2nd Puc History 4.9 Nantarada Chalukyaru Mattu Hoysalaru Chapter Notes Question Answer Guide Extract Mcq Pdf Download in Kannada Medium Karnataka State Syllabus 2025 ದ್ವಿತೀಯ ಪಿಯುಸಿ ಇತಿಹಾಸ 4.9 ನಂತರದ ಚಾಲುಕ್ಯರು ಮತ್ತು ಹೊಯ್ಸಳರು ಪಾಠದ ನೋಟ್ಸ್ ಪ್ರಶ್ನೋತ್ತರಗಳು ಕನ್ನಡ ಮಾಧ್ಯಮ ಕರ್ನಾಟಕ kseeb solutions for class 12 history chapter 4.9 History Notes 12th Standard history 4.9 Lesson Question Answer ನಂತರದ ಚಾಲುಕ್ಯರು ಮತ್ತು ಹೊಯ್ಸಳರು ನೋಟ್ಸ್ ದ್ವಿತೀಯ ಪಿಯುಸಿ ಇತಿಹಾಸ ನೋಟ್ಸ್ 2nd PUC History Notes Pdf in Kannada Nantarada chalukyaru mattu hoysalaru history notes pdf download

I. ಈ ಕೆಳಗಿನ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಆರಿಸಿ ಬರೆಯಿರಿ .
1. ‘ವಿಕ್ರಮಶಕೆ’ ಪ್ರಾರಂಭವಾದುದು
ಎ) ಸಾ.ಶ. 1074
ಬಿ) ಸಾ.ಶ. 1075
ಸಿ) ಸಾ.ಶ. 1076
ಡಿ) ಸಾ.ಶ. 1073
2. ಹೊಯ್ಸಳರ ಅತ್ಯಂತ ಪ್ರಮುಖ ಅರಸ
ಎ) ಅಶೋಕ
ಬಿ) ಕಾನಿಷ್ಠ
ಸಿ) ವಿಷ್ಣುವರ್ಧನ
ಡಿ) ಅಮೋಘವರ್ಷ
3. ‘ಕವಿ ಚಕ್ರವರ್ತಿ’
ಎ) ಪೊನ್ನ
ಬಿ) ರನ್ನ
ಸಿ) ಜನ್ನ
ಡಿ) ಪಂಪ
4. ಕಲ್ಯಾಣೀ ಚಾಲುಕ್ಯರ ಸ್ಥಾಪಕ
ಎ) ಧ್ರುವ
ಬಿ) ಸಳ
ಸಿ) ಸತ್ಯಾಶ್ರಯ
ಡಿ) 2ನೇ ತೈಲಪ
5. ‘ವಿಕ್ರಮಶಕೆ’ ಪ್ರಾರಂಭಿಸಿದವರು
ಎ) ಅಶೋಕ
ಬಿ) ಧ್ರುವ
ಸಿ) ಚಂದ್ರಗುಪ್ತ
ಡಿ) 6ನೇ ವಿಕ್ರಮಾದಿತ್ಯ
6. ಹೊಯ್ಸಳರ ರಾಜಲಾಂಛನ
ಎ) ಗರುಡ
ಬಿ) ವರಾಹ
ಸಿ) ಸಳ ಹುಲಿಯನ್ನು ಕೊಲ್ಲುತ್ತಿರುವ ದೃಶ್ಯ
ಡಿ) ಸಿಂಹ
7. ಕಲ್ಯಾಣಿ ಚಾಲುಕ್ಯರ ಮೊದಲ ರಾಜಧಾನಿ
ಎ) ದ್ವಾರ ಸಮುದ್ರ
ಬಿ) ಕಂಚಿ
ಸಿ) ತಲಕಾಡು
ಡಿ) ಮಾನ್ಯಖೇಟ
II ಬಿಟ್ಟ ಸ್ಥಳ ತುಂಬಿರಿ
1.ತಲಕಾಡುಗೊಂಡ ಎಂಬುದಾಗಿ ಕರೆಯುತ್ತಿದ್ದ ರಾಜ ವಿಷ್ಣುವರ್ಧನ
2. ಲೋಕೋಪಕಾರ ಕೃತಿ ರಚಿಸಿದವರು 2ನೇ ಚಾವುಂಡರಾಯ
3. ಚಾಲುಕ್ಯರು ರಾಷ್ಟ್ರಕೂಟರ ಸಾಮಂತರಾಗಿದ್ದರು.
4. ನಯಸೇನನ ಪ್ರಸಿದ್ಧ ಕೃತಿ ಧರ್ಮಾಮೃತ
5. ಪಾರಮಾರರನ್ನು ಸೋಲಿಸಿದ ದೊರೆ 6ನೇ ವಿಕ್ರಮಾದಿತ್ಯ
6. ಕಲ್ಯಾಣಿಚಾಲುಕ್ಯರ ಸ್ಥಾಪಕ 2ನೇ ತೈಲಪ
7. ರನ್ನನ ಆಶ್ರಯದಾತ ಸತ್ಯಾಶ್ರಯ
8. ರನ್ನನ ಬಿರುದು ಕವಿ ಚಕ್ರವರ್ತಿ
9. ಹೊಯ್ಸಳ ರಾಜ್ಯದ ಸ್ಥಾಪಕ ಸಳ
10. ವಿಕ್ರಮಶಕ ಪ್ರಾರಂಭಿಸಿದವರು 6ನೇ ವಿಕ್ರಮಾದಿತ್ಯ
11. ವಿಕ್ರಮಶಕ ಆರಂಭವಾದ ವರ್ಷ 1076
12. ಹೊಯ್ಸಳರ ರಾಜಲಾಂಛನ ಸಳ ಹುಲಿಯನ್ನು ಕೊಲ್ಲುತ್ತಿರುವ ದೃಶ್ಯ
III ಹೊಂದಿಸಿ ಬರೆಯಿರಿ.
ಕ್ರಮ ಸಂಖ್ಯೆ | ಅ | ಆ | ಉತ್ತರಗಳು |
---|---|---|---|
1 | ವಿಕ್ರಮಶಕ | ಬೇಲೂರು | 1076 |
2 | ಬಿಲ್ಹಣ | ಕವಿಚಕ್ರವರ್ತಿ | ವಿಕ್ರಮಾಂಕದೇವಚರಿತ |
3 | ಕಲ್ಹಣ | ವಿಷ್ಣುವರ್ಧನ | ರಾಜತರಂಗಿಣಿ |
4 | ದ್ವಾರಸಮುದ್ರ | ಚಾವುಂಡರಾಯ | ಹೊಯ್ಸಳರ ರಾಜಧಾನಿ |
5 | ಸಳ | ರಾಜತರಂಗಿಣಿ | ಹೊಯ್ಸಳ ರಾಜ್ಯದ ಸ್ಥಾಪಕ |
6 | ರನ್ನ | ವಿಕ್ರಮಾಂಕದೇವಚರಿತ | ಕವಿಚಕ್ರವರ್ತಿ |
7 | 2ನೇ ತೈಲಪ | ಧರ್ಮಾಮೃತ | ಕಲ್ಯಾಣಿ ಚಾಲುಕ್ಯರ ಸ್ಥಾಪಕ |
8 | ತಲಕಾಡುಗೊಂಡ | ಬಿಟ್ಟಿದೇವ | ವಿಷ್ಣುವರ್ಧನ |
9 | ಲೋಕೋಪಕಾರ | 1076 | ಚಾವುಂಡರಾಯ |
10 | ವಿಷ್ಣುವರ್ಧನನ ಹೆಸರು | ಕಲ್ಯಾಣಿ ಚಾಲುಕ್ಯರ ಸ್ಥಾಪಕ | ಬಿಟ್ಟಿದೇವ |
11 | ನಯಸೇನ | ಹೊಯ್ಸಳರ ರಾಜಧಾನಿ | ಧರ್ಮಾಮೃತ |
12 | ಚೆನ್ನಕೇಶವ ದೇವಾಲಯ | ಹೊಯ್ಸಳ ರಾಜ್ಯದ ಸ್ಥಾಪಕ | ಬೇಲೂರು |
IV. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ:
1. ‘ವಿಕ್ರಮಶಕ’ವನ್ನು ಪ್ರಾರಂಭಿಸಿದವರು ಯಾರು?
6ನೇ ವಿಕ್ರಮಾದಿತ್ಯ (ಸಾ.ಶ. 1076)
2. ‘ಕವಿ ಚಕ್ರವರ್ತಿ’ ಎಂಬ ಬಿರುದು ಹೊಂದಿದವರು ಯಾರು?
ರನ್ನನು ‘ಕವಿ ಚಕ್ರವರ್ತಿ’ ಎಂಬ ಬಿರುದನ್ನು ಹೊಂದಿದ್ದನು.
3. ಹೊಯ್ಸಳ ರಾಜ್ಯದ ಸ್ಥಾಪಕ ಯಾರು?
ಸಳ
4. ಹೊಯ್ಸಳರ ರಾಜಲಾಂಛನ ಯಾವುದು?
ಸಳ ಹುಲಿಯನ್ನು ಕೊಲ್ಲುತ್ತಿರುವ ದೃಶ್ಯ.
5.ರನ್ನನ ಆಶ್ರಯದಾತ ಯಾರು?
ಸತ್ಯಾಶ್ರಯನು ರನ್ನನಿಗೆ ಆಶ್ರಯ ನೀಡಿದ್ದನು.
6. ಕಲ್ಯಾಣಿ ಚಾಲುಕ್ಯರ ಮೊದಲ ರಾಜಧಾನಿ ಯಾವುದು?
ಮಾನ್ಯಖೇಟ ಕಲ್ಯಾಣಿ ಚಾಲುಕ್ಯರ ಮೊದಲ ರಾಜಧಾನಿ.
7. ಕಲ್ಯಾಣಿ ಚಾಲುಕ್ಯರ ಸ್ಥಾಪಕ ಯಾರು?
ಕಲ್ಯಾಣಿ ಚಾಲುಕ್ಯರ ಸ್ಥಾಪಕ 2ನೇ ತೈಲಪ.
8. ವಿಷ್ಣುವರ್ಧನನ ಮತ್ತೊಂದು ಹೆಸರೇನು?
ಬಿಟ್ಟಿದೇವ
9. ವಿಕ್ರಮಾದಿತ್ಯನ ಉತ್ತರಾಧಿಕಾರಿ ಯಾರು?
3ನೇ ಸೋಮೇಶ್ವರ
10. ಚಾಲುಕ್ಯರ ಯಾರ ಸಾಮಂತರಾಗಿದ್ದರು?
ರಾಷ್ಟ್ರಕೂಟರು
V. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ 2 ಪದ ಅಥವಾ 2 ವಾಕ್ಯಗಳಲ್ಲಿ ಉತ್ತರಿಸಿ.
1.’ವಿಕ್ರಮ ಶಕ’ವನ್ನು ಯಾರು ಮತ್ತು ಯಾವಾಗ ಆರಂಭಿಸಿದರು?
‘ವಿಕ್ರಮ ಶಕ’ವನ್ನು 6ನೇ ವಿಕ್ರಮಾದಿತ್ಯ ಸಾ.ಶ. 1076ರಲ್ಲಿ ಆರಂಭಿಸಿದನು.
2. 6ನೇ ವಿಕ್ರಮಾದಿತ್ಯನಿಗಿದ್ದ ಯಾವುದಾದರೂ ಎರಡು ಬಿರುದುಗಳನ್ನು ಹೆಸರಿಸಿ.
‘ಪೆರ್ಮಾಡಿದೇವ’, ‘ತ್ರಿಭುವನ ಮಲ್ಲ.’
3. ರನ್ನನ ಯಾವುದಾದರೂ ಎರಡು ಕೃತಿಗಳನ್ನು ಹೆಸರಿಸಿ.
‘ಅಜಿತನಾಥ ಪುರಾಣ ಮತ್ತು ಸಾಹಸಭೀಮ ವಿಜಯ’ [ಗದಾಯುದ್ಧ).
4. 6ನೇ ವಿಕ್ರಮಾದಿತ್ಯನ ಆಸ್ಥಾನ ಕವಿ ಯಾರು? ಅವನ ಕೃತಿಯನ್ನು ಹೆಸರಿಸಿ.
ಬಿಲ್ಡಣ-ವಿಕ್ರಮಾಂಕದೇವ ಚರಿತಂ
5. ಹೊಯ್ಸಳರ ಯಾವುದಾದರೂ ಎರಡು ರಾಜಧಾನಿಗಳನ್ನು ಹೆಸರಿಸಿ.
ದ್ವಾರಸಮುದ್ರ, ಬೇಲೂರು.
6. ವಿಷ್ಣುವರ್ಧನ ಯಾವುದಾದರೂ ಎರಡು ಬಿರುದುಗಳನ್ನು
‘ಮಹಾಮಂಡಲೇಶ್ವರ, ಮಲೆಪೆರೊಳ್ಗಂಡ.
7. ಹೊಯ್ಸಳರ ಯಾವುದಾದರೂ ಎರಡು ಪ್ರಸಿದ್ಧ ದೇವಾಲಯಗಳನ್ನು ಹೆಸರಿಸಿ.
ಬೇಲೂರಿನ ಚೆನ್ನಕೇಶವ ದೇವಾಲಯ, ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ.
VI. ಈ ಕೆಳಗಿನ ಪ್ರಶ್ನೆಗೆ 15-20 ವಾಕ್ಯಗಳಲ್ಲಿ ಉತ್ತರಿಸಿ:
1. ಕಲ್ಯಾಣದ ಚಾಲುಕ್ಯರ ಸಾಂಸ್ಕೃತಿಕ ಕೊಡುಗೆಗಳನ್ನು ವಿವರಿಸಿ.
ಕಲ್ಯಾಣದ ಚಾಲುಕ್ಯರು, ಬಾದಾಮಿ ಚಾಲುಕ್ಯರ ಮಹಾನ್ ಪರಂಪರೆಯನ್ನು ಅನುಸರಿಸಿ ಕರ್ನಾಟಕದ ಸಂಸ್ಕೃತಿಗೆ ಮಹತ್ತರ ಕೊಡುಗೆ ನೀಡಿದ್ದಾರೆ.
- ಸಾಹಿತ್ಯ: ಇವರ ಕಾಲದಲ್ಲಿ ಕನ್ನಡ ಮತ್ತು ಸಂಸ್ಕೃತ ಸಾಹಿತ್ಯ ಅಭಿವೃದ್ಧಿ ಹೊಂದಿತು. ಜೈನ ಬರಹಗಾರರು ಕನ್ನಡದಲ್ಲಿ ಪಾಂಡಿತ್ಯಪೂರ್ಣ ಸಾಹಿತ್ಯವನ್ನು ರಚಿಸಿದರು. ಕನ್ನಡದ ಪ್ರಸಿದ್ಧ ಕವಿ ರನ್ನನು ಅಜಿತನಾಥ ಪುರಾಣ, ಸಾಹಸಭೀಮ ವಿಜಯಂಗಳನ್ನು ರಚಿಸಿ ‘ಕವಿ ಚಕ್ರವರ್ತಿ’ ಎಂದೆನಿಸಿ ಕೊಂಡಿದ್ದನು. 2ನೇ ಚಾವುಂಡರಾಯನು ಖಗೋಳಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ಶಿಲ್ಪಶಾಸ್ತ್ರಕ್ಕೆ ಮತ್ತು ವೈದ್ಯಕೀಯ ಶಾಸ್ತ್ರಕ್ಕೆ ಸಂಬಂಧಿಸಿದ ‘ಲೋಕೋಪಕಾರ’ ಎಂಬ ಕೃತಿಯನ್ನು ರಚಿಸಿದನು. ಶ್ರೀಧರಾಚಾರ್ಯನ ಜಾತಕತಿಲಕ, ಬಿಲ್ದಣನ ವಿಕ್ರಮಾಂಕದೇವಚರಿತಂ, ದುರ್ಗಸಿಂಹನ ಪಂಚತಂತ್ರ, ಚಂದ್ರರಾಜನ-ಮದನತಿಲಕ, ಶಾಂತಿನಾಥನ-ಸುಕುಮಾರ ಚರಿತ, ಕೀರ್ತಿವರ್ಮನ-ಗೋವೈದ್ಯ, ನಯಸೇನನ-ಧರ್ಮಾಮೃತ, ವಿಜ್ಞಾನೇಶ್ವರನ-ಮಿತಾಕ್ಷರ ಸಂಹಿತೆ ಮೊದಲಾದವು ಇವರ ಕಾಲದ ಪ್ರಮುಖ ಕೃತಿಗಳು.
- ಕಲೆ ಮತ್ತು ವಾಸ್ತುಶಿಲ್ಪ: ಇವರ ಕಾಲದ ಪ್ರಮುಖ ದೇವಾಲಯಗಳೆಂದರೆ ಕುಕ್ಕನೂರು ಕಲ್ಲೇಶ್ವರ, ಅಬ್ಬಲೂರು-ಬ್ರಹ್ಮಶ್ವರ, ಕುರುವತ್ತಿ ಮಲ್ಲಿಕಾರ್ಜುನ, ಹಾವೇರಿ ಸಿದ್ದೇಶ್ವರ, ಹಿರೇಹಡಗಲಿ ಕಲ್ಲೇಶ್ವರ, ಹಾನಗಲ್ಲು ತಾರಕೇಶ್ವರ, ಇಟಗಿಂತು ಮಹಾದೇವ ದೇವಾಲಯ ಪ್ರಮುಖವಾದವು. 6ನೇ ವಿಕ್ರಮಾದಿತ್ಯನ ರಾಣಿ ಚಂದ್ರಲೇಖ ನೃತ್ಯ, ಸಂಗೀತ, ಲಲಿತ ಕಲೆಗಳಲ್ಲಿ ಪ್ರವೀಣೆಯಾಗಿದ್ದಳು.
2. ವಿಷ್ಣುವರ್ಧನನ ಸಾಧನೆಗಳನ್ನು ವಿವರಿಸಿ.
ಈತ ಹೊಯ್ಸಳರಲ್ಲೇ ಪ್ರಖ್ಯಾತದೊರೆ. ಇವನು ತನ್ನ ಅಣ್ಣಾ ಬಲ್ಲಾಳನ ಅವಧಿಯಲ್ಲೇ ಅನೇಕ ಯುದ್ಧಗಳಲ್ಲಿ ಭಾಗವಹಿಸಿ ನಂಜನಗೂಡಿನ ಪ್ರಾಂತ್ಯಾಧಿಕಾರಿಯಾಗಿ ಅನುಭವ ಪಡೆದಿದ್ದನು. ಸಾ.ಶ. 1114ರ ತಲಕಾಡು ಯುದ್ಧದಲ್ಲಿ ಚೋಳರನ್ನು ಸೋಲಿಸಿ ಗಂಗವಾಡಿಯಿಂದ ಹೊರಹಾಕಿ ‘ತಲಕಾಡು ಗೊಂಡ’ ಎಂಬ ಬಿರುದು ಧರಿಸಿದನು. ಈ ದಿಗ್ವಿಜಯದ ನೆನಪಿಗಾಗಿ ಬೇಲೂರಿನಲ್ಲಿ ಚೆನ್ನಕೇಶವ ದೇವಾಲಯ, ತಲಕಾಡಿನಲ್ಲಿ ಕೀರ್ತಿನಾರಾಯಣ ದೇವಾಲಯಗಳನ್ನು ನಿರ್ಮಿಸಿದನು.
- ಕೊಂಗು, ನಂಗಲಿ, ನೊಳಂಬವಾಡಿ ಮತ್ತು ಹಾನಗಲ್ಲುಗಳನ್ನು ಜಯಿಸಿದನು.
- ಕೋಲಾರದಿಂದ ಚೋಳರನ್ನು ಹೊರಹಾಕಿದನು. ನಂತರ ಚೋಳರನ್ನು ಕಂಚಿಯವರೆಗೆ ಅಟ್ಟಿ ‘ಕಂಚಿಕೊಂಡ’ ಎಂಬ ಬಿರುದು ಧರಿಸಿದನು.
- ಮಧುರೈಯ ಮೇಲೆ ಧಾಳಿ ಮಾಡಿ ಪಾಂಡ್ಯರನ್ನು ಸೋಲಿಸಿದನು.
- ಉಚ್ಚಂಗಿ ಪಾಂಡ್ಯರನ್ನು ರಾಮೇಶ್ವರದವರೆಗೂ ಮುಂದುವರೆದನು. ಸೋಲಿಸಿ
- ಕೊಂಗಾಳ್ವದ ಅರಸ ತನ್ನ ಮಗಳಾದ ಚಂದಲಾ ದೇವಿಯನ್ನು ವಿಷ್ಣುವರ್ಧನನಿಗೆ ಮದುವೆ ಮಾಡಿಕೊಟ್ಟನು.
- ಕಲ್ಯಾಣಿ ಚಾಲುಕ್ಯರ ಪ್ರಭುತ್ವವನ್ನು ಕಿತ್ತೊಗೆಯಲು ಪ್ರಯತ್ನಿಸಿ 6ನೇ ವಿಕ್ರಮಾದಿತ್ಯನಿಂದ ಸೋಲನ್ನು ಅನುಭವಿಸಿದನು.
- 6ನೇ ವಿಕ್ರಮಾದಿತ್ಯನ ಉತ್ತರಾಧಿಕಾರಿ ಸೋಮೇಶ್ವರನ ಮರಣದ ನಂತರ ತುಂಗಭದ್ರಾ ನದಿಯವರೆಗೆ ದಂಡೆತ್ತಿ ಹೊರಟು ಹಾನಗಲ್ಲು, ಉಚ್ಚಂಗಿ, ಬಂಕಾಪುರ, ಬನವಾಸಿ, ಲಕ್ಕುಂಡಿಯನ್ನು ಜಯಿಸಿ ಸಾ.ಶ. 1153ರಲ್ಲಿ ಮರಣ ಹೊಂದಿದನು.
3. ಹೊಯ್ಸಳರ ಧಾರ್ಮಿಕ ಮತ್ತು ಸಾಹಿತ್ಯ ಕೊಡುಗೆಗಳನ್ನು ನಿರೂಪಿಸಿ.
- ಧರ್ಮ: ಹೊಯ್ಸಳರು ಶೈವ, ಜೈನ, ವೈಷ್ಣವ ಧರ್ಮಗಳನ್ನು ಘೋಷಿಸಿದರು. ಬಿಟ್ಟದೇವ [ವಿಷ್ಣುವರ್ಧನ] ಜೈನನಗಿದ್ದು ರಾಮಾನುಜರ ಪ್ರಭಾವದಿಂದ ವೈಷ್ಣವ ಧರ್ಮಕ್ಕೆ ಮತಾಂತರಗೊಂಡನು
- ಸಾಹಿತ್ಯ : ಹೊಯ್ಸಳರ ಕಾಲದಲ್ಲಿ ಕನ್ನಡ ಮತ್ತು ಸಂಸ್ಕೃತ ಸಾಹಿತ್ಯಗಳ ಬೆಳೆದವು. ಕನ್ನಡದಲ್ಲಿ ನಾಗಚಂದ್ರ. ಮಲ್ಲಿನಾಥಪುರಾಣ, ರಾಮಚಂದ್ರ ಚರಿತ ಪುರಾಣ ಮತ್ತು ಪಂಪ ರಾಮಾಯಣ. ರಾಜಾದಿತ್ಯ-ಕ್ಷೇತ್ರಗಣಿತ, ವ್ಯವಹಾರ ಗಣಿತ ಮತ್ತು ಲೀಲಾವತಿ, ನಯಸೇನ, ಧರ್ಮಾಮೃತ. ರಾಘವಾಂಕ, ಹರಿಶ್ಚಂದ್ರಕಾವ್ಯ, ಸಿದ್ದರಾಮ ಪುರಾಣ, ಹರಿಹರ-ಗಿರಿಜಾ ಕಲ್ಯಾಣ, ಪಂಪಶತಕ, ಶಿವಾಕ್ತರಮಾಲೆ, ಜನ್ನ-ಯಶೋಧರ ಚರಿತೆ ಮತ್ತು ಅಮರನಾಥ ಪುರಾಣ. ಕೇಶೀರಾಜ ಶಬ್ದಮಣಿದರ್ಪಣ ರಚಿಸಿದರು. ಸಂಸ್ಕೃತದಲ್ಲಿ ತ್ರಿವಿಕ್ರಮಪಂಡಿತ, ಉಷಾಹರಣ, ನಾರಾಯಣ ಪಂಡಿತ, ಮಾಧವ ವಿಜಯ ಮತ್ತು ಮಣಿಮಂಜರಿ, 3ನೇ ಸಕಲ ವಿದ್ಯಾಚಕ್ರವರ್ತಿ ರುಕ್ಕಿಣಿ ಕಲ್ಯಾಣಗಳನ್ನು ರಚಿಸಿದರು.
4. ಹೊಯ್ಸಳ ವಾಸ್ತುಶೈಲಿಯ ಪ್ರಮುಖ ಲಕ್ಷಣಗಳನ್ನು ವಿವರಿಸಿ.
- ನಕ್ಷತ್ರಾಕಾರದ ತಳಪಾಯ.
- ಸುಮಾರು ನಾಲ್ಕು ಅಡಿ ಎತ್ತರದ ನಕ್ಷತ್ರಾಕಾರದ ಜಗತಿ.
- ದೇವಾಲಯದ ಸುತ್ತಲಿರುವ ಜಗತಿ ತೆರೆದ ಪ್ರದಕ್ಷಿಣ ಪಥವಾಗಿದೆ.
- ವೈವಿಧ್ಯಮಯ ರಚನೆ / ವಿನ್ಯಾಸಗಳನ್ನೊಳಗೊಂಡ ನುಣುಪಾದ ಕಂಬಗಳು.
- ವಿಸ್ತ್ರತ ಕೆತ್ತನೆ ಮತ್ತು ಸುಂದರವಾಗಿ ಕೆತ್ತಿರುವ ಮದನಿಕೆಯರ ವಿಗ್ರಹಗಳು.
- ವಿಶಾಲವಾದ ನವರಂಗ [ಮಧ್ಯ]
- ಭುವನೇಶ್ವರಿ [ಕೆತ್ತನೆಗಳನ್ನೊಳಗೊಂಡ ಮೇಲ್ಟಾವಣಿ]
- ಪಿರಮಿಡ್ಡಿನಾಕೃತಿಯಲ್ಲಿರುವ ವಿಮಾನ [ಶಿಖರ]
- ಒಂದರಿಂದ ಐದು ಗರ್ಭಗೃಹಗಳು [ಏಕಕೂಟ, ದ್ವಿಕೂಟ, ತ್ರಿಕೂಟ, ಚತುಷ್ಟೂಟ, ಪಂಚಕೂಟ]
ಹೆಚ್ಚುವರಿ ಪ್ರಶ್ನೆಗಳು:
1.ಚಾಲುಕ್ಯರು ಯಾರ ಸಾಮಂತರಾಗಿದ್ದರು?
ರಾಷ್ಟ್ರಕೂಟರ ಸಾಮಂತರಾಗಿದ್ದರು.
2. ವಿಕ್ರಮಾದಿತ್ಯನ ಉತ್ತರಾಧಿಕಾರಿ ಯಾರು?
3ನೇ ಸೋಮೇಶ್ವರ
3. ಪಾರಮಾರರನ್ನು ಸೋಲಿಸಿದ ದೊರೆ ಯಾರು?
6ನೇ ವಿಕ್ರಮಾದಿತ್ಯ
4.’ನಯಸೇನನ’ ಪ್ರಸಿದ್ಧ ಕೃತಿ ಯಾವುದು?
ಧರ್ಮಾಮೃತ
5. ವಿಷ್ಣುವರ್ಧನನ ಮತ್ತೊಂದು ಹೆಸರೇನು?
ಬಿಟ್ಟಿದೇವ
6. ‘ಲೋಕೋಪಕಾರ’ ಎಂಬ ಕೃತಿಯನ್ನು ರಚಿಸಿದವರಾರು?
2ನೇ ಚಾವುಂಡರಾಯ
7. ಜಗದೇಕಮಲ್ಲನ ಗುರು ಯಾರು?
2ನೇ ನಾಗವರ್ಮ
8. ‘ತಲಕಾಡುಗೊಂಡ’ ಎಂದು ಯಾರನ್ನು ಕರೆಯಲಾಗಿದೆ?
ವಿಷ್ಣುವರ್ಧನ
ನೆನಪಿನಲ್ಲಿಡಬೇಕಾದ ಅಂಶಗಳು:
- ಚಾಲುಕ್ಯರು ರಾಷ್ಟ್ರಕೂಟರ ಸಾಮಂತರಾಗಿದ್ದರು.
- ಕುಲೋತ್ತುಂಗ ಚೋಳರ ಪ್ರಯತ್ನವನ್ನು ವಿಫಲಗೊಳಿಸಿದನು.
- ಸಾಶ. 1076ರಲ್ಲಿ ‘ವಿಕ್ರಮ ಶಕೆ’ ಎಂಬ ಹೊಸ ಶಕೆಯನ್ನು ಆರಂಭಿಸಿದನು.
- ವಿಷ್ಣುವರ್ಧನ ಹೊಯ್ಸಳರಲ್ಲಿ ಅತ್ಯಂತ ಪ್ರಮುಖ ಅರಸನಾಗಿದ್ದನು.