ದ್ವಿತೀಯ ಪಿಯುಸಿ ಕನ್ನಡ ತಿರುಳ್ಗನ್ನಡದ ಬೆಳ್ನುಡಿ ನೋಟ್ಸ್, 2nd Puc Kannada Tirulgannadada belnudi Notes Tirulgannadada belnudi Question and Answer 2nd puc kannada tirulgannada belnudi summary ತಿರುಳ್ಗನ್ನಡದ ಬೆಳ್ನುಡಿ summary in kannada ತಿರುಳ್ಗನ್ನಡದ ಬೆಳ್ನುಡಿ pdf tirulgannada belnudi summary kannada pdf download Tirulgannada belnudi summary in kannada 2nd puc tirulgannada belnudi kannada question answer ತಿರುಳ್ಗನ್ನಡದ ಬೆಳ್ನುಡಿ ಸಾರಾಂಶ pdf ಮುದ್ದಣ್ಣ ಮನೋರಮೆ ಸಾರಾಂಶ
೭. ತಿರುಳ್ಗನ್ನಡದ ಬೆಳ್ನುಡಿ
– ಮುದ್ದಣ್ಣ

ಲೇಖಕರ ಪರಿಚಯ:
ಹತ್ತೊಂಬತ್ತನೆಯ ಶತಮಾನದಂತ್ಯದಲ್ಲಿದ್ದ ಕವಿ ಮುದ್ದಣ ವ್ಯಾಯಾಮ ಶಿಕ್ಷಕನಾಗಿದ್ದನು. ಲಕ್ಷ್ಮೀನಾರಾಯಣಪ್ಪ ಎಂಬುದು ಈತನ ನಿಜನಾಮ. ಉಡುಪಿ ಬಳಿಯ ನಂದಳಿಕೆ ಗ್ರಾಮದ ಪಾಠಾಳಿ ತಿಮ್ಮಪ್ಪಯ್ಯ ಮತ್ತು ಮಹಾಲಕ್ಷಮ್ಮ ದಂಪತಿಗಳು ಈತನ ತಂದೆತಾಯಿಗಳು. ‘ಅದ್ಭುತ ರಾಮಾಯಣ’, ‘ಶ್ರೀರಾಮಪಟ್ಟಾಭಿಷೇಕ’, ‘ರಾಮಾಶ್ವಮೇಧಂ’ ಮುಂತಾದ ಕಾವ್ಯಗಳನ್ನು ರಚಿಸಿರುವ ಪ್ರತಿಭಾವಂತ. ವಾಲ್ಮೀಕಿ ರಾಮಾಯಣ ಮತ್ತು ಭಗವದ್ಗೀತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾನೆ. ರತ್ನಾವಳೀ ಕಲ್ಯಾಣ, ಕುಮಾರ ವಿಜಯ ಎಂಬೆರಡು ಯಕ್ಷಗಾನ ಪ್ರಸಂಗಗಳನ್ನು ಈತ ರಚಿಸಿರುವನು. ‘ಗೋದಾವರಿ’ ಎಂಬ ಕಾದಂಬರಿಯನ್ನು ಅರ್ಧ ಬರೆದು ಮುಗಿಸುವಷ್ಟರಲ್ಲೇ ಚಿಕ್ಕ ವಯಸ್ಸಿನಲ್ಲಿ ಅಸುನೀಗಿದನು. ಬಡತನ ಮತ್ತು ಕ್ಷಯರೋಗಗಳು ಈ ಪ್ರತಿಭಾವಂತ ಕವಿಯನ್ನು ಬಲಿತೆಗೆದುಕೊಂಡವು. ಪ್ರಸ್ತುತ ಗದ್ಯಭಾಗವನ್ನು ಮುದ್ದಣ ಕವಿಯ ‘ರಾಮಾಶ್ವಮೇಧ’ ಕೃತಿಯಿಂದ ಆಯ್ದುಕೊಳ್ಳಲಾಗಿದೆ. ಮುದ್ದಣ-ಮನೋರಮೆಯರ ಪ್ರಸಂಗವೆಂದೇ ಈ ಭಾಗ ಜನಪ್ರಿಯಗೊಂಡಿದೆ.
ಆಕರ: ‘ರಾಮಾಶ್ವಮೇಧ’.
(ಅ) ಸಾಂದರ್ಭಿಕ ವಿವರಣೆಯನ್ನು ಬಯಸುವ ವಾಕ್ಯಗಳು
೧. ಬಲ್ಸೋನೆಯ ಜಿನುಂಗಿನತ್ತಣಿನೆನ್ನ ಬಗೆಯುಂ ಬೇಸರ್ತುದು.
ಮುದ್ರಣನು ರಚಿಸಿರುವ ‘ಶ್ರೀರಾಮಾಶ್ವಮೇಧಂ’ ಸಂಗ್ರಹದಿಂದಾಯ್ದ ‘ತಿರುಳನ್ನಡದ ಬೆಳ್ನುಡಿ’ ಎಂಬ ಗದ್ಯಭಾಗದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.
ಅರಮನೆಯಿಂದ ಮನೆಗೆ ಹಿಂದಿರುಗಿದ ಮುದ್ದಣನನ್ನು ಸ್ವಾಗತಿಸಿ, ಆತನನ್ನು ರಸಭರಿತ ಹಣ್ಣು ಮತ್ತು ಕೆನೆಹಾಲುಗಳಿಂದ ಸತ್ಕರಿಸಿದ ಮನೋರಮೆಯು ಆತನಿಗೆ ಸವಿಯಲು ರಸಗವಳವನ್ನೀಯುತ್ತಾಳೆ. ಅನಂತರ ಆತನೊಂದಿಗೆ ಸರಸ ಸುಖದಲ್ಲಿ ಸಲ್ಲಾಪ ನಡೆಸುತ್ತಾ ”ಪ್ರಿಯನೇ ಹಗಲು-ರಾತ್ರಿ ಎಡೆಬಿಡದೆ ಸುರಿಯುತ್ತಿರುವ ಈ ಭಾರೀ ಮಳೆಯಿಂದ ಮನಸ್ಸಿಗೆ ತುಂಬಾ ಬೇಸರವಾಗಿದೆ. ಈ ಬೇಸರ ಕಳೆಯುವಂತಹ ಯಾವುದಾದರೊಂದು ಒಳ್ಳೆಯ ಕಥೆಯನ್ನು ಹೇಳು” ಎಂದು ಕೇಳುವಳು. ಈ ಸಂದರ್ಭದಲ್ಲಿ ಮೇಲಿನ ವಾಕ್ಯವನ್ನು ಗಮನಿಸಬಹುದು.
೨. ನಿನಗಾವ ರಸದೊಳಿಷ್ಟಂ?
ಮುದ್ದಣನು ರಚಿಸಿರುವ ‘ಶ್ರೀರಾಮಾಶ್ವಮೇಧಂ’ ಸಂಗ್ರಹದಿಂದಾಯ್ದ ‘ತಿರುಳನ್ನಡದ ಬೆಳ್ಳುಡಿ’ ಎಂಬ ಗದ್ಯಭಾಗದಲ್ಲಿ ಮುದ್ದಣನು ಮನೋರಮೆಯನ್ನು ಈ ಮೇಲಿನಂತ ಪ್ರಶ್ನಿಸಿರುವನು.
ಹಗಲಿರುಳೂ ಸುರಿಯುತ್ತಿರುವ ಮಳೆಯಿಂದಾಗಿ ಮನಸ್ಸಿಗೆ ಬೇಸರ ಮೂಡಿರುವುದರಿಂದ ಯಾವುದಾದರೊಂದು ಕಥೆ ಹೇಳೆಂದು ಮನೋರಮೆಯು ಮುದ್ದಣನನ್ನು ಕೇಳಿದಳು. ಆಗ ಮುದ್ದಣನು ಆಕೆ ಯಾವ ರಸದಲ್ಲಿ ಕಥೆ ಕೇಳಲು ಬಯಸುವಳೆಂಬುದನ್ನು ವಿಚಾರಿಸುತ್ತಾ “ನಿನಗಾವ ರಸದೊಳಿಷ್ಟ? ಶೃಂಗಾರ ರಸದಲ್ಲಿ ಹೇಳಲೇ? ವೀರ ರಸವೇ? ಇಲ್ಲ ಹಾಸ್ಯ ರಸವೇ? ಎಂದು ಪ್ರಶ್ನಿಸುವ ಸಂದರ್ಭವಿದು. ಮನೋರಮೆಯು ನವರಸಭರಿತವಾದ ಕಥೆಯನ್ನು ಹೇಳಬೇಕೆಂದು ಕೇಳಿಕೊಳ್ಳುವಳು.
೩. ಸೀತಾಪಹರಣ ಕಥನದೊಳ್ ಬಯಕೆಯೆ?
ಮುದ್ದಣನು ರಚಿಸಿರುವ ‘ಶ್ರೀರಾಮಾಶ್ವಮೇಧಂ’ ಸಂಗ್ರಹದಿಂದಾಯ್ದ ತಿರುಳನ್ನಡದ ಬೆಳ್ಳುಡಿ’ ಎಂಬ ಗದ್ಯಭಾಗದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ.
ಮನೋರಮೆಯು ನಲ್ಲಥೆಯೊಂದನ್ನು ಹೇಳಬೇಕೆಂದು ಕೇಳಿದಾಗ ಮುದ್ದಣನು “ಯಾವ ಕಥೆ ಹೇಳಲಿ, ಭೋಜ ಪ್ರಬಂಧವೆ? ವಿಕ್ರಮ ವಿಜಯವೆ? ಮಹಾವೀರ ಚರಿತೆಯೆ?” ಎಂದಾಗ ಮನೋರಮೆ ಆ ಯಾವ ಕಥೆಯೂ ಬೇಡ ನವರಸಭರಿತವಾದ ರಾಮಾಯಣದ ಕಥೆ ಹೇಳೆಂದಳು. ಆಗ ಮುದ್ದಣನು ನಿನಗೆ ಸೀತಾಸ್ವಯಂವರದ ಕಥೆ ಹೇಳಲೆ ಎಂದಾಗ ಮನೋರಮೆಯು ಅದನ್ನು ನಾನು ಈಗಾಗಲೇ ಕೇಳಿದ್ದೇನೆ ಎಂದಳು. ಆಗ ಮುದ್ದಣನು ಹಾಗಾದರೆ ನಿನಗೆ ‘ಸೀತಾಪಹರಣ ಕಥನ’ವನ್ನು ಕೇಳುವ ಬಯಕೆ ಮೂಡಿದೆಯೆ? ಎಂದು ಪ್ರಶ್ನಿಸಿದನು. ಮನೋರಮೆಯು ಅದನ್ನೂ ಒಪ್ಪದೆ ಶ್ರೀರಾಮನ ಅಶ್ವಮೇಧಯಾಗ ಮಾಡಿದ ಕಥೆಯನ್ನು ಹೇಳಬೇಕೆಂದು ಕೇಳುವ ಸಂದರ್ಭವಿದು,
೪. ಪದ್ಯ ವಧ್ಯಂ; ಗದ್ಯಂ ಹೃದ್ಯಂ.
ಮುದ್ದಣನು ರಚಿಸಿರುವ ‘ಶ್ರೀರಾಮಾಶ್ವಮೇಧಂ’ ಸಂಗ್ರಹದಿಂದಾಯ್ದ ತಿರುಳನ್ನಡದ ಬೆಳ್ಳುಡಿ’ ಎಂಬ ಗದ್ಯಭಾಗದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದ್ದು ಮನೋರಮೆಯು ಮುದ್ದಣನಿಗೆ ಈ ಮೇಲಿನಂತೆ ಹೇಳಿದಳು.
ಮನೋರಮೆಯು ಶ್ರೀರಾಮನು ಅಶ್ವಮೇಧಯಾಗ ಮಾಡಿದ ಕಥೆಯನ್ನು ಹೇಳಬೇಕೆಂದು ಮುದ್ದಣನನ್ನು ಕೋರಿದಾಗ ಅದಕ್ಕೆ ಸಮ್ಮತಿಸಿದ ಮುದ್ದಣ ಆಕೆಯು ಯಾವ ಧಾಟಿಯಲ್ಲಿ ಕತೆ ಹೇಳಲೆಂದು ಪ್ರಶ್ನಿಸಿದನು. “ನೀನು ಯಾವ ಧಾಟಿಯಲ್ಲಿ ಕಥೆ ಕೇಳಬಯಸುವೆ?” ಎಂಬ ಪ್ರಶ್ನೆಗೆ ಉತ್ತರವಾಗಿ ಮನೋರಮೆಯು ಈ ಮೇಲಿನಂತೆ ಹೇಳುವಳು. ಪದ್ಯವು ಕೇಳಿ ಸಾಕಾಗಿದೆ. ಅದು ಬೇಡ, ಹೃದಯಕ್ಕೆ ಪ್ರಿಯವಾದ ಗದ್ಯದಲ್ಲಿ ಕಥೆ ಹೇಳೆಂದು ಆಕೆಯ ಹೇಳುವ “ಪದ್ಯ ವಧ್ಯಂ; ಗದ್ಯಂ ಹೃದ್ಯಂ” ಎಂಬ ಈ ಮಾತು ಅತ್ಯಂತ ಜನಪ್ರಿಯವಾದ ವಾಕ್ಯವಾಗಿದೆ.
೫. ಕಬ್ಬಮಂ ಕಂಡಲ್ತೆ ಕಚ್ಚಳಿಯನಿತ್ತರ್,
ಮುದ್ದಣನ ‘ತಿರುಳನ್ನಡದ ಬೆಳ್ಳುಡಿ’ ಎಂಬ ಗದ್ಯಭಾಗದ ಈ ಮೇಲಿನ ವಾಕ್ಯವನ್ನು ಮನೋರಮೆಯು ಮುದ್ದಣನಿಗೆ ಹೇಳುವಳು.
ಕಥೆ ಹೇಳಿದ್ದಕ್ಕೆ ಬಳುವಳಿಯಾಗಿ ಏನು ನೀಡುವೆಯೆಂದು ಮುದ್ದಣ ಮನೋರಮೆಯನ್ನು ಕೇಳಿದಾಗ ಅವಳು ಕಥೆ ಕೇಳಿಯಾದ ಮೇಲಷ್ಟೇ ಉಡುಗೊರೆಯ ವಿಷಯ ನಿರ್ಧಾರವಾಗುವುದೆಂದು ಹೇಳಿ, ಅರಮನೆಯವರು ನಿನ್ನ ಕಾವ್ಯವನ್ನು ಕೇಳಿಸಿಕೊಂಡಾದ ಮೇಲೆ ಕೈಕಡಗವನ್ನು ಕೊಟ್ಟರೆಂದು ನೆನಪಿಸಿ, ತನ್ನ ಮಾತನ್ನು ಸಮರ್ಥಿಸಿಕೊಂಡಿರುವ ಸಂದರ್ಭವಿದಾಗಿದೆ. ಮನೋರಮೆಯ ಜಾಣ್ಮೆ ಇಲ್ಲಿ ಅನಾವರಣಗೊಂಡಿದೆ.
೬. ನೀರಿಳಿಯದ ಗಂಟಲೊಳ್ ಕಡುಬು ತುರುಕಿದಂತಾಯ್ತು,
ಮುದ್ದಣನು ರಚಿಸಿರುವ ‘ಶ್ರೀರಾಮಾಶ್ವಮೇಧಂ’ ಸಂಗ್ರಹದಿಂದಾಯ್ದ ತಿರುಳನ್ನಡದ ಬೆಳ್ಳುಡಿ’ ಎಂಬ ಗದ್ಯಭಾಗದಲ್ಲಿ ಮನೋರಮೆಯು ಮುದ್ದಣನಿಗೆ ಹೇಳಿರುವ ಮಾತಿದು.
ಮುದ್ದಣನು ಮನೋರಮೆಗೆ ಕಥೆ ಹೇಳಲೆಂದು “ಸ್ವಸ್ತಿಶ್ರೀಮತ್ಸುರಾಸುರೇಂದ್ರ ನರೇಂದ್ರ ಮುನೀಂದ್ರ ಫಣೇಂದ್ರ ಮಣಿಮುಕುಟ ತಟಘಟಿತ….” ಎಂದು ಕ್ಲಿಷ್ಟವಾದ ಭಾಷೆಯನ್ನು ಪ್ರಯೋಗಿಸಿದಾಗ ಅದನ್ನು ತಡೆದು ಮನೋರಮೆಯು ಈ ಮೇಲಿನಂತೆ ಹೇಳಿದಳು. ನಿನ್ನ ಕ್ಲಿಷ್ಟವಾದ ಭಾಷೆ ನನಗೆ ಅರ್ಥವಾಗುತ್ತಿಲ್ಲ, ನೀರೇ ಇಳಿಯದ ಗಂಟಲಲ್ಲಿ ಕಡುಬನ್ನು ತುರುಕಿದರೆ ಇಳಿಯುವುದೆ? ಹಾಗಿದೆ ನಿನ್ನ ಕ್ಲಿಷ್ಟವಾದ ಭಾಷೆ ಎಂದು ಮುದ್ದಣನಿಗೆ ಹೇಳಿ ಅವನನ್ನು ತಡೆದ ಸಂದರ್ಭವಿದಾಗಿದೆ.
೭. ‘ಕನ್ನಡಂ ಕತ್ತುರಿ’ಯಲ್ತೆ,
ಮುದ್ದಣನು ರಚಿಸಿರುವ ‘ಶ್ರೀರಾಮಾಶ್ವಮೇಧಂ’ ಸಂಗ್ರಹದಿಂದ ಆಯ್ದುಕೊಂಡಿರುವ ತಿರುಳನ್ನಡದ ಬೆಳ್ಳುಡಿ’ ಎಂಬ ಗದ್ಯಭಾಗದಲ್ಲಿ ಮನೋರಮೆಯು ಮುದ್ದಣನಿಗೆ ಹೇಳುವ ಮಾತಿದು.
ಸಂಸ್ಕೃತ ಭೂಯಿಷ್ಠವಾದ ಮಾತುಗಳಲ್ಲಿ ಕಥೆ ಹೇಳುವುದಕ್ಕೆ ಮನೋರಮೆಯು ತಡೆದಾಗ ಮುದ್ದಣನು ‘ಹಾಗಾದರೆ ಇನ್ನು ಯಾವ ರೀತಿಯಲ್ಲಿ ಕಥೆ ಹೇಳಲಿ?’ ಎಂದನು. ಅದಕ್ಕೆ ಉತ್ತರಿಸುತ್ತಾ ಮನೋರಮೆಯು ಕನ್ನಡವೇ ಕಸ್ತೂರಿಯಲ್ಲವೆ? ತಿರುಳನ್ನಡದ ಬೆಳ್ಳುಡಿಯಲ್ಲಿ ಸರಳವಾಗಿ ಕಥೆಯನ್ನು ಹೇಳಬೇಕೆಂದು ಕೇಳಿಕೊಂಡಳು. ಮುದ್ದಣನು ಅಂತೆಯೇ ಆಗಲೆಂದು ಒಪ್ಪಿಕೊಳ್ಳುವ ಸನ್ನಿವೇಶವಿದಾಗಿದೆ.
ಹೆಚ್ಚುವರಿ ಪ್ರಶ್ನೆಗಳು:
೮. ಕರ್ಮಣಿಸರದೊಳ್ ಚೆಂಬವಳಮಂ ಕೋದಂತಿದೆ.
ಮುದ್ದಣ ಕವಿಯು ಬರೆದಿರುವ ‘ತಿರುಳನ್ನಡದ ಬೆಳ್ಳುಡಿ’ ಎಂಬ ಗದ್ಯದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಮುದ್ದಣನು ಮನೋರಮೆಯನ್ನುದ್ದೇಶಿಸಿ ಈ ಮಾತನ್ನು ಹೇಳುತ್ತಾನೆ.
ಸಂಸ್ಕೃತ ಮತ್ತು ಕನ್ನಡದ ಬೆರಕೆ ಹೇಗಿರಬೇಕೆಂಬುದನ್ನು ವಿವರಿಸುತ್ತಾ ಮುದ್ದಣನು ಕರಿಮಣಿ ಸರದಲ್ಲಿ ಮಧ್ಯೆ ಮಧ್ಯೆ ಹವಳವನ್ನು ಹಾಕಿ ಪೋಣಿಸಿದರೆ ಕರಿಮಣಿ ಸರದ ಅಂದ ಹೆಚ್ಚುತ್ತದೆ. ಇದೇ ರೀತಿಯಲ್ಲಿ ಕನ್ನಡದಲ್ಲಿ ಅಗತ್ಯವಿದ್ದಲ್ಲಿ ಸಂಸ್ಕೃತ ಪದಗಳನ್ನು ಬಳಸಿದರೆ ಕನ್ನಡ ನುಡಿಯ ಅಂದ ಹೆಚ್ಚುತ್ತದೆ ಎನ್ನುತ್ತಾನೆ. ಸಂಸ್ಕೃತವನ್ನು ಸಂಪೂರ್ಣವಾಗಿ ವರ್ಜಿಸಿದರೆ ಕನ್ನಡಕ್ಕೇ ನಷ್ಟವೆಂಬ ಅಭಿಪ್ರಾಯವನ್ನು ಮುದ್ದಣ ವ್ಯಕ್ತಪಡಿಸಿರುವನು.
೯. ಬಟ್ಟೆದೋರಿಪ ರಸಭರಿತಂ ಚರಿತಮೈಸೆ.
ಮುದ್ದಣ ಕವಿಯು ಬರೆದಿರುವ ‘ತಿರುಳ್ಗನ್ನಡದ ಬೆಳ್ಳುಡಿ’ ಎಂಬ ಪಾಠದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಮುದ್ದಣನನ್ನು ಉದ್ದೇಶಿಸಿ ಮನೋರಮೆಯು ಈ ಮಾತನ್ನು ಆಡುತ್ತಾಳೆ.
ಒಂದು ಒಳ್ಳೆಯ ಕಥೆಯನ್ನು ಹೇಳೆಂದು ಮನೋರಮೆಯು ಕೇಳಲು, ಮುದ್ದಣನು ಇಬ್ಬಾವ ದೊಡ್ಡ ಬಯಕೆ? ಭೋಜಪ್ರಬಂಧವನ್ನು ಹೇಳಲೆ? ವಿಕ್ರಮಾರ್ಜುನ ವಿಜಯ ಅಥವಾ ಮಹಾವೀರ ಚರಿತೆಯನ್ನು ಹೇಳಲೆ? ಎನ್ನುವನು. ಆಗ ಮನೋರಮೆಯು ಈ ಯಾರ ಕತೆಯೂ ತನಗೆ ಇಷ್ಟವಿಲ್ಲ, ಉಳಿದರೂ ಅಳಿದರೂ ದಾರಿತೋರಿಸುವ, ರಸಭರಿತವಾದ ಚಿರಿತೆಯನ್ನು ಹೇಳಬೇಕೆಂದು ಉತ್ತರಿಸಿದ ಸಂದರ್ಭವಿದಾಗಿದೆ.
೧೦. ನಲ್ಗತೆಯಂ ಪೇಳ!
ಮುದ್ದಣ ಕವಿಯು ಬರೆದಿರುವ ‘ತಿರುಳನ್ನಡದ ಬೆಳ್ಳುಡಿ’ ಎಂಬ ಪಾಠದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಮನೋರಮೆಯು ತನ್ನ ಪತಿಯನ್ನುದ್ದೇಶಿಸಿ ಹೇಳಿರುವ ಮಾತಿದಾಗಿದೆ.
ಅರಮನೆಯಿಂದ ಹಿಂದಿರುಗಿದ ಪತಿ ಮುದ್ದಣನನ್ನು ಉಪಚರಿಸಿದ ಮನೋರಮೆಯು “ಹಗಲು-ಇರುಳು ಸುರಿಯುತ್ತಿರುವ ಸೋನೆ ಮಳೆಯಿಂದ ಮನಸ್ಸಿಗೆ ಬೇಸರವಾಗಿದೆ. ಈ ಬೇಸರವನ್ನು ನೀಗಿಸುವಂತಹ ಒಂದು ಒಳ್ಳೆಯ ಕಥೆಯನ್ನು ಹೇಳು” ಎಂದು ಮನವಿ ಮಾಡಿಕೊಳ್ಳುವ ಸಂದರ್ಭ ಇದಾಗಿದೆ. ಮುದ್ದಣ ಮನೋರಮೆಯರ ಸರಸ ಸಲ್ಲಾಪಕ್ಕೆ ಈ ಮಾತು ಮುನ್ನುಡಿಯಂತಿದ್ದು ಸೊಗಸಾದ ಚರ್ಚೆ ನಡೆಯುವುದನ್ನು ಇಲ್ಲಿ ಕಾಣಬಹುದು.
೧೧. ಅನುಂ ನೋಳ್ಪೆಂ ಕತೆ ಪುರುಳೆಂತಿರ್ಕುಮೆಂದು
ಕವಿ ಮುದ್ದಣ ಬರೆದಿರುವ ‘ತಿರುಳನ್ನಡದ ಬೆಳ್ಳುಡಿ’ ಎಂಬ ಗದ್ಯದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.
ಮುದ್ದಣನು ಕಥೆ ಹೇಳಿದ್ದಕ್ಕೆ ತಕ್ಕ ಉಡುಗೊರೆಯನ್ನು ಕೊಡಬೇಕೆನ್ನುವನು. ಕಥೆ ಕೇಳಿದ ಮೇಲೆ ತಾನೇ ಅದಕ್ಕೆ ಉಡುಗೊರೆಯ ಸನ್ಮಾನ ಎಂದು ಮನೋರಮೆಯು ಉತ್ತರಿಸುತ್ತಾಳೆ. ಕಥೆ ಕೇಳಿದ ಮೇಲೆ ಉಡುಗೊರೆಯನ್ನು ಕೊಡದೆ ಇರಬಾರದೆಂದು ಮುದ್ದಣ ತಮಾಷೆ ಮಾಡುತ್ತಾನೆ. ಆಗ ಮನೋರಮೆಯು ಕಥೆಯ ತಿರುಳು ಹೇಗಿದೆಯೆಂಬುದನ್ನು ನಾನೂ ನೋಡುತ್ತೇನೆ ಎಂದು ಉತ್ತರಿಸುವ ಸಂದರ್ಭವಿದಾಗಿದೆ. ಗಂಡ-ಹೆಂಡಿರ ಈ ಸರಸ ಸಂಭಾಷಣೆ ಮತ್ತು ಇಬ್ಬರ ಸಾಹಿತ್ಯಾಭಿರುಚಿ ಎಲ್ಲವೂ ಇಲ್ಲಿ ಗಮನಾರ್ಹವಾಗಿದೆ.
(ಆ) ಒಂದು ಅಂಕದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿ).
೧. ಮುದ್ದಣ ಆರಮನೆಯಿಂದ ಬರುತ್ತಿರುವುದನ್ನು ನಿಂತು ನೋಡಿದವರಾರು?
ಮನೋರಮೆ
೨. ಯಾವ ಕತೆ ಹೇಳಬೇಕೆಂದು ಮನೋರಮೆ ಕೇಳಿದಳು?
ರಾಮಾಯಣದ
೩. ಶೇಷನು ರಾಮಾಯಣದ ಕತೆಯನ್ನು ಯಾರಿಗೆ ಹೇಳಿದಳು?
ಅ) ವಾತ್ಸಾಯನನಿಗೆ
೪.ಎಂತಹ ಗದ್ಯದಲ್ಲಿ ಕತೆ ಹೇಳೆಂದು ಮನೋರಮೆ ಕೇಳುವಳು?
ಹೃದ್ಯವಾದ
೫. ಮನೋರಮೆ ಬಹುಮಾನವಾಗಿ ಮುದ್ದಣನಿಗೆ ಏನನ್ನು ಕೊಡುವೆನೆಂದಳು?
ತನ್ನನ್ನೇ
೬. ವಸುಧೆಗೆ ಒಡೆಯನೆನಿಸಿದವನು ಯಾರು?
ಶ್ರೀ ರಾಮಚಂದ್ರ
೭. ‘ಕನ್ನಡ ಕಸ್ತೂರಿಯಲ್ಲವೆ’ ಎಂದವರಾರು?
ಮನೋರಮೆ
ಹೆಚ್ಚುವರಿ ಪ್ರಶ್ನೆಗಳು
೮. ಯಾವ ದಾಟಿಯಲ್ಲಿ ಕತೆ ಹೇಳುವುದು ಬೇಡವೆಂದು ಮನೋರಮೆ ಹೇಳಿದನು?
ಪದ್ಮ
೯. ತಿರುಳನ್ನಡದ ಬೆಳ್ನುಡಿಯಲ್ಲಿ ಕತೆಯನ್ನು ಹೇಳೆಂದು ಕೇಳಿದವರಾರು?
ಅ) ಮನೋರಮೆ
೧೦. ಮುದ್ದಣ ಕಾವ್ಯನಾಮದ ಕವಿಯ ಹೆಸರೇನು?
ಮುದ್ದಣ
(ಇ) ಎರಡು ಅಂಕಗಳ ಪ್ರಶ್ನೆಗಳು (ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ);
೧. ಮುದ್ದಣನನ್ನು ಮನೋರಮೆ ಹೇಗೆ ಉಪಚರಿಸಿದಳು?
ಮನೋರಮೆಯು ಅರಮನೆಯಿಂದ ಬಂದ ಮುದ್ದಣನಿಗೆ ಕಾಲು ತೊಳೆಯುವ ನೀರು ಕೊಟ್ಟು, ಕೈಹಿಡಿದು ಒಳಚೌಕಿಗೆ ಕರೆತಂದು ಮಣೆ ಹಾಕಿ ಕುಳ್ಳಿರಿಸಿದಳು. ರಸಭರಿತ ಹಣ್ಣುಗಳನ್ನು ಕೆನೆಭರಿತ ಹಾಲನ್ನು ನೀಡಿ ಹಸಿವು-ಆಯಾಸಗಳನ್ನು ಪರಿಹರಿಸಿದಳು. ಆನಂತರ ಮೆಲ್ಲಲು ರಸಗವಳ ನೀಡಿ ಉಪಚರಿಸಿದಳು.
೨. ಮನೋರಮೆ ಕತೆ ಹೇಳೆಂದು ಕೇಳಲು ಕಾರಣವೇನು?
ಮಳೆಗಾಲದ ನಡುಹಗಲು ಮತ್ತು ರಾತ್ರಿ-ಹಗಲೆನ್ನದೆ ನಿರಂತರವಾಗಿ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಮನಸ್ಸಿಗೆ ತುಂಬಾ ಬೇಸರವಾಗಿರುವುದರಿಂದ ಕತೆ ಹೇಳೆಂದು ಮನೋರಮೆ ಮುದ್ದಣನನ್ನು ಕೇಳಿದಳು.
೩. ಕತೆಯನ್ನು ಯಾವ ರಸಗಳಲ್ಲಿ ಹೇಳಲೆಂದು ಮುದ್ದಣ ಕೇಳಿದನು?
ಮುದ್ದಣನು ತಾನು ಕಥೆಯನ್ನು ಶೃಂಗಾರ ರಸದಲ್ಲೋ, ವೀರರಸದಲ್ಲೋ ಅಥವಾ ಹಾಸ್ಯರಸದಲ್ಲಿ ಹೇಳಲೋ ಎಂದು ಮನೋರಮೆಯನ್ನು ಕೇಳುವನು.
೪. ಯಾವ ದಾಟಿಯಲ್ಲಿ ಕತೆಯನ್ನು ಹೇಳೆಂದು ಮನೋರಮೆ ಕೇಳಿದಳು?
ಮನೋರಮೆಯು ಪದ್ಯವು ತಿರಸ್ಕಾರ ಯೋಗ್ಯವಾದುದು ಮತ್ತು ಗದ್ಯವು ಹೃದಯಕ್ಕೆ ಪ್ರಿಯವಾದುದರಿಂದ ಹೃದ್ಯವಾದ ಗದ್ಯದ ದಾಟಿಯಲ್ಲಿ ಕಥೆಯನ್ನು ಹೇಳೆಂದು ಮುದ್ದಣನಿಗೆ ತಿಳಿಸಿದಳು.
೫. ಅರಮನೆಯಿಂದ ಎಂತಹ ಬಹುಮಾನ ಸಿಗಬಹುದೆಂದು ಮುದ್ದಣ ಹೇಳಿದನು?
ಕಥೆಯನ್ನು ಹೇಳಿದರೆ ಅರಮನೆಯಿಂದ ತನಗೆ ರತ್ನದ ಕೈ ಕಡಗವೋ, ಚಿನ್ನದ ಕಂಠಾಭರಣವೋ ದೊರಕಬಹುದೆಂದು ಮುದ್ದಣ ಹೇಳಿದನು.
೬. ‘ನೀರಿಳಿಯದ ಗಂಟಲಲ್ಲಿ ಕಡುಬನ್ನು ತುರುಕಿದಂತಾಯ್ತು’ ಎಂದು ಮನೋರಮೆ ಹೇಳಿದ್ದೇಕೆ?
ಮುದ್ದಣನು ರಾಮಾಶ್ವಮೇಧದ ಕಥೆಯನ್ನು ಸಂಸ್ಕೃತದ ಹೊಗಳಿಕೆಯ ವಾಕ್ಯಗಳಿಂದ ಪ್ರಾರಂಭಿಸಿದಾಗ, ಅದನ್ನು ಅರ್ಥಮಾಡಿಕೊಳ್ಳಲಾಗದ ಮನೋರಮೆ ಕನ್ನಡದ ಸೊಗಸೇ ನನಗೆ ತಿಳಿಯಲಾಗುತ್ತಿಲ್ಲ, ಇನ್ನು ಸಂಸ್ಕೃತದ 7 ಸೊಗಸನ್ನು ಹೇಗೆ ತಿಳಿಯುವೆನು ಎಂದು ಹೇಳಲು ‘ನೀರಿಳಿಯದ ಗಂಟಲಲ್ಲಿ ಕಡುಬನ್ನು ತುರುಕಿದಂತಾಯ್ತು’ ಎಂದು ಹೇಳಿದಳು.
೭. ಸಂಸ್ಕೃತ-ಕನ್ನಡಗಳು ಸೇರಿದರೆ ಹೇಗೆ ಸೊಗಯಿಸುತ್ತದೆ?
ಸಂಸ್ಕೃತ ಮತ್ತು ಕನ್ನಡ ಭಾಷೆಗಳು ಹದವರಿತು ಬೆರೆತರೆ ರತ್ನವನ್ನು ಚಿನ್ನದಲ್ಲಿ ಕೂಡಿಸಿ ಮಾಡಿದ ಆಭರಣದಂತೆ ಸೊಗಯಿಸುತ್ತದೆಂದು ಮುದ್ದಣನು ಹೇಳಿದ್ದಾನೆ.
ಹೆಚ್ಚುವರಿ ಪ್ರಶ್ನೆ:
೮. ಮುದ್ದಣ ಅರಮನೆಯಿಂದ ಮನೆಗೆ ಬಂದ ಬಗೆಯನ್ನು ತಿಳಿಸಿ.
ಕಾಡು-ನಾಡು ಮನೋಜ್ಞವೆನಿಸುವಂತಹ ಒಂದು ಮಳೆಗಾಲದ ಸಂಜೆ, ರಾಜನ ಓಲಗ ಸಭೆಯನ್ನು ಮುಗಿಸಿಕೊಂಡ ಕವಿಗಳ ವಲ್ಲಭನಾದ ಮುದ್ದಣನು ಅರಮನೆಯಿಂದ ಹೊರಬಂದು ಪಕ್ಕದ ಬೀದಿಯಲ್ಲಿರುವ ತನ್ನ ಮನೆಗೆ ಬಂದನು
ನಾಲ್ಕು ಅಂಕಗಳ ಪ್ರಶ್ನೆಗಳು (ಐದಾರು ವಾಕ್ಯಗಳಲ್ಲಿ ಉತ್ತರಿಸಿ):
೧. ಮುದ್ದಣ ಅರಮನೆಯಿಂದ ಬಂದ ಪರಿಯನ್ನೂ ಮನೋರಮೆಯ ಉಪಚಾರವನ್ನೂ ವಿವರಿಸಿ.
ಕಾಡು ಮತ್ತು ನಾಡುಗಳೆರಡೂ ಸುಂದರವಾಗಿ ತೋರುವ ಒಂದು ಮಳೆಗಾಲದ ಸಂಜೆಹೊತ್ತಿನಲ್ಲಿ ಅರಮನೆಯ ಓಲಗ ಸಭೆಯನ್ನು ಮುಗಿಸಿಕೊಂಡು ಮನೆಗೆ ಹೊರಟ ಮುದ್ದಣನನ್ನು ಅವನ ಪತ್ನಿ ಮನೋರಮೆಯು ಹೊರಗೆ ಕಾದು ನಿಂತಿದ್ದು ಸ್ವಾಗತಿಸಿದಳು. ಆತನು ಕಾಲನ್ನು ತೊಳೆಯಲು ನೀರನ್ನು ಕೊಟ್ಟಳು. ಆನಂತರ ಕೈಹಿಡಿದು ಒಳಚೌಕಿಗೆ ಕರೆದೊಯ್ದು ಮಣೆ ಹಾಕಿ ಕುಳ್ಳಿರಿಸಿದಳು. ಹಸಿವು-ಆಯಾಸ ಪರಿಹರಿಸಲು ರಸಭರಿತ ಹಣ್ಣುಗಳನ್ನು ಕೆನೆಭರಿತ ಹಾಲನ್ನು ನೀಡಿದಳು. ನಂತರ ಮೆಲ್ಲಲು ಸವಿಯಾದ ರಸಗವಳದ ತಾಂಬೂಲವನ್ನು ನೀಡಿ ಉಪಚರಿಸಿದಳು.
೨. ಒಳ್ಳೆಯದೊಂದು ಕತೆ ಹೇಳಬೇಕೆಂದಾಗ ಮುದ್ದಣನ ಪ್ರತಿಕ್ರಿಯೆಯೇನು?
ಮನೋರಮೆಯು ಹಗಲು-ರಾತ್ರಿ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದ ಮನಸ್ಸಿಗೆ ಬೇಸರವಾಗಿದೆಯೆಂದೂ ಅದನ್ನು ಪರಿಹರಿಸಲು ಯಾವುದಾದರೊಂದು ನಲ್ಗತೆಯನ್ನು ಹೇಳೆಂದು ಕೇಳಿಕೊಂಡಳು. ಅದಕ್ಕೆ ಪ್ರತಿಕ್ರಿಯಿಸಿದ ಮುದ್ದಣ ”ಪ್ರಾಣೇಶ್ವರಿ, ನಿನ್ನ ಬಯಕೆ ಇಷ್ಟೊಂದು ಗಹನವಾಗಿರುವಾಗ ಖಂಡಿತವಾಗಿಯೂ ಕಥೆ ಹೇಳುತ್ತೇನೆ. ಯಾವ ಒಳ್ಳೆಯ ಕಥೆ ಹೇಳಲಿ? ಭೋಜ ಪ್ರಬಂಧ, ವಿಕ್ರಮ ವಿಜಯ, ಮಹಾವೀರ ಚರಿತೆ ಇವುಗಳಲ್ಲಿ ಯಾವುದನ್ನು ಹೇಳಲಿ?” ಎಂದು ಕೇಳಿದನು. ಅಲ್ಲದೆ ಯಾವ ರಸದಲ್ಲಿ ಆಕೆ ಕಥೆ ಕೇಳಲು ಬಯಸುವಳೆಂಬುದನ್ನು ಕೇಳಿ ತಿಳಿಯುವನು. ಅವಳ ಬಯಕೆಯಂತೆಯೇ ರಾಮಾಯಣದ ಶ್ರೀರಾಮ ಅಶ್ವಮೇಧ ಪ್ರಸಂಗದ ಕಥೆಯನ್ನು ಕಸ್ತೂರಿ ಕನ್ನಡದ ತಿರುಳನ್ನಡದ ಬೆಳ್ಳುಡಿಯಲ್ಲಿ ಹೇಳಲು ಸಮ್ಮತಿಸುವನು.
೩. ಎಂತದ ತಿರುಳು ಕನ್ನಡದಲ್ಲಿ ಕತೆಯನ್ನು ಹೇಳುವುದಾಗಿ ಮುದ್ದಣ ಹೇಳುವನು?
ಸಂಸ್ಕೃತ ಭೂಯಿಷ್ಠವಾದ ಭಾಷೆಯಲ್ಲಿ ಮುದ್ದಣನು ಕಥೆಯನ್ನು ಹೇಳಲು ಆರಂಭಿಸಿದಾಗ ಅದನ್ನು ನಡುವೆಯೇ ತಡೆದ ಮನೋರಮೆಯು ಆ ಭಾಷೆ ತನಗೆ ಅರ್ಥವೇ ಆಗುತ್ತಿಲ್ಲವೆಂದು ನುಡಿದಳು. ನೀರಿಳಿಯದ ಗಂಟಲಿನಲ್ಲಿ ಕಡುಬನ್ನು ತುರುಕಿದಂತಿರುವ ಭಾಷೆ ಬೇಡವೆಂದಾಗ ಅವಳ ಅಪೇಕ್ಷೆಯಂತೆಯೇ ಮುದ್ದಣನು ತಿರುಳನ್ನಡದ ಬೆಳ್ಳುಡಿಯಲ್ಲಿ ಕಥೆಯನ್ನು ಹೇಳಲು ಒಪ್ಪುವನು. ಆದರೂ ಸಂಸ್ಕೃತ ಮತ್ತು ಕನ್ನಡ ಭಾಷೆಯ ಮೇಲೈಕೆಯ ಅಗತ್ಯವನ್ನು ಹೇಳಿ, ರತ್ನವನ್ನು ಚಿನ್ನದೊಂದಿಗೆ ಸೇರಿಸಿ ಆಭರಣ ತಯಾರಿಸಿದಾಗ ಅದು ಸುಂದರವಾಗಿ ಕಾಣುವಂತೆ, ತಾನು ಸಂಸ್ಕೃತ-ಕನ್ನಡದ ಹದ ಬೆರೆತ ಭಾಷೆಯಲ್ಲಿ ಕಥೆಯನ್ನು ಹೇಳುವುದಾಗಿ ತಿಳಿಸಿದನು.
೪. ಮುದ್ದಣ-ಮನೋರಮೆಯರ ಸಂವಾದದ ಸ್ವಾರಸ್ಯವನ್ನು ವಿವರಿಸಿ.
ಮುದ್ದಣ-ಮನೋರಮೆಯರ ಪ್ರಸಂಗವು ಅತ್ಯಂತ ಸ್ವಾರಸ್ಯಕರವೆಂದು ಕನ್ನಡ ಸಾಹಿತ್ಯದಲ್ಲಿ ಪ್ರಸಿದ್ದವಾಗಿದೆ. ಇಲ್ಲಿ ಗಂಡ-ಹೆಂಡತಿಯ ನಡುವಿನ ಸರಸ-ಸಲ್ಲಾಪ, ಅನ್ನೋನ್ನತೆ, ಸಾಹಿತ್ಯ ಪ್ರೀತಿಗಳೆಲ್ಲವನ್ನೂ ತೋರಿದೆ. ಮಾತ್ರವಲ್ಲದೆ ಕನ್ನಡ ಸಾಹಿತ್ಯವು ಕಾವ್ಯದಿಂದ ಗಡ್ಕಕ್ಕೆ ಹೊರಳುತ್ತಿದ್ದ ಸಂಕ್ರಮಣ ಕಾಲವನ್ನು ‘ಪದ್ಯಂ ವಧ್ಯಂ ಗದ್ಯಂ ಹೃದ್ಯಂ” ಎಂಬ ಮಾತಿನ ಮೂಲಕ ಸಂಕೇತಿಸಿರುವುದು ಮುಖ್ಯವಾಗಿದೆ. ಮನೋರಮೆಯು ಪತ್ನಿಯಾಗಿ, ವಿಮರ್ಶಕಿಯಾಗಿ, ಸಹೃದಯ ಸಂಪನ್ನಳಾಗಿಯೂ ಚಿತ್ರಿತಗೊಂಡಿರುವುದು ಈ ಸಂವಾದದಲ್ಲಿ ಗಮನಿಸಬಹುದಾದ ಅತಿಮುಖ್ಯ ಸಂಗತಿಯಾಗಿದೆ.
ಹೆಚ್ಚುವರಿ ಪ್ರಶ್ನೆಗಳು:
೫. ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು’ ಈ ಮಾತನ್ನು ಪಠ್ಯದ ಹಿನ್ನೆಲೆಯಲ್ಲಿ ವಿವರಿಸಿ,
‘ತಿರುಳನ್ನಡ ಬೆಳ್ಳುಡಿ’ಯಲ್ಲಿ ಮುದ್ದಣನು ಸಂಸ್ಕೃತದ ದಾಟಿಯಲ್ಲಿ ಕಥೆ ಹೇಳಲಾರಂಭಿಸುತ್ತಾನೆ. ಆಗ ಮನೋರಮೆಯು ಅವನನ್ನು ಮಧ್ಯದಲ್ಲಿಯೇ ತಡೆದು, ಕನ್ನಡದಲ್ಲಿ ಕಥೆ ಹೇಳುವಂತೆ ಕೇಳುತ್ತಾಳೆ. ಅದಕ್ಕೆ ಅವಳು ಕೊಡುವ ಕಾರಣವೆಂದರೆ ಕನ್ನಡವನ್ನೇ ಅರ್ಥಮಾಡಿಕೊಳ್ಳಲು ಕಷ್ಟವಾಗಿರುವಾಗ ಸಂಸ್ಕೃತವನ್ನು ಅರ್ಥಮಾಡಿಕೊಳ್ಳುವುದು ಹೇಗೆಂದು ಕೇಳುತ್ತಾಳಲ್ಲದೆ, ಅದನ್ನೇ ನೀರಿಳಿಯದ ಗಂಟಲಿಗೆ ಕಡುಬನ್ನು ತುರುಕಿದಂತಾಯಿತು ಎಂಬ ಮಾತಿನ ಮೂಲಕ ಮನದಟ್ಟು ಮಾಡುತ್ತಾಳೆ. ಪಂಡಿತರಲ್ಲದವರ ಪಾಲಿಗೆ ಸಂಸ್ಕೃತವು ಗಂಟಲಲ್ಲಿ ಇಳಿಯದ ಕಡುಬಿನಂತೆ ಎಂಬ ಮನೋರಮೆಯ ಮಾತು ಔಚಿತ್ಯಪೂರ್ಣವಾಗಿದೆ ಎನ್ನಬಹುದು.
೬. ‘ಪದ್ಯ ಪಥ್ಯ: ಗದ್ಯಂ ಹೃದ್ಯಂ’ ಎಂದು ಮನೋರಮೆ ಹೇಳಲು ಕಾರಣವೇನು? ವಿವರಿಸಿ,
ಮನೋರಮೆಯು ಕಥೆಯನ್ನು ಹೇಳೆಂದು ಮುದ್ದಣನನ್ನು ಕೇಳಿದಾಗ, ಆತ ಕಥೆಯನ್ನು ಯಾವ ದಾಟಿಯಲ್ಲಿ ಹೇಳಲಿ, ಗದ್ಯವಲ್ಲೋ? ವದ್ಯದಲ್ಲೋ? ಎಂದು ಪ್ರಶ್ನಿಸುವನು. ಆಗ ಮನೋರಮೆಯು ಪದ್ಯದ ದಾಟಿ ಬೇಡ, ಹೃದ್ಯವಾಗಿರುವ ಗದ್ಯದಲ್ಲಿ ಕಥೆಯನ್ನು ಹೇಳಬೇಕೆಂದು ತಿಳಿಸುವಳು. ಮುದ್ದಣನ ಕಾಲದವರೆಗೂ ಸಾಹಿತ್ಯವು ಪದ್ಯದ ದಾಟಿಯಲ್ಲಿತ್ತು. ಮುದ್ದಣನಿಂದ ಮುಂದೆ ಗದ್ಯ ಮುನ್ನೆಲೆಗೆ ಬಂದಿತು. ಇದಕ್ಕೆ ಪೂರ್ವಪೀಠಿಕೆ ಎಂಬಂತೆ ಮುದ್ದಣನು ಮನೋರಮೆಯ ಬಾಯಿಂದ ‘ಪದ್ಯಂ ವಧ್ವಂ ಗದ್ಯ ಹೃದ್ಯಂ’ ಎಂಬ ಮಾತನ್ನು ಹೇಳಿಸಿರುವುದು ಔಚಿತ್ಯಪೂರ್ಣವಾಗಿದೆ.
ಭಾಷಾಭ್ಯಾಸ
೧) ಕೆನೆವಾಲಂ – ಕೆನೆಹಾಲನ್ನು. ಈ ರೀತಿಯಲ್ಲಿ ಕೆಳಕಂಡ ಪದಗಳಿಗೆ ಹೊಸಗನ್ನಡ ರೂಪಗಳನ್ನು ಬರೆಯಿರಿ:
ಇದಿರ್ವಂದು, ಪಸಿವುಂ, ಬೇಸರ್ತುದು, ಪೇಳ್ವೆಂ, ಆನೊಲ್ಲೆಂ, ಮೆಚ್ಚನೀವರ್, ಪೊಗಳ್ದು, ಕಥೆಯನುಸಿರ್ವೆಂ.
ಇದಿರ್ವಂದು – ಎದುರಿಗೆ ಬಂದು
ಪಸಿವುಂ – ಹಸಿವು
ಬೇಸರ್ತುದು – ಬೇಸರವಾಗಿದೆ
ಪೇಳ್ವೆಂ – ಹೇಳುವೆನು
ಆನೊಲ್ಲೆಂ – ನನಗೆ ಬೇಡ
ಮೆಚ್ಚನೀವರ್ – ಮೆಚ್ಚುಗೆಯನ್ನು ಕೊಡುವರು
ಪೊಗಳ್ದು – ಹೊಗಳಿ
ಕಥೆಯನುಸಿರ್ವೆಂ – ಕಥೆಯನ್ನು ಹೇಳುತ್ತೇನೆ.
೨) ಈ ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ:
ಮನೋಜ್ಞಮಾಗೆ, ಇದಿರ್ವಂದು, ತಿನಲಿತ್ತು, ಪಗಲುಮಿರುಳಂ, ಸೀತಾಪಹರಣ, ಒಂದನಾಯ್ದು, ಮೆಚ್ಚಿನೀವರ್, ನೀರಿಳಿಯದ
ಮನೋಜ್ಜಂ + ಆಗೆ = ಮನೋಜ್ಞಮಾಗೆ
ಇದಿರ್ + ವಂದು = ಇದಿರ್ವಂದು
ತಿನಲು + ಇತ್ತು = ತಿನಲಿತ್ತು
ಪಗಲುಂ + ಇರುಳುಂ = ಪಗಲಿರುಳುಂ
ಸೀತ + ಅಪಹರಣಂ = ಸೀತಾಪಹರಣ
ಒಂದನ್ನು + ಆಯ್ದು = ಒಂದನಾಯ್ದು
ಮೆಚ್ಚನ್+ ಈವರ್ = ಮೆಚ್ಚನೀವರ್
ನೀರು + ಇಳಿಯದ = ನೀರಿಳಿಯದ
೩) ಇವುಗಳ ವಿಭಕ್ತಿ ಪ್ರತ್ಯಯಗಳನ್ನು ಹೆಸರಿಸಿ:
ಪಿರಿಯವು, ನಲ್ಗತೆಯಂ, ವಾತ್ಸ್ಯಾಯನಂಗೆ, ರಾಮಚಂದ್ರನ, ಗದ್ಯದೊಳ್.
ಪಿರಿಯವು – ಪ್ರಥಮಾ ವಿಭಕ್ತಿ
ನಲ್ಗತೆಯಂ – ದ್ವಿತೀಯಾ ವಿಭಕ್ತಿ
ವಾತ್ಸ್ಯಾಯನಂಗೆ – ಚತುರ್ಥಿ ವಿಭಕ್ತಿ
ರಾಮಚಂದ್ರನ – ಷಷ್ಠಿ ವಿಭಕ್ತಿ
ಗದ್ಯದೊಳ್ – ಸಪ್ತಮೀ ವಿಭಕ್ತಿ
೪) ಇವುಗಳಿಗೆ ನಾನಾರ್ಥ ಬರೆಯಿರಿ:
ಮುಡಿ, ಬಟ್ಟೆ, ರಸ, ಉಸಿರು, ಬಗೆ.
ಮುಡಿ – ಕೇಶ, ತಲೆಯಲ್ಲಿಡು
ಬಟ್ಟೆ – ದಾರಿ, ವಸ್ತ್ರ
ರಸ – ದ್ರವ, ಸಾರ
ಉಸಿರು – ಹೇಳು, ಪ್ರಾಣವಾಯು
ಬಗೆ – ಯೋಚಿಸು, ರೀತಿ, ಇರಿ.
೫) ಈ ದ್ವಿರುಕ್ತಿಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿರಿ:
ಒಳ್ಳೆತೊಳ್ಳಿತು, ತಡೆತಡೆ, ಲೇಸುಲೇಸು.
ಒಳ್ಳೆತೊಳ್ಳಿತು : ಅವರು ಉತ್ತೀರ್ಣನಾದ ಸುದ್ದಿ ಕೇಳಿ ಒಳ್ಳಿತೊಳ್ಳಿತೆಂದು ಆಶೀರ್ವದಿಸಿದರು.
ತಡೆತಡೆ : ನನ್ನ ಗೆಳೆಯ ತಡೆತಡೆ ಓಡಬೇಡ, ನಾನೂ ಬರುವೆನೆಂದನು.
ಲೇಸುಲೇಸು : ಆರಂಭದಿಂದಲೇ ಅಭ್ಯಾಸ ಮಾಡಿದರೆ ಲೇಸುಲೇಸೆಂದು ಗುರುಗಳು ತಿಳಿಸಿದರು.
ಗದ್ಯಭಾಗದ ಸಾರಾಂಶ ಮತ್ತು ವಿಮರ್ಶೆ:
ಕಾಡು-ನಾಡುಗಳೆರಡೂ ಮನೋಜ್ಞವಾಗಿದ್ದ ಒಂದು ಮಳೆಗಾಲದ ಸಂಜೆ ಹೊತ್ತಿನಲ್ಲಿ ಎಂದಿನಂತೆ ರಾಜನ ಓಲಗೆ ಸಭೆಯನ್ನು ಮುಗಿಸಿಕೊಂಡು ಕವಿಗಳ ವಲ್ಲಭ ಅಥವಾ ಕವಿಗುರುವೆನಿಸಿದ್ದ ಮುದ್ದಣನು ಅರಮನೆಯಿಂದ ಹೊರಬಂದು ಪಕ್ಕದ ಬೀದಿಯಲ್ಲಿ ಸಾಗಿ ತನ್ನ ಮನೆಯ ಕಡೆಗೆ ಬರುತ್ತಿದ್ದನು. ಆತ ಬರುತ್ತಿರುವುದನ್ನು ದೂರದಿಂದಲೇ ನೋಡಿದ ಪತ್ನಿ ಮನೋರಮೆಯು ಆತನನ್ನು ಎದಿರುಗೊಂಡು ಸ್ವಾಗತಿಸಿದಳು. ಮನೋರಮೆಯು ಮುದ್ದಣನ ಕಾಲಿಗೆ ನೀರು ಕೊಟ್ಟು ಆತನ ಕೈ ಹಿಡಿದುಕೊಂಡು ಮನೆಯ ಒಳಚೌಕಿಗೆ ಕರೆದೊಯ್ದು ಮಣೆಹಾಕಿ ಕುಳ್ಳರಿಸಿದಳು. ಆತನಿಗೆ ರಸಭರಿತ ರುಚಿಯಾದ ಹಣ್ಣುಗಳನ್ನು ತಿನ್ನಲು ಕೊಟ್ಟಳಲ್ಲದೆ, ಕುಡಿಯಲು ಕೆನೆಭರಿತ ಹಾಲನ್ನು ನೀಡಿದಳು. ಅವಳ ಈ ಉಪಚಾರದಿಂದ ಮುದ್ದಣನ ಹಸಿವು-ಆಯಾಸಗಳು ದೂರಾದವು. ಅನಂತರ ಮನೋರಮೆಯು ಮುದ್ದಣನಿಗೆ ರಸವತ್ತಾದ ಕಂಪುಭರಿತ ತಾಂಬೂಲವನ್ನು ಸವಿಯಲು ಕೊಟ್ಟಳು. ಹೀಗೆ ಅವರಿಬ್ಬರೂ ಅತ್ಯಂತ ಸರಸ ಸುಖಸಲ್ಲಾಪದೊಳಗಿರುವಾಗ ಮನೋರಮೆಯು ಮೆಲುನುಡಿ ಗಳಿಂದ ಹೀಗೆಂದಳು.
“ಪ್ರಿಯನೇ ಮಳೆಗಾಲದ ಈ ಹಗಲು ಹಿರಿದೆನಿಸುತ್ತಿದೆ. ಹಗಲು-ಇರುಳು ಸುರಿಯುತ್ತಿರುವ ಭಾರೀ ಜಡಿಮಳೆ ಯಿಂದ ಮನಸ್ಸಿಗೆ ಬೇಸರ ಮೂಡಿ ರೇಜಿಗೆ ಹಿಡಿದುಬಿಟ್ಟಿದೆ. ಆದ್ದರಿಂದ ಯಾವುದಾದರೂ ಒಂದು ಒಳ್ಳೆಯ ಕಥೆಯನ್ನು ಹೇಳು” ಎಂದು ಕೇಳಿದಳು. ಅದಕ್ಕೆ ಮುದ್ದಣನು “ಎಲೈ ಪ್ರಾಣೇಶ್ವರಿ, ನಿನಗೆ ಇಷ್ಟೊಂದು ಬಯಕೆ ಮೂಡಿರುವಾಗ ಖಂಡಿತಾ ಹೇಳುತ್ತೇನೆ. ಆದರೆ ಯಾವ ನಲ್ಗತೆಯನ್ನು ಹೇಳಲಿ? ಭೋಜ ಪ್ರಬಂಧವನ್ನು ಹೇಳಲೇ? ಅಥವಾ ವಿಕ್ರಮ ವಿಜಯಂ ಮಹಾವೀರ ಚರಿತಂಗಳನ್ನು ಹೇಳಲೇ? ಎಂದು ಕೇಳಿದನು. ಅದಕ್ಕೆ ಮನೋರಮೆಯು “ಅಯ್ಯೋ ಅವುಗಳಲ್ಲಿ ನನಗೆ ಪ್ರೀತಿಯಿಲ್ಲ. ಉಳಿದರೂ ಅಳಿದರೂ ಬದುಕಿನ ಮಾರ್ಗವನ್ನು ತೋರಿಸುವಂತಹ ಕಥೆಯನ್ನು ಹೇಳು” ಎಂದಳು.
ಮುದ್ದಣನು ಮನೋರಮೆಗೆ “ನಿನಗೆ ಯಾವ ರಸದೊಳು ಕಥೆಯನ್ನು ಕೇಳಲಿಷ್ಟ? ಶೃಂಗಾರವೇ, ವೀರರಸವೆ ಹಾಸ್ಯರಸದಲ್ಲಿಯೇ?” ಎಂದು ಪ್ರಶ್ನಿಸಲು, ಆಕೆ ನವರಸದಲ್ಲಿ ಕಥೆ ಹೇಳಬೇಕೆಂದಳು. “ಹಾಗಾದರೆ ಯಾವ ಚ ಹೇಳಲೆಂದು” ಮುದ್ದಣ ಕೇಳಲು ಮನೋರಮೆಯು ರಾಮಾಯಣದಲ್ಲಿ ಯಾವುದಾದರೂ ಪ್ರಸಂಗ ಹೇಳಬೇಕೆಂದು ಮುದ್ದಣ ಸೀತಾಸ್ವಯಂವರದ ಕಥೆ ಹೇಳಲೆ ಎಂದರೆ, ಆಕೆ ಅದನ್ನಾಗಲೇ ಕೇಳಿದ್ದೇನಲ್ಲ ಎಂದಳು. ಮುದ್ದಣನು ಹಾಗಾದ ಸೀತಾಪಹರಣ ಕಥನದಲ್ಲಿ ಆಸಕ್ತಿಯಿದೆಯೇ ಎಂದಾಗ ಬೇಡವೆಂದಳು. ಮುದ್ದಣನು ಹಾಗಾದರೆ ಇನ್ಯಾವ ಕಥೆ ಹೇಳುವುದು’ ಎಂದು ಪ್ರಶ್ನಿಸಿದಾಗ ಮನೋರಮೆಯು ”ಇದೇಕೆ ಹೀಗೆ ಮಾತನಾಡುವೆ, ನಮ್ಮ ನಾಡಿನಲ್ಲಿ ಎಷ್ಟೊಂದು ರಾಮಾಯಣ ಕಥೆಗಳಿವೆ. ಅವುಗಳಲ್ಲಿ ನೀನು ಕೇಳಿರುವ ಕಥೆಗಳಲ್ಲಿ ಒಳ್ಳೆಯದೊಂದನ್ನು ಹೇಳು” ಎಂದಳು. ಮುದ್ದಣ ನೀನೇ ಒಂದು ಪ್ರಸಂಗವನ್ನು ಹೇಳೆಂದಾಗ, ಮನೋರಮೆಯು ಶ್ರೀರಾಮನು ಅಶ್ವಮೇಧವನ್ನು ಕೈಗೊಂಡ ಕಥೆಯನ್ನು ಹೇಳೆಂದಳು.
ಮುದ್ದಣನು “ಈಗ ತಿಳಿಯಿತು. ಶೇಷರಾಮಾಯಣದ ಕಥೆಯನ್ನು ಹೇಳೆನ್ನುವೆಯಾ” ಎಂದಾಗ ಮನೋರಮೆ ಹೌದಂದಳಲ್ಲದೆ ಈ ಕಥೆಯನ್ನು ಮೊದಲು ಹೇಳಿದವರಾರೆಂದಳು. “ಮೊದಲಿಗೆ ಶೇಷನು ವಾತ್ಸಾಯನನಿಗೆ ಇದನ್ನು ಹೇಳಿದನು. ಇದೇ ಕಥೆಯನ್ನು ನಾನು ನಿನಗೆ ಹೇಳುವನು. ಆದರೆ ಇದು ತುಂಬಾ ದೀರ್ಘವಾದ ಕಥೆಯಾಗಿದೆ. ಒಂದೆರಡು ದಿನಗಳಲ್ಲಿ ಮುಗಿಯುವುದಿಲ್ಲ” ಎಂದು ಮುದ್ದಣ ತಿಳಿಸಿದನು. ಮನೋರಮೆಯು ಇರಲಿ ಹೇಳೆಂದಾಗ ಮುದ್ದಣ ಯಾವ ದಾಟಿಯಲ್ಲಿ ಕಥೆಯನ್ನು ಹೇಳಲಿ? ಪದ್ಯದಲ್ಲೋ ಗದ್ಯದಲ್ಲೋ? ಎನ್ನಲು ಮನೋರಮೆಯು ಪದ್ಯ ಬೇಡ, ಹೃದಯಕ್ಕೆ ಪ್ರಿಯವಾಗುವಂತೆ ಗದ್ಯದಲ್ಲಿ ಹೇಳಬೇಕೆಂದು ಕೇಳಿಕೊಂಡಳು.
ಮುದ್ದಣನು ನಸುನಗುತ್ತ “ಅದು ಹಾಗಿರಲಿ. ಅರಮನೆಯಲ್ಲಿ ನಾನೀ ಒಳ್ಳೆಯ ಕಥೆಯನ್ನು ಹೇಳಿದ್ದರೆ ಕೈಗೆ ರತ್ನದ ಕಡಗವನ್ನು ಕೊರಳಿಗೆ ಚಿನ್ನದ ಹಾರವನ್ನು ಕಾಣಿಕೆಯಾಗಿ ಕೊಡುತ್ತಿದ್ದರು. ನೀನೇನು ಬಳುವಳಿ ಕೊಡುವೆ?” ಎಂದು ಕೇಳಿದಾಗ ಮನೋರಮೆಯು ಜಾಣೆಯಿಂದ “ನನ್ನನ್ನೇ ನಾನು ನಿನಗೆ ಕೊಡುವಾಗ ಬೇರೇನು ಬೇಕು?” ಎಂದಳು. ಮುದ್ದಣ ನಿನ್ನ ತಂದೆತಾಯಿಗಳು ನಿನ್ನನ್ನು ನನಗೆ ಕೊಟ್ಟಾಗಿದೆಯೆಂಬುದನ್ನು ಮರತೆಯಾ?” ಎಂದಾಗ ಮನೋರಮೆಯು “ನಾನು ಪರಾಧೀನೆ ಏನನ್ನು ಕೊಡಬಲ್ಲೆ?” ಎಂದಳಲ್ಲದೆ “ಅರಮನೆಯಲ್ಲಿ ನೀನು ಕಾವ್ಯ ಓದಿಮುಗಿಸಿದ ಮೇಲೆ ತಾನೆ ದಕ್ಷಿಣೆ ಕೊಡುವುದು? ಅದೇ ರೀತಿ ನೀನು ಕತೆಯನ್ನು ಹೇಳಿದ ಮೇಲೆ, ಅದು ನನಗೆ ಸಂತೋಷ ನೀಡಿದರೆ ನನಗೆ ತಿಳಿದಂತ ನಿನ್ನನ್ನು ಸನ್ಮಾನಿಸುವೆ” ಎಂದಳು. ಮುದ್ದಣನು “ಆಗಲಿ, ಕಥೆಯನ್ನು ಕೇಳು. ಆಮೇಲೆ ಏನು ಬಳುವಳಿಯನ್ನು ಕೊಡುವಿಯೋ ನೋಡುತ್ತೇನೆ” ಎಂದರೆ, ಮನೋರಮೆಯ ಕಥೆಯ ತಿರುಳು ಹೇಗಿದೆಯೋ ನಾನೂ ನೋಡುತ್ತೇನೆ ಹೇಳೆಂದಳು.
ಹಾಗಾದರೆ ಕೇಳೆಂದು ಮುದ್ದಣ “ಸ್ವಸ್ತಿ ಶ್ರೀಮತ್ಸುರಾಸುರೇಂದ್ರನರೇಂದ್ರ ಮುನೀಂದ್ರ ಫಣೀಂದ್ರ ಮಣಿಮಕುಟಿತಟಘಟಿತ” ಎಂದು ಸಂಸ್ಕೃತಭೂಯಿಷ್ಠವಾದ ರೀತಿಯಲ್ಲಿ ಕಥೆಯನ್ನು ಆರಂಭಿಸಿದಾಗ ಮನೋರಮೆಯು “ಅಯ್ಯೋ ನಿಲ್ಲಿಸು. ವಸುಧೆಗೆ ಒಡೆಯನಾದ ರಾಮಚಂದ್ರನ ಕಥೆ ಹೇಳೆಂದರೆ, ಬಸದಿಗೊಡೆಯನಾದ ಇಂದ್ರರ ಚಿರಿತೆಯನ್ನು ಹೇಳುತ್ತಿರುವೆಯಲ್ಲ? ಸಾಕು ಸಾಕು ಇಂತಹ ಕಥೆಗೆ ಉಡುಗೊರೆ ಕೊಡುವುದಿಲ್ಲ” ಎಂದಳು. ಮುದ್ದಣನು “ಪ್ರಿಯ ಇದು ಜೈನಮುನಿಗಳ ಕಥೆಯಲ್ಲ, ಶ್ರೀರಾಮನ ಕಥೆಯನ್ನೇ ಹೊಗಳಿ ಹೇಳುತ್ತಿರುವ ಸಂಸ್ಕೃತದ ಚೆಲುವು” ಎಂದನು. ಮನೋರಮೆಯು “ಸರಿಯಾಯ್ತು ನೀರಿಳಿಯದ ಗಂಟಲಿಗೆ ಕಡುಬನ್ನು ತುರುಕಿದಂತಾಯ್ತು. ನನಗೆ ಸಂಸ್ಕೃತ ಭೂಯಿಷ್ಠ ವಾದ ಭಾಷೆ ಬೇಡ” ಎಂದಳು. ಹಾಗಾದರೆ ಇನ್ನು ಹೇಗೆ ಹೇಳಲೆಂದು ಮುದ್ದಣ ಕೇಳಿದಾಗ ಮನೋರಮೆಯು ‘ಕನ್ನಡ ಕಸ್ತೂರಿಯಲ್ಲವೇ? ಆದ್ದರಿಂದ ತಿಳಿಗನ್ನಡದ ಬೆಳ್ಳಿನುಡಿಯಲ್ಲಿ ಕತೆಯನ್ನು ಹೇಳು” ಎಂದಳು. ಮುದ್ದಣ ಅವಳ ಮಾತಿನಂತೆಯೇ ಚೆಲುವಾದ ಕನ್ನಡದೊಳಗೆ ಕಥೆಯನ್ನು ಹೇಳುವುದಾಗಿ ಒಪ್ಪಿದನು.
ಶಬ್ದಾರ್ಥ: ಸಂಪ್ರಾಪ್ತ-ಒದಗಿ ಬಂದಿರುವ; ವರ್ಷಕಾಲ-ಮಳೆಗಾಲ; ದೆವಸ-ದಿವಸ; ಬೈಗುಂಬೊಟ್ಟು-ಸಂಜೆಯ ಹೊತ್ತು; ಓಲಗ-ರಾಜನ ಸಭೆ, ದರ್ಬಾರು; ಕಬ್ಬಿಗರ ಬಲ್ಲಹ – ಕವಿಗಳ ವಲ್ಲಭ, ಕವಿಗುರು; ಪೋಣಮಟ್ಟು – ಹೊರಹೊರಟು; ಪೊರೆವೀಡು-ವಾಸದ ಮನೆ; ಎಲ್ದು-ಎದ್ದು; ಚೌಕಿ -ಒ ಳಮನೆ; ತನಿವಣ್ಣು-ರುಚಿಯಾದ ತಾಜ ಹಣ್ಣು; ಬಬಿಲ್ಕೆ – ಆಯಾಸ, ಬಳಲಿಕೆ; ಮುಡಿ-ಪರಿಹಾರವಾಗು, ಮುಕ್ತಾಯವಾಗು; ಕೆಳದಿ-ಗೆಳತಿ; ನಜುದಂಬುಲ-ರಸವತ್ತಾದ ಕಂಪುಭರಿತ ತಾಂಬೂಲ; ಬಲ್ಸೋನೆ – ಭಾರೀಮಳೆ, ಜಡಿಮಳೆ; ಬಗೆ – ಮನಸ್ಸು; ನಲ್ಗತೆ-ಸುಂದರವಾದ ಕಥೆ, ಹಿತಕರವಾದ ಕಥೆ; ಆವ ಗಹನ-ಅದು ಯಾವ ಕಷ್ಟ; ಪ್ರಬಂಧ-ಕಾವ್ಯ; ಅಲ್ಕಿರು-ಪ್ರೀತಿ; ಬಟ್ಟೆದೋಜಿಪ – ದಾರಿತೋರಿಸುವ, ಬದುಕಿನ ಮಾರ್ಗ ತಿಳಿಸುವ; ರಸ – ಕಾವ್ಯಾನುಭವದಿಂದ ದೊರೆಯುವ ಒಂದು ಅನುಭೂತಿ, ರಸಾನುಭವ(ರಸಗಳು ಒಂಬತ್ತು : ಶೃಂಗಾರ, ಹಾಸ್ಯ ರೌದ್ರ, ಕರುಣ, ಬೀಭತ್ಸ, ವೀರ, ಭಯಾನಕ, ಅದ್ಭುತ ಮತ್ತು ಶಾಂತ); ಒಳವು – ಇವೆ, ಇರುವುವು; ನಲ್ಕೆ-ಪ್ರೀತಿ, ಅನುಗ್ರಹ, ಕೃಪೆ; ಒರೆ-ಹೇಳು; ಬಿತ್ತರಿಪು-ವಿಸ್ತರಿಸಿ ಹೇಳು, ನಿರೂಪಿಸು; ಬಲ್ಗತೆ-ದೊಡ್ಡಕಥೆ; ಇರ್ಕೆ-ಇರಲಿ; ಓರೊಂದು – ಒಂದೊಂದು; ಗಾಸಿನಿಸು –ಇಷ್ಟಿಷ್ಟು; ವಧ್ಯಂ-ಅಪ್ರಿಯವಾದುದು, ತಿರಸ್ಕರಿಸಲು ಯೋಗ್ಯವಾದುದು; ಹೃದ್ಯಂ-ಹಿತಕರವಾದುದು, ಪ್ರಿಯವಾದುದು, ಮನೋಹರವಾದುದು; ರನ್ನಗಡಗ-ರತ್ನದ ಕಡಗ; ಪೊನ್ನ ಕಂಠಿಕೆ-ಬಂಗಾದ ಒಂದೆಳೆಯ ಸರ, ವಿಕಾವಳಿ, ಮುತ್ತಿನಹಾರ; ಮೆಚ್ಚು-ಉಡುಗೊರೆ; ಪೆಜತೇಂ-ಮತ್ತಿನ್ನೇನು, ಬೇರೆ ಏನು; ಗಡಸುಗಾರ್ತಿ-ಗಟ್ಟಿಗಿತ್ತಿ; ಪೋಕೆ-ಹೋಗಲಿ; ಬಲೆಯಮಲ್ತೆ-ನಂತರವಲ್ಲವೆ; ಕಬ್ಬ-ಕಾವ್ಯ; ಫಣೀಂದ್ರ-ನಾಗೇಂದ್ರ, ಆದಿಶೇಷ; ವಸುಧೆ-ಭೂಮಿ; ಬಸದಿ – ಚೈತ್ಯಾಲಯ, ಜೈನರ ಪೂಜಾಮಂದಿರ; ರಮಣಿ – ಪ್ರಿಯೆ, ಸುಂದರಿ; ಕಚ – ಮುಡಿ, ತಲೆಗೂದಲು;
ಟಿಪ್ಪಣಿ
೧. ಶೇಷ ರಾಮಾಯಣ:
ಪಠ್ಯದಲ್ಲಿ ಶೇಷರಾಮಾಯಣದ ಪ್ರಸ್ತಾಪವಿದೆ. ರಾಮಾಯಣವನ್ನು ಮೊದಲು ರಚಿಸಿದವರು ವಾಲ್ಮೀಕಿ ಮಹರ್ಷಿ, ವಾಲ್ಮೀಕಿಕೃತ ರಾಮಾಯಣವು ಶ್ರೀರಾಮನ ಪಟ್ಟಾಭಿಷೇಕದ ಕಥೆಯೊಂದಿಗೆ ಅಂತ್ಯಗೊಳ್ಳುತ್ತದೆ. ಸೀತಾ ಪರಿತ್ಯಾಗ, ಲವಕುಶ ಜನನ ಮುಂತಾದ ಸಂಗತಿಗಳು ವಾಲ್ಮೀಕಿ ರಾಮಾಯಣದಲ್ಲಿಲ್ಲ. ಈ ಮುಂತಾದ ಸಂಗತಿಗಳು ಶೇಷ ರಾಮಾಯಣದಲ್ಲಿ ಉಲ್ಲೇಖಿತಗೊಂಡಿವೆ. ಶೇಷನು ವಾತ್ಸಾಯನನಿಗೆ ಈ ಕಥೆಯನ್ನು ಮೊದಲಿಗೆ ಹೇಳಿದನೆಂದು ಮುದ್ದಣ ತಿಳಿಸಿದ್ದಾನೆ. ಶೇಷ ಎಂಬುದಕ್ಕೆ ‘ಉಳಿದ ಭಾಗ’ ಎಂಬ ಅರ್ಥವೂ ಇದೆ. ಶೇಷ ರಾಮಾಯಣದಂತೆ ಆನಂದ ರಾಮಾಯಣ, ಅಧ್ಯಾತ್ಮ ರಾಮಾಯಣ, ವಸಿಷ್ಠ ರಾಮಾಯಣ ಮುಂತಾದವುಗಳು ವಾಲ್ಮೀಕಿ ರಾಮಾಯಣದ ನಂತರ ಪ್ರಚಲಿತದಲ್ಲಿರುವುವು.
ಆ) ಖಾಲಿ ಬಿಟ್ಟ ಸ್ಥಳಗಳನ್ನು ಭರ್ತಿ ಮಾಡಿರಿ:
೧. ಶೇಷನು ರಾಮಾಯಣದ ಕತೆಯನ್ನು …………. ನಿಗೆ ಹೇಳಿದ.
ವಾತ್ಸಾಯನ
೨. ……………ಗದ್ಯದಲ್ಲಿ ಕತೆ ಹೇಳೆಂದು ಮನೋರಮೆ ಕೇಳುವಳು.
ಹೃದ್ಯಮಪ್ಪ
೩. ಮನೋರಮೆಯು ಮುದ್ದಣನಿಂದ ಕೇಳಲು ಬಯಸಿದ ಕಥೆ.
ರಾಮಾಶ್ವಮೇಧ
೪. ವಸುಧೆಗೆ ಒಡೆಯನೆನಿಸಿದವನು…………
ಶ್ರೀರಾಮಚಂದ್ರ
೫. “ಕನ್ನಡವು ಕಸ್ತೂರಿಯಲ್ಲವೆ?” ಎಂದವರು
ಮನೋರಮೆ
೬. ನಂದಳಿಕೆ ಲಕ್ಷ್ಮೀನಾರಣಪ್ಪ ಅವರ ಕಾವ್ಯನಾಮ……………..
ಮುದ್ದಣ್ಣ
೭. ಮನೋರಮೆ ಮುದ್ದಣ್ಣನಿಗೆ ಬಹುಮಾನವಾಗಿ ……………… ಕೊಡುವೆನೆಂದಳು.
ತನ್ನನ್ನೇ