ದ್ವಿತೀಯ ಪಿಯುಸಿ ಕನ್ನಡ ಶಬ್ದಾರ್ಥಗಳು | 2nd Puc Kannada Shabdarthagalu

ದ್ವಿತೀಯ ಪಿಯುಸಿ ಕನ್ನಡ ಶಬ್ದಾರ್ಥಗಳು, 2nd Puc Kannada Shabdarthagalu 2nd puc kannada grammar Shabdarthagalu 2nd puc kannada Shabdarthagalu Pdf 2nd Puc Kannada Shabdarthagalu pdf Download 2nd puc kannada shabdarthagalu in kannada ಕನ್ನಡ ಶಬ್ದಾರ್ಥಗಳು ದ್ವಿತೀಯ ಪಿಯುಸಿ ಕನ್ನಡ ನೋಟ್ಸ್ Kannada 2nd PUC Notes PDF Download 2nd puc kannada notes ಶಬ್ದಕೋಶಗಳು ದ್ವಿತೀಯ ಪಿಯುಸಿ ಕನ್ನಡ ನೋಟ್ಸ್ Kannada 2nd PUC Notes PDF Download shabdarth in kannada kannada shabdartha ಕನ್ನಡ shabdakosha ಕನ್ನಡ to ಕನ್ನಡ dictionary ಕನ್ನಡ ಪದಗಳ ಅರ್ಥ pdf

೯. ಶಬ್ದಾರ್ಥಗಳು

Shabdarthagalu

ಪದ್ಯಭಾಗ

೧. ಕದಡಿದ ಸಲಿಲಂ ತಿಳಿವಂದದೆ

ಪೊಸಗಾರ್‌ – ಮುಂಗಾರಿನ; ಮಸಕ – ಆವೇಶ, ಆರ್ಭಟಗಳು; ಅಸಕವೆ – ಮೀರು; ಕೃತಾಂತ – ಯಮ; ಪೊಡಕರಿಸು – ಅಲ್ಲಾಡು, ಸ್ಫುರಿಸು, ಕಾಣು; ಬೆಸಸು – ಆಜ್ಞಾಪಿಸು; ಕರಂ – ಕೈಯನ್ನು; ಆರ್ವಿಸಿ – ವ್ಯಾಪಿಸಿ, ಹರಡಿ; ಸನ್ನಿದ – ಸಮೀಪ, ಪ್ರತ್ಯಕ್ಷ; ಸನ್ನಿಹಿತೆಯಾಗಿ – ಪ್ರತ್ಯಕ್ಷಗೊಂಡು; ಲಕ್ಷ್ಮೀಧರ – ಲಕ್ಷ್ಮಣ; ರಾಮಸ್ವಾಮಿ – ರಾಮ; ಅಳಿವು – ನಾಶ; ವೊಡೆವಟ್ಟು – ನಮಸ್ಕರಿಸಿ; ಸೂಟ್ – ಮೂರು ಭಾರಿ; ಪೊಜಿಮಟ್ಟು – ಹೊರಬಂದು; ಬೀಡು – ಪಾಳೆಯ; ಪುಗುವುದುಂ – ಪ್ರವೇಶಿಸಿದರು; ಕೊಬಿಚಾಡು – ನಿಂದಿಸು, ಕೀಳು ಮಾಡು; ಆನನ – ಮುಖ; ಉದ್ವೃತ್ತ – ಸೊಕ್ಕಿದ, ಕೊಬ್ಬಿದ; ಪೊಯ್ವೆತ್ತ – ಏಟುತಿಂದ; ಇಭವೈರಿ – ಸಿಂಹ; ಮುಳಿಸು – ಕೋಪ; ಮಯತನೂಜೆ – ಮಂಡೋದರಿ; ವಕ್ತ್ರ– ಮುಖ; ಭಂಗ – ತೊಂದರೆ; ಭ್ರೂಭಂಗ – ಹುಬ್ಬುಗಂಟಿಕ್ಕು, ಭೂಭ್ರಕುಟ; ಪರಿಭವಿಸು – ತಿರಸ್ಕರಿಸು, ಅವಮಾನಿಸು, ಸೋಲಿಸು; ನಿರ್ವರ್ತಿತ – ಪೂರೈಸಿದ; ಆರೋಗಿಸು – ಸೇವಿಸು; ಬಹುರೂಪಿಣಿ – ವಿದ್ಯಾದೇವತೆ; ಇದಿರ್ಚು – ಎದುರಿಸು; ಸಮರ – ಯುದ್ಧ; ಭುಜದಂಡ – ನೀಳ ಬಾಹುಗಳು; ಜಾನಕಿ – ಸೀತೆ; ಅವಲೋಕಿಸು – ಕಾಣಲು, ನೋಡಲು; ಕರಮೆ – ತುಂಬ; ಕಾತರ – ತವಕ; ವಿಯಚ್ಚರಾಧಿಪ – ರಾವಣ; ಆರಲಂಬು – ಪುಷ್ಪಬಾಣ; ಕಾಮನೆಂಬಿನಂ – ಮನ್ಮಥನಂತೆ; ಭೋಂಕನೆ – ಒಮ್ಮೆಲೆ, ಕೂಡಲೆ; ಬರ್ಪ – ಬರುತ್ತಿರುವ; ಗಂಡಗಾಡಿ – ಪೌರುಷದ ಬೆಡಗು; ಕೆಲ – ಪಕ್ಕ; ಖಚರ ಕಾಂತೆಯರ್ – ರಾಕ್ಷಸ ಪತ್ನಿಯರು/ರಾಕ್ಷಸ ಸ್ತ್ರೀಯರು; ತೃಣಕಲ್ಪ – ಹುಲ್ಲಿಗೆ ಸಮಾನ; ಸದ್ಭಾವ – ಒಳ್ಳೆಯ ಭಾವನೆ, ಅಭಿಪ್ರಾಯ; ಒಳಕೊಂಡಪುಣ್ಯವತಿ – ಸೀತೆ; ಪೊಲ್ಲವಾರ್ತೆ – ಕೆಟ್ಟಸುದ್ದಿ; ನಳಿನಾನನೆ – ಸೀತೆ; ಮಾನಿನಿ – ಹೆಣ್ಣು, ಸೀತೆ; ಎಯ್ದೆಂದು – ಸಮೀಪಿಸಿ; ಮಲುವಕ್ಕ – ಪ್ರತಿಪಕ್ಷ; ಒಡಂಬಟ್ಟು – ಒಪ್ಪಿಕೊಂಡು; ವಿಹ್ವಲ – ದುಃಖ; ಚಿತ್ರ – ಮನಸ್ಸು; ಧುರ – ಯುದ್ಧ; ಧರಿತ್ರಿ – ಭೂಮಿ; ಅಚಿವಂ – ನಾಶವು; ಅನುಕಂಪ – ಕರುಣೆ; ದುರಘ – ಕೆಟ್ಟಪಾಪ; ಕದಡಿದ – ಕಲಕಿಹೋದ; ಸಲಿಲ – ನೀರು; ತಿಳಿವಂದದೆ – ತಿಳಿಯಾಗುವಂತೆ; ಉದಾತ್ತರೊಳ್ – ಶ್ರೇಷ್ಠರಾದವರಲ್ಲಿ; ಪುಟ್ಟದಲ್ತೆ – ಹುಟ್ಟುವುದಿಲ್ಲವೇ?; ಪತ್ತುವಿಡು – ಕಳಚಿಕೊಳ್ಳು; ಪತ್ತು – ಅಂಟು, ಸೇರು; ಅಳಿವು – ಮೋಹಕ್ಕೆ ಸಿಲುಕು; ಪೊಲ್ಲೆನಿಪುದು– ಕೆಟ್ಟದ್ದೆನಿಸುವುದು; ಅನುರಕ್ತಿ – ಪ್ರೀತಿ; ಕರ್ಚಿಕಳೆ – ತೊಳೆದು ಹಾಕು; ಸ್ವಕೀಯ – ತನ್ನ; ಪರಿಷಜ್ಜನ – ಆಪ್ತವರ್ಗದವರಿಗೆ; ಒಲ್ಲದೆ – ಬಯಸದೆ; ಅಪೇಕ್ಷಿಸುವೆನೇ – ಬಯಸುವೆನೇ; ನೆವ – ನೆಪ; ಕಂದರ್ಪವಿಮೋಹ– ಕಾಮಾಸಕ್ತಿ; ಅಗಲಿದೆ – ಆಗಲುವಂತೆ ಮಾಡಿದೆ; ಪೆಂಪು – ಹಿರಿಮೆ; ದುರ್ – ಕೆಟ್ಟ; ಪಟಹ – ಭೇರಿ; ರವ – ಶಬ್ದ; ಗಜಪೆ – ಬೆದರಿಸು; ಗರ್ಜಿಸಿ – ಹೆದರಿಸಿ; ಅನುಜಾತ – ಒಡಹುಟ್ಟಿದವನು; ಅವನೀತ – ಸೌಜನ್ಯವಂತ, ವಿಧೇಯ ಭಾವದ; ಆಚೆಯಟ್ಟು – ಹೊಡೆದೋಡಿಸು; ದುರ್ವ್ಯಸನಿ – ಕಟ್ಟಚಟಗಾರ; ಅಹಿತ – ಕಟ್ಟಿದ್ದು; ಪರಾಭವ – ಸೋಲು; ಪತ್ತುಗೆ – ಸಂಪರ್ಕ; ಮಾನಸಿಕೆ – ಮನಃಸ್ಥಿತಿ; ಬನ್ನ – ಭಂಗ; ಸುಹೃಜ್ಜನ – ಸಹೃದಯ ಜನ; ಬೇವಸಮಂ – ಚಿಂತೆ, ದುಃಖ; ಬೆಸನಿ – ಕೆಟ್ಟ ಚಟಗಳನ್ನುಳ್ಳವ; ಉದ್ವೇಗಪರ – ಆವೇಶದಿಂದ, ತಳಮಳದಿಂದ; ಆತ್ಮಗತದೊಳೆ – ಮನಸ್ಸಿನಲ್ಲೇ; ಆಯ್ದು – ಒಯ್ದು; ಕಡುಪುಂ – ಪರಾಕ್ರಮ; ಕಟ್ಟಾಯ – ಅಧಿಕ ಸಾಮರ್ಥ್ಯ; ಬೀಸರ – ವ್ಯರ್ಥ; ಓಸರಿಸು – ಓರೆಯಾಗಿಸು, ಬದಿಗೆ ಸರಿಸು; ದೋರ್ಗವ್ರ – ಬಾಹುಬಲದ ಹಮ್ಮು; ಇರ್ವಲಂ – ಎರಡೂ ಸೈನ್ಯ.

೨. ವಚನಗಳು

(ಅ) ಬಸವಣ್ಣನವರ ವಚನಗಳು

ತನು – ದೇಹ; ಸೋಂಕು – ಮುಟ್ಟು, ತಗಲು, ಸ್ಪರ್ಶಿಸು; ಪುಳಕ – ರೋಮಾಂಚನ; ಅಶ್ರುಜಲ – ಕಣ್ಣೀರು; ಪೊಣ್ಣು– ಹೊಮ್ಮು; ಚಿಹ್ನೆ – ಸಂಕೇತ; ಡಂಬಕ – ದೃಢಭಕ್ತಿಯಿಲ್ಲದವನು; ಅರ್ಥ – ಹಣ, ಸಂಪತ್ತು; ಫಲ – ಪ್ರಯೋಜನ; ಅಂಧಕ – ಕುರುಡ; ದರ್ಪಣ– ಕನ್ನಡಿ; ಮರ್ಕಟ – ಮಂಗ; ಮಾಣಿಕ – ಮಾಣಿಕ್ಕ; ಅರಿಯದನ್ನಕ್ಕ – ಅರಿತುಕೊಳ್ಳುವವರೆಗೆ; ಧರೆ – ಭೂಮಿ; ಉಂಬು – ತಿನ್ನು ಸೇವಿಸು; ಕೆಯ್ಯ – ಬೆಳೆ; ನಾರಿ – ಹೆಣ್ಣು, ಗೃಹಿಣಿ; ನಂಜು – ವಿಷ.

(ಆ) ಉರಿಲಿಂಗಪೆದ್ದಿಯ ವಚನಗಳು

ಸಕಲ – ಸಮಗ್ರವಾದುದು, ಪರಿಪೂರ್ಣವುಳ್ಳದ್ದು; ನಿಷ್ಕಲ – ನಿರಾಕಾರವಾದ, ಅಂಖಡವಾದ, ಕಲಾರಹಿತವಾದ; ಮಹಾಘನ – ಅತಿಶ್ರೇಷ್ಠವಾದ, ಉನ್ನತವಾದ; ನಿರಾಳ – ಚಿಂತೆಯಿಲ್ಲದ; ಗೃಹ– ಮನೆ; ತಿರಿ – ಬೇಡು; ತೊರೆ – ನದಿ; ತೃಷೆ – ಬಾಯಾರಿಕೆ; ಉದಕ – ನೀರು; ಲಘು – ಸಣ್ಣದು; ಗುರು– ದೊಡ್ಡದು, ಬೋಧಕ.

೩. ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು

ಉಸುರು – ಹೇಳು; ಸಾರು – ಹತ್ತಿರ ಬರು, ಸಮೀಪಿಸು; ಒರಲು – ಕೂಗಿ ಹೇಳು; ನವೆ – ನರಳು; ಹೊಯ್ದು – ಹೊಡೆದುಕೊಂಡು; ಯಮಸುತ – ಧರ್ಮರಾಯ; ಶಶಿವದನೆ – ದ್ರೌಪದಿ; ಗರ – ಗ್ರಹ, ದೆವ್ವ; ಭ್ರಮಿತ – ಭ್ರಮೆಗೆ ಸಿಲುಕಿದ, ಕಂಗೆಟ್ಟ; ಪಾರ್ಥ – ಅರ್ಜುನ; ಅಕ್ಷಮರು – ಅಸಮರ್ಥರು; ನಾಯ – ನಾಯಿಯನ್ನು; ರಮಣರು – ಪತಿಗಳು; ಮಿಡುಕುಳ್ಳ – ಮಿಡಿಯುವವನು; ಹರಿಬ – ಕಾರ್ಯ, ಪಾಲನೆ, ಸಂಕಷ್ಟ, ತೊಂದರೆ; ಅಂಗೈಸು – ಕಾಳಜಿ ತೋರು; ಹೀಹಾಳಿ – ಸ್ವಾಭಿಮಾನದ ಜಿದ್ದು; ಹುರುಳು – ಕಚ್ಚು, ಸಾಮರ್ಥ್ಯ; ಖುಲ್ಲ – ದುಷ್ಟ, ಕ್ಷುಲ್ಲಕ; ಮೋರೆ – ಮುಖ; ಮಬ್ಬು – ಕಳಾಹೀನತೆ (ಸಪ್ಪಗಿನ ಮುಖ); ಸಾಮ – ಸಮಾಧಾನ, ತಾಳ್ಮೆ; ತುಬ್ಬುವುದೋ – ಆರಿಯುವುದೋ; ನಿಬ್ಬರವು – ಆಕಾಲಿಕ ಆಗಮನ, ಬರವಲ್ಲದ ಬರವು; ವಲ್ಲಭ – ಗಂಡ, ನಲ್ಲ, ಒಡೆಯ; ಅಪ್ರತಿಮಲ್ಲ – ಸರಿಸಾಟಿಯಿಲ್ಲದ ಜಟ್ಟಿ, ಧೀರ, ಭೀಮ; ಪಾಂಚಾಲನಂದನೆ – ದ್ರೌಪದಿ; ವಲ್ಲಭೆ – ಪ್ರಿಯೆ, ಪತ್ನಿ; ತಲ್ಲಣ – ಹೆದರಿಕೆ, ಕಳವಳ; ಲತಾಂಗಿ – ದ್ರೌಪದಿ; ತಳವು – ತಡ; ಅರೆಯಟ್ಟಿ – ಬೆನ್ನಟ್ಟಿ; ವಂದಿಗರು – ಜತೆಯವರು; ಪರಿಭವ – ಅವಮಾನ, ಅನಾದರ; ಪಾತಕ – ಪಾಪ; ಖತಿ – ಕೋಪ; ಮಾಣದು – ಬಿಡದು; ಮಾನಾರ್ಥ – ಮಾನದ ವಿಷಯ; ಸಮತೆ – ಶಾಂತಸ್ಥಿತಿ; ಕುಠಾರ – ಕ್ರೂರ, ಕೊಡಲಿ; ಹಳಿವು – ಕೆಟ್ಟಮಾತು; ಹೊರೆ – ಜೊತೆ, ಪಕ್ಕ; ಹರಿಬ – ಕರ್ತವ್ಯ, ರಕ್ಷಣೆ; ಕುಜನ – ಕೆಟ್ಟಜನ; ಕಣ್ಣಿ – ಬಂಧನ, ಹಗ್ಗದ ಗಂಟು; ನವೆ – ನರಳು; ಭಂಗಿತರು – ಅವಮಾನಕ್ಕೊಳಗಾದವರು; ಬಸವಳಿ – ಬಳಲು; ಭಂಗ – ಅವಮಾನ; ಕಾಲ – ಯಮ; ಎಚ್ಚಾಳುತನ – ಬಿಲ್ವಿದ್ಯಾ ಜಾಣ್ಮೆ; ತೋಳಹೊರೆ – ತೋಳಬಲ; ಘನತೆ – ಗುರುತ್ವ; ಉಬ್ಬರಿಸು – ಹೆಚ್ಚಾಗಿ; ಮಾನಿನಿ – ಹೆಣ್ಣು, ದ್ರೌಪದಿ; ಹಿಂಡು – ತಿರುಚಿಕೊಲ್ಲು; ಮುಂಡಾಡು – ಮುದ್ದುಮಾಡು; ಹೊರೆ – ಸಮೀಪ, ಬಳಿಯಲ್ಲಿ; ಗಿಂಡಿ – ಚಿಕ್ಕ ತಂಬಿಗೆ; ಖಾತಿ – ಸಿಟ್ಟು, ಕೋಪ; ಬಗೆ – ಸೀಳು; ನಸುಮಿಸುಕು – ಅಲ್ಪ ಅಲುಗಾಡು; ವ್ರಜ – ಸಮೂಹ; ಕುಸುರಿದರಿ – ಚೂರಾಗಿ ಕತ್ತರಿಸು; ಮುಸುಡೆ – ಮುಖ, ಮೋರೆ; ತೇವೆನು – ತಿಕ್ಕುವೆನು, ಅರೆವೆನು.

ಕೆಲವಂ – ಕೆಲವನ್ನು; ಬಲ್ಲವ – ಬಲ್ಲಿದ, ಪಂಡಿತ; ಮಾಳ್ಪವ – ಆಚರಿಸುವವ, ಮಾಡುವವ; ಸುಜ್ಞಾನ – ಉತ್ತಮವಾದ ತಿಳಿವಳಿಕೆ; ಅರಿಯಲ್ – ತಿಳಿದುಕೊಳ್ಳಲು; ನರ- ಮನುಷ್ಯ; ಪಲವು – ಹಲವು; ಪಳ್ಳ – ಹಳ್ಳ, ಸಣ್ಣ ಜಲಪ್ರದೇಶ; ಉಣದಿರ್ಪ – ಅನುಭೋಗಿಸಲಾಗದ; ಧನ – ಹಣ, ಸಂಪತ್ತು; ಸುತನಿರ್ದೇಂ – ಮಗನಿದ್ದರೇನು; ಆಪತ್ತಿನೊಳ್ – ಕಷ್ಟಕಾಲದಲ್ಲಿ; ಮಣಿದು – ಸೋತು; ಐದಿದಾ – ಒದಗಿ ಬಂದ; ತೃಣ – ಹುಲ್ಲು; ಚಿಗುರು – ಕುಡಿ, ಪಲ್ಲವ; ಮೆಲೆ – ತಿನ್ನಲು; ಸ್ವಾದ – ರುಚಿ, ಸವಿ, ಸ್ವಾರಸ್ಯ; ಅಳ್ಕರಿಂ – ಅಕ್ಕರೆಯಿಂದ, ಪ್ರೀತಿಯಿಂದ; ಪಾಲಮಾಡು – ಹಾಲನ್ನು ಉಣಿಸಲು; ಫಣಿ – ಸರ್ಪ; ಖಗ – ಪಕ್ಷಿ; ಗೂಗೆ– ಗೂಬೆ; ಸಂಪ್ರೀತಿ – ಮುದ್ದಿನಿಂದ; ಓವರೇ – ಸಲಹುವರೇ; ಪಗೆ – ಹಗೆ; ಅರೆ – ಬಂಡೆ; ಸೀಳುವೊಡೆ – ಸೀಳಬೇಕಾದರೆ; ಚಾಣ – ಉಳಿ, ಟಂಕ; ಕಿರು – ಚಿಕ್ಕದಾದ; ಓರ್ವಂ – ಒಬ್ಬನು; ಈಡು – ಸಮಾನ; ಹೆಮ್ಮರ – ಹಿರಿದಾದ ಮರ; ಸನ್ನೆ – ಮೀಟುಗೋಲು; ಕಾಲಾಳು – ಸೈನ್ಯ; ಇರಿ – ಕೊಲ್ಲು, ಚುಚ್ಚು, ತಿವಿ; ಧರೆ – ಭೂಮಿ; ಚಮತ್ಕಾರ – ಸೋಜಿಗ, ವಿಸ್ಮಯ, ಚತುರತೆ; ಅರಿ – ತಿಳಿದುಕೋ; ವಿಭು – ಪ್ರಭು; ತೊರೆ – ತ್ಯಜಿಸು; ಯೋಗಿ – ಯತಿ; ಪೊಣೆ – ಹೊಣೆ; ಪೊಡೆ – ಹೊಟ್ಟೆ; ಪಂಕ – ಕೆಸರು; ಮೀಯ್‌ – ಸ್ನಾನಮಾಡು; ಕಾಕಾಳಿ – ಕಾಗೆಗಳು; ಗುಡಪಾನಂ – ಬೆಲ್ಲದ ಪಾನಕ; ಮಡಿ – ನೈರ್ಮಲ್ಯ, ಪರಿಶುದ್ಧತೆ; ಚಿತ್ತ – ಮನಸ್ಸು.

೫. ಜಾಯಲಿ ಮರದಂತೆ

ಧರೆ – ಭೂಮಿ; ದುರ್ಜನ – ಕೆಟ್ಟ ಜನ; ಮೂಲಾಗ್ರ ಪರಿಯಂತ – ಬುಡದಿಂದ ತುದಿಯವರೆಗೆ; ಬಳಲಿ – ಆಯಾಸಗೊಂಡು, ದಣಿದು; ಕುಸುಮ – ಹೂವು; ಸ್ವಾದ – ರುಚಿ; ನಾರು – ವಾಸನೆ ಬೀರು; ಕರ್ಮ – ಕೆಲಸ; ತೊಟಕು – ಸ್ವಲ್ವವಾದರೂ; ಬಿನ್ನಾಣ – ಒನಪು, ಒಯ್ಯಾರ, ಸೊಬಗು, ಹಾಸ್ಯ, ಗೇಲಿ; ಕುನ್ನಿ – ನಾಯಿ.

೬. ಹಬ್ಬಲಿ ಅವರ ರಸಬಳ್ಳಿ

ಬಯಲಾಗೆ – ಕಡಿಮೆಯಾಗು; ಪುತ್ಥಳಿ – ವಿಗ್ರಹ, ಬೊಂಬೆ; ನೆರೆಯ – ಅಕ್ಕಪಕ್ಕದ; ಎಂಜಲು – ಉಂಡುಬಿಟ್ಟ ಆಹಾರ; ಹೋಲು – ಹೋಲಿಕೆ; ನೆನೆ – ಸ್ಮರಿಸು; ಯಾಳಿ – ಸಮಯ; ಸಂಪದ – ಸಂಪತ್ತು; ಖುದ್ದರಗೇಡಿ – ಮಹಾದುಷ್ಟ.

೭. ಬೆಳಗು ಜಾವ

ಮೂಡಲ – ಪೂರ್ವ; ತಮ – ಕತ್ತಲು; ಮಿಗಿಲು – ಅಧಿಕ; ಹೆದೆ – ಬಿಲ್ಲಿನ ಹಗ್ಗ; ಮಾರ – ಮನ್ಮಥ, ಕಾಮ; ನಿಶೆ – ಕತ್ತಲು; ಉಷೆ – ಮುಂಜಾವು; ಬಗೆ – ರೀತಿ; ತುಂಬಿ – ದುಂಬಿ, ಪೂರ್ಣವಾದ; ಸೆಳವು – ರಭಸ; ಹೊಗರು – ಪ್ರಕಾಶ, ಕಾಂತಿ.

೮. ಮುಂಬೈ ಜಾತಕ

ಸರಿವ – ಸಾಗುವ; ಕ್ಯೂ – ಸಾಲು; ಹೀರು – ಕುಡಿ; ಗಾಲಿ – ಚಕ್ರ; ಶಿಫಾರಸು – ಪ್ರಭಾವ; ಕಣ್ಣಾಡಿಸು – ನೋಡು; ಕೂಳು – ಅನ್ನ, ಆಹಾರ; ಹಾಸುಗಂಬಿ – ರೈಲುಹಳಿ; ತತ್ತರಿಸು – ನಡುಗು, ಕಂಪಿಸು.

೯. ಶಿಲುಬೆ ಏರಿದ್ದಾನೆ

ನಲ್ವಾತು – ಒಳ್ಳೆಯ ಮಾತು; ಮಕುಟ – ಕಿರೀಟ; ಕೊಂಬು – ವಾಲಗ; ಮುಲ್ಕಿ – ಸೇಡು; ಆಜ್ಯ – ತುಪ್ಪ; ಮಸಜೀದು – ಮಸೀದಿ; ಇಗರ್ಜಿ – ಚರ್ಚು; ಮತಿರಹಿತ – ಬುದ್ಧಿರಹಿತ; ಮಾಹೆ – ತಿಂಗಳು; ಒಂದಾವರ್ತಿ – ಒಂದು ಸಲ; ಸೋಗೆ ಬಿಲ – ಗುಡಿಸಲು; ಅಸಂಖ್ಯ – ಲೆಕ್ಕವಿಲ್ಲದಷ್ಟು; ಕವಲು – ಟಿಸಿಲು, ಭಿನ್ನತೆ, ಬದಲಾವಣೆ.

೧೦. ಒಂದು ಹೂ ಹೆಚ್ಚಿಗೆ ಇಡುತೀನಿ

ತಾವು – ಸ್ಥಳ; ಬಾಯತುರಿಕೆ – ಬಾಯಿಯ ಚಪಲ; ಸಸೇಮಿರ – ಚೂರೂ; ಗೋಗರೆ – ದೈನ್ಯದಿಂದ ಬೇಡಿಕೊಳ್ಳು; ಸುಯ್ದು – ನಿಟ್ಟುಸಿರು; ದಿಗಿಲು – ಭಯ; ಕಾಡಿ – ಪೀಡಿಸಿ; ಆವಾಹಿಸು – ನೆಲೆಗೊಳಿಸು; ಅಟ್ಟ – ಮಹಡಿ; ಅಂತರ್ಧಾನ – ಕಣ್ಮರೆಯಾಗು; ಸಮ್ಮಿಲಿಸು – ಒಂದುಗೂಡು; ನಿರಾಳ – ನೆಮ್ಮದಿ, ಚಿಂತೆಯಿಲ್ಲದೆ; ಕೂಡೆ – ಜೊತೆಗೆ; ಅಗಣಿತ – ಲೆಕ್ಕವಿಲ್ಲದಷ್ಟು; ಮೊರೆ – ಆರ್ತನಾದ, ಗೋಳಾಟ; ಒಟ್ಟಲಿಗೆ – ರಾಶಿಗೆ, ಗುಂಪಿಗೆ; ಲೀಲಾಮಾತ್ರ – ದೇವರು.

೧೧. ಹತ್ತಿ … ಚಿತ್ತ … ಮತ್ತು …

ತಮ – ಕತ್ತಲು, ಅಂಧಕಾರ; ಕೇಡು – ನಾಶ, ಕೆಡುಕು, ಅಳಿವು; ಕರ್ಮ – ಕೆಲಸ; ಆತ್ಮಪರಿನಿರ್ವಾಣ – ಮೋಕ್ಷ, ಮುಕ್ತಿ, ಆತ್ಮದ ಬಿಡುಗಡೆ; ಬಿತ್ತ – ಬೀಜ.

೧೨. ಒಮ್ಮೆ ನಗುತ್ತೇವೆ

ಕುದಿ – ಬೇಯು; ಮೊರೆಯಿಡು – ಬೇಡು, ಯಾಚಿಸು; ಕಂಬನಿ – ಕಣ್ಣೀರು; ಧಗೆ – ಹೊಗೆ; ಹೊಳೆ – ಕಾಂತಿ

ಗದ್ಯಭಾಗ

೧೩. ಮುಟ್ಟಿಸಿಕೊಂಡವನು

ಕುಳ – ನೇಗಿಲಿನ ತುದಿ; ಗಾಸಿ – ತೊಂದರೆ, ಹಿಂಸೆ; ತಾವು – ಸಳ; ಸಾಟಿ – ವಿನಿಮಯ, ಅದಲುಬದಲು; ಲೇಹ್ಯ – ನೆಕ್ಕಿ ತಿನ್ನುವ ಔಷಧ; ಹಕ್ಕೆ – ಆಶ್ರಯ, ನೆಲೆ; ಗೇಯು – ದುಡಿಮೆ; ಛಾತಿ – ಧೈರ್ಯ, ಕೆಚ್ಚು; ನಿಸೂರ – ನಿರುಮ್ಮಳ; ಹೊಂಚಿಕೊಳ್ಳು – ಹೊಂದಿಸಿಕೊಳ್ಳು.

೧೪. ವಾಲ್‌ಪರೈ: ಅಭಿವೃದ್ಧಿ ತಂದ ದುರಂತ

ದುರಂತ – ಅಪಾಯ; ಪರಾಕಾಷ್ಠೆ – ತುತ್ತತುದಿ; ವಿರಾಟ್ – ವಿಶ್ವರೂಪ; ಪತನ – ಅವನತಿ; ಸಂಕುಲ – ಗುಂಪು, ಸಮೂಹ; ರೋಚಕ – ಸುಖಕರವಾದ, ಹಿತಕಾರಿ; ಅಧಿಪತ್ಯ – ಯಜಮಾನಿಕೆ, ಒಡೆತನ; ನಿಬಿಡ – ದಟ್ಟವಾದ, ಸಾಂದ್ರವಾದ; ಸಾಂದ್ರತೆ – ದಟ್ಟಣೆ; ಎಡೆ – ಸ್ಥಳ, ಜಾಗ; ಬಿಡಾರ – ತಂಗುವ ಸ್ಥಳ; ನೀರವತೆ – ಮೌನ, ನಿಶ್ಯಬ್ದ; ಕುಮ್ಮಕ್ಕು – ಸಹಾಯ, ಒತ್ತಾಸೆ; ಏಕಸ್ವಾಮ್ಯತೆ – ಒಬ್ಬರ ಒಡೆತನದಲ್ಲಿರುವ; ಕುರುಹು – ಗುರುತು; ಕ್ಷೀಣಿಸು – ಸೊರಗು, ಕ್ಷಯಿಸು; ಅವನತಿ – ಕೀಳುದೆಸೆ.

೧೫. ಆಯ್ಕೆಯಿದೆ ನಮ್ಮ ಕೈಯಲ್ಲಿ

ಜಲಬಾಧೆ – ಮೂತ್ರಬಾಧೆ, ಬಾಯಾರಿಕೆ; ಯಥೇಚ್ಛ – ಬೇಕಾದಷ್ಟು; ಬಾಡು – ಮಾಂಸ; ಮೊಗೆದು – ತುಂಬಿ; ತಾಪತ್ರಯ – ತೊಂದರೆ, ಕಷ್ಟ; ರೋಸಿ – ಬೇಸತ್ತು;

೧೬. ಕನ್ನಡವನ್ನು ಕಟ್ಟುವ ಕೆಲಸ

ಸ್ಪುರಿಸು – ಮಿಂಚು, ಬುದ್ದಿಗೆ, ಗೋಚರಿಸು; ಖಿಲ – ಪಾಳುಬೀಳು, ಶೂನ್ಯವಾಗು; ಖೇದ – ದುಃಖ; ಕ್ರೋಧ – ಕೋಪ; ಕುತ್ತು – ಅಪಾಯ; ಪರದೇಶಿ – ದಿಕ್ಕಿಲ್ಲದವರು, ಹೊರನಾಡಿನವರು; ದುರ್ದೈವ – ಕೆಟ್ಟ ಅದೃಷ್ಟ, ದೌರ್ಭಾಗ್ಯ; ಪ್ರತಿಷ್ಠೆ – ಘನತೆ, ಗರ್ವ; ಕೃತಕ – ಸಹಜವಲ್ಲದ; ತೀವ್ರತರ – ಹರಿತ, ಉಗ್ರವಾದ; ಅಂಗುಲ – ಒಂದು ಇಂಚು, ಬೆರಳು.

೧೭. ಧಣಿಗಳ ಬೆಳ್ಳಿಲೋಟ

ಬೈಗಳ – ಕೆಟ್ಟಮಾತು. ನಿಂದನೆ; ಇಂಗು – ಒಣಗು, ಬತ್ತು; ಸೆರಗು – ಅಂಚು; ಗೆರಟ – ತೆಂಗಿನ ಚಿಪ್ಪು; ಗಾಳ – ಮೀನು ಹಿಡಿಯುವ ಕೊಕ್ಕು; ಆಟಿ-ಸೋಣ – ಆಷಾಢ ಶ್ರಾವಣ; ಹೇಂಟೆ – ಹೆಣ್ಣುಕೋಳಿ; ತೋಡು – ಕಾಲುವೆ, ಚಿಕ್ಕಹೊಳೆ; ಹೂಟಿ – ಪಿತೂರಿ, ಏರ್ಪಾಟು; ಬಿಕನಾಸಿ – ದರಿದ್ರ, ಭಿಕ್ಷುಕ, ಕ್ಷುದ್ರ; ಉಪಟಳ – ಹಿಂಸೆ, ತೊಂದರೆ; ದರೆ– ದಿಣ್ಣೆ, ತಿಟ್ಟು; ಜಡಿಮಳೆ – ಎಡೆಬಿಡದೆ ಸುರಿವ ಮಳೆ; ದೇವಳ – ದೇವಾಲಯ; ಸೌಟು – ದೊಡ್ಡ ಚಮಚ; ಪೋರ – ಹುಡುಗ, ಬಾಲಕ; ಕೋಮಣ – ಲಂಗೋಟಿ, ಕೌಪೀನ; ಚೊಂಬು – ತಂಬಿಗೆ; ದಾರಂದ – ಬಾಗಿಲು; ಪಡಿ – ಅಕ್ಕಿ, ಧಾನ್ಯರೂಪದಲ್ಲಿ ಕೊಡುವ ದಿನಗೂಲಿ; ಕೊತ್ತಳಿಗೆ – ತೆಂಗಿನ ಮರದ ದಿಂಡು; ಹೂಳು – ಹೊಳೆಯ ತಳಭಾಗದ ಕೆಸರ; ಬುಗುಡಿ – ಕಿವಿಯಲ್ಲಿ ಧರಿಸುವ ಆಭರಣ; ಪಾವು – ಅಳತೆಯ ಸಾಧನ; ತಾಕತ್ತು – ಶಕ್ತಿ; ಮೂತಿ – ತುದಿ, ಮೋರೆ; ಕುಣಿಕೆ – ಸರಿಗಂಟು; ನೊರೆಕಾಯಿ – ಅಂಟುವಾಳ ಕಾಯಿ; ಕಾರು – ಕಕ್ಕು, ಹೊರಹಾಕು; ದಿಗಿಣ – ನೆಗೆತ, ಯಕ್ಷಗಾನದ ನೆಗೆತ; ಮೋರೆ – ಮುಖ; ವಲ್ಲಿ – ಉತ್ತರೀಯ, ಬಳ್ಳಿ.

೧೮. ಬದುಕನ್ನು ಪ್ರೀತಿಸಿದ ಸಂತ

ಸಂಕೀರ್ಣ – ಇಕ್ಕಟ್ಟಾದ; ಉರ್ಧ್ವಮುಖಿ – ಮೇಲುಮುಖ; ಉದ್ದೀಪನ – ಉತ್ತೇಜನ, ಉರಿಸುವ; ನಿಹಿತ – ಇಟ್ಟ, ಇರಿಸಿದ; ಸಬೂಬು – ಕಾರಣ, ನೆಪ; ಮಜಲು – ಹಂತ; ಘನತೆ – ಶ್ರೇಷ್ಠತೆ; ಸೃಜನಾತ್ಮಕತೆ – ಕ್ರಿಯಾತ್ಮಕವಾದ; ದೃಢತೆ – ಬಲಿಷ್ಠವಾದ, ದಿಟವಾದ; ಕ್ರೋಡೀಕರಿಸು – ಸಂಗ್ರಹಿಸು; ಭ್ರಮೆ – ಭ್ರಾಂತಿ, ಹುಚ್ಚು, ಉನ್ಮಾದ; ಅಡಚಣೆ – ತೊಂದರೆ; ಜಮಾಯಿಸು – ಸೇರು.

೧೯. ತಿರುಳನ್ನಡದ ಬೆಳ್ಳುಡಿ

ಸಂಪ್ರಾಪ್ತ – ಒದಗಿ ಬಂದಿರುವ; ವರ್ಷಕಾಲ – ಮಳೆಗಾಲ; ದೆವಸ – ದಿವಸ; ಬೈಗುಂಬೊತ್ತು – ಸಂಜೆಯ ಹೊತ್ತು; ಓಲಗ – ರಾಜನ ಸಭೆ, ದರ್ಬಾರು; ಕಬ್ಬಿಗರ ಬಲ್ಲಹ – ಕವಿಗಳ ವಲ್ಲಭ, ಕವಿಗುರು; ಪೊರಮಟ್ಟು – ಹೊರಹೊರಟು; ಪೊರವೀಡು – ವಾಸದ ಮನೆ; ಚೌಕಿ – ಒಳಮನೆ; ತನಿವಣ್ಣು – ರುಚಿಯಾದ ತಾಜಾ ಹಣ್ಣು; ಬಲಲ್ಕೆ – ಆಯಾಸ, ಬಳಲಿಕೆ; ಮುಡಿ – ಪರಿಹಾರವಾಗು, ಮುಕ್ತಾಯವಾಗು; ಕೆಳದಿ – ಗೆಳತಿ; ಬಲ್ಸೋನೆ – ಭಾರೀಮಳೆ, ಜಡಿಮಳೆ; ಬಗೆ – ಮನಸ್ಸು; ನಲ್ಗತೆ – ಸುಂದರವಾದ ಕಥೆ, ಹಿತಕರವಾದ ಕಥೆ, ಆವ ಗಹನ – ಅದು ಯಾವ ಕಷ್ಟ; ಅಲ್ಕಿರು – ಪ್ರೀತಿ; ಬಟ್ಟೆದೋರಿಪ – ದಾರಿತೋರಿಸುವ, ಬದುಕಿನ ಮಾರ್ಗ ತಿಳಿಸುವ; ಒಳವು – ಇವೆ, ಇರುವವು; ನಲ್ಮೆ – ಪ್ರೀತಿ, ಅನುಗ್ರಹ, ಕೃಪೆ; ಒರೆ – ಹೇಳು; ಬಿತ್ತರಿಸು – ವಿಸ್ತರಿಸು ಹೇಳು, ನಿರೂಪಿಸು; ಬಲ್ಗತೆ – ದೊಡ್ಡಕಥೆ; ಇರ್ಕೆ – ಇರಲಿ; ಓರೊಂದು – ಒಂದೊಂದು; ಇನಿಸಿನಿಸು – ಇಷ್ಟಿಷ್ಟು; ವಧ್ಯಂ – ಅಪ್ರಿಯವಾದದು, ಪ್ರಿಯವಾದದು, ಮನೋಹರವಾದುದು; ರನ್ನಗಡಗ – ರತ್ನದ ಕಡಗ; ಪೊನ್ನ ಕಂಠಿಕೆ – ಬಂಗಾರದ ಬಂದೆಳೆಯ ಸರ, ಏಕಾವಳಿ, ಮುತ್ತಿನಹಾರ; ಮೆಚ್ಚು – ಉಡುಗೊರೆ; ಪೆರಿತೇಂ – ಮತ್ತಿನ್ನೇನು, ಬೇರೆ ಏನು; ಗಡಸುಗಾರ್ತಿ – ಗಟ್ಟಿಗಿತ್ತಿ; ಪೋಕೆ – ಹೋಗಲಿ;
ಬಲೆಯಮಲ್ತೆ – ನಂತರವಲ್ಲವೆ; ಕಬ್ಬ – ಕಾವ್ಯ; ಕಚ್ಚಲೆ – ಕೈಕಡಗ, ಬಹುಮಾನವಾಗಿ, ನೀಡುವ ಬಳೆ (ಕಡಗ); ಈಯೆನ್ – ಕೊಡುವುದಿಲ್ಲ; ನೋಡಿಂ – ನೋಡುವೆನು; ಪುರುಳ್ – ಸಾರ, ಸತ್ಯ; ಫಣೀಂದ್ರ – ನಾಗೇಂದ್ರ, ಆದಿಶೇಷ; ವಸುಧೆ – ಭೂಮಿ; ಬಸದಿ – ಚೈತ್ಯಾಲಯ, ಜೈನರ ಪೂಜಾಮಂದಿರ; ರಮಣಿ – ಪ್ರಿಯೆ, ಸುಂದರಿ; ಕಚ – ಮುಡಿ, ತಲೆಗೂದಲು; ಸಕ್ಕದ – ಸಂಸ್ಕೃತ; ಅರಿ – ತಿಳಿ; ಆರ್ತೆನಿಲ್ಲ – ಸಮರ್ಥಳಿಲ್ಲ; ಬೆಳ್ಳುಡಿ – ಸವಿಮಾತು, ತಿಳಿಯಾದ ಭಾಷೆ; ತಿರುಳನ್ನಡ – ಸಾರವತ್ತಾದ, ಅರ್ಥಪೂರ್ಣವಾದ ಕನ್ನಡ, ದೇಸಿ ಮಾತು; ಕತ್ತುರಿ – ಕಸ್ತೂರಿ; ಪುರುಳು – ಸಾರ; ರನ್ನವಣಿ – ರತ್ನದ ಮಣಿ, ರತ್ನದ ಹರಳು; ಪೊನ್ನು – ಬಂಗಾರ; ಬಸರು – ಜಿನುಗು; ಚೆಂಬವಳ – ಕೆಂಪು ಹವಳ; ಎಡೆಯೆಡೆ – ಅಲ್ಲಲ್ಲಿ, ನಡುನಡುವೆ; ಉಸಿರ್ವೆಂ – ಹೇಳುವೆನು.

೨೦. ಹಳ್ಳಿಯ ಚಹಾ ಹೊಟೇಲುಗಳು

ಫಳಾರ – ತಿಂಡಿ; ಹಚಿ – ಖಾತೆಯಲ್ಲಿ ಬರೆಯುವುದು; ತರುಬಿ – ನಿಲ್ಲಿಸಿ; ಫರಸಿ – ಕಲ್ಲುಹಾಸು

ದೀರ್ಘ ಗದ್ಯ

೨೧. ಕೃಷ್ಣಗೌಡನ ಆನೆ

ಖಾಯಮ್ಮು – ನಿತ್ಯವೂ; ಪುಕಾರು – ಗದ್ದಲ, ತಕರಾರು, ಅಪವಾದ; ಇನಾಮು – ಬಹುಮಾನ; ಪರಿ – ರೀತಿ; ಅನ್ಯಮನಸ್ಕ – ಮನಸ್ಸು ಬೇರೆಡೆಯಲ್ಲಿರುವುದು; ಪೀಜು – ಫ್ಯೂ ಲಸ್ (fuse); ಜಪ್ಪಿ – ಚಚ್ಚಿ; ದೂಷಿಸು – ಆಪಾದನೆ ಮಾಡು; ಸಲಾಮ್ – ನಮಸ್ಕಾರ; ಹವಣಿಸು – ಯೋಚಿಸು, ಉಪಾಯಮಾಡು; ತ್ರಾಸ – ಕಷ್ಟ; ಸಾತ್ವಿಕ – ಒಳ್ಳೆಯತನ; ವರ್ಜಿಸು – ಬಿಟ್ಟುಬಿಡು; ಬಡಾಯಿ – ಜಂಬ; ಕ್ಷಿಪ್ರಮಾರ್ಗ– ಸುಲಭದ ದಾರಿ; ಪಗಡುದಸ್ತು – ಮೈಕೈತುಂಬಿಕೊಂಡಿರು; ಸೈರಣೆ – ತಾಳ್ಮೆ; ಅವಜ್ಞೆ – ಕಡೆಗಣಿಸುವಿಕೆ; ಮರ್ಮಕ್ಕೆ – ಮನಸ್ಸಿಗೆ ತಾಗುವಂತಹ; ಜಖಂ – ಹಾನಿಯಾಗು; ಪರಿವರ್ತನೆ – ಬದಲಾವಣೆ; ಕ್ಷುದ್ರ – ಚಿಕ್ಕಪುಟ್ಟ; ಅಸಂಭವ – ಸಾಧ್ಯವಾಗದ; ಇತ್ಯರ್ಥ – ತೀರ್ಮಾನ; ಪ್ರವರ – ಅನವಶ್ಯಕ ವಿವರಣೆ; ಅಭಿಮತ – ಅಭಿಪ್ರಾಯ; ನಾಟ – ಮರದ ದಿಮ್ಮಿ; ರೋಸಿಹೋಗು – ಸಾಕಾಗಿಹೋಗು; ರೇಜಿಗೆ – ಜುಗುಪ್ಸೆ; ಪಾರ್ಶ್ವ – ಭಾಗ; ಬಿಟ್ಟಿ – ಪುಕ್ಕಟೆ; ಆಸ್ಥೆ – ಕಾಳಜಿ; ಚಿತಾವಣೆ – ಇತರರನ್ನು ಪ್ರಚೋದಿಸುವುದು; ಕುಗುರು – ತೂಕಡಿಸು; ಮನ್ನಾ – ರದ್ದು; ಮನ್ನಾಜಂಗ್ಲಿ – ಮೀಸಲು ಅರಣ್ಯ; ಮಹಜರ್ – ಸ್ಥಳ ಪರಿಶೀಲನೆ; ವಕ್ತಾರ – ಪ್ರತಿನಿಧಿ; ಪರ್ವಾನಗಿ – ಅನುಮತಿ; ಬರಖಾಸ್ತಾಗು – ಮುಗಿದುಹೋಗು; ದುರ್ಬುದ್ದಿ – ಕೆಟ್ಟಬುದ್ಧಿ; ಹಿಯ್ಯಾಳಿಸು – ನಿಂದಿಸು; ನೀಳದಂತ – ಉದ್ದನೆಯ ಹಲ್ಲು; ಗಂಡಿ – ತಗ್ಗು ಪ್ರದೇಶ, ಕುಳಿ; ವಿಘ್ನ – ತೊಂದರೆ; ಅವಕ್ಕಾಗು – ಮಾತಿಲ್ಲದಂತಾಗು, ಆಶ್ಚರ್ಯಪಡು; ಪಂಗ್ತಿ – ಸಾಲು; ಹುಯ್ಯಲಿಡು – ರೋದಿಸು; ಸ್ಥಿಮಿತ – ಹಿಡಿತ; ಪ್ರಹಸನ – ನಾಟಕ; ಪೀಕಲಾಟ – ಸಂಕಷ್ಟ; ಶಂಕಿಸು – ಅನುಮಾನಿಸು; ಖೂನಿ – ಕೊಲೆ; ವದಂತಿ – ಸುದ್ದಿ; ಹೇಸದ – ಹೆದರದ.

ಹೆಚ್ಚುವರಿ ಪ್ರಶ್ನೆಗಳು:

ಅರ್ಥ ಬರೆಯಿರಿ:

೧. ಖೇಚರ ೨. ಭೃಂಗ ೩. ಭಂಗ ೪. ಪ್ರಮೋದ ೫. ಅರವಿಂದ೬. ಕಾಮ
೭. ತೃಣ೮. ತಲ್ಲಣ೯. ಕಂಬನಿ೧೦. ಪುಳಕ೧೧. ಅಶ್ರುಜಲ೧೨. ಡಂಬಕ
೧೩. ಅಂಧಕ೧೪. ಪಥ೧೫. ಕುಬ್ಜ೧೬. ಶಿರ೧೭. ಅಂಗ೧೮. ಗೃಹ
೧೯. ಸಸೇಮಿರ೨೦.ಸೋಪಾನ೨೧. ಅಹಿತ೨೨. ಕೇಡು೨೩. ಧರಿತ್ರಿ೨೪. ಸತಿ
೨೫. ಹೆದೆ೨೬. ತಮ೨೭. ಪೊಗರು೨೮. ಪುತ್ಹಳಿ೨೯. ಅಗ್ನಿ೩೦. ಶಶಿ
೩೧. ರಮಣ೩೨. ಕಲಿ೩೩. ಕಾಲರಾಯ೩೪. ನಂಜು ೩೫. ಕುನ್ನಿ೩೬. ಸುತ
೩೭. ಖಗ೩೮. ಸಲಿಲ

ಉತ್ತರಗಳು:

೧. ಯಕ್ಷಗಂಧರ್ವ೨. ದುಂಬಿ ೩. ಅಪಮಾನ೪. ಸಂತೊಷ, ಆನಂದ
೫. ತಾವರೆ೬. ವಿಷಯಾಸಕ್ತಿ, ಮನ್ಮಥ೭. ಹುಲ್ಲು೮. ಹೆದರಿಕೆ, ತಳಮಳ
೯. ದುಃಖ೧೦. ರೋಮಾಂಚನ೧೧. ಕಣ್ಣೀರು೧೨. ಸೋಗಿನ ನಡೆವಳಿಕೆಯವನು
೧೩. ಕುರುಡ೧೪. ವಾರಿ೧೫. ಗೂನ, ಕುಳ್ಳ೧೬. ತಲೆ
೧೭. ದೇಹ, ಭಾಗ೧೮. ಮನೆ ೧೯. ಸ್ವಲ್ಪವೂ೨೦. ಮೆಟ್ಟಿಲು
೨೧. ಹಿತವಲ್ಲದ೨೨. ಕೆಟ್ಟದು೨೩. ಭೂಮಿ೨೪. ಪತ್ನಿ
೨೫. ಬಿಲ್ಲಿನ ಹಗ್ಗ೨೬. ಕತ್ತಲು೨೭. ಗರ್ವ೨೮. ಗೊಂಬೆ
೨೯. ಬೆಂಕಿ೩೦. ಚಂದ್ರ೩೧. ಪ್ರಿಯತಮ, ಪತಿ೩೨. ವೀರ
೩೩. ಯಮ೩೪. ವಿಷ೩೫. ನಾಯಿ೩೬. ಮಗ
೩೭. ಪಕ್ಷಿ೩೮. ನೀರು

Leave a Comment