ದ್ವಿತೀಯ ಪಿಯುಸಿ ಕನ್ನಡ ಮುಂಬೈ ಜಾತಕ ನೋಟ್ಸ್ | 2nd Puc Kannada Mumbai Jataka Notes

ದ್ವಿತೀಯ ಪಿಯುಸಿ ಕನ್ನಡ ಮುಂಬೈ ಜಾತಕ ನೋಟ್ಸ್ ಪ್ರಶ್ನೋತ್ತರಗಳು, 2nd Puc Mumbai Jataka Kannada Notes Question Answer Guide Summery Extract Mcq Pdf Download in Kannada Medium Karnataka State Syllabus 2025 Mumbai jataka kannada summary second puc mumbai jataka kannada question answer ಮುಂಬೈ ಜಾತಕ ವಿಮರ್ಶೆ ಮುಂಬೈ ಜಾತಕ question answer ಮುಂಬೈ ಜಾತಕ ಪದ್ಯ 2nd PUC Kannada notes kannada 2nd puc notes pdf download ದ್ವಿತೀಯ ಪಿಯುಸಿ ಕನ್ನಡ ನೋಟ್ಸ್ pdf kseeb solutions for class 12 kannada poem 8 notes.

೮. ಮುಂಬೈ ಜಾತಕ

– ಜಿ.ಎಸ್‌. ಶಿವರುದ್ರಪ್ಪ

Mumbai Jataka Notes
Mumbai Jataka Notes

ಕವಿ ಪರಿಚಯ

ಕನ್ನಡದ ಹೆಸರಾಂತ ಕವಿಗಳಲ್ಲಿ ಜಿ.ಎಸ್. ಶಿವರುದ್ರಪ್ಪ (1926-2013) ನವರೂ ಒಬ್ಬರಾಗಿದ್ದಾರೆ. ಶ್ರೀಯುತರು ವಿಮರ್ಶೆ, ಕಾವ್ಯಮೀಮಾಂಸೆ, ಪ್ರವಾಸ ಕಥನ, ಸಂಶೋಧನೆ ಮೊದಲಾದ ಸಾಹಿತ್ಯ ಪ್ರಕಾರಗಳಿಗೆ ತಮ್ಮ ಕಾಣಿಕೆಯನ್ನು ನೀಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರವನ್ನು ಕಟ್ಟಿ ಬೆಳೆಸಿದ ಯಶಸ್ಸು ಇವರದು. ಈ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಇವರು ಮಾಡಿದ ಹಲವು ಉತ್ತಮ ಕಾರ್ಯಗಳನ್ನು ಮರೆಯುವಂತಿಲ್ಲ. ಇವರ ಬರಹ ಹಾಗೂ ಭಾಷಣ ಎರಡೂ ಪ್ರಭಾವಶಾಲಿಯಾದುದು. ವಿದ್ಯಾರ್ಥಿಗಳ ಪಾಲಿಗಂತೂ ಇವರ ಪಾಠಗಳು ಒಂದು ಮರೆಯಲಾಗದ ರಸಾನುಭವದ ನಿಮಿಷಗಳಾಗಿರುತ್ತಿದ್ದವು. ಇವರು ಬರೆದ ‘ಸೌಂದರ್ಯ ಸಮೀಕ್ಷೆ’ ಎಂಬ ಪ್ರೌಢಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿಯನ್ನು ನೀಡಿತು. ಈ ಲೇಖಕರ ‘ವಿಮರ್ಶೆಯ ಪೂರ್ವ ಪಶ್ಚಿಮ’, ‘ಪರಿಶೀಲನ’, ‘ಸೌಂದರ್ಯ ಸಮೀಕ್ಷೆ’, ‘ಮಾಸ್ಕೋದಲ್ಲಿ ಇಪ್ಪತ್ತೆರಡು ದಿನ’, ‘ಗಂಗೆಯ ಶಿಖರಗಳಲ್ಲಿ’ ಮೊದಲಾದ ಗದ್ಯ ಕೃತಿಗಳು ಓದುಗರ ಮೆಚ್ಚುಗೆಯನ್ನು ಸಂಪಾದಿಸಿಕೊಂಡಿವೆ. ಕವಿಯಾಗಿ ‘ಸಾಮಗಾನ’, ‘ಚೆಲುವು ಒಲವು’, ‘ಗೋಡೆ’, ‘ಸಂಜೆದಾರಿ’, ‘ದೇವಶಿಲ್ಪ’, ‘ಪ್ರೀತಿ ಇಲ್ಲದ ಮೇಲೆ’ ಇತ್ಯಾದಿ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರು ನವೋದಯ ಹಾಗೂ ಸಮನ್ವಯ ಮಾರ್ಗಗಳಲ್ಲಿ ಕವಿತೆಗಳನ್ನು ರಚಿಸಿದ್ದಾರೆ. ಜಿ.ಎಸ್. ಶಿವರುದ್ರಪ್ಪನವರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. 1992ರಲ್ಲಿ ದಾವಣಗೆರೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವರು ಅಧ್ಯಕ್ಷರಾಗಿದ್ದರು. ಕರ್ನಾಟಕ ಸರ್ಕಾರ ಇವರನ್ನು ‘ರಾಷ್ಟ್ರಕವಿ’ ಎಂದು ಕರೆದು ಗೌರವಿಸಿದೆ.

ಆಕರ: ‘ತೆರೆದ ದಾರಿ’.

(ಅ) ಸಾಂದರ್ಭಿಕ ವಿವರಣೆಯನ್ನು ಬಯಸುವ ವಾಕ್ಯಗಳು

೧. ಅವಸರದ ಹೆಜ್ಜೆಯ ಮೇಲೆ ಸರಿವ ಸಾವಿರ ಕೊರಳು.

ಜಿ.ಎಸ್. ಶಿವರುದ್ರಪ್ಪನವರು ರಚಿಸಿರುವ ‘ಮುಂಬೈ ಜಾತಕ’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.

ಕವಿತೆಯ ಆರಂಭದಲ್ಲಿ ‘ಕಂಡದ್ದು’ ಎಂಬುದನ್ನು ವಿವರಿಸುವಾಗ ಕವಿ ಈ ಮೇಲಿನ ವಾಕ್ಯವನ್ನು ರಚಿಸಿರುವರು. ಮುಂಬೈ ನಗರದಲ್ಲಿನ ವಾಹನದಟ್ಟಣೆ ಮತ್ತು ಜನದಟ್ಟಣೆಯನ್ನು ಈ ಮಾತು ವಿವರಿಸುತ್ತದೆ. ಬೆಳಿಗ್ಗೆಯಿಂದ ಸಂಜೆಯ ವರೆಗೂ ರಸ್ತೆಯಲ್ಲಿ ಲಕ್ಷ ಲಕ್ಷ ಚಕ್ರಗಳು ಉರುಳುವುದನ್ನು ಕಾಣಬಹುದು. ಜನರು ಅವಸರವಸವಾಗಿ ತಮ್ಮತಮ್ಮ ಕೆಲಸಗಳಿಗೆ ನಡೆಯುತ್ತಿರುವುದನ್ನು ಕವಿ ‘ಅವಸರದ ಹೆಜ್ಜೆಯ ಮೇಲೆ ಸರಿವ ಸಾವಿರ ಕೊರಳು’ ಎಂದಿದ್ದಾರೆ. ಸ್ವಲ್ಪವೂ ಸಮಯವಿಲ್ಲದ, ಅವಸರದ ಯಾಂತ್ರಿಕ ಬದುಕನ್ನು, ಜನನಿಬಿಡತೆಯನ್ನು ಕವಿ ಇಲ್ಲಿ ಸಂಕೇತಿಸಿದ್ದಾರೆ.

೨. ರಸ್ತೆ ದಾಟುವಾಗೆಚ್ಚರಿಕೆ.

ಜಿ.ಎಸ್. ಶಿವರುದ್ರಪ್ಪರವರು ರಚಿಸಿರುವ ‘ಮುಂಬೈ ಜಾತಕ’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ. ಮುಂಬೈಯಂತಹ ಮಹಾನಗರದಲ್ಲಿ ಹುಟ್ಟುವ ಮಕ್ಕಳು ಕಲಿತದ್ದು-ಕಲಿಯಬೇಕಾದ್ದು ನಗರದಲ್ಲಿ ಸಂಚರಿ ಬೆಲೆಗಾಗುವ ವಿಚಾರ ಮಾತ್ರ ಕ್ಕೂ ನೀುವುದನ್ನು ಕಲಿಯಬೇಕು ಪಾದಚಾರಿಗಳಿಗಾಗಿ ಇರುವ ಪಥದಲ್ಲೇ ಸಂಚರಿಸಬೇಕು. ರಸ್ತೆಯಲ್ಲಿ ಸವಾ ಲಕ್ಷ್ಯ ಚಿತ್ರಗಳು ಉರುಳುತ್ತಿರುತ್ತವೆಯಾದ್ದರಿಂದ ರಸ್ತೆ ದಾಟುವಾಗ ಎಚ್ಚರದಿಂದಿರುವುದನ್ನು ಕಲಿಯಬೇಕು. ಇಲ್ಲದಿದ್ದರೆ ಜೀವಕ್ಕೆ ಸಂಚಕಾರ ಒದಗುತ್ತದೆಂಬುದನ್ನು ವಿವರಿಸುವಾಗ ಕವಿ ಈ ಮೇಲಿನ ವಾಕ್ಯವನ್ನು ಹೇಳಿದ್ದಾರೆ.

೩. ರಸ್ತೆಯಂಚಿನಲ್ಲೇ ಕೈಹಿಡಿದು ನಡೆಸಿದವಳು.

ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ಮುಂಬೈ ಜಾತಕ” ಎಂಬ ಕವಿತೆಯಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸಬಹುದು.

ಮುಂಬೈ ನಗರದಲ್ಲಿ ಹುಟ್ಟಿ ಬೆಳೆಯುವ ಮಗುವಿನ ತಾಯಿಯ ವಿಚಾರವನ್ನು ವಿವರಿಸುವಾಗ ಕವಿಯು ಈ ಮೇಲಿನ ವಾಕ್ಯವನ್ನು ರಚಿಸಿದ್ದಾರೆ. ತಾಯಿ ಯಾಂತ್ರಿಕವಾಗಿ ತನ್ನ ತಾಯ್ತನವನ್ನು ನಿರ್ವಹಿಸಿದ್ದಾಳೆ, ಇರುವ ಒಂದಿಂಚು ಕೋಣೆಯಲ್ಲಿ ಹೊರಲೋಕವನ್ನು ಮಗುವಿಗೆ ಪರಿಚಯಿಸಿಕೊಟ್ಟಿದ್ದಾಳೆ. ಮಾತ್ರವಲ್ಲ, ಸಾವಿರ ಗಾಲಿ ಉರುಳಿ ಹೊರಳುವ ರಸ್ತೆಯಲ್ಲಿ ಮಗುವಿನ ಕೈಹಿಡಿದು ಆಂಚಿನಲ್ಲಿ ನಡೆಯುವುದನ್ನು ಕಲಿಸಿದ್ದಾಳೆ. ಹೊರಲೋಕದ ಬಗ್ಗೆ ಎಚ್ಚರಿಕೆ ನೀಡಿದ್ದಾಳೆ. ಇಷ್ಟು ಮಾತ್ರವೇ ಆ ಅಸಹಾಯಕ ತಾಯಿಯಿಂದ ಮಾಡಲು ಸಾಧ್ಯವಾಗಿರುವುದು. ಇಷ್ಟನ್ನು ಬಿಟ್ಟರೆ ತಾಯಿಯ ಇನ್ನಾವ ಸಂಗತಿಗಳೂ ಮಗುವಿಗೆ ನೆನಪಿಗೂ ಬರುತ್ತಿಲ್ಲ.

೪. ಕುಳಿತು ಕೆಮ್ಮುವ ಪ್ರಾಣಿ.

ಜಿ.ಎಸ್. ಶಿವರುದ್ರಪ್ಪನವರು ರಚಿಸಿರುವ ‘ಮುಂಬೈ ಜಾತಕ’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವಿದೆ. ತಂದೆಯ ವಿಚಾರವನ್ನು ತಿಳಿಸುವಾಗ ಕವಿ ಈ ಮೇಲಿನ ವಾಕ್ಯವನ್ನು ರಚಿಸಿದ್ದಾರೆ.

ಮಗು ತಂದೆಯನ್ನು ನೋಡುವ ಸಂದರ್ಭಗಳೇ ಅಪರೂಪ, ಏಕೆಂದರೆ ಆತ ಮಗು ಏಳುವ ಮೊದಲೇ ಮನೆಬಿಟ್ಟು ಕೆಲಸಕ್ಕೆ ತೆರಳಿದವನು. ಹಿಂದಿರುಗುವುದು ತಡರಾತ್ರಿ ಮಗು ಮಲಗಿದ ಮೇಲೆ. ಆತ ಕಾಣಿಸಿಕೊಳ್ಳುವುದು ರಜಾ ದಿನಗಳಲ್ಲಿ ಮಾತ್ರ, ಅದೂ ‘ಕುಳಿತು ಕೆಮ್ಮುವ ಪ್ರಾಣಿ’ಯಾಗಿ. ತಂದೆ ಮಗುವಿನ ನಡುವೆ ಇರುವ ಅಪರಿಚಿತತೆ ಹಾಗೂ ‘ಪ್ರಾಣಿ’ಯೆಂದು ಭಾವಿಸುವ ಬಾಂಧವ್ಯರಾಹಿತ್ಯ ಮನೋಭಾವವನ್ನು ಕವಿ ಈ ಮೇಲಿನ ವಾಕ್ಯದ ಮೂಲಕ ಚಿತ್ರಿಸಿದ್ದಾರೆ.

೫. ನೂರಾರು ಜಾಹೀರಾತುಗಳು ತಲೆಗೆ ತುರುಕಿದ್ದು.

ಜಿ.ಎಸ್. ಶಿವರುದ್ರಪ್ಪನವರು ರಚಿಸಿರುವ ‘ಮುಂಬೈ ಜಾತಕ’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.

‘ಕಲಿತದ್ದು’ ಏನೇನನ್ನು ಎಂಬ ಪ್ರಶ್ನೆಗೆ ಉತ್ತರವಾಗಿ ಈ ಮೇಲಿನ ವಾಕ್ಯವಿದೆ. ಜಾಹೀರಾತುಗಳು ಬೆಳೆದ ಮಕ್ಕಳ ಪಾಲಿಗೆ ವೇದವಾಕ್ಯವಾಗಿರುತ್ತದೆ. ಜಾಹೀರಾತುಗಳು ತಿಳಿಸುವ ಉತ್ಪನ್ನಗಳೇ ಮಕ್ಕಳಿಗೆ ಬೇಕು. ಆದ್ದರಿಂದ ಜಾಹೀರಾತೇ ತಲೆಯ ತುಂಬಾ ಇದ್ದು, ಅದನ್ನೇ ಜೀವನ ವಿಧಾನವಾಗಿರಿಸಿಕೊಳ್ಳುವ ನಗರಜೀವನದ ಮಕ್ಕಳ ಮನೋಭಾವವನ್ನು ಕವಿ ಇಲ್ಲಿ ಈ ಮೇಲಿನ ವಾಕ್ಯದ ಮೂಲಕ ವಿವರಿಸಿ ಹೇಳಿದ್ದಾರೆ.

೬. ಬಟ್ಟೆಯಲ್ಲಿ ಮೈ ತುರುಕಿ ಓಡುವುದು

ಜಿ.ಎಸ್. ಶಿವರುದ್ರಪ್ಪನವರು ರಚಿಸಿರುವ ‘ಮುಂಬೈ ಜಾತಕ’ ಕವಿತೆಯ ‘ಜೀವನ’ ಎಂಬ ಭಾಗದಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸುತ್ತೇವೆ. ನಗರ ಜೀವನದ ಅವಸರದ ಓಟವನ್ನು ಈ ಮೇಲಿನ ಮಾತು ಪರಿಣಾಮಕಾರಿಯಾಗಿ ವಿವರಿಸಿದೆ.

ನಗರ ಜೀವನದಲ್ಲಿ ಬೆಳಿಗ್ಗೆ ಶುರುವಾಗುವುದೇ ಅವಸರದಲ್ಲಿ. ಎದ್ದೊಡನೆ ರೈಲೋ, ಬಸ್ಸನ್ನೋ ಹಿಡಿದು ಕೆಲಸಕ್ಕೆ ಓಡಬೇಕು. ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ವಾಹನದಟ್ಟಣೆಯ ಸಂಚಾರದಲ್ಲಿ ಸಮಯಕ್ಕೆ ಸರಿಯಾಗಿ ತಲುಪುವುದೇ ಕಷ್ಟದ ಕೆಲಸ. ನಿಧಾನವಾಗಿ ಬಟ್ಟೆ ಹಾಕಿಕೊಳ್ಳುವ ವ್ಯವಧಾನವಿಲ್ಲ. ಅಲ್ಲದೆ ಮೈಗೆ ಬಟ್ಟೆ ಹಾಕುವ ಬದಲು, ಮೈಯನ್ನೇ ಬಟ್ಟೆಯಲ್ಲಿ ತುರುಕಿ ಓಡುವುದು ಎಂದಿದ್ದಾರೆ ಕವಿ ಜಿ.ಎಸ್ಸೆ.ಸ್. ಇದು ಅತ್ಯಂತ ವ್ಯಂಗ್ಯದ ನುಡಿಯಾಗಿದೆ. ಸ್ವಂತಕ್ಕೆ ಯೋಚಿಸಲು ಸಮಯವಿಲ್ಲದ ನಗರದ ಅವಸರದ ಜೀವನ ಬೇಕೆ? ಇದೂ ಒಂದು ಬದುಕೆ? ಎಂಬೆಲ್ಲಾ ಪ್ರಶ್ನೆಗಳನ್ನು ಈ ವಾಕ್ಯ ತನ್ನಲ್ಲಿ ಹುದುಗಿಸಿಕೊಂಡಿದೆ.

ಹೆಚ್ಚುವರಿ ಪ್ರಶ್ನೆಗಳು:

೭. ಎಲ್ಲಾದರೂ ಸರಿಯೆ, ಬೇರೂರು, ಹೀರು.

ಜಿ.ಎಸ್. ಶಿವರುದ್ರಪ್ಪನವರು ರಚಿಸಿರುವ ‘ಮುಂಬೈ ಜಾತಕ’ ಎಂಬ ಕವಿತೆಯ ‘ಕಲಿತದು’ ಎಂಬ ಭಾಗದಲ್ಲಿ ಮೇಲಿನ ವಾಕ್ಯವನ್ನು ಕಾಣಬಹುದು.

ಮುಂಬೈ ನಗರದಲ್ಲಿ ಬೆಳೆಯುವ ಮಗುವು ಕಲಿತದ್ದೇನು? ಎಂಬ ಪ್ರಶ್ನೆಗೆ ಉತ್ತರಿಸುತ್ತ ಕವಿಯು ಈ ಮೇಲಿನ ವಾಕ್ಯವನ್ನು ಹೇಳಿದ್ದಾರೆ. ಇಲ್ಲಿ ಬೆಳೆಯುವ ಮಗುವು ಬಾಲ್ಯಸಹಜವಾದ ಆಟ-ಪಾಠಗಳನ್ನು ಕಲಿಯುತ್ತಾ ಬೆಳೆಯದೆ ದಿನನಿತ್ಯ ಒಂದಲ್ಲ ಒಂದು ವ್ಯವಹಾರಕ್ಕಾಗಿ ಕ್ಕೂ ನಿಲ್ಲು, ಪಾದಚಾರಿ ರಸ್ತೆಯಲ್ಲೇ ಓಡಾಡು, ರಸ್ತೆದಾಟುವಾಗೆಚ್ಚರಿಕೆ, ನಿಲ್ಲದೆ ಓಡುತ್ತಲೇ ಇರು. ಎಲ್ಲಾದರೂ ಸರಿ, ಹೇಗಾದರೂ ಸರಿ ಅವರಿವರನ್ನು ತಳ್ಳಿ ಮುನ್ನುಗಿ ಎಲ್ಲೋ ಒಂದು ಕಡೆ ಬೇರೂರು – ಹೀರು ಎಂಬುದನ್ನು ಕಲಿಯಬೇಕಾಗುತ್ತದೆ. ಇಲ್ಲದಿದ್ದರೆ ಮುಂಬೈಯಂತಹ ಮಹಾನಗರದಲ್ಲಿ ನೆಲೆ ಕಂಡುಕೊಳ್ಳುವುದು ಬಹಳ ಕಷ್ಟ. ಹೀಗಾಗಿ ಬಾಲ್ಯದಿಂದಲೇ ಇನ್ನೊಬ್ಬರನ್ನು ತಳ್ಳಿಬೀಳಿಸಿಯಾದರೂ ನಾವು ನೆಲೆ ಕಂಡುಕೊಳ್ಳುವ ಅಮಾನವೀಯವಾದ ರೀತಿನೀತಿಗಳನ್ನು ನಗರ ಜೀವನ ಕಲಿಸಿಬಿಡುತ್ತದೆಂದು ಕವಿ ವಿಷಾದದಿಂದ ವಿವರಿಸಿದ್ದಾರೆ.

೮. ನೀನಾಗಿ ಕಲಿತದ್ದು ಬಲು ಕಡಿಮೆ.

ಜಿ.ಎಸ್. ಶಿವರುದ್ರಪ್ಪನವರು ರಚಿಸಿರುವ ‘ಮುಂಬೈ ಜಾತಕ’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.

ಕವಿತೆಯ ‘ವಿದ್ಯೆ’ ಎಂಬ ಭಾಗದಲ್ಲಿ ಮುಂಬೈ ನಗರದಲ್ಲಿ ಹುಟ್ಟಿ ಬೆಳೆದ ಮಗುವು ಕಲಿಯುವುದಾದರೂ ಏನನ್ನು ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಕವಿಯು ಶಾಲೆ – ಕಾಲೇಜುಗಳು ಕಲಿಸಿದ್ದೇ ವಿದ್ಯೆ, ರಸ್ತೆ ಬದಿಯ ನೂರಾರು ಜಾಹೀರಾತುಗಳು ತಲೆಗೆ ತುರುಕಿದ್ದೇ ಅಭಿರುಚಿ ಎಂಬಂತಾಗಿದ್ದು, ಸ್ವಂತವಾಗಿ ಮಗುವು ಏನನ್ನು ಕಲಿಯುವುದು ಇಲ್ಲ. ಕಲಿತರೂ ಬಲು ಕಡಿಮೆ ಮಾತ್ರ. ಬಸ್‌ನಿಲ್ದಾಣದಲ್ಲಿ ನಿಂತ ಹುಡುಗಿಯರ ಕಡೆಗೆ ಕಣ್ಣಾಡಿಸುವಂತಹ ವಿದ್ಯೆಯನ್ನು ಮಾತ್ರ ತಾನಾಗಿಯೇ ಕಲಿತುಬಿಡುತ್ತದೆ. ಇದನ್ನು ಯಾರೂ ಹೇಳಿಕೊಡಬೇಕಿಲ್ಲ ಎಂಬು ತಮಾಷೆ-ವ್ಯಂಗ್ಯ ಬೆರೆತ ದನಿಯಲ್ಲಿ ಕವಿ ಹೇಳಿದ ಸಂದರ್ಭವಿದಾಗಿದೆ.

(ಆ) ಒಂದು ಅಂಕದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿ)

೧. ಮಗು ಹುಟ್ಟಿದ್ದು ಎಲ್ಲಿ?

ಆಸ್ಪತ್ರೆಯಲ್ಲಿ

೨. ಮುಂಬೈಯಲ್ಲಿ ಬೆಳಗಿನಿಂದ ಸಂಜೆಯತನಕ ಕಾಣುವುದೇನು?

ರಸ್ತೆಯಲ್ಲಿ ಸಂಚರಿಸುವ ಲಕ್ಷ ಚಿತ್ರಗಳು

೩. ಹೊರಲೋಕವನ್ನು ಪರಿಚಯಿಸಿ ಎಚ್ಚರಿಕೆ ಕೊಟ್ಟವಳು ಯಾರು?

ತಾಯಿ

೪. ಕುಳಿತು ಕೆಮ್ಮುವ ಪ್ರಾಣಿ ಯಾರು?

ತಂದೆ

೫. ಮಗು ತಾನಾಗಿ ಕಲಿತದ್ದು ಏನನ್ನು?

ಬಸ್‌ಸ್ಟ್ಯಾಂಡಿನಲ್ಲಿ ನಿಂತ ಬಣ್ಣಗಳ ಕಡೆಗೆ ಕಣ್ಣಾಡಿಸುವುದನ್ನು

೬. ಲಕ್ಷದಾರಿಗಳ ಚದುರಂಗದಾಟ ಯಾವುದು?

ಮುಂಬೈ ನಗರದ ಜೀವನ

೭. ಕನಸು ಬಂಡಿಯ ಕೆಳಗೆ ನಿದ್ರಿಸುವುದು ಹೇಗೆ?

ಹಾಸುಗಂಬಿಯ ಹಾಗೆ ತತ್ತರಿಸುತ್ತಾ

ಹೆಚ್ಚುವರಿ ಪ್ರಶ್ನೆಗಳು:

೮. ಕಾದೂ ಕಾದೂ ತೂಕಡಿಸುವುದು ಯಾರು?

ಮಡದಿ

೯. ರಸ್ತೆಯಂಚಿನಲ್ಲೇ ಕೈ ಹಿಡಿದು ನಡೆಸಿದವಳು ಯಾರು?

ತಾಯಿ

(ಇ) ಎರಡು ಅಂಕಗಳ ಪ್ರಶ್ನೆಗಳು (ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ):

೧. ಮಗು ಹುಟ್ಟಿ, ಬೆಳೆದುದು ಎಲ್ಲಿ?

ಮಗು ಹುಟ್ಟಿದ್ದು ಆಸ್ಪತ್ರೆಯಲ್ಲಿ, ಬೆಳೆದದ್ದು ಬಸ್ಸು, ಟ್ರಾಂ, ಕಾರು, ಟ್ಯಾಕ್ಸಿ, ಎಲೆಕ್ಟ್ರಿಕ್ ಟ್ರೇನುಗಳಲ್ಲಿ.

೨. ಮಗು ಏನನ್ನು ಕುಡಿದು ಬೆಳೆಯುವುದು?

ಮಗು ಕುಡಿದು ಬೆಳೆಯುವುದು ಕಾಣದೆಮ್ಮೆಯ ಕೆಚ್ಚಲು ಕಳಿಸಿದ ಬಾಟ್ಲಿಯ ಹಾಲನ್ನು, ಜೊತೆಗೆ ಗ್ರೈಪ್ ಸಿರಪ್, ಹಾರ್ಲಿಕ್ಸ್ ಇತ್ಯಾದಿಗಳನ್ನು.

೩. ಮಗು ಏನೇನು ಕಲಿಯಿತು?

ಮಗು ಕಲಿತದ್ದು ಕ್ಯೂ ನಿಲ್ಲುವುದನ್ನು, ಫುಟ್‌ಪಾತಿನಲ್ಲೇ ಸಂಚರಿಸಬೇಕೆಂಬುದನ್ನು ರಸ್ತೆ ದಾಟುವಾಗ ಎಚ್ಚರದಿಂದಿರ ಬೇಕೆಂಬುದನ್ನು ಎಲ್ಲಿಯೂ ನಿಲ್ಲದೆ ಅವರಿವರ ತಳ್ಳಿ ಮುನ್ನುಗ್ಗಿ ಬೇರೂರಬೇಕೆಂಬುದನ್ನು.

೪. ಮಗುವಿನ ಪಾಲಿಗೆ ತಾಯಿ ಹೇಗಿದ್ದಾಳೆ?

ಮಗುವಿನ ಪಾಲಿಗೆ ತಾಯಿ, ಇರುವ ಒಂದಿಂಚು ಕೋಣೆಯಲ್ಲಿ ಜಗತ್ತನ್ನು ತೋರಿಸಿ ಎಚ್ಚರಿಕೆ ಕೊಟ್ಟವಳಾಗಿಯೂ ಸಾವಿರ ಗಾಲಿ ಉರುಳುವ ರಸ್ತೆಯಲ್ಲಿ ಕೈಹಿಡಿದು ನಡೆಸಿದವಳಾಗಿಯೂ ಆಗಿದ್ದಾಳೆ.

೫. ತಂದೆ ಮಗುವಿಗೆ ಕಾಣಿಸಿಕೊಳ್ಳುವ ಬಗೆ ಹೇಗೆ?

ತಂದೆ ಮಗುವಿಗೆ ಅಪರಿಚಿತ. ಬೆಳಿಗ್ಗೆ ಹೋದರೆ ರಾತ್ರಿ ಹಿಂದಿರುಗುವ, ರಜಾ ದಿನಗಳಲ್ಲಿ ಕುಳಿತು ಕೆಮ್ಮುವ ಪ್ರಾಣಿಯಾಗಿ ಕಂಡುಬಂದಿದ್ದಾನೆ.

೬. ಮಗು ಕಲಿತ ವಿದ್ಯೆಗಳು ಯಾವುವು?

ಶಾಲೆ-ಕಾಲೇಜುಗಳಲ್ಲಿ, ಜಾಹೀರಾತುಗಳಲ್ಲಿ ಕಲಿತ್ತಿದ್ದರ ಜೊತೆಗೆ ರೇಡಿಯೋ ಜಾಹೀರಾತಿನ ಶಿಫಾರಸ್ಸುಗಳು. ತಾನಾಗಿ ಕಲಿತದ್ದೆಂತರೆ ಬಸ್‌ಸ್ಟಾಪಿನಲ್ಲಿ ನಿಂತ ಹುಡುಗಿಯರನ್ನು ನೋಡುವುದು – ಇದೇ ಮಗು ಕಲಿತ ವಿದ್ಯೆಗಳು.

೭. ಮುಂಬೈನ ಅವಸರದ ಜೀವನಚಿತ್ರಕ್ಕೆ ಎರಡು ಉದಾಹರಣೆ ನೀಡಿ.

ಬೆಳಗ್ಗೆ ಎದ್ದರೆ ಬಟ್ಟೆಯಲ್ಲಿ ಮೈತುರುಕಿ ಓಡುವುದು, ರೈಲನ್ನೋ, ಬಸ್ಸನ್ನೋ ಹಿಡಿದು ಸಂಚರಿಸುವುದು, ಯಾರದೋ ಕೈಗೊಂಬೆಯಾಗಿ ಬದುಕುವುದು – ಇತ್ಯಾದಿಗಳು.

ಹೆಚ್ಚುವರಿ ಪ್ರಶ್ನೆಗಳು:

೮. ತತ್ತರಿಸುತ್ತ ಮಲಗುವುದು ಎಲ್ಲಿ?

ಬಾಡಿಗೆ ಮನೆಯ ನೆರಳಿನ ಕೆಳಗೆ, ಸಾವಿರ ಗಾಲಿಯುಜ್ಜುವ ಬಂಡಿಯ ಕೆಳಗೆ ಹಾಸುಗಂಬಿಯ ಹಾಗೆ ತತ್ತರಿಸುತ್ತಾ ಮಲಗುವುದು.

(ಈ) ನಾಲ್ಕು ಅಂಕಗಳ ಪ್ರಶ್ನೆಗಳು (ಐದಾರು ವಾಕ್ಯಗಳಲ್ಲಿ ಉತ್ತರಿಸಿ):

೧. ‘ಮುಂಬೈ ಜಾತಕ’ದಲ್ಲಿ ಮಕ್ಕಳ ಬಾಲ್ಯದ ಚಿತ್ರಣ ಹೇಗೆ ನಿರೂಪಿತವಾಗಿದೆ?

ಜಿ.ಎಸ್. ಶಿವರುದ್ರಪ್ಪನವರ ‘ಮುಂಬೈ ಜಾತಕ’ ಕವಿತೆಯ ಆರಂಭಿಕ ಭಾಗದಲ್ಲಿ ನಗರದಲ್ಲಿ ಹುಟ್ಟಿ ಬೆಳೆಯುವ ಮಕ್ಕಳ ಬಾಲ್ಯದ ಚಿತ್ರಣವಿದೆ. ಇಲ್ಲಿ ಹುಟ್ಟುವ ಮಗುವಿಗೆ ಹೇಳಿಕೊಳ್ಳಲು ಒಂದು ಊರು, ಸ್ಥಳದ ಗುರುತಿಲ್ಲ. ಆಸ್ಪತ್ರೆಯಲ್ಲಿ ಎಂಬ ಕೃತಕವಾದ ಉತ್ತರವಿದೆ. ಮಕ್ಕಳು ಕುಡಿಯುವುದು ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟಿಯ ಹಾಲು ಎಮ್ಮೆಯನ್ನಾಗಲಿ, ಕರೆಯುವ ಕೈಗಳನ್ನಾಗಲಿ ಕಾಣುವ ಸಂದರ್ಭವಿರದ ಅಪರಿಚಿತತೆ ಎದ್ದು ಕಾಣುತ್ತದೆ. ಉಳಿದಂತೆ ಅವು ಕುಡಿಯುವುದು ಹೊಟ್ಟೆನೋವು-ಅಜೀರ್ಣ ಕಾಡಿದಾಗ ಗ್ರೈಫ್‌ಸಿರಪ್ ಮತ್ತು ಶಕ್ತಿಗಾಗಿ ಹಾರ್ಲಿಕ್ಸ್, ಕಾಣುವುದು ರಸ್ತೆಯ ಮೇಲೆ ಚಲಿಸುವ ಲಕ್ಷಚಕ್ರದ ಉರುಳು, ಜನನಿಬಿಡತೆಯ ಅವಸರದಲ್ಲಿ ಸರಿಯುವ ಸಾವಿರ ಕೊರಳನ್ನು ಬಾಲ್ಯದಲ್ಲಿ ಆಡಿ ಬೆಳೆಯಲು, ಸ್ನೇಹಿತರೊಂದಿಗೆ ನಲಿಯಲು ನಗರದಲ್ಲಿ ಸ್ಥಳವೇ ಇಲ್ಲ. ಪ್ರಕೃತಿಯೊಂದಿಗಿನ ಒಡನಾಟವೇ ಇಲ್ಲದೆ, ಕೃತಕ ಪರಿಸರದಲ್ಲಿ ಬದುಕನ್ನು ಸಾಗಿಸಲು ಆಶಕ್ತವಾದ ವಾತಾವರಣದಲ್ಲಿ ಮಕ್ಕಳು ಬಾಲ್ಯವನ್ನು ಕಳೆಯುವ ಚಿತ್ರಣವನ್ನು ಕವಿ ಇಲ್ಲಿ ನೀಡಿದ್ದಾರೆ.

೨. ತಂದೆ-ತಾಯಿಗಳು ಮಗುವಿಗೆ ಗೋಚರಿಸುವ ಬಗೆಯನ್ನು ವಿವರಿಸಿ.

‘ಮುಂಬೈ ಜಾತಕ’ ಕವಿತೆಯಲ್ಲಿ ಚಿತ್ರಣಗೊಂಡಿರುವ ಮಗುವಿನ ತಂದೆ-ತಾಯಿಗಳು ತಮ್ಮ ಕೃತಕ ಜವಾಬ್ದಾರಿಯನ್ನು ನಿರ್ವಹಿಸುವ ಯಂತ್ರಗಳಂತಿದ್ದಾರೆ. ಮಕ್ಕಳೊಂದಿಗೆ ವಾತ್ಸಲ್ಯಭರಿತ ಒಡನಾಟದ ಚಿತ್ರಣವೇ ಇಲ್ಲಿಲ್ಲ. ತಾಯಿಯು ಇರುವ ಒಂದಿಂಚು ಕೋಣೆಯಲ್ಲೇ ಹೊರಲೋಕವನ್ನು ಪರಿಚಯಿಸುವ, ಎಚ್ಚರಿಸುವ, ಸಾವಿರ ಗಾಲಿಗಳು ಹೊರಳುವ ರಸ್ತೆಯಂಚಿನಲ್ಲಿ ಕೈಹಿಡಿದು ನಡೆಸುವ ಕೆಲಸಕ್ಕಷ್ಟೇ ಸೀಮಿತಳಾಗಿರುವ ಅಸಹಾಯಕಳಾಗಿ ಕಾಣುತ್ತಾಳೆ. ಇನ್ನು ತಂದೆಯೊಂದಿಗಿನ ಒಡನಾಟವೂ ಮಗುವಿಗಿಲ್ಲ. ಬೆಳಗ್ಗಿನಿಂದ ಸಂಜೆಯವರೆಗೂ ಕೆಲಸದ ನೆಪದಲ್ಲಿ ಕಣ್ಮರೆಯಾಗುವ ಆತ ಮಗುವಿಗೆ ಕಾಣಿಸಿಕೊಳ್ಳುವುದು ‘ರಜಾ ದಿನಗಳಲ್ಲಿ ಕುಳಿತು ಕೆಮ್ಮುವ ಪ್ರಾಣಿ’ಯಾಗಿ ಮಾತ್ರ. ನಗರ ಜೀವನದ ಯಾಂತ್ರಿಕತೆಯಲ್ಲಿ ತಂದೆ-ತಾಯಿಗಳೂ ಮಗುವಿನೊಂದಿಗೆ ಯಾಂತ್ರಿಕವಾಗಿ ಕರ್ತವ್ಯ ನಿರ್ವಹಿಸುವ ದುರಂತವನ್ನು ಇಲ್ಲಿ ಕಾಣಬಹುದಾಗಿದೆ.

೩. ಮಗು ಕಲಿತದ್ದನ್ನು ಮತ್ತು ವಿದ್ಯಾಭ್ಯಾಸ ಮಾಡುವ ವಿವರಗಳನ್ನು ವಿಶ್ಲೇಷಿಸಿ.

ಮುಂಬೈನಗರದಲ್ಲಿ ಬೆಳೆಯುವ ಮಗು ಕಲಿಯುವುದು ಸುಸಂಸ್ಕೃತ ಆಚಾರ-ವಿಚಾರ, ಆಟ-ಪಾಠ, ಕಥೆ. ಮೌಲ್ಯಗಳನ್ನಲ್ಲ. ಅದನ್ನೆಲ್ಲ ಮಗುವಿಗೆ ಹೇಳಿಕೊಡಲು ತಂದೆ-ತಾಯಿಗಳಿಗಾಗಲಿ, ಇತರರಿಗಾಗಲಿ ಬಿಡುವಿದ್ದರಲ್ಲವೇ? ಬೃಹತ್ ನಗರದಲ್ಲಿ ಬಾಳಿ ಬದುಕಲು ಬೇಕಾಗಿರುವುದು ಚಾಣಾಕ್ಷತನ ಮಾತ್ರ. ಹಾಗಾಗಿ ಮಗು ಕ್ಯೂ ನಿಲ್ಲುವುದನ್ನು ಫುಟ್ಪಾತಿನಲ್ಲಿ ಸಂಚರಿಸಿ ಗುರಿ ತಲುಪುವುದನ್ನು ರಸ್ತೆಯನ್ನು ಎಚ್ಚರದಿಂದ ದಾಟುವುದನ್ನು ಎಲ್ಲಿಯೂ ನಿಲ್ಲದೆ ಅವರಿವರ ತಳ್ಳಿ ಮುನ್ನುಗ್ಗಿ ಬೇರೂರುವುದನ್ನು ಮಾತ್ರ ಕಲಿಯುತ್ತದೆ. ಇನ್ನು ವಿದ್ಯೆಯೂ ಅಷ್ಟೇ, ಶಾಲಾ-ಕಾಲೇಜುಗಳಲ್ಲಿ ಕಲಿಯುವುದರ ಜೊತೆಗೆ ಜಾಹೀರಾತುಗಳಲ್ಲಿ, ರೇಡಿಯೋದಲ್ಲಿ ಮಾಡಿದ ಶಿಫಾರಸ್ಸುಗಳಲ್ಲಿರುವುದನ್ನು ತಲೆಗೆ ತುಂಬಿಕೊಂಡು ಬೆಳೆಯಬೇಕು. ಸ್ವಂತವಾಗಿ ಏನನ್ನೂ ಕಲಿಯುವ ಅವಕಾಶವೇ ಇಲ್ಲಿಲ್ಲ. ಕೊನೆಯವರೆಗೂ ಇತರರ ಕೈಗೊಂಬೆಯಾಗಿ ಬಾಳುವುದನ್ನಷ್ಟೇ ಇಲ್ಲಿ ಕಲಿಯಬೇಕಾಗಿರುವುದನ್ನು ಕವಿ ಚಿತ್ರಿಸಿದ್ದಾರೆ.

೪. ನಗರ ಜೀವನದ ಯಾಂತ್ರಿಕ ವಿವರಗಳು ಕವಿತೆಯಲ್ಲಿ ಹೇಗೆ ಚಿತ್ರಿತಗೊಂಡಿದೆ?

ನಗರ ಜೀವನದ ಯಾಂತ್ರಿಕತೆ ಹುಟ್ಟಿದಂದಿನಿಂದಲೂ ಅವರಿಸಿಕೊಳ್ಳುತ್ತದೆ. ಕವಿತೆಯಲ್ಲಿ ಚಿತ್ರಣಗೊಂಡಿರುವ ಬಾಲ್ಕ ಜೀವನ, ವಿದ್ಯಾರ್ಥಿ ಜೀವನ, ಸಾಂಸಾರಿಕ ಜೀವನ, ಯಾವ ವಿವರಗಳಲ್ಲಿಯೂ ಜೀವಂತಿಕೆಯೇ ಇಲ್ಲ. ಜೀವನೋತ್ಸಾಹವೂ ಇಲ್ಲ. ಬಾಲ್ಯದಲ್ಲಿಯೇ ಹೇಗಾದರೂ ಅವರಿವರನ್ನು ತಳ್ಳಿ ಮುನ್ನುಗ್ಗುವ, ಬೇರೂರಿ ನಿಲ್ಲುವ ಚಾಣಾಕ್ಷತನ ಕಲಿಯಬೇಕು. ಬಾಲ್ಕದ ಸಮೃದ್ಧ ಭಾವಕೋಶದ ಬೆಳವಣಿಗೆಯ ಅವಕಾಶದಿಂದ ಮಕ್ಕಳು ವಂಚಿತರು. ಯೌವನದಲ್ಲೂ ಈ ಕೃತಕತೆ ಮುಂದುವರೆಯುತ್ತದೆ. ಹೀಗೆ ಬೆಳೆದು, ಮದುವೆಯಾಗಿ, ಸಂಸಾರಿಯಾದ ಮೇಲೂ ಇತರರ ಕೈಗೊಂಬೆಯಾಗಿಯೇ – ಕೊನೆಯವರೆಗೂ ಬಾಳಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಮನುಷ್ಯ-ಸಹಜ ಸಂಬಂಧಗಳಿಗೆ ಅವಕಾಶವೇ ಇಲ್ಲದ, ಬರೀ ಕೃತಕ ಜೀವನದ ಜಾಡನ್ನು ತುಳಿದು ಮುನ್ನಡೆಯುವ ಯಂತ್ರವಾಗಿ ಇಲ್ಲಿನ ವ್ಯಕ್ತಿಯ ಬದುಕು ಚಿತ್ರಣಗೊಂಡಿರುವುದು ನಗರ ಜೀವನದ ಯಾಂತ್ರಿಕತೆಯ ವಿವರಗಳಿಗೆ ಕನ್ನಡಿ ಹಿಡಿದಂತಿದೆ.

ಭಾಷಾಭ್ಯಾಸ:

೧. ನಿಲ್ಲದಿರು, ತಳ್ಳದಿರು, ಕಾಣದಿರು – ಮುಂತಾದ ನಿಷೇಧಾರ್ಥಕ ಪದಗಳನ್ನು ಗಮನಿಸಿರಿ.

೨. ಬಸ್ಸು, ಟ್ರಾಂ, ಕಾರು, ಟ್ಯಾಕ್ಸಿ, ಎಲೆಕ್ಟ್ರಿಕ್ ಟ್ರೇನು, ಬಾಟ್ಲಿ – ಮುಂತಾದ ಅನ್ಯದೇಶ ಪದಗಳನ್ನು ಗಮನಿಸಿರಿ. ಕವಿತೆಯಲ್ಲಿರುವ ಇಂತಹ ಪದಗಳನ್ನು ಪಟ್ಟಿಮಾಡಿ.

ಗ್ರೇಪ್ ಸಿರಪ್, ಹಾರ್ಲಿಕ್ಸ್, ಕ್ಯೂ, ಫುಟ್‌ಪಾತ್, ರೇಡಿಯೋ ಸಿಲೋನ್, ಶಿಫಾರಸ್ಸು, ಬಸ್‌ಸ್ಟಾಪ್, ರೈಲು, ಬಸ್ಸು – ಇತ್ಯಾದಿ.

೩. ಬೆಳಗಿಂದ, ನಡೆಸಿದವಳು, ಬಸ್‌ಸ್ಟಾಪಿನಲ್ಲಿ – ಇವುಗಳ ವಿಭಕ್ತಿ ಪ್ರತ್ಯಯಗಳನ್ನು ಗುರುತಿಸಿ, ವಿಭಕ್ತಿಯನ್ನು ಹೆಸರಿಸಿ.

ಬೆಳಗಿಂದ – ಇಂದ – ತೃತೀಯಾ ವಿಭಕ್ತಿ

ನಡೆಸಿದವಳು – ಉ -ಪ್ರಥಮಾ ವಿಭಕ್ತಿ

ಬಸ್‌ಸ್ಟಾಪಿನಲ್ಲಿ – ಅಲ್ಲಿ – ಸಪ್ತಮೀ ವಿಭಕ್ತಿ

೪) ಕಳುಹಿಸಿದ, ಹಿಡಿಯುವುದು, ತತ್ತರಿಸುತ್ತಾ – ಇವುಗಳ ಕಾಲಸೂಚಕಗಳನ್ನು ಗುರುತಿಸಿ.

ಕಳುಹಿಸಿದ – ಭೂತಕಾಲ

ಹಿಡಿಯುವುದು – ಭವಿಷ್ಯತ್ಕಾಲ

ತತ್ತರಿಸುತ್ತಾ – ವರ್ತಮಾನಕಾಲ.

ಕೆಳಗಿನ ಪದ್ಯಗಳ ಭಾವಾರ್ಥವನ್ನು ಬರೆಯಿರಿ:

೧. ತಾಯಿ : ಸಾವಿರ ಗಾಲಿ ಉರುಳಿ ಹೊರಳುವ ರಸ್ತೆಯಂಚಿನಲ್ಲೇ

ಕೈ ಹಿಡಿದು ನಡೆಸಿದವಳು, ಇರುವ ಒಂದಿಂಚು

ಕೋಣೆಯಲ್ಲೇ ಹೊರಲೋಕವನ್ನು ಪರಿಚಯಿಸಿ

ಎಚ್ಚರಿಕೆ ಕೊಟ್ಟವಳು.

ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಬರೆದಿರುವ ‘ಮುಂಬೈ ಜಾತಕ’ ಎಂಬ ಪದ್ಯದಿಂದ ಈ ಮೇಲಿನ ಪದ್ಯಭಾಗವನ್ನು ಆಯ್ದುಕೊಳ್ಳಲಾಗಿದೆ. ಮುಂಬೈನಲ್ಲಿ ಬೆಳೆಯುತ್ತಿರುವ ಮಗುವಿನ ಪಾಲಿಗೆ ತಾಯಿ ಹೇಗೆ ಕಾಣಿಸುತ್ತಾಳೆ ಎಂಬುದನ್ನು ಇಲ್ಲಿ ಚಿತ್ರಿಸಲಾಗಿದೆ.

ತಾಯಿಯು ಮಗುವನ್ನು ಸಾವಿರ ಗಾಲಿ ಉರುಳಿ ಹೊರಳುವ ರಸ್ತೆಯಂಚಿನಲ್ಲೇ ಕೈ ಹಿಡಿದು ಜೋಪಾನ ವಾಗಿ ಮುನ್ನಡೆಸಿದ್ದಾಳೆ. ಮನೆ ತುಂಬಾ ಪುಟ್ಟದು. ಒಂದಿಂಚಿನ ಕೋಣೆಯೇ ಮನೆ. ತಾಯಿ ಆ ಮನೆಯಲ್ಲೇ ಮಗುವನ್ನು ಜೋಪಾನವಾಗಿ ಬೆಳೆಸಿ, ಹೊರಲೋಕವನ್ನು ಮಗುವಿಗೆ ಪರಿಚಯಿಸಿ ಎಚ್ಚರಿಕೆ ಕೊಟ್ಟಿದ್ದಾಳೆ.

ನಗರದ ಒತ್ತಡದ ಬದುಕು ಹೇಗಿದೆಯೆಂದರೆ, ತಾಯಿಯನ್ನು ಮಗು ಕಾಣುವ ಚಿತ್ರವನ್ನು ಗಮನಿಸಿದರೆ ಅರ್ಥವಾಗುತ್ತವೆ. ತಾಯಿ ಕಥೆಹೇಳಿದ, ಚಂದಮಾಮನನ್ನು ತೋರಿಸಿದ. ಲಾಲಿಹಾಡಿ ಮುದ್ದು ಮಾಡಿದ ಯಾವ ನೆನಪೂ ಮಗುವಿಗಿಲ್ಲ. ಬದಲಿಗೆ ಆಕೆ ಯಾಂತ್ರಿಕವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿರುವ ವಿವರ ಮಾತ್ರ ಲಭ್ಯವಿದೆ. ಕರುಳುಬಳ್ಳಿಯ ಸಹಜ ಬಾಂಧವ್ಯದ ಮಧುರ ನೆನಪುಗಳಿಗೆ ಮುಂಬೈನ ಒತ್ತಡದಲ್ಲಿ ಬದುಕಿನಲ್ಲಿ ಅಸ್ಪದವೇ ಇಲ್ಲ! ಶೋಚನೀಯ ಬಾಲ್ಯದ ಚಿತ್ರಣವು ಈ ಪದ್ಯಭಾಗದಲ್ಲಿ ಮೂಡಿ ಬಂದಿದೆ.

೨. ವಿದ್ಯೆ : ಶಾಲೆ ಕಾಲೇಜುಗಳು ಕಲಿಸಿದ್ದು; ದಾರಿ ಬದಿ

ನೂರಾರು ಜಾಹೀರಾತುಗಳು ತಲೆಗೆ ತುರುಕಿದ್ದು;

ರೇಡಿಯೊ ಸಿಲೋನ್ ವ್ಯಾಪಾರ ವಿಭಾಗ ಶಿಫಾರಸು ಮಾಡಿದ್ದು

ನೀನಾಗಿ ಕಲಿತದ್ದು ಬಲು ಕಡಿಮೆ, ಬಸ್‌ಸ್ಟಾಪಿನಲ್ಲಿ ನಿಂತ

ಬಣ್ಣಗಳ ಕಡೆಗೆ ಕಣ್ಣಾಡಿಸುವುದೊಂದನ್ನು ಹೊರತು

ರಾಷ್ಟ್ರಕವಿ ಡಾ। ಜಿ.ಎಸ್. ಶಿವರುದ್ರಪ್ಪನವರು ಬರೆದಿರುವ ‘ಮುಂಬೈ ಜಾತಕ’ ಎಂಬ ಕವಿತೆಯಿಂದ ಈ ಮೇಲಿನ ಪದಗುಚ್ಛವನ್ನು ಆಯ್ದುಕೊಳ್ಳಲಾಗಿದೆ.

ಮುಂಬೈಯಂಥ ಬೃಹತ್ ನಗರದಲ್ಲಿ ಹುಟ್ಟಿ ಬೆಳೆಯುವ ಮಕ್ಕಳು ಮಾಡುವ ವಿದ್ಯಾಭ್ಯಾಸ ಯಾವ ಬಗೆಯದೆಂಬುದನ್ನು ವಿವರಿಸುವ ಸಂದರ್ಭದಲ್ಲಿ “ಶಾಲೆ-ಕಾಲೇಜುಗಳಲ್ಲಿ ಎಷ್ಟನ್ನು ಕಲಿಸುತ್ತಾರೋ ಆದಷ್ಟೇ ವಿದ್ಯಾಭ್ಯಾಸ. ಇದರ ಜೊತೆಗೆ ದಾರಿಬದಿಯಲ್ಲಿ ಬಿತ್ತರಿಸಲಾದ ನೂರಾರು ಜಾಹೀರಾತುಗಳು ಮತ್ತು ಸಿಲೋನಿನ ರೇಡಿಯೋ ವ್ಯಾಪಾರ ವಿಭಾಗ ಶಿಫಾರಸ್ಸು ಮಾಡುವುದನ್ನು ಮಗು ಕಲಿಯುತ್ತದೆ. ಮಗುವು ತಾನಾಗಿಯೇ ಕಲಿತದ್ದು ತುಂಬಾ ಕಡಿಮೆ. ಅದೆಂದರೆ, ಬಸ್ ನಿಲ್ದಾಣದಲ್ಲಿ ನಿಂತ ಬಣ್ಣಗಳ ಕಡೆಗೆ ಕಣ್ಣನ್ನು ಹೊರಳಿಸುವುದು ಮಾತ್ರ” ಎಂಬುದು ಈ ಮೇಲಿನ ಪದ್ಯದ ಭಾವಾರ್ಥ.

ನಿಸರ್ಗದಿಂದ ದೂರಾಗಿ ಕಾಂಕ್ರೀಟ್ ಕಾಡಿನಲ್ಲಿ ಬೆಳೆಯುವ ಮಕ್ಕಳು ಕಲಿಸಿದ್ದನ್ನು ಮಾತ್ರ ಕಲಿಯುತ್ತಾರೆ, ಅವರಿಗೆ ತಾವಾಗಿಯೇ ಸ್ವಂತಬಲದಿಂದ ಸೃಜನಾತ್ಮಕವಾಗಿ ಕಲಿಯುವ ಬುದ್ಧಿಶಕ್ತಿ ಇರುವುದಿಲ್ಲವೆಂಬುದನ್ನು ಕವಿ ಇಲ್ಲಿ ವ್ಯಂಗ್ಯವಾಗಿ ಹೇಳಿದ್ದಾರೆ. ಜಾಹೀರಾತುಗಳು ಮಕ್ಕಳ ಅಭಿರುಚಿಯನ್ನು ಪ್ರಭಾವಿಸಿರುತ್ತವೆ ಎಂಬುದನ್ನು ಕವಿ ಇಲ್ಲಿ ಸೂಕ್ಷ್ಮವಾಗಿ ಛೇಡಿಸಿರುವುದು ಸ್ವಾರಸ್ಯಕರ ಸಂಗತಿಯಾಗಿದೆ.

ಕವಿತೆಯ ಸಾರಾಂಶ ಮತ್ತು ವಿಮರ್ಶೆ

ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪನವರು ಬರೆದಿರುವ ʼಮುಂಬೈ ಜಾತಕʼ ಎಂಬ ಕವಿತೆಯು ಕನ್ನಡದ ಶ್ರೇಷ್ಠ ಕವಿತೆಗಳಲ್ಲಿ ಒಂದೆನಿಸಿದೆ. ನಗರಕ್ಕೆ ವಲಸೆ ಬರುವವರ ಸಂಖ್ಯೆ ದಿನೇ ದಿನೇ ವೃದ್ಧಿಸುತ್ತಿರುವ ಇಂದಿನ ದಿನಗಳಲ್ಲಿ ಈ ಕವಿತೆ ಹೆಚ್ಚು ಪ್ರಸ್ತುತವೆನಿಸುತ್ತದೆ. ಮುಂಬೈಯಂತಹ ರಾಕ್ಷಸನಗರದಲ್ಲಿ ವಾಸಿಸುವ ಜನರಲ್ಲಿ ಮಾನವೀಯತೆ ಕಣ್ಮರೆಯಾಗಿ ಒಂದ ಬಗೆಯ ಪರಕೀಯತೆ ಜೀವನದುದ್ದಕ್ಕೂ ಆವರಿಸಿಕೊಳ್ಳುವುದನ್ನು ಈ ಕವಿತೆ ಸುಂದರವಾಗಿ ನಿರೂಪಿಸಿದೆ. ಪ್ರಕೃತಿಯಿಂದ ದೂರವಾದಷ್ಟು ಮನುಷ್ಯ ಹೃದಯವಂತಿಕೆಯಿಂದ ದೂರಾಗಿ ಯಾಂತ್ರಿಕಗೊಳ್ಳುವುದನ್ನು ಈ ಕವಿತೆ ಚಿತ್ರಿಸುತ್ತದೆ.

೧) ಹುಟ್ಟಿದ್ದು : ಆಸ್ಪತ್ರೆಯಲ್ಲಿ

ಬೆಳೆದದ್ದು : ಬಸ್ಸು ಟ್ರಾಂ ಕಾರು ಟಾಕ್ಸಿ ಎಲೆಕ್ನಿಕ್ ಟ್ರೇನುಗಳಲ್ಲಿ

ಕುಡಿದದ್ದು : ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ

ಬಾಟ್ಲಿಯ ಹಾಲು, ಗ್ರೈಪ್ ಸಿರಪ್, ಹಾರ್ಲಿಕ್ಸ್ ಇತ್ಯಾದಿ

ಕಂಡದ್ದು : ಬೆಳಗಿನಿಂದ ಸಂಜೆಯತನಕ ಲಕ್ಷ ಚಕ್ರದ ಉರುಳು

ಅವಸರದ ಹೆಜ್ಜೆಯ ಮೇಲೆ ಸರಿವ ಸಾವಿರ ಕೊರಳು

ಕಲಿತದ್ದು : ಕ್ಯೂ ನಿಲ್ಲು ಫುಟ್‌ಪಾತಿನಲ್ಲೇ ಸಂಚರಿಸು;

ರಸ್ತೆದಾಟುವಾಗೆಚ್ಚರಿಕೆ; ಓಡು, ಎಲ್ಲಿಯೂ

ನಿಲ್ಲದಿರು; ಹೇಗೋ ಅವರಿವರ ತಳ್ಳಿ ಮುನ್ನುಗ್ಗು;

ಎಲ್ಲಾದರೂ ಸರಿಯೆ, ಬೇರೂರು, ಹೀರು.

ಪ್ರಸ್ತುತ ಕವಿತೆಯ ರಚನೆಯು ಸಾಮಾನ್ಯ ಕವಿತೆಯೊಂದರಂತಿರದೆ, ಅರ್ಜಿ ನಮೂನೆಯ ರೀತಿಯಲ್ಲಿದೆ. ‘ಹುಟ್ಟಿದ್ದು’ ಎಂದಾಗ ಎಲ್ಲರೂ ಸಾಮಾನ್ಯವಾಗಿ ನಮ್ಮ ನಮ್ಮ ಹುಟ್ಟೂರಿನ ಹೆಸರನ್ನು ಬರೆಯುತ್ತೇವೆ. ಆದರೆ ಮುಂಬೈನಲ್ಲಿ ವಾಸಿಸುವ ವ್ಯಕ್ತಿ ಆಸ್ಪತ್ರೆಯಲ್ಲಿ’ ಎಂದು ಬರೆದಿದ್ದಾನೆ. ಅಂದರೆ ಹೇಳಿಕೊಳ್ಳಲು ಯಾವ ಊರೂ ಗತಿಯಿಲ್ಲ ಎಂಬುದು ಗೋಚರಿಸುತ್ತದೆ. ಕವಿತೆ ಮುಂದುವರೆದಂತೆ ‘ಬೆಳೆದದ್ದು’ ಎಂಬ ಎರಡನೆಯ ಪ್ರಶ್ನೆ ಎದುರಾಗುತ್ತದೆ. ಅದಕ್ಕೆ ಸಿಗುವ ಉತ್ತರ ಗಮನಿಸಿ, ಮನೆ-ಮಠ-ಕೇರಿಗಳಿರದೆ ಬಸ್ಸು, ಟ್ರಾಂ, ಕಾರು, ಟ್ಯಾಕ್ಸಿ, ಎಲೆಕ್ಟಿಕ್ ಟ್ರೇನುಗಳಲ್ಲಿ ಎಂದಿದೆ. ಇವೆಲ್ಲಾ ಮುಂಬೈ ನಗರದೊಳಗಿನ ಸಂಚಾರಿ ಸಾರಿಗೆಗಳು ಇದರೊಳಗೆ ಓಡಾಡುತ್ತಲೇ ಬೆಳೆದದ್ದು ಎಂದು ಇಲ್ಲಿನ ವ್ಯಕ್ತಿ ಉತ್ತರಿಸುವಾಗ ಅವನಿಗೊಂದು ಐಡೆಂಟಿಟಿಯೂ ಇಲ್ಲದ ಸಂದರ್ಭ ಎದುರಾಗುತ್ತದೆ. ಆತ ಕುಡಿದಿರುವುದು ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟ್ಲಿಯ ಹಾಲು. ಎಮ್ಮೆಯನ್ನೂ ನೋಡಿಲ್ಲ, ಹಾಲನ್ನು ಕರೆಯುವ ಕೈಯನ್ನು ಕಾಣುವ ಸಂದರ್ಭವೇ ಎದುರಾಗಿಲ್ಲ. ಹಾಲಿನ ಜೊತೆಗೆ ಹೊಟ್ಟೆನೋವಾದಾಗ ಗ್ರೈಪ್ ಸಿರಪ್, ಶಕ್ತಿಗಾಗಿ ಹಾರ್ಲಿಕ್ಸ್ಗಳು, ತಾಯ ಎದೆಹಾಲನ್ನು ಕುಡಿದು ಬೆಳೆದೆ ಎನ್ನಲೂ ಧೈರ್ಯವಿಲ್ಲ. ಮಗುವಿನ ಬಾಲ್ಯದ ಪೋಷಣೆಯ, ಪ್ರೀತಿಯ, ಲಾಲಿಯ, ಆಟಪಾಠಗಳ ಚಿತ್ರಣವೇ ಇಲ್ಲಿಲ್ಲ. ಮಗು ಕಂಡಿರುವುದಾದರೂ ಏನನ್ನು? ಚಂದಮಾಮ, ಹಕ್ಕಿ, ಹೂವು, ಇರುವೆ, ಗೊಂಬೆ ಮುಂತಾದವನ್ನಲ್ಲ, ಬದಲಿಗೆ ಮುಂಬೈನಗರದಲ್ಲಿ ಯಾವಾಗಲೂ ಕಾಣಸಿಗುವುದು, ಬೆಳಗಿನಿಂದ ಸಂಜೆಯತನಕ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಮತ್ತು ಅವಸರವಸರವಾಗಿ ತಮ್ಮ ತಮ್ಮ ಕೆಲಸಗಳಿಗೆ ಓಡುತ್ತಿರುವ ಜನರನ್ನು ಮಗು ಇದನ್ನೇ ನೋಡುತ್ತಾ ಬೆಳೆಯಬೇಕು.

ಮಗುವಾಗಿರುವಾಗ ಕಲಿತದ್ದೇನು? ಎಂಬುದು ಮುಂದಿನ ಪ್ರಶ್ನೆ, ಬಾಲ್ಕಲೀಲೆಗಳನ್ನು, ಗೆಳೆಯರೊಂದಿಗಿನ ಒಡನಾಟ, ಆಟ-ಪಾಠ ಯಾವುದೂ ಇಲ್ಲ. ದಿನನಿತ್ಯ ಒಂದಲ್ಲ ಒಂದಕ್ಕೆ ‘ಕ್ಕೂ ನಿಲ್ಲು’, ‘ಪಾದಚಾರಿಗಳು ಸಂಚರಿಸುವಲ್ಲೇ ಓಡಾಡು’, ‘ಅವರಿವರನ್ನು ತಳ್ಳಿಯಾದರೂ ಸರಿಯೇ ನಿನ್ನ ಅಸ್ತಿತ್ವವನ್ನು ಕಂಡುಕೋ’ – ಇವೇ ಮುಂತಾದವು ಬೆಳೆಯುವಾಗಲೇ ಸ್ವಾರ್ಥಿಯಾಗಿ ನೆಲೆನಿಲ್ಲು ಎಂಬುದನ್ನು ಮುಂಬೈ ನಗರವು ಕಲಿಸಿಬಿಡುತ್ತದೆಂಬುದನ್ನು ಕವಿ ಅತ್ಯಂತ ವಿಷಾದದಿಂದ ಇಲ್ಲಿ ಚಿತ್ರಿಸಿದ್ದಾರೆ.

೨. ತಾಯಿ : ಸಾವಿರ ಗಾಲಿ ಉರುಳಿ ಹೊರಳುವ ರಸ್ತೆಯಂಚಿನಲ್ಲೇ

ಕೈ ಹಿಡಿದು ನಡೆಸಿದವಳು, ಇರುವ ಒಂದಿಂಚು

ಕೋಣೆಯಲ್ಲೇ ಹೊರಲೋಕವನು ಪರಿಚಯಿಸಿ

ಎಚ್ಚರಿಕೆ ಕೊಟ್ಟವಳು.

ತಂದೆ : ಬೆಳಗಿಂದ ಸಂಜೆಯ ತನಕ ಕಣ್ಮರೆಯಾಗಿ

ಒಮ್ಮೊಮ್ಮೆ ರಜಾ ದಿನಗಳಲ್ಲಿ ಕಣ್ಣಿಗೆ ಕಂಡು

ಕುಳಿತು ಕೆಮ್ಮುವ ಪ್ರಾಣಿ

ನಗರದ ಕೃತಕ ವಾತಾವರಣದಲ್ಲಿ ಬೆಳೆಯುವ ಮಗುವಿಗೆ ‘ತಾಯಿ’ ಎಂದರೆ ನೆನಪಿಗೆ ಬರುವುದು ಅವಳು ತುತ್ತು ತಿನ್ನಿಸಿ, ಜೋಗುಳ ಹಾಡಿ, ಚಂದ್ರಮಾಮನನ್ನು ತೋರಿದ ಅಕ್ಕರೆಯ ವಾತ್ಸಲ್ಯದ ಚಿತ್ರಣಗಳಲ್ಲ. ಬದಲಿಗೆ ಹೆತ್ತ ತಪ್ಪಿಗೆ ಯಾಂತ್ರಿಕವಾಗಿ ತನ್ನ ಕರ್ತವ್ಯವನ್ನು ತೋರಿಸಿದವಳು. ಅವಳು ತಾನೆ ಏನು ಮಾಡಿಯಾಳು? ಅವರ ಮನೆ ಇರುವುದೇ ತೀರಾ ಪುಟ್ಟದಾಗಿ. ಇರುವ ಒಂದಿಂಚು ಕೋಣೆಯಿಂದಲೇ ಹೊರ ಜಗತ್ತನ್ನು ಪರಿಚಯಿಸಿದ್ದಾಳೆ. ಸಾವಿರಾರು ವಾಹನಗಳು ರಭಸವಾಗಿ ನುಗ್ಗುವ ರಸ್ತೆ ಬದಿಯಲ್ಲೇ ಮಗುವಿನ ಕೈಹಿಡಿದುಕೊಂಡು ನಡೆಯುವುದನ್ನು ಕಲಿಸಿದ್ದಾಳೆ. ಏಳು-ಬೀಳುಗಳ ಬಗ್ಗೆ ಎಚ್ಚರಿಕೆ ನೀಡಿದ್ದಾಳೆ. ಅಸಹಾಯಕಳಾದ ಆ ತಾಯಿಯಿಂದ ಇಷ್ಟನ್ನು ಮಾತ್ರವೇ ಮಾಡಲು ಸಾಧ್ಯ.

ಇನ್ನು ‘ತಂದೆ’ ಎಂದರೆ ಮಗುವಿಗೆ ಯಾವ ಸಂಗತಿಯೂ ನೆನಪಿಗೆ ಬರುತ್ತಿಲ್ಲ ಮಗು ಆತನನ್ನು ನೋಡುವುದೇ ಅಪರೂಪ. ಮಗು ಬೆಳಿಗ್ಗೆ ಏಳುವ ಮೊದಲೇ ಆತ ಕೆಲಸಕ್ಕೆ ಹೋಗಿರುತ್ತಾನೆ. ರಾತ್ರಿ ಆತ ಮನೆಗೆ ಹಿಂದಿರುಗುವಷ್ಟರಲ್ಲಿ ಮಗು ಮಲಗಿಯಾಗಿರುತ್ತವೆ. ಹೀಗಾಗಿ ಅಪ್ಪ ದಿನನಿತ್ಯ ಕಾಣಿಸಿಕೊಳ್ಳುವುದೇ ಇಲ್ಲ. ಮಗು ಅಪ್ಪನನ್ನು ನೋಡುವುದು ರಜಾ ದಿನಗಳಲ್ಲಿ ಕುಳಿತು ಕೆಮ್ಮುವ ಪ್ರಾಣಿಯಾಗಿ ಮಾತ್ರ ಉಳಿದಂತೆ ಅಪ್ಪನ ಪ್ರೀತಿ-ವಾತ್ಸಲ್ಯಗಳ ಅನುಭವದ ನೆನಪುಗಳೇ ಇಲ್ಲಿಲ್ಲ. ಹೆತ್ತ ತಂದೆ-ತಾಯಿಗಳೊಂದಿಗೆ ಮಗುವಿನ ಕೃತಕ ಸಂಬಂಧವನ್ನು ಕವಿತೆಯ ಈ ಭಾಗ ಸೊಗಸಾಗಿ ಚಿತ್ರಿಸಿದೆ.

೩. ವಿದ್ಯೆ : ಶಾಲೆ ಕಾಲೇಜುಗಳು ಕಲಿಸಿದ್ದು; ದಾರಿ ಬದಿ

ನೂರಾರು ಜಾಹೀರಾತುಗಳು ತಲೆಗೆ ತುರುಕಿದ್ದು;

ರೇಡಿಯೊ ಸಿಲೋನ್ ವ್ಯಾಪಾರ ವಿಭಾಗ ಶಿಫಾರಸು ಮಾಡಿದ್ದು,

ನೀನಾಗಿ ಕಲಿತದ್ದು ಬಲು ಕಡಿಮೆ ಬಸ್‌ಸ್ಟಾಪಿನಲ್ಲಿ ನಿಂತ.

ಬಣ್ಣಗಳ ಕಡೆಗೆ ಕಣ್ಣಾಡಿಸುವುದೊಂದನ್ನು ಹೊರತು

ಮುಂಬೈ ನಗರದಲ್ಲಿ ಹುಟ್ಟಿಬೆಳೆದ ಮಗುವು ಕಲಿತದ್ದಾದರೂ ಏನನ್ನು? ಎಂಬ ಪ್ರಶ್ನೆಗೆ ಕವಿ ಈ ಭಾಗದಲ್ಲಿ ಉತ್ತರಿಸುವ ಯತ್ನ ಮಾಡಿದ್ದಾರೆ. ತಂದೆ-ತಾಯಿ, ಗುರು-ಹಿರಿಯರಿಂದ ನೈತಿಕ ಮೌಲ್ಯಗಳನ್ನು ಉತ್ತಮ ಸಂಸ್ಕಾರವನ್ನು ಕಲಿಯುವ ಅವಕಾಶವೇ ಇಲ್ಲಿಲ್ಲ. ಪ್ರಕೃತಿಯೊಂದಿಗಿನ ಒಡನಾಟವಂತೂ ದೂರದ ಮಾತು. ಶಾಲೆ-ಕಾಲೇಜುಗಳಲ್ಲಿ ತಲೆಗೆ ಹುರುಕಿದ ಯಾಂತ್ರಿಕ ಪಾಠಗಳು, ದಾರಿಬದಿಯಲ್ಲಿರುವ ಪೋಸ್ಟರ್‌ಗಳಲ್ಲಿ ಕಾಣಬರುವುದನ್ನೋ, ರೇಡಿಯೋದಲ್ಲಿ ಬರುವ ಜಾಹೀರಾತುಗಳನ್ನೋ ಕಲಿತು ಮಗು ಬೆಳೆಯಬೇಕು. ಮಗು ತಾನಾಗೇ ಕಲಿತಿರುವುದು ಶೂನ್ಯ ತಾನಾಗಿಯೇ ಕಲಿತಿರುವುದು ಒಂದೇ ಒಂದು. ಆದೆಂದರೆ, ಬಸ್ ಸ್ಟಾಂಡಿನಲ್ಲಿ ನಿಂತಿರುವ ಹುಡುಗಿಯರನ್ನು ನೋಡುವುದು. ಇದನ್ನು ಮಾತ್ರ ಯಾರೂ ಕಲಿಸದೆಯೇ ಮಗು ಕಲಿತುಕೊಂಡು ಬಿಡುತ್ತದೆಂದು ಕವಿ ವಿನೋದದಿಂದ ಚಿತ್ರಿಸಿದ್ದಾರೆ.

೪. ಜೀವನ : ಈ ಲಕ್ಷ ದಾರಿಗಳ ಚದುರಂಗದಾಟದಲಿ, ನೂರು

ಬೆಳಕಿನ ಕೆಳಗೆ ಯಾರದೋ ಕೈಗೊಂಬೆಯಾಗಿ

ಮುಂದುವರಿಯುವುದು; ಏಳುವುದು, ಬಟ್ಟೆಯಲಿ

ಮೈ ತುರುಕಿ ಓಡುವುದು; ರೈಲನೋ ಬಸ್ಸನೋ

ಹಿಡಿಯುವುದು; ಸಾಯಂಕಾಲ ಸೋತು ಸುಸ್ತಾಗಿ

ರೆಪ್ಪೆಯ ಮೇಲೆ ಹತ್ತು ಮಣ ಆಯಾಸವನ್ನು ಹೊತ್ತು

ಹನ್ನೊಂದು ಘಂಟೆ ಹೊಡೆವಾಗ ಮನೆಯಲ್ಲಿ

ಕಾದೂ ಕಾದೂ ತೂಕಡಿಸಿ ಮಂಕಾದ ಮಡದಿಯನು

ಎಚ್ಚರಿಸುವುದು; ತಣ್ಣಗೆ ಕೊರೆವ ಕೂಳುಂಡು

ಬಾಡಿಗೆ ಮನೆಯ ನೆರಳಿನ ಕೆಳಗೆ, ಮತ್ತೆ

ಸಾವಿರ ಗಾಲಿಯುಜ್ಜುವ ಕನಸು ಬಂಡಿಯ ಕೆಳಗೆ

ಹಾಸುಗಂಬಿಯ ಹಾಗೆ ತತ್ತರಿಸುತ್ತ ಮಲಗುವುದು.

ಕವಿತೆಯ ಕೊನೆಯ ಭಾಗದಲ್ಲಿ ಕವಿಯು ಮುಂಬೈ ನಗರದ ಜೀವನ ವಿವರಗಳನ್ನು ಕಟ್ಟಿಕೊಟ್ಟಿದ್ದಾರೆ. ಮುಂಬೈ ನಗರದ ಜೀವನವೆಂದರೆ ಒಂದಲ್ಲ, ಎರಡಲ್ಲ, ಲಕ್ಷ ದಾರಿಗಳ ಚದುರಂಗದಾಟ. ಇಲ್ಲಿ ಯಾರದೋ ಕೈಗೊಂಬೆಯಾಗಿ ಜೀವಿಸಬೇಕು. ಬೆಳಿಗ್ಗೆ ಎದ್ದರೆ ಮೈಗೆ ಬಟ್ಟೆಯನ್ನು ನಿಧಾನಕ್ಕೆ ಹಾಕಿಕೊಳ್ಳಲೂ ಪುರುಸೊತ್ತಿರುವುದಿಲ್ಲ. ಬಟ್ಟೆಗೆ ಮೈಯನ್ನು ತುರುಕಿ ಓಡಬೇಕು. ರೈಲಿನಲ್ಲೋ, ಬಸ್ಸಿನಲ್ಲೋ ಹೋಗಿ ಕೆಲಸ ಮಾಡುವ ಜಾಗಕ್ಕೆ ತಲುಪಬೇಕು. ಕೆಲಸ ಮುಗಿದ ಮೇಲೆ ಆಯಾಸದಿಂದ ಮತ್ತೆ ಮನೆಸೇರುವಷ್ಟರಲ್ಲಿ ರಾತ್ರಿ ಹನ್ನೊಂದು ಗಂಟೆ. ಯಾರೊಡನೆಯೂ ಸ್ನೇಹದಿಂದ ನಾಲ್ಕು ಮಾತಾಡಲೂ ಸಮಯವಿಲ್ಲ. ಮನೆಗೆ ಬಂದು, ಕಾದೂ ಕಾದೂ ತೂಕಡಿಸಿ ಮಲಗಿದ ಹೆಂಡತಿಯನ್ನು ಎಚ್ಚರಿಸಿ, ಆಕೆ ಬಡಿಸಿದ ತಂಗಳನ್ನು ಉಂಡು, ಬಾಡಿಗೆಯ ಮನೆಯ ಸೂರಿನಡಿ ಮತ್ತೆ ಮರುದಿನದ ಮಾಮೂಲಿ ದಿನಚರಿಯನ್ನು ನೆನೆದು ತತ್ತರಿಸುತ್ತಾ ಮಲಗುವುದು, ಇದಿಷ್ಟೇ ಬದುಕು. ಮನರಂಜನೆಗಾಗಲಿ, ಮಡದಿ-ಮಕ್ಕಳೊಂದಿಗೆ ಪ್ರೀತಿಯಿಂದ ಮಾತಾಡಿ ಕಾಲಕಳೆಯಲಾಗಲಿ ಪುರುಸೊತ್ತಿದ್ದರೆ ತಾನೇ? ನಗರ ಜೀವನವೆಂದರೆ ಈ ಯಾಂತ್ರಿಕ ಬದುಕಿನ ಕ್ರಮ ಮಾತ್ರವೇ ಎಂದು ಕವಿ ‘ಮುಂಬೈ ಜಾತಕ’ ವನ್ನೇ ಬರೆದಿದ್ದಾರೆ. ಇಲ್ಲಿ ‘ಮುಂಬೈ’ ನೆಪಮಾತ್ರ. ಎಲ್ಲ ಮಹಾನಗರಗಳ ಹಣೆಬರಹವೂ ಇದೇ ರೀತಿಯಲ್ಲಿರುವುದನ್ನು ನಾವು ಗಮನಿಸಬಹುದು.

ಶಬ್ದಾರ್ಥ: ಸರಿವ – ಸಾಗುವ; ಕ್ಯೂ – ಸಾಲು; ಹೀರು – ಕುಡಿ; ಗಾಲಿ – ಚಕ್ರ; ಶಿಫಾರಸು – ಪ್ರಭಾವ; ಬಣ್ಣ-ವರ್ಣ; ಕಣ್ಣಾಡಿಸು – ನೋಡು; ಚದುರಂಗದಾಟ – ಬುದ್ದಿವಂತಿಕೆ ಪ್ರದರ್ಶನದ ಒಂದು ಬಗೆಯ ಆಟ; ಮಣ – ತೂಕದ ಒಂದು ಪ್ರಮಾಣ; ಕೂಳು – ಅನ್ನ, ಆಹಾರ; ಹಾಸುಗಂಬಿ – ರೈಲುಹಳಿ; ತತ್ತರಿಸು – ನಡುಗು, ಕಂಪಿಸು.

ಟಿಪ್ಪಣಿ:

೧. ಟ್ರಾಂ

ಸಾರ್ವಜನಿಕ ರಸ್ತೆಯ ಮೇಲೆ ಹಾಕಿದ ಕಂಬಿಗಳ ಮೇಲೆ ವಿದ್ಯುಚ್ಛಕ್ತಿಯ ಸಹಾಯದಿಂದ ಓಡುವ ಪ್ರಯಾಣಿಕರ ವಾಹನ (ಗಣಿಯ ಬಂಡಿ ಎಂಬರ್ಥವೂ ಇದೆ).

ಹೊಂದಿಸಿ ಬರೆಯುವುದಕ್ಕೆ ಬೇಕಾದ ಮಾಹಿತಿ

  1. ಮುಂಬೈ ಜಾತಕ – ಜಿ. ಎಸ್.‌ ಶಿವರುದ್ರಪ್ಪ
  2. ಮುಂಬೈ ಜಾತಕ – ತೆರೆದ ದಾರಿ
  3. ತೆರೆದ ದಾರಿ – ಜಿ. ಎಸ್.‌ ಶಿವರುದ್ರಪ್ಪ
  4. ಜಿ.ಎಸ್. ಶಿವರುದ್ರಪ್ಪ – ರಾಷ್ಟ್ರಕವಿ
  5. ಜಿ.ಎಸ್. ಶಿವರುದ್ರಪ್ಪ – ಸೌಂದರ್ಯ ಸಮೀಕ್ಷೆ
  6. ಮುಂಬೈ ಜಾತಕ – ಅರ್ಜಿ ನಮೂನೆ
  7. ಮಗು ಹುಟ್ಟಿದ್ದು – ಆಸ್ಪತ್ರೆ
  8. ಕುಳಿತು ಕೆಮ್ಮುವ ಪ್ರಾಣಿ – ತಂದೆ
  9. ಲಕ್ಷದಾರಿಗಳ ಚದುರಂಗದಾಟ – ಮುಂಬೈ ನಗರದ ಜೀವನ

Leave a Comment