ದ್ವಿತೀಯ ಪಿಯುಸಿ ಕನ್ನಡ ಪದ್ಯಭಾಗದ ಭಾವಾರ್ಥ ರಚನೆ | 2nd Puc Kannada Padyabhagada Bhavartha Rachane

ದ್ವಿತೀಯ ಪಿಯುಸಿ ಕನ್ನಡ ಪದ್ಯಭಾಗದ ಭಾವಾರ್ಥ ರಚನೆ, 2nd Puc Kannada Padyabhagada Bhavartha Rachane Padyabhagada Bhavartha Rachane question and answer 2nd puc kannada workbook answers pdf 2nd puc kannada workbook answers grammar 2nd Puc Kannada Padya Bagada Bhavartha Rachane 2nd puc kannada bhavartha important ದ್ವಿತೀಯ ಪಿಯುಸಿ ಕನ್ನಡ ನೋಟ್ಸ್ pdf 2nd PUC Kannada Workbook Answers Chapter 1 Padyagala Bhavartha Rachane Questions and Answers 2nd puc kannada notes question and answer in kannada medium

ಪಲ್ಲವ (ಅಭ್ಯಾಸ ಪುಸ್ತಕ)

ಪದ್ಯಭಾಗದ ಭಾವಾರ್ಥ ರಚನೆ

Padyabhagada Bhavartha Rachane
Padyabhagada Bhavartha Rachane

ಈ ಮುಂದೆ ಸೂಚಿಸಿರುವ ಪದ್ಯಗಳ ಭಾವಾರ್ಥ ಬರೆಯಿರಿ:

೧. ಸಮಧಿಕರಾರ್‌ ಜಗತ್ರಯದೊಳಿನ್ನೆನಗೆನ್ನೊಳಿದಿರ್ಚುವನ್ನರಾರ್‌

ಸಮರದೊಳೆಂದು ತನ್ನ ಭುಜದಂಡಮನೀಕ್ಷಿಸಿ ಜಾನಕೀಮುಖಾ

ಬ್ಜಮನವಲೋಕಿಸಲ್ ಕರಮೆ ಕಾತರನಾಗಿ ವಿಯಚ್ಚರಾಧಿಪಂ

ಪ್ರಮದವನಕ್ಕೆ ಬಂದನರಲಂಬುಗಳಿಲ್ಲದ ಕಾಮನೆಂಬಿನಂ

ನಾಗಚಂದ್ರನು ರಚಿಸಿರುವ ‘ಶ್ರೀರಾಮಚಂದ್ರಚರಿತ ಪುರಾಣ’ದಿಂದ ಆಯ್ದುಕೊಳ್ಳಲಾಗಿರುವ ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗದಿಂದ ಈ ಮೇಲಿನ ಪದ್ಯವನ್ನು ಸ್ವೀಕರಿಸಲಾಗಿದೆ.

ರಾವಣನು ಚಿತ್ತನಿರೋಧವನ್ನು ಮಾಡಿ ಬಹುರೂಪಿಣಿ ವಿದ್ಯೆಯನ್ನು ಒಲಿಸಿಕೊಳ್ಳುತ್ತಾನೆ. ನಿಯಮಾನುಸಾರ ಪೂಜೆ, ಅಮೃತಾಹಾರವನ್ನು ಸೇವಿಸಿದ ನಂತರ ರಾವಣನು ಬಹುರೂಪಿಣಿ ವಿದ್ಯೆಯ ಪ್ರಭಾವವನ್ನು ಪರೀಕ್ಷಿಸಿಕೊಂಡ ನಂತರದ ಮನೋಭಾವವನ್ನು ಕವಿಯು ಈ ಪದ್ಯದಲ್ಲಿ ಚಿತ್ರಿಸಿದ್ದಾನೆ.

ವಿದ್ಯಾದೇವತೆಯ ಪ್ರಭಾವವನ್ನು ಪರೀಕ್ಷಿಸಿಕೊಂಡ ರಾವಣನು “ಮೂರು ಲೋಕಗಳಲ್ಲಿಯೂ ನನಗೆ ಸರಿಸಮಾನರು ಯಾರಿದ್ದಾರೆ? ಸಮರದಲ್ಲಿ ನನ್ನನ್ನು ಎದುರಿಸುವವರು ಯಾರಿದ್ದಾರೆ?” ಎಂದುಕೊಂಡು ತನ್ನ ಭುಜದಂಡವನ್ನು ನೋಡಿಕೊಳ್ಳುವನು. ಆ ಕ್ಷಣ ಅವನಲ್ಲಿ ಸೀತೆಯ ಕಮಲದಂತಹ ಮುಖವನ್ನು ವೀಕ್ಷಿಸಬೇಕೆಂಬ ಬಯಕೆ ಮೂಡಿತು. ಅವಳನ್ನು ಕಾಣುವ ಕಾತರಗೊಂಡ ಆತ ಹೂಬಾಣಗಳಿಲ್ಲದ ಕಾಮನಂತೆ ಸೀತೆಯು ಇದ್ದ ಪ್ರಮದವನಕ್ಕೆ ಬರುತ್ತಾನೆ. ಯುದ್ಧ ಸನ್ನದ್ದನಾಗಿರುವಾಗಲೂ ಆತನಲ್ಲಿ ಸೀತೆಯ ವ್ಯಾಮೋಹ ಕಾಡುವುದನ್ನು ಇಲ್ಲಿ ಗಮನಿಸಬಹುದಾಗಿದೆ.

೨. ರಾಮನಿನಗಲ್ಚಿ ತಂದಾ

ನೀ ಮಾನಿನಿಗಿನಿತು ದುಃಖಮಂ ಪುಟ್ಟಿಸಿದೆಂ

ಕಾಮವ್ಯಾಮೋಹದಿನಾ

ಶಾಮುಖಮಂ ಪುದಿಯೆ ದುರ್ಯಶಃಪಟಹರವಂ

ನಾಗಚಂದ್ರ ಕವಿಯು ಬರೆದಿರುವ ‘ಪಂಪ ರಾಮಾಯಣ’ದಿಂದ ಆಯ್ದುಕೊಳ್ಳಲಾಗಿರುವ ‘ಕದಡಿದ ಸಲಿಲಂ ತಿಳಿವಂದದೆ’ ಎಂಬ ಕಾವ್ಯಭಾಗದಿಂದ ಈ ಮೇಲಿನ ಪದ್ಯವನ್ನು ಸ್ವೀಕರಿಸಲಾಗಿದೆ.

ಸೀತೆಯ ಬಗ್ಗೆ ವ್ಯಾಮೋಹವನ್ನು ಕಳೆದುಕೊಂಡಿರುವ ರಾವಣನು ಪಶ್ಚಾತ್ತಾಪ ಪಡುತ್ತಿರುವ ಸನ್ನಿವೇಶವನ್ನು ಕವಿಯು ಈ ಪದ್ಧದಲ್ಲಿ ಚಿತ್ರಿಸಿದ್ದಾನೆ.

ಕರ್ಮವಶದ ನೆವದಿಂದ ಕಾಮಮೋಹಿತನಾದ ತನ್ನಿಂದಾಗಿ ತನ್ನ ಕುಲದ ಪೆಂಪು ಅಳಿಯಿತು ಎಂದು ಪರಿತಾಪಗೊಂಡ ರಾವಣನು “ಕಾಮಪೀಡಿತನಾಗಿ ತಾನು ಈ ಮಾನಿನಿಯನ್ನು ರಾಮನಿಂದ ಬೇರ್ಪಡಿಸಿದೆ. ಬೇರ್ಪಡಿಸಿ ಇಲ್ಲಿಗೆ ಕರೆ ತಂದು ಅಪಾರ ದುಃಖಕ್ಕೆ ಈಡು ಮಾಡಿದೆ. ಇದರಿಂದಾಗಿ ದುರ್ಯಶಃಪಟಹರವ ಎಲ್ಲೆಡೆ ತುಂಬಿಕೊಂಡಿತಲ್ಲ” ಎಂದು ಪಶ್ಚಾತ್ತಾಪ ಪಡುವನು. ತಾನು ಮಾಡಿದ ಆಕಾರ್ಯಕ್ಕಾಗಿ ದುಃಖಿಸುವ ರಾವಣನ ಮನಸ್ಸು ಪರಿವರ್ತನೆಗೊಂಡಿರುವುದಕ್ಕೆ ಅವನ ಈ ಆತ್ಮನಿರೀಕ್ಷಣೆಯ ನುಡಿಗಳು ಸಾಕ್ಷಿಯಾಗಿವೆ.

೩. ಪರುಷದ ಗೃಹದೊಳಗಿದ್ದು, ತಿರಿವನೆ ಮನೆಮನೆಯ?

ತೊರೆಯೊಳಗಿದ್ದವನು ತೃಷೆಯಾಗಲರಸುವನೆ ಕೆರೆಯುದಕವ?

ಮಂಗಳಲಿಂಗ ಅಂಗದ ಮೇಲೆ ಇದ್ದು

ಅನ್ನಲಿಂಗಗಳ ನೆನವನೆ ನಿಮ್ಮ ಭಕ್ತನು

ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ?

ಉರಿಲಿಂಗಪೆದ್ದಿಯು ಹನ್ನೆರಡನೆಯ ಶತಮಾನದಲ್ಲಿದ್ದ ಓರ್ವ ವಚನಕಾರ. ‘ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ’ ಎಂಬ ಅಂಕಿತದಲ್ಲಿ ಆತ ವಚನಗಳನ್ನು ರಚಿಸಿದ್ದಾನೆ. ಆತನ ವಚನಗಳಲ್ಲಿ ಈ ಮೇಲಿನ ವಚನವು ಅತ್ಯಂತ ವಿಶಿಷ್ಟವೆನ್ನಿಸಿದೆ.

ಶಿವಲಿಂಗವನ್ನು ಮೈಮೇಲೆ ಧರಿಸಿದ ಶಿವಶರಣನಿಗೆ ಬೇರೆ ಯಾವ ಕೆಟ್ಟ ವಿಚಾರಗಳೂ ಕಾಡುವುದಿಲ್ಲ. ಉಳಿದುದೆಲ್ಲವೂ ತೃಣಸಮಾನವೆಂಬುದಾಗಿ ಉರಿಲಿಂಗಪೆದ್ದಿಯು ಈ ವಚನದಲ್ಲಿ ವಿವರಿಸಿ ಹೇಳಿದ್ದಾನೆ.

ಬಯಸಿದ್ದೆಲ್ಲವನ್ನೂ ಕೊಡುವುದು ಪರುಷದ ಮಣಿ. ಆ ಪರುಷದ ಗೃಹದಲ್ಲಿ ವಾಸಿಸುವವನು ಮನೆಮನೆಗೆ ಹೋಗಿ ಭಿಕ್ಷೆಬೇಡಬೇಕಿಲ್ಲ. ಅದೇ ರೀತಿ ಹರಿಯುವ ತೊರೆಯ ನೀರು ಕುಡಿಯಲು ಉತ್ತಮವಾದುದು. ಅಂತಹ ತೊರೆಯೊಳಗಿರುವವನು ಬಾಯಾರಿಕೆಯಾದಾಗ ತೊರೆಯ ನೀರನ್ನು ಕುಡಿಯುತ್ತಾನೆಯೇ ವಿನಾ ಕೆರೆಯ ಕೊಳಕು ನೀರನ್ನು ಹುಡುಕುವುದಿಲ್ಲ. ಇದರಂತೆಯೇ ಮಂಗಳಕರವಾದ ಶಿವಲಿಂಗವನ್ನು ಅಂಗದ ಮೇಲೆ ಧರಿಸಿದ ಶಿವಭಕ್ತರು ಅನ್ಯಲಿಂಗಗಳನ್ನು ನೆನೆಯುವುದಿಲ್ಲ ಎಂದು ಉರಿಲಿಂಗಪೆದ್ದಿಯು ಈ ಮೇಲಿನ ವಚನದಲ್ಲಿ ವಿವರಿಸಿದ್ದಾನೆ.

೪. ಇನ್ನು ಹುಟ್ಟದೆಯಿರಲಿ ನಾರಿಯ

ರೆನ್ನವೊಲು ಭಂಗಿತರು ಭುವನದೊ

ಳಿನ್ನು ಜನಿಸಲುಬೇಡ ಗಂಡರು ಭೀಮಸನ್ನಿಭರು

ಎನ್ನವೊಲು ಪಾಂಡವರವೊಲು ಸಂ

ಪನ್ನ ದುಃಖಿಗಳಾರು ನವೆದರು

ಮುನ್ನಿನವರೊಳಗೆಂದು ದ್ರೌಪದಿ ಹಿರಿದು ಹಲುಬಿದಳು.

ಕುಮಾರವ್ಯಾಸ ಕವಿಯು ರಚಿಸಿರುವ ‘ಕರ್ಣಾಟ ಭಾರತ ಕಥಾಮಂಜರಿ’ ಎಂಬ ಮಹಾಕಾವ್ಯದ ವಿರಾಟಪರ್ವದಿಂದ ಸ್ವೀಕರಿಸಿರುವ ‘ಇನ್ನು ಹುಟ್ಟಿದೆಯಿರಲಿ ನಾರಿಯರೆನ್ನವೊಲು’ ಎಂಬ ಕಾವ್ಯಭಾಗದಿಂದ ಈ ಮೇಲಿನ ಪದ್ಯವನ್ನು ಆಯ್ದುಕೊಳ್ಳಲಾಗಿದೆ.

ಕೀಚಕನ ಕಾಟದಿಂದ, ತುಂಬಿದ ಸಭೆಯಲ್ಲಿ ಆತ ಕಾಲಿಂದ ಜಾಡಿಸಿ ಒದ್ದುದರಿಂದಾದ ಅಪಮಾನದಿಂದ ನೊಂದಿರುವ ದ್ರೌಪದಿಯು ಇನ್ನು ತನ್ನಂತೆ ಅಪಮಾನ-ದುಃಖಗಳನ್ನು ಅನುಭವಿಸಿದ ಹೆಣ್ಣುಗಳು ಹುಟ್ಟದಿರಲಿ ಎಂದು ಆಶಿಸುವ ಸಂದರ್ಭವನ್ನು ಕವಿಯು ಇಲ್ಲಿ ಚಿತ್ರಿಸಿದ್ದಾನೆ.

ದ್ರೌಪದಿಯು ಅತ್ಯಂತ ವೇದನೆಯಿಂದ ಆಡಿರುವ ಮಾತುಗಳು ಈ ಪದ್ಯಭಾಗದಲ್ಲಿದೆ. “ನನ್ನಂತೆ ಅವಮಾನದಿಂದ ಭಂಗಿತಳಾದ ಹೆಣ್ಣುಗಳು ಇನ್ನು ಈ ಭೂಮಿಯಲ್ಲಿ ಹುಟ್ಟದಿರಲಿ. ಭೀಮ ಸದೃಶರಾದ ಗಂಡಂದಿರು, ಪಾಂಡವರು ಮತ್ತು ನನ್ನಂತೆ ಅತಿ ದುಃಖದಿಂದ ಬಳಲಿ ನವೆದವರು ಹಿಂದೆ ಯಾರೂ ಈ ಭೂಮಿಯಲ್ಲಿ ಹುಟ್ಟಿರಲಿಲ್ಲವೆನ್ನಿಸುತ್ತದೆ. ಮುಂದೆಯೂ ಹುಟ್ಟದಿರಲಿ” ಎಂದು ದ್ರೌಪದಿಯು ದುಃಖದಿಂದ ಹೇಳಿಕೊಂಡಿದ್ದಾಳೆ. ಅವಳು ಅನುಭವಿಸಿರುವ ಅಪಮಾನ-ದುಃಖದ ತೀವ್ರತೆಯನ್ನು ಇಲ್ಲಿ ಗಮನಿಸಬಹುದು.

೫. ಯಾವಾಗೊ ಕೋಳಿ ಕೂಗಿಹುದು ಏಳಿ, ತಡವೇಕೆ ಪಾನಕೇಳಿ

ಮೊದಲಾಗಲೀಗ, ಅಂಗಡಿಯ ಕದವ ಈ ಕ್ಷಣಕೆ ತೆರೆಯ ಹೇಳಿ

ಜೀವನದ ನದಿಗೆ ಸೆಳವಿಹುದು, ಮರಣ ಬಂದೀತು ಕ್ಷಣವು ಉರುಳಿ

ಹೋದವರು ತಿರಗಿ ಬಂದಾರೆ, ಅವರು ಬರಲಿಕ್ಕು ಇಲ್ಲ ಮರಳಿ.

ವರಕವಿ ಎಂದೇ ಪ್ರಸಿದ್ದರಾಗಿರುವ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ರಚಿಸಿರುವ ‘ಬೆಳಗು ಜಾವ’ ಎಂಬ ಕವಿತೆಯಿಂದ ಈ ಮೇಲಿನ ಚರಣಗಳನ್ನು ಆಯ್ದುಕೊಳ್ಳಲಾಗಿದೆ.

ನಿದ್ದೆಗೈಯುತ್ತಿರುವ ಯುವಕರನ್ನು ಕವಿಯು ಎಚ್ಚರಗೊಳಿಸುತ್ತಿರುವ ಸಂದರ್ಭವಿದಾಗಿದೆ. ಯೌವನವಿರುವಾಗ ಎದ್ದು ಬದುಕನ್ನು ಸವಿಯಲೆಂಬ ಆಸೆ ಕವಿಯದು. ಆದರೆ ಬೆಳಗು ಜಾವ ಮೂಡಿದ್ದರೂ ನಿದ್ದೆಯಲ್ಲಿ ಮೈಮರೆತಿದ್ದಾರೆ ಕಿರಿಯರು. ಆದ್ದರಿಂದ ಕವಿಯು “ಕೋಳಿ ಕೂಗಿಯಾಗಿದೆ. ಇನ್ನಾದರೂ ತಡಮಾಡದೆ ಜೀವನದ ರಸ(ಅನುಭವ)ವನ್ನು (ಪಾನಕೇಳಿ) ಕುಡಿಯಲು ಎದ್ದೇಳಿ. ಯೌವನವಿರುವುದು ದುಡಿದು ಸಂಪಾದಿಸಲು. ಜೀವನವೆಂಬ ನದಿಯಲ್ಲಿ ಯಾವಾಗಲೂ ಸೆಳೆತ ಜಾಸ್ತಿ. ಈಗ ಬದುಕಿದ್ದವರು ಇನ್ನೊಂದು ಗಳಿಗೆಯಲ್ಲಿ ಸಾವನ್ನಪ್ಪಬಹುದು. ಯಾವಾಗ ಯಾರಿಗೆ ಹೇಗೆ ಸಾವು ಬಂದೆರಗುತ್ತದೆಂಬುದು ತಿಳಿಯದು. ಸಾವನ್ನಪ್ಪಿದ ಮೇಲೆ ಈ ಭೂವನದ ಬದುಕು ಅಂತ್ಯಗೊಂಡಂತೆ, ಸತ್ತ ಮೇಲೆ ತಿರುಗಿ ಇಲ್ಲಿಗೆ ಬಂದವರು ಯಾರೂ ಇಲ್ಲ. ಹಾಗೆ ಬರುವುದು ಸಾಧ್ಯವೂ ಇಲ್ಲ” ಎಂದಿದ್ದಾರೆ. ಸಾವು ಬರುವ ಮುನ್ನ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕೆಂಬ ಅಪೇಕ್ಷ ಕವಿಯದಾಗಿದೆ.

೬. ಹಂಚಿಕೊಂಡಿದ್ದಾರೆ ಅಪ್ಪ ಅಮ್ಮನನ್ನು

ಇಲ್ಲಿ ದೊಡ್ಡಮಗನ ತಾವಲ್ಲಿ ಮುದುಕಿ, ಸದ್ಯ ಕನ್ನಡ ದೇಶ

ಮಗ ಸೊಸೆ ಹೊರಗೆ ಹೋದಾಗಲಾದರೂ ನಾಲ್ಕು ಮಾತಾಡಿ

ತೀರಿಸಿಕೊಳ್ಳುತ್ತಾಳೆ ಬಾಯತುರಿಕೆ, ಪಾಪ ಮುದುಕ ದೂರದ

ಅಸ್ಸಾಮಿನಲ್ಲಿ, ಅಲ್ಲಿಯ ಮಾತು ಅವನಿಗೆ ಸಸೇಮಿರ ಬರದು.

ಶ್ರೀಮತಿ ಲಲಿತಾ ಸಿದ್ದಬಸವಯ್ಯ ಅವರು ಬರೆದಿರುವ ‘ಒಂದು ಹೂ ಹೆಚ್ಚಿಗೆ ಇಡುತೀನಿ’ ಎಂಬ ಕವಿತೆಯಿಂದ ಈ ಮೇಲಿನ ಪದ್ಮಭಾಗವನ್ನು ಆಯ್ದುಕೊಳ್ಳಲಾಗಿದೆ.

ವಯಸ್ಸಾದ ತಂದೆ-ತಾಯಿಗಳನ್ನು ಮಕ್ಕಳು ಪ್ರೀತಿಯಿಂದ ನೋಡಿಕೊಳ್ಳದೆ ಅಪ್ಪ-ಅಮ್ಮನನ್ನು ಹಂಚಿಕೊಂಡು ಆ ವಯೋವೃದ್ಧ ಜೀವಗಳನ್ನು ಬೇರ್ಪಡಿಸುವ ಸಂದರ್ಭವನ್ನು ಕವಿಯತ್ರಿ ಇಲ್ಲಿ ಚಿತ್ರಿಸಿದ್ದಾರೆ.

ಇಬ್ಬರು ಗಂಡು ಮಕ್ಕಳು ತಮ್ಮ ಅಪ್ಪ-ಅಮ್ಮಂದಿರನ್ನು ಹಂಚಿಕೊಂಡಿದ್ದಾರೆ. ಮುದುಕಿ ಇರುವುದು ದೊಡ್ಡ ಮಗನ ಬಳಿ, ಸದ್ಯ ಅವಳಿರುವುದು ಕನ್ನಡ ಮಾತನಾಡುವ ಪರಿಸರದಲ್ಲಿ. ಮಗ-ಸೊಸೆ ಹೊರಗಡೆಗೆ ಹೋದಾಗಲಾದರೂ ಅವರಿವರೊಂದಿಗೆ ನಾಲ್ಕು ಮಾತನಾಡಿ ಬಾಯಿತುರಿಕೆ ತೀರಿಸಿಕೊಳ್ಳುವ ಅವಕಾಶ ಅವಳಿಗಿದೆ. ಆದರೆ ಆಕೆಯ ಪತಿ ಇರುವುದು ಕಿರಿಮಗ-ಸೊಸೆಯೊಂದಿಗೆ ದೂರದ ಅಸ್ಸಾಮಿನಲ್ಲಿ. ಅಲ್ಲಿಯ ಅಸ್ಸಾಮಿ ಭಾಷೆ ಅವನಿಗೆ ಸ್ವಲ್ಪವೂ ಬರುವುದಿಲ್ಲ. ಆತನಿಗೆ ಬರುವುದು ಕನ್ನಡ ಭಾಷೆ ಮಾತ್ರ ಯಾರೊಂದಿಗೂ ಮಾತನಾಡಲಾಗದ ಅಸಹಾಯಕತೆ ಆತನದೆಂದು ಮುದುಕಿ ಚಿಂತಿಸುತ್ತಾಳೆ. ಜವಾಬ್ದಾರಿಯ ಹೆಸರಲ್ಲಿ ಹಿರಿಯ ಜೀವಗಳನ್ನು ಆಗಲಿಸಿರುವ ಇಂದಿನ ಮೌಲ್ಯರಹಿತ ವ್ಯವಸ್ಥೆಗೆ ಈ ಮೇಲಿನ ಸಾಲುಗಳು ಕನ್ನಡಿ ಹಿಡಿದಿವೆ.

ಮೂರು ಅಂಕಗಳಿಗೆ ಸಂದರ್ಭ ಸ್ವಾರಸ್ಯ ವಿವರಿಸುವಾಗ ಮತ್ತು ಐದು ಅಂಕಗಳಿಗೆ ಪದ್ಯದ ಭಾವಾರ್ಥ ಬರೆಯುವಾಗ ಆರಂಭದಲ್ಲಿ ಕವಿ ಕೃತಿ ವಿವರ ನೀಡುವುದು ಅಪೇಕ್ಷಣೀಯ ಖತ್ಯಪುಸ್ತಕದಲ್ಲಿರುವ ಕವಿ ಕಾವ್ಯ ಬೇಖಕರ ಪರಿಚಯ ಭಾಗವನ್ನು ವಿವರವಾಗಿ ಅಭ್ಯಾಸ ಮಾಡಿರಿ. ನೆನಪಿಟ್ಟುಕೊಳ್ಳುವ ಸಲುವಾಗಿ ಈ ಮುಂದೆ ನೀಡಿರುವ ಆಂಕಣಗಳಲ್ಲಿ ವಿವರವನ್ನು ತುಂಬಿರಿ.

ಕ್ರ.ಸಂ.ಕವಿಯ/ಲೇಖಕರ ಹೆಸರುಕಾವ್ಯನಾಮ (ಅಂಕಿತ, ಜನನ)ಕೆಲವು ಕೃತಿಗಳ ಹೆಸರು
ಉದಾ: ಬಸವಣ್ಣಅಭಿನವ ಪಂಪಶ್ರೀರಾಮಚಂದ್ರಚರಿತ ಪುರಾಣ, ಮಲ್ಲಿನಾಥ ಪುರಾಣ
ಬಸವಣ್ಣಅಂಕಿತ: ಕೂಡಲಸಂಗಮದೇವಕಾಲ: ೧೨ನೆಯ ಶತಮಾನ
ಉರಿಲಿಂಗಪೆದ್ದಿಅಂಕಿತ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾಕಾಲ: ೧೨ನೆಯ ಶತಮಾನ
ಗದುಗಿನ ನಾರಾಣಪ್ಪಕಾವ್ಯನಾಮ: ಕುಮಾರವ್ಯಾಸಕೃತಿ: ಕರ್ಣಾಟ ಭಾರತ ಕಥಾಮಂಜರಿ
ಪುಲಿಗೆರೆ ಸೋಮವಾಥಕಾವ್ಯನಾಮ: ಹರಿಹರಾ ಶ್ರೀಚೆನ್ನಸೋಮೆಶ್ವರಾಕೃತಿ: ಸೋಮೇಶ್ವರ ಶತಕ
ಶ್ರೀನಿವಾಸನಾಯಕಅಂಕಿತ: ಪುರಂದರದಾಸಕಾಲ: ೧೪೮೪ – ೧೫೬೪
ದ.ರಾ. ಬೇಂದ್ರೆಕಾವ್ಯನಾಮ: ಅಂಬಿಕಾತ್ತನಯದತ್ತಕೃತಿ: ಮುಕ್ತಕಂಠ
ಜಿ.ಎಸ್.ಶಿವರುದ್ರಪ್ಪಕಾಲ: ೧೯೨೬ – ೨೦೧೩ಕೃತಿ: ಜಿ. ಎಸ್.‌ ಎಸ್.‌ ಸಮಗ್ರ ಕಾವ್ಯ
ಕೆ.ಎಸ್.ನಿಸಾರ್‌ ಅಹಮದ್ಜನನ: ೫.೨.೧೯೩೬ಕೃತಿ: ವ್ಯಕ್ತಿಪರ ಕವನಗಳು
ಟಿ.ಯಲ್ಲಪ್ಪಜನನ: ೨.೧೦.೧೯೭೦ಕೃತಿ: ಚಿಟ್ಟೆ ಮತ್ತು ಜೀವಯಾನ
೧೦ಲಲಿತಾ ಸಿದ್ಧಬಸವಯ್ಯಜನನ: ೧೭.೦೨.೧೯೫೫ಕೃತಿ: ಮೊದಲಸಿರಿ, ಕಬ್ಬೆನೆಲ
೧೧ಸುಕನ್ಯಾ ಮಾರುತಿಜನನ: ೧.೩.೧೯೫೬ಕೃತಿ: ನಾನೆಂಬ ಮಾಯೆ
೧೨ಪಿ. ಲಂಕೇಶ್ಕಾಲ: ೧೯೩೫ – ೨೦೦೦ಕೃತಿ: ಲಂಕೇಶರ ಸಮಗ್ರ ಕಥೆಗಳು
೧೩ಕೃಪಾಕರ , ಸೇನಾನಿಜನನ: ೧೯೫೬ – ೧೯೬೨ಕೃತಿ: ಜೀವಯಾನ
೧೪ನೇಮಿಚಂದ್ರಜನನ: ೧೬.೭.೧೯೫೬ಕೃತಿ: ಬದುಕು ಬದಲಿಸಬಹುದು
೧೫ಹಾ.ಮಾ ನಾಯಕಕಾಲ: ೧೯೩೧ – ೨೦೦೧ಕೃತಿ: ಕನ್ನಡವನ್ನು ಕಟ್ಟುವ ಕೆಲಸ
೧೬ಹೆಚ್. ನಾಗವೇಣಿಜನನ: ೨೯.೧೧.೧೯೬೭ಕೃತಿ: ಮೀಯುವ ಆಟ
೧೭ಎಚ್. ಆರ್.‌ ರಾಮಕೃಷ್ಣರಾವ್ಜನನ: ೩೦.೦೫.೧೯೩೫ಕೃತಿ: ಕಲಾಂ ಮೇಷ್ಟ್ರು
೧೮ನಂದಳಿಕೆ ಲಕ್ಷ್ಮೀನಾರಾಯಣಪ್ಪಕಾವ್ಯನಾಮ: ಮುದ್ದಣ್ಣಕೃತಿ: ರಾಮಾಶ್ವಮೇಧ ಸಂಗ್ರಹ
೧೯ವೀರೇಂದ್ರ ಸಿಂಪಿಜನನ: ೧೯೩೮ಕೃತಿ: ಸಮಗ್ರ ಲಲಿತ ಪ್ರಬಂಧಗಳು
೨೦ಕೆ.ಪಿ. ಪೂರ್ಣಚಂದ್ರ ತೇಜಸ್ವಿಕಾಲ: ೧೯೩೮ – ೨೦೦೭ ಕೃತಿ: ಕಿರುಗೂರಿನ ಗಯ್ಯಾಳಿಗಳು

Leave a Comment