‌2nd Puc Political Science Chapter 1 Notes |ದ್ವಿತೀಯ ಪಿ.ಯು.ಸಿ ರಾಜ್ಯಶಾಸ್ತ್ರ ಅಧ್ಯಾಯ-1 ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ ನೋಟ್ಸ್

‌2nd Puc Political Science Chapter 1 Notes Question Answer Guide Extract Mcq Pdf Download in Kannada Medium Karnataka State Syllabus, ದ್ವಿತೀಯ ಪಿ.ಯು.ಸಿ ರಾಜ್ಯಶಾಸ್ತ್ರ ಅಧ್ಯಾಯ-1 ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ ನೋಟ್ಸ್ ಪ್ರಶ್ನೋತ್ತರಗಳು, Second PUC Origin and Growth of Indian Political System 2nd puc political science 1st chapter question answer 2nd puc political science notes pdf in kannada ದ್ವಿತೀಯ ಪಿಯುಸಿ ರಾಜ್ಯಶಾಸ್ತ್ರ ನೋಟ್ಸ್ pdf download 12 puc political science notes in kannada ರಾಜ್ಯಶಾಸ್ತ್ರ 2nd puc political science notes in kannada pdf 2nd puc rajyashastra 1st lesson question answer ರಾಜ್ಯಶಾಸ್ತ್ರ ಸೆಕೆಂಡ್ ಪಿಯುಸಿ ನೋಟ್ಸ್

Origin and Growth of Indian Political System

ಒಂದು ಅಂಕದ ಪ್ರಶ್ನೆಗಳು :

1. ಭಾರತ ಯಾವಾಗ ಸ್ವಾತಂತ್ರ್ಯವಾಯಿತು?

ಭಾರತವು 15 ನೇ ಆಗಸ್ಟ್ 1947 ರಂದು ಸ್ವತಂತ್ರವಾಯಿತು.

2. ಭಾರತ ಸಂವಿಧಾನ ಯಾವಾಗ ಅಸ್ತಿತ್ವಕ್ಕೆ ಬಂದಿತು?

ಭಾರತದ ಸಂವಿಧಾನವು 26ನೇ ಜನವರಿ 1950 ರಂದು ಅಸ್ತಿತ್ವಕ್ಕೆ ಬಂದಿತು.

3. ಭಾರತ ರಾಷ್ಟ್ರೀಯ ಕಾಂಗ್ರೆಸ್ ಯಾವಾಗ ಉದಯಿಸಿತು?

ಭಾರತ ರಾಷ್ಟ್ರೀಯ ಕಾಂಗ್ರೆಸ್ 1885 ಡಿಸೆಂಬರ್ 24 ರಂದು ಉದಯಿಸಿತು.

4. ಯಾವ ಕಾಯಿದೆಯು ಅಧಿಕಾರವನ್ನು ಕಂಪನಿಯಿಂದ ಕ್ರೌನ್‌ಗೆ ವರ್ಗಾಯಿಸಿತು?

1858 ರ ಕಾಯಿದೆಯು ಅಧಿಕಾರವನ್ನು ಕಂಪನಿಯಿಂದ ಕೌನ್‌ಗೆ [ಬ್ರಿಟಿಷ್ ಅರಸನಿಗೆ] ವರ್ಗಾಯಿಸಿತು.

5. ಮಿಂಟೋ-ಮಾರ್ಲೆ ಸುಧಾರಣೆಯ ಒಂದು ಮುಖ್ಯಾಂಶವನ್ನು ಸೂಚಿಸಿ.

ಕೇಂದ್ರ ಮತ್ತು ಪ್ರಾಂತೀಯ ಶಾಸನ ಸಭೆಗಳ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿರುವುದು ಮಿಂಟೋ-ಮಾರ್ಲೆ ಸುಧಾರಣೆಯ ಪ್ರಮುಖ ಅಂಶವಾಗಿದೆ.

6.1919 ರ ಭಾರತ ಸರ್ಕಾರ ಕಾಯ್ದೆಯ ಒಂದು ಮುಖ್ಯಾಂಶವನ್ನು ಸೂಚಿಸಿ.

ಆಡಳಿತದ ವಿಷಯಗಳನ್ನು 2 ವರ್ಗಗಳನ್ನಾಗಿ ವಿಂಗಡಿಸಿದ್ದು, 1919 ರ ಭಾರತ ಸರ್ಕಾರ ಕಾಯ್ದೆಯ ಪ್ರಮುಖ ಮುಖ್ಯಾಂಶವಾಗಿದೆ.

7. ಡಯಾರ್ಕಿ ಎಂದರೇನು?

ಡಯಾರ್ಕಿ ಎಂದರೆ ದ್ವಿ ಸರ್ಕಾರ ಪದ್ಧತಿ ಎಂದರ್ಥ.

8. ಶಾಸನಾತ್ಮಕ ಆಯೋಗವನ್ನು ಏಕೆ ರಚಿಸಲಾಯಿತು?

ಗಾಂಧೀಜಿಯವರು ಸ್ವರಾಜ್ಯ ಆಂದೋಲನವನ್ನು ಪ್ರಾರಂಭಿಸಿದ್ದರಿಂದ ಶಾಸನಾತ್ಮಕ ಆಯೋಗವನ್ನು ರಚಿಸಲಾಯಿತು.

9. ಸೈಮನ್ ಆಯೋಗವು ಏನನ್ನು ಶಿಫಾರಸ್ಸು ಮಾಡಿತು?

ಸೈಮನ್ ಆಯೋಗವು ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡಬೇಕೆಂದು ಶಿಫಾರಸ್ಸು ಮಾಡಿತು.

10. 3ನೇ ದುಂಡು ಮೇಜಿನ ಸಮ್ಮೇಳನ ಯಾವಾಗ ನಡೆಯಿತು?

1932 ರ ನವೆಂಬರ್ 17 ರಿಂದ ಡಿಸೆಂಬರ್ 24 ರ ವರೆಗೆ 3ನೇ ದುಂಡು ಮೇಜಿನ ಸಮ್ಮೇಳನವು ನಡೆಯಿತು.

11. 1935 ರ ಭಾರತ ಸರ್ಕಾರದ ಕಾಯ್ದೆಯ ಒಂದು ಮುಖ್ಯಾಂಶವನ್ನು ಬರೆಯಿರಿ.

1935 ರ ಕಾಯಿದೆಯು ಬ್ರಿಟಿಷ್ ಆಡಳಿತ ಪ್ರಾಂತ್ಯಗಳು ಮತ್ತು ದೇಶೀಯ ಸಂಸ್ಥಾನಗಳನ್ನೊಳಗೊಂಡ ಭಾರತದ ಸಂಯುಕ್ತ ಪದ್ದತಿಗೆ ಅವಕಾಶವನ್ನು ಕಲ್ಪಿಸಿತು.

12.1947 ರ ಭಾರತ ಸ್ವಾತಂತ್ರ್ಯ ಕಾಯ್ದೆಯ ಒಂದು ಮುಖ್ಯಾಂಶವನ್ನು ಬರೆಯಿರಿ.

15ನೇ ಆಗಸ್ 1947 ರಂದು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಡೊಮಿನಿಯನ್‌ಗಳನ್ನು ಸ್ಥಾಪಿಸಲು 1947 ರ ಭಾರತ ಸ್ವಾತಂತ್ರ್ಯ ಕಾಯಿದೆಯು ಅವಕಾಶ ಕಲಿಸಿತು.

13. ಡಿ ರೇಖೆ ಆಯೋಗದ ಅಧ್ಯಕ್ಷರು ಯಾರು?

ಸರ್ ಸಿರಿಲ್ ಮಾಡ್‌ಕ್ಲಿಫ್ ರವರು ಗಡಿ ರೇಖೆ ಆಯೋಗದ ಅಧ್ಯಕ್ಷರು.

14. ಮಧ್ಯಂತರ ಸರ್ಕಾರ ಯಾವಾಗ ರಚನೆಯಾಯಿತು?

2ನೇ ಸೆಪ್ಟೆಂಬರ್ 1946 ರಂದು ಮಧ್ಯಂತರ ಸರ್ಕಾರವು ರಚನೆಯಾಯಿತು.

15. ಯಾವ ಸಭೆಯು ಮಧ್ಯಂತರ ಸರ್ಕಾರವನ್ನು ರಚಿಸಿತು?

ಸಂವಿಧಾನ ರಚನಾ ಸಭೆಯು ಮಧ್ಯಂತರ ಸರ್ಕಾರವನ್ನು ರಚಿಸಿತು.

16. ಎಲ್ಲಿಯವರೆವಿಗೂ ಮಧ್ಯಂತರ ಸರ್ಕಾರ ಅಸ್ತಿತ್ವದಲ್ಲಿತ್ತು?

ಭಾರತವು ಸ್ವಾತಂತ್ರ್ಯ ಹೊಂದುವವರೆಗೂ ಮಧ್ಯಂತರ ಸರ್ಕಾರ ಅಸ್ತಿತ್ವದಲ್ಲಿತ್ತು.

17. ವೈಸ್‌ರಾಯ್ ರವರ ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷರು ಯಾರು?

ಪಂಡಿತ್ ಜವಹರಲಾಲ್ ನೆಹರು ಅವರು ವೈಸ್‌ರಾಯ್ ರವರ ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷರಾಗಿದ್ದರು.

18. ಪ್ರಥಮ ಸಾರ್ವತ್ರಿಕ ಚುನಾವಣೆ ಯಾವಾಗ ನಡೆಯಿತು?

ಪ್ರಥಮ ಸಾರ್ವತ್ರಿಕ ಚುನಾವಣೆ ಅಕ್ಟೋಬರ್ 1951 | ರಿಂದ ಫೆಬ್ರವರಿ 1952 ರವರೆಗೆ ನಡೆಯಿತು.

19. ಯಾವ ದೇಶವನ್ನು ಜಗತ್ತಿನ ಬೃಹತ್ ಪ್ರಜಾಸತಾತ್ಮಕ ದೇಶ ಎಂದು ಕರೆಯುತ್ತೇವೆ?

ಭಾರತ ದೇಶವನ್ನು ಜಗತ್ತಿನ ಬೃಹತ್ ಪ್ರಜಾಸತಾತ್ಮಕ ದೇಶ ಎಂದು ಕರೆಯುತ್ತೇವೆ.

20. ಪ್ಯಾರಾಮೌಂಟ್ ಎಂದರೇನು?

ಪ್ಯಾರಾ ಮೌಂಟಿ ಅಧಿಕಾರ ಎಂದರೆ ರಾಜ ಅಥವಾ ರಾಣಿಗೆ ತಮ್ಮ ತಮ್ಮ ರಾಜ್ಯದ ಮೇಲಿರುವ ಸರ್ವಾಧಿಕಾರ.

21. ಆಪರೇಷನ್ ಪೋಲೋ ಎಂದರೇನು?

ಹೈದರಾಬಾದ್‌ನ ಅರಾಜಕತೆಯನ್ನು ಅಂತ್ಯಗೊಳಿಸಲು ಮಾಡಿದ ಪೋಲಿಸ್ ಕಾರ್ಯಾಚರಣೆಯನ್ನು ‘ಆಪರೇಷನ್ ಪೋಲೋ’ ಎಂದು ಕರೆಯಲಾಗಿದೆ.

22. ಇನ್‌ಸ್ಟ್ರುಮೆಂಟ್ ಆಫ್ ಅಕ್ಸೆಷನ್ ಎಂದರೇನು?

ಹಲವು ರಾಜ್ಯಗಳ ರಕ್ಷಣೆ, ವಿದೇಶಾಂಗ ವ್ಯವಹಾರಗಳು ಮತ್ತು ಸಂಪರ್ಕಗಳಿಗೆ ಸಂಬಂಧಪಟ್ಟಂತೆ ಭಾರತದ ಒಕ್ಕೂಟದಲ್ಲಿ ಸೇರಲು ಮಾಡಿಕೊಂಡ ಒಪ್ಪಂದವೇ ‘ಇನ್‌ಸ್ಟ್ರುಮೆಂಟ್ ಆಫ್ ಅಕ್ಷೆಷನ್.’

23. ಸಂವಿಧಾನದ ಯಾವ ವಿಧಿಯು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನವನ್ನು ನೀಡಿದೆ?

ಸಂವಿಧಾನದ 370 ನೇ ವಿಧಿಯು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನವನ್ನು ನೀಡಿದೆ.

24. ರಾಜ್ಯಗಳ ಏಕೀಕರಣದ ರೂವಾರಿ ಯಾರು?

ರಾಜ್ಯಗಳ ಏಕೀಕರಣದ ರೂವಾರಿಯು ಸರ್ದಾರ್ ವಲ್ಲಬಭಾಯಿ ಪಟೇಲ್.

25. ಉಕ್ಕಿನ ಮನುಷ್ಯ ಎಂದು ಯಾರನ್ನು ಕರೆಯುತ್ತಾರೆ?

ಉಕ್ಕಿನ ಮನುಷ್ಯ ಎಂದು ವಲ್ಲಬಭಾಯಿ ಪಟೇಲ್‌ರನ್ನು ಕರೆಯುತ್ತಾರೆ.

26.ರಾಜ್ಯ ಪುನರ್ ರಚನಾ ಆಯೋಗ ಯಾವಾಗ ರಚನೆಯಾಯಿತು?

1953 ರ ಡಿಸೆಂಬರ್‌ನಲ್ಲಿ ರಾಜ್ಯ ಪುನರ್ ರಚನಾ ಆಯೋಗವು ರಚನೆಯಾಯಿತು.

27. ರಾಜ್ಯ ಪುನರ್ ರಚನಾ ಆಯೋಗದ ಒಬ್ಬ ಸದಸ್ಯರನ್ನು

ರಾಜ್ಯ ಪುನರ್ ರಚನಾ ಆಯೋಗದ ಪ್ರಮುಖ ಸದಸ್ಯರು ಯಾರೆಂದರೆ ‘ಫಜಲ್ ಅಲಿ’.”

28. ರಾಜ್ಯ ಪುನರ್ ರಚನಾ ಕಾಯ್ದೆಯು ಯಾವಾಗ ಅಂಗೀಕಾರವಾಯಿತು?

1956 ರ ನವೆಂಬರ್‌ನಲ್ಲಿ ರಾಜ್ಯ ಪುನರ್ ರಚನಾ ಆಯೋಗವು ಅಂಗೀಕಾರವಾಯಿತು.

29. 1956 ರಲ್ಲಿ ರಾಜ್ಯ ಪುನರ್ ರಚನಾ ಕಾಯ್ದೆಯು ಎಷ್ಟು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಿತು?

14 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳನ್ನು 1956 ರಲ್ಲಿ ಈ ಆಯೋಗವು ರಚಿಸಿತು.

30. ಬಾಂಬೆಯನ್ನು ಯಾವಾಗ ವಿಭಜಿಸಲಾಯಿತು?

1960 ರಲ್ಲಿ ಬಾಂಬೆಯನ್ನು ವಿಭಜಿಸಲಾಯಿತು.

31. ಪಂಜಾಬ್ ಅನ್ನು ಯಾವಾಗ ವಿಭಜಿಸಲಾಯಿತು?

ಪಂಜಾಬ್ ಅನ್ನು 1960 ರಲ್ಲಿ ವಿಭಜಿಸಲಾಯಿತು.

32. 2014 ರಲ್ಲಿ ಯಾವ ರಾಜ್ಯವನ್ನು ವಿಭಜಿಸಲಾಯಿತು?

2014 ರಲ್ಲಿ ಆಂಧ್ರಪ್ರದೇಶವನ್ನು ವಿಭಜಿಸಲಾಯಿತು.

33. ಯಾವ ಕಾಯ್ದೆಯು ಭಾರತದಲ್ಲಿ ಜವಾಬ್ದಾರಿಯುತ ಸರ್ಕಾರವನ್ನು ಪ್ರಚಾರಪಡಿಸಿತು?

1909 ರ ಕಾಯ್ದೆಯು ಭಾರತದಲ್ಲಿ ಜವಾಬ್ದಾರಿಯುತ ಸರ್ಕಾರವನ್ನು ಪ್ರಚಾರಪಡಿಸಿತು.

34. ಭಾರತದಲ್ಲಿ ಸಂಯುಕ್ತ ವ್ಯವಸ್ಥೆಗೆ ಯಾವ ಕಾಯ್ದೆಯು ಅವಕಾಶ ಕಲ್ಪಿಸಿತು?

ಭಾರತದಲ್ಲಿ ಸಂಯುಕ್ತ ವ್ಯವಸ್ಥೆಗೆ 1935ರ ಭಾರತ ಸರ್ಕಾರ ಕಾಯ್ದೆಯು ಅವಕಾಶ ಕಲ್ಪಿಸಿತು.

35. ಪ್ರಥಮ ಲೋಕಸಭೆಯ ಸ್ಪೀಕರ್ ಯಾರು?

ಗಣೇಶ ವಾಸುದೇವ, ಮಾವಳಂಕರ್‌ರವರು ಪ್ರಥಮ ಲೋಕಸಭೆಯ ಸ್ಪೀಕ‌ರ್ ಆಗಿದ್ದರು.

II ಎರಡು ಅಂಕದ ಪ್ರಶ್ನೆಗಳು :

1. ಫೆಡರಲ್ ನ್ಯಾಯಾಲಯವು ಎಲ್ಲಿ ಮತ್ತು ಯಾವಾಗ ಸ್ಥಾಪನೆಯಾಯಿತು?

ಫೆಡರಲ್ ನ್ಯಾಯಾಲಯವು ದೆಹಲಿಯಲ್ಲಿ 1935 ರಲ್ಲಿ ಸ್ಥಾಪನೆಯಾಯಿತು.

2. ಬಾಂಬೆಯನ್ನು ಎಷ್ಟು ರಾಜ್ಯಗಳನ್ನಾಗಿ ವಿಂಗಡಿಸಲಾಯಿತು? ಅವು ಯಾವುವು?

ಬಾಂಬೆಯನ್ನು 2 ರಾಜ್ಯಗಳನ್ನಾಗಿ ವಿಂಗಡಿಸಲಾಯಿತು. ಅವು ಯಾವುವೆಂದರೆ

1. ಮಹಾರಾಷ್ಟ್ರ, 2. ಗುಜರಾತ್.

3. ಪಂಜಾಬನ್ನು ಎಷ್ಟು ರಾಜ್ಯಗಳನ್ನಾಗಿ ವಿಂಗಡಿಸಲಾಯಿತು? ಅವು ಯಾವುವು?

ಪಂಜಾಬನ್ನು 2 ರಾಜ್ಯಗಳನ್ನಾಗಿ ವಿಂಗಡಿಸಲಾಯಿತು.

ಅವು ಯಾವುವೆಂದರೆ 1. ಪಂಜಾಬ್, 2. ಹರಿಯಾಣ.

4. ಪ್ರಥಮ ಲೋಕಸಭಾ ಚುನಾವಣೆಯ ಬಗ್ಗೆ ಟಿಪ್ಪಣಿ ಬರೆಯಿರಿ.

ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿಯನ್ನು ಆದರಿಸಿ ಪ್ರಥಮ ಲೋಕಸಭಾ ಚುನಾವಣೆಯು ಅಕ್ಟೋಬರ್ 1951 ರಿಂದ ಫೆಬ್ರವರಿ 1952ರವರೆಗೆ ನಡೆಯಿತು.

ಈ ಚುನಾವಣೆಯು ಪ್ರಜೆಗಳು ಮತ್ತು ಪ್ರಜಾಪ್ರಭುತ್ವದಲ್ಲಿ ಇಟ್ಟಿದ್ದ ವಿಶ್ವಾಸವನ್ನು ಕಾರ್ಯರೂಪಕ್ಕೆ ತರುವ ದಿಟ್ಟ ಹೆಜ್ಜೆಯಾಯಿತು. ಇದೊಂದು ಬೃಹತ್ ರಾಜಕೀಯ ಪ್ರಯೋಗವಾಗಿದೆ.

5.1919 ರಲ್ಲಿ ಸೂಚಿಸಿರುವಂತೆ ಡಯಾರ್ಕಿ ಬಗ್ಗೆ ಟಿಪ್ಪಣಿ ಬರೆಯಿರಿ.

1919 ರ ಕಾಯಿದೆಯು ಕೆಲವು ಪ್ರಮುಖ ಪ್ರಾಂತ್ಯಗಳಲ್ಲಿ ಡಯಾರ್ಕಿ [ದ್ವಿ ಸರ್ಕಾರ ಪದ್ಧತಿಯನ್ನು ಜಾರಿಗೆ ತಂದಿತು. ಈ ಪದ್ಧತಿಗೆ ಅನುಗುಣವಾಗಿ ಸರ್ಕಾರದ ವಿಷಯಗಳನ್ನು ಕಾಯ್ದಿರಿಸಿದ ವಿಷಯಗಳು ಮತ್ತು ವರ್ಗಾಯಿಸಿದ ವಿಷಯಗಳನ್ನಾಗಿ ವಿಂಗಡಿಸಿತು.

28 ಕಾಯ್ದಿರಿಸಿದ ವಿಷಯಗಳನ್ನು ಪ್ರಾಂತ್ಯದ ರಾಜ್ಯಪಾಲ ಮತ್ತು ಕಾರ್ಯನಿರ್ವಾಹಕ ಮಂಡಳಿಯು ಶಾಸನ ಸಭೆಗೆ ಜವಾಬ್ದಾರಿಯಾಗಿಲ್ಲದೆ ನೋಡಿಕೊಳ್ಳುತ್ತಿದ್ದರು ಮತ್ತು 22 ವರ್ಗಾಯಿಸಿದ ವಿಷಯಗಳನ್ನು ರಾಜ್ಯಪಾಲ ಮತ್ತು ಭಾರತೀಯರನ್ನೊಳಗೊಂಡ ಮಂತ್ರಿಮಂಡಲವು ಶಾಸನ ಸಭೆಗೆ ಜವಾಬ್ದಾರಿಯಾಗಿ ನೋಡಿಕೊಳ್ಳುತ್ತಿದ್ದರು.

6. ಸೈಮನ್ ಕಮಿಷನ್ ಅನ್ನು ಏಕೆ ನೇಮಿಸಲಾಯಿತು?

ಸೈಮನ್ ಕಮಿಷನ್ ಅನ್ನು ಕೆಳಗಿನ ಪ್ರಮುಖ ಕಾರಣಗಳಿಗಾಗಿ ನೇಮಿಸಲಾಯಿತು.

a) 1919 ರ ಕಾಯ್ದೆಯ ಸುಧಾರಣೆಗಳು ವಿಫಲವಾದ ಕಾರಣ ಭಾರತೀಯರ ಸ್ವಾತಂತ್ರ್ಯ ಹೋರಾಟ ಇಮ್ಮಡಿಸಿತು.

ಬಿ) 1919 ಕಾಯಿದೆಯನ್ನು ಏರ್ಪಡಿಸಲು ಮತ್ತು ಎಷ್ಟರ ಮಟ್ಟಿಗೆ ಜವಾಬ್ದಾರಿ ಸರ್ಕಾರ ಪದ್ಧತಿಯನ್ನು ಜಾರಿಗೊಳಿಸಬಹುದು ಎಂಬುದರ ಬಗ್ಗೆ ಶಿಫಾರಸ್ಸು ಮಾಡಲು ಸೈಮನ್ ಕಮೀಷನ್ ನೇಮಿಸಲಾಯಿತು.

7. 1935 ರ ಕಾಯ್ದೆಯಲ್ಲಿ ಎಷ್ಟು ವಿಧಿಗಳು ಮತ್ತು ಷೆಡ್ಯೂಲ್‌ ಗಳಿವೆ?

1935 ರ ಭಾರತ ಸರ್ಕಾರದ ಕಾಯ್ದೆಯಲ್ಲಿ 321 ವಿಧಿಗಳು ಹಾಗೂ 10 ಷೆಡ್ಯೂಲ್‌ಗಳಿವೆ.

III. ಐದು ಅಂಕದ ಪ್ರಶ್ನೆಗಳು

1. ಮಧ್ಯಂತರ ಸರ್ಕಾರದ ಬಗ್ಗೆ ಟಿಪ್ಪಣಿ ಬರೆಯಿರಿ.

ವೈಸ್‌ರಾಯ್ ಮಧ್ಯಂತರ ಸರಕಾರ ರಚಿಸುವಂತೆ ಕಾಂಗ್ರೆಸ್ಸಿಗೆ ಆಹ್ವಾನಿಸಿದ ಪರಿಣಾಮವಾಗಿ ಸೆಪ್ಟೆಂಬರ್-2. 1946 ರಂದು ಸಂವಿಧಾನ ರಚನಾ ಸಮಿತಿಯು ಮಧ್ಯಂತರ ಸರ್ಕಾರವನ್ನು ರಚಿಸಿತು. ನೆಹರೂ, ಅದರ ಪ್ರಥಮ ಪ್ರಧಾನಿಯಾದರು. ವಲ್ಲಬ್‌ಬಾಯಿ ಪಟೇಲ್, ರಾಜಗೋಪಾಲಾಚಾರ್ಯ, ರಾಜೇಂದ್ರ ಪ್ರಸಾದ್ ಮುಂತಾದವರು ಆಡಳಿತ ಸೂತ್ರ ಹಿಡಿದರು. ಮುಸ್ಲಿಂ ಲೀಗ್ ಕೂಡ ಅಕ್ಟೋಬರ್ 15, 1946 ರಲ್ಲಿ ಮಧ್ಯಂತರ ಸರ್ಕಾರವನ್ನು ಸೇರಿತು. ಈ ಸರ್ಕಾರವು U.S.A ಸೇರಿದಂತೆ ಇತರ ರಾಷ್ಟ್ರಗಳೊಡನೆ ರಾಜ ತಾಂತ್ರಿಕ ಸಂಬಂಧವನ್ನು: ಏರ್ಪಡಿಸಿತು. ಈ ಮಧ್ಯಂತರ ಸರ್ಕಾರವು ಆಗಸ್ಟ್ 15, 1947 ರ ವರೆಗೆ ಅಸ್ತಿತ್ವದಲ್ಲಿತ್ತು.

2. ಪ್ರಥಮ ಮಹಾ ಚುನಾವಣೆಯ ಬಗ್ಗೆ ಟಿಪ್ಪಣಿ ಬರೆಯಿರಿ.

ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿಯನ್ನು ಆಧರಿಸಿ ಭಾರತದಲ್ಲಿ ಲೋಕಸಭೆಗೆ ಮೊದಲ ಮಹಾ ಚುನಾವಣೆಯು ಅಕ್ಟೋಬರ್ 1951 ರಿಂದ 1952 ರ ಫೆಬ್ರವರಿ ವರೆಗೆ ನಡೆಯಿತು. 489 ಲೋಕಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 45% ರಷ್ಟು ಶೇಕಡಾವಾರು ಮತ ಪಡೆಯುವುದರೊಂದಿಗೆ 364 ಲೋಕಸಭಾ ಸ್ಥಾನಗಳಲ್ಲಿ ವಿಜಯ ಸಾಧಿಸಿತು.

ಈ ಚುನಾವಣೆಯಲ್ಲಿ 176 ಮಿಲಿಯನ್ ನೋಂದಾಯಿತ ಮತದಾರರಲ್ಲಿ 105.5 ಮಿಲಿಯನ್ ಮತದಾರರು ಮತದಾನ ಮಾಡಿದರು. ಇದರಲ್ಲಿ 45% ರಷ್ಟು ಮತದಾನವಾಯಿತು.

ಈ ಚುನಾವಣೆಯು ಸಂಪೂರ್ಣ ಶಾಂತಿಯುತವಾಗಿ ನಡೆಯಿತು. ಇದು ಪ್ರಜೆಗಳು ಮತ್ತು ಪ್ರಜಾಪ್ರಭುತ್ವದಲ್ಲಿ ಇಟ್ಟಿದ್ದ ವಿಶ್ವಾಸವನ್ನು ಕಾರ್ಯರೂಪಕ್ಕೆ ತರುವ ಒಂದು ದಿಟ್ಟ ಹೆಜ್ಜೆಯಾಯಿತು. ಈ ಮಹಾ ಚುನಾವಣೆಯು ಒಂದು ಬೃಹತ್ ರಾಜಕೀಯ ಪ್ರಯೋಗವಾಗಿದೆ.

3.1947 ರ ಭಾರತ ಸ್ವಾತಂತ್ರ್ಯ ಕಾಯ್ದೆಯ ಮುಖ್ಯಾಂಶಗಳನ್ನು ವಿವರಿಸಿ.

1947 ಜುಲೈ 18 ರಂದು ಅಂಗೀಕಾರ ಪಡೆದ 1947 ರ ಭಾರತ ಸ್ವಾತಂತ್ರ್ಯ ಕಾಯಿದೆಯ ಮುಖ್ಯಾಂಶಗಳು ಈ ಕೆಳಗಿನಂತಿವೆ.

a) ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಸ್ವತಂತ್ರ ಡೊಮಿನಿಯನ್‌ಗಳನ್ನು ಆಗಸ್ಟ್ 15, 1947 ರಂದು ಸ್ಥಾಪಿಸಲಾಗುತ್ತಿದೆ.

b) ಪಾಕಿಸ್ತಾನದ ಭೂ ಪ್ರದೇಶವು ಸಿಂಥ್. ಬಲೂಚಿಸ್ತಾನ್, ಪಶ್ಚಿಮ ಪಂಜಾಬ್, ಪೂರ್ವ ಬಂಗಾಳ, ವಾಯುವ್ಯ ಗಡಿ ಪ್ರಾಂತ್ಯಗಳನ್ನು ಒಳಗೊಂಡಿರುತ್ತದೆ.

c) ಪಾಕಿಸ್ತಾನಕ್ಕೆ ಸೇರಿದ ಪ್ರಾಂತ್ಯಗಳನ್ನು ಬಿಟ್ಟು ಉಳಿದ ಎಲ್ಲಾ ಬ್ರಿಟಿಷ್ ಇಂಡಿಯಾದ ಪ್ರಾಂತ್ಯಗಳನ್ನು ಭಾರತ ಒಳಗೊಂಡಿರುತ್ತದೆ.

d) ಭಾರತ ಮತ್ತು ಪಾಕಿಸ್ತಾನಗಳನ್ನು ಬೇರ್ಪಡಿಸುವ ಗಡಿಯನ್ನು ಗುರುತಿಸಲು ಸರ್ ಸಿರಿಲ್ ಮಾಡ್‌ಕ್ಲಿಫ್‌ರ ಅಧ್ಯಕ್ಷತೆಯಲ್ಲಿ ಗಡಿ ಆಯೋಗವನ್ನು ನೇಮಿಸಿತು.

e) ದೇಶೀಯ ಸಂಸ್ಥಾನಗಳು ಯಾವುದೇ ಡೊಮಿನಿಯನ್‌ನಲ್ಲಿ ವಿಲೀನವಾಗಲು ಸ್ವಾತಂತ್ರ್ಯ ಪಡೆದಿರುತ್ತವೆ.

f) ಗವರ್ನರ್ ಜನರಲ್ ಮತ್ತು ಪ್ರಾಂತೀಯ ಗವರ್ನ‌ರಗಳು ಸಂವಿಧಾನದ ಮುಖ್ಯಸ್ಥರಾಗಿದ್ದರೂ ಶಾಸನ ರಚಿಸುವ ವಿಶೇಷಾಧಿಕಾರವನ್ನು ಹೊಂದಿರುವುದಿಲ್ಲ.

g) ಭಾರತದ ರಾಜ್ಯಗಳ ಮೇಲೆ ಚಕ್ರವರ್ತಿಯ ಅಧಿಪತ್ಯವು ಕೊನೆಗೊಂಡಿತು.

h) ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ ಹುದ್ದೆಯು ರದ್ದಾಯಿತು.

i) ಪ್ರತಿಯೊಂದು ಡೊಮಿನಿಯನ್‌ಗಳ ಸಂವಿಧಾನ ರಚನಾ ಸಭೆಗಳು ಶಾಸಕಾಂಗದ ಅಧಿಕಾರಗಳನ್ನು ಚಲಾಯಿಸುತ್ತವೆ.

1) ಆಗಸ್ಟ್ 15 ರಿಂದ ಬ್ರಿಟಿಷ್ ಚಕ್ರಾಧಿಪತ್ಯದ ಸರ್ಕಾರವು ಬ್ರಿಟಿಷ್ ಇಂಡಿಯಾದಲ್ಲಿ ಸೇರಿದಂತಹ ಯಾವುದೇ ಭಾಗಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕಾರ ಮತ್ತು ಜವಾಬ್ದಾರಿಯನ್ನು ಹೊಂದಿರುವುದಿಲ್ಲ.

4. ಜುನಾಗಡ, ಹೈದರಾಬಾದ್ ಮತ್ತು ಕಾಶ್ಮೀರದ ವಿಲೀನದ ಬಗ್ಗೆ ಬರೆಯಿರಿ.

ಜುನಾಗಡದ ವಿಲೀನ

ಜುನಾಗಡದ ಪ್ರಜೆಗಳು ಭಾರತದೊಂದಿಗೆ ವಿಲೀನವಾಗಲು ಬಯಸಿದ್ದರೂ ಅಲ್ಲಿನ ನವಾಬನು ಪಾಕಿಸ್ತಾನದೊಂದಿಗೆ ಸೇರ್ಪಡೆಯಾಗುವುದಾಗಿ ಘೋಷಿಸಿದನು. ಇದರಿಂದ ರಾಜ್ಯದ ಪ್ರಜೆಗಳು ನವಾಬನ ವಿರುದ್ಧ ಸಿಡಿದೆದ್ದರು. ಭಯಭೀತನಾದ ನವಾಬನು ಪಾಕಿಸ್ತಾನಕ್ಕೆ ಪಲಾಯನಗೈದನು. ಜನಮತ ಸಂಗ್ರಹದ ಆಧಾರದ ಮೇಲೆ ಜುನಾಗಡವನ್ನು ಸೌರಾಷ್ಟ್ರದೊಂದಿಗೆ ಸೇರ್ಪಡಿಸುವುದರ ಮೂಲಕ ಭಾರತದಲ್ಲಿ ವಿಲೀನವಾಯಿತು.

ಹೈದರಾಬಾದ್ ವಿಲೀನ

ಹೈದರಾಬಾದ್‌ನ ನಿಜಾಮನು ಮೊದಲಿನಂತೆ ಸ್ವತಂತ್ರ್ಯ ಸ್ಥಾನಮಾನವನ್ನು ಮುಂದುವರೆಸಿಕೊಂಡು ಹೋಗಲು ಭಾರತದೊಂದಿಗೆ 1947 ರಲ್ಲಿ ಒಪ್ಪಂದ ಮಾಡಿಕೊಂಡಿದ್ದನು. ಆದರೆ ನಿಜಾಮನ ದುರಾಡಳಿತದ ವಿರುದ್ಧ ಚಳುವಳಿಯು ಪ್ರಾಂತ್ಯಾದ್ಯಂತ ಪ್ರಾರಂಭವಾಯಿತು. ನಿಜಾಮನ ಪ್ಯಾರಾಮಿಲಿಟರಿ ಪಡೆಯಾದ ರಜಾಕರು ಜನರನ್ನು ಅತಿಯಾಗಿ ಶೋಷಿಸಿದರು. ಇಂತಹ ಅರಾಜಕತೆಯನು. ಅಂತ್ಯಗೊಳಿಸಲು 1948 ರಲ್ಲಿ ಭಾರತದ ಸೇನೆಯು ‘ಆಪರೇಷನ್ ಪೋಲೋ’ ಎಂಬ ಕಾರ್ಯಾಚರಣೆಯನ್ನು ಮಾಡಿತು. ಇದರಿಂದ ನಿಜಾಮನು ಶರಣಾಗತಿಯೊಂದಿಗೆ ಹೈದರಾಬಾದ್ ಭಾರತದ ಒಕ್ಕೂಟವನ್ನು ಸೇರ್ಪಡೆಗೊಂಡಿತು.

ಕಾಶ್ಮೀರದ ವಿಲೀನ

ಕಾಶ್ಮೀರಿಗಳು ತಮ್ಮ ರಾಜ್ಯವನ್ನು ಭಾರತ ಅಥವಾ ಪಾಕಿಸ್ತಾನದೊಂದಿಗೆ ಸೇರ್ಪಡೆ ಮಾಡಲು ಇಷ್ಟವಿಲ್ಲದೇ ಸ್ವತಂತ್ರ ರಾಜ್ಯವನ್ನಾಗಿ ಉಳಿಸಿಕೊಳ್ಳುವ ಬಯಕೆ ಹೊಂದಿದರು. ಭಾರತದೊಂದಿಗೆ ಸೇರ್ಪಡೆ ಹೊಂದಲು ಬಯಸಿದ ರಾಜ ಹರಿಸಿಂಗ್‌ನನ್ನು ಪದಚ್ಯುತಿಗೊಳಿಸಲು ಬೃಹತ್ ಚಳುವಳಿ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಪಾಕಿಸ್ತಾನದ ನುಸುಳುಕೋರರು ಕಾಶ್ಮೀರವನ್ನು ವಶಪಡಿಸಿಕೊಂಡರು. 1947 ಅಕ್ಟೋಬರ್ 26 ರಂದು ರಾಜಾ ಹರಿಸಿಂಗ್‌ನು ಭಾರತದಲ್ಲಿ ವಿಲೀನಗೊಳಿಸುವ ಅಶ್ಲೇಷನ್ ಪತ್ರಕ್ಕೆ ಸಹಿ ಹಾಕಿದ ನಂತರ ಭಾರತ ಸೇನೆಯು ಮಿಲಿಟರಿ ಕಾರ್ಯಾಚರಣೆ ಮಾಡಿ ಭಾರತದೊಂದಿಗೆ ಕಾಶ್ಮೀರವನ್ನು ವಿಲೀನಗೊಳಿಸಿತು.

5. ಭಾರತದಲ್ಲಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪಟ್ಟಿಮಾಡಿ

ಕ್ರಮ.ಸಂರಾಜ್ಯಗಳ ಹೆಸರುರಚನೆಯಾದ ವರ್ಷ
01ಆಂಧ್ರ ಪ್ರದೇಶ1956
02ಅರುಣಾಚಲ ಪ್ರದೇಶ1987
03ಅಸ್ಸಾಂ1947
04ಬಿಹಾರ1932
05ಗೋವಾ1987
06ಗುಜರಾತ್1960
07ಹರಿಯಾಣ1960
08ಹಿಮಾಚಲ ಪ್ರದೇಶ1971
09ಜಾರ್ಖಂಡ್2000
10ಕರ್ನಾಟಕ1956
11ಕೇರಳ1956
12ಮಧ್ಯಪ್ರದೇಶ1956
13ಮಹಾರಾಷ್ಟ್ರ1960
14ಮಣಿಪುರ1972
15ಮೇಘಾಲಯ1972
16ಮಿಜೋರಾಂ1987
17ನಾಗಾಲ್ಯಾಂಡ್1963
18ಒಡಿಶಾ1936
19ಪಂಜಾಬ್1960
20ರಾಜಸ್ಥಾನ1956
21ಸಿಕ್ಕಿಂ1975
22ತಮಿಳುನಾಡು1950
23ತೆಲಂಗಾಣ2014
24ತ್ರಿಪುರ1972
25ಉತ್ತರ ಪ್ರದೇಶ1950
26ಉತ್ತರಾಖಂಡ2000
27ಪಶ್ಚಿಮ ಬಂಗಾಳ1956
28ಜಮ್ಮು ಮತ್ತು ಕಾಶ್ಮೀರ1947
29ಛತ್ತೀಸ್‌ ಘಡ್2000

ಕೇಂದ್ರಾಡಳಿತ ಪ್ರದೇಶಗಳು

ಕ್ರಮ.ಸಂಕೇಂದ್ರಾಡಳಿತ ಪ್ರದೇಶಗಳ ಹೆಸರುಸ್ಥಾಪನೆಯಾದ ವರ್ಷ
01ಅಂಡಮಾನ್‌ ಮತ್ತು ನಿಕೋಬಾರ್1956
02ಚಂಡೀಗಡ್1966
03ದಾದ್ರ ಮತ್ತು ನಗರ ಹವೇಲಿ1961
04ಡಿಯೂ, ಡಾಮನ್1987
05ದೆಹಲಿ1952
06ಲಕ್ಷದ್ವೀಪ1961
07ಪುದುಚೇರಿ1963

6. ಪಟೇಲ್ ಸ್ಕಿಮ್ ಎಂದರೇನು?

ಪ್ರಾಂತ್ಯಗಳ ಏಕೀಕರಣ ಪ್ರಕ್ರಿಯೆಯ ಈ ಕೆಳಗಿನ ಮೂರು ಹಂತಗಳಲ್ಲಿ ನಡೆಯಿತು. ಒಟ್ಟಾರೆ ಈ ಪ್ರಕ್ರಿಯೆಯನ್ನು ಪಟೇಲ್ ಸ್ಟೀಮ್ ಎನ್ನುವರು.

1 ಸಣ್ಣ ರಾಜ್ಯಗಳನು. ಅವುಗಳೊಂದಿಗೆ ಹೊಂದಿಕೊಂಡಿರುವ ಪ್ರಾಂತ್ಯಗಳೊಂದಿಗೆ ವಿಲೀನ ಮಾಡುವುದು. ಇಂತಹ 216 ರಾಜ್ಯಗಳನ್ನು ಅವುಗಳಿಗೆ ಹೊಂದಿಕೊಂಡಿರುವ ಪ್ರಾಂತ್ಯಗಳೊಂದಿಗೆ ವಿಲೀನ ಮಾಡಲಾಯಿತು. ಉದಾ: ಒರಿಸಾದೊಂದಿಗೆ 24 ರಾಜ್ಯಗಳು.

2. ಹಲವಾರು ಸಣ್ಣ ರಾಜ್ಯಗಳು ಸೇರಿಕೊಂಡು ಒಂದು ದೊಡ್ಡ ರಾಜ್ಯವನ್ನು ರಚಿಸಿಕೊಂಡವು. ಈ ರಾಜಗಳಲ್ಲಿ ಇರುವ ಆಳ್ವಿಕೆಗಾರರಲ್ಲಿ ಪ್ರಮುಖ ವ್ಯಕ್ತಿಯೊಬ್ಬರು ರಾಜ ಪ್ರಮುಖರಾದರು. ಉದಾ: ಸೌರಾಷ್ಟ್ರ, ಪಟಿಯಾಲ ಮತ್ತು ಪೂರ್ವ ಪಂಜಾಬ್ ರಾಜ್ಯಗಳ ಯೂನಿಯನ್‌ಗಳನ್ನು ಭಾಗ-ಬಿ ರಾಜ್ಯಗಳು ಎಂದು ಕರೆಯಲಾಯಿತು.

3. ಸಣ್ಣ ಮತ್ತು ಹಿಂದುಳಿದ ಸುಮಾರು 61 ರಾಜ್ಯಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಪರಿವರ್ತಿಸಿ ಚೀಫ್ ಕಮೀಷನ‌ರ್ ಪ್ರಾಂತ್ರಗಳನ್ನಾಗಿ ಮಾಡಲಾಯಿತು. ಕಾಡ: ವಿಮಾಚಲ ಪ್ರದೇಶ. ಅಜೇರ, ಕೂರ್ಗ್

7.ರಾಜ್ಯಗಳ ಪುನರ್ ರಚನೆಗೆ ಭಾಷೆಯು ಆಧಾರವಾಗಿರಬೇಕೆಂಬುದಕ್ಕೆ ಕಾರಣಗಳನ್ನು ನೀಡಿ.

ಮೋತಿಲಾಲ್ ನೆಹರು ಸಮಿತಿ ಅಭಿಪ್ರಾಯ ಪಟ್ಟಿರುವಂತೆ ಒಂದು ಪ್ರಾಂತ್ಯವು ಸಾಕ್ಷರತೆ ಸಾಧಿಸಿ ತನ್ನ ಮಾತೃಭಾಷಾ ಮಾಧ್ಯಮದ ಮೂಲಕ ದಿನನಿತ್ಯದ ಕಾರ್ಯಗಳನ್ನು ನಿರ್ವಹಿಸಬೇಕಾದರೆ ಅದು ಭಾಷಾವಾರು ರಾಜ್ಯವಾಗಿರಬೇಕು. ಇದು ವೈವಿಧ್ಯಮಯ ಸಂಸ್ಕೃತಿ, ಸಂಪ್ರದಾಯ ಮತ್ತು ಸಾಹಿತ್ಯದ ಬೆಳವಣಿಗೆಗೆ ಸಹಾಯಕವಾಗಬಲ್ಲದು. ರಾಜ್ಯಗಳ ಪುನರ್‌ರಚನೆಗೆ ಭಾಷೆಯು ಆಧಾರವಾಗಿರಬೇಕೆಂಬುದಕ್ಕೆ ಕೆಳಗಿನ ಅಂಶಗಳು ಕಾರಣವಾಗಿವೆ.

a.ಭಾಷೆಯು ಜನರ ಸಂಸ್ಕೃತಿ ಮತ್ತು ಸಂಪ್ರದಾಯಗಳೊಂದಿಗೆ ಅತ್ಯಂತ ನಿಕಟವಾಗಿದೆ.

b. ಮಾತೃಭಾಷಾ ಮಾಧ್ಯಮದ ಮೂಲಕ ಮಾತ್ರ ಯಶಸ್ವಿಯಾಗಿ ಶಿಕ್ಷಣ ಪಡೆದು ಸಾಕ್ಷರತೆಯನ್ನು ಸಾಧಿಸಬಹುದು.

c. ಜನಸಾಮಾನ್ಯರ ಮಾತೃಭಾಷೆಯಲ್ಲಿ ರಾಜಕಾರಣ ಮತ್ತು ಆಡಳಿತವು ನಡೆದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ನೈಜ ಸ್ವರೂಪ ಲಭಿಸುತ್ತದೆ.

d. ಭಾಷಾವಾರು ರಾಜ್ಯಗಳ ಶಿಕ್ಷಣ, ಆಡಳಿತ ಮತ್ತು ನ್ಯಾಯ ಪರಿಹಾರಗಳನ್ನು ಮಾತೃಭಾಷೆಯಲ್ಲಿ ಮಾತ್ರ ಸಮರ್ಪಕವಾಗಿ ನೀಡಬಲ್ಲವು.

ಆದುದರಿಂದ ಸ್ವತಂತ್ರ ಭಾರತದಲ್ಲಿ ಭಾಷಾವಾರು ತತ್ವಗಳ ಆಧಾರದ ಮೇಲೆ ರಾಜ್ಯಗಳನ್ನು ಪುನರ್ ರಚಿಸಬೇಕೆಂದು ಅಭಿಪ್ರಾಯಪಡಲಾಯಿತು.

ಆದರೆ ಎಸ್.ಕೆ. ಧಾರ್ ಸಮಿತಿಯು ಭಾಷೆಗಳ ಆಧಾರದ ಮೇಲೆ ಪುನ‌ರ್ ರಚಿಸಬಾರದೆಂದು ಮತ್ತು ಜೆ.ವಿ.ಪಿ ಸಮಿತಿಯು ರಾಜ್ಯಗಳ ಪುನರಚನೆಯನ್ನು ಮುಂದೂಡುವುದು ಸೂಕ್ತವೆಂದು ಶಿಫಾರಸ್ಸು ಮಾಡಿತು. ಈ ಶಿಫಾರಸ್ಸುಗಳನ್ನು ಭಾಷಾ ಪ್ರೇಮಿಗಳು ವಿರೋಧಿಸಲಾರಂಭಿಸಿದರು. ದಕ್ಷಿಣ ಭಾರತದ ತೆಲುಗು ಭಾಷಾ ಪ್ರೇಮಿಗಳು ಆಂಧ್ರವನ್ನು ಮದ್ರಾಸ್‌ನಿಂದ ಪ್ರತ್ಯೇಕಿಸಬೇಕೆಂದು ಚಳುವಳಿಯನ್ನು ಪ್ರಾರಂಭಿಸಿದರು. ಆಂಧ್ರ ರಾಜ್ಯ ಸ್ಥಾಪನೆಗಾಗಿ ಕಾಂಗ್ರೆಸ್ಸಿನ ಪೊಟ್ಟಿ ಶ್ರೀ ರಾಮುಲು ಉಪವಾಸ ಸತ್ಯಾಗ್ರಹವನ್ನು 19 ನೇ ಅಕ್ಟೋಬರ್ 1952 ರಲ್ಲಿ ಪ್ರಾರಂಭಿಸಿದರು. 56 ದಿನಗಳ ಉಪವಾಸದ ಬಳಿಕ ಡಿಸೆಂಬರ್ 15 ರಂದು ನಿಧನರಾದರು.

ಪರಿಣಾಮವಾಗಿ ತೆಲುಗು ಮಾತನಾಡುವವರ ಒತ್ತಾಯಕ್ಕೆ ‘ಮಣಿದು ಮದ್ರಾಸಿನಿಂದ ಆಂಧ್ರವನ್ನು ಪ್ರತ್ಯೇಕಿಸಲು ಕೇಂದ್ರಸರ್ಕಾರ ಒಪ್ಪಿತು. ಇದಕ್ಕನುಸಾರವಾಗಿ ಅಕ್ಟೋಬರ್ 1. 1953 ರಂದು ಪ್ರಥಮ ಭಾಷಾವಾರು ರಾಜ್ಯವಾಗಿ ಆಂಧ್ರಪ್ರದೇಶವು ಉದಯವಾಯಿತು.

ಇದರಿಂದಾಗಿ ಇತರ ಭಾಷಾ ಪ್ರೇಮಿಗಳು ಸಹ ತಮ್ಮ ಭಾಷಾವಾರು ಪ್ರಾಂತ್ಯಗಳ ರಚನೆಗೆ ಹೋರಾಟವನ್ನು ಚುರುಕುಗೊಳಿಸಿತು. ಇದು ಭಾಷಾವಾರು ಪ್ರಾಂತ್ಯಗಳ ರಚನೆಗೆ ಒಂದು ಮೂಲ ಕಾರಣವಾಯಿತು.

8.1935 ರ ಕಾಯ್ದೆಯಲ್ಲಿರುವಂತೆ ಸಂಸ್ಥಾನಗಳ ಸ್ವಾಯತ್ತತೆಯನ್ನು ವಿವರಿಸಿ.

1935 ರ ಭಾರತ ಸರ್ಕಾರದ ಕಾಯ್ದೆಯ ಅತ್ಯಂತ ಪ್ರಮುಖ ನಿಯಮ ಪ್ರಾಂತೀಯ ಸ್ವಾಯತ್ತತೆ. ಈ ನಿಯಮದ ಪ್ರಕಾರ ಪ್ರಾಂತ್ಯಗಳಲ್ಲಿ ಸಂಪೂರ್ಣ ಜವಾಬ್ದಾರಿ ಸರ್ಕಾರ ಪದ್ದತಿ ಜಾರಿಗೆ ತರುವುದು, ಈ ಕಾಯಿದೆ ಪ್ರಕಾರ ಪ್ರಾಂತ್ಯಗಳು ಕೇಂದ್ರ ಸರ್ಕಾರದ ಪ್ರತಿನಿಧಿಗಳಾಗಿ ಉಳಿಯದೇ ಸ್ವಾಯತ್ತ ಆಡಳಿತಾತ್ಮಕ ಘಟಕಗಳಾದವು. ಆದರೂ ಪ್ರಾಂತ್ಯಗಳ ಮಟ್ಟದಲ್ಲಿ ಅನುಷ್ಠಾನಕ್ಕೆ ತಂದ ಪ್ರಾಂತ್ಯ ಸ್ವಾಯತ್ತತೆ ಕನಿಷ್ಠ ಪ್ರಮಾಣದಲ್ಲಿತ್ತು. ಏಕೆಂದರೆ ಕೇಂದ್ರ ಸರ್ಕಾರ ಮತ್ತು ಪ್ರಾಂತೀಯ ಗೌರರ್‌ಗಳು ಮಹತ್ವವಾದ ಕಾರ್ಯಗಳನ್ನು ತಾವೇ ಉಳಿಸಿಕೊಂಡು ಪ್ರಾಂತ್ಯಗಳ ಮೇಲೆ ನಿಯಂತ್ರಣ ಹೊಂದಿದ್ದರು. ಪ್ರಾಂತ್ಯಗಳಲ್ಲಿ ಗೌರರ್‌ಗಳು ಕಾರ್ಯಾಂಗಾದಿ ಕಾರಗಳನ್ನು ಚಲಾಯಿಸುವ ಅಧಿಕಾರ ಹೊಂದಿದ್ದರು. ರಾಜ್ಯಪಾಲರನ್ನು 5 ವರ್ಷದ ಅವಧಿಗೆ ಬ್ರಿಟಿಷ್ ಸರಕಾರ ನೇಮಕ ಮಾಡುತ್ತಿತ್ತು.

11 ಪ್ರಾಂತ್ಯಗಳಲ್ಲಿ 6 ಪ್ರಾಂತ್ಯಗಳು ದ್ವಿಸದನ ಪದ್ಧತಿಯನ್ನು ಮತ್ತು 5 ಪ್ರಾಂತ್ಯಗಳು, ಏಕಸದನ ಪದ್ದತಿಯನ್ನು ಅಳವಡಿಸಿಕೊಳ್ಳಲು ಅವಕಾಶವಿತ್ತು.

ಪ್ರಾಂತ್ಯಗಳ ಸ್ವಾಯತ್ತತೆಯನ್ನು ಜಾರಿಗೊಳಿಸಲು 1937 ರಲ್ಲಿ ಇವುಗಳ ಶಾಸಕಾಂಗಗಳಿಗೆ ಚುನಾವಣೆಗಳು ನಡೆದವು. 8 ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಜಯಗಳಿಸಿ ಆಡಳಿತ ನಡೆಸಿ ತರಬೇತಿ ಪಡೆದಂತಾಯಿತು. ಪ್ರಥಮ ಬಾರಿಗೆ ಪ್ರಾಂತೀಯ ಶಾಸನ ಸಭೆಗಳು, ಪ್ರತಿನಿಧಿ ಸಭೆಗಳಂತೆ ಕೆಲಸ ಮಾಡಿದವು. ಅಲ್ಲದೆ ಮಂತ್ರಿಮಂಡಲಗಳನ್ನು ಭಾರತೀಯರೇ ರಚಿಸಿಕೊಳ್ಳಲು ಅವಕಾಶವನ್ನು ಈ ಕಾಯಿದೆಯಿಂದ ಪಡೆದರು.

1935 ರ ಕಾಯಿದೆಯ ಈ ಹೊಸ ಸರ್ಕಾರ ಆ ಪದ್ದತಿಯು ಕೇಂದ್ರ ಮಟ್ಟದಲ್ಲಿ ರಾಜಕೀಯ ಕಾರಣಗಳಿಂದಾಗಿ ಅನುಷ್ಠಾನಕ್ಕೆ ಬರಲಿಲ್ಲ. ಕೆಲವು ದೇಶೀಯ ಸಂಸ್ಥಾನಗಳು ಮುಸ್ಲಿಂ ಲೀಗ್ ಸಂಯುಕ್ತ ಪದ್ದತಿಯನ್ನು ಬೆಂಬಲಿಸಲಿಲ್ಲ ತನ್ನದೇ ಆದ ಕಾರಣಗಳಿಗಾಗಿ ಕಾಂಗ್ರೆಸ್ ಕೂಡ 1953 ರ ಕಾಯಿದೆಯನ್ನು ಟೀಕಿಸಿತು.

IV. ಹತ್ತು ಅಂಕಗಳ ಪ್ರಶ್ನೆಗಳು :

1.1935 ರ ಭಾರತ ಸರ್ಕಾರದ ಕಾಯ್ದೆಯನ್ನು ವಿವರಿಸಿ.

1935 ರ ಕಾಯಿದೆಯ ಪೂರ್ವಾಪರ :

1919 ರ ಕಾಯ್ದೆಯ ಮೂಲಕ ಜಾರಿಗೆ ಬಂದ ರಾಜಕೀಯ ಸುಧಾರಣೆಗಳು ಭಾರತೀಯ ಸ್ವಾತಂತ್ರ್ಯ ಹೋರಾಟವನ್ನು ತಡೆಯಲಿಲ್ಲ. ಈ ಕಾಯ್ದೆಗೆ ಅನುಗುಣವಾಗಿ ರಚಿಸಲ್ಪಟ್ಟ ಸರ್ಕಾರ ಪದ್ಧತಿಯನ್ನು ವಿಮರ್ಷಿಸಲು ಹಾಗೂ ಎಷ್ಟರ ಮಟ್ಟಿಗೆ ಜವಾಬ್ದಾರಿ ಸರ್ಕಾರ ಪದ್ಧತಿಯನ್ನು ಜಾರಿಗೊಳಿಸಬಹುದು ಎಂಬುದರ ಬಗ್ಗೆ ಶಿಫಾರಸ್ಸು ಮಾಡಲು ಬ್ರಿಟಿಷ್ ಸರಕಾರ 1927 ರಲ್ಲಿ ಸೈಮನ್ ಸಮಿತಿಯನ್ನು ನೇಮಿಸಿತು. ಈ ಸಮಿತಿಯಲ್ಲಿ ಭಾರತೀಯರಿಗೆ ಪ್ರಾತಿನಿಧ್ಯತೆ ಕೊಡಲಿಲ್ಲ. ಪರಿಣಾಮವಾಗಿ ಈ ಸಮಿತಿ ಭಾರತೀಯರ ಟೀಕೆಗೆ ಮತ್ತು ಪ್ರತಿಭಟನೆಗೆ ಒಳಗಾಯಿತು. ಈ ಸಮಿತಿಯು ಅಖಿಲ ಭಾರತ ಸಂಯುಕ್ತತೆಯನ್ನು ವಿರೋಧಿಸಿ ಕೇಂದ್ರದಲ್ಲಿ ಜವಾಬ್ದಾರಿ ಸರ್ಕಾರ ಪದ್ಧತಿಯನ್ನು ಶಿಫಾರಸ್ಸು ಮಾಡಲಿಲ್ಲ. ಭಾರತದಲ್ಲಿ ಎಲ್ಲಾ ಪಕ್ಷಗಳು ಮೋತಿಲಾಲ್ ನೆಹರು ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದವು ಈ ನೆಹರು ಸಮಿತಿ ತನ್ನ ವರದಿಯಲ್ಲಿ [1928] ಸಂಯುಕ್ತ ಪದ್ಧತಿಯನ್ನು ಮತ್ತು ಪೂರ್ಣ ಸ್ವರಾಜ್ಯವನ್ನು ಶಿಫಾರಸ್ಸು ಮಾಡಿತು.

ವೈಸ್‌ರಾಯ್ ಆಗಿದ್ದ ಲಾರ್ಡ್ ಇರ್ವಿನ್ ಭಾರತೀಯರ ನೋವು ಮತ್ತು ಆಂದೋಲನಗಳನ್ನು ಅರಿತು 1929 ರಲ್ಲಿ ಒಂದು ಹೇಳಿಕೆಯನ್ನು ನೀಡಿ “ಬ್ರಿಟಿಷ್ ಸರ್ಕಾರ ಭಾರತಕ್ಕೆ ಡೊಮಿನಿಯನ್ ಸ್ಥಾನ-ಮಾನ ನೀಡಲು ಉದ್ದೇಶ ಹೊಂದಿದೆ ಎಂದರು. ಆದರೆ ಡೊಮಿನಿಯನ್ ಸ್ಥಾನ ಮಾನದ ಬಗ್ಗೆ ಇಂಗ್ಲೆಂಡ್ ಮತ್ತು ಭಾರತದಲ್ಲಿ ವಾದ ವಿವಾದಗಳು ತಲೆದೋರಿದವು ಭಾರತದ ರಾಷ್ಟ್ರೀಯ ಕಾಂಗ್ರೆಸ್ ಬ್ರಿಟಿಷ್ ಸರ್ಕಾರ ಹೇಳಿಕೆ ಬಗ್ಗೆ ಅಪನಂಬಿಕೆ ಹೊಂದಿ 1930 ರಲ್ಲಿ ನಡೆದ ಕರಾಚಿ ಅಧಿವೇಶನದಲ್ಲಿ ಪೂರ್ಣ ಸ್ವಾತಂತ್ರ್ಯದ ಬಗ್ಗೆ ಗೊತ್ತುವಳಿಯನ್ನು ಅಂಗೀಕರಿಸಿತು. ಅಲ್ಲದೇ ಅದೇ ವರ್ಷ ಲಂಡನ್ನಲ್ಲಿ ನಡೆದ ಮೊದಲ ದುಂಡು ಮೇಜಿನ ಸಮ್ಮೇಳನವನ್ನು ಬಹಿಷ್ಕರಿಸಿತು. ಭಾರತದಿಂದ ಇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಈ ಸಮ್ಮೇಳನದಲ್ಲಿ ಬಿ.ಆರ್.ಅಂಬೇಡ್ಕರ್ ಮಾತನಾಡಿ “ಸ್ವಾತಂತ್ರ್ಯ ಭಾರತದ ಗುರಿ” ಎಂದರು.

ವೈಸ್‌ರಾಯ್ ಆಗಿದ್ದ ಲಾರ್ಡ್ ಇಶ್ವಿನ್ ಭಾರತದ ರಾಜಕೀಯ ಸುಧಾರಣೆ ಬಗ್ಗೆ ಕಾಳಜಿ ಹೊಂದಿ ಜೈಲಿನಲ್ಲಿದ್ದ ಗಾಂಧೀಜಿಯವರನ್ನು ಬಿಡುಗಡೆ ಮಾಡಿದರು. ಗಾಂಧಿ ಇಶ್ವಿನ್ ಒಪ್ಪಂದದ ಪ್ರಕಾರ ಭಾರತದ ರಾಷ್ಟ್ರೀಯ ಕಾಂಗ್ರೆಸ್ ಪರವಾಗಿ 2ನೇ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಲು ಗಾಂಧೀಜಿ ಒಪ್ಪಿದರು. 2ನೇ ದುಂಡು ಮೇಜಿನ ಸಮ್ಮೇಳನ 1931 ರ ಸೆಪ್ಟೆಂಬರ್ 7 ರಂದು ಪ್ರಾರಂಭವಾಗುವ ವೇಳೆಗೆ ಲಾರ್ಡ್ ವಿಲ್ಲಿಂಗ್‌ಡನ್ ಭಾರತದ ವೈಸ್‌ರಾಯ್ ಆದರು. ಇವರು ಕಾಂಗ್ರೆಸ್ಸನ್ನು ದಮನ ಮಾಡಲು ನಿರ್ಧರಿಸಿದರು. ಸೆಪ್ಟೆಂಬರ್ 7 ರಿಂದ ಡಿಸೆಂಬರ್ 1, 1931 ರ ವರೆಗೆ ನಡೆದ 2ನೇ ದುಂಡು ಮೇಜಿನ ಸಮ್ಮೇಳನದಲ್ಲಿ ಗಾಂಧೀಜಿ ಹಾಗೂ ಇತರ ಭಾರತೀಯ ಪ್ರತಿನಿಧಿಗಳು ಲಂಡನ್‌ನಲ್ಲಿ ಹಾಜರಿದ್ದರು. ಗಾಂಧೀಜಿ ಮಂಡಿಸಿದ ಪೂರ್ಣ ಸ್ವರಾಜ್ಯದ ಬೇಡಿಕೆಯನ್ನು ಬ್ರಿಟಿಷ್ ಸರಕಾರ ಒಪ್ಪಲಿಲ್ಲ.

ಈ ಮಧ್ಯೆ ಬ್ರಿಟಿಷ್ ಸರಕಾರ ಆಗಸ್ಟ್ 4, 1932 ರಂದು “ಕಮ್ಯುನಲ್ ಅವಾರ್ಡ್” ನ್ನು ಪ್ರಕಟಿಸಿತು. ಇದರ ಪ್ರಕಾರ ಪ್ರಾಂತ್ಯ ಶಾಸಕಾಂಗಗಳಲ್ಲಿ ಮುಸ್ಲಿಮರಿಗೆ, ಆಂಗ್ಲೋ ಇಂಡಿಯನ್ನರಿಗೆ, ಇಂಡಿಯನ್ ಕ್ರಿಶ್ಚಿಯನ್ನರಿಗೆ, ಸಿಬ್ಬರಿಗೆ, ಯೂರೋಪಿಯನ್ನರಿಗೆ, 4 ನಿಮ್ನ ವರ್ಗಗಳಿಗೆ ಪ್ರತ್ಯೇಕ ಚುನಾವಣಾ ಪದ್ದತಿಗೆ ಅವಕಾಶವಿತ್ತು. “ಪರಿಶಿಷ್ಟ ವರ್ಗದವರು ಹಿಂದೂ ಸಮಾಜದ ಒಂದು ಭಾಗವಾಗಿದ್ದರಿಂದ ಅವರಿಗೆ ಪ್ರತ್ಯೇಕ ಚುನಾವಣಾ ವಿಧಾನ ಇರಬಾರದೆಂದು ಗಾಂಧೀಜಿ ವಾದಿಸಿ, ಇದನ್ನು ರದ್ದುಪಡಿಸುವವರೆಗೆ ಉಪವಾಸ ಸತ್ಯಾಗ್ರಹವನ್ನು ಪುಣೆಯ ಯರವಾಡ ಜೈಲಿನಲ್ಲಿ ಸೆಪ್ಟೆಂಬರ್ 20, 1932 ರಂದು ಪ್ರಾರಂಭಿಸಿದರು. ಅಂಬೇಡ್ಕರ್ ಪರಿಶಿಷ್ಟ ವರ್ಗಗಳಿಗೆ ನೀಡಿದ್ದ ಪ್ರತ್ಯೇಕ ಚುನಾವಣಾ ಪದ್ಧತಿಯನ್ನು ಒಪ್ಪಿದ್ದರೂ, ಗಾಂಧೀಜಿಯ ಜೀವ ಉಳಿಸಲು ಸಂಧಾನಕ್ಕೆ ಬಂದರು. ಪರಿಣಾಮವಾಗಿ ಪೂನಾ ಒಪ್ಪಂದ-1932 ಜಾರಿಗೆ ಬಂದು ಪರಿಶಿಷ್ಟ ವರ್ಗಗಳಿಗೆ ಪ್ರತ್ಯೇಕ ಚುನಾವಣಾ ಪದ್ಧತಿ ಬದಲು ಮೀಸಲು ಸ್ಥಾನಗಳ ನಿಯಮ ಜಾರಿಗೆ ಬಂದಿತು.

ಮೂರನೇ ದುಂಡು ಮೇಜಿನ ಸಮ್ಮೇಳನ 1932 ರ ನವೆಂಬರ್ 17 ರಿಂದ ಡಿಸೆಂಬರ್ 24 ರ ವರೆಗೆ ಲಂಡನ್‌ಲ್ಲಿ ನಡೆಯಿತು. ಭಾರತದ ರಾಷ್ಟ್ರೀಯ ಕಾಂಗ್ರೆಸ್ ಇದರಲ್ಲಿ ಭಾಗವಹಿಸಲಿಲ್ಲ. ಈ ಸಮ್ಮೇಳನವು ಭಾರತದ ಸ್ವಾತಂತ್ರ್ಯಕ್ಕೆ ಗಮನ ಕೊಡಲಿಲ್ಲ ಭಾರತದ ರಾಜಕೀಯ ಸುಧಾರಣೆಗಳ ಬಗ್ಗೆ ಬ್ರಿಟಿಷ್ ಸರ್ಕಾರ 1933 ರಲ್ಲಿ ಒಂದು ಶ್ವೇತ ಪತ್ರವನ್ನು ಸಿದ್ದಪಡೆಸಿತು. ಅಂತಿಮವಾಗಿ ಬ್ರಿಟಿಷ್ ಪಾರ್ಲಿಮೆಂಟ್ ಮಸೂದೆಯೊಂದನ್ನು ಅಂಗೀಕರಿಸಿತು ಇದು ಆಗಸ್ಟ್ 2, 1935 ರಂದು ಬ್ರಿಟಿಷ್ ರಾಣಿಯ ಒಪ್ಪಿಗೆ ಪಡೆದು ಕಾಯ್ದೆಯಾಯಿತು.

1935 ರ ಕಾಯ್ದೆಯ ಪ್ರಮುಖ ಅಂಶಗಳು:

ಈ ಕಾಯ್ದೆ ಭಾರತದ ರಾಜಕೀಯ ಸುಧಾರಣೆಗಳಲ್ಲಿ ಒಂದು ಹೊಸ ಯುಗವನ್ನು ಪ್ರಾರಂಭಿಸಿತು. ಬ್ರಿಟಿಷ್-ಭಾರತ ಮತ್ತು ದೇಶೀಯ ಸಂಸ್ಥಾನಗಳನ್ನೊಳಗೊಂಡ ಸಂಯುಕ್ತ ಪದ್ಧತಿಯನ್ನು ಸ್ಥಾಪಿಸಲು ಅವಕಾಶ ಕಲ್ಪಿಸಿತು. ಕೇಂದ್ರ ಮಟ್ಟದಲ್ಲಿ ದ್ವಿಸರ್ಕಾರ ಪದ್ಧತಿಯನ್ನು [ಡಯಾರ್ಕಿ ಅಳವಡಿಸಲು ಶಿಫಾರಸ್ಸು ಮಾಡಿತು. ಈ ಕಾಯಿದೆ ಪ್ರಕಾರ ವೈಸ್‌ರಾಯ್ ಬ್ರಿಟಿಷ್ ಸರ್ಕಾರಕ್ಕೆ ಜವಾಬ್ದಾರಿಯಾಗಿದ್ದರು. ಇಂಡಿಯಾ ಕೌನ್ಸಿಲ್ ಪದ್ಧತಿಗೆ ಶಿಫಾರಸ್ಸು ಮಾಡಿತು.

1935 ರ ಕಾಯಿದೆಯ ಅತ್ಯಂತ ಮುಖ್ಯ ನಿಯಮ ಪ್ರಾಂತ್ಯ ಸ್ವಾಯತ್ತತೆ ಆಗಿತ್ತು. ಈ ನಿಯಮದ ಪ್ರಕಾರ ಪ್ರಾಂತ್ಯಗಳಲ್ಲಿ ಪೂರ್ಣ ಜವಾಬ್ದಾರಿ ಸರ್ಕಾರ ಪದ್ದತಿಗೆ ಜಾರಿಗೆ ಬಂದಿತು. ರಾಜಕೀಯ ಕಾರಣಗಳಿಂದಾಗಿ ಕೇಂದ್ರ ಮಟ್ಟದಲ್ಲಿ ಹೊಸ ಸರ್ಕಾರ ಪದ್ದತಿ ಅನುಷ್ಠಾನಕ್ಕೆ ಬರಲಿಲ್ಲ. ಕೆಲವು ದೇಶೀಯ ಸಂಸ್ಥಾನಗಳು ಮತ್ತು ಮುಸ್ಲಿಂ ಲೀಗ್ ಸಂಯುಕ್ತ ಪದ್ಧತಿಯನ್ನು ಬೆಂಬಲಿಸಲಿಲ್ಲ. ತನ್ನದೇ ಆದ ಕಾರಣಗಳಿಗಾಗಿ ಕಾಂಗ್ರೆಸ್ ಕೂಡ 1935 ರ ಕಾಯ್ದೆಯನ್ನು ಟೀಕಿಸಿತು.

ಪ್ರಾಂತ್ಯಗಳಲ್ಲಿ ರಾಜ್ಯಪಾಲರು ಕಾರ್ಯಾಂಗಾಧಿಕಾರಿ -ಗಳನ್ನು ಚಲಾಯಿಸುವ ಅಧಿಕಾರ ಹೊಂದಿದ್ದರು. ಇವರನ್ನು 5 ವರ್ಷದ ಅವಧಿಗೆ ಬ್ರಿಟಿಷ್ ಸರ್ಕಾರ ನೇಮಕ ಮಾಡುತ್ತಿತ್ತು. 11 ಪ್ರಾಂತ್ಯಗಳಲ್ಲಿ 6 ಪ್ರಾಂತ್ಯಗಳು ಸದನ ಪದ್ಧತಿಯನ್ನು ಮತ್ತು 5 ಪ್ರಾಂತ್ಯಗಳು ಏಕಸದನ ಪದ್ಧತಿಯನ್ನು ಅಳವಡಿಸಿಕೊಳ್ಳಲು ಅವಕಾಶವಿತ್ತ 5 ಪ್ರಾಂತ್ಯಗಳ ಸ್ವಾಯತ್ತತೆಯನ್ನು ಜಾರಿಗೊಳಿಸಲು 1937 ರಲ್ಲಿ ಅವುಗಳ ಶಾಸಕಾಂಗಗಳಿಗೆ ಚುನಾವಣೆಗಳು ನಡೆದವು.

ಈ ಕಾಯ್ದೆಯು ಶಾಸನೀಯ ಅಧಿಕಾರಗಳನ್ನು ಕೇಂದ್ರ – ಮತ್ತು ಪ್ರಾಂತೀಯ ಶಾಸನ ಸಭೆಗಳ ನಡುವೆ ವಿಭಜಿಸಿತು. ಇದು ಮೂರು ಹಂತದ ಅಧಿಕಾರ ವಿಭಜಿಸಿಯಾಗಿದೆ. ಮೊದಲ ಹಂತದ ಕೇಂದ್ರ ಪಟ್ಟಿ ಯಲ್ಲಿರುವ 50 ವಿಷಯಗಳ ಮೇಲೆ ಶಾಸನ ರಚಿಸುವ ಅಧಿಕಾರ ಕೇಂದ್ರ ಶಾಸಕಾಂಗಕ್ಕೆ ಇರುತ್ತದೆ. ಎರಡನೇ ಹಂತದ ಪ್ರಾಂತ್ಯಗಳ ಪಟ್ಟಿಯಲ್ಲಿ 54 ವಿಷಯಗಳಿದ್ದು ಇವುಗಳ ಮೇಲೆ ಶಾಸನ ರಚಿಸುವ ಅಧಿಕಾರ ಪ್ರಾಂತ್ಯಗಳ ಶಾಸಕಾಂಗಕ್ಕೆ ಇರುತ್ತದೆ. 36 ವಿಷಯಗಳನ್ನು ಒಳಗೊಂಡ ಸಮವರ್ತಿ ಪಟ್ಟಿಯ ಮೇಲೆ ಕಾನೂನು ರಚಿಸುವ ಅಧಿಕಾರ ಕೇಂದ್ರ ಮತ್ತು ಪ್ರಾಂತೀಯ ಸರ್ಕಾರಗಳೆರಡಕ್ಕೂ ಇರುತ್ತದೆ. ಉಳಿದ ಅಧಿಕಾರಗಳು ಗೌರರ್‌ ಜನರಲ್‌ ಅವರಲ್ಲಿರುತ್ತದೆ.

ಈ ಕಾಯ್ದೆಯು ಪ್ರಪ್ರಥಮ ಬಾರಿಗೆ ದೆಹಲಿಯಲ್ಲಿ ಫೆಡರಲ್ ನ್ಯಾಯಾಲಯದ ಅಸ್ತಿತ್ವಕ್ಕೆ ಅವಕಾಶ ಮಾಡಿಕೊಟ್ಟಿತು.

1935 ರ ಭಾರತ ಸರ್ಕಾರದ ಕಾಯಿದೆಯು ಸಂವಿಧಾನಿಕ ಬೆಳವಣಿಗೆಯಲ್ಲಿ. ಒಂದು ಪ್ರಮುಖ ಮೈಲುಗಲ್ಲಾಗಿದೆ. ಈ ಒಂದು ಕಾಯಿದೆಯು ಭಾರತದ ರಾಜಕೀಯ ವ್ಯವಸ್ಥೆಯ ಸುಧಾರಣೆಗಳಲ್ಲಿ ಹೊಸ ಶಕೆಯನ್ನು ಪ್ರಾರಂಭಿಸಿತು.

2. ರಾಜ್ಯಗಳ ಪುನರ್ ರಚನೆಯ ಬಗ್ಗೆ ವಿವರಿಸಿ.

ಒಂದು ಪ್ರಾಂತ್ಯವು ತನ್ನ ಸ್ವಂತ ಭಾಷೆಯ ಮೂಲಕ ತನ್ನನ್ನು ತಾನು ಶಿಕ್ಷಣ ಮಾಡಿಕೊಂಡು ತನ್ನ ದೈನಂದಿನ ಕೆಲಸವನ್ನು ಮಾಡಿಕೊಳ್ಳಬೇಕಾದರೆ, ಅದು ಅಗತ್ಯವಾಗಿ ಭಾಷಾ ಪ್ರದೇಶವಾಗಿರಬೇಕು”.

ನೆಹರೂ ಸಮಿತಿ ವರದಿ

ಭಾರತದಲ್ಲಿದ್ದ ನೂರಾರು ದೇಶೀಯ ಸಂಸ್ಥಾನಗಳನ್ನು ಭಾರತದ ಒಕ್ಕೂಟದಲ್ಲಿ ವಿಲೀನಗೊಳಿಸಲು ಭಾರತ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿತು. ದೇಶದ ಏಕತೆಯನ್ನು ಸಾಧಿಸಿ ಉಳಿಸಿದ ಕೀರ್ತಿ ಪಟೇಲ್‌ರಿಗೆ ಸಲ್ಲುತ್ತದೆ.

‘ದೇಶೀಯ ಸಂಸ್ಥಾನಗಳು ಭಾರತದ ಒಕ್ಕೂಟದಲ್ಲಿ ವಿಲೀನವಾಗುವುದು ಅಥವಾ ಬಿಡುವುದು ಅವುಗಳ ಇಚ್ಛೆಗೆ *ಬಿಟ್ಟ ವಿಷಯ ಎಂದು ಬ್ರಿಟಿಷ್ ಸರ್ಕಾರ ಹೇಳಿದ ಆಧಾರದ ಮೇಲೆ ಕೆಲವು ದೇಶೀಯ ಸಂಸ್ಥಾನಗಳಾಗಿದ್ದ ಹೈದರಾಬಾದ್‌, ತ್ರವಣಕೋರ್, ಕೊಚ್ಚಿನ್ ಮತ್ತು ಜಮ್ಮು ಕಾಶ್ಮೀರ ಸ್ವತಂತ್ರ ರಾಷ್ಟ್ರಗಳಾಗಲು ಇಚ್ಛಿಸಿದವು.

ಮೈಸೂರು ಸಂಸ್ಥಾನವು ಜವಾಬ್ದಾರಿ ಸರಕಾರ ಚಳುವಳಿಯಿಂದಾಗಿ ಅಕ್ಟೋಬರ್ 24, 1947 ರಂದು ಭಾರತ ಒಕ್ಕೂಟದಲ್ಲಿ ವಿಲೀನಗೊಂಡಿತು. ನಂತರ ಹೈದರಾಬಾದ್ ಪ್ರಾಂತ್ಯವು ವಿಲೀನವಾಯಿತು. ಇತರ ಕೆಲವು ದೇಶೀಯ ಸಂಸ್ಥಾನಗಳು ಅಕ್ಕ-ಪಕ್ಕದ ರಾಜ್ಯಗಳಲ್ಲಿ ವಿಲೀನವಾದವು. ಉದಾ: 1948ರಲ್ಲಿ ಒರಿಸ್ಸಾದ 24 ಸಂಸ್ಥಾನಗಳು ಮತ್ತು ಸೆಂಟ್ರಲ್ ಪ್ರಾವಿನ್ಸ್‌ಸನ್ 14 ಸಂಸ್ಥಾನಗಳು ಒರಿಸ್ಸಾ ರಾಜ್ಯದಲ್ಲಿ ವಿಲೀನವಾದವು.

1950 ರಲ್ಲಿದ್ದ ಭಾರತದ 29 ರಾಜ್ಯಗಳನ್ನು ಕೆಳಕಂಡಂತೆ 4 ವರ್ಗಗಳಾಗಿ ಕೇಂದ್ರ ಸರ್ಕಾರ ವಿಂಗಡಿಸಿತ್ತು.

‘ಎ’ ವರ್ಗದ ರಾಜ್ಯಗಳು:

ಅಸ್ಸಾಂ, ಬಿಹಾರ್, ಮುಂಬೈ, ಮಧ್ಯಪ್ರದೇಶ, ಮದ್ರಾಸ್, ಒರಿಸ್ಸಾ, ಪಂಜಾಬ್, ಯುನೈಟೆಡ್ ಪ್ರಾವಿನ್‌ಸನ್ ಮತ್ತು ಪಶ್ಚಿಮ ಬಂಗಾಳ.

‘ಬಿ’ ವರ್ಗದ ರಾಜ್ಯಗಳು:

ಹೈದರಾಬಾದ್, ಜಮ್ಮು ಮತ್ತು ಕಾಶ್ಮೀರ, ಮಧ್ಯಭಾರತ, ಮೈಸೂರು. ಪೆಪ್ಪು, ರಾಜಸ್ತಾನ್, ಸೌರಾಷ್ಟ್ರ, ತ್ರವಣಾಕೋರ್, ಕೊಚ್ಚಿನ್ ಮತ್ತು ವಿಂಧ್ಯ ಪ್ರದೇಶ.

‘ಸಿ’ ವರ್ಗದ ರಾಜ್ಯಗಳು:

ಅಜೀರ, ಭೋಪಾಲ್, ಬಿಲಾಸ್‌ಪುರ, ಕೂಚ್‌ಬಿಹಾರ್ ಕೂರ್ಗ್, ದೆಹಲಿ, ಹಿಮಾಚಲ ಪ್ರದೇಶ, ಕಚ್, ಮಣಿಪುರ, ಮತ್ತು ತ್ರಿಪುರ.

‘ಡಿ’ ವರ್ಗದ ರಾಜ್ಯಗಳು:

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸ್ವಾತಂತ್ರ್ಯ ಪೂರ್ವದಲ್ಲೇ ಪ್ರಾಂತ್ಯಗಳನ್ನು ಭಾಷೆಯ ಆಧಾರದ ಮೇಲೆ ರಚಿಸುವಂತೆ ಬ್ರಿಟಿಷ್ ಸರ್ಕಾರಕ್ಕೆ ಕೆಲವು ಕಾಂಗ್ರೆಸ್ ಮುಖಂಡರು ಮನವಿಯನ್ನು ಸಲ್ಲಿಸಿದ್ದರು. 1920, 1937 ಮತ್ತು 1938 ರಲ್ಲಿ ಈ ಕೋರಿಕೆಯನ್ನು ಕಾಂಗ್ರೆಸ್ ಪುನರುಚ್ಚರಿಸಿತು. 1928 ರ ಮೋತಿಲಾಲ್ ನೆಹರು ಸಮಿತಿಯ ವರದಿ ಕೂಡ ಬಹು ಭಾಷಾ ಪ್ರಾಂತ್ಯಗಳನ್ನು ಭಾಷೆಯ ಆಧಾರದ ಮೇಲೆ ಪುನರ್ ರಚನೆ ಮಾಡಬೇಕೆಂದು ಶಿಫಾರಸ್ಸು ಮಾಡಿತು.

ಸಂವಿಧಾನ ರಚನಾ ಸಭೆಯ ಅಧ್ಯಕ್ಷರು ಎಸ್‌.ಕೆ. ದಾರ್ ಅವರ ಅಧ್ಯಕ್ಷತೆಯಲ್ಲಿ ಭಾಷಾವಾರು ಪ್ರಾಂತ್ಯಗಳ ಆಯೋಗವನ್ನು ನೇಮಿಸಿದರು. ಆದರೆ ಈ ಸಮಿತಿಯು ಭಾಷೆಗಳ ಆಧಾರದ ಮೇಲೆ ರಾಜ್ಯಗಳನ್ನು ಪುನರಚಿಸಬಾರದು ಎಂದು ತಿಳಿಸಿತು.

ಪದ್ಧತಿಗಳು ಹಾಗೂ ಬಳಕೆಗಳಿಗೆ ಅನುಗುಣವಾಗಿ ಪ್ರತಿಯೊಂದು ರಾಜ್ಯದ ಸಂವಿಧಾನ ಅದರ ಪ್ರಾದೇಶಿಕ ಏಕತೆ ಮತ್ತು ಆಳುತ್ತಿರುವ ಸಂತತಿಯ ಉತ್ತರಾಧಿಕಾರಗಳಲ್ಲಿ ಭಾರತ ಸಂಘ ಅಥವಾ ಅದರ ಯಾವುದೇ ಭಾಗ ಮಧ್ಯೆ ಪ್ರವೇಶಿಸುವಂತಿಲ್ಲ. ಈ ಅಂಶದ ಆಧಾರದ ಮೇಲೆ 1947 ಆಗಸ್ಟ್ 15 ರ ನಂತರ ಭಾರತದ 600 ಚಿಕ್ಕ, ದೊಡ್ಡ ದೇಶೀಯ ಸಂಸ್ಥಾನಗಳಲ್ಲಿಯೂ ಸ್ವತಂತ್ರವಾಗಲಿದ್ದವು. ಈ ಸಂಸ್ಥಾನಗಳು ಭಾರತಕ್ಕಾಗಲಿ, ಪಾಕಿಸ್ಥಾನಕ್ಕಾಗಲಿ ಸೇರುವ ಅಥವಾ ಸ್ವತಂತ್ರವಾಗಿ ಉಳಿಯುವ ಅವಕಾಶ ಅವುಗಳ ಮುಂದಿದ್ದವು.

ಭಾರತದ ವಿಭಜನೆ ಮತ್ತು ಸ್ವಾತಂತ್ರ್ಯದ ಪ್ರಕಟಣೆ ಹೊರಬಂದ ತರುವಾಯ ಹೈದರಾಬಾದ್, ಜುನಾಘಡ್, ಕಾಶ್ಮೀರ, ತಿರುವಾಂಕೂರು, ಭೂಪಾಲ ಮುಂತಾದ ರಾಜ್ಯಗಳು ಸಂಯುಕ್ತ ಭಾರತ ಆಧಾರದ ಮೇಲೆ ಸೂಚಿಸಿದ್ದ ಹಿಂದಿನ ಸಮ್ಮತಿಯನ್ನು ತಿರಸ್ಕರಿಸಿ ಬದಲಾದ ಪರಿಸ್ಥಿತಿಯಲ್ಲಿ ಇವುಗಳ ಸ್ವಾತಂತ್ರ್ಯ ಘೋಷಿಸಿಕೊಳ್ಳಲು ಆಲೋಚಿಸಿದವು. ಹಾಗೂ ಒಂದು ಪರಮಾಧಿಕಾರ ಹೊಂದಿದ ರಾಜ್ಯ ಮತ್ತೊಂದು ರಾಜ್ಯದೊಡನೆ ಮಾಡಿಕೊಳ್ಳುವಂತೆ, ಒಪ್ಪಂದ ಮಾಡಿಕೊಳ್ಳುವ ಬಗ್ಗೆಯೂ ಅವು ಸೂಚಿಸಿದವು. ಮುಸ್ಲಿಂ ಲೀಗ್ ಈ ಬೆಳವಣಿಗೆಗೆ ಪ್ರೋತ್ಸಾಹ ನೀಡಿತು.

1947 ಜೂನ್ 15 ರಂದು ಸಭೆ ಸೇರಿದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು “ಭಾರತದಲ್ಲಿನ ಯಾವುದೇ ರಾಜ್ಯ ಸ್ವಾತಂತ್ರ್ಯ ಘೋಷಿಸುವ ಹಕ್ಕನ್ನು ಒಪ್ಪುವುದಿಲ್ಲವೆಂದೂ ಹಾಗೆ ಮಾಡಿ ಭಾರತದ ಇತರ ಭಾಗಗಳಿಂದ ಪ್ರತ್ಯೇಕವಾಗಿ ಉಳಿಯಲು ಅವಕಾಶ ನೀಡುವುದಿಲ್ಲವೆಂದೂ” ತೀರ್ಮಾನಿಸಿತು.

ಗಾಂಧೀಜಿಯವರು ಇಂತಹ ಸಂಸ್ಥಾನಗಳ ಘೋಷಣೆಯು “ಭಾರತದ ಲಕ್ಷಾಂತರ ಸ್ವತಂತ್ರ ಜನತೆಯ ವಿರುದ್ದ ಯುದ್ಧ ಘೋಷಿಸುವುದಕ್ಕೆ ಸಮನಾದುದು ಎಂದು ಅಭಿಪ್ರಾಯಪಟ್ಟರೆ,

ನೆಹರೂರವರು “ಯಾವುದೇ ಪರರಾಷ್ಟ್ರ ಇಂತ ಯಾವುದೇ ಸ್ವಾತಂತ್ರ್ಯವನ್ನು ಯಾವ ರೀತಿಯಲ್ಲಿ ಅಂಗೀಕರಿಸಿದರೂ ಅದನ್ನು ಮಿತ್ರ ವಿರೋಧಿ ಕಾರ್ಯವೆಂದು ಪರಿಗಣಿಸಲಾಗುವುದೆಂದು, ಘೋಷಿಸಿದರು. ದೇಶೀಯ ಸಂಸ್ಥಾನಗಳ ಹಾಗೂ ಕೇಂದ್ರ ಸರ್ಕಾರದ ನಡುವೆ ತಲೆದೋರುವ ಸಮಸ್ಯೆಗಳ ಬಗ್ಗೆ ವ್ಯವಹರಿಸಲು

ಭಾರತ ಸರ್ಕಾರ ನೇಮಿಸಿದ “ಇಂಡಿಯನ್ ಸ್ಟೇಟ್ಸ್ ಡಿಪಾರ್ಟ್‌ ಮೆಂಟ್” ನ ಅಧಿಕಾರವನ್ನು ಸರ್ದಾರ್ ವಲ್ಲಬ್‌ಬಾಯಿ ಪಟೇಲರು 1947ರ ಜುಲೈ 5 ರಂದು ವಹಿಸಿಕೊಂಡರು. ಮತ್ತು ವಿ.ಪಿ.ಮೆನನ್‌ರವರು ಅದರ ಕಾರ್ಯದರ್ಶಿಯಾದರು.

ಪಟೇಲರು 1947 ರ ಜುಲೈ 4 ರಂದು ದೇಶೀಯ ಸಂಸ್ಥಾನಗಳು ಒಕ್ಕೂಟದಲ್ಲಿ ಸೇರಬೇಕೆಂದು ವಿನಂತಿಸುವ ಕರೆಯೊಂದನ್ನು ಹೀಗೆ ಕೊಟ್ಟರು. “ನಮ್ಮ ದೇಶವು ನಮ್ಮದೇ ಪರಂಪರಾಗತ ಸಂಸ್ಥೆಗಳನ್ನು ಹೊಂದಿರುವ ನಮ್ಮ ಜನರ ಹೆಮ್ಮೆ ಪರಂಪರೆಗಳ ಪ್ರತೀಕ. ನಾವು ಕೆಲವರು ಅಂತಹ ಸಂಸ್ಥಾನಗಳಲ್ಲೂ, ಇತರರು ಬ್ರಿಟಿಷ್ ಭಾರತದಲ್ಲೂ ಜೀವಿಸುತ್ತಾ ಬಂದಿರುವುದೇ ಕೇವಲ ಒಂದು ಆಕಸ್ಮಿಕ. ನಮ್ಮ ದೇಶವನ್ನು ನವ ವೈಭವದತ್ತ ಕೊಂಡೊಯ್ಯಲು ನಾವೆಲ್ಲಾ ಒಟ್ಟಾಗಿ ನಿಲ್ಲಬೇಕಾದುದು ಅನಿವಾರ್ಯ. ಅಸಂಘಟಿತವಾಗಿ ಉಳಿದಲ್ಲಿ ದೇಶಕ್ಕೆ ಹೊಸ ಹೊಸ ಆಪತ್ತು ಬಂದಾವು, ಒಟ್ಟುಗೂಡದಿದ್ದರೆ ನಮ್ಮೆಲ್ಲರ ನಾಶ ನಿಶ್ಚಿತ. ಅರಾಜಕತೆ, ಗೊಂದಲ ಗಲಭೆಗಳು ಕಟ್ಟಿಟ್ಟಿದ್ದೇ ಎಂಬುದನ್ನು ದೇಶೀಯ ಸಾಂಸ್ಥಾನಿಕ ಮಿತ್ರರಲ್ಲಿ ನಿವೇದಿಸಬಯಸುತ್ತೇನೆ.

1949 ರ ಅಂತ್ಯದ ವೇಳೆಗೆ ಹೈದರಾಬಾದ್, ಕಾಶ್ಮೀರ, ಜುನಾಘಡ, ಭೂಪಾಲದಂತಹ ರಾಜ್ಯಗಳನ್ನುಳಿದು ಇತರ ಎಲ್ಲಾ ಸಂಸ್ಥಾನಗಳು [ಸುಮಾರು 600 ಸಂಸ್ಥಾನಗಳು] “ಇನ್‌ಸ್ಟ್ರುಮೆಂಟ್ ಆಫ್ ಅಕೇಷನ್‌ಗೆ” ಸಹಿ ಹಾಕಿ ಭಾರತದ ಒಕ್ಕೂಟದಲ್ಲಿ ಸೇರ್ಪಡೆಯಾದವು.

ಪಟೇಲ್ ಸ್ಟೀಮ್ ಎಂದು ಕರೆಯಲಾಗುವ ಪ್ರಕ್ರಿಯೆಯೊಂದಿಗೆ 565 ಪ್ರಾಂತ್ಯಗಳ ಏಕೀಕರಣವು ನಡೆಯಲು ಸಣ್ಣ ರಾಜ್ಯಗಳನ್ನು ಅವುಗಳೊಂದಿಗೆ ಹೊಂದಿಕೊಂಡಿರುವ ಪ್ರಾಂತ್ಯಗಳೊಂದಿಗೆ ವಿಲೀನ ಮಾಡುವುದು. ಇಂತಹ ಸುಮಾರು 216 ರಾಜ್ಯಗಳನ್ನು ಅವುಗಳಿಗೆ ಹೊಂದಿಕೊಂಡಿರುವ ಪ್ರಾಂತ್ಯಗಳೊಂದಿಗೆ ವಿಲೀನ ಮಾಡಲಾಯಿತು. ಉದಾ: ಒರಿಸ್ಸಾದೊಂದಿಗೆ 24 ರಾಜ್ಯಗಳು ವಿಲೀನಗೊಂಡವು.

ಹಲವಾರು ಸಣ್ಣ ರಾಜ್ಯಗಳು ಸೇರಿಕೊಂಡು ಒಂದು ದೊಡ್ಡ ರಾಜ್ಯವನ್ನು ರಚಿಸಿಕೊಂಡವು. ಈ ರಾಜ್ಯಗಳಲ್ಲಿರುವ ಆಳ್ವಿಕೆಗಾರರಲ್ಲಿ ಬಹು ಪ್ರಮುಖ ವ್ಯಕ್ತಿಯೊಬ್ಬರು ರಾಜ ಪ್ರಮುಖರಾದರು. ಉದಾ: ಪೂರ್ವ ಪಂಜಾಬ್ ರಾಜ್ಯಗಳ : [PEPSU]. ಸಣ್ಣ ಮತ್ತು ಹಿಂದುಳಿದ ಸುಮಾರು 61 ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಪರಿವರ್ತಿಸಿ ಚೀಫ್ ಕಮೀಷನರ್ ಪ್ರಾಂತ್ಯಗಳನ್ನಾಗಿ ಮಾಡಲಾಯಿತು.

ಉದಾ: ಹಿಮಾಚಲ ಪ್ರದೇಶ. ಕೂರ್ಗ್. ಆದರೆ ಕೆಲವು ರಾಜ್ಯಗಳು ಭಾರತದ ಏಕೀಕರಣಕ್ಕೆ ವಿರುದ್ಧವಾಗಿ ಸ್ವತಂತ್ರ ಪ್ರವೃತ್ತಿಯನ್ನು ಮತ್ತು ಹೊಸ ಪಾಕಿಸ್ತಾನ ಸೇರುವ ಸಂಚು ನಡೆಸಿರಲು ಅವುಗಳನ್ನು ವಿಫಲಗೊಳಿಸಿ. ಭಾರತದ ಏಕೀಕರಣ ಸಾಧಿಸಿದ ಉಕ್ಕಿನ ಮನುಷ್ಯ ಸರ್ದಾರ್ ಪಟೇಲರ ಶೌರ್ಯ ವೈಖರಿಯನ್ನು ಈ ಕೆಳಕಂಡ ರಾಜ್ಯಗಳ ವಿಷಯಗಳಲ್ಲಿ ತಿಳಿದುಕೊಳ್ಳಬಹುದು.

ಹೈದರಾಬಾದ್ : ಇದು ಭಾರತದ ಅತ್ಯಂತ ದೊಡ್ಡ ಸಂಸ್ಥಾನವಾಗಿದ್ದು ಬಹುಸಂಖ್ಯಾತ ಹಿಂದೂ ಜನರನ್ನು ಮುಸ್ಲಿಂ ನಿಜಾಮನೊಬ್ಬ ಆಳುತ್ತಿದ್ದುದು ವೈಶಿಷ್ಟ್ಯವಾಗಿತ್ತು. 1947 ರ ಜೂನ್ 11 ರಂದು ಹೈದರಾಬಾದ್ ಸಂಸ್ಥಾನವು ಸ್ವತಂತ್ರವಾಗಿ ಉಳಿಯುವುದೆಂದು ಅಲ್ಲಿನ ನಿಜಾಮ ಘೋಷಿಸಿದನು.

ಭಾರತ ಸರ್ಕಾರದ ಶ್ವೇತಪತ್ರದಲ್ಲಿ “ಒಂದು ರಾಷ್ಟ್ರದ ಮಧ್ಯಭಾಗದಲ್ಲಿ ಸಂಪೂರ್ಣವಾಗಿ ಸ್ವತಂತ್ರವಾಗಿರುವ ರಾಜ್ಯವೊಂದು ಹಿಂದೆಂದೂ ಕೇಳಿರದಂತ ಪ್ರಸ್ತಾಪವಾಗಿದೆ. ಎಂದು ಹೇಳಿದೆ. ಈ ನಡುವೆ ನಿಜಾಮನ ದುರಾಡಳಿತದ ವಿರುದ್ಧ ಚಳುವಳಿಗಳು ಪ್ರಾರಂಭವಾದವು. ಈ ಚಳುವಳಿಯಲ್ಲಿ ರೈತರು ಮತ್ತು ಮಹಿಳೆಯರು ಬೃಹತ್‌ ಪ್ರಮಾಣದಲ್ಲಿ ಪಾಲ್ಗೊಂಡರು. ನಿಜಾಮನು ತನ್ನ ಪ್ಯಾರಾಮಿಲಿಟರಿ ಪಡೆಯಾದ ರಜಾಕದಿಂದ ಅಲ್ಲಿನ ಜನರನ್ನು ಶೋಷಿಸಿದನು. ರಜಾಕ್‌ರು ಹಿಂದೂಗಳ ಮೇಲೆ ಅತ್ಯಾಚಾರ ಎಸಗಿದರು. ಇಂತಹ ಅರಾಜಕತೆಯನ್ನು ಅಂತ್ಯಗೊಳಿಸಲು “ಆಪರೇಷನ್ ಪೋಲೋ” ಎಂಬ ಹೈದರಾಬಾದ್ ಕಾರ್ಯಾಚರಣೆ ಪಡೆಯು ಹೈದರಾಬಾದ್‌ನ್ನು ಏರುತ್ತಿತ್ತು. ಹೈದರಾಬಾದ್ ಕಾರ್ಯಾಚರಣೆ ಪಡೆಯ ಜನರಲ್ ಜೆ.ಎನ್. ಚೌಧುರಿಯವರ ನೇತೃತ್ವದ ಭಾರತದ ಸೈನಿಕ ಕಾರ್ಯಚರಣೆಯಾದ ಕೇವಲ 108 ಘಂಟೆಗಳಲ್ಲಿ ನಿಜಾಮನು ಶರಣಾದನು. ಹೈದರಾಬಾದ್ 1950 ರ ಜನವರಿ 26 ರಂದು ಭಾರತರ ಸಂಘವನ್ನು ಸೇರಿತು.

ಕಾಶ್ಮೀರ : ಕಾಶ್ಮೀರದಲ್ಲಿ ಮುಸ್ಲಿಂರೂ ಬಹುಸಂಖ್ಯಾತರಿದ್ದರೂ ರಾಜ ಹರಿಸಿಂಗ್ ಹಿಂದೂ ‘ ದೊರೆಯಾಗಿದ್ದನು. ಅವರಿಗೆ ತಮ್ಮ ರಾಜ್ಯವನ್ನು ಭಾರತ ಅಥವಾ ಪಾಕಿಸ್ತಾನದೊಂದಿಗೆ ಸೇರ್ಪಡೆ ಮಾಡಲು ಇಷ್ಟವಿಲ್ಲದೆ ಸ್ವತಂತ್ರ ರಾಜ್ಯವನ್ನಾಗಿ ಉಳಿಸಿಕೊಳ್ಳುವ ಆಸಕ್ತಿ ಇದ್ದಿತು. ಭೌಗೋಳಿಕ ಸಾಮಿಪ್ಯ ಮತ್ತು ರಾಜ್ಯದಲ್ಲಿನ ಮುಸ್ಲಿಂರ ಸಂಖ್ಯೆ ಈ ಎರಡು ಅಂಶಗಳನ್ನು ಮನಗಂಡ ಪಾಕಿಸ್ತಾನ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹವಣಿಸಿತು.

1947 ರ ಅಕ್ಟೋಬರ್ 23 ರಂದು ಅನಿರೀಕ್ಷಿತವಾಗಿ ಗುಡ್ಡಗಾಡಿನ ಜನರಿಂದ ಕೂಡಿದ ಪಾಕಿಸ್ತಾನಿ ಸೈನ್ಯ ಕಾಶ್ಮೀರದ ಮೇಲೆ ಧಾಳಿ ಇಟ್ಟಿತು. ಹೀಗಾಗಿ ಕಾಶ್ಮೀರ ಸರ್ಕಾರ ಭಾರತ ಸರ್ಕಾರದ ಸಹಾಯ ಕೇಳಿತು. ಅಕ್ಟೋಬರ್ 26 ರಂದು ಕಾಶ್ಮೀರದ ಮಹಾರಾಜ ಹರಿಸಿಂಗ್ ವಿದ್ಯುಕ್ತವಾಗಿ ಭಾರತ ಸಂಘವನ್ನು ಸೇರಿದನು. ಭಾರತದ ಸೈನ್ಯವು ಅಕ್ಟೋಬರ್ 27 ರ ಪ್ರಾತಃಕಾಲ ಪಾಕಿಸ್ತಾನಿ ಸೈನ್ಯವನ್ನು ಸಂಪೂರ್ಣವಾಗಿ ಸೋಲಿಸಿತು. ಕಾಶ್ಮೀರದ ಭವಿಷ್ಯ ತೀರ್ಮಾನಿಸಲು ವಿಶ್ವ ಸಂಸ್ಥೆಗೆ ಒಪ್ಪಿಸಿದರೂ ಯಾವುದೇ ಸೂಕ್ತ ತೀರ್ಮಾನ ಮಾಡಲಾಗಲಿಲ್ಲ. ಹೀಗಾಗಿ ಆಗಾಗ್ಗೆ ಭಾರತ ಗಡಿ ಧಾಳಿಯ ಕೇಂದ್ರವಾಗಿದೆ. 1954 ರ ಫೆಬ್ರವರಿಯಲ್ಲಿ ಭಾರತಕ್ಕೆ ಕಾಶ್ಮೀರದ ಸೇರ್ಪಡೆಯನ್ನು ಸಂವಿಧಾನ ಸಭೆ ಸ್ವೀಕರಿಸಿತು.

ಜುನಾಗಢ : ಜುನಾಗಡ ರಾಜ್ಯದ ಪ್ರಜೆಗಳ ಇಚ್ಛೆಗೆ ವಿರುದ್ದವಾಗಿ ಆ ರಾಜ್ಯದ ನವಾಬನು ಪಾಕಿಸ್ತಾನದೊಂದಿಗೆ ಸೇರ್ಪಡೆಯಾಗುವುದಾಗಿ ಘೋಷಿಸಿದನು. ಆದರೆ ಅಲ್ಲಿನ ಪ್ರಜೆಗಳು ಭಾರತದೊಂದಿಗೆ ಸೇರ್ಪಡೆಯಾಗಲು ಬಯಸಿದ್ದರು. ಸೇರ್ಪಡೆ ಘೋಷಣೆಯ ನಂತರ ಆ ರಾಜ್ಯದ ಪ್ರಜೆಗಳು ನವಾಬನ ವಿರುದ್ಧ ಸಿಡಿದೆದ್ದರು. ಇದರಿಂದ * ಭಯಭೀತನಾದ ನವಾಬನು ಪಾಕಿಸ್ತಾನಕ್ಕೆ ಪಲಾಯನಗೈದನು. ಅಲ್ಲಿ ಜನಾಭಿಪ್ರಾಯ ಸಂಗ್ರಹವಾದಾಗ ಪ್ರಜೆಗಳು ಭಾರತದ ಒಕ್ಕೂಟದೊಂದಿಗೆ ಸೇರಲು ಮತ ಚಲಾಯಿಸಿದರು. ನಂತರ ಜುನಾಘಡ ಸೌರಾಷ್ಟ್ರದೊಂದಿಗೆ ವಿಲೀನ ಮಾಡಲಾಯಿತು.

ತಿರುವಾಂಕೂರು: ತಿರುವಾಂಕೂರು ಸಹ ಸ್ವತಂತ್ರ ರಾಜ್ಯವಾಗಿ ಉಳಿಯಲು ತಿರುವಾಂಕೂರಿನ ಮಹಾರಾಜನಿಗೆ ಅಲ್ಲಿನ ಪ್ರಧಾನಿ ಸಿ.ಪಿ.ರಾಮಸ್ವಾಮಿ ಅಯ್ಯರ್ ಸಲಹೆ ನೀಡಿ ಅದೇ ರೀತಿ ಘೋಷಿಸಿದರು. ರಾಷ್ಟ್ರೀಯ ಕಾಂಗ್ರೆಸ್ ಇದರ ವಿರುದ್ದ ಹೋರಾಟ ನಡೆಸಿತು. ರಾಷ್ಟ್ರೀಯ ಚಳುವಳಿಗಾರರು ಉಗ್ರ ಹೋರಾಟ ಮಾಡಿ ಭಾರತದ ಐಕ್ಯತೆಯ ವಿರೋಧಿಯಾಗಿದ್ದ ರಾಮಸ್ವಾಮಿ ಅಯ್ಯರ್‌ನ್ನು ಗಾಯಗೊಳಿಸಿದರು. ಇಂತಹ ಪರಿಸ್ಥಿತಿಯನ್ನರಿತು ಮಹಾರಾಜನು ಒಕ್ಕೂಟಕ್ಕೆ ಸೇರಲು ಒಪ್ಪಿದನು. ಈ ತಿರುವಾಂಕೂರಿನ ಜನಾಂದೋಲನಕ್ಕೆ ಪಟೇಲರೇ ಕಾರಣವಾಗಿದ್ದರು.

ಉದಯಪುರ : ಉದಯಪುರದ ಮಹಾರಾಜ ಭೂಪಾಲಸಿಂಗರ ದೇಶಭಕ್ತಿ ಒಲುಮೆಯು ‘ಭೂಪಾಲ್ ಯೋಜನೆ’ ಯನ್ನು ನಾಶಗೊಳಿಸಿತು. ರಾಣಾ ಪ್ರತಾಪ ಸಿಂಗರ ವಂಶಸ್ಥರಾದ ಉದಯಪುರದ ಮಹಾರಾಜರು “ನಾನು ನನ್ನ ಪೂರ್ವಜರಂತೆಯೇ ಭಾರತಕ್ಕೆ ಸೇರುವವ” ಎಂದು ಘೋಷಿಸಿದರು.

ಹೀಗೆ ಚರಿತ್ರಾರ್ಹವಾದ ಭಾರತದ ಸಂಸ್ಥಾನಗಳ ಏಕೀಕರಣ ಕಾರ್ಯವನ್ನು ಸಾಧಿಸಿದ ಮಹಾಶಿಲಿಯೆಂದರೆ ಸರ್ದಾರ್ ಪಟೇಲರು. ಹೀಗೆ ಹರಿದು ಹಂಚಿ ಹೋಗಲಿದ್ದ ಭಾರತವನ್ನು ಅಖಂಡ ಭಾರತವಾಗಿ ರೂಪಿಸಿದ ಪಟೇಲರ ಕಾರ್ಯವೈಖರಿಯನ್ನು ಮೆಚ್ಚಲೇಬೇಕು.

ಹೆಚ್ಚುವರಿ ಪ್ರಶ್ನೆಗಳು

I. ಒಂದು ಅಂಕದ ಪ್ರಶ್ನೆಗಳು

ಈಸ್ಟ್ ಇಂಡಿಯಾ ಕಂಪನಿಯು ಯಾವಾಗ ಅಸ್ತಿತ್ವಕ್ಕೆ ಬಂದಿತು?

ಕ್ರಿ.ಶ. 1600 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಅಸ್ತಿತ್ವಕ್ಕೆ ಬಂದಿತು.

2.ಯಾವಾಗ ಈಸ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ ರಾಜಕೀಯ ಅಧಿಕಾರ ಪಡೆಯಿತು?

ಈಸ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ 1757 ರ ಪ್ಲಾಸಿ ಕದನದ ನಂತರ ರಾಜಕೀಯ ಅಧಿಕಾರವನ್ನು ಡೆಯಿತು.

3.1858 ರ ಕಾಯಿದೆಯ ಪ್ರಮುಖ ಮುಖ್ಯಾಂಶವೇನು?

ಇದು ಈಸ್ಟ್ ಇಂಡಿಯಾ ಕಂಪನಿಯ ಆಡಳಿತವನ್ನು ಕೊನೆಗೊಳಿಸಿ ಚಕ್ರವರ್ತಿಗೆ ವರ್ಗಾಯಿಸಿತು.

4. ಯಾವ ಕಾಯಿದೆಯು ಪ್ರಥಮ ಬಾರಿಗೆ ಮುಸ್ಲಿಂ ಸಮುದಾಯಕ್ಕೆ ಪ್ರತ್ಯೇಕ ಮತದಾರರ ಕ್ಷೇತ್ರವನ್ನು ಕಲ್ಪಿಸಿತು?

1909 ಭಾರತ ಸರಕಾರ ಕಾಯಿದೆಯು ಪ್ರಥಮ ಬಾರಿಗೆ ಮುಸ್ಲಿಂ ಸಮುದಾಯಕ್ಕೆ ಪ್ರತ್ಯೇಕ ಮತದಾರರ ಕ್ಷೇತ್ರವನ್ನು ಕಲ್ಪಿಸಿತು.

5. ಮಾಂಟೆಗೊ ಚೆಲ್ಟ್ಸ್ಟರ್ಡ್ ವರದಿಯ ಮುಖ್ಯ ಉದ್ದೇಶವೇನು?

ಭಾರತದಲ್ಲಿ ಪ್ರಾತಿನಿಧಿಕ ಸರ್ಕಾರವನ್ನು ಸ್ಥಾಪಿಸುವುದು ಈ ವರದಿಯ ಮುಖ್ಯ ಉದ್ದೇಶವಾಗಿತ್ತು.

6. ಸೈಮನ್ ಆಯೋಗದ ಪ್ರಮುಖ ಘೋಷಣೆಯನ್ನು తిళిసి.

ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡಬೇಕು ಎಂಬ ಘೋಷಣೆಯನ್ನು ಸೈಮನ್ ಆಯೋಗ ಹೊರಡಿಸಿತು

7. ಪ್ರಥಮ ದುಂಡು ಮೇಜಿನ ಸಮ್ಮೇಳನವು ಯಾವಾಗ ನಡೆಯಿತು?

ಪ್ರಥಮ ದುಂಡು ಮೇಜಿನ ಸಮ್ಮೇಳನವು 1930 ರಲ್ಲಿ ನಡೆಯಿತು.

8.’ಪೂನಾ ಒಪ್ಪಂದ’ ಯಾರ ನಡುವೆ ಏರ್ಪಟ್ಟಿತು?

1932 ರ ಸೆಪ್ಟೆಂಬರ್ 24 ರಂದು ಗಾಂಧೀಜಿ ಮತ್ತು ಅಂಬೇಡ್ಕರ್ ನಡುವೆ ಪೂನಾ ಒಪ್ಪಂದ ಏರ್ಪಟ್ಟಿತು.

9. ಭಾರತದ ಸಂವಿಧಾನ ರಚನಾ ಸಭೆಯ ಅಧ್ಯಕ್ಷರು ಯಾರು?

ಡಾ| ಬಾಬು ರಾಜೇಂದ್ರ ಪ್ರಸಾದ್‌ರವರು ಸಂವಿಧಾನ ರಚನಾ ಸಭೆಯ ಅಧ್ಯಕ್ಷರು.

10. ಭಾರತದ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರು ಯಾರು?

ಡಾ|| ಬಿ.ಆರ್.ಅಂಬೇಡ್ಕ‌ರವರು ಭಾರತದ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು.

11. ಭಾರತದ ಮೊದಲ ಪ್ರಧಾನಿ ಯಾರು?

ಪಂಡಿತ ಜವಹರಲಾಲ್ ನೆಹರು.

12. ಸಂವಿಧಾನವು ಯಾವಾಗ ಅಂಗೀಕಾರಗೊಂಡಿತು?

ಭಾರತದ ಸಂವಿಧಾನವನ್ನು 1949 ರ ನವೆಂಬರ್ 26 ರಂದು ಅಂಗೀಕರಿಸಲಾಯಿತು.

13. ಭಾರತದ ಸಂವಿಧಾನವು ಯಾವಾಗ ಜಾರಿಗೆ ಬಂದಿತು?

ಭಾರತದ ಸಂವಿಧಾನವು 1950 ರ ಜನವರಿ 26ರಂದು ಜಾರಿಗೆ ಬಂದಿತು.

14. ಮೊದಲ ಮಹಾಚುನಾವಣೆಯಲ್ಲಿ ಮತದಾನದ ಶೇಕಡಾ ಪ್ರಮಾಣವೆಷ್ಟು?

ಮೊದಲ ಮಹಾಚುನಾವಣೆಯಲ್ಲಿ ಮತದಾನದ ಶೇಕಡಾ ಪ್ರಮಾಣ 45%.

15.ಇಂಡಿಯನ್ ಸ್ಟೇಟ್ ಡಿಪಾರ್ಟ್‌ಮೆಂಟಿನ ಅಧ್ಯಕ್ಷರು ಯಾರಾಗಿದ್ದರು?

ಸರ್ದಾರ ವಲ್ಲಭಬಾಯಿ ಪಟೇಲರು ಇಂಡಿಯನ್ ಸ್ಟೇಟ್ ಡಿಪಾರ್ಟ್‌ಮೆಂಟಿನ ಅಧ್ಯಕ್ಷರಾಗಿದ್ದರು.

16.ಸ್ವಾತಂತ್ರ್ಯಕ್ಕಿಂತ ಪೂರ್ವದಲ್ಲಿ ಎಷ್ಟು ಸಂಸ್ಥಾನಗಳು ಅಕ್ಷೇಷನ್ ಸಹಿ ಹಾಕಿದವು?

ಸುಮಾರು 565 ಸಂಸ್ಥಾನಗಳು 1947 ಕ್ಕಿಂತಲೂ ಮೊದಲೇ ಅಕೇಷನ್‌ಗೆ ಸಹಿ ಹಾಕಿದವು.

17. ಭಾರತದೊಂದಿಗೆ ಕಾಶ್ಮೀರವನ್ನು ವಿಲೀನಗೊಳಿಸುವ ಪತ್ರಕ್ಕೆ ಯಾವಾಗ ಹರಿಸಿಂಗ್ ಸಹಿ ಹಾಕಿದನು?

26 ನೇ ಅಕ್ಟೋಬರ್ 1947 ರಂದು ಕಾಶ್ಮೀರ ಭಾರತದೊಂದಿಗೆ ವಿಲೀನಗೊಳಿಸುವ ಅಕ್ಷೇಷನ್ ಪತ್ರಕ್ಕೆ ರಾಜಾ ಹರಿಸಿಂಗನು ಸಹಿ ಹಾಕಿದನು.

18.ಭಾಷಾವಾರು ಪ್ರಾಂತ್ಯವಾಗಿ ಉದಯಿಸಿದ ಪ್ರಥಮ ರಾಜ್ಯ ಯಾವುದು?

ಪ್ರಥಮ ಭಾಷಾವಾರು ರಾಜ್ಯವಾಗಿ ಆಂಧ್ರಪ್ರದೇಶ ಅಸ್ತಿತ್ವಕ್ಕೆ ಬಂದಿತು.

19.ಯಾವಾಗ ರಾಜ್ಯ ಪುನರಚನಾ ಕಾಯಿದೆ ಜಾರಿಗೆ ಬಂದಿತು?

1956 ನವೆಂಬರ್‌ನಲ್ಲಿ ರಾಜ್ಯ ಪುನರಚನಾ ಕಾಯಿದೆ ಜಾರಿಗೆ ಬಂದಿತು.

20. ಪ್ರಸ್ತುತವಾಗಿ ಭಾರತ ಎಷ್ಟು ರಾಜ್ಯಗಳನ್ನು ಒಳಗೊಂಡಿದೆ?

ಪ್ರಸ್ತುತವಾಗಿ ಭಾರತ 29 ರಾಜ್ಯಗಳನ್ನು ಒಳಗೊಂಡಿದೆ.

21.PEPSU ವಿಸ್ತರಿಸಿರಿ.

PEPSU: ಪಟಿಯಾಲ ಈಸ್ಟರ್ನ್ ಪಂಜಾಬ್ ಸ್ಟೇಟ್ಸ್ ಯೂನಿಯನ್.

II. ಎರಡು ಅಂಕದ ಪ್ರಶ್ನೆಗಳು

1.ರಾಷ್ಟ್ರೀಯ ಚಳುವಳಿಯ ಉದಾತ್ತ ಮೌಲ್ಯಗಳು ಯಾವುವು?

  • ಜನತಾ ಸಾರ್ವಭೌಮತ್ವ
  • ಪ್ರಾತಿನಿಧಿಕ ಸರ್ಕಾರ
  • ನಾಗರೀಕ ಸ್ವಾತಂತ್ರ್ಯ
  • ಸ್ವಾವಲಂಭಿ ಆರ್ಥಿಕತೆ
  • ಜಾತ್ಯಾತೀತತೆ
  • ವಿದೇಶಾಂಗ ನೀತಿ ಇವು ರಾಷ್ಟ್ರೀಯ ಚಳುವಳಿಯ ಉದಾತ್ತ ಮೌಲ್ಯಗಳು

2.ಭಾರತ ಸಂವಿಧಾನದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕಾಯಿದೆಗಳನ್ನು ಹೆಸರಿಸಿ.

1909 ರ ಇಂಡಿಯನ್ ಕೌನ್ಸಿಲ್ ಆಕ್ಟ್

1919 ರ ಭಾರತ ಸರ್ಕಾರದ ಕಾಯಿದೆ

1935 ರ ಭಾರತ ಸರ್ಕಾರದ ಕಾಯಿದೆ

1947 ರ ಭಾರತ ಸ್ವಾತಂತ್ರ್ಯದ ಕಾಯಿದೆಗಳು

ಸಂವಿಧಾನದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದವು.

3. ದ್ವಿತೀಯ ದುಂಡು ಮೇಜಿನ ಸಮ್ಮೇಳನವು ಯಾವಾಗ ಮತ್ತು ಎಲ್ಲಿ ನಡೆಯಿತು?

1931 ರಲ್ಲಿ ಲಂಡನ್‌ನಲ್ಲಿ ದ್ವಿತೀಯ ದುಂಡು ಮೇಜಿನ ಸಮ್ಮೇಳನವು ನಡೆಯಿತು.

4. ಭಾರತದ ಫೆಡರಲ್ ನ್ಯಾಯಾಲಯವನ್ನು ಯಾವಾಗ ಮತ್ತು ಎಲ್ಲಿ ಸ್ಥಾಪಿಸಲಾಯಿತು?

ಭಾರತದ ಫೆಡರಲ್ ನ್ಯಾಯಾಲಯವು 1935 ರಲ್ಲಿ ದೆಹಲಿಯಲ್ಲಿ ಸ್ಥಾಪಿಸಲಾಯಿತು.

5. ಪ್ರಥಮ ಮಹಾಚುನಾವಣೆಯು ಲೋಕಸಭೆಯ ಎಷ್ಟು ಸ್ಥಾನಗಳಿಗೆ ನಡೆಯಿತು? ಮತ್ತು ಕಾಂಗ್ರೆಸ್ ಎಷ್ಟು ಸ್ಥಾನದಲ್ಲಿ ಗೆಲುವನ್ನು ಸಾಧಿಸಿತು?

ಪ್ರಥಮ ಮಹಾಚುನಾವಣೆಯು ಲೋಕಸಭೆಯ 489 ಸ್ಥಾನಗಳಿಗೆ ನಡೆಯಿತು. ಅದರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 364 ಸ್ಥಾನಗಳಲ್ಲಿ ಜಯವನ್ನು ಸಾಧಿಸಿತು.

6.ಯಾವ ದೇಶೀಯ ಸಂಸ್ಥಾನಗಳು ಭಾರತ ಒಕ್ಕೂಟವನ್ನು ಸೇರಲು ನಿರಾಕರಿಸಿದವು?

ಜುನಾಗಡ್, ಹೈದರಾಬಾದ್, ಕಾಶ್ಮೀರ, ಉದಯಪುರ ಮತ್ತು ತಿರುವಾಂಕೂರು ರಾಜ್ಯಗಳು ಭಾರತ ಒಕ್ಕೂಟವನ್ನು ಸೇರಲು ನಿರಾಕರಿಸಿದವು.

7. ರಾಜ್ಯಗಳ ರಚನೆಗಾಗಿ ನಡೆಯುತ್ತಿರುವ ಪ್ರಸ್ತುತ ಹೋರಾಟಗಳನ್ನು ಹೆಸರಿಸಿ.

ಅಸ್ಸಾಂ ರಾಜ್ಯದಿಂದ ಶರ್ಬಿ ಅಂಗ್‌ಲಾಂಗ್ ರಾಜ್ಯದ ರಚನೆಗಾಗಿ. ಮಹಾರಾಷ್ಟ್ರದಿಂದ ವಿದರ್ಭ ರಾಜ್ಯದ ರಚನೆಗಾಗಿ ಹೋರಾಟಗಳು ನಡೆಯುತ್ತಿವೆ.

III. ಐದು ಅಂಕದ ಪ್ರಶ್ನೆಗಳು

1.1935 ರ ಕಾಯಿದೆ ಅನ್ವಯ ಅಧಿಕಾರ ವಿಭಜನೆ ಕುರಿತು ಬರೆಯಿರಿ.

1935 ರ ಕಾಯಿದೆಯು ಶಾಸನೀಯ ಅಧಿಕಾರಗಳನ್ನು ಕೇಂದ್ರ ಮತ್ತು ಪ್ರಾಂತೀಯ ಶಾಸನ ಸಭೆಗಳ ನಡುವೆ ವಿಭಜಿಸಿತು. ಇದು ಮೂರು ಹಂತದ ಅಧಿಕಾರ ವಿಭಜನೆಯಾಗಿದೆ.

ಅ. ಕೇಂದ್ರಪಟ್ಟಿ: ಇದು ವಿದೇಶಾಂಗ ವ್ಯವಹಾರಗಳು, ಕರೆನ್ಸಿ, ರಕ್ಷಣಾ ವ್ಯವಹಾರಗಳ ಮುಂತಾದವುಗಳನ್ನೊಳಗೊಂಡ 50 ವಿಷಯಗಳಿಂದ ಕೂಡಿದ್ದು, ಇವುಗಳ ಮೇಲೆ ಶಾಸನ ರಚಿಸುವ ಅಧಿಕಾರ ಶಾಸಕಾಂಗಕ್ಕೆ ಇರುತ್ತದೆ.

ಆ. ಪ್ರಾಂತ್ಯಗಳ ಪಟ್ಟಿ: ಇದು ಪೋಲಿಸ್, ಶಿಕ್ಷಣ, ಆರೋಗ್ಯ ಮುಂತಾದ 54 ವಿಷಯಗಳಿಂದ ಕೂಡಿದ್ದು ಇವುಗಳ ಮೇಲೆ ಶಾಸನ ರಚಿಸುವ ಅಧಿಕಾರ ಪ್ರಾಂತ್ಯಗಳ ಶಾಸಕಾಂಗಕ್ಕೆ ಇರುತ್ತದೆ.

ಇ. ಸಮವರ್ತಿ ಪಟ್ಟಿ: ಇದು ಕ್ರಿಮಿನಲ್ ಲಾ, ಸಿವಿಲ್ ಪ್ರೊಸೀಜರ್, ವಿವಾಹ ಮತ್ತು ವಿಚ್ಛೇದನ ಮುಂತಾದ 36 ವಿಷಯಗಳಿಂದ ಕೂಡಿದ್ದು ಇವುಗಳ ಮೇಲೆ ಕಾನೂನು ರಚಿಸುವ ಅಧಿಕಾರ ಕೇಂದ್ರ ಮತ್ತು ಪ್ರಾಂತೀಯ ಸರಕಾರಗಳೆರಡಕ್ಕೂ ಇರುತ್ತದೆ. ಶೇಷಾಧಿಕಾರಗಳು ಗೌರ‌ರ್ ಜನರಲ್ ಅವರಲ್ಲಿರುತ್ತದೆ.

Leave a Comment