2nd Puc History Kushanaru Notes Question Answer Guide Extract Mcq Pdf Download in Kannada Medium Karnataka State Syllabus 2025 ದ್ವಿತೀಯ ಪಿಯಸಿ ಇತಿಹಾಸ 4.4 ಕುಶಾನರು ಪಾಠದ ನೋಟ್ಸ್ ಪ್ರಶ್ನೋತ್ತರಗಳು kseeb solutions for class 12 history chapter 4.4 notes kushanaru history in kannada 2nd puc Kushanaru Lesson Notes 2nd puc history 4th chapter question answer Second puc kushanaru chapter notes pdf ದ್ವಿತೀಯ ಪಿ ಯು ಸಿ ಇತಿಹಾಸ ನೋಟ್ಸ್ 2nd PUC History Notes Pdf in Kannada.

ದ್ವಿತೀಯ ಪಿಯಸಿ ಇತಿಹಾಸ 4.4 ಕುಶಾನರು ಪಾಠದ ನೋಟ್ಸ್
I. ಈ ಕೆಳಗಿನ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಆರಿಸಿ బರೆಯಿರಿ.
1. ಕುಶಾನರ ಪ್ರಸಿದ್ದ ದೊರೆ
ಎ) ಅಶೋಕ
ಬಿ) ರಾಜವರ್ಧನ
ಸಿ) ಕಾನಿಷ್ಕ
ಡಿ) ರಾಜೇಂದ್ರ
2. ಕಾನಿಷ್ಟದ ರಾಜಧಾನಿ
ಎ) ಶ್ರೀನಗರ
ಬಿ) ಪುರುಷಪುರ
ಸಿ) ಪಾಟಲೀಪುತ್ರ
ಡಿ) ಪೆನುಗೊಂಡ
3. ಕಾನಿಷ್ಕನು ಬೌದ್ಧಧರ್ಮ ಸ್ವೀಕರಿಸಲು ಪ್ರಭಾವ ಬೀರಿದವರು
ಎ) ಹ್ಯೂಯನ್ ತ್ಸಾಂಗ್
ಬಿ) ಫಾಹಿಯಾನ್
ಸಿ) ವಿಶಾಖದತ್ತ
ಡಿ) ಅಶ್ವಘೋಷ
4. ಕುಶಾನರ ಮೂಲಸ್ಥಳ
ಎ) ಪರ್ಶಿಯಾ
ಬಿ) ಚೀನಾ
ಸಿ) ಅರಬಿಯಾ
ಡಿ) ಬಾಂಗ್ಲಾ
5. ಗಾಂಧಾರ ಕಲೆಯ ನಿರ್ಮಾತೃಗಳು
ಎ) ಮೌರ್ಯರು
ಬಿ) ಗುಪ್ತರು
ಸಿ) ಕುಶಾನರು
ಡಿ) ಶಾತವಾಹನರು
II. ಬಿಟ್ಟ ಸ್ಥಳಗಳನ್ನು ಭರ್ತಿ ಮಾಡಿ
1. ಕುಶಾನರ ಪ್ರಸಿದ್ದ ದೊರೆ ಕಾನಿಷ್ಕ
2. ಕುಶಾನರ ಮೂಲ ಸ್ಥಳ ಚೀನಾ
3. ಕುಶಾನರ ಮೊದಲ ಅರಸ ಕುಜುಲ ಕ್ಯಾಂಡ್ ಫೈಸಸ್
4. ಕಾನಿಷ್ಕನ ರಾಜಧಾನಿ ಪುರುಷಪುರ (ಪೇಷಾವರ್)
5. ಕಾನಿಷ್ಕನನ್ನು ಸೋಲಿಸಿದ ಚೀನಿ ಸೇನಾನಿ ಪಾನ್- ಚೌ
6. ಕಾನಿಷ್ಕನು ಬೌದ್ಧಧರ್ಮ ಸ್ವೀಕರಿಸಲು ಪ್ರಭಾವ ಬೀರಿದವರು ಅಶ್ವಘೋಷ
7. ಕುಶಾನರು ಗಾಂಧಾರ ಕಲೆಯ ನಿರ್ಮಾತೃಗಳು
8. ಕಾನಿಷ್ಠಪುರದ ಇಂದಿನ ಹೇಸರು ಶ್ರೀನಗರ
9. ಕುಶಾನರು ಜನಾಂಗಕ್ಕೆ ಸೇರಿದವರು ಯೂ.ಚಿ. ಅಲೆಮಾರಿ
III ಹೊಂದಿಸಿ ಬರೆಯಿರಿ:
ಕ್ರಮ ಸಂಖ್ಯೆ | ಅ | ಆ | ಉತ್ತರಗಳು |
---|---|---|---|
1 | ಕುಶಾನರ ಮೂಲ | ಪಾನ್-ಚೌ | ಚೀನಾ |
2 | ಕುಶಾನರ ಪ್ರಸಿದ್ಧ ರಾಜ | ಕಲೆ | ಕಾನಿಷ್ಕ |
3 | ಪುರುಷಪುರ | ಕಾನಿಷ್ಕ | ಕಾನಿಷ್ಕನ ರಾಜಧಾನಿ |
4 | ಗಾಂಧಾರ | ಚೀನಾ | ಕಲೆ |
5 | ಚೀನಿ ಸೇನಾನಿ | ಕಾನಿಷ್ಕನ ರಾಜಧಾನಿ | ಪಾನ್-ಚೌ |
IV. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ:
1.ಕುಶಾನರು ಪರಿಚಯಿಸಿದ ಕಲೆ ಯಾವುದು?
ಗಾಂಧಾರ ಕಲೆ
2. ಕಾನಿಷ್ಕನು ಬೌದ್ಧಧರ್ಮ ಸ್ವೀಕರಿಸಲು ಪ್ರಭಾವ ಬೀರಿದವರು ಯಾರು?
ಅಶ್ವಘೋಷ
3. ಕಾನಿಷ್ಠನ ರಾಜಧಾನಿ ಯಾವುದು?
ಪುರುಷಪುರ [ಪೇಶಾವರ)
4. ಕುಶಾನರ ಮೊದಲ ಅರಸ ಯಾರು?
ಕುಜುಲ ಕ್ಯಾಡ್ ಫೈಸಸ್
5. ಕಾನಿಷ್ಕಪುರದ ಇಂದಿನ ಹೆಸರೇನು?
ಶ್ರೀನಗರ
6. ಕುಶಾನರ ಪ್ರಸಿದ್ದ ದೊರೆ ಯಾರು?
ಕಾನಿಷ್ಕ
7. ಕುಶಾನರು ಯಾವ ಜನಾಂಗಕ್ಕೆ ಸೇರಿದವರು?
ಯೂ.ಚಿ. ಎಂಬ ಅಲೆಮಾರಿ ಜನಾಂಗಕ್ಕೆ ಸೇರಿದವರು.
IV. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ 2 ಪದ ಅಥವಾ 2 ವಾಕ್ಯಗಳಲ್ಲಿ ಉತ್ತರಿಸಿ:
1.ನಾಲ್ಕನೇ ಬೌದ್ಧ ಸಮ್ಮೇಳನವನ್ನು ಏಕೆ ನಡೆಸಲಾಯಿತು? ಯಾವಾಗ?
ಅಂದು ಬೌದ್ಧಧರ್ಮದಲ್ಲಿ ತಲೆದೋರಿದ ವಿವಾದಗಳನ್ನು ಪರಿಹರಿಸುವುದಕ್ಕಾಗಿ ಸಾ.ಶ.102ರಲ್ಲಿ ನಡೆಸಲಾಯಿತು.
2. ಬೌದ್ಧ ಧರ್ಮದ ಪ್ರಚಾರಕ್ಕಾಗಿ ಕಾನಿಷ್ಕನ ಯಾವುದಾದರೂ ಎರಡು ಕ್ರಮಗಲನ್ನು ಬರೆಯಿರಿ.
- ಬೌದ್ಧ ಧರ್ಮಕ್ಕೆ ರಾಜಾಶ್ರಯವನ್ನು ನೀಡಲಾಯಿತು ಮತ್ತು ಇದನ್ನು ಬೌದ್ಧ ಭಿಕ್ಷುಗಳಿಗೆ ವಿಸ್ತರಿಸಲಾಯಿತು.
- ವಿಹಾರಗಳು ಮತ್ತು ಮಠಗಳನ್ನು ಭಿಕ್ಷುಗಳ ಉಪಯೋಗಕ್ಕಾಗಿ ಕಟ್ಟಲಾಯಿತು.
V. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ 15-20 ವಾಕ್ಯಗಳಲ್ಲಿ ಉತ್ತರಿಸಿ:
1. ಕಾನಿಷ್ಕನ ಸಾಧನೆಗಳನ್ನು ವಿವರಿಸಿ.
ಕಾನಿಷ್ಕನು ಕುಶಾನರ ಅತ್ಯಂತ ಶ್ರೇಷ್ಠ ದೊರೆಯಾಗಿದ್ದು ‘ಶಕಯುಗದ’ ಸ್ಥಾಪಕನೆಂದು ಕರೆಯಲಾಗಿದೆ. ಪುರುಷಪುರ ಅವನ ರಾಜಧಾನಿಯಾಗಿತ್ತು.
- ಅಧಿಕಾರಕ್ಕೆ ಬಂದ ನಂತರ ತನ್ನ ಸಾಮ್ರಾಜ್ಯದ ಎಲ್ಲೆಗಳನ್ನು ಎಲ್ಲಾ ದಿಕ್ಕುಗಳಲ್ಲಿ ತ್ವರಿತವಾಗಿ ವಿಸ್ತರಿಸಿದನು.
- ಆತನ ಸಾಮ್ರಾಜ್ಯವು ಬ್ಯಾಕ್ಟ್ರಿ ಯ, ಪರ್ಷಿಯಾ, ಅಫ್ಘಾನಿಸ್ಥಾನ, ಪಂಜಾಬ್ ಮತ್ತು ಸಿಂಧ್ ನ ವಿಸ್ತಾರವಾದ ಪ್ರದೇಶವನ್ನು ಹೊಂದಿತ್ತು.
- ಈತ ಕಾಶ್ಮೀರವನ್ನು ಗೆದ್ದುಕೊಂಡ ಅನೇಕ ಸ್ಮಾರಕಗಳೊಂದಿಗೆ ಕಾನಿಷ್ಕಪುರ ಎಂಬ ಪಟ್ಟಣಕ್ಕೆ ಅಡಿಪಾಯ ಹಾಕಿದನು. ಇಂದು ಇದು ಶ್ರೀನಗರ ಎಂದು ಹೆಸರಾಗಿದೆ.
- ಮಗದದ ಮೇಲೆ ಧಾಳಿ ಮಾಡಿ ಕೆಲವು ಪ್ರದೇಶಗಳನ್ನು ವಶಪಡಿಸಿಕೊಂಡನು.
- ಚೀನಾದ ಮೇಲೆ ಯುದ್ಧ : ಎರಡನೇ ಕ್ಯಾಡ್ಫೈಸಸ್ನು ಚೀನಾದ ಸೇನಾನಿ ಪಾನ್-ಚೌ ನಿಂದ ಸೋಲನ್ನು ಅನುಭವಿಸಿದ ಚೀನಾದ ಅರಸನಿಗೆ ವಾರ್ಷಿಕ ಕಪ್ಪ ಕಾಣಿಕೆಗಳನ್ನು ನೀಡಬೇಕಿತ್ತು. ಕಾನಿಷ್ಕನು ಕಪ್ಪ ಕಾಣಿಕೆಗಳನ್ನು ನಿಲ್ಲಿಸಿ ಚೀನಾದ ಮೇಲೆ ಧಾಳಿ ನಡೆಸಿದರೂ ಸಹ ಪಾನ್-ಚೌ ನಿಂದ ಪರಾಭವಗೊಂಡನು, ನಂತರದ ದಿನಗಳಲ್ಲಿ ಅಂದರೆ ಪಾನ್-ಚೌನ ಮರಣದ ನಂತರ ಆತನ ಮಗನಾದ ಪಾನ್ ಚಿಯಾಂಗ್ ಮೇಲೆ ಯುದ್ಧ ಸಾರಿ ವಿಜಯಿಯಾದನು. ಚೀನಾದ ಸಾಮ್ರಾಜ್ಯದಲ್ಲಿದ್ದ ಕಾಷ್ಗರ್, ಯಾರ್ಖಂಡ್ ಮತ್ತು ಕೋಥಾನ್ ಪ್ರಾಂತ್ಯಗಳನ್ನು ವಶಪಡಿಸಿಕೊಂಡು ಭಾರತೀಯ ಉಪಖಂಡದ ಹೊರಗೆ ಭೂಪ್ರದೇಶವನ್ನು ಹೊಂದಿದ ಮೊದಲ ಭಾರತೀಯ ಅರಸನಾಗಿದ್ದಾನೆ.
- ಕಾನಿಷ್ಕನು ಹಿಂದೂ ಧರ್ಮದ ಅನುಯಾಯಿಯಾಗಿದ್ದು, ಅಶ್ವಘೋಷನ ಪ್ರಬಂಧದಿಂದ ಬೌದ್ಧಧರ್ಮವನ್ನು ಸ್ವೀಕರಿಸಿ ಟಿಬೆಟ್, ಜಪಾನ್, ಮಧ್ಯ ಏಷ್ಯಾ ರಾಷ್ಟ್ರಗಳಿಗೆ ಬೌದ್ಧಧರ್ಮವು ಹರಡಲು ಕಾರಣೀಭೂತನಾದನು.
2. ಗಾಂಧಾರ ಕಲಾಶೈಲಿಯ ಪ್ರಮುಖ ಲಕ್ಷಣಗಳನ್ನು ವಿವರಿಸಿ.
- ಈ ಕಲಾಶೈಲಿಯನ್ನು ಅಳೆತ್ತರದ ಗೌತಮಬುದ್ಧನ ವಿಗ್ರಹಗಳನ್ನು ಕೆತ್ತಲಾಗಿದ್ದು ಅಲ್ಲಿಯವರಗೆ ಬುದ್ದನ ಅಸ್ಥಿತ್ವವನ್ನು ಕಮಲ, ಛತ್ರಿ ಮುಂತಾದ ಚಿಹ್ನೆಗಳಿಂದ ತೋರಿಸಲಾಗುತ್ತಿತ್ತು.
- ವಿಗ್ರಹಗಳನ್ನು ಕೆತ್ತುವಾಗ ದೇಹವಿನ್ಯಾಸದ ಅನುಪಾತದೊಂದಿಗೆ ಸ್ನಾಯುಗಳು, ಮೀಸೆ, ಮುಂತಾದವುಗಳಿಗೆ ಹೆಚ್ಚಿನ ಗಮನ ಹರಿಸಿ ಸ್ವಾಭಾವಿಕ ಜೋಡಣೆಯೊಂದಿಗೆ ಮೂಡಿಸಲಾಗಿದೆ.
- ಕಲಾ ಕೌಶಲ್ಯದಿಂದ ಕೂಡಿದ ಈ ಕಲೆಯ ನಮೂನೆಗಳಲ್ಲಿ ಬಟ್ಟೆಯ ಮಡಿಕೆಗಳು ಮತ್ತು ನೆರಿಗೆಗಳನ್ನು ತುಂಬಾ ಸೂಕ್ಷ್ಮ ಹಾಗೂ ಕಲಾತ್ಮಕವಾಗಿ ಪ್ರದರ್ಶಿಸಲಾಗಿದೆ.
- ವಿಗ್ರಹದ ಮೇಲಿನ ಆಭರಣಗಳ ಕೆತ್ತನೆಯ ಭೌತಿಕ ಸೌಂದರ್ಯವನ್ನು ವೃದ್ಧಿಸಿ ವಿಗ್ರಹಗಳಿಗೆ ಮೆರುಗು ನೀಡಿದೆ.
- ಬಹುತೇಕ ಈ ನಮೂನೆಗಳನ್ನು ಕಲ್ಲು, ಅರಚುಕಲ್ಲು ಮತ್ತು ಜೇಡಿಮಣ್ಣಿನಿಂದ ತಯಾರಿಸಲಾಗಿದೆ.
- ಈ ವಿಗ್ರಹಗಳಲ್ಲಿ ಬಳಸಲಾಗಿರುವ ತಾಂತ್ರಿಕತೆ ಗ್ರೀಕ್ ಶೈಲಿಯದ್ದಾದರೆ, ಅದರ ಆದರ್ಶ, ಸ್ಫೂರ್ತಿ ಮತ್ತು ವ್ಯಕ್ತಿತ್ವ ಎಲ್ಲವೂ ಭಾರತೀಯವಾದುದಾಗಿದೆ.
ಹೆಚ್ಚುವರಿ ಪ್ರಶ್ನೆಗಳು
1.ಕುಶಾನರ ಪರಿಚಯಿಸಿದ ಕಲೆ ಯಾವುದು?
ಗಾಂಧಾರ ಕಲೆ
2. ಕುಶಾನ ವಂಶದ 3ನೇ ಅರಸ ಯಾರು?
ಕಾನಿಷ್ಕ
3. ಕುಶಾನರು ಯಾವ ಜನಾಂಗಕ್ಕೆ ಸೇರಿದವರು?
ಯೂ.ಚಿ. ಎಂಬ ಅಲೆಮಾರಿ ಜನಾಂಗಕ್ಕೆ ಸೇರಿದವರು.
4. ಕಾನಿಷ್ಕಪುರದ ಇಂದಿನ ಹೆಸರೇನು?
ಶ್ರೀನಗರ
ನೆನಪಿನಲ್ಲಿಡಬೇಕಾದ ಅಂಶಗಳು:
- ಕುಶಾನರ ಪ್ರಸಿದ್ಧ ದೊರೆ ಕಾನಿಷ್ಕ.
- ಇವರ ಕಾಲದಲ್ಲಿ ಭಾರತದ ಕಲೆ ಮತ್ತು ವಾಸ್ತುಶಿಲ್ಪ ಪ್ರಸಿದ್ದಿಯಾಯಿತು.
- ಇವರು ಗಾಂಧಾರ ಕಲೆಯ ನಿರ್ಮಾತೃಗಳು.
- ಕಾನಿಷ್ಠನ ರಾಜಧಾನಿ ಪುರುಷಪುರವಾಗಿತ್ತು.