ದ್ವಿತೀಯ ಪಿಯುಸಿ ಕನ್ನಡ ನಾನಾರ್ಥಕಗಳು | 2nd Puc Kannada Nanarthakagalu

ದ್ವಿತೀಯ ಪಿಯುಸಿ ಕನ್ನಡ ನಾನಾರ್ಥಕಗಳು 2nd Puc Kannada Nanarthakagalu 2nd puc kannada grammar nanartha padagalu 2nd puc kannada grammar 2nd puc kannada grammar answers 2nd puc kannada workbook answers grammar 2nd puc kannada workbook pallava answers ನಾನಾರ್ಥ ಪದಗಳು ಎಂದರೇನು nanarthaka padagalu kannada nanarthaka pada nanartha padagalu in kannada

ನಾನಾರ್ಥಕಗಳು

Nanarthakagalu
Nanarthakagalu

ಪಠ್ಯಭಾಗದಲ್ಲಿ ಬಂದಿರುವ ನಾನಾರ್ಥ ಪದಗಳನ್ನು ಪಟ್ಟಿಮಾಡಿ, ಅವುಗಳಿಗಿರುವ ಬಗೆಬಗೆಯ ಅರ್ಥವನ್ನು ಬರೆಯುವ ಅಭ್ಯಾಸ ಮಾಡಿರಿ. ಕೆಲವನ್ನು ಕೆಳಗೆ ಸೂಚಿಸಿದೆ. ಇದಲ್ಲದೆ ಪಾಠ ಓದುವಾಗ, ಕೇಳುವಾಗ ಗಮನಕ್ಕೆ ಬರುವ ಎಲ್ಲ ಪದಗಳನ್ನು ಗಮನಿಸಿ.

೧. ಸೂಳ್‌ – ಸರದಿ, ಅವಕಾಶ, ಕಾಲ

೨. ಕರ – ತೆರಿಗೆ, ಕೈ

೩. ರಾಗ – ಸ್ವರ, ಪ್ರೀತಿ

೪. ಕಳೆ – ನಷ್ಟ, ಕಾಂತಿ

೫. ಬಗೆ – ಯೋಚಿಸು, ವಿಧ

೬. ದೊರೆ – ಸಿಗು, ಅರಸ

೭. ಗಂಡ – ಪತಿ, ಅಪಾಯ

೮. ಹತ್ತಿ – ಅರಳೆ, ಏರು

೯. ಏರಿ – ದಂಡೆ, ಹತ್ತಿ

೧೦. ಅರ್ಥ – ಹಣಕಾಸು, ಶಬ್ಧದ ಅಭಿಪ್ರಾಯ

೧೧. ತೊರೆ – ಹರಿವ ನೀರು, ತ್ಯಜಿಸು

೧೨. ನೆನೆ – ಸ್ಮರಿಸು, ಒದ್ದೆಯಾಗು

೧೩. ಲಘು – ಚಿಕ್ಕದು, ಹಗುರ

೧೪. ಗುರು – ಹಿರಿದು, ಅಭಿಪ್ರಾಯ

೧೫. ನರ – ಅರ್ಜುನ, ಮನುಷ್ಯ, ರಕ್ತನಾಳ

೧೬. ಅರಿ – ತಿಳಿ, ಶತ್ರು

೧೭. ಮಡಿ – ನಿರ್ಮಲ , ಸಾವು

೧೮. ತೆರ – ರೀತಿ, ದಕ್ಷಿಣೆಣೆ̇

೧೯. ಸಾರು – ಪ್ರಚಾರಮಾಡು, ತಿಳಿಸಾರು

೨೦. ನಾರು – ಎಳೆ, ದುರ್ಗಂಧ ಬೀರು

೨೧. ರಸ – ಸಾರ, ದ್ರವ

೨೨. ಪರಿ – ರೀತಿ, ಹರಿ, ಓಡು

೨೩. ಕೊನೆ – ಅಂತ್ಯ, ಗೊಂಚಲು

೨೪. ನೆರೆ – ಸೇರೆ, ಮುಪ್ಪು, ಅಕ್ಕಪಕ್ಕ, ಪ್ರವಾಹ, ಬಿಳಿಕೂದಲು

೨೫. ಹೊಳೆ – ನದಿ, ಮಿನುಗು

೨೬. ಎಡೆ – ನೈವೇದ್ಯ, ಅವಕಾಶ, ಪಕ್ಕ

೨೭. ಗುಡಿ – ಮನೆ, ದೇವಾಲಯ, ಬಾವುಟ

೨೮. ಕಲಿ – ಅರಿತುಕೋ, ಪರಾಕ್ರಮಿ, ಯುಗ

೨೯. ಮರ್ಯಾದೆ – ಗೌರವ, ಮಿತಿ, ಅಂಕೆ

೩೦. ಹಿಂಡು – ಗುಂಪು, ಹಿಚುಕು

೩೧. ತಿಳಿ – ಕಲಿ, ನಿರ್ಮಲ

೩೨. ಬಟ್ಟೆ – ದಾರಿ, ವಸ್ತ್ರ

೩೩. ಉಸಿರು – ಶ್ವಾಸ, ಹೇಳು

೩೪. ಸೇರು – ಅಳತೆ, ಕೂಡು, ತಲುಪು

೩೫. ಹಿಡಿ – ಕಾವು, ಮುಷ್ಠಿ, ಬಂಧನ

೩೬. ಹದ್ದು – ಪಕ್ಷಿ, ಅಂಕೆ

೩೭. ಅಡಿ – ಅಳತೆ, ಕೂಡು, ಕೆಳಗೆ

೩೮. ಕಂದ – ಮಗು, ಪದ್ಯಜಾತಿ

೩೯. ಮುನಿ – ಕೋಪ, ಋಷಿ

೪೦. ಉತ್ತರ – ದಿಕ್ಕು, ಅನಂತರ, ಜವಾಬು

೪೧. ಅರಸು – ರಾಜ, ಹುಡುಕು

೪೨. ನಡು – ಹೂಳು, ಸೊಂಟ, ಮಧ್ಯ

೪೩. ಎಳೆ – ಚಿಗುರು, ದಾರ

೪೪. ಫಲ – ಹಣ್ಣು, ಪ್ರಯೋಜನ

೪೫. ಕವಿ – ಕಾವ್ಯರಚನೆಕಾರ, ಆವರಿಸು

೪೬. ಮನ್ನಿಸು – ಗೌರವಿಸು, ಕ್ಷಮಿಸು

೪೭. ಬಂಟ – ಅಳು, ಜೋತೆಗಾರ, ವೀರ

೪೮. ತೂಗು – ಅಳೆ, ಉಯ್ಯಾಲೆ

೪೯. ಬಿಂಬ – ಪ್ರತಿರೂಪ, ವಿಗ್ರಹ, ವೃತ್ತ

೫೦. ಭಾವ – ಸ್ವರೂಪ, ಮನಸ್ಸಿನ ಸ್ಥಿತಿ, ಸೋದರಿಯ ಗಂಡ.

ಹೆಚ್ಚುವರಿ ಪ್ರಶ್ನೆಗಳು

೫೧. ಮುಡಿ – ಧರಿಸು, ಶಿಶಿರ, ಹೊರೆ, ಕೊನೆ

೫೨. ಮಾನಿನಿ – ಹೆಂಗಸು, ಮಾನವಂತೆ

೫೩. ಖಿಲ – ನಾಶ, ಉಳುಮೆ ಮಾಡದ ಭೂಮಿ, ಉಳಿದದ್ದು, ಅವಕಾಶ

೫೪. ತೆರೆ – ಪರದೆ, ನೀರಿನ ಅಲೆ, ಮುಚ್ಚಿರುವುದನ್ನು ಹೊರತೆಗೆ

೫೫. ಕರಿ – ಕಪ್ಪು ಬಣ್ಣ, ಆನೆ, ಎಣ್ಣೆಯಲ್ಲಿ ಬೇಯಿಸು

ಇಲ್ಲಿ ಕೆಲವು ಪದಗಳಿಗಿರುವ ನಾನಾರ್ಥಗಳನ್ನು ಸೂಚಿಸಿದೆ. ಅವುಗಳನ್ನು ಬಳಸಿ ವಾಕ್ಯ ರಚಿಸುವುದನ್ನು ಅಭ್ಯಾಸ ಮಾಡಿ.

೧. ದೊರೆ

ಸಿಕ್ಕು – ಭಾವಗೀತೆ ಸ್ಪರ್ಧೆಯಲ್ಲಿ ರಾಧಳಿಗೆ ದ್ವಿತೀಯ ಬಹುಮಾನ ದೊರೆಯಿತು.

ಅರಸ – ಟಿಪ್ಪು ಸುಲ್ತಾನನೆಂಬ ದೊರೆಗೆ ಮೈಸೂರು ಹುಲಿ ಎಂಬ ಹೆಸರಿತ್ತು.

೨. ಅಡಿ

ಅಳತೆ – ಮೂರಾಲ್ಕು ಅಡಿಗಳ ಅಂತರದಲ್ಲಿ ಹಾವು ಹರಿದುಹೋಯಿತು.

ಕೆಳಗೆ – ನನ್ನ ಪುಸ್ತಕವು ಅಡಿಯಲ್ಲಿ ಸಿಕ್ಕಿಕೊಂಡಿತ್ತು.

೩. ಮುನಿ

ಋಷಿ – ಅರಣ್ಯದಲ್ಲಿ ಶ್ರೀರಾಮ ಮುನಿಗಳ ಆಶ್ರಯದಲ್ಲಿದ್ದನು.

ಕೋಪ – ಮುನಿಸು ಮನುಷ್ಯನ ಸಂಚಾರಿ ಭಾವಗಳಲ್ಲೊಂದು.

೪. ಪಡೆ

ಸೈನ್ಯ – ಅರ್ಜುನನ ಪಡೆ ಕರ್ಣನ ಪಡೆಯನ್ನು ಪರಾಭವಗೊಳಿಸಿತು.

ಹೊಂದು – ನಮ್ಮ ತಂದೆಯಿಂದ ಶುಲ್ಕಪಾವತಿಗಾಗಿ ಹಣ ಪಡೆದೆನು.

೫. ನೆರೆ

ಪ್ರವಾಹ – ನದಿಯಲ್ಲಿ ನೆರೆ ಬಂದಾಗ ಅಪಾಯ ಹೆಚ್ಚು.

ಪಕ್ಕದ – ನೆರೆಯಲ್ಲಿ ಬುದ್ದಿವಂತರು ವಾಸಿಸಿದರೆ ಲಾಭ ಹೆಚ್ಚು.

೬. ಬಟ್ಟೆ

ವಸ್ತ್ರ – ಹೊಸ ಬಟ್ಟೆ ಬಂದರೆ ಹಬ್ಬಕ್ಕೆ ಮೆರಗು ಬರುವುದು.

ದಾರಿ – ಲೋಹಿತಾಶ್ವನು ಹುಲ್ಲಿನ ಬಟ್ಟೆಯಲ್ಲಿ ನಡೆದು ಬಂದನು.

೭. ಉಗಿ

ಉಗುಳು – ಸಾರ್ವಜನಿಕ ಸ್ಥಳಗಳಲ್ಲಿ ಎಲೆಅಡಿಕೆ ಉಗಿದು ಮಲಿನಗೊಳಿಸಬಾರದು.

ಆವಿ – ಉಗಿಬಂಡಿಯೆಂಬ ಹೆಸರು ಈಗ ‘ರೈಲು’ ಎಂದೇ ಬಳಸಲ್ಪಡುವುದು.

೮. ಹದ್ದು

ಪಕ್ಷಿ – ಆಕಾಶದಲ್ಲಿ ಹದ್ದುಗಳು ಎತ್ತರದಲ್ಲಿ ಹಾರುತ್ತಿರುತ್ತವೆ.

ಮಿತಿ – ಹದ್ದುಮೀರಿ ವರ್ತಿಸಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ.

೯. ಬಗೆ

ಯೋಚಿಸು – ಇನ್ನೊಬ್ಬರಿಗೆ ದ್ರೋಹ ಬಗೆಯಬಾರದು.

ವಿಧ – ಅಂಗಡಿಯಲ್ಲಿ ಬಗೆಬಗೆಯ ವಸ್ತುಗಳಿದ್ದವು.

೧೦. ಕವಿ

ಆವರಿಸು – ಕಾರ್ಮೋಡ ಕವಿಯುವುದು ಮಳೆ ಬರುವುದರ ಸೂಚನೆ.

ಕಾವ್ಯರಚನೆಕಾರ – ಬೇಂದ್ರೆಯವರು ಜನಪ್ರಿಯ ಕವಿ ಎನಿಸಿದ್ದಾರೆ.

೧೧. ಎಡೆ

ಅವಕಾಶ – ಮಾತಿಗೆ ಎಡೆಗೊಡದಂತೆ ಅವರು ಎದ್ದು ನಡೆದರು.

ನೈವೇದ್ಯ – ಹಬ್ಬದ ದಿನಗಳಲ್ಲಿ ದೇವರಿಗೆ ಎಡೆ ಇಟ್ಟು ಆನಂತರ ಊಟ ಮಾಡುತ್ತೇವೆ.

೧೨. ಅರಿ

ಶತ್ರು – ಅರಿ ಸೈನ್ಯವನ್ನು ಅರ್ಜುನ ತನ್ನ ಶರಕೌಶಲದಿಂದ ನಿರ್ನಾಮ ಮಾಡಿದನು.

ತಿಳಿ – ಗುರುಗಳು ಹೇಳಿದ್ದನ್ನು ಚೆನ್ನಾಗಿ ಅರಿತುಕೊಳ್ಳದಿದ್ದರೆ ಪರೀಕ್ಷೆಯಲ್ಲಿ ಕಷ್ಟಪಡಬೇಕು.

Leave a Comment