ದ್ವಿತೀಯ ಪಿ.ಯು.ಸಿ ರಾಜ್ಯಶಾಸ್ತ್ರ ಅಧ್ಯಾಯ-5 ರಾಷ್ಟ್ರ ನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು ನೋಟ್ಸ್ ಪ್ರಶ್ನೋತ್ತರಗಳು, 2nd Puc Political Science 5th Chapter Notes Question Answer Guide Extract Mcq Pdf Download in Kannada Medium Karnataka State Syllabus 2nd Puc Political Science Rashtra Nirmana Mattu Prajasatte Edurisuttiruva Savalugalu Notes 2nd puc political science notes in kannada chapter 5, 2nd puc political science 5th chapter notes in kannada ದ್ವಿತೀಯ ಪಿಯುಸಿ ರಾಜ್ಯಶಾಸ್ತ್ರ ನೋಟ್ಸ್ pdf 2nd puc political science notes pdf in kannada

ಅಭ್ಯಾಸ
ಒಂದು ಅಂಕದ ಪ್ರಶ್ನೆಗಳು
1. ರಾಷ್ಟ್ರ-ರಾಜ್ಯ ಎಂದರೇನು?
ಒಂದು ನಿರ್ದಿಷ್ಟ ಪ್ರದೇಶದಲ್ಲಿ ಪರರ ಅಧೀನದಲ್ಲಿರುವ ರಾಜಕೀಯ ಗುರಿಗಳ ಸಾಧನೆಗಾಗಿ ಶಾಶ್ವತವಾಗಿ ರೂಪುಗೊಂಡ ಜನಸಮೂಹವೇ ರಾಷ್ಟ್ರ-ರಾಜ್ಯ.
2. ರಾಷ್ಟ್ರೀಯತೆ ಎಂದರೇನು?
ಪರಕೀಯರ ದಬ್ಬಾಳಿಕೆಗೊಳಗಾದ ಜನರು ಭಿನ್ನಾಭಿಪ್ರಾಯಗಳನ್ನು ಮರೆತು ರಾಷ್ಟ್ರ ನಿರ್ಮಾಣಕ್ಕಾಗಿ ಒಗ್ಗಟ್ಟಿನಿಂದ ಹೋರಾಡುವಂತೆ ಪ್ರೇರೇಪಿಸುವುದೇ ರಾಷ್ಟ್ರೀಯತೆ.
3. ರಾಷ್ಟ್ರ ನಿರ್ಮಾಣ ಎಂದರೇನು?
ಜನರನ್ನು ಸಂಘಟಿಸಿ ಅವರಲ್ಲಿ ಸಾಮರಸ್ಯ ಸಾಧಿಸಿ ಎಲ್ಲರೂ ಒಪ್ಪಿಕೊಳ್ಳುವ ವ್ಯವಸ್ಥೆಯನ್ನು ರಾಷ್ಟ್ರ ನಿರ್ಮಾಣ ಎನ್ನುವರು.
4. ರಾಷ್ಟ್ರ ರಾಜ್ಯ ಪ್ರಕ್ರಿಯೆಯು ಯಾವ ಒಪ್ಪಂದದಿಂದ ಮೂಡಿಬಂದಿತು?
ರಾಷ್ಟ್ರ ರಾಜ. ಪಕ್ರಿಯೆಯು ವೆಸ್ಟ್ ಫಾಲಿಯಾ ಒಪಂದದಿಂದ ಮೂಡಿಬಂದಿತು.
5. ರಾಷ್ಟ್ರ ರಾಜ್ಯಕ್ಕೆ ಸಂಬಂಧಿಸಿದಂತೆ ವೆಸ್ಟ್ ಫಾಲಿಯಾ ಒಪ್ಪಂದ ಯಾವಾಗ ಸಹಿ ಮಾಡಲ್ಪಟ್ಟಿತು?
ರಾಷ್ಟ್ರ ರಾಜ್ಯಕ್ಕೆ ಸಂಬಂಧಿಸಿದಂತೆ ವೆಸ್ಟ್ ಫಾಲಿಯಾ ಒಪ್ಪಂದ 1648 ರಲ್ಲಿ ಸಹಿ ಮಾಡಲ್ಪಟ್ಟಿತು.
6. ಯಾವ ರಾಷ್ಟ್ರವನ್ನು ಸಾಂಸ್ಕೃತಿಕ ವೈವಿಧ್ಯತೆಗಳ ನಾಡು ಎಂದು ಕರೆಯಲಾಗಿದೆ?
ಭಾರತವನ್ನು ಸಾಂಸ್ಕೃತಿಕ ವೈವಿಧ್ಯತೆಗಳ ನಾಡು ಎಂದು ಕರೆಯಲಾಗಿದೆ.
7. ಯಾವ ರಾಷ್ಟ್ರವನ್ನು ಜನಾಂಗೀಯತೆ ನಾಡು ಎಂದು ಕರೆಯಲಾಗಿದೆ?
ಆಫ್ರಿಕಾವನ್ನು ಜನಾಂಗೀಯತೆ ನಾಡು ಎಂದು ಕರೆಯಲಾಗಿದೆ.
8. ರಾಷ್ಟ್ರ ನಿರ್ಮಾಣದಲ್ಲಿ ಎದುರಾಗುವ ಯಾವುದಾದರೂ ಒಂದು ಅಡಚಣೆಯನ್ನು ತಿಳಿಸಿ.
ರಾಷ್ಟ್ರ ನಿರ್ಮಾಣದಲ್ಲಿ ಎದುರಾಗುವ ಅಡಚಣೆ-ಬಡತನ.
9. ರಾಷ್ಟ್ರ ನಿರ್ಮಾಣದ ಸಮಸ್ಯೆಗೆ ಒಂದು ಪರಿಹಾರವನ್ನು ತಿಳಿಸಿ,
ಸ್ಥಿರತೆ. ರಾಷ್ಟ್ರ ನಿರ್ಮಾಣದ ಸಮಸ್ಯೆಗೆ ಪರಿಹಾರ ರಾಜಕೀಯ
10. ಅಸಮಾನತೆ ಎಂದರೇನು?
ಜಾತಿ, ಧರ್ಮ, ಲಿಂಗ, ಜನ್ಮಸ್ಥಳ ಮುಂತಾದವುಗಳ ಆಧಾರದ ಮೇಲೆ ಕೆಲವು ವರ್ಗಗಳನ್ನು ತಾರತಮ್ಯಕ್ಕೆ ಒಳಪಡಿಸುವುದನ್ನು ಅಸಮಾನತೆ ಎನ್ನುವರು.
11. ಜಾತಿ ಆಧಾರಿತ ಅಸಮಾನತೆ ಎಂದರೇನು?
ಜಾತಿಯನ್ನೇ ಆಧರಿಸಿ ಜನರನ್ನು ತಾರತಮ್ಯದಿಂದ ನೋಡುವುದೇ ಜಾತಿ ಆಧಾರಿತ ಅಸಮಾನತೆ.
12. ಜಾತಿ ಆಧಾರಿತ ಅಸಮಾನತೆಗೆ ಒಂದು ಕಾರಣ ಕೊಡಿ.
ವರ್ಣಾಶ್ರಮ ವ್ಯವಸ್ಥೆ.
13. ಲಿಂಗಾಧಾರಿತ ಅಸಮಾನತೆ ಎಂದರೇನು?
ಗಂಡು ಮತ್ತು ಹೆಣ್ಣು ಎಂಬ ತಾರತಮ್ಯದಿಂದ ಸಮಾನ ಅವಕಾಶಗಳನ್ನು ನಿರಾಕರಿಸುವುದು ಲಿಂಗಾಧಾರಿತ ಅಸಮಾನತೆ.
14. ಲಿಂಗಾಧಾರಿತ ಅಸಮಾನತೆಗೆ ಒಂದು ಕಾರಣ ಕೊಡಿ.
ಪುರುಷ ಪ್ರಾಬಲ್ಯ.
15. ಅನಕ್ಷರತೆಯ ವ್ಯಾಖ್ಯೆಯನ್ನು ಕೊಡಿ.
ಅಮರ್ತ್ಯಸೇನ್ರವರ ಪ್ರಕಾರ – “ಅನಕ್ಷರತೆಯು ಒಂದು ಅಸ್ವಾತಂತ್ರ್ಯ” ಎಂದಿದ್ದಾರೆ.
16. ಅನಕ್ಷರತೆ ಎಂದರೇನು?
ವ್ಯಕ್ತಿ ಯಾವುದೇ ಭಾಷೆಯಲ್ಲಿ ಓದಲು ಮತ್ತು ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ಬಾರದಿರುವ ಸ್ಥಿತಿಯನ್ನು ಅನಕ್ಷರತೆ ಎನ್ನುವರು.
17. ಕರ್ನಾಟಕದಲ್ಲಿ ಶೇಕಡಾವಾರು ಸಾಕ್ಷರಸ್ಥರ ಸಂಖ್ಯೆ ಎಷ್ಟು?
ಕರ್ನಾಟಕದಲ್ಲಿ ಶೇಕಡಾವಾರು ಸಾಕ್ಷರಸ್ಥರ ಸಂಖ್ಯೆ 75.36%.
18. ಅನಕ್ಷರತೆಗೆ ಒಂದು ಕಾರಣ ಕೊಡಿ.
ಜನಸಂಖ್ಯಾ ಸ್ಫೋಟ.
19. 86ನೇ ಸಂವಿಧಾನ ತಿದ್ದುಪಡಿ ಕಾಯ್ದೆ ಯಾವಾಗ ಅಂಗೀಕರಿಸಲ್ಪಟ್ಟಿತು?
86ನೇ ಸಂವಿಧಾನ ತಿದ್ದುಪಡಿ ಕಾಯ್ದೆ 2002ರಲ್ಲಿ ಅಂಗೀಕರಿಸಲ್ಪಟ್ಟಿತು.
20. 86 ನೇ ಸಂವಿಧಾನ ತಿದ್ದುಪಡಿ ಕಾಯ್ದೆಯ ಮೂಲಕ ಯಾವ ಕಲಂ ಹೊಸದಾಗಿ ಸೇರಿಸಲ್ಪಟ್ಟಿತು?
86 ನೇ ಸಂವಿಧಾನ ತಿದ್ದುಪಡಿ ಕಾಯ್ದೆಯ ಮೂಲಕ 21 ಎ ಕಲಂ ಹೊಸದಾಗಿ ಸೇರಿಸಲ್ಪಟ್ಟಿತು.
21. ಯಾವ ವಯೋಮಿತಿಯ ಮಕ್ಕಳು ಕಡ್ಡಾಯ ಶಿಕ್ಷಣದ ಅಡಿಯಲ್ಲಿ ಬರುತ್ತಾರೆ?
6-14 ವರ್ಷದೊಳಗಿನ ಮಕ್ಕಳು ಕಡ್ಡಾಯ ಶಿಕ್ಷಣದ ಅಡಿಯಲ್ಲಿ ಬರುತ್ತಾರೆ.
22. R.T.E ಯನ್ನು ವಿಸ್ತರಿಸಿ?
ಶಿಕ್ಷಣದ ಹಕ್ಕು
23. ಕೋಮುವಾದ ಎಂದರೇನು?
ಸಂಕುಚಿತ ರಾಜಕೀಯ ಗುರಿಗಳು ಮತ್ತು ನಿರ್ದಿಷ್ಟ ಕೋಮಿನ ಹಿತಾಸಕ್ತಿಗಳನ್ನು ಸಾಧಿಸುವುದಕ್ಕಾಗಿ ಧರ್ಮ ಮತ್ತು ಸಾಂಸ್ಕೃತಿಕ ವೈರುಧ್ಯಗಳನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ಕೋಮುವಾದ ಎನ್ನುವರು.
24. ಕೋಮುವಾದಕ್ಕೆ ಒಂದು ಕಾರಣ ಕೊಡಿ.
ಕೋಮುಗಲಭೆಗಳು.
25. Terrorismನ ಮೂಲ ಪದ ಯಾವುದು?
ಲ್ಯಾಟೀನ್ ಭಾಷೆಯ Terrere
26. ಭಯೋತ್ಪಾದನೆ ಎಂದರೇನು?
ಒಂದು ಸಂಘಟಿತ ಗುಂಪು ಅಥವಾ ಪಕ್ಷ ವ್ಯವಸ್ಥಿತವಾದ ಹಿಂಸೆಯನ್ನು ಉಪಯೋಗಿಸಿ ತನ್ನ ಮುಖ್ಯ ಗುರಿ ಸಾಧಿಸಿಕೊಳ್ಳಲು ಅನುಸರಿಸುವ ವಿಧಾನವೇ ಭಯೋತ್ಪಾದನೆ.
27. ಭಯೋತ್ಪಾದನೆಗೆ ಒಂದು ಕಾರಣ ಕೊಡಿ.
ದುರ್ಬಲ ರಾಜಕೀಯ ವ್ಯವಸ್ಥೆ.
28. ಯಾವುದಾದರೂ ಒಂದು ಭಯೋತ್ಪಾದನಾ ಸಂಘಟನೆಯನ್ನು ಹೆಸರಿಸಿ.
ಹುರಿಯತ್ ಕಾನ್ಸರೆನ್ಸ್.
29. MISA ವಿಸ್ತರಿಸಿ.
ಆಂತರಿಕ ಭದ್ರತಾ ನಿರ್ವಹಣಾ ಕಾಯ್ದೆ.
30. NSA 2. ವಿಸ್ತರಿಸಿ.
ರಾಷ್ಟ್ರೀಯ ಭದ್ರತಾ ಕಾಯ್ದೆ.
31. TADA ವಿಸ್ತರಿಸಿ.
ಭಯೋತ್ಪಾದನೆ ಮತ್ತು ವಿಚ್ಛಿದ್ರಕಾರಿ ಚಟುವಟಿಕೆಗಳ ನಿಗ್ರಹ ಕಾಯ್ದೆ.
32. POTA ವಿಸ್ತರಿಸಿ.
ಭಯೋತ್ಪಾದನೆ ತಡೆ ಕಾಯಿದೆ- (ಭಯೋತ್ಪಾದನಾ ನಿಗ್ರಹ ಕಾಯ್ದೆ)
33. UAPA ವಿಸ್ತರಿಸಿ.
ಕಾನೂನು ವಿರೋಧಿ ಚಟುವಟಿಕೆಗಳ ನಿಗ್ರಹ ಕಾಯ್ದೆ.
34. ಭ್ರಷ್ಟಾಚಾರ ಎಂದರೇನು?
ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಒಬ್ಬನ ಅಧಿಕಾರವನ್ನು ವೈಯಕ್ತಿಕ ಲಾಭಕ್ಕಾಗಿ ಹಣದ ರೂಪದಲ್ಲಿ ಅಥವಾ ವಸ್ತು ರೂಪದಲ್ಲಿ ದುರುಪಯೋಗ ಪಡಿಸಿಕೊಳ್ಳುವುದೇ ಭ್ರಷ್ಟಾಚಾರ.
35. ಭ್ರಷ್ಟಾಚಾರದ ಒಂದು ರೂಪವನ್ನು ತಿಳಿಸಿ.
ಅನಧಿಕೃತ ಶುಲ್ಕಗಳು.
36. ಭ್ರಷ್ಟಾಚಾರ ನಿಷೇಧ ಕಾಯ್ದೆ ಯಾವಾಗ ಅಂಗೀಕರಿಸಲ್ಪಟ್ಟಿತು?
ಭ್ರಷ್ಟಾಚಾರ ನಿಷೇಧ ಕಾಯ್ದೆ 1988ರಲ್ಲಿ ಅಂಗೀಕರಿಸಲ್ಪಟ್ಟಿತು.
37. ಸ್ವೀಡನ್ನ ಭ್ರಷ್ಟಾಚಾರದ ವಿರೋಧಿ ಸಂಸ್ಥೆಯನ್ನು ಏನೆಂದು ಕರೆಯುತ್ತಾರೆ?
ಒಂಬಡಮನ್.
38. ಲೋಕಪಾಲರನ್ನು ಯಾರು ನೇಮಿಸುತ್ತಾರೆ?
ರಾಷ್ಟ್ರಪತಿಗಳು.
39. ಲೋಕಪಾಲ್ ಸಂಸ್ಥೆ ಯಾವಾಗ ಅಸ್ತಿತ್ವಕ್ಕೆ ಬಂದಿತು?
ಸೆಪ್ಟೆಂಬರ್, 1, 2014.
40. ಲೋಕಪಾಲರ ಅಧಿಕಾರಾವಧಿ ಎಷ್ಟು ವರ್ಷಗಳು?
5 ವರ್ಷಗಳು.
41.ಲೋಕಾಯುಕ್ತರನ್ನು ಯಾರು ನೇಮಿಸುತ್ತಾರೆ?
ರಾಜ್ಯಪಾಲರು.
42. ಕರ್ನಾಟಕದಲ್ಲಿ ಲೋಕಾಯುಕ್ತ ವ್ಯವಸ್ಥೆ ಯಾವಾಗ ಜಾರಿಗೆ ಬಂದಿತು?
ಕರ್ನಾಟಕದಲ್ಲಿ ಲೋಕಾಯುಕ್ತ ವ್ಯವಸ್ಥೆ 1984 ರಲ್ಲಿ ಜಾರಿಗೆ ಬಂದಿತು.
43. ಲೋಕಾಯುಕ್ತರ ಅಧಿಕಾರ ಅವಧಿ ಎಷ್ಟು ವರ್ಷಗಳು?
ಲೋಕಾಯುಕ್ತರ ಅಧಿಕಾರ ಅವಧಿ 5 ವರ್ಷಗಳು
44. ಪ್ರಸ್ತುತ ಕರ್ನಾಟಕದ ಲೋಕಾಯುಕ್ತರನ್ನು ಹೆಸರಿಸಿ.
ವೈ.ಬಾಸ್ಕರ್ರಾವ್.
45. ಪ್ರಸ್ತುತ ಕರ್ನಾಟಕದ ಉಪಲೋಕಾಯುಕ್ತರನ್ನು ಹೆಸರಿಸಿ.
ಸುಭಾಷ್ ಬಿ. ಆಡಿ ಮತ್ತು ಶಶಿಧರ್ ಭೀಮ್ ರಾವ್ ಮಜಗೆ.
II. ಎರಡು ಅಂಕದ ಪ್ರಶ್ನೆಗಳು
1. ರಾಷ್ಟ್ರ-ರಾಜ್ಯದ ಅರ್ಥವನ್ನು ತಿಳಿಸಿ?
ರಾಷ್ಟ್ರ ಎಂಬುದು, ಒಂದೇ ಧರ್ಮ, ಸಂಪ್ರದಾಯ ಹಿನ್ನೆಲೆಯಿಂದು ಕೂಡಿದ ಒಂದು ನಿರ್ದಿಷ್ಟ ಭೂ ಪ್ರದೇಶದಲ್ಲಿ ನೆಲೆಸಿರುವ ಸಮಾನ ಮನುಷ್ಯರಿಂದ ಕೂಡಿರುವ ಜನಸಮುದಾಯವೇ ರಾಷ್ಟ್ರ.
ರಾಜ್ಯ ಒಂದು ನಿರ್ಧಿಷ್ಟ ಪ್ರದೇಶದಲ್ಲಿ ವ್ಯವಸ್ಥಿತ ಸರ್ಕಾರಕ್ಕಾಗಿ ಸಂಘಟಿತವಾದ ಹಾಗೂ ಪರಮಾಧಿಕಾರ ಹೊಂದಿರುವ ಜನಸಮುದಾಯವೇ ರಾಜ್ಯ.
2. ರಾಷ್ಟ್ರ ನಿರ್ಮಾಣದ ಅರ್ಥವನ್ನು ತಿಳಿಸಿ.
ರಾಷ್ಟ್ರ ನಿರ್ಮಾಣ ಎಂಬುದು, ರಾಷ್ಟ್ರೀಯ ವಾದದಿಂದ ಕೂಡಿರುವ ಜನರಲ್ಲಿ ನಾವೆಲ್ಲರೂ ಒಂದು ಎಂಬ ಏಕತಾ ಭಾವನೆಯ ಪ್ರತಿಬಿಂಬವಾಗಿದೆ. ಇದು ರಾಷ್ಟ್ರೀಯ ಶಕ್ತಿಯನ್ನು ಗಳಿಸುವ ಮೂಲಕ ದೇಶದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ವೈಜ್ಞಾನಿಕ ಪ್ರಗತಿ ಸಾಧಿಸುವ ಗುರಿ ಹೊಂದಿದೆ.
3. ರಾಷ್ಟ್ರ ನಿರ್ಮಾಣದ ಒಂದು ವ್ಯಾಖ್ಯೆಯನ್ನು ಕೊಡಿ.
ಕೆ.ಕೆ.ಘಾಂತಯ್ರವರ ಪ್ರಕಾರ ರಾಷ್ಟ್ರ ನಿರ್ಮಾಣವೆಂಬುದು ಓಮ್ಮಿಬಸ್ ಪ್ರಕ್ರಿಯೆಯಾಗಿದ್ದು ಇದು ರಾಜ್ಯಗಳ ನಿರ್ಮಾಣ ಪ್ರಜಾಪ್ರಭುತ್ವದ ನಿರ್ಮಾಣ, ಆರ್ಥಿಕ ವ್ಯವಸ್ಥೆಯ ನಿರ್ಮಾಣ, ಸಾಮಾಜಿಕ ರಚನೆಯ ನಿರ್ಮಾಣಗಳೆಲ್ಲವನ್ನೂ ಒಳಗೊಂಡಿದೆ.
4. ಉತ್ತಮ ಆಡಳಿತ ಎಂದರೇನು?
ಆಡಳಿತವು ನಿಯಂತ್ರಣ, ಪಾರದರ್ಶಕತೆ, ಜವಾಬ್ದಾರಿತನ ಮತ್ತು ಸ್ಪಂದನೆ ಇವುಗಳಿಂದ ಕೂಡಿದ್ದರೆ ಅದನ್ನು ಉತ್ತಮ ಆಡಳಿತ ಎನ್ನುವರು.
5. ಅಸಮಾನತೆ ಎಂದರೇನು?
ಜಾತಿ, ಧರ್ಮ, ಲಿಂಗ, ಜನ್ಮಸ್ಥಳ ಮುಂತಾದವುಗಳ ಆಧಾರದ ಮೇಲೆ ಕೆಲವು ವರ್ಗಗಳನ್ನು ಅವಕಾಶಗಳು ಮತ್ತು ಸೌಲಭ್ಯಗಳಿಂದ ವಂಚಿತರನ್ನಾಗಿ, ತಾರತಮ್ಯ ಮಾಡುವುದೇ ಅಸಮಾನತೆ.
6. ಜಾತಿ ಆಧಾರಿತ ಅಸಮಾನತೆ ಎಂದರೇನು?
ಜಾತಿಯನ್ನೇ ಆಧರಿಸಿ ಜನರನ್ನು ತಾರತಮ್ಯದಿಂದ ನೋಡುವುದನ್ನು ಜಾತಿ ಆಧಾರಿತ ಅಸಮಾನತೆ ಎನ್ನಲಾಗಿದೆ.
7. ಲಿಂಗಾಧಾರಿತ ಅಸಮಾನತೆಯನ್ನು ಹೇಗೆ ಗುರುತಿಸುವಿರಿ?
ಇದು ಬಹಳ ಕಾಲದಿಂದಲೂ ಪುರುಷ ಪ್ರಾಧಾನ್ಯತೆಗೆ ಅವಕಾಶ ಕಲ್ಪಿಸಿದ್ದು ಲಿಂಗ ಪಕ್ಷಪಾತಕ್ಕೆ ಕಾರಣವಾಗಿದೆ. ಕೌಟುಂಬಿಕ, ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ತಾರತಮ್ಯ ಕಂಡುಬರುತ್ತದೆ. ಉದಾ: ಶಿಕ್ಷಣದ ನಿರಾಕರಣೆ.
8. ಅಸಮಾನತೆ ಅರ್ಥವನ್ನು ತಿಳಿಸಿ.
ಸ್ತ್ರೀ-ಪುರುಷರ ನಡುವೆ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಆರ್ಥಿಕ ಮುಂತಾದವುಗಳಲ್ಲಿ ಲಿಂಗ ಆಧಾರದ ಮೇಲೆ ಸಮಾನತೆ ಇಲ್ಲದಿರುವುದಾಗಿದೆ.
9. ಬಾಲಕಾರ್ಮಿಕ ಅರ್ಥವನ್ನು ತಿಳಿಸಿ.
ದುರ್ಬಲ, ಸಾಮಾಜಿಕ, ಆರ್ಥಿಕ ಪರಿಸ್ಥಿತಿಯಿಂದಾಗಿ, ಅವರು ಹೋಟೆಲ್ಗಳು, ಕೈಗಾರಿಕೆಗಳು, ನೇಯ್ದೆ, ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸುವುದರಿಂದ ಶಿಕ್ಷಣದಿಂದ ವಂಚಿತರಾಗಿದ್ದರಿಂದ ಅನಕ್ಷರತೆಗೆ ಕಾರಣವಾಗಿದೆ.
10. ಅನಕ್ಷರತೆಯ ವ್ಯಾಖ್ಯೆಯನ್ನು ಬರೆಯಿರಿ.
ಅಮರ್ಥ್ಯಸೇನ್ರವರ ಪ್ರಕಾರ – ‘ಅನಕ್ಷರತೆಯನ್ನು ಒಂದು ಅಸ್ವಾತಂತ್ರ್ಯ’ ಎಂದು ಹೇಳಿದ್ದಾರೆ. 2001ರ ಜನಗಣತಿ ಪ್ರಕಾರ- ‘ಯಾವುದೇ ಭಾಷೆಯಲ್ಲಿ ಒಬ್ಬ ವ್ಯಕ್ತಿ ಓದಲು ಮತ್ತು ಬರೆಯಲು ಸಾಮರ್ಥ್ಯ ಹೊಂದಿರದಿದ್ದರೆ ಅದನ್ನು ಅನಕ್ಷರತೆ ಎನ್ನಲಾಗುತ್ತದೆ.
11. ಕಡ್ಡಾಯ ಶಿಕ್ಷಣ ಎಂದರೇನು?
6-14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವುದೇ ಕಡ್ಡಾಯ ಶಿಕ್ಷಣ.
12. ಅನಕ್ಷರತೆಗೆ ಯಾವುದಾದರೂ ಎರಡು ಕಾರಣಗಳನ್ನು తిళిసి.
ಬಡತನ
ಸಾಮಾಜಿಕ ಹಿಂದುಳಿದಿರುವಿಕೆ.
13. ಕೋಮುವಾದ ಎಂದರೇನು?
ಒಂದು ನಿರ್ದಿಷ್ಟ ವರ್ಗದ ಗುಂಪು ತಮ್ಮ ಧರ್ಮದ ಬಗ್ಗೆ ಅಪರಿಮಿತ ಅಭಿಮಾನ ಹೊಂದಿದ್ದು, ಇತರೆ ಧರ್ಮಗಳ ಬಗ್ಗೆ ಕೀಳರಿಮೆಯನ್ನು ಮೂಡಿಸಿ ತಮ್ಮ ಧರ್ಮವೇ ಶ್ರೇಷ್ಠ. ಇತರೆ ಧರ್ಮಗಳು ಕನಿಷ್ಠ ಎಂಬ ಪ್ರವೃತ್ತಿಯನ್ನು ಬಿತ್ತುವುದನ್ನು ಕೋಮುವಾದ ಎನ್ನುವರು.
14. ಕೋಮುವಾದಕ್ಕೆ ಯಾವುದಾದರೂ ಎರಡು ಕಾರಣಗಳನ್ನು ಕೊಡಿ.
ಧಾರ್ಮಿಕ ಹಿತಾಸಕ್ತಿ ಸಂಘಟನೆ
ಹಿಂದೂ-ಮುಸ್ಲಿಂ ರಾಷ್ಟ್ರೀಯವಾದ
15. ಭಯೋತ್ಪಾದಕತೆಯ ಅರ್ಥವನ್ನು ತಿಳಿಸಿ.
ಸಾಮಾನ್ಯ ಜನರಲ್ಲಿ ಭಯವನ್ನು ಸೃಷ್ಟಿಸಿ ತಮ್ಮ ಸೈದ್ಧಾಂತಿಕ ಗುರಿಗಳನ್ನು ಈಡೇರಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ದೇಶದಲ್ಲಿ ಆತಂಕದ ವಾತಾವರಣವನ್ನು ನಿರ್ಮಿಸುವುದೇ ಭಯೋತ್ಪಾದನೆಯಾಗಿದೆ.
16. ಭಯೋತ್ಪಾದನೆಯ ಒಂದು ವ್ಯಾಖ್ಯೆಯನ್ನು ಬರೆಯಿರಿ.
ಅಮೇರಿಕಾದ ರಕ್ಷಣಾ ಇಲಾಖೆ :
ಭಯೋತ್ಪಾದನೆಯು ಪೂರ್ವ ಯೋಜಿತವಾಗಿ ಉತ್ತಮವಾಗಿ ಸಂಘಟಿತವಾದ ತರಬೇತಿ ಹೊಂದಿದ ಗುಂಪುಗಳು ಕಾನೂನು ವಿರೋಧಿ ಸಶಸಜ್ಜಿತ ಮತ್ತು ಹಿಂಸೆಯ ಮೂಲಕ ತಮ್ಮ ಗುರಿ ಸಾಧಿಸಿಕೊಳ್ಳಲು ಅನುಸರಿಸುವ ಕೃತ್ಯವಾಗಿದೆ.
ಸಮಾಜವಿಜ್ಞಾನ ವಿಶ್ವಕೋಶ :
ಒಂದು ಸಂಘಟಿತ ಗುಂಪು ಅಥವಾ ಪಕ್ಷ ವ್ಯವಸ್ಥಿತವಾದ ಹಿಂಸೆಯನ್ನು ಉಪಯೋಗಿಸಿ ತನ್ನ ಮುಖ್ಯ ಗುರಿ ಸಾಧಿಸಿಕೊಳ್ಳಲು ಅನುಸರಿಸುವ ವಿಧಾನವಾಗಿದೆ.
17. ಭಯೋತ್ಪಾದಕತೆ ಧಾರ್ಮಿಕ ಮೂಲಭೂತವಾದಕ್ಕೆ ಹೇಗೆ ಕಾರಣವಾಗಿದೆ?
ಹಿಂದೂ-ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಧರ್ಮಗಳಿಗೆ ಸೇರಿದ ಕೆಲವು ಮೂಲಭೂತವಾದಿ ಸಂಘಟನೆಗಳು ತಮ್ಮ ‘ಧೀರ್ಘಕಾಲದ ರಾಜಕೀಯ ಗುರಿ-ಉದ್ದೇಶಗಳ ಲಾಭಕ್ಕೋಸ್ಕರ ಭಯೋತ್ಪಾದಕ ಕೃತ್ಯಗಳನ್ನು ಬೆಂಬಲಿಸಿ ಸಹಾಯ ನೀಡುತ್ತದೆ.
18. ಭಯೋತ್ಪಾದಕರು ಚುನಾವಣೆಗಳನ್ನು ಏಕೆ ಬಹಿಷ್ಕರಿಸುತ್ತಾರೆ?
ರಾಷ್ಟ್ರದ ಪ್ರಜಾಸತಾತ್ಮಕ ವ್ಯವಸ್ಥೆಯಲ್ಲಿ ಅಸ್ತವ್ಯಸ್ತತೆಯನ್ನುಂಟು ಮಾಡಿ, ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಅಸ್ಥಿರಗೊಳಿಸುವುದಕ್ಕಾಗಿ ಬಹಿಷ್ಕರಿಸುತ್ತಾರೆ.
19. ಭ್ರಷ್ಟಾಚಾರದ ಅರ್ಥವನ್ನು ಬರೆಯಿರಿ.
ಖಾಸಗಿ ಉದ್ದೇಶಗಳಿಗಾಗಿ, ಸಾರ್ವಜನಿಕ ಕರ್ತವ್ಯಗಳ ಔಪಚಾರಿಕ ಮಾರ್ಗವನ್ನು ಬದಲಿಸುವುದೇ ಭ್ರಷ್ಟಾಚಾರ. ಒಟ್ಟಾರೆ, ಸಾರ್ವಜನಿಕ ಅಧಿಕಾರವನ್ನು ದುರುಪಯೋಗಪಡಿಸಿ ಕೊಳ್ಳುವುದಾಗಿದೆ.
20. ಭ್ರಷ್ಟಾಚಾರದ ಒಂದು ವ್ಯಾಖ್ಯೆಯನ್ನು ಬರೆಯಿರಿ.
ಡೆವಿಡ್ ಹೆಚ್ ಬೆಯೆ “ವೈಯಕ್ತಿಕ ಲಾಭಕ್ಕಾಗಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದೇ ಭ್ರಷ್ಟಾಚಾರ” ಎಂದು ಹೇಳಿದ್ದಾರೆ
21. ನೈತಿಕತೆಯ ಕೊರತೆಯು ಭ್ರಷ್ಟಾಚಾರಕ್ಕೆ ಹೇಗೆ ಅವಕಾಶ ಮಾಡಿಕೊಡುತ್ತದೆ?
ನೈತಿಕತೆಯ ಕೊರತೆಯಿಂದಾಗಿ ಅಧಿಕಾರಿಗಳು ಸಮಾಜದ ಅಭಿವೃದ್ಧಿ ಕಡೆಗಣಿಸಿ, ತಮ್ಮ ಲಾಭಕ್ಕಾಗಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ. ಅದರಂತೆ ಸಾಮಾನ್ಯ ಜನರಲ್ಲಿನ ನೈತಿಕ ಕೊರತೆಯಿಂದಾಗಿ ಭ್ರಷ್ಟ ಅಧಿಕಾರಗಳ ಬಗ್ಗೆ ಇರುವ ಉದಾಸೀನ ಭಾವನೆಯು ಅವಕಾಶ ಮಾಡಿಕೊಟ್ಟಿದೆ.
22. ಲೋಕಪಾಲ ಎಂದರೇನು?
ಆಡಳಿತದಲ್ಲಿನ ಭ್ರಷ್ಟಾಚಾರವನ್ನು ನಿಯಂತ್ರಿಸಲು ಕೇಂದ್ರದಲ್ಲಿ ಸ್ಥಾಪನೆಯಾದ ಸಂಸ್ಥೆ ಅಥವಾ ಮಂಡಳಿಯೇ ಲೋಕಪಾಲ.
23.ಲೋಕಾಯುಕ್ತ ಎಂದರೇನು?
ಆಡಳಿತದಲ್ಲಿನ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ತಡೆಗಟ್ಟಲು ರಾಜ್ಯದಲ್ಲಿ ಸ್ಥಾಪನೆಗೊಂಡ ಸಂಸ್ಥೆ ಅಥವಾ ಹುದ್ದೆಯೇ ಲೋಕಾಯುಕ್ತ.
III. ಎರಡು ಅಂಕದ ಪ್ರಶ್ನೆಗಳು :
1. ರಾಷ್ಟ್ರ ನಿರ್ಮಾಣದ ಅಗತ್ಯಾಂಶಗಳನ್ನು ಕುರಿತು ಬರೆಯಿರಿ.
ಭಾರತ ಸ್ವಾತಂತ್ರ್ಯ ಪಡೆಯುವುದರ ಜೊತೆ ಜೊತೆಯಲ್ಲಿಯೇ ರಾಷ್ಟ್ರ ನಿರ್ಮಾಣದ ಪ್ರಕ್ರಿಯೆ ಪ್ರಾರಂಭವಾಯಿತು. ಆಧುನಿಕ ಭಾರತದ ನೇತಾರರು ಈ ಕಾರ್ಯ ಕೈಗೊಂಡಿದ್ದರು. ಇದಕ್ಕಾಗಿ ಹಲವಾರು ಅಗತ್ಯ ಅಂಶಗಳನ್ನು ಕ್ರೂಢೀಕರಿಸಲಾಗಿದೆ. ಅವುಗಳು ಈ ಕೆಳಗಿನಂತಿವೆ-
- ಜನತೆಯ ಬೆಂಬಲ :
ರಾಷ್ಟ್ರ ನಿರ್ಮಾಣದಲ್ಲಿ ಜನರ ಶಿಸ್ತು. ಕರ್ತವ್ಯ ನಿಷ್ಠೆ ಹಾಗೂ ರಾಷ್ಟ್ರಾಭಿಮತ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಜನರೇ ಅಂತಿಮ ಪರಮಾಧಿಕಾರ ಪ್ರಭುಗಳು. ನಿರಂತರ ಜಾಗರೂಕತೆಯೇ ಪ್ರಜಾಪ್ರಭುತ್ವಕ್ಕೆ ನೀಡುವ ಬೆಲೆಯಾಗಿದೆ ಎಂದು ಜೆ.ಎಸ್ ಮಿಲ್ರವರು ಅಭಿಪ್ರಾಯ ಪಟ್ಟಿದ್ದಾರೆ.
- ಉತ್ತಮ ಆಡಳಿತ :
ಉತ್ತಮ ಆಡಳಿತವು ಆಡಳಿತದಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಅಗತ್ಯ. ಆಡಳಿತದಲ್ಲಿ ಪಾರದರ್ಶಕತೆ. ಜವಾಬ್ದಾರಿತನ ಮತ್ತು ಸ್ಪಂದನೆ ಬಹಳ ಮುಖ್ಯವಾಗಿ ಪಾತ್ರ ವಹಿಸುತ್ತದೆ.
- ಸಮರ್ಥ ನಾಯಕತ್ವ :
ಬದ್ಧತೆಯಿಂದ ಕೂಡಿರುವ ನಾಯಕತ್ವಕ್ಕೆ ಇತಿಹಾಸದಲ್ಲಿ ಹಲವಾರು ನಿದರ್ಶನಗಳನ್ನು ಕಾಣಬಹುದು. ಭಾರತದಲ್ಲಿ ನೆಹರೂರವರ ನಾಯಕತ್ವವು ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಯಶಸ್ಸನ್ನು ಸಾಧಿಸಲು ಸಾಕಷ್ಟು ಕೊಡುಗೆಗಳನ್ನು ನೀಡಿತು. ಆ ಕಾರಣದಿಂದಲೇ ನೆಹರೂರವರನ್ನು ‘ಆಧುನಿಕ ಭಾರತದ ಶಿಲ್ಪಿ’ ಎನ್ನಲಾಗಿದೆ.
- ರಾಜಕೀಯ ಸಂಸ್ಕೃತಿ :
ರಾಜಕೀಯ ಸಂಸ್ಕೃತಿ ಎಂಬುದು ರಾಜಕೀಯ ವ್ಯವಸ್ಥೆಗೆ ಅಗತ್ಯವಾದ ಮೌಲ್ಯಗಳು, ಪ್ರವೃತ್ತಿಗಳು ಮತ್ತು ನಡವಳಿಕೆಗಳನ್ನು ಸೂಚಿಸುತ್ತದೆ. ರಾಷ್ಟ್ರದ ಪುನರ್ ನಿರ್ಮಾಣಕ್ಕೆ ಉದಾತ್ತ ರಾಜಕೀಯ ನಡವಳಿಕೆಗಳು ಅವಶ್ಯಕವಾಗಿವೆ.
- ಅಧಿಕಾರ ಹಂಚಿಕೆ :
ರಾಷ್ಟ್ರ ನಿರ್ಮಾಣದ ಗುರಿಯನ್ನು ಸಾಧಿಸಲು ರಾಜಕೀಯ ಅಧಿಕಾರವನ್ನು ಸಮಾಜದ ಎಲ್ಲಾ ವರ್ಗಗಳಲ್ಲಿ ಹಂಚಿಕೆ ಮಾಡುವ ಅಗತ್ಯವಿದೆ. ರಾಜಕೀಯದಿಂದ ಅಧಿಕಾರವು ಕೆಲವೇ ವ್ಯಕ್ತಿಗಳ ಕೈಯಲ್ಲಿ ಮತ್ತು ಕುಟುಂಬಗಳಲ್ಲಿ ಕೇಂದ್ರೀಕರಣವಾಗಿದೆ.
ಈ ರೀತಿಯಾಗಿ ಹಲವಾರು ಅಗತ್ಯ ಅಂಶಗಳನ್ನು ಕ್ರೂಢೀಕರಿಸಿಕೊಂಡು ರಾಷ್ಟ್ರ ನಿರ್ಮಾಣದ ಕಾರ್ಯ ಯಶಸ್ವಿಯಾಗುವಂತೆ ಮಾಡಲಾಗಿದೆ.
2. ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಉಂಟಾಗುವ ಮುಖ್ಯ ಅಡಚಣೆಗಳಾವುವು? ವಿವರಿಸಿ.
ಭಾರತದ ನೇತಾರರು ರಾಷ್ಟ್ರ ನಿರ್ಮಾಣದ ಕಾರ್ಯವನ್ನು ಅತ್ಯಂತ ರಚನಾತ್ಮಕವಾಗಿ ಮತ್ತು ಸುವ್ಯವಸ್ಥಿತವಾಗಿ ಕೈಗೊಂಡರು. ಆದರೆ ಇದರ ಅನುಷ್ಠಾನದ ಹಂತದಲ್ಲಿ ಇವರು ಹಲವಾರು ಅಡಚಣೆಗಳನ್ನು ಎದುರಿಸಬೇಕಾಯಿತು. ಅವು ಈ ರೀತಿಯಲ್ಲಿವೆ.
- ಬಡತನ :
ಭಾರತದಲ್ಲಿರುವ ಬಹುತೇಕ ಜನಸಮುದಾಯಗಳು ಹಳ್ಳಿಗಳಲ್ಲಿ ನೆಲೆಸಿದ್ದು ಅವರ ಪ್ರಮುಖ ವೃತ್ತಿ ಕೃಷಿಯಾಗಿದೆ. ಇವರು ಅನಿರ್ದಿಷ್ಟವಾಗಿ ಬರುವ ಮುಂಗಾರು ಮಳೆಯ ಮೇಲೆ ಹೆಚ್ಚು ಅವಲಂಭಿತವಾಗಿರುತ್ತಾರೆ. ರೈತರು ಕೃಷಿಯಲ್ಲಿ ಅತ್ಯಂತ ಕಡಿಮೆ ಇಳುವರಿಯನ್ನು ಪಡೆಯುತ್ತಿದ್ದಾರೆ. ಹೀಗಾಗಿ 1/5 ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ.
- ಜನಸಂಖ್ಯಾ ಸ್ಫೋಟ :
ಭಾರತವು ಜನಸಂಖ್ಯೆ ಬೆಳವಣಿಗೆಯಲ್ಲಿ ಅತ್ಯಂತ ವೇಗವಾಗಿ ಮುನ್ನುಗ್ಗುತ್ತಿದೆ. ಮಾನವೀಯ ಶಕ್ತಿಯ ಉತ್ತಮ ಸ೦ಪನ್ಮೂಲವಾಗಿದ್ದರೂ ಕೂಡ ರಾಷ್ಟ್ರವನ್ನು ಬಲಿಷ್ಠಗೊಳಿಸಲು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ.
- ಪ್ರಾದೇಶಿಕ ಅಸಮತೋಲನ :
ದೇಶದ ಎಲ್ಲಾ ರಾಜ್ಯಗಳು ಒಂದೇ ತೆರನಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಆದ್ದರಿಂದ ಪ್ರಜೆಗಳಲ್ಲಿ ಪ್ರತ್ಯೇಕತೆ ಮನೋಭಾವನೆಗಳು ಬೆಳೆದು ರಾಷ್ಟ್ರದ ಅಭಿವೃದ್ಧಿಯು ಕುಂಠಿತಗೊಳ್ಳುತ್ತದೆ.
ಉದಾ: ಮಹಾರಾಷ್ಟ್ರದಲ್ಲಿ ಮರಾಠವಾಡಾ ಮತ್ತು ವಿಧರ್ಭ, ಆಂಧ್ರ ಪ್ರದೇಶದಲ್ಲಿ ತೆಲಾಂಗಣ ಮುಂತಾದ ಪ್ರದೇಶದಲ್ಲಿ ನಡೆಯುತ್ತಿರುವ ಪ್ರತ್ಯೇಕತಾ ಚಳುವಳಿಗಳು ಇದಕ್ಕೆ ಸ್ಪಷ್ಟ ನಿದರ್ಶನಗಳಾಗಿವೆ.
- ಸಾಮಾಜಿಕ ಮತ್ತು ರಾಜಕೀಯ ಕ್ಷೆಭೆ :
ಭಾರತದಲ್ಲಿ ಸಾಮಾಜಿಕ ಮತ್ತು ರಾಜಕೀಯ ಕೋಭೆಯು ಇತ್ತೀಚೆಗೆ ಸರ್ವೇಸಾಮಾನ್ಯವಾಗಿದ್ದು ಇದರಿಂದ ಉದ್ವೇಗಕಾರಿ ವಾತಾವರಣ ಸೃಷ್ಟಿಯಾಗಿದೆ. ಕೇಂದ್ರ-ರಾಜ್ಯ ಮತ್ತು ಅಂತರ್-ರಾಜ್ಯ ವಿವಾದಗಳು ರಾಷ್ಟ್ರ ನಿರ್ಮಾಣಕ್ಕೆ ಅಡ್ಡಿಯಾಗಿವೆ.
- ರಾಜಕೀಯ ಬಿಕ್ಕಟ್ಟು :
ಸಮ್ಮಿಶ್ರ ಸರಕಾರ ಪದ್ಧತಿ. ಹಲವು ಪಕ್ಷಗಳ ಉಗಮ, ಪ್ರಾದೇಶಿಕ ಮತ್ತು ಪ್ರತ್ಯೇಕತಾ ಭಾವನೆಗಳು ಹಲವಾರು ಸಂದರ್ಭಗಳಲ್ಲಿ ರಾಜಕೀಯ ಬಿಕ್ಕಟ್ಟುಗಳನ್ನು ಸೃಷ್ಟಿಸಿವೆ. ರಾಜಕೀಯ ವ್ಯವಸ್ಥೆ ಆದರ್ಶ ತತ್ವ ಹಾಗೂ ಮೌಲ್ಯಗಳಿಂದ ದೂರವಾಗಿದೆ.
ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಈ ಮೇಲ್ಕಂಡ ಅಡಚಣೆಗಳು ಕಂಡು ಬಂದರೂ ಸಹ ಅವುಗಳನ್ನು ಎದುರಿಸಿ ರಾಷ್ಟ್ರ ನಿರ್ಮಾಣದ ಕಾರ್ಯ ಯಶಸ್ವಿಯಾಗುವಂತೆ ಮಾಡಲು ಹಲವಾರು ನಾಯಕರು ಪಣತೊಟ್ಟಿದ್ದಾರೆ.
3. ಅಸಮಾನತೆ ಪ್ರಜಾಪ್ರಭುತ್ವಕ್ಕೆ ಹೇಗೆ ಒಂದು ತೊಡಕಾಗಿ ಪರಿಣಮಿಸಿದೆ? ವಿವರಿಸಿ.
ಅಸಮಾನತೆ ಎಂದರೆ ಜಾತಿ, ಧರ್ಮ, ಲಿಂಗ, ಜನ್ಮ ಸ್ಥಳ ಮುಂತಾದವುಗಳ ಆಧಾರದ ಮೇಲೆ ಕೆಲವು ವರ್ಗಗಳನ್ನು ಅವಕಾಶಗಳು ಮತ್ತು ಸೌಲಭ್ಯಗಳಿಂದ ವಂಚಿತರನ್ನಾಗಿಸಿ, ತಾರತಮ್ಯ ಮಾಡುವುದೇ ಆಗಿದೆ. ಪುರಾತನ ಕಾಲದಿಂದಲೂ ಭಾರತೀಯ ಸಮಾಜದಲ್ಲಿ ಅಸಮಾನತೆಯು ಪ್ರಧಾನ ಪಾತ್ರವನ್ನು ವಹಿಸುತ್ತಲೇ ಬಂದಿದೆ. ಭಾರತದ ಪ್ರಜಾಪ್ರಭುತ್ವಕ್ಕೆ ಜಾತಿ ಮತ್ತು ಲಿಂಗ ಆಧಾರಿತ ತಾರತಮ್ಯಗಳು ಸವಾಲಾಗಿ ಪರಿಣಮಿಸಿವೆ. ಈ ಅಸಮಾನತೆಯನ್ನು ಹೋಗಲಾಡಿಸಲು ಭಾರತ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ.
4.ಜಾತಿ ಆಧಾರಿತ ಅಸಮಾನತೆಗೆ ಕಾರಣಗಳಾವುವು?
ಜಾತಿಯನ್ನೇ ಆಧರಿಸಿ ಜನರನ್ನು ತಾರತಮ್ಯದಿಂದ ನೋಡುವುದನ್ನು ಸಾಮಾನ್ಯವಾಗಿ ಜಾತಿ ಆಧಾರಿತ ಅಸಮಾನತೆ ಎನ್ನಬಹುದು. ಈ ಅಸಮಾನತೆಗೆ ಹಲವಾರು ಬಗೆಯ ಕಾರಣಗಳನ್ನು ಕಾಣಬಹುದು.
- ವರ್ಣಾಶ್ರಮ ವ್ಯವಸ್ಥೆ:
ಮನುಸ್ಮೃತಿಯು ಹಿಂದೂ ಸಮಾಜವನ್ನು ನಾಲ್ಕು ವರ್ಣಗಳನ್ನಾಗಿ ವಿಂಗಡಿಸಿದ್ದಾನೆ. ಅವುಗಳೆಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬುದಾಗಿ: ಈ ರೀತಿ ಜಾತಿ ವ್ಯವಸ್ಥೆ ರೂಪುಗೊಂಡು ಸಮಾಜದಲ್ಲಿ ಮತ್ತು ಮನುವಿನ ಕಾನೂನಿನ ಆಧಾರದಲ್ಲಿ ತಾರತಮ್ಯಕ್ಕೆ ಅವಕಾಶ ಮಾಡಿಕೊಟ್ಟಿದೆ.
- ಸಾಮಾಜಿಕ ಅಂತರ :
ವಿವಿಧ ಜಾತಿಗಳ ನಡುವೆ ಚಲನಶೀಲತೆಯ ಕೊರತೆ, ಸಂಸ್ಕೃತಿ ಪದ್ಧತಿಗಳು, ನೈತಿಕ ನಿಯಮಗಳು, ಆಹಾರ ಪದ್ದತಿ, ಸಾಮಾಜಿಕ ಒಡನಾಟ ಮುಂತಾದವುಗಳು ಸಾಮಾಜಿಕ ಅಂತರಕ್ಕೆ ಕಾರಣವಾಗಿದೆ. ಆದ್ದರಿಂದ ಇದು ‘ಮುಚ್ಚಿದ ಸಮಾಜ’ ವೆಂದು ಕರೆಯಲ್ಪಟ್ಟಿತು.
- ಅನಕ್ಷರತೆ ಮತ್ತು ಸಂಪ್ರದಾಯ:
ಅನಕ್ಷರತೆ ಮತ್ತು ಮೌಡ್ಯತೆಯು ಜನರನ್ನು ಗೊಡ್ಡು ಸಂಪ್ರದಾಯವಾದಿಗಳನ್ನಾಗಿ ರೂಪಿಸಿದೆ. ಇದು ಜನರಲ್ಲಿ ಸಂಕುಚಿತ ಮನೋಭಾವ ಮತ್ತು ಮೌಡ್ಯಗಳ ಕಡೆಗೆ ಉತ್ತೇಜಿಸುತ್ತದೆ. ಇವರು ಹಳೆಯ ಸಂಪ್ರದಾಯ ಮತ್ತು ಕಂದಾಚಾರಗಳಿಗೆ ಅಂಟಿಕೊಂಡಿರುತ್ತಾರೆ. ತಾವು ಮಾತ್ರ ಮೇಲು ಇತರರು ಕೀಳು ಎಂಬುದಾಗಿ ಭಾವಿಸುವುದು ಇನ್ನೊಂದು ಕಾರಣವಾಗಿದೆ.
- ಮೇಲರಿಮೆ:
ಸಮಾಜ ಶ್ರೇಷ್ಠ ಜಾತಿ ಎಂದು ಪರಿಗಣಿಸಲ್ಪಟ್ಟಿರುವ ಕೆಲವು ಜಾತಿಗೆ ಸೇರಿದ ಜನರು ಮುಖ್ಯವಾಗಿ ಜಾತಿಯನ್ನೇ ಆಧರಿಸಿ ತಮ್ಮ ಪ್ರಾಬಲ್ಯತೆ ಸಾಧಿಸುವ ಪ್ರಯತ್ನದಲ್ಲಿದ್ದಾರೆ ಸಮಾಜದಲ್ಲಿನ ಅನುಕೂಲತೆಗಳನ್ನು ಪಡೆದುಕೊಳ್ಳುತ್ತಾರೆ.
- ವೈವಾಹಿಕ ನಿರ್ಬಂಧಗಳು:
ಮುಚ್ಚಿದ ಸಮಾಜದಲ್ಲಿ ಒಂದು ಜಾತಿಗೆ ಸೀಮಿತವಾಗಿ ಆ ಜಾತಿಯಲ್ಲಿಯೇ ನಡೆಯುವ ವಿವಾಹವನ್ನು ಮಾತ್ರ ಮಾನ್ಯ ಮಾಡಲಾಗುತ್ತದೆ. ಜಾತಿಯ ಹೊರಗಡೆ ನಡೆಯುವ ವಿವಾಹವನ್ನು ವಿರೋಧಿಸುತ್ತಾರೆ.
ಭಾರತವು ಹಲವಾರು ಜಾತಿಗಳನ್ನು ಹೊಂದಿದ್ದು ಇಲ್ಲಿ ಹಲವಾರು ಸಮಸ್ಯೆ ಮತ್ತು ಅಸಮಾನತೆಯಿಂದ ಕೂಡಿದ ಜನರನ್ನು ಕಾಣಬಹುದಾಗಿದೆ.
5. ಲಿಂಗಾಧಾರಿತ ಅಸಮಾನತೆಗೆ ಕಾರಣಗಳಾವುವು? ವಿವರಿಸಿ.
ಗಂಡು ಮತ್ತು ಹೆಣ್ಣು ಎಂಬ ತಾರತಮ್ಯದಿಂದ ಸಮಾನ ಅವಕಾಶಗಳನ್ನು ನಿರಾಕರಿಸುವುದು ಲಿಂಗಾಧಾರಿತ ಅಸಮಾನತೆಯಾಗಿದೆ. ಬಹಳ ಕಾಲದಿಂದಲೂ ಪುರುಷ ಪ್ರಾಧಾನ್ಯತೆಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಲಿಂಗದ ಆಧಾರದಿಂದಾಗಿ ಹಲವಾರು ಅಸಮಾನತೆ ಕಂಡುಬಂದಿವೆ ಅವುಗಳಿಗೆ ಕಾರಣಗಳು ಹೀಗಿವೆ-
- ಮನುಸ್ಮೃತಿ :
ಜೀವನದ ಎಲ್ಲಾ ಸ್ತರಗಳಲ್ಲಿಯೂ ಮಹಿಳೆ ಪುರುಷನ ಅಧೀನದಲ್ಲಿರಬೇಕು ಎಂದು ಮನುಸ್ಮೃತಿಯ ಅಭಿಪ್ರಾಯವಾಗಿದೆ. ಮನುವಿನ ಪ್ರಕಾರ ಮಹಿಳೆಯನ್ನು ಕೌಟುಂಬಿಕ ಜೀವನಕ್ಕೆ ಮಾತ್ರ ಸೀಮಿತಗೊಳಿಸಿ ಸಮಾಜದ ಮುಖ್ಯ ವಾಹಿನಿಯಿಂದ ದೂರವಿಟ್ಟಿದ್ದು ತಾರತಮ್ಯಕ್ಕೆ ಪ್ರಮುಖ ಕಾರಣವಾಗಿದೆ.
- ಪುರುಷ ಪ್ರಾಬಲ್ಯ :
ಸಮಾಜವು ಪುರುಷನ ದೈಹಿಕ ಸಾಮರ್ಥ್ಯವನ್ನಾಧರಿಸಿ ಮಹಿಳೆಯ ಮೇಲೆ ಪುರುಷನ ಪ್ರಾಬಲ್ಯಕ್ಕೆ ಪ್ರಾಮುಖ್ಯತೆ ನೀಡುತ್ತದೆ. ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಮಹಿಳೆ ಯಾವುದೇ ರೀತಿಯ ಜವಾಬ್ದಾರಿಯ ನಿರ್ವಹಣೆಯನ್ನು ಒಪ್ಪಿಕೊಳ್ಳದಿರುವುದು ಇನ್ನೊಂದು ಕಾರಣವಾಗಿದೆ.
- ಶಿಕ್ಷಣದ ನಿರಾಕರಣೆ :
ಪುರುಷ ಪ್ರಾಬಲ್ಯ ಶಿಕ್ಷಣ ಕ್ಷೇತ್ರದಲ್ಲಿಯೂ ತಾರತಮ್ಯಕ್ಕೆ ಕಾರಣವಾಗಿದೆ. ಶತಮಾನಗಳಿಂದ ಮಹಿಳೆಯನ್ನು ಅಬಲೆ ಎಂದು ಪರಿಗಣಿಸಿ ಶಿಕ್ಷಣದ ಅವಕಾಶಗಳಿಂದ ವಂಚಿಸಲಾಗಿತ್ತು. ಉತ್ತಮ ಶಿಕ್ಷಣ ಮತ್ತು ಉನ್ನತ ಉದ್ಯೋಗಗಳನ್ನು ಹೊಂದಲು ಮಹಿಳೆಗೆ ಅವಕಾಶವನ್ನು ನಿರಾಕರಿಸಲಾಗಿದೆ.
- ವರದಕ್ಷಿಣೆ ಪದ್ಧತಿ :
ವರದಕ್ಷಿಣೆ ಆಚರಣೆ ಲಿಂಗಾಧಾರಿತ ಅಸಮಾನತೆಗೆ ಇನ್ನೊಂದು ಕೊಡುಗೆಯಾಗಿದೆ. ಮಗನನ್ನು ಕುಟುಂಬದ ಅಸ್ತಿ ಎಂತಲೂ, ಹೆಣ್ಣು ಮಗಳನ್ನು ಅನಾವಶ್ಯಕ ಹೊರೆ ಎಂತಲೂ ಭಾವಿಸಿ, ಇವರಿಬ್ಬರ ನಡುವೆ ಅಗಾಧ ತಾರತಮ್ಯಕ್ಕೆ ಎಡೆ ಮಾಡಿಕೊಟ್ಟಿದೆ.
- ಸೂಕ್ತ ಪ್ರಾತಿನಿಧ್ಯ ನೀಡದಿರುವುದು:
ರಾಜಕೀಯ ಅಧಿಕಾರ ಮತ್ತು ಕ್ಷೇತ್ರಗಳಲ್ಲಿ ಮಹಿಳೆಗೆ ಸೂಕ್ತ ಪ್ರಾತಿನಿಧ್ಯ ನಿರಾಕರಿಸಲಾಗಿದೆ. ಮಹಿಳೆ ಪುರುಷರಷ್ಟೇ ಸಾಮರ್ಥ್ಯವನ್ನು ಹೊಂದಿದ್ದರೂ ಅವರಿಗೆ ಪ್ರಾತಿನಿಧ್ಯವನ್ನು ລ໖໘.
ಈ ರೀತಿಯಾಗಿ ಲಿಂಗ ಆಧಾರಿತ ಅಸಮಾನತೆಗೆ ವಿವಿಧ ಕಾರಣಗಳನ್ನು ನೋಡಬಹುದಾಗಿದೆ. ಅಸಮಾನತೆ ಎಂಬುದನ್ನು ತೊಡೆದು ಹಾಕಿ ಎಲ್ಲರೂ ಸಮಾನತೆಯ ತತ್ವದಡಿಯಲ್ಲಿ ಬಾಳಬೇಕೆಂದು ಹಲವಾರು ಶಾಸನ ಮತ್ತು ಕಾನೂನುಗಳನ್ನು ರೂಪಿಸಲಾಗಿದೆ.
6. ಜಾತಿ ಆಧಾರಿತ ಅಸಮಾನತೆಗೆ ಪರಿಹಾರಗಳನ್ನು ತಿಳಿಸಿ.
ಜಾತಿ ಆಧಾರಿತ ಅಸಮಾನತೆಯು ಸಮಾಜವನ್ನು ವಿಭಜಿಸಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆಯನ್ನುಂಟು ಮಾಡಿ ಭಾರತದ ಆಡಳಿತ ವ್ಯವಸ್ಥೆಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಸಮಾಜದಲ್ಲಿ ಜಾತಿ ವ್ಯವಸ್ಥೆ ಎಂಬುದು ಮೇಲ್ಟಾತಿ, ಕೆಳಜಾತಿ ಮತ್ತು ಶೋಷಿತ ವರ್ಗಗಳು ಎಂಬ ಜಾತಿ ಆಧಾರಿತ ರಚನೆ ಶ್ರೇಣಿಕೃತ ವ್ಯವಸ್ಥೆಯನ್ನು ಸೃಷ್ಟಿಸಿದೆ. ಆದ್ದರಿಂದ ಜಾತಿ ಆಧಾರಿತ ಅಸಮಾನತೆಗೆ ಇರುವ ಪರಿಹಾರಗಳು ಹೀಗಿವೆ.
- ಮೀಸಲಾತಿ
ಭಾರತದಲ್ಲಿ ಜಾತಿ ಆಧಾರಿತ ಅಸಮಾನತೆಗಳು ಅಸ್ತಿತ್ವದಲ್ಲಿರುವುದರಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೇ ಹಿಂದುಳಿದ ವರ್ಗಗಳು ಅಗಾಧವಾದ ಶೋಷಣೆಗೆ ಗುರಿಯಾಗಿವೆ. ಈ ಜನಾಂಗವನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ, ಭಾರತ ಸಂವಿಧಾನ ರಚನಾಕಾರರು ಸಂವಿಧಾನದ III, IV ಮತ್ತು XVI ನೇ ಭಾಗಗಳಲ್ಲಿ ಕೆಲವು ಸಂವಿಧಾನಾತ್ಮಕ ನಿಯಮಗಳನ್ನು ರೂಪಿಸಿದ್ದಾರೆ. ವಿಧಿ 15, 16, 17 ಮತ್ತು 46 ರಲ್ಲಿ ಕ್ರಾಂತಿಕಾರಕ ಅವಕಾಶಗಳನ್ನು ಕಲ್ಪಿಸಿ ಸಾಮಾಜಿಕವಾಗಿ ಸರ್ವರ ಏಳಿಗೆ ಪೂರಕವಾದ ಅಂಶಗಳನ್ನು ಸೇರಿಸಲಾಗಿದೆ. ಮೀಸಲಾತಿ ನೀಡುವ ಮೂಲಕ ಸಮಾನತಾ ಸಮಾಜವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.
- ಹೆಸರು :
ಸಂವಿಧಾನದ ವಿಧಿ 15 ರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಸೂಕ್ತ ಮೀಸಲಾತಿಯನ್ನು ಕಲ್ಪಿಸಲಾಯಿತು. ಖಾಸಗಿ ಅನಿದಾನಿತ ಸಂಸ್ಥೆಗಳು ಮತ್ತು ಅನುದಾನರಹಿತ ಸಂಸ್ಥೆಗಳಲ್ಲಿಯೂ ಈ ವರ್ಗಗಳಿಗೆ ಸೇರಿದವರಿಗೆ ಸೂಕ್ತ ಮೀಸಲಾತಿ ಸ್ಥಾನಗಳನ್ನು ಕಾಯ್ದಿರಿಸುವಂತೆ 86 ನೇ ಸಂವಿಧಾನ ತಿದ್ದುಪಡಿ ಕಾಯ್ದೆ ಮೂಲಕ ಅವಕಾಶ ಕಲ್ಪಿಸಲಾಗಿದೆ. ಕಡ್ಡಾಯ ಶಿಕ್ಷಣ ಕಾಯ್ದೆಯ ಹಕ್ಕು ಈ ಸಮುದಾಯಗಳಿಗೆ ಸೂಕ್ತ ಮೀಸಲಾತಿಯ ಬಗೆಗೆ ಸ್ಪಷ್ಟಪಡಿಸಿ ಜಾರಿಗೊಳಿಸಿದೆ.
- ಉದ್ಯೋಗ:
ಸಂವಿಧಾನದ 16 ನೇ ವಿಧಿಯು ಉದ್ಯೋಗದಲ್ಲಿ ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸುತ್ತದೆ. ವಿಧಿ 335 ರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರಲ್ಲೂ ಸಾರ್ವಜನಿಕ ಸೇವೆಗಳಲ್ಲಿ ಮೀಸಲಾತಿಯನ್ನು ನೀಡುತ್ತಿದೆ. ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸೇವೆಗಳೆರಡರಲ್ಲೂ ಪರಿಶಿಷ್ಟ ಜಾತಿಗೆ ಶೇ 15 ರಷ್ಟು ಮತ್ತು ಪರಿಶಿಷ್ಟ ವರ್ಗಗಳಿಗೆ ಶೇ 3% ರಷ್ಟು ಮೀಸಲಾತಿಗೆ ಅವಕಾಶವಿದೆ.
- ಶಾಸನ ಸಭೆಗಳಲ್ಲಿ :
ವಿಧಿ 330 ಮತ್ತು 332 ರಲ್ಲಿ ಭಾರತ ಸಂವಿಧಾನವು, ಸಂಸತ್ತಿನ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಸೂಕ್ತ ಮೀಸಲು ಸ್ಥಾನಗಳನ್ನು ಕಾಯ್ದಿರಿಸಲಾಗಿದೆ.
- ಸ್ಥಳೀಯ ಸಂಸ್ಥೆಗಳಲ್ಲಿ :
ಭಾರತ ಸಂವಿಧಾನದ ವಿಧಿ 243 ಡಿಯಲ್ಲಿ ಪ.ಜಾತಿ, ಪ.ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಸ್ಥಾನ ಕಾಯ್ದಿರಿಸಲಾಯಿತು. 243 ಟಿ ವಿಧಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈ ವರ್ಗಗಳಿಗೆ ಮೀಸಲಾತಿ ಸ್ಥಾನಗಳನ್ನು ಕಲ್ಪಿಸಿದೆ. ಈ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳ ಸ್ಥಾನಗಳಲ್ಲಿಯೂ ರಾಜ್ಯ ಸರ್ಕಾರವು ರಚಿಸುವ ನಿಯಮಗಳ ಅನುಸಾರ ಮೀಸಲಾತಿಯನ್ನು ನಿಗಧಿಪಡಿಸಲಾಗುತ್ತದೆ.
ಜಾತಿ ಆಧಾರಿತ ಅಸಮಾನತೆಯು ಈ ಮೇಲ್ಕಂಡ ಎಲ್ಲ ಪರಿಹಾರ ಕ್ರಮಗಳನ್ನು ಒಳಗೊಂಡು ಅಸಮಾನತೆಯನ್ನು ತೊಡೆದು ಹಾಕುವ ಕಾರ್ಯದಲ್ಲಿ ಮುನ್ನುಗ್ಗುತ್ತಿವೆ.
7. ಲಿಂಗಾಧಾರಿತ ಅಸಮಾನತೆಯ ನಿರ್ಮೂಲನೆಗೆ ಪರಿಹಾರೋಪಾಯಗಳನ್ನು ತಿಳಿಸಿ.
ಗಂಡು ಮತ್ತು ಹೆಣ್ಣು ಎಂಬ ತಾರತಮ್ಯದಿಂದ ಸಮಾನ ಅವಕಾಶಗಳನ್ನು ನಿರಾಕರಿಸುವುದು ಲಿಂಗಾಧಾರಿತ ಅಸಮಾನತೆಯಾಗಿದೆ. ಇದನ್ನು ನಿರ್ಮೂಲನೆ ಮಾಡಲು ಸರಕಾರವು ಹಲವು ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ಅವುಗಳೆಂದರೆ-
- ಮಹಿಳಾ ಮೀಸಲಾತಿ :
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇನ್ನುಳಿದ ವರ್ಗಗಳ ಜನರನ್ನು ಒಂದು ಮುಖ್ಯವಾಹಿನಿಗೆ ತರುವುದರ ಮೂಲಕ ಅಸಮಾನತೆಯನ್ನು ಹೋಗಲಾಡಿಸುವ ಗುರಿಯನ್ನು ಹೊಂದಿದೆ. ಇದರ ಕಾರಣದಿಂದಾಗಿ ಮಹಿಳೆಯರಿಗೆ ಈ ಕೆಳಕಂಡ ವಿಷಯದಲ್ಲಿ ವಿಶೇಷ ಮೀಸಲಾತಿ ನೀಡಲಾಗಿದೆ. ಅವುಗಳೆಂದರೆ
ಇಲ್ಲಿ ಮಹಿಳೆಯರನ್ನು ಶೈಕ್ಷಣಿಕವಾಗಿ ಸಬಲೀಕರಣಗೊಳಿಸುವುದು. ಲಿಂಗಾಧಾರಿತ ತಾರತಮ್ಯವನ್ನು ಹೋಗಲಾಡಿಸುವಲ್ಲಿ, ಪ್ರಾತಿನಿಧ್ಯವನ್ನು ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣಕ್ಕೆ ಕೇಂದ್ರ ಸರ್ಕಾರವು 2001 ರಲ್ಲಿ ‘ಸರ್ವ ಶಿಕ್ಷಾ ಅಭಿಯಾನ್’ ಯೋಜನೆಯನ್ನು ರಾಷ್ಟ್ರಾದ್ಯಂತ ಜಾರಿಗೊಳಿಸಿದೆ. ಕಸ್ತೂರಿ ಬಾ ಗಾಂಧಿ ಬಾಲಿಕ ವಿದ್ಯಾಲಯಗಳನ್ನು ಸ್ಥಾಪಿಸಿ ಶೇ 75 ರಷ್ಟು ಸ್ಥಾನಗಳನ್ನು ಪ.ಜಾತಿ, ಪ.ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಬಾಲಕಿಯರಿಗೆ ಶೇ 25 ರಷ್ಟು ಸ್ಥಾನಗಳನ್ನು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಬಾಲಕಿಯರಿಗೆ ಮೀಸಲಿರಿಸಲಾಗಿದೆ. ಕರ್ನಾಟಕದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳನ್ನು ಸ್ಥಾಪಿಸಲಾಗಿದೆ. ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಿ ಪಡವಿ ತರಗತಿಗಳವರೆಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ವಿದ್ಯಾರ್ಥಿ ವೇತನ, ಬೈಸಿಕಲ್ ವಿತರಣೆಯಂತಹ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಉದ್ಯೋಗ :
ಮಹಿಳೆಯರು ಸ್ವತಂತ್ರ ಮತ್ತು ಗೌರವಾನ್ವಿತ ಜೀವನ ನಡೆಸಲು ಅನುವಾಗುವಂತೆ ಆರ್ಥಿಕವಾಗಿ ಸಬಲರಾಗುವಂತೆ ಮಾಡಲು ಉದ್ಯೋಗಗಳಲ್ಲಿ ಮೀಸಲಾತಿಯನ್ನು ಕಲ್ಪಿಸಲಾಗಿದೆ. ರಾಜ್ಯ ಸೇವೆಗಳಲ್ಲಿ ಶೇ 33 ರಷ್ಟು ಉದ್ಯೋಗ ‘ಮೀಸಲಾತಿ ನೀಡಲಾಗಿದೆ. ಬ್ಯಾಂಕಿಂಗ್, ಶಿಕ್ಷಕರಾಗಿ, ವಿಜ್ಞಾನಿಗಳಾಗಿ, ಕೈಗಾರಿಕೋದ್ಯಮಿಗಳು, ಪೈಲೆಟ್ಗಳು, ರಾಜಕೀಯ ನಾಯಕಿಯರಾಗಿ ಮತ್ತು ಸಮಾಜ ಸುಧಾರಕರಾಗಿ ಮಹಿಳೆಯರು ಪ್ರಾಬಲ್ಯ ಮೆರೆದಿದ್ದಾರೆ.
ಭಾರತದ ಹೆಸರಾಂತ ಮಹಿಳೆಯರಾದ ಸಾವಿತ್ರಿಬಾಯಿ, ಸರೋಜಿನಿ ನಾಯ್ಡು, ವಿಜಯಲಕ್ಷ್ಮೀ ಪಂಡಿತ್, ಮದರ್ ತೆರೇಸಾ, ಇಂಧಿರಾಗಾಂದಿ, ವಿ.ಎಸ್.ರಮಾದೇವಿ, ಶಕುಂತಲಾದೇವಿ, ಗಂಗೂಬಾಯಿ ಹಾನಗಲ್, ಕಲ್ಪನಾ ಚಾವ್, ಮಹಾದೇವಿ ವರ್ಮ ಮತ್ತಿತ್ತರರು.
ಪ್ರಾತಿನಿಧಿಕ ಸಂಸ್ಥೆಗಳು :
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರ ರಾಜಕೀಯ ಸಬಲೀಕರಣಕ್ಕಾಗಿ ಸ್ಥಳೀಯ ಸಂಸ್ಥೆಗಳಲ್ಲಿ 73 ಮತ್ತು 74 ನೇ ಸಂವಿಧಾನ ತಿದ್ದುಪಡಿ ಕಾಯ್ದೆಗಳ ಮೂಲಕ ಮೀಸಲಾತಿ ಕಲ್ಪಿಸಲಾಗಿದೆ. ಕರ್ನಾಟಕದಲ್ಲಿ ಶೇ 50% ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ನೀಡಲಾಗಿದೆ. ಲಿಂಗಾಧಾರಿತ ಅಸಮಾನತೆ ಹೋಗಲಾಡಿಸಲು
ಸಂವಿಧಾನದಲ್ಲಿರುವ ಅವಕಾಶಗಳು:
- ಲಿಂಗಾಧಾರಿತ ತಾರತಮ್ಯವನ್ನು ನಿರ್ಮೂಲನೆ ಮಾಡುವುದು (ವಿಧಿ 15)
- ಸಾರ್ವಜನಿಕ ಸೇವೆಗಳಲ್ಲಿ ಸಮಾನ ಅವಕಾಶ (ವಿಧಿ 16)
- ಶೋಷಣೆಯ ವಿರುದ್ಧ ರಕ್ಷಣೆಯ ಹಕ್ಕು (ವಿಧಿ 23 ಮತ್ತು 24)
- ಸಮಾನ ಕೆಲಸಕ್ಕೆ ಸಮಾನ ವೇತನ (ವಿಧಿ 39 ಡಿ)
- ಮಹಿಳೆಯರನ್ನು ಗೌರವದಿಂದ ನೋಡುವುದು. (ವಿಧಿ 51 ໖ (໑)
- ಮತದಾನದ ಹಕ್ಕು (ವಿಧಿ 236)
1992 ಜನಸಂಖ್ಯೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವನ್ನು ರಚಿಸುವ ಮೂಲಕ ಮಹಿಳಾ ಹಿತಾಸಕ್ತಿಯನ್ನು ರಕ್ಷಿಸುವ ಸಲುವಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಈ ಮಹಿಳಾ ಆಯೋಗಗಳನ್ನು ರಚಿಸಿದೆ. ಭಾರತವು ಮಹಿಳೆಯರ ವಿರುದ್ಧ ತಾರತಮ್ಯವನ್ನು ಹೋಗಲಾಡಿಸುವ ವಿಶ್ವಸಂಸ್ಥೆಯ ನಿರ್ಣಯಕ್ಕೆ 30 ನೇ ಜುಲೈ 1980 ರಲ್ಲಿ ಸಹಿ ಮಾಡಿದ್ದು 1993 ಜುಲೈ 9 ರಂದು ಮಾನ್ಯ ನೀಡಿತು.
8. ಅನಕ್ಷರತೆಗೆ ಕಾರಣಗಳನ್ನು ಪಟ್ಟಿ ಮಾಡಿ.
ಪ್ರಜಾಪ್ರಭುತ್ವದ ಯಶಸ್ಸಿಗೆ ವಿದ್ಯಾವಂತ ಮತ್ತು ಜಾಗೃತ ಪ್ರಜೆಗಳು ಅತ್ಯಾವಶ್ಯಕ ಕಡ್ಡಾಯ ಶಿಕ್ಷಣ ಮತ್ತು ಸಾರ್ವತ್ರಿಕ ಶಿಕ್ಷಣವೆಂಬುದು ಭಾರತ ಮಾತ್ರವಲ್ಲದೇ ಪ್ರಜಾಸತಾತ್ಮಕ ಸರ್ಕಾರವನ್ನು ನಡೆಸುವ ಜಗತ್ತಿನ ಯಾವುದೇ ಭಾಗದಲ್ಲಾದರೂ ಪ್ರೋತ್ಸಾಹಿಸಬೇಕಾಗಿದೆ. ಆದರೆ ಇಂದಿಗೂ ಸಾಕ್ಷರತೆಯ ಪ್ರಮಾಣ ಕಡಿಮೆಯಿದೆ. ಇದಕ್ಕೆ ಹಲವಾರು ಕಾರಣಗಳಿವೆ.
ಅನಕ್ಷರತೆಗೆ ಕಾರಣಗಳು
- ಜನಸಂಖ್ಯಾ ಸ್ಫೋಟ:
ಭಾರತವು ಇಡೀ ಜಗತ್ತಿನಲ್ಲೇ 2ನೇ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಇದು ಜಗತ್ತಿನ ಜನಸಂಖ್ಯೆಯ ಶೇ 17.5 ರಷ್ಟು ಹೊಂದಿದೆ. ಕರ್ನಾಟಕದ ಜನಸಂಖ್ಯೆ ಈಗ 6.11 ಕೋಟಿಯನ್ನು ದಾಟಿದೆ. ಹೀಗಾಗಿ ಸಾಕ್ಷರತೆಯನ್ನು ಸಾಧಿಸಲು ಸರ್ಕಾರವು ದೊಡ್ಡ ಸವಾಲನ್ನು ಎದುರಿಸಬೇಕಾಗಿದೆ.
ಲಿಂಗಾಧಾರಿತ ಅಸಮಾನತೆ ಹೋಗಲಾಡಿಸಲು ಸಂವಿಧಾನದಲ್ಲಿರುವ ಅವಕಾಶಗಳು:
- ಲಿಂಗಾಧಾರಿತ ತಾರತಮ್ಯವನ್ನು ನಿರ್ಮೂಲನೆ ಮಾಡುವುದು (ವಿಧಿ 15)
- ಸಾರ್ವಜನಿಕ ಸೇವೆಗಳಲ್ಲಿ ಸಮಾನ ಅವಕಾಶ (ವಿಧಿ 16)
- ಶೋಷಣೆಯ ವಿರುದ್ಧ ರಕ್ಷಣೆಯ ಹಕ್ಕು (ವಿಧಿ 23 ಮತ್ತು 24)
- ಸಮಾನ ಕೆಲಸಕ್ಕೆ ಸಮಾನ ವೇತನ (ವಿಧಿ 39 ಡಿ)
- ಮಹಿಳೆಯರನ್ನು ಗೌರವದಿಂದ ನೋಡುವುದು. (ವಿಧಿ 51 ໖ (໑)
- ಮತದಾನದ ಹಕ್ಕು (ವಿಧಿ 236)
1992 ಜನಸಂಖ್ಯೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವನ್ನು ರಚಿಸುವ ಮೂಲಕ ಮಹಿಳಾ ಹಿತಾಸಕ್ತಿಯನ್ನು ರಕ್ಷಿಸುವ ಸಲುವಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಈ ಮಹಿಳಾ ಆಯೋಗಗಳನ್ನು ರಚಿಸಿದೆ. ಭಾರತವು ಮಹಿಳೆಯರ ವಿರುದ್ಧ ತಾರತಮ್ಯವನ್ನು ಹೋಗಲಾಡಿಸುವ ವಿಶ್ವಸಂಸ್ಥೆಯ ನಿರ್ಣಯಕ್ಕೆ 30 ನೇ ಜುಲೈ 1980 ರಲ್ಲಿ ಸಹಿ ಮಾಡಿದ್ದು 1993 ಜುಲೈ 9 ರಂದು ಮಾನ್ಯ ನೀಡಿತು.
8. ಅನಕ್ಷರತೆಗೆ ಕಾರಣಗಳನ್ನು ಪಟ್ಟಿ ಮಾಡಿ.
ಪ್ರಜಾಪ್ರಭುತ್ವದ ಯಶಸ್ಸಿಗೆ ವಿದ್ಯಾವಂತ ಮತ್ತು ಜಾಗೃತ ಪ್ರಜೆಗಳು ಅತ್ಯಾವಶ್ಯಕ ಕಡ್ಡಾಯ ಶಿಕ್ಷಣ ಮತ್ತು ಸಾರ್ವತ್ರಿಕ ಶಿಕ್ಷಣವೆಂಬುದು ಭಾರತ ಮಾತ್ರವಲ್ಲದೇ ಪ್ರಜಾಸತಾತ್ಮಕ ಸರ್ಕಾರವನ್ನು ನಡೆಸುವ ಜಗತ್ತಿನ ಯಾವುದೇ ಭಾಗದಲ್ಲಾದರೂ ಪ್ರೋತ್ಸಾಹಿಸಬೇಕಾಗಿದೆ. ಆದರೆ ಇಂದಿಗೂ ಸಾಕ್ಷರತೆಯ ಪ್ರಮಾಣ ಕಡಿಮೆಯಿದೆ. ಇದಕ್ಕೆ ಹಲವಾರು ಕಾರಣಗಳಿವೆ.
ಅನಕ್ಷರತೆಗೆ ಕಾರಣಗಳು
- ಜನಸಂಖ್ಯಾ ಸ್ಫೋಟ:
ಭಾರತವು ಇಡೀ ಜಗತ್ತಿನಲ್ಲೇ 2ನೇ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಇದು ಜಗತ್ತಿನ ಜನಸಂಖ್ಯೆಯ ಶೇ 17.5 ರಷ್ಟು ಹೊಂದಿದೆ. ಕರ್ನಾಟಕದ ಜನಸಂಖ್ಯೆ ಈಗ 6.11 ಕೋಟಿಯನ್ನು ದಾಟಿದೆ. ಹೀಗಾಗಿ ಸಾಕ್ಷರತೆಯನ್ನು ಸಾಧಿಸಲು ಸರ್ಕಾರವು ದೊಡ್ಡ ಸವಾಲನ್ನು ಎದುರಿಸಬೇಕಾಗಿದೆ.
- ಬಡತನ :
ಬಡತನದ ಬೇಗೆಯಿಂದ ಬಹುತೇಕ ಮಕ್ಕಳು ಅಪೌಷ್ಠಿಕತೆ ಹಾಗೂ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಬಡತನ ಮತ್ತು ಕಡಿಮೆ ಆದಾಯವಿರುವ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಲ್ಲಿ ವಿಫಲರಾಗಿದ್ದಾರೆ.
- ಸಾಮಾಜಿಕ ಹಿಂದುಳಿದಿರುವಿಕೆ:
ಜಾತಿ ಶ್ರೇಣಿ ಪದ್ದತಿ, ಜನರಲ್ಲಿನ ಕೀಳರಿಮೆ, ಶಿಕ್ಷಣದ ಬಗೆಗಿನ ಜನರ ನಿರುತ್ಸಾಹ ಹಾಗೂ ಸಾಮಾಜಿಕ ನಿರ್ಬಂಧಗಳಿಂದ ಬಹುತೇಕ ಜನರು ಶಿಕ್ಷಣದಿಂದ ವಂಚಿತರಾಗಿರುವರು. ಅಲ್ಲದೇ ಬಹುತೇಕ ಹೆಣ್ಣು ಮಕ್ಕಳಿಗೆ ಅದರಲ್ಲಿಯೂ ಗ್ರಾಮೀಣ ಪ್ರದೇಶಗಳಲ್ಲಿ ರೂಢಿ ಸಂಪ್ರದಾಯಗಳು ಮತ್ತು ಲಿಂಗ ತಾರತಮ್ಯದ ಆಚರಣೆಯಿಂದ ಪ್ರಾಥಮಿಕ ಶಿಕ್ಷಣವನ್ನು ನಿರಾಕರಿಸಲಾಗುತ್ತಿದೆ.
- ಬಾಲಕಾರ್ಮಿಕ ಪದ್ದತಿ :
ದುರ್ಬಲ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯಿಂದ ಬಾಲಕಾರ್ಮಿಕ ಪದ್ಧತಿ ದೇಶಾದ್ಯಂತ ಆಚರಣೆಯಲ್ಲಿದೆ ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋ ವರದಿ ಪ್ರಕಾರ 2011ರಲ್ಲಿ ಭಾರತದಾದ್ಯಂತ 2 ಕೋಟಿ ಬಾಲ ಕಾರ್ಮಿಕರಿದ್ದಾರೆ. ಅವರು ಹೋಟೆಲ್ಗಳು, ಸಣ್ಣ ಪ್ರಮಾಣದ ಕೈಗಾರಿಕೆಗಳು, ನೇಯ್ದೆ ಮತ್ತು ಪಟಾಕಿ ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸಿ ಶಿಕ್ಷಣದಿಂದ ವಂಚಿತರಾಗಿದ್ದಾರೆ.
- ಕಳಪೆ ಗುಣಮಟ್ಟದ ಮೂಲಭೂತ ಸೌಕರ್ಯಗಳು:
ದೇಶದಾದ್ಯಂತ ಬಹುತೇಕ ಶಾಲೆಗಳು ಸಮರ್ಪಕವಾದ ಕಟ್ಟಡಗಳನ್ನು, ಅಗತ್ಯಕ್ಕನುಗುಣವಾಗಿ ಶಿಕ್ಷಕರು ಮತ್ತು ಅಧ್ಯಯನ ಸಾಮಗ್ರಿಗಳನ್ನು ಹೊಂದಿರುವುದಿಲ್ಲ. ಶಾಲಾ ವಾತಾವರಣವು ಕಲಿಕೆ ಮತ್ತು ಗ್ರಹಿಕೆಗೆ ಪೂರಕವಾಗಿರುವುದಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ಮಕ್ಕಳು ಶಾಲೆಗಳಿಗೆ ಹೋಗಲು ಸಮರ್ಪಕವಾದ ಸಾರಿಗೆ ವ್ಯವಸ್ಥೆ ಇರುವುದಿಲ್ಲ. ಈ ಎಲ್ಲಾ ಕಾರಣಗಳಿಂದ ಭಾರತದಲ್ಲಿ ಅನಕ್ಷರತೆ ಪ್ರಮಾಣ ಹೆಚ್ಚಾಗಿದೆ.
9. 86 ನೇ ಸಂವಿಧಾನ ತಿದ್ದುಪಡಿ ಕಾಯಿದೆಯ ಪ್ರಕಾರ ಅನಕ್ಷರತಾ ನಿವಾರಣೆಗೆ ಸಂವಿಧಾನ ಕೈಗೊಂಡಿರುವ ಕ್ರಮಗಳಾವುವು?
ಸಂವಿಧಾನದ 45 ನೇ ವಿಧಿಯು ಎಲ್ಲಾ ರಾಜ್ಯಗಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕನ್ನು ಜಾರಿಗೊಳಿಸುವ ಅವಕಾಶ ನೀಡಿದೆ. ಆದರೆ ಇದು ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಆದ್ದರಿಂದ ಸಂವಿಧಾನದ 86 ನೇ ತಿದ್ದುಪಡಿಯ ಮೂಲಕ ಇದನ್ನುಕಡ್ಡಾಯಗೊಳಿಸಲಾಗಿದೆ.
ಭಾರತದ ಸಂಸತ್ತು 2002 ರಲ್ಲಿ 86 ನೇ ಸಂವಿಧಾನ ತಿದ್ದುಪಡಿಯನ್ನು ಪಾಸು ಮಾಡಿತ್ತು. ಸಂವಿಧಾನದಲ್ಲಿ ಸೇರಿಸಿರುವ 21 ಎ ಪ್ರಕಾರ 6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ಮಾಡಲಾಗಿದೆ. ಈ ತಿದ್ದುಪಡಿ ಮೂಲಕ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸುವುದರ ಮೂಲಕ, ಶಿಕ್ಷಣವನ್ನು ಪ್ರಚಾರಪಡಿಸಲಾಗಿದೆ.
86 ನೇ ಸಂವಿಧಾನ ತಿದ್ದುಪಡಿ ಕಾಯ್ದೆ ಅನಕ್ಷರತೆ ನಿವಾರಣೆಗೆ ಕೈಗೊಂಡ ಕ್ರಮಗಳು ಅಥವಾ ಈ ಕಾಯ್ದೆಯ ಮುಖ್ಯಾಂಶಗಳು ಈ ಕೆಳಗಿನಂತಿವೆ.
- ಕಡ್ಡಾಯ ಶಿಕ್ಷಣ ಎಂದರೆ 6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವುದು. ಮತ್ತು ಉಚಿತ ದಾಖಲಾತಿ, ಹಾಜರಾತಿ ನೀಡಿ ಅವರ ಶಿಕ್ಷಣ ಪೂರ್ತಿಗೊಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.
- ಪೋಷಕರು ಮತ್ತು ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಕಡ್ಡಾಯ.
- ಈ ಗುರಿಯನ್ನು ಸಾಧಿಸಲು ಶಾಲೆಗಳು ವಿದ್ಯಾರ್ಥಿಗಳ ಪ್ರಮಾಣಕ್ಕೆ ಅನುಗುಣವಾಗಿ ಶಿಕ್ಷಕರು, ತರಬೇತಿ ಪಡೆದ ನುರಿತ ಶಿಕ್ಷಕರು, ಮೂಲಭೂತ ಸೌಕರ್ಯಗಳು ಮತ್ತು ಆಟದ ಮೈದಾನ ಮುಂತಾದವುಗಳನ್ನು ಹೊಂದಿರಬೇಕು.
- ಕೇಂದ್ರಸರ್ಕಾರ ಮತ್ತು ರಾಜ್ಯಸರ್ಕಾರಗಳೆರಡು ಒಪ್ಪಿದ ಸೂತ್ರದನ್ವಯ ಇದಕ್ಕೆ ತಗಲುವ ಖರ್ಚು ನಿಭಾಯಿಸಬೇಕು. (2013 ರಲ್ಲಿ ಇದು 65:35 ರಷ್ಟಿತ್ತು)
- ಶಾಲೆಯ ಆಡಳಿತ ಮಂಡಳಿ ಅಥವಾ ಸ್ಥಳೀಯ ಪ್ರಾಧಿಕಾರವು ಶಾಲೆಯಿಂದ ಹೊರ ಹೋದ ಮಕ್ಕಳನ್ನು ಗುರುತಿಸುವುದು ಮತ್ತು ಅವರ ವಯಸ್ಸಿಗೆ ಅನುಗುಣವಾಗಿ ತರಗತಿಗಳಲ್ಲಿ ಸೇರಿಸುವುದು ಆದ್ಯ ಕರ್ತವ್ಯವಾಗಿದೆ. ಶಾಲೆಗೆ ದಾಖಲಾತಿ ಮಾಡುವುದಕ್ಕಿಂತ ಮೊದಲು ಅವರಿಗೆ ಸೂಕ್ತ ತರಬೇತಿ ನೀಡಬೇಕಾಗಿದೆ.
- ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್ 12(1) ಸಿ ಪ್ರಕಾರ ಖಾಸಗಿ ಅನುದಾನಿತ ಮತ್ತು ಅಲ್ಪಸಂಖ್ಯಾತರ
99 ಅನುದಾನರಹಿತ ಶಾಲೆಗಳು, ಹಿಂದುಳಿದ ವರ್ಗಗಳ ಮತ್ತು ದುರ್ಬಲ ವರ್ಗಗಳಿಗೆ ಸೇರಿದ ಮಕ್ಕಳಿಗೆ ಶೇಕಡಾ 25 ರಷ್ಟು ಸ್ಥಾನಗಳನ್ನು ಮೀಸಲಿಡಬೇಕು (7.5% 5., 1.5% 5.. 16% 2 ಮಕ್ಕಳಿಗೆ ಮೀಸಲಿಡಲಾಗಿದೆ)
ಈ ರೀತಿಯಾಗಿ ಅನಕ್ಷರತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು ಸಂವಿಧಾನದ 86 ನೇ ತಿದ್ದುಪಡಿಯು ಜಾರಿಗೊಳಿಸುವುದರ ಮೂಲಕ ಹಲವು ಕ್ರಮಗಳನ್ನು ಕೈಗೊಂಡಿದೆ.
10. ‘ಭಾರತದ ಪ್ರಜಾಪ್ರಭುತ್ವಕ್ಕೆ ಕೋಮುವಾದ ಒಂದು ದೊಡ್ಡ ತೊಡಕಾಗಿದೆ’ ಹೇಗೆ? ವಿವರಿಸಿ.
ಕೋಮುವಾದ ಎಂಬುದು ಸಂಕುಚಿತ ರಾಜಕೀಯ ಗುರಿಗಳು ಮತ್ತು ಒಂದು ನಿರ್ಧಿಷ್ಟ ಕೋಮಿನ ಹಿತಾಸಕ್ತಿಗಳನ್ನು ಸಾಧಿಸುವುದಕ್ಕಾಗಿ ಧರ್ಮ ಮತ್ತು ಸಾಂಸ್ಕೃತಿಕ ವೈರುಧ್ಯಗಳನ್ನು ದುರುಪಯೋಗ ಪಡಿಸಿಕೊಳ್ಳುವುದು ಎಂಬುದಾಗಿಯೂ ಅರ್ಥೈಸಬಹುದಾಗಿದೆ.
ಕೋಮುವಾದವು ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ವಿವಿಧ ಹಂತಗಳಲ್ಲಿ ಕಾರ್ಯಾಚರಣೆ ಯಲ್ಲಿದ್ದು ಭಾರತದ ಪ್ರಜಾಸತ್ತೆ ಮತ್ತು ರಾಜಕೀಯ ವ್ಯವಸ್ಥೆಗೆ ಬೃಹತ್ ಸವಾಲಾಗಿದೆ. ಭಾರತ ಪ್ರಜಾಪ್ರಭುತ್ವಕ್ಕೆ ಒಂದು ದೊಡ್ಡ ತೊಡಕು.
- ರಾಷ್ಟ್ರೀಯ ಏಕತೆಗೆ ಧಕ್ಕೆ :
ಭಾರತದಲ್ಲಿ ಹಲವು ಧರ್ಮಗಳಲ್ಲಿರುವ ಧಾರ್ಮಿಕ ವೈರುಧ್ಯಗಳಿಂದ ದೇಶದ ಏಕತೆ ಮತ್ತು ಸಮಗ್ರತೆಯ ಮೇಲೆ ಗಂಭೀರವಾದ ವ್ಯತಿರಿಕ್ತ ಪರಿಣಾಮಗಳುಂಟಾಗಿವೆ. ಧಾರ್ಮಿಕ ಭಿನ್ನತೆಗಳಿಂದ 1947 ರಲ್ಲಿ ಉಪಖಂಡದಲ್ಲಾದ ದೇಶ ವಿಭಜನೆಯಿಂದ ಭಾರತದಲ್ಲಿ ಸಾಮಾಜಿಕ ಸಾಮರಸ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಯಿತು. ಇದರಿಂದ ಎರಡೂ ಕೋಮುಗಳ ನಡುವೆ ಭಿನ್ನಾಭಿಪ್ರಾಯ ಮೂಡಲಾರಂಭಿಸಿತು.
- ರಾಷ್ಟ್ರೀಯವಾದ ಮತ್ತು ದೇಶಾಭಿಮಾನಕ್ಕೆ ಧಕ್ಕೆ :
ಕೋಮುವಾದವು ನಾನಾ ರೀತಿಯ ಧಾರ್ಮಿಕ ಮೂಲಭೂತವಾದ ಮತ್ತು ಸಂಪ್ರದಾಯಗಳಿಗೆ ದಾರಿ ಮಾಡಿಕೊಡುತ್ತದೆ. ಧಾರ್ಮಿಕ ಮೂಲಭೂತವಾದಿಗಳು ತಮ್ಮ ಜನರನ್ನು ಧಾರ್ಮಿಕ ಅಸ್ಥಿರತೆಯ ಹೆಸರಿನಲ್ಲಿ ಶೋಷಣೆ ಮಾಡಿ ಅವರನ್ನು ಅಂಧಕಾರದ ಕೂಪಕ್ಕೆ ದೂಡುತ್ತಾರೆ.ಇಂತಹ ಸಾಮಾಜಿಕ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಮತ್ತು 1 ದೇಶಾಭಿಮಾನದ ಚಿಂತನೆಗಳು ಸಂಪೂರ್ಣವಾಗಿ ತಮ್ಮ ” ಮಹತ್ವ ಕಳೆದುಕೊಳ್ಳುತ್ತವೆ.
- ರಾಷ್ಟ್ರೀಯ ಅಭಿವೃದ್ಧಿಗೆ ತೊಡಕು :
ರಾಷ್ಟ್ರೀಯ ದೂರದ ರೈತರ ಕೊರತೆಯಿಂದ ಕೆಲವು ತೂರಿ ಧಾರ್ಮಿಕ ಆಸಹಿಷ್ಣುತೆಗೆ ವಾರಿ ಮಾಡಿಕೊಡುವರು. ತಮ್ಮ ಉದ್ರೇಕಕಾರಿ ಭಾಷಣಗಳು ಮತ್ತು ಲೇಖನಗಳಿಂದ ಜನಸಾಮಾನ್ಯರಲ್ಲಿ ಕೋಮು ಸಂಘರ್ಷ ಭಾವನೆ ಮೂಡುವುದರಿಂದ ಸಹಜವಾಗಿ ರಾಷ್ಟ್ರೀಯ ಅಭಿವೃದ್ಧಿ, ಕಾರ್ಯಕ್ರಮಗಳ ಮೇಲೆ ಮಸ್ಟರಿಣಾಮ ಬೀರುತ್ತದೆ.
- ಅಸಮರ್ಥ ರಾಜಕೀಯ ನಾಯಕತ್ವ :
ಭಾರತದಲ್ಲಿ ರಾಜಕೀಯ ಪಕ್ಷಗಳು ಮತ್ತು ನಾಯಕರು ಕೋಮು ಭಾವನೆಗಳನ್ನು ಜನರಲ್ಲಿ ನಿವಾರಿಸಿ ಕೋಮು ಸೌಹಾರ್ದವನ್ನು ಮೂಡಿಸುವಲ್ಲಿ ವಿಫಲರಾಗಿದ್ದಾರೆ. ಚುನಾವಣೆಗಳಲ್ಲಿ ವೋಟ್ ಬ್ಯಾಂಕ್ ರಾಜಕೀಯ ಮಾಡುವುದಕ್ಕಾಗಿ ರಾಜಕೀಯ ಪಕ್ಷಗಳು ಜಾತಿ ಮತ್ತು ಕೋಮು ಆಧಾರಿತ ಹಿತಾಸಕ್ತಿಗಳನ್ನು ಸಾಧಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅಂತಿಮವಾಗಿ ಇದು ಅಸಮರ್ಥ ರಾಜಕೀಯ ನಾಯಕತ್ವಕ್ಕೆ ಎಡೆ ಮಾಡಿಕೊಡುತ್ತದೆ.
- ರಾಷ್ಟ್ರೀಯ ಸಾರ್ವಭೌಮಾಧಿಕಾರಕ್ಕೆ ಗಂಡಾಂತರ:
ಯಾವುದೇ ದೇಶವು ಸಾಮಾಜಿಕ-ಧಾರ್ಮಿಕ ಭಿನ್ನತೆಗಳನ್ನಾಧರಿಸಿ ಆಂತರಿಕ ಸಮಸ್ಯೆಗಳಿಂದ ಕೂಡಿದ್ದಾಗ ಅದು ಜಾಗತಿಕ ಮಟ್ಟದಲ್ಲಿ ದುರ್ಬಲ ರಾಷ್ಟ್ರವಾಗಿ ಗೋಚರಿಸುತ್ತದೆ. ಕ್ರಮೇಣ ಇದು ವಿದೇಶಿ ಆಕ್ರಮಣಕ್ಕೆ ಒಳಗಾಗುವ ಸಂಭವ ರುತ್ತದೆ. ಏಕತೆಯಿಂದ ಇದ್ದರೆ ಮಾತ್ರ ರಾಷ್ಟ್ರ ನಿರ್ಮಾಣ ಮಾಡಬಲ್ಲೆವು. ಇಲ್ಲದಿದ್ದರೆ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿ, ರಾಷ್ಟ್ರೀಯ ಸಾರ್ವಭೌಮತ್ತೆ ಗಂಡಾಂತರ ಸ್ಥಿತಿಗೆ ತಲುಪುತ್ತದೆ.
ಹೀಗೆ ಕೋಮುವಾದವು ಭಾರತದ ಪ್ರಜಾಸತಾತ್ಮಕ ವ್ಯವಸ್ಥೆ, ರಾಜಕೀಯ ವ್ಯವಸ್ಥೆಗೆ ಒಂದು ಬೃಹತ್ ಗಂಡಾಂತರವಾಗಿದೆ ಎಂದು ಈ ಮೇಲಿನ ಅಂಶಗಳ ಮೂಲಕ ತಿಳಿಯಬಹುದು.
11.ಕೋಮುವಾದದ ವಿರುದ್ಧದ ಪರಿಹಾರೋಪಾಯಗಳನ್ನು ವಿವರಿಸಿ.
ಕೋಮುವಾದ ಎಂದರೆ ಬಹುಸಂಖ್ಯಾತ ಧರ್ಮವು ಇಡೀ ವ್ಯವಸ್ಥೆಯನ್ನು ತನ್ನ ಹಿಡಿತದಲ್ಲಿದ್ದುಕೊಂಡು ರಾಜ್ಯ ನಡೆಸುವ ವ್ಯವಸ್ಥೆ, ಇದು ದೇಶದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ರಂಗಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಇದನ್ನು ತಡೆಗಟ್ಟುವಲ್ಲಿ ಪರಿಹಾರಗಳನ್ನು ಕಂಡುಕೊಳ್ಳುವುದು ಅವಶ್ಯವಾಗಿದೆ.
ಪರಿಹಾರೋಪಾಯಗಳು
- ಜಾತ್ಯಾತೀತತೆ :
ಭಾರತದಲ್ಲಿ ವಿವಿಧ ಧಾರ್ಮಿಕ ಗುಂಪುಗಳ ನಡುವೆ ಏಕತೆ ಮತ್ತು ಸಮಾನತೆಯ ಮನೋಭಾವನೆಯನ್ನು ಮೂಡಿಸುವುದಕ್ಕಾಗಿ ಸಂವಿಧಾನ ರಚನಾಕಾರರು ಜಾತ್ಯಾತೀತ ತತ್ವವನ್ನು ಅಳವಡಿಸಿಕೊಂಡಿದ್ದಾರೆ. ರಾಜ್ಯವೂ ಸಹ ಪ್ರಜೆಗಳ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದಿರುವ ನೀತಿಯನ್ನು ಅನುಸರಿಸಿದೆ. ಸಂವಿಧಾನದ 26 ನೇ ವಿಧಿಯು ದೇಶದ ಎಲ್ಲಾ ಪ್ರಜೆಗಳಿಗೂ ಧಾರ್ಮಿಕ ಸ್ವತಂತ್ರ್ಯ ನೀಡಿ ತಮಗೆ ಇಷ್ಟ ಬಂದ ಧರ್ಮವನ್ನು ಅನುಸರಿಸುವ, ಧಾರ್ಮಿಕ ತತ್ವಗಳನ್ನು ಪ್ರಚಾರ ಮಾಡುವ ಮತ್ತು ಸಂಸ್ಥೆಗಳನ್ನು ಅಸ್ತಿತ್ವಕ್ಕೆ ಅವಕಾಶ ಕಲ್ಪಿಸಿತು. ಕೇಂದ್ರ ಸಚಿವ ಸಂಪುಟವು ಡಿಸೆಂಬರ್ 2013 ರಲ್ಲಿ ಕೋಮು ಹಿಂಸಾಚಾರ ತಡೆ ಮಸೂದೆಯನ್ನು ಅನುಮೋದಿಸಿತು.
- ರಾಷ್ಟ್ರೀಯ ಭಾವೈಕ್ಯತೆ :
ಭಾರತವು ವೈವಿಧ್ಯಮಯ ಸಂಸ್ಕೃತಿಯಿಂದ ಕೂಡಿದ್ದು, ಹಲವಾರು ಧರ್ಮ, ಭಾಷೆ, ಜಾತಿ ಮತ್ತು ಸಂಸ್ಕೃತಿಗಳಿಂದ ಕೂಡಿದೆ. ಇದನ್ನು ಸಂಕುಚಿತ ಅರ್ಥದಲ್ಲಿ ಮಿತಿಗೊಳಿಸಲು ಸಾಧ್ಯವಿಲ್ಲ ಆದ್ದರಿಂದ ಪ್ರಜಾಪ್ರಭುತ್ವದ ಯಶಸ್ಸಿಗೆ ರಾಷ್ಟ್ರೀಯ ಭಾವೈಕ್ಯತೆ ಅತ್ಯಗತ್ಯವಾಗಿದೆ. ಇದನ್ನು ಸಾಧಿಸಲು ನಮ್ಮ ಸಂವಿಧಾನದಲ್ಲಿ ಹಲವು ಅಂಶಗಳನ್ನು ಸೇರಿಸಲಾಯಿತು.
- ನೆರೆಹೊರೆಯ ಶಾಂತಿ ಸಮಿತಿಗಳು :
ವಿವಿಧ ಕೋಮುಗಳಿಗೆ ಸೇರಿದ ಸಮಾಜದ ಪ್ರಮುಖ ಮತ್ತು ಉನ್ನತ ವ್ಯಕ್ತಿಗಳು ಸದಸ್ಯರಾಗಿರುವ ನೆರೆಹೊರೆ ಶಾಂತಿಸಮಿತಿಗಳನ್ನು ರಚಿಸಲಾಯಿತು.
ಇವುಗಳ ಮುಖ್ಯ ಧೈಯವೆಂದರೆ,
- ನೆರೆಹೊರೆ ಪ್ರದೇಶಗಳಲ್ಲಿ ಸಾಮಾಜಿಕ ಕೋಭೆಗಳಿಗೆ ಕಾರಣವಾಗುವ ಶಕ್ತಿಗಳನ್ನು ಪಡೆಯುವುದು.
- ಕೋಮು ಹಿಂಸಾಚಾರ ನಡೆಯದ ಹಾಗೆ ಮುಂಜಾಗತಾ ಕ್ರಮಗಳನ್ನು ಕೈಗೊಳ್ಳುವುದು.
- ಕೋಮು ಹಿಂಸಾಚಾರ ನಡೆದ ಸ್ಥಳಗಳಲ್ಲಿ ಶಾಂತಿ ಕಾಪಾಡುವುದು.
- ಕೋಮುಗಳ ನಡುವೆ ಸೌಹಾರ್ದತೆ ಮೂಡಿಸುವುದು.
- ಮೊಟ್ಟಮೊದಲ ನೆರೆಹೊರೆ ಶಾಂತಿಸಮಿತಿ ಮುಂಬೈನ ಧಾರವಿ ಎಂಬಲ್ಲಿ 1986 ರಲ್ಲಿ ನಡೆಯಿತು.
ಇಂದು ಹೆಚ್ಚುತ್ತಿರುವ ಕೋಮುವಾದ ನಿಯಂತ್ರಿಸಲು ಇಂತಹ ಹಲವು ಕ್ರಮಗಳ ಮೂಲಕ ಪ್ರಯತ್ನಿಸಿ, ಭಾರತದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕಾಗಿದೆ.
12. ಭಾರತದಲ್ಲಿ ಭಯೋತ್ಪಾದನೆಯ ಉಗಮಕ್ಕೆ ಕಾರಣಗಳೇನು? ವಿವರಿಸಿ.
ಭಯೋತ್ಪಾದನೆಯು ಒಂದು ಪತೀಕಾರಕ ಕೃತ್ಯವಾಗಿದ್ದು, ಭಯದ ಮೂಲಕ ಜನರಲ್ಲಿ ಆತಂಕಗಳನ್ನು ಮೂಡಿಸಿ ಸಾಮೂಹಿಕ ಹಿಂಸಾಚಾರಕ್ಕೆ ಇಳಿಯುವುದಾಗಿದೆ. ಇದು ಭಾರತದಲ್ಲಿ ಉದ್ಭವಗೊಳ್ಳಲು ಹಲವಾರು ಅಂಶಗಳು ಕಾರಣವಾಗಿವೆ.
ಕಾರಣಗಳು-
- ಪ್ರತ್ಯೇಕತಾವಾದಿ ಚಳುವಳಿಗಳು
ದೇಶ ವಿಭಜನೆಯಾದದಿನಿಂದಲೂ ಕೋಮುವಾದಿ ಶಕ್ತಿಗಳು ಪ್ರತ್ಯೇಕತಾ ಚಟುವಟಿಕೆಗಳಲ್ಲಿ ನಿರತವಾಗಿವೆ.’ ಮೂಲಭೂತವಾದಿಗಳು, ಪಂಜಾಬ್ನಲ್ಲಿ (1980) ಧಾರ್ಮಿಕತೆಯ ಆಧಾರದ ಮೇಲೆ ಈ ಚಳುವಳಿ ಆರಂಭಿಸಿದರು. ಇವುಗಳಲ್ಲಿ ಹುರಿಯತ್ ಕಾರೆನ್ಸ್, ಅಲ್ಕೈದಾ ಪ್ರಮುಖವಾಗಿವೆ.
- ಧಾರ್ಮಿಕ ಮೂಲಭೂತವಾದ-
ಹಿಂದೂ-ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಧರ್ಮಗಳಿಗೆ ಸೇರಿದ ಕೆಲವು ಮೂಲಭೂತವಾದಿ ಧಾರ್ಮಿಕ ಸಂಘಟನೆಗಳು ತಮ್ಮ ಧೀರ್ಘಕಾಲದ ರಾಜಕೀಯ ಗುರಿ ಉದ್ದೇಶಗಳ ಲಾಭಕ್ಕೋಸ್ಕರ ಭಯೋತ್ಪಾದಕ ಕೃತ್ಯಗಳನ್ನು ಬೆಂಬಲಿಸಿ ಸಹಾಯ ನೀಡುತ್ತಾ ಬಂದಿವೆ.
- ಈಶಾನ್ಯ ಭಾಗದ ಜನಾಂಗೀಯ ಸಮಸ್ಯೆ-
ಜನಾಂಗೀಯ ಮತ್ತು ಪ್ರಾದೇಶಿಕ ಅಸ್ಮಿತೆಯ ಆಧಾರದ ಮೇಲೆ ಹಲವಾರು ಸ್ವಹಿತಾಸಕ್ತಿ ಮೂಲಭೂತವಾದಿಗಳು ಈಶಾನ್ಯ ಭಾಗದಲ್ಲಿ ಸಂಘಟಿತ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿವೆ. ಉದಾ- ಮಿಜೋರಾಂನಲ್ಲಿ [1970-80] ಮೀಜೋ ನ್ಯಾಶನಲ್ ಫ್ರಂಟ್.
- ದುರ್ಬಲ ರಾಜಕೀಯ ವ್ಯವಸ್ಥೆ-
ಭಾರತದಲ್ಲಿ ಒದುಪಕ್ಷ ಪದ್ಧತಿಯು ಸಮ್ಮಿಶ್ರ ವ್ಯವಸ್ಥೆಗೆ ದಾರಿ ಪರಾಡಿಕೊಟ್ಟಿದ್ದು, ಇಡೀ ವ್ಯವಸ್ಥೆಯನ್ನೇ ದುರ್ಬಲಗೊಳಿಸಿವೆ. ಸಮ್ಮಿಶ್ರ ಸರ್ಕಾರದಲ್ಲಿರುವ ವಿವಿಧ ರಾಜಕೀಯ ಪಕ್ಷಗಳು ವಿಭಿನ್ನ ಸೈದ್ಧಾಂತಿಕ ನಿಲುವು ಹೊಂದಿವೆ. ಇವು ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳದೆ ತಮ್ಮ ಗುರಿ ಈಡೇರಿಸಿಕೊಳ್ಳುವ ಸನ್ನಾಹದಲ್ಲಿರುತ್ತದೆ.
- ಆರ್ಥಿಕ ತಾರತಮ್ಯ
ಅಸಮರ್ಪಕ ಆರ್ಥಿಕ ಬೆಳವಣಿಗೆಗಳು ಮತ್ತು ಬಡವರ ಮೇಲೆ ಶ್ರೀಮಂತರ ಶೋಷಣೆ ಉಳ್ಳವರು ಮತ್ತು ಇಲ್ಲದವರ ನಡುವೆ ಆಗಾಧ ಅಂತರವನ್ನುಂಟು ಮಾಡಿದೆ. ನಕ್ಸಲರು, ಮಾವೋವಾದಿಗಳು ಈ ನೆಪದಲ್ಲಿಯೇ ಭಯೋತ್ಪಾದಕ ಕೃತ್ಯ ಕೈಗೊಳ್ಳಲು ಕಾರಣವಾಗಿದೆ. ಭಯೋತ್ಪಾದನೆಯು ಉಗಮಗೊಳ್ಳಲು ಈ ಕಾರಣಗಳಾಗಿದ್ದು, ಇವುಗಳ ನಿವಾರಣೋಪಾಯಕ್ಕೆ ಕ್ರಮ
13. ‘ಪ್ರಜಾಪ್ರಭುತ್ವಕ್ಕೆ ಭಯೋತ್ಪಾದನೆ ಹೇಗೆ ಮಾರಕವಾಗಿದೆ’ ವಿವರಿಸಿ.
ಭಯೋತಾ ಕರು ಭಯದ ವಾತಾವರಣ ನಿರ್ಮಿಸಿ ಪ್ರಜೆಗಳಲ್ಲಿ ಪ್ರಜಾಪ್ರಭುತ್ವದ ಕಲ್ಪನೆ ಹಾಳುಮಾಡಲು ಪ್ರಯತ್ನಿಸುತ್ತಾರೆ. ಅವರು ಕೈಗೊಳ್ಳುವ ಕೃತ್ಯಗಳಿಂದ ಪ್ರಜಾಪ್ರಭುತ್ವಕ್ಕೆ ಮಾರಕ ಉಂಟಾಗುತ್ತದೆ.
1. ಆಡಳಿತ ಯಂತ್ರಕ್ಕೆ ಅಡ್ಡಿ-
ಭಯೋತ್ಪಾದಕ ಸಂಘಟನೆಗಳು ರಾಷ್ಟ್ರದ ಪ್ರಜಾಸತಾತ್ಮಕ ಆಡಳಿತದಲ್ಲಿ ಅಸ್ತವ್ಯಸ್ತತೆಯನ್ನುಂಟು ಮಾಡುತ್ತದೆ. ಸರ್ಕಾರ, ಉನ್ನತ ರಾಜಕೀಯ ನಾಯಕರನ್ನು ಮತ್ತು ಮತ್ತಿತ್ತರನ್ನು ಗುರಿಯಾಗಿಸಿಕೊಂಡು ಹಿಂಸಾತ್ಮಕ ಕೃತ್ಯಗಳಲ್ಲಿ ಭಯೋತ್ಪಾದಕರು ತೊಡಗಿರುತ್ತಾರೆ.
2. ಸಂವಿಧಾನಕ್ಕೆ ಗೌರವವಿಲ್ಲ :
ಸಂವಿಧಾನವು ರಾಷ್ಟ್ರದ ಮೂಲಭೂತ ಕಾನೂನಾಗಿದ್ದರೂ ಭಯೋತ್ಪಾದಕ ಗುಂಪುಗಳು ಮತ್ತು ಸಂಘಟನೆಗಳು ತಮ್ಮ ಭಯೋತ್ಪಾದಕ ಚಟುವಟಿಕೆಗಳ ಮೂಲಕ ಸಂವಿಧಾನದ ಚೌಕಟ್ಟನ್ನು ಮೀರಿ ವರ್ತಿಸುತ್ತಾರೆ. ಕೆಲವು ವೇಳೆ ಸರ್ಕಾರಗಳು ಇವುಗಳ ಬೇಡಿಕೆಗಳಿಗೆ ಮಣಿದು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿದೆ.
3. ಮಾನವ ಹಕ್ಕುಗಳ ಉಲ್ಲಂಘನೆ:
ಭಯೋತ್ಪಾದಕರು, ನೆಲದ ಕಾನೂನು ಮತ್ತು ಪ್ರಜಾಸತಾತ್ಮಕ ನೀತಿಗಳಿಗೆ ಯಾವುದೇ ರೀತಿಯ ಮನ್ನಣೆ ಗೌರವ ನೀಡುವುದಿಲ್ಲ. ಮಾನವ ಹಕ್ಕುಗಳನ್ನು ಉಲ್ಲಂಘಿಸುವುದರ ಮೂಲಕ ಮುಗ್ಧ ಸಾಮಾನ್ಯ ಜನರನ್ನು ಗಾಯಗೊಳಿಸಿ ಕೊಲ್ಲುತ್ತಾರೆ.
4. ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳು:
ಭಯೋತ್ಪಾದಕರು ಸಾಮಾನ್ಯವಾಗಿ ಮತದಾನ ಕಾರ್ಯಕ್ಕೆ ನಿಯೋಜಿತ ಅಧಿಕಾರಿಗಳು, ಮತದಾರರು ಮತ್ತು ಅಭ್ಯರ್ಥಿಗಳನ್ನು ಅಪಹರಿಸುವುದರ ಮೂಲಕ ಮತಗಟ್ಟೆಗಳನ್ನು ವಶಪಡಿಸಿಕೊಳ್ಳುವ ಮೂಲಕ ಚುನಾವಣೆಯಲ್ಲಿ ಕಾನೂನು ವಿರೋಧಿ ಕೃತ್ಯ ಎಸಗುತ್ತಾರೆ.
5. ಆರ್ಥಿಕ ಬೆಳವಣಿಗೆ ಅಡ್ಡಿ :
ಭಯೋತ್ಪಾದನೆಯನ್ನು ತಡೆದು ಹತ್ತಿಕ್ಕುವ ಸಲುವಾಗಿ ಸರ್ಕಾರಗಳು ಅನಾವಶ್ಯಕವಾಗಿ, ಸೇನೆ, ಪೋಲಿಸ್ ವ್ಯವಸ್ಥೆ ಮುಂತಾದವುಗಳಿಗೆ ಅಪಾರ ಹಣ ವೆಚ್ಚ ಮಾಡುವುದರಿಂದ, ಆರ್ಥಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತವೆ. ಪ್ರವಾಸೋದ್ಯಮದ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತದೆ.
ಈ ರೀತಿಯಾಗಿ ಪ್ರಜಾಸತಾತ್ಮಕ ವ್ಯವಸ್ಥೆಗೆ ಭಯೋತ್ಪಾದನೆ ಮಾರಕವಾಗಿದೆ ಎಂದು ಹೇಳಬಹುದು.
14. 2008 ರಲ್ಲಿ ಅಂಗೀಕೃತವಾದ UAPA ದ ವಿವಿಧ ನಿಯಮಗಳನ್ನು ತಿಳಿಸಿ.
ದೇಶದಲ್ಲಿ ಭಯೋತ್ಪಾದನೆಯನ್ನು ತಡೆಯಲು ಸರ್ಕಾರವು ಹಲವಾರು ಶಾಸನೀಯ ಕ್ರಮಗಳನ್ನು ಕೈಗೊಂಡಿದೆ. ಅದರಂತೆ 2008 ರಲ್ಲಿ UAPA ಕಾನೂನು ವಿರೋಧಿ ಚಟುವಟಿಕೆಗಳ ನಿಗ್ರಹ ಕಾಯ್ದೆಯನ್ನು ಅಂಗೀಕರಿಸಲಾಯಿತು.
ಇದು ಈ ಕೆಳಕಂಡ ನಿಯಮಗಳನ್ನು ಒಳಗೊಂಡಿದೆ. UAPA ಕಾನೂನು ವಿರೋಧಿ ಚಟುವಟಿಕೆಗಳ ನಿಗ್ರಹ ಕಾಯ್ದೆ
ಭಯೋತ್ಪಾದಕ ಕಾಯ್ದೆ’ ಎಂಬ ಪದವನ್ನು ಕಾಯ್ದೆಯ 15 ನೇ ಸೆಕ್ಷನ್ನಲ್ಲಿ ವ್ಯಾಖ್ಯಾನಿಸಲಾಗಿದೆ. ಭಾರತದಲ್ಲಿ ಏಕತೆ, ಸಮಗ್ರತೆ, ಮತ್ತು ಪರಮಾಧಿಕಾರಕ್ಕೆ ಧಕ್ಕೆಯುಂಟಾಗುತ್ತಿದ್ದರೆ ಅಥವಾ ಜನರಲ್ಲಿ ಭಯೋತ್ಪಾದಕ ಭೀತಿಯನ್ನುಂಟು ಮಾಡುವಂತಿದ್ದರೆ ಅದು ಭಯೋತ್ಪಾದಕ ಕೃತ್ಯವಾಗುತ್ತದೆ.