ದ್ವಿತೀಯ ಪಿಯುಸಿ ಕನ್ನಡ ನುಡಿಗಟ್ಟುಗಳು|2nd Puc Kannada Nudigattugalu

ದ್ವಿತೀಯ ಪಿಯುಸಿ ಕನ್ನಡ ನುಡಿಗಟ್ಟುಗಳು, 2nd Puc Kannada Nudigattugalu nudigattugalu in kannada pdf nudigattugalu in kannada pdf free download 100 ನುಡಿಗಟ್ಟುಗಳು in kannada kannada nudigattugalu with sentences 100 ನುಡಿಗಟ್ಟುಗಳು pdf kannada nudigattugalu with sentences nudigattugalu in kannada definition nudigattugalu in kannada meaning 10 nudigattugalu in kannada 100 ನುಡಿಗಟ್ಟುಗಳು with sentences ನುಡಿಗಟ್ಟುಗಳು meaning in kannada

೫. ನುಡಿಗಟ್ಟುಗಳು

Nudigattugalu

ಪರೀಕ್ಷೆಯಲ್ಲಿ ಎರಡು ಅಂಕಗಳಿಗೆ ಮೂರು ನುಡಿಗಟ್ಟುಗಳನ್ನು ಕೊಟ್ಟು, ಎರಡಕ್ಕೆ ಸ್ವಂತ ವಾಕ್ಯದಲ್ಲಿ ಪ್ರಯೋಗಿಸುವಂತೆ ಕೇಳಲಾಗುವುದು. ಆದ್ದರಿಂದ ಪಠ್ಯಭಾಗದಲ್ಲಿರುವ ನುಡಿಗಟ್ಟುಗಳನ್ನು ಸಂಗ್ರಹಿಸಿ, ವಾಕ್ಯದಲ್ಲಿ ಬಳಸಿ ಬರೆಯಿರಿ.

೧. ದಾರಿದೀಪ – ಮಾರ್ಗದರ್ಶಿ

ಹಿರಿಯರ ಅನುಭವದ ಮಾತುಗಳು ಕಿರಿಯರಿಗೆ ದಾರಿದೀಪ

೨. ಕತ್ತಿಮಸೆ – ದ್ವೇಷ ಸಾಧಿಸು

ದುರ್ಯೋಧನ ಪಾಂಡವರ ಮೇಲೆ ಸದಾ ಕತ್ತಿಮಸೆಯುತ್ತಿದ್ದನು.

೩. ಗಾಳಿಗೆ ತೂರು – ನಿರ್ಲಕ್ಷಿಸು

ದೊಡ್ಡವರ ಹಿತವಚನವನ್ನು ಗಾಳಿಗೆ ತೂರಬಾರದು.

೪. ಕೈಯೊಡ್ಡು – ಬೇಡು

ಅನ್ನರ ಬಳಿ ಕೈಯೊಡ್ಡುವುದರಿಂದ ಆತ್ಮಗೌರವಕ್ಕೆ ಕುಂದು.

೫. ಅಜ್ಜನಕಾಲದ್ದು – ಪುರಾತನ

ಅಜ್ಜನ ಕಾಲದ ವಸ್ತುಗಳಿಗೆ ಬೆಲೆಹೆಚ್ಚು

೬. ಹಿತ್ತಾಳೆ ಕಿವಿ – ಜಾಡಿಮಾತು ಕೇಳುವ ಸ್ವಭಾವ

ಚಾಡಿಮಾತು ಕೇಳಿದರೆ ಹಿತ್ತಾಳೆಕಿವಿ ಎನ್ನಿಸಿಕೊಳ್ಳಬೇಕಾದೀತು.

೬. ಕಣ್ಣುಕೆಂಪಗಾಗು – ಸಿಟ್ಟಾಗು

ಕಡಿಮೆ ಅಂಕಗಳಿಸಿದರೆ ಅಪ್ಪ ಕಣ್ಣುಕೆಂಪಗೆ ಮಾಡಿಕೊಳ್ಳುತ್ತಾರೆ.

೮. ಕಪಿಮುಷ್ಟಿ – ಬಿಗಿಯಾದ ಹಿಡಿತ

ನಾವು ಪರರ ಕಪಿಮುಷ್ಟಿಯಲ್ಲಿ ಬದುಕಬಾರದು.

೯. ರೈಲುಬಿಡು – ಸುಳ್ಳು ಹೇಳು

ಸುಳ್ಳು ಹೇಳುವುದನ್ನು ರೈಲು ಬಿಡುವುದು ಎನ್ನುವರು.

೧೦. ಕೈಕೊಡು – ಮೋಸಮಾಡು

ನಂಬಿಗಸ್ತನೆಂದು ನಿಯಮಿಸಿಕೊಂಡಿದ್ದ ಕೆಲಸದವನು ಯಜಮಾನರಿಗೆ ಸರಿಯಾಗಿ ಕೈಕೊಟ್ಟ.

೧೧. ಮುಖಊದಿಸು – ಅಸಮಾಧಾನೆ ತೋರು

ಮಗುವಿಗೆ ತಾಯಿ ಚಾಕಲೇಟು ಕೊಡದೆ ಇದ್ದುದರಿಂದ ಮಗು ಮುಖಊದಿಸಿಕೊಂಡಿತು.

೧೨. ಎಳ್ಳುನೀರು ಬಿಡು – ತ್ಯಜಿಸು, ಕೈಬಿಡು, ವಿಷಯವನ್ನು ಮನಸ್ಸಿನಿಂದ ಬಿಟ್ಟುಬಿಡು

ವಯಸ್ಸಾದುದರಿಂದ ಅವನು ಸರ್ಕಾರಿ ನೌಕರಿಯ ಆಸೆಗೆ ಎಳ್ಳುನೀರು ಬಿಟ್ಟನು.

೧೩. ಹುಡುಗಾಟಿಕೆ – ಬೇಜವಾಬ್ದಾರಿ

‘ಚಿಕ್ಕ ವಯಸ್ಸಿನಲ್ಲಿ ಹುಡುಗಾಟಿಕೆಯ ಬುದ್ದಿ ಸಾಮಾನ್ಯ.

೧೪. ಹೊಟ್ಟೆಹೊರೆ – ಜೀವನ ಸಾಗಿಸು

ಇನ್ನೊಬ್ಬರ ಋಣವಿಲ್ಲದೆ ಹೊಟ್ಟೆಹೊರೆಯುವುದೇ ಮೇಲು.

೧೫. ಸಿಂಹಸ್ವಪ್ನ – ಭಯಗೊಳಿಸುವ ನೆನಪು

ಭೀಮನು ಕೀಚಕನಿಗೆ ಸಿಂಹಸ್ವಪ್ನನಾಗಿದ್ದನು.

೧೬. ತಲೆಬಾಗು – ವಂದಿಸು, ಗೌರವಿಸು

ಗುರುಗಳ ಪಾಂಡಿತ್ಯಕ್ಕೆ ಎಲ್ಲರೂ ತಲೆಬಾಗಿದರು.

೧೬. ಚಳ್ಳೆಹಣ್ಣು ತಿನ್ನಿಸು – ಮೋಸಮಾಡು

ಕಳ್ಳ ಪೊಲೀಸರಿಂದ ತಪ್ಪಿಸಿಕೊಂಡು ಅವರಿಗೆ ಚಳ್ಳೆಹಣ್ಣು ತಿನ್ನಿಸಿದನು.

೧೮. ಗತಿಕಾಣಿಸು – ಮುಗಿಸು

ಪುಂಡರಿಗೆ ಪೊಲೀಸರು ಗತಿ ಕಾಣಿಸಿದರು.

೧೯. ಮೊರೆಹೋಗು – ಶರಣಾಗು

ಅನಾರೋಗ್ಯ ಕಾಡಿದಾಗ ವೈದ್ಯರ ಮೊರೆಹೋಗುತ್ತೇವೆ.

೨೦. ಕಾಲುಕೀಳು – ಓಡಿಹೋಗು

ಸಮಸ್ಯೆಗಳನ್ನು ಎದುರಿಸಬೇಕೇ ಹೊರತು ಸಮಸ್ಯೆಯಿಂದ ಕಾಲುಕೀಳಬಾರದು.

೨೧. ಬೇರೂರು – ಬಲವಾಗಿ ನೆಲೆಯಾಗು

ನೆಂಟರು ನಮ್ಮಲ್ಲೇ ಒಂದು ತಿಂಗಳು ಬೇರೂರಿದ್ದರು.

೨೨. ಒಡಕುಬಾಯಿ – ವಿವೇಕವಿಲ್ಲದೆ ಮಾತಾಡುವವ

ಗುಟ್ಟನ್ನು ಮುಚ್ಚಿಟ್ಟುಕೊಳ್ಳಲಾರದವರ ಬಾಯಿ ಒಡಕುಬಾಯಿ ಎನಿಸುತ್ತದೆ.

೨೩. ಕೈಬೆಚ್ಚಗೆ ಮಾಡು – ಲಂಚಕೊಡು

ಸರ್ಕಾರಿ ಕಚೇರಿಗಳಲ್ಲಿ ಕೈಬೆಚ್ಚಗೆ ಮಾಡದಿದ್ದರೆ ಕೆಲಸ ಆಗುವುದಿಲ್ಲ.

ಹೆಚ್ಚುವರಿ ಪ್ರಶ್ನೆಗಳು:

೧. ಅಡಿಪಾಯ – ಬುನಾದಿ, ತಳಹದಿ

ವ್ಯಕ್ತಿಯ ಯಶಸ್ಸಿಗೆ ಸತತ ಪರಿಶ್ರಮವೇ ಆಡಿಪಾಯ.

೨. ಅಜಗಜಾಂತರ – ಆನೆಗೂ ಆಡಿಗೂ ಇರುವ ಅಂತರ, ಭಾರಿ ವ್ಯತ್ಯಾಸ

ಹಳ್ಳಿಯ ಬದುಕಿಗೂ, ನಗರದ ಜೀವನಕ್ಕೂ ಅಜಗಜಾಂತರವಿದೆ.

೩. ಕಣ್ಣರಳಿಸು – ಅಚ್ಚರಿಪಡು

ಪ್ರಕೃತಿಯ ಸೊಬಗನ್ನು ಕಣ್ಣರಳಿಸಿ ನೋಡಿದೆನು.

೪ ತಲೆಹಾಕು – ಮಧ್ಯ ಪ್ರವೇಶಿಸು

ಬೇರೆಯವರ ವಿಷಯದಲ್ಲಿ ತಲೆಹಾಕುವುದು ಒಳ್ಳೆಯದಲ್ಲ.

೫. ಒಣಜಂಬ – ವ್ಯರ್ಥ ಅಹಂಕಾರ

ಯಾವುದೇ ಸಾಧನೆಯನ್ನು ಮಾಡದವರು ಕೇವಲ ಒಣಜಂಬದ ಮಾತುಗಳನ್ನು ಆಡುತ್ತಾರೆ.

೬. ತುತ್ತೂರಿ ಊದು – ಸ್ವಯಂ ಪ್ರಚಾರಮಾಡು

ಯೋಗ್ಯತೆ ಇರಲಿ ಬಿಡಲಿ, ಕೆಲವರು ತುತ್ತೂರಿ ಊದಿಕೊಳ್ಳದೆ ಇರುವುದಿಲ್ಲ.

೭. ನರಪೇತಲ ನಾರಾಯಣ – ಸಣ್ಣಗಿರುವ ಮನುಷ್ಯ

ಹೆಸರು ಭೀಮಸೇನರಾವ್ ಎಂದಿದ್ದರೂ ಅವನೊಬ್ಬ ನರಪೇತಲನಾರಾಯಣ.

೮. ಅಧಿಕಪ್ರಸಂಗ ಮಾಡು – ತಲೆಹರಟೆ ಮಾಡು

ಹಿರಿಯರ ಮಾತಿನ ನಡುವೆ ಕಿರಿಯರು ಅಧಿಕಪ್ರಸಂಗ ಮಾಡಬಾರದು.

೯. ಕಣ್ಣಿಗೆ ಒತ್ತಿಕೋ – ಭಕ್ತಿಯಿಂದ ಸ್ವೀಕರಿಸು

ಭಕ್ತರು ದೇವರ ಪ್ರಸಾದವನ್ನು ಕಣ್ಣಿಗೆ ಒತ್ತಿಕೊಂಡು ಸ್ವೀಕರಿಸಿದರು.

೧೦. ದೇಶಾವರಿ ನಗೆ ಬೀರು – ಏನೂ ಅರ್ಥವಿಲ್ಲದ ನಗು

ತಪ್ಪು ಮಾಡಿ ಸಿಕ್ಕಿಹಾಕಿಕೊಂಡ ಮಗು ದೇಶಾವರಿ ನಗೆ ಬೀರುತ್ತದೆ.

೧೧. ಮೇಲೆ ಎತ್ತಿ ಕಟ್ಟು – ಪ್ರಚೋದಿಸು

ಸ್ವಾರ್ಥಿಗಳು ಜನರನ್ನು ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ.

೧೨. ಉರಿಯುವ ಬೆಂಕಿಗೆ ತುಪ್ಪ ಸುರಿ – ಕುಮ್ಮಕ್ಕು ಕೊಡು

ತಂದೆಯ ಬೈಗುಳದ ಜೊತೆಗೆ ತಮ್ಮ ನಕ್ಕಿದ್ದು ನನಗೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಯಿತು.

೧೩. ಮುಖ ಹಿಂಜಿಕೊಳ್ಳು – ಅಸಮಾಧಾನ ತೋರು

ನಾನು ಪರೀಕ್ಷೆಯಲ್ಲಿ ಫೇಲಾದ ಸುದ್ದಿ ತಿಳಿದು ನನ್ನ ತಂದೆ ಮುಖ ಹಿಂಜಿಕೊಂಡರು.

೧೪. ಗಾಳಿಗೆ ಉಗಿ – ವ್ಯರ್ಥ ಪ್ರಯತ್ನ

ಕೆಲವರಿಗೆ ಬುದ್ದಿ ಹೇಳುವುದು ಗಾಳಿಗೆ ಉಗಿದಂತೆ ನಿಷ್ಟ್ರಯೋಜಕ.

೧೫. ಮೂಗುಹಾಕು/ಮೂಗುತೂರಿಸು – ಮಧ್ಯೆ ಪ್ರವೇಶಿಸು

ಬೇರೆಯವರು ಮಾತನಾಡುತ್ತಿರುವಾಗ ಮಧ್ಯೆ ಮೂಗು ಹಾಕುವುದು ಒಳ್ಳೆಯದಲ್ಲ.

೧೬. ಹದ್ದುಬಸ್ತಿನಲ್ಲಿಡು – ನಿಯಂತ್ರಣದಲ್ಲಿಡು

ಹೊಸದಾಗಿ ಕೆಲಸಕ್ಕೆ ಸೇರಿದ ಶಿಕ್ಷಕರು ವಿದ್ಯಾರ್ಥಿಗಳನ್ನು ಹದ್ದುಬಸ್ತಿನಲ್ಲಿಡಲು ಕಷ್ಟಪಡುತ್ತಾರೆ.

೧೭. ತಲೆಕೊಡವು – ನಿರಾಕರಿಸು

ನನ್ನ ಮಾತಿಗೆ ತಂದೆಯವರು ತಲೆಕೊಡವಿ ಅಸಮಾಧಾನ ವ್ಯಕ್ತಪಡಿಸಿದರು.

೧೮. ತಲೆದೂಗು – ಮೆಚ್ಚುಗೆ ಅಥವಾ ಒಪ್ಪಿಗೆ ಸೂಚಿಸು

ಸಂಗೀತಗಾರನ ಹಾಡಿನ ವೈಖರಿಗೆ ಎಲ್ಲರೂ ತಲೆದೂಗಿದರು.

೧೯. ತಲೆತಗ್ಗಿಸು – ಅಪಮಾನ ಅನುಭವಿಸು

ಕೆಲವೊಮ್ಮೆ ಮಕ್ಕಳು ಮಾಡುವ ತಪ್ಪಿನಿಂದ ತಂದೆತಾಯಿಗಳು ತಲೆತಗ್ಗಿಸಬೇಕಾಗುತ್ತದೆ.

೨೦. ಅನ್ನಕ್ಕೆ ಕಲ್ಲುಹಾಕು – ಜೀವನಮಾರ್ಗ ಕೆಡಿಸು

ಬಡವರ ಅನ್ನಕ್ಕೆ ಕಲ್ಲುಹಾಕುವುದು ಘೋರ ಅನ್ಯಾಯ.

೨೧. ಎಂಜಲಿಗೆ ಕೈಯೊಡ್ಡು – ಹಂಗಿಗೆ ಒಳಗಾಗು

ಇನ್ನೊಬ್ಬರ ಎಂಜಲಿಗೆ ಕೈಯೊಡ್ಡುವುದು ಸ್ವಾಭಿಮಾನಕ್ಕೆ ಅಪಮಾನ.

೨೨. ಎರಡು ಬಗೆ – ದ್ರೋಹ ಮಾಡು, ಕೃತಘ್ನನಾಗು

ನಿನ್ನನ್ನು ನಂಬಿದವರಿಗೆ ಎರಡು ಬಗೆಯ ಬೇಡ.

೨೩. ರಾಮಬಾಣ – ಅತ್ಯಂತ ಪರಿಣಾಮಕಾರಿಯಾದ

ಅಮೃತಾಂಜನವು ತಲೆನೋವಿಗೆ ರಾಮಬಾಣವಿದ್ದಂತೆ.

೨೪. ಪರದೇಶಿ – ದಿಕ್ಕಿಲ್ಲದವರು, ಹೊರನಾಡಿನವರು, ತಬ್ಬಲಿತನ

ಅಪರಿಚಿತರ ನಡುವೆ ಪರದೇಶಿಯಾದೆ ಎನಿಸಿತು.

೨೫. ತಲೆಗೆ ಹತ್ತು – ಅರ್ಥವಾಗು

ಗಣಿತವು ಸುಲಭವಾಗಿ ತಲೆಗೆ ಹತ್ತುವುದಿಲ್ಲ.

೨೬. ತಲೆಮೇಲೆ ಮೆರೆಸು – ಶ್ರೇಷ್ಠವೆಂದು ತಿಳಿ

ಇಂಗ್ಲಿಷನ್ನು ತಲೆಮೇಲೆ ಮೆರೆಸುವುದು ಕನ್ನಡಕ್ಕೆ ಎಸಗುವ ದ್ರೋಹ.

೨೭. ಜನ್ಮಜಾಲಾಡು – ಚೆನ್ನಾಗಿ ಬಯ್ಯು

ಅನುತ್ತೀರ್ಣನಾದಾಗ ನನ್ನ ತಂದೆ ಜನ್ಮಜಾಲಾಡಿದರು.

೨೮. ಗಾಳಿಸುದ್ದಿ/ಗಾಳಿಮಾತು – ಸುಳ್ಳುಸುದ್ದಿ, ಆಧಾರವಿಲ್ಲದ ಸುದ್ದಿ

ಗಾಳಿಸುದ್ದಿಗೆ ಕಿವಿಕೊಡಬಾರದು.

೨೯. ಟೋಪಿಹಾಕು – ಮೋಸ ಮಾಡು

ಊರಲ್ಲಿ ಎಲ್ಲರಿಗೂ ಟೋಪಿ ಹಾಕಿದ್ದಾಯಿತು. ಈಗ ಇಲ್ಲಿಗೆ ಬಂದಿದ್ದಾನೆ.

೩೦. ಮೈಗೆಹತ್ತು – ಅರ್ಥವಾಗು

ಮಾತೃಭಾಷೆಯ ಶಿಕ್ಷಣದಲ್ಲಿ ವಿಚಾರಗಳು ಚೆನ್ನಾಗಿ ಮೈಗೆಹತ್ತುವುವು.

೩೧. ಬಾಯಿತುರಿಕೆ – ಮಾತಾಡುವ ಚಟ

ಅಜ್ಜಿಯು ಅವರಿವರೊಡನೆ ಮಾತಾಡಿ ಬಾಯಿತುರಿಕೆ ತೀರಿಸಿಕೊಂಡಳು.

೩೨. ಕಡುಬಿನ ಸೋರೆ – ಗಂಭೀರ ಮಾತುಕತೆ ನಡುವೆ ತಲೆತೂರಿಸಿ ಅವಿವೇಕದ ಪ್ರಶ್ನೆಗಳನ್ನೆತ್ತುವುದು ಇಬ್ಬರು ಮಾತನಾಡುತ್ತಿರುವಾಗ ನಡುವೆ ಕಡುಬಿನ ಸೋರೆ ಇಡಬಾರದು.

೩೩. ಚದುರಂಗದಾಟ – ಬುದ್ದಿವಂತಿಕೆ ಪ್ರದರ್ಶನದ ಆಟ

ರಾಜಕೀಯವು ಒಂದು ಚದುರಂಗದಾಟ.

೩೪. ಕಣ್ಣಾಡಿಸು – ಸ್ಕೂಲವಾಗಿ ವರಿಶೀಲಿಸು

ಬರೆದದ್ದು ಸರಿಯಾಗಿದೆಯೇ ಎಂದು ಕೊನೆಯಲ್ಲೊಮ್ಮೆ ಕಣ್ಣಾಡಿಸಬೇಕು.

೩೫. ಕೈಗೊಂಬೆ – ಆಟದ ಸಾಮಾನು, ವಶವರ್ತಿ

ಬೇರೆಯವರ ಕೈಗೊಂಬೆಯಾಗಿ ಬಾಳದೆ ಸ್ವತಂತ್ರರಾಗಿ ಬಾಳಬೇಕು.

೩೬. ತಲೆ ಅಲ್ಲಾಡಿಸು – ಇಲ್ಲವೆಂದು, ಬೇಡವೆಂದು, ಅಲ್ಲವೆಂದು ಸೂಚಿಸು

ಬರಿ ತಲೆ ಅಲ್ಲಾಡಿಸಬೇಡ, ಏನಾಯಿತೆಂದು ಬಾಯಿಬಿಟ್ಟು ಹೇಳು.

೩೭. ತರ್ಪಣ ಬಿಡು – ಸಂಬಂಧ ಕಡಿದುಕೊ

ಕೆಲವರಿಗೆ ಹಣ ಕೊಟ್ಟ ಮೇಲೆ ಅದಕ್ಕೆ ತರ್ಪಣ ಬಿಟ್ಟಂತೆಯೇ.

೩೯. ಹೆಸರುವಾಸಿಯಾಗು – ಪ್ರಸಿದ್ದವಾಗು

ಲಾಟರಿ ಹೊಡೆದದ್ದರಿಂದ ಅವನು ರಾತ್ರೋರಾತ್ರಿ ಹೆಸರುವಾಸಿಯಾದ.

Leave a Comment