರ್ಯ ಸಾಮ್ರಾಟ ಅಶೋಕ

9. ಚಂದ್ರಗುಪ್ತನ ಆಸ್ಥಾನಕ್ಕೆ ಮೆಗಾಸ್ತನೀಸನನ್ನು ರಾಯಭಾರಿಯಾಗಿ ಕಳುಹಿಸಿದವರು ಸೆಲ್ಯೂಕಸ್

10. ಚಂದ್ರಗುಪ್ತಮೌರ್ಯ ತನ್ನ ಕೊನೆಯ ದಿನಗಳನ್ನು ಕಳೆದದ್ದು ಶ್ರವಣಬೆಳಗೊಳ

11. ಜೈನಧರ್ಮವನ್ನು ಅನುಸರಿಸಿದ ಮೌರ್ಯ ಅರಸ ಚಂದ್ರಗುಪ್ತಮೌರ್ಯ

12. ಚಂದ್ರಗುಪ್ತಮೌರ್ಯನಿಂದ ಸೋಲಿಸಲ್ಪಟ್ಟ ನಂದರ ದೊರೆ ಧನನಂದ

13. ಶಾತವಾಹನರ ರಾಜಧಾನಿ ಪ್ರತಿಷ್ಠಾನ (ಪೈತಾನ್)

14. ಶಾತವಾಹನ ಸಂತತಿಯ ಸ್ಥಾಪಕ ಸಿಮುಖ

15. 3ನೇ ಬೌದ್ಧ ಮಹಾಸಮ್ಮೇಳನ ನಡೆಸ ಸ್ಥಳ ಪಾಟಲೀಪುತ್ರ

16. ಗೌತಮಿ ಬಾಲಶ್ರೀಯು ಹೊರಡಿಸಿದ ಶಾಸನ ನಾಸಿಕ್‌ಗುಹಾಶಾಸನ

17. ಗಾಥಾಸಪ್ತಪತಿ ಬರೆದವನು ಹಾಲರಾಜ

18. ಅಶೋಕನಿಂದ ನಿರ್ಮಿಸಲ್ಪಟ್ಟ ಅತಿದೊಡ್ಡ ಸ್ತೂಪ ಮಧ್ಯಪ್ರದೇಶದ ಸಾಂಚಿಸ್ತೂಪ

ಕ್ರಮ ಸಂಖ್ಯೆಉತ್ತರಗಳು
1ಗಾಥಾಸಪ್ತಸತಿಮೌರ್ಯವಂಶದ ಸ್ಥಾಪಕಹಾಲ
2ಸಿಮುಖಮೌರ್ಯವಂಶದ ಪ್ರಸಿದ್ಧ ಅರಸಶಾತವಾನ ಸಂತತಿ ಸ್ಥಾಪಕ
3ಪ್ರತಿಷ್ಠಾನ (ಪೈತಾನ್)ಅರ್ಥಶಾಸ್ತ್ರಶಾತವಾಹನರ ರಾಜಧಾನಿ
4ಅಶೋಕಗ್ರೀಕ್ ರಾಯಭಾರಿಮೌರ್ಯವಂಶದ ಪ್ರಸಿದ್ಧ ಅರಸ
5ಮುದ್ರರಾಕ್ಷಸಮೌರ್ಯರ ರಾಜಧಾನಿವಿಶಾಖದತ್ತ
6ಪಾಟಲೀಪುತ್ರಶಾತವಾಹನರ ರಾಜಧಾನಿಮೌರ್ಯರ ರಾಜಧಾನಿ
7ಕೌಟಿಲ್ಯಶಾತವಾನ ಸಂತತಿ ಸ್ಥಾಪಕಅರ್ಥಶಾಸ್ತ್ರ
8ಚಂದ್ರಗುಪ್ತಮೌರ್ಯಹಾಲಮೌರ್ಯವಂಶದ ಸ್ಥಾಪಕ
9ಗೌತಮಿ ಬಾಲಶ್ರೀಗ್ರೀಕ್‌ ದೊರೆನಾಸಿಕ್‌ ಗುಹಾಶಾಸನ
10ಮೆಗಾಸ್ತನೀಸ್ವಿಶಾಖದತ್ತಗ್ರೀಕ್ ರಾಯಭಾರಿ
11ಧನನಂದಮಸ್ಕಿಶಾಸನನಂದರ ಕೊನೆಯ ದೊರೆ
12ದೇವನಾಂಪ್ರಿಯ ಅಶೋಕನಾಸಿಕ್‌ ಗುಹಾಶಾಸನಮಸ್ಕಿಶಾಸನ
13ಅಲೆಗ್ಸಾಂಡರ್ನಂದರ ಕೊನೆಯ ದೊರೆಗ್ರೀಕ್‌ ದೊರೆ

1. ಗಾಥಾಸಪ್ತಸತಿಯನ್ನು ಯಾರು ಬರೆದರು?

ಹಾಲರಾಜ

2. ಶಾತವಾಹನರ ರಾಜಧಾನಿ ಯಾವುದು?

ಪ್ರತಿಷ್ಠಾನ (ಪೈತಾನ್)

3. 3ನೇ ಬೌದ್ಧ ಮಹಾಸಮ್ಮೇಳನ ಎಲ್ಲಿ ನಡೆಯಿತು?

ಪಾಟಲೀಪುತ್ರದಲ್ಲಿ

4. ಶಾತವಾಹನ ಸಂತತಿಯ ಸ್ಥಾಪಕ ಯಾರು?

ಸಿಮುಖ.

5. ಮೌರ್ಯರ ರಾಜಧಾನಿಯನ್ನು ಹೆಸರಿಸಿ.

ಪಾಟಲೀಪುತ್ರ

6. ಮೌರ್ಯ ವಂಶವನ್ನು ಸ್ಥಾಪಿಸಿದವರು ಯಾರು?

ಚಂದ್ರಗುಪ್ತ ಮೌರ್ಯ

7. ಮೌರ್ಯರ ರಾಜಲಾಂಛನ ಯಾವುದು?

ಧರ್ಮಚಕ್ರ

8. ಚಂದ್ರಗುಪ್ತಮೌರ್ಯನಿಂದ ಸೋಲಿಸಲ್ಪಟ್ಟ ಗ್ರೀಕ್ ದೊರೆಯನ್ನು ಹೆಸರಿಸಿ.

ಅಲೆಕ್ಸಾಂಡರ್

9. ಚಂದ್ರಗುಪ್ತಮೌರ್ಯನ ಆಸ್ಥಾನಕ್ಕೆ ಮೆಗಾಸ್ತಾನೀಸನನ್ನು ರಾಯಭಾರಿಯಾಗಿ ಕಳುಹಿಸಿದವರು ಯಾರು?

ಸೆಲ್ಯುಕಸ್

10. ಬೌದ್ಧ ಧರ್ಮ ಸ್ವೀಕರಿಸಿದ ಮೌರ್ಯ ಸಾಮ್ರಾಟನನ್ನು ಹೆಸರಿಸಿ.

ಅಶೋಕ

11. ಚಂದ್ರಗುಪ್ತಮೌರ್ಯ ತನ್ನ ಕೊನೆಯ ದಿನಗಳನ್ನು ಎಲ್ಲಿ ಕಳೆದನು?

ಕರ್ನಾಟಕದ ಶ್ರವಣಬೆಳಗೊಳದಲ್ಲಿ.

12. ಗೌತಮಿ ಬಾಲಶ್ರೀಯ ಹೊರಡಿಸಿದ ಶಾಸನ ಯಾವುದು?

ನಾಸಿಕ್ ಗುಹಾಶಾಸನ.

13. ಮೆಗಾಸ್ತನೀಸ್ ಯಾರು?

ಗ್ರೀಕ್ ರಾಯಭಾರಿ

14. ಮುದ್ರಾರಾಕ್ಷಸವನ್ನು ಯಾರು ಬರೆದವರು?

ವಿಶಾಖದತ್ತ

1. ಮೌರ್ಯ ಸಂತತಿಯ ಇತಿಹಾಸ ತಿಳಿಯಲು ಸಹಾಯಕ ವಾಗಿರುವ ಯಾವುದಾದರೂ ಎರಡು ಆಧಾರಗಳನ್ನು

ಕೌಟಿಲ್ಯನ ಅರ್ಥಶಾಸ್ತ್ರ, ಮೆಗಾಸ್ಥನೀಸನ ಇಂಡಿಕಾ.

2. ಕರ್ನಾಟಕದಲ್ಲಿ ಅಶೋಕನ ಶಾಸನಗಳು ದೊರಕಿರುವ ಯಾವುದಾದರೂ ಎರಡು ಸ್ಥಳಗಳನ್ನು ಹೆಸರಿಸಿ.

  • ರಾಯಚೂರು ಜಿಲ್ಲೆಯ ಮಸ್ಕಿ ಶಾಸನ.
  • ಯಾದಗಿರಿ ಜಿಲ್ಲೆಯ ಸನ್ನತಿ ಶಾಸನ

3. ಮೌರ್ಯರ ಅವಧಿಯಲ್ಲಿ ಅಸ್ತಿತ್ವದಲ್ಲಿದ್ದ ಎರಡು ಬಗೆಯ ನ್ಯಾಯಾಲಯಗಳಾವುವು?

ಧರ್ಮಸ್ಥೆಯ ಮತ್ತು ಕಂಟಕಶೋಧಕ

4. ಮಸ್ಕಿ ಶಾಸನದ ಪ್ರಾಮುಖ್ಯತೆಯೇನು?

ಮಸ್ಕಿ ಶಾಸನದಲ್ಲಿ ರಾಜನನ್ನು ಪ್ರಿಯದರ್ಶಿ ಮತ್ತು ‘ದೇವನಾಂಪ್ರಿಯ ಅಶೋಕಸ’ ಎಂದು ಉಲ್ಲೇಖವಿದ್ದು ಪ್ರಿಯದರ್ಶಿರಾಜ ಅಶೋಕನಲ್ಲದೇ ಬೇರಾರೂ ಅಲ್ಲ ಎಂಬುದನ್ನು ಧೃಡಪಡಿಸುತ್ತದೆ.

5. ಮೆಗಾಸ್ಥನೀಸ್ ಯಾರು? ಅವನ ಕೃತಿಯಲ್ಲಿ ಹೆಸರಿಸಿ.

ಮೆಗಾಸ್ತನೀಸ್ ಗ್ರೀಕ್‌ನ ರಾಯಭಾರಿ, ಅವನ ಕೃತಿ ಇಂಡಿಕಾ,

6. ವಿಶಾಖದತ್ತನ ಯಾವುದಾದರೂ ಎರಡು ಕೃತಿಗಳನ್ನು ಹೆಸರಿಸಿ.

ಮುದ್ರಾರಾಕ್ಷಸ ಮತ್ತು ದೇವಿಚಂದ್ರಗುಪ್ತಂ.

7. ಕೌಟಿಲ್ಯ ಯಾರು? ಅವನ ಪ್ರಸಿದ್ಧ ಕೃತಿ ಯಾವುದು?

ಚಂದ್ರಗುಪ್ತ ಮೌರ್ಯನ ಗುರು ಮತ್ತು ರಾಜನೀತಿ ನಿಪುಣ ಇವನ ಪ್ರಸಿದ್ಧ ಗ್ರಂಥ ‘ಅರ್ಥಶಾಸ್ತ್ರ’.

8. ಧರ್ಮಮಹಾಮಾತ್ರರನ್ನು ನೇಮಿಸಿದ ಅರಸ ಯಾರು? ಅವರ ಕರ್ತವ್ಯ ಏನಾಗಿತ್ತು?

ಅವರ ಕರ್ತವ್ಯ ಮಹಿಳೆಯರ ರಕ್ಷಣೆ ಮತ್ತು ಧರ್ಮ ಜಾಗೃತಿ.

9. ಶಾತವಾಹನರ ಯಾರಾದರೂ ಇಬ್ಬರು ಪ್ರಮುಖ ದೊರೆಗಳನ್ನು ಹೆಸರಿಸಿ.

ಸಿಮುಖ, ಗೌತಮಿಪುತ್ರ ಶಾತಕರ್ಣಿ,

10. ಶಾತವಾಹನರ ಯಾವುದಾದರೂ ಎರಡು ವಾಸ್ತುಶಿಲ್ಪದ ಕೇಂದ್ರಗಳನ್ನು ಹೆಸರಿಸಿ.

ಅಮರಾವತಿ, ನಾಗಾರ್ಜುನಕೊಂಡ.

1. ಚಂದ್ರಗುಪ್ತಮೌರ್ಯನ ಸಾಧನೆಗಳ ಬಗ್ಗೆ ಬರೆಯಿರಿ.

  • ಚಂದ್ರಗುಪ್ತ ಮೌರ್ಯ, ಮೌರ್ಯ ಸಾಮ್ರಾಜ್ಯದ ಸ್ಥಾಪಕ.
  • ಚಾಣಕ್ಯನ ಮಾರ್ಗದರ್ಶನದಲ್ಲಿ ಬಲಿಷ್ಟ ಸೈನ್ಯವನ್ನು ಕಟ್ಟಿ ಪಂಜಾಬಿನ ಸಣ್ಣ ರಾಜರುಗಳನ್ನು ಸೋಲಿಸಿ ವಶಪಡಿಸಿಕೊಂಡು ಮಗದ ಸಾಮ್ರಾಜ್ಯದ ಮೇಲೆ ದಾಳಿ ಮಾಡಿದನು. ನಂತರ ಕೊನೆಯ ದೊರೆ ಧನ ನಂದನನ್ನು ಕೊಂದು ಮೌರ್ಯ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದನು.
  • ಅಲೆಕ್ಸಾಂಡರನು ಭಾರತದ ವಾಯುವ್ಯ ಭಾಗಗಳ ಮೇಲೆ ತನ್ನ ಅಧಿಪತ್ಯವನ್ನು ಸಾಧಿಸಿದ್ದನು. ಚಂದ್ರಗುಪ್ತನು ಅವನನ್ನು ಸೋಲಿಸಿ ಆ ಪ್ರದೇಶಗಳನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು.
  • ಅಲೆಕ್ಸಾಂಡರನ ನಂತರ ಗ್ರೀಕ್‌ನ ಅಧಿಪತಿಯಾದ ಸೆಲ್ಯುಕಸ್ ಮತ್ತೆ ಭಾರತದ ಭಾಗಗಳನ್ನು ವಶಪಡಿಸಿಕೊಳ್ಳಲು ಬಂದಾಗ ಅವನನ್ನು ಚಂದ್ರಗುಪ್ತನು ಸೋಲಿಸಿದನು.
  • ಸೆಲ್ಯುಕಸ್ ಚಂದ್ರಗುಪ್ತನೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಕಾಬೂಲ್, ಅಫ್ಘಾನಿಸ್ಥಾನ, ಕಾಂದಹಾರ ಮತ್ತು ಬಲೂಚಿ ಸ್ಥಾನಗಳನ್ನು ಒಳಗೊಂಡ ಪ್ರದೇಶವನ್ನು ಚಂದ್ರಗುಪ್ತನಿಗೆ ನೀಡಿದ್ದೇ ಅಲ್ಲದೆ ತನ್ನ ಮಗಳನ್ನು ಮದುವೆ ಮಾಡಿಕೊಟ್ಟನು. ಮತ್ತು ಮೆಗಾಸ್ತನೀಸನನ್ನು ಪಾಟಲೀ ಪುತ್ರಕ್ಕೆ ರಾಯಭಾರಿಯಾಗಿ ಕಳುಹಿಸಿದನು ಮತ್ತು ಇನ್ನೂ ಅನೇಕ ದಿಗ್ವಿಜಯಗಳನ್ನು ಕೈಗೊಂಡನು.
  • ಜೈನಧರ್ಮದ ಅನುಯಾಯಿಯಾಗಿ ಅದನ್ನು ಅನುಸರಿಸಿದ್ದೇ ಅಲ್ಲದೇ ಸಾ.ಶ.ಪೂ. 300ರಲ್ಲಿ ಕರ್ನಾಟಕದ ಶ್ರವಣಬೆಳಗೊಳದಲ್ಲಿ ‘ಸಲ್ಲೇಖನ’ ವ್ರತವನ್ನು ಆಚರಿಸಿ ಪ್ರಾಣತ್ಯಾಗ ಮಾಡಿದನು.

2. ಬೌದ್ಧಧರ್ಮದ ಪ್ರಚಾರಕ್ಕೆ ಅಶೋಕನು ಕೈಗೊಂಡ ಕ್ರಮಗಳಾವುವು?

ಬೌದ್ಧಧರ್ಮದ ಪವಿತ್ರ ಕ್ಷೇತ್ರಗಳಾದ ಲುಂಬಿನಿವನ, ಕಪಿಲವಸ್ತು, ಗಯಾ, ಸಾರನಾಥ ಮತ್ತು ಕುಶೀ ನಗರವನ್ನು ಸಂದರ್ಶಿಸಿ ಧರ್ಮಗೋಷ್ಠಿಗಳನ್ನು ಏರ್ಪಡಿಸಿದನು.

  • ಸಾಮ್ರಾಜ್ಯದಾದ್ಯಂತ ಅನೇಕ ವಿಹಾರಗಳನ್ನು ನಿರ್ಮಿಸಿ ದನು ಮತ್ತು ಬುದ್ದನ ತತ್ವಗಳನ್ನು ಪ್ರಚಾರ ಪಡಿಸಲು ಅವುಗಳನ್ನು ಬಂಡೆಗಳು, ಸ್ತಂಭಗಳು ಮತ್ತು ಗುಹೆಗಳ ಗೋಡೆಗಳ ಮೇಲೆ ಕೆತ್ತಿಸಿದನು. ಧರ್ಮ ಪ್ರಚಾರಕ್ಕಾಗಿ ಅಪಾರವಾದ ಹಣವನ್ನು ವಿನಿಯೋಗಿಸಿದನು.
  • ಧರ್ಮ ಪ್ರಚಾರಕ್ಕಾಗಿ ಧರ್ಮಮಹಾಮಾತ್ರರು, ಯುಕ್ತರು ಮತ್ತು ರಜ್ಜುಕರು ಸ್ತ್ರೀ ಅಧ್ಯಕ್ಷ ಮಹಾಮಾತ್ರರು ಎಂಬ ಅಧಿಕಾರಿಗಳನ್ನು ನೇಮಿಸಿದನು.
  • ಬೌದ್ಧ ಭಿಕ್ಷುಗಳ ಆಂತರಿಕ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಲು ಸಾ.ಶ.ಪೂ250ರಲ್ಲಿ ಪಾಟಲೀ ಪುತ್ರದಲ್ಲಿ 3ನೇ ಬೌದ್ಧ ಸಮ್ಮೇಳನವನ್ನು ಸಂಘಟಿಸಿದನು.
  • ಬೌದ್ಧ ಧರ್ಮವನ್ನು ಹರಡಲು ಅಫ್ಘಾನಿಸ್ಥಾನ ಬರ್ಮಾ, ಶ್ರೀಲಂಕಾ, ಮತ್ತು ಯೂರೋಪಿಗೆ ನಿಯೋಗಗಳನ್ನು ಕಳುಹಿಸಿದನು.
  • ಶಾಂತಿಸೂಚಕವಾಗಿ ಭೋಧಿಗಿಡದೊಂದಿಗೆ ತನ್ನ ಮಗ ಮಹೇಂದ್ರ ಮತ್ತು ಮಗಳು ಸಂಘಮಿತ್ರೆಯನ್ನು ಶ್ರೀಲಂಕಾಕ್ಕೆ ಕಳುಹಿಸಿದನು.
  • ಅನೇಕ ಕಲ್ಯಾಣಕಾರ್ಯಗಳನ್ನು ಕೈಗೊಂಡು ಬಾವಿಗಳು, ವಿಶ್ರಾಂತಿಗೃಹಗಳು, ರಸ್ತೆಗಳ ಬದಿಗಳಲ್ಲಿ ಫಲನೀಡುವ ಮರಗಳು ಮಾನವರ ಮತ್ತು ಪ್ರಾಣಿಗಳ ಆಸ್ಪತ್ರೆ, ಶಾಲೆಗಳು, ಅನ್ನಛತ್ರಗಳು ಮತ್ತು ಇತರೇ ಜನೋ ಪಯೋಗಿ ಕಾರ್ಯಗಳನ್ನು ಕೈಗೊಂಡನು.

3. ಮೌರ್ಯರ ಆಡಳಿತವನ್ನು ವಿವರಿಸಿ.

  • ಸಾಮ್ರಾಜ್ಯದಾದ್ಯಂತ ಏಕರೂಪದ ಆಡಳಿತವನ್ನು ಸ್ಥಾಪಿಸುವಲ್ಲಿ ಮೌರ್ಯರು ಮೊದಲಿಗರು. ಕೌಟಿಲ್ಯನ ಅರ್ಥಶಾಸ್ತ್ರವು ಇದರಲ್ಲಿ ಪ್ರಮುಖ ಅಂಶವಾಗಿದೆ.
  • ಇವರ ಆಡಳಿತದಲ್ಲಿ ರಾಜನೇ ಮುಖ್ಯಸ್ಥನಾಗಿದ್ದು ರಾಜನು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಹಾಗೂ ಸೇನಾಧಿಕಾರದ ಪ್ರಮುಖ ಮೂಲವಾಗಿದ್ದನು.
  • ರಾಜನಿಗೆ ಆಡಳಿತದಲ್ಲಿ ಸಹಾಯಕ್ಕಾಗಿ ‘ಮಂತ್ರಿಪರಿಷತ್ತು’ ಎಂದು ಕರೆಯಲ್ಪಡುವ ಸಲಹಾ ಸಮಿತಿಯಿತ್ತು.
  • ಕೇಂದ್ರ ಸರ್ಕಾರದ ಆಡಳಿತದ ವಿಷಯವನ್ನು 30 ಇಲಾಖೆಗಳಾಗಿ ವಿಂಗಡಿಸಿ ಒಂದೊಂದಕ್ಕೂ ಮೇಲ್ವಿಚಾರಕರಿದ್ದರು. ನೀರಾವರಿ, ಮಾರುಕಟ್ಟೆ, ಶಿಕ್ಷಣ, ಬರಪರಿಹಾರ ಇತ್ಯಾದಿ ರಾಜ್ಯದ ಕಾರ್ಯಗಳನ್ನು ಅವು ನಿರ್ವಹಿಸುತ್ತಿದ್ದವು.
  • ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ರಾಜನೇ ನ್ಯಾಯಾಂ ಗದ ಪ್ರಮುಖನಾಗಿದ್ದು ನಾಘರೀಕ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ‘ಧರ್ಮಸ್ಥಯ’ ಹಾಗೂ ಅಪರಾಧಿ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ‘ಕಂಟಕ ಶೋಧನೆ’ ಎಂಬ ನ್ಯಾಯಾಲಯಗಳು ಪಟ್ಟಣ ಹಾಗೂ ನಗರಗಳಲ್ಲಿದ್ದವು. ಗ್ರಾಮ ಸಮಿತಿಗಳು ಇದ್ದವು.
  • ಶಿಕ್ಷೆಗಳು ತುಂಬಾ ಕಠಿಣವಾಗಿದ್ದು ಅವುಗಳಲ್ಲಿ ತಲೆ ಮತ್ತು ಕೈಕಾಲು ಕತ್ತರಿಸುವುದೂ ಸೇರಿತ್ತೆಂದು ಮೆಗಾಸ್ತನೀಸ್ ಉಲ್ಲೇಖಿಸಿದ್ದಾನೆ.
  • ಭೂ ಕಂದಾಯ ರಾಜ್ಯಾದ್ಯಂತ ಮೂಲವಾಗಿದ್ದು, ಉತ್ಪನ್ನದ 1/6 ಭಾಗ ತೆರಿಗೆಯಾಗಿ ನಿಗಧಿಪಡಿಸಿ ಹಣ ಅಥವಾ ವಸ್ತುರೂಪದಲ್ಲಿ ಸಂಗ್ರಹಿಸಲಾಗುತ್ತಿತ್ತು.
  • ವೃತ್ತಿಗಳು, ಮನೆಗಳು, ಹಸು, ಸಾಕುಪ್ರಾಣಿಗಳು, ಅರಣೋತ್ಪನ್ನಗಳ ಮೇಲಿನ ತೆರಿಗೆ ಹಾಗೂ ಮಾರಾಟ ತೆರಿಗೆಗಳನ್ನು ವಿಧಿಸಲಾಗುತ್ತಿತ್ತು.
  • ಸಾಮ್ರಾಜ್ಯವನ್ನು 5 ಪ್ರಾಂತ್ಯಗಳನ್ನಾಗಿ ವಿಂಗಡಿಸಿ ಅವುಗಳ ರಾಜಧಾನಿಗಳು ಗಿರಿನಾರ್, ತಕ್ಷಶಿಲಾ, ಉಜ್ಜಯಿನಿ, ತೋಸಾಲಿ ಮತ್ತು ಸುವರ್ಣಗಿರಿ ಗಳಲ್ಲಿದ್ದವು. ಪ್ರತಿ ಪ್ರಾಂತ್ಯವು ರಾಜಮನೆತನಕ್ಕೆ ಸೇರಿದ್ದವರಿಂದ ಅಂದರೆ ರಾಜ್ಯಪಾಲರ ಅಧೀನದಲ್ಲಿತ್ತು. ಪ್ರಾಂತ್ಯಗಳನ್ನು ಜಿಲ್ಲೆಗಳನ್ನಾಗಿ ವಿಂಗಡಿಸಿ ಸ್ಥಾನಿಕರನ್ನು, ಜಿಲ್ಲೆಗಳನ್ನು ಹಳ್ಳಿಗಳನ್ನಾಗಿ ವಿಂಗಡಿಸಿ ಗ್ರಾಮಿಕರನ್ನು -ನೇಮಿಸಲಾಗಿತ್ತು.
  • ಹತ್ತು ಹಳ್ಳಿಗಳ ಮುಖ್ಯಸ್ಥನನ್ನು ‘ಗೋಪ’ ಎಂದು ಕರೆಯುತ್ತಿದ್ದರು.
  • ನಗರಾಡಳಿತವನ್ನು ತಲಾ ಐವರ ಸದಸ್ಯರ ಆರು ಮಂಡಲಿಗಳ ಒಟ್ಟು 30 ಅಧಿಕಾರಿಗಳ ಸಮಿತಿಯ ನಿರ್ವಹಣೆಗೆ ವಹಿಸಲಾಗಿತ್ತು.
  • ಸೈನ್ಯವು ಬಲಿಷ್ಟವಾಗಿದ್ದು ಸ್ವತಃ ರಾಜನೇ ಮುನ್ನಡೆಸುತ್ತಿದ್ದನು. ಕಾಲ್ಗಳ, ಅಶ್ವದಳ, ಗಜದಳಗಳನ್ನು ಒಳಗೊಂಡಿತ್ತು. ಯುದ್ಧ ಇಲಾಖೆಯು ಐದು ಸದಸ್ಯರನ್ನೊಳಗೊಂಡ ಆರು ಮಂಡಳಿಗಳಿಂದ ನಿರ್ವಹಿಸಲ್ಪಡುತ್ತಿತ್ತು. ಅವುಗಳೆಂದರೆ, 1-ನೌಕಾದಳ, 2-ಸಾರಿಗೆ, 3-ಕಾಲ್ದಳ, 4-ಅಶ್ವದಳ, 5-ರಥದಳ, 6-ಗಜದಳ.

4. ಕಲೆ ಮತ್ತು ವಾಸ್ತುಶಿಲ್ಪಕ್ಕೆ ಮೌರ್ಯರ ಕೊಡುಗೆಗಳನ್ನು ವಿವರಿಸಿ.

  • ಮೌರ್ಯರು ಅನೇಕ ಕಟ್ಟಡಗಳು, ಅರಮನೆಗಳು ಮತ್ತು ಸ್ಮಾರಕಗಳನ್ನು ನಿರ್ಮಿಸಿದ್ದಾರೆ. ಅಶೋಕನಿಗಿಂತ ಮುಂಚಿ ಕಟ್ಟಡಗಳನ್ನು ಮರಗಳಿಂದ ಕಟ್ಟಲಾಗುತ್ತಿತ್ತು. ಅಶೋಕನು ಮರ ಮತ್ತು ಇಟ್ಟಿಗೆಯ ಬಳಕೆಯನ್ನು ಬಿಟ್ಟು ಕಲ್ಲುಗಳನ್ನು ಬಳಸಲು ಆರಂಭಿಸಿದನು.
  • ಬುದ್ದನ ಗೌರವಾರ್ಥವಾಗಿ ಆತನ ಅವಶೇಷಗಳ ಮೇಲೆ ಸುಮಾರು 84,000 ಸ್ತೂಪಗಳನ್ನು ನಿರ್ಮಿಸಿದ್ದನೆಂದು ನಂಬಲಾಗಿದೆ. ಇಲ್ಲಿಯವರೆವಿಗೂ ಉಳಿದಿರುವ ಏಕೈಕ ಸ್ತೂಪ ಮಧ್ಯಪ್ರದೇಶದ ಸಾಂಚಿಯಲ್ಲಿದೆ.
  • ಪಾಟಲೀಪುತ್ರದ ಚಂದ್ರಗುಪ್ತ ಮೌರ್ಯನ ಅರಮನೆಯ ತುಂಬಾ ಪ್ರಸಿದ್ಧವಾಗಿತ್ತು. ಚೀನಿ ಯಾತ್ರಿಕ ಫಾಹಿಯಾನ್ ಅರಮನೆಯ ಅಡಿಪಾಯದ ವಿವರಣೆ ನೀಡುತ್ತಾ ಇದು ದೇವರಿಂದ ನಿರ್ಮಾಣವಾಗಿದೆಯೆಂದು ಉದ್ದರಿಸಿದ್ದಾನೆ.
  • ಬೌದ್ಧ ಸನ್ಯಾಸಿಗಳ ಧ್ಯಾನಕ್ಕಾಗಿ ಅಶೋಕ ಮತ್ತು ಅವನ ಮೊಮ್ಮಗ ದಶರಥ ಗುಹಾಲಯಗಳನ್ನು ನಿರ್ಮಿಸಿದರು.
  • ಅಶೋಕನ ಅಧಿಕಾರಾವಧಿಯಲ್ಲಿ ವಿವಿಧ ವಿನ್ಯಾಸಗಳ ಶಿಲಾಸ್ತಂಭಗಳು ನಿರ್ಮಾಣವಾದವು. ಅಶೋಕನು 30 ಕ್ಕಿಂತ ಹೆಚ್ಚು ಸ್ತಂಭಗಳನ್ನು ನಿರ್ಮಿಸಿದನೆಂದು ನಂಬಲಾಗಿದೆ. ಸಾರನಾಥನ ಸ್ಥಂಭ ಅತೀ ಮುಖ್ಯವಾದುದಾಗಿದ್ದು ಇದು ಅಧೋಮುಖವಾಗಿ ರೂಪಿಸಲ್ಪಟ್ಟಿರುವ ಕಮಲ, ಧರ್ಮಚಕ್ರ ಮತ್ತು ಪೀಠದ ಮೇಲೆ ಬೆನ್ನಿಗೆ ಬೆನ್ನು ಕೊಟ್ಟು ನಿಂತಿರುವ ನಾಲ್ಕು ಸಿಂಹಗಳ ಚಿತ್ರಗಳನ್ನು ಹೊಂದಿದೆ; ಸಾರನಾಥ ಸ್ತಂಭದ ಶಿರೋಭಾಗವು ಭಾರತದ ರಾಷ್ಟ್ರಲಾಂಛನವಾಗಿದೆ.

IV. ಈ ಕೆಳಗಿನ ಪ್ರಶ್ನೆಗೆ 30-40 ವಾಕ್ಯಗಳಲ್ಲಿ ಉತ್ತರಿಸಿ:

1.ಅಶೋಕನ ಜೀವನ ಹಾಗೂ ಸಾಧನೆಗಳನ್ನು ವಿವರಿಸಿ.

ಅಶೋಕನು ಬಿಂದುಸಾರನ ಮಗನಾಗಿದ್ದು ಮೌರ್ಯರಲ್ಲಿಯೇ ಶ್ರೇಷ್ಠ ಅರಸನಾಗಿದ್ದಾನೆ. ಪ್ರಪಂಚದ ಅರಸರಲ್ಲಿಯೇ ಹೆಸರುವಾಸಿಯಾದ ಚಕ್ರವರ್ತಿಯಾಗಿ ದ್ದಾನೆ.

  • ಶಾಸನಗಳಲ್ಲಿ ಅವನನ್ನು ದೇವನಾಂಪ್ರಿಯ ಮತ್ತು ಪ್ರಿಯದರ್ಶಿ ಎಂದು ಹೆಸರಿಸಲಾಗಿದೆ. ಅವುಗಳು ಆತನ ಶ್ರೇಷ್ಠ ವ್ಯಕ್ತಿತ್ವವನ್ನು ಸೂಚಿಸುತ್ತವೆ.
  • ಅಶೋಕನ ಪ್ರಾರಂಭಿಕ ಇತಿಹಾಸವು ಗೊಂದಲದಿಂದ ಕೂಡಿದ್ದು ಈ ಅವಧಿಯಲ್ಲಿ ಅಶೋಕ ಮತ್ತು ಆತನ ನೂರು ಜನ ಸಹೋದರರ ನಡುವೆ ಅಧಿಕಾರಕ್ಕಾಗಿ ಹೋರಾಟ ನಡೆದಿದೆ ಎಂದು ಇತಿಹಾಸಕಾರರು ಹೇಳಿದ್ದಾರೆ.
  • ಅಶೋಕನು ಅಧಿಕಾರಾವಧಿಯಲ್ಲಿ ಕಳಿಂಗವು ಶಕ್ತಿಶಾಲಿ ಯಾದ ರಾಜ್ಯವಾಗಿದ್ದು ತನ್ನ ಸಾರ್ವಭೌಮತ್ವವನ್ನು ಕಳಿಂಗದ ಮೇಲೆ ವಿಸ್ತರಿಸಲು ಕಳಿಂಗದ ಮೇಲೆ ಭೀಕರವಾದ ಕದನವನ್ನು ನಡೆಸಿದನು.
  • ಈ ಯುದ್ಧದಲ್ಲಿ ಸುಮಾರು 1 ಲಕ್ಷ ಜನ ಪ್ರಾಣ ತೆತ್ತು 1½ಲಕ್ಷ ಸೈನಿಕರು ಯುದ್ಧ ಖೈದಿಗಳಾಗಿದ್ದರು ಎಂದು ಹೇಳಲಾಗಿದೆ. ಈ ರಕ್ತಪಾತವನ್ನು ಕಂಡ ಅಶೋಕನು ತುಂಬಾ ದುಃಖತಪ್ತನಾಗಿ ಭವಿಷ್ಯದಲ್ಲಿ ಯುದ್ಧ ಮಾಡಬಾರದೆಂದು ತೀರ್ಮಾನಿಸಿ ತನ್ನ ವಿದೇಶಾಂಗ, ನೀತಿಯನ್ನು ಬದಲಿಸಿ ದಿಗ್ವಿಜಯಗಳ ಬದಲಾಗಿ
  • ಧರ್ಮವಿಜಯ [ಜನರ ಹೃದಯವನ್ನು ಗೆಲ್ಲುವುದು]ದ ನೀತಿಯನ್ನು ತನ್ನದಾಗಿಸಿಕೊಂಡನು.
  • ಉಪಗುಪ್ತನೆಂಬ ಬೌದ್ಧ ಸನ್ಯಾಸಿಯ ಪ್ರಭಾವದಿಂದ ಆತನು ಬೌದ್ಧ ಧರ್ಮವನ್ನು ಸ್ವೀಕರಿಸಿದನು.
  • ಅಶೋಕನ ಸಾಮ್ರಾಜ್ಯವು ಉತ್ತರದಲ್ಲಿ ಕಾಶ್ಮೀರ ಮತ್ತು ಅಫ್ಘಾನಿಸ್ಥಾನದ ಪ್ರದೇಶಗಳಿಂದ, ದಕ್ಷಿಣದಲ್ಲಿ ಕರ್ನಾಟಕ [ಸುವರ್ಣಗಿರಿ]ವರೆಗೆ, ಪೂರ್ವದಲ್ಲಿ ಬಂಗಾಳದಿಂದ ಪಶ್ಚಿಮದಲ್ಲಿ ಸಿಂಥ್ ಮತ್ತು ಬಲೂಚಿಸ್ಥಾನಗಳವರೆಗೆ ಹಬ್ಬಿತ್ತು.
  • ಅಶೋಕನು ಶಿಲಾಶಾಸನಗಳನ್ನು ಹೊರಡಿಸಿದ ಭಾರತದ ಮೊದಲ ಸಾಮ್ರಾಟ. ಅವುಗಳು ಸಾಮ್ರಾಜ್ಯದ ಉದ್ದಗಲಕ್ಕೂ ದೊರೆತಿವೆ.
  • ಅಶೋಕನು ಬೌದ್ಧ ಧರ್ಮದ ಪ್ರಚಾರಕ್ಕಾಗಿ ಹಲವಾರು ಯೋಜನೆಗಳನ್ನು ನಿರ್ಮಿಸಿ ಯಶಸ್ವಿಯಾದನು.
  • ಉತ್ತಮ ಆಡಳಿತಗಾರನಾಗಿದ್ದು ಭಾರತದ ಮೊಟ್ಟಮೊದಲ ಸಾಮ್ರಾಟನಾಗಿದ್ದಾನೆ.

1.ಭಾರತದ ಮೊಟ್ಟಮೊದಲ ಸಾಮ್ರಾಜ್ಯ ಯಾವುದು?

ಮೌರ್ಯಸಾಮ್ರಾಜ್ಯ

2. ಪಾಟಲೀಪುತ್ರನ ಇಂದಿನ ಹೆಸರೇನು?

ಪಾಟ್ನಾ

3. ‘ಮುರಾ’ ಎಂಬುವವಳು ಯಾರು?

ನಂದರಾಜನ ವೇಶ್ಯೆ

4.ವಿಶಾಖದತ್ತನ ಮುದ್ರಾರಾಕ್ಷಸದಲ್ಲಿ ಚಂದ್ರಗುಪ್ತ ಮೌರ್ಯನನ್ನು ಏನೆಂದು ಕರೆಯಲಾಗಿದೆ?

ಮಯೂರಸುತ

5. ಕಾಂಬೋಜದ ರಾಜಧಾನಿ ಯಾವುದು?

ರಾಜಪುರ

6. ಚಂದ್ರಗುಪ್ತ ಮೌರ್ಯನ ಆಡಳಿತದ ಕಾಲ ಯಾವುದು?

ಸಾ.ಶ.ಪೂ. 324 ರಿಂದ 300

7. ಚಂದ್ರಗುಪ್ತ ಮೌರ್ಯನಿಗೆ ತನ್ನ ಮಗಳನ್ನೇ ಕೊಟ್ಟು ವಿವಾಹ ಮಾಡಿದ ವಿದೇಶಿ ಅರಸ ಯಾರು?

ಸೆಲ್ಯೂಕಸ್

8. ನಂದರ ಕೊನೆಯ ದೊರೆ ಯಾರು?

ಧನನಂದ

9. ಮೌರ್ಯಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದವರಾರು?

ಚಂದ್ರಗುಪ್ತ ಮೌರ್ಯ

  • ಚಂದ್ರಗುಪ್ತ ಮೌರ್ಯ, ಮೌರ್ಯವಂಶದ ಸ್ಥಾಪಕ.
  • ಅಶೋಕನು ಈ ವಂಶದ ಪ್ರಸಿದ್ಧ ದೊರೆ.
  • ಅರ್ಥಶಾಸ್ತ್ರ ಎಂಬ ಗ್ರಂಥವನ್ನು ಕೌಟಿಲ್ಯನು ರಚಿಸಿದನು.
  • ಮೆಗಾಸ್ತಾನೀಸ್ ಗ್ರೀಕರ ರಾಯಭಾರಿಯಾಗಿದ್ದನು.
  • ಈತನು ಇಂಡಿಕಾ ಎಂಬ ಗ್ರಂಥವನ್ನು ರಚಿಸಿದ್ದಾರೆ.

Leave a Comment